Connect with us

ಬಿಗ್ ನ್ಯೂಸ್

Viral Video : ಬಾರ್‌ ಗೆ ತೆರಳಿ ಸಂಗೀತ ಆಲಿಸಿದ ಬೀದಿ ನಾಯಿ – ಮುಂದೇನು ಮಾಡಿತ್ತು ನೀವೆ ನೋಡಿ  

Published

on

Ad Widget

Ad Widget

Ad Widget

Ad Widget

ನಾಯಿ (Dog) ಮತ್ತು ಮನುಷ್ಯನ ನಡುವಿನ ಅನ್ಯೂನ್ಯ ಸಂಬಂಧಗಳನ್ನು ಚಿತ್ರಿಸುವ ಸಿನಿಮಾ, ಕಥೆ ವಿಡಿಯೋಗಳಿಗೆ ಬರವಿಲ್ಲ. ಇತ್ತೀಚೆಗಷ್ಟೆ ಬಿಡುಗಡೆಯಾಗಿ ಸೂಪರ್‌ ಹಿಟ್‌ ಆದ ಕನ್ನಡ ಚಿತ್ರ  ಚಾರ್ಲಿ -777 (charli -777)  ಇದಕ್ಕೊಂದು ತಾಜಾ ಉದಾಹರಣೆ. ಈ ರೀತಿ ಮನುಷ್ಯ ಹಾಗೂ ನಾಯಿಯ ನಡುವಿನ ಸ್ವೀಟ್‌ ಮೂವ್‌ ಮೆಂಟ್‌ ಗಳನ್ನು ಅಭಿವ್ಯಕ್ತಿಗೊಳಿಸುವ  ವಿಡಿಯೋಗಳು ಇಂಟರ್ನೆಂಟ್‌ ನಲ್ಲಿ ಗಂಟೆಗೊಂದು ಸಿಗುತ್ತಾದೆ. ಆದರೇ ಇಲ್ಲೊಂದು ಇಂತಹುದೇ ಅದಕ್ಕಿಂತ ಸಂಫೂರ್ಣ ವಿಭಿನ್ನವಾಗಿರುವ  ವಿಡಿಯೋದರ ಕಥೆಯಿದೆ. ಈ ವಿಡಿಯೋ ಇಂಟರ್ನೆಟ್‌ ಜಗತ್ತಿನಲ್ಲಿ ಭರ್ಜರಿ ಮೆಚ್ಚುಗೆಗೆ ಪಾತ್ರವಾಗಿದೆ.  

Ad Widget

Ad Widget

Ad Widget

Ad Widget

 ಬೀದಿ ನಾಯಿ (Street Dog)   ಹಾಗೂ  ಮನುಷ್ಯನನ್ನು ತೋರಿಸುವ ಈ ವೀಡಿಯೊವನ್ನು ಗುಡ್‌ ನ್ಯೂಸ್‌ ಕರೆಸ್ಪಾಂಡೆಂಟ್‌ (Good News Correspondent’s )  ಎಂಬ ಇನ್ಸ್ಟಾ ಗ್ರಾಂ ಪೇಜ್‌ (Instagram) ನಲ್ಲಿ ಹಂಚಿಕೊಳ್ಳಲಾಗಿದೆ.  ಬಿಯರ್‌ ಬಾರ್‌ ನಲ್ಲಿ ಕುಳಿತಿರುವ ಸಂಗೀತಗಾರ ಗಿಟಾರ್ ನುಡಿಸುತ್ತಾ ಹಾಡುತ್ತಿರುತ್ತಾನೆ.  ಅಲ್ಲಿಗೆ ಬರುವ ಬೀದಿ ನಾಯಿ ಈ ಸಂಗೀತವನ್ನು ಅಸ್ವಾದಿಸುತ್ತಿರುವ ಈ ಮೂಲಕ  ಅತ್ಯಂತ ಅಹ್ಲಾದಕರ ವಾತವರಣವನ್ನು ಸೃಷ್ಟಿಸುತ್ತಿರುವ ವಿಡಿಯೋ ಅದು. ಲೈವ್ ಸಂಗೀತವನ್ನು ಶ್ವಾನವು ಅಸ್ವಾದಿಸುವುದು ನೋಡುಗರ ಮನ ಮುದಗೊಳಿಸುತ್ತದೆ. ನಾಯಿಯು ಸಂಗೀತವನ್ನು ಶ್ರದ್ಧೆಯಿಂದ ಆಲಿಸಿದೆ. ನಂತರ ಸಂಗೀತಗಾರನ ಬಳಿಗೆ ತೆರಳಿ ಮುದ್ದಾಡಿದೆ. ಅಷ್ಟೇ  ಮಾತ್ರವಲ್ಲ ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ಅದು ಕೂಡ ಗಿಟಾರ್ ನುಡಿಸಲು ಪ್ರಯತ್ನಿಸಿದೆ.

Ad Widget

Ad Widget alt="Ad Widget"/>

Ad Widget

ಈ  ಹೃದಯಸ್ಪರ್ಶಿ ವಿಡಿಯೋವನ್ನು ನೋಡಿದ ವೀಕ್ಷಕರ ಮನ ಕರಗಿದೆ. ಇದರಲ್ಲಿ ಇರುವ ಮನುಷ್ಯ ಮತ್ತು ನಾಯಿಯ ನವಿರಾದ ವಾತ್ಸಲ್ಯ ನೋಡುಗರ ಮನೆ ಸೂರೆಗೊಳ್ಳುವಂತೆ ಮಾಡಿದೆ. ಈಗಾಗಾಲೇ ಈ ವಿಡಿಯೋ 43000ಕ್ಕೂ  ಅಧಿಕ ವಿವ್ಸೂಪಡೆದು ಮುನ್ನಡೆಯುತ್ತಿದೆ. ಈ ವಿಡಿಯೋವನ್ನು ಮೆಚ್ಚಿರುವ ನೋಡುಗರು  ಪ್ರೀತಿ ಹಾಗೂ ಖುಷಿಯ ಇಮೋಜಿಗಳ ಸುರಿಮಳೆಯನ್ನೆ ಹರಿಸಿದ್ದಾರೆ. ಈಗಾಗಲೇ ಈ ವಿಡಿಯೋ 3000ಕ್ಕೂ ಹೆಚ್ಚು ಲೈಕ್‌ ಗಳನ್ನು ಪಡೆದುಕೊಂಡಿದೆ.

Ad Widget

Ad Widget <> Ad Widget

Loan Recovery : ಸಾಲಗಾರರಿಗೆ ಬಿಗ್‌ ರಿಲೀಫ್‌ ನೀಡಿದ RBI ಸಾಲ ವಸೂಲಿ ವೇಳೆ ಬೆದರಿಕೆ ಹಾಕುವಂತಿಲ್ಲ – ಕರೆ ಮಾಡಲು ಸಮಯ ನಿಗದಿ | ಇನ್ನು ಏನೇನು ನಿಯಮಗಳಿವೆ ಇಲ್ಲಿ ನೋಡಿ

ವಿಡಿಯೋವನ್ನು ವೀಕ್ಷಿಸಿದ ಇಂಟರ್ನೆಟ್‌ ಬಳಕೆದಾರರೊಬ್ಬರು, ” ಈ ಮನಮೋಹಕ ದೃಶ್ಯ ನನ್ನ ಹೃದಯವನ್ನು ಕರಗಿಸುತ್ತದೆ” ಎಂದು ಕಾಮೇಂಟ್‌ ಮಾಡಿದ್ದಾರೆ.  ” ಸಂಗೀತಗಾರನು  ನಾಯಿಯೊಂದಿಗೆ ತುಂಬಾ ವಾತ್ಸಲ್ಯಪೂರ್ಣವಾಗಿ ನಡಕೊಂಡಿದ್ದಾನೆ ” ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ. ” ಸರ್, ನೀವು ಈಗಲೇ ನಿಮ್ಮ ಹೊಸ ನಾಯಿಯನ್ನು ಮನೆಗೆ ಕರೆದೊಯ್ಯಿರಿ” ಎಂದು  ಮತ್ತೊರ್ವ ಇನ್ಸ್ಟಾಗ್ರಾಂ ಬಳಕೆದಾರರ ಸಲಹೆ ನೀಡಿದ್ದಾನೆ . ಒಟ್ಟಾರೆಯಾಗಿ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ  ಸಕತ್‌ ಸೌಂಡ್‌ ಮಾಡುತ್ತಿರುವುದಂತು ಸತ್ಯ  

Click to comment

Leave a Reply

ಅಂತರ ರಾಜ್ಯ

Insurance policy-ವಿಮೆ ಇಲ್ಲದ ವಾಹನಗಳಿಗೆ ಕಡಿವಾಣ: ಹೊಸ ನಿಯಮ ಜಾರಿಗೆ ಕೇಂದ್ರ ಚಿಂತನೆ; ಕಾರಿಗೆ 4 ವರ್ಷ, ಬೈಕ್‌ಗೆ 6 ವರ್ಷಗಳ ವಿಮೆ

Published

on

Ad Widget

Ad Widget

Ad Widget

Ad Widget

ವಿಮೆ ಇಲ್ಲದೆ ರಸ್ತೆಗಿಳಿಯುವ ವಾಹನಗಳ ಸಮಸ್ಯೆಗೆ ಕಡಿವಾಣ ಹಾಕುವ ಉದ್ದೇಶದಿಂದ ಕೇಂದ್ರ ರಸ್ತೆ ಸಾರಿಗೆ ಸಚಿವಾಲಯವು ಹೊಸ ಕ್ರಮಗಳನ್ನು ಜಾರಿಗೆ ತರಲು ಚಿಂತನೆ ನಡೆಸಿದೆ. ಇದರ ಭಾಗವಾಗಿ ಕಾರುಗಳಿಗೆ ನಾಲ್ಕು ವರ್ಷ ಹಾಗೂ ದ್ವಿಚಕ್ರ ವಾಹನಗಳಿಗೆ ಆರು ವರ್ಷಗಳ ವಿಮಾ ಪಾಲಿಸಿಯನ್ನು ಪರಿಚಯಿಸುವ ಪ್ರಸ್ತಾವವಿದ್ದು, ಈ ಅವಧಿಗೆ ಅನ್ವಯವಾಗುವ ಪ್ರೀಮಿಯಂ ಅನ್ನು ಒಂದೇ ಬಾರಿಗೆ ಪಾವತಿಸುವ ವ್ಯವಸ್ಥೆ ರೂಪಿಸುವ ಕುರಿತು ಚರ್ಚೆ ನಡೆಯುತ್ತಿದೆ.

Ad Widget

Ad Widget

Ad Widget

Ad Widget

ಹೊಸದಿಲ್ಲಿ, ನ.25: ವಿಮೆ ಇಲ್ಲದೆ ರಸ್ತೆಗಿಳಿಯುವ ವಾಹನಗಳ ಸಮಸ್ಯೆಗೆ ಕಡಿವಾಣ ಹಾಕುವ ಉದ್ದೇಶದಿಂದ ಕೇಂದ್ರ ರಸ್ತೆ ಸಾರಿಗೆ ಸಚಿವಾಲಯವು ಹೊಸ ಕ್ರಮಗಳನ್ನು ಜಾರಿಗೆ ತರಲು ಚಿಂತನೆ ನಡೆಸಿದೆ. ಇದರ ಭಾಗವಾಗಿ ಕಾರುಗಳಿಗೆ ನಾಲ್ಕು ವರ್ಷ ಹಾಗೂ ದ್ವಿಚಕ್ರ ವಾಹನಗಳಿಗೆ ಆರು ವರ್ಷಗಳ ವಿಮಾ ಪಾಲಿಸಿಯನ್ನು ಪರಿಚಯಿಸುವ ಪ್ರಸ್ತಾವವಿದ್ದು, ಈ ಅವಧಿಗೆ ಅನ್ವಯವಾಗುವ ಪ್ರೀಮಿಯಂ ಅನ್ನು ಒಂದೇ ಬಾರಿಗೆ ಪಾವತಿಸುವ ವ್ಯವಸ್ಥೆ ರೂಪಿಸುವ ಕುರಿತು ಚರ್ಚೆ ನಡೆಯುತ್ತಿದೆ.

Ad Widget

Ad Widget alt="Ad Widget"/>

Ad Widget

ಪ್ರಸ್ತುತ ಹೊಸ ವಾಹನ ಖರೀದಿಸುವಾಗ ನೀಡಲಾಗುವ ವಿಮೆಯ ಅವಧಿ ಮುಗಿದ ಬಳಿಕ ಪ್ರತಿ ವರ್ಷ ವಿಮೆಯನ್ನು ನವೀಕರಿಸಬೇಕಾಗುತ್ತದೆ. ಆದರೆ ಅನೇಕ ವಾಹನ ಮಾಲೀಕರು ವಿಮೆ ನವೀಕರಿಸದೆ ವಾಹನ ಚಲಾಯಿಸುತ್ತಿರುವುದರಿಂದ ಈ ಸಮಸ್ಯೆ ನಿವಾರಿಸಲು ದೀರ್ಘಾವಧಿಯ ವಿಮಾ ಪಾಲಿಸಿಯನ್ನು ಪರಿಚಯಿಸುವ ಚಿಂತನೆ ನಡೆದಿದೆ.

Ad Widget

Ad Widget <> Ad Widget

ಇದರೊಂದಿಗೆ, ಹಿಂದಿನ ವರ್ಷ ವಾಹನದ ವಿರುದ್ಧ ದಾಖಲಾಗಿರುವ ನಿರ್ದಿಷ್ಟ ಸಂಚಾರ ನಿಯಮ ಉಲ್ಲಂಘನೆಗಳ ಆಧಾರದ ಮೇಲೆ ವಿಮಾ ಪ್ರೀಮಿಯಂ ಹೆಚ್ಚಿಸುವ ಪ್ರಸ್ತಾವವೂ ಇದೆ.

ಏನೇನು ಪ್ರಸ್ತಾವಗಳಿವೆ?

Ad Widget

Ad Widget
  • ಕಾರುಗಳಿಗೆ ನಾಲ್ಕು ವರ್ಷ ಹಾಗೂ ದ್ವಿಚಕ್ರ ವಾಹನಗಳಿಗೆ ಆರು ವರ್ಷಗಳ ವಿಮಾ ಪಾಲಿಸಿ ಪರಿಚಯಿಸುವ ಚಿಂತನೆ.
  • ವಿಮೆಯ ಸಂಪೂರ್ಣ ಅವಧಿಗೆ ಅನ್ವಯವಾಗುವ ಪ್ರೀಮಿಯಂ ಅನ್ನು ಒಂದೇ ಬಾರಿಗೆ ಪಾವತಿಸುವ ವ್ಯವಸ್ಥೆ.
  • ಹಿಂದಿನ ವರ್ಷ ವಾಹನದ ವಿರುದ್ಧ ದಾಖಲಾಗಿರುವ ಸಂಚಾರ ನಿಯಮ ಉಲ್ಲಂಘನೆಗಳ ಆಧಾರದ ಮೇಲೆ ವಿಮಾ ಪ್ರೀಮಿಯಂ ಹೆಚ್ಚಳ.
  • ‘ವಿಮೆ ಇಲ್ಲದಿದ್ದರೆ ಇಂಧನವಿಲ್ಲ’ ಅಭಿಯಾನ ಆರಂಭಿಸುವಂತೆ ಸುಪ್ರೀಂಕೋರ್ಟ್‌ನ ರಸ್ತೆ ಸುರಕ್ಷತಾ ಸಮಿತಿ ಸೂಚನೆ.
  • ಈ ಅಭಿಯಾನವನ್ನು ಪ್ರಾಯೋಗಿಕವಾಗಿ ಹರಿಯಾಣ ಮತ್ತು ಉತ್ತರ ಪ್ರದೇಶದ ತಲಾ ಐದು ಪೆಟ್ರೋಲ್ ಬಂಕ್‌ಗಳಲ್ಲಿ ಆರಂಭಿಸಲು ಸಲಹೆ.
  • ಪೆಟ್ರೋಲ್ ಬಂಕ್‌ಗಳಲ್ಲಿ ವಾಹನಗಳ ನಂಬರ್ ಪ್ಲೇಟ್ ಆಧರಿಸಿ ಕ್ಯಾಮೆರಾಗಳ ಮೂಲಕ ವಿಮೆಯ ಮಾನ್ಯತೆಯನ್ನು ಪರಿಶೀಲಿಸುವ ವ್ಯವಸ್ಥೆ.
Ad Widget
Continue Reading

ಬಿಗ್ ನ್ಯೂಸ್

Tulu language-ತುಳು ಭಾಷೆ ಅನುಷ್ಠಾನಕ್ಕೆ ಸರ್ಕಾರದಿಂದ ಅಧಿಕೃತ ಆದೇಶ; ಸರ್ಕಾರಿ ಕಚೇರಿಗಳಲ್ಲೂ ತುಳುವಿಗೆ ಮನ್ನಣೆ..!

Published

on

Ad Widget

Ad Widget

Ad Widget

Ad Widget

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಗೆ ಸೀಮಿತವಾಗಿ ತುಳು ಭಾಷೆಯನ್ನು ರಾಜ್ಯದ ಎರಡನೇ ಭಾಷೆಯಾಗಿ ಪರಿಗಣಿಸುವ ನಿರ್ಧಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಆಡಳಿತಾತ್ಮಕ ಅನುಷ್ಠಾನಕ್ಕೆ ಅಧಿಕೃತ ಆದೇಶ ಹೊರಡಿಸಿದೆ.

Ad Widget

Ad Widget

Ad Widget

Ad Widget

ಬೆಂಗಳೂರು: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಗೆ ಸೀಮಿತವಾಗಿ ತುಳು ಭಾಷೆಯನ್ನು ರಾಜ್ಯದ ಎರಡನೇ ಭಾಷೆಯಾಗಿ ಪರಿಗಣಿಸುವ ನಿರ್ಧಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಆಡಳಿತಾತ್ಮಕ ಅನುಷ್ಠಾನಕ್ಕೆ ಅಧಿಕೃತ ಆದೇಶ ಹೊರಡಿಸಿದೆ.

Ad Widget

Ad Widget alt="Ad Widget"/>

Ad Widget

ಕಳೆದ ತಿಂಗಳು ಮಂಗಳೂರಿನಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ತುಳು ಭಾಷೆಗೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಗೆ ಸೀಮಿತವಾಗಿ ರಾಜ್ಯದ ಎರಡನೇ ಭಾಷೆಯ ಸ್ಥಾನಮಾನ ನೀಡಲು ಅನುಮೋದನೆ ನೀಡಲಾಗಿತ್ತು. ಇದರ ಮುಂದುವರಿದ ಭಾಗವಾಗಿ ಬುಧವಾರ ಸರ್ಕಾರ ಅನುಷ್ಠಾನಕ್ಕೆ ಸಂಬಂಧಿಸಿದ ಮಾರ್ಗಸೂಚಿಗಳನ್ನು ಪ್ರಕಟಿಸಿದೆ.

Ad Widget

Ad Widget <> Ad Widget

ಹೊಸ ಆದೇಶದ ಪ್ರಕಾರ, ತುಳು ಭಾಷೆಯನ್ನು ಕನ್ನಡ ಲಿಪಿಯಲ್ಲಿ ಬಳಸಬೇಕಾಗಿದೆ. ಜಿಲ್ಲಾಡಳಿತ ಕಚೇರಿಗಳಲ್ಲಿ ತುಳು ಭಾಷೆ ಅನುಷ್ಠಾನಕ್ಕಾಗಿ ಪ್ರತ್ಯೇಕ ಘಟಕ ಸ್ಥಾಪಿಸುವುದರ ಜೊತೆಗೆ ತುಳು ಭಾಷಾಂತರಕಾರರನ್ನು ನೇಮಕ ಮಾಡಿಕೊಳ್ಳಲು ಸೂಚಿಸಲಾಗಿದೆ.

ಇದಲ್ಲದೆ, ಸಾರ್ವಜನಿಕರು ಸಲ್ಲಿಸುವ ಮನವಿ ಹಾಗೂ ಅರ್ಜಿಗಳನ್ನು ತುಳು ಭಾಷೆಯಲ್ಲಿಯೂ ಸ್ವೀಕರಿಸಬೇಕು. ಅವುಗಳಿಗೆ ನೀಡುವ ಉತ್ತರಗಳನ್ನು ಕನ್ನಡದ ಜೊತೆಗೆ ತುಳು ಭಾಷೆಯಲ್ಲಿಯೂ ಒದಗಿಸಬೇಕು ಎಂದು ಸರ್ಕಾರ ಆದೇಶದಲ್ಲಿ ತಿಳಿಸಿದೆ.

Ad Widget

Ad Widget

ಈ ಮೂಲಕ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಆಡಳಿತ ವ್ಯವಸ್ಥೆಯಲ್ಲೂ ತುಳು ಭಾಷೆಯ ಬಳಕೆಗೆ ಅಧಿಕೃತವಾಗಿ ಅವಕಾಶ ಕಲ್ಪಿಸಿದಂತಾಗಿದೆ.

Ad Widget
Continue Reading

ಅಂತರ ರಾಜ್ಯ

WhatsApp-ವಾಟ್ಸಾಪ್‌ನಲ್ಲಿ ಬಂತು ಹೊಸ ಫೀಚರ್; ಎರಡು ವಾರ ಮೊದಲೇ ಮೆಸೇಜ್ ಟೈಪ್ ಮಾಡಿ ಶೆಡ್ಯೂಲ್ ಮಾಡುವ ಅವಕಾಶ..!

Published

on

Ad Widget

Ad Widget

Ad Widget

Ad Widget

ಜನಪ್ರಿಯ ಮೆಸೇಜಿಂಗ್ ಆ್ಯಪ್ ವಾಟ್ಸಾಪ್ ತನ್ನ ಬಳಕೆದಾರರ ಬಹುದಿನಗಳ ಬೇಡಿಕೆಯಾಗಿದ್ದ ಹೊಸ ಸೌಲಭ್ಯವೊಂದನ್ನು ಪರಿಚಯಿಸುತ್ತಿದೆ. ಇನ್ಮುಂದೆ ಬಳಕೆದಾರರು ತಾವು ಕಳುಹಿಸಬೇಕಾದ ಸಂದೇಶಗಳನ್ನು ಮೊದಲೇ ಟೈಪ್ ಮಾಡಿ, ನಿರ್ದಿಷ್ಟ ದಿನಾಂಕ ಮತ್ತು ಸಮಯಕ್ಕೆ ಸ್ವಯಂಚಾಲಿತವಾಗಿ ತಲುಪುವಂತೆ ಶೆಡ್ಯೂಲ್ ಮಾಡಬಹುದು.

Ad Widget

Ad Widget

Ad Widget

Ad Widget

ನವದೆಹಲಿ: ಜನಪ್ರಿಯ ಮೆಸೇಜಿಂಗ್ ಆ್ಯಪ್ ವಾಟ್ಸಾಪ್ ತನ್ನ ಬಳಕೆದಾರರ ಬಹುದಿನಗಳ ಬೇಡಿಕೆಯಾಗಿದ್ದ ಹೊಸ ಸೌಲಭ್ಯವೊಂದನ್ನು ಪರಿಚಯಿಸುತ್ತಿದೆ. ಇನ್ಮುಂದೆ ಬಳಕೆದಾರರು ತಾವು ಕಳುಹಿಸಬೇಕಾದ ಸಂದೇಶಗಳನ್ನು ಮೊದಲೇ ಟೈಪ್ ಮಾಡಿ, ನಿರ್ದಿಷ್ಟ ದಿನಾಂಕ ಮತ್ತು ಸಮಯಕ್ಕೆ ಸ್ವಯಂಚಾಲಿತವಾಗಿ ತಲುಪುವಂತೆ ಶೆಡ್ಯೂಲ್ ಮಾಡಬಹುದು.

Ad Widget

Ad Widget alt="Ad Widget"/>

Ad Widget

ಹುಟ್ಟುಹಬ್ಬದ ಶುಭಾಶಯಗಳು, ವಿಶೇಷ ದಿನಗಳ ಸಂದೇಶಗಳು, ಪ್ರಮುಖ ನೆನಪಿನ ಸೂಚನೆಗಳು ಸೇರಿದಂತೆ ವಿವಿಧ ಸಂದೇಶಗಳನ್ನು ಸಮಯಕ್ಕೆ ಸರಿಯಾಗಿ ಕಳುಹಿಸಲು ಈ ಸೌಲಭ್ಯ ಸಹಕಾರಿಯಾಗಲಿದೆ. ವೈಯಕ್ತಿಕ ಚಾಟ್‌ಗಳು ಹಾಗೂ ಗ್ರೂಪ್ ಚಾಟ್‌ಗಳೆರಡರಲ್ಲೂ ಈ ಆಯ್ಕೆ ಲಭ್ಯವಾಗಲಿದೆ ಎಂದು ಮೆಟಾ ಸಂಸ್ಥೆ ತಿಳಿಸಿದೆ.

Ad Widget

Ad Widget <> Ad Widget

ಒಮ್ಮೆ ಸಂದೇಶವನ್ನು ಶೆಡ್ಯೂಲ್ ಮಾಡಿದರೆ ಸಾಕು, ನಿಗದಿತ ಸಮಯದಲ್ಲಿ ಬಳಕೆದಾರರು ವಾಟ್ಸಾಪ್ ತೆರೆಯದಿದ್ದರೂ ಸಂದೇಶ ಸ್ವಯಂಚಾಲಿತವಾಗಿ ರವಾನೆಯಾಗಲಿದೆ. ಫೋನ್‌ನಲ್ಲಿ ಇಂಟರ್ನೆಟ್ ಸಂಪರ್ಕ ಇಲ್ಲದಿದ್ದರೂ ಸಂದೇಶ ತಲುಪಲಿದೆ ಎಂದು ವರದಿಯಾಗಿದೆ.

ವಾಟ್ಸಾಪ್‌ನಲ್ಲಿ ಮೆಸೇಜ್ ಶೆಡ್ಯೂಲ್ ಮಾಡುವುದು ಹೇಗೆ?
ಬಳಕೆದಾರರು ಕನಿಷ್ಠ 10 ನಿಮಿಷಗಳಿಂದ ಗರಿಷ್ಠ ಎರಡು ವಾರಗಳ ಮುಂಚಿತವಾಗಿ ಸಂದೇಶಗಳನ್ನು ಶೆಡ್ಯೂಲ್ ಮಾಡಬಹುದು. ಇದಕ್ಕಾಗಿ ಈ ಕೆಳಗಿನ ಹಂತಗಳನ್ನು ಅನುಸರಿಸಬೇಕು.

Ad Widget

Ad Widget
  1. ವಾಟ್ಸಾಪ್ ತೆರೆಯಿರಿ ಮತ್ತು ಸಂದೇಶ ಕಳುಹಿಸಬೇಕಾದ ವ್ಯಕ್ತಿಯ ಚಾಟ್ ಅಥವಾ ಗ್ರೂಪ್ ಆಯ್ಕೆಮಾಡಿ.
  2. ಕಳುಹಿಸಬೇಕಾದ ಸಂದೇಶವನ್ನು ಟೈಪ್ ಮಾಡಿ ಅಥವಾ ಫೋಟೋ, ವಿಡಿಯೋ ಆಯ್ಕೆಮಾಡಿ.
  3. ‘Send’ ಬಟನ್ ಅನ್ನು ಸ್ವಲ್ಪ ಹೊತ್ತು ಒತ್ತಿ ಹಿಡಿಯಿರಿ.
  4. ಕಾಣಿಸಿಕೊಳ್ಳುವ ಆಯ್ಕೆಯಲ್ಲಿ ಸಂದೇಶ ತಲುಪಬೇಕಾದ ದಿನಾಂಕ ಮತ್ತು ಸಮಯವನ್ನು ಆಯ್ಕೆಮಾಡಿ.
  5. ಕೊನೆಯಲ್ಲಿ ‘Confirm’ ಆಯ್ಕೆಯನ್ನು ಒತ್ತಿ ಖಚಿತಪಡಿಸಿ.
    ಇಷ್ಟಾದರೆ ಸಾಕು, ನಿಗದಿಪಡಿಸಿದ ಸಮಯಕ್ಕೆ ಸಂದೇಶ ಸ್ವಯಂಚಾಲಿತವಾಗಿ ರವಾನೆಯಾಗಲಿದೆ.

ಯಾವೆಲ್ಲ ಸಂದೇಶಗಳನ್ನು ಶೆಡ್ಯೂಲ್ ಮಾಡಬಹುದು?
ಸದ್ಯಕ್ಕೆ ಪಠ್ಯ ಸಂದೇಶಗಳು, ಲಿಂಕ್‌ಗಳು, ಫೋಟೋಗಳು ಹಾಗೂ ವಿಡಿಯೋಗಳನ್ನು ಮೊದಲೇ ನಿಗದಿಪಡಿಸಿ ಕಳುಹಿಸಬಹುದು. ಇವು ವಾಟ್ಸಾಪ್‌ನ ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್ ಸುರಕ್ಷತಾ ವ್ಯವಸ್ಥೆಯಡಿ ರವಾನೆಯಾಗಲಿವೆ. ಆದರೆ ಪಿಡಿಎಫ್ ಸೇರಿದಂತೆ ಇತರ ದಾಖಲೆಗಳನ್ನು ಶೆಡ್ಯೂಲ್ ಮಾಡುವ ಆಯ್ಕೆ ಸದ್ಯಕ್ಕೆ ಲಭ್ಯವಿಲ್ಲ.

ಶೆಡ್ಯೂಲ್ ಮಾಡಿದ ಮೆಸೇಜ್ ಅಳಿಸಲು ಅವಕಾಶವಿದೆಯೇ?
ಹೌದು. ನಿಗದಿಪಡಿಸಿದ ಸಂದೇಶ ರವಾನೆಯಾಗುವ ಮೊದಲು ಅದನ್ನು ಪರಿಶೀಲಿಸುವುದರ ಜೊತೆಗೆ ಅಗತ್ಯವಿದ್ದರೆ ಅಳಿಸಬಹುದು. ಚಾಟ್ ಮಾಹಿತಿ (Chat Info) ವಿಭಾಗದಲ್ಲಿ ಕಳುಹಿಸಲು ಬಾಕಿ ಇರುವ ಸಂದೇಶಗಳ ಪಟ್ಟಿ ಕಾಣಿಸಿಕೊಳ್ಳುತ್ತದೆ. ಅಲ್ಲಿಂದಲೇ ಸಂದೇಶವನ್ನು ರದ್ದುಗೊಳಿಸಬಹುದು ಅಥವಾ ಅಳಿಸಬಹುದು. ಸಂದೇಶ ಇನ್ನೂ ರವಾನೆಯಾಗದಿರುವುದರಿಂದ ಅದನ್ನು ಅಳಿಸಿದರೆ ಎದುರಿನವರಿಗೆ ಯಾವುದೇ ಮಾಹಿತಿ ಹೋಗುವುದಿಲ್ಲ.

ಗ್ರೂಪ್ ಚಾಟ್‌ಗಳಿಗೆ ಏನು ನಿಯಮ?
ಗ್ರೂಪ್‌ಗಳಲ್ಲಿ ಸಂದೇಶ ಶೆಡ್ಯೂಲ್ ಮಾಡುವಾಗಲೂ ಕೆಲವು ನಿಯಮಗಳಿವೆ. ಸಂದೇಶವನ್ನು ನಿಗದಿಪಡಿಸಿದ ಸಮಯದಲ್ಲಿ ಗ್ರೂಪ್‌ನಲ್ಲಿರುವ ಸದಸ್ಯರಿಗೆ ಮಾತ್ರ ಅದು ತಲುಪಲಿದೆ. ಆನಂತರ ಗ್ರೂಪ್‌ಗೆ ಸೇರುವ ಹೊಸ ಸದಸ್ಯರಿಗೆ ಮೊದಲೇ ಶೆಡ್ಯೂಲ್ ಮಾಡಿರುವ ಸಂದೇಶ ಕಾಣಿಸುವುದಿಲ್ಲ.

ಎಲ್ಲರಿಗೂ ಯಾವಾಗ ಲಭ್ಯ?
ವಾಟ್ಸಾಪ್ ಈಗಾಗಲೇ ಆಂಡ್ರಾಯ್ಡ್ ಮತ್ತು ಐಫೋನ್‌ನ ಆಯ್ದ ಬಳಕೆದಾರರಿಗೆ ಈ ಸೌಲಭ್ಯವನ್ನು ಪ್ರಾಯೋಗಿಕವಾಗಿ ಪರಿಚಯಿಸಿದೆ. ನವೆಂಬರ್ 25ರಂದು ತನ್ನ ಅಧಿಕೃತ ‘X’ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳುವ ಮೂಲಕ ಹೊಸ ಫೀಚರ್ ಬಗ್ಗೆ ಮಾಹಿತಿ ನೀಡಿದೆ. ಸದ್ಯ ಹಂತ ಹಂತವಾಗಿ ಬಳಕೆದಾರರಿಗೆ ಈ ಆಯ್ಕೆಯನ್ನು ಒದಗಿಸಲಾಗುತ್ತಿದ್ದು, ಶೀಘ್ರದಲ್ಲೇ ಹೆಚ್ಚಿನ ಬಳಕೆದಾರರಿಗೂ ಲಭ್ಯವಾಗುವ ನಿರೀಕ್ಷೆಯಿದೆ.

Ad Widget
Continue Reading

ಇಂದಿನ ಟ್ರೆಂಡಿಂಗ್‌ ಸುದ್ದಿಗಳು

error: Content is protected !!