Connect with us

ಮಂಗಳೂರು

Dhanvantari-ಮಂಗಳೂರಿನಲ್ಲಿ ‘ಧನ್ವಂತರಿ ಕ್ಲಿನಿಕಲ್ ಲ್ಯಾಬೋರೆಟರಿ’ಯ 11ನೇ ಶಾಖೆ ಉದ್ಘಾಟನೆ : ಆರೋಗ್ಯ ಸಚಿವ ಯು.ಟಿ ಖಾದರ್ ರಿಂದ ಉದ್ಘಾಟನೆ – ಶಾಸಕ ಭರತ್ ಶೆಟ್ಟಿ, ಅರವಿಂದ ಬೋಳಾರ್ ಸಹಿತ ಹಲವು ಗಣ್ಯರು ಭಾಗಿ

Published

on



Ad Widget

Ad Widget

Ad Widget

Ad Widget

ಪ್ರಯೋಗಾಲಯ ಕ್ಷೇತ್ರದಲ್ಲಿ ಹಲವು ಹೊಸತನಗಳೊಂದಿಗೆ ಪುತ್ತೂರು ಹಾಗೂ ಸುತ್ತಮುತ್ತಲಿನ ಜನರಿಗೆ ಗುಣಮಟ್ಟದ ಸೇವೆ ಒದಗಿಸುತ್ತಿರುವ ಪುತ್ತೂರಿನ ಪ್ರಸಿದ್ದ ಧನ್ವಂತರಿ ಕ್ಲಿನಿಕಲ್ ಲ್ಯಾಬೊರೇಟರಿಯ 11ನೇ ಶಾಖೆ ಮಂಗಳೂರಿನ ಬಂಟ್ಸ್ ಹಾಸ್ಟೆಲ್‌ನ ಎಸ್ಸೆಲ್ ಟವರ್ಸ್‌ ನಲ್ಲಿ ಅ.19ರಂದು ಶುಭಾರಂಭಗೊಂಡಿತು.

Ad Widget

Ad Widget

Ad Widget

Ad Widget

ಮಂಗಳೂರು: ಪ್ರಯೋಗಾಲಯ ಕ್ಷೇತ್ರದಲ್ಲಿ ಹಲವು ಹೊಸತನಗಳೊಂದಿಗೆ ಪುತ್ತೂರು ಹಾಗೂ ಸುತ್ತಮುತ್ತಲಿನ ಜನರಿಗೆ ಗುಣಮಟ್ಟದ ಸೇವೆ ಒದಗಿಸುತ್ತಿರುವ ಪುತ್ತೂರಿನ ಪ್ರಸಿದ್ದ ಧನ್ವಂತರಿ ಕ್ಲಿನಿಕಲ್ ಲ್ಯಾಬೊರೇಟರಿಯ 11ನೇ ಶಾಖೆ ಮಂಗಳೂರಿನ ಬಂಟ್ಸ್ ಹಾಸ್ಟೆಲ್‌ನ ಎಸ್ಸೆಲ್ ಟವರ್ಸ್‌ ನಲ್ಲಿ ಅ.19ರಂದು ಶುಭಾರಂಭಗೊಂಡಿತು.

Ad Widget

Ad Widget

Ad Widget alt="Ad Widget"/>

Ad Widget

ನೂತನ ಶಾಖೆಯನ್ನು ಉದ್ಘಾಟಿಸಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಫರೀದ್ ಮಾತನಾಡಿ, ವೈದ್ಯಕೀಯ ಪ್ರಯೋಗಾಲಯ ಕ್ಷೇತ್ರದಲ್ಲಿ ವಿಶ್ವಾಸಾರ್ಹತೆ ಗಳಿಸಿರುವ ಧನ್ವಂತರಿ ಕ್ಲಿನಿಕಲ್ ಲ್ಯಾಬೊರೇಟರಿ, ಚೇತನ್ ಪ್ರಕಾಶ್ ಕಜೆ ಅವರ ನಾಯಕತ್ವದಲ್ಲಿ ಮಂಗಳೂರಿನಲ್ಲಿ ಆರಂಭವಾಗುತ್ತಿರುವುದು ಸಂತೋಷದ ವಿಚಾರವಾಗಿದೆ.ರೋಗ ಬಂದ ಬಳಿಕ ಚಿಕಿತ್ಸೆ ಪಡೆಯುವುದಕ್ಕಿಂತ, ರೋಗ ಬಾರದಂತೆ ಮುನ್ನೆಚ್ಚರಿಕೆ ವಹಿಸುವುದು ಹಾಗೂ ಆರಂಭಿಕ ಹಂತದಲ್ಲೇ ರೋಗವನ್ನು ಪತ್ತೆಹಚ್ಚುವುದು ಮುಖ್ಯ. ಈ ನಿಟ್ಟಿನಲ್ಲಿ ಗುಣಮಟ್ಟದ ಪ್ರಯೋಗಾಲಯಗಳ ಪಾತ್ರ ಮಹತ್ವದ್ದಾಗಿದೆ ಎಂದು ಹೇಳಿ ಶುಭಹಾರೈಸಿದರು.

Ad Widget

Ad Widget <> Ad Widget

ಅತಿಥಿಯಾಗಿ ಭಾಗವಹಿಸಿದ್ದ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ.ವೈ.ಭರತ್ ಶೆಟ್ಟಿ ಮಾತನಾಡಿ, ವೈದ್ಯಕೀಯ ಕ್ಷೇತ್ರದಲ್ಲಿ ಸೂಕ್ತ ಚಿಕಿತ್ಸೆ ನೀಡಲು ನಿಖರವಾದ ರೋಗನಿರ್ಣಯ ಅತ್ಯಗತ್ಯ. ಇದಕ್ಕಾಗಿ ವಿಶ್ವಾಸಾರ್ಹ ಪ್ರಯೋಗಾಲಯಗಳ ಅಗತ್ಯವಿದೆ. ನಿಖರ ವರದಿಗಳಿಗೆ ಹೆಸರಾಗಿರುವ ಧನ್ವಂತರಿ ಲ್ಯಾಬೊರೇಟರಿಯ ನೂತನ ಶಾಖೆಯಿಂದ ಮಂಗಳೂರು ನಗರ ಹಾಗೂ ಜಿಲ್ಲೆಯ ಜನರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಹೇಳಿದರು. ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ಚೇತನ್ ಪ್ರಕಾಶ್ ಕಜೆ ಅತಿಥಿಗಳನ್ನು ಸ್ವಾಗತಿಸಿ, ಧನ್ವಂತರಿ ಕ್ಲಿನಿಕಲ್ ಲ್ಯಾಬೊರೇಟರಿಯಲ್ಲಿ ಲಭ್ಯವಿರುವ ಅತ್ಯಾಧುನಿಕ ತಂತ್ರಜ್ಞಾನ ಹಾಗೂ ವಿಶೇಷ ಸೇವೆಗಳ ಕುರಿತು ಮಾಹಿತಿ ನೀಡಿದರು.



Ad Widget

ಕಾರ್ಯಕ್ರಮದಲ್ಲಿ ತುಳು ಚಿತ್ರರಂಗದ ಹಾಸ್ಯ ನಟ ಅರವಿಂದ್ ಬೋಳಾರ್, ಸೋಮಯಾಜಿ ಎಸ್ಟೇಟ್ಸ್ ಪ್ರೈವೇಟ್ ಲಿಮಿಟೆಡ್‌ನ ಬಿ.ಆರ್.ಸೋಮಯಾಜಿ, ವಿಜೆ ವಿಖ್ಯಾತ್, ಚೇತನ್‌ ಪ್ರಕಾಶ್ ಕಜೆ ಅವರ ತಂದೆ ಡಾ.ಚಂದ್ರಶೇಖರ್ ಕಜೆ, ತಾಯಿ ಜಾನಕಿ, ಪತ್ನಿ ಡಾ.ಪ್ರಸನ್ನಾ ಚೇತನ್, ಪುತ್ರಿ ಜೀವಿತಾ, ಪುತ್ರ ಆಯುಷ್ಠಾನ್, ಸಹೋದರ ಡಾ.ಕೀರ್ತನ್ ಕಜೆ ಮತ್ತಿತರರು ಉಪಸ್ಥಿತರಿದ್ದರು. ಆಶಿಕ್ ಕುಟ್ಟಿ ಕಾರ್ಯಕ್ರಮ ನಿರೂಪಿಸಿದರು.

Click to comment

Leave a Reply

ಮಂಗಳೂರು

Mangalore-ಮಂಗಳೂರು ಜಿಲ್ಲಾ ಕುಸ್ತಿ ಸಂಘದ ಸಮಿತಿ ಪುನರ್ ರಚನೆ; ಅಧ್ಯಕ್ಷರಾಗಿ ಸುಜಿತ್ ರೈ ಪಾಲ್ತಾಡ್, ಉಪಾಧ್ಯಕ್ಷರಾಗಿ ರಾಮದಾಸ್ ಶೆಟ್ಟಿ ವಿಟ್ಲ, ಪ್ರಧಾನ ಕಾರ್ಯದರ್ಶಿಯಾಗಿ ನಿತ್ಯಾನಂದ ಶೆಟ್ಟಿ ದೇಲಂತಿಮಾರ್

Published

on



Ad Widget

Ad Widget

Ad Widget

Ad Widget

ರಾಜ್ಯದಲ್ಲಿ ಕುಸ್ತಿ ಕ್ರೀಡೆಯ ಅಭಿವೃದ್ಧಿ, ಪ್ರತಿಭಾವಂತ ಕುಸ್ತಿಪಟುಗಳಿಗೆ ಪ್ರೋತ್ಸಾಹ ಹಾಗೂ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕದ ಸಾಧನೆಯನ್ನು ಹೆಚ್ಚಿಸುವ ಗುರಿಯೊಂದಿಗೆ ಬೆಳ್ಳಿಪ್ಪಾಡಿ ಗುಣರಂಜನ್ ಶೆಟ್ಟಿಯವರು ಮತ್ತೊಮ್ಮೆ ಕರ್ನಾಟಕ ರಾಜ್ಯ ಕುಸ್ತಿ ಸಂಘದ ಚುಕ್ಕಾಣಿ ಹಿಡಿದಿದ್ದಾರೆ.

Ad Widget

Ad Widget

Ad Widget

Ad Widget

ಬೆಂಗಳೂರು: ರಾಜ್ಯದಲ್ಲಿ ಕುಸ್ತಿ ಕ್ರೀಡೆಯ ಅಭಿವೃದ್ಧಿ, ಪ್ರತಿಭಾವಂತ ಕುಸ್ತಿಪಟುಗಳಿಗೆ ಪ್ರೋತ್ಸಾಹ ಹಾಗೂ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕದ ಸಾಧನೆಯನ್ನು ಹೆಚ್ಚಿಸುವ ಗುರಿಯೊಂದಿಗೆ ಬೆಳ್ಳಿಪ್ಪಾಡಿ ಗುಣರಂಜನ್ ಶೆಟ್ಟಿಯವರು ಮತ್ತೊಮ್ಮೆ ಕರ್ನಾಟಕ ರಾಜ್ಯ ಕುಸ್ತಿ ಸಂಘದ ಚುಕ್ಕಾಣಿ ಹಿಡಿದಿದ್ದಾರೆ.

Ad Widget

Ad Widget

Ad Widget alt="Ad Widget"/>

Ad Widget

ಕರ್ನಾಟಕ ರಾಜ್ಯ ಕುಸ್ತಿ ಸಂಘದ ಅಧ್ಯಕ್ಷರಾದ ಬೆಳ್ಳಿಪ್ಪಾಡಿ ಗುಣರಂಜನ್ ಶೆಟ್ಟಿ ರವರ ಮಾರ್ಗದರ್ಶನದಲ್ಲಿ ಮಂಗಳೂರು ಕುಸ್ತಿ ಸಂಘ( ರಿ.) 2026–2030ನೇ ಸಾಲಿನ ಜಿಲ್ಲಾ ಆಡಳಿತ ಮಂಡಳಿಯ ಸಮಿತಿಯನ್ನು ಪುನರ್ ರಚಿಸಲಾಗಿದೆ.

Ad Widget

Ad Widget <> Ad Widget

ಅಧ್ಯಕ್ಷರಾಗಿ ಸುಜಿತ್ ರೈ ಪಾಲ್ತಾಡ್, ಉಪಾಧ್ಯಕ್ಷರಾಗಿ ರಾಮದಾಸ್ ಶೆಟ್ಟಿ ವಿಟ್ಲ, ಪ್ರಧಾನ ಕಾರ್ಯದರ್ಶಿಯಾಗಿ ನಿತ್ಯಾನಂದ ಶೆಟ್ಟಿ, ಖಜಾಂಚಿಯಾಗಿ ವಿಕಾಸ್ ಶೆಟ್ಟಿ, ಜಂಟಿ ಕಾರ್ಯದರ್ಶಿಗಳಾಗಿ ಸಮರ್ಥ್ ಭಂಡಾರಿ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ದೀಪ್ತಿ ಶೆಟ್ಟಿ, ಗೋಕುಲ್ ದಾಸ್ ಭಂಡಾರಿ ಮತ್ತು ಇತರರು ಆಯ್ಕೆಯಾಗಿದ್ದಾರೆ.



Ad Widget

ವರ್ಷಂಪ್ರತಿ ಮಂಗಳೂರಿನಲ್ಲಿ ನಡೆಯುವ ತಪಸ್ಯ ಬೀಚ್ ಫೆಸ್ಟಿವಲ್‌ನಲ್ಲಿ ರಾಜ್ಯ ಮಟ್ಟದ ಬೀಚ್ ಕುಸ್ತಿ ಪಂದ್ಯಾವಳಿಯನ್ನು ಆಯೋಜಿಸಿ ಯಶಸ್ವಿಗೊಳಿಸುವಲ್ಲಿ ಮಂಗಳೂರು ಕುಸ್ತಿ ಸಂಘದ ಪದಾಧಿಕಾರಿಗಳು ಪ್ರಮುಖ ಪಾತ್ರ ವಹಿಸಿದ್ದರು.

Ad Widget

Ad Widget

ಈ ಸಂದರ್ಭದಲ್ಲಿ ಮಂಗಳೂರು ಕುಸ್ತಿ ಸಂಘ( ರಿ.) ಇದರ ಅಧ್ಯಕ್ಷರಾಗಿ ಆಯ್ಕೆಯಾದ ಸುಜಿತ್ ರೈ ಮಾತನಾಡಿ ನಮ್ಮ ಜಿಲ್ಲಯ ಕುಸ್ತಿ ಪಟುಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಿ ಅವರನ್ನು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಬೆಳೆಸುವ ಆಶಯ ವ್ಯಕ್ತ ಪಡಿಸಿದರು.

Ad Widget
Continue Reading

ಮಂಗಳೂರು

Mangalore Dasara-ಮಂಗಳೂರು ದಸರಾ ಶೋಭಾಯಾತ್ರೆಗೆ ಕ್ಷಣಗಣನೆ: 50ಕ್ಕೂ ಅಧಿಕ ಸ್ತಬ್ಧಚಿತ್ರ, 20ಕ್ಕೂ ಹೆಚ್ಚು ಕಲಾತಂಡಗಳ ವೈಭವ..!

Published

on



Ad Widget

Ad Widget

Ad Widget

Ad Widget

ಕರಾವಳಿಯ ಪ್ರಸಿದ್ಧ ಮಂಗಳೂರು ದಸರಾ ಮಹೋತ್ಸವದ ಅದ್ಧೂರಿ ಶೋಭಾಯಾತ್ರೆಗೆ ಕ್ಷಣಗಣನೆ ಆರಂಭವಾಗಿದೆ. ಅಕ್ಟೋಬರ್ 21ರಂದು ನಡೆಯಲಿರುವ ಈ ವೈಭವದ ಮೆರವಣಿಗೆಗೆ 50ಕ್ಕೂ ಅಧಿಕ ಸ್ತಬ್ಧಚಿತ್ರಗಳು, ವಿವಿಧ ಜಿಲ್ಲೆಗಳ 20ಕ್ಕೂ ಹೆಚ್ಚು ಜಾನಪದ ಕಲಾತಂಡಗಳು, ಹುಲಿವೇಷ ತಂಡಗಳು ಹಾಗೂ ನಾಸಿಕ್ ಬ್ಯಾಂಡ್‌ಗಳು ಸಜ್ಜಾಗಿವೆ. ಈ ಬಾರಿ ಒಂದು ಲಕ್ಷಕ್ಕೂ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆಯಿದ್ದು, ನಗರದಲ್ಲಿ ದಸರಾ ಸಂಭ್ರಮ ಕಳೆಗಟ್ಟಿದೆ.

Ad Widget

Ad Widget

Ad Widget

Ad Widget

ಮಂಗಳೂರು, ಅ. 20: ಕರಾವಳಿಯ ಪ್ರಸಿದ್ಧ ಮಂಗಳೂರು ದಸರಾ ಮಹೋತ್ಸವದ ಅದ್ಧೂರಿ ಶೋಭಾಯಾತ್ರೆಗೆ ಕ್ಷಣಗಣನೆ ಆರಂಭವಾಗಿದೆ. ಅಕ್ಟೋಬರ್ 21ರಂದು ನಡೆಯಲಿರುವ ಈ ವೈಭವದ ಮೆರವಣಿಗೆಗೆ 50ಕ್ಕೂ ಅಧಿಕ ಸ್ತಬ್ಧಚಿತ್ರಗಳು, ವಿವಿಧ ಜಿಲ್ಲೆಗಳ 20ಕ್ಕೂ ಹೆಚ್ಚು ಜಾನಪದ ಕಲಾತಂಡಗಳು, ಹುಲಿವೇಷ ತಂಡಗಳು ಹಾಗೂ ನಾಸಿಕ್ ಬ್ಯಾಂಡ್‌ಗಳು ಸಜ್ಜಾಗಿವೆ. ಈ ಬಾರಿ ಒಂದು ಲಕ್ಷಕ್ಕೂ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆಯಿದ್ದು, ನಗರದಲ್ಲಿ ದಸರಾ ಸಂಭ್ರಮ ಕಳೆಗಟ್ಟಿದೆ.

Ad Widget

Ad Widget

Ad Widget alt="Ad Widget"/>

Ad Widget

ಮಂಗಳೂರು ದಸರಾ ಕೇವಲ ಧಾರ್ಮಿಕ ಉತ್ಸವವಲ್ಲ, ಕರಾವಳಿಯ ಸಾಂಸ್ಕೃತಿಕ ವೈಭವ, ಕಲಾಪರಂಪರೆ, ಭಕ್ತಿ ಮತ್ತು ಸೌಹಾರ್ದದ ಪ್ರತೀಕವಾಗಿದೆ. ವಿವಿಧ ಸಂಘ-ಸಂಸ್ಥೆಗಳು ತಿಂಗಳುಗಳ ಪರಿಶ್ರಮದಿಂದ ಸಿದ್ಧಪಡಿಸಿರುವ ಪೌರಾಣಿಕ, ಜಾನಪದ ಹಾಗೂ ವಿನೂತನ ಪರಿಕಲ್ಪನೆಗಳ ಸ್ತಬ್ಧಚಿತ್ರಗಳು ಶೋಭಾಯಾತ್ರೆಯ ಪ್ರಮುಖ ಆಕರ್ಷಣೆಯಾಗಲಿವೆ.

Ad Widget

Ad Widget <> Ad Widget

ವೈವಿಧ್ಯಮಯ ಸ್ತಬ್ಧಚಿತ್ರಗಳ ಆಕರ್ಷಣೆ
ಮಂಗಳೂರು ದಸರಾ ಮಹೋತ್ಸವದಲ್ಲಿ ಮೊದಲ ಮರ್ಯಾದೆಯ ತಂಡವೆಂಬ ಹೆಗ್ಗಳಿಕೆ ಹೊಂದಿರುವ ಮಂಜಲ್ ಬೈಲ್ ಫ್ರೆಂಡ್ಸ್, ತನ್ನ 76ನೇ ವರ್ಷದ ಸಂಭ್ರಮದಲ್ಲಿ ಹುಲಿವೇಷದ ಸ್ತಬ್ಧಚಿತ್ರದೊಂದಿಗೆ ಭಾಗವಹಿಸಲಿದೆ. ಕಾಳಿಚರಣ್ ಫ್ರೆಂಡ್ಸ್ ಶಾರದಾ ದೇವಿ ಹಾಗೂ ಹುಲಿವೇಷದ ಸ್ತಬ್ಧಚಿತ್ರವನ್ನು ಪ್ರದರ್ಶಿಸಿದರೆ, ಬರ್ಕೆ ಫ್ರೆಂಡ್ಸ್ ಕೇರಳದ ಸಾಂಸ್ಕೃತಿಕ ನೃತ್ಯ, ಶಾರದಾ ಸ್ತಬ್ಧಚಿತ್ರ ಮತ್ತು ನಾಸಿಕ್ ಬ್ಯಾಂಡ್‌ನೊಂದಿಗೆ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದೆ.



Ad Widget

ಶಿವ ಫ್ರೆಂಡ್ಸ್ ದುರ್ಗಾದೇವಿಯ ದೃಶ್ಯರೂಪಕ, ಜೂನಿಯರ್ ಬಾಯ್ಸ್ ಗುಬ್ಬಿ ಕುಣಿತ ಹಾಗೂ ಯುವ ಸಂಗಮ್ ಶಾರದಾ ಮಾತೆ ಮತ್ತು ಹುಲಿವೇಷದ ಸ್ತಬ್ಧಚಿತ್ರದ ಮೂಲಕ ಗಮನ ಸೆಳೆಯಲಿವೆ. ಓಂ ಸಾಯಿ ಫ್ರೆಂಡ್ಸ್ ನಾಗಕನ್ನಿಕೆಯ ಸ್ತಬ್ಧಚಿತ್ರವನ್ನು, ಪದುವಾ ಫ್ರೆಂಡ್ಸ್ ರಾಘವೇಂದ್ರ ಸ್ವಾಮಿಯ ರೂಪಕದೊಂದಿಗೆ ದೇವಾಲಯಗಳ ಮಾಹಿತಿಯನ್ನು ಒಳಗೊಂಡ ಎಲ್‌ಇಡಿ ಸ್ತಬ್ಧಚಿತ್ರವನ್ನು ಪ್ರಸ್ತುತಪಡಿಸಲಿದೆ.

Ad Widget

Ad Widget

ಬಿರುವೆರ್ ಕುಡ್ಲ ತಂಡದ ಕಾರ್ನಿವಲ್, ಜಂಗಲ್ ಸಫಾರಿ, ಶಾರದಾ ಮಾತೆ ಹಾಗೂ ಹುಲಿವೇಷವನ್ನು ಬಿಂಬಿಸುವ ನಾಲ್ಕು ಸ್ತಬ್ಧಚಿತ್ರಗಳು ವಿಶೇಷ ಆಕರ್ಷಣೆಯಾಗಲಿವೆ.

ಬಲ್ಲಾಳ್ ಭಾಗ್ ಫ್ರೆಂಡ್ಸ್, ಗ್ರೀನ್ ಪಾರ್ಕ್ ಫ್ರೆಂಡ್ಸ್, ಸತ್ಯಸಾರಾಮಣಿ ವಿವೇಕ್ ಟೈಗರ್ಸ್, ಬಲಿಪೆ ಫ್ರೆಂಡ್ಸ್, ತುಳುನಾಡ ಬಿರುವೆರ್, ಜವನೆರ್ ಕುಡ್ಲ, ಕುಡ್ಲ ಫ್ರೆಂಡ್ಸ್, ರೈಸಿಂಗ್ ಫ್ರೆಂಡ್ಸ್, ಟೀಮ್ ಅವತಾರ್ ಹಾಗೂ ಕಾಲಭೈರವ ಫ್ರೆಂಡ್ಸ್ ಸೇರಿದಂತೆ ಹಲವು ತಂಡಗಳು ವಿಭಿನ್ನ ವಿನ್ಯಾಸದ ಹುಲಿವೇಷದ ಸ್ತಬ್ಧಚಿತ್ರಗಳೊಂದಿಗೆ ಮೆರವಣಿಗೆಯ ಮೆರುಗು ಹೆಚ್ಚಿಸಲಿವೆ.

ಟೀಮ್ ತಾಂಡವದ ಶಿವನ ರೂಪಕ, ಕುಡ್ಲ ಕುಲಾಲೆರ್ ಚಾರಿಟೆಬಲ್ ಸೇವಾ ಟ್ರಸ್ಟ್‌ನ ಸ್ತಬ್ಧಚಿತ್ರ ಹಾಗೂ ಲಯನ್ಸ್ ಕ್ಲಬ್ ಮಂಗಳೂರು ಶಕ್ತಿಯ ದೇವರ ಮೂರ್ತಿಯ ಸ್ತಬ್ಧಚಿತ್ರವೂ ಮೆರವಣಿಗೆಯಲ್ಲಿ ಗಮನ ಸೆಳೆಯಲಿವೆ.

ಕುಡ್ಲ ಬ್ರದರ್ಸ್ ತಂಡವು ಕೃಷ್ಣಲೀಲೆಯನ್ನು ಬಿಂಬಿಸುವ ವಿನೂತನ ದೃಶ್ಯರೂಪಕದೊಂದಿಗೆ ಕೇರಳದ ವಯಲಿನ್ ಸಂಗೀತದ ವೈಶಿಷ್ಟ್ಯವನ್ನು ಪರಿಚಯಿಸುವ ಸ್ತಬ್ಧಚಿತ್ರವನ್ನು ಪ್ರದರ್ಶಿಸಲಿದೆ. ಬಲಿಪೆ ಫ್ರೆಂಡ್ಸ್ ಹಾಗೂ ತುಳುನಾಡ ಬಿರುವೆರ್ ತಂಡಗಳು ಕೂಡ ಹುಲಿವೇಷದ ಸ್ತಬ್ಧಚಿತ್ರಗಳೊಂದಿಗೆ ಭಾಗವಹಿಸಲಿವೆ.

ಭಕ್ತಿ, ಕಲೆ ಮತ್ತು ಸಂಸ್ಕೃತಿಯ ಸಂಗಮ
ತಿಂಗಳುಗಳ ಪರಿಶ್ರಮದಲ್ಲಿ ಸಿದ್ಧಗೊಂಡಿರುವ ಸ್ತಬ್ಧಚಿತ್ರಗಳು, ಜಾನಪದ ನೃತ್ಯಗಳು, ಹುಲಿವೇಷಗಳು ಹಾಗೂ ವಿವಿಧ ವಾದ್ಯಗಳ ನಿನಾದದೊಂದಿಗೆ ಮಂಗಳೂರು ದಸರಾ ಶೋಭಾಯಾತ್ರೆ ಭಕ್ತಿ, ಪರಂಪರೆ ಮತ್ತು ಸೃಜನಶೀಲತೆಯ ಅದ್ಭುತ ಸಂಗಮವಾಗಿ ಮೂಡಿಬರಲಿದೆ. ಈ ವೈಭವವನ್ನು ಕಣ್ತುಂಬಿಕೊಳ್ಳಲು ಮಂಗಳೂರು ನಗರ ಸಜ್ಜಾಗಿದೆ.

ಈ ಕುರಿತು ಮಾತನಾಡಿದ ಕುದ್ರೋಳಿ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್., “ಮಂಗಳೂರು ದಸರಾ ಮಹೋತ್ಸವದ ವೈಭವದ ಶೋಭಾಯಾತ್ರೆಯಲ್ಲಿ 50ಕ್ಕೂ ಅಧಿಕ ಸ್ತಬ್ಧಚಿತ್ರಗಳು, ವಿವಿಧ ಜಿಲ್ಲೆಗಳ 20ಕ್ಕೂ ಹೆಚ್ಚು ಕಲಾತಂಡಗಳು, ಬ್ಯಾಂಡ್ ಹಾಗೂ ಸಂಗೀತ ತಂಡಗಳು ಜನಮನಸೂರೆಗೊಳ್ಳಲಿವೆ. ಈ ಬಾರಿಯೂ ಒಂದು ಲಕ್ಷಕ್ಕೂ ಅಧಿಕ ಪ್ರವಾಸಿಗರು ದಸರಾ ಮಹೋತ್ಸವಕ್ಕೆ ಆಗಮಿಸುವ ಸಾಧ್ಯತೆಯಿದೆ” ಎಂದು ತಿಳಿಸಿದ್ದಾರೆ.

Ad Widget
Continue Reading

ಮಂಗಳೂರು

Mogaveera Pattanna-ಉಳ್ಳಾಲ ಮೊಗವೀರ ಪಟ್ಟಣ್ಣ ಶಾರದೋತ್ಸವ: ಬಾಂಡ್ ನೀಡಲು ಸ್ತಬ್ಧಚಿತ್ರ ಸಂಘಟಕರ ಹಿಂದೇಟು; ಪೊಲೀಸರಿಂದ ಕಟ್ಟುನಿಟ್ಟಿನ ಎಚ್ಚರಿಕೆ..!

Published

on



Ad Widget

Ad Widget

Ad Widget

Ad Widget

ಉಳ್ಳಾಲದ ಮೊಗವೀರಪಟ್ನದಲ್ಲಿ ನಡೆಯಲಿರುವ ಶಾರದೋತ್ಸವದ ಮೆರವಣಿಗೆಯನ್ನು ಶಾಂತಿಯುತವಾಗಿ ನಡೆಸುವ ನಿಟ್ಟಿನಲ್ಲಿ ಮಂಗಳೂರು ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ. ಕಳೆದ ವರ್ಷ ಮೆರವಣಿಗೆಯ ಸಂದರ್ಭದಲ್ಲಿ ಅಹಿತಕರ ಘಟನೆ ನಡೆದ ಹಿನ್ನೆಲೆಯಲ್ಲಿ, ಈ ಬಾರಿ ಸ್ತಬ್ಧಚಿತ್ರಗಳ ಸಂಘಟಕರು ಪೊಲೀಸ್ ಇಲಾಖೆಗೆ ಬಾಂಡ್ ಸಲ್ಲಿಸುವಂತೆ ಸೂಚಿಸಲಾಗಿದೆ.

Ad Widget

Ad Widget

Ad Widget

Ad Widget

ಮಂಗಳೂರು, ಅ. 20: ಉಳ್ಳಾಲದ ಮೊಗವೀರಪಟ್ನದಲ್ಲಿ ನಡೆಯಲಿರುವ ಶಾರದೋತ್ಸವದ ಮೆರವಣಿಗೆಯನ್ನು ಶಾಂತಿಯುತವಾಗಿ ನಡೆಸುವ ನಿಟ್ಟಿನಲ್ಲಿ ಮಂಗಳೂರು ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ. ಕಳೆದ ವರ್ಷ ಮೆರವಣಿಗೆಯ ಸಂದರ್ಭದಲ್ಲಿ ಅಹಿತಕರ ಘಟನೆ ನಡೆದ ಹಿನ್ನೆಲೆಯಲ್ಲಿ, ಈ ಬಾರಿ ಸ್ತಬ್ಧಚಿತ್ರಗಳ ಸಂಘಟಕರು ಪೊಲೀಸ್ ಇಲಾಖೆಗೆ ಬಾಂಡ್ ಸಲ್ಲಿಸುವಂತೆ ಸೂಚಿಸಲಾಗಿದೆ.

Ad Widget

Ad Widget

Ad Widget alt="Ad Widget"/>

Ad Widget

ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ, ವಿವಿಧ ಸ್ತಬ್ಧಚಿತ್ರಗಳ ಸಂಘಟಕರಿಂದ ಪ್ರತ್ಯೇಕವಾಗಿ ಮುಚ್ಚಳಿಕೆ ಬರೆಸಿಕೊಳ್ಳಲು ಪೊಲೀಸರು ಆರಂಭದಲ್ಲಿ ಮನವಿ ಮಾಡಿದ್ದರು. ಬಳಿಕ ಸಂಘಟಕರು ಪೊಲೀಸ್ ಆಯುಕ್ತರ ಕಚೇರಿಯನ್ನು ಸಂಪರ್ಕಿಸಿ, ಎಲ್ಲ ಸಂಘಟಕರ ಪರವಾಗಿ ಒಂದೇ ಮುಚ್ಚಳಿಕೆಯನ್ನು ಸ್ವೀಕರಿಸುವಂತೆ ಕೋರಿದ್ದರು. ಇದಕ್ಕೆ ಪೊಲೀಸರು ಸಮ್ಮತಿಸಿ, ಒಂದೇ ಮುಚ್ಚಳಿಕೆ ಸಲ್ಲಿಸುವಂತೆ ಸೂಚಿಸಿದ್ದರು.

Ad Widget

Ad Widget <> Ad Widget

ಆದರೆ, ಬಳಿಕ ಸಂಘಟಕರು ಯಾವುದೇ ಮುಚ್ಚಳಿಕೆ ಸಲ್ಲಿಸಲು ನಿರಾಕರಿಸಿದ್ದಾರೆ ಎನ್ನಲಾಗಿದೆ. ಅಲ್ಲದೆ, ತಮ್ಮ ಇಚ್ಛೆಯಂತೆ ಮೆರವಣಿಗೆ ನಡೆಸುವುದಾಗಿ ತಿಳಿಸಿರುವುದು ಪೊಲೀಸ್ ಇಲಾಖೆಯೊಂದಿಗೆ ಸಂಘರ್ಷದ ವಾತಾವರಣ ನಿರ್ಮಾಣವಾಗುವ ಆತಂಕಕ್ಕೆ ಕಾರಣವಾಗಿದೆ.



Ad Widget

ಈ ಕುರಿತು ಪೊಲೀಸ್ ಆಯುಕ್ತ ಸುಧೀರ್ ರೆಡ್ಡಿ ಅವರು ಹೇಳಿಕೆ ಬಿಡುಗಡೆ ಮಾಡಿದ್ದು, ಪೊಲೀಸರು ಇದುವರೆಗೆ ಅತ್ಯಂತ ಸಂಯಮದಿಂದ ವರ್ತಿಸಿದ್ದಾರೆ. ಸಂಘಟಕರ ಸಹಕಾರ ಪಡೆಯಲು ಸೌಹಾರ್ದಯುತ ಪ್ರಯತ್ನಗಳನ್ನೂ ನಡೆಸಿದ್ದಾರೆ ಎಂದು ತಿಳಿಸಿದ್ದಾರೆ.

Ad Widget

Ad Widget

ಬಾಂಡ್ ಪಡೆಯುವ ಕ್ರಮವು ಯಾವುದೇ ಧಾರ್ಮಿಕ ಅಥವಾ ಸಾಂಸ್ಕೃತಿಕ ಮೆರವಣಿಗೆಗೆ ಅಡ್ಡಿಪಡಿಸುವ ಉದ್ದೇಶ ಹೊಂದಿಲ್ಲ. ಬದಲಾಗಿ, ಸಾರ್ವಜನಿಕ ಶಾಂತಿ ಮತ್ತು ಕಾನೂನು ಸುವ್ಯವಸ್ಥೆಯನ್ನು ಖಚಿತಪಡಿಸುವುದೇ ಇದರ ಉದ್ದೇಶವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಯಾವುದೇ ವ್ಯಕ್ತಿ ಅಥವಾ ಗುಂಪು ಕಾನೂನು ಉಲ್ಲಂಘಿಸುವ ಅಥವಾ ಸಾರ್ವಜನಿಕ ಶಾಂತಿಗೆ ಭಂಗ ತರುವ ಉದ್ದೇಶದಿಂದ ಮೆರವಣಿಗೆ ನಡೆಸಲು ಮುಂದಾದರೆ, ಪರಿಸ್ಥಿತಿಗೆ ಅನುಗುಣವಾಗಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS) ಅಡಿಯಲ್ಲಿ ಸೂಕ್ತ ಪ್ರತಿಬಂಧಕ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಪೊಲೀಸ್ ಆಯುಕ್ತರು ಎಚ್ಚರಿಕೆ ನೀಡಿದ್ದಾರೆ.

ಈ ಕುರಿತು ಸಂಘಟಕರಿಗೂ ತಿಳಿಸಲಾಗಿದ್ದು, ಶಾರದಾ ಮೆರವಣಿಗೆಯನ್ನು ಶಾಂತಿಯುತವಾಗಿ ನಡೆಸಲು ಸಹಕರಿಸುವಂತೆ ಸೂಚಿಸಲಾಗಿದೆ.

Ad Widget
Continue Reading

ಇಂದಿನ ಟ್ರೆಂಡಿಂಗ್‌ ಸುದ್ದಿಗಳು

error: Content is protected !!

Discover more from Nikhara News | Kannada News Website

Subscribe now to keep reading and get access to the full archive.

Continue reading