ಆರೋಗ್ಯ
Vaikunta Ekadashi 2023 : ಸ್ವರ್ಗದ ಬಾಗಿಲು ತೆಗೆಯುವ ವೈಕುಂಠ ಏಕಾದಶಿ ಹತ್ತಿರದಲ್ಲಿದೆ – ಆ ದಿನದ ಮಹತ್ವ, ಪೂಜಾ ವಿಧಾನ, ವೃತ ಪಾಲನೆಯ ಕ್ರಮದ ಮಾಹಿತಿ
ಹಿಂದೂ ಧರ್ಮದಲ್ಲಿ ಏಕಾದಶಿಗೆ ವಿಶೇಷ ಪ್ರಾಧಾನ್ಯವಿದೆ. ಭಗವಾನ್ ವಿಷ್ಣುವನ್ನು ಪೂಜಿಸುವ ಈ ದಿನದಂದು ಉಪವಾಸ ಮಾಡುವುದು ವಾಡಿಕೆ. ಪ್ರತಿ ಏಕಾದಶಿಗಳಿಗಿಂತಲೂ ವೈಕುಂಠ ಏಕಾದಶಿ ವಿಶೇಷವಾದದ್ದು. ಚಾಂದ್ರಮಾನ ಪುಷ್ಯಮಾಸ ಶುಕ್ಲಪಕ್ಷದಂದು ಬರುವ ಏಕಾದಶಿ ಅತ್ಯಂತ ವಿಶೇಷವಾದದ್ದು. ಈ ದಿನದಂದು ವೈಕುಂಠ (ವಿಷ್ಣುಲೋಕ, ಸ್ವರ್ಗದ) ಬಾಗಿಲು ತೆರೆದಿರುವ ದಿನ ಎಂಬ ಪ್ರತೀತಿ ಇರುವುದರಿಂದ ಅಂದು ವಿಷ್ಣು/ ವೆಂಕಟೇಶ್ವರ ದೇವಾಲಯ ದರ್ಶನ ಅತ್ಯಂತ ಮಹತ್ವ ಪಡೆದುಕೊಂಡಿದೆ.
ಈ ದಿನ ವಿಷ್ಣು ದೇವಾಲಯಳಲ್ಲಿ ದರ್ಶನ ಪಡೆದರೆ ಸ್ವರ್ಗ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ. 2023ರ ಡಿಸೆಂಬರ್ ತಿಂಗಳಿನಲ್ಲಿ ಎರಡು ಬಾರಿ ಏಕಾದಶಿ ಬರುತ್ತದೆ. ಈಗಾಗಲೇ ಉತ್ಪನ್ನ ಏಕಾದಶಿ ಮುಗಿದಿದ್ದು, ಡಿಸೆಂಬರ್ 23 ರಂದು ವೈಕುಂಠ ಏಕಾದಶಿ ಇದೆ.
ವೈಕುಂಠ ಏಕಾದಶಿಯನ್ನು ಪೌಷ ಪುತ್ರದಾ ಏಕಾದಶಿ, ಮುಕ್ಕೋಟಿ ಏಕಾದಶಿ, ಭೀಷ್ಮ ಏಕಾದಶಿ ಎಂದೂ ಕರೆಯುತ್ತಾರೆ.ವೈಕುಂಠ ಏಕಾದಶಿ
ವೈಕುಂಠ ಏಕಾದಶಿಯು ಶುಕ್ಲ ಪಕ್ಷದಲ್ಲಿ ಬರುತ್ತದೆ.
*ವೈಕುಂಠ ಏಕಾದಶಿ ಶುಭ ಮುಹೂರ್ತ:
ತಿಥಿ ಆರಂಭ: ಡಿಸೆಂಬರ್ 22
ತಿಥಿ ಅಂತ್ಯ: ಡಿಸೆಂಬರ್ 23
ಪಾರಣ ಸಮಯ: ಡಿಸೆಂಬರ್ 24 6.18ರಿಂದ 6.24
ಪಾರಣ ದಿನ ದ್ವಾದಶಿ ಮುಕ್ತಾಯ: ಡಿಸೆಂಬರ್ 24 ಸಂಜೆ 6.24
*ಏಕಾದಶಿ ಮಹತ್ವ:
ಹಿಂದೂ ಧರ್ಮದಲ್ಲಿ ಏಕಾದಶಿಗೆ ವಿಶೇಷ ಮಹತ್ವವಿದೆ.ಹಿಂದೂ ಪುರಾಣಗಳ ಪ್ರಕಾರ, ವೈಕುಂಠ ಏಕಾದಶಿಯ ಈ ಪವಿತ್ರ ದಿನದಂದು ಸಾಗರ ಮಂಥನವನ್ನು ನಡೆಸಲಾಯಿತು. ಈ ಸಾಗರ ಮಂಥನದ ಸಮಯದಲ್ಲಿ, ಕ್ಷೀರ ಸಾಗರದಿಂದ ದೈವಿಕ ಅಮೃತವು ಹೊರಹೊಮ್ಮಿತು, ಅದನ್ನು ದೇವರುಗಳ ನಡುವೆ ವಿತರಿಸಲಾಯಿತು. ಆದ್ದರಿಂದ ಈ ಮಂಗಳಕರ ದಿನದಂದು ಸಾಯುವ ಜನರು ಜನನ ಮತ್ತು ಮರಣ ಚಕ್ರದಿಂದ ಮುಕ್ತರಾಗುತ್ತಾರೆ ಮತ್ತು ಭಗವಾನ್ ವಿಷ್ಣುವಿನ ಸ್ವರ್ಗೀಯ ನಿವಾಸ ಅಥವಾ ವೈಕುಂಠ ಧಾಮವನ್ನು ತಲುಪುತ್ತಾರೆ ಎಂದು ಹಿಂದೂ ಭಕ್ತರು ನಂಬುತ್ತಾರೆ.
ಭಗವಾನ್ ಭೀಷ್ಮನು ಈ ಪವಿತ್ರ ದಿನದಂದು ಮರಣಹೊಂದಿದನು ಎಂದು ನಂಬಲಾಗಿದೆ ಮತ್ತು ಈ ನಿರ್ದಿಷ್ಟ ಕಾರಣಕ್ಕಾಗಿ, ಈ ಏಕಾದಶಿಯನ್ನು ಕೆಲವು ಪ್ರದೇಶಗಳಲ್ಲಿ “ಭೀಷ್ಮ ಏಕಾದಶಿ” ಎಂದೂ ಕರೆಯಲಾಗುತ್ತದೆ.
ಏಕಾದಶಿ ಪೂಜಾ ವಿಧಾನ:
- ಏಕಾದಶಿಯಂದು ಬೆಳಿಗ್ಗೆ ಬೇಗ ಎದ್ದು ಪವಿತ್ರ ಸ್ನಾನ ಮಾಡಬೇಕು.
- ಮನೆ ಹಾಗೂ ಪೂಜಾ ಕೋಣೆಯನ್ನು ಸ್ವಚ್ಛಗೊಳಿಸಬೇಕು.
*ಧೂಪ, ದೀಪ, ನೈವೇದ್ಯ ಮೊದಲಾದ ಹದಿನಾರು ಪದಾರ್ಥಗಳಿಂದ ವಿಷ್ಣುವನ್ನು ಪೂಜಿಸಿ.
- ರಾತ್ರಿ ದೀಪದಾನ ಮಾಡಿ.
- ಮರದ ಮಣೆ ಅಥವಾ ಹಲಗೆಯ ಮೇಲೆ ವಿಷ್ಣುವಿನ ವಿಗ್ರಹ ಹಾಗೂ ಯಂತ್ರವನ್ನ ಇರಿಸಬೇಕು.
ಹೇಳಲಾಗುತ್ತದೆ. - ಪೂಜೆ, ಆರತಿ ಮುಗಿದ ಬಳಿಕ ನೀವು ಹಣ್ಣುಗಳನ್ನು ತಿನ್ನಬಹುದು.
*ಈರುಳ್ಳಿ ಮತ್ತು ಬೆಳ್ಳುಳ್ಳಿ ಇಲ್ಲದೆ ಕೇವಲ ಸಾತ್ವಿಕ ಊಟ ಮಾಡುವ ಮೂಲಕ ಉಪವಾಸವನ್ನು ಮುರಿಯಬೇಕು.
- ದ್ವಾದಶಿ ತಿಥಿಯಂದು ಏಕಾದಶಿ ವ್ರತವು ಪೂರ್ಣವಾಗುತ್ತದೆ.
ವೈಕುಂಠ ಏಕಾದಶಿ ಮಂತ್ರ:
- ಓಂ ನಮೋ ಭಗವತೇ ವಾಸುದೇವಯೇ..!!
- ಶ್ರೀ ಕೃಷ್ಣ ಗೋವಿಂದ ಹರೇ ಮುರಾರಿ ಹೇ ನಾಥ ನಾರಾಯಣ ವಾಸುದೇವ..!!
- ಹರೇ ರಾಮ್ ಹರೇ ರಾಮ್ ರಾಮ್ ರಾಮ್ ಹರೇ ಹರೇ, ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ..!!
ಆರೋಗ್ಯ
Bantwal-ಆಯುಷ್ಮಾನ್ ಭಾರತ್ ಯೋಜನೆಯಡಿ ಬಂಟ್ವಾಳ ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತ ಹಿಪ್ ರಿಪ್ಲೇಸ್ಮೆಂಟ್ ಶಸ್ತ್ರಚಿಕಿತ್ಸೆ ಯಶಸ್ವಿ
ಕಳೆದ ಎಂಟು ತಿಂಗಳಿನಿಂದ ಎರಡೂ ಸೊಂಟಗಳ ತೀವ್ರ ನೋವಿನಿಂದ ಬಳಲುತ್ತಿದ್ದ 41 ವರ್ಷದ ವ್ಯಕ್ತಿಯೊಬ್ಬರಿಗೆ ಬಂಟ್ವಾಳ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಆಯುಷ್ಮಾನ್ ಭಾರತ್–ಆರೋಗ್ಯ ಕರ್ನಾಟಕ ಯೋಜನೆಯಡಿ ಸಂಪೂರ್ಣ ಉಚಿತವಾಗಿ ಯಶಸ್ವಿ ಹಿಪ್ ರಿಪ್ಲೇಸ್ಮೆಂಟ್ ಶಸ್ತ್ರಚಿಕಿತ್ಸೆ ನಡೆಸಲಾಗಿದೆ.
ಬಂಟ್ವಾಳ: ಕಳೆದ ಎಂಟು ತಿಂಗಳಿನಿಂದ ಎರಡೂ ಸೊಂಟಗಳ ತೀವ್ರ ನೋವಿನಿಂದ ಬಳಲುತ್ತಿದ್ದ 41 ವರ್ಷದ ವ್ಯಕ್ತಿಯೊಬ್ಬರಿಗೆ ಬಂಟ್ವಾಳ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಆಯುಷ್ಮಾನ್ ಭಾರತ್–ಆರೋಗ್ಯ ಕರ್ನಾಟಕ ಯೋಜನೆಯಡಿ ಸಂಪೂರ್ಣ ಉಚಿತವಾಗಿ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ.
ಬಂಟ್ವಾಳ ತಾಲೂಕಿನ ನಿವಾಸಿಯಾಗಿರುವ ಈ ವ್ಯಕ್ತಿಗೆ ‘ಬೈಲ್ಯಾಟರಲ್ ಹಿಪ್ ಅವಾಸ್ಕುಲರ್ ನೆಕ್ರೋಸಿಸ್’ (Bilateral Hip Avascular Necrosis) ಎಂಬ ಕಾಯಿಲೆ ಇರುವುದು ವೈದ್ಯಕೀಯ ತಪಾಸಣೆಯಲ್ಲಿ ಪತ್ತೆಯಾಗಿತ್ತು. ಇದರಿಂದ ಎರಡೂ ಸೊಂಟದ ಮೂಳೆಗಳು ಹಾನಿಗೊಳಗಾಗಿದ್ದು, ಬಲಭಾಗಕ್ಕಿಂತ ಎಡಭಾಗದ ಮೂಳೆಯ ಸ್ಥಿತಿ ಗಂಭೀರವಾಗಿತ್ತು.
ಈ ಹಿಂದೆ ಮಂಗಳೂರಿನ ವೆನ್ಲಾಕ್ ಜಿಲ್ಲಾ ಆಸ್ಪತ್ರೆ ಸೇರಿದಂತೆ ವಿವಿಧ ಖಾಸಗಿ ಆಸ್ಪತ್ರೆಗಳು ಹಾಗೂ ಮೂಳೆ ತಜ್ಞರನ್ನು ಸಂಪರ್ಕಿಸಿದ್ದ ರೋಗಿಗೆ ಶಸ್ತ್ರಚಿಕಿತ್ಸೆಯೊಂದೇ ಶಾಶ್ವತ ಪರಿಹಾರ ಎಂದು ವೈದ್ಯರು ಸಲಹೆ ನೀಡಿದ್ದರು. ಬಳಿಕ ಸ್ಥಳೀಯರ ಸಹಕಾರದೊಂದಿಗೆ ಹೆಚ್ಚಿನ ಚಿಕಿತ್ಸೆಗಾಗಿ ಬಂಟ್ವಾಳ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿದ್ದರು.
ರೋಗಿಯ ಆರ್ಥಿಕ ಹಾಗೂ ಆರೋಗ್ಯದ ಸಂಕಷ್ಟವನ್ನು ಅರಿತ ಆಸ್ಪತ್ರೆಯ ವೈದ್ಯಕೀಯ ತಂಡವು ಆಯುಷ್ಮಾನ್ ಭಾರತ್–ಆರೋಗ್ಯ ಕರ್ನಾಟಕ ಯೋಜನೆಯಡಿ ಉಚಿತವಾಗಿ ಶಸ್ತ್ರಚಿಕಿತ್ಸೆ ನಡೆಸಲು ನಿರ್ಧರಿಸಿತು. ನವೆಂಬರ್ 4ರಂದು ಯೋಜನೆಯಡಿ ಅನುಮೋದನೆಗಾಗಿ ಅರ್ಜಿ ಸಲ್ಲಿಸಲಾಗಿದ್ದು, ನವೆಂಬರ್ 11ರಂದು ಅನುಮತಿ ದೊರೆತಿತ್ತು. ಬಳಿಕ ನವೆಂಬರ್ 17ರಂದು ವೈದ್ಯರ ತಂಡ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಪೂರ್ಣಗೊಳಿಸಿದೆ.
ಜಿಲ್ಲಾ ಆರೋಗ್ಯಾಧಿಕಾರಿ ಡಾ. ತಿಮ್ಮಯ್ಯ ಅವರ ಮಾರ್ಗದರ್ಶನದಲ್ಲಿ ಮಾರ್ಗದರ್ಶಕ ಶಸ್ತ್ರಚಿಕಿತ್ಸಕ ಡಾ. ಅಭಿಷೇಕ್ ಶೆಟ್ಟಿ ಹಾಗೂ ಬಂಟ್ವಾಳ ಸರ್ಕಾರಿ ಆಸ್ಪತ್ರೆಯ ಮೂಳೆ ತಜ್ಞ ಡಾ. ಚೇತನ್ರಾಜ್ ಅವರ ನೇತೃತ್ವದಲ್ಲಿ ಶಸ್ತ್ರಚಿಕಿತ್ಸೆ ನೆರವೇರಿತು.
ಅರವಳಿಕೆ ತಜ್ಞರಾದ ಡಾ. ವಿದ್ಯಾಸಾಗರ್ ಹಾಗೂ ಡಾ. ತುಷಾರ್ ಕೆ., ಶಸ್ತ್ರಚಿಕಿತ್ಸಾ ವಿಭಾಗದ ಶುಶ್ರೂಷಾಧಿಕಾರಿಗಳಾದ ವಾಣಿ, ಪುಷ್ಪಾ, ಕೀರ್ತಿಶಾಲಿನಿ, ತಂತ್ರಜ್ಞರಾದ ಧನ್ಯಾ ಮತ್ತು ಶಶಿಕಲಾ ಹಾಗೂ ಡಿ-ದರ್ಜೆ ನೌಕರರಾದ ಸವಿತಾ, ಜಲಜಾ ಮತ್ತು ಚಂದ್ರಾವತಿ ಅವರು ಶಸ್ತ್ರಚಿಕಿತ್ಸೆಗೆ ಸಹಕರಿಸಿದರು.
ಸರ್ಕಾರಿ ಆಸ್ಪತ್ರೆಯಲ್ಲೇ ಯಾವುದೇ ವೆಚ್ಚವಿಲ್ಲದೆ ಗುಣಮಟ್ಟದ ಚಿಕಿತ್ಸೆ ದೊರೆತಿರುವುದಕ್ಕೆ ರೋಗಿಯ ಕುಟುಂಬಸ್ಥರು ಹಾಗೂ ಸಾರ್ವಜನಿಕರು ವೈದ್ಯಕೀಯ ತಂಡಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ ಎಂದು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ದಿನೇಶ್ ಕಾಮತ್ ತಿಳಿಸಿದ್ದಾರೆ.
ಆರೋಗ್ಯ
Puttur-ಪುತ್ತೂರು: ಸಿಟಿ ಆಸ್ಪತ್ರೆಯಲ್ಲಿ ಉಚಿತ ಮೂಳೆ ಖನಿಜ ಸಾಂದ್ರತೆ (BMD) ಚಿಕಿತ್ಸಾ ಶಿಬಿರ
ಪುತ್ತೂರು ಸಿಟಿ ಆಸ್ಪತ್ರೆ ಚಾರಿಟೇಬಲ್ ಟ್ರಸ್ಟ್ ಹಾಗೂ ಇನ್ನರ್ ವೀಲ್ ಕ್ಲಬ್ ಪುತ್ತೂರು ಇವರ ಸಹಯೋಗದಲ್ಲಿ ಇಂದು (ನ.19) ಬೆಳಿಗ್ಗೆ 9.30ರಿಂದ ಮಧ್ಯಾಹ್ನ 2.30ರವರೆಗೆ ಉಚಿತ ಮೂಳೆ ಖನಿಜ ಸಾಂದ್ರತೆ (BMD) ಚಿಕಿತ್ಸಾ ಶಿಬಿರವು ನಡೆಯಿತು. ಪುತ್ತೂರು ಸಿಟಿ ಆಸ್ಪತ್ರೆಯಲ್ಲಿ ಶಿಬಿರವನ್ನು ಏರ್ಪಡಿಸಲಾಗಿತ್ತು.
ಪುತ್ತೂರು: ಪುತ್ತೂರು ಸಿಟಿ ಆಸ್ಪತ್ರೆ ಚಾರಿಟೇಬಲ್ ಟ್ರಸ್ಟ್ ಹಾಗೂ ಇನ್ನರ್ ವೀಲ್ ಕ್ಲಬ್ ಪುತ್ತೂರು ಇವರ ಸಹಯೋಗದಲ್ಲಿ ಇಂದು (ನ.19) ಬೆಳಿಗ್ಗೆ 9.30ರಿಂದ ಮಧ್ಯಾಹ್ನ 2.30ರವರೆಗೆ ಉಚಿತ ಮೂಳೆ ಖನಿಜ ಸಾಂದ್ರತೆ (BMD) ಚಿಕಿತ್ಸಾ ಶಿಬಿರವು ನಡೆಯಿತು. ಪುತ್ತೂರು ಸಿಟಿ ಆಸ್ಪತ್ರೆಯಲ್ಲಿ ಶಿಬಿರವನ್ನು ಏರ್ಪಡಿಸಲಾಗಿತ್ತು.
ಬೆನ್ನು ನೋವು, ಮೊಣಕಾಲು ನೋವು, ಸೊಂಟ ನೋವು ಹಾಗೂ ಸ್ನಾಯು ನೋವು ಮುಂತಾದ ಸಮಸ್ಯೆಗಳು ಮೂಳೆ ಸವೆತ ಅಥವಾ ಮುಂದಿನ ದಿನಗಳಲ್ಲಿ ಮೂಳೆ ಮುರಿತಕ್ಕೆ ಕಾರಣವಾಗುವ ಸಾಧ್ಯತೆಯಿದೆ. ಇಂತಹ ಲಕ್ಷಣಗಳನ್ನು ನಿರ್ಲಕ್ಷಿಸದೆ ಆರಂಭದಲ್ಲೇ ತಪಾಸಣೆ ಮಾಡಿಸಿಕೊಂಡು ಸೂಕ್ತ ಚಿಕಿತ್ಸೆ ಪಡೆಯುವುದು ಅಗತ್ಯ. ಈ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಉಚಿತ BMD ಶಿಬಿರವನ್ನು ಆಯೋಜಿಸಲಾಗಿತ್ತು. ಆರೋಗ್ಯ ಸೇವಾ ವಿಭಾಗದ ಇಂಡ್ಕೆಮಿ ಹೆಲ್ತ್ ಸ್ಪೆಷಾಲಿಟಿ ಪ್ರೈವೇಟ್ ಲಿಮಿಟೆಡ್ ಪ್ರಾಯೋಜಕತ್ವದಲ್ಲಿ ಶಿಬಿರ ನಡೆಯಿತು.
ಶಿಬಿರದಲ್ಲಿ ಮೂಳೆ ತಜ್ಞರಾದ ಡಾ. ಭಾಸ್ಕರ್ ಎಸ್. (D’Ortho), ಆಡಳಿತ ನಿರ್ದೇಶಕರು, ಪುತ್ತೂರು ಸಿಟಿ ಆಸ್ಪತ್ರೆ ಇವರು ತಪಾಸಣೆ ಹಾಗೂ ಸಲಹೆ ನೀಡಿದರು.
ಇನ್ನರ್ ವೀಲ್ ಕ್ಲಬ್ ನ ನಿರ್ದೇಶಕಿ ಮಂಜುಳ ಭಾಸ್ಕರ್, ಅಧ್ಯಕ್ಷೆ ಮನೋರಮಾ ಸೂರ್ಯ, ಖಜಾಂಜಿ ಕವಿತಾ ಕೊಳತ್ತಾಯ, ಕಾರ್ಯದರ್ಶಿ ಶ್ರುತಿ ಎಸ್. ಬಂಗೇರ ಶಿಬಿರದಲ್ಲಿ ಉಪಸ್ಥಿತರಿದ್ದರು.
ಆರೋಗ್ಯ
‘Ritu Taare’ scheme-35 ವರ್ಷ ಮೇಲ್ಪಟ್ಟ ಮಹಿಳೆಯರ ಆರೋಗ್ಯಕ್ಕೆ ‘ಋತು ತಾರೆ’ ಯೋಜನೆ; ದ.ಕ.ದಲ್ಲಿ ಮೂರು ತಿಂಗಳ ಪ್ರಾಯೋಗಿಕ ಅನುಷ್ಠಾನ..! ನಟಿ ರಮ್ಯಾ ರಾಯಭಾರಿ
35 ವರ್ಷ ಮೇಲ್ಪಟ್ಟ ಮಹಿಳೆಯರ ಆರೋಗ್ಯ ಮತ್ತು ಆರೈಕೆಗೆ ವಿಶೇಷ ಆದ್ಯತೆ ನೀಡುವ ಉದ್ದೇಶದಿಂದ ರಾಜ್ಯ ಸರಕಾರ ‘ಋತು ತಾರೆ’ ಎಂಬ ಮಧ್ಯವಯಸ್ಕ ಮಹಿಳೆಯರ ಆರೋಗ್ಯ ಮತ್ತು ಮೆನೋಪಾಸ್ ಕಾರ್ಯಕ್ರಮವನ್ನು ಜಾರಿಗೆ ತಂದಿದೆ. ಈ ಕಾರ್ಯಕ್ರಮದ ರಾಯಭಾರಿಯಾಗಿ ಚಿತ್ರನಟಿ ರಮ್ಯಾ ಕಾರ್ಯನಿರ್ವಹಿಸಲಿದ್ದಾರೆ.
ಬೆಂಗಳೂರು: 35 ವರ್ಷ ಮೇಲ್ಪಟ್ಟ ಮಹಿಳೆಯರ ಆರೋಗ್ಯ ಮತ್ತು ಆರೈಕೆಗೆ ವಿಶೇಷ ಆದ್ಯತೆ ನೀಡುವ ಉದ್ದೇಶದಿಂದ ರಾಜ್ಯ ಸರಕಾರ ‘ಋತು ತಾರೆ’ ಎಂಬ ಮಧ್ಯವಯಸ್ಕ ಮಹಿಳೆಯರ ಆರೋಗ್ಯ ಮತ್ತು ಮೆನೋಪಾಸ್ ಕಾರ್ಯಕ್ರಮವನ್ನು ಜಾರಿಗೆ ತಂದಿದೆ.
ಈ ಕುರಿತು ಆರೋಗ್ಯ ಇಲಾಖೆ ಆದೇಶ ಹೊರಡಿಸಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೂರು ತಿಂಗಳ ಕಾಲ ಪ್ರಾಯೋಗಿಕವಾಗಿ ಕಾರ್ಯಕ್ರಮ ಅನುಷ್ಠಾನಗೊಳ್ಳಲಿದೆ. ಈ ಹಂತದ ಅನುಭವದ ಆಧಾರದಲ್ಲಿ ಬಳಿಕ ರಾಜ್ಯದಾದ್ಯಂತ ವಿಸ್ತರಿಸಲು ಸರಕಾರ ಉದ್ದೇಶಿಸಿದೆ.
ಮಹಿಳೆಯರ ಆರೋಗ್ಯವು ಕೇವಲ ತಾಯ್ತನಕ್ಕೆ ಸೀಮಿತವಾಗಿಲ್ಲ. ಮೆನೋಪಾಸ್ ಹಂತದಲ್ಲಿ ನಿದ್ರಾಹೀನತೆ, ದೇಹದಲ್ಲಿ ಏಕಾಏಕಿ ಬಿಸಿಯ ಅನುಭವ, ಕೀಲು ನೋವು, ಮೂಳೆಗಳ ದುರ್ಬಲತೆ, ಆತಂಕ ಹಾಗೂ ಮಾನಸಿಕ ಏರುಪೇರು ಸೇರಿದಂತೆ ಹಲವು ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಇವುಗಳನ್ನು ವಯಸ್ಸಿನ ಸಹಜ ಬದಲಾವಣೆ ಎಂದು ನಿರ್ಲಕ್ಷಿಸದೆ ಸೂಕ್ತ ತಪಾಸಣೆ ಮತ್ತು ಚಿಕಿತ್ಸೆ ಪಡೆಯುವುದು ಅಗತ್ಯ ಎಂದು ಸರಕಾರ ತಿಳಿಸಿದೆ.
‘ಋತು ತಾರೆ’ ಯೋಜನೆಯಡಿ ಮಹಿಳೆಯರಿಗಾಗಿ ಪ್ರತ್ಯೇಕ ಕ್ಲಿನಿಕ್ಗಳನ್ನು ತೆರೆಯಲಾಗುತ್ತದೆ. ಇಲ್ಲಿ ಸಮಗ್ರ ಆರೋಗ್ಯ ತಪಾಸಣೆ, ಮಾನಸಿಕ ಆರೋಗ್ಯ ಮತ್ತು ಪೌಷ್ಟಿಕ ಆಹಾರದ ಕುರಿತು ಮಾರ್ಗದರ್ಶನ ನೀಡಲಾಗುತ್ತದೆ. ಅಗತ್ಯವಿರುವವರಿಗೆ ತಜ್ಞ ವೈದ್ಯರಿಂದ ಚಿಕಿತ್ಸೆ ಒದಗಿಸುವುದರ ಜೊತೆಗೆ, ಆರೋಗ್ಯದ ವಿವರಗಳನ್ನು ದಾಖಲಿಸಲು ‘ಮಿಡ್-ಲೈಫ್ ಹೆಲ್ತ್ ಕಾರ್ಡ್’ ವಿತರಿಸಲಾಗುತ್ತದೆ.
ಈ ಕಾರ್ಯಕ್ರಮದ ರಾಯಭಾರಿಯಾಗಿ ಚಿತ್ರನಟಿ ರಮ್ಯಾ ಕಾರ್ಯನಿರ್ವಹಿಸಲಿದ್ದಾರೆ. ಮೆನೋಪಾಸ್ ಹಾಗೂ ಮಧ್ಯವಯಸ್ಕ ಮಹಿಳೆಯರ ಆರೋಗ್ಯದ ಕುರಿತು ಜಾಗೃತಿ ಮೂಡಿಸಿ, ಕಾರ್ಯಕ್ರಮದ ಸಂದೇಶವನ್ನು ರಾಜ್ಯದ ಮೂಲೆಮೂಲೆಗೂ ತಲುಪಿಸಲು ಅವರು ಸಹಕರಿಸಲಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೂರು ತಿಂಗಳ ಪ್ರಾಯೋಗಿಕ ಅನುಷ್ಠಾನ ಪೂರ್ಣಗೊಂಡ ಬಳಿಕ ಯೋಜನೆಯನ್ನು ರಾಜ್ಯಾದ್ಯಂತ ವಿಸ್ತರಿಸಲಾಗುವುದು. ಮಹಿಳೆಯರ ಬದುಕಿನ ಪ್ರತಿಯೊಂದು ಹಂತದಲ್ಲೂ ಉತ್ತಮ ಆರೋಗ್ಯ ಸೇವೆ, ಸೂಕ್ತ ಆರೈಕೆ ಮತ್ತು ಘನತೆಯ ಬದುಕು ದೊರೆಯಬೇಕು ಎಂಬ ಉದ್ದೇಶದಿಂದ ಈ ಕಾರ್ಯಕ್ರಮ ರೂಪಿಸಲಾಗಿದೆ ಎಂದು ಸರಕಾರ ತಿಳಿಸಿದೆ.
-
ಬಿಗ್ ನ್ಯೂಸ್17 hours agoRain-ಸುಳ್ಯ-ಪುತ್ತೂರು ಭಾಗಗಳಲ್ಲಿ ಹಲವೆಡೆ ಮಳೆ : ಎಷ್ಟು ದಿನ ಮಳೆಯಾಗಲಿದೆ ಗೊತ್ತೇ..?
-
ಅಪರಾಧ16 hours agoMangalore-ಚಿನ್ನ ಕಳ್ಳಸಾಗಣೆ ಜಾಲ: ಮಂಗಳೂರು ವಿಮಾನ ನಿಲ್ದಾಣದ ಇಬ್ಬರು ಸಿಬ್ಬಂದಿ ಸಹಿತ ಮೂವರು ಡಿಆರ್ಐ ವಶಕ್ಕೆ
-
ಸುಳ್ಯ11 hours agoSuresh Raina-ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಸುರೇಶ್ ರೈನಾ ಸುಳ್ಯದ ‘ರಸಪಾಕ ಗ್ರಾಂಡ್’ ಹೋಟೆಲ್ ಗೆ ಭೇಟಿ
-
ಅಂತರ ರಾಜ್ಯ14 hours agoCM post battle-ಉತ್ತರ ಪ್ರದೇಶ ಬಿಜೆಪಿಯಲ್ಲಿ ಸಿಎಂ ಕುರ್ಚಿ ಕದನ: ಚುನಾವಣೆಗೂ ಮುನ್ನವೇ ಭಿನ್ನಮತ?
-
ನಿಧನ ವಾರ್ತೆ15 hours agoAccident-ಯುಎಇಯಲ್ಲಿ ಭೀಕರ ಬಸ್–ಲಾರಿ ಅಪಘಾತ; ಕಾಸರಗೋಡಿನ ಅಶ್ರಫ್ ಸೇರಿ ನಾಲ್ವರು ಕೇರಳಿಗರು ಸಾವು
-
ಅಂತರ ರಾಜ್ಯ14 hours agoInsurance policy-ವಿಮೆ ಇಲ್ಲದ ವಾಹನಗಳಿಗೆ ಕಡಿವಾಣ: ಹೊಸ ನಿಯಮ ಜಾರಿಗೆ ಕೇಂದ್ರ ಚಿಂತನೆ; ಕಾರಿಗೆ 4 ವರ್ಷ, ಬೈಕ್ಗೆ 6 ವರ್ಷಗಳ ವಿಮೆ
-
ಸ್ಥಳೀಯ11 hours agoUppinangadi-ಉಪ್ಪಿನಂಗಡಿ: ಇಂದಿನಿಂದ ವಳಾಲು ಟೋಲ್ ಕಾರ್ಯಾರಂಭ; ಶೀಘ್ರದಲ್ಲೇ ಬ್ರಹ್ಮರಕೂಟ್ಲು ಟೋಲ್ ಗೇಟ್ ತೆರವು..!
-
ನಿಧನ ವಾರ್ತೆ16 hours agoಮಂಗಳೂರು: ಬೈಕ್ ಢಿಕ್ಕಿಯಿಂದ ಗಾಯಗೊಂಡಿದ್ದ ನರ್ಸಿಂಗ್ ವಿದ್ಯಾರ್ಥಿನಿ ಸಾವು















