ಉದ್ಯೋಗ
KSP Direct Recruitment 2022- 3064 post | ಕರ್ನಾಟಕ ರಾಜ್ಯ ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್ಸ್ – 3064 ಹುದ್ದೆಗಳಿಗೆ ನೇರ ನೇಮಕಾತಿಗೆ ಅರ್ಜಿ ಆಹ್ವಾನ
ಕರ್ನಾಟಕ ರಾಜ್ಯದ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್ಸ್ (ಸಾಮಾನ್ಯ ಪುರುಷ ಮತ್ತು ಪುರುಷ ತೃತೀಯಲಿಂಗ) ಹುದ್ದೆಗಳ ನೇರ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
https://ksp.karnataka.gov.in/ or https://ksp-recruitment.in/ ನಲ್ಲಿ ಆನ್-ಲೈನ್ (On-line) (ಎಲೆಕ್ಟ್ರಾನಿಕ್ ಮಾರ್ಗ) ಮುಖಾಂತರ ಮಾತ್ರ ಸಲ್ಲಿಸತಕ್ಕದ್ದು, ಅರ್ಜಿಗಳನ್ನು ಅಂಚೆ ಮೂಲಕ ಪ್ರತ್ಯೇಕವಾಗಿ ಸಲ್ಲಿಸಲು ಅವಕಾಶವಿರುವುದಿಲ್ಲ.
ವಿಶೇಷ ಸೂಚನೆಗಳು:
ಅರ್ಜಿ ಸಲ್ಲಿಸಲು ನಿಗಧಿಪಡಿಸಿರುವ ಕೊನೆಯ ದಿನಾಂಕವು ಮುಕ್ತಾಯವಾದ ನಂತರ 10 ದಿನಗಳ ಕಾಲಾವಕಾಶ ನೀಡಲಾಗುತ್ತಿದ್ದು, ಸದರಿ ದಿನಾಂಕದೊಳಗಾಗಿ ಅಭ್ಯರ್ಥಿಯು ತಾನು ಸಲ್ಲಿಸಿರುವ ಅರ್ಜಿಯಲ್ಲಿ ಹೆಸರು, ಜನ್ಮ ದಿನಾಂಕ, ಕೋರಿರುವ ಮೀಸಲಾತಿ ಹಾಗೂ ಇತರೇ ಯಾವುದೇ ಅಂಶಗಳ ಬದಲಾವಣೆ ಮಾಡಬೇಕಾದಲ್ಲಿ ಖುದ್ದಾಗಿ / ಅಂಚೆ ಮೂಲಕ ಸಂಬಂಧಪಟ್ಟ ದೃಢೀಕೃತ ದಾಖಲೆಗಳೊಂದಿಗೆ ಡೈರೆಕ್ಟರ್ ಜನರಲ್ ಆಫ್ ಪೊಲೀಸ್, ನೇಮಕಾತಿ, ಕಾರ್ಲಟನ್ ಭವನ, ಆರಮನೆ ರಸ್ತೆ, ಬೆಂಗಳೂರು ರವರ ಕಛೇರಿಗೆ ಸಲ್ಲಿಸತಕ್ಕದ್ದು.
ನಿಗಧಿಪಡಿಸಿದ ಕೊನೆಯ ದಿನಾಂಕದ ನಂತರ ಸಲ್ಲಿಸುವ ಯಾವುದೇ ಮನವಿಗಳನ್ನು ಪರಿಗಣಿಸಲಾಗುವುದಿಲ್ಲ.
ಅರ್ಹ ಅಭ್ಯರ್ಥಿಗಳು “ಅನುಬಂಧ-ಆ” ರಲ್ಲಿ ನೀಡಲಾಗಿರುವ ಖಾಲಿ ಹುದ್ದೆಗಳ ವರ್ಗೀಕರಣವನ್ನು ನೋಡಿ ಅರ್ಜಿ ಸಲ್ಲಿಸುವಂತೆ ಸೂಚಿಸಲಾಗಿದೆ.
ಸಾಮಾನ್ಯ ಅರ್ಹತೆ, ಪ್ರವರ್ಗ 2(ಎ), 2(ಬಿ), 3(ಎ), 3(ಬಿ) ಗೆ ಸೇರಿದ ಅಭ್ಯರ್ಥಿಗಳಿಗೆ – ರೂ. 400/
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1ಕ್ಕೆ ಸೇರಿದ ಅಭ್ಯರ್ಥಿಗಳಿಗೆ ರೂ. 200/
ನಿಗದಿತ ಅರ್ಜಿ ಶುಲ್ಕವನ್ನು ಅನ್‌ಲೈನ್ ಮುಖಾಂತರ ಪಾವತಿಸಬಹುದು ಹಾಗೂ ಚಲನ್ ಡೌನ್‌ಲೋಡ್ ಮಾಡಿಕೊಂಡು ಕೆನರಾ ಬ್ಯಾಂಕ್ ಮತ್ತು ಸ್ಥಳೀಯ ಅಂಚೆ ಕಚೇರಿಗಳಲ್ಲಿ ಪಾವತಿಸಬಹುದು. ಆನ್‌ಲೈನ್ / ಬ್ಯಾಂಕ್ / ಅಂಚೆ ಕಚೇರಿಯಲ್ಲಿ ಅರ್ಜಿ ಶುಲ್ಕದೊಂದಿಗೆ ಸೇವಾ ಶುಲ್ಕವನ್ನು ಅಭ್ಯರ್ಥಿಗಳೇ ಪಾವತಿಸಬೇಕು
ಟಿಪ್ಪಣಿ: ಒಮ್ಮೆ ಶುಲ್ಕವನ್ನು ಪಾವತಿಸಿದ ನಂತರ ಅದನ್ನು ಯಾವುದೇ ಸಂದರ್ಭದಲ್ಲಿಯೂ ಹಿಂದಿರುಗಿಸಲಾಗುವುದಿಲ್ಲ ಅಥವಾ ಅದನ್ನು ನೇಮಕಾತಿ ಸಮಿತಿಯು ನಡೆಸುವ ಇತರೆ ಯಾವುದೇ ಪರೀಕ್ಷೆ ಅಥವಾ ನೇಮಕಾತಿಗಳಿಗೆ ಹೊಂದಿಸಿಕೊಳ್ಳಲಾಗುವುದಿಲ್ಲ. ಡಿಡಿ, ಪೋಸ್ಟಲ್ ಆರ್ಡರ್, ಮನಿ ಆರ್ಡರ್ ಇವುಗಳನ್ನು ಸ್ವೀಕರಿಸಲಾಗುವುದಿಲ್ಲ
ಆನ್-ಲೈನ್ (On-line) ಮುಖಾಂತರ ಅರ್ಜಿ ಸಲ್ಲಿಸುವ ಹಾಗೂ ಶುಲ್ಕ ಪಾವತಿಸುವ ವಿಧಾನ : ಅರ್ಜಿದಾರ ಅರ್ಜಿಯನ್ನು ಭರ್ತಿ ಮಾಡುವ ಮುನ್ನ ಅಧಿಕೃತ ವೆಬ್‌ಸೈಟ್‌ನಲ್ಲಿರುವ ಮಾಹಿತಿಸೂಚಿ | ಜಾಗರೂಕತೆಯಿಂದ ಇಲಾಖೆಯ ಸೂಚನೆಗಳನ್ನು ಅಧಿಕೃತ ವೆಬ್‌ಸೈಟ್ ಓದಿಕೊಂಡು ಮಾಡಬೇಕು.
https://ksp.karnataka.gov.in/ or https://ksp-recruitment.in/ ಓದಿಕೊಂಡು ಇರುವ ಅರ್ಜಿಯನ್ನು ಆನ್‌ಲೈನ್ ಮುಖಾಂತರ ಯಾವುದೇ ತಪ್ಪು ಮಾಹಿತಿಯನ್ನು ನೀಡದೇ ಭರ್ತಿ ಮಾಡತಕ್ಕದ್ದು. ತಪ್ಪು ಮಾಹಿತಿಗಳನ್ನು ನೀಡಿ ಅರ್ಜಿ ಸಲ್ಲಿಸಿದ್ದಲ್ಲಿ, ಸದರಿ ಅರ್ಜಿಯಲ್ಲಿನ ತಪ್ಪು ಮಾಹಿತಿಯನ್ನು ಬದಲಾವಣೆ ಮಾಡಲು ಅವಕಾಶವಿರುವುದಿಲ್ಲ ಹಾಗೂ ಅಂತಹವರ ವಿರುದ್ಧ ಕಾನೂನಿನನ್ವಯ ನೇಮಕಾತಿ ಸಮಿತಿಯು ಸೂಕ್ತ ಕ್ರಮ ಕೈಗೊಳ್ಳುವುದು, ಅರ್ಜಿಯನ್ನು ಭರ್ತಿ ಮಾಡುವ ಮುನ್ನ ಅರ್ಜಿದಾರ ಒಂದು ಬಿಳಿ ಹಾಳೆಯ ಮೇಲೆ ಪಾಸ್‌ಪೋರ್ಟ್ ಅಳತೆಯ ಬಣ್ಣದ ಭಾವಚಿತ್ರ, ಸಹಿ ಮತ್ತು ಅಧಿಸೂಚನೆಯ ಕ್ರಮ ಸಂಖ್ಯೆ 8(ಬಿ)ರಲ್ಲಿ ನಮೂದಿಸಲಾಗಿರುವ ಯಾವುದಾದರೂ ಗುರುತಿನ ಚೀಟಿಯನ್ನು ಪ್ರತ್ಯೇಕವಾಗಿ (Soft Copy – less than 250 KB) ಸ್ಕ್ಯಾನ್ ಮಾಡಿಟ್ಟುಕೊಂಡಿರಬೇಕು. ನಂತರ ಅರ್ಜಿದಾರನ ಹೆಸರು, ಜಾತಿ, ಮೀಸಲಾತಿಗಳ ವಿವರ, ಹುಟ್ಟಿದ ದಿನಾಂಕ ಮತ್ತು ಇತ್ಯಾದಿ ವಿವರಗಳನ್ನು ಭರ್ತಿ ಮಾಡಿ ಕೊನೆಯದಾಗಿ ಸ್ಕ್ಯಾನ್ ಮಾಡಿಟ್ಟುಕೊಂಡಿರುವ ಭಾವಚಿತ್ರ, ಸಹಿ ಮತ್ತು ಗುರುತಿನ ಚೀಟಿಯನ್ನು ಕಂಪ್ಯೂಟರ್ ಮುಖೇನ ಅಪ್‌ಲೋಡ್ (Upload) ಮಾಡುವುದು, ಇಲ್ಲವಾದಲ್ಲಿ ಅಂತಹ ಅರ್ಜಿದಾರರು ಆನ್‌ಲೈನ್‌ನಲ್ಲಿ ಅರ್ಜಿಯನ್ನು ತುಂಬಿ ಮುಂದುವರೆಯಲು ಸಾಧ್ಯವಾಗುವುದಿಲ್ಲ.
ಅರ್ಜಿದಾರ ನೀಡಿರುವ ವಿವರಗಳು ಎಲ್ಲಾ ರೀತಿಯಿಂದಲೂ ಸಮರ್ಪಕವಾಗಿದ್ದಲ್ಲಿ ಮಾತ್ರ ಆನ್‌ಲೈನ್ ಮುಖಾಂತರ ಅರ್ಜಿ ಶುಲ್ಕವನ್ನು ಅಥವಾ ಚಲನ್ ಮುದ್ರಿಸಬಹುದು, ಚಲನ್ ಮುದ್ರಿಸಲು ಜನರೇಟ್ ಚಲನ್ ಬಟನ್ ಮೇಲೆ ಕ್ಲಿಕ್ ಮಾಡಿದಾಗ ತ್ರಿಪತಿ (Triplicate) ಬ್ಯಾಂಕ್ / ಅಂಚೆ ಕಚೇರಿ, ಚಲನ್ ಸೃಜನೆಯಾಗುತ್ತದೆ. ಆ ಚಲನ್‌ನಲ್ಲಿ ಅರ್ಜಿಯ ಸಂಖ್ಯೆಯೊಂದಿಗೆ ಆಯ್ಕೆ ಮಾಡಿರುವ ಘಟಕ, ನಿಮ್ಮ ಭಾವಚಿತ್ರ, ಪ್ರವರ್ಗ, ಮೀಸಲಾತಿಗಳ ವಿವರ ಮತ್ತು ಪಾವತಿಸಬೇಕಾಗಿರುವ ನಿಗದಿತ ಶುಲ್ಕಗಳ ವಿವರಗಳು ಇರುತ್ತವೆ, ಆ ಚಲನ್ ಪ್ರತಿಯನ್ನು ಮುದ್ರಿಸಿ/ಪ್ರಿಂಟ್ ಮಾಡಿಕೊಳ್ಳತಕ್ಕದ್ದು,
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ: 19.09.2022, ಬೆಳಿಗ್ಗೆ 10.00 ಗಂಟೆಯಿಂದ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 31.10.2022, ಸಂಜೆ 06.00 ಗಂಟೆಯವರೆಗೆ
ಆನ್ ಲೈನ್ ನಲ್ಲಿ / ಅಧಿಕೃತ ಬ್ಯಾಂಕ್ ಶಾಖೆಗಳ / ಸ್ಥಳೀಯ ಅಂಚೆ ಕಚೇರಿಗಳ ಕಚೇರಿ ವೇಳೆಯಲ್ಲಿ ಪಾವತಿಸಲು ಕೊನೆಯ ದಿನಾಂಕ: 03.11.2022.


ಸೂಚನೆ:
ಆನ್‌ಲೈನ್ ಮೂಲಕ ಅರ್ಜಿಯನ್ನು ಭರ್ತಿ ಮಾಡುವ ಸಂದರ್ಭದಲ್ಲಿ ಸಮಸ್ಯೆ ಎದುರಾದಲ್ಲಿ ಸಹಾಯವಾಣಿ (Help line) 080-22943346 ಅನ್ನು ಸಂಪರ್ಕಿಸಿ ಅಗತ್ಯ ಮಾಹಿತಿ ಪಡೆದು ಅರ್ಜಿ ಸಲ್ಲಿಸಬಹುದು. ಆನ್‌ಲೈನ್ ಮೂಲಕ ಅರ್ಜಿಯನ್ನು ಭರ್ತಿ ಮಾಡುವ ಸಂದರ್ಭದಲ್ಲಿ ತಾಂತ್ರಿಕ ತೊಂದರೆ ಎದುರಾದಲ್ಲಿ ಅದನ್ನು ಸ್ಥಗಿತಗೊಳಿಸಿ ಮತ್ತೊಮ್ಮೆ ಅಧಿಕೃತ ವೆಬ್‌ಸೈಟ್‌ನಲ್ಲಿ ನೀಡಲಾಗಿರುವ ಅರ್ಜಿಯನ್ನು ಭರ್ತಿ ಮಾಡಲು ತಿಳಿಸಲಾಗಿದೆ.
ಈ ಕೆಳಗೆ ನಮೂದಿಸಿರುವ ಖಾಲಿ ಹುದ್ದೆಗಳ ಸಂಖ್ಯೆ ತಾತ್ಕಾಲಿಕವಾಗಿದ್ದು, ಅವಶ್ಯಕತೆ ಹಾಗೂ ಸಂದರ್ಭಕ್ಕೆ ಅನುಗುಣವಾಗಿ ಬದಲಾವಣೆ ಮಾಡಲಾಗುವುದು
ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್ (ಸಿಎಆರ್ ಡಿಎಆರ್) (ಸಾಮಾನ್ಯ ಪುರುಷ & ಪುರುಷ ತೃತೀಯ ಲಿಂಗ) ಖಾಲಿ ಹುದ್ದೆಗಳ ವಿವರ:
ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್ (ಸಾಮಾನ್ಯ ಪುರುಷ) (ಸಿಎಆರ್ / ಡಿಎಆರ್) 2996 ಹುದ್ದೆ
ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್ (ಪುರುಷ ತೃತೀಯ ಲಿಂಗ) (ಸಿಎಆರ್/ ಡಿಎಆರ್) – 68
ಒಟ್ಟು : 3064 ಹುದ್ದೆಗಳು
ವಯೋಮಿತಿ :
a) ಸಾಮಾನ್ಯ ಅಭ್ಯರ್ಥಿಗಳಿಗೆ
ಅರ್ಜಿಯನ್ನು ಸ್ವೀಕರಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಅಂದರೆ 31.10.2022ಕ್ಕೆ ಪುರುಷ ಮತ್ತು ತೃತೀಯ ಲಿಂಗದ ಅಭ್ಯರ್ಥಿಗೆ ಕನಿಷ್ಟ 18 ವರ್ಷ ವಯಸ್ಸಾಗಿರಬೇಕು ಹಾಗೂ ಈ ಕೆಳಕಂಡ ವಯಸ್ಸು ಮೀರಿರಬಾರದು.
1) ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಇತರ ಹಿಂದುಳಿದ ವರ್ಗಗಳಿಗೆ ಸೇರಿದ ಅಭ್ಯರ್ಥಿಗಳಿಗೆ 27 ವರ್ಷಗಳು.
ii) ಇತರೆ ಅಭ್ಯರ್ಥಿಗಳಿಗೆ 25 ವರ್ಷಗಳು
iii) ಕರ್ನಾಟಕ ಅರಣ್ಯ ಪ್ರದೇಶಗಳಲ್ಲಿ ವಾಸಿಸುತ್ತಿರುವ ಬುಡಕಟ್ಟು ಅಭ್ಯರ್ಥಿಗಳಿಗೆ 30 ವರ್ಷಗಳು.
“ಬುಡಕಟ್ಟು ಜನಾಂಗ” ಎಂದರೆ “ಉತ್ತರ ಕನ್ನಡ ಕಾರವಾರ, ದಕ್ಷಿಣ ಕನ್ನಡ ಮಂಗಳೂರು, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು, ಚಾಮರಾಜನಗರ ಮತ್ತು ಮೈಸೂರು ಅರಣ್ಯಗಳಲ್ಲಿ ಸಿದ್ದಿಗರು, ಜೇನುಕುರುಬ, ಕಾಡುಕುರುಬ, ಯರವ, ಸೋಲಿಗ, ಕುಡಿಯ, ಗೌಡ್ಲು, ಹಸಲರು, ಮಲೈಕುಡಿಯ ಮತ್ತು ಕೊರಗೆ ಬುಡಕಟ್ಟು ಸಮುದಾಯಗಳಿಗೆ ಸೇರಿದ ಅಭ್ಯರ್ಥಿಗಳು.
ಮಾಜಿ ಸೈನಿಕ ಅಭ್ಯರ್ಥಿಗಳಿಗೆ : ಮಾಜಿ ಸೈನಿಕ ಅಭ್ಯರ್ಥಿಯು ಸೈನ್ಯ ವಿಯೋಜನೆ, ಸೇವೆಯಿಂದ ತೆಗೆದುಹಾಕಿದ ಹಾಗೂ ಸೇವಾ ನಿವೃತ್ತಿ ಹೊಂದಿದ ಕಾರಣದಿಂದ ಬಿಡುಗಡೆಯಾದ ಮಾಜಿ ಯೋಧರಾಗಿದ್ದಲ್ಲಿ “ಅವರು ಸೇವೆ ಸಲ್ಲಿಸಿದ ಅವಧಿ” ಯ ಜೊತೆಗೆ ಹೆಚ್ಚುವರಿ 03 ವರ್ಷಗಳ ರಿಯಾಯಿತಿಗಳನ್ನು ನೀಡಲಾಗುವುದು. ಮಾಜಿ ಯೋಧ ಎಂಬ ಶಬ್ದವು ಚಾಲ್ತಿಯಲ್ಲಿರುವ ಸಂಬಂಧಿಸಿದ ನಿಯಮಾವಳಿಗಳಲ್ಲಿನ ಪರಿಭಾಷೆಯ ಅರ್ಥ ಹೊಂದಿದೆ.
c) ಮಾಜಿ ಸೈನಿಕರ ಬಗ್ಗೆ ವಿವರಣೆ: ಮಾಜಿ ಸೈನಿಕ ಎಂದರೆ ಸಶಸ್ತ್ರ ದಳಗಳಾದ ನಿಯಮಿತ ಭೂಸೇನೆ, ನೌಕಾಸೇನೆ ಮತ್ತು ವಾಯುಸೇನೆಯಲ್ಲಿ ಯಾವುದೇ ಶ್ರೇಣಿಯಲ್ಲಿ (ಯೋಧ ಅಥವಾ ಯೋಧರಲ್ಲದ ಹುದ್ದೆಗಳಲ್ಲಿ) ಸೇವೆ ಸಲ್ಲಿಸಿದ ವ್ಯಕ್ತಿ, ಆದರೆ ಡಿಫೆನ್ಸ್ ಸೆರಿಟಿ ಶೋರ್’ (Defence Security Corps), ಜನರಲ್ ರಿಸರ್ವ್ ಇಂಜಿನಿಯರಿಂಗ್ ಫೋರ್ಸ್ (General Reserved Engineering Force), ಲೋಕ್ ಸಹಾಯಕ್ ಸೇನಾ (Lok Sahayak Sena) ಮತ್ತು ಪ್ಯಾರಾ ಮಿಲಿಟರಿ ದಳ (Para Military Forces) ದಲ್ಲಿ ಸೇವೆ ಸಲ್ಲಿಸಿದ ವ್ಯಕ್ತಿ ಸೇರ್ಪಡೆಯಾಗುವುದಿಲ್ಲ
ಅಂತಹ ಸೇನೆಯಿಂದ ನಿವೃತ್ತಿ ಹೊಂದಿದ ನಂತರ ನಿವೃತ್ತಿ ವೇತನ ಪಡೆಯುತ್ತಿರುವ ಅಥವಾ
ii) ವೈದ್ಯಕೀಯ ಕಾರಣಗಳಿಂದ ಮಿಲಿಟರಿ ಸೇವೆಯಿಂದ ಬಿಡುಗಡೆಯಾದ ಅಥವಾ ವ್ಯಕ್ತಿಯ ಹಿಡಿತಕ್ಕೂ ಮೀರಿದಪರಿಸ್ಥಿತಿಗಳಿಂದ ಮತ್ತು ವೈದ್ಯಕೀಯ ಅಥವಾ ಅಸಾಮರ್ಥ್ಯದ ಪಿಂಚಣಿ ಪಡೆದು ಅಂತಹ ಸೇವೆಯಲ್ಲಿ ಬಿಡುಗಡೆಯಾದವನು,
ಅಥವಾ
iii) ಸಂತ ಕೋರಿಕೆ ಹೊರತುಪಡಿಸಿ ಸಿಬ್ಬಂದಿ ಕಡಿತದ ಪರಿಣಾಮದಿಂದ ಅಂತಹ ಸೇವೆಯಿಂದ ಬಿಡುಗಡೆ ಹೊಂದಿದ ವ್ಯಕ್ತಿ.
ಅಥವಾ
iv) ತನ್ನ ಸ್ವಂತ ಕೋರಿಕೆ ಮೇರೆಗೆ ಅಥವಾ ದುರ್ನಡತೆ ಅಥವಾ ಅಸಾಮರ್ಥ್ಯದ ಕಾರಣದಿಂದಾಗಿ ತೆಗೆದುಹಾಕಿರುವ ಅಥವಾ ಕರ್ತವ್ಯದಿಂದ ವಜಾ ಮಾಡಿದ ವ್ಯಕ್ತಿಗಳನ್ನು ಹೊರತುಪಡಿಸಿ, ನಿರ್ದಿಷ್ಟ ಅವಧಿಯನ್ನು ಪೂರೈಸಿದ ತರುವಾಯ ಬಿಡುಗಡೆ ಹೊಂದಿದ ವ್ಯಕ್ತಿ ಮತ್ತು ಗ್ರಾಚ್ಯುಟಿ ಪಡೆಯುತ್ತಿರುವ ವ್ಯಕ್ತಿ ಮತ್ತು ಪ್ರಾಂತೀಯ ಸೇವೆಯ ಈ ಕೆಳಗೆ ಹೆಸರಿಸಿದ ವರ್ಗದ ಸಿಬ್ಬಂದಿಯವರು
ಆ) ನಿರಂತರ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಪಿಂಚಣಿದಾರರು. ಆ) ಮಿಲಿಟರಿ ಸೇವೆಯಿಂದಾಗಿ ಉಂಟಾದ ದೈಹಿಕ ಅಸಾಮರ್ಥ್ಯತೆ ಹೊಂದಿ ಬಿಡುಗಡೆಯಾದ ವ್ಯಕ್ತಿ. 2) ಗ್ಯಾಲಂಟ್ರಿ ಪ್ರಶಸ್ತಿ ವಿಜೇತರು.
ವಿವರಣೆ: ಕೇಂದ್ರ ಸಶಸ್ತ್ರದಳದ ಸೇವೆಯಲ್ಲಿ ವ್ಯಕ್ತಿಗಳು ಸೇವೆಯಿಂದ ನಿವೃತ್ತಿ ಹೊಂದಿದ ನಂತರ ಮಾಜಿ ಸೈನಿಕರ ವರ್ಗದಡಿ ಬರುವ ವ್ಯಕ್ತಿಗೆ ಒಪ್ಪಂದವು ಪೂರ್ಣವಾಗಲು ಒಂದು ವರ್ಷಕ್ಕೆ ಮುನ್ನ ಉದ್ಯೋಗಕ್ಕೆ ಅರ್ಜಿ ಹಾಕಿಕೊಳ್ಳಲು ಹಾಗೂ ಅವರಿಗೆ ಮಾಜಿ ಸೈನಿಕರಿಗೆ ದೊರೆಯುವ ಎಲ್ಲಾ ಸೌಲಭ್ಯಗಳನ್ನು ಹೊಂದಲು ಅನುಮತಿ ನೀಡಲಾಗಿದೆ. ಆದರೆ ಸಮವಸ್ತ್ರವನ್ನು ತ್ಯಜಿಸಲು ಅನುಮತಿ ನೀಡುವವರೆಗೆ ರಾಜ್ಯ ನಾಗರಿಕ ಸೇವೆ ಅಥವಾ ಹುದ್ದೆಗಳಿಗೆ ನೇಮಕ ಹೊಂದುವಂತಿಲ್ಲ.
ಗಮನಿಸಿ: BSF, CRPF, CISF ಪಡೆಗಳಿಂದ ನಿವೃತ್ತರಾದವರನ್ನು “ಮಾಜಿ ಸೈನಿಕ” ಎಂದು ಪರಿಗಣಿಸಲಾಗುವುದಿಲ್ಲ.
d) ಕೆ.ಸಿ.ಎಸ್. (ಸಾಮಾನ್ಯ ನೇಮಕಾತಿ) ನಿಯಮ 9(1) ರನ್ವಯ ಕೇಂದ್ರ ಸಶಸ್ತ್ರದಳದಲ್ಲಿ ಸೇವೆ ಸಲ್ಲಿಸುವಾಗ ಹತರಾದ ಅಥವಾ ಶಾಶ್ವತವಾಗಿ ದೈಹಿಕ ವಿಕಲತೆ ಹೊಂದಿದ ವ್ಯಕ್ತಿಗಳ ಕುಟುಂಬದವರು (ಸಂದರ್ಭಾನುಸಾರ ಹೆಂಡತಿ ಅಥವಾ ಗಂಡ ಮತ್ತು ಮಕ್ಕಳು ಮತ್ತು ಮಲ ಮಕ್ಕಳು) ಮಾಜಿ ಸೈನಿಕ ಮೀಸಲಾತಿಗೆ ಅರ್ಹರಾಗಿರುತ್ತಾರೆ. ಮಾಜಿ ಸೈನಿಕ ಮಕ್ಕಳಿಗೆ ವಯೋಮಿತಿ ಸಡಿಲಿಕೆ, ಸಹಿಷ್ಣುತೆ ಪರೀಕ್ಷೆ ಹಾಗೂ ದೇಹದಾರ್ಡ್ಯತೆ ಪರೀಕ್ಷೆಯಲ್ಲಿ ಯಾವುದೇ ತರಹದ ವಿನಾಯಿತಿಯನ್ನು ನೀಡಲಾಗುವುದಿಲ್ಲ. ಕರ್ತವ್ಯ ನಿರ್ವಹಿಸುತ್ತಿದ್ದ ಕೇಂದ್ರ ಸಶಸ್ತ್ರದಳದ ಅಧಿಕಾರಿಗಳಿಂದ ಆವಲಂಬಿತ ಪ್ರಮಾಣ ಪತ್ರ ಮತ್ತು ಸೈನಿಕ ಬೋರ್ಡ್‌ನಿಂದ ಪ್ರಮಾಣ ಪತ್ರವನ್ನು ಪಡೆದಿಟ್ಟುಕೊಂಡಿರತಕ್ಕದ್ದು.
ಟಿಪ್ಪಣಿ:
- ಮೇಲಿನ ಷರತ್ತಿನ ಪ್ರಕಾರ ಮಾಜಿ ಸೈನಿಕ ಮೀಸಲಾತಿ ಕೋರುವ ಅಭ್ಯರ್ಥಿಗಳು ನಿಯಮಾನುಸಾರ ಆ
ಮೀಸಲಾತಿಗೆ ಅರ್ಹರೇ? ಎಂಬುದನ್ನು ಹತ್ತಿರದ ಜಿಲ್ಲಾ ಸೈನಿಕ ಬೋರ್ಡ್ ನಿಂದ ತಿಳಿದುಕೊಂಡು ಮೀಸಲಾತಿಯನ್ನು ಕೋರುವುದು ಸೂಕ್ತ
ಉದ್ಯೋಗ
Puttur-Salesನಿಂದ Technicianವರೆಗೆ; ಪುತ್ತೂರಿನ ಶ್ರೀ ತಿರುಮಲಾ TVSನಲ್ಲಿ ಭರ್ಜರಿ Job Opening
ಉದ್ಯೋಗ ಹುಡುಕುತ್ತಿರುವ ಯುವಕ-ಯುವತಿಯರಿಗೆ ಇಲ್ಲಿದೆ ಉತ್ತಮ ಅವಕಾಶ. ದ್ವಿಚಕ್ರ ವಾಹನ ಕ್ಷೇತ್ರದಲ್ಲಿ ವೃತ್ತಿಜೀವನ ರೂಪಿಸಿಕೊಳ್ಳಲು ಬಯಸುವವರಿಗೆ ಪುತ್ತೂರಿನ ಶ್ರೀ ತಿರುಮಲಾ TVS ಸಂಸ್ಥೆಯಲ್ಲಿ ಸೇಲ್ಸ್, ಸರ್ವೀಸ್, ಅಕೌಂಟ್ಸ್, ಫೈನಾನ್ಸ್, ಇನ್ಶೂರೆನ್ಸ್ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಹಲವು ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ.
ಪುತ್ತೂರು: ಉದ್ಯೋಗ ಹುಡುಕುತ್ತಿರುವ ಯುವಕ-ಯುವತಿಯರಿಗೆ ಇಲ್ಲಿದೆ ಉತ್ತಮ ಅವಕಾಶ. ದ್ವಿಚಕ್ರ ವಾಹನ ಕ್ಷೇತ್ರದಲ್ಲಿ ವೃತ್ತಿಜೀವನ ರೂಪಿಸಿಕೊಳ್ಳಲು ಬಯಸುವವರಿಗೆ ಪುತ್ತೂರಿನ ಶ್ರೀ ತಿರುಮಲಾ TVS ಸಂಸ್ಥೆಯಲ್ಲಿ ಸೇಲ್ಸ್, ಸರ್ವೀಸ್, ಅಕೌಂಟ್ಸ್, ಫೈನಾನ್ಸ್, ಇನ್ಶೂರೆನ್ಸ್ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಹಲವು ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ.
TVS ಸಂಸ್ಥೆಯ ಪ್ರೀಮಿಯಂ, EV ಹಾಗೂ IC ವಿಭಾಗಗಳಲ್ಲಿ ಉದ್ಯೋಗಾವಕಾಶ ಕಲ್ಪಿಸಲಾಗಿದ್ದು, ‘ಪುತ್ತೂರಿನ ಅತಿದೊಡ್ಡ 2-ವೀಲರ್ ಜಾಬ್ ಓಪನಿಂಗ್’ ಎಂಬ ಘೋಷಣೆಯೊಂದಿಗೆ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ.
ಸೇಲ್ಸ್ ವಿಭಾಗದಲ್ಲಿ ಹಲವು ಅವಕಾಶ
ಪುತ್ತೂರು ಸೇಲ್ಸ್ ವಿಭಾಗದಲ್ಲಿ ಸೇಲ್ಸ್ ಎಕ್ಸಿಕ್ಯೂಟಿವ್, ಸೇಲ್ಸ್ ಮ್ಯಾನೇಜರ್, ಎಕ್ಸ್‌ಚೇಂಜ್ ಕೋಆರ್ಡಿನೇಟರ್, ಸೇಲ್ಸ್ ಟೆಲಿಕಾಲಿಂಗ್ (CRE), ಅಕೌಂಟ್ಸ್ ಮ್ಯಾನೇಜರ್, ಫೈನಾನ್ಸ್ ಮ್ಯಾನೇಜರ್, ರಿಸೆಪ್ಷನಿಸ್ಟ್, RTO ಎಕ್ಸಿಕ್ಯೂಟಿವ್, ಇನ್‌ವಾಯ್ಸ್ ಎಕ್ಸಿಕ್ಯೂಟಿವ್, ಅಕೌಂಟ್ಸ್ ಎಕ್ಸಿಕ್ಯೂಟಿವ್, ಫೈನಾನ್ಸ್ ಕೋಆರ್ಡಿನೇಟರ್ ಹಾಗೂ ಇನ್ಶೂರೆನ್ಸ್ ಎಕ್ಸಿಕ್ಯೂಟಿವ್ ಸೇರಿದಂತೆ ಹಲವು ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.

ಸರ್ವೀಸ್ ವಿಭಾಗದಲ್ಲೂ ಭರ್ಜರಿ ನೇಮಕಾತಿ
ಸರ್ವೀಸ್ ವಿಭಾಗದಲ್ಲಿ ಅಡ್ವೈಸರ್, ಫ್ಲೋರ್ ಸೂಪರ್‌ವೈಸರ್, ಟೆಕ್ನಿಷಿಯನ್, ಪಾರ್ಟ್ಸ್ ಪಿಕರ್, ಬಿಲ್ಲಿಂಗ್/ರಿಸೆಪ್ಷನಿಸ್ಟ್ ಎಕ್ಸಿಕ್ಯೂಟಿವ್, ಪಾರ್ಟ್ಸ್ ಮ್ಯಾನೇಜರ್, ವಾಷಿಂಗ್ ಸಿಬ್ಬಂದಿ, PDI ಟೆಕ್ನಿಷಿಯನ್, ಸರ್ವೀಸ್ ಮ್ಯಾನೇಜರ್, ನೆಟ್‌ವರ್ಕ್ ಕೋಆರ್ಡಿನೇಟರ್, ವಾರಂಟಿ ಇನ್‌ಚಾರ್ಜ್, ಅಕ್ಸಿಡೆಂಟ್ ಸೂಪರ್‌ವೈಸರ್, CRE ಟೆಲಿಕಾಲಿಂಗ್, CRM, PDI ಸೂಪರ್‌ವೈಸರ್ ಹಾಗೂ ಪೇಂಟರ್ ಮತ್ತು ಡೆಂಟಿಂಗ್ ಹುದ್ದೆಗಳಿಗೆ ಅವಕಾಶವಿದೆ.

ಬೆಳ್ಳಾರೆಯಲ್ಲೂ ಉದ್ಯೋಗದ ಬಾಗಿಲು ತೆರೆದಿದೆ
ಬೆಳ್ಳಾರೆ ಭಾಗದಲ್ಲಿಯೂ ಉದ್ಯೋಗಾವಕಾಶ ಕಲ್ಪಿಸಲಾಗಿದೆ. ಸರ್ವೀಸ್ ವಿಭಾಗದಲ್ಲಿ ಅಡ್ವೈಸರ್, ಪಾರ್ಟ್ಸ್ ಪಿಕರ್, ಬಿಲ್ಲಿಂಗ್/ರಿಸೆಪ್ಷನಿಸ್ಟ್ ಎಕ್ಸಿಕ್ಯೂಟಿವ್, ಫ್ಲೋರ್ ಸೂಪರ್‌ವೈಸರ್, ಟೆಕ್ನಿಷಿಯನ್ ಹಾಗೂ ವಾಷಿಂಗ್ ಸಿಬ್ಬಂದಿ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.

ಸೇಲ್ಸ್ ವಿಭಾಗದಲ್ಲಿ 6 ಸೇಲ್ಸ್ ಎಕ್ಸಿಕ್ಯೂಟಿವ್ ಹಾಗೂ 2 ರಿಸೆಪ್ಷನಿಸ್ಟ್ ಹುದ್ದೆಗಳಿಗೂ ಅವಕಾಶವಿದೆ.
PF, ESI ಜೊತೆಗೆ ₹25 ಸಾವಿರದವರೆಗೆ ಗಳಿಕೆ!
ಆಯ್ಕೆಯಾಗುವ ಅಭ್ಯರ್ಥಿಗಳಿಗೆ PF, ESI, ಸ್ಪಾಟ್ ಇನ್ಸೆಂಟಿವ್, ಮಾಸಿಕ ಹಾಗೂ ತ್ರೈಮಾಸಿಕ ಇನ್ಸೆಂಟಿವ್ ಸೌಲಭ್ಯಗಳು ದೊರೆಯಲಿವೆ. 25 ಕಿ.ಮೀ.ಗಿಂತ ಹೆಚ್ಚಿನ ಪ್ರಯಾಣಕ್ಕೆ ಪೆಟ್ರೋಲ್ ವೋಚರ್ ನೀಡಲಾಗುತ್ತಿದ್ದು, ಅರ್ಹ ಅಭ್ಯರ್ಥಿಗಳಿಗೆ ತಿಂಗಳಿಗೆ ₹25,000 ವರೆಗೆ ಗಳಿಸುವ ಅವಕಾಶ ಇದೆ ಎಂದು ಸಂಸ್ಥೆ ತಿಳಿಸಿದೆ.
ದ್ವಿಚಕ್ರ ವಾಹನ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವವರು ಮಾತ್ರವಲ್ಲದೆ, ಸೇಲ್ಸ್, ಅಕೌಂಟ್ಸ್, ಫೈನಾನ್ಸ್, ಟೆಲಿಕಾಲಿಂಗ್, ಗ್ರಾಹಕ ಸೇವೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗ ಹುಡುಕುತ್ತಿರುವವರೂ ಈ ಅವಕಾಶವನ್ನು ಬಳಸಿಕೊಳ್ಳಬಹುದಾಗಿದೆ.
ಉದ್ಯೋಗಾವಕಾಶ ಸೀಮಿತವಾಗಿರುವುದರಿಂದ ಆಸಕ್ತ ಅಭ್ಯರ್ಥಿಗಳು ಕೂಡಲೇ ಸಂಪರ್ಕಿಸಬಹುದು.
📞 ಸಂಪರ್ಕ: +91 82965 79206
📍 ವಿಳಾಸ: ಶ್ರೀ ತಿರುಮಲಾ TVS, ಬೈಪಾಸ್ ಜಂಕ್ಷನ್, ಮಂಜಲ್ಪಡ್ಡು, ಮೇನ್ ರೋಡ್, ಬೋಳ್ವಾರ್ ವೆಸ್ಟ್, ಪುತ್ತೂರು–574201.
ಉದ್ಯೋಗ
Constable recruitment: ಕಾನ್‌ಸ್ಟೆಬಲ್ ನೇಮಕಾತಿ: ಸೆ.28ರಿಂದ ದೈಹಿಕ ಪರೀಕ್ಷೆ; 3,991 ಹುದ್ದೆಗಳಿಗೆ 19,396 ಅಭ್ಯರ್ಥಿಗಳು
ರಾಜ್ಯ ಪೊಲೀಸ್ ಇಲಾಖೆಯ ಸಿವಿಲ್ ಪೊಲೀಸ್ ಕಾನ್‌ಸ್ಟೆಬಲ್ (ಆರ್‌ಪಿಸಿ ಮತ್ತು ಕೆಕೆ) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದ ದೇಹದಾರ್ಢ್ಯ ಪರೀಕ್ಷೆ (ಪಿಎಸ್‌ಟಿ) ಹಾಗೂ ಸಹಿಷ್ಣುತೆ ಪರೀಕ್ಷೆ (ಇಟಿ) ಸೆ.28ರಿಂದ ಆರಂಭವಾಗಲಿದೆ. ಪೊಲೀಸ್ ನೇಮಕಾತಿ ವಿಭಾಗವು ವಲಯವಾರು ವೇಳಾಪಟ್ಟಿಯನ್ನು ಪ್ರಕಟಿಸಿದೆ.
ಬೆಂಗಳೂರು, ಸೆ.25: ರಾಜ್ಯ ಪೊಲೀಸ್ ಇಲಾಖೆಯ ಸಿವಿಲ್ ಪೊಲೀಸ್ ಕಾನ್‌ಸ್ಟೆಬಲ್ (ಆರ್‌ಪಿಸಿ ಮತ್ತು ಕೆಕೆ) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದ ದೇಹದಾರ್ಢ್ಯ ಪರೀಕ್ಷೆ (ಪಿಎಸ್‌ಟಿ) ಹಾಗೂ ಸಹಿಷ್ಣುತೆ ಪರೀಕ್ಷೆ (ಇಟಿ) ಸೆ.28ರಿಂದ ಆರಂಭವಾಗಲಿದೆ. ಪೊಲೀಸ್ ನೇಮಕಾತಿ ವಿಭಾಗವು ವಲಯವಾರು ವೇಳಾಪಟ್ಟಿಯನ್ನು ಪ್ರಕಟಿಸಿದೆ.
ಈ ನೇಮಕಾತಿ ಪ್ರಕ್ರಿಯೆಯಡಿ ಒಟ್ಟು 3,991 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, ರಾಜ್ಯಾದ್ಯಂತ 19,396 ಅಭ್ಯರ್ಥಿಗಳು ದೈಹಿಕ ಪರೀಕ್ಷೆಗೆ ಅರ್ಹತೆ ಪಡೆದಿದ್ದಾರೆ. ಉಳಿಕೆ ಮೂಲ ವೃಂದದ (ಆರ್‌ಪಿಸಿ) 3,395 ಹುದ್ದೆಗಳಿಗೆ 16,454 ಅಭ್ಯರ್ಥಿಗಳು ಹಾಗೂ ಕಲ್ಯಾಣ ಕರ್ನಾಟಕ (ಕೆಕೆ) ವೃಂದದ 596 ಹುದ್ದೆಗಳಿಗೆ 2,942 ಅಭ್ಯರ್ಥಿಗಳು ಪರೀಕ್ಷೆಗೆ ಆಯ್ಕೆಯಾಗಿದ್ದಾರೆ.
ಮಂಗಳೂರಿನಲ್ಲಿ 395 ಹುದ್ದೆಗಳಿಗೆ 1,803 ಅಭ್ಯರ್ಥಿಗಳು
ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ (ಕಾರವಾರ), ಚಿಕ್ಕಮಗಳೂರು ಹಾಗೂ ಮಂಗಳೂರು ನಗರ ಘಟಕಗಳ ವ್ಯಾಪ್ತಿಯ 395 ಹುದ್ದೆಗಳಿಗೆ 1,803 ಅಭ್ಯರ್ಥಿಗಳು ದೈಹಿಕ ಪರೀಕ್ಷೆಯಲ್ಲಿ ಭಾಗವಹಿಸಲಿದ್ದಾರೆ. ಈ ಅಭ್ಯರ್ಥಿಗಳಿಗೆ ಸೆ.28ರಿಂದ ಅ.3ರವರೆಗೆ ಮಂಗಳೂರಿನ ಲಾಲ್‌ಬಾಗ್‌ನ ಮಂಗಳ ಕ್ರೀಡಾಂಗಣದಲ್ಲಿ ದೈಹಿಕ ಪರೀಕ್ಷೆ ನಡೆಯಲಿದೆ.
ಕರೆಪತ್ರ ಡೌನ್‌ಲೋಡ್‌ಗೆ ಸೂಚನೆ
ದೈಹಿಕ ಪರೀಕ್ಷೆಗೆ ಅರ್ಹತೆ ಪಡೆದ ಅಭ್ಯರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ಅಧಿಕೃತ ವೆಬ್‌ಸೈಟ್‌ನಿಂದ ತಮ್ಮ ಕರೆಪತ್ರವನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. ಅಭ್ಯರ್ಥಿಗಳು ಕರೆಪತ್ರದಲ್ಲಿ ನಮೂದಿಸಿರುವ ದಿನಾಂಕದಂದು ನಿಗದಿತ ಪರೀಕ್ಷಾ ಕೇಂದ್ರಕ್ಕೆ ಕಡ್ಡಾಯವಾಗಿ ಹಾಜರಾಗುವಂತೆ ಪೊಲೀಸ್ ನೇಮಕಾತಿ ವಿಭಾಗ ಸೂಚಿಸಿದೆ.
ಕಾನ್‌ಸ್ಟೆಬಲ್ ಲಿಖಿತ ಪರೀಕ್ಷೆಯ ತಾತ್ಕಾಲಿಕ ಫಲಿತಾಂಶ ಪ್ರಕಟ
ಇದೇ ವೇಳೆ, ಕೆಎಸ್‌ಆರ್‌ಪಿ, ಕೆಎಸ್‌ಐಎಸ್‌ಎಫ್ ಹಾಗೂ ಐಆರ್‌ಬಿ ಪೊಲೀಸ್ ಕಾನ್‌ಸ್ಟೆಬಲ್ ನೇಮಕಾತಿಗಾಗಿ ಸೆ.20ರಂದು ನಡೆದ ಲಿಖಿತ ಪರೀಕ್ಷೆಯ ತಾತ್ಕಾಲಿಕ ಫಲಿತಾಂಶವನ್ನು ಕೇವಲ ಐದು ದಿನಗಳಲ್ಲಿ ಕೆಇಎ ಪ್ರಕಟಿಸಿದೆ.
ಪರೀಕ್ಷೆಯ ಫಲಿತಾಂಶಕ್ಕೆ ಆಕ್ಷೇಪಣೆಗಳಿದ್ದಲ್ಲಿ ಅಭ್ಯರ್ಥಿಗಳು ಸೆ.27ರೊಳಗೆ ನಿಗದಿತ ಲಿಂಕ್ ಮೂಲಕ ಸಲ್ಲಿಸಬಹುದು ಎಂದು ಕೆಇಎ ತಿಳಿಸಿದೆ.
ಉಳಿಕೆ ಮೂಲ ವೃಂದದ 1,13,390 ಹಾಗೂ ಕಲ್ಯಾಣ ಕರ್ನಾಟಕ ವೃಂದದ 33,061 ಅಭ್ಯರ್ಥಿಗಳು ಲಿಖಿತ ಪರೀಕ್ಷೆ ಬರೆದಿದ್ದರು. ಪರೀಕ್ಷೆ ನಡೆದ ದಿನವೇ ಎಲ್ಲ ಅಭ್ಯರ್ಥಿಗಳ ಒಎಂಆರ್ ಉತ್ತರ ಪತ್ರಿಕೆಗಳನ್ನು ಸ್ಕ್ಯಾನ್ ಮಾಡಿ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾಗಿತ್ತು ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ತಿಳಿಸಿದ್ದಾರೆ.
ಅಂತರ ರಾಜ್ಯ
Oracle-‘ಇಂದು ನಿಮ್ಮ ಕೊನೆಯ ಕೆಲಸದ ದಿನ’; Oracle ಉದ್ಯೋಗಿಗಳಿಗೆ ಮುಂಜಾನೆ ʻಇ-ಮೇಲ್ ʼಶಾಕ್
ಜಾಗತಿಕ ಸಾಫ್ಟ್‌ವೇರ್ ದೈತ್ಯ ಒರಾಕಲ್ (Oracle) ಸಂಸ್ಥೆಯ ಉದ್ಯೋಗಿಗಳಿಗೆ ಮಂಗಳವಾರ ಮುಂಜಾನೆ ಕಳುಹಿಸಲಾದ ಇ-ಮೇಲ್‌ವೊಂದು ಆತಂಕ ಮೂಡಿಸಿದೆ. “ನಿಮ್ಮ ಹುದ್ದೆಗೆ ಸಂಬಂಧಿಸಿದಂತೆ ಕೆಲವು ಕಠಿಣ ಸುದ್ದಿಯನ್ನು ಹಂಚಿಕೊಳ್ಳುತ್ತಿದ್ದೇವೆ. ಇಂದು ನಿಮ್ಮ ಕೊನೆಯ ಕೆಲಸದ ದಿನ” ಎಂದು ಇ-ಮೇಲ್‌ನಲ್ಲಿ ತಿಳಿಸಲಾಗಿದೆ ಎಂದು ಬಿಸಿನೆಸ್ ಇನ್‌ಸೈಡರ್ ವರದಿ ಮಾಡಿದೆ.
ನವದೆಹಲಿ, ಸೆ.16: ಜಾಗತಿಕ ಸಾಫ್ಟ್‌ವೇರ್ ದೈತ್ಯ ಒರಾಕಲ್ (Oracle) ಸಂಸ್ಥೆಯ ಉದ್ಯೋಗಿಗಳಿಗೆ ಮಂಗಳವಾರ ಮುಂಜಾನೆ ಕಳುಹಿಸಲಾದ ಇ-ಮೇಲ್‌ವೊಂದು ಆತಂಕ ಮೂಡಿಸಿದೆ. “ನಿಮ್ಮ ಹುದ್ದೆಗೆ ಸಂಬಂಧಿಸಿದಂತೆ ಕೆಲವು ಕಠಿಣ ಸುದ್ದಿಯನ್ನು ಹಂಚಿಕೊಳ್ಳುತ್ತಿದ್ದೇವೆ. ಇಂದು ನಿಮ್ಮ ಕೊನೆಯ ಕೆಲಸದ ದಿನ” ಎಂದು ಇ-ಮೇಲ್‌ನಲ್ಲಿ ತಿಳಿಸಲಾಗಿದೆ ಎಂದು ಬಿಸಿನೆಸ್ ಇನ್‌ಸೈಡರ್ ವರದಿ ಮಾಡಿದೆ.
ಮಂಗಳವಾರ ಬೆಳಗ್ಗೆ ಸುಮಾರು 6 ಗಂಟೆಗೆ ಉದ್ಯೋಗಿಗಳಿಗೆ ಈ ಇ-ಮೇಲ್ ಕಳುಹಿಸಲಾಗಿದೆ ಎನ್ನಲಾಗಿದ್ದು, ಸಂಸ್ಥೆಯ ವ್ಯಾಪಕ ಸಾಂಸ್ಥಿಕ ಪುನರ್‌ರಚನೆಯ ಭಾಗವಾಗಿ ಕೆಲವು ಹುದ್ದೆಗಳನ್ನು ರದ್ದುಗೊಳಿಸಲಾಗಿದೆ ಎಂದು ತಿಳಿಸಲಾಗಿದೆ. ಆದರೆ, ನಿರ್ದಿಷ್ಟ ಉದ್ಯೋಗಿಯನ್ನು ವೈಯಕ್ತಿಕವಾಗಿ ಕೆಲಸದಿಂದ ತೆಗೆದುಹಾಕಲು ಕಾರಣವೇನು ಎಂಬುದನ್ನು ಇ-ಮೇಲ್‌ನಲ್ಲಿ ವಿವರಿಸಲಾಗಿಲ್ಲ.
ಉದ್ಯೋಗಿಗಳ ಕಂಪ್ಯೂಟರ್, ಇ-ಮೇಲ್, ವಾಯ್ಸ್‌ಮೇಲ್ ಹಾಗೂ ಫೈಲ್‌ಗಳಿಗೆ ಇರುವ ಲಾಗಿನ್ ಪ್ರವೇಶವನ್ನು ಶೀಘ್ರದಲ್ಲೇ ಸ್ಥಗಿತಗೊಳಿಸಲಾಗುವುದು ಎಂದು ಕಂಪನಿ ತಿಳಿಸಿದೆ. ಅಲ್ಲದೆ, ಪರಿಹಾರಧನ ಹಾಗೂ ಇತರ ಅಗತ್ಯ ದಾಖಲೆಗಳನ್ನು ಪಡೆಯಲು ವೈಯಕ್ತಿಕ ಇ-ಮೇಲ್ ವಿಳಾಸವನ್ನು ನೀಡುವಂತೆ ಉದ್ಯೋಗಿಗಳಿಗೆ ಸೂಚಿಸಲಾಗಿದೆ.
AI, ಕ್ಲೌಡ್ ಮೂಲಸೌಕರ್ಯ ವೆಚ್ಚದ ನಡುವೆ ಲೇಆಫ್
ಕೃತಕ ಬುದ್ಧಿಮತ್ತೆ (AI) ಹಾಗೂ ಕ್ಲೌಡ್ ಮೂಲಸೌಕರ್ಯ ಕ್ಷೇತ್ರದಲ್ಲಿ ಒರಾಕಲ್ ಭಾರಿ ಪ್ರಮಾಣದಲ್ಲಿ ಹೂಡಿಕೆ ಮಾಡುತ್ತಿರುವ ಸಂದರ್ಭದಲ್ಲೇ ಈ ಹೊಸ ಸುತ್ತಿನ ಉದ್ಯೋಗ ಕಡಿತ ನಡೆದಿದೆ ಎಂದು ವರದಿ ತಿಳಿಸಿದೆ. ಆದರೆ, ಪ್ರಸ್ತುತ ಸುತ್ತಿನಲ್ಲಿ ಎಷ್ಟು ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರೆ ಎಂಬುದನ್ನು ಒರಾಕಲ್ ಅಧಿಕೃತವಾಗಿ ಬಹಿರಂಗಪಡಿಸಿಲ್ಲ.
ಈಗಾಗಲೇ 21 ಸಾವಿರ ಉದ್ಯೋಗಿಗಳ ಕಡಿತ
2026ರ ಆರ್ಥಿಕ ವರ್ಷದಲ್ಲಿ ಒರಾಕಲ್ ತನ್ನ ಜಾಗತಿಕ ಸಿಬ್ಬಂದಿ ಬಳಗದ ಸುಮಾರು ಶೇ.13ರಷ್ಟು, ಅಂದರೆ ಸುಮಾರು 21,000 ಉದ್ಯೋಗಿಗಳನ್ನು ವಜಾಗೊಳಿಸಿತ್ತು ಎಂದು ವರದಿಯಾಗಿದೆ.
ಈ ಪುನರ್‌ರಚನಾ ಪ್ರಕ್ರಿಯೆಗಾಗಿ ಕಂಪನಿಯ ವೆಚ್ಚವು 2.8 ಬಿಲಿಯನ್ ಡಾಲರ್‌ವರೆಗೆ ಹೆಚ್ಚಾಗಿದೆ ಎನ್ನಲಾಗಿದೆ. ಉದ್ಯೋಗ ಕಡಿತಗಳ ಬಳಿಕ ಒರಾಕಲ್‌ನ ಜಾಗತಿಕ ಸಿಬ್ಬಂದಿ ಸಂಖ್ಯೆ ಸುಮಾರು 1.41 ಲಕ್ಷಕ್ಕೆ ಇಳಿದಿದೆ ಎಂದು ವರದಿ ತಿಳಿಸಿದೆ.
-
Uncategorized15 hours ago
Naana Paatekar No More : ವ್ಯವಸ್ಥೆಯ ವಿರುದ್ಧದ ಧ್ವನಿಗೆ ರೂಪ ನೀಡಿದ, ತನ್ನ ಡೈಲಾಗ್ ನಿಂದಲೇ ಅಸಂಖ್ಯಾತ ಅಭಿಮಾನಿಗಳನ್ನು ಗಳಿಸಿದ್ದ ಅಭಿಜಾತ ಕಲಾವಿದ ನಾನಾಪಾಟೇಕರ್ ಇನ್ನಿಲ್ಲ
-
ಬಿಗ್ ನ್ಯೂಸ್10 hours agoSting Operation | ಸ್ಟಿಂಗ್ ಆಪರೇಷನ್ ಚರ್ಚೆ: ಪುತ್ತೂರಿಗೂ ವ್ಯಾಪಿಸಿದೆಯೇ ರಾಜಕೀಯದ ‘ಸ್ಟಿಂಗ್’ ಸದ್ದು..?
-
ಮಂಗಳೂರು13 hours agoMangalore-ರಿಕ್ಷಾದಲ್ಲಿ ಬಿಟ್ಟುಹೋದ 48 ಗ್ರಾಂ ಚಿನ್ನದ ನೆಕ್ಲೇಸ್ ವಾಪಸ್ ನೀಡಿ ಪ್ರಾಮಾಣಿಕತೆ ಮೆರೆದ ಚಾಲಕ
-
Uncategorized14 hours agoAshok Rai-ಬದ್ಯಾರ್ನಲ್ಲಿ 50 ವರ್ಷದ ರಸ್ತೆ ವಿವಾದಕ್ಕೆ ತೆರೆ ಎಳೆದ ಶಾಸಕ ಅಶೋಕ್ ರೈ
-
ನಿಧನ ವಾರ್ತೆ13 hours agoBeltangadi-ಬೆಳ್ತಂಗಡಿ: ಅಡಿಕೆ ಕೊಯ್ಯುವ ವೇಳೆ ವಿದ್ಯುತ್ ತಂತಿಗೆ ದೋಟಿ ತಾಗಿ ವ್ಯಕ್ತಿ ಸಾವು
-
ಅಪರಾಧ14 hours agoUppinangadi-ಉಪ್ಪಿನಂಗಡಿ: ತೋಟದ ಕೆಲಸಕ್ಕೆ ಬರುತ್ತೇನೆಂದು ಹಣ ಪಡೆದು ನಾಪತ್ತೆ
-
ನಿಧನ ವಾರ್ತೆ13 hours agoAccident-ಮೂಡುಬಿದಿರೆ: ಸ್ಕೂಟರ್ ನಿಯಂತ್ರಣ ತಪ್ಪಿ ಬಿದ್ದು ಕಾಲೇಜು ವಿದ್ಯಾರ್ಥಿ ಸಾವು
-
ಬಿಗ್ ನ್ಯೂಸ್14 hours agoHalf helmet-ಕರ್ನಾಟಕದಲ್ಲಿ ಹಾಫ್ ಹೆಲ್ಮೆಟ್ ಸಂಪೂರ್ಣ ನಿಷೇಧ


















