ಪುತ್ತೂರು: ಪುತ್ತೂರಿನ ಪಿಲೋಮಿನಾ ಕಾಲೇಜಿನಲ್ಲಿ ರಾಷ್ಟ್ರಮಟ್ಟದ ವೈಟ್ ಲಿಫ್ಟರ್ ಆಗಿದ್ದ ಪುತ್ತೂರು ನಿವಾಸಿ ರಾಜೇಂದ್ರ ಪ್ರಸಾದ್(39 ವ.) ಹೃದಯಾಘಾತದಿಂದ (Heart Attack)ನಿಧನರಾಗಿದ್ದಾರೆ.
ಡಿ.12 ರಂದು ಪುತ್ತೂರಿನ ಪಡೀಲ್ ನಲ್ಲಿರುವ ಮನೆಯಲ್ಲಿ ಹೃದಯಾಘಾತಕ್ಕೆ ಒಳಗಾಗಿದ್ದು, ಪುತ್ತೂರಿನ ಖಾಸಗಿ ಆಸ್ಪತ್ರೆಗೆ ಕರೆತಂದಾಗ ಮೃತಪಟ್ಟಿದ್ದಾರೆ.
ಮೂಲತಃ ಪುತ್ತೂರಿನ ಕೆಮ್ಮಿಂಜೆ ನಿವಾಸಿಯಾಗಿದ್ದ ರಾಜೇಂದ್ರ ಪ್ರಸಾದ್ ಅವರು ಪುತ್ತೂರು ಫಿಲೋಮಿನಾ ಕಾಲೇಜಿನ ವಿದ್ಯಾಭ್ಯಾಸ ಪೂರೈಸಿದರು. ಕಾಲೇಜ್ ಸಮಯದಲ್ಲಿ ವೈಟ್ ಲಿಫ್ಟರ್ ಆಗಿ ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿದ್ದರು.
ನಂತರ ಎಸ್.ಡಿ.ಎಂ ಕಾಲೇಜಿನಲ್ಲಿ ವೈಟ್ ಲಿಫ್ಟರ್ ಕೋಚ್ ಆಗಿ , ಆ ನಂತರ ಮೂಡುಬಿದಿರೆ ಆಳ್ವಾಸ್ ಕಾಲೇಜಿನ ಕೋಚ್ ಆಗಿ ನೇಮಕವಾದರು.
ಇವರಿಂದ ತರಬೇತಿ ಪಡೆದ ಹಲವಾರು ವಿದ್ಯಾರ್ಥಿಗಳು ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ.
ಮೃತರು ಪತ್ನಿ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಅಂತಿಮ ದರ್ಶನಕ್ಕೆ ಜಿಲ್ಲೆ ಹೊರ ಜಿಲ್ಲೆಗಳಿಂದ ದೈಹಿಕ ಶಿಕ್ಷಣ ನಿರ್ದೇಶಕರುಗಳು ಹಾಗೂ ವಿದ್ಯಾರ್ಥಿಗಳು ಪುತ್ತೂರಿನ ಪಡೀಲು ನಿವಾಸಕ್ಕೆ ಆಗಮಿಸುತಿದ್ದಾರೆ.