ದಕ್ಷಿಣ ಕನ್ನಡ
ಉಪ್ಪಿನಂಗಡಿ : ಕುಡಿದ ಮತ್ತಿನಲ್ಲಿ ತಲವಾರು ಪ್ರದರ್ಶಿಸಿ ಬೆದರಿಕೆ: ಇಬ್ಬರು ವಶಕ್ಕೆ

ಉಪ್ಪಿನಂಗಡಿ: ಶೆಣೈ ರಸ್ತೆಯ ಬಾರ್ ಸಮೀಪ ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿದ ವೇಳೆ ತಲವಾರು ಪ್ರದರ್ಶಿಸಿ ಸಾರ್ವಜನಿಕರಲ್ಲಿ ಭೀತಿ ಮೂಡಿಸಿದ ಆರೋಪದ ಮೇಲೆ ಇಬ್ಬರನ್ನು ಉಪ್ಪಿನಂಗಡಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರಕರಣದಲ್ಲಿ ಮತ್ತೊಬ್ಬ ಆರೋಪಿಯ ಬಂಧನ ಬಾಕಿಯಿದೆ.
ಅ.18ರಂದು ರಾತ್ರಿ ಘಟನೆ ನಡೆದಿದ್ದು, ಪುತ್ತೂರು ಚಿಕ್ಕಮುಡ್ನೂರು ನಿವಾಸಿ ಮಂಜುನಾಥ (32), ನೆಕ್ಕಿಲಾಡಿ ನಿವಾಸಿ ವಿಶ್ವನಾಥ (30) ಹಾಗೂ ಮುನ್ನ ಅಲಿಯಾಸ್ ಗೋಪಾಲ ಶೆಟ್ಟಿ ಎಂಬವರ ನಡುವೆ ಮಾತಿನ ಚಕಮಕಿ ನಡೆದು ಗಲಾಟೆಯಾಗಿದೆ. ಈ ವೇಳೆ ಮಂಜುನಾಥ ತಲವಾರು ಪ್ರದರ್ಶಿಸಿ ಭೀತಿ ಮೂಡಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಕುಡಿದ ಮತ್ತಿನಲ್ಲಿ ಮುನ್ನ ಅಲಿಯಾಸ್ ಗೋಪಾಲ ಶೆಟ್ಟಿ, ಮಂಜುನಾಥನ ಮನೆಯವರನ್ನು ಅವಾಚ್ಯವಾಗಿ ನಿಂದಿಸಿದ ಹಿನ್ನೆಲೆಯಲ್ಲಿ ಗಲಾಟೆ ಆರಂಭವಾಗಿರುವುದು ಪ್ರಾಥಮಿಕ ವಿಚಾರಣೆಯಿಂದ ತಿಳಿದುಬಂದಿದೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.
ಘಟನಾ ಸ್ಥಳದ ಸಮೀಪದ ಬಾರ್ ಸಿಬ್ಬಂದಿ ನೀಡಿದ ದೂರಿನ ಮೇರೆಗೆ ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಮಂಜುನಾಥ ಮತ್ತು ವಿಶ್ವನಾಥನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದು, ಮುನ್ನ ಅಲಿಯಾಸ್ ಗೋಪಾಲ ಶೆಟ್ಟಿಯ ಬಂಧನಕ್ಕೆ ಬಲೆ ಬೀಸಲಾಗಿದೆ. ವಿಚಾರಣೆ ಬಳಿಕ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣವು ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) 2023ರ ಕಲಂ 194, 296, 351(3) ಹಾಗೂ ಶಸ್ತ್ರಾಸ್ತ್ರ ಕಾಯ್ದೆ 1959ರ ಕಲಂ 25(1B)(b) ಅಡಿಯಲ್ಲಿ ದಾಖಲಾಗಿದೆ.
ಮಂಗಳೂರು
Dhanvantari-ಮಂಗಳೂರಿನಲ್ಲಿ ‘ಧನ್ವಂತರಿ ಕ್ಲಿನಿಕಲ್ ಲ್ಯಾಬೋರೆಟರಿ’ಯ 11ನೇ ಶಾಖೆ ಉದ್ಘಾಟನೆ : ಆರೋಗ್ಯ ಸಚಿವ ಯು.ಟಿ ಖಾದರ್ ರಿಂದ ಉದ್ಘಾಟನೆ – ಶಾಸಕ ಭರತ್ ಶೆಟ್ಟಿ, ಅರವಿಂದ ಬೋಳಾರ್ ಸಹಿತ ಹಲವು ಗಣ್ಯರು ಭಾಗಿ
ಪ್ರಯೋಗಾಲಯ ಕ್ಷೇತ್ರದಲ್ಲಿ ಹಲವು ಹೊಸತನಗಳೊಂದಿಗೆ ಪುತ್ತೂರು ಹಾಗೂ ಸುತ್ತಮುತ್ತಲಿನ ಜನರಿಗೆ ಗುಣಮಟ್ಟದ ಸೇವೆ ಒದಗಿಸುತ್ತಿರುವ ಪುತ್ತೂರಿನ ಪ್ರಸಿದ್ದ ಧನ್ವಂತರಿ ಕ್ಲಿನಿಕಲ್ ಲ್ಯಾಬೊರೇಟರಿಯ 11ನೇ ಶಾಖೆ ಮಂಗಳೂರಿನ ಬಂಟ್ಸ್ ಹಾಸ್ಟೆಲ್‌ನ ಎಸ್ಸೆಲ್ ಟವರ್ಸ್ ನಲ್ಲಿ ಅ.19ರಂದು ಶುಭಾರಂಭಗೊಂಡಿತು.
ಮಂಗಳೂರು: ಪ್ರಯೋಗಾಲಯ ಕ್ಷೇತ್ರದಲ್ಲಿ ಹಲವು ಹೊಸತನಗಳೊಂದಿಗೆ ಪುತ್ತೂರು ಹಾಗೂ ಸುತ್ತಮುತ್ತಲಿನ ಜನರಿಗೆ ಗುಣಮಟ್ಟದ ಸೇವೆ ಒದಗಿಸುತ್ತಿರುವ ಪುತ್ತೂರಿನ ಪ್ರಸಿದ್ದ ಧನ್ವಂತರಿ ಕ್ಲಿನಿಕಲ್ ಲ್ಯಾಬೊರೇಟರಿಯ 11ನೇ ಶಾಖೆ ಮಂಗಳೂರಿನ ಬಂಟ್ಸ್ ಹಾಸ್ಟೆಲ್‌ನ ಎಸ್ಸೆಲ್ ಟವರ್ಸ್ ನಲ್ಲಿ ಅ.19ರಂದು ಶುಭಾರಂಭಗೊಂಡಿತು.
ನೂತನ ಶಾಖೆಯನ್ನು ಉದ್ಘಾಟಿಸಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಫರೀದ್ ಮಾತನಾಡಿ, ವೈದ್ಯಕೀಯ ಪ್ರಯೋಗಾಲಯ ಕ್ಷೇತ್ರದಲ್ಲಿ ವಿಶ್ವಾಸಾರ್ಹತೆ ಗಳಿಸಿರುವ ಧನ್ವಂತರಿ ಕ್ಲಿನಿಕಲ್ ಲ್ಯಾಬೊರೇಟರಿ, ಚೇತನ್ ಪ್ರಕಾಶ್ ಕಜೆ ಅವರ ನಾಯಕತ್ವದಲ್ಲಿ ಮಂಗಳೂರಿನಲ್ಲಿ ಆರಂಭವಾಗುತ್ತಿರುವುದು ಸಂತೋಷದ ವಿಚಾರವಾಗಿದೆ.ರೋಗ ಬಂದ ಬಳಿಕ ಚಿಕಿತ್ಸೆ ಪಡೆಯುವುದಕ್ಕಿಂತ, ರೋಗ ಬಾರದಂತೆ ಮುನ್ನೆಚ್ಚರಿಕೆ ವಹಿಸುವುದು ಹಾಗೂ ಆರಂಭಿಕ ಹಂತದಲ್ಲೇ ರೋಗವನ್ನು ಪತ್ತೆಹಚ್ಚುವುದು ಮುಖ್ಯ. ಈ ನಿಟ್ಟಿನಲ್ಲಿ ಗುಣಮಟ್ಟದ ಪ್ರಯೋಗಾಲಯಗಳ ಪಾತ್ರ ಮಹತ್ವದ್ದಾಗಿದೆ ಎಂದು ಹೇಳಿ ಶುಭಹಾರೈಸಿದರು.
ಅತಿಥಿಯಾಗಿ ಭಾಗವಹಿಸಿದ್ದ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ.ವೈ.ಭರತ್ ಶೆಟ್ಟಿ ಮಾತನಾಡಿ, ವೈದ್ಯಕೀಯ ಕ್ಷೇತ್ರದಲ್ಲಿ ಸೂಕ್ತ ಚಿಕಿತ್ಸೆ ನೀಡಲು ನಿಖರವಾದ ರೋಗನಿರ್ಣಯ ಅತ್ಯಗತ್ಯ. ಇದಕ್ಕಾಗಿ ವಿಶ್ವಾಸಾರ್ಹ ಪ್ರಯೋಗಾಲಯಗಳ ಅಗತ್ಯವಿದೆ. ನಿಖರ ವರದಿಗಳಿಗೆ ಹೆಸರಾಗಿರುವ ಧನ್ವಂತರಿ ಲ್ಯಾಬೊರೇಟರಿಯ ನೂತನ ಶಾಖೆಯಿಂದ ಮಂಗಳೂರು ನಗರ ಹಾಗೂ ಜಿಲ್ಲೆಯ ಜನರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಹೇಳಿದರು. ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ಚೇತನ್ ಪ್ರಕಾಶ್ ಕಜೆ ಅತಿಥಿಗಳನ್ನು ಸ್ವಾಗತಿಸಿ, ಧನ್ವಂತರಿ ಕ್ಲಿನಿಕಲ್ ಲ್ಯಾಬೊರೇಟರಿಯಲ್ಲಿ ಲಭ್ಯವಿರುವ ಅತ್ಯಾಧುನಿಕ ತಂತ್ರಜ್ಞಾನ ಹಾಗೂ ವಿಶೇಷ ಸೇವೆಗಳ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ತುಳು ಚಿತ್ರರಂಗದ ಹಾಸ್ಯ ನಟ ಅರವಿಂದ್ ಬೋಳಾರ್, ಸೋಮಯಾಜಿ ಎಸ್ಟೇಟ್ಸ್ ಪ್ರೈವೇಟ್ ಲಿಮಿಟೆಡ್‌ನ ಬಿ.ಆರ್.ಸೋಮಯಾಜಿ, ವಿಜೆ ವಿಖ್ಯಾತ್, ಚೇತನ್ ಪ್ರಕಾಶ್ ಕಜೆ ಅವರ ತಂದೆ ಡಾ.ಚಂದ್ರಶೇಖರ್ ಕಜೆ, ತಾಯಿ ಜಾನಕಿ, ಪತ್ನಿ ಡಾ.ಪ್ರಸನ್ನಾ ಚೇತನ್, ಪುತ್ರಿ ಜೀವಿತಾ, ಪುತ್ರ ಆಯುಷ್ಠಾನ್, ಸಹೋದರ ಡಾ.ಕೀರ್ತನ್ ಕಜೆ ಮತ್ತಿತರರು ಉಪಸ್ಥಿತರಿದ್ದರು. ಆಶಿಕ್ ಕುಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಬಿಗ್ ನ್ಯೂಸ್
G.L. Acharya Jewellers-ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್‌ನಲ್ಲಿ ವಿಜಯದಶಮಿ ಧಮಾಕಾ; ಕೊನೆಯ ಎರಡು ದಿನ ಮಾತ್ರ..!
1957ರಿಂದ ಗ್ರಾಹಕರ ವಿಶ್ವಾಸ ಗಳಿಸಿರುವ ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್‌ನಲ್ಲಿ ನವರಾತ್ರಿ ಹಾಗೂ ವಿಜಯದಶಮಿ ಪ್ರಯುಕ್ತ ವಿಶೇಷ ಕೊಡುಗೆಗಳನ್ನು ಘೋಷಿಸಲಾಗಿದೆ. ಚಿನ್ನ, ವಜ್ರ ಹಾಗೂ ಬೆಳ್ಳಿಯ ಆಭರಣಗಳ ಖರೀದಿಗೆ ವಿಶೇಷ ರಿಯಾಯಿತಿಗಳನ್ನು ನೀಡಲಾಗುತ್ತಿದೆ. ಅಕ್ಟೋಬರ್ 15ರಿಂದ ಆರಂಭವಾಗಿರುವ ಈ ಕೊಡುಗೆಗಳು ಅಕ್ಟೋಬರ್ 21ರವರೆಗೆ ಮಾತ್ರ ಲಭ್ಯವಿದ್ದು, ಗ್ರಾಹಕರಿಗೆ ಖರೀದಿಯ ಸಂಭ್ರಮವನ್ನು ಹೆಚ್ಚಿಸಿವೆ.
ಪುತ್ತೂರು: 1957ರಿಂದ ಗ್ರಾಹಕರ ವಿಶ್ವಾಸ ಗಳಿಸಿರುವ ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್‌ನಲ್ಲಿ ನವರಾತ್ರಿ ಹಾಗೂ ವಿಜಯದಶಮಿ ಪ್ರಯುಕ್ತ ವಿಶೇಷ ಕೊಡುಗೆಗಳನ್ನು ಘೋಷಿಸಲಾಗಿದೆ. ಚಿನ್ನ, ವಜ್ರ ಹಾಗೂ ಬೆಳ್ಳಿಯ ಆಭರಣಗಳ ಖರೀದಿಗೆ ವಿಶೇಷ ರಿಯಾಯಿತಿಗಳನ್ನು ನೀಡಲಾಗುತ್ತಿದೆ. ಅಕ್ಟೋಬರ್ 15ರಿಂದ ಆರಂಭವಾಗಿರುವ ಈ ಕೊಡುಗೆಗಳು ಅಕ್ಟೋಬರ್ 21ರವರೆಗೆ ಮಾತ್ರ ಲಭ್ಯವಿದ್ದು, ಗ್ರಾಹಕರಿಗೆ ಖರೀದಿಯ ಸಂಭ್ರಮವನ್ನು ಹೆಚ್ಚಿಸಿವೆ.
ನವರಾತ್ರಿಯ ನವೋಲ್ಲಾಸಕ್ಕಾಗಿ ವಿಶೇಷ ಕೊಡುಗೆಗಳು:
ಚಿನ್ನಾಭರಣಗಳು: ವಿ.ಎ. (VA) ಶುಲ್ಕದ ಮೇಲೆ ಪ್ರತಿ ಗ್ರಾಂಗೆ ₹600ರವರೆಗೆ ರಿಯಾಯಿತಿ.
ವಜ್ರಾಭರಣಗಳು: ಪ್ರತಿ ಕ್ಯಾರೆಟ್‌ಗೆ ₹8,000 ಫ್ಲ್ಯಾಟ್ ರಿಯಾಯಿತಿ.
ಬೆಳ್ಳಿಯ ಆಭರಣಗಳು: ಪ್ರತಿ ಕೆ.ಜಿ.ಗೆ ₹8,000 ಫ್ಲ್ಯಾಟ್ ರಿಯಾಯಿತಿ.
ಶಾಪಿಂಗ್ ಹಬ್ಬದ ಸಂಭ್ರಮ
ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್‌ನ ಶಾಪಿಂಗ್ ಹಬ್ಬದ ಸಂಭ್ರಮದಲ್ಲಿ ಗ್ರಾಹಕರಿಗೆ ಅದೃಷ್ಟ ಪರೀಕ್ಷಿಸುವ ಅವಕಾಶವೂ ಇದೆ. ಬಂಪರ್ ಬಹುಮಾನವಾಗಿ 5 ಕಾರುಗಳು ಸೇರಿದಂತೆ ಒಟ್ಟು 2,500ಕ್ಕೂ ಹೆಚ್ಚು ಬಹುಮಾನಗಳನ್ನು ಗೆಲ್ಲುವ ಅವಕಾಶ ಕಲ್ಪಿಸಲಾಗಿದೆ.
ನವರಾತ್ರಿಯ ಸಂಭ್ರಮವನ್ನು ಆಭರಣಗಳೊಂದಿಗೆ ಮತ್ತಷ್ಟು ವಿಶೇಷವಾಗಿಸಿಕೊಳ್ಳಲು ಬಯಸುವ ಗ್ರಾಹಕರು ಈ ಕೊಡುಗೆಗಳ ಪ್ರಯೋಜನ ಪಡೆದುಕೊಳ್ಳಬಹುದು. ಕೊಡುಗೆಗಳು ಅಕ್ಟೋಬರ್ 21ರಂದು ಮುಕ್ತಾಯಗೊಳ್ಳಲಿರುವುದರಿಂದ ಗ್ರಾಹಕರು ಶೀಘ್ರದಲ್ಲೇ ಮಳಿಗೆಗೆ ಭೇಟಿ ನೀಡಬಹುದು.
ಶಿಕ್ಷಣ
Philomena-ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಅಂತರ್ ಕಾಲೇಜು ಮಹಿಳಾ ಫುಟ್‌ಬಾಲ್ ಪಂದ್ಯಾವಳಿ; ಸಂತ ಫಿಲೋಮಿನಾ ಕಾಲೇಜಿನ ಮಹಿಳಾ ಫುಟ್‌ಬಾಲ್ ತಂಡಕ್ಕೆ ರನ್ನರ್‌ಅಪ್ ಸ್ಥಾನ
ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜು, ಪುತ್ತೂರಿನ ಮಹಿಳಾ ಫುಟ್‌ಬಾಲ್ ತಂಡವು ಅ.16 ರಂದು ಮಂಗಳೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಮುಡಿಪು ಆಯೋಜಿಸಿದ್ದ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಅಂತರ್ ಕಾಲೇಜು ಮಹಿಳಾ ಫುಟ್‌ಬಾಲ್ ಪಂದ್ಯಾವಳಿ 2026- 27 ರಲ್ಲಿ ರನ್ನರ್‌ಅಪ್ ಸ್ಥಾನ ಪಡೆದುಕೊಂಡಿದೆ.
ಪುತ್ತೂರು, ಅ.18 : ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜು, ಪುತ್ತೂರಿನ ಮಹಿಳಾ ಫುಟ್‌ಬಾಲ್ ತಂಡವು ಅ.16 ರಂದು ಮಂಗಳೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಮುಡಿಪು ಆಯೋಜಿಸಿದ್ದ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಅಂತರ್ ಕಾಲೇಜು ಮಹಿಳಾ ಫುಟ್‌ಬಾಲ್ ಪಂದ್ಯಾವಳಿ 2026- 27 ರಲ್ಲಿ ರನ್ನರ್‌ಅಪ್ ಸ್ಥಾನ ಪಡೆದುಕೊಂಡಿದೆ.
ತಂಡದ ಸಾಧನೆಯನ್ನು ಅಭಿನಂದಿಸಿದ ಕಾಲೇಜಿನ ಪ್ರಾಂಶುಪಾಲರಾದ ರೆ. ಡಾ. ಆ್ಯಂಟನಿ ಪ್ರಕಾಶ್ ಮೊಂತೆರೊ ಅವರು, ಪಂದ್ಯಾವಳಿಯಲ್ಲಿ ಆಟಗಾರ್ತಿಯರು ತಮ್ಮ ಅತ್ಯುತ್ತಮ ಸಾಮರ್ಥ್ಯವನ್ನು ಪ್ರದರ್ಶಿಸಿ ನೀಡಿದ ಪ್ರಯತ್ನವನ್ನು ಶ್ಲಾಘಿಸಿದರು. ಮುಂದಿನ ಪಂದ್ಯಾವಳಿಗಳಲ್ಲಿಯೂ ಇದೇ ರೀತಿಯ ಪ್ರಯತ್ನ ಮುಂದುವರಿಸುವಂತೆ ಆಟಗಾರ್ತಿಯರನ್ನು ಪ್ರೋತ್ಸಾಹಿಸಿ,ತಂಡಕ್ಕೆ ಮಾರ್ಗದರ್ಶನ ಹಾಗೂ ಬೆಂಬಲ ನೀಡಿದ ದೈಹಿಕ ಶಿಕ್ಷಣ ನಿರ್ದೇಶಕಿ ಹರ್ಷಿತಾ ಶೆಟ್ಟಿ ಅವರನ್ನೂ ಅಭಿನಂದಿಸಿದರು.
ಕಾಲೇಜಿನ ಆಡಳಿತ ಮಂಡಳಿ, ಬೋಧಕವರ್ಗ ಹಾಗೂ ವಿದ್ಯಾರ್ಥಿಗಳು ಮಹಿಳಾ ಫುಟ್‌ಬಾಲ್ ತಂಡದ ಸಾಧನೆಗೆ ಅಭಿನಂದನೆ ಸಲ್ಲಿಸಿದ್ದಾರೆ.
-
ಬಿಗ್ ನ್ಯೂಸ್16 hours agoಬೋಳಿಯಾರ್ ಭೀಕರ ಅಪಘಾತ : ಸ್ಕೂಟರ್ ಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪಿಕಪ್ – ಸವಾರ ಮೃತ್ಯು
-
ಬಿಗ್ ನ್ಯೂಸ್17 hours ago‘ಎಸ್ಐಟಿಯಿಂದ ತಾರ್ಕಿಕ ಅಂತ್ಯ ಅಸಾಧ್ಯ’ ಎಂದ ವಕೀಲ ಅಮೃತೇಶ್ ವಿರುದ್ಧ ಪತ್ರಿಕಾಗೋಷ್ಠಿ ನಡೆಸಿ ತನಿಖೆಗೆ ಪ್ರಭಾವ ಬೀರಲು ಯತ್ನಿಸಿದ್ದಾರೆಂದು ಆರೋಪಿಸಿ ಸೌಜನ್ಯ ತಾಯಿ ಕುಸುಮಾವತಿಯಿಂದ ಧರ್ಮಸ್ಥಳ ಠಾಣೆಗೆ ದೂರು ದಾಖಲು – ಹಳೆಯ ಪ್ರಕರಣದ ಜಾಮೀನು ರದ್ದುಗೊಳಿಸುವಂತೆ ಮನವಿ..!
-
Uncategorized20 hours ago
ಸಿದ್ದಕಟ್ಟೆ : ಯುವಕನಿಗೆ ಚೂರಿಯಿಂದ ಇರಿತ: 6 ಮಂದಿ ವಿರುದ್ಧ ಕೇಸ್
-
ಮೈಸೂರು5 hours agoMysuru-ಮೈಸೂರು ದಸರಾ ಕಂಬಳ ಸಂಪನ್ನ: ಫಲಿತಾಂಶ ಪ್ರಕಟ : ಪ್ರಥಮ ಬಹುಮಾನವಾಗಿ 16 ಗ್ರಾಂ ಚಿನ್ನ
-
Uncategorized20 hours ago
ಬೆಳ್ತಂಗಡಿ : ಕೋಳಿ ಅಂಕಕ್ಕೆ ಪೊಲೀಸರ ದಾಳಿ: ನಾಲ್ವರು ವಶಕ್ಕೆ, 7 ಕೋಳಿಗಳು ಜಪ್ತಿ
-
ನಿಧನ ವಾರ್ತೆ4 hours agoBolyar-ಬೋಳಿಯಾರ್: ಬೈಕ್ಗೆ ಹಿಂಬದಿಯಿಂದ ಪಿಕಪ್ ಢಿಕ್ಕಿ; ಗಂಭೀರವಾಗಿ ಗಾಯಗೊಂಡಿದ್ದ ಸಹಸವಾರ ಮೃತ್ಯು
-
ಬಿಗ್ ನ್ಯೂಸ್5 hours agoElon Musk-ಅಮೆರಿಕದ ಪ್ರತಿ ಮಗುವಿಗೂ ಸ್ಪೇಸ್ಎಕ್ಸ್ನ ತಲಾ ಒಂದು ಷೇರು..! ಎಲಾನ್ ಮಸ್ಕ್ ಘೋಷಣೆ
-
Uncategorized3 hours agoMangalore Dasara-ಮಂಗಳೂರು ದಸರಾ: ನಾಳೆ ಸಂಜೆ 4ರಿಂದ ಸಂಚಾರ ಬದಲಾವಣೆ; ಈ ರಸ್ತೆಗಳಲ್ಲಿ ವಾಹನ ಓಡಿಸುವ ಮುನ್ನ ಎಚ್ಚರ..!




















