ಆರೋಗ್ಯ
kangaroo mother care: ಶಿಶುಗಳ ಆರೈಕೆಯಲ್ಲಿ ತಾಯಂದಿರ ಕಾಂಗರೂ ಆರೈಕೆ ವಿಧಾನ – ಇಲ್ಲಿದೆ ಮಹತ್ವದ ಮಾಹಿತಿ
ಅವಧಿ ಪೂರ್ಣ ಮತ್ತು ಕಡಿಮೆ ತೂಕ ಸಹಿತಜನಿಸಿದ ಶಿಶುಗಳನ್ನು ಆರೈಕೆ ಮಾಡಲು ತಾಯಂದಿರು ಕಾಂಗರೂ ಆರೈಕೆ ವಿಧಾನದ ಬಗ್ಗೆ ತಿಳಿದುಕೊಂಡಿರಲೇಬೇಕು….
ವಿಶ್ವ ಆರೋಗ್ಯ ಸಂಸ್ಥೆಯು ನವಜಾತ ಶಿಶುಗಳನ್ನು, ವಿಶೇಷವಾಗಿ ಅವಧಿಪೂರ್ವ ಜನಿಸಿದ ಮತ್ತು ಕಡಿಮೆ ದೇಹತೂಕದೊಂದಿಗೆ ಜನಿಸಿದ ಶಿಶುಗಳನ್ನು ತಾಯಿ ಅಥವಾ ಆರೈಕೆದಾರರು ಎದೆಯ ಮೇಲೆ ಮಲಗಿಸಿಕೊಂಡು ದೇಹದ ನೇರ ಸ್ಪರ್ಶ ಒದಗಿಸುವ ಮೂಲಕ ಆರೈಕೆ ಮಾಡಬೇಕು ಎಂದು ತಿಳಿಸಿದೆ.
ಗರ್ಭಾಶಯದಲ್ಲಿ ಇರುವ ಶಿಶುವು ಮೂವತ್ತೇಳು ವಾರಗಳಿಗೆ ಮೊದಲು ಅಥವಾ 259 ದಿನಗಳ ಮೊದಲು ಜನಿಸಿದರೆ, ಆ ಶಿಶುವಿಗೆ ಅವಧಿ ಪೂರ್ವ ಶಿಶು ಎಂದೂ, ಹುಟ್ಟುವಾಗ 2.5 ಕಿಲೋಗ್ರಾಂಗಿಂತ ಕಡಿಮೆ ತೂಕವಿರುವ ಶಿಶು ಕಡಿಮೆ ತೂಕದ ಶಿಶು ಎಂದೂ ವಿಶ್ವ ಆರೋಗ್ಯ ಸಂಸ್ಥೆಯು ಘೋಷಿಸಿದೆ.
ಅವಧಿಪೂರ್ಣ ಶಿಶುವಿನ ಆರೈಕೆ:
*ಶಿಶುಗಳನ್ನು ನೋಡಿಕೊಳ್ಳಲು ಅಗತ್ಯವಾದ ಮಾರ್ಗಸೂಚಿಗಳು, ಸಲಕರಣೆಗಳು, ಸರಬರಾಜುಗಳು ಮತ್ತು ಮೂಲ ಸೌಕರ್ಯಗಳನ್ನು ಹೊಂದಿದೆಯೆ ಎಂದು ಖಚಿತಪಡಿಸಿಕೊಳ್ಳುವುದು.
*ನವಜಾತ ಶಿಶು ಘಟಕದಲ್ಲಿ ಶುಶ್ರೂಷೆಯ ಅವಧಿಯಲ್ಲಿ ತಾಯಿ ಮತ್ತು ಮಗುವನ್ನು ಸಾಧ್ಯವಾದಷ್ಟು ಬೇರ್ಪಡಿಸದಂತೆ ನೋಡಿಕೊಳ್ಳವುದು.
*ಮಗು ಮತ್ತು ತಾಯಿ ನಡುವಿನ ಚರ್ಮದಿಂದ ಚರ್ಮಕ್ಕೆ ಸಂಪರ್ಕ ಹಾಗೂ ಬಾಂಧವ್ಯ ಜಾಸ್ತಿ ಆದ ಹಾಗೆ ದೈಹಿಕ ಆರೋಗ್ಯ ಉತ್ತೇಜನಗೊಳ್ಳುತ್ತದೆ. ಮಗುವಿಗೆ ತಾಯಿಯ ಹಾಲು ಸಿಗುತ್ತದೆ.
*ಅವಧಿಪೂರ್ವ ಶಿಶುಗಳ ವಿಶೇಷ ಅಗತ್ಯಗಳ ಕುರಿತು ಆರೋಗ್ಯ ಸಿಬಂದಿ ಮತ್ತು ಶಿಶುವಿನ ಕುಟುಂಬಸ್ಥರ ನಡುವೆ ಉತ್ತಮ ಸಂಪರ್ಕ ನಡೆಸಿ ಉತ್ತಮ ಭಾವನಾತ್ಮಕ ಬೆಂಬಲ ನೀಡುವುದು.
*ಸರಿಯಾದ ವೈದ್ಯಕೀಯ ಸೌಲಭ್ಯ ಮತ್ತು ಶುಶ್ರೂಷೆ ದೊರೆತರೆ ನವಜಾತ ಶಿಶುಗಳು ಅತ್ಯಂತ ಕಷ್ಟಕರ ಸಂದರ್ಭಗಳಲ್ಲಿಯೂ ಖಚಿತವಾಗಿ ಬದುಕುಳಿಯುತ್ತವೆ ಮತ್ತು ಅಭಿವೃದ್ಧಿ ಹೊಂದುತ್ತವೆ ಎಂದು ಎಲ್ಲರಿಗೂ ತಿಳಿವಳಿಕೆ ನೀಡುವುದು.
ಕಾಂಗರೂ ಆರೈಕೆಯ ವಿಧಾನಗಳು:
*ಶಿಶುವಿನ ಬಟ್ಟೆಗಳನ್ನು ಕಳಚಿ: ಮಗುವಿಗೆ ಡಯಾಪರ್ ಮಾತ್ರವಷ್ಟೇ ಇರಿಸಿ ಉಳಿದ ಬಟ್ಟೆ ತೆಗೆಯಿರಿ. ಶಿಶುವಿನ ದೇಹೋಷ್ಣ ಕಾಪಾಡಿಕೊಳ್ಳುವುದಕ್ಕಾಗಿ ಕೊಠಡಿ ಬೆಚ್ಚಗೆ ಇರಲಿ.
*ಶಿಶುವನ್ನು ಸ್ಥಿತಗೊಳಿಸಿ: ಮೃದುವಾದ ಬಟ್ಟೆ ಅಥವಾ ಬ್ಲಾಂಕೆಟ್‌ನ್ನು ಶಿಶುವಿನ ಮೇಲೆ ಹೊದೆಸಿ ಸರಿಯಾಗಿ ಮಲಗಿಸಿಕೊಳ್ಳಿ ಮತ್ತು ಅದರ ದೇಹೋಷ್ಣ ಕಾಪಾಡಿಕೊಳ್ಳಿ.
*ನಿಮ್ಮ ಬಟ್ಟೆ ಹೊಂದಿಸಿಕೊಳ್ಳಿ: ಸಡಿಲವಾದ ಅಂಗಿ ಅಥವಾ ಕುಪ್ಪಸ ಧರಿಸಿ. ಬೇಬಿ ಸ್ಲಿಂಗ್ ಅಥವಾ ರ್ಯಾಪ್ ಉಪಯೋಗಿಸಿ ಶಿಶುವನ್ನು ಸರಿಯಾಗಿ ಮಲಗಿಸಿಕೊಳ್ಳಬಹುದು.
*ನಿಮ್ಮ ಕೈಗಳನ್ನು ತೊಳೆದುಕೊಳ್ಳಿ: ಯಾವುದೇ ಸಂಭಾವ್ಯ ಸೋಂಕಿನ ಅಪಾಯದಿಂದ ಪಾರಾಗಲು ನಿಮ್ಮ ಕೈಗಳನ್ನು ಸ್ವತ್ಛವಾಗಿ ತೊಳೆದುಕೊಳ್ಳಬೇಕು.
*ಚರ್ಮದ ನೇರ ಸಂಪರ್ಕ ಇರಲಿ: ಎಷ್ಟು ಸಾಧ್ಯವೋ ಅಷ್ಟು ಸಮಯ ಶಿಶುವಿಗೆ ನಿಮ್ಮ ದೇಹದ ನೇರ ಸಂಪರ್ಕ ಸಿಗಬೇಕು. ಕಾಂಗರೂ ತಾಯಿ ಆರೈಕೆಯನ್ನು ಸತತವಾಗಿ ಹಲವು ತಾಸುಗಳ ಕಾಲ ಒದಗಿಸಬಹುದಾಗಿದೆ. ಈ ಅವಧಿಯಲ್ಲಿ ಶಿಶುವಿನ ಜತೆಗೆ ಮಾತನಾಡುವುದು, ಮುದ್ದಿಸುವುದರ ಮೂಲಕ ಆತ್ಮೀಯ ಸಂಬಂಧವನ್ನು ಬೆಸೆಯಬಹುದು.
*ನಿಮ್ಮ ಶಿಶುವನ್ನು ಮಲಗಿಸಿಕೊಳ್ಳಿ: ಮಗುವನ್ನು ನಿಮ್ಮ ಎದೆಯ ಮೇಲೆ ನೇರ ದೇಹಸಂಪರ್ಕ ಇರುವಂತೆ ಮಲಗಿಸಿಕೊಳ್ಳಿ. ಶಿಶುವಿನ ತಲೆ ನಿಮ್ಮ ಎದೆಯ ಮೇಲಿದ್ದು, ಕಾಲುಗಳು ಕೆಳಗೆ ಇರುವಂತೆ ನೇರವಾಗಿ ಮಲಗಿಸಿಕೊಳ್ಳಬೇಕು. ಉಸಿರಾಟ ನಡೆಸಲು ಅನುವಾಗುವಂತೆ ಮಗುವಿನ ತಲೆ ಒಂದು ಪಾರ್ಶ್ವಕ್ಕಿರಬೇಕು.
*ನಿಮ್ಮ ಬಟ್ಟೆ ಹೊಂದಿಸಿಕೊಳ್ಳಿ: ಸಡಿಲವಾದ ಅಂಗಿ ಅಥವಾ ಕುಪ್ಪಸ ಧರಿಸಿ. ಬೇಬಿ ಸ್ಲಿಂಗ್ ಅಥವಾ ರ್ಯಾಪ್ ಉಪಯೋಗಿಸಿ ಶಿಶುವನ್ನು ಸರಿಯಾಗಿ ಮಲಗಿಸಿಕೊಳ್ಳಬಹುದು.
*ಚರ್ಮದ ನೇರ ಸಂಪರ್ಕ ಇರಲಿ: ಎಷ್ಟು ಸಾಧ್ಯವೋ ಅಷ್ಟು ಸಮಯ ಶಿಶುವಿಗೆ ನಿಮ್ಮ ದೇಹದ ನೇರ ಸಂಪರ್ಕ ಸಿಗಬೇಕು. ಕಾಂಗರೂ ತಾಯಿ ಆರೈಕೆಯನ್ನು ಸತತವಾಗಿ ಹಲವು ತಾಸುಗಳ ಕಾಲ ಒದಗಿಸಬಹುದಾಗಿದೆ. ಈ ಅವಧಿಯಲ್ಲಿ ಶಿಶುವಿನ ಜತೆಗೆ ಮಾತನಾಡುವುದು, ಮುದ್ದಿಸುವುದರ ಮೂಲಕ ಆತ್ಮೀಯ ಸಂಬಂಧವನ್ನು ಬೆಸೆಯಬಹುದು.
*ಎದೆಹಾಲು ಉಣಿಸುವುದು: ನಿಮ್ಮ ಶಿಶು ಸಿದ್ಧವಾಗಿದ್ದು, ಎದೆಹಾಲು ಕುಡಿಯಲು ಶಕ್ತವಾಗಿದ್ದಲ್ಲಿ ಕಾಂಗರೂ ತಾಯಿ ಆರೈಕೆ ಒದಗಿಸುತ್ತಿರುವಾಗಲೇ ಎದೆಹಾಲು ಕುಡಿಸಬಹುದು. ದೇಹದ ನೇರ ಸಂಪರ್ಕವು ಎದೆಹಾಲು ಕುಡಿಯಲು ಉತ್ತೇಜನ ಒದಗಿಸುತ್ತದೆ ಮತ್ತು ಇದರಿಂದ ಶಿಶುವಿಗೆ ಜೀವಾಧಾರವಾಗಿರುವ ಪೋಷಕಾಂಶಗಳು ಲಭ್ಯವಾಗುತ್ತವೆ.
*ಶಿಶುವಿನ ಮೇಲೆ ನಿಗಾ ಇರಿಸಿ: ಶಿಶುವಿನ ದೇಹೋಷ್ಣ, ಉಸಿರಾಟ ಮತ್ತು ಒಟ್ಟಾರೆ ಕ್ಷೇಮದ ಬಗ್ಗೆ ನಿಕಟವಾಗಿ ಗಮನ ಇರಿಸಿ. ಶಿಶು ಆರಾಮವಾಗಿ ಉಸಿರಾಟ ನಡೆಸುತ್ತಿದೆ ಮತ್ತು ದೇಹೋಷ್ಣವು ಸ್ಥಿರವಾಗಿದೆ ಎಂಬುದನ್ನು ಖಾತರಿಪಡಿಸಿಕೊಳ್ಳಿ.
ಕಾಂಗರೂ ಆರೈಕೆ ವಿಧಾನ ಬಳಸುವುದರಿಂದ ತಾಯಿಗೆ ಆಗುವ ಪ್ರಯೋಜನಗಳು:
*ದೇಹ -ದೇಹಗಳ ನಡುವೆ ನಿಕಟವಾದ ಸಂಪರ್ಕದಿಂದ ತಾಯಿ-ಮಗುವಿನ ಸಂಬಂಧ ಬಲವತ್ತರಗೊಳ್ಳುತ್ತದೆ, ಇದರಿಂದ ಸಂಬಂಧ ಮತ್ತು ಆತ್ಮೀಯತೆಯ ಭಾವ ಬಿಗಿಯಾಗುತ್ತದೆ.
*ಶಿಶುವಿನ ಜತೆಗೆ ಬಂಧ ಮತ್ತು ಸಂಬಂಧ: ಕಾಂಗರೂ ತಾಯಿ ಆರೈಕೆಯು ತಾಯಿ (ಅಥವಾ ಆರೈಕೆದಾರರು) ಮತ್ತು ಶಿಶುವಿನ ನಡುವೆ ಬಲವಾದ ಭಾವನಾತ್ಮಕ ಬಂಧ ಬೆಳೆಯಲು ಕಾರಣವಾಗುತ್ತದೆ.
*ಎದೆಹಾಲೂಡುವಿಕೆಗೆ ಹೆಚ್ಚು ಒತ್ತು: ಕಾಂಗರೂ ತಾಯಿ ಆರೈಕೆಯು ಎದೆಹಾಲೂಡುವಿಕೆಯನ್ನು ಪ್ರೋತ್ಸಾಹಿಸುತ್ತದೆ ಮತ್ತು ಬೆಂಬಲಿಸುತ್ತದೆ. ತಾಯಿಯ ಸ್ತನಗಳಿಗೆ ನಿಕಟ ಸಂಪರ್ಕ ಹೊಂದಿರುವುದರಿಂದ ಎದೆಹಾಲೂಡುವಿಕೆಯ ಆರಂಭ ಮತ್ತು ಉತ್ತಮ ಎದೆಹಾಲು ಸರಬರಾಜು ಸಾಧ್ಯವಾಗುತ್ತದೆ. ಇದರಿಂದ ಯಶಸ್ವಿಯಾದ ಮತ್ತು ಹೆಚ್ಚು ದೀರ್ಘವಾದ ಎದೆಹಾಲು ಊಡುವ ಅನುಭವ ಒದಗುತ್ತದೆ.
*ಆತ್ಮವಿಶ್ವಾಸ ವರ್ಧನೆ: ಕಾಂಗರೂ ತಾಯಿ ಆರೈಕೆಯ ಮುಖಾಂತರ ಶಿಶುವಿನ ಆರೈಕೆ ಮಾಡುವುದರಿಂದ ತಾಯಿಗೆ ತನ್ನ ಶಿಶುವಿನ ಅದರಲ್ಲೂ ಅವಧಿಪೂರ್ವ ಜನಿಸಿದ ಮತ್ತು ಕಡಿಮೆ ದೇಹತೂಕ ಹೊಂದಿರುವ ಶಿಶುವಿನ ಆರೈಕೆ ಮಾಡಬಲ್ಲೆ, ಚೆನ್ನಾಗಿ ನೋಡಿಕೊಳ್ಳಬಲ್ಲೆ ಎಂಬ ಆತ್ಮವಿಶ್ವಾಸ ವರ್ಧಿಸುತ್ತದೆ.
*ಎದೆಹಾಲು ಉತ್ಪಾದನೆ ಉತ್ತಮಗೊಳ್ಳುತ್ತದೆ: ತಾಯಿ ಮತ್ತು ಶಿಶು ದೇಹಗಳ ನಡುವೆ ನಿಕಟ ಸಂಪರ್ಕ ಮತ್ತು ಶಿಶುವಿನ ಇರುವಿಕೆಯು ಒದಗಿಸುವ ಪ್ರಚೋದನೆಗಳಿಂದಾಗಿ ಎದೆಹಾಲು ಉತ್ಪಾದನೆ ಸುಗಮ ಮತ್ತು ಸರಾಗವಾಗುತ್ತದೆ, ಇದು ಶಿಶುವಿಗೆ ವಿಶ್ವಾಸಾರ್ಹ ಪೌಷ್ಟಿಕಾಂಶ ಮೂಲವಾಗಿರುತ್ತದೆ.
ಸಾಮಾಜಿಕ-ಆರ್ಥಿಕ ಪ್ರಯೋಜನಗಳು
*ಆರೋಗ್ಯ ಸೇವಾ ವೆಚ್ಚ ಇಳಿಕೆ:
ಈ ಆರೈಕೆಯಿಂದ ಅವಧಿಪೂರ್ವ ಮತ್ತು ಕಡಿಮೆ ದೇಹತೂಕದೊಂದಿಗೆ ಜನಿಸಿದ ಶಿಶುಗಳ ಆಸ್ಪತ್ರೆವಾಸದ ಅವಧಿ ಕಡಿಮೆಯಾಗುವುದು ಸಾಧ್ಯ. ಇದರಿಂದ ಕುಟುಂಬಗಳು ಮತ್ತು ಆರೋಗ್ಯ ಸೇವಾ ವ್ಯವಸ್ಥೆಗಳ ಮೇಲೆ ಆರ್ಥಿಕ ಹೊರೆ ಕಡಿಮೆಯಾಗುತ್ತದೆ. ನಿಯೋನೇಟಲ್ ಇಂಟೆನ್ಸಿವ್ ಕೇರ್ ಘಟಕಗಳಲ್ಲಿ ಇರಬೇಕಾದ ಅವಧಿ ಕಡಿಮೆಯಾಗುವುದು ಹಾಗೂ ವೈದ್ಯಕೀಯ ಚಿಕಿತ್ಸೆ ಹಾಗೂ ಔಷಧಗಳ ವೆಚ್ಚ ಕಡಿಮೆಯಾಗುವುದರಿಂದ ಇದು ಸಾಧ್ಯವಾಗುತ್ತದೆ.
ಸಂಕೀರ್ಣ ಸಮಸ್ಯೆಗಳು ಕಡಿಮೆಯಾಗುತ್ತವೆ: ಅವಧಿಪೂರ್ವ ಶಿಶುಗಳಲ್ಲಿ ಸಾಮಾನ್ಯ ಸಂಕೀರ್ಣ ಆರೋಗ್ಯ ಸಮಸ್ಯೆಗಳಾಗಿರುವ ರೆಸ್ಪಿರೇಟರಿ ಡಿಸ್ಟ್ರೆಸ್ ಸಿಂಡ್ರೋಮ್, ಸೋಂಕುಗಳು ಮತ್ತು ಸೆಪ್ಸಿಸ್ ತಲೆದೋರುವ ಸಾಧ್ಯತೆಗಳು ಕಾಂಗರೂ ತಾಯಿ ಆರೈಕೆಯಿಂದಾಗಿ ಕಡಿಮೆಯಾಗುತ್ತವೆ. ಇದರಿಂದಲೂ ವೈದ್ಯಕೀಯ ವೆಚ್ಚ ಕಡಿಮೆಯಾಗುತ್ತದೆಯಲ್ಲದೆ, ಆರೋಗ್ಯ ಸೇವಾ ವ್ಯವಸ್ಥೆಗಳ ಮೇಲೆ ಹೊರೆ ತಗ್ಗುತ್ತದೆ.
ದೀರ್ಘಕಾಲೀನವಾಗಿ ಮಿತವ್ಯಯಿ: ಉತ್ತಮ ನರಶಾಸ್ತ್ರೀಯ ಬೆಳವಣಿಗೆ ಮತ್ತು ದೀರ್ಘಕಾಲೀನ ಆರೋಗ್ಯ ಸಮಸ್ಯೆಗಳ ಇಳಿಕೆ ಸಹಿತ ಕಾಂಗರೂ ತಾಯಿ ಆರೈಕೆಯಿಂದಾಗಿ ತಾಯಿ ಮತ್ತು ಶಿಶುವಿನ ಮೇಲೆ ಉಂಟಾಗುವ ಧನಾತ್ಮಕ ಪರಿಣಾಮಗಳು ಕಡಿಮೆ ವೈದ್ಯಕೀಯ ಸೇವಾ ವೆಚ್ಚ, ವಿಶೇಷ ಶಿಕ್ಷಣ ಮತ್ತು ಸಾಮಾಜಿಕ ನೆರವು ಸೇವೆಗಳಂತಹ ಅಗತ್ಯಗಳನ್ನು ಕಡಿಮೆಗೊಳಿಸುವ ಮೂಲಕ ದೀರ್ಘಕಾಲೀನವಾಗಿ ಕುಟುಂಬ ಮತ್ತು ಸಮಾಜದ ಮೇಲೆ ಹೊರೆಯನ್ನು ತಗ್ಗಿಸುತ್ತದೆ.
ಆರೋಗ್ಯ
Puttur-ಸೆ.29: ವಿಶ್ವ ಹೃದಯ ದಿನ: ಪುತ್ತೂರಿನ ಮೆಡ್‌ಲ್ಯಾಂಡ್ ಆಸ್ಪತ್ರೆಯಲ್ಲಿ ಹೃದಯ ತಪಾಸಣಾ ಶಿಬಿರ
ವಿಶ್ವ ಹೃದಯ ದಿನದ ಅಂಗವಾಗಿ ಪುತ್ತೂರಿನ ಸಂಪ್ಯದಲ್ಲಿರುವ ಮೆಡ್‌ಲ್ಯಾಂಡ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಸೆ.29, ಮಂಗಳವಾರದಂದು ಸಂಜೆ ಗಂಟೆ 3ರಿಂದ ವಿಶೇಷ ಹೃದಯ ತಪಾಸಣಾ ಶಿಬಿರ ಹಾಗೂ ಮಾಹಿತಿ ಕಾರ್ಯಾಗಾರವನ್ನು ಆಯೋಜಿಸಲಾಗಿದೆ.
ಪುತ್ತೂರು: ವಿಶ್ವ ಹೃದಯ ದಿನದ ಅಂಗವಾಗಿ ಪುತ್ತೂರಿನ ಸಂಪ್ಯದಲ್ಲಿರುವ ಮೆಡ್‌ಲ್ಯಾಂಡ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಸೆ.29, ಮಂಗಳವಾರದಂದು ಸಂಜೆ ಗಂಟೆ 3ರಿಂದ ವಿಶೇಷ ಹೃದಯ ತಪಾಸಣಾ ಶಿಬಿರ ಹಾಗೂ ಮಾಹಿತಿ ಕಾರ್ಯಾಗಾರವನ್ನು ಆಯೋಜಿಸಲಾಗಿದೆ.
ಶಿಬಿರದಲ್ಲಿ ಹೃದಯದ ಆರೋಗ್ಯಕ್ಕೆ ಸಂಬಂಧಿಸಿದಂತೆ ಇ.ಸಿ.ಜಿ., ಇಕೋ (ECHO), ಟಿ.ಎಂ.ಟಿ. (TMT) ಸೇರಿದಂತೆ ಅಗತ್ಯ ತಪಾಸಣೆಗಳನ್ನು ನಡೆಸಲಾಗುವುದು. ತಪಾಸಣೆಯ ಬಳಿಕ ಹೃದ್ರೋಗ ತಜ್ಞ ವೈದ್ಯರಿಂದ ಸೂಕ್ತ ಸಲಹೆ ಮತ್ತು ಮಾರ್ಗದರ್ಶನವೂ ದೊರೆಯಲಿದೆ.
ಹೃದಯ ಸಂಬಂಧಿ ಕಾಯಿಲೆಗಳನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚಿ ಸೂಕ್ತ ಚಿಕಿತ್ಸೆ ಪಡೆಯಲು ಶಿಬಿರವು ಸಾರ್ವಜನಿಕರಿಗೆ ಉಪಯುಕ್ತ ಅವಕಾಶವಾಗಲಿದೆ. ವಿಶೇಷವಾಗಿ ಎದೆನೋವು, ಉಸಿರಾಟದ ತೊಂದರೆ, ಹೃದಯ ಬಡಿತದಲ್ಲಿ ವ್ಯತ್ಯಾಸ, ಅಧಿಕ ರಕ್ತದೊತ್ತಡ, ಮಧುಮೇಹ ಅಥವಾ ಕುಟುಂಬದಲ್ಲಿ ಹೃದಯ ಕಾಯಿಲೆಯ ಹಿನ್ನೆಲೆ ಹೊಂದಿರುವವರು ಶಿಬಿರದ ಪ್ರಯೋಜನ ಪಡೆಯುವಂತೆ ಆಸ್ಪತ್ರೆಯ ಆಡಳಿತ ಮಂಡಳಿ ಮನವಿ ಮಾಡಿದೆ.
ಹೃದಯದ ಆರೋಗ್ಯದ ಬಗ್ಗೆ ಮುನ್ನೆಚ್ಚರಿಕೆ ವಹಿಸುವುದು ಹಾಗೂ ನಿಯಮಿತ ತಪಾಸಣೆ ಮಾಡಿಸಿಕೊಳ್ಳುವ ಮೂಲಕ ಆರೋಗ್ಯಕರ ಜೀವನಶೈಲಿಯನ್ನು ರೂಢಿಸಿಕೊಳ್ಳುವಂತೆ ಆಸ್ಪತ್ರೆ ತಿಳಿಸಿದೆ.
ಆರೋಗ್ಯ
HIV test-ಯುವಜನರಲ್ಲಿ ಹೆಚ್ಚುತ್ತಿದೆ HIV ಸೋಂಕು; ರಾಜ್ಯದ ಪದವಿ ಮತ್ತು ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಎಚ್‌ಐವಿ ತಪಾಸಣೆ
ರಾಜ್ಯದ ಯುವ ಸಮೂಹದಲ್ಲಿ ಎಚ್‌ಐವಿ (HIV) ಸೋಂಕು ಆತಂಕಕಾರಿ ರೀತಿಯಲ್ಲಿ ಹರಡುತ್ತಿರುವುದನ್ನು ಮನಗಂಡಿರುವ ಕರ್ನಾಟಕ ಸರ್ಕಾರ, ಎಲ್ಲ ಪದವಿ ಮತ್ತು ಎಂಜಿನಿಯರಿಂಗ್ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಎಚ್‌ಐವಿ ತಪಾಸಣೆ ನಡೆಸಲು ನಿರ್ಧರಿಸಿದೆ.
ಬೆಂಗಳೂರು: ರಾಜ್ಯದ ಯುವ ಸಮೂಹದಲ್ಲಿ ಎಚ್‌ಐವಿ (HIV) ಸೋಂಕು ಆತಂಕಕಾರಿ ರೀತಿಯಲ್ಲಿ ಹರಡುತ್ತಿರುವುದನ್ನು ಮನಗಂಡಿರುವ ಕರ್ನಾಟಕ ಸರ್ಕಾರ, ಎಲ್ಲ ಪದವಿ ಮತ್ತು ಎಂಜಿನಿಯರಿಂಗ್ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಎಚ್‌ಐವಿ ತಪಾಸಣೆ ನಡೆಸಲು ನಿರ್ಧರಿಸಿದೆ.
ದೇಶದಲ್ಲೇ ಮೂರನೇ ಸ್ಥಾನ:
ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಸ್ಥೆಯ ವರದಿ ಪ್ರಕಾರ, ಎಚ್‌ಐವಿ ಸೋಂಕಿತರ ಸಂಖ್ಯೆಯಲ್ಲಿ ಕರ್ನಾಟಕವು ದೇಶದಲ್ಲೇ 3ನೇ ಸ್ಥಾನದಲ್ಲಿದೆ. ರಾಜ್ಯದಲ್ಲಿ ಒಟ್ಟು 2.60 ಲಕ್ಷ ಸೋಂಕಿತರಿದ್ದು, ಈ ಪೈಕಿ ಸುಮಾರು 54 ಸಾವಿರ ಮಂದಿಗೆ ತಮಗೆ ಸೋಂಕು ತಗುಲಿರುವ ಅರಿವೇ ಇಲ್ಲದಿರುವುದು ದೊಡ್ಡ ಆತಂಕಕ್ಕೆ ಕಾರಣವಾಗಿದೆ. ವಿಶೇಷವಾಗಿ 18 ರಿಂದ 35 ವರ್ಷದೊಳಗಿನವರಲ್ಲಿ ಸೋಂಕು ವೇಗವಾಗಿ ಹರಡುತ್ತಿದೆ ಎಂದು ಕರ್ನಾಟಕ ರಾಜ್ಯ ಏಡ್ಸ್ ತಡೆ ಸೊಸೈಟಿ (KSAPS) ಕಳವಳ ವ್ಯಕ್ತಪಡಿಸಿದೆ.
ಕಾಲೇಜುಗಳಲ್ಲಿ ಆರೋಗ್ಯ ಶಿಬಿರ ಮತ್ತು ಜಾಗೃತಿ:
ಸೋಂಕನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚಲು ಆರೋಗ್ಯ ಇಲಾಖೆ ಹಾಗೂ ಕಾಲೇಜು ಶಿಕ್ಷಣ ಇಲಾಖೆಯು ಜಂಟಿಯಾಗಿ ‘ಸಂಯೋಜಿತ ಆರೋಗ್ಯ ಶಿಬಿರ’ಗಳನ್ನು (IHC) ಆಯೋಜಿಸುತ್ತಿವೆ.
ವಿಟಿಯು (VTU) ವ್ಯಾಪ್ತಿಯಲ್ಲೂ ತಪಾಸಣೆ: ರಾಜ್ಯದ ಎಲ್ಲ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ತಪಾಸಣೆ ಹಾಗೂ ಆಪ್ತ ಸಮಾಲೋಚನೆ ನಡೆಸುವಂತೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಸೂಚನೆ ನೀಡಿದೆ.
ವಿವಿಧ ಸ್ಪರ್ಧೆಗಳು: 2026ರ ಜುಲೈನಿಂದ 2027ರ ಫೆಬ್ರವರಿವರೆಗೆ ಕಾಲೇಜುಗಳಲ್ಲಿ ಬೀದಿ ನಾಟಕ, ರಸಪ್ರಶ್ನೆ ಮತ್ತು ತಜ್ಞರ ಉಪನ್ಯಾಸಗಳ ಮೂಲಕ ಜಾಗೃತಿ ಮೂಡಿಸಲು ಯೋಜನೆ ರೂಪಿಸಲಾಗಿದೆ. ಇದಕ್ಕೆ ಅಂಕಗಳ ಆಧಾರದ ಮೇಲೆ ಮಾರ್ಗಸೂಚಿಯನ್ನೂ ನೀಡಲಾಗಿದೆ.
ಮಾಹಿತಿಯ ಗೌಪ್ಯತೆಗೆ ಆದ್ಯತೆ (QR Code ಸೌಲಭ್ಯ):
ವಿದ್ಯಾರ್ಥಿಗಳು ತಮ್ಮ ಎಚ್‌ಐವಿ ಸ್ಥಿತಿಯನ್ನು ಅತ್ಯಂತ ಗೌಪ್ಯವಾಗಿ ತಿಳಿದುಕೊಳ್ಳಲು ಸರ್ಕಾರವು ವಿಶೇಷ ತಂತ್ರಜ್ಞಾನದ ಮೊರೆ ಹೋಗಿದೆ.
ಕ್ಯೂಆರ್ ಕೋಡ್ (QR Code): ಕಾಲೇಜುಗಳಲ್ಲಿ ಕಡ್ಡಾಯವಾಗಿ ಕ್ಯೂಆರ್ ಕೋಡ್ ಪ್ರದರ್ಶಿಸಲಾಗುತ್ತದೆ. ಇದನ್ನು ಸ್ಕ್ಯಾನ್ ಮಾಡುವ ಮೂಲಕ ವಿದ್ಯಾರ್ಥಿಗಳು ಸ್ವಯಂ-ಅಪಾಯ ಮೌಲ್ಯಮಾಪನ ಮಾಡಿಕೊಳ್ಳಬಹುದು.
ವೆಬ್‌ಸೈಟ್: ಗೌಪ್ಯ ಮಾರ್ಗದರ್ಶನಕ್ಕಾಗಿ www.breakfreeindia.org ಜಾಲತಾಣವನ್ನು ಬಳಸಿಕೊಳ್ಳಲು ಅವಕಾಶ ನೀಡಲಾಗಿದೆ.
ಸರ್ಕಾರದ ಮುಂದಿರುವ ಸವಾಲು:
ಕಾಲೇಜುಗಳಲ್ಲಿ ಮಾದಕ ದ್ರವ್ಯಗಳ ವಿರುದ್ಧ ಸಮರ ಸಾರಿರುವ ಸರ್ಕಾರಕ್ಕೆ, ಈಗ ಎಚ್‌ಐವಿ ಹರಡದಂತೆ ತಡೆಯುವುದು ದೊಡ್ಡ ಸವಾಲಾಗಿದೆ. ರಾಜ್ಯದ ಸರ್ಕಾರಿ ಮತ್ತು ಖಾಸಗಿ ಕಾಲೇಜುಗಳಲ್ಲಿರುವ ಲಕ್ಷಾಂತರ ವಿದ್ಯಾರ್ಥಿಗಳ ಆರೋಗ್ಯ ಸುರಕ್ಷತೆಯ ದೃಷ್ಟಿಯಿಂದ ಈ ಕ್ರಮ ಅನಿವಾರ್ಯ ಎಂದು ಕೆಎಸ್‌ಎಪಿಎಸ್ ತಿಳಿಸಿದೆ. ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿಗಳು ಈ ತಪಾಸಣಾ ಪ್ರಕ್ರಿಯೆಯ ಉಸ್ತುವಾರಿ ವಹಿಸಲಿದ್ದಾರೆ.
ಆರೋಗ್ಯ
Puttur-ಪುತ್ತೂರು: ಜು.9ರಂದು ಡಾ. ನಝೀರ್ ಅಹಮ್ಮದ್ ರವರ ಕ್ಲಿನಿಕ್ ನಲ್ಲಿ ಮಾಸಿಕ ಉಚಿತ ಆರೋಗ್ಯ ತಪಾಸಣಾ ಶಿಬಿರ
ಸಾರ್ವಜನಿಕರ ಆರೋಗ್ಯದ ಕಾಳಜಿಯೊಂದಿಗೆ, ಪುತ್ತೂರಿನ ಖ್ಯಾತ ವೈದ್ಯಕೀಯ ತಜ್ಞ ಡಾ. ನಝೀರ್ ಅಹಮದ್, ರೋಟರಿ ಕ್ಲಬ್ ಪುತ್ತೂರು ಸಿಟಿ ಹಾಗೂ ರೋಟರ್ಯಾಕ್ಟ್ ಕ್ಲಬ್ ಪುತ್ತೂರು ಇವರ ಜಂಟಿ ಆಶ್ರಯದಲ್ಲಿ ಮಾಸಿಕ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ.
ಪುತ್ತೂರು: ಸಾರ್ವಜನಿಕರ ಆರೋಗ್ಯದ ಕಾಳಜಿಯೊಂದಿಗೆ, ಪುತ್ತೂರಿನ ಖ್ಯಾತ ವೈದ್ಯಕೀಯ ತಜ್ಞ ಡಾ. ನಝೀರ್ ಅಹಮದ್, ರೋಟರಿ ಕ್ಲಬ್ ಪುತ್ತೂರು ಸಿಟಿ ಹಾಗೂ ರೋಟರ್ಯಾಕ್ಟ್ ಕ್ಲಬ್ ಪುತ್ತೂರು ಇವರ ಜಂಟಿ ಆಶ್ರಯದಲ್ಲಿ ಮಾಸಿಕ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ.
ಶಿಬಿರವು ಜು.9, ಗುರುವಾರದಂದು ಬೆಳಗ್ಗೆ 9-30ರಿಂದ ಮಧ್ಯಾಹ್ನ 12-30ರವರೆಗೆ ಪುತ್ತೂರಿನ ಕಲ್ಲಾರೆಯಲ್ಲಿರುವ ಡಾ. ನಝೀರ್ ಅಹಮದ್ ರವರ ಕ್ಲಿನಿಕ್ ನಲ್ಲಿ ನಡೆಯಲಿರುವುದು.
ಶಿಬಿರದಲ್ಲಿ ಸಿಗುವ ಸೌಲಭ್ಯಗಳು:
ಈ ಶಿಬಿರದಲ್ಲಿ ಸಾರ್ವಜನಿಕರಿಗೆ ಈ ಕೆಳಗಿನ ಪರೀಕ್ಷೆಗಳನ್ನು ಸಂಪೂರ್ಣ ಉಚಿತವಾಗಿ ಮಾಡಿಕೊಡಲಾಗುವುದು.
ಉಚಿತ ಪರೀಕ್ಷೆಗಳು: ಥೈರಾಯಿಡ್ (TSH), ರಕ್ತದ ಸಕ್ಕರೆ ಅಂಶ (Sugar), HBA1C ಮತ್ತು ಮೂಳೆ ಸಾಂದ್ರತೆ ಪರೀಕ್ಷೆ (BMD Test).
-
ನಿಧನ ವಾರ್ತೆ19 hours agoMumbai-ಪ್ರೀತಿಸಿ ಮದುವೆಯಾಗಿದ್ದ ಜೋಡಿಯ ದುರಂತ ಅಂತ್ಯ? ಸರಪಳಿಯಿಂದ ಕಾಲು ಕಟ್ಟಿದ ಸ್ಥಿತಿಯಲ್ಲಿ ಶವ ಪತ್ತೆ
-
ಮಂಗಳೂರು17 hours agoUjire-ಭಾರೀ ಜನಸ್ತೋಮದೊಂದಿಗೆ ಸೌಜನ್ಯ ನ್ಯಾಯದ ನಡಿಗೆ
-
ಮಂಗಳೂರು15 hours agoMulki-ಮೂಲ್ಕಿ: ಚಲಿಸುತ್ತಿದ್ದ ಮಂಗಳೂರು – ಕಾರ್ಕಳ ಎಕ್ಸ್ ಪ್ರೆಸ್ ಬಸ್ಗೆ ಬಡಿದ ಗಿಡುಗ: ಗಾಜು ಪುಡಿಪುಡಿ, ಪುತ್ತೂರು ಮೂಲದ ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿದ ಭಾರಿ ಅವಘಡ
-
ಅಂತರ ರಾಜ್ಯ19 hours agoArrested-ಕಾಸರಗೋಡು: ಮದುವೆಯ ನೆಪದಲ್ಲಿ ಹತ್ತಾರು ಯುವತಿಯರಿಗೆ ವಂಚನೆ: ಮದುವೆಯಾದ ಮೂರೇ ದಿನಕ್ಕೆ ಚಿನ್ನ, ಹಣದೊಂದಿಗೆ ಪರಾರಿ; ಆರೋಪಿ ಬಿಜು ಆಂಟನಿ ಬಂಧನ
-
ರಾಜ್ಯ19 hours agoRobotic technology-ರೋಬೋಟಿಕ್ ತಂತ್ರಜ್ಞಾನದ ಅದ್ಭುತ: ಸ್ಪೇನ್ನಲ್ಲಿ ಕುಳಿತು ಕರ್ನಾಟಕದ ಮಹಿಳೆಗೆ ಹೃದಯ ಶಸ್ತ್ರಚಿಕಿತ್ಸೆ
-
ಅಂತರ ರಾಜ್ಯ18 hours agoJantar Mantar-ಸಿಜೆಪಿ ಪ್ರತಿಭಟನೆಗೆ ದೆಹಲಿಯಲ್ಲಿ ಬಿಗಿ ಭದ್ರತೆ – ಪಂಚರ್ ಆಗಲು ರಸ್ತೆಗಳಿಗೆ ತಡೆಬೇಲಿ..! ವಿಮಾನದಲ್ಲೇ ಅಭಿಜಿತ್ ದಿಪ್ಕೆ ಪೊಲೀಸ್ ವಶಕ್ಕೆ..! ಸಾವಿರಕ್ಕೂ ಮಿಕ್ಕಿ ಪ್ರತಿಭಟನಾಕಾರರೂ ವಶಕ್ಕೆ-ಸುಪ್ರೀಂ ಕೋರ್ಟ್ ವಕೀಲರಿಗೆ ತಡೆ..! ತೀವ್ರ ಅಡೆತಡೆಗಳ ನಡುವೆ ಜಂತರ್ ಮಂತರ್ ಗೆ ಹರಿದು ಬರುತ್ತಿರುವ ಜನಸಾಗರ
-
ಅಂತರ ರಾಜ್ಯ18 hours agoBy-election results-ಉಪಚುನಾವಣೆ ಫಲಿತಾಂಶ: ಪಶ್ಚಿಮ ಬಂಗಾಳ, ಅಸ್ಸಾಂನಲ್ಲಿ ಬಿಜೆಪಿಗೆ ಭರ್ಜರಿ ಮುನ್ನಡೆ, ತಮಿಳುನಾಡಿನಲ್ಲಿ ಟಿವಿಕೆ ಅಬ್ಬರ
-
ಅಂತರ ರಾಜ್ಯ20 hours agoDhruv Rati-BIG BREAKING: ದೆಹಲಿಯ ಜಂತರ್ ಮಂತರ್ ನಲ್ಲಿ ಸಿಜೆಪಿ ಪ್ರತಿಭಟನೆ ಹಿನ್ನಲೆ – ಯೂಟ್ಯೂಬರ್ ಧ್ರುವ್ ರಾಠಿ ಪೊಲೀಸ್ ವಶಕ್ಕೆ?


















