Connect with us

ದಕ್ಷಿಣ ಕನ್ನಡ

ಪುತ್ತೂರು : ಕುಡಿದು ಟೈಟಾಗಿದ್ದ ಚಾಲಕ ವಿವೇಕಾನಂದ ವಿದ್ಯಾ ಸಂಸ್ಥೆಯ ಬಸ್ಸನ್ನು ಯದ್ವಾತದ್ವಾ ಚಲಾಯಿಸಿ ಸರಣಿ ಅಪಘಾತ – ಮಾಜಿ ಶಾಸಕಿಯ ಪುತ್ರನ ಕಾರು ಸೇರಿ 3 ವಾಹನಕ್ಕೆ ಢಿಕ್ಕಿ – ಪಾನಮತ್ತ ಚಲಾಯಿಸುತ್ತಿದ್ದ ಬಸ್ಸಿನಲ್ಲಿದ್ದರು ವಿದ್ಯಾರ್ಥಿಗಳು..̆

Published

on



Ad Widget

Ad Widget

Ad Widget

Ad Widget

ಪುತ್ತೂರು:   ಪುತ್ತೂರು ನಗರದ ಬೈಪಾಸ್ಸಿನಲ್ಲಿರುವ  ತೆಂಕಿಲದ ವಿವೇಕಾನಂದ ಶಾಲೆ ಬಳಿ ಪಾನಮತ್ತ ಚಾಲಕನೊಬ್ಬ ಶಾಲಾ ಬಸ್ಸನ್ನು ಯದ್ವಾತದ್ವಾ  ಚಲಾಯಿಸಿ ಸರಣಿ ಅಪಘಾತ ನಡೆಸಿದ ಘಟನೆ ಬುಧವಾರ ಮಧ್ಯಾಹ್ನ ನಡೆದಿದೆ. ಅಪಘಾತದಲ್ಲಿ ಒಟ್ಟು 3 ವಾಹನಗಳಿಗೆ ಹಾನಿಯಾಗಿರುವುದಾಗಿ ತಿಳಿದು ಬಂದಿದ್ದು ಇದರಲ್ಲಿ ಮಾಜಿ ಶಾಸಕಿ  ಶಕುಂತಳಾ ಟಿ ಶೆಟ್ಟಿಯವರ ಪುತ್ರ ಬಿಪಿನ್‌ ರವರ ಒಂದು ಕಾರು ಸೇರಿದೆ.

Ad Widget

Ad Widget

Ad Widget

Ad Widget

ತೆಂಕಿಲದಲ್ಲಿ ವಿವೇಕಾನಂದ ವಿದ್ಯಾಸಂಸ್ಥೆಗೆ ಸೇರಿದ ಎರಡು ಶಾಲೆಗಳಿದ್ದು ಅದರಲ್ಲಿ ಒಂದು ಶಾಲೆಗೆ ಸೇರಿದ ಬಸ್ಸು ಅಪಘಾತ ನಡೆಸಿದ ಬಸ್ಸು ಎಂದು ಸ್ಥಳೀಯರು ತಿಳಿಸಿದ್ದಾರೆ.  ಸಂಚಾರಿ ಪೊಲೀಸರು ಕೂಡ ಅದು  ವಿವೇಕಾನಂದ ವಿದ್ಯಾಸಂಸ್ಥೆಗೆ ಸೇರಿದ ಬಸ್ಸು ಎಂದು ಖಚಿತ ಪಡಿಸಿದ್ದಾರೆ. ಈ ಬಸ್ಸನ್ನು ಬೆಳ್ತಂಗಡಿ ಮೊಗ್ರು ಮೂಲದ ಜನಾರ್ದನ ಎಂಬವರು ಚಲಾಯಿಸುತ್ತಿದ್ದರು. ಬಸ್ಸಿನಲ್ಲಿ ಹಲವು ಮಕ್ಕಳು ಪ್ರಯಾಣಿಸುತ್ತಿದ್ದು ಅದೇ ಬಸ್ಸಿನ ಮಾಲಕ ಪಾನಮತ್ತನಾಗಿದದ್ದು ಆತಂಕಕಾರಿ ವಿಚಾರವಾಗಿದೆ

Ad Widget

Ad Widget

Ad Widget alt="Ad Widget"/>

Ad Widget

ಸರಿ ಸುಮಾರು 4 ಗಂಟೆಯ ಸುಮಾರಿಗೆ ಅಪಘಾತ ನಡೆದಿದೆ. ಮೊದಲಿಗೆ ಕಾರು  ಬಜರಂಗ ದಳದ ಮಾಜಿ ಮುಖಂಡ ಹಾಗೂ ತಾಲೂಕು ಪಂಚಾಯತ್‌ ಮಾಜಿ ಸದಸ್ಯ ಲಕ್ಷ್ಮಣ್‌ ಗೌಡ ಬೆಳ್ಳಿಪ್ಪಾಡಿಯವರ ಅಲ್ಟೋ ಕಾರಿಗೆ ಢಿಕ್ಕಿ ಹೊಡೆದಿದೆ ಇದರಿಂದ ಕಾರಿನ ಹಿಬ್ಬಂದಿ ಜಖಂ ಆಗಿದೆ.

Ad Widget

Ad Widget <> Ad Widget

 ಅದೇ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ತನ್ನಿಬ್ಬರು ಮಕ್ಕಳನ್ನು ಕರೆದುಕೊಂಡು ಹೋಗಲು ಅವರು ರಸ್ತೆಗಿಂತ ತುಸು ದೂರದಲ್ಲಿ ಶಾಲೆಯ ಸಮೀಪ ಕಾರು  ನಿಲ್ಲಿಸಿದ್ದರು. ಮಕ್ಕಳು ಕಾರಿಗೆ ಹತ್ತಿದ ಕೆಲವೇ ಕ್ಷಣದಲ್ಲಿ ಶಾಲಾ ಬಸ್ಸು ಬಂದು ಕಾರಿನ ಹಿಬ್ಬಂದಿಗೆ ಢಿಕ್ಕಿ ಹೊಡೆದಿದೆ. ಮಕ್ಕಳು ಕಾರಿಗೆ ಹತ್ತಲು ಬಂದ ದಾರಿಯಲ್ಲೆ ಬಂದ ಬಸ್ಸು ಢಿಕ್ಕಿ ಹೊಡೆದಿದ್ದು , ಬಸ್ಸು ಕೆಲವೇ ಸೆಕೆಂಡ್‌ ಲೇಟಾಗಿ ಬಂದಿದರಿಂದ ಮಕ್ಕಳು ಆಪಾಯದಿಂದ ಪಾರಾದರು ಎಂದು ಸ್ಥಳೀಯರು ತಿಳಿಸಿದ್ದಾರೆ.



Ad Widget

ಅಪಘಾತ ನಡೆದ ಬಳಿಕವು ಬಸ್ಸನ್ನು ನಿಲ್ಲಿಸದ ಚಾಲಕ  ಯದ್ವಾತದ್ವಾ ಬಸ್ಸು ಚಲಾಯಿಸಿದ್ದು, ಆಶ್ಮಿ ಕಂಫರ್ಟ್ಸ್‌ ನಿಂದ ಬರುತ್ತಿದ್ದ  ಮಾಜಿ ಶಾಸಕಿ ಶಕುಂತಳಾ ಟಿ ಶೆಟ್ಟಿಯವರ ಪುತ್ರ ಬಿಪಿನ್‌ ಚಲಾಯಿಸುತ್ತಿದ್ದ ಹೋಂಡಾ ಸಿಟಿ  ಕಾರಿಗೆ ಢಿಕ್ಕಿ ಹೊಡೆದಿದ್ದಾನೆ. ಕಾರನ್ನು ಉಜ್ಜಿಕೊಂಡು ಬಸ್ಸು ಅಲ್ಲಿಂದಲೂ ಪರಾರಿಯಾಗಿದೆ . ಬಸ್ಸು ಗುದ್ದಿದ ರಭಸಕ್ಕೆ ಕಾರು ಕೆಲವು ಅಡಿ ಮೇಲಕ್ಕೆ ಹಾರಿ ಕೆಳಗೆ ಬಿದ್ದಿದ್ದು ಈ ವೇಳೆ ಅದರ ಎರಡು ಟಯರ್‌ ಒಡೆದು ಹೋಗಿದೆ. ಬಸ್ಸಿನಲ್ಲಿ ಮಕ್ಕಳ ಸಹಿತ ನಾಲ್ವರು ಪ್ರಯಾಣಿಸುತ್ತಿದ್ದು ಎಲ್ಲರು ಅಪಾಯದಿಂದ ಪಾರಾಗಿದ್ದಾರೆ.

Ad Widget

Ad Widget

 

ಬಳಿಕವು  ಕುಡಿದು ಚಿತ್ತಾಗಿದ್ದ ಚಾಲಕ ಬಸ್ಸನ್ನು ಮಾಣಿ ಮೈಸೂರು ಹೆದ್ದಾರಿಯಲ್ಲಿ  ಯದ್ವಾತದ್ವಾ ಹಾರಿಸಿಕೊಂಡು ಮುರದತ್ತ ಹೋಗಿದ್ದಾನೆ . ಈ ವೇಳೆ ರಸ್ತೆಯಲ್ಲಿದ್ದ ಇತರ ವಾಹನದವರು ಹೌಹಾರಿದ್ದು ಪಕ್ಕಕ್ಕೆ ಸರಿದು ಬಸ್ಸು ಹೋಗಲು ಅನುವು ಮಾಡಿಕೊಟ್ಟು ಜೀವ  ಉಳಿಸಿಕೊಂಡಿದ್ದಾರೆ.  ಬಸ್ಸು ಮುರದ ಸಮೀಪವು ವಾಹನವೊಂದಕ್ಕೆ  ಢಿಕ್ಕಿ ಹೊಡೆದು ಪರಾರಿಯಾಗಲು ಯತ್ನಿಸಿದ್ದು ಈ ವೇಳೆ ಸ್ಥಳೀಯರು ಬಸ್ಸನ್ನು ತಡೆದು ಚಾಲಕನನ್ನು ಹಿಡಿದು ಸಂಚಾರಿಗೆ ಪೊಲೀಸರಿಗೆ ಒಪ್ಪಿಸಿದ್ದಾರೆ.

ಬಸ್ ನಲ್ಲಿ ಮಕ್ಕಳಿದ್ದ ಕಾರಣ  ಅವರನ್ನು ಮನೆಗೆ ಬಿಡುವ ನಿಟ್ಟಿನಲ್ಲಿ ಪೊಲೀಸರು ಬಸ್ಸನ್ನು ಅದೇ ವಿದ್ಯಾಸಂಸ್ಥೆಯ ಬೇರೆ ಚಾಲಕನ ಕೈಯಲ್ಲಿ ಕೊಟ್ಟು  ಕಳುಹಿಸಿದ್ದಾರೆ ಎಂದು ತಿಳಿದು ಬಂದಿದೆ.  ಬಸ್ಸು  ಶಾಲೆ ಬಿಡುವ ಸಮಯಕ್ಕಿಂತ ಕೆಲ ಹೊತ್ತು ತಡವಾಗಿ ಆಗಮಿಸಿದ್ದರಿಂದ  ರಸ್ತೆಯಲ್ಲಿ ವಿದ್ಯಾರ್ಥಿಗಳು ಇರಲಿಲ್ಲ. ಹೀಗಾಗಿ  ಅಪಾಯ ತಪ್ಪಿದೆ ಎಂದು ಶಾಸಕಿ ಶಕುಂತಳಾ ಟಿ. ಶೆಟ್ಟಿ ಪ್ರತಿಕ್ರಿಯೆ ನೀಡಿದ್ದಾರೆ.

ಅಪಘಾತಕ್ಕಿಡಾದ ಅಲ್ಟೋ ಕಾರು ಹಾಗೂ ಹೋಂಡಾ ಸಿಟಿ ಕಾರನ್ನು ಸಂಚಾರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಶಾಲಾ ಬಸ್ಸನ್ನು ಇನ್ನಷ್ಟೆ ವಶಕ್ಕೆ ಪಡೆಯಬೇಕಿದೆ ಎಂದು ತಿಳಿದು ಬಂದಿದೆ.

ಅಪಘಾತ ನಡೆಯುವುದಕ್ಕಿಂದ ಕೆಲವು ನಿಮಿಷ ಮೊದಲು ಅಲ್ಲಿ ಶಾಲೆ ಬಿಟ್ಟಿದರಿಂದ ಅಪಘಾತ ನಡೆದ ಸ್ಥಳದ ರಸ್ತೆ ಇಕ್ಕೆಲ್ಲಗಳಲ್ಲಿ  ಶಾಲಾ ಮಕ್ಕಳಿಂದ ತುಂಬಿ ತುಳುಕಿತು. ಸುದೈವಶಾತ್‌ ಬಸ್ಸು ಬಂದ ಹೊತ್ತಿನಲ್ಲಿ ಅಲ್ಲಿ ವಿದ್ಯಾರ್ಥಿಗಳು ಯಾರು ಇರಲಿಲ್ಲ. ಹೀಗಾಗಿ ಸಂಭಾವ್ಯ ಅನಾಹುತವೊಂದು ತಪ್ಪಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಆದರೇ ಪ್ರತಿಷ್ಟಿತ ವಿದ್ಯಾಸಂಸ್ಥೆಯೊಂದು ತನ್ನ ಶಾಲಾ ವಾಹನವನ್ನು ಪಾನಮತ್ತನ ಕೈಯಲ್ಲಿ ಕೊಟ್ಟಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸ ಒದಗಿದೆ.  

Ad Widget
Click to comment

Leave a Reply

ಮಂಗಳೂರು

D.K. Shivakumar-ಅ.15ರಂದು ಮಂಗಳೂರು, ಉಡುಪಿ ಜಿಲ್ಲೆಗೆ ಡಿ.ಕೆ. ಶಿವಕುಮಾರ್ ಭೇಟಿ

Published

on



Ad Widget

Ad Widget

Ad Widget

Ad Widget

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅಕ್ಟೋಬರ್ 15ರ ಗುರುವಾರ ಮಂಗಳೂರು ಹಾಗೂ ಉಡುಪಿ ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ. ಗುರುವಾರ ಮಧ್ಯಾಹ್ನ 4.10ಕ್ಕೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಲಿರುವ ಅವರು, ಸಂಜೆ 4.40ಕ್ಕೆ ಕಾಪು ಉಚ್ಚಿಲದಲ್ಲಿ ನಡೆಯುವ ದಸರಾ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ, ಮಹಿಳಾ ದಸರಾವನ್ನು ಉದ್ಘಾಟಿಸಲಿದ್ದಾರೆ.

Ad Widget

Ad Widget

Ad Widget

Ad Widget

ಮಂಗಳೂರು: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅಕ್ಟೋಬರ್ 15ರ ಗುರುವಾರ ಮಂಗಳೂರು ಹಾಗೂ ಉಡುಪಿ ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ.

Ad Widget

Ad Widget

Ad Widget alt="Ad Widget"/>

Ad Widget

ಗುರುವಾರ ಮಧ್ಯಾಹ್ನ 4.10ಕ್ಕೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಲಿರುವ ಅವರು, ಸಂಜೆ 4.40ಕ್ಕೆ ಕಾಪು ಉಚ್ಚಿಲದಲ್ಲಿ ನಡೆಯುವ ದಸರಾ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ, ಮಹಿಳಾ ದಸರಾವನ್ನು ಉದ್ಘಾಟಿಸಲಿದ್ದಾರೆ.

Ad Widget

Ad Widget <> Ad Widget

ಬಳಿಕ ಸಂಜೆ 6.30ಕ್ಕೆ ಮಂಗಳೂರಿನಲ್ಲಿ ನಡೆಯುವ ಮಂಗಳೂರು ದಸರಾ ನವರಾತ್ರಿ ಮಹೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ. ರಾತ್ರಿ 8 ಗಂಟೆಗೆ ಮಂಗಳೂರು ವಿಮಾನ ನಿಲ್ದಾಣಕ್ಕೆ ತೆರಳಲಿರುವ ಅವರು, ಅಲ್ಲಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಲಿದ್ದಾರೆ ಎಂದು ತಿಳಿದುಬಂದಿದೆ.



Ad Widget
Ad Widget
Continue Reading

ಬಿಗ್ ನ್ಯೂಸ್

G.L. Acharya Jewellers-ವಿಜಯದಶಮಿ ಪ್ರಯುಕ್ತ ಜಿ.ಎಲ್.ಆಚಾರ್ಯ ಜ್ಯುವೆಲ್ಲರ್ಸ್‌ನಿಂದ ವಿಶೇಷ ಕೊಡುಗೆ

Published

on



Ad Widget

Ad Widget

Ad Widget

Ad Widget

ವಿಜಯದಶಮಿ ಹಬ್ಬದ ಸಂಭ್ರಮವನ್ನು ಮತ್ತಷ್ಟು ವಿಶೇಷಗೊಳಿಸುವ ಉದ್ದೇಶದಿಂದ ಪುತ್ತೂರಿನ ಪ್ರತಿಷ್ಠಿತ ಚಿನ್ನಾಭರಣ ಸಂಸ್ಥೆಯಾದ ಜಿ.ಎಲ್.ಆಚಾರ್ಯ ಜ್ಯುವೆಲ್ಲರ್ಸ್ ಗ್ರಾಹಕರಿಗಾಗಿ ಚಿನ್ನಾಭರಣಗಳ ಮೇಕಿಂಗ್ ಚಾರ್ಜ್ ಶುಲ್ಕದ ಮೇಲೆ ಗ್ರಾಹಕರಿಗೆ ಗರಿಷ್ಠ ರೂ.600ವರೆಗೆ ರಿಯಾಯಿತಿ ನೀಡಲಾಗುತ್ತಿದೆ.ವಜ್ರಾಭರಣಗಳ ಮೇಲೆ ಪ್ರತಿ ಕ್ಯಾರೆಟ್ಗೆ ಫ್ಲಾಟ್ ರೂ.8000 ರಿಯಾಯಿತಿ ಹಾಗೂ ಬೆಳ್ಳಿ ಆಭರಣಗಳ ಮೇಲೆ ಪ್ರತಿ ಕೆ.ಜಿಗೆ ಫ್ಲಾಟ್ ರೂ.8000 ರಿಯಾಯಿತಿ ನೀಡಲಾಗುತ್ತಿದೆ ಎಂದು ಸಂಸ್ಥೆ ಪ್ರಕಟಿಸಿದೆ.

Ad Widget

Ad Widget

Ad Widget

Ad Widget

ವಿಜಯದಶಮಿ ಹಬ್ಬದ ಸಂಭ್ರಮವನ್ನು ಮತ್ತಷ್ಟು ವಿಶೇಷಗೊಳಿಸುವ ಉದ್ದೇಶದಿಂದ ಪುತ್ತೂರಿನ ಪ್ರತಿಷ್ಠಿತ ಚಿನ್ನಾಭರಣ ಸಂಸ್ಥೆಯಾದ ಜಿ.ಎಲ್.ಆಚಾರ್ಯ ಜ್ಯುವೆಲ್ಲರ್ಸ್ ಗ್ರಾಹಕರಿಗಾಗಿ ಚಿನ್ನಾಭರಣಗಳ ಮೇಕಿಂಗ್ ಚಾರ್ಜ್ ಶುಲ್ಕದ ಮೇಲೆ ಗ್ರಾಹಕರಿಗೆ ಗರಿಷ್ಠ ರೂ.600ವರೆಗೆ ರಿಯಾಯಿತಿ ನೀಡಲಾಗುತ್ತಿದೆ.ವಜ್ರಾಭರಣಗಳ ಮೇಲೆ ಪ್ರತಿ ಕ್ಯಾರೆಟ್ಗೆ ಫ್ಲಾಟ್ ರೂ.8000 ರಿಯಾಯಿತಿ ಹಾಗೂ ಬೆಳ್ಳಿ ಆಭರಣಗಳ ಮೇಲೆ ಪ್ರತಿ ಕೆ.ಜಿಗೆ ಫ್ಲಾಟ್ ರೂ.8000 ರಿಯಾಯಿತಿ ನೀಡಲಾಗುತ್ತಿದೆ ಎಂದು ಸಂಸ್ಥೆ ಪ್ರಕಟಿಸಿದೆ.

Ad Widget

Ad Widget

Ad Widget alt="Ad Widget"/>

Ad Widget

ವಜ್ರಾಭರಣಗಳನ್ನು ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕ ಬೆಲೆಗಳಲ್ಲೇ ನೀಡುವುದರ ಜೊತೆಗೆ, ಪ್ರತಿ ಕ್ಯಾರೆಟ್ ಗೆ ರೂ.8000 ವಿಶೇಷ ರಿಯಾಯಿತಿ ನೀಡಲಾಗುವುದು ವಿಜಯದಶಮಿ ಹಬ್ಬದ ಸಂದರ್ಭದಲ್ಲಿ ಆಭರಣ ಖರೀದಿಗೆ ಈ ಕೊಡುಗೆ ವಿಶೇಷ ಅವಕಾಶವಾಗಿದೆ ಎಂದು ಸಂಸ್ಥೆ ತಿಳಿಸಿದೆ.

Ad Widget

Ad Widget <> Ad Widget

ಈ ಸಂದರ್ಭದಲ್ಲಿ ಗ್ರಾಹಕರು ಚಿನ್ನದ ಉಳಿತಾಯ ಯೋಜನೆಗೆ ಸೇರ್ಪಡೆಯಾಗುವ ಅವಕಾಶವೂ ಇದೆ.ಯೋಜನೆಗೆ ಸೇರ್ಪಡೆಯಾಗಿ ನಿಗದಿತ ಅವಧಿ ಪೂರ್ಣಗೊಳಿಸಿದ ಬಳಿಕ ಮುಂದಿನ ವರ್ಷ ಇದೇ ಹಬ್ಬದ ಸಂಭ್ರಮದ ಸಮಯದಲ್ಲಿ ಚಿನ್ನಾಭರಣ ಖರೀದಿಸಲು ಅವಕಾಶವಿದ್ದು, ಹಬ್ಬದ ಸಂದರ್ಭದಲ್ಲಿ ಉಳಿತಾಯದೊಂದಿಗೆ ಚಿನ್ನ ಖರೀದಿಸಲು ಗ್ರಾಹಕರಿಗೆ ಅನುಕೂಲ ಕಲ್ಪಿಸಲಾಗಿದೆ.
ಇತರೆ ಮಳಿಗೆಯ ಹಳೆಯ ಚಿನ್ನವನ್ನು 0% ರೇಟ್ ಡಿಡಕ್ಷನ್ನೊಂದಿಗೆ ಎಕ್ಸ್‌ಚೇಂಜ್ ಮಾಡಿಕೊಳ್ಳುವ ಅವಕಾಶವನ್ನು ಕೂಡ ಕಲ್ಪಿಸಲಾಗಿದೆ.



Ad Widget

ವಿಜಯದಶಮಿ ಹಾಗೂ ನವರಾತ್ರಿ ಹಬ್ಬದ ಶುಭ ಸಂದರ್ಭದಲ್ಲಿ ಗ್ರಾಹಕರಿಗಾಗಿ ಆಕರ್ಷಕ ಚಿನ್ನಾಭರಣಗಳ ವೈವಿಧ್ಯಮಯ ಸಂಗ್ರಹವನ್ನು ಸಂಸ್ಥೆ ಸಿದ್ಧಪಡಿಸಿದೆ.ಸಾಂಪ್ರದಾಯಿಕ ವಿನ್ಯಾಸಗಳ ಜೊತೆಗೆ ಆಧುನಿಕ ಶೈಲಿಯ ಆಭರಣಗಳೂ ಲಭ್ಯವಿದ್ದು ಗ್ರಾಹಕರ ವಿವಿಧ ಅಭಿರುಚಿ ಹಾಗೂ ಅಗತ್ಯಗಳಿಗೆ ತಕ್ಕಂತೆ ಹಲವು ವಿನ್ಯಾಸಗಳನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ವಿಜಯದಶಮಿ ಹಬ್ಬದ ಸಂದರ್ಭದಲ್ಲಿ ಗ್ರಾಹಕರಿಗೆ ಹೆಚ್ಚಿನ ಉಳಿತಾಯದ ಅವಕಾಶ ಕಲ್ಪಿಸುವ ಉದ್ದೇಶದಿಂದ ಈ ಕೊಡುಗೆಗಳನ್ನು ನೀಡಲಾಗುತ್ತಿದೆ ಎಂದು ಸಂಸ್ಥೆ ತಿಳಿಸಿದೆ.

Ad Widget

Ad Widget

ಈ ಕೊಡುಗೆ ಚಿನ್ನದ ನಾಣ್ಯಗಳು, ಚಿನ್ನದ ಗಟ್ಟಿಗಳು ಹಾಗೂ ಎಲ್ಲೋ ಟ್ಯಾಗ್ ಹೊಂದಿರುವ ಆಭರಣಗಳಿಗೆ ಅನ್ವಯಿಸುವುದಿಲ್ಲ. ಅಲ್ಲದೆ ಈ ಕೊಡುಗೆಯನ್ನು ಯಾವುದೇ ಚಿನ್ನದ ಉಳಿತಾಯ ಯೋಜನೆ ಅಥವಾ ಇತರ ಯಾವುದೇ ಯೋಜನೆಯೊಂದಿಗೆ ಸಂಯೋಜಿಸಲು ಸಾಧ್ಯವಿಲ್ಲ ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

ಪುತ್ತೂರಿನಲ್ಲಿ ಆರಂಭಗೊಂಡಿರುವ ಜಿ.ಎಲ್.ಆಚಾರ್ಯ ಜ್ಯುವೆಲ್ಲರ್ಸ್ ಸಂಸ್ಥೆಯು ಆರು ದಶಕಗಳಿಗೂ ಹೆಚ್ಚು ಕಾಲ ಗ್ರಾಹಕರ ವಿಶ್ವಾಸವನ್ನು ಗಳಿಸಿಕೊಂಡು -ಮುನ್ನಡೆಯುತ್ತಿದೆ.ಗುಣಮಟ್ಟ,ಸೊಬಗು, ಪಾರದರ್ಶಕತೆ ಹಾಗೂ ಗ್ರಾಹಕರ ಹಿತಕ್ಕೆ ಆದ್ಯತೆ -ನೀಡುತ್ತಾ ಸಂಸ್ಥೆ ತನ್ನ ಸೇವೆಯನ್ನು ಮುಂದುವರಿಸಿಕೊಂಡು ಬರುತ್ತಿದೆ.

Ad Widget
Continue Reading

ಸುಳ್ಯ

ಸಿಜೆಪಿ ಮುಖಂಡರಾದ ಸೌರವ್ ದಾಸ್, ಅಶುತೋಷ್ ರಾಂಕಾ ಮತ್ತು ಅಜಿಂಕ್ಯ ಶಿಂಧೆ ಬಂಧನ, ತಿಹಾರ್ ಜೈಲಿಗೆ ಶಿಫ್ಟ್ ಸಾಧ್ಯತೆ

Published

on



Ad Widget

Ad Widget

Ad Widget

Ad Widget

Ad Widget

Ad Widget

Ad Widget

Ad Widget

Ad Widget

Ad Widget

Ad Widget alt="Ad Widget"/>

Ad Widget

ನವದೆಹಲಿ: ನಿಷೇಧಿತ ಪ್ರದೇಶವಾದ ಜಂತರ್ ಮಂತರ್ ಪ್ರವೇಶಿಸಿ, ಪೊಲೀಸ್ ಬ್ಯಾರಿಕೇಡ್ ಉಲ್ಲಂಘಿಸಿದ ಹಾಗೂ ಸರ್ಕಾರಿ ಅಧಿಕಾರಿಯ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ‘ಕಾಕ್ರೋಚ್ ಜನತಾ ಪಾರ್ಟಿ’ (ಸಿಜೆಪಿ) ಮುಖಂಡರಾದ ಸೌರವ್ ದಾಸ್, ಅಶುತೋಷ್ ರಾಂಕಾ ಮತ್ತು ಅಜಿಂಕ್ಯ ಶಿಂಧೆ ಅವರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.

Ad Widget

Ad Widget <> Ad Widget


ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಸಿಜೆಪಿ ನಾಯಕರು ಮಂಗಳವಾರ ಮುಂಜಾನೆ ಜಂತರ್ ಮಂತರ್ ಬಳಿ ಪ್ರತಿಭಟನೆಗೆ ಯತ್ನಿಸಿದ್ದರು. ಈ ವೇಳೆ ಪೊಲೀಸರು ಅಳವಡಿಸಿದ್ದ ಬ್ಯಾರಿಕೇಡ್‌ಗಳನ್ನು ಭೇದಿಸಿ ಒಳಪ್ರವೇಶಿಸಿದ ಅವರು, ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ ಹಿನ್ನೆಲೆಯಲ್ಲಿ ವಶಕ್ಕೆ ಪಡೆಯಲಾಗಿತ್ತು.



Ad Widget


ಬಂಧಿತ ನಾಯಕರನ್ನು ಇಂದು (ಬುಧವಾರ) ವಿಶೇಷ ಕಾರ್ಯಕಾರಿ ಮ್ಯಾಜಿಸ್ಟ್ರೇಟ್ (ಎಸ್‌ಇಎಂ) ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುತ್ತಿದ್ದು, ಬಳಿಕ ಅವರನ್ನು ತಿಹಾರ್ ಜೈಲಿಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವ ಸಾಧ್ಯತೆಯಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Ad Widget

Ad Widget


ಪೊಲೀಸರ ವಿರುದ್ಧ ಸಿಜೆಪಿ ಆರೋಪ:
ಸಿಜೆಪಿ ಕಾನೂನು ಘಟಕದ ಮುಖ್ಯಸ್ಥೆ ರತ್ನಾ ಸಿಂಗ್ ಅವರು ‘ಎಕ್ಸ್’ (ಟ್ವಿಟರ್) ಮೂಲಕ ಘಟನೆಯ ಬಗ್ಗೆ ಮಾಹಿತಿ ನೀಡಿದ್ದು, ಪೊಲೀಸರ ಕ್ರಮವನ್ನು ತೀವ್ರವಾಗಿ ಖಂಡಿಸಿದ್ದಾರೆ.


“ಜಂತರ್ ಮಂತರ್ ಘಟನೆಗೆ ಸಂಬಂಧಿಸಿದಂತೆ ನಮ್ಮ ನಾಯಕರಾದ ಸೌರವ್ ದಾಸ್, ಅಶುತೋಷ್ ಹಾಗೂ ಅಜಿಂಕ್ಯ ಅವರನ್ನು ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಬಂಧಿಸಲಾಗಿದೆ. ಅವರ ಮೇಲೆ ಅಕ್ರಮ ಪ್ರವೇಶ, ಬಾಂಡ್ ಉಲ್ಲಂಘನೆ ಹಾಗೂ ಕರ್ತವ್ಯಕ್ಕೆ ಅಡ್ಡಿ ಸೇರಿದಂತೆ ವಿವಿಧ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಲಾಗಿದೆ. ತಡರಾತ್ರಿಯವರೆಗೂ ವಕೀಲರನ್ನು ಭೇಟಿ ಮಾಡಲು ಪೊಲೀಸರು ಅವಕಾಶ ನೀಡಿರಲಿಲ್ಲ.

ಮುಂಜಾನೆ 3 ಗಂಟೆ ಸುಮಾರಿಗೆ ಖಾಸಗಿ ವ್ಯಾನ್ ಮೂಲಕ ಅವರನ್ನು ಪಾರ್ಲಿಮೆಂಟ್ ಸ್ಟ್ರೀಟ್ ಠಾಣೆಗೆ ಕರೆತರಲಾಗಿದೆ. ಈ ಎಲ್ಲ ಕಾನೂನುಬಾಹಿರ ಕ್ರಮಗಳ ನಡುವೆಯೂ ನಮ್ಮ ನಾಯಕರ ನೈತಿಕ ಸ್ಥೈರ್ಯ ಕುಗ್ಗಿಲ್ಲ” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಹಿನ್ನೆಲೆ ಏನು?
ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯಲ್ಲಿ ಭಾರಿ ಅಕ್ರಮಗಳು ನಡೆದಿವೆ ಎಂದು ಆರೋಪಿಸಿ ಸಿಜೆಪಿ ಹಾಗೂ ಇತರ ಕೆಲವು ಸಂಘಟನೆಗಳು ದೆಹಲಿಯಲ್ಲಿ ಪ್ರತಿಭಟನೆಗಳನ್ನು ತೀವ್ರಗೊಳಿಸಿವೆ. ಈ ಹಿನ್ನೆಲೆಯಲ್ಲಿ ರಾಜಧಾನಿಯಾದ್ಯಂತ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.


ಕಳೆದ ಅಕ್ಟೋಬರ್ 11ರಂದು ನೂತನ ಆದೇಶ ಹೊರಡಿಸಿದ್ದ ದೆಹಲಿ ಪೊಲೀಸ್ ಕಮಿಷನರ್ ಅನುರಾಗ್ ಕುಮಾರ್ ಅವರು, ಯಾವುದೇ ಧರಣಿ ಮತ್ತು ಪ್ರತಿಭಟನೆಗಳಿಗೆ ಕೇವಲ ರಾಮ್‌ಲೀಲಾ ಮೈದಾನ, ಬುರಾರಿ ಗ್ರೌಂಡ್ ಹಾಗೂ ಸಿಬಿಡಿ ಗ್ರೌಂಡ್‌ಗಳನ್ನು ಮಾತ್ರ ನಿಗದಿಪಡಿಸಿದ್ದರು. ಈ ಆದೇಶದ ಅನ್ವಯ ಜಂತರ್ ಮಂತರ್ ಅನ್ನು ಪ್ರತಿಭಟನಾ ಸ್ಥಳಗಳ ಪಟ್ಟಿಯಿಂದ ಕೈಬಿಡಲಾಗಿದ್ದು, ಅಲ್ಲಿ ಜಮಾವಣೆಯನ್ನು ನಿಷೇಧಿಸಲಾಗಿದೆ. ನಿಷೇಧದ ನಡುವೆಯೂ ಪ್ರತಿಭಟನೆ ನಡೆಸಿದ್ದರಿಂದ ಈ ಬಂಧನ ಕಾರ್ಯಾಚರಣೆ ನಡೆದಿದೆ.

Ad Widget
Continue Reading

ಇಂದಿನ ಟ್ರೆಂಡಿಂಗ್‌ ಸುದ್ದಿಗಳು

error: Content is protected !!

Discover more from Nikhara News | Kannada News Website

Subscribe now to keep reading and get access to the full archive.

Continue reading