ಪುತ್ತೂರು
Puthila Parivara | ಪುತ್ತೂರು ನಗರಸಭೆ 2 ವಾರ್ಡ್ ಮರುಮತದಾನ – ಬಿಜೆಪಿ ಕಾಂಗ್ರೇಸ್ ನಡುವೆ ಕಾರ್ಯಕರ್ತರ ಒತ್ತಾಯದಂತೆ ಪುತ್ತಿಲ ಪರಿವಾರ ಮತ್ತೊಂದು ಚುನಾವಣೆ ಎದುರಿಸುವುದು ಬಹುತೇಕ ಫಿಕ್ಸ್ : ವಿಧಾನಸಭಾ ಚುನಾವಣೆಯಲ್ಲಿ ಈ ವಾರ್ಡ್ ಗಳಲ್ಲಿ ಯಾರಿಗೆ ಎಷ್ಟು ಮತದಾನವಾಗಿತ್ತು ಗೊತ್ತೇ.?
ಪುತ್ತೂರು : ತೆರವಾಗಿರುವ ಪುತ್ತೂರು ನಗರಸಭೆಯ ಎರಡು ವಾರ್ಡ್ ಗಳಿಗೆ ರಾಜ್ಯ ಚುನಾವಣೆ ಆಯೋಗ ಮರು ಮತದಾನ ದಿನಾಂಕವನ್ನು ಡಿ.27ಕ್ಕೆ ಫಿಕ್ಸ್ ಮಾಡಿದೆ. ವಾರ್ಡ್ ನಂ.1 ರಕ್ತೇಶ್ವರಿ ಘಟಕದಲ್ಲಿ ಬಿಜೆಪಿ ಬೆಂಬಲಿತ ಸದಸ್ಯ ಶಿವರಾಮ್ ಹಾಗೂ ವಾರ್ಡ್ ನಂ.11ರ ಕಾಂಗ್ರೇಸ್‍ನ ಶಕ್ತಿಸಿನ್ಹ ರ ಅಕಾಲಿಕ ನಿಧನ ನಂತರ ತೆರವಾಗಿರುವ ಸ್ಥಾನಕ್ಕೆ ಡಿ.27ರಂದು ಮತದಾನ ನಡೆಯಲಿದೆ (Puthila Parivara).
2023ರ ವಿಧಾನಸಭಾ ಚುನಾವಣೆಯ ಸಂದರ್ಭ ಪುತ್ತೂರಿನಲ್ಲಿ ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಗೌಡರ ಘೋಷಣೆಯಾಗುತ್ತಿದ್ದಂತೆ ಕಾರ್ಯಕರ್ತರ ಒತ್ತಾಯದಂತೆ ಪಕ್ಷೇತರರಾಗಿ ಸ್ಪರ್ಧಿಸಿದ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಕಾಂಗ್ರೇಸ್‍ನ ನ ಅಶೋಕ್ ಕುಮಾರ್ ರೈ ವಿರುದ್ಧ ಜಿದ್ದಾಜಿದ್ದಿನ ಸ್ಪರ್ಧೆ ನೀಡಿ ಸೋಲನ್ನನ್ನುಭವಿಸಿದರು.
ಆ ನಂತರ ಪುತ್ತಿಲ ಪರಿವಾರ ಸೃಷ್ಟಿಯಾಗಿ ಅರುಣ್ ಕುಮಾರ್ ಪುತ್ತಿಲ ಅವರನ್ನು ಬಿಜೆಪಿ ಸೇರಿಸಿಕೊಳ್ಳುವ ಯಾವೂದೇ ಮಾತುಕತೆ ಫಲಪ್ರದವಾಗದಿದ್ದಾಗ 2 ಗ್ರಾಮ ಪಂಚಾಯತ್ ಗಳಿಗೆ ನಡೆದ ಉಪಚುನಾವಣೆಯಲ್ಲಿ ಸ್ಪರ್ಧಿಸುವಂತೆ ಕಾರ್ಯಕರ್ತರು ಒತ್ತಡ ಹಾಕಿದರು. ಚುನಾವಣೆಯಲ್ಲಿ ತ್ರಿಕೋಣ ಸ್ಪರ್ಧೆ ನಡೆದು ಪುತ್ತಿಲ ಪರಿವಾರ ಆರ್ಯಾಪು ಗ್ರಾಮ ಪಂಚಾಯತ್ ನಲ್ಲಿ ಭರ್ಜರಿ ಗೆಲುವು ದಾಖಲಿಸಿ , ನಿಡ್ಪಳ್ಳಿಯಲ್ಲಿ ಕೆಲವೇ ಓಟ್ ಗಳಿಂದ ಕಾಂಗ್ರೇಸ್ ಗೆಲುವು ದಾಖಲಿಸಿತ್ತು. ಎರಡು ಕ್ಷೇತ್ರದಲ್ಲೂ ಬಿಜೆಪಿ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಲಾಯಿತು.
ಈಗ ಘೋಷಣೆಯಾದ ನಗರಸಭೆಯ ಎರಡು ವಾರ್ಡ್ ನ ಚುನಾವಣೆಗೆ ಮತ್ತೊಮ್ಮೆ ಪುತ್ತಿಲ ಪರಿವಾರದಿಂದ ಅಭ್ಯರ್ಥಿ ಹಾಕುವಂತೆ ಕಾರ್ಯಕರ್ತರಿಂದ ಭಾರಿ ಒತ್ತಡ ಬರುತ್ತಿದೆ ಎಂದು ಪುತ್ತಿಲ ಪರಿವಾರದ ಪ್ರಮುಖರೊಬ್ಬರು ತಿಳಿಸಿದ್ದಾರೆ.
ಚುನಾವಣೆ ಘೋಷಣೆಯಾಗುತ್ತಿದ್ದಂತೆ ಪುತ್ತಿಲ ಪರಿವಾರದ ವತಿಯಿಂದ ಎರಡು ವಾರ್ಡ್ ಗಳಲ್ಲಿ ನಡೆದ ಸಭೆಯಲ್ಲಿ ನೂರಾರು ಕಾರ್ಯಕರ್ತರು ಸೇರಿ ಅಭ್ಯರ್ಥಿ ಹಾಕುವಂತೆ ಒತ್ತಡ ಹಾಕುತ್ತಿದ್ದಾರೆ ಎನ್ನಲಾಗುತ್ತಿದೆ. ಅದ್ದರಿಂದ ಎರಡು ವಾರ್ಡ್ ಗಳಲ್ಲೂ ಅಭ್ಯರ್ಥಿ ಹಾಕುವುದು ಬಹುತೇಕ ನಿಶ್ಚಯವಾಗಿದೆ.
ಎರಡು ವಾರ್ಡ್ ನಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಚಲಾವಣೆಯಾದ ಮತ ವಿವರ:
ರಕ್ತೇಶ್ವರಿ ಘಟಕ – ವಾರ್ಡ್ ನಂ.1 (4 ಬೂತ್) :
ಬೂತ್ ನಂ.67: ಬಿಜೆಪಿ: 220 ಕಾಂಗ್ರೇಸ್ : 204 ಅರುಣ್ ಪುತ್ತಿಲ: 471
ಬೂತ್ ನಂ.67: ಬಿಜೆಪಿ: 174 ಕಾಂಗ್ರೇಸ್ : 164 ಅರುಣ್ ಪುತ್ತಿಲ: 272
ಬೂತ್ ನಂ.69: ಬಿಜೆಪಿ: 134 ಕಾಂಗ್ರೇಸ್ : 260 ಅರುಣ್ ಪುತ್ತಿಲ: 273
ಬೂತ್ ನಂ.70: ಬಿಜೆಪಿ: 140 ಕಾಂಗ್ರೇಸ್ : 225 ಅರುಣ್ ಪುತ್ತಿಲ: 309
ಒಟ್ಟು : ಬಿಜೆಪಿ : 448 ಕಾಂಗ್ರೇಸ್ : 649 ಅರುಣ್ ಕುಮಾರ್ ಪುತ್ತಿಲ: 854
ನೆಲ್ಲಿಕಟ್ಟೆ ವಾರ್ಡ್ ನಂ.11 (2 ಬೂತ್)
ಬೂತ್ ನಂ.129: ಬಿಜೆಪಿ : 200 ಕಾಂಗ್ರೇಸ್ : 210 ಅರುಣ್ ಕುಮಾರ್ ಪುತ್ತಿಲ: 451
ಬೂತ್ ನಂ.130: ಬಿಜೆಪಿ : 273 ಕಾಂಗ್ರೇಸ್ : 242 ಅರುಣ್ ಕುಮಾರ್ ಪುತ್ತಿಲ: 333
ಒಟ್ಟು : ಬಿಜೆಪಿ : 473 ಕಾಂಗ್ರೇಸ್ : 452 ಅರುಣ್ ಕುಮಾರ್ ಪುತ್ತಿಲ: 784
ಶಿಕ್ಷಣ
Ambika-ಅಂಬಿಕಾ ಪ.ಪೂ.ವಿದ್ಯಾಲಯಗಳ ಪ್ರತಿಭಾ ದಿನಾಚರಣೆ – ಮಾನಸೋಲ್ಲಾಸ; ಉದ್ದೇಶ ಸ್ಪಷ್ಟತೆ ಇರುವವರಿಗೆ ಯಾವುದೇ ಅಡೆತಡೆಗಳಿಲ್ಲ: ಪಿ. ಪ್ರದೀಪ್ ಕುಮಾರ್
ನಟ್ಟೋಜ ಫೌಂಡೇಶನ್ ಟ್ರಸ್ಟ್ ಪ್ರವರ್ತಿತ ನೆಲ್ಲಿಕಟ್ಟೆ ಹಾಗೂ ಬಪ್ಪಳಿಗೆ ಅಂಬಿಕಾ ಪದವಿಪೂರ್ವ ವಿದ್ಯಾಲಯಗಳ ಪ್ರತಿಭಾ ದಿನಾಚರಣೆ – ಮಾನಸೋಲ್ಲಾಸ ಕಾರ್ಯಕ್ರಮವನ್ನು ಬಪ್ಪಳಿಗೆಯ ಶ್ರೀ ಶಂಕರ ಸಭಾಭವನದಲ್ಲಿ ಉದ್ಘಾಟಿಸಿ ಕರ್ನಾಟಕ ಬ್ಯಾಂಕ್ ಅಧ್ಯಕ್ಷ ಪಿ. ಪ್ರದೀಪ್ ಕುಮಾರ್ ಮಾತನಾಡಿದರು.

ಪುತ್ತೂರು: ಪ್ರತಿಭೆಯಿಲ್ಲದ ವ್ಯಕ್ತಿಯಿಲ್ಲ. ಆದರೆ ನಮ್ಮೊಳಗಿರುವ ಪ್ರತಿಭೆಗಳನ್ನು ಗುರುತಿಸುವುದು, ಬೆಳೆಸುವುದು ಹಾಗೂ ಆ ಪ್ರತಿಭೆಯನ್ನು ಸತ್ಕಾರ್ಯಗಳಿಗಾಗಿ ಬಳಸುವುದು ಅತ್ಯಂತ ಮುಖ್ಯ. ಸಮರ್ಪಿತ ಹಾಗೂ ಉದ್ದೇಶಸ್ಪಷ್ಟತೆ ಹೊಂದಿರುವ ವ್ಯಕ್ತಿಯ ಬೆಳವಣಿಗೆಗೆ ಯಾವುದೇ ಅಡೆತಡೆಗಳಿಲ್ಲ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ಕರ್ನಾಟಕ ಬ್ಯಾಂಕ್ ಅಧ್ಯಕ್ಷ ಪಿ. ಪ್ರದೀಪ್ ಕುಮಾರ್ ಹೇಳಿದರು.
ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಪ್ರವರ್ತಿತ ನೆಲ್ಲಿಕಟ್ಟೆ ಹಾಗೂ ಬಪ್ಪಳಿಗೆ ಅಂಬಿಕಾ ಪದವಿಪೂರ್ವ ವಿದ್ಯಾಲಯಗಳ ಪ್ರತಿಭಾ ದಿನಾಚರಣೆ – ಮಾನಸೋಲ್ಲಾಸ ಕಾರ್ಯಕ್ರಮವನ್ನು ಬಪ್ಪಳಿಗೆಯ ಶ್ರೀ ಶಂಕರ ಸಭಾಭವನದಲ್ಲಿ ಉದ್ಘಾಟಿಸಿ ಶನಿವಾರ ಮಾತನಾಡಿದರು.

ಈ ದೇಶದ ದೊಡ್ಡ ದೊಡ್ಡ ವಿಜ್ಞಾನಿಗಳು, ವೈದ್ಯರು, ಇಂಜಿನಿಯರ್‌ಗಳು, ದೊಡ್ಡ ದೊಡ್ಡ ಸಾಧಕರಲ್ಲಿ ಹೆಚ್ಚಿನವರು ಗ್ರಾಮೀಣ ಪ್ರದೇಶಗಳಿಂದ ಬಂದವರೇ ಆಗಿದ್ದಾರೆ. ಹಾಗಾಗಿ ಗ್ರಾಮೀಣ ಭಾಗದಲ್ಲಿ ಅವಕಾಶಗಳು ಕಡಿಮೆ ಎಂಬ ಭಾವನೆಯನ್ನು ಇಟ್ಟುಕೊಳ್ಳಬೇಕಿಲ್ಲ. ನಾವು ಎಲ್ಲಿಂದ ಬಂದಿದ್ದೇವೆ, ಯಾವ ಹಿನ್ನೆಲೆಯಿಂದ ಬಂದಿದ್ದೇವೆ ಎಂಬುದು ಮುಖ್ಯವಲ್ಲ. ಸಾಧನೆಯೆಡೆಗೆ ಮುಖ ಮಾಡಿ ನಿರಂತರ ಕಾರ್ಯಪ್ರವೃತ್ತರಾದರೆ ಅಂದುಕೊಡ ಗಮ್ಯವನ್ನು ತಲಪುವುದಕ್ಕೆ ಸಾಧ್ಯವಿದೆ ಎಂದರು.
ಕನಸು ಕಾಣುವುದಕ್ಕೆ ಎಲ್ಲರಿಗೂ ಸಾಧ್ಯವಿದೆ. ಆದರೆ ಕಂಡ ಕನಸುಗಳನ್ನು ನನಸು ಮಾಡುವುದಕ್ಕೆ ಶಿಸ್ತು, ಪ್ರಾಮಾಣಿಕತೆ, ನಿರಂತರ ಪ್ರಯತ್ನ ಹಾಗೂ ಎದುರಾಗುವ ಅಡೆತಡೆಗಳನ್ನು ಮೀರಿ ಮುನ್ನಡೆಯುವ ಸಾಮರ್ಥ್ಯಗಳಿರಬೇಕು. ಆಕಾಂಕ್ಷೆ ಹಾಗೂ ಸಾಧನೆಗಳ ಮಧ್ಯೆ ಬಹುದೊಡ್ಡ ಅಂತರವಿದೆ. ಆ ಅಂತರದ ನಡುವಣ ಸೇತುವೆಯಲ್ಲಿ ನಡೆಯಲು ಕಠಿಣ ಪರಿಶ್ರಮವೊಂದೇ ದಾರಿ. ಯಶಸ್ಸಿಗೆ ಯಾವುದೇ ಅಡ್ಡದಾರಿಗಳಿಲ್ಲ. ನಮ್ಮ ವ್ಯಕ್ತಿತ್ವವನ್ನು ತಂತ್ರಜ್ಞಾನ ರೂಪಿಸಲಾರದು, ಸ್ವತಃ ನಾವೇ ರೂಪಿಸಿಕೊಳ್ಳಬೇಕು ಎಂದು ನುಡಿದರು.

ಮತ್ತೋರ್ವ ಅತಿಥಿ, ಸಂಸ್ಥೆಯ ಹಿರಿಯ ವಿದ್ಯಾರ್ಥಿನಿ ಹಾಗೂ ಬೆಂಗಳೂರಿನ ಭಾರತ್ ಇಲೆಕ್ಟಾçನಿಕ್ಸ್ನ ಡೆಪ್ಯೂಟಿ ಇಂಜಿನಿಯರ್ ಅನುಜ್ಞಾ ಪಳ್ಳತ್ತಡ್ಕ ಮಾತನಾಡಿ ನಾವು ಉಸಿರಾಡುವ ಗಾಳಿ, ತಿನ್ನುವ ಆಹಾರ ಈ ದೇಶದ್ದು. ಹಾಗಾಗಿ ಈ ದೇಶದ ಸೇವೆಯನ್ನು ಮಾಡಿ ನಮ್ಮ ಬದುಕನ್ನು ಸಾರ್ಥಕಪಡಿಸಿಕೊಳ್ಳಬೇಕು. ನಮ್ಮ ಬದುಕಿನಲ್ಲಿ ಒಂದು ಸರಿಯಾದ ಉದ್ದೇಶವನ್ನಿಟ್ಟುಕೊಂಡು ಮುಂದುವರೆಯಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಮಣ್ಯ ನಟ್ಟೋಜ ಮಾತನಾಡಿ ನಮ್ಮ ಹಿರಿಯರ ಪರಿಶ್ರಮದ ಫಲವಾಗಿ ನಮ್ಮ ಭಾರತೀಯ ಕಲೆ, ಸಂಸ್ಕೃತಿಗಳು ಬೆಳೆದು ಬಂದಿವೆ. ಅವುಗಳನ್ನು ಉಳಿಸಿ ಬೆಳೆಸುವ ಕಾರ್ಯದಲ್ಲಿ ಅಂಬಿಕಾ ಸಂಸ್ಥೆಗಳು ಸದಾ ತೊಡಗಿಕೊಂಡಿವೆ. ದೇಶ ಮೊದಲು ಎಂಬ ಭಾವನೆಯಡಿ ವಿದ್ಯಾರ್ಥಿಗಳನ್ನು ರೂಪಿಸಲಾಗುತ್ತಿದೆ ಎಂದು ಹೇಳಿದರು.
ವೇದಿಕೆಯಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ರಾಜಶ್ರೀ ಎಸ್. ನಟ್ಟೋಜ, ಆಡಳಿತ ಮಂಡಳಿ ಸದಸ್ಯರಾದ ವಿಶ್ರಾಂತ ಪ್ರಾಚಾರ್ಯ ಡಾ.ಎಚ್.ಮಾಧವ ಭಟ್, ಬಾಲಕೃಷ್ಣ ಬೋರ್ಕರ್, ಬಪ್ಪಳಿಗೆ ಹಾಗೂ ನೆಲ್ಲಿಕಟ್ಟೆ ಸಂಸ್ಥೆಗಳ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರುಗಳಾದ ಅವಿನಾಶ ಕೊಡೆಂಕಿರಿ ಹಾಗೂ ತಿಲಕ್ ಬಿ.ಸಿ, ಅಂಬಿಕಾ ನೀಟ್ ಅಕಾಡೆಮಿಯ ಪ್ರಾಚಾರ್ಯ ಕಿಶೋರ್ ಭಟ್, ವಿದ್ಯಾರ್ಥಿ ಸಂಘದ ನಾಯಕರಾದ ಅವನಿ ನಾಯಕ್, ಎಚ್.ವಿ.ಭವಿತ್ ಗೌಡ, ರಿಧಿ ಗೌಡ ಹಾಗೂ ಇಂದಿವರ್ ಪಿ.ಪಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಶೈಕ್ಷಣಿಕ ಸಾಧಕರು, ಕ್ರೀಡಾ ಸಾಧಕರು, ವಿದ್ಯಾಭಾರತಿ ಸ್ಪರ್ಧೆಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ದತ್ತಿನಿಧಿ ಬಹುಮಾನಗಳನ್ನು ವಿತರಿಸಲಾಯಿತು.
ವಿದ್ಯಾರ್ಥಿನಿ ಅಮೃತಾ ರಾವ್ ಶಂಖನಾದಗೈದರು. ವಿದ್ಯಾರ್ಥಿನಿ ಶ್ರೀವಿಭಾ ಹಾಗೂ ತಂಡದವರು ಪ್ರಾರ್ಥಿಸಿದರು. ನೆಲ್ಲಿಕಟ್ಟೆ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಪ್ರಾಚಾರ್ಯ ಸತ್ಯಜಿತ್ ಉಪಾಧ್ಯಾಯ ಸ್ವಾಗತಿಸಿ, ಬಪ್ಪಳಿಗೆ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಪ್ರಾಚಾರ್ಯ ಗಣೇಶ್ ಪ್ರಸಾದ್ ಡಿ.ಎಸ್. ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ನೆಲ್ಲಿಕಟ್ಟೆ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಪ್ರಾಚಾರ್ಯ ಸತ್ಯಜಿತ್ ಉಪಾಧ್ಯಾಯ ಅವರಿಂದ ವಿಡಿಯೋ ಪ್ರಾತ್ಯಕ್ಷಿಕೆ ಸಹಿತ ವರದಿ ವಾಚನ ನಡೆಯಿತು. ವಿದ್ಯಾರ್ಥಿನಿಯರಾದ ಸೋನಾ ನಾರ್ಕೋಡ್ ಹಾಗೂ ಉರ್ಷಿತಾ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿನಿಯರಾದ ಆನ್ಯಾ ಹಾಗೂ ಚಿನ್ಮಯೋ ಶೆಟ್ಟಿ ಅತಿಥಿ ಪರಿಚಯ ನಡೆಸಿಕೊಟ್ಟರು.
ಬಿಗ್ ನ್ಯೂಸ್
Golithottu-ಗೋಳಿತ್ತೊಟ್ಟು: ತೋಡಿನ ನೀರಿನಲ್ಲಿ ಮೀನುಗಳ ಮಾರಣಹೋಮ; ತನಿಖೆಗೆ ಸ್ಥಳೀಯರ ಆಗ್ರಹ
ಮಂಗಳೂರು–ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಗೋಳಿತ್ತೊಟ್ಟು ಸಮೀಪದ ಕಾಂಚನ ಕ್ರಾಸ್ ಬಳಿಯ ಹೆದ್ದಾರಿ ಬದಿಯ ತೋಡಿನಲ್ಲಿ ಮೀನುಗಳು ಸತ್ತು ಬಿದ್ದಿರುವ ಘಟನೆ ರವಿವಾರ ಬೆಳಕಿಗೆ ಬಂದಿದೆ. ಮೀನುಗಳ ಸಾವಿಗೆ ನಿಖರ ಕಾರಣವೇನು ಎಂಬುದನ್ನು ಪತ್ತೆಹಚ್ಚಲು ಸಂಬಂಧಪಟ್ಟ ಅಧಿಕಾರಿಗಳು ತನಿಖೆ ನಡೆಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಪುತ್ತೂರು, ಅ.11: ಮಂಗಳೂರು–ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಗೋಳಿತ್ತೊಟ್ಟು ಸಮೀಪದ ಕಾಂಚನ ಕ್ರಾಸ್ ಬಳಿಯ ಹೆದ್ದಾರಿ ಬದಿಯ ತೋಡಿನಲ್ಲಿ ಮೀನುಗಳು ಸತ್ತು ಬಿದ್ದಿರುವ ಘಟನೆ ರವಿವಾರ ಬೆಳಕಿಗೆ ಬಂದಿದೆ. ಮೀನುಗಳ ಸಾವಿಗೆ ನಿಖರ ಕಾರಣವೇನು ಎಂಬುದನ್ನು ಪತ್ತೆಹಚ್ಚಲು ಸಂಬಂಧಪಟ್ಟ ಅಧಿಕಾರಿಗಳು ತನಿಖೆ ನಡೆಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಉಪ್ಪಿನಂಗಡಿಯಿಂದ ನೆಲ್ಯಾಡಿ ಕಡೆಗೆ ಸುಮಾರು 8 ಕಿ.ಮೀ. ದೂರದಲ್ಲಿರುವ ಕಾಂಚನ ಕ್ರಾಸ್ ಸಮೀಪದ ತೋಡಿನ ನೀರಿನಲ್ಲಿ ಸಣ್ಣಪುಟ್ಟ ಮೀನುಗಳು ಏಕಾಏಕಿ ಸತ್ತು ಬಿದ್ದಿರುವುದು ಕಂಡುಬಂದಿದೆ. ತೋಡಿನಲ್ಲಿ ಸಾಕಷ್ಟು ದೂರದವರೆಗೆ ಮೀನುಗಳು ಸತ್ತಿರುವುದು ಸ್ಥಳೀಯರು ಚಿತ್ರೀಕರಿಸಿದ ವಿಡಿಯೋದಲ್ಲಿ ಕಾಣಿಸಿಕೊಂಡಿದೆ.
ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿದ್ದು, ಘಟನೆ ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ.
ಮೀನುಗಳ ಸಾವಿಗೆ ಯಾರಾದರೂ ರಾಸಾಯನಿಕ ಬಳಕೆ ಮಾಡಿರುವುದು ಕಾರಣವೇ ಅಥವಾ ನೀರಿನಲ್ಲಿ ವಿಷಕಾರಿ ಅಂಶ ಬೆರೆತಿರುವುದರಿಂದ ಈ ಘಟನೆ ಸಂಭವಿಸಿದೆಯೇ ಎಂಬ ಅನುಮಾನಗಳು ವ್ಯಕ್ತವಾಗಿವೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ನೀರಿನ ಮಾದರಿಯನ್ನು ಪರೀಕ್ಷಿಸುವ ಮೂಲಕ ಸಾವಿನ ನಿಖರ ಕಾರಣವನ್ನು ಪತ್ತೆಹಚ್ಚಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಬಿಗ್ ನ್ಯೂಸ್
Puttur-ಪುತ್ತೂರು : ಶ್ರೀಮಹಾಲಿಂಗೇಶ್ವರ ದೇವಸ್ಥಾನದ ಬಳಿಯ ಒಳಚರಂಡಿ ಕಾಮಗಾರಿ ಟೆಂಡರ್ ಸ್ಥಗಿತಗೊಳಿಸಿ : ನಗರಸಭೆಗೆ ಮನವಿ
ದೇವಸ್ಥಾನದ ಜಮೀನಿನಲ್ಲಿ ರಸ್ತೆ ನಿರ್ಮಾಣಕ್ಕೆ ಅನುಮತಿ ದೊರೆಯದ ಹಿನ್ನೆಲೆಯಲ್ಲಿ, ನೂತನ ರಸ್ತೆಗೆ ಪೂರಕವಾದ ಒಳಚರಂಡಿ ಕಾಮಗಾರಿಯ ಟೆಂಡರ್ ಪ್ರಕ್ರಿಯೆ ಸ್ಥಗಿತಗೊಳಿಸುವಂತೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಂರಕ್ಷಣಾ ವೇದಿಕೆ ನಗರಸಭೆಗೆ ಮನವಿ ಸಲ್ಲಿಸಿದೆ.
ಪುತ್ತೂರು: ದೇವಸ್ಥಾನದ ಜಮೀನಿನಲ್ಲಿ ರಸ್ತೆ ನಿರ್ಮಾಣಕ್ಕೆ ಅನುಮತಿ ದೊರೆಯದ ಹಿನ್ನೆಲೆಯಲ್ಲಿ, ನೂತನ ರಸ್ತೆಗೆ ಪೂರಕವಾದ ಒಳಚರಂಡಿ ಕಾಮಗಾರಿಯ ಟೆಂಡರ್ ಪ್ರಕ್ರಿಯೆ ಸ್ಥಗಿತಗೊಳಿಸುವಂತೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಂರಕ್ಷಣಾ ವೇದಿಕೆ ನಗರಸಭೆಗೆ ಮನವಿ ಸಲ್ಲಿಸಿದೆ.
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಉತ್ತರ ಭಾಗದಲ್ಲಿ ಪೂರ್ವ-ಪಶ್ಚಿಮ ದಿಕ್ಕಿನಲ್ಲಿ 30 ಅಡಿ ಅಗಲ ಹಾಗೂ ಸುಮಾರು 1,000 ಮೀಟರ್ ಉದ್ದದ ಸಾರ್ವಜನಿಕ ರಸ್ತೆ ನಿರ್ಮಿಸುವ ಯೋಜನೆಗೆ ಸಂಬಂಧಿಸಿ ಭಕ್ತರು ಕರ್ನಾಟಕ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.
ಈ ಅರ್ಜಿಯ ವಿಚಾರವಾಗಿ ಸೆ.10ರಂದು ನೀಡಿದ ಆದೇಶದಲ್ಲಿ, ಅರ್ಜಿದಾರರ ಆಕ್ಷೇಪಗಳನ್ನು ಆಲಿಸಿ ನಿಯಮಾನುಸಾರ ವಿಚಾರಣೆ ನಡೆಸಿ ಮುಂದಿನ ಆದೇಶ ಹೊರಡಿಸುವಂತೆ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿಗಳ ಇಲಾಖೆ ಆಯುಕ್ತರಿಗೆ ನ್ಯಾಯಾಲಯ ನಿರ್ದೇಶನ ನೀಡಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ರಸ್ತೆ ನಿರ್ಮಾಣಕ್ಕೆ ಇಲಾಖೆಯ ಆಯುಕ್ತರು ದೇವಸ್ಥಾನದ ಸಮಿತಿ ಅಥವಾ ಕಾರ್ಯನಿರ್ವಹಣಾಧಿಕಾರಿಗೆ ಈವರೆಗೆ ಅನುಮತಿ ನೀಡಿಲ್ಲ. ಆದರೂ, ದೇವಸ್ಥಾನದ ಬಳಿಯ ಹಿಂದಿನ ಗಣೇಶ್ ಪ್ರಸಾದ್ ಹೋಟೆಲ್‌ನಿಂದ ಮಡಿವಾಳಕಟ್ಟೆಯವರೆಗಿನ ನೂತನ ಕಾಂಕ್ರೀಟ್ ರಸ್ತೆಗೆ ಪೂರಕವಾಗಿ ನಿರ್ವಾತ ತಂತ್ರಜ್ಞಾನದಲ್ಲಿ ಒಳಚರಂಡಿ ನಿರ್ಮಾಣ ಕಾಮಗಾರಿಗೆ ನಗರಸಭೆ ಟೆಂಡರ್ ಪ್ರಕಟಿಸಿದೆ ಎಂದು ವೇದಿಕೆ ಆಕ್ಷೇಪ ವ್ಯಕ್ತಪಡಿಸಿದೆ.
ದೇವಸ್ಥಾನದ ಜಮೀನಿನಲ್ಲಿ ಸಾರ್ವಜನಿಕ ರಸ್ತೆ ನಿರ್ಮಿಸಲು ಇಲಾಖೆಯ ಆಯುಕ್ತರ ಅನುಮತಿ ಕಡ್ಡಾಯವಾಗಿದ್ದು, ಈ ಸಂಬಂಧ ಭಕ್ತರ ಆಕ್ಷೇಪಗಳು ಹಾಗೂ ನ್ಯಾಯಾಲಯದ ನಿರ್ದೇಶನಗಳು ಇರುವಾಗ ಟೆಂಡರ್ ಪ್ರಕ್ರಿಯೆ ಮುಂದುವರಿಸುವುದು ಸರಿಯಲ್ಲ ಎಂದು ಮನವಿಯಲ್ಲಿ ಹೇಳಲಾಗಿದೆ.
ರಸ್ತೆ ನಿರ್ಮಾಣದ ಕುರಿತ ಸಾರ್ವಜನಿಕ ದೂರು ಮತ್ತು ಆಕ್ಷೇಪಗಳ ವಿಚಾರಣೆ ಇಲಾಖೆಯ ಆಯುಕ್ತರ ಮುಂದೆ ಇತ್ಯರ್ಥವಾಗುವವರೆಗೆ ಒಳಚರಂಡಿ ಕಾಮಗಾರಿಯ ಟೆಂಡರ್ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಬೇಕು ಎಂದು ದೇವಸ್ಥಾನದ ಸಂರಕ್ಷಣಾ ವೇದಿಕೆ ಪುತ್ತೂರು ನಗರಸಭೆ ಪೌರಾಯುಕ್ತರನ್ನು ಒತ್ತಾಯಿಸಿದೆ. ನ್ಯಾಯಾಲಯದ ನಿರ್ದೇಶನ ಉಲ್ಲಂಘಿಸಿ ಕಾಮಗಾರಿ ಮುಂದುವರಿಸಿದರೆ ಈ ವಿಷಯವನ್ನು ನ್ಯಾಯಾಲಯದ ಗಮನಕ್ಕೆ ತರಲಾಗುವುದು ಎಂದೂ ಎಚ್ಚರಿಸಿದೆ.
-
ಮಂಗಳೂರು19 hours agoMangalore-ಮಂಗಳೂರು: ಅನೈತಿಕ ಸಂಬಂಧ ಶಂಕೆ; ಪತ್ನಿಯನ್ನು ಚೂರಿಯಿಂದ ಇರಿದು ಕೊಂದ ಪತಿ
-
ಬಿಗ್ ನ್ಯೂಸ್20 hours agoGolithottu-ಗೋಳಿತ್ತೊಟ್ಟು: ತೋಡಿನ ನೀರಿನಲ್ಲಿ ಮೀನುಗಳ ಮಾರಣಹೋಮ; ತನಿಖೆಗೆ ಸ್ಥಳೀಯರ ಆಗ್ರಹ
-
ಸುಳ್ಯ23 hours agoSullia-ಸುಳ್ಯ: ಕಳ್ಳತನಕ್ಕೆ ಬಂದವನು ಮಕ್ಕಳನ್ನು ಕಂಡು ಪರಾರಿ; ಕೇರಳ ಮೂಲದ ಆರೋಪಿ ಬಂಧನ
-
ಅಪರಾಧ23 hours agoUdupi-ಉಡುಪಿ: ಹೇಮಂತ್ ಪೂಜಾರಿ ಬೇಟೆಗೆ ಪೊಲೀಸರ ಬಲೆ; ಗ್ಯಾಂಗ್ಸ್ಟರ್ ಅನುಜ್ ಪಾಟೀಲ್ ವಶಕ್ಕೆ..!
-
Uncategorized16 hours ago
Digitel Arrest ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ಪುತ್ತೂರಿನ ವ್ಯಕ್ತಿಗೆ ₹1.31 ಕೋಟಿ ವಂಚನೆ
-
ಅಂತರ ರಾಜ್ಯ23 hours agoElon Musk-ಅಂಬಾನಿ ಮತ್ತು ಅವರ ಬೆಂಬಲಿಗರ ವಾದ ಹಾಸ್ಯಾಸ್ಪದವಾಗಿದೆ : ಸ್ಟಾರ್ ಲಿಂಕ್ ಕುರಿತು ಇಲಾನ್ ಮಸ್ಕ್
-
ಮಂಗಳೂರು20 hours agoABVP protest-ಮಂಗಳೂರಿನ ಆಗ್ನೆಸ್ ಕಾಲೇಜಿನಲ್ಲಿ ದಸರಾ ರಜೆಯಲ್ಲೂ ಪರೀಕ್ಷೆ; ಎಬಿವಿಪಿ ಪ್ರತಿಭಟನೆ ವೇಳೆ ನೂಕಾಟ; ವಿದ್ಯಾರ್ಥಿನಿಯರನ್ನು ತಳ್ಳಿದ ಪೊಲೀಸರ ವಿರುದ್ಧ ಆಕ್ರೋಶ
-
ಕ್ರೀಡೆ19 hours agoMCC:ಎಂಸಿಸಿಯಿಂದ ಕ್ರಿಕೆಟ್ ನಿಯಮಗಳ ಪರಿಷ್ಕರಣೆ: ಅ.1ರಿಂದ ಹೊಸ ಬದಲಾವಣೆಗಳು ಜಾರಿ


















