ಸ್ಥಳೀಯ
PFI Ban : ಮಿತ್ತೂರಿನಲ್ಲಿ ಪಿಎಫ್ಐನಿಂದ ಟೆರರ್ ಟ್ರೈನಿಂಗ್ ಕ್ಯಾಂಪ್ ; ಎನ್ ಐ ಎ ತನಿಖೆಯಿಂದ ಸ್ಪೋಟಕ ಮಾಹಿತಿ ಬಹಿರಂಗ, ಬೆಚ್ಚಿದ ಜಿಲ್ಲೆಯ ಜನತೆ
ಬಂಟ್ವಾಳ, ಸೆ 30 : ಪಿಎಫ್ಐ ಬ್ಯಾನ್ ಬೆನ್ನಲ್ಲೆ ಎನ್ಐಎ ಯು ಮಹತ್ವದ ಮಾಹಿತಿಯನ್ನು ಸಂಗ್ರಹಿಸಿದೆ. ದ ಕ ಜಿಲ್ಲೆಯಲ್ಲಿ ಟೆರರ್ ಟ್ರೈನಿಂಗ್ ನಡೆಸಲಾಗಿತ್ತು ಎನ್ನುವ ಸ್ಪೋಟಕ ಮಾಹಿತಿಯನ್ನು ಬಹಿರಂಗ ಪಡಿಸಿದ್ದಾರೆ.

ಪುತ್ತೂರು ಸುಳ್ಯ ಹಾಗೂ ಬಂಟ್ವಾಳದ ಹಲವು ನಿರ್ಜನ ಪ್ರದೇಶದಲ್ಲಿ ಟೆರರ್ ಟ್ರೈನಿಂಗ್ ನಡೆಸಲಾಗುತ್ತಿತ್ತು. ಇದೀಗ ಮತ್ತೊಂದು ಮಾಹಿತಿಯು ಲಭ್ಯವಾಗಿದ್ದು, ಬಂಟ್ವಾಳ ತಾಲೂಕಿನ ಮಿತ್ತೂರಿನ ಫ್ರೀಡಂ ಕಮ್ಯುನಿಟಿ ಹಾಲ್ ನಲ್ಲಿ ಯುವಕರನ್ನು ಸೇರಿಸಿ ಅವರಿಗೆ ಟೆರರ್ ಟ್ರೈನಿಂಗ್ ನಿಡಲಾಗುತ್ತಿತ್ತು ಎನ್ನುವ ಮಾಹಿತಿ ಎನ್ಐಎ ಮೂಲಗಳಿಂದ ಲಭ್ಯವಾಗಿದೆ. ಈ ಬಗ್ಗೆ ಟ್ರಸ್ಟಿ ಆಯುಬ್ ಅಗ್ನಾಡಿಯನ್ನು ಎನ್ಐಎ ಯು ಹೆಚ್ಚಿನ ವಿಚಾರಣೆಗಾಗಿ ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ.
2007 ರಿಂದಲೂ ಇಲ್ಲಿ ಯುವಕರಿಗೆ ಕರೆದು ಅವರಿಗೆ ಉಗ್ರವಾದದ ತರಬೇತಿ ಯನ್ನು ನೀಡಲಾಗುತ್ತಿತ್ತು ಎಂದು ಎನ್ಐಎ ಮೂಲದಿಂದ ಮಾಹಿತಿ ಲಭ್ಯವಾಗಿದೆ. ಅದಲ್ಲದೆ ಶರತ್ ಮಡಿವಾಳ ಹಾಗೂ ಇತರರ ಕೊಲೆಗೆ ಇದೇ ಕಮ್ಯುನಿಟಿ ಹಾಲ್ ನಲ್ಲಿ ತರಬೇತಿ ನೀಡಲಾಗಿತ್ತು ಎನ್ನಲಾಗಿದೆ. ಜಿಲ್ಲೆಯ ಜನರು ಆತಂಕ ವ್ಯಕ್ತಪಡಿಸಿದ್ದಾರೆ. ಈ ಹಾಲ್ ನಲ್ಲಿ ಮದುವೆ ಸಮಾರಂಭವು ನಡೆಯುತ್ತಿತ್ತು. ಉಳಿದ ಸಮಯದಲ್ಲಿ ಈ ತರಬೇತಿ ನಡೆಯುತ್ತಿತ್ತು ಎನ್ನಲಾಗಿದೆ.
ಇದೀಗ ಪಿಎಫ್ಐ ನಿಷೇಧದ ಬೆನ್ನಲ್ಲೇ ಅದರ ಪ್ರಮುಖರನ್ನು ಬಂಧಿಸಿದಾಗ ಸ್ಪೋಟಕ ಮಾಹಿತಿ ಲಭ್ಯವಾಗಿದೆ. ಹಲವರನ್ನು ಬಂಧಿಸಿದ್ದಾರೆ. ಅಲ್ಲದೆ ಮುಂಜಾಗ್ರತಾ ಕ್ರಮವಾಗಿ ಅಲರ್ಟ್ ನಲ್ಲಿರುವಂತೆ ರಾಜ್ಯ ಪೊಲೀಸರಿಗೆ ಕೇಂದ್ರವು ಸೂಚಿಸಿದೆ.
ಮಂಗಳೂರು
Ujire-ಭಾರೀ ಜನಸ್ತೋಮದೊಂದಿಗೆ ಸೌಜನ್ಯ ನ್ಯಾಯದ ನಡಿಗೆ
ಧರ್ಮಸ್ಥಳದ ಸೌಜನ್ಯ ಪ್ರಕರಣದ ಮರುತನಿಖೆಗೆ ಆಗ್ರಹಿಸಿ ಸೌಜನ್ಯ ಪರ ಹೋರಾಟಗಾರರು ಉಜಿರೆಯಿಂದ ಬೆಳ್ತಂಗಡಿವರೆಗೆ ನ್ಯಾಯದ ನಡಿಗೆ ಹಮ್ಮಿಕೊಂಡಿದ್ದಾರೆ.

ಮಂಗಳೂರು: ಧರ್ಮಸ್ಥಳದ ಸೌಜನ್ಯ ಪ್ರಕರಣದ ಮರುತನಿಖೆಗೆ ಆಗ್ರಹಿಸಿ ಸೌಜನ್ಯ ಪರ ಹೋರಾಟಗಾರರು ಉಜಿರೆಯಿಂದ ಬೆಳ್ತಂಗಡಿವರೆಗೆ ನ್ಯಾಯದ ನಡಿಗೆ ಹಮ್ಮಿಕೊಂಡಿದ್ದಾರೆ.
ಉಜಿರೆಯಿಂದ ಆರಂಭವಾದ ಬೃಹತ್ ಜಾಥಾದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನರು ಭಾಗವಹಿಸಿದ್ದು, ಮೌನ ಮೆರವಣಿಗೆಯ ಮೂಲಕ ಸೌಜನ್ಯಳಿಗೆ ನ್ಯಾಯ ದೊರಕಿಸಿಕೊಡಬೇಕೆಂದು ಆಗ್ರಹಿಸಲಾಯಿತು. ಸುಮಾರು ಐದು ಕಿಲೋಮೀಟರ್ ದೂರದವರೆಗೆ ಹೋರಾಟಗಾರರು ನಡಿಗೆಯಲ್ಲಿ ಸಾಗಲಿದ್ದಾರೆ.
ನ್ಯಾಯದ ನಡಿಗೆಯ ಬಳಿಕ ಬೆಳ್ತಂಗಡಿಯ ಮೈದಾನದಲ್ಲಿ ಬೃಹತ್ ಅಭಿನಂದನಾ ಸಮಾವೇಶ ನಡೆಯಲಿದೆ. ಸೌಜನ್ಯ ಪರವಾಗಿ ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್‌ನಲ್ಲಿ ವಾದ ಮಂಡಿಸಿದ ವಕೀಲರ ತಂಡಕ್ಕೆ ಈ ಸಂದರ್ಭದಲ್ಲಿ ಅಭಿನಂದನೆ ಸಲ್ಲಿಸಲಾಗುತ್ತದೆ. ಕಾರ್ಯಕ್ರಮದಲ್ಲಿ ವಕೀಲರು ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದು ತಿಳಿದುಬಂದಿದೆ.
ಸ್ಥಳೀಯ
Shweta Motors-ಸಿದ್ದಕಟ್ಟೆಯಲ್ಲಿ ಅ.11ರಂದು ಶ್ವೇತಾ ಮೋಟಾರ್ಸ್‌ನ ಎರಡನೇ ಶಾಖೆ ಶುಭಾರಂಭ; TVS, Bajaj, Suzuki ಸೇರಿದಂತೆ ಪ್ರಮುಖ ಬ್ರ್ಯಾಂಡ್‌ಗಳ ದ್ವಿಚಕ್ರ ವಾಹನಗಳ ಮಾರಾಟ, ಸೇವಾ ಸೌಲಭ್ಯ ಲಭ್ಯ
ದ್ವಿಚಕ್ರ ವಾಹನಗಳ ಖರೀದಿ ಮತ್ತು ಸೇವೆಗಾಗಿ ಗ್ರಾಹಕರಿಗೆ ಮತ್ತಷ್ಟು ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಶ್ವೇತಾ ಮೋಟಾರ್ಸ್ ತನ್ನ ಎರಡನೇ ಶಾಖೆಯನ್ನು ಸಿದ್ದಕಟ್ಟೆಯಲ್ಲಿ ಆರಂಭಿಸುತ್ತಿದೆ. ನೂತನ ಶಾಖೆಯ ಉದ್ಘಾಟನಾ ಸಮಾರಂಭ ಅಕ್ಟೋಬರ್ 11ರ ಭಾನುವಾರ ಬೆಳಿಗ್ಗೆ 9.45ಕ್ಕೆ ಸಿದ್ದಕಟ್ಟೆಯ ಮುಖ್ಯ ರಸ್ತೆಯ ಮಡಾಯಿ ಕಾಂಪ್ಲೆಕ್ಸ್‌ನಲ್ಲಿ ನಡೆಯಲಿದೆ.

ಸಿದ್ದಕಟ್ಟೆ: ದ್ವಿಚಕ್ರ ವಾಹನಗಳ ಖರೀದಿ ಮತ್ತು ಸೇವೆಗಾಗಿ ಗ್ರಾಹಕರಿಗೆ ಮತ್ತಷ್ಟು ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಶ್ವೇತಾ ಮೋಟಾರ್ಸ್ ತನ್ನ ಎರಡನೇ ಶಾಖೆಯನ್ನು ಸಿದ್ದಕಟ್ಟೆಯಲ್ಲಿ ಆರಂಭಿಸುತ್ತಿದೆ. ನೂತನ ಶಾಖೆಯ ಉದ್ಘಾಟನಾ ಸಮಾರಂಭ ಅಕ್ಟೋಬರ್ 11ರ ಭಾನುವಾರ ಬೆಳಿಗ್ಗೆ 9.45ಕ್ಕೆ ಸಿದ್ದಕಟ್ಟೆಯ ಮುಖ್ಯ ರಸ್ತೆಯ ಮಡಾಯಿ ಕಾಂಪ್ಲೆಕ್ಸ್‌ನಲ್ಲಿ ನಡೆಯಲಿದೆ.
ಶ್ವೇತಾ ಮೋಟಾರ್ಸ್‌ನಲ್ಲಿ TVS, Bajaj, Suzuki ಸೇರಿದಂತೆ ಪ್ರಮುಖ ಕಂಪನಿಗಳ ವಿವಿಧ ಮಾದರಿಯ ದ್ವಿಚಕ್ರ ವಾಹನಗಳ ಮಾರಾಟ ಹಾಗೂ ಸೇವಾ ಸೌಲಭ್ಯ ಲಭ್ಯವಿರಲಿದೆ. ಒಂದೇ ಸೂರಿನಡಿ ವಿವಿಧ ಬ್ರ್ಯಾಂಡ್‌ಗಳ ವಾಹನಗಳ ಖರೀದಿ ಮತ್ತು ಸೇವೆ ಪಡೆಯಲು ಗ್ರಾಹಕರಿಗೆ ಇದರಿಂದ ಅನುಕೂಲವಾಗಲಿದೆ.
ಸಂಸ್ಥೆಯ ಎರಡನೇ ಶಾಖೆಯ ಆರಂಭದೊಂದಿಗೆ ಸಿದ್ದಕಟ್ಟೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಗ್ರಾಹಕರಿಗೆ ದ್ವಿಚಕ್ರ ವಾಹನಗಳ ಖರೀದಿ ಮತ್ತು ನಿರ್ವಹಣಾ ಸೇವೆಗಳನ್ನು ಸುಲಭವಾಗಿ ಪಡೆಯಲು ಅವಕಾಶ ದೊರೆಯಲಿದೆ.

ಶ್ವೇತಾ ಮೋಟಾರ್ಸ್‌ನ ಪ್ರೊಪ್ರೈಟರ್ ಹರೀಶ್ ಬಂಗೇರ ಅವರು ನೂತನ ಶಾಖೆಯ ಉದ್ಘಾಟನಾ ಸಮಾರಂಭಕ್ಕೆ ಸಾರ್ವಜನಿಕರು ಹಾಗೂ ಗ್ರಾಹಕರನ್ನು ಆತ್ಮೀಯವಾಗಿ ಆಹ್ವಾನಿಸಿದ್ದಾರೆ.
ಬಿಗ್ ನ್ಯೂಸ್
Kaavu-BIG BREAKING: ಕಾವು ಬಳಿ ಹೆದ್ದಾರಿಗೆ ಉರುಳಿದ ಮರಗಳು, ಹೈಟೆನ್ಷನ್ ವಿದ್ಯುತ್ ಕಂಬ : ಮಾಣಿ – ಮೈಸೂರು ಹೈವೆಯಲ್ಲಿ ವಾಹನ ಸಂಚಾರ ಸ್ಥಗಿತ
ಭಾರೀ ಗಾಳಿ ಮಳೆಗೆ ಮಾಣಿ–ಮೈಸೂರು ಹೆದ್ದಾರಿಯ ಕಾವು ಬಳಿ ಮರ ಹಾಗೂ ಹೈಟೆನ್ಷನ್ ವಿದ್ಯುತ್ ಕಂಬ ರಸ್ತೆಗೆ ಉರುಳಿಬಿದ್ದ ಪರಿಣಾಮ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಇದರಿಂದ ಸುಳ್ಯ, ಮಡಿಕೇರಿ ಹಾಗೂ ಮೈಸೂರು ಕಡೆಗೆ ತೆರಳುವ ವಾಹನ ಸವಾರರು ತೊಂದರೆ ಅನುಭವಿಸುವಂತಾಗಿದೆ.
ಪುತ್ತೂರು: ಭಾರೀ ಗಾಳಿ ಮಳೆಗೆ ಮಾಣಿ–ಮೈಸೂರು ಹೆದ್ದಾರಿಯ ಕಾವು ಬಳಿ ಮರ ಹಾಗೂ ಹೈಟೆನ್ಷನ್ ವಿದ್ಯುತ್ ಕಂಬ ರಸ್ತೆಗೆ ಉರುಳಿಬಿದ್ದ ಪರಿಣಾಮ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಇದರಿಂದ ಸುಳ್ಯ, ಮಡಿಕೇರಿ ಹಾಗೂ ಮೈಸೂರು ಕಡೆಗೆ ತೆರಳುವ ವಾಹನ ಸವಾರರು ತೊಂದರೆ ಅನುಭವಿಸುವಂತಾಗಿದೆ.
ಶುಕ್ರವಾರ (ಅ. 9) ಮಧ್ಯಾಹ್ನ ಸುಮಾರು 4 ಗಂಟೆಗೆ ಕಾವು ಪರಿಸರದಲ್ಲಿ ಭಾರೀ ಗಾಳಿ ಮಳೆಯಾಗಿದೆ. ಈ ವೇಳೆ ಮರ ಹಾಗೂ ವಿದ್ಯುತ್ ಕಂಬ ಹೆದ್ದಾರಿಗೆ ಅಡ್ಡಲಾಗಿ ಬಿದ್ದಿದ್ದು, ಮಡ್ಯಂಗಳ , ಮದ್ಲ ಎಂಬಲ್ಲಿ ಹಲವು ಮರಗಳು ಧರೆಗುರುಳಿವೆ. ಪೆರಿಗೇರಿ ರಸ್ತೆಯಲ್ಲೂ ಒಂದು ಮರ ಧರೆಗುರುಳಿದೆ ಜೊತೆಗೆ ವಿದ್ಯುತ್ ತಂತಿಗಳೂ ರಸ್ತೆಗೆ ಬಿದ್ದಿವೆ. ಇದರಿಂದ ಈ ಮಾರ್ಗದಲ್ಲಿ ವಾಹನ ಸಂಚಾರಕ್ಕೆ ಅಡ್ಡಿಯುಂಟಾಗಿದೆ.
ಸ್ಥಳೀಯರ ನೆರವಿನೊಂದಿಗೆ ಮೆಸ್ಕಾಂ, ತಾಲೂಕು ಆಡಳಿತ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿ ಮರ, ವಿದ್ಯುತ್ ಕಂಬ ಮತ್ತು ತಂತಿಗಳನ್ನು ತೆರವುಗೊಳಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಪುತ್ತೂರು ಗ್ರಾಮಾಂತರ ಠಾಣೆಯ ಪೊಲೀಸರು ಸ್ಥಳದಲ್ಲಿ ಸಂಚಾರ ನಿಯಂತ್ರಿಸುತ್ತಿದ್ದಾರೆ.
ತೆರವು ಕಾರ್ಯಾಚರಣೆಗೆ ಸುಮಾರು 3ರಿಂದ 4 ಗಂಟೆಗಳ ಕಾಲ ಬೇಕಾಗುವ ಸಾಧ್ಯತೆಯಿದ್ದು, ಪುತ್ತೂರಿನಿಂದ ಮೈಸೂರು ಕಡೆಗೆ ತೆರಳುವ ವಾಹನ ಸವಾರರು ಪರ್ಯಾಯ ಮಾರ್ಗ ಬಳಸುವಂತೆ ಪುತ್ತೂರು ಗ್ರಾಮಾಂತರ ಠಾಣೆಯ ಎಸ್ಐ ಸುಷ್ಮಾ ಭಂಡಾರಿ ತಿಳಿಸಿದ್ದಾರೆ.
-
ಬಿಗ್ ನ್ಯೂಸ್21 hours agoKaavu-BIG BREAKING: ಕಾವು ಬಳಿ ಹೆದ್ದಾರಿಗೆ ಉರುಳಿದ ಮರಗಳು, ಹೈಟೆನ್ಷನ್ ವಿದ್ಯುತ್ ಕಂಬ : ಮಾಣಿ – ಮೈಸೂರು ಹೈವೆಯಲ್ಲಿ ವಾಹನ ಸಂಚಾರ ಸ್ಥಗಿತ
-
ಮಂಗಳೂರು23 hours agoMangalore-ಮಂಗಳೂರು : 2 ತಿಂಗಳ ಬಳಿಕ ಸಮಾಧಿಯಿಂದ ಹೊರಬರಲಿದೆ ಆಲ್ಬರ್ಟ್ ರೇಗೋ ಶವ..!; ಮಗಳಿಂದಲೇ ತಂದೆಯ ಕೊಲೆ : ಸ್ನೇಹಿತನ ಆರೋಪ – ತನಿಖೆಗೆ ಸಿಗಲಿದೆ ಮಹತ್ವದ ತಿರುವು
-
ಅಪರಾಧ21 hours agoPuttur-ಪುತ್ತೂರು: ಅಕ್ರಮ ಗೋ ಸಾಗಾಟ ಪ್ರಕರಣ; ಪರಾರಿಯಾಗಿದ್ದ ಇಬ್ಬರು ವಶಕ್ಕೆ, ಆರೋಪಿ ಶಿವಪ್ರಸಾದ್ ಮನೆ ಮಹಜರು?
-
ಮಂಗಳೂರು22 hours agoMRPL accident-MRPL ಅವಘಡದಲ್ಲಿ ಮೃತಪಟ್ಟ ಕರ್ಕಡ ಕುಟುಂಬಕ್ಕೆ EPFO ಕ್ಲೈಮ್ ಸಂದಾಯ
-
ಅಪರಾಧ23 hours agoMangalore-ವಾಟರ್ ಪ್ಯೂರಿಫೈಯರ್ ಒಳಗೆ ಕೋಟ್ಯಾಂತರ ರೂ ಮೌಲ್ಯದ ಡ್ರಗ್ಸ್- ಕೋರಿಯರ್ ಮೂಲಕ ಸಾಗಾಟ | ಪೊಲೀಸರ ಕಣ್ಣಿಗೆ ಮಣ್ಣೆರೆಚುವ ಯತ್ನ ಮಂಗಳೂರಿನಲ್ಲಿ ವಿಫಲ – ಮೂವರ ಬಂಧನ..!
-
ಸ್ಥಳೀಯ23 hours agoNavoor clinic-ನಾವೂರು ಕ್ಲಿನಿಕ್ಗೆ ಬೆಂಕಿ ಹಚ್ಚಿದ ಪ್ರಕರಣ: ಘಟನಾ ಸ್ಥಳಕ್ಕೆ ಎಎಸ್ಪಿ ಭೇಟಿ, ಪರಿಶೀಲನೆ
-
ಶಿಕ್ಷಣ22 hours agoVivekananda-ರಾಷ್ಟ್ರಮಟ್ಟದ ಭೌತಶಾಸ್ತ್ರ ಸ್ಪರ್ಧೆಯಲ್ಲಿ ವಿವೇಕಾನಂದ ಕಾಲೇಜಿನ ವಿದ್ಯಾರ್ಥಿಯ ಸಾಧನೆ..!
-
ನಿಧನ ವಾರ್ತೆ3 hours agoMumbai-ಪ್ರೀತಿಸಿ ಮದುವೆಯಾಗಿದ್ದ ಜೋಡಿಯ ದುರಂತ ಅಂತ್ಯ? ಸರಪಳಿಯಿಂದ ಕಾಲು ಕಟ್ಟಿದ ಸ್ಥಿತಿಯಲ್ಲಿ ಶವ ಪತ್ತೆ




















