Uncategorized
Udupi Bhaskar Shetty Murder case: ಮಂಗಳೂರು : ಉಡುಪಿ ಭಾಸ್ಕರ್ ಶೆಟ್ಟಿ ಕೊಲೆ ಆರೋಪಿಗಳಿಗೆ ಜೈಲಿನಲ್ಲಿ ಹಲ್ಲೆ : 14 ಮಂದಿ ದೋಷಿಗಳು-ಸೆ.16ರಂದು ಶಿಕ್ಷೆ ಪ್ರಮಾಣ ಪ್ರಕಟ

ಮಂಗಳೂರು: ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಇಬ್ಬರು ವಿಚಾರಣಾ ಬಂಧಿಗಳ ಮೇಲೆ ಹಲ್ಲೆ ನಡೆಸಿ, ಕೊಲೆ ಯತ್ನ ಹಾಗೂ ಜೈಲು ಸಿಬ್ಬಂದಿಯ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪಕ್ಕೆ ಸಂಬಂಧಿಸಿದ 2017ರ ಪ್ರಕರಣದಲ್ಲಿ 14 ಮಂದಿ ಆರೋಪಿಗಳನ್ನು ಮಂಗಳೂರಿನ ತ್ವರಿತಗತಿ ನ್ಯಾಯಾಲಯ ದೋಷಿಗಳೆಂದು ಘೋಷಿಸಿದೆ. ಶಿಕ್ಷೆಯ ಪ್ರಮಾಣವನ್ನು ಸೆ.16ರಂದು ಪ್ರಕಟಿಸಲಾಗುವುದು.
ಬರ್ಕೆ ಪೊಲೀಸ್ ಠಾಣೆಯಲ್ಲಿ ಕ್ರೈಂ ನಂ.130/2017ರಂತೆ ಪ್ರಕರಣ ದಾಖಲಾಗಿತ್ತು. ಭಾರತೀಯ ದಂಡ ಸಂಹಿತೆಯ ವಿವಿಧ ಕಲಂಗಳಡಿ ಪ್ರಕರಣ ದಾಖಲಿಸಿ ತನಿಖೆ ನಡೆಸಿ ದೋಷಾರೋಪಣಾ ಪತ್ರ ಸಲ್ಲಿಸಲಾಗಿತ್ತು.
ಇವತ್ತಿಗೆ ಸರಿಯಾಗಿ 9 ವರ್ಷಗಳ ಹಿಂದೆ ಅಂದರೇ, 2017ರ ಸೆ.11ರಂದು ಮಧ್ಯಾಹ್ನ 12.30ರ ಸುಮಾರಿಗೆ ಕಾರಾಗೃಹದ ಹೊಸ ಕಟ್ಟಡದ ‘ಬಿ’ ಬ್ಲಾಕ್ನ ವರಾಂಡದಲ್ಲಿ ಘಟನೆ ನಡೆದಿತ್ತು. ತಮ್ಮ ಪ್ರಕರಣದ ವಿಚಾರಣೆಯ ದಿನಾಂಕ ತಿಳಿಯಲು ಅಧೀಕ್ಷಕರ ಕಚೇರಿಗೆ ತೆರಳುತ್ತಿದ್ದ ನವನೀತ್ ಶೆಟ್ಟಿ ಹಾಗೂ ನಿರಂಜನ್ ಭಟ್ ಅವರೊಂದಿಗೆ ಆರೋಪಿಗಳು ಘರ್ಷಣೆ ನಡೆಸಿ ಹಲ್ಲೆ ನಡೆಸಿದ್ದರು ಎಂದು ಚಾರ್ಜ್ಶೀಟ್ನಲ್ಲಿ ಆರೋಪಿಸಲಾಗಿದೆ.
ನವನೀತ್ ಶೆಟ್ಟಿಗೆ ಪೈಪ್ನಿಂದ ತಲೆ ಮತ್ತು ಬೆನ್ನಿಗೆ ಹೊಡೆದು, ವರಾಂಡದಿಂದ ಕೆಳಗಿನ ಅಂಗಳಕ್ಕೆ ಎಳೆದು ಹಾಕಲಾಗಿತ್ತು. ಬಳಿಕ ಸ್ಟೀಲ್ ಡ್ರಂನಿಂದ ತಲೆಗೆ ಹೊಡೆದಿದ್ದು, ಕೇರಂ ಬೋರ್ಡ್ನಿಂದ ತಲೆಗೆ ಹೊಡೆಯಲು ಯತ್ನಿಸಿ ಕೊಲೆ ಪ್ರಯತ್ನ ನಡೆಸಲಾಗಿತ್ತು ಎಂದು ಆರೋಪಿಸಲಾಗಿದೆ. ಜೈಲು ಸಿಬ್ಬಂದಿ ಮಧ್ಯಪ್ರವೇಶಿಸಿ ಹಲ್ಲೆ ತಡೆದಿದ್ದರು.
ಹಲ್ಲೆ ತಡೆಯಲು ಬಂದ ಸಿಬ್ಬಂದಿಯ ಸಮವಸ್ತ್ರ ಹಿಡಿದು ಎಳೆದಾಡಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪವೂ ಇದೆ. ಅಲ್ಲದೆ, ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣವನ್ನು ಒಪ್ಪಿಕೊಳ್ಳುವಂತೆ ಬೆದರಿಸಿ, ₹5 ಲಕ್ಷ ನೀಡುವಂತೆ ಒತ್ತಾಯಿಸಲಾಗಿತ್ತು ಎಂದು ದೋಷಾರೋಪಣಾ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಪ್ರಕರಣದಲ್ಲಿ 14 ಮಂದಿ ದೋಷಿಗಳಾಗಿದ್ದು, ಈ ಪೈಕಿ ಮೂವರು ಇತರ ಪ್ರಕರಣಗಳಲ್ಲಿ ಈಗಾಗಲೇ ಜೈಲಿನಲ್ಲಿದ್ದಾರೆ. ಉಳಿದ 10 ಮಂದಿಯನ್ನು ನ್ಯಾಯಾಲಯದ ಆದೇಶದಂತೆ ಸೆ.11ರಂದು ವಶಕ್ಕೆ ಪಡೆಯಲಾಗಿದೆ. ಓರ್ವ ದೋಷಿ ನ್ಯಾಯಾಲಯಕ್ಕೆ ಗೈರಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ನವನೀತ್ ಶೆಟ್ಟಿ ಮತ್ತು ನಿರಂಜನ್ ಭಟ್ ಅವರು ಉಡುಪಿಯ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣದ ಆರೋಪಿಗಳಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
Uncategorized
Ambika Vidyalaya-ಅಂಬಿಕಾ ವಿದ್ಯಾಲಯ ಸಿಬಿಎಸ್ಇ ವಿದ್ಯಾರ್ಥಿಗಳಿಗೆ ರಾಷ್ಟ್ರ ಮಟ್ಟದಲ್ಲಿ ಬಹುಮಾನ
ಪುತ್ತೂರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ವಿದ್ಯಾಲಯ ಸಿ.ಬಿ.ಎಸ್.ಇ ಸಂಸ್ಥೆಯ ವಿದ್ಯಾರ್ಥಿಗಳು ಹರಿಯಾಣದ ಕುರುಕ್ಷೇತ್ರದಲ್ಲಿ ನಡೆದ ವಿದ್ಯಾಭಾರತಿ ರಾಷ್ಟ್ರ ಮಟ್ಟದ ಚದುರಂಗ ಸ್ಪರ್ಧೆಯಲ್ಲಿ ಬಹುಮಾನ ಗಳಿಸಿದ್ದಾರೆ.

ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ವಿದ್ಯಾಲಯ ಸಿ.ಬಿ.ಎಸ್.ಇ ಸಂಸ್ಥೆಯ ವಿದ್ಯಾರ್ಥಿಗಳು ಹರಿಯಾಣದ ಕುರುಕ್ಷೇತ್ರದಲ್ಲಿ ನಡೆದ ವಿದ್ಯಾಭಾರತಿ ರಾಷ್ಟ್ರ ಮಟ್ಟದ ಚದುರಂಗ ಸ್ಪರ್ಧೆಯಲ್ಲಿ ಬಹುಮಾನ ಗಳಿಸಿದ್ದಾರೆ.
14 ರ ವಯೋಮಾನದ ಬಾಲಕಿಯರ ವಿಭಾಗದಲ್ಲಿ ಪೆರ್ನೆಯ ನಿವಾಸಿ ಗಿರೀಶ ಗೌಡ ಮತ್ತು ಸುಮಿತ್ರ ದಂಪತಿಯ ಪುತ್ರಿ 8ನೇ ತರಗತಿಯ ಸಾನ್ವಿ ಜಿ, ದರ್ಬೆಯ ನಿವಾಸಿ ಕೆ ಜಿ ಮುರಳೀಧರ ಮತ್ತು ಕೆ ಉಷಾ ಮುರಳೀಧರ ದಂಪತಿಯ ಪುತ್ರಿ 8ನೇ ತರಗತಿಯ ಕೆ ಎಂ ಶಮಿತ ಭಟ್ ಹಾಗೂ ಪಡೀಲ್ ನ ನಿವಾಸಿ ಸಂಜೀವ ರಂಜನ್ ಮತ್ತು ಅರ್ಪಣಾ ಕುಮಾರಿ ದಂಪತಿಯ ಪುತ್ರಿ 8ನೇ ತರಗತಿಯ ಶಾಂಭವಿ ರಂಜನ್,
ಸಂಪ್ಯದ ನಿವಾಸಿ ರವಿಕುಮಾರ ಕೆ ಮತ್ತು ಸುಮಿತ್ರ ಕೆ ದಂಪತಿಯ ಪುತ್ರಿ 8ನೇ ತರಗತಿಯ ನೈನಿಕ ಎ ಆರ್ ಪ್ರಥಮ ಸ್ಥಾನವನ್ನು ಗಳಿಸಿ, ಮಧ್ಯ ಪ್ರದೇಶದಲ್ಲಿ ನಡೆಯಲಿರುವ ಎಸ್ ಜಿ ಎಫ್ ಐ ( ಸ್ಕೂಲ್ ಗೇಮ್ ಫೆಡರೇಶನ್ ಆಫ್ ಇಂಡಿಯಾ) ಮಟ್ಟದ ಚದುರಂಗ ಸ್ಪರ್ಧೆಗೆ ಆಯ್ಕೆಗೊಂಡಿರುತ್ತಾರೆ.
14ರ ವಯೋಮಾನದ ಬಾಲಕರ ವಿಭಾಗದಲ್ಲಿ ಉಪ್ಪಿನಂಗಡಿ ನೆಕ್ಕಿಲಾಡಿಯ ನಿವಾಸಿ ಡಾ.ಸುಪ್ರೀತ್ ಜೋಯಲ್ ಲೋಬೋ ಮತ್ತು ಡಾ. ಶೈನಿ ಪಾಯಸ್ ದಂಪತಿಯ ಪುತ್ರ 7ನೇ ತರಗತಿಯ ಸಂಹಿತ್ ಜೊಸ್ಸಿ ಲೋಬೋ, ಕಾಣಿಯೂರಿನ ನಿವಾಸಿ ಅರವಿಂದ ಕುಮಾರ್ ಕೆ ಮತ್ತು ಜ್ಯೋತಿ ಕುಮಾರಿ ಕೆ ದಂಪತಿಯ ಪುತ್ರ 7ನೇ ತರಗತಿಯ ರತುಲ್ ಅದ್ವೈತ್, ಕುಂಜುರ್ ಪಂಜದ ನಿವಾಸಿ ಶ್ರೀನಿವಾಸ ಮಯ್ಯ ಡಿ ಮತ್ತು ಜಯಲಕ್ಷ್ಮೀ ಎಸ್ ಮಯ್ಯ ದಂಪತಿಯ ಪುತ್ರ 7ನೇ ತರಗತಿಯ ಮಯೂರ್ ಎಸ್ ಮಯ್ಯ ಹಾಗೂ ಕಲ್ಲಾರೆಯ ನಿವಾಸಿ ಪ್ರವೀಣ್ ರೈ ಸಿ ಮತ್ತು ತೃಪ್ತಿ ರೈ ದಂಪತಿಯ ಪುತ್ರ 7ನೇ ತರಗತಿಯ ತ್ರಿನಯ್ ರೈ ದ್ವಿತೀಯ ಸ್ಥಾನವನ್ನು ಗಳಿಸಿದ್ದಾರೆ.
Uncategorized
Kumaraswamy-ಸ್ಟಿಂಗ್ ಆಪರೇಷನ್ ವಿವಾದ: ಸಿದ್ದರಾಮಯ್ಯ ಮೌನವಾಗಿರಬಾರದು – ಸಿಬಿಐ ತನಿಖೆಗೆ ಕುಮಾರಸ್ವಾಮಿ ಆಗ್ರಹ
ರಾಜ್ಯದಲ್ಲಿ ಸ್ಟಿಂಗ್ ಆಪರೇಷನ್ಗಳ ಹೆಸರಿನಲ್ಲಿ ರಾಜಕೀಯ ನಾಯಕರು ಹಾಗೂ ಅವರ ಕುಟುಂಬಗಳನ್ನು ಗುರಿಯಾಗಿಸಲಾಗುತ್ತಿದೆ ಎಂಬ ಆರೋಪಗಳ ಕುರಿತು ಸಮಗ್ರ ಮತ್ತು ನಿಷ್ಪಕ್ಷಪಾತ ತನಿಖೆ ನಡೆಸಬೇಕು. ಈ ಪ್ರಕರಣಗಳ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಆಗ್ರಹಿಸಿದ್ದಾರೆ.
ಬೆಂಗಳೂರು: ರಾಜ್ಯದಲ್ಲಿ ಸ್ಟಿಂಗ್ ಆಪರೇಷನ್ಗಳ ಹೆಸರಿನಲ್ಲಿ ರಾಜಕೀಯ ನಾಯಕರು ಹಾಗೂ ಅವರ ಕುಟುಂಬಗಳನ್ನು ಗುರಿಯಾಗಿಸಲಾಗುತ್ತಿದೆ ಎಂಬ ಆರೋಪಗಳ ಕುರಿತು ಸಮಗ್ರ ಮತ್ತು ನಿಷ್ಪಕ್ಷಪಾತ ತನಿಖೆ ನಡೆಸಬೇಕು. ಈ ಪ್ರಕರಣಗಳ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಆಗ್ರಹಿಸಿದ್ದಾರೆ.
ಈ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿ ಚರ್ಚಿಸುವುದರ ಜೊತೆಗೆ ದೂರು ಸಲ್ಲಿಸುವುದಾಗಿಯೂ ಅವರು ತಿಳಿಸಿದ್ದಾರೆ.
ಬೆಂಗಳೂರಿನ ಜೆಡಿಎಸ್ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಸ್ಟಿಂಗ್ ಆಪರೇಷನ್ಗಳ ಹಿಂದೆ ಯಾರಿದ್ದಾರೆ, ಅವುಗಳನ್ನು ಯಾರು ನಡೆಸಿದ್ದಾರೆ ಮತ್ತು ಇದರಲ್ಲಿ ಯಾರ ಪಾತ್ರವಿದೆ ಎಂಬುದನ್ನು ತನಿಖೆಯ ಮೂಲಕ ಪತ್ತೆಹಚ್ಚಬೇಕು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸಿದ್ದರಾಮಯ್ಯ ಮೌನವಾಗಿರಬಾರದು: ಕುಮಾರಸ್ವಾಮಿ
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ವಿರುದ್ಧ ನಡೆಯುತ್ತಿದೆ ಎನ್ನಲಾದ ಷಡ್ಯಂತ್ರಕ್ಕೆ ಹೆದರುವ ಅಗತ್ಯವಿಲ್ಲ ಎಂದು ಹೇಳಿದ ಕುಮಾರಸ್ವಾಮಿ, ಸಿದ್ದರಾಮಯ್ಯ ಅವರು ತಮ್ಮ ಹಿಂದಿನ ಹೋರಾಟದ ಮನೋಭಾವದೊಂದಿಗೆ ಮಾತನಾಡಬೇಕು. ಇಂತಹ ಬೆಳವಣಿಗೆಗಳ ಬಗ್ಗೆ ಮೌನ ವಹಿಸುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟರು.
ಹಿಂದೆ ಮಾಜಿ ಮುಖ್ಯಮಂತ್ರಿಯೊಬ್ಬರ ವಿರುದ್ಧ ಸ್ಟಿಂಗ್ ಆಪರೇಷನ್ ನಡೆಸಲಾಗಿತ್ತು. ಬಳಿಕ ರಮೇಶ್ ಜಾರಕಿಹೊಳಿ ಹಾಗೂ ಕೆ.ಎನ್. ರಾಜಣ್ಣ ಅವರ ವಿಚಾರಗಳೂ ಮುನ್ನೆಲೆಗೆ ಬಂದವು. ಇದೀಗ ಸಿದ್ದರಾಮಯ್ಯ ಅವರ ಸರದಿ ಬಂದಿದೆ ಎಂದು ಕುಮಾರಸ್ವಾಮಿ ಆರೋಪಿಸಿದರು.
ಸದಾಶಿವನಗರದಲ್ಲಿ ನಿಗಾ ವ್ಯವಸ್ಥೆ ಇದೆ ಎಂಬ ಆರೋಪ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸದಾಶಿವನಗರದ ನಿವಾಸದಲ್ಲಿ ನಾಲ್ವರು ನಿವೃತ್ತ ಪೊಲೀಸ್ ಅಧಿಕಾರಿಗಳನ್ನು ನೇಮಿಸಿಕೊಂಡು, ಅತ್ಯಾಧುನಿಕ ಉಪಕರಣಗಳ ಮೂಲಕ ಸಚಿವರು ಹಾಗೂ ಇತರರ ಮಾತುಕತೆಗಳ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂಬ ಮಾಹಿತಿ ತಮಗೆ ಲಭಿಸಿದೆ ಎಂದು ಕುಮಾರಸ್ವಾಮಿ ಆರೋಪಿಸಿದರು.
ರಾಜಕೀಯ ನಾಯಕರು ಹಾಗೂ ಸಚಿವರ ಫೋನ್ಗಳನ್ನು ಕದ್ದಾಲಿಸಲಾಗುತ್ತಿದೆ ಎಂಬ ಆರೋಪ ಗಂಭೀರವಾಗಿದ್ದು, ಈ ಬಗ್ಗೆ ಪೊಲೀಸ್ ಇಲಾಖೆಯಲ್ಲೂ ಚರ್ಚೆಯಾಗುತ್ತಿದೆ ಎಂಬ ಮಾಹಿತಿ ಬಂದಿದೆ ಎಂದು ಅವರು ಹೇಳಿದರು.
ಆದರೆ, ಮುಖ್ಯಮಂತ್ರಿ ಸ್ವತಃ ಇಂತಹ ಚಟುವಟಿಕೆಗಳಿಗೆ ಆದೇಶ ನೀಡಿದ್ದಾರೆ ಎಂದು ತಾನು ಹೇಳುತ್ತಿಲ್ಲ. ಇಲಾಖೆಯಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಸಮಗ್ರ ತನಿಖೆಯ ಮೂಲಕ ಪರಿಶೀಲಿಸಬೇಕು ಎಂದು ಸ್ಪಷ್ಟಪಡಿಸಿದರು.
ಪೆನ್ಡ್ರೈವ್ ಪ್ರಕರಣದ ಬಗ್ಗೆಯೂ ಪ್ರಶ್ನೆ
2024ರ ಲೋಕಸಭಾ ಚುನಾವಣೆಗೆ ಎರಡು ದಿನ ಬಾಕಿ ಇರುವಾಗ ಮಂಡ್ಯ ಮತ್ತು ಹಾಸನ ಭಾಗಗಳಲ್ಲಿ ವಿಡಿಯೊಗಳನ್ನು ಪೆನ್ಡ್ರೈವ್ಗಳಲ್ಲಿ ಹಂಚಲಾಗಿದೆ ಎಂದು ಹೇಳಿದ ಕುಮಾರಸ್ವಾಮಿ ಅವರು, ವಿಡಿಯೋಗಳಲ್ಲಿ ಇದ್ದ ಮಹಿಳೆಯರ ಮುಖಗಳನ್ನು ಮರೆಮಾಚಲಿಲ್ಲ. ಲೋಕಸಭೆಯ ಇವತ್ತಿನ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ನಾನೂರು ಮಹಿಳೆಯರ ಮೇಲೆ ಪ್ರಜ್ವಲ್ ರೇವಣ್ಣ ಅತ್ಯಾಚಾರ ಎಸಗಿದ್ದಾರೆ ಎಂದು ಹೇಳಿದ್ದರು. ಆ ನಾನೂರು ಜನ ಮಹಿಳೆಯರಲ್ಲಿ ಎಷ್ಟು ಜನ ಬಂದು ಕೇಸು ದಾಖಲು ಮಾಡಿದ್ದಾರೆ? ಎಂದು ಪ್ರಶ್ನಿಸಿದರು.
ಆ ವಿಡಿಯೊಗಳನ್ನು ಸಿದ್ಧಪಡಿಸಿದವರು ಯಾರು, ಅವುಗಳನ್ನು ಯಾವ ಸ್ಥಳದಲ್ಲಿ ಸಿದ್ಧಪಡಿಸಲಾಯಿತು ಮತ್ತು ಹಂಚಿದವರ ವಿರುದ್ಧ ಯಾವ ಕ್ರಮ ಕೈಗೊಳ್ಳಲಾಗಿದೆ ಎಂಬ ಪ್ರಶ್ನೆಗಳಿಗೆ ರಾಜ್ಯ ಸರ್ಕಾರ ಉತ್ತರಿಸಬೇಕು ಎಂದು ಆಗ್ರಹಿಸಿದರು.
ತಮ್ಮ ಕುಟುಂಬದವರ ಬಗ್ಗೆಯೂ ಅವಹೇಳನಕಾರಿ ಸುದ್ದಿಗಳನ್ನು ಪ್ರಸಾರ ಮಾಡಲಾಗಿತ್ತು. ತಮ್ಮ ತಾಯಿಯ ವಿರುದ್ಧವೂ ಆರೋಪಗಳು ಮತ್ತು ಸುದ್ದಿಗಳನ್ನು ಹರಡಲಾಗಿತ್ತು. ಇಂತಹ ಸಂದರ್ಭಗಳಲ್ಲಿಯೂ ತಮ್ಮ ಕುಟುಂಬ ನ್ಯಾಯಾಲಯದ ಮೊರೆ ಹೋಗಿರಲಿಲ್ಲ ಎಂದು ಅವರು ಹೇಳಿದರು.
ಸಿದ್ದರಾಮಯ್ಯ ನ್ಯಾಯಾಲಯದ ಮೊರೆ ಹೋಗಿರುವುದಕ್ಕೆ ಆಕ್ಷೇಪ
ಸ್ಟಿಂಗ್ ಆಪರೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಅವರು ನ್ಯಾಯಾಲಯದಿಂದ ತಡೆಯಾಜ್ಞೆ ಪಡೆಯಲು ಅರ್ಜಿ ಸಲ್ಲಿಸಿದ್ದಾರೆ ಎಂಬ ವರದಿಗಳನ್ನು ಉಲ್ಲೇಖಿಸಿದ ಕುಮಾರಸ್ವಾಮಿ, ಯಾವುದೇ ಪ್ರಕರಣದಲ್ಲಿಯೂ ಸತ್ಯಾಸತ್ಯತೆ ನ್ಯಾಯಾಂಗದ ಮೂಲಕ ಹೊರಬರಬೇಕು. ನ್ಯಾಯಾಲಯದ ತೀರ್ಪಿಗೆ ಎಲ್ಲರೂ ತಲೆಬಾಗಬೇಕು ಎಂಬುದು ತಮ್ಮ ನಿಲುವು ಎಂದು ತಿಳಿಸಿದರು.
ಸುದೀರ್ಘ ರಾಜಕೀಯ ಅನುಭವ ಹೊಂದಿರುವ ಸಿದ್ದರಾಮಯ್ಯ ಅವರು ನ್ಯಾಯಾಲಯದ ತಡೆಯಾಜ್ಞೆ ಪಡೆಯುವ ಬದಲು ದಿಟ್ಟವಾಗಿ ನಿಂತು ಇಂತಹ ಬೆಳವಣಿಗೆಗಳನ್ನು ಎದುರಿಸಬೇಕು ಎಂದು ಅವರು ಮನವಿ ಮಾಡಿದರು.
ಸಿಬಿಐ ತನಿಖೆಗೆ ಮತ್ತೆ ಒತ್ತಾಯ
ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ವಿಶೇಷ ತನಿಖಾ ತಂಡ ರಚಿಸಿ ತನಿಖೆ ನಡೆಸಿರುವುದನ್ನು ತಾವು ವಿರೋಧಿಸಿಲ್ಲ ಎಂದ ಕುಮಾರಸ್ವಾಮಿ, ಇದೇ ರೀತಿಯ ಗಂಭೀರತೆಯನ್ನು ಇತರ ಪ್ರಕರಣಗಳಲ್ಲಿಯೂ ತೋರಿಸಬೇಕು ಎಂದು ಹೇಳಿದರು.
ಸ್ಟಿಂಗ್ ಆಪರೇಷನ್ಗಳ ಹಿಂದೆ ಇರುವವರನ್ನು ಪತ್ತೆಹಚ್ಚಿ, ಆರೋಪಗಳ ಸತ್ಯಾಸತ್ಯತೆಯನ್ನು ಬಹಿರಂಗಪಡಿಸಲು ಸಿಬಿಐ ತನಿಖೆ ಅಗತ್ಯವಿದೆ. ಈ ಕುರಿತು ಅಮಿತ್ ಶಾ ಅವರನ್ನು ಭೇಟಿಯಾಗಿ ದೂರು ಸಲ್ಲಿಸುವುದಾಗಿ ಪುನರುಚ್ಚರಿಸಿದರು.
Uncategorized
Lawyer Amrutesh-ಸೌಜನ್ಯ ಪ್ರಕರಣ ಮರುತನಿಖೆ : ಸಂತೋಷ್ ರಾವ್ ವಿರುದ್ಧ ಬಲವಾದ ಸಾಕ್ಷ್ಯಗಳಿವೆ: ಧಾರ್ಮಿಕ ಕ್ಷೇತ್ರದ ಮೇಲೆ ಷಡ್ಯಂತ್ರ ನಡೆಯುತ್ತಿದೆ : ಹೈಕೋರ್ಟ್ ವಕೀಲ ಅಮೃತೇಶ್
ಸೌಜನ್ಯಾ ಪ್ರಕರಣದ ಮರುತನಿಖೆಗಾಗಿ ಸುಪ್ರೀಂ ಕೋರ್ಟ್ ಆದೇಶದಂತೆ ವಿಶೇಷ ತನಿಖಾ ತಂಡ (ಎಸ್ಐಟಿ) ರಚಿಸಲಾಗಿದೆ. ಆದರೆ ಈ ತನಿಖೆಯಿಂದ ಪ್ರಕರಣ ತಾರ್ಕಿಕ ಅಂತ್ಯ ಕಾಣುವುದು ಸಾಧ್ಯವಿಲ್ಲ ಎಂದು ಹೈಕೋರ್ಟ್ ವಕೀಲ ಅಮೃತೇಶ್ ಅಭಿಪ್ರಾಯಪಟ್ಟಿದ್ದಾರೆ. ಸಂತೋಷ್ ರಾವ್ ಅವರನ್ನು ತನಿಖೆಯಿಂದ ಹೊರಗಿಡುವಂತೆ ಸುಪ್ರೀಂ ಕೋರ್ಟ್ ಸೂಚಿಸಿದೆ ಎಂದು ಉಲ್ಲೇಖಿಸಿದ ಅಮೃತೇಶ್, ಅವರ ವಿರುದ್ಧ ಬಲವಾದ ಸಾಕ್ಷ್ಯಗಳಿವೆ ಎಂದು ಹೇಳಿದರು.
ಬೆಂಗಳೂರು: ಸೌಜನ್ಯಾ ಪ್ರಕರಣದ ಮರುತನಿಖೆಗಾಗಿ ಸುಪ್ರೀಂ ಕೋರ್ಟ್ ಆದೇಶದಂತೆ ವಿಶೇಷ ತನಿಖಾ ತಂಡ (ಎಸ್ಐಟಿ) ರಚಿಸಲಾಗಿದೆ. ಆದರೆ ಈ ತನಿಖೆಯಿಂದ ಪ್ರಕರಣ ತಾರ್ಕಿಕ ಅಂತ್ಯ ಕಾಣುವುದು ಸಾಧ್ಯವಿಲ್ಲ ಎಂದು ಹೈಕೋರ್ಟ್ ವಕೀಲ ಅಮೃತೇಶ್ ಅಭಿಪ್ರಾಯಪಟ್ಟಿದ್ದಾರೆ.
ಮಂಗಳವಾರ ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ‘ವಾಯ್ಸ್ ಆಫ್ ಪಬ್ಲಿಕ್’ ಸಂಘಟನೆ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೌಜನ್ಯಾ ಪ್ರಕರಣದ ಮರುತನಿಖೆ, ಸಂತೋಷ್ ರಾವ್ ಪಾತ್ರ ಹಾಗೂ ಪ್ರಕರಣಕ್ಕೆ ಸಂಬಂಧಿಸಿದ ವಿವಿಧ ಬೆಳವಣಿಗೆಗಳ ಕುರಿತು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.
ಸಂತೋಷ್ ರಾವ್ ಅವರನ್ನು ತನಿಖೆಯಿಂದ ಹೊರಗಿಡುವಂತೆ ಸುಪ್ರೀಂ ಕೋರ್ಟ್ ಸೂಚಿಸಿದೆ ಎಂದು ಉಲ್ಲೇಖಿಸಿದ ಅಮೃತೇಶ್, ಅವರ ವಿರುದ್ಧ ಬಲವಾದ ಸಾಕ್ಷ್ಯಗಳಿವೆ ಎಂಬುದು ತಮ್ಮ ವಾದವಾಗಿದೆ ಎಂದು ಹೇಳಿದರು. ಸಿಬಿಐ ತನಿಖೆಯ ವೇಳೆ ಫೋರೆನ್ಸಿಕ್ ವರದಿಗಳಲ್ಲಿ ಸಂತೋಷ್ ರಾವ್ ಅವರ ದೇಹದಲ್ಲಿದ್ದ ಗಾಯಗಳ ಬಗ್ಗೆ ಉಲ್ಲೇಖವಾಗಿತ್ತು ಎಂದು ತಿಳಿಸಿದರು.
ಸಿಬಿಐನ ವಿಶೇಷ ಸಾರ್ವಜನಿಕ ಅಭಿಯೋಜಕರಾಗಿದ್ದ ಬಿ.ಆರ್. ಶಿವಾನಂದ ಅವರು ಪ್ರಕರಣದ ವಿಚಾರದಲ್ಲಿ ನಿರ್ದಿಷ್ಟ ಸಂಘಟನೆಗಳ ಪರವಾಗಿ ಕೆಲಸ ಮಾಡಿದ್ದಾರೆ ಎಂದು ಅಮೃತೇಶ್ ಆರೋಪಿಸಿದರು. ಈ ಆರೋಪಗಳಿಗೆ ಸಂಬಂಧಿಸಿದಂತೆ ಸ್ವತಂತ್ರವಾಗಿ ದೃಢೀಕರಿಸಿದ ಮಾಹಿತಿ ಲಭ್ಯವಿಲ್ಲ.
ಕ್ಷೇತ್ರದ ವಿರುದ್ಧ ಅಪಪ್ರಚಾರದ ಆರೋಪ
ಸೌಜನ್ಯಾ ಪ್ರಕರಣವನ್ನು ಮುಂದಿಟ್ಟುಕೊಂಡು ಕೆಲವರು ಹಣ ಸಂಪಾದಿಸಿದ್ದಾರೆ ಹಾಗೂ ಪ್ರಸಿದ್ಧ ಧಾರ್ಮಿಕ ಕ್ಷೇತ್ರದ ವಿರುದ್ಧ ಅಪಪ್ರಚಾರ ನಡೆಸುವ ಉದ್ದೇಶದಿಂದ ಷಡ್ಯಂತ್ರ ರೂಪಿಸಿದ್ದಾರೆ ಎಂದು ಅಮೃತೇಶ್ ಆರೋಪಿಸಿದರು. ಪ್ರಕರಣದ ಹಿಂದೆ ಎಡಪಂಥೀಯರು ಹಾಗೂ ನಗರ ನಕ್ಸಲರ ಕೈವಾಡವಿದೆ ಎಂಬ ಆರೋಪವನ್ನೂ ಅವರು ಮಾಡಿದರು.
ಬುರುಡೆ ಪ್ರಕರಣದ ಅಂತಿಮ ವರದಿ ಬಹಿರಂಗಪಡಿಸಲು ಆಗ್ರಹ
ಸೌಜನ್ಯಾ ಪ್ರಕರಣದಲ್ಲಿ ಹಿನ್ನಡೆಯಾದ ಬಳಿಕ ಕೆಲವು ಗುಂಪುಗಳು ಬುರುಡೆ ಪ್ರಕರಣವನ್ನು ಮುನ್ನೆಲೆಗೆ ತಂದವು ಎಂದು ಅಮೃತೇಶ್ ಹೇಳಿದರು. ಸರ್ಕಾರದ ವೆಚ್ಚದಲ್ಲಿ ನಡೆದಿದ್ದ ಅನಧಿಕೃತ ಶವಗಳ ಅಂತ್ಯಸಂಸ್ಕಾರಕ್ಕೆ ಸಂಬಂಧಿಸಿದ ತನಿಖೆಯ ಅಂತಿಮ ವರದಿ ಇನ್ನೂ ಬಹಿರಂಗವಾಗಿಲ್ಲ ಎಂದು ಅವರು ಆಕ್ಷೇಪಿಸಿದರು.
ಚಿನ್ನಯ್ಯ ಆರೋಪಿಸಿರುವ ಮಹೇಶ್ ಶೆಟ್ಟಿ ತಿಮರೋಡಿ, ಮಟ್ಟೆಣ್ಣವರ್ ಹಾಗೂ ಯೂಟ್ಯೂಬರ್ ಸಮೀರ್ ಸೇರಿದಂತೆ ಕೆಲವರ ವಿರುದ್ಧ ಪ್ರಕರಣ ದಾಖಲಾಗದಿರುವುದರ ಬಗ್ಗೆಯೂ ಅವರು ಪ್ರಶ್ನೆ ಎತ್ತಿದರು.
ಮೂರು ತಿಂಗಳಲ್ಲಿ ತನಿಖೆ ಪೂರ್ಣಗೊಳಿಸುವುದು ಕಷ್ಟ
ಸೌಜನ್ಯಾ ತಾಯಿ ಕುಸುಮಾವತಿ ಹಾಗೂ ಕೆಲವು ಗ್ಯಾಂಗ್ ಹಣ ಮಾಡುವ ಉದ್ದೇಶದಿಂದ ಕ್ಷೇತ್ರದ ವಿರುದ್ಧ ಕುತಂತ್ರ ನಡೆಸುತ್ತಿದೆ. ಕೆಲವು ವಿಷಯ ಮುಚ್ಚಿಟ್ಟು ಅವರು ಸುಪ್ರೀಂಕೋರ್ಟ್ಗೆ ಹೋಗಿದ್ದಾರೆ. ಸುಪ್ರಿಂಕೋರ್ಟ್ ಸಂಪೂರ್ಣವಾಗಿ ಹೊಸದಾಗಿ ತನಿಖೆ ಮಾಡಲು ಎಸ್ಐಟಿ ರಚನೆ ಮಾಡಲು ಸೂಚಿಸಿದೆ. ಆದರೆ ಮೂರು ತಿಂಗಳಲ್ಲಿ ಪ್ರಕರಣದ ತೀರ್ಪು ಬರಲು ಸಾಧ್ಯವಿಲ್ಲ. 14 ವರ್ಷದ ಸಾಕ್ಷ್ಯಾಧಾರಗಳು ಈಗ ಸಿಗಲು ಸಾಧ್ಯವಿಲ್ಲ. ಈ ಗ್ಯಾಂಗ್ನ ನಿಜವಾದ ಟಾರ್ಗೆಟ್ ಮಲ್ಲಿಕ್ ಜೈನ್, ಧೀರಜ್ ಜೈನ್, ಉದಯ್ ಜೈನ್ ಅಲ್ಲ. ಬದಲಾಗಿ ಕ್ಷೇತ್ರವೇ ಆಗಿದೆ ಎಂದು ಅಮೃತೇಶ್ ತಿಳಿಸಿದ್ದಾರೆ.
ಹಿಂದಿನ ಹೇಳಿಕೆಗಳನ್ನು ಉಲ್ಲೇಖಿಸಿದ ವಕೀಲ
ಸೌಜನ್ಯಾ ಪ್ರಕರಣ ನಡೆದು 14 ವರ್ಷಗಳಾಗಿವೆ ಎಂದು ತಿಳಿಸಿದ ಅಮೃತೇಶ್, ಆರಂಭದಲ್ಲಿ ನಾಪತ್ತೆ ದೂರು ದಾಖಲಾಗಿತ್ತು. ಬಳಿಕ ಮೃತದೇಹ ಪತ್ತೆಯಾದ ನಂತರ ಅತ್ಯಾಚಾರ ಮತ್ತು ಕೊಲೆ ಆರೋಪದಡಿ ಪ್ರಕರಣ ದಾಖಲಿಸಲಾಗಿತ್ತು. ನಂತರ ತನಿಖೆಯನ್ನು ಸಿಐಡಿಯಿಂದ ಸಿಬಿಐಗೆ ವರ್ಗಾಯಿಸಲಾಗಿತ್ತು ಎಂದು ವಿವರಿಸಿದರು.
ಘಟನೆಯ ಬಳಿಕ ಸೌಜನ್ಯಾ ಅವರ ಕುಟುಂಬದವರು ಬೆಳ್ತಂಗಡಿಯಲ್ಲಿ ನಡೆಸಿದ್ದ ಸುದ್ದಿಗೋಷ್ಠಿಯಲ್ಲಿ ಧರ್ಮಸ್ಥಳದಿಂದ ಯಾವುದೇ ಒತ್ತಡ ಅಥವಾ ಬೆದರಿಕೆ ಇರಲಿಲ್ಲ ಎಂದು ಹೇಳಿದ್ದರೆಂದು ಅಮೃತೇಶ್ ಉಲ್ಲೇಖಿಸಿದರು. ಬಳಿಕ ಕೆಲವು ಗುಂಪುಗಳು ಧಾರ್ಮಿಕ ಗುರುಗಳು ಹಾಗೂ ಮಠಾಧೀಶರನ್ನು ಗುರಿಯಾಗಿಸಿಕೊಂಡು ಕ್ಷೇತ್ರದ ವಿರುದ್ಧ ಆರೋಪಗಳನ್ನು ಹರಡಿವೆ ಎಂದು ದೂರಿದರು.
ಸಂತೋಷ್ ರಾವ್ ಅವರನ್ನು ಪ್ರಕರಣದಿಂದ ಬಿಡುಗಡೆಗೊಳಿಸಲು ಸಾಕಷ್ಟು ಹಣ ಖರ್ಚು ಮಾಡಿರುವುದಾಗಿ ಮಹೇಶ್ ಶೆಟ್ಟಿ ತಿಮರೋಡಿ ಅವರೇ ಹೇಳಿದ್ದಾರೆ ಎಂದೂ ಅಮೃತೇಶ್ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ವಕೀಲ ಸದಾನಂದ ಗೌಡ ಉಪಸ್ಥಿತರಿದ್ದರು.
-
ಸ್ಥಳೀಯ18 hours agoNavoor clinic-ನಾವೂರು ಕ್ಲಿನಿಕ್ಗೆ ಬೆಂಕಿ ಪ್ರಕರಣ: ರವಿ ಪೂಜಾರಿ ಬಂಧನ, ಇಬ್ಬರು ಶಂಕಿತರ ವಿಚಾರಣೆ
-
ರಾಜಕೀಯ12 hours agoH.D. Kumaraswamy-ರಾಜ್ಯ ರಾಜಕಾರಣದಲ್ಲಿ ಬಿರುಗಾಳಿ : ಬಾಂಬ್ ಸಿಡಿಸಿದ ಎಚ್.ಡಿ. ಕುಮಾರಸ್ವಾಮಿ – ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಷಡ್ಯಂತ್ರದಲ್ಲಿ ಕೃಪಾ ಆಳ್ವ..! ಗಂಭೀರ ಆರೋಪ
-
ಅಪರಾಧ13 hours agoPuttur-ಪುತ್ತೂರಿನಲ್ಲಿ ಅಕ್ರಮ ಲಾಟರಿ ಮಾರಾಟ: ಇಬ್ಬರು ಅಂಗಡಿ ಮಾಲೀಕರ ವಿರುದ್ಧ ಪ್ರಕರಣ ದಾಖಲು
-
ಅಪರಾಧ17 hours agoB.R. Shetty-ಬ್ಯಾಂಕ್ ಆಫ್ ಬರೋಡಾ ವಿರುದ್ಧ ಯುಎಇ ಎಕ್ಸ್ಚೇಂಜ್ ಸಂಸ್ಥೆಗಳ ಸ್ಥಾಪಕ ಬಿ.ಆರ್. ಶೆಟ್ಟಿ ಕಾನೂನು ಸಮರ; ₹1.25 ಲಕ್ಷ ಕೋಟಿ ಪರಿಹಾರ ಬೇಡಿಕೆ
-
ಮಂಗಳೂರು13 hours agoSudhir Kumar Reddy-ಭಾರತ ಮಾತೆಯ ಹೆಸರಿನಲ್ಲಿ ಕಾನೂನು ಉಲ್ಲಂಘನೆ ಸಲ್ಲದು – ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಖಡಕ್ ಸ್ಪಷ್ಟನೆ..!
-
ಬಿಗ್ ನ್ಯೂಸ್18 hours agoRenukashwami murder case-ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಮಹತ್ವದ ತಿರುವು: ಮಾಫಿ ಸಾಕ್ಷಿ ಅರ್ಜಿ ವಾಪಸ್ ಪಡೆದ ಎ10 ವಿನಯ್
-
ಅಂತರ ರಾಜ್ಯ18 hours agoMurder case-ಮೀರತ್ ಬ್ಲೂ ಡ್ರಮ್ ಕೊಲೆ ಪ್ರಕರಣ: ಪತ್ನಿ ಮುಸ್ಕಾನ್, ಪ್ರಿಯಕರ ಸಾಹಿಲ್ಗೆ ಗಲ್ಲು ಶಿಕ್ಷೆ..!
-
ರಾಜಕೀಯ17 hours agoAmal Ramachandra-ಒಳ್ಳೆಯ ರೀತಿಯಲ್ಲಿ ಬೆಳೆವಿಮೆ ಬಂದರೆ ಮೋದಿಯಿಂದಾಗಿ ಎಂದು ಬೊಬ್ಬೆ ಹಾಕುತ್ತಿದ್ದ ಬಿಜೆಪಿ ಈಗ ಕಾಂಗ್ರೆಸ್ ನ್ನು ದೂರುತ್ತಿದೆ..! ಟರ್ಮ್ ಶೀಟ್ ಬದಲಾವಣೆ ಮಾಡಿದ್ದು ಬಿಜೆಪಿ ಈ ಬಗ್ಗೆ ದಾಖಲೆಯಿದೆ; ಅಶೋಕ್ ರೈ ಹುಟ್ಟಿಸಿದ ಲಿಸ್ಟ್ ಕೊಡ್ತೇನೆ 8 ವರ್ಷಗಳಲ್ಲಿ ಬೆಳ್ತಂಗಡಿಯಲ್ಲಿ ಪೂಂಜಾ ಹುಟ್ಟಿಸಿದ್ದೇನೂ..? ಪುಡಾ ಅಧ್ಯಕ್ಷ ಅಮಳ ರಾಮಚಂದ್ರ


















