Connect with us

ದಕ್ಷಿಣ ಕನ್ನಡ

ʼಕಮೀಷನ್‌ ಸುಲಿಗೆ ಮೂಲಕ ಕಾಂಗ್ರೆಸ್‌ ಸೂಟ್‌ ಕೇಸ್‌ ಭರ್ತಿʼ : ಮಠಂದೂರು ; ʼಈ ಸರಕಾರದಲ್ಲಿ ಶಾಸಕರ ನಿಧಿಯಿಲ್ಲ – ಒಂದು ಫರ್ಲಾಂಗ್‌ ರಸ್ತೆ ಅಭಿವೃದ್ದಿಯಾಗಿಲ್ಲʼ : ಬಂಗಾರಡ್ಕ ವಿಶ್ವೇಶ್ವರ ಭಟ್

Published

on



Ad Widget

Ad Widget

Ad Widget

Ad Widget

ಪುತ್ತೂರು: ಪ್ರಸ್ತುತ ರಾಜ್ಯದಲ್ಲಿರುವುದು ಸುಲಿಗೆಕೋರ ಸರಕಾರ. ಒಂದೆಡೆ ಮಳೆ ಇಲ್ಲದೆ ಬರ ಪರಿಸ್ಥಿತಿಯಿದೆ. ಇನ್ನೊಂದೆಡೆ ಕಾಂಗ್ರೆಸ್‌ʼನ ಸೂಟ್‌ ಕೇಸ್‌ ಭರ್ತಿಯಾಗಿದೆ. ಬಿಜೆಪಿ ನಿರಂತರ ಹೋರಾಟ ಹಾಗೂ ಜನಾಂದೋಲನದ ಮೂಲಕ ಜನರನ್ನು ಎಬ್ಬಿಸಲಿದೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.

Ad Widget

Ad Widget

Ad Widget

Ad Widget

ರಾಜ್ಯ ಸರಕಾರದ ಕಮಿಷನ್ ದಂಧೆ, ಭ್ರಷ್ಟಾಚಾರ ಹಾಗೂ ಜನ ನಿಲುವು ಖಂಡಿಸಿ ಪ್ರತಿಭಟನೆ ಮತ್ತು ಸಿಎಂ ಹಾಗೂ ಡಿಸಿಎಂ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ನೇತೃತ್ವದಲ್ಲಿ ಮಂಗಳವಾರ ಅಮರ್ ಜವಾನ್ ಸ್ಮಾರಕದ ಬಳಿ ಪ್ರತಿಭಟನೆ ನಡೆಯಿತು.

Ad Widget

Ad Widget

Ad Widget alt="Ad Widget"/>

Ad Widget

ಕರ್ನಾಟಕದಲ್ಲಿ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಆಡಳಿತಕ್ಕೆ ಬಂದ ಪ್ರಾರಂಭದಿಂದಲೇ ರಾಜ್ಯದ ಜನರ ಹಿತಾಸಕ್ತಿಗೆ ವಿರುದ್ಧವಾದ ವರ್ತನೆ ತೋರುತ್ತಾ ಜನ ವಿರೋಧಿ ನೀತಿಯಿಂದಾಗಿ ಎಲ್ಲರ ಆಕ್ರೋಶಕ್ಕೆ ಕಾರಣವಾಗಿದೆ. ಹಿಂದಿನ ಬಿ.ಜೆ.ಪಿ. ಸರಕಾರ ಜಾರಿಗೆ ತಂದಿದ್ದಂತಹ ಹಲವು ಜನ ಪರ ಯೋಜನೆಗಳನ್ನು ರದ್ದುಗೊಳಿಸಿ, ರಾಜ್ಯದ ಅಭಿವೃದ್ಧಿಯನ್ನು ಕಡೆಗಣಿಸುವ ಮುಖಾಂತರ ಸರಕಾರವು ಜನರಿಗೆ ವಂಚನೆ ಮಾಡಿರುತ್ತದೆ. ಒಟ್ಟು ಅರಾಜಕತೆಯ ಆಡಳಿತ ರಾಜ್ಯದಲ್ಲಿ ತಾಂಡವವಾಡುತ್ತಿದೆ. ರಾಜ್ಯದ ಜನತೆ ಹಿಂದೆಂದೂ ಕಂಡರಿಯದ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿದ್ದಾರೆ ಇಂದು ಹೇಳಿದರು.

Ad Widget

Ad Widget <> Ad Widget

ಇತ್ತೀಚೆಗೆ ಬೆಂಗಳೂರಿನಲ್ಲಿ ಅಂಬಿಕಾಪತಿ ಮತ್ತು ಸಂತೋಷ್ ಎಂಬ ಗುತ್ತಿಗೆದಾರರ ಮನೆಯಲ್ಲಿ ಕೋಟೆಗಟ್ಟಲೆ ನಗದು ಹಣವು ಐಟಿ ದಾಳಿಯಲ್ಲಿ ಸಿಕ್ಕಿದ್ದು, ಈ ಹಣವು ಕಮಿಷನ್ ರೂಪದಲ್ಲಿ ಬಂದಿರುವ ಹಣವಾಗಿದೆ ಎನ್ನುವುದು ಪುಚಲಿತವಾಗಿದೆ. ಕಾಂಗ್ರೆಸ್ ಸರಕಾರ ಗುತ್ತಿಗೆದಾರರಿಗೆ ನೀಡಿದ ಹಣ ರೂ.650 ಕೋಟೆಗೆ ಪ್ರತಿಯಾಗಿ ಬಾಕಿ ಗುತ್ತಿಗೆದಾರರಿಂದ ಸಂಗ್ರಹಿಸಿ, ಕಾಂಗ್ರೆಸ್ ಸರಕಾರವು ಪಂಚರಾಜ್ಯ ಚುನಾವಣೆಯ ಖರ್ಚಿಗೆ ಕಲೆಕ್ಷನ್ ಮಾಡುತ್ತಿದ್ದಾರೆ ಎಂಬ ವಿಷಯ ಭಾರಿ ಚರ್ಚೆಯಲ್ಲಿದೆ ಎಂದು ಅವರು ಆರೋಪಿಸಿದರು.



Ad Widget

ಕಾಂಗ್ರೆಸ್ ಪಾಲಿಗೆ ಕರ್ನಾಟಕವು ಕಲೆಕ್ಷನ್ ಕೇಂದ್ರವಾಗಿದೆ. ರಾಜ್ಯದಲ್ಲಿ ಬರಕ್ಕೆ ತುತ್ತಾಗಿರುವ ರೈತರಿಗೆ ಪರಿಹಾರ ನೀಡಿಲ್ಲ, ವಿದ್ಯುತ್ ಕಡಿತದಿಂದ ರಾಜ್ಯ ಕತ್ತಲೆಯಲ್ಲಿ ಮುಳುಗಿದೆ, ವರ್ಗಾವಣೆ ದಂಧೆ ವಿಪರೀತವಾಗಿದೆ, ಅಲ್ಪಸಂಖ್ಯಾತರ ತುಷ್ಟಿಕರಣದಲ್ಲಿ ಸರಕಾರ ಮುಳುಗಿದೆ. ಈ ನಿಟ್ಟಿನಲ್ಲಿ ಕಾಂಗ್ರೆಸ್‌ನ ಎ.ಟಿ.ಎಂ. ಸರಕಾರದ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ರಾಜೀನಾಮೆ ನೀಡಬೇಕು ಅವರು ಆಗ್ರಹಿಸಿದರು.

Ad Widget

Ad Widget

ರಾಜ್ಯಪಾಲರು ತಕ್ಷಣ ಮಧ್ಯ ಪ್ರವೇಶಿಸಿ ಸರಕಾರದ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡಬೇಕು ಎಂದು ವಿನಂತಿಸಿಕೊಳ್ಳುತ್ತಿದ್ದೇವೆ ಎಂದು ಅವರು ಹೇಳಿದರು.

ಒಂದು ಫರ್ಲಾಂಗ್‌ ರಸ್ತೆ ಅಭಿವೃದ್ದಿಯಾಗಿಲ್ಲ :ಬಂಗಾರಡ್ಕ

ಹಿರಿಯ ಬಿಜೆಪಿ ಮುಖಂಡ ಬಂಗಾರಡ್ಕ ವಿಶ್ವೇಶ್ವರ ಭಟ್ ಮಾತನಾಡಿ ” ಪ್ರಸ್ತುತ ಶಾಸಕರ ನಿಧಿಯಿಲ್ಲ. ಯಾವುದೇ ತೊಂದರೆ ಆದಾಗ ಶಾಸಕರು ಅಲ್ಲಿ ಭೇಟಿ ನೀಡಿ ಹೇಳಿಕೆ ನೀಡುವುದು ಮಾತ್ರ. ಹೊರತು ಕನಿಷ್ಟ ಒಂದು ಫರ್ಲಾಂಗ್‌ ರಸ್ತೆ ಅಭಿವೃದ್ದಿಯಾಗಿಲ್ಲ. ಅಲ್ಲಲ್ಲಿ ಟೇಪ್‌ ಕತ್ತರಿಸುವುದು ಮಾತ್ರ. ಯಾವುದೇ ಅನುದಾನವಿಲ್ಲ. ರಾಜಕೀಯ ಭಾಷಣ ಮಾತ್ರ” ಎಂದರು.

ರಾಜ್ಯದಲ್ಲಿ ಸರಕಾರ ಇದೆಯಾ ಇಲ್ಲವೋ ಎಂಬ ಸಂಶಯ ಕಾಡುತ್ತಿದೆ. ಇವರು ಆಡಳಿತ ನಡೆಸಲು ಲಾಯಕ್ಕಿಲ್ಲ. ಕೇವಲ ರಾಜಕೀಯ, ಭ್ರಷ್ಟಾಚಾರ ಮಾತ್ರ ಮಾಡುತ್ತಾರೆ ಹೊರತು ಜನರ ಸಮಸ್ಯೆ ಪರಿಹಾರ ಮಾಡುತ್ತಿಲ್ಲ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳು ಬಿಜೆಪಿ ಶಾಸಕರನ್ನು ಕಾಂಗ್ರೆಸ್‌ಗೆ ಕರೆತರುವ ವಿಚಾರದಲ್ಲಿ ಮಾತ್ರ ಮಾತನಾಡುವುದು ಬಿಟ್ಟರೆ ಅಭಿವೃದ್ಧಿ, ಜನರ ಸಮಸ್ಯೆಗಳ ಬಗ್ಗೆ ಮಾತನಾಡುವುದೇ ಇಲ್ಲ. ಅಧಿಕಾರಕ್ಕೆ ಬಂದ ನಂತರವೂ ರಾಜಕೀಯ ಮಾಡುವುದಾದರೆ ಅವರಿಗೆ ಆಡಳಿತ ನಡೆಸಲು ಅರ್ಹತೆಯಿಲ್ಲ ಎಂದರು.

ಮುಂದಿನ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ಕೋಟ್ಯಾಂತರ ಹಣ, ಸಂಗ್ರಹಿಸುವ ಸರಕಾರ ರಾಜ್ಯದಲ್ಲಿದೆ.ರಾಜ್ಯ ಬರಪೀಡಿತವಾಗಿದ್ದರೂ 100 ಕೋಟಿಗೂ ಅಧಿಕ ಹಣ ಗುತ್ತಿಗೆದಾರನ ಮನೆಯಲ್ಲಿ ಪತ್ತೆಯಾಗಿದ್ದು ಇದು ಪಂಚ ರಾಜ್ಯಗಳಲ್ಲಿ ಪಕ್ಷವನ್ನು ಗೆಲ್ಲಿಸಲು ಸಂಗ್ರಹಿಸಿಡಲಾಗಿದೆ ಎಂದು ಆರೋಪಿಸಿದರು

ಎಂದು ಆರೋಪಿಸಿದ ಅವರು, ಸರಕಾರ ರಾಜ್ಯದ ಜನರ ಸಮಸ್ಯೆಗಳಿಗೆ ಸಂಧಿಸುತ್ತಿಲ್ಲ.18 ಜಿಲ್ಲೆಗಳಲ್ಲಿ ಬರವಿದ್ದರೂ ರಾಜ್ಯ ಸರಕಾರ ಏನೂ ಮಾಡದೇ ಕೇಂದ್ರ ಸರಕಾರದ ಕಡೆ ಕೈ ತೋರಿಸುತ್ತಿದ್ದು ಬರ ನಿವಾರಿಸುವ ಯಾವ ಮಾನಸಿಕತೆಯೂ ಸರಕಾರಕ್ಕಿಲ್ಲ ಎಂದು ಟೀಕಿಸಿದರು

ಅಕ್ಟೋಬರ್‌ನಲ್ಲೇ ವಿದ್ಯುತ್‌ ಕೊರತೆ ಉಂಟಾಗಿದೆ.ಪಕ್ಷವನ್ನು ಅಧಿಕಾರಕ್ಕೆ ತರಲು ಪಂಚ ಗ್ಯಾರಂಟಿಯ ಬಹುದೊಡ್ಡ ನಾಟಕವಾಡಿ ಈಗ ಹಣ ಕೊಡಲು ಇವರಿಗೆ ಸಾಧ್ಯವಾಗುತ್ತಿಲ್ಲ.ರೈತರಿಗೆ ಬೇಕಾದ ಸವಲತ್ತು ನೀಡುತ್ತಿಲ್ಲ. ಚುನಾವಣಾ ಸಂದರ್ಭದಲ್ಲಿ 40 ಪರ್ಸೆಂಟ್‌ನ ಆರೋಪ ಮಾಡಿದವರು ಈಗ 60 ಪರ್ಸೆಂಟ್ ಕಮಿಷನ್ ಪಡೆಯುತ್ತಾರೆ. ಕಲಾವಿದರಲ್ಲಿಯೂ ಕಮಿಷನ್‌ ಪಡೆಯುವ ಮೂಲಕ ನಾಡ ಹಬ್ಬ ದಸರಾಗೆ ಕಳಂಕ ತಂದಿದ್ದಾರೆ ಎಂದು ದೂರಿದರು.

ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ನಗರ ಮಂಡಲ ಅಧ್ಯಕ್ಷ ಪಿ.ಜಿ. ಜಗನ್ ನಿವಾಸ ರಾವ್, ಪಕ್ಷದ ಪ್ರಮುಖರಾದ ಪುರುಷೋತ್ತಮ ಮುಂಗ್ಲಿಮನೆ, ನಿತೀಶ್ ಕುಮಾರ್ ಶಾಂತಿವನ, ಜಯಶ್ರೀ ಎಸ್. ಶೆಟ್ಟಿ, ವಿದ್ಯಾ ಗೌರಿ, , ರಾಧಾಕೃಷ್ಣ ಬೋರ್ಕರ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು

Ad Widget
Click to comment

Leave a Reply

ಮಂಗಳೂರು

Mulki-ಮೂಲ್ಕಿ: ಚಲಿಸುತ್ತಿದ್ದ ಮಂಗಳೂರು – ಕಾರ್ಕಳ ಎಕ್ಸ್ ಪ್ರೆಸ್ ಬಸ್‌ಗೆ ಬಡಿದ ಗಿಡುಗ: ಗಾಜು ಪುಡಿಪುಡಿ, ಪುತ್ತೂರು ಮೂಲದ ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿದ ಭಾರಿ ಅವಘಡ

Published

on



Ad Widget

Ad Widget

Ad Widget

Ad Widget

ಮೂಲ್ಕಿ ಸಮೀಪದ ಹಳೆಯಂಗಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಮಂಗಳೂರು- ಕಾರ್ಕಳ ಎಕ್ಸ್‌ಪ್ರೆಸ್ ಬಸ್‌ನ ಮುಂಭಾಗದ ಗಾಜಿಗೆ ಗಿಡುಗವೊಂದು ಬಡಿದ ಪರಿಣಾಮ ಗಾಜು ಪುಡಿಪುಡಿಯಾದ ಘಟನೆ ನಡೆದಿದೆ. ಘಟನೆಯಲ್ಲಿ ಒಬ್ಬರಿಗೆ ಗಾಯವಾಗಿದೆ ಎಂದು ತಿಳಿದುಬಂದಿದೆ.

Ad Widget

Ad Widget

Ad Widget

Ad Widget

ಮಂಗಳೂರು: ಮೂಲ್ಕಿ ಸಮೀಪದ ಹಳೆಯಂಗಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಮಂಗಳೂರು- ಕಾರ್ಕಳ ಎಕ್ಸ್‌ಪ್ರೆಸ್ ಬಸ್‌ನ ಮುಂಭಾಗದ ಗಾಜಿಗೆ ಗಿಡುಗವೊಂದು ಬಡಿದ ಪರಿಣಾಮ ಗಾಜು ಪುಡಿಪುಡಿಯಾದ ಘಟನೆ ನಡೆದಿದೆ. ಘಟನೆಯಲ್ಲಿ ಒಬ್ಬರಿಗೆ ಗಾಯವಾಗಿದೆ ಎಂದು ತಿಳಿದುಬಂದಿದೆ.

Ad Widget

Ad Widget

Ad Widget alt="Ad Widget"/>

Ad Widget

ಲಕ್ಷ್ಮಿ ಗಣೇಶ್ ಹೆಸರಿನ ಎಕ್ಸ್‌ಪ್ರೆಸ್ ಬಸ್ ಸಂಚರಿಸುತ್ತಿದ್ದ ವೇಳೆ ಏಕಾಏಕಿ ಗಿಡುಗ ಬಸ್‌ನ ಮುಂಭಾಗದ ಗಾಜಿಗೆ ಬಡಿದಿದೆ. ಇದರಿಂದ ಗಾಜು ಒಡೆದು ಚೂರುಚೂರಾಗಿದೆ.

Ad Widget

Ad Widget <> Ad Widget

ಘಟನೆಯಿಂದ ಪ್ರಯಾಣಿಕರಲ್ಲಿ ಆತಂಕದ ವಾತಾವರಣ ನಿರ್ಮಾಣವಾದರೂ, ಚಾಲಕ ಹರೀಶ್ ಪೂಜಾರಿ ಅವರು ವಿಚಲಿತರಾಗದೆ ಸಮಯಪ್ರಜ್ಞೆಯಿಂದ ಬಸ್ ನಿಲ್ಲಿಸಿದ್ದಾರೆ. ಅವರ ಈ ನಡೆಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.



Ad Widget

ಬಸ್ ಚಾಲಕ ಪುತ್ತೂರಿನ ಸಂಟ್ಯಾರು ಕೂರೇಲು ನಿವಾಸಿ ಹರೀಶ್ ಪೂಜಾರಿ ಮೇಲೆ ಗಾಜಿನ ಚೂರುಗಳು ಬಿದ್ದು ಗಾಯಗೊಂಡಿದ್ದರು ಅವರು ವೇಗವಾಗಿ ಹೋಗುತ್ತಿದ್ದ ಬಸ್ ನ್ನು ತಕ್ಷಣ ನಿಯಂತ್ರಿಸಿದ್ದಾರೆ. ಅವಘಡ ಸಂದರ್ಭ ಡ್ರೈವರ್ ಸ್ಟೇರೀಂಗ್ ಕೈಬಿಟ್ಟದ್ದರೂ ಬಸ್ ಡಿವೈಡರ್ ಹಾರಿ ಭಾರೀ ಅವಘಡ ಸಂಭವಿಸುತ್ತಿತ್ತು ಎನ್ನಲಾಗಿದೆ.

Continue Reading

ಮಂಗಳೂರು

Ujire-ಭಾರೀ ಜನಸ್ತೋಮದೊಂದಿಗೆ ಸೌಜನ್ಯ ನ್ಯಾಯದ ನಡಿಗೆ

Published

on



Ad Widget

Ad Widget

Ad Widget

Ad Widget

ಧರ್ಮಸ್ಥಳದ ಸೌಜನ್ಯ ಪ್ರಕರಣದ ಮರುತನಿಖೆಗೆ ಆಗ್ರಹಿಸಿ ಸೌಜನ್ಯ ಪರ ಹೋರಾಟಗಾರರು ಉಜಿರೆಯಿಂದ ಬೆಳ್ತಂಗಡಿವರೆಗೆ ನ್ಯಾಯದ ನಡಿಗೆ ಹಮ್ಮಿಕೊಂಡಿದ್ದಾರೆ.

Ad Widget

Ad Widget

Ad Widget

Ad Widget

ಮಂಗಳೂರು: ಧರ್ಮಸ್ಥಳದ ಸೌಜನ್ಯ ಪ್ರಕರಣದ ಮರುತನಿಖೆಗೆ ಆಗ್ರಹಿಸಿ ಸೌಜನ್ಯ ಪರ ಹೋರಾಟಗಾರರು ಉಜಿರೆಯಿಂದ ಬೆಳ್ತಂಗಡಿವರೆಗೆ ನ್ಯಾಯದ ನಡಿಗೆ ಹಮ್ಮಿಕೊಂಡಿದ್ದಾರೆ.

Ad Widget

Ad Widget

Ad Widget alt="Ad Widget"/>

Ad Widget

ಉಜಿರೆಯಿಂದ ಆರಂಭವಾದ ಬೃಹತ್ ಜಾಥಾದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನರು ಭಾಗವಹಿಸಿದ್ದು, ಮೌನ ಮೆರವಣಿಗೆಯ ಮೂಲಕ ಸೌಜನ್ಯಳಿಗೆ ನ್ಯಾಯ ದೊರಕಿಸಿಕೊಡಬೇಕೆಂದು ಆಗ್ರಹಿಸಲಾಯಿತು. ಸುಮಾರು ಐದು ಕಿಲೋಮೀಟರ್‌ ದೂರದವರೆಗೆ ಹೋರಾಟಗಾರರು ನಡಿಗೆಯಲ್ಲಿ ಸಾಗಲಿದ್ದಾರೆ.

Ad Widget

Ad Widget <> Ad Widget

ನ್ಯಾಯದ ನಡಿಗೆಯ ಬಳಿಕ ಬೆಳ್ತಂಗಡಿಯ ಮೈದಾನದಲ್ಲಿ ಬೃಹತ್ ಅಭಿನಂದನಾ ಸಮಾವೇಶ ನಡೆಯಲಿದೆ. ಸೌಜನ್ಯ ಪರವಾಗಿ ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್‌ನಲ್ಲಿ ವಾದ ಮಂಡಿಸಿದ ವಕೀಲರ ತಂಡಕ್ಕೆ ಈ ಸಂದರ್ಭದಲ್ಲಿ ಅಭಿನಂದನೆ ಸಲ್ಲಿಸಲಾಗುತ್ತದೆ. ಕಾರ್ಯಕ್ರಮದಲ್ಲಿ ವಕೀಲರು ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದು ತಿಳಿದುಬಂದಿದೆ.



Ad Widget
Ad Widget
Continue Reading

ಬಿಗ್ ನ್ಯೂಸ್

Kaavu-BIG BREAKING: ಕಾವು ಬಳಿ ಹೆದ್ದಾರಿಗೆ ಉರುಳಿದ ಮರಗಳು, ಹೈಟೆನ್ಷನ್ ವಿದ್ಯುತ್ ಕಂಬ : ಮಾಣಿ – ಮೈಸೂರು ಹೈವೆಯಲ್ಲಿ ವಾಹನ ಸಂಚಾರ ಸ್ಥಗಿತ

Published

on



Ad Widget

Ad Widget

Ad Widget

Ad Widget

ಭಾರೀ ಗಾಳಿ ಮಳೆಗೆ ಮಾಣಿ–ಮೈಸೂರು ಹೆದ್ದಾರಿಯ ಕಾವು ಬಳಿ ಮರ ಹಾಗೂ ಹೈಟೆನ್ಷನ್ ವಿದ್ಯುತ್ ಕಂಬ ರಸ್ತೆಗೆ ಉರುಳಿಬಿದ್ದ ಪರಿಣಾಮ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಇದರಿಂದ ಸುಳ್ಯ, ಮಡಿಕೇರಿ ಹಾಗೂ ಮೈಸೂರು ಕಡೆಗೆ ತೆರಳುವ ವಾಹನ ಸವಾರರು ತೊಂದರೆ ಅನುಭವಿಸುವಂತಾಗಿದೆ.

Ad Widget

Ad Widget

Ad Widget

Ad Widget

ಪುತ್ತೂರು: ಭಾರೀ ಗಾಳಿ ಮಳೆಗೆ ಮಾಣಿ–ಮೈಸೂರು ಹೆದ್ದಾರಿಯ ಕಾವು ಬಳಿ ಮರ ಹಾಗೂ ಹೈಟೆನ್ಷನ್ ವಿದ್ಯುತ್ ಕಂಬ ರಸ್ತೆಗೆ ಉರುಳಿಬಿದ್ದ ಪರಿಣಾಮ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಇದರಿಂದ ಸುಳ್ಯ, ಮಡಿಕೇರಿ ಹಾಗೂ ಮೈಸೂರು ಕಡೆಗೆ ತೆರಳುವ ವಾಹನ ಸವಾರರು ತೊಂದರೆ ಅನುಭವಿಸುವಂತಾಗಿದೆ.

Ad Widget

Ad Widget

Ad Widget alt="Ad Widget"/>

Ad Widget

ಶುಕ್ರವಾರ (ಅ. 9) ಮಧ್ಯಾಹ್ನ ಸುಮಾರು 4 ಗಂಟೆಗೆ ಕಾವು ಪರಿಸರದಲ್ಲಿ ಭಾರೀ ಗಾಳಿ ಮಳೆಯಾಗಿದೆ. ಈ ವೇಳೆ ಮರ ಹಾಗೂ ವಿದ್ಯುತ್ ಕಂಬ ಹೆದ್ದಾರಿಗೆ ಅಡ್ಡಲಾಗಿ ಬಿದ್ದಿದ್ದು, ಮಡ್ಯಂಗಳ , ಮದ್ಲ ಎಂಬಲ್ಲಿ ಹಲವು ಮರಗಳು ಧರೆಗುರುಳಿವೆ. ಪೆರಿಗೇರಿ ರಸ್ತೆಯಲ್ಲೂ ಒಂದು ಮರ ಧರೆಗುರುಳಿದೆ ಜೊತೆಗೆ ವಿದ್ಯುತ್ ತಂತಿಗಳೂ ರಸ್ತೆಗೆ ಬಿದ್ದಿವೆ. ಇದರಿಂದ ಈ ಮಾರ್ಗದಲ್ಲಿ ವಾಹನ ಸಂಚಾರಕ್ಕೆ ಅಡ್ಡಿಯುಂಟಾಗಿದೆ.

Ad Widget

Ad Widget <> Ad Widget

ಸ್ಥಳೀಯರ ನೆರವಿನೊಂದಿಗೆ ಮೆಸ್ಕಾಂ, ತಾಲೂಕು ಆಡಳಿತ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿ ಮರ, ವಿದ್ಯುತ್ ಕಂಬ ಮತ್ತು ತಂತಿಗಳನ್ನು ತೆರವುಗೊಳಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಪುತ್ತೂರು ಗ್ರಾಮಾಂತರ ಠಾಣೆಯ ಪೊಲೀಸರು ಸ್ಥಳದಲ್ಲಿ ಸಂಚಾರ ನಿಯಂತ್ರಿಸುತ್ತಿದ್ದಾರೆ.



Ad Widget

ತೆರವು ಕಾರ್ಯಾಚರಣೆಗೆ ಸುಮಾರು 3ರಿಂದ 4 ಗಂಟೆಗಳ ಕಾಲ ಬೇಕಾಗುವ ಸಾಧ್ಯತೆಯಿದ್ದು, ಪುತ್ತೂರಿನಿಂದ ಮೈಸೂರು ಕಡೆಗೆ ತೆರಳುವ ವಾಹನ ಸವಾರರು ಪರ್ಯಾಯ ಮಾರ್ಗ ಬಳಸುವಂತೆ ಪುತ್ತೂರು ಗ್ರಾಮಾಂತರ ಠಾಣೆಯ ಎಸ್ಐ ಸುಷ್ಮಾ ಭಂಡಾರಿ ತಿಳಿಸಿದ್ದಾರೆ.

Ad Widget

Ad Widget

ಪರ್ಯಾಯ ಮಾರ್ಗ: ಪುತ್ತೂರಿನಿಂದ ಬೆಳ್ಳಾರೆ ಮಾರ್ಗವಾಗಿ ಸುಳ್ಯ ತಲುಪಿ ಅಲ್ಲಿಂದ ಮೈಸೂರು ಕಡೆಗೆ ಪ್ರಯಾಣಿಸಬಹುದು ಎಂದು ಅವರು ಮಾಹಿತಿ ನೀಡಿದ್ದಾರೆ.

Ad Widget
Continue Reading

ಇಂದಿನ ಟ್ರೆಂಡಿಂಗ್‌ ಸುದ್ದಿಗಳು

error: Content is protected !!

Discover more from Nikhara News | Kannada News Website

Subscribe now to keep reading and get access to the full archive.

Continue reading