ಸ್ಥಳೀಯ
Dharmasthala-ಧರ್ಮಸ್ಥಳ: 26ನೇ ವರ್ಷದ ಭಜನಾ ಕಮ್ಮಟ-4ನೇ ದಿನ ಹಾಡು ತರಬೇತಿ
ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆಯುತ್ತಿರುವ 26ನೇ ವರ್ಷದ ಭಜನಾ ಕಮ್ಮಟದ 4ನೇ ದಿನದ ಕಾರ್ಯಕ್ರಮದ ಸಂ¥ನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಶ್ರೀ ರಾಘವೇಂದ್ರ ಆಚಾರ್ಯ, ಆಕಾಶವಾಣಿ ‘ಎ’ ಗ್ರೇಡ್ ಕಲಾವಿದರು ಹಾಗೂ ಶ್ರೀಮತಿ ವಿದುಷಿ ಅನುಸೂಯ ಪಾಠಕ್, ಉಜಿರೆ ಇವರು ಹಾಡುಗಳನ್ನು ಸುಂದರವಾಗಿ ಕಲಿಸಿಕೊಟ್ಟರು.
ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆಯುತ್ತಿರುವ 26ನೇ ªರ್ಷದ ಭಜನಾ ಕಮ್ಮಟದ 4ನೇ ದಿನದ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ರಾಘವೇಂದ್ರ ಆಚಾರ್ಯ, ಆಕಾಶವಾಣಿ ‘ಎ’ ಗ್ರೇಡ್ ಕಲಾವಿದರು ಹಾಗೂ ಶ್ರೀಮತಿ ವಿದುಷಿ ಅನುಸೂಯ ಪಾಠಕ್, ಉಜಿರೆ ಇವರು ಹಾಡುಗಳನ್ನು ಸುಂದರವಾಗಿ ಕಲಿಸಿಕೊಟ್ಟರು.

ಕಮ್ಮಟಕ್ಕೆ ಆಗಮಿಸಿದ ಪೂಜ್ಯನೀಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರು, ಮಾತೃಶ್ರೀ ಹೇಮಾವತಿ ವಿ. ಹೆಗ್ಗಡೆಯವರು, ಶ್ರೀ ಶ್ರೀ ಶ್ರೀ ಮೋಹನದಾಸ ಸ್ವಾಮೀಜಿಯವರು ಉಪಸ್ಥಿತರಿದ್ದು ಶಿಬಿರಾರ್ಥಿಗಳಿಗೆ ಪ್ರೇರೇಪಿಸಿದರು.

ಉಪನ್ಯಾಸ ಕಾರ್ಯಕ್ರಮವನ್ನು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ಶ್ರೀ ಅನಿಲ್ ಕುಮಾರ್ ಸಮಾಜಕ್ಕೆ ಧರ್ಮಸ್ಥಳದ ಬಹುಮುಖಿ ಸೇವಾ ಕಾರ್ಯಗಳ ಬಗ್ಗೆ ಮಾಹಿತಿ ನೀಡಿದರು. 84 ಲಕ್ಷ ಜೀವರಾಶಿಗಳಲ್ಲಿ ಮಾನವಜನ್ಮ ದೊಡ್ಡದು. ಏಕೆಂದರೆ ಇತರ ಎಲ್ಲಾ ಪ್ರಾಣಿಗಳಿಗಿಂತ ಮನುಷ್ಯನಿಗೆ ವಿವೇಚನಾ ಶಕ್ತಿ ಅಂದರೆ ಯಾವುದು ಸರಿ, ಯಾವುದು ತಪ್ಪು ಎಂದು ನಿರ್ಧರಿಸುವ ಶಕ್ತಿ ಇದೆ.

ಆದುದರಿಂದ ಎಲ್ಲರೂ ತಮ್ಮ ಆತ್ಮಸಾಕ್ಷಿಗೆ ಸರಿಯಾಗಿ ಕೆಲಸ ಮಾಡಿದಾಗ ಎಲ್ಲವೂ ಪರಿಶುದ್ಧವಾಗಿ ಮಾಡಿದ ಕೆಲಸ ಕೂಡಾ ಉತ್ತಮ ಪರಿಣಾಮವನ್ನು ಬೀರುತ್ತದೆ. ಭಗವಂತನ ಭಜನೆಯಿಂದ ನಮ್ಮ ಆತ್ಮ ಪರಿಶುದ್ಧವಾಗಿ, ನಾವು ಮಾಡುವ ಎಲ್ಲಾ ಕೆಲಸಗಳು ಕೂಡಾ ಪರಿಶುದ್ಧವಾಗಿರುತ್ತವೆ. ಇಂತಹ ಕಾರ್ಯಗಳಿಂದ ನಮಗೂ ಆತ್ಮತೃಪ್ತಿ ಸಿಗುತ್ತದೆ ಹಾಗೂ ಸಮಾಜಕ್ಕೂ ಒಳಿತಾಗುತ್ತದೆ. ಭಜನಾ ತರಬೇತಿ ಕಮ್ಮಟದಲ್ಲಿ ನೀಡಿದ ಎಲ್ಲಾ ಮಾಹಿತಿ ಮಾರ್ಗದರ್ಶನವನ್ನು ಮುಂದೆ ನೀವು ನಿತ್ಯವೂ ಜೀವನದಲ್ಲಿ ಅನುಷ್ಠಾನಗೊಳಿಸಿ, ಇತರರನ್ನೂ ಪ್ರೇರೇಪಿಸಿದಲ್ಲಿ ನಿಮಗೆ ಆತ್ಮತೃಪ್ತಿಯೂ ಸಿಗುತ್ತದೆ.

ಅಲ್ಲದೆ ರಾಮರಾಜ್ಯದ ಕನಸು ನನಸಾಗುತ್ತದೆ. ಈ ದಿಸೆಯಲ್ಲಿ ನೀವೆಲ್ಲರೂ ಸಿದ್ಧರಾಗಿ, ಬದ್ಧರಾಗಿ ಸಮಾಜ ಕಲ್ಯಾಣ ಕಾರ್ಯಗಳನ್ನು ಮಾಡಬಹುದು. ಇದರಿಂದಾಗಿ ಮಾನಸಿಕ ನೆಮ್ಮದಿ ಹಾಗೂ ಶಾಂತಿ ಸಿಗುವುದಲ್ಲದೆ ಸಮಾಜ ಸೇವೆ ಮಾಡಿದ ಸಂತೃಪ್ತಿಯೂ ನಿಮಗೆ ಸಿಗುತ್ತದೆ ಎಂದು ಹೇಳಿದರು.

ಬಳಿಕ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಪೂಜ್ಯ ಶ್ರೀ ಹೆಗ್ಗಡೆಯವರು ಬಹುಮುಖಿ ಸಮಾಜ ಸೇವಾಕಾರ್ಯಗಳ ಮೂಲಕ ಮಾಡುತ್ತಿರುವ ವಿವಿಧ ಯೋಜನೆಗಳ ಮಾಹಿತಿಯನ್ನು ನೀಡಿದರು. ಸಂಜೆ ಭಜಣಾ ತಂಡದಿAದ ನಗರ ಭಜನೆ ನಡೆಯಿತು.

ರಂಗಶಿವ ಕಲಾಬಳಗ, ಧರ್ಮಸ್ಥಳ ಇವರಿಂದ ಮಾತೃಶ್ರೀ ಹೇಮಾವತಿ ವಿ. ಹೆಗ್ಗಡೆಯವರ ನಿರ್ದೇಶನದಲ್ಲಿ ಮೂಡಿಬಂದ “ಕೇಳೆಸಖಿ ಚಂದ್ರಮುಖಿ’ ನಾಟಕ ಪ್ರದರ್ಶನ ನಡೆಯಿತು. ಯೋಗ ತರಬೇತಿಯನ್ನು ಡಾ. ಐ. ಶಶಿಕಾಂತ್ ಜೈನ್ ನಡೆಸಿಕೊಟ್ಟರು. ಭಜನಾ ಕಮ್ಮಟದ ರಾಜ್ಯ ಸಂಚಾಲಕರಾದ ಶ್ರೀ ಸುಬ್ರಹ್ಮಣ್ಯ ಪ್ರಸಾದ್, ಕಾರ್ಯದರ್ಶಿಗಳಾದ ಶ್ರೀ ವೀರು ಶೆಟ್ಟಿ, ಕೋಶಾಧಿಕಾರಿ ಶ್ರೀ ಧನ್ಯಕುಮಾರ್, ಸದಸ್ಯರಾದ ಶ್ರೀ ಶ್ರೀನಿವಾಸರಾವ್, ಶ್ರೀ ರತ್ನವರ್ಮ ಜೈನ್ರವರು ದಿನದ ಕಾರ್ಯಕ್ರಮವನ್ನು ಸಂಘಟಿಸಿದರು, ಶ್ರೀ ರಾಘವೇಂದ್ರ ಕಾರ್ಯಕ್ರಮ ನಿರೂಪಿಸಿದರು.

ಪರಿಷತ್ ಅಧ್ಯಕ್ಷರಾದ ಶ್ರೀ ಚಂದ್ರಶೇಖರ ಸಾಲ್ಯನ್, ಉಪಾಧ್ಯಕ್ಷರಾದ ಶ್ರೀ ರಾಜೇಂದ್ರ ಕುಮಾರ್ ಸದಸ್ಯರಾದ ಶ್ರೀ ಪದ್ಮರಾಜ್ ಜೈನ್ ಸಹಕರಿಸಿದರು. ಕುಣಿತ ಭಜನೆ ತರಬೇತಿಯನ್ನು ಶ್ರೀ ಸಂದೇಶ, ಶ್ರೀ ವಿನ್ಯಾಶ್, ಶ್ರೀ ನಾಗೇಶ್ ಹಾಗೂ ಶ್ರೀಮತಿ ಚೈತ್ರ ನಡೆಸಿಕೊಟ್ಟರು. ಶಿಬಿರಾರ್ಥಿಗಳಾಗಿ ಶ್ರೀ ರಾಘವೇಂದ್ರ, ಶ್ರೀ ಸಂತೋಷ್ ಪಿ. ಕರ್ತವ್ಯ ನಿರ್ವಹಿಸಿದರು.
ಶಿಕ್ಷಣ
Sanidhya S. Rao-ರಾಷ್ಟ್ರಮಟ್ಟದ ಚೆಸ್ ಸ್ಪರ್ಧೆಯಲ್ಲಿ ವಿವೇಕಾನಂದ ಸೆಂಟ್ರಲ್ ಸ್ಕೂಲ್ನ ಸಾನಿಧ್ಯ ಎಸ್. ರಾವ್ಗೆ ಪ್ರಥಮ ಸ್ಥಾನ; SGFI ಸ್ಪರ್ಧೆಗೆ ಆಯ್ಕೆ
ಹರಿಯಾಣದ ಕುರುಕ್ಷೇತ್ರದಲ್ಲಿ ಅಕ್ಟೋಬರ್ 1ರಿಂದ 5ರವರೆಗೆ ನಡೆದ ವಿದ್ಯಾಭಾರತಿ ರಾಷ್ಟ್ರಮಟ್ಟದ ಚೆಸ್ ಸ್ಪರ್ಧೆಯಲ್ಲಿ ಪುತ್ತೂರಿನ ವಿವೇಕಾನಂದ ಸೆಂಟ್ರಲ್ ಸ್ಕೂಲ್ನ 7ನೇ ತರಗತಿ ವಿದ್ಯಾರ್ಥಿನಿ ಕುಮಾರಿ ಸಾನಿಧ್ಯ ಎಸ್. ರಾವ್ ಪ್ರಥಮ ಸ್ಥಾನ ಪಡೆದು ಗಮನಾರ್ಹ ಸಾಧನೆ ಮಾಡಿದ್ದಾರೆ.
ಪುತ್ತೂರು: ಹರಿಯಾಣದ ಕುರುಕ್ಷೇತ್ರದಲ್ಲಿ ಅಕ್ಟೋಬರ್ 1ರಿಂದ 5ರವರೆಗೆ ನಡೆದ ವಿದ್ಯಾಭಾರತಿ ರಾಷ್ಟ್ರಮಟ್ಟದ ಚೆಸ್ ಸ್ಪರ್ಧೆಯಲ್ಲಿ ಪುತ್ತೂರಿನ ವಿವೇಕಾನಂದ ಸೆಂಟ್ರಲ್ ಸ್ಕೂಲ್ನ 7ನೇ ತರಗತಿ ವಿದ್ಯಾರ್ಥಿನಿ ಕುಮಾರಿ ಸಾನಿಧ್ಯ ಎಸ್. ರಾವ್ ಪ್ರಥಮ ಸ್ಥಾನ ಪಡೆದು ಗಮನಾರ್ಹ ಸಾಧನೆ ಮಾಡಿದ್ದಾರೆ.
ರಾಷ್ಟ್ರಮಟ್ಟದಲ್ಲಿ ಪ್ರತಿಸ್ಪರ್ಧಿಗಳಿಗೆ ತೀವ್ರ ಪೈಪೋಟಿ ನೀಡಿದ ಸಾನಿಧ್ಯ, ತಮ್ಮ ಚೆಸ್ ಕೌಶಲ್ಯ ಮತ್ತು ಅತ್ಯುತ್ತಮ ಪ್ರದರ್ಶನದ ಮೂಲಕ ಶಾಲೆಗೆ ಕೀರ್ತಿ ತಂದಿದ್ದಾರೆ. ಈ ಸಾಧನೆಯೊಂದಿಗೆ ಅವರು ಮುಂದಿನ ಹಂತದ ಎಸ್ಜಿಎಫ್ಐ (School Games Federation of India) ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ ಎಂದು ಶಾಲೆಯ ಪ್ರಕಟಣೆ ತಿಳಿಸಿದೆ.
ಸುದೇಶ್ ಮತ್ತು ಶ್ರುತಿ ದಂಪತಿಯ ಪುತ್ರಿಯಾದ ಸಾನಿಧ್ಯ, ನಿರಂತರ ಪರಿಶ್ರಮ, ಏಕಾಗ್ರತೆ ಹಾಗೂ ಕ್ರೀಡಾ ಕೌಶಲ್ಯದ ಮೂಲಕ ಈ ಮಹತ್ವದ ಯಶಸ್ಸು ಸಾಧಿಸಿದ್ದಾರೆ.
ವಿದ್ಯಾರ್ಥಿನಿಯ ಸಾಧನೆಗೆ ಶಾಲಾ ಆಡಳಿತ ಮಂಡಳಿ, ಪ್ರಾಂಶುಪಾಲರು, ಶಿಕ್ಷಕವೃಂದ ಹಾಗೂ ಶಿಕ್ಷಕೇತರ ಸಿಬ್ಬಂದಿ ಅಭಿನಂದನೆ ಸಲ್ಲಿಸಿದ್ದು, ಮುಂದಿನ ಸ್ಪರ್ಧೆಯಲ್ಲಿಯೂ ಉತ್ತಮ ಪ್ರದರ್ಶನ ನೀಡುವಂತೆ ಶುಭ ಹಾರೈಸಿದ್ದಾರೆ.
ಕಾರ್ಯಕ್ರಮಗಳು
‘Havells Experience Center-ನಾಳೆ (ಅ. 15) ರಂದು ಮೈತ್ರಿ ಎಲೆಕ್ಟ್ರಿಕ್ನಲ್ಲಿ ʻಹ್ಯಾವೆಲ್ಸ್ ಎಕ್ಸ್ಪೀರಿಯನ್ಸ್ ಸೆಂಟರ್ʼ ಶುಭಾರಂಭ
ಪುತ್ತೂರು ನಗರದ ಮೈತ್ರಿ ಎಲೆಕ್ಟ್ರಿಕ್ ಕಂಪನಿಯ ವತಿಯಿಂದ ಹ್ಯಾವೆಲ್ಸ್ನ ವಿಶೇಷ ಅನುಭವ ಕೇಂದ್ರವಾದ ‘ಹ್ಯಾವೆಲ್ಸ್ ಎಕ್ಸ್ಪೀರಿಯನ್ಸ್ ಸೆಂಟರ್’ ಅ.15 ಗುರುವಾರದಂದು ಉದ್ಘಾಟನೆಗೊಳ್ಳಲಿದೆ. ಪುತ್ತೂರಿನ ಮೊಳಹಳ್ಳಿ ಶಿವರಾಯ ರಸ್ತೆಯಲ್ಲಿರುವ ಸುಶಾ ಚೇಂಬರ್ಸ್ನ ಮೊದಲ ಮಹಡಿಯಲ್ಲಿರುವ ಮೈತ್ರಿ ಎಲೆಕ್ಟ್ರಿಕ್ ಕಂಪನಿಯಲ್ಲಿ ಬೆಳಿಗ್ಗೆ 10.30ಕ್ಕೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ.

ಪುತ್ತೂರು: ನಗರದ ಮೈತ್ರಿ ಎಲೆಕ್ಟ್ರಿಕ್ ಕಂಪನಿಯ ವತಿಯಿಂದ ಹ್ಯಾವೆಲ್ಸ್ನ ವಿಶೇಷ ಅನುಭವ ಕೇಂದ್ರವಾದ ‘ಹ್ಯಾವೆಲ್ಸ್ ಎಕ್ಸ್ಪೀರಿಯನ್ಸ್ ಸೆಂಟರ್’ ಅ.15 ಗುರುವಾರದಂದು ಉದ್ಘಾಟನೆಗೊಳ್ಳಲಿದೆ.

ಪುತ್ತೂರಿನ ಮೊಳಹಳ್ಳಿ ಶಿವರಾಯ ರಸ್ತೆಯಲ್ಲಿರುವ ಸುಶಾ ಚೇಂಬರ್ಸ್ನ ಮೊದಲ ಮಹಡಿಯಲ್ಲಿರುವ ಮೈತ್ರಿ ಎಲೆಕ್ಟ್ರಿಕ್ ಕಂಪನಿಯಲ್ಲಿ ಬೆಳಿಗ್ಗೆ 10.30ಕ್ಕೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ.

ಹ್ಯಾವೆಲ್ಸ್ ಕಂಪನಿಯ ವಿದ್ಯುತ್ ಉಪಕರಣಗಳು ಹಾಗೂ ಗೃಹ ಬಳಕೆಯ ವಿವಿಧ ಉತ್ಪನ್ನಗಳು ಮತ್ತು ಪರಿಹಾರಗಳ ಸಂಪೂರ್ಣ ಶ್ರೇಣಿಯನ್ನು ಗ್ರಾಹಕರು ವೀಕ್ಷಿಸಿ, ಮಾಹಿತಿ ಪಡೆಯಲು ಇಲ್ಲಿ ಅವಕಾಶವಿರಲಿದೆ.

1997ರಿಂದ ಗ್ರಾಹಕರಿಗೆ ಸೇವೆ ಸಲ್ಲಿಸುತ್ತಿರುವ ಮೈತ್ರಿ ಎಲೆಕ್ಟ್ರಿಕ್ ಕಂಪನಿಯು ಈ ನೂತನ ಕೇಂದ್ರದ ಮೂಲಕ ಗ್ರಾಹಕರಿಗೆ ಹ್ಯಾವೆಲ್ಸ್ ಉತ್ಪನ್ನಗಳ ಪರಿಚಯ ಹಾಗೂ ಉತ್ತಮ ಖರೀದಿ ಅನುಭವ ಒದಗಿಸುವ ಉದ್ದೇಶ ಹೊಂದಿದೆ.
ಶಿಕ್ಷಣ
Philomena-ಸಂತ ಫಿಲೋಮಿನಾ ಕಾಲೇಜಿನಲ್ಲಿ ರಾಜ್ಯಮಟ್ಟದ ಅಂತರ್ ಕಾಲೇಜು ‘ಬಿಜ್ಫೆಸ್ಟ್ 2K26’
ಸಂತ ಫಿಲೋಮಿನಾ ಕಾಲೇಜು (ಸ್ವಾಯತ್ತ), ದರ್ಬೆ, ಪುತ್ತೂರಿನ ವಾಣಿಜ್ಯ ವಿಭಾಗದ ವತಿಯಿಂದ ರಾಜ್ಯಮಟ್ಟದ ಅಂತರ್ ಕಾಲೇಜು ವಾಣಿಜ್ಯ ಮೇಳ ‘ಬಿಜ್ಫೆಸ್ಟ್ 2K26’ ಅನ್ನು ಅಕ್ಟೋಬರ್ 7ರಂದು ಕಾಲೇಜಿನ ಎಸ್ಜೆಎಂ ಸಭಾಂಗಣದಲ್ಲಿ ಆಯೋಜಿಸಲಾಯಿತು.

ಪುತ್ತೂರು, ಅ. 7: ಸಂತ ಫಿಲೋಮಿನಾ ಕಾಲೇಜು (ಸ್ವಾಯತ್ತ), ದರ್ಬೆ, ಪುತ್ತೂರಿನ ವಾಣಿಜ್ಯ ವಿಭಾಗದ ವತಿಯಿಂದ ರಾಜ್ಯಮಟ್ಟದ ಅಂತರ್ ಕಾಲೇಜು ವಾಣಿಜ್ಯ ಮೇಳ ‘ಬಿಜ್ಫೆಸ್ಟ್ 2K26’ ಅನ್ನು ಅಕ್ಟೋಬರ್ 7ರಂದು ಕಾಲೇಜಿನ ಎಸ್ಜೆಎಂ ಸಭಾಂಗಣದಲ್ಲಿ ಆಯೋಜಿಸಲಾಯಿತು.
ಪಿಯು ಹಾಗೂ ಪದವಿ ಕಾಲೇಜುಗಳ ವಿದ್ಯಾರ್ಥಿಗಳಿಗೆ ತಮ್ಮ ಪ್ರತಿಭೆ, ವ್ಯವಹಾರಿಕ ಸೃಜನಶೀಲತೆ, ಸಂವಹನ ಕೌಶಲ ಮತ್ತು ಸ್ಪರ್ಧಾತ್ಮಕ ಮನೋಭಾವವನ್ನು ಪ್ರದರ್ಶಿಸಲು ವೇದಿಕೆ ಕಲ್ಪಿಸಿದ ಮೇಳದಲ್ಲಿ ವಿವಿಧ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡರು.
ಕಾಲೇಜಿನ ಪ್ರಾಂಶುಪಾಲ ವಂದನೀಯ ಡಾ. ಆಂಟನಿ ಪ್ರಕಾಶ್ ಮೊಂತೆರೋ ಅಧ್ಯಕ್ಷತೆ ವಹಿಸಿದ್ದ ಉದ್ಘಾಟನಾ ಸಮಾರಂಭದಲ್ಲಿ ಬೆಂಗಳೂರಿನ ಫಿನ್ಸ್ಟ್ರಾಟ್ ಕನ್ಸಲ್ಟಿಂಗ್ ಪ್ರೈವೇಟ್ ಲಿಮಿಟೆಡ್ನ ಸೀನಿಯರ್ ಅಸೋಸಿಯೇಟ್ ಜೋಸ್ವಿತಾ ಲೊರೇನ್ ಲೋಬೊ ಉದ್ಘಾಟಕರಾಗಿ ಭಾಗವಹಿಸಿದರು.
ವಿದ್ಯಾರ್ಥಿಗಳಲ್ಲಿ ಪ್ರಾಯೋಗಿಕ ಕಲಿಕೆ, ನವೀನ ಚಿಂತನೆ, ಉದ್ಯಮಶೀಲತೆ ಹಾಗೂ ಕೌಶಲಾಭಿವೃದ್ಧಿಯನ್ನು ಬೆಳೆಸುವ ಅಗತ್ಯವನ್ನು ಗಣ್ಯರು ಒತ್ತಿಹೇಳಿದರು. ಸಾಂಪ್ರದಾಯಿಕ ತರಗತಿ ಕಲಿಕೆಯನ್ನು ಮೀರಿ, ನೈಜ ಜಗತ್ತಿನ ವ್ಯವಹಾರಿಕ ಸನ್ನಿವೇಶಗಳಲ್ಲಿ ತಮ್ಮ ಜ್ಞಾನ ಮತ್ತು ಕೌಶಲಗಳನ್ನು ಅನ್ವಯಿಸಲು ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸುವುದು ಬಿಜ್ಫೆಸ್ಟ್ನ ಪ್ರಮುಖ ಉದ್ದೇಶವಾಗಿದೆ ಎಂದು ತಿಳಿಸಲಾಯಿತು.

ಮೇಳದಲ್ಲಿ ವಾಣಿಜ್ಯ ಹಾಗೂ ವ್ಯವಹಾರಕ್ಕೆ ಸಂಬಂಧಿಸಿದ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಸ್ಪರ್ಧೆಗಳು ವಿದ್ಯಾರ್ಥಿಗಳ ವಿಶ್ಲೇಷಣಾತ್ಮಕ ಸಾಮರ್ಥ್ಯ, ಉದ್ಯಮಶೀಲ ಚಿಂತನೆ, ಸೃಜನಶೀಲತೆ, ಹಣಕಾಸು ಅರಿವು, ಸಂವಹನ ಕೌಶಲ, ನಾಯಕತ್ವ, ತಂಡಭಾವನೆ ಹಾಗೂ ನಿರ್ಧಾರ ಕೈಗೊಳ್ಳುವ ಸಾಮರ್ಥ್ಯವನ್ನು ಪರೀಕ್ಷಿಸುವಂತಿದ್ದವು. ವಿವಿಧ ಶಿಕ್ಷಣ ಸಂಸ್ಥೆಗಳಿಂದ ಆಗಮಿಸಿದ್ದ ವಿದ್ಯಾರ್ಥಿಗಳು ಸ್ಪರ್ಧೆಗಳಲ್ಲಿ ಉತ್ಸಾಹದಿಂದ ಪಾಲ್ಗೊಂಡು, ಆರೋಗ್ಯಕರ ಸ್ಪರ್ಧೆ ಹಾಗೂ ಸಹಕಾರದ ವಾತಾವರಣ ನಿರ್ಮಿಸಿದರು.
ಪಿಯು ವಿಭಾಗದಲ್ಲಿ ಸಂತ ಫಿಲೋಮಿನಾ ಕಾಲೇಜಿಗೆ ಸಮಗ್ರ ಪ್ರಶಸ್ತಿ
ಪಿಯು ವಿಭಾಗದಲ್ಲಿ ಸಂತ ಫಿಲೋಮಿನಾ ಪಿಯು ಕಾಲೇಜು, ಪುತ್ತೂರು ಸಮಗ್ರ ವಿಜೇತ ಪ್ರಶಸ್ತಿಯನ್ನು ಪಡೆದುಕೊಂಡಿತು. ಅಂಬಿಕಾ ಪಡವಿ ಪೂರ್ವ ವಿದ್ಯಾಲಯ, ಪುತ್ತೂರು ಸಮಗ್ರ ರನ್ನರ್ಅಪ್ ಸ್ಥಾನ ಗಳಿಸಿತು.
ಪದವಿ ವಿಭಾಗದಲ್ಲಿ ಸಂತ ಅಲೋಶಿಯಸ್ ಕಾಲೇಜು, ಮಂಗಳೂರು ಸಮಗ್ರ ವಿಜೇತ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡರೆ, ತ್ರಿಶಾ ಕಾಲೇಜು, ಮಂಗಳೂರು ಸಮಗ್ರ ರನ್ನರ್ಅಪ್ ಪ್ರಶಸ್ತಿಯನ್ನು ಪಡೆದುಕೊಂಡಿತು. ವಿವಿಧ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು ತೋರಿದ ಸತತ ಸಾಧನೆ, ಸಿದ್ಧತೆ, ತಂಡಕಾರ್ಯ ಹಾಗೂ ಪ್ರತಿಭೆಗೆ ಈ ಫಲಿತಾಂಶ ಸಾಕ್ಷಿಯಾಯಿತು.
ವಿಜೇತರಿಗೆ ಪ್ರಶಸ್ತಿ ಪ್ರದಾನ
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಉಪಪ್ರಾಂಶುಪಾಲ ಡಾ. ವಿಜಯಕುಮಾರ್ ಮೊಳೆಯಾರ್ ವಹಿಸಿದ್ದರು. ಪುತ್ತೂರಿನ ಸಿಗ್ನೇಚರ್ ಮೆನ್ಸ್ ವೆಡ್ಡಿಂಗ್ ಸ್ಟುಡಿಯೊದ ಮಾಲೀಕ ಇಶಾನ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ವಿವಿಧ ಸ್ಪರ್ಧೆಗಳ ವಿಜೇತರು ಹಾಗೂ ರನ್ನರ್ಅಪ್ಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಮೇಳದಲ್ಲಿ ಭಾಗವಹಿಸಿದ ಎಲ್ಲ ಶಿಕ್ಷಣ ಸಂಸ್ಥೆಗಳ ಉತ್ಸಾಹಭರಿತ ಪಾಲ್ಗೊಳ್ಳುವಿಕೆಯನ್ನು ಇದೇ ಸಂದರ್ಭದಲ್ಲಿ ಅಭಿನಂದಿಸಲಾಯಿತು.
-
ದಕ್ಷಿಣ ಕನ್ನಡ11 hours ago
ಕಳವು ಮಾಡಿ ಮನೆಗೆ ಬೆಂಕಿ ಹಚ್ಚಿದ ಶಂಕೆ: ಪುತ್ತೂರಿನಲ್ಲಿ ಪ್ರಕರಣ ದಾಖಲು
-
ಅಂತರ ರಾಜ್ಯ9 hours agoRestaurant-ನೀರಿನ ಬಾಟ್ಲಿಗೆ ₹2 ಹೆಚ್ಚುವರಿ ವಸೂಲಿ; ರೆಸ್ಟೋರೆಂಟ್ಗೆ ₹1 ಲಕ್ಷ ದಂಡ..!
-
ಸುಳ್ಯ11 hours ago
ಸಿಜೆಪಿ ಮುಖಂಡರಾದ ಸೌರವ್ ದಾಸ್, ಅಶುತೋಷ್ ರಾಂಕಾ ಮತ್ತು ಅಜಿಂಕ್ಯ ಶಿಂಧೆ ಬಂಧನ, ತಿಹಾರ್ ಜೈಲಿಗೆ ಶಿಫ್ಟ್ ಸಾಧ್ಯತೆ
-
Uncategorized9 hours agoKumaraswamy-ಸ್ಟಿಂಗ್ ಆಪರೇಷನ್ ವಿವಾದ: ಸಿದ್ದರಾಮಯ್ಯ ಮೌನವಾಗಿರಬಾರದು – ಸಿಬಿಐ ತನಿಖೆಗೆ ಕುಮಾರಸ್ವಾಮಿ ಆಗ್ರಹ
-
ಕಾರ್ಯಕ್ರಮಗಳು3 hours agoPuttur-ಪುತ್ತೂರು: ಅ.16ರಂದು ಪ್ರವೀಣ್ ಕ್ಯಾಪಿಟಲ್ನ ನವೀಕೃತ ಪ್ರಧಾನ ಕಚೇರಿ ಉದ್ಘಾಟನೆ
-
ನಿಧನ ವಾರ್ತೆ9 hours agoBoat Sink-ಹಾಜಿಪುರ: ಗಂಗಾ ನದಿಯಲ್ಲಿ ದೋಣಿ ಮುಳುಗಿ 11 ಮಂದಿ ಸಾವು
-
ಬಿಗ್ ನ್ಯೂಸ್10 hours agoG.L. Acharya Jewellers-ವಿಜಯದಶಮಿ ಪ್ರಯುಕ್ತ ಜಿ.ಎಲ್.ಆಚಾರ್ಯ ಜ್ಯುವೆಲ್ಲರ್ಸ್ನಿಂದ ವಿಶೇಷ ಕೊಡುಗೆ
-
ಮಂಗಳೂರು9 hours agoD.K. Shivakumar-ಅ.15ರಂದು ಮಂಗಳೂರು, ಉಡುಪಿ ಜಿಲ್ಲೆಗೆ ಡಿ.ಕೆ. ಶಿವಕುಮಾರ್ ಭೇಟಿ



















