Connect with us

Uncategorized

Big Breaking : ಪುತ್ತೂರು: 20 ವರ್ಷಗಳ ಹಿಂದೆ ಉಪ್ಪಿನಂಗಡಿಯಲ್ಲಿ ನಡೆದಿದ್ದ ಫೈನಾನ್ಸ್‌ದಾರ ಸೂತ್ರಬೆಟ್ಟು ವಿಶ್ವನಾಥ ರೈ ಸೆನ್ಸೆಷನಲ್‌ ಮರ್ಡರ್ ಪ್ರಕರಣದ ತೀರ್ಪು ಪ್ರಕಟ – ಆರೋಪಿ ಕೋಡಿಂಬಾಡಿ ವಿಶ್ವನಾಥ ಶೆಟ್ಟಿ ಆರೋಪ ಸಾಬೀತು

Published

on



Ad Widget

Ad Widget

Ad Widget

Ad Widget

ಉಪ್ಪಿನಂಗಡಿ : 20 ವರ್ಷಗಳ ಹಿಂದೆ ನಡೆದ  ಜಿಲ್ಲೆಯಲ್ಲಿ ಭಾರೀ ಸಂಚಲನ ಉಂಟು ಮಾಡಿದ್ದ ಉಪ್ಪಿನಂಗಡಿಯ ಫೈನಾನ್ಸ್‌ ಉದ್ಯಮಿ ಸೂತ್ರಬೆಟ್ಟು ವಿಶ್ವನಾಥ ರೈ ಹತ್ಯೆ ಪ್ರಕರಣದಲ್ಲಿ ಆರೋಪಿಯೂ ಕೊಲೆ ಮಾಡಿದ್ದು  ಸಾಬೀತಾಗಿದೆ ಎಂದು ಡಿ 13ರಂದು  ಪುತ್ತೂರಿನ 5ನೇ ಜಿಲ್ಲಾ ಹೆಚ್ಚುವರಿ ನ್ಯಾಯಾಲಯವು  ತೀರ್ಪು  ಪ್ರಕಟಿಸಿದೆ.

Ad Widget

Ad Widget

Ad Widget

Ad Widget

ಪ್ರಕರಣದ ಆರೋಪಿ ಕೋಡಿಂಬಾಡಿ ವಿಶ್ವನಾಥ ಶೆಟ್ಟಿ ಅಲಿಯಾಸ್ ಪಂಚಮಿ ವಿಶ್ವ ಅಲಿಯಾಸ್ ರಾಜು (54)  ತಪಿತಸ್ಥ ಎಂದು ನ್ಯಾಯಾಲಯವು ಘೋಷಿಸಿದ್ದು ಡಿ.15 ರಂದು ಶಿಕ್ಷೆಯ ಪ್ರಮಾಣವನ್ನು ಘೋಷಿಸಲಿದೆ. ಐಪಿಸಿ ಕಲಂ 302 ( ಕೊಲೆ) 506ಹಾಗೂ 201 ರಡಿ ಅಪರಾಧಿಯ ಎಸಗಿದ ಅಪರಾಧ ಸಾಬೀತಾಗಿದೆ ಎಂದು ನ್ಯಾಯಾಲಯವು ತೀರ್ಪಿನಲ್ಲಿ ಉಲ್ಲೇಖಿಸಿದೆ.

Ad Widget

Ad Widget

Ad Widget alt="Ad Widget"/>

Ad Widget

ಜೂನ್ 7, 2001 ರಂದು, ಉಪ್ಪಿನಂಗಡಿಯ ಗಾಂಧಿ ಪಾರ್ಕ್ ಬಳಿ ಶಿವ ಫೈನಾನ್ಸ್ ಮಾಲೀಕ ವಿಶ್ವನಾಥ ರೈ ಅಲಿಯಾಸ್ ಬಡ್ಡಿ ವಿಶ್ವ ಎಂಬವರನ್ನು ಹತ್ಯೆಗೆಯ್ಯಲಾಗಿತ್ತು.  ಹತ್ಯೆಯ ಬಳಿಕ ವಿಶ್ವನಾಥ ರೈಯವರ ಮೃತ ದೇಹದೊಂದಿಗೆ ಅವರದೇ ಕಾರಿನಲ್ಲಿ  ಪರಾರಿಯಾಗಿದ್ದ ಆರೋಪಿಯೂ ಕಾರು ಮತ್ತು ಶವವನ್ನು ಬೇರೆ ಬೇರೆ ಸ್ಥಳಗಳಲ್ಲಿ ತ್ಯಜಿಸಿ ಬಳಿಕ ನಾಪತ್ತೆಯಾಗಿದ್ದ. ಕೃತ್ಯ ನಡೆದು 13 ವರ್ಷಗಳ ಬಳಿಕ ಅಂದರೆ ಇಂದಿಗೆ ಸುಮಾರು 7 ವರ್ಷಗಳ ಹಿಂದೆ 2014ನೇ ಇಸವಿಯಲ್ಲಿ ಆರೋಪಿ ಕೋಡಿಂಬಾಡಿ ವಿಶ್ವನಾಥ ಶೆಟ್ಟಿ ತಮಿಳುನಾಡಿನಲ್ಲಿ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದ. ಒಂದಷ್ಟು ಸಮಯ ಜೈಲಿನಲ್ಲಿ ಕಳೆದ ಆರೋಪಿಯೂ ಬಳಿಕ ಜಾಮೀನಿನ ಮೇಲೆ ಬಿಡುಗಡೆ ಹೊಂದಿದ್ದ

Ad Widget

Ad Widget <> Ad Widget

ಏನಿದು ಪ್ರಕರಣ   

ಆರೋಪಿ  ವಿಶ್ವನಾಥ ಶೆಟ್ಟಿ ಮತ್ತು  ಹತ್ಯೆಯಾದ  ವಿಶ್ವನಾಥ ರೈಯವರು ಆತ್ಮೀಯ ಸ್ನೇಹಿತರಾಗಿದ್ದು 1999ರಲ್ಲಿ ಪಾಲುದಾರಿಕೆಯಲ್ಲಿ ಪೈನಾನ್ಸ್‌ ಒಂದನ್ನು ಉಪ್ಪಿನಂಗಡಿಯ ಗಾಂಧಿ ಪಾರ್ಕ್‌ ಎಂಬಲ್ಲಿ ಆರಂಭಿಸಿದ್ದರು. ಗಾಂಧಿ ಪಾರ್ಕ್‌ ನಲ್ಲಿರುವ ವಿಶ್ವನಾಥ ರೈಯವರಿಗೆ ಸೇರಿದ  ಮನೆಯಲ್ಲಿ  ಪೈನಾನ್ಸ್‌ ಕಚೇರಿ ಆರಂಭಿಸಿದ್ದು,  ಉಪ್ಪಿನಂಗಡಿಯ ಹಿರೇಬಂಡಾಡಿ ಗ್ರಾಮದ ಹರಿನಗರದಲ್ಲಿರುವ ಕುಟುಂಬದ ಮನೆಯಲ್ಲಿ ಅವರ ಪತ್ನಿ ಮತ್ತು ಮಗಳು ವಾಸವಾಗಿದ್ದರು.



Ad Widget

 ಜೂನ್ 7, 2001 ರಂದು  ರಾತ್ರಿ ವೇಳೆ ಪೈನಾನ್ಸ್‌ ಕಛೇರಿಯಾಗಿ ಮಾರ್ಪಾಡಗಿದ್ದ ಗಾಂಧಿ ಪಾರ್ಕ್‌ ನ ಮನೆಯಲ್ಲಿ ಪಾಲುದಾರ ಸ್ನೇಹಿತರು ಜತೆಯಾಗಿ ಸೇರಿ ಪಾರ್ಟಿ ಮಾಡುತ್ತ ಮಾತುಕತೆ ತೊಡಗಿಕೊಂಡಿದ್ದರು. ಈ ವೇಳೆ  ಪೈನಾನ್ಸ್‌ ಆರಂಭಗೊಂಡು 2 ವರ್ಷಗಳು ಕಳೆದಿದ್ದು, ಅವರಿಬ್ಬರು  ಮೀಟರ್‌ ಬಡ್ಡಿ ವ್ಯವಹಾರ ನಡೆಸುತ್ತಿದ್ದು ಆದು ಚೆನ್ನಾಗಿ ನಡೆಯುತ್ತಿತ್ತು . ಉತ್ತಮ  ಲಾಭ ಕೂಡ  ಗಳಿಸುತಿತ್ತು. ಆದರೇ ಆ ದಿನ ಪಾರ್ಟಿಯ ವೇಳೆ ಇಬ್ಬರ ಮಧ್ಯೆ ಜಗಳ ನಡೆದು ಅದು  ವಿಕೋಪಕ್ಕೆ ತಿರುಗಿ  ಆಕ್ರೋಶಗೊಂಡ ವಿಶ್ವನಾಥ ಶೆಟ್ಟಿ ಹರಿತವಾದ ಆಯುಧದಿಂದ ತನ್ನ ಪಾಲುದಾರ  ರೈಯನ್ನು  ಹತ್ಯೆ ಮಾಡಿದ್ದಾನೆ.

Ad Widget

Ad Widget

ನಂತರ ಆರೋಪಿಯೂ ಹತ್ಯೆಯಾದ ರೈಯ ಮಾರುತಿ ಝೆನ್ ಕಾರಿನಲ್ಲಿ ವಿಶ್ವನಾಥ  ರೈ ಯವರ ಶವವನ್ನು ಹೇರಿಕೊಂಡು  ಹೊನ್ನಾವರ  ಕಡೆಗೆ ಸಾಗಿದ್ದಾನೆ .  ಹೊನ್ನಾವರ ಬಳಿಯ ರಸ್ತೆ ಬದಿಯ ಚರಂಡಿಯಲ್ಲಿ  ರೈ ಶವವನ್ನು ಎಸೆದಿದ್ದಾನೆ.  ಬಳಿಕ ಅಲ್ಲಿಂದ  ಕಾರಿನೊಂದಿಗೆ ಹಿಂತಿರುಗಿ ಮಂಗಳೂರಿಗೆ ಬಂದಿದ್ದಾನೆ.  ಬಳಿಕ  ಜೂನ್ 8 ರಂದು ಮಂಗಳೂರರಿನ ಕದ್ರಿ ಪಾರ್ಕ್  ಬಳಿ ಕಾರನ್ನು ಇಟ್ಟು  ಒಂದು ಲಕ್ಷ ರೂಪಾಯಿ ನಗದು ಹಣದೊಂದಿಗೆ ಶೆಟ್ಟಿ ಪರಾರಿಯಾಗಿದ್ದ.

ರೈ ಅವರ ಮೃತದೇಹ ಹೊನ್ನಾವರದ ಬಳಿ ನೋಡಿದ ಸಾರ್ವಜನಿಕರು ಹೊನ್ನಾವರ ಠಾಣೆ ಪೊಲೀಸರಿಗೆ ತಿಳಿಸಿದ್ದು ಪೊಲೀಸರು ಆತನ ಅಂಗಿಯ ಜೇಬಿನಲ್ಲಿ ಪತ್ತೆಯಾದ ಗುರುತಿನ ಚೀಟಿಯ ಆಧಾರದ ಮೇಲೆ ಉಪ್ಪಿನಂಗಡಿ ಠಾಣೆಯನ್ನು ಸಂಪರ್ಕಿಸಿದರು. ಪುತ್ತೂರು ಗ್ರಾಮಾಂತರ ಪೊಲೀಸ್‌ ವೃತ್ತ ನಿರೀಕ್ಷಕ ಎನ್‌ಬಿ ಕಮಲ್‌ ಅವರು ನಡೆಸಿದ ತನಿಖೆಯಲ್ಲಿ ಶೆಟ್ಟಿ ಅವರ ಕಾರನ್ನು ಮಂಗಳೂರಿನಲ್ಲಿ ಬಿಟ್ಟು ಹೋಗಿರುವುದು ಬೆಳಕಿಗೆ ಬಂದಿತ್ತು. ಆರಂಭದಲ್ಲಿ, ಇಬ್ಬರೂ ಪಾಲುದಾರರನ್ನು  ಕೊಲ್ಲಲಾಗಿದೆ ಎಂದು ಪೊಲೀಸರು ತೀರ್ಮಾನಿಸಿದರು.

ಜಗಳದ ಸಂದರ್ಭದಲ್ಲಿ ಹಾಜರಿದ್ದ ಸಂಸ್ಥೆಯ ಉದ್ಯೋಗಿ ಸುಭಾಸ್ ಗೌಡ ರವರು ಮಧ್ಯಪ್ರವೇಶಿಸಲು ಮುಂದಾದಾಗ ಶೆಟ್ಟಿಯಿಂದ ಬೆದರಿಕೆಗೆ ಒಳಗಾದ ಅವರು ತಮ್ಮ ಸ್ವ ಗ್ರಾಮವಾದ ಬೆಳ್ತಂಗಡಿಗೆ ಹಿಂತಿರುಗಿ ವಕೀಲರೊಬ್ಬರ ಬಳಿ ನಡೆದ ಘಟನೆಯನ್ನು ವಿವರಿಸಿದರು.

ವಕೀಲರ ಸಲಹೆಯಂತೆ ಸುಭಾಷ್‌ ಗೌಡರವರು ಪುತ್ತೂರು ಗ್ರಾಮಾಂತರ ಪೊಲೀಸ್ ವೃತ್ತ ನಿರೀಕ್ಷಕರಿಗೆ ಘಟನೆಯನ್ನು  ಸವಿವರವಾಗಿ ತಿಳಿಸಿದರು. ಬಳಿಕ ಸುಭಾಷ್‌ ನೀಡಿದ  ದೂರಿನಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಜೂನ್ 9 ರಂದು ವಿಶ್ವ ನಾಥ ಶೆಟ್ಟಿಯನ್ನು ಆರೋಪಿ ಎಂದು ಹೆಸರಿಸಿ ಕೊಲೆ ಪ್ರಕರಣ ದಾಖಲಿಸಲಾಗಿತ್ತು

ಆರೋಪಿ  ಶೆಟ್ಟಿಯೂ  ನಂತರ ತಲೆ ಮರೆಸಿಕೊಂಡು  ಯಾರಿಗೂ ಸಿಗದೇ ನಾಪತ್ತೆಯಾಗಿದ್ದ. ಮಂಗಳೂರಿನಲ್ಲಿ ಕಾರು ಬಿಟ್ಟು ತೆರಳಿದ ಹಿನ್ನಲೆಯಲ್ಲಿ ಒಂದೋ ಆತ ದುಬೈಗೆ ಪರಾರಿಯಾಗಿದ್ದಾನೆ  ಅಥವಾ ಆತ್ಮಹತ್ಯೆ ಮಾಡಿಕೊಂಡಿದ್ದಾನೆ  ಎಂಬ ವದಂತಿಗಳು ಹರಡಿದ್ದವು

2014 ರ ಆಗಷ್ಟ್‌ 12 ರಂದು ಮಂಗಳೂರು ಡಿಸಿಐಬಿ ಪೊಲೀಸರಿಗೆ ಆರೋಪಿ ವಿಶ್ವನಾಥ ಶೆಟ್ಟಿಯ ಇರುವಿಕೆಯ ಬಗ್ಗೆ  ಸಿಕ್ಕ ಖಚಿತ ಮಾಹಿತಿಯ ಮೇರೆಗೆ ಡಿಸಿಐಬಿ  ಮತ್ತು ತಮಿಳುನಾಡು ಪೊಲೀಸರು  ಜಂಟಿ ಕಾರ್ಯಾಚರಣೆ ನಡೆಸಿ ತಮಿಳುನಾಡಿನ ಸತ್ಯಮಂಗಲ ತಾಲೂಕಿನ ಕಡಂಬೂರ್‌ನಲ್ಲಿ ಆತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಬಳಿಕ ಕೊಲೆ ನಡೆದ ಸ್ಥಳ, ಬಳಸಿದ ಆಯುಧ, ಶವ ಎಸೆದ ಜಾಗ, ಕಾರು ಬಿಟ್ಟು ಹೋದ ಪಾರ್ಕ್‌ಗಳ ಮಹಜರು ಪ್ರಕ್ರಿಯೆಯೂ ನಡೆಸಲಾಗಿತ್ತು.  ಪ್ರಕರಣದ ಪ್ರತ್ಯಕ್ಷ ಸಾಕ್ಷಿ ಮತ್ತು ಕೃತ್ಯ ನಡೆಯುವ ವೇಳೆ ಆರೋಪಿಗೆ ಸಹಕರಿಸಿದ ಫೈನಾನ್ಸ್‌ನ ಸಿಬ್ಬಂದಿ ಸುಭಾಸ್ ಗೌಡ ಈ ಪ್ರಕರಣದಲ್ಲಿ ಮಾಫಿ ಸಾಕ್ಷಿಯಾಗಿದ್ದು, ಈ ಪ್ರಕರಣದ ದೂರುದಾರನು ಆಗಿದ್ದಾರೆ

.ಪ್ರಾಷಿಕ್ಯೂಷನ್‌ ಪರ ಸರಕಾರಿ ವಕೀಲರಾದ ಪ್ರವೀಣ್‌ ಕುಮಾರ್‌ ವಾದಿಸಿದರು .

Ad Widget
Click to comment

Leave a Reply

Uncategorized

Ambika Vidyalaya-ಅಂಬಿಕಾ ವಿದ್ಯಾಲಯ ಸಿಬಿಎಸ್ಇ ವಿದ್ಯಾರ್ಥಿಗಳಿಗೆ ರಾಷ್ಟ್ರ ಮಟ್ಟದಲ್ಲಿ‌ ಬಹುಮಾನ

Published

on



Ad Widget

Ad Widget

Ad Widget

Ad Widget

ಪುತ್ತೂರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ವಿದ್ಯಾಲಯ ಸಿ.ಬಿ.ಎಸ್.ಇ ಸಂಸ್ಥೆಯ ವಿದ್ಯಾರ್ಥಿಗಳು ಹರಿಯಾಣದ ಕುರುಕ್ಷೇತ್ರದಲ್ಲಿ ನಡೆದ ವಿದ್ಯಾಭಾರತಿ ರಾಷ್ಟ್ರ ಮಟ್ಟದ ಚದುರಂಗ ಸ್ಪರ್ಧೆಯಲ್ಲಿ ಬಹುಮಾನ ಗಳಿಸಿದ್ದಾರೆ.

Ad Widget

Ad Widget

Ad Widget

Ad Widget

ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ವಿದ್ಯಾಲಯ ಸಿ.ಬಿ.ಎಸ್.ಇ ಸಂಸ್ಥೆಯ ವಿದ್ಯಾರ್ಥಿಗಳು ಹರಿಯಾಣದ ಕುರುಕ್ಷೇತ್ರದಲ್ಲಿ ನಡೆದ ವಿದ್ಯಾಭಾರತಿ ರಾಷ್ಟ್ರ ಮಟ್ಟದ ಚದುರಂಗ ಸ್ಪರ್ಧೆಯಲ್ಲಿ ಬಹುಮಾನ ಗಳಿಸಿದ್ದಾರೆ.

Ad Widget

Ad Widget

Ad Widget alt="Ad Widget"/>

Ad Widget

14 ರ ವಯೋಮಾನದ ಬಾಲಕಿಯರ ವಿಭಾಗದಲ್ಲಿ ಪೆರ್ನೆಯ ನಿವಾಸಿ ಗಿರೀಶ ಗೌಡ ಮತ್ತು ಸುಮಿತ್ರ ದಂಪತಿಯ ಪುತ್ರಿ 8ನೇ ತರಗತಿಯ ಸಾನ್ವಿ ಜಿ, ದರ್ಬೆಯ ನಿವಾಸಿ ಕೆ ಜಿ ಮುರಳೀಧರ ಮತ್ತು ಕೆ ಉಷಾ ಮುರಳೀಧರ ದಂಪತಿಯ ಪುತ್ರಿ 8ನೇ ತರಗತಿಯ ಕೆ ಎಂ ಶಮಿತ ಭಟ್ ಹಾಗೂ  ಪಡೀಲ್ ನ ನಿವಾಸಿ ಸಂಜೀವ ರಂಜನ್ ಮತ್ತು ಅರ್ಪಣಾ ಕುಮಾರಿ ದಂಪತಿಯ ಪುತ್ರಿ 8ನೇ ತರಗತಿಯ ಶಾಂಭವಿ ರಂಜನ್,

Ad Widget

Ad Widget <> Ad Widget

ಸಂಪ್ಯದ ನಿವಾಸಿ ರವಿಕುಮಾರ ಕೆ ಮತ್ತು ಸುಮಿತ್ರ ಕೆ ದಂಪತಿಯ ಪುತ್ರಿ 8ನೇ ತರಗತಿಯ ನೈನಿಕ ಎ ಆರ್ ಪ್ರಥಮ ಸ್ಥಾನವನ್ನು ಗಳಿಸಿ, ಮಧ್ಯ ಪ್ರದೇಶದಲ್ಲಿ ನಡೆಯಲಿರುವ ಎಸ್ ಜಿ  ಎಫ್ ಐ ( ಸ್ಕೂಲ್ ಗೇಮ್ ಫೆಡರೇಶನ್ ಆಫ್ ಇಂಡಿಯಾ) ಮಟ್ಟದ ಚದುರಂಗ ಸ್ಪರ್ಧೆಗೆ ಆಯ್ಕೆಗೊಂಡಿರುತ್ತಾರೆ.



Ad Widget

14ರ ವಯೋಮಾನದ ಬಾಲಕರ ವಿಭಾಗದಲ್ಲಿ ಉಪ್ಪಿನಂಗಡಿ  ನೆಕ್ಕಿಲಾಡಿಯ ನಿವಾಸಿ ಡಾ.ಸುಪ್ರೀತ್ ಜೋಯಲ್ ಲೋಬೋ ಮತ್ತು ಡಾ. ಶೈನಿ ಪಾಯಸ್  ದಂಪತಿಯ ಪುತ್ರ 7ನೇ ತರಗತಿಯ ಸಂಹಿತ್ ಜೊಸ್ಸಿ ಲೋಬೋ, ಕಾಣಿಯೂರಿನ ನಿವಾಸಿ ಅರವಿಂದ ಕುಮಾರ್ ಕೆ ಮತ್ತು ಜ್ಯೋತಿ ಕುಮಾರಿ ಕೆ ದಂಪತಿಯ ಪುತ್ರ 7ನೇ ತರಗತಿಯ ರತುಲ್ ಅದ್ವೈತ್, ಕುಂಜುರ್ ಪಂಜದ ನಿವಾಸಿ ಶ್ರೀನಿವಾಸ ಮಯ್ಯ ಡಿ  ಮತ್ತು ಜಯಲಕ್ಷ್ಮೀ ಎಸ್ ಮಯ್ಯ ದಂಪತಿಯ ಪುತ್ರ 7ನೇ ತರಗತಿಯ ಮಯೂರ್ ಎಸ್ ಮಯ್ಯ ಹಾಗೂ ಕಲ್ಲಾರೆಯ ನಿವಾಸಿ ಪ್ರವೀಣ್ ರೈ ಸಿ ಮತ್ತು ತೃಪ್ತಿ ರೈ ದಂಪತಿಯ ಪುತ್ರ 7ನೇ ತರಗತಿಯ ತ್ರಿನಯ್ ರೈ ದ್ವಿತೀಯ ಸ್ಥಾನವನ್ನು ಗಳಿಸಿದ್ದಾರೆ.

Continue Reading

Uncategorized

Kumaraswamy-ಸ್ಟಿಂಗ್ ಆಪರೇಷನ್‌ ವಿವಾದ: ಸಿದ್ದರಾಮಯ್ಯ ಮೌನವಾಗಿರಬಾರದು – ಸಿಬಿಐ ತನಿಖೆಗೆ ಕುಮಾರಸ್ವಾಮಿ ಆಗ್ರಹ

Published

on



Ad Widget

Ad Widget

Ad Widget

Ad Widget

ರಾಜ್ಯದಲ್ಲಿ ಸ್ಟಿಂಗ್ ಆಪರೇಷನ್‌ಗಳ ಹೆಸರಿನಲ್ಲಿ ರಾಜಕೀಯ ನಾಯಕರು ಹಾಗೂ ಅವರ ಕುಟುಂಬಗಳನ್ನು ಗುರಿಯಾಗಿಸಲಾಗುತ್ತಿದೆ ಎಂಬ ಆರೋಪಗಳ ಕುರಿತು ಸಮಗ್ರ ಮತ್ತು ನಿಷ್ಪಕ್ಷಪಾತ ತನಿಖೆ ನಡೆಸಬೇಕು. ಈ ಪ್ರಕರಣಗಳ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

Ad Widget

Ad Widget

Ad Widget

Ad Widget

ಬೆಂಗಳೂರು: ರಾಜ್ಯದಲ್ಲಿ ಸ್ಟಿಂಗ್ ಆಪರೇಷನ್‌ಗಳ ಹೆಸರಿನಲ್ಲಿ ರಾಜಕೀಯ ನಾಯಕರು ಹಾಗೂ ಅವರ ಕುಟುಂಬಗಳನ್ನು ಗುರಿಯಾಗಿಸಲಾಗುತ್ತಿದೆ ಎಂಬ ಆರೋಪಗಳ ಕುರಿತು ಸಮಗ್ರ ಮತ್ತು ನಿಷ್ಪಕ್ಷಪಾತ ತನಿಖೆ ನಡೆಸಬೇಕು. ಈ ಪ್ರಕರಣಗಳ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

Ad Widget

Ad Widget

Ad Widget alt="Ad Widget"/>

Ad Widget

ಈ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿ ಚರ್ಚಿಸುವುದರ ಜೊತೆಗೆ ದೂರು ಸಲ್ಲಿಸುವುದಾಗಿಯೂ ಅವರು ತಿಳಿಸಿದ್ದಾರೆ.

Ad Widget

Ad Widget <> Ad Widget

ಬೆಂಗಳೂರಿನ ಜೆಡಿಎಸ್ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಸ್ಟಿಂಗ್ ಆಪರೇಷನ್‌ಗಳ ಹಿಂದೆ ಯಾರಿದ್ದಾರೆ, ಅವುಗಳನ್ನು ಯಾರು ನಡೆಸಿದ್ದಾರೆ ಮತ್ತು ಇದರಲ್ಲಿ ಯಾರ ಪಾತ್ರವಿದೆ ಎಂಬುದನ್ನು ತನಿಖೆಯ ಮೂಲಕ ಪತ್ತೆಹಚ್ಚಬೇಕು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.



Ad Widget

ಸಿದ್ದರಾಮಯ್ಯ ಮೌನವಾಗಿರಬಾರದು: ಕುಮಾರಸ್ವಾಮಿ
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ವಿರುದ್ಧ ನಡೆಯುತ್ತಿದೆ ಎನ್ನಲಾದ ಷಡ್ಯಂತ್ರಕ್ಕೆ ಹೆದರುವ ಅಗತ್ಯವಿಲ್ಲ ಎಂದು ಹೇಳಿದ ಕುಮಾರಸ್ವಾಮಿ, ಸಿದ್ದರಾಮಯ್ಯ ಅವರು ತಮ್ಮ ಹಿಂದಿನ ಹೋರಾಟದ ಮನೋಭಾವದೊಂದಿಗೆ ಮಾತನಾಡಬೇಕು. ಇಂತಹ ಬೆಳವಣಿಗೆಗಳ ಬಗ್ಗೆ ಮೌನ ವಹಿಸುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟರು.

Ad Widget

Ad Widget

ಹಿಂದೆ ಮಾಜಿ ಮುಖ್ಯಮಂತ್ರಿಯೊಬ್ಬರ ವಿರುದ್ಧ ಸ್ಟಿಂಗ್ ಆಪರೇಷನ್ ನಡೆಸಲಾಗಿತ್ತು. ಬಳಿಕ ರಮೇಶ್ ಜಾರಕಿಹೊಳಿ ಹಾಗೂ ಕೆ.ಎನ್. ರಾಜಣ್ಣ ಅವರ ವಿಚಾರಗಳೂ ಮುನ್ನೆಲೆಗೆ ಬಂದವು. ಇದೀಗ ಸಿದ್ದರಾಮಯ್ಯ ಅವರ ಸರದಿ ಬಂದಿದೆ ಎಂದು ಕುಮಾರಸ್ವಾಮಿ ಆರೋಪಿಸಿದರು.

ಸದಾಶಿವನಗರದಲ್ಲಿ ನಿಗಾ ವ್ಯವಸ್ಥೆ ಇದೆ ಎಂಬ ಆರೋಪ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸದಾಶಿವನಗರದ ನಿವಾಸದಲ್ಲಿ ನಾಲ್ವರು ನಿವೃತ್ತ ಪೊಲೀಸ್ ಅಧಿಕಾರಿಗಳನ್ನು ನೇಮಿಸಿಕೊಂಡು, ಅತ್ಯಾಧುನಿಕ ಉಪಕರಣಗಳ ಮೂಲಕ ಸಚಿವರು ಹಾಗೂ ಇತರರ ಮಾತುಕತೆಗಳ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂಬ ಮಾಹಿತಿ ತಮಗೆ ಲಭಿಸಿದೆ ಎಂದು ಕುಮಾರಸ್ವಾಮಿ ಆರೋಪಿಸಿದರು.

ರಾಜಕೀಯ ನಾಯಕರು ಹಾಗೂ ಸಚಿವರ ಫೋನ್‌ಗಳನ್ನು ಕದ್ದಾಲಿಸಲಾಗುತ್ತಿದೆ ಎಂಬ ಆರೋಪ ಗಂಭೀರವಾಗಿದ್ದು, ಈ ಬಗ್ಗೆ ಪೊಲೀಸ್ ಇಲಾಖೆಯಲ್ಲೂ ಚರ್ಚೆಯಾಗುತ್ತಿದೆ ಎಂಬ ಮಾಹಿತಿ ಬಂದಿದೆ ಎಂದು ಅವರು ಹೇಳಿದರು.

ಆದರೆ, ಮುಖ್ಯಮಂತ್ರಿ ಸ್ವತಃ ಇಂತಹ ಚಟುವಟಿಕೆಗಳಿಗೆ ಆದೇಶ ನೀಡಿದ್ದಾರೆ ಎಂದು ತಾನು ಹೇಳುತ್ತಿಲ್ಲ. ಇಲಾಖೆಯಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಸಮಗ್ರ ತನಿಖೆಯ ಮೂಲಕ ಪರಿಶೀಲಿಸಬೇಕು ಎಂದು ಸ್ಪಷ್ಟಪಡಿಸಿದರು.

ಪೆನ್‌ಡ್ರೈವ್ ಪ್ರಕರಣದ ಬಗ್ಗೆಯೂ ಪ್ರಶ್ನೆ
2024ರ ಲೋಕಸಭಾ ಚುನಾವಣೆಗೆ ಎರಡು ದಿನ ಬಾಕಿ ಇರುವಾಗ ಮಂಡ್ಯ ಮತ್ತು ಹಾಸನ ಭಾಗಗಳಲ್ಲಿ ವಿಡಿಯೊಗಳನ್ನು ಪೆನ್‌ಡ್ರೈವ್‌ಗಳಲ್ಲಿ ಹಂಚಲಾಗಿದೆ ಎಂದು ಹೇಳಿದ ಕುಮಾರಸ್ವಾಮಿ ಅವರು, ವಿಡಿಯೋಗಳಲ್ಲಿ ಇದ್ದ ಮಹಿಳೆಯರ ಮುಖಗಳನ್ನು ಮರೆಮಾಚಲಿಲ್ಲ. ಲೋಕಸಭೆಯ ಇವತ್ತಿನ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ನಾನೂರು ಮಹಿಳೆಯರ ಮೇಲೆ ಪ್ರಜ್ವಲ್ ರೇವಣ್ಣ ಅತ್ಯಾಚಾರ ಎಸಗಿದ್ದಾರೆ ಎಂದು ಹೇಳಿದ್ದರು. ಆ ನಾನೂರು ಜನ ಮಹಿಳೆಯರಲ್ಲಿ ಎಷ್ಟು ಜನ ಬಂದು ಕೇಸು ದಾಖಲು ಮಾಡಿದ್ದಾರೆ? ಎಂದು ಪ್ರಶ್ನಿಸಿದರು.

ಆ ವಿಡಿಯೊಗಳನ್ನು ಸಿದ್ಧಪಡಿಸಿದವರು ಯಾರು, ಅವುಗಳನ್ನು ಯಾವ ಸ್ಥಳದಲ್ಲಿ ಸಿದ್ಧಪಡಿಸಲಾಯಿತು ಮತ್ತು ಹಂಚಿದವರ ವಿರುದ್ಧ ಯಾವ ಕ್ರಮ ಕೈಗೊಳ್ಳಲಾಗಿದೆ ಎಂಬ ಪ್ರಶ್ನೆಗಳಿಗೆ ರಾಜ್ಯ ಸರ್ಕಾರ ಉತ್ತರಿಸಬೇಕು ಎಂದು ಆಗ್ರಹಿಸಿದರು.

ತಮ್ಮ ಕುಟುಂಬದವರ ಬಗ್ಗೆಯೂ ಅವಹೇಳನಕಾರಿ ಸುದ್ದಿಗಳನ್ನು ಪ್ರಸಾರ ಮಾಡಲಾಗಿತ್ತು. ತಮ್ಮ ತಾಯಿಯ ವಿರುದ್ಧವೂ ಆರೋಪಗಳು ಮತ್ತು ಸುದ್ದಿಗಳನ್ನು ಹರಡಲಾಗಿತ್ತು. ಇಂತಹ ಸಂದರ್ಭಗಳಲ್ಲಿಯೂ ತಮ್ಮ ಕುಟುಂಬ ನ್ಯಾಯಾಲಯದ ಮೊರೆ ಹೋಗಿರಲಿಲ್ಲ ಎಂದು ಅವರು ಹೇಳಿದರು.

ಸಿದ್ದರಾಮಯ್ಯ ನ್ಯಾಯಾಲಯದ ಮೊರೆ ಹೋಗಿರುವುದಕ್ಕೆ ಆಕ್ಷೇಪ
ಸ್ಟಿಂಗ್ ಆಪರೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಅವರು ನ್ಯಾಯಾಲಯದಿಂದ ತಡೆಯಾಜ್ಞೆ ಪಡೆಯಲು ಅರ್ಜಿ ಸಲ್ಲಿಸಿದ್ದಾರೆ ಎಂಬ ವರದಿಗಳನ್ನು ಉಲ್ಲೇಖಿಸಿದ ಕುಮಾರಸ್ವಾಮಿ, ಯಾವುದೇ ಪ್ರಕರಣದಲ್ಲಿಯೂ ಸತ್ಯಾಸತ್ಯತೆ ನ್ಯಾಯಾಂಗದ ಮೂಲಕ ಹೊರಬರಬೇಕು. ನ್ಯಾಯಾಲಯದ ತೀರ್ಪಿಗೆ ಎಲ್ಲರೂ ತಲೆಬಾಗಬೇಕು ಎಂಬುದು ತಮ್ಮ ನಿಲುವು ಎಂದು ತಿಳಿಸಿದರು.
ಸುದೀರ್ಘ ರಾಜಕೀಯ ಅನುಭವ ಹೊಂದಿರುವ ಸಿದ್ದರಾಮಯ್ಯ ಅವರು ನ್ಯಾಯಾಲಯದ ತಡೆಯಾಜ್ಞೆ ಪಡೆಯುವ ಬದಲು ದಿಟ್ಟವಾಗಿ ನಿಂತು ಇಂತಹ ಬೆಳವಣಿಗೆಗಳನ್ನು ಎದುರಿಸಬೇಕು ಎಂದು ಅವರು ಮನವಿ ಮಾಡಿದರು.

ಸಿಬಿಐ ತನಿಖೆಗೆ ಮತ್ತೆ ಒತ್ತಾಯ
ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ವಿಶೇಷ ತನಿಖಾ ತಂಡ ರಚಿಸಿ ತನಿಖೆ ನಡೆಸಿರುವುದನ್ನು ತಾವು ವಿರೋಧಿಸಿಲ್ಲ ಎಂದ ಕುಮಾರಸ್ವಾಮಿ, ಇದೇ ರೀತಿಯ ಗಂಭೀರತೆಯನ್ನು ಇತರ ಪ್ರಕರಣಗಳಲ್ಲಿಯೂ ತೋರಿಸಬೇಕು ಎಂದು ಹೇಳಿದರು.

ಸ್ಟಿಂಗ್ ಆಪರೇಷನ್‌ಗಳ ಹಿಂದೆ ಇರುವವರನ್ನು ಪತ್ತೆಹಚ್ಚಿ, ಆರೋಪಗಳ ಸತ್ಯಾಸತ್ಯತೆಯನ್ನು ಬಹಿರಂಗಪಡಿಸಲು ಸಿಬಿಐ ತನಿಖೆ ಅಗತ್ಯವಿದೆ. ಈ ಕುರಿತು ಅಮಿತ್ ಶಾ ಅವರನ್ನು ಭೇಟಿಯಾಗಿ ದೂರು ಸಲ್ಲಿಸುವುದಾಗಿ ಪುನರುಚ್ಚರಿಸಿದರು.

Ad Widget
Continue Reading

Uncategorized

Lawyer Amrutesh-ಸೌಜನ್ಯ ಪ್ರಕರಣ ಮರುತನಿಖೆ : ಸಂತೋಷ್ ರಾವ್ ವಿರುದ್ಧ ಬಲವಾದ ಸಾಕ್ಷ್ಯಗಳಿವೆ: ಧಾರ್ಮಿಕ ಕ್ಷೇತ್ರದ ಮೇಲೆ ಷಡ್ಯಂತ್ರ ನಡೆಯುತ್ತಿದೆ : ಹೈಕೋರ್ಟ್ ವಕೀಲ ಅಮೃತೇಶ್

Published

on



Ad Widget

Ad Widget

Ad Widget

Ad Widget

ಸೌಜನ್ಯಾ ಪ್ರಕರಣದ ಮರುತನಿಖೆಗಾಗಿ ಸುಪ್ರೀಂ ಕೋರ್ಟ್ ಆದೇಶದಂತೆ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಲಾಗಿದೆ. ಆದರೆ ಈ ತನಿಖೆಯಿಂದ ಪ್ರಕರಣ ತಾರ್ಕಿಕ ಅಂತ್ಯ ಕಾಣುವುದು ಸಾಧ್ಯವಿಲ್ಲ ಎಂದು ಹೈಕೋರ್ಟ್ ವಕೀಲ ಅಮೃತೇಶ್ ಅಭಿಪ್ರಾಯಪಟ್ಟಿದ್ದಾರೆ. ಸಂತೋಷ್ ರಾವ್ ಅವರನ್ನು ತನಿಖೆಯಿಂದ ಹೊರಗಿಡುವಂತೆ ಸುಪ್ರೀಂ ಕೋರ್ಟ್ ಸೂಚಿಸಿದೆ ಎಂದು ಉಲ್ಲೇಖಿಸಿದ ಅಮೃತೇಶ್, ಅವರ ವಿರುದ್ಧ ಬಲವಾದ ಸಾಕ್ಷ್ಯಗಳಿವೆ ಎಂದು ಹೇಳಿದರು.

Ad Widget

Ad Widget

Ad Widget

Ad Widget

ಬೆಂಗಳೂರು: ಸೌಜನ್ಯಾ ಪ್ರಕರಣದ ಮರುತನಿಖೆಗಾಗಿ ಸುಪ್ರೀಂ ಕೋರ್ಟ್ ಆದೇಶದಂತೆ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಲಾಗಿದೆ. ಆದರೆ ಈ ತನಿಖೆಯಿಂದ ಪ್ರಕರಣ ತಾರ್ಕಿಕ ಅಂತ್ಯ ಕಾಣುವುದು ಸಾಧ್ಯವಿಲ್ಲ ಎಂದು ಹೈಕೋರ್ಟ್ ವಕೀಲ ಅಮೃತೇಶ್ ಅಭಿಪ್ರಾಯಪಟ್ಟಿದ್ದಾರೆ.

Ad Widget

Ad Widget

Ad Widget alt="Ad Widget"/>

Ad Widget

ಮಂಗಳವಾರ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ‘ವಾಯ್ಸ್ ಆಫ್ ಪಬ್ಲಿಕ್’ ಸಂಘಟನೆ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೌಜನ್ಯಾ ಪ್ರಕರಣದ ಮರುತನಿಖೆ, ಸಂತೋಷ್ ರಾವ್ ಪಾತ್ರ ಹಾಗೂ ಪ್ರಕರಣಕ್ಕೆ ಸಂಬಂಧಿಸಿದ ವಿವಿಧ ಬೆಳವಣಿಗೆಗಳ ಕುರಿತು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.

Ad Widget

Ad Widget <> Ad Widget

ಸಂತೋಷ್ ರಾವ್ ಅವರನ್ನು ತನಿಖೆಯಿಂದ ಹೊರಗಿಡುವಂತೆ ಸುಪ್ರೀಂ ಕೋರ್ಟ್ ಸೂಚಿಸಿದೆ ಎಂದು ಉಲ್ಲೇಖಿಸಿದ ಅಮೃತೇಶ್, ಅವರ ವಿರುದ್ಧ ಬಲವಾದ ಸಾಕ್ಷ್ಯಗಳಿವೆ ಎಂಬುದು ತಮ್ಮ ವಾದವಾಗಿದೆ ಎಂದು ಹೇಳಿದರು. ಸಿಬಿಐ ತನಿಖೆಯ ವೇಳೆ ಫೋರೆನ್ಸಿಕ್ ವರದಿಗಳಲ್ಲಿ ಸಂತೋಷ್ ರಾವ್ ಅವರ ದೇಹದಲ್ಲಿದ್ದ ಗಾಯಗಳ ಬಗ್ಗೆ ಉಲ್ಲೇಖವಾಗಿತ್ತು ಎಂದು ತಿಳಿಸಿದರು.



Ad Widget

ಸಿಬಿಐನ ವಿಶೇಷ ಸಾರ್ವಜನಿಕ ಅಭಿಯೋಜಕರಾಗಿದ್ದ ಬಿ.ಆರ್. ಶಿವಾನಂದ ಅವರು ಪ್ರಕರಣದ ವಿಚಾರದಲ್ಲಿ ನಿರ್ದಿಷ್ಟ ಸಂಘಟನೆಗಳ ಪರವಾಗಿ ಕೆಲಸ ಮಾಡಿದ್ದಾರೆ ಎಂದು ಅಮೃತೇಶ್ ಆರೋಪಿಸಿದರು. ಈ ಆರೋಪಗಳಿಗೆ ಸಂಬಂಧಿಸಿದಂತೆ ಸ್ವತಂತ್ರವಾಗಿ ದೃಢೀಕರಿಸಿದ ಮಾಹಿತಿ ಲಭ್ಯವಿಲ್ಲ.

Ad Widget

Ad Widget

ಕ್ಷೇತ್ರದ ವಿರುದ್ಧ ಅಪಪ್ರಚಾರದ ಆರೋಪ
ಸೌಜನ್ಯಾ ಪ್ರಕರಣವನ್ನು ಮುಂದಿಟ್ಟುಕೊಂಡು ಕೆಲವರು ಹಣ ಸಂಪಾದಿಸಿದ್ದಾರೆ ಹಾಗೂ ಪ್ರಸಿದ್ಧ ಧಾರ್ಮಿಕ ಕ್ಷೇತ್ರದ ವಿರುದ್ಧ ಅಪಪ್ರಚಾರ ನಡೆಸುವ ಉದ್ದೇಶದಿಂದ ಷಡ್ಯಂತ್ರ ರೂಪಿಸಿದ್ದಾರೆ ಎಂದು ಅಮೃತೇಶ್ ಆರೋಪಿಸಿದರು. ಪ್ರಕರಣದ ಹಿಂದೆ ಎಡಪಂಥೀಯರು ಹಾಗೂ ನಗರ ನಕ್ಸಲರ ಕೈವಾಡವಿದೆ ಎಂಬ ಆರೋಪವನ್ನೂ ಅವರು ಮಾಡಿದರು.

ಬುರುಡೆ ಪ್ರಕರಣದ ಅಂತಿಮ ವರದಿ ಬಹಿರಂಗಪಡಿಸಲು ಆಗ್ರಹ
ಸೌಜನ್ಯಾ ಪ್ರಕರಣದಲ್ಲಿ ಹಿನ್ನಡೆಯಾದ ಬಳಿಕ ಕೆಲವು ಗುಂಪುಗಳು ಬುರುಡೆ ಪ್ರಕರಣವನ್ನು ಮುನ್ನೆಲೆಗೆ ತಂದವು ಎಂದು ಅಮೃತೇಶ್ ಹೇಳಿದರು. ಸರ್ಕಾರದ ವೆಚ್ಚದಲ್ಲಿ ನಡೆದಿದ್ದ ಅನಧಿಕೃತ ಶವಗಳ ಅಂತ್ಯಸಂಸ್ಕಾರಕ್ಕೆ ಸಂಬಂಧಿಸಿದ ತನಿಖೆಯ ಅಂತಿಮ ವರದಿ ಇನ್ನೂ ಬಹಿರಂಗವಾಗಿಲ್ಲ ಎಂದು ಅವರು ಆಕ್ಷೇಪಿಸಿದರು.

ಚಿನ್ನಯ್ಯ ಆರೋಪಿಸಿರುವ ಮಹೇಶ್ ಶೆಟ್ಟಿ ತಿಮರೋಡಿ, ಮಟ್ಟೆಣ್ಣವರ್ ಹಾಗೂ ಯೂಟ್ಯೂಬರ್ ಸಮೀರ್ ಸೇರಿದಂತೆ ಕೆಲವರ ವಿರುದ್ಧ ಪ್ರಕರಣ ದಾಖಲಾಗದಿರುವುದರ ಬಗ್ಗೆಯೂ ಅವರು ಪ್ರಶ್ನೆ ಎತ್ತಿದರು.

ಮೂರು ತಿಂಗಳಲ್ಲಿ ತನಿಖೆ ಪೂರ್ಣಗೊಳಿಸುವುದು ಕಷ್ಟ
ಸೌಜನ್ಯಾ ತಾಯಿ ಕುಸುಮಾವತಿ ಹಾಗೂ ಕೆಲವು ಗ್ಯಾಂಗ್ ಹಣ ಮಾಡುವ ಉದ್ದೇಶದಿಂದ ಕ್ಷೇತ್ರದ ವಿರುದ್ಧ ಕುತಂತ್ರ ನಡೆಸುತ್ತಿದೆ. ಕೆಲವು ವಿಷಯ ಮುಚ್ಚಿಟ್ಟು ಅವರು ಸುಪ್ರೀಂಕೋರ್ಟ್‌ಗೆ ಹೋಗಿದ್ದಾರೆ. ಸುಪ್ರಿಂಕೋರ್ಟ್ ಸಂಪೂರ್ಣವಾಗಿ ಹೊಸದಾಗಿ ತನಿಖೆ ಮಾಡಲು ಎಸ್‌ಐಟಿ ರಚನೆ ಮಾಡಲು ಸೂಚಿಸಿದೆ. ಆದರೆ ಮೂರು ತಿಂಗಳಲ್ಲಿ ಪ್ರಕರಣದ ತೀರ್ಪು ಬರಲು ಸಾಧ್ಯವಿಲ್ಲ. 14 ವರ್ಷದ ಸಾಕ್ಷ್ಯಾಧಾರಗಳು ಈಗ ಸಿಗಲು ಸಾಧ್ಯವಿಲ್ಲ. ಈ ಗ್ಯಾಂಗ್‌ನ ನಿಜವಾದ ಟಾರ್ಗೆಟ್ ಮಲ್ಲಿಕ್ ಜೈನ್, ಧೀರಜ್ ಜೈನ್, ಉದಯ್ ಜೈನ್ ಅಲ್ಲ. ಬದಲಾಗಿ ಕ್ಷೇತ್ರವೇ ಆಗಿದೆ ಎಂದು ಅಮೃತೇಶ್ ತಿಳಿಸಿದ್ದಾರೆ.

ಹಿಂದಿನ ಹೇಳಿಕೆಗಳನ್ನು ಉಲ್ಲೇಖಿಸಿದ ವಕೀಲ
ಸೌಜನ್ಯಾ ಪ್ರಕರಣ ನಡೆದು 14 ವರ್ಷಗಳಾಗಿವೆ ಎಂದು ತಿಳಿಸಿದ ಅಮೃತೇಶ್, ಆರಂಭದಲ್ಲಿ ನಾಪತ್ತೆ ದೂರು ದಾಖಲಾಗಿತ್ತು. ಬಳಿಕ ಮೃತದೇಹ ಪತ್ತೆಯಾದ ನಂತರ ಅತ್ಯಾಚಾರ ಮತ್ತು ಕೊಲೆ ಆರೋಪದಡಿ ಪ್ರಕರಣ ದಾಖಲಿಸಲಾಗಿತ್ತು. ನಂತರ ತನಿಖೆಯನ್ನು ಸಿಐಡಿಯಿಂದ ಸಿಬಿಐಗೆ ವರ್ಗಾಯಿಸಲಾಗಿತ್ತು ಎಂದು ವಿವರಿಸಿದರು.

ಘಟನೆಯ ಬಳಿಕ ಸೌಜನ್ಯಾ ಅವರ ಕುಟುಂಬದವರು ಬೆಳ್ತಂಗಡಿಯಲ್ಲಿ ನಡೆಸಿದ್ದ ಸುದ್ದಿಗೋಷ್ಠಿಯಲ್ಲಿ ಧರ್ಮಸ್ಥಳದಿಂದ ಯಾವುದೇ ಒತ್ತಡ ಅಥವಾ ಬೆದರಿಕೆ ಇರಲಿಲ್ಲ ಎಂದು ಹೇಳಿದ್ದರೆಂದು ಅಮೃತೇಶ್ ಉಲ್ಲೇಖಿಸಿದರು. ಬಳಿಕ ಕೆಲವು ಗುಂಪುಗಳು ಧಾರ್ಮಿಕ ಗುರುಗಳು ಹಾಗೂ ಮಠಾಧೀಶರನ್ನು ಗುರಿಯಾಗಿಸಿಕೊಂಡು ಕ್ಷೇತ್ರದ ವಿರುದ್ಧ ಆರೋಪಗಳನ್ನು ಹರಡಿವೆ ಎಂದು ದೂರಿದರು.
ಸಂತೋಷ್ ರಾವ್ ಅವರನ್ನು ಪ್ರಕರಣದಿಂದ ಬಿಡುಗಡೆಗೊಳಿಸಲು ಸಾಕಷ್ಟು ಹಣ ಖರ್ಚು ಮಾಡಿರುವುದಾಗಿ ಮಹೇಶ್ ಶೆಟ್ಟಿ ತಿಮರೋಡಿ ಅವರೇ ಹೇಳಿದ್ದಾರೆ ಎಂದೂ ಅಮೃತೇಶ್ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ವಕೀಲ ಸದಾನಂದ ಗೌಡ ಉಪಸ್ಥಿತರಿದ್ದರು.

Ad Widget
Continue Reading

ಇಂದಿನ ಟ್ರೆಂಡಿಂಗ್‌ ಸುದ್ದಿಗಳು

error: Content is protected !!

Discover more from Nikhara News | Kannada News Website

Subscribe now to keep reading and get access to the full archive.

Continue reading