ದಕ್ಷಿಣ ಕನ್ನಡ
ಚಿಕಿತ್ಸೆ ನೀಡುತ್ತಿದ್ದ ವೈದ್ಯೆಯನ್ನೇ 6 ಬಾರಿ ಇರಿದು ಕೊಂದ ರೋಗಿ – ಕೇರಳದಲ್ಲೊಂದು ಬೆಚ್ಚಿ ಬೀಳಿಸುವ ಘಟನೆ
ಕೊಚ್ಚಿ: ಚಿಕಿತ್ಸೆ ನೀಡುವ ವೇಳೆ ವೈದ್ಯೆಯನ್ನೇ ವ್ಯಕ್ತಿಯೊಬ್ಬ ಚುಚ್ಚಿ ಕೊಲೆಗೈದಿರುವ ಘಟನ ಕೇರಳದ ಕೊಟ್ಟಾರಕ್ಕರ ತಾಲೂಕು ಆಸ್ಪತ್ರೆಯಲ್ಲಿ ಬುಧವಾರ ( ಮೇ 10 ರಂದು) ನಡೆದಿದೆ. ಪೊಲೀಸ್ ಕಸ್ಟಡಿಯಿಂದ ಚಿಕಿತ್ಸೆಗೆ ಬಂದಿದ್ದ ವ್ಯಕ್ತಿಯೊಬ್ಬ ಚಿಕಿತ್ಸೆ ನೀಡುತ್ತಿದ್ದ ವೈದ್ಯೆಗೆ (Doctor) ಚಾಕು ಇರಿದು ಹತ್ಯೆ ಮಾಡಿದ್ದಾನೆ. ಮೃತ ವೈದ್ಯೆಯನ್ನು ವಂದನಾ ದಾಸ್ (23) ಎಂದು ಗುರುತಿಸಲಾಗಿದೆ. ಅವರು ಕೊಲ್ಲಮ್‍ನಲ್ಲಿ ಅಂತಿಮ ವರ್ಷದ ಎಂಬಿಬಿಎಸ್ (MBBS) ವ್ಯಾಸಂಗ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ನೆಡುಂಬನಾದ ಶಾಲಾ ಶಿಕ್ಷಕ ಸಂದೀಪ್ (42) ಹತ್ಯೆ ಮಾಡಿದ ಆರೋಪಿ. ಈತ ವೈದ್ಯೆಗೆ ಆರು ಬಾರಿ ಇರಿದಿದ್ದಾನೆ. ತೀವ್ರ ಗಾಯಗೊಂಡಿದ್ದ ಅವರಿಗೆ ತಕ್ಷಣ ಚಿಕಿತ್ಸೆಯ ವ್ಯವಸ್ಥೆ ಮಾಡಲಾಯಿತು. ಆದರೂ ಚಿಕಿತ್ಸೆ ಫಲಿಸದೆ ಅವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ಹಿನ್ನೆಲೆ:
ಆರೋಪಿ ಮದ್ಯ ಸೇವನೆ ಮಾಡಿ ನೆರೆಹೊರೆಯವರೊಂದಿಗೆ ಹಾಗೂ ಕುಟುಂಬಸ್ಥರೊಂದಿಗೆ ಗಲಾಟೆ ಮಾಡುತ್ತಿದ್ದ ಮಾಹಿತಿ ಬಂದ ನಂತರ ಪೊಲೀಸರು ಆತನನ್ನು ಬಂಧಿಸಿದ್ದರು. ಈ ವೇಳೆ ಸಂದೀಪ್ ಕಾಲಿಗೆ ಗಾಯ ಮಾಡಿಕೊಂಡಿರುವುದು ಗೊತ್ತಾಗಿದೆ. ಕೂಡಲೇ ಅವರನ್ನು ಪೊಲೀಸರು ಕೊಟ್ಟಾರಕ್ಕರ ತಾಲೂಕು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.
ಈ ವೇಳೆ 22 ವರ್ಷದ ವಂದನಾ ದಾಸ್ ಎಂಬ ವೈದ್ಯೆಯೊಬ್ಬರು ಸಂದೀಪ್ ಅವರ ಗಾಯಗೊಂಡ ಕಾಲಿಗೆ ಬ್ಯಾಂಡೇಜ್ ಮಾಡಲು ಹೋಗಿದ್ದಾರೆ. ಬ್ಯಾಂಡೇಜ್ ಮಾಡುವಾಗ ಸಂದೀಪ್ ಇದ್ದಕ್ಕಿದ್ದಂತೆ ಅಲ್ಲೇ ಇದ್ದ ಕತ್ತರಿ ಮತ್ತು ಒಂದು ಚಿಕ್ಕಚಾಕುವಿನಿಂದ ವೈದ್ಯೆ ಮೇಲೆ ಹಲ್ಲೆ ಮಾಡಿದ್ದಾನೆ. ಜೀವ ಭಯದಿಂದ ಗಾಯಗೊಂಡು ಹೊರಬಂದ ವೈದ್ಯೆ ಕಾಪಾಡಿ ಎಂದಿದ್ದಾರೆ. ಸಿಟ್ಟಿನಲ್ಲಿದ್ದ ಸಂದೀಪ್ ನಿನ್ನನ್ನು ಕೊಲೆ ಮಾಡುತ್ತೇನೆ ಎಂದು ಮತ್ತೆ ಹಲ್ಲೆಗೈದಿದ್ದಾನೆ.
ಆಸ್ಪತ್ರೆ ಕೋಣೆ ಹೊರಗಿದ್ದ ಪೊಲೀಸರು ಆತನನ್ನು ತಡೆಯಲು ಯತ್ನಿಸಿದ್ದಾಗ ಪೊಲೀಸರ ಮೇಲೂ ಹಲ್ಲೆಗೈದು, ಆಸ್ಪತ್ರೆಯ ಕೆಲ ಸಾಮಾಗ್ರಿಗಳನ್ನು ಪುಡಿಗೈದಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ವೈದ್ಯೆಯನ್ನು ಹೆಚ್ಚಿನ ಚಿಕಿತ್ಸೆಗೆ ತಿರುವನಂತಪುರಂ ಆಸ್ಪತ್ರೆಗೆ ದಾಖಲು ಮಾಡಿದರೂ ಆಕೆ ಮೃತಪಟ್ಟಿದ್ದಾರೆ.
ಆರೋಪಿ ತೀವ್ರ ಹಿಂಸಾತ್ಮಕವಾಗಿ ವರ್ತಿಸುತ್ತಿದ್ದ. ಚಿಕಿತ್ಸೆ ವೇಳೆ ಪೊಲೀಸರಿಗೆ ಒಳಗೆ ಪ್ರವೇಶಿಸಲು ಅನುಮತಿ ನೀಡದ ಕಾರಣ ನಾವು ಹೊರಗೆ ಇರಬೇಕಾಯಿತು. ಈ ವೇಳೆ ಆರೋಪಿ ವೈದ್ಯೆಯನ್ನು ಅಟ್ಟಿಸಿಕೊಂಡು ಬಂದಿದ್ದಾನೆ. ಪೊಲೀಸರು ತಡೆಯಲು ಪ್ರಯತ್ನಿಸಿದರು ಸಾಧ್ಯವಾಗಲಿಲ್ಲ. ನಂತರ ಆತನನ್ನು ತೀವ್ರ ಹರಸಾಹಸ ಪಟ್ಟು ಬಂಧಿಸಲಾಯಿತು. ಈ ವೇಳೆ ಓರ್ವ ಪೊಲೀಸ್ ಸಿಬ್ಬಂದಿಗೂ ಗಾಯಗಳಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸದ್ಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ವೈದ್ಯೆಗೆ ಹಲ್ಲೆಗೈದು ಹತ್ಯೆ ಮಾಡಲು ಕಾರಣ ಏನು ಎನ್ನುವುದರ ಬಗ್ಗೆ ತನಿಖೆ ನಡೆಯುತ್ತಿದೆ. ಪ್ರಕರಣವನ್ನು ಖಂಡಿಸಿ ಕೇರಳದಲ್ಲಿ ವೈದ್ಯರು ಪ್ರತಿಭಟನೆ ನಡೆಸಿ ಬೀದಿಗೆ ಇಳಿದಿದ್ದಾರೆ. ಘಟನೆಗೆ ಭಾರತೀಯ ವೈದ್ಯರ ಸಂಘಟನೆ (Indian Medical Association) ತೀವ್ರ ಆಕ್ರೋಶ ಹೊರಹಾಕಿದೆ. ಆರೋಪಿಗಳು ಹಾಗೂ ಅಪರಾಧಿಗಳಿಗೆ ಚಿಕಿತ್ಸೆ ನೀಡುವ ವೇಳೆ ಕೋಳ ತೊಡಿಸಬೇಕು ಎಂದು ಸುಪ್ರೀಂ ಕೋರ್ಟ್ (Supreme Court) ಆದೇಶವಿದೆ. ಆದರೂ ಸಹ ಪೊಲೀಸರು ನಿರ್ಲಕ್ಷ್ಯದಿಂದಾಗಿ ಈ ಘಟನೆ ನಡೆದಿದೆ ಎಂದು ವೈದ್ಯರು ಆರೋಪಿಸಿದ್ದಾರೆ
ಮಂಗಳೂರು
Soujanya Case-BIG BREAKING NEWS: ಸೌಜನ್ಯ ಪ್ರಕರಣ: ಮಂಗಳೂರಿನಲ್ಲಿ ಎಸ್‌ಐಟಿ ಮಹತ್ವದ ಸಭೆ; ಸೌಜನ್ಯ ದೇಹ ಸಿಕ್ಕ ಸ್ಥಳಕ್ಕೆ ಭೇಟಿ ಸಾಧ್ಯತೆ
ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರುತನಿಖೆ ಚುರುಕುಗೊಂಡಿದ್ದು, ಮಂಗಳೂರಿನ ವಿಶೇಷ ತನಿಖಾ ತಂಡದ (ಎಸ್‌ಐಟಿ) ಕಚೇರಿಯಲ್ಲಿ ಮಹತ್ವದ ಸಭೆ ನಡೆಯಿತು. ಎಸ್‌ಐಟಿ ಮುಖ್ಯಸ್ಥ ಶಶಿಕುಮಾರ್ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತನಿಖೆಯ ಮುಂದಿನ ಹಂತಗಳ ರೂಪುರೇಷೆ ಕುರಿತು ಚರ್ಚಿಸಲಾಯಿತು.
ಮಂಗಳೂರು: ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರುತನಿಖೆ ಚುರುಕುಗೊಂಡಿದ್ದು, ಮಂಗಳೂರಿನ ವಿಶೇಷ ತನಿಖಾ ತಂಡದ (ಎಸ್‌ಐಟಿ) ಕಚೇರಿಯಲ್ಲಿ ಮಹತ್ವದ ಸಭೆ ನಡೆಯಿತು. ಎಸ್‌ಐಟಿ ಮುಖ್ಯಸ್ಥ ಶಶಿಕುಮಾರ್ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತನಿಖೆಯ ಮುಂದಿನ ಹಂತಗಳ ರೂಪುರೇಷೆ ಕುರಿತು ಚರ್ಚಿಸಲಾಯಿತು.
ಐಪಿಎಸ್ ಅಧಿಕಾರಿಗಳಾದ ನಿಶಾ ಜೇಮ್ಸ್, ಲೋಕೇಶ್ ಜಗಲ್ಸಾರ್ ಹಾಗೂ ಮಂಗಳೂರು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಅವರು ಎಸ್‌ಐಟಿ ಕಚೇರಿಗೆ ಆಗಮಿಸಿದ್ದು, ಈಗಾಗಲೇ ಅಧಿಕಾರಿಗಳಿಗೆ ತನಿಖೆಯ ಜವಾಬ್ದಾರಿಗಳನ್ನು ಹಂಚಿಕೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಮುಂದಿನ ಎರಡು ದಿನಗಳಲ್ಲಿ ಎಸ್‌ಐಟಿ ತಂಡ ಬೆಳ್ತಂಗಡಿಗೆ ಭೇಟಿ ನೀಡುವ ಸಾಧ್ಯತೆಯಿದ್ದು, ಸೌಜನ್ಯ ಅವರ ಮನೆ ಹಾಗೂ ಕೊಲೆ ನಡೆದ ಸ್ಥಳವನ್ನು ಪರಿಶೀಲಿಸಲಿದೆ. ಪ್ರಕರಣದ ಪ್ರಾಥಮಿಕ ತನಿಖೆ ನಡೆಸಿದ್ದ ಅಧಿಕಾರಿಗಳು ಸೇರಿದಂತೆ ಹಲವು ಮಂದಿಯನ್ನು ವಿಚಾರಣೆಗೊಳಪಡಿಸಲು ತಂಡ ಮುಂದಾಗಿದೆ. ಅಲ್ಲದೆ, ಸೌಜನ್ಯ ಅವರ ಪೋಷಕರು ಆರೋಪಿಸಿರುವ ವ್ಯಕ್ತಿಗಳನ್ನೂ ವಿಚಾರಣೆ ನಡೆಸುವ ಸಾಧ್ಯತೆಯಿದೆ.
ಪ್ರಕರಣದ ಮರುತನಿಖೆ ನಡೆಸಿ 90 ದಿನಗಳೊಳಗೆ ವರದಿ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಸೂಚಿಸಿರುವ ಹಿನ್ನೆಲೆಯಲ್ಲಿ ಎಸ್‌ಐಟಿ ತನಿಖೆಗೆ ಮಹತ್ವ ಬಂದಿದೆ. ಸುಮಾರು 14 ವರ್ಷಗಳ ಹಿಂದೆ ನಡೆದಿದ್ದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರುತನಿಖೆ ಯಾವ ದಿಕ್ಕಿನಲ್ಲಿ ಸಾಗಲಿದೆ ಎಂಬ ಕುತೂಹಲ ಹೆಚ್ಚಾಗಿದೆ.
ಶಿಕ್ಷಣ
Vivekananda-ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಗೆ ದಸರಾ ನೃತ್ಯ ವೈಭವದಲ್ಲಿ ಪ್ರಥಮ ಸ್ಥಾನ
ದಸರಾ ಮಹೋತ್ಸವದ ಸಂಭ್ರಮದ ಪ್ರಯುಕ್ತ ಅಕ್ಟೋಬರ್ 9ರಂದು ಸುದ್ಧಿ ನ್ಯೂಸ್ ಚಾನೆಲ್ ವತಿಯಿಂದ, ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಹಯೋಗದಲ್ಲಿ ಹಾಗೂ ತಮ್ಮನ್ನಿ ಸಿಲ್ಕ್ಸ್ ಅಂಡ್ ಸ್ಯಾರೀಸ್ ಪ್ರಾಯೋಜಕತ್ವದಲ್ಲಿ ಆಯೋಜಿಸಲಾದ “ದಸರಾ ನೃತ್ಯ ವೈಭವ – 2026” ಕಾರ್ಯಕ್ರಮದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ತೆಂಕಿಲ, ಪುತ್ತೂರು ತಂಡವು ಪ್ರಥಮ ಸ್ಥಾನವನ್ನು ತನ್ನದಾಗಿಸಿಕೊಂಡಿದೆ.

ದಸರಾ ಮಹೋತ್ಸವದ ಸಂಭ್ರಮದ ಪ್ರಯುಕ್ತ ಅಕ್ಟೋಬರ್ 9ರಂದು ಸುದ್ಧಿ ನ್ಯೂಸ್ ಚಾನೆಲ್ ವತಿಯಿಂದ, ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಹಯೋಗದಲ್ಲಿ ಹಾಗೂ ತಮ್ಮನ್ನಿ ಸಿಲ್ಕ್ಸ್ ಅಂಡ್ ಸ್ಯಾರೀಸ್ ಪ್ರಾಯೋಜಕತ್ವದಲ್ಲಿ ಆಯೋಜಿಸಲಾದ “ದಸರಾ ನೃತ್ಯ ವೈಭವ – 2026” ಕಾರ್ಯಕ್ರಮದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ತೆಂಕಿಲ, ಪುತ್ತೂರು ತಂಡವು ಪ್ರಥಮ ಸ್ಥಾನವನ್ನು ತನ್ನದಾಗಿಸಿಕೊಂಡಿದೆ.
ಆಹ್ವಾನಿತ ತಂಡಗಳಿಗಾಗಿ ಆಯೋಜಿಸಲಾದ ಶಾಸ್ತ್ರೀಯ ಮತ್ತು ಅರೆಶಾಸ್ತ್ರೀಯ ವಿಭಾಗಗಳಲ್ಲಿ ವೈಯಕ್ತಿಕ ಹಾಗೂ ಸಮೂಹ ನೃತ್ಯ ಸ್ಪರ್ಧೆಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಈ ಅದ್ಭುತ ಸಾಧನೆ ಮಾಡುವ ಮೂಲಕ ಶಾಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಸಾಮೂಹಿಕ ವಿಭಾಗದಲ್ಲಿ ನವದುರ್ಗಾರಾಧನೆಯ ವಿಷಯದಲ್ಲಿ ನೃತ್ಯ ಪ್ರದರ್ಶನವನ್ನು ನೀಡಿದರು.
ಈ ಅಮೋಘ ಸಾಧನೆ ಮಾಡಿದ ವಿಜೇತ ವಿದ್ಯಾರ್ಥಿಗಳಿಗೆ ಶಾಲೆಯ ಮುಖ್ಯಗುರುಗಳು, ಆಡಳಿತ ಮಂಡಳಿ ಹಾಗೂ ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿ, ಅವರ ಮುಂದಿನ ಸಾಧನೆಗಳಿಗೆ ಶುಭ ಹಾರೈಸಿದ್ದಾರೆ.
ಕಾರ್ಯಕ್ರಮಗಳು
Saptaka Foundation-ಬೆಂಗಳೂರಿನ ಸಪ್ತಕ ಸಂಸ್ಥೆ ವತಿಯಿಂದ ವಿಟ್ಲ ಬಸ್ ನಿಲ್ದಾಣದಲ್ಲಿ ಕುಡಿಯುವ ತಂಪು ನೀರಿನ ವ್ಯವಸ್ಥೆ ಉದ್ಘಾಟನೆ; ಅಳಿಕೆ ಸತ್ಯಸಾಯಿ ಆಸ್ಪತ್ರೆಗೆ ನೀರಿನ ಡಿಸ್ಪೆನ್ಸರ್ ಕೊಡುಗೆ
ಬೆಂಗಳೂರಿನ ಸಪ್ತಕ ಸಂಸ್ಥೆಯು ವಿಟ್ಲದಲ್ಲಿ ಇತ್ತೀಚೆಗೆ ತನ್ನ ಶಾಖೆಯನ್ನು ತೆರೆದ ಸುರತ್ಕಲ್‌ನ ಚಿರಂತನ ಚಾರಿಟೇಬಲ್ ಟ್ರಸ್ಟ್ ಮೂಲಕ ಪುತ್ತೂರು ರಸ್ತೆಯಲ್ಲಿರುವ ವಿಟ್ಲ ಪಟ್ಟಣ ಪಂಚಾಯತ್‌ನ ಬಸ್ ನಿಲ್ದಾಣದಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಕುಡಿಯುವ ತಂಪು ನೀರಿನ ವ್ಯವಸ್ಥೆಯನ್ನು ಕಲ್ಪಿಸಿದೆ.

ವಿಟ್ಲ: ಬೆಂಗಳೂರಿನ ಸಪ್ತಕ ಸಂಸ್ಥೆಯು ವಿಟ್ಲದಲ್ಲಿ ಇತ್ತೀಚೆಗೆ ತನ್ನ ಶಾಖೆಯನ್ನು ತೆರೆದ ಸುರತ್ಕಲ್‌ನ ಚಿರಂತನ ಚಾರಿಟೇಬಲ್ ಟ್ರಸ್ಟ್ ಮೂಲಕ ಪುತ್ತೂರು ರಸ್ತೆಯಲ್ಲಿರುವ ವಿಟ್ಲ ಪಟ್ಟಣ ಪಂಚಾಯತ್‌ನ ಬಸ್ ನಿಲ್ದಾಣದಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಕುಡಿಯುವ ತಂಪು ನೀರಿನ ವ್ಯವಸ್ಥೆಯನ್ನು ಕಲ್ಪಿಸಿದೆ.
ನೂತನ ವ್ಯವಸ್ಥೆಯನ್ನು ಸಪ್ತಕ ಸಂಸ್ಥೆಯ ಜಿ.ಎಸ್. ಹೆಗಡೆ ಅವರು ಉದ್ಘಾಟಿಸಿದರು. ಬಸ್ ನಿಲ್ದಾಣಕ್ಕೆ ಆಗಮಿಸುವ ಪ್ರಯಾಣಿಕರು ಹಾಗೂ ವಿಟ್ಲದ ಸಾರ್ವಜನಿಕರಿಗೆ ಈ ವ್ಯವಸ್ಥೆಯಿಂದ ಅನುಕೂಲವಾಗಲಿದೆ.
ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯತ್‌ನ ಮಾಜಿ ಅಧ್ಯಕ್ಷರಾದ ರಮಾನಾಥ್ ವಿಟ್ಲ, ರಾಮದಾಸ್ ಶೆಣೈ, ರವೀಶ್ ವಿಟ್ಲ, ಅಶ್ರಫ್, ಚಿರಂತನದ ಭಾರವಿ ದೇರಾಜೆ ಹಾಗೂ ಶಿವಾನಂದ ರೈ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಅಳಿಕೆಯ ಸತ್ಯಸಾಯಿ ಆಸ್ಪತ್ರೆಗೆ ನೀರಿನ ಡಿಸ್ಪೆನ್ಸರ್ ಕೊಡುಗೆ
ಇದೇ ವೇಳೆ, ಬೆಂಗಳೂರಿನ ಸಪ್ತಕ ಸಂಸ್ಥೆಯ ವತಿಯಿಂದ ಚಿರಂತನ ಚಾರಿಟೇಬಲ್ ಟ್ರಸ್ಟ್ ಮೂಲಕ ಅಳಿಕೆಯ ಶ್ರೀ ಸತ್ಯ ಸಾಯಿ ಆಸ್ಪತ್ರೆಗೆ ಬಿಸಿ ನೀರು ಹಾಗೂ ತಂಪು ನೀರಿನ ಡಿಸ್ಪೆನ್ಸರ್‌ಗಳನ್ನು ಒದಗಿಸಲಾಗಿದೆ.
-
ಮಂಗಳೂರು22 hours agoMangalore-ಮಂಗಳೂರು: ಅನೈತಿಕ ಸಂಬಂಧ ಶಂಕೆ; ಪತ್ನಿಯನ್ನು ಚೂರಿಯಿಂದ ಇರಿದು ಕೊಂದ ಪತಿ
-
ಬಿಗ್ ನ್ಯೂಸ್23 hours agoGolithottu-ಗೋಳಿತ್ತೊಟ್ಟು: ತೋಡಿನ ನೀರಿನಲ್ಲಿ ಮೀನುಗಳ ಮಾರಣಹೋಮ; ತನಿಖೆಗೆ ಸ್ಥಳೀಯರ ಆಗ್ರಹ
-
Uncategorized18 hours ago
Digitel Arrest ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ಪುತ್ತೂರಿನ ವ್ಯಕ್ತಿಗೆ ₹1.31 ಕೋಟಿ ವಂಚನೆ
-
ನಿಧನ ವಾರ್ತೆ5 hours agoSullia-Big Breaking: ಸುಳ್ಯ: ವಿದ್ಯುತ್ ಶಾಕ್ಗೆ ಇಬ್ಬರು ಯುವಕರು ಬಲಿ; ಬಾಲಕನಿಗೆ ಗಾಯ
-
ಮಂಗಳೂರು23 hours agoABVP protest-ಮಂಗಳೂರಿನ ಆಗ್ನೆಸ್ ಕಾಲೇಜಿನಲ್ಲಿ ದಸರಾ ರಜೆಯಲ್ಲೂ ಪರೀಕ್ಷೆ; ಎಬಿವಿಪಿ ಪ್ರತಿಭಟನೆ ವೇಳೆ ನೂಕಾಟ; ವಿದ್ಯಾರ್ಥಿನಿಯರನ್ನು ತಳ್ಳಿದ ಪೊಲೀಸರ ವಿರುದ್ಧ ಆಕ್ರೋಶ
-
ಕ್ರೀಡೆ22 hours agoMCC:ಎಂಸಿಸಿಯಿಂದ ಕ್ರಿಕೆಟ್ ನಿಯಮಗಳ ಪರಿಷ್ಕರಣೆ: ಅ.1ರಿಂದ ಹೊಸ ಬದಲಾವಣೆಗಳು ಜಾರಿ
-
ಸ್ಥಳೀಯ4 hours agoSatish Patri-ಚಿಕ್ಕಮಗಳೂರು: ದೆವ್ವ ಬಿಡಿಸುವ ನೆಪದಲ್ಲಿ ಮಹಿಳೆ ಮೇಲೆ ಅತ್ಯಾಚಾರ ಆರೋಪ; ತಲೆಮರೆಸಿಕೊಂಡಿದ್ದ ಅರ್ಚಕ ಸತೀಶ್ ಪಾತ್ರಿ ಅರೆಸ್ಟ್..!
-
ಮಂಗಳೂರು22 hours agoMangalore Dasara-ಮಂಗಳೂರು ದಸರಾಕ್ಕೆ ಚಾಲನೆ: ಸಿಎಂ ಆಗಮನ ಮುಂದೂಡಿಕೆ




















