ಶಿಕ್ಷಣ
Navayug-2024-ಪುತ್ತೂರು: ನೂತನ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ ನವಯುಗ್-2024
ನೀರು, ಭೂಮಿ, ಗಾಳಿ, ಆಕಾಶ ಮತ್ತು ಬೆಂಕಿ ಇದು ಪಂಚಭೂತಗಳು. ಆಕಾಶದಿಂದ ತೊಡಗಿ ಸ್ಥೂಲಗೊಳ್ಳುತ್ತಾ ಪೃಥ್ವಿಯವರೆಗೆ ಪಂಚಭೂತಗಳು ವಿಸ್ತರಿಸಿವೆ. ಜೀವಿಗಳ ಶರೀರಗಳೂ ಇದರಿಂದ ನಿರ್ಮಿತವಾಗಿವೆ. ಇವು ಸಹಕರಿಸದಿದ್ದರೆ ನಾವೆಷ್ಟು ಹೋರಾಡಿದರೂ ಏನನ್ನೂ ಸಾಧಿಸಲಾಗದು ಎಂದು ಕರ್ನಾಟಕ ವಿಧಾನಪರಿಷತ್ತಿನ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ ಹೇಳಿದರು.
ಪುತ್ತೂರು: ನೀರು, ಭೂಮಿ, ಗಾಳಿ, ಆಕಾಶ ಮತ್ತು ಬೆಂಕಿ ಇದು ಪಂಚಭೂತಗಳು. ಆಕಾಶದಿಂದ ತೊಡಗಿ ಸ್ಥೂಲಗೊಳ್ಳುತ್ತಾ ಪೃಥ್ವಿಯವರೆಗೆ ಪಂಚಭೂತಗಳು ವಿಸ್ತರಿಸಿವೆ. ಜೀವಿಗಳ ಶರೀರಗಳೂ ಇದರಿಂದ ನಿರ್ಮಿತವಾಗಿವೆ. ಇವು ಸಹಕರಿಸದಿದ್ದರೆ ನಾವೆಷ್ಟು ಹೋರಾಡಿದರೂ ಏನನ್ನೂ ಸಾಧಿಸಲಾಗದು ಎಂದು ಕರ್ನಾಟಕ ವಿಧಾನಪರಿಷತ್ತಿನ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ ಹೇಳಿದರು.
ಅವರು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿರಿಂಗ್ ಎಂಡ್ ಟೆಕ್ನಾಲಜಿಯ ನೂತನ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ ನವಯುಗ್-2024 ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತಾಡಿದರು. ಜೀವನದಲ್ಲಿ ಸುಖ ದುಃಖಗಳನ್ನು ನಿರ್ಲಿಪ್ತತೆಯಿಂದ ಸ್ವೀಕರಿಸಬೇಕು ಇದಕ್ಕಾಗಿ ಶ್ರೀರಾಮನ ಆದರ್ಶವನ್ನು ಮೈಗೂಡಿಸಬೇಕು ಎಂದರು. ದುಶ್ಚಟಗಳಿಗೆ ದಾಸರಾಗದೆ ಇತರರಿಗೆ ದಾರಿದೀಪವಾಗಿ ಸಮಾಜದ ಬದಲಾವಣೆಯ ಹರಿಕಾರರಾಗಬೇಕು ಎಂದು ನುಡಿದರು.

ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ವಿಶ್ವಾಸ್ ಶೆಣೈ ಮಾತನಾಡಿ ನಮ್ಮ ಕಾಲೇಜು ಮಾತೃ ಸಂಸ್ಥೆಯ ಆಶಯಕ್ಕನುಗುಣವಾಗಿ ಬಹಳ ವಿಭಿನ್ನವಾಗಿ ಗುರುತಿಸಿಕೊಂಡಿದೆ. ಇಲ್ಲಿ ಶಿಸ್ತಿಗೆ ಮತ್ತು ಸಂಸ್ಕಾರಕ್ಕೆ ಹೆಚ್ಚಿನ ಆದ್ಯತೆಯನ್ನು ಕೊಡಲಾಗುತ್ತದೆ. ವಿದ್ಯಾರ್ಥಿಗಳಿಗೆ ಶಿಸ್ತು ಅನಿಸಿದರೂ ಮುಂದಿನ ಜೀವನಕ್ಕೆ ಇದು ದಾರಿದೀಪವಾಗುತ್ತದೆ ಎಂದರು.
ಪ್ರಾAಶುಪಾಲ ಡಾ.ಮಹೇಶ್‌ಪ್ರಸನ್ನ.ಕೆ ಶುಭ ಹಾರೈಸಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ.ಕೆ.ಎಂ.ಕೃಷ್ಣ ಭಟ್ ಮಾತನಾಡಿ ಅನೇಕ ಅಗ್ನಿಪರೀಕ್ಷೆಗಳನ್ನು ದಾಟಿ ಇಂಜಿನಿಯರಿಂಗ್ ಶಿಕ್ಷಣಕ್ಕಾಗಿ ಇಲ್ಲಿ ಬಂದಿದ್ದೀರಿ ಈ ನಾಲ್ಕು ವರ್ಷ ನಿಮ್ಮ ಬದುಕಿನ ನಿರ್ಣಾಯಕ ದಿನಗಳಾಗಿರುತ್ತವೆ ಎಂದರು. ಒಂದು ಕಡೆ ಕನಸುಗಳು ಇನ್ನೊಂದು ಕಡೆ ವಯೋಸಹಜ ಆಕರ್ಷಣೆಗಳು ನಿಮ್ಮ ಮೇಲೆ ದಾಳಿ ಮಾಡುತ್ತಲೇ ಇರುತ್ತವೆ. ಮನಸ್ಸಿನ ಈ ಕುರುಕ್ಷೇತ್ರ ಯುದ್ದದಲ್ಲಿ ಗೆದ್ದು ಪಾಂಡವರಾಗಲು ಪ್ರಯತ್ನಿಸಿ ಎಂದರು
ಕಾಲೇಜು ಆಡಳಿತ ಮಂಡಳಿಯ ನಿರ್ದೇಶಕರಾದ ರವಿಕೃಷ್ಣ.ಡಿ.ಕಲ್ಲಾಜೆ, ಸತ್ಯನಾರಾಯಣ ಭಟ್, ತರಬೇತಿ ಮತ್ತು ನೇಮಕಾತಿ ವಿಭಾಗ ಮುಖ್ಯಸ್ಥೆ ಪ್ರೊ.ವಂದನಾ ಶಂಕರ್, ಎಲ್ಲಾ ವಿಭಾಗಗಳ ಮುಖ್ಯಸ್ಥರು ಮತ್ತು ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ.ಚೇತನ್.ಪಿ.ಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಆಕಾಂಕ್ಷ್ ಸ್ವಾಗತಿಸಿ, ಅಶ್ವಿಜಾ ಪೈ ವಂದಿಸಿದರು. ಸಾಕ್ಷಿ.ಪಿ.ಶೆಟ್ಟಿ ಮತ್ತು ಜೀವಿತ್ ಕಾರ್ಯಕ್ರಮ ನಿರ್ವಹಿಸಿದರು.
ಶಿಕ್ಷಣ
Philomena-ನ 27 ಮತ್ತು 28 ರಂದು ಸಂತ ಪಿಲೋಮಿನಾ ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವ
ಸಂತ ಪಿಲೋಮಿನಾ ಪದವಿ ಪೂರ್ವ ಕಾಲೇಜಿನಲ್ಲಿ ಪ್ರತಿಭಾ ಪುರಸ್ಕಾರ ಮತ್ತು ವಾರ್ಷಿಕೋತ್ಸವವು ನ 27 ಹಾಗೂ 28 ರಂದು ಕಾಲೇಜಿನ ಪ್ರಾಂಗಣದಲ್ಲಿ ನಡೆಯಲಿದೆ.
ಪುತ್ತೂರು: ಸಂತ ಪಿಲೋಮಿನಾ ಪದವಿ ಪೂರ್ವ ಕಾಲೇಜಿನಲ್ಲಿ ಪ್ರತಿಭಾ ಪುರಸ್ಕಾರ ಮತ್ತು ವಾರ್ಷಿಕೋತ್ಸವವು ನ 27 ಹಾಗೂ 28 ರಂದು ಕಾಲೇಜಿನ ಪ್ರಾಂಗಣದಲ್ಲಿ ನಡೆಯಲಿದೆ.
ಡಿ 27 ರಂದು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಯಲಿದ್ದು, ಮುಖ್ಯ ಅತಿಥಿಗಳಾಗಿ ಕಡಬ ಸೈಂಟ್ ಆ್ಯನ್ಸ್ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯರಾದ ರೆ. ಫಾ. ಸುನಿಲ್ ಪಿಂಟೋ ವಹಿಸಲಿದ್ದಾರೆ. ನ 28 ರಂದು ಕಾಲೇಜಿನ ವಾರ್ಷಿಕೋತ್ಸವವು ನಡೆಯಲಿದ್ದು, ಮುಖ್ಯ ಅತಿಥಿಗಳಾಗಿ ಮಂಗಳೂರು ಫಾದರ್ ಮುಲ್ಲರ್ಸ್ ವೈದ್ಯಕೀಯ ಕಾಲೇಜಿನ ಮಕ್ಕಳ ವಿಭಾಗ (ಪೀಡಿಯಾಟ್ರಿಕ್ಸ್) ನ
ಸಹಾಯಕ ಪ್ರಾಧ್ಯಾಪಕರಾದ ಡಾ. ಪ್ರೀತಮ್ ಫಿಲಿಪ್ ತಾವ್ರೋ ವಹಿಸಲಿದ್ದಾರೆ.

ಮಾಯಿದೆ ದೇವುಸ್ ಶಿಕ್ಷಣ ಸಂಸ್ಥೆಗಳ ಸಂಚಾಲಕರಾದ ರೆ. ಡಾ. ಜಾನ್ ಬ್ಯಾಪ್ಟಿಸ್ಟ್ ಸಲ್ದಾನ್ಹಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.
ಗೌರವ ಅತಿಥಿಗಳಾಗಿ ಪದವಿ ಕಾಲೇಜಿನ ಪ್ರಾಂಶುಪಾಲರಾದ ರೆ. ಡಾ. ಆಂಟೋನಿ ಪ್ರಕಾಶ್ ಮೊಂತೇರೋ ಹಾಗೂ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷರಾದ ರೋಷನ್ ಲಾಸ್ರಾದೋ, ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷರಾದ ಅ್ಯಂಟೋನಿ ಒಲಿವೆರಾ ಹಾಗೂ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಡಾ. ಶ್ರೀಪ್ರಕಾಶ್ ಬಿ, ವಹಿಸಲಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲರಾದ ರೆ. ಫಾ. ಅಶೋಕ್ ರಾಯನ್ ಕ್ರಾಸ್ತಾ, ವಿದ್ಯಾರ್ಥಿ ಸಂಘದ ನಿರ್ದೇಶಕರಾದ ಗೋವಿಂದ ಪ್ರಕಾಶ್ ಸಿ. ಎಚ್, ಕವಿತಾ ಕೆ ಹಾಗೂ ಪಿಲೋಮಿನಾ ಮೊಂತೇರೋ, ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ನಾಯಕ್ ಗುಣಿಕ ಗುರುಪ್ರಸಾದ್, ಕಾರ್ಯದರ್ಶಿ ಲಯ ತೇಜ ಎ, ಹಾಗೂ ಜೊತೆ ಕಾರ್ಯದರ್ಶಿ ಸಂದೇಶ್ ಗೌಡ ಎಸ್ ಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶಿಕ್ಷಣ
Vivekananda-ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಎಂಡ್ ಟೆಕ್ನಾಲಜಿ: ವೃತ್ತಿವಾದ ಮತ್ತು ಆದರ್ಶವಾದ: ಸು.ರಾಮಣ್ಣ ಅವರಿಂದ ಉಪನ್ಯಾಸ ಕಾರ್ಯಕ್ರಮ
ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಸಾವರ್ಕರ್ ಸಬಾಭವನದಲ್ಲಿ ವೃತ್ತಿವಾದ ಮತ್ತು ಆದರ್ಶವಾದ ಎನ್ನುವ ವಿಷಯದ ಬಗ್ಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಜ್ಯೇಷ್ಟ ಪ್ರಚಾರಕ ಮಾನನೀಯ ಸು.ರಾಮಣ್ಣ ಮಾತಾಡಿದರು.
ಪುತ್ತೂರು: ಮನುಷ್ಯನ ಜೀವನದ ಗುರಿ ವ್ಯಕ್ತಿಗತವಾಗಿರಬಾರದು. ಸಮಾಜಕ್ಕೆ, ದೇಶಕ್ಕೆ ಏನಾದರೂ ಮಾಡಬೇಕೆನ್ನುವುದು ನಮ್ಮ ಗುರಿಯಾಗಬೇಕು. ಅದಕ್ಕೆ ವಿವಿಧ ಬಗೆಯ ಜನರ ನಡುವೆ ಕಾರ್ಯನಿರ್ವಹಿಸಬೇಕು. ಆಗ ನಿಜವಾದ ಆವಶ್ಯಕತೆ ಏನೆಂದು ಅರಿವಾಗುತ್ತದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಜ್ಯೇಷ್ಟ ಪ್ರಚಾರಕ ಮಾನನೀಯ ಸು.ರಾಮಣ್ಣ ಹೇಳಿದರು.

ಅವರು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಸಾವರ್ಕರ್ ಸಬಾಭವನದಲ್ಲಿ ವೃತ್ತಿವಾದ ಮತ್ತು ಆದರ್ಶವಾದ ಎನ್ನುವ ವಿಷಯದ ಬಗ್ಗೆ ಮಾತಾಡಿದರು. ಓದು, ಜ್ಞಾನಸಂಗ್ರಹ ನಮ್ಮ ಸಾಧನೆಯ ಮೊದಲನೇ ಘಟ್ಟ. ಇದು ಇಲ್ಲದಿದ್ದರೆ ನಾವು ಸಣ್ಣವರಾಗುತ್ತೇವೆ. ವಿದ್ಯಾರ್ಥಿ ದೆಸೆಯಲ್ಲಿಯೇ ದೀರ್ಘವಾದ ಗುರಿಯನ್ನು ಇಟ್ಟುಕೊಳ್ಳಲೇಬೇಕು ಎಂದರು. ಜೀವನದಲ್ಲಿ ಕನಸು ಕಾಣಬೇಕು. ದೇವರು ಕೊಟ್ಟ ಬುದ್ಧಿ ಶಕ್ತಿ ಮತ್ತು ವ್ಯಕ್ತಿತ್ವವನ್ನು ಬಳಸಿಕೊಂಡು ದೊಡ್ಡವರಾಗಿ ಎನ್ನುವ ಅಬ್ದುಲ್ ಕಲಾಂ ಅವರ ಮಾತುಗಳನ್ನು ನೆನಪಿಸಿದ ಅವರು ದೇಶದ ಜೀವಿತೋದ್ದೇಶವನ್ನು ಉನ್ನತೀಕರಿಸುವುದರ ಜತೆಯಲ್ಲಿ ಸೃಷ್ಟಿಯ ಹಿತಕ್ಕೋಸ್ಕರ ಬದುಕಬೇಕು ಎಂದರು. ದೇಶಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಸ್ವಾಮಿ ವಿವೇಕಾನಂದರು, ಸಾವರ್ಕರ್, ಅಂಬೇಡ್ಕರ್ ಇವರ ಜೀವನವು ನಮಗೆ ದಾರಿದೀಪವಾಗಲಿ ಎಂದರು. ಮಾನವತೆಯನ್ನು ಉಳಿಸುವುದಕ್ಕಾಗಿ ಅತ್ಯಂತ ಘೋರ ಸಂಕಟದ ಸಮಯದಲ್ಲಿ ಸೂಕ್ತ ನಿರ್ಣಯವನ್ನು ತೆಗೆದುಕೊಂಡ ಪೈಲೆಟ್ ಕ್ಯಾಪ್ಟನ್ ಸ್ಮಿತ್ ಮಚ್ಚರ್ ನಿಜವಾದ ಸಾಧಕ ಎಂದು ಹೇಳಿದರು. ಕೋಟ್ಯಂತರ ರೂಪಾಯಿ ವೇತನ ಪಡೆಯುವ ತಂತ್ರಜ್ಞರಾಗುವುದಲ್ಲ ಬದಲಾಗಿ ಸರ್.ಎಂ.ವಿಶ್ವೇಶ್ವರಯ್ಯರಾಗಿ ಎಂದು ಹಿತ ನುಡಿದರು.

ಇಂಜಿನಿಯರಿಂಗ್ ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ರವಿಕೃಷ್ಣ.ಡಿ.ಕಲ್ಲಾಜೆ ಮತ್ತು ಪ್ರಾಂಶುಪಾಲ ಡಾ.ಪುರುಷೋತ್ತಮ ಚಿಪ್ಪಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಇಂಜಿನಿಯರಿಂಗ್ ಕಾಲೇಜು ಆಡಳಿತ ಮಂಡಳಿಯ ಸಂಚಾಲಕ ಪ್ರಸನ್ನ ದರ್ಬೆ, ನಿರ್ದೇಶಕರಾದ ಮನೋಜ್ ಕುಮಾರ, ಸುಜಿತ್ ಕುಮಾರ್, ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಅಧ್ಯಕ್ಷ ಅಚ್ಯುತ ನಾಯಕ್, ವಿವೇಕಾನಂದ ಸಿಬಿಎಸ್‌ಸಿ ಶಾಲೆಯ ಸಂಚಾಲಕ ರವಿನಾರಾಯಣ, ವಿವೇಕಾನಂದ ವಸತಿ ನಿಲಯಗಳ ನಿರ್ದೇಶಕ ರಾಜಗೋಪಾಲ್, ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಸ್ವಯಂಸೇವಕ ಅ.ನಾ.ರವಿ ಸಮಾರಂಭದಲ್ಲಿ ಹಾಜರಿದ್ದರು.
ಶಿಕ್ಷಣ
Vivekananda-ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಖುಷಿ ಕೆ.ಎಂ. ರಾಷ್ಟ್ರ ಮಟ್ಟದಲ್ಲಿ ಸಾಧನೆ
ಮಧ್ಯಪ್ರದೇಶದ ದೇವಾಸ್‌ನ ಸರಸ್ವತಿ ವಿದ್ಯಾ ಮಂದಿರದಲ್ಲಿ ನಡೆದ ವಿದ್ಯಾಭಾರತಿ ರಾಷ್ಟ್ರ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ಪ್ರಥಮ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಖುಷಿ ಕೆ. ಎಂ ಇವರು ತೃತೀಯ ಸ್ಥಾನ ಪಡೆದಿರುತ್ತಾರೆ.
ಮಧ್ಯಪ್ರದೇಶದ ದೇವಾಸ್‌ನ ಸರಸ್ವತಿ ವಿದ್ಯಾ ಮಂದಿರದಲ್ಲಿ ನಡೆದ ವಿದ್ಯಾಭಾರತಿ ರಾಷ್ಟ್ರ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ಪ್ರಥಮ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಖುಷಿ ಕೆ. ಎಂ ಇವರು ತೃತೀಯ ಸ್ಥಾನ ಪಡೆದಿರುತ್ತಾರೆ.
ಇವರು ಬೆಳ್ಳಿಪಾಡಿ ಗ್ರಾಮದ ಶಂಕರನಾರಾಯಣ ನಿವಾಸಿ ಕೆ. ವಿ ಮಂಜುನಾಥ ಮತ್ತು ಭವ್ಯ ದಂಪತಿಯ ಪುತ್ರಿಯಾಗಿರುತ್ತಾರೆ.
ಇವರು ಕಾಲೇಜಿನ ಧೈಹಿಕ ಶಿಕ್ಷಣ ನಿರ್ದೇಶಕರಾದ ರವಿಶಂಕರ್ , ಡಾ. ಜ್ಯೋತಿ ಮತ್ತು ಯತೀಶ್ ಇವರ ನೇತೃತ್ವದಲ್ಲಿ ತರಬೇತಿಯನ್ನು ಪಡೆದಿರುತ್ತಾರೆ. ಇವರನ್ನು ಕಾಲೇಜಿನ ಆಡಳಿತ ಮಂಡಳಿ ಪ್ರಾಂಶುಪಾಲರು ಹಾಗೂ ಉಪನ್ಯಾಸಕ , ಉಪನ್ಯಾಸಕೇತರ ವೃಂದದವರು ಅಭಿನಂದಿಸಿರುತ್ತಾರೆ.
-
ಬಿಗ್ ನ್ಯೂಸ್22 hours agoRain-ಸುಳ್ಯ-ಪುತ್ತೂರು ಭಾಗಗಳಲ್ಲಿ ಹಲವೆಡೆ ಮಳೆ : ಎಷ್ಟು ದಿನ ಮಳೆಯಾಗಲಿದೆ ಗೊತ್ತೇ..?
-
ಅಪರಾಧ21 hours agoMangalore-ಚಿನ್ನ ಕಳ್ಳಸಾಗಣೆ ಜಾಲ: ಮಂಗಳೂರು ವಿಮಾನ ನಿಲ್ದಾಣದ ಇಬ್ಬರು ಸಿಬ್ಬಂದಿ ಸಹಿತ ಮೂವರು ಡಿಆರ್ಐ ವಶಕ್ಕೆ
-
ಸುಳ್ಯ16 hours agoSuresh Raina-ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಸುರೇಶ್ ರೈನಾ ಸುಳ್ಯದ ‘ರಸಪಾಕ ಗ್ರಾಂಡ್’ ಹೋಟೆಲ್ ಗೆ ಭೇಟಿ
-
ಅಂತರ ರಾಜ್ಯ19 hours agoCM post battle-ಉತ್ತರ ಪ್ರದೇಶ ಬಿಜೆಪಿಯಲ್ಲಿ ಸಿಎಂ ಕುರ್ಚಿ ಕದನ: ಚುನಾವಣೆಗೂ ಮುನ್ನವೇ ಭಿನ್ನಮತ?
-
ನಿಧನ ವಾರ್ತೆ20 hours agoAccident-ಯುಎಇಯಲ್ಲಿ ಭೀಕರ ಬಸ್–ಲಾರಿ ಅಪಘಾತ; ಕಾಸರಗೋಡಿನ ಅಶ್ರಫ್ ಸೇರಿ ನಾಲ್ವರು ಕೇರಳಿಗರು ಸಾವು
-
ಅಂತರ ರಾಜ್ಯ19 hours agoInsurance policy-ವಿಮೆ ಇಲ್ಲದ ವಾಹನಗಳಿಗೆ ಕಡಿವಾಣ: ಹೊಸ ನಿಯಮ ಜಾರಿಗೆ ಕೇಂದ್ರ ಚಿಂತನೆ; ಕಾರಿಗೆ 4 ವರ್ಷ, ಬೈಕ್ಗೆ 6 ವರ್ಷಗಳ ವಿಮೆ
-
ಸ್ಥಳೀಯ16 hours agoUppinangadi-ಉಪ್ಪಿನಂಗಡಿ: ಇಂದಿನಿಂದ ವಳಾಲು ಟೋಲ್ ಕಾರ್ಯಾರಂಭ; ಶೀಘ್ರದಲ್ಲೇ ಬ್ರಹ್ಮರಕೂಟ್ಲು ಟೋಲ್ ಗೇಟ್ ತೆರವು..!
-
ನಿಧನ ವಾರ್ತೆ21 hours agoಮಂಗಳೂರು: ಬೈಕ್ ಢಿಕ್ಕಿಯಿಂದ ಗಾಯಗೊಂಡಿದ್ದ ನರ್ಸಿಂಗ್ ವಿದ್ಯಾರ್ಥಿನಿ ಸಾವು















