ನಿಧನ ವಾರ್ತೆ
Big Shocking : Heart Attack : ಮಂಗಳೂರು : ಹೃದಯಾಘಾತದಿಂದ 38 ರ ಹರೆಯದ ಹೆಡ್ ಕಾನ್ ಸ್ಟೇಬಲ್ ಮೃತ್ಯು
ಮಂಗಳೂರು, ಡಿ 15 ; ಮಂಗಳೂರು ಕಮೀಷನರೆಟ್ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ 38 ರ ಹರೆಯದ ಹೆಡ್ ಕಾನ್ ಸ್ಟೇಬಲ್ ಹೃದಯಾಘಾತದಿಂದ ಅಕಾಲಿಕವಾಗಿ ನಿಧನ ಹೊಂದಿದ್ದಾರೆ. ಮೂಲತ : ಬಾಗಲಕೋಟೆಯ ಲವಲೇಶ್ವರ ಗ್ರಾಮದ ಹನುಮಂತ ಲಮಾಣಿ ಮೃತಪಟ್ಟ ಹೆಡ್ ಕಾನ್ ಸ್ಟೇಬಲ್
ಹನುಮಂತರವರು ಕಳೆದ ಎರಡು ವರ್ಷಗಳಿಂದ ಕಾವೂರು ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ತಮ್ಮ ಊರಾದ ಬಾಗಲಕೋಟೆಗೆ ಹೋಗಿದ್ದ ವೇಳೆ ಗುರುವಾರ ಮುಂಜಾನೆ ಅವರಿಗೆ ಇದ್ದಕ್ಕಿದಂತೆ ಎದೆನೋವು ಕಾಣಿಸಿಕೊಂಡಿದೆ. ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋದರೂ ಚಿಕಿತ್ಸೆ ಫಲಿಸದೇ ನಿಧನರಾಗಿದ್ದಾರೆ.
2008 ರ ಬ್ಯಾಚ್ ನಲ್ಲಿ ಸೇವೆಗೆ ಸೇರ್ಪಡೆಗೊಂಡಿದ್ದ ಇವರು ಮೂಲತಃ ಬಾಗಲಕೋಟೆಯ ಲವಲೇಶ್ವರ ಗ್ರಾಮದವರಾಗಿದ್ದು ಮಂಗಳೂರಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.ಈ ಹಿಂದೆ ಮಂಗಳೂರು ಕಮಿಷನರೆಟ್ ವ್ಯಾಪ್ತಿಯ ಮೂಲ್ಕಿ, ಉತ್ತರ ಸಂಚಾರ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದ ದಕ್ಷ ಸಿಬ್ಬಂದಿ ಎಂದು ಹೆಸರುಗಳಿಸಿದ್ದರು. ಪತ್ನಿ ಮತ್ತು ನಾಲ್ವರು ಮಕ್ಕಳನ್ನು ಅಗಲಿದ್ದಾರೆ.
ಕಳೆದೆರಡು ವರ್ಷದಿಂದ , ವಿಶೇಷವಾಗಿ ಕೊರೊನಾ ಬಳಿಕ ಮದ್ಯವಯಸ್ಕ ಯುವಕರು ಹೃದಯಾಘಾತಕ್ಕೆ ತುತ್ತಾಗಿ ಮೃತಪಡುವ ಘಟನೆಗಳಲ್ಲಿ ತೀವ್ರ ಹೆಚ್ಚಳವಾದಂತೆ ಕಂಡು ಬರುತ್ತಿದೆ. ಇದರ ಹಿಂದಿನ ನಿಗೂಢತೆಯನ್ನು ಭೇದಿಸಲು ಸರಕಾರ ಮುಂದಾಗಬೇಕು ಎಂಬ ಆಗ್ರಹ ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ.
ನಿಧನ ವಾರ್ತೆ
Kankanadi-ಶಾಲೆಯಿಂದ ನಡೆದು ಹೋಗುತ್ತಿದ್ದ ಎರಡನೇ ಕ್ಲಾಸ್ ವಿದ್ಯಾರ್ಥಿಗೆ ಖಾಸಗಿ ಬಸ್ ಡಿಕ್ಕಿ; ಕಂಕನಾಡಿಯಲ್ಲಿ ಬಸ್ ಚಾಲಕನ ನಿರ್ಲಕ್ಷ್ಯಕ್ಕೆ ಬಾಲಕ ಬಲಿ
ರಸ್ತೆ ದಾಟುತ್ತಿದ್ದ ಎರಡನೇ ತರಗತಿ ವಿದ್ಯಾರ್ಥಿಗೆ ಖಾಸಗಿ ಬಸ್ ಡಿಕ್ಕಿಯಾಗಿ ಗಂಭೀರ ಗಾಯಗೊಂಡ ಬಾಲಕ ಮೃತಪಟ್ಟ ಘಟನೆ ನಗರದ ಕಂಕನಾಡಿಯಲ್ಲಿ ನಡೆದಿದೆ. ಗದಗ ಜಿಲ್ಲೆಯ ರೋಣ ಮೂಲದ ಮಂಗಳೂರಿನಲ್ಲಿ ಕೂಲಿ ಕಾರ್ಮಿಕರಾಗಿರುವ ಲಕ್ಷ್ಮೀ – ಅಶೋಕ್ ಎಂಬ ದಂಪತಿಯ ಮಗ ವಿಶ್ವಾಸ್ (8) ಮೃತ ಬಾಲಕ.
ಶಾಲೆಯಿಂದ ಮನೆ ಕಡೆಗೆ ನಡೆದುಕೊಂಡು ರಸ್ತೆ ದಾಟುತ್ತಿದ್ದ ಎರಡನೇ ತರಗತಿ ವಿದ್ಯಾರ್ಥಿ ಬಾಲಕನಿಗೆ ಖಾಸಗಿ ಬಸ್ ಡಿಕ್ಕಿಯಾಗಿ ಗಂಭೀರ ಗಾಯಗೊಂಡ ಬಾಲಕ ಮೃತಪಟ್ಟ ಘಟನೆ ನಗರದ ಕಂಕನಾಡಿಯಲ್ಲಿ ನಡೆದಿದೆ.
ಗದಗ ಜಿಲ್ಲೆಯ ರೋಣ ಮೂಲದ ಮಂಗಳೂರಿನಲ್ಲಿ ಕೂಲಿ ಕಾರ್ಮಿಕರಾಗಿರುವ ಲಕ್ಷ್ಮೀ – ಅಶೋಕ್ ಎಂಬ ದಂಪತಿಯ ಮಗ ವಿಶ್ವಾಸ್ (8) ಮೃತ ಬಾಲಕ.
ಕಂಕನಾಡಿಯಲ್ಲಿ ಸೈಂಟ್ ಜೋಸೆಫ್ ಅನುದಾನಿತ ಶಾಲೆಯಲ್ಲಿ ಎರಡನೇ ಕ್ಲಾಸ್ ಕಲಿಯುತ್ತಿದ್ದ ಬಾಲಕ ಬುಧವಾರ ಸಂಜೆ ಶಾಲೆ ಬಿಟ್ಟ ನಂತರ ಹೊರಗೆ ಬಂದಿದ್ದ. ಯಾವಾಗಲೂ ತಾಯಿ ಕರೆದೊಯ್ಯಲು ಬರುತ್ತಿದ್ದು ತಾಯಿ ಬರದೇ ಇದ್ದುದರಿಂದ ಶಾಲೆಯಿಂದ ಹೊರಗೆ ಬಂದಿದ್ದ ಹುಡುಗ ಕಂಕನಾಡಿ- ಫಳೀರ್ ರಸ್ತೆ ಬದಿಯಲ್ಲಿ ಮನೆ ಕಡೆಗೆ ನಡೆದು ಹೋಗಲು ರಸ್ತೆ ದಾಟಿದ್ದ. ಈ ವೇಳೆ, ಸ್ಟೇಟ್ ಬ್ಯಾಂಕ್ ಕಡೆಗೆ ತೆರಳುತ್ತಿದ್ದ ರಾಜಲಕ್ಷ್ಮಿ ಎನ್ನುವ 4 ನಂಬರಿನ ಬಸ್ ಡಿಕ್ಕಿಯಾಗಿದ್ದು ಅದರ ಎಡಬದಿಯ ಹಿಂಭಾಗದ ಚಕ್ರ ಹರಿದು ಬಾಲಕ ತೀವ್ರ ಗಾಯಗೊಂಡಿದ್ದಾನೆ.
ಕೂಡಲೇ ಬಾಲಕನನ್ನು ಬಸ್ಸಿನ ಸಿಬಂದಿ ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಗೆ ಒಯ್ದಿದ್ದು ಸಂಜೆಯ ವೇಳೆಗೆ ಬಾಲಕ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ. ಬಸ್ ತಾಗಿದ ರಭಸಕ್ಕೆ ವಿದ್ಯಾರ್ಥಿ ರಸ್ತೆಗೆ ಎಸೆಯಲ್ಪಟ್ಟಿದ್ದು ದೇಹದ ಒಂದು ಬದಿಗೆ ತೀವ್ರ ಪೆಟ್ಟು ಬಿದ್ದಿತ್ತು. ಬಸ್ ಚಾಲಕನ ನಿರ್ಲಕ್ಷ್ಯದ ಬಗ್ಗೆ ಕದ್ರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿಧನ ವಾರ್ತೆ
Kolar-ಕೋಲಾರ: ಹೆದ್ದಾರಿ ಬದಿಯಲ್ಲಿ ಪಾರ್ಸೆಲ್ ರೂಪದಲ್ಲಿ ಮಹಿಳೆಯ ಮೃತದೇಹ ಪತ್ತೆ
ಚೆನ್ನೈ-ಬೆಂಗಳೂರು ಎಕ್ಸ್ಪ್ರೆಸ್ ಹೆದ್ದಾರಿಗೆ ಹೊಂದಿಕೊಂಡಿರುವ ಸರ್ವೀಸ್ ರಸ್ತೆಯ ಬಳಿ ಪಾರ್ಸೆಲ್ನಂತೆ ಕಟ್ಟಿದ ಅಪರಿಚಿತ ಮಹಿಳೆಯ ಮೃತದೇಹ ಪತ್ತೆಯಾಗಿರುವ ಘಟನೆ ಕೆಜಿಎಫ್ ತಾಲ್ಲೂಕಿನ ಸುಂದರಪಾಳ್ಯ ಗ್ರಾಮದ ಸಮೀಪ ಬೆಳಕಿಗೆ ಬಂದಿದೆ.
ಕೋಲಾರ: ಚೆನ್ನೈ-ಬೆಂಗಳೂರು ಎಕ್ಸ್ಪ್ರೆಸ್ ಹೆದ್ದಾರಿಗೆ ಹೊಂದಿಕೊಂಡಿರುವ ಸರ್ವೀಸ್ ರಸ್ತೆಯ ಬಳಿ ಪಾರ್ಸೆಲ್ನಂತೆ ಕಟ್ಟಿದ ಅಪರಿಚಿತ ಮಹಿಳೆಯ ಮೃತದೇಹ ಪತ್ತೆಯಾಗಿರುವ ಘಟನೆ ಕೆಜಿಎಫ್ ತಾಲ್ಲೂಕಿನ ಸುಂದರಪಾಳ್ಯ ಗ್ರಾಮದ ಸಮೀಪ ಬೆಳಕಿಗೆ ಬಂದಿದೆ.
ಆಂಧ್ರಪ್ರದೇಶ ಹಾಗೂ ತಮಿಳುನಾಡು ರಾಜ್ಯಗಳ ಗಡಿಗೆ ಹೊಂದಿಕೊಂಡಿರುವ ಈ ಪ್ರದೇಶದಲ್ಲಿ ಶನಿವಾರ ಬೆಳಿಗ್ಗೆ ಪಾರ್ಸೆಲ್ ರೂಪದ ವಸ್ತುವೊಂದು ಬಿದ್ದಿರುವುದನ್ನು ಸ್ಥಳೀಯರು ಗಮನಿಸಿದ್ದಾರೆ. ಅದರಿಂದ ದುರ್ವಾಸನೆ ಬರುತ್ತಿದ್ದ ಹಿನ್ನೆಲೆಯಲ್ಲಿ ತಕ್ಷಣ ಬೇತಮಂಗಲ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದಾಗ ಅದರೊಳಗೆ ಮಹಿಳೆಯ ಮೃತದೇಹ ಇರುವುದು ಪತ್ತೆಯಾಗಿದೆ.
ಮೃತ ಮಹಿಳೆಗೆ ಸುಮಾರು 35 ವರ್ಷ ವಯಸ್ಸಾಗಿರಬಹುದು ಎಂದು ಅಂದಾಜಿಸಲಾಗಿದೆ. ಮಹಿಳೆಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ ಬಳಿಕ, ಮೃತದೇಹವನ್ನು ಕುಳಿತ ಭಂಗಿಯಲ್ಲಿ ಕೈಕಾಲುಗಳನ್ನು ಕಟ್ಟಿ ಗೋಣಿ ಚೀಲದಲ್ಲಿ ತುಂಬಿಸಲಾಗಿತ್ತು. ಬಳಿಕ ಅದರ ಮೇಲೆ ಪ್ಲಾಸ್ಟಿಕ್ ಕವರ್ ಸುತ್ತಿ, ಪಾರ್ಸೆಲ್ ಪ್ಲಾಸ್ಟರ್ನಿಂದ ಬಿಗಿಯಾಗಿ ಕಟ್ಟಲಾಗಿತ್ತು. ಮೃತದೇಹವನ್ನು ಸಾಗಿಸಲು ಅನುಕೂಲವಾಗುವಂತೆ ಟ್ರಾಲಿಯ ಮೇಲೆ ಇರಿಸಿ ಎಸೆದಿರುವುದು ಪೊಲೀಸರ ಪ್ರಾಥಮಿಕ ಪರಿಶೀಲನೆಯಲ್ಲಿ ಕಂಡುಬಂದಿದೆ.
ಸ್ಥಳಕ್ಕೆ ಹಿರಿಯ ಅಧಿಕಾರಿಗಳ ಭೇಟಿ:
ಘಟನಾ ಸ್ಥಳಕ್ಕೆ ಕೆಜಿಎಫ್ ಎಸ್ಪಿ ಶಿವಾಂಶು ರಜಪೂತ್, ಡಿವೈಎಸ್ಪಿ ಲಕ್ಷ್ಮಯ್ಯ ಸೇರಿದಂತೆ ಸೋಕೋ ತಂಡ, ಬೆರಳಚ್ಚು ತಜ್ಞರು ಹಾಗೂ ಶ್ವಾನದಳ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳದಲ್ಲಿ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಲಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಮಹಿಳೆಯ ಗುರುತು ಪತ್ತೆಹಚ್ಚಲು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಸಿಸಿಟಿವಿ ಸುಳಿವು; ವಿಶೇಷ ತಂಡ ರಚನೆ:
ದುಷ್ಕರ್ಮಿಗಳು ಕಾರಿನಲ್ಲಿ ಬಂದು ಮೃತದೇಹವನ್ನು ಎಸೆದು ಹೋಗಿರುವ ದೃಶ್ಯಗಳು ಹೆದ್ದಾರಿಯ ಟೋಲ್ನಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮರಾಗಳಲ್ಲಿ ಸೆರೆಯಾಗಿವೆ ಎನ್ನಲಾಗಿದೆ. ಸುಂದರಪಾಳ್ಯ ಅಂತಾರಾಜ್ಯ ಗಡಿ ಪ್ರದೇಶದಲ್ಲಿರುವ ಹಿನ್ನೆಲೆಯಲ್ಲಿ ನೆರೆಯ ಆಂಧ್ರಪ್ರದೇಶ ಹಾಗೂ ತಮಿಳುನಾಡು ಪೊಲೀಸರಿಗೂ ಮಾಹಿತಿ ರವಾನಿಸಲಾಗಿದೆ.
ಆರೋಪಿಗಳ ಪತ್ತೆಗಾಗಿ ಎರಡು ವಿಶೇಷ ತಂಡಗಳನ್ನು ರಚಿಸಲಾಗಿದ್ದು, ಸಿಸಿಟಿವಿ ದೃಶ್ಯಾವಳಿ ಹಾಗೂ ತಾಂತ್ರಿಕ ಮಾಹಿತಿಗಳ ಆಧಾರದಲ್ಲಿ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ.
ನಿಧನ ವಾರ್ತೆ
Beltangadi-ಬೆಳ್ತಂಗಡಿ: ವಿಷ ಸೇವಿಸಿ ಚಿಕಿತ್ಸೆ ಫಲಿಸದೆ ಐಟಿಐ ವಿದ್ಯಾರ್ಥಿ ಸಾವು
ಬೆಳ್ತಂಗಡಿ ತಾಲೂಕಿನ ಪಟ್ರಮೆ ಗ್ರಾಮದ ದೇವಸಕೋಡಿ ನಿವಾಸಿ ಹರ್ಷಿತ್ (18) ಎಂಬ ಯುವಕ ವಿಷ ಸೇವಿಸಿ ಮೃತಪಟ್ಟ ಘಟನೆ ನವೆಂಬರ್ 27ರಂದು ನಡೆದಿದೆ. ಮಾಲಾಡಿಯಲ್ಲಿ ದ್ವಿತೀಯ ವರ್ಷದ ಐಟಿಐ ವ್ಯಾಸಂಗ ಮಾಡುತ್ತಿದ್ದ ಹರ್ಷಿತ್, ನವೆಂಬರ್ 26ರಂದು ಬೆಳಿಗ್ಗೆ ಮನೆಯಲ್ಲೇ ವಿಷ ಸೇವಿಸಿ ಅಸ್ವಸ್ಥಗೊಂಡಿದ್ದರು.
ಬೆಳ್ತಂಗಡಿ: ತಾಲೂಕಿನ ಪಟ್ರಮೆ ಗ್ರಾಮದ ದೇವಸಕೋಡಿ ನಿವಾಸಿ ಹರ್ಷಿತ್ (18) ಎಂಬ ಯುವಕ ವಿಷ ಸೇವಿಸಿ ಮೃತಪಟ್ಟ ಘಟನೆ ನವೆಂಬರ್ 27ರಂದು ನಡೆದಿದೆ.
ಮಾಲಾಡಿಯಲ್ಲಿ ದ್ವಿತೀಯ ವರ್ಷದ ಐಟಿಐ ವ್ಯಾಸಂಗ ಮಾಡುತ್ತಿದ್ದ ಹರ್ಷಿತ್, ನವೆಂಬರ್ 26ರಂದು ಬೆಳಿಗ್ಗೆ ಮನೆಯಲ್ಲೇ ವಿಷ ಸೇವಿಸಿ ಅಸ್ವಸ್ಥಗೊಂಡಿದ್ದರು. ತಕ್ಷಣ ಕುಟುಂಬಸ್ಥರು ಅವರನ್ನು ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು.
ಆದರೆ, ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಅಲ್ಲಿ ವೈದ್ಯರು ನಿರಂತರ ಚಿಕಿತ್ಸೆ ನೀಡಿದರೂ ಫಲಕಾರಿಯಾಗದೆ ನವೆಂಬರ್ 27ರಂದು ಹರ್ಷಿತ್ ಕೊನೆಯುಸಿರೆಳೆದಿದ್ದಾರೆ.
ಯುವಕನ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಮೃತರು ತಾಯಿ ಚೆಲುವಮ್ಮ ಹಾಗೂ ಸಹೋದರಿ ಪ್ರತೀಕ್ಷಾ ಅವರನ್ನು ಅಗಲಿದ್ದಾರೆ.
-
ಬಿಗ್ ನ್ಯೂಸ್20 hours agoVitla-ವಿಟ್ಲ: ಚಿಕ್ಕಪ್ಪನನ್ನು ಕತ್ತಿಯಿಂದ ಕಡಿದು ಹತ್ಯೆಗೈದ ಯುವತಿ ಬಂಧನ
-
ಬಿಗ್ ನ್ಯೂಸ್20 hours agoVirupaksha Bhat-ಮಹಾಲಿಂಗೇಶ್ವರ ದೇವಸ್ಥಾನದ ಕಾಮಗಾರಿಗಳಿಗೆ ಹೈಕೋರ್ಟ್ ತಡೆಯಾಜ್ಞೆ: ಅನುಮತಿಯಿಲ್ಲದ ಕಾಮಗಾರಿ, ಟೆಂಡರ್ ಪ್ರಕ್ರಿಯೆ ಮುಂದುವರಿಸದಂತೆ ಮಧ್ಯಂತರ ಆದೇಶ; ದೇವಸ್ಥಾನದ ಅಭಿವೃದ್ಧಿಗೆ ನಮ್ಮ ವಿರೋಧವಿಲ್ಲ, ನಿಯಮಬದ್ಧ ಆಡಳಿತಕ್ಕೆ ಆಗ್ರಹ : ದೂರುದಾರ ವಿರೂಪಾಕ್ಷ ಭಟ್ ಪತ್ರಿಕಾಗೋಷ್ಟಿ
-
ಅಪರಾಧ23 hours agoBantwal-ಬಂಟ್ವಾಳ: ಬ್ರಹ್ಮರಕೂಟ್ಲು ಟೋಲ್ ಪ್ಲಾಜಾದಲ್ಲಿ ಗುಂಪುಗೂಡಿ ಗಲಾಟೆ; ಟೋಲ್ ಉಪಕರಣಗಳಿಗೆ ಹಾನಿ ಯತ್ನ – ಪ್ರಕರಣ ದಾಖಲು
-
ನಿಧನ ವಾರ್ತೆ1 hour agoBeltangadi-ಬೆಳ್ತಂಗಡಿ: ವಿಷ ಸೇವಿಸಿ ಚಿಕಿತ್ಸೆ ಫಲಿಸದೆ ಐಟಿಐ ವಿದ್ಯಾರ್ಥಿ ಸಾವು
-
ಸ್ಥಳೀಯ1 hour agoArrested-ಕುಂಭಾಶಿ ದೇವಸ್ಥಾನದಲ್ಲಿ ವೃದ್ಧೆಯ ಚಿನ್ನದ ಸರ ಕಳವು; ತಮಿಳುನಾಡಿನ ಮೂವರು ಮಹಿಳೆಯರ ಬಂಧನ
-
ನಿಧನ ವಾರ್ತೆ1 hour agoKolar-ಕೋಲಾರ: ಹೆದ್ದಾರಿ ಬದಿಯಲ್ಲಿ ಪಾರ್ಸೆಲ್ ರೂಪದಲ್ಲಿ ಮಹಿಳೆಯ ಮೃತದೇಹ ಪತ್ತೆ
-
ಅಂತರ ರಾಜ್ಯ54 minutes agoWhatsApp-WhatsApp ಬಳಕೆದಾರರಿಗೆ CERT-In ಎಚ್ಚರಿಕೆ; ಡೇಟಾ ಕದಿಯುವ, ಅಳಿಸುವ ಅಪಾಯ..!
-
ಅಂತರ ರಾಜ್ಯ48 minutes agoViral video-ಚಲಿಸುತ್ತಿರುವ ರೈಲಿನ AC ಬೋಗಿಯಲ್ಲಿ ದೀಪ ಹಚ್ಚಿ ಆರತಿ, ಶಂಖನಾದ; ವೈರಲ್ ವಿಡಿಯೋಗೆ ರೈಲ್ವೆ ಪ್ರತಿಕ್ರಿಯೆ















