ಅಪರಾಧ
Husband Kills Wife: ಪ್ರೀತಿಸಿ ಮದುವೆಯಾಗಿದ್ದ ಜೋಡಿ : ಹೆಂಡತಿ ಕೊಂದು ಪೊಲೀಸರಿಗೆ ಶರಣಾದ ಪತಿ
ವಿಜಯನಗರ: ಪ್ರೀತಿಸಿ ಮದ್ವೆಯಾದ (Love Marriage) ಪತ್ನಿಯನ್ನು ಕತ್ತು ಹಿಸುಕಿ ಕೊಲೆ ಮಾಡಿದ ಪತಿ ಕೊನೆಗೆ ತಾನೇ ಪೊಲೀಸ್ ಠಾಣೆಗೆ ಹೋಗಿ ಶರಣಾಗಿರುವ ಘಟನೆ ವಿಜಯನಗರ (Vijayanagara) ತಾಲೂಕಿನ ಇಟ್ಟಿಗಿ ಗ್ರಾಮದಲ್ಲಿ ನಡೆದಿದೆ.
ಮೂಲತಃ ಮೈಸೂರು ಜಿಲ್ಲೆ ಹೆಚ್.ಡಿ ಕೋಟೆ ತಾಲೂಕಿನ ಮಾದಾಪುರ ಗ್ರಾಮದ ಡಿಂಪಲ್ (36) ಕೊಲೆಯಾದ ಮಹಿಳೆ. ನೆಲ್ಲುಕುದುರಿ ಗ್ರಾಮದ ಪ್ರಾಥಮಿಕ ಆರೋಗ್ಯಕೇಂದ್ರದ ಸಮುದಾಯ ಆರೋಗ್ಯಾಧಿಕಾರಿ (Health Officer) ಶ್ರೀಕಾಂತ ಕೊಲೆ ಆರೋಪಿ.
ಡಿಂಪಲ್ ಹಗರಿಬೊಮ್ಮನಹಳ್ಳಿ ತಾಲೂಕಿನ ಉಲವತ್ತಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರ ಸಮುದಾಯ ಆರೋಗ್ಯಾಧಿಕಾರಿಯಾಗಿದ್ದರು. ಕಳೆದ ವರ್ಷ ಹಗರಿಬೊಮ್ಮನಹಳ್ಳಿ ತಾಲೂಕಿನ ಕೋಗಳಿ ತಾಂಡಾದ ನಿವಾಸಿ ಹಾಗೂ ನೆಲ್ಲುಕುದುರಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ (Primary Health Centre) ಸಮುದಾಯ ಆರೋಗ್ಯಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ಶ್ರೀಕಾಂತನನ್ನ ಪ್ರೀತಿಸಿ ಮದುವೆಯಾಗಿದ್ದರು.

ಡಿಂಪಲ್‌ಗೆ ಇದು 3ನೇ ಮದುವೆ, ಶ್ರೀಕಾಂತ್‌ಗೆ 2ನೇ ಮದುವೆ. ತಾಲೂಕಿನ ಇಟ್ಟಿಗಿ ಗ್ರಾಮದಲ್ಲಿ ವಾಸವಾಗಿದ್ದ ದಂಪತಿ ಪರಸ್ಪರ ಅನ್ನೋನ್ಯವಾಗಿದ್ದರು. ಎಲ್ಲವೂ ಚೆನ್ನಾಗಿಯೇ ಇತ್ತು. ಶುಕ್ರವಾರ (ನ.25) ರಾತ್ರಿ ಏಕಾಏಕಿಯಾಗಿ ಇಬ್ಬರ ನಡುವೆ ಪ್ರಾರಂಭವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಹೆಂಡತಿಯನ್ನ ಕೊಲೆ ಮಾಡಿದ ನಂತರ ಶ್ರೀಕಾಂತ ಗ್ರಾಮದ ಪೊಲೀಸ್ ಠಾಣೆಗೆ ತೆರಳಿ ತಾನೇ ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ.

ಸುಳ್ಯ
Sullia-ಸುಳ್ಯ: ಕಳ್ಳತನಕ್ಕೆ ಬಂದವನು ಮಕ್ಕಳನ್ನು ಕಂಡು ಪರಾರಿ; ಕೇರಳ ಮೂಲದ ಆರೋಪಿ ಬಂಧನ
ಮನೆಯ ಬೀಗ ಮುರಿದು ಕಳ್ಳತನಕ್ಕೆಂದು ಒಳನುಗ್ಗಿದ ವ್ಯಕ್ತಿಯೊಬ್ಬ, ಮನೆಯೊಳಗಿದ್ದ ಮಕ್ಕಳನ್ನು ಕಂಡು ಗಾಬರಿಗೊಂಡು ಪರಾರಿಯಾದ ಘಟನೆ ಸುಳ್ಯದ ದೇವಸ್ಯ ಸಮೀಪ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿ ಕೇರಳ ಮೂಲದ ಆರೋಪಿಯನ್ನು ಸುಳ್ಯ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಸುಳ್ಯ, ಅ.11: ಮನೆಯ ಬೀಗ ಮುರಿದು ಕಳ್ಳತನಕ್ಕೆಂದು ಒಳನುಗ್ಗಿದ ವ್ಯಕ್ತಿಯೊಬ್ಬ, ಮನೆಯೊಳಗಿದ್ದ ಮಕ್ಕಳನ್ನು ಕಂಡು ಗಾಬರಿಗೊಂಡು ಪರಾರಿಯಾದ ಘಟನೆ ಸುಳ್ಯದ ದೇವಸ್ಯ ಸಮೀಪ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿ ಕೇರಳ ಮೂಲದ ಆರೋಪಿಯನ್ನು ಸುಳ್ಯ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಕೇರಳದ ಕೋಝಿಕ್ಕೋಡ್ ನಿವಾಸಿ ಮಹಮ್ಮದ್ ಅಲಿ (67) ಬಂಧಿತ ಆರೋಪಿ.
ಬಾಲಕೃಷ್ಣ ಎಂಬವರ ಮನೆಗೆ ಬೆಳಗ್ಗೆ ಬಂದ ಆರೋಪಿ, ಮನೆಯ ಬೀಗ ಮುರಿದು ಒಳನುಗ್ಗಿದ್ದಾನೆ. ಮನೆಯವರು ಕೆಲಸಕ್ಕೆ ತೆರಳುವಾಗ ಶಾಲೆಗೆ ರಜೆ ಇದ್ದ ಕಾರಣ ತಮ್ಮ ಮೂವರು ಮಕ್ಕಳನ್ನು ಮನೆಯೊಳಗೆ ಇರಿಸಿ ಹೊರಗಿನಿಂದ ಬೀಗ ಹಾಕಿ ಹೋಗಿದ್ದರು ಎನ್ನಲಾಗಿದೆ.
ಕಳ್ಳತನದ ಉದ್ದೇಶದಿಂದ ಮನೆಗೆ ನುಗ್ಗಿದ ವ್ಯಕ್ತಿಗೆ ಒಳಗಿದ್ದ ಮಕ್ಕಳು ಕಾಣಿಸಿಕೊಂಡಿದ್ದಾರೆ. ಇದರಿಂದ ಗಾಬರಿಗೊಂಡ ಆತ, ಮನೆಯ ಬಾಗಿಲಿನ ಚಿಲಕವನ್ನು ಹೊರಗಿನಿಂದ ಹಾಕಿ ಅಲ್ಲಿಂದ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.
ಘಟನೆಯ ಬಗ್ಗೆ ಮಕ್ಕಳು ತಕ್ಷಣ ತಂದೆ ಬಾಲಕೃಷ್ಣ ಅವರಿಗೆ ಫೋನ್ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಬಳಿಕ ಮನೆಗೆ ಬಂದ ಬಾಲಕೃಷ್ಣ ಅವರು ಮಕ್ಕಳಿಂದ ಸಂಪೂರ್ಣ ಮಾಹಿತಿ ಪಡೆದು ಸುಳ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡ ಸುಳ್ಯ ಪೊಲೀಸರು ತನಿಖೆ ನಡೆಸಿ, ಆಲೆಟ್ಟಿ ಎಂಬಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ. ಬಳಿಕ ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಅಪರಾಧ
Udupi-ಉಡುಪಿ: ಹೇಮಂತ್ ಪೂಜಾರಿ ಬೇಟೆಗೆ ಪೊಲೀಸರ ಬಲೆ; ಗ್ಯಾಂಗ್‌ಸ್ಟರ್ ಅನುಜ್ ಪಾಟೀಲ್ ವಶಕ್ಕೆ..!
ಮುದರಂಗಡಿಯ ಗುತ್ತಿಗೆದಾರ ಡೇವಿಡ್ ಡಿಸೋಜಾ ಕೊಲೆ ಪ್ರಕರಣದ ಪ್ರಮುಖ ಆರೋಪಿ, ಭೂಗತ ಪಾತಕಿ ಹೇಮಂತ್ ಪೂಜಾರಿಯನ್ನು ಬಂಧಿಸಲು ಉಡುಪಿ ಜಿಲ್ಲಾ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ. ಉದ್ಯಮಿಗಳು ಹಾಗೂ ಗುತ್ತಿಗೆದಾರರಿಗೆ ಹಣಕ್ಕಾಗಿ ಜೀವ ಬೆದರಿಕೆ ಹಾಕಿದ ಪ್ರಕರಣಗಳಿಗೆ ಸಂಬಂಧಿಸಿ ತಾಂತ್ರಿಕ ಸಾಕ್ಷ್ಯಗಳನ್ನು ಸಂಗ್ರಹಿಸುತ್ತಿರುವ ಪೊಲೀಸರು, ಬೆದರಿಕೆ ಕರೆಗಳ ಹಿಂದೆ ಹೇಮಂತ್ ಪೂಜಾರಿಯ ಕೈವಾಡ ಇದೆಯೇ ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
ಉಡುಪಿ, ಅ.11: ಮುದರಂಗಡಿಯ ಗುತ್ತಿಗೆದಾರ ಡೇವಿಡ್ ಡಿಸೋಜಾ ಕೊಲೆ ಪ್ರಕರಣದ ಪ್ರಮುಖ ಆರೋಪಿ, ಭೂಗತ ಪಾತಕಿ ಹೇಮಂತ್ ಪೂಜಾರಿಯನ್ನು ಬಂಧಿಸಲು ಉಡುಪಿ ಜಿಲ್ಲಾ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ. ಉದ್ಯಮಿಗಳು ಹಾಗೂ ಗುತ್ತಿಗೆದಾರರಿಗೆ ಹಣಕ್ಕಾಗಿ ಜೀವ ಬೆದರಿಕೆ ಹಾಕಿದ ಪ್ರಕರಣಗಳಿಗೆ ಸಂಬಂಧಿಸಿ ತಾಂತ್ರಿಕ ಸಾಕ್ಷ್ಯಗಳನ್ನು ಸಂಗ್ರಹಿಸುತ್ತಿರುವ ಪೊಲೀಸರು, ಬೆದರಿಕೆ ಕರೆಗಳ ಹಿಂದೆ ಹೇಮಂತ್ ಪೂಜಾರಿಯ ಕೈವಾಡ ಇದೆಯೇ ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
ಉದ್ಯಮಿಗಳು ಹಾಗೂ ಗುತ್ತಿಗೆದಾರರಿಗೆ ಕರೆ ಮಾಡಿ ಹಣಕ್ಕಾಗಿ ಬೆದರಿಕೆ ಹಾಕಿದ ಪ್ರಕರಣಗಳಿಗೆ ಸಂಬಂಧಿಸಿ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಎರಡು, ಕಾಪು, ಶಿರ್ವ ಹಾಗೂ ಮಣಿಪಾಲ ಪೊಲೀಸ್ ಠಾಣೆಗಳಲ್ಲಿ ತಲಾ ಒಂದು ಪ್ರಕರಣ ದಾಖಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿ ಪೊಲೀಸ್ ಠಾಣೆಯಲ್ಲೂ ಪ್ರಕರಣ ದಾಖಲಾಗಿದ್ದು, ಇನ್ನೂ ಎರಡು-ಮೂರು ಉದ್ಯಮಿಗಳು ಹಾಗೂ ಗುತ್ತಿಗೆದಾರರಿಗೆ ಬೆದರಿಕೆ ಕರೆಗಳು ಬಂದಿರುವ ಬಗ್ಗೆ ದೂರುಗಳು ಲಭಿಸಿವೆ ಎಂದು ತಿಳಿದುಬಂದಿದೆ.
ಈ ಪ್ರಕರಣಗಳ ತನಿಖೆ ಚುರುಕುಗೊಳಿಸಿರುವ ಪೊಲೀಸರು, ಸಂಬಂಧಪಟ್ಟ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ತಾಂತ್ರಿಕ ಸಾಕ್ಷ್ಯಗಳನ್ನು ಸಂಗ್ರಹಿಸುತ್ತಿದ್ದಾರೆ. ತನಿಖೆಯ ಪ್ರಗತಿ ಕುರಿತು ಉನ್ನತ ಪೊಲೀಸ್ ಅಧಿಕಾರಿಗಳಿಗೆ ವರದಿಗಳನ್ನು ಸಲ್ಲಿಸಲಾಗುತ್ತಿದೆ.
ಡೇವಿಡ್ ಡಿಸೋಜಾ ಕೊಲೆ ಪ್ರಕರಣದ ತನಿಖೆಯ ಭಾಗವಾಗಿ ಈ ಹಿಂದೆ ಉಡುಪಿ ಜಿಲ್ಲಾ ಪೊಲೀಸರು ಹೇಮಂತ್ ಪೂಜಾರಿಗಾಗಿ ಬಾಂಗ್ಲಾದೇಶದ ಗಡಿಯವರೆಗೂ ಶೋಧ ನಡೆಸಿದ್ದರು. ಆದರೆ, ಆ ಕಾರ್ಯಾಚರಣೆಯಲ್ಲಿ ಆತನ ಪತ್ತೆಯಾಗಿರಲಿಲ್ಲ. ಇದೀಗ ಬೆದರಿಕೆ ಕರೆಗಳ ಪ್ರಕರಣಗಳಲ್ಲಿನ ಸಾಕ್ಷ್ಯಗಳನ್ನು ಆಧರಿಸಿ ತನಿಖೆ ಮುಂದುವರಿಸಲಾಗಿದೆ.
ಕಾಪು ಪೊಲೀಸರ ವಶಕ್ಕೆ ಅನುಜ್ ಪಾಟೀಲ್
ಡೇವಿಡ್ ಡಿಸೋಜಾ ಕೊಲೆ ಪ್ರಕರಣದಲ್ಲಿ ಶಾರ್ಪ್ ಶೂಟರ್‌ಗಳನ್ನು ಕಳುಹಿಸಿದ್ದ ಆರೋಪ ಎದುರಿಸುತ್ತಿರುವ ಮುಂಬೈ ಮೂಲದ ಗ್ಯಾಂಗ್‌ಸ್ಟರ್, ಬಿಹಾರದ ನಳಂದ ಜಿಲ್ಲೆಯ ಅನುಜ್ ಪಾಟೀಲ್ (35)ನನ್ನು ಕಾಪು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಆರಂಭಿಸಿದ್ದಾರೆ.
ಈ ಹಿಂದೆ ಬೈಂದೂರು ಹಾಗೂ ಹೆಬ್ರಿ ಪೊಲೀಸರು ಆತನನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿದ್ದರು. ಇದೀಗ ಕಾಪು ಪೊಲೀಸರು ವಶಕ್ಕೆ ಪಡೆದು, ಹೇಮಂತ್ ಪೂಜಾರಿಯೊಂದಿಗಿನ ಆತನ ಸಂಪರ್ಕ ಹಾಗೂ ಅಪರಾಧ ಚಟುವಟಿಕೆಗಳ ಕುರಿತು ಮಾಹಿತಿ ಕಲೆಹಾಕುತ್ತಿದ್ದಾರೆ.
ಉದ್ಯಮಿಗಳು ಹಾಗೂ ಗುತ್ತಿಗೆದಾರರಿಗೆ ಬಂದಿರುವ ಬೆದರಿಕೆ ಕರೆಗಳ ಆಡಿಯೋಗಳನ್ನು ಪರಿಶೀಲಿಸಲಾಗುತ್ತಿದೆ. ಈ ಕರೆಗಳನ್ನು ಹೇಮಂತ್ ಪೂಜಾರಿಯೇ ಮಾಡುತ್ತಿದ್ದಾನೆಯೇ ಅಥವಾ ಆತನ ಹೆಸರಿನಲ್ಲಿ ಬೇರೆ ಯಾರಾದರೂ ಬೆದರಿಕೆ ಹಾಕುತ್ತಿದ್ದಾರೆಯೇ ಎಂಬ ಆಯಾಮದಲ್ಲೂ ತನಿಖೆ ನಡೆಯುತ್ತಿದೆ.
ಪೊಲೀಸ್ ಆಯುಧ ಕಸಿದು ಗುಂಡು ಹಾರಿಸಲು ಯತ್ನಿಸಿದ್ದ ಆರೋಪ
2017ರಿಂದ ತಲೆಮರೆಸಿಕೊಂಡಿದ್ದ ಅನುಜ್ ಪಾಟೀಲ್ ಮುಂಬೈ ಕೇಂದ್ರವಾಗಿಸಿಕೊಂಡು ಕಾರ್ಯಾಚರಿಸುತ್ತಿದ್ದ ಎನ್ನಲಾಗಿದೆ. ಆತನ ವಿರುದ್ಧ ಮಹಾರಾಷ್ಟ್ರದಲ್ಲಿ ಮಹಾರಾಷ್ಟ್ರ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ (ಎಂಸಿಒಸಿಎ) ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಒಟ್ಟು 11 ಕ್ರಿಮಿನಲ್ ಪ್ರಕರಣಗಳು ಆತನ ವಿರುದ್ಧ ದಾಖಲಾಗಿದ್ದು, ಅವುಗಳಲ್ಲಿ 10 ಪ್ರಕರಣಗಳು ಶಸ್ತ್ರಾಸ್ತ್ರ ಕಾಯ್ದೆಗೆ ಸಂಬಂಧಿಸಿದ್ದಾಗಿವೆ ಎಂದು ವರದಿಯಾಗಿದೆ. ಮಹಾರಾಷ್ಟ್ರದಲ್ಲಿ ನಾಲ್ಕು, ಗುಜರಾತ್‌ನಲ್ಲಿ ಐದು, ದಮನ್ ಮತ್ತು ದಿಯುನಲ್ಲಿ ಒಂದು ಹಾಗೂ ಕರ್ನಾಟಕದಲ್ಲಿ ಒಂದು ಪ್ರಕರಣ ದಾಖಲಾಗಿತ್ತು.
ಉಡುಪಿ ಜಿಲ್ಲಾ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ ಆತನನ್ನು ಬಂಧಿಸಿ ಕರೆತರುತ್ತಿದ್ದಾಗ, ಹೆಬ್ರಿ ತಾಲೂಕಿನ ಸೋಮೇಶ್ವರದಲ್ಲಿ ಮೂತ್ರ ವಿಸರ್ಜನೆಗೆಂದು ಪೊಲೀಸ್ ವಾಹನದಿಂದ ಕೆಳಗಿಳಿದಿದ್ದ ಅನುಜ್ ಪಾಟೀಲ್, ಕೊಲ್ಲೂರು ಪೊಲೀಸ್ ಠಾಣೆಯ ಪಿಎಸ್‌ಐ ವಿನಯ್ ಅವರ ಸೇವಾ ಆಯುಧವನ್ನು ಕಸಿದು ಗುಂಡು ಹಾರಿಸಲು ಯತ್ನಿಸಿದ್ದಾನೆ ಎಂದು ಆರೋಪಿಸಲಾಗಿದೆ.
ಈ ವೇಳೆ ಆತ್ಮರಕ್ಷಣೆಗಾಗಿ ಪಿಎಸ್‌ಐ ನಂಜ ನಾಯಕ್ ಅವರು ಆರೋಪಿಯ ಕಾಲಿಗೆ ಗುಂಡು ಹಾರಿಸಿದ್ದರು. ಗಾಯಗೊಂಡ ಆತನನ್ನು ಉಡುಪಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು.
ಚಿಕಿತ್ಸೆಯ ಬಳಿಕ ತನಿಖೆ ಮುಂದುವರಿಸಿರುವ ಪೊಲೀಸರು, ಬೈಂದೂರು ಮತ್ತು ಹೆಬ್ರಿ ಠಾಣೆಗಳ ನಂತರ ಇದೀಗ ಕಾಪು ಪೊಲೀಸರ ವಶದಲ್ಲಿ ವಿಚಾರಣೆ ನಡೆಸುತ್ತಿದ್ದಾರೆ. ಅನುಜ್ ಪಾಟೀಲ್‌ನ ಅಪರಾಧ ಚಟುವಟಿಕೆಗಳು, ಹೇಮಂತ್ ಪೂಜಾರಿಯೊಂದಿಗಿನ ಸಂಪರ್ಕ ಹಾಗೂ ಬೆದರಿಕೆ ಕರೆಗಳ ಹಿಂದಿನ ಜಾಲದ ಕುರಿತು ಹೆಚ್ಚಿನ ಮಾಹಿತಿ ಕಲೆಹಾಕಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ.
ಅಂತರ ರಾಜ್ಯ
Kasaragod-ಕಾಸರಗೋಡು: ಮದುವೆ ರದ್ದು, ₹7.57 ಲಕ್ಷದ ಉಡುಗೊರೆ ವಾಪಸ್ ನೀಡದೆ ವಂಚನೆ ಆರೋಪ; ಯುವತಿ ಸಹಿತ ಮೂವರ ವಿರುದ್ಧ ಪ್ರಕರಣ
ಮದುವೆಯಿಂದ ಹಿಂದೆ ಸರಿದ ಯುವತಿ ಹಾಗೂ ಆಕೆಯ ಕುಟುಂಬದವರ ವಿರುದ್ಧ ವರನ ಮನೆಯವರು ನೀಡಿದ ದೂರಿನ ಮೇರೆಗೆ ಹೊಸದುರ್ಗ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ನಿಶ್ಚಿತಾರ್ಥದ ಸಂದರ್ಭದಲ್ಲಿ ನೀಡಿದ್ದ ಚಿನ್ನಾಭರಣ, ಐಫೋನ್, ನಗದು ಸೇರಿದಂತೆ ಸುಮಾರು ₹7.57 ಲಕ್ಷ ಮೌಲ್ಯದ ಉಡುಗೊರೆಗಳನ್ನು ಹಿಂದಿರುಗಿಸದೆ ವಂಚಿಸಿದ್ದಾರೆ ಎಂಬುದು ಆರೋಪವಾಗಿದೆ.
ಕಾಸರಗೋಡು: ಮದುವೆಯಿಂದ ಹಿಂದೆ ಸರಿದ ಯುವತಿ ಹಾಗೂ ಆಕೆಯ ಕುಟುಂಬದವರ ವಿರುದ್ಧ ವರನ ಮನೆಯವರು ನೀಡಿದ ದೂರಿನ ಮೇರೆಗೆ ಹೊಸದುರ್ಗ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ನಿಶ್ಚಿತಾರ್ಥದ ಸಂದರ್ಭದಲ್ಲಿ ನೀಡಿದ್ದ ಚಿನ್ನಾಭರಣ, ಐಫೋನ್, ನಗದು ಸೇರಿದಂತೆ ಸುಮಾರು ₹7.57 ಲಕ್ಷ ಮೌಲ್ಯದ ಉಡುಗೊರೆಗಳನ್ನು ಹಿಂದಿರುಗಿಸದೆ ವಂಚಿಸಿದ್ದಾರೆ ಎಂಬುದು ಆರೋಪವಾಗಿದೆ.
ನ್ಯಾಯಾಲಯದ ಆದೇಶದ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ. ಮದುವೆ ರದ್ದಾದ ಬಳಿಕ ಉಡುಗೊರೆಗಳನ್ನು ಹಿಂದಿರುಗಿಸದ ಕಾರಣ ತಮ್ಮ ಕುಟುಂಬಕ್ಕೆ ₹7,57,037 ನಷ್ಟವಾಗಿದೆ ಎಂದು ವರನ ಕಡೆಯವರು ದೂರಿನಲ್ಲಿ ತಿಳಿಸಿದ್ದಾರೆ.
ಪಡನ್ನಕ್ಕಾಡ್ ಸಮೀಪದ ಯುವಕನಿಗೆ ಉದುಮ ಸಮೀಪದ ಯುವತಿಯೊಂದಿಗೆ ವಿವಾಹ ನಡೆಸಲು 2026ರ ಏಪ್ರಿಲ್‌ನಲ್ಲಿ ನಿಶ್ಚಯಿಸಲಾಗಿತ್ತು. ಈ ಸಂದರ್ಭದಲ್ಲಿ ನಿಶ್ಚಿತಾರ್ಥದ ಭಾಗವಾಗಿ ವಧುವಿಗೆ ಐಫೋನ್, ಚಿನ್ನಾಭರಣ, ವಿವಿಧ ಉಡುಗೊರೆಗಳು ಹಾಗೂ ನಗದು ಸೇರಿದಂತೆ ಸುಮಾರು ₹7.5 ಲಕ್ಷ ಮೌಲ್ಯದ ವಸ್ತುಗಳನ್ನು ವರನ ಕುಟುಂಬದವರು ನೀಡಿದ್ದರು ಎನ್ನಲಾಗಿದೆ.
ಆದರೆ, ಬಳಿಕ ಯುವತಿ ಮದುವೆಯಿಂದ ಹಿಂದೆ ಸರಿದಿದ್ದು, ಆಕೆಯ ತಾಯಿ ಹಾಗೂ ಮಾವನೊಂದಿಗೆ ಸೇರಿ ಮದುವೆ ರದ್ದುಗೊಳಿಸಲು ಸಂಚು ರೂಪಿಸಿದ್ದಾರೆ ಎಂದು ವರನ ಕಡೆಯವರು ಆರೋಪಿಸಿದ್ದಾರೆ. ಅಲ್ಲದೆ, ನಿಶ್ಚಿತಾರ್ಥದ ವೇಳೆ ನೀಡಿದ್ದ ಐಫೋನ್ ಸೇರಿದಂತೆ ಬೆಲೆಬಾಳುವ ವಸ್ತುಗಳನ್ನು ಹಿಂದಿರುಗಿಸಲು ನಿರಾಕರಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
-
ಅಂತರ ರಾಜ್ಯ21 hours agoKasaragod-ಕಾಸರಗೋಡು: ಮದುವೆ ರದ್ದು, ₹7.57 ಲಕ್ಷದ ಉಡುಗೊರೆ ವಾಪಸ್ ನೀಡದೆ ವಂಚನೆ ಆರೋಪ; ಯುವತಿ ಸಹಿತ ಮೂವರ ವಿರುದ್ಧ ಪ್ರಕರಣ
-
ಮಂಗಳೂರು15 hours agoMangalore-ಮಂಗಳೂರು: ಅನೈತಿಕ ಸಂಬಂಧ ಶಂಕೆ; ಪತ್ನಿಯನ್ನು ಚೂರಿಯಿಂದ ಇರಿದು ಕೊಂದ ಪತಿ
-
ಬಿಗ್ ನ್ಯೂಸ್16 hours agoGolithottu-ಗೋಳಿತ್ತೊಟ್ಟು: ತೋಡಿನ ನೀರಿನಲ್ಲಿ ಮೀನುಗಳ ಮಾರಣಹೋಮ; ತನಿಖೆಗೆ ಸ್ಥಳೀಯರ ಆಗ್ರಹ
-
ಸುಳ್ಯ19 hours agoSullia-ಸುಳ್ಯ: ಕಳ್ಳತನಕ್ಕೆ ಬಂದವನು ಮಕ್ಕಳನ್ನು ಕಂಡು ಪರಾರಿ; ಕೇರಳ ಮೂಲದ ಆರೋಪಿ ಬಂಧನ
-
ಬಿಗ್ ನ್ಯೂಸ್22 hours agoPuttur-ಪುತ್ತೂರು : ಶ್ರೀಮಹಾಲಿಂಗೇಶ್ವರ ದೇವಸ್ಥಾನದ ಬಳಿಯ ಒಳಚರಂಡಿ ಕಾಮಗಾರಿ ಟೆಂಡರ್ ಸ್ಥಗಿತಗೊಳಿಸಿ : ನಗರಸಭೆಗೆ ಮನವಿ
-
ಅಪರಾಧ19 hours agoUdupi-ಉಡುಪಿ: ಹೇಮಂತ್ ಪೂಜಾರಿ ಬೇಟೆಗೆ ಪೊಲೀಸರ ಬಲೆ; ಗ್ಯಾಂಗ್‌ಸ್ಟರ್ ಅನುಜ್ ಪಾಟೀಲ್ ವಶಕ್ಕೆ..!
-
ಸ್ಥಳೀಯ22 hours agoSharavuru-ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರಿಂದ ಶರವೂರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಭೇಟಿ
-
ಅಂತರ ರಾಜ್ಯ19 hours agoElon Musk-ಅಂಬಾನಿ ಮತ್ತು ಅವರ ಬೆಂಬಲಿಗರ ವಾದ ಹಾಸ್ಯಾಸ್ಪದವಾಗಿದೆ : ಸ್ಟಾರ್ ಲಿಂಕ್ ಕುರಿತು ಇಲಾನ್ ಮಸ್ಕ್


















