ವಿದೇಶ
Watch Video: ಭೀಕರ ಕಾದಾಟದಲ್ಲಿ ಮೊಸಳೆಯನ್ನು ಸೋಲಿಸುವ ಜಾಗ್ವಾರ್ – ಎರಡು ಬಲಿಷ್ಟ ಪ್ರಾಣಿಗಳ ಯುದ್ದಕ್ಕೆ ನೆಟ್ಟಿಗರು ಮಂತ್ರಮುಗ್ದ
ಭೀಕರ ಕಾದಾಟದಲ್ಲಿ ಜಾಗ್ವಾರ್ (Jaguar) ಮೊಸಳೆ (crocodile)ಯನ್ನು ಹೇಗೆ ಸೋಲಿಸುತ್ತದೆ ಎಂಬ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗಿದ್ದು ಅದು ನೆಟ್ಟಿಗರನ್ನು ಮಂತ್ರಮುಗ್ದಗೊಳಿಸಿದೆ. ಸಿಂಹ ಮತ್ತು ಹುಲಿಯ ಬಳಿಕ ಬೆಕ್ಕಿನ ಜಾತಿಗೆ ಸೇರಿದ ಮೂರನೇ ಅತಿ ಬಲಶಾಲಿ ಪ್ರಾಣಿ ಎಂಬ ಹೆಗ್ಗಳಿಕೆಗೆ ಜಾಗ್ವಾರ್ (Jaguar the Animal) ಪ್ರಾಪ್ತವಾಗಿದೆ. ಜಾಗ್ವಾರ್ ಸಸ್ತನಿಯಾಗಿದ್ದು ಬೆಕ್ಕಿನ ಜಾತಿಗೆ ಸೇರಿದೆ (Jaguar cat) ಅದು ಬಲಶಾಲಿ ಹಲ್ಲುಗಳನ್ನು ಹೊಂದಿದ್ದು ಅದರ ಕಡಿತ ಮಾರಣಾಂತಿಕವಾಗಿರುತ್ತದೆ.
ದಟ್ಟ ಅರಣ್ಯದಲ್ಲಿ ವಾಸಿಸುವ ಈ ಜಾಗ್ವಾರ್‌ಗಳು ವಿವಿಧ ರೀತಿಯ ಪ್ರಾಣಿಗಳನ್ನು ಬೇಟೆಯಾಡಿ ಹೊಟ್ಟೆ ತುಂಬಿಸಿಕೊಳ್ಳುತ್ತದೆ. ಅದರ ಬಲಶಾಲಿ ಹಲ್ಲುಗಳು ಬಲಿಷ್ಟವಾಗಿರುವ ಆಮೆಯ ಚಿಪ್ಪುಗಳನ್ನು ಮತ್ತು ಮೊಸಳೆಯ ದಪ್ಪ ಚರ್ಮವನ್ನು ತುಂಡರಿಸುವಷ್ಟು ಶಕ್ತಿಯುತವಾಗಿವೆ.
ಸದ್ಯ ಅನ್ ಲೈನ್ ನಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಮೊಸಳೆ ಮತ್ತು ಜಾಗ್ವಾರ್ ನಡುವಿನ ರಣ ಭೀಕರ ಕಾಳಗವನ್ನು ಕಾಣಬಹುದಾಗಿದೆ. ಮೊಸಳೆ ಮತ್ತು ಜಾಗ್ವಾರ್ ಎರಡು ಅತ್ಯಂತ ಅಪಾಯಕಾರಿ ಕಾಡು ಪ್ರಾಣಿಗಳು. 41 ಸೆಕೆಂಡುಗಳ ವಿಡಿಯೋ ತುಣುಕಿನಲ್ಲಿ ನದಿಯ ದಡದಲ್ಲಿ ಹೊಂಚು ಹಾಕಿ ಕುಳಿತ ಈ ಜಾಗ್ವಾರ್ ಮೊಸಳೆಯನ್ನು ಕಾಣುತ್ತಲೇ ನೀರಿಗೆ ಧುಮುಕುತ್ತದೆ. ಬೇಟೆಯ ತಂತ್ರ ಹಾಗೂ ಬದುಕಿಗಾಗಿ ಅವೆರೆಡು ಪ್ರಾಣಿಗಳು ನಡೆಸುವ ಹೋರಾಟ ಮನುಷ್ಯ ಸಂಕುಲಕ್ಕೂ ಒಂದು ಬದುಕಿನ ಪಾಠದಂತಿದೆ.
ವೈರಲ್ ಆಗಿರುವ ವೀಡಿಯೊದಲ್ಲಿ, ಜಾಗ್ವಾರ್ ತನ್ನ ಬೇಟೆಗಾಗಿ ಧ್ಯಾನಕ್ಕೆ ಕುಳಿತಂತೆ ಅಲ್ಲಾಡದೆ ಕಾಯುವ ದೃಶ್ಯವಿದ್ದು, ಹೊಂಚುದಾಳಿ ತಂತ್ರವನ್ನು ಅದು ಪ್ರದರ್ಶಿಸುವುದನ್ನು ಕಾಣಬಹುದಾಗಿದೆ. ನದಿಯ ಸಮೀಪವಿರುವ ಪೊದೆಗಳು ಮತ್ತು ಕೊಂಬೆಗಳ ನಡುವೆ ಮರೆಯಲ್ಲಿ ಕಾದು ಕುಳಿತಿರುವ ಜಾಗ್ವಾರ್ ನೀರಿನಲ್ಲಿ ಈಜಾಡುತ್ತಿರುವ ಮೊಸಳೆಯನ್ನು ಏಕ ಚಿತ್ತದಿಂದ ಗಮನಿಸುತ್ತಿರುತ್ತದೆ. ಒಂದೊಮ್ಮೆ ಮೊಸಳೆ ನೀರಿನ ಮೇಲೆ ಈಜಾಡಲು ಪ್ರಾರಂಭಿಸುತ್ತಿದ್ದಂತೆ ಜಾಗ್ವಾರ್ ತನ್ನ ಬೇಟೆಯ ಮೇಲೆ ಎರಗಲು ಸಜ್ಜಾಗುತ್ತದೆ. ತನಗೆ ಬೇಟೆಯಾಡಲು ಅನುಕೂಲಕರ ಸ್ಥಳಕ್ಕೆ ಮೊಸಳೆಯು ಬರುವವರೆಗೆ ಕಾಯುವ ಜಾಗ್ವಾರ್ ಬಳಿಕ ನದಿಗೆ ಹಾರುತ್ತದೆ.

ಭೇಟೆಯ ರಣ ರೋಚಕ ವಿಡಿಯೋ ನೋಡಿ
ಜಾಗರೂಕ ಹೋರಾಟ
ನೀರಿನಲ್ಲಿ ಈಜಾಡಲು ವಿಶೇಷ ಪರಿಣಿತಿಯನ್ನು ಜಾಗ್ವಾರ್ ಪ್ರಾಣಿಗಳು ಪಡೆದಿದ್ದು,ಅದು ಒಮ್ಮೆ ನೀರಿಗೆ ಧುಮಿಕಿದ ಬಳಿಕ ತುಸು ಮಾತ್ರದ ಹಿಂಜರಿಕೆಯನ್ನು ತೋರ್ಪಡಿಸುವುದಿಲ್ಲ. ತನ್ನ ಆಹಾರವನ್ನು ಪಡೆಯಲೆ ಬೇಕೆಂಬ ಏಕೈಕ ಹಠ ಹಾಗೂ ಛಲದಿಂದ ಮೊಸಳೆಯ ಮೇಲೆ ಎರಗುವುದನ್ನು ವಿಡಿಯೋದಲ್ಲಿ ಕಾಣಬಹುದು. ಯಾವುದೇ ಅಲಸ್ಯ ಅಥಾವ ನಿರ್ಲಕ್ಷ್ಯ ಜಾಗ್ವಾರ್ ತೋರಿಸದೆ ಅತ್ಯಂತ ಜಾಗರೂಕ ನಡೆಯನ್ನು ಪ್ರಕಟಿಸುತ್ತದೆ.
ಕೊನೆ ಕ್ಷಣದವರೆಗೆ ಬದುಕಿಗಾಗಿ ಸಂಘರ್ಷ
ಮೊಸಳೆಯು ಜಾಗ್ವಾರ್ ನಿಂದ ಹಿಡಿತದಿಂದ ತಪ್ಪಿಸಿಕೊಳ್ಳಲು ತನ್ನಿಂದಾದ ಎಲ್ಲ ಪ್ರಯತ್ನಗಳನ್ನು ಮಾಡುತ್ತದೆ. ಜಾಗ್ವಾರ್ ತನಗಿಂತ ಬಲಿಷ್ಟ ಪ್ರಾಣಿಯೇ ಆದರೂ, ಕೊನೆಯ ಕ್ಷಣದವರೆಗೂ ಎದೆಗುಂದದೆ ಹೋರಾಟ ನಡೆಸಬೇಕು ಎನ್ನುವ ಪ್ರಕೃತಿಯ ಪಾಠವನ್ನು ಅದು ಪರಿಚಯಿಸುತ್ತದೆ. ಜಾಗ್ವಾರ್ ನ ಬಲಿಷ್ಟ ಹಲ್ಲುಗಳಿಂದ ತಪ್ಪಿಸಿಕೊಳ್ಳಲು ಅದು ಹಲವು ಸೆಕೆಂಡ್ ಗಳ ಕಾಲ ಕೊಸರಾಡುತ್ತಾದೆ. ಆದರೇ ಅಂತಿನ ನಗು ಮಾತ್ರ ಜಾಗ್ವಾರ್ ನದೇ ಆಗಿರುತ್ತದೆ. ವಿಡಿಯೋ ಕೊನೆಗೊಳ್ಳುವ ಹೊತ್ತಿಗೆ ಮೊಸಳೆಯ ಕೊರಳು ಜಾಗ್ವಾರ್ ನ ಹಲ್ಲುಗಳ ಮಧ್ಯೆಯಿರುತ್ತದೆ.
ಇದ್ದಕ್ಕಿದಂತೆ ವೈರಲ್
ಎರಡು ವರ್ಷಗಳ ಹಿಂದೆ ವಹ್ಸಿ ಹಯಾತ್ಲರ್ ಎಂಬ ಟ್ವಿಟ್ಟರ್ ಬಳಕೆದಾರ ಈ ವಿಡಿಯೋವನ್ನು ತನ್ನ ಟ್ವಿಟರ್ ಖಾತೆಯಲ್ಲಿ ಅಪ್ ಲೋಡ್ ಮಾಡಿದ್ದರು. ಆದರೇ ಈ ವಿಡಿಯೋ ಈಗ ಇದ್ದಕ್ಕಿದ್ದಂತೆ ವೈರಲ್ ಆಗುತ್ತಿದೆ, ಇದನ್ನು ಫಿಗೆನ್ ಎಂಬ ಮತ್ತೊಬ್ಬ ಟ್ವಿಟರ್ ಬಳಕೆದಾರರು ಸೋಮವಾರ ಮರು ಪೋಸ್ಟ್ ಮಾಡಿದ್ದು ಅದಕ್ಕೆ “ಓಎಂಜಿ ವಾಟ್ ಎ ಪವರ್ !!” (ಓ ದೇವರೆ, ಎಂಥಾ ಶಕ್ತಿ..!)ಎಂಬ ಶೀರ್ಷಿಕೆ ಕೊಟ್ಟಿದ್ದಾರೆ.
ಈ ವಿಡಿಯೋ ಇಲ್ಲಿಯವರೆಗೆ 27,000 ಕ್ಕೂ ಹೆಚ್ಚು ಲೈಕ್ಸ್ ಸಂಪಾದಿಸಿದೆ ಮತ್ತು ಅದನ್ನು 20 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಟ್ವಿಟರ್ ನಲ್ಲಿ ಟ್ರೆಂಡಿಂಗ್ ಆಗಿರುವ ಈ ಟ್ವೀಟ್‌ಗೆ ಭಾರೀ ಸಂಖ್ಯೆಯಲ್ಲಿ ಟ್ವಿಟರ್ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. ಒಬ್ಬ ಬಳಕೆದಾರ, “ಜಾಗ್ವಾರ್ ದವಡೆಯ ಶಕ್ತಿ ಅದ್ಭುತವಾಗಿದೆ” ಕಾಮೇಂಟ್ ಮಾಡಿದ್ದಾರೆ
ಬಿಗ್ ನ್ಯೂಸ್
Green card-ಇನ್ಫೋಸಿಸ್, ಟಿಸಿಎಸ್ ಸೇರಿ 8 ಐಟಿ ಕಂಪನಿಗಳಿಗೆ ಅಮೆರಿಕದ ಗ್ರೀನ್ ಕಾರ್ಡ್ ಪ್ರಕ್ರಿಯೆ ಸ್ಥಗಿತ
ಭಾರತದ ಪ್ರಮುಖ ಐಟಿ ಕಂಪನಿಗಳಾದ ಇನ್ಫೋಸಿಸ್, ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್), ವಿಪ್ರೋ ಮತ್ತು ಎಚ್‌ಸಿಎಲ್ ಸೇರಿದಂತೆ ಎಂಟು ಕಂಪನಿಗಳಿಗೆ ಸಂಬಂಧಿಸಿದ ಶಾಶ್ವತ ಕಾರ್ಮಿಕ ಪ್ರಮಾಣಪತ್ರಗಳ ಪ್ರಕ್ರಿಯೆಯನ್ನು ಅಮೆರಿಕ ಅಮಾನತುಗೊಳಿಸಿದೆ ಎಂಬ ವರದಿ ಹೊರಬಿದ್ದಿದೆ.
ವಾಷಿಂಗ್ಟನ್: ಭಾರತದ ಪ್ರಮುಖ ಐಟಿ ಕಂಪನಿಗಳಾದ ಇನ್ಫೋಸಿಸ್, ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್), ವಿಪ್ರೋ ಮತ್ತು ಎಚ್‌ಸಿಎಲ್ ಸೇರಿದಂತೆ ಎಂಟು ಕಂಪನಿಗಳಿಗೆ ಸಂಬಂಧಿಸಿದ ಶಾಶ್ವತ ಕಾರ್ಮಿಕ ಪ್ರಮಾಣಪತ್ರಗಳ ಪ್ರಕ್ರಿಯೆಯನ್ನು ಅಮೆರಿಕ ಅಮಾನತುಗೊಳಿಸಿದೆ ಎಂಬ ವರದಿ ಹೊರಬಿದ್ದಿದೆ. ಈ ಕ್ರಮವು ಸಂಬಂಧಿತ ಕಂಪನಿಗಳ ಮೂಲಕ ಉದ್ಯೋಗ ಆಧಾರಿತ ಗ್ರೀನ್ ಕಾರ್ಡ್ ಪಡೆಯಲು ಕಾಯುತ್ತಿರುವ ವಿದೇಶಿ ಉದ್ಯೋಗಿಗಳ ಮೇಲೆ ಪರಿಣಾಮ ಬೀರಬಹುದಾಗಿದೆ.
ಅಮೆರಿಕದ ಕಾರ್ಮಿಕ ಸಚಿವ ಕೀತ್ ಸೋಂಡರ್ಲಿಂಗ್ ಹಾಗೂ ಉಪಾಧ್ಯಕ್ಷ ಜೆ.ಡಿ. ವಾನ್ಸ್ ಈ ಕುರಿತು ಘೋಷಣೆ ಮಾಡಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಕಾಗ್ನಿಜೆಂಟ್, ಇನ್ಫೋಸಿಸ್, ಟಾಟಾ, ವಿಪ್ರೋ, ಎಚ್‌ಸಿಎಲ್, ಕ್ಯಾಪ್‌ಜೆಮಿನಿ, ಮೈಕ್ರೋಸಾಫ್ಟ್ ಮತ್ತು ಅಡೋಬ್ ಕಂಪನಿಗಳಿಗೆ ಸಂಬಂಧಿಸಿದ ಶಾಶ್ವತ ಕಾರ್ಮಿಕ ಪ್ರಮಾಣಪತ್ರಗಳ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಹೇಳಲಾಗಿದೆ.
ಈ ಕಂಪನಿಗಳಿಗೆ ಸಂಬಂಧಿಸಿದ ಹೊಸ ಅರ್ಜಿಗಳು ಹಾಗೂ ಬಾಕಿ ಉಳಿದಿರುವ ಅರ್ಜಿಗಳನ್ನು ಸ್ವೀಕರಿಸುವುದಿಲ್ಲ ಅಥವಾ ಪ್ರಕ್ರಿಯೆಗೊಳಿಸುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎನ್ನಲಾಗಿದೆ.
ಸೋಂಡರ್ಲಿಂಗ್ ಅವರ ಹೇಳಿಕೆಯ ಪ್ರಕಾರ, 2009ರಿಂದ ಈ ಕಂಪನಿಗಳು ಸುಮಾರು 30 ಲಕ್ಷ ವಿದೇಶಿ ಉದ್ಯೋಗಿಗಳಿಗಾಗಿ ಮನವಿ ಸಲ್ಲಿಸಿವೆ. ಈ ಪೈಕಿ 2.3 ಲಕ್ಷಕ್ಕೂ ಹೆಚ್ಚು ಎಚ್-1ಬಿ ವೀಸಾ ಅನುಮೋದನೆಗಳು ಹಾಗೂ ಒಂದು ಲಕ್ಷಕ್ಕೂ ಹೆಚ್ಚು ಶಾಶ್ವತ ಕಾರ್ಮಿಕ ಪ್ರಮಾಣಪತ್ರಗಳನ್ನು ಪಡೆದಿವೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಬಿಗ್ ನ್ಯೂಸ್
Nepal-40 ದಿನಗಳ ಬಳಿಕ ನೇಪಾಳ ಪ್ರವಾಹದ ಶೋಧ ಕಾರ್ಯಾಚರಣೆ ಸ್ಥಗಿತ: 189 ಭಾರತೀಯರು ಸೇರಿ 5200 ಮಂದಿ ಇನ್ನೂ ನಾಪತ್ತೆ..!
ಆಗಸ್ಟ್ 26ರಂದು ನೇಪಾಳದಲ್ಲಿ ಸಂಭವಿಸಿದ್ದ ಭೋಟೆಕೋಶಿ–ತ್ರಿಶೂಲಿ ಪ್ರವಾಹಕ್ಕೆ ಸಂಬಂಧಿಸಿದ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು 40 ದಿನಗಳ ಬಳಿಕ ಸೋಮವಾರ ಅಧಿಕೃತವಾಗಿ ಸ್ಥಗಿತಗೊಳಿಸಲಾಗಿದೆ. ಭೀಕರ ಪ್ರವಾಹದಲ್ಲಿ 1,455 ಮಂದಿ ಮೃತಪಟ್ಟಿದ್ದು, ಇನ್ನೂ 5,285 ಮಂದಿ ನಾಪತ್ತೆಯಾಗಿದ್ದಾರೆ. ಇದೀಗ ನೇಪಾಳ ಸರ್ಕಾರವು ಮರುನಿರ್ಮಾಣ ಮತ್ತು ಪುನರ್ವಸತಿ ಕಾರ್ಯಗಳತ್ತ ಗಮನ ಹರಿಸಲು ಮುಂದಾಗಿದೆ.
ಕಠ್ಮಂಡು: ಆಗಸ್ಟ್ 26ರಂದು ನೇಪಾಳದಲ್ಲಿ ಸಂಭವಿಸಿದ್ದ ಭೋಟೆಕೋಶಿ–ತ್ರಿಶೂಲಿ ಪ್ರವಾಹಕ್ಕೆ ಸಂಬಂಧಿಸಿದ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು 40 ದಿನಗಳ ಬಳಿಕ ಸೋಮವಾರ ಅಧಿಕೃತವಾಗಿ ಸ್ಥಗಿತಗೊಳಿಸಲಾಗಿದೆ. ಭೀಕರ ಪ್ರವಾಹದಲ್ಲಿ 1,455 ಮಂದಿ ಮೃತಪಟ್ಟಿದ್ದು, ಇನ್ನೂ 5,285 ಮಂದಿ ನಾಪತ್ತೆಯಾಗಿದ್ದಾರೆ. ಇದೀಗ ನೇಪಾಳ ಸರ್ಕಾರವು ಮರುನಿರ್ಮಾಣ ಮತ್ತು ಪುನರ್ವಸತಿ ಕಾರ್ಯಗಳತ್ತ ಗಮನ ಹರಿಸಲು ಮುಂದಾಗಿದೆ.
ನಾಪತ್ತೆಯಾಗಿರುವವರಲ್ಲಿ 189 ಮಂದಿ ಭಾರತೀಯರಾಗಿದ್ದಾರೆ. ಅಲ್ಲದೆ, ವಿದೇಶಿ ಪಾಸ್‌ಪೋರ್ಟ್ ಹೊಂದಿರುವ ಭಾರತೀಯ ಮೂಲದ ನೂರಾರು ಮಂದಿ ಕೂಡ ನಾಪತ್ತೆಯಾಗಿರುವವರ ಪಟ್ಟಿಯಲ್ಲಿದ್ದಾರೆ.
ಪ್ರಧಾನಿ ಬಾಲೇಂದ್ರ ಶಾ ಅಧ್ಯಕ್ಷತೆಯಲ್ಲಿ ನಡೆದ ರಾಷ್ಟ್ರೀಯ ವಿಪತ್ತು ಅಪಾಯ ಕಡಿತ ಮತ್ತು ನಿರ್ವಹಣಾ ಮಂಡಳಿ ಸಭೆಯಲ್ಲಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುವ ನಿರ್ಧಾರ ಕೈಗೊಳ್ಳಲಾಯಿತು. ಜಿಲ್ಲಾ ವಿಪತ್ತು ನಿರ್ವಹಣಾ ಸಮಿತಿಗಳು, ರಾಷ್ಟ್ರೀಯ ವಿಪತ್ತು ಅಪಾಯ ಕಡಿತ ಮತ್ತು ನಿರ್ವಹಣಾ ಪ್ರಾಧಿಕಾರ ಹಾಗೂ ಪ್ರವಾಹಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ತಂಡಗಳ ಶಿಫಾರಸುಗಳ ಆಧಾರದ ಮೇಲೆ ಈ ನಿರ್ಧಾರ ಕೈಗೊಳ್ಳಲಾಗಿದೆ.
ಇದೇ ವೇಳೆ, ಮರುನಿರ್ಮಾಣ ಮತ್ತು ಪುನರ್ವಸತಿ ಕಾರ್ಯಕ್ರಮಗಳಿಗಾಗಿ 559 ಕೋಟಿ ನೇಪಾಳಿ ರೂಪಾಯಿ ಬಿಡುಗಡೆಗೆ ಅನುಮೋದನೆ ನೀಡುವಂತೆ ಹಣಕಾಸು ಸಚಿವಾಲಯಕ್ಕೆ ಮಂಡಳಿ ಶಿಫಾರಸು ಮಾಡಿದೆ. ಇನ್ನೂ ಮೌಲ್ಯಮಾಪನ ಪೂರ್ಣಗೊಳ್ಳದ ಯೋಜನೆಗಳಿಗೆ ಅಗತ್ಯವಿರುವ ಹೆಚ್ಚುವರಿ ಹಣವನ್ನು ಬಿಡುಗಡೆ ಮಾಡುವ ಜವಾಬ್ದಾರಿಯನ್ನು ರಾಷ್ಟ್ರೀಯ ವಿಪತ್ತು ಅಪಾಯ ಕಡಿತ ಮತ್ತು ನಿರ್ವಹಣಾ ಪ್ರಾಧಿಕಾರಕ್ಕೆ ವಹಿಸಲಾಗಿದೆ.
ನೇಪಾಳ ಪ್ರವಾಸೋದ್ಯಮ ಇಲಾಖೆಯ ಇತ್ತೀಚಿನ ಅಂಕಿಅಂಶಗಳ ಪ್ರಕಾರ, 36 ದೇಶಗಳ 606 ವಿದೇಶಿ ಪ್ರವಾಸಿಗರು ಇನ್ನೂ ನಾಪತ್ತೆಯಾಗಿದ್ದಾರೆ. ಇವರಲ್ಲಿ 189 ಭಾರತೀಯರು, 65 ಅಮೆರಿಕನ್ನರು, 55 ಮಲೇಷಿಯನ್ನರು, 54 ಉಕ್ರೇನಿಯನ್ನರು, 37 ಚೀನೀಯರು, ಆಸ್ಟ್ರೇಲಿಯಾ ಮತ್ತು ಲಾಟ್ವಿಯಾದ ತಲಾ 33 ಮಂದಿ, 32 ಬ್ರಿಟಿಷರು ಹಾಗೂ 30 ಕೆನಡಾ ಪ್ರಜೆಗಳು ಸೇರಿದ್ದಾರೆ.
ಇದರ ಜೊತೆಗೆ 188 ಮಂದಿ ನೇಪಾಳಿ ಪ್ರವಾಸಿಗರೂ ನಾಪತ್ತೆಯಾಗಿದ್ದಾರೆ ಎಂದು ಪ್ರವಾಸೋದ್ಯಮ ಇಲಾಖೆಯ ಮಾಹಿತಿ ತಿಳಿಸಿದೆ.
ಬಿಗ್ ನ್ಯೂಸ್
Singapore-ಜನನ ಪ್ರಮಾಣ ಹೆಚ್ಚಿಸಲು ಸಿಂಗಾಪುರ ಸರ್ಕಾರದ ವಿನೂತನ ಯೋಜನೆ; ಸರ್ಕಾರಿ ನೌಕರರಿಗಾಗಿ ‘ಫಸ್ಟ್‌ಡೇಟ್’ ಆ್ಯಪ್
ಕುಸಿಯುತ್ತಿರುವ ಜನನ ಪ್ರಮಾಣವನ್ನು ಹೆಚ್ಚಿಸುವ ಉದ್ದೇಶದಿಂದ ಸಿಂಗಾಪುರ ಸರ್ಕಾರ ವಿನೂತನ ಯೋಜನೆಗೆ ಮುಂದಾಗಿದೆ. ಸರ್ಕಾರಿ ನೌಕರರಿಗಾಗಿ ‘ಫಸ್ಟ್‌ಡೇಟ್’ ಎಂಬ ಡೇಟಿಂಗ್ ಆ್ಯಪ್ ಅನ್ನು ಪ್ರಾಯೋಗಿಕವಾಗಿ ಬಿಡುಗಡೆ ಮಾಡಲಾಗಿದೆ.
ಸಿಂಗಾಪುರ: ಕುಸಿಯುತ್ತಿರುವ ಜನನ ಪ್ರಮಾಣವನ್ನು ಹೆಚ್ಚಿಸುವ ಉದ್ದೇಶದಿಂದ ಸಿಂಗಾಪುರ ಸರ್ಕಾರ ವಿನೂತನ ಯೋಜನೆಗೆ ಮುಂದಾಗಿದೆ. ಸರ್ಕಾರಿ ನೌಕರರಿಗಾಗಿ ‘ಫಸ್ಟ್‌ಡೇಟ್’ ಎಂಬ ಡೇಟಿಂಗ್ ಆ್ಯಪ್ ಅನ್ನು ಪ್ರಾಯೋಗಿಕವಾಗಿ ಬಿಡುಗಡೆ ಮಾಡಲಾಗಿದೆ.
ಈ ಆ್ಯಪ್‌ನಲ್ಲಿ 21ರಿಂದ 35 ವರ್ಷದೊಳಗಿನ ಸರ್ಕಾರಿ ನೌಕರರು ಪರಸ್ಪರ ಪರಿಚಯವಾಗಿ, ಸೂಕ್ತ ಸಂಗಾತಿಯನ್ನು ಹುಡುಕಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಈ ಮೂಲಕ ಯುವಜನರು ಸಂಬಂಧ ಬೆಳೆಸಿಕೊಂಡು ಕುಟುಂಬ ಆರಂಭಿಸಲು ಹಾಗೂ ಮಕ್ಕಳನ್ನು ಹೊಂದಲು ಉತ್ತೇಜಿಸುವುದು ಯೋಜನೆಯ ಉದ್ದೇಶವಾಗಿದೆ.
ಸಿಂಗಾಪುರದ ಸರ್ಕಾರಿ ತಂತ್ರಜ್ಞಾನ ಸಂಸ್ಥೆ ಗವ್‌ಟೆಕ್ ಈ ಆ್ಯಪ್ ಅಭಿವೃದ್ಧಿಪಡಿಸಿದೆ. ಆ್ಯಪ್ ಬಳಸುವವರು ತಮ್ಮ ಆಸಕ್ತಿಗಳು, ಅಭ್ಯಾಸಗಳು ಹಾಗೂ ವೈಯಕ್ತಿಕ ಆದ್ಯತೆಗಳಿಗೆ ಸಂಬಂಧಿಸಿದ ಪ್ರಶ್ನಾವಳಿಯನ್ನು ಭರ್ತಿ ಮಾಡಬೇಕು. ಅದರ ಆಧಾರದ ಮೇಲೆ ಬಳಕೆದಾರರಿಗೆ ಸೂಕ್ತ ಸಂಗಾತಿಯನ್ನು ಆ್ಯಪ್ ಸೂಚಿಸುತ್ತದೆ.
ಸೂಚಿಸಲಾದ ವ್ಯಕ್ತಿಯೊಂದಿಗೆ ಸಂಪರ್ಕ ಮುಂದುವರಿಸಬೇಕೇ ಅಥವಾ ಬೇಡವೇ ಎಂಬುದನ್ನು ನಿರ್ಧರಿಸಲು ಮೂರು ದಿನಗಳ ಕಾಲಾವಕಾಶ ನೀಡಲಾಗುತ್ತದೆ. ಇಬ್ಬರೂ ಪರಸ್ಪರ ಒಪ್ಪಿಕೊಂಡ ಬಳಿಕವಷ್ಟೇ ಸಂಪರ್ಕ ವಿವರಗಳನ್ನು ಪಡೆಯಲು ಅವಕಾಶವಿರುತ್ತದೆ. ಹೊಂದಾಣಿಕೆ ಆಗದಿದ್ದರೆ ಮತ್ತೊಬ್ಬ ವ್ಯಕ್ತಿಯನ್ನು ಆ್ಯಪ್ ಸೂಚಿಸುತ್ತದೆ.
-
ಮಂಗಳೂರು20 hours agoMangalore-ಮಂಗಳೂರು : 2 ತಿಂಗಳ ಬಳಿಕ ಸಮಾಧಿಯಿಂದ ಹೊರಬರಲಿದೆ ಆಲ್ಬರ್ಟ್ ರೇಗೋ ಶವ..!; ಮಗಳಿಂದಲೇ ತಂದೆಯ ಕೊಲೆ : ಸ್ನೇಹಿತನ ಆರೋಪ – ತನಿಖೆಗೆ ಸಿಗಲಿದೆ ಮಹತ್ವದ ತಿರುವು
-
ಬಿಗ್ ನ್ಯೂಸ್18 hours agoKaavu-BIG BREAKING: ಕಾವು ಬಳಿ ಹೆದ್ದಾರಿಗೆ ಉರುಳಿದ ಮರಗಳು, ಹೈಟೆನ್ಷನ್ ವಿದ್ಯುತ್ ಕಂಬ : ಮಾಣಿ – ಮೈಸೂರು ಹೈವೆಯಲ್ಲಿ ವಾಹನ ಸಂಚಾರ ಸ್ಥಗಿತ
-
ಅಪರಾಧ18 hours agoPuttur-ಪುತ್ತೂರು: ಅಕ್ರಮ ಗೋ ಸಾಗಾಟ ಪ್ರಕರಣ; ಪರಾರಿಯಾಗಿದ್ದ ಇಬ್ಬರು ವಶಕ್ಕೆ, ಆರೋಪಿ ಶಿವಪ್ರಸಾದ್ ಮನೆ ಮಹಜರು?
-
ಮಂಗಳೂರು19 hours agoMRPL accident-MRPL ಅವಘಡದಲ್ಲಿ ಮೃತಪಟ್ಟ ಕರ್ಕಡ ಕುಟುಂಬಕ್ಕೆ EPFO ಕ್ಲೈಮ್ ಸಂದಾಯ
-
ಅಪರಾಧ23 hours agoRaid-ರಾಜ್ಯದ 45 ಐಸ್ಕ್ರೀಂ ಘಟಕಗಳ ಮೇಲೆ ದಾಳಿ: 4 ಕಡೆ ನಿಯಮ ಉಲ್ಲಂಘನೆ, ಅವಧಿ ಮೀರಿದ ಪದಾರ್ಥ ಪತ್ತೆ..!
-
ಅಪರಾಧ20 hours agoMangalore-ವಾಟರ್ ಪ್ಯೂರಿಫೈಯರ್ ಒಳಗೆ ಕೋಟ್ಯಾಂತರ ರೂ ಮೌಲ್ಯದ ಡ್ರಗ್ಸ್- ಕೋರಿಯರ್ ಮೂಲಕ ಸಾಗಾಟ | ಪೊಲೀಸರ ಕಣ್ಣಿಗೆ ಮಣ್ಣೆರೆಚುವ ಯತ್ನ ಮಂಗಳೂರಿನಲ್ಲಿ ವಿಫಲ – ಮೂವರ ಬಂಧನ..!
-
ಸಿನೆಮಾ24 hours agoNana Patekar-ನಾನಾ ಪಾಟೇಕರ್ ಸಾವಿಗೆ ನಿಖರ ಕಾರಣವೇನು? ಗೋವಾ ಪೊಲೀಸರಿಂದ ಅಸಹಜ ಸಾವು ಪ್ರಕರಣ ದಾಖಲು
-
ಬಿಗ್ ನ್ಯೂಸ್24 hours agoGreen card-ಇನ್ಫೋಸಿಸ್, ಟಿಸಿಎಸ್ ಸೇರಿ 8 ಐಟಿ ಕಂಪನಿಗಳಿಗೆ ಅಮೆರಿಕದ ಗ್ರೀನ್ ಕಾರ್ಡ್ ಪ್ರಕ್ರಿಯೆ ಸ್ಥಗಿತ


















