Connect with us

ರಾಜಕೀಯ

Bharat Jodo Yatra | “ನೀವುಗಳು ಅದೃಷ್ಟವಂತರು, ಯಾರೂ ಪ್ರಶ್ನೆ ಕೇಳಬಹುದು ಯಾಕೆಂದರೆ ಇದು ಕಾಂಗ್ರೆಸ್ ಪತ್ರಿಕಾಗೋಷ್ಠಿ ..!” – ತುಮಕೂರಿನ ಪತ್ರಿಕಾಗೋಷ್ಠಿಯಲ್ಲಿ ರಾಹುಲ್ ಗಾಂಧಿ

Published

on



Ad Widget

Ad Widget

Ad Widget

Ad Widget

ತುಮಕೂರು: ” ನೀವುಗಳು ಅದೃಷ್ಟವಂತರು , ಯಾಕೆಂದರೆ ಇದು ಕಾಂಗ್ರೆಸ್ ಪತ್ರಿಕಾಗೋಷ್ಠಿ. ಬಿಜೆಪಿಯ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನೆ ಕೇಳುವ ಅವಕಾಶಗಳು ನಿಮಗಿರುವುದಿಲ್ಲ ” ಎನ್ನುವ ಮೂಲಕ ರಾಹುಲ್ ಗಾಂಧಿ (Rahul Gandhi) ಭಾರತ್ ಜೋಡೋ ಯಾತ್ರೆಯಲ್ಲಿ (Bharat Jodo Yatra) ನರೇಂದ್ರ ಮೋದಿಗೆ ಪರೋಕ್ಷ ಟಾಂಗ್ ಕೊಟ್ಟರು.

Ad Widget

Ad Widget

Ad Widget

Ad Widget

ತಮಿಳುನಾಡಿನಿಂದ ಹೊರಟ 150 ದಿನದ ಭಾರತ್ ಜೋಡೋ ಯಾತ್ರೆಯು 31 ನೇ ದಿನ ಕರ್ನಾಟಕದ ತುರುವೇಕೆರೆ ತಾಲ್ಲೂಕಿನ ಅರಳೀಕೆರೆಪಾಳ್ಯದಲ್ಲಿ ರಾಜ್ಯದ ಹಾಗೂ ದೇಶದ ಮಾಧ್ಯಮಗಳನ್ನು ಉದ್ದೇಶಿಸಿ ಪತ್ರಿಕಾಗೋಷ್ಠಿ ಕರೆದರು.

Ad Widget

Ad Widget

Ad Widget alt="Ad Widget"/>

Ad Widget

ರಾಜ್ಯದಲ್ಲಿ ಮುಂದಿನ ವರ್ಷ ನಮ್ಮದೇ ಪಕ್ಷದ ಸರ್ಕಾರ ಅಧಿಕಾರಕ್ಕೆ ಬರಲಿದ್ದು, 2023ರ ವಿಧಾನಸಭಾ ಚುನಾವಣೆಯಲ್ಲಿ ಬಹುಮತದೊಂದಿಗೆ ಗೆಲುವು ಸಾಧಿಸಲಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿಶ್ವಾಸ ವ್ಯಕ್ತಪಡಿಸಿದರು.

Ad Widget

Ad Widget <> Ad Widget

30 ನಿಮಿಷದ ಪತ್ರಿಕಾಗೋಷ್ಠಿಯಲ್ಲಿ ಹಲವು ಪ್ರಶ್ನೆಗಳಿಗೆ ರಾಹುಲ್ ಗಾಂಧಿ ಉತ್ತರಿಸಿದರು.



Ad Widget

ಪಿಎಫ್ಐ ನಿಷೇಧದ ಬಗ್ಗೆ ಬಿಜೆಪಿ ಆರೋಪಿಸುತ್ತಿರುವ ಆರೋಪದ ಹಿನ್ನಲೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ರಾಹುಲ್ , ದೇಶದಲ್ಲಿ ದ್ವೇಷ ಕಾರುವ ಯಾವೂದೇ ವ್ಯಕ್ತಿ, ಸಂಘಟನೆಗೆ ಕಾಂಗ್ರೇಸ್‍ ಬೆಂಬಲಿಸುವುದಿಲ್ಲ ಎಂದರು.

Ad Widget

Ad Widget

ಆಗ ಹಲವು ಪತ್ರಕರ್ತರು ಪ್ರಶ್ನೆ ಕೇಳಲು ಮುಂದೆ ಬಂದಾಗ ಪತ್ರಕರ್ತರೊಂದಿಗೆ ಹಾಸ್ಯ ಚಟಾಕಿ ಮಾಡಿದ ರಾಹುಲ್, “ನೀವುಗಳು ಅದೃಷ್ಟವಂತರು , ಯಾಕೆಂದರೆ ಇದು ಕಾಂಗ್ರೆಸ್ ಪತ್ರಿಕಾಗೋಷ್ಠಿ. ಬಿಜೆಪಿಯ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನೆ ಕೇಳುವ ಅವಕಾಶಗಳು ನಿಮಗಿರುವುದಿಲ್ಲ” ಎನ್ನುವ ಮೂಲಕ ಪರೋಕ್ಷವಾಗಿ ಪ್ರಧಾನಿ ಮೋದಿಗೆ ಟಾಂಗ್ ನೀಡಿದಾಗ ಪತ್ರಕರ್ತರು ನಕ್ಕರು.

ರಾಷ್ಟ್ರೀಯ ಪಕ್ಷಗಳಿಗೆ ಸಂಯುಕ್ತ ವ್ಯವಸ್ಥೆ ಹಾಗೂ ಪ್ರಾದೇಶಿಕ ಆಕಾಂಕ್ಷೆಗಳ ಬಗ್ಗೆ ಕಾಳಜಿಯಿಲ್ಲ ಎನ್ನುವ ಪ್ರಶ್ನೆಗೆ ಸಂವಿದಾನವೇ ಹೇಳಿದೆ ಭಾರತ ದೇಶ ಒಕ್ಕೂಟಗಳ ರಾಷ್ಟ್ರ ಎಂದು. ಭಾರತದಲ್ಲಿ ಎಲ್ಲಾ ರಾಜ್ಯಗಳಿಗೂ ಅಲ್ಲಿಯ ಭಾಷೆಗಳಿಗೂ, ಅಲ್ಲಿಯ ಆಚರಣೆಗಳಿಗೆ ಸಮಾನ ಹಕ್ಕಿದೆ. ಇದನ್ನು ನಾನು ರಾಜಕೀಯ ವಿಷಯವಾಗಿ ಹೇಳುತ್ತಿಲ್ಲ, ಇದು ನಮ್ಮ ದೇಶದ ಸ್ವಭಾವ ಇದೇ ನನ್ನ ನಂಬಿಕೆ ಎಂದರು.

ರಾಜ್ಯ ರಾಜಕಾರಣದ ಬಗ್ಗೆ ಪ್ರಶ್ನೆಗೆ,
ರಾಜ್ಯದ ನಾಯಕರ ನಡುವೆ ಯಾವುದೇ ತಿಕ್ಕಾಟ, ಭಿನ್ನಮತವಿಲ್ಲ. ನಮ್ಮದು ಸರ್ವಾಧಿಕಾರಿ ಮನಸ್ಥಿತಿಯ ಪಕ್ಷವಲ್ಲ. ಎಲ್ಲರ ಭಾವನೆ, ಅಭಿಪ್ರಾಯಗಳಿಗೆ ಅವಕಾಶವಿದೆ. ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಎಲ್ಲಾ ನಾಯಕರು ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ. ಚುನಾವಣೆಯಲ್ಲಿ ಗೆದ್ದ ನಂತರ ಪಕ್ಷದ ವೇದಿಕೆಯಲ್ಲಿ ಮುಖ್ಯಮಂತ್ರಿ ಯಾರಾಗಬೇಕು ಎಂಬುದನ್ನು ನಿರ್ಧರಿಸಲಾಗುತ್ತದೆ. ಸಮರ್ಥರೊಬ್ಬರು ಮುಖ್ಯಮಂತ್ರಿ ಆಗುತ್ತಾರೆ ಎಂದು ಹೇಳಿದರು.

ಬಿಜೆಪಿ ಸರ್ಕಾರದ ಶೇ 40ರಷ್ಟು ಕಮಿಷನ್ ಪಡೆದುಕೊಳ್ಳುವ ಭ್ರಷ್ಟ ವ್ಯವಸ್ಥೆ, ಬೆಲೆ ಏರಿಕೆ, ನಿರುದ್ಯೋಗ ಸಮಸ್ಯೆಗಳನ್ನು ಜನರ ಮುಂದಿಟ್ಟು ಚುನಾವಣೆ ಎದುರಿಸುತ್ತೇವೆ. ಈ ಮೂರು ಪ್ರಮುಖ ಸಮಸ್ಯೆಗಳಿಂದ ಬೇಸತ್ತಿರುವುದು ಯಾತ್ರೆ ಸಮಯದಲ್ಲಿ ಜನರನ್ನು ಭೇಟಿ ಮಾಡಿದಾಗ ಮನದಟ್ಟಾಗಿದೆ. ಹಾಗಾಗಿಯೇ ನಾವು ರಾಜ್ಯದಲ್ಲಿ ಅಧಿಕಾರಕ್ಕೆ ಬರುತ್ತೇವೆ ಎಂದು ರಾಹುಲ್ ಗಾಂಧಿ ಹೇಳಿದರು.

ಯಾತ್ರೆ ಅನುಭವ: ಪಾದಯಾತ್ರೆಯನ್ನೇ ಏಕೆ ಆಯ್ಕೆ ಮಾಡಿಕೊಂಡಿದ್ದೀರಿ? ಎಂಬ ಪ್ರಶ್ನೆಗೆ ಉತ್ತರಿಸಿ ‘ನನ್ನ ಬಗ್ಗೆ ತಪ್ಪು ಅಭಿಪ್ರಾಯ ಮೂಡಿಸಲು ಬಿಜೆಪಿಯವರು ಹಣ ಖರ್ಚುಮಾಡಿ ಮಾಧ್ಯಮಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಆದರೆ ಜನರಿಂದ ಸತ್ಯ ತಿಳಿದುಕೊಳ್ಳಲು ಪಾದಯಾತ್ರೆ ಆಯ್ಕೆ ಮಾಡಿಕೊಂಡಿದ್ದೇನೆ. ಅವರ ಜತೆಗೆ ಹೆಚ್ಚು ಆಪ್ತವಾಗಿ ಮಾತನಾಡಬಹುದು, ನೋವು, ಸಂಕಷ್ಟಗಳನ್ನು ಅರಿಯುವುದಾಗಿದೆ. ಇದು ನನಗೆ ದೊಡ್ಡ ಅನುಭವವಾಗಿದೆ. ನಾನೂ ಎಲ್ಲರಂತೆ ಕಾರು, ವಿಮಾನದಲ್ಲಿ ಸಂಚರಿಸಿದ್ದರೆ ಸಾರ್ವಜನಿಕರ ಸಮಸ್ಯೆ, ಅಭಿಪ್ರಾಯ ಗೊತ್ತಾಗುತ್ತಿರಲಿಲ್ಲ’ ಎಂದು ಯಾತ್ರೆಯ ಅನುಭವಗಳನ್ನು ಬಿಚ್ಚಿಟ್ಟರು.

ಯಾತ್ರೆ ಪ್ರಾರಂಭವಾಗಿ 31 ದಿನಗಳಷ್ಟೇ ಕಳೆದಿದ್ದು, ಇನ್ನೂ ಇದು ಆರಂಭಿಕ ಹಂತವಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಅನುಭವಗಳು ಪಾಠ ಹೇಳುತ್ತವೆ. ಜನರ ಜತೆಗೆ ಮಾತನಾಡದಿದ್ದರೆ ಅವರ ಪರವಾಗಿ ಕೆಲಸ ಮಾಡುವುದು ಕಷ್ಟಕರ. ಅದಕ್ಕಾಗಿಯೇ ಇಂತಹದೊಂದು ಪ್ರಯತ್ನಕ್ಕೆ ಕೈ ಹಾಕಿದ್ದೇನೆ ಎಂದರು.

ಭಾರತವನ್ನು ಒಗ್ಗೂಡಿಸುವುದು ಯಾತ್ರೆಯ ಉದ್ದೇಶವೇ ಹೊರತು 2024ರ ಚುನಾವಣೆ ಗೆಲ್ಲುವುದಷ್ಟೇ ನಮ್ಮ ಗುರಿಯಲ್ಲ. ಹಿಂಸಾಚಾರ, ಕೋಮು ದ್ವೇಷದಿಂದ ದೇಶವನ್ನು ವಿಭಜಿಸಲಾಗುತ್ತಿದೆ. ಆರ್ಥಿಕ ಅಸಮಾನತೆ ಮೂಡಿದ್ದು, ಕೆಲವರಷ್ಟೇ ಶ್ರೀಮಂತರಾಗುತ್ತಿದ್ದಾರೆ. ಒಬ್ಬಿಬ್ಬರ ಬಳಿ ದೇಶದ ಸಂಪತ್ತು ಕ್ರೋಡೀಕರಣವಾಗುತ್ತಿದೆ. ಬೆಲೆ ಏರಿಕೆ, ಆರ್ಥಿಕ ಕುಸಿತದಿಂದ ಜನರು ಜರ್ಜರಿತರಾಗಿದ್ದು, ಆ ಬಗ್ಗೆ ಮಾತನಾಡುವುದು ಯಾತ್ರೆಯ ಉದ್ದೇಶವಾಗಿದೆ ಎಂದು ವಿವರಿಸಿದರು.

ಬಿಜೆಪಿ, ಆರ್‌ಎಸ್ಎಸ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, ‘ಕಾಂಗ್ರೆಸ್ ರಾಷ್ಟ್ರವನ್ನು ಒಗ್ಗೂಡಿ, ಅಭಿವೃದ್ಧಿ ಮಾಡಿದೆಯೇ ಹೊರತು ಎಂದೂ ವಿಭಜನೆ ಮಾಡಿಲ್ಲ. ದೇಶ ವಿಭಜನೆ ಮಾಡುತ್ತಿರುವವರೇ ನಮ್ಮ ವಿರುದ್ಧ ಮಾತನಾಡುತ್ತಿದ್ದಾರೆ. ಬ್ರಿಟೀಷರ ವಿರುದ್ಧ ಹೋರಾಡಿ, ಜೈಲುವಾಸ ಅನುಭವಿಸಿದ್ದು ಮಹಾತ್ಮಾ ಗಾಂಧಿ, ನೆಹರೂ, ಸರ್ದಾರ್ ಪಟೇಲ್ ಹಾಗೂ ಇತರರು ಕಾಂಗ್ರೆಸಿಗರು.

ಆರ್‌ಎಸ್ಎಸ್‌ನವರು ಬ್ರಿಟೀಷರ ಪರವಾಗಿ ನಿಂತಿದ್ದರು. ಸಾವರ್ಕರ್ ಬ್ರಿಟೀಷರಿಂದ ಆರ್ಥಿಕ ನೆರವು ಪಡೆಯುತ್ತಿದ್ದರು.

ಈ ದೇಶದಲ್ಲಿ ಸ್ವಾಂತಂತ್ರ್ಯ, ಪ್ರಜಾಪ್ರಭುತ್ವ, ಸಂವಿಧಾನ ತಂದಿದ್ದು ಕಾಂಗ್ರೆಸ್. ಆದರೆ ಬಿಜೆಪಿ ಈಗ ದ್ವೇಷವನ್ನು ಸೃಷ್ಟಿಸಿ ದೇಶ ವಿಭಜಿಸುತ್ತಿದೆ.

ಈ ಯಾತ್ರೆ ಕೇವಲ ನಾನು ಮಾಡುತ್ತಿಲ್ಲ. ದೇಶದ ಲಕ್ಷಾಂತರ ಜನ ಈ ಯಾತ್ರೆ ಮಾಡುತ್ತಿದ್ದಾರೆ. ಬಿಜೆಪಿಯ ದ್ವೇಷ ರಾಜಕಾರಣ, ಬೆಲೆ ಏರಿಕೆ, ನಿರುದ್ಯೋಗ, ಆರ್ಥಿಕ ಅಸಮಾನತೆಯಿಂದ ಬೇಸತ್ತ ಜನ ಯಾತ್ರೆ ನಡೆಸುತ್ತಿದ್ದಾರೆ ಎಂದರು.

Ad Widget
Click to comment

Leave a Reply

ಸ್ಥಳೀಯ

Mysuru-ಮೈಸೂರು ಕಂಬಳಕ್ಕೆ ಆಗಮಿಸಲಿರುವ ಕೋಣಗಳಿಗೆ ಕುಶಾಲನಗರದಲ್ಲಿ ವಿಶ್ರಾಂತಿಗೆ ವ್ಯವಸ್ಥೆ – ಶಾಸಕರಾದ ಅಶೋಕ್ ರೈ ಮಂಥರ್ ಗೌಡ ನೇತೃತ್ವದಲ್ಲಿ ಸಭೆ

Published

on



Ad Widget

Ad Widget

Ad Widget

Ad Widget

ಮೈಸೂರಿನಲ್ಲಿ ನಡೆಯಲಿರುವ ಕಂಬಳಕ್ಕೆ ಆಗಮಿಸುವ ಕೋಣಗಳಿಗೆ ಕುಶಾಲನಗರದಲ್ಲಿ ಸೂಕ್ತ ವಿಶ್ರಾಂತಿ ಹಾಗೂ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲು ನಿಟ್ಟಿನಲ್ಲಿ ಪೂರ್ವಸಿದ್ಧತಾ ಸಭೆ ನಡೆಯಿತು.

Ad Widget

Ad Widget

Ad Widget

Ad Widget

ಕುಶಾಲನಗರ: ಮೈಸೂರಿನಲ್ಲಿ ನಡೆಯಲಿರುವ ಕಂಬಳಕ್ಕೆ ಆಗಮಿಸುವ ಕೋಣಗಳಿಗೆ ಕುಶಾಲನಗರದಲ್ಲಿ ಸೂಕ್ತ ವಿಶ್ರಾಂತಿ ಹಾಗೂ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲು ನಿಟ್ಟಿನಲ್ಲಿ ಪೂರ್ವಸಿದ್ಧತಾ ಸಭೆ ನಡೆಯಿತು.

Ad Widget

Ad Widget

Ad Widget alt="Ad Widget"/>

Ad Widget

ಕುಶಾಲನಗರ ಪುರಸಭೆ ಸಭಾಂಗಣದಲ್ಲಿ ನಡೆದ ಸಭೆಯು ಮೈಸೂರು ಕಂಬಳದ ಅಧ್ಯಕ್ಷ ಹಾಗೂ ಶಾಸಕ ಅಶೋಕ್ ಕುಮಾರ್ ರೈ ಮತ್ತು ಮಡಿಕೇರಿ ಶಾಸಕ ಮಂಥರ್ ಗೌಡ ಅವರ ನೇತೃತ್ವದಲ್ಲಿ ನಡೆಯಿತು.

Ad Widget

Ad Widget <> Ad Widget

ಕಂಬಳ ಕೋಣಗಳಿಗೆ ಪ್ರಯಾಣದ ಬಳಿಕ ವಿಶ್ರಾಂತಿ, ಆರೈಕೆ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಒದಗಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.



Ad Widget

ಸಭೆಯಲ್ಲಿ ರಾಜ್ಯ ಕಂಬಳ ಅಧ್ಯಕ್ಷ ಬೆಳಪು ದೇವಿಪ್ರಸಾದ್ ಶೆಟ್ಟಿ ಹಾಗೂ ಮುರಳೀಧರ ರೈ ಮಠಂತಬೆಟ್ಟು ಉಪಸ್ಥಿತರಿದ್ದರು.

Ad Widget

Ad Widget

ತುಳುನಾಡಿನ ಸಾಂಪ್ರದಾಯಿಕ ಕ್ರೀಡೆಯಾದ ಕಂಬಳಕ್ಕೆ ಮೈಸೂರಿನಲ್ಲಿ ಭರ್ಜರಿ ಸಿದ್ಧತೆ ನಡೆಯುತ್ತಿದ್ದು, ವಿವಿಧ ಭಾಗಗಳಿಂದ ಕಂಬಳ ಕೋಣಗಳು ಮೈಸೂರಿನತ್ತ ಪ್ರಯಾಣ ಬೆಳೆಸಲಿವೆ.

Ad Widget
Continue Reading

ರಾಜಕೀಯ

U.T. Khader-₹86ರ ಔಷಧಕ್ಕೆ ₹4,528; ಆಸ್ಪತ್ರೆಗಳಲ್ಲಿ ದುಬಾರಿ ದರಕ್ಕೆ ಔಷಧಗಳ ಮಾರಾಟ – ಆಸ್ಪತ್ರೆಗಳಲ್ಲಿ ಲ್ಯಾಂಡಿಂಗ್ ಮತ್ತು ಮಾರಾಟ ದರ ಪಟ್ಟಿ ಪ್ರಕಟಿಸಲು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕು : ಯು.ಟಿ ಖಾದರ್

Published

on



Ad Widget

Ad Widget

Ad Widget

Ad Widget

ಆಸ್ಪತ್ರೆಗಳಲ್ಲಿ ಮಾರಾಟವಾಗುತ್ತಿರುವ ಕ್ಯಾನ್ಸರ್ ಸೇರಿದಂತೆ ವಿವಿಧ ಕ್ರಿಟಿಕಲ್‌ ಔಷಧಗಳ ಲ್ಯಾಂಡಿಂಗ್ ದರ ಮತ್ತು ಮಾರಾಟ ದರದ ನಡುವೆ ಭಾರೀ ವ್ಯತ್ಯಾಸ ಕಂಡುಬಂದಿದೆ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ.

Ad Widget

Ad Widget

Ad Widget

Ad Widget

ಬೆಂಗಳೂರು: ಆಸ್ಪತ್ರೆಗಳಲ್ಲಿ ಮಾರಾಟವಾಗುತ್ತಿರುವ ಕ್ಯಾನ್ಸರ್ ಸೇರಿದಂತೆ ವಿವಿಧ ಕ್ರಿಟಿಕಲ್‌ ಔಷಧಗಳ ಲ್ಯಾಂಡಿಂಗ್ ದರ ಮತ್ತು ಮಾರಾಟ ದರದ ನಡುವೆ ಭಾರೀ ವ್ಯತ್ಯಾಸ ಕಂಡುಬಂದಿದೆ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ.

Ad Widget

Ad Widget

Ad Widget alt="Ad Widget"/>

Ad Widget

ಬರೊಬ್ಬರಿ ಶೇ.5000 ರಷ್ಟು ದುಬಾರಿ ದರಕ್ಕೆ ಮಾರಾಟ ಮಾಡಲಾಗುತ್ತಿದೆ ಎಂಬ ಆಘಾತಕಾರಿ ಅಂಕಿ-ಅಂಶಗಳನ್ನು ಆರೋಗ್ಯ ಸಚಿವ ಯು.ಟಿ. ಖಾದರ್‌ ಬಿಚ್ಚಿಟ್ಟಿದ್ದಾರೆ

Ad Widget

Ad Widget <> Ad Widget

ಆಹಾರ ಸುರಕ್ಷತೆ ಹಾಗೂ ಔಷಧ ನಿಯಂತ್ರಣ ಅಧಿಕಾರಿಗಳು ವಿವಿಧ ಆಸ್ಪತ್ರೆಗಳಲ್ಲಿ ನಡೆಸಿದ ಪರಿಶೀಲನೆ ವೇಳೆ ಔಷಧಗಳನ್ನು ಲ್ಯಾಂಡಿಂಗ್ ದರಕ್ಕಿಂತ ಹಲವು ಪಟ್ಟು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ ಎಂದು ಸಚಿವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.



Ad Widget

ಪ್ರತಿ ಆಸ್ಪತ್ರೆ, ಫಾರ್ಮಾಸಿಗಳು ಔಷಧಗಳ ಲ್ಯಾಂಡಿಂಗ್ ದರ ಹಾಗೂ ಮಾರಾಟ ದರವನ್ನು ಪ್ರತ್ಯೇಕವಾಗಿ ಪಟ್ಟಿ ಮಾಡಿ ಬಹಿರಂಗ ಮಾಡಬೇಕು. ಈ ಬಗ್ಗೆ ಕೇಂದ್ರ ಸರ್ಕಾರ ಕಾನೂನು ರೂಪಿಸಬೇಕು. ದರ ನಿಯಂತ್ರಿಸಲು ರಾಜ್ಯಕ್ಕೆ ಅಧಿಕಾರ ಇಲ್ಲ. ಹೀಗಾಗಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದರು.

Ad Widget

Ad Widget

ಅಜಗಜಾಂತರ ವ್ಯತ್ಯಾಸ (ರೂಗಳಲ್ಲಿ)
ಔಷಧ- ಲ್ಯಾಂಡಿಂಗ್ ದರ – ಎಂಆರ್‌ಪಿ

ಗುಫೋಲ್-86- 4,528
ಗುಫಿಸೈಕ್ಲೈನ್-50 ಇಂಜೆಕ್ಷನ್ – 160-7,110
ಟೆರ್ಲಿಟಿಸ್-118-4,416
ಟ್ಯಾಕ್ಸೋಕೇರ್-120 ಎಂಜಿ-1,000-21,617
ಕ್ಯಾನ್‌ಮ್ಯಾಬ್ 440 ಎಂಜಿ-6,600-57,457
ಬೆವಾಟಸ್ 400 ಎಂಜಿ-5,850-62,690
ಸೈಟ್ಯಾಕ್ಸ್ 100 (ಕ್ಯಾನ್ಸರ್ ಔಷಧ)-342-3,836
ನೆಬ್ಯುಲೈಸರ್ ಮಾಸ್ಕ್-44.50-950
ಐವಿಸೆಟ್-14.75-295
ಪಾಲಿಸೇಫಿಟಿ ಪಿಆರ್‌ಒ ಕ್ಯಾನುಲಾ-33.21-548

Ad Widget
Continue Reading

ಅಂತರ ರಾಜ್ಯ

Shivraj Singh Chauhan-ಕರ್ನಾಟಕ ಸೇರಿ 5 ರಾಜ್ಯಗಳು ಬರಪೀಡಿತವೆಂದು ಘೋಷಣೆ : ಅ.3ಕ್ಕೆ ರಾಜ್ಯಕ್ಕೆ ಕೇಂದ್ರ ತಂಡ ಭೇಟಿ – ಶಿವರಾಜ್ ಸಿಂಗ್ ಚೌಹಾಣ್

Published

on



Ad Widget

Ad Widget

Ad Widget

Ad Widget

ಕೇಂದ್ರ ಸರಕಾರವು ಈವರೆಗೆ ಕರ್ನಾಟಕ ಸೇರಿದಂತೆ ಐದು ರಾಜ್ಯಗಳು ಬರಪೀಡಿತವೆಂದು ಘೋಷಣೆ ಮಾಡಿದೆ ಹಾಗೂ ದೇಶದ ವಿವಿಧೆಡೆ ಅತಿಯಾದ ಮಳೆ ಹಾಗೂ ಪ್ರವಾಹದಿಂದಾಗಿ 6.11 ಲಕ್ಷ ಹೆಕ್ಟೇರ್ ಪ್ರದೇಶದ ಕೃಷಿಭೂಮಿ ಹಾನಿಯಾಗಿದೆ ಎಂದು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ತಿಳಿಸಿದ್ದಾರೆ.

Ad Widget

Ad Widget

Ad Widget

Ad Widget

ಹೊಸದಿಲ್ಲಿ: ಕೇಂದ್ರ ಸರಕಾರವು ಈವರೆಗೆ ಕರ್ನಾಟಕ ಸೇರಿದಂತೆ ಐದು ರಾಜ್ಯಗಳು ಬರಪೀಡಿತವೆಂದು ಘೋಷಣೆ ಮಾಡಿದೆ ಹಾಗೂ ದೇಶದ ವಿವಿಧೆಡೆ ಅತಿಯಾದ ಮಳೆ ಹಾಗೂ ಪ್ರವಾಹದಿಂದಾಗಿ 6.11 ಲಕ್ಷ ಹೆಕ್ಟೇರ್ ಪ್ರದೇಶದ ಕೃಷಿಭೂಮಿ ಹಾನಿಯಾಗಿದೆ ಎಂದು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ತಿಳಿಸಿದ್ದಾರೆ.

Ad Widget

Ad Widget

Ad Widget alt="Ad Widget"/>

Ad Widget

ಹೊಸದಿಲ್ಲಿಯಲ್ಲಿ ನಡೆದ ‘ರಬಿ (ಹಿಂಗಾರು ಬೆಳೆ) 2026-27’ ರಾಷ್ಟ್ರೀಯ ಕೃಷಿ ಸಮ್ಮೇಳನದ ವೇಳೆ ಮಾತನಾಡಿದ ಅವರು, ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶದ ಕೆಲವು ಭಾಗಗಳು ಹಾಗೂ ರಾಜಸ್ಥಾನದ ಪ್ರದೇಶಗಳಲ್ಲಿ ಬರ ಪರಿಸ್ಥಿತಿ ಕುರಿತು ಕಳವಳ ವ್ಯಕ್ತಪಡಿಸಿದರು.

Ad Widget

Ad Widget <> Ad Widget

ಕರ್ನಾಟಕ ಸರ್ಕಾರದ ಮನವಿ ಹಿನ್ನೆಲೆಯಲ್ಲಿ ರಾಜ್ಯದಲ್ಲಿನ ಬರ ಪರಿಸ್ಥಿತಿ ಹಾಗೂ ಬೆಳೆ ಹಾನಿಯ ವಾಸ್ತವ ಸ್ಥಿತಿಯನ್ನು ಪರಿಶೀಲಿಸಲು ಕೇಂದ್ರ ತಂಡವು ಅಕ್ಟೋಬರ್ 3ರಂದು ಕರ್ನಾಟಕಕ್ಕೆ ಭೇಟಿ ನೀಡಲಿದೆ ಎಂದು ಚೌಹಾಣ್ ತಿಳಿಸಿದರು.



Ad Widget

ದೇಶದ ಇತರ ಭಾಗಗಳಲ್ಲಿನ ಬರ ಪರಿಸ್ಥಿತಿಯನ್ನೂ ಶೀಘ್ರದಲ್ಲೇ ಪರಿಶೀಲಿಸಲಾಗುವುದು. ಬರಪೀಡಿತ ಪ್ರದೇಶಗಳಿಗೆ ತಾವು ವೈಯಕ್ತಿಕವಾಗಿ ಭೇಟಿ ನೀಡುವುದರ ಜೊತೆಗೆ, ಆಯಾ ರಾಜ್ಯ ಸರ್ಕಾರಗಳೊಂದಿಗೆ ನಿರಂತರ ಸಂಪರ್ಕದಲ್ಲಿರುವುದಾಗಿ ಸಚಿವರು ಹೇಳಿದರು.

Ad Widget

Ad Widget

ರೈತರಿಗೆ ನೆರವಿನ ಭರವಸೆ
ಬರ ಪರಿಸ್ಥಿತಿಯ ನಡುವೆಯೂ ಕೃಷಿ ಚಟುವಟಿಕೆ ಮುಂದುವರಿಸುತ್ತಿರುವ ರೈತರಿಗೆ ಕೇಂದ್ರ ಸರ್ಕಾರ ನೆರವು ನೀಡಲಿದೆ ಎಂದು ಚೌಹಾಣ್ ಭರವಸೆ ನೀಡಿದರು. ಕೃಷಿಭೂಮಿ ಪಾಳು ಬೀಳದಂತೆ ನೋಡಿಕೊಳ್ಳುವುದು ಸರ್ಕಾರದ ತಕ್ಷಣದ ಉದ್ದೇಶವಾಗಿದೆ ಎಂದರು.

ನೀರಿನ ಲಭ್ಯತೆ ಹಾಗೂ ಮಣ್ಣಿನ ತೇವಾಂಶಕ್ಕೆ ಅನುಗುಣವಾಗಿ ಬೆಳೆ ಆಯ್ಕೆ ಮಾಡುವಂತೆ ರಾಜ್ಯಗಳಿಗೆ ಸೂಚಿಸಲಾಗಿದ್ದು, ಕಡಿಮೆ ನೀರು ಅಗತ್ಯವಿರುವ ಬೆಳೆಗಳು ಹಾಗೂ ಕಡಿಮೆ ಅವಧಿಯಲ್ಲಿ ಕಟಾವಿಗೆ ಬರುವ ತಳಿಗಳಿಗೆ ಆದ್ಯತೆ ನೀಡುವಂತೆ ಸಲಹೆ ನೀಡಲಾಗಿದೆ.

ಶೇ.12.3ರಷ್ಟು ಮಳೆ ಕೊರತೆ
ಎಲ್‌ನೀನೊ ಪರಿಣಾಮ ಸೇರಿದಂತೆ ಹವಾಮಾನ ವೈಪರೀತ್ಯಗಳಿಂದಾಗಿ ದೇಶದಲ್ಲಿ ಮುಂಗಾರು ಮಳೆಯ ಕೊರತೆ ಉಂಟಾಗಿದೆ. ಮುಂಗಾರು ಋತುವಿನ ಅಂತ್ಯದ ವೇಳೆಗೆ ದೇಶದಲ್ಲಿ ಸಾಮಾನ್ಯಕ್ಕಿಂತ ಸುಮಾರು ಶೇ.12.3ರಷ್ಟು ಮಳೆ ಕಡಿಮೆಯಾಗಿದೆ ಎಂದು ಸಚಿವರು ತಿಳಿಸಿದರು.

ಮಳೆ ಕೊರತೆಯ ಪರಿಣಾಮ 2026-27ರ ಖಾರಿಫ್‌ ಬೆಳೆಗಳ ಒಟ್ಟು ಬಿತ್ತನೆ ಪ್ರದೇಶದಲ್ಲಿ ಸುಮಾರು ಶೇ.1ರಷ್ಟು ಇಳಿಕೆ ಕಂಡುಬಂದಿದೆ. ಭತ್ತದ ಬಿತ್ತನೆ ಪ್ರದೇಶದಲ್ಲಿ 16.32 ಲಕ್ಷ ಹೆಕ್ಟೇರ್‌ಗಳಷ್ಟು ಇಳಿಕೆಯಾಗಿದ್ದು, ಜೋಳ, ಸೋಯಾಬೀನ್ ಮತ್ತು ಹತ್ತಿ ಬೆಳೆಗಳ ವಿಸ್ತೀರ್ಣದಲ್ಲೂ ಕುಸಿತವಾಗಿದೆ.

ಇದಕ್ಕೆ ವಿರುದ್ಧವಾಗಿ ಉದ್ದು, ಬಾಜ್ರಾ, ಜೋಳ, ಎಳ್ಳು, ಸೂರ್ಯಕಾಂತಿ, ಹೆಸರು ಮತ್ತು ತೊಗರಿ ಸೇರಿದಂತೆ ಕೆಲವು ದ್ವಿದಳ ಧಾನ್ಯಗಳು ಹಾಗೂ ಸಿರಿಧಾನ್ಯಗಳ ಬಿತ್ತನೆ ಪ್ರದೇಶದಲ್ಲಿ ಏರಿಕೆ ಕಂಡುಬಂದಿದೆ.

ಕೇಂದ್ರ ಸರ್ಕಾರವು ರಬಿ ಹಂಗಾಮಿಗೆ ಅಗತ್ಯವಿರುವ ರಸಗೊಬ್ಬರ ಮತ್ತು ಬೀಜಗಳ ಲಭ್ಯತೆ ಖಚಿತಪಡಿಸಿಕೊಳ್ಳಲು ಕ್ರಮ ಕೈಗೊಂಡಿದ್ದು, ಬರಪೀಡಿತ ಪ್ರದೇಶಗಳಲ್ಲಿ ಪರಿಸ್ಥಿತಿಗೆ ಅನುಗುಣವಾಗಿ ಬೆಳೆ ಯೋಜನೆ ರೂಪಿಸುವಂತೆ ರಾಜ್ಯಗಳಿಗೆ ಸೂಚಿಸಿದೆ.

Ad Widget
Continue Reading

ಇಂದಿನ ಟ್ರೆಂಡಿಂಗ್‌ ಸುದ್ದಿಗಳು

error: Content is protected !!

Discover more from Nikhara News | Kannada News Website

Subscribe now to keep reading and get access to the full archive.

Continue reading