Uncategorized
NIKHARA POLITICAL UPDATE : ಸಂಘ vs ಪುತ್ತಿಲ: ಪುತ್ತೂರಿನಲ್ಲಿ ಮತ್ತೆ ‘ಪರಿವಾರ’ಗಳ ಫೈಟ್ ಶುರು! ಪ್ರಕರಣ ವಜಾ ಬೆನ್ನಲ್ಲೇ ಸೋಶಿಯಲ್ ಮೀಡಿಯಾ ವಾರ್

ಪುತ್ತೂರು: ಹಿಂದುತ್ವದ ಭದ್ರಕೋಟೆ ಎಂದೆನಿಸಿರುವ ಪುತ್ತೂರಿನಲ್ಲಿ ‘ಅಸಲಿ ಹಿಂದುತ್ವ’ ಯಾರದ್ದು ಎಂಬ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. ಸರ್ಕಾರಿ ವೈದ್ಯರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪಿಗಳನ್ನು ಬಂಧಿಸಬೇಕೆಂದು ಆಗ್ರಹಿಸಿ ರಸ್ತೆ ತಡೆ ನಡೆಸಿದ 27 ಜನರ ವಿರುದ್ಧ ಒಂದೂವರೆ ವರ್ಷದ ಹಿಂದೆ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದರಲ್ಲಿ 17 ಮಂದಿ ಸಂಘ ಪರಿವಾರಕ್ಕೆ ಸೇರಿದವರಾಗಿದ್ದರೆ, 10 ಮಂದಿ ಪುತ್ತಿಲ ಪರಿವಾರಕ್ಕೆ ಸೇರಿದವರಿದ್ದರು.
ಈ ಪೈಕಿ, ಸಂಘ ಪರಿವಾರದ 17 ಮಂದಿಯ ಮೇಲಿದ್ದ ಕೇಸ್ ಏಪ್ರಿಲ್ 25ರಂದು ಹೈಕೋರ್ಟ್‌ನಲ್ಲಿ ವಜಾಗೊಂಡಿತ್ತು. ಇದು ಸಂಭವಿಸುತ್ತಿದ್ದಂತೆಯೇ, ಪುತ್ತಿಲ ಪರಿವಾರದ ಕಾರ್ಯಕರ್ತರು ಸಾಮಾಜಿಕ ಜಾಲತಾಣಗಳಲ್ಲಿ ಸಂಘ ಪರಿವಾರದ ವಿರುದ್ಧ ಆಕ್ರೋಶ ಹೊರಹಾಕಲು ಆರಂಭಿಸಿದ್ದಾರೆ.
ಏನಿದು ಪ್ರಕರಣ?
ಕಳೆದ 2025ರ ಏಪ್ರಿಲ್ 26ರಂದು ಡಾ. ಆಶಾ ಪುತ್ತೂರಾಯ ಅವರ ಕರ್ತವ್ಯಕ್ಕೆ ಅಡ್ಡಿಪಡಿಸಿದವರನ್ನು ಬಂಧಿಸಬೇಕೆಂದು ಆಗ್ರಹಿಸಿ ಪುತ್ತೂರಿನಲ್ಲಿ ಬೃಹತ್ ಪ್ರತಿಭಟನೆ ನಡೆದಿತ್ತು. ಈ ವೇಳೆ ರಸ್ತೆ ತಡೆ ನಡೆಸಿ ಸಾರ್ವಜನಿಕರಿಗೆ ತೊಂದರೆ ನೀಡಿದ ಹಾಗೂ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಒಟ್ಟು 27 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿತ್ತು.
ಸಂಘದ ಚಾಣಾಕ್ಷ ನಡೆ:
ಪ್ರಕರಣ ದಾಖಲಾದ ಬೆನ್ನಲ್ಲೇ ಸಂಘ ಪರಿವಾರದ ಹಿನ್ನೆಲೆಯುಳ್ಳ 17 ಮಂದಿ ಹಿರಿಯ ವಕೀಲರ ಮೂಲಕ ಹೈಕೋರ್ಟ್ ಮೆಟ್ಟಿಲೇರಿ ಏಪ್ರಿಲ್ 25ರಂದು ಪ್ರಕರಣ ರದ್ದುಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪುತ್ತಿಲ ಪರಿವಾರಕ್ಕೆ ಹಿನ್ನಡೆ:
ಇದೇ ಪ್ರಕರಣದಲ್ಲಿದ್ದ ಪುತ್ತಿಲ ಪರಿವಾರದ 10 ಮಂದಿ ಯಾವುದೇ ಕಾನೂನು ಹೋರಾಟ ನಡೆಸದ ಕಾರಣ ಅವರ ಮೇಲಿನ ಕೇಸ್ ಹಾಗೆಯೇ ಉಳಿದುಕೊಂಡಿದೆ.
‘ನಕಲಿ ಹಿಂದುತ್ವ’ದ ಆರೋಪ: ಜಾಲತಾಣದಲ್ಲಿ ಆಕ್ರೋಶ
ಪ್ರಕರಣ ವಜಾಗೊಂಡ ವಿಚಾರ ತಿಳಿಯುತ್ತಿದ್ದಂತೆಯೇ ಪುತ್ತಿಲ ಪರಿವಾರದ ಬೆಂಬಲಿಗರು ಸಂಘ ಪರಿವಾರದ ಮುಖಂಡರ ವಿರುದ್ಧ ಕಿಡಿಕಾರುವ ಸಂದೇಶಗಳನ್ನು ತಮ್ಮ ವಾಟ್ಸಾಪ್ ಗ್ರೂಪ್‌ಗಳಲ್ಲಿ ಹಾಕಿದ್ದಾರೆ.
“ಹಿಂದುತ್ವದ ರಕ್ಷಕರು ಎಂದು ಹೇಳಿಕೊಳ್ಳುವವರ ಅಸಲಿ ಮುಖವಾಡ ಈಗ ಕಳಚುತ್ತಿದೆ. ಕಾರ್ಯಕರ್ತರನ್ನು ಬಳಸಿಕೊಂಡು ತಮ್ಮ ಮೇಲಿನ ಕೇಸ್ ಮಾತ್ರ ರದ್ದು ಮಾಡಿಸಿಕೊಳ್ಳುವವರು ನಕಲಿ ಹಿಂದುತ್ವವಾದಿಗಳು,” ಎಂದು ಪುತ್ತಿಲ ಅಭಿಮಾನಿಗಳು ಫೇಸ್‌ಬುಕ್ ಮತ್ತು ವಾಟ್ಸಾಪ್‌ಗಳಲ್ಲಿ ಕಿಡಿಕಾರುತ್ತಿದ್ದಾರೆ.
ಅಲ್ಲದೆ, ಕಳೆದ ಚುನಾವಣೆಯಲ್ಲಿ ಸಂಘ ಪರಿವಾರದ ಧೋರಣೆಯಿಂದಲೇ ಬಿಜೆಪಿ ಮೂರನೇ ಸ್ಥಾನಕ್ಕೆ ಕುಸಿದಿದೆ, ಮುಂದೆಯೂ ಇದೇ ಪರಿಸ್ಥಿತಿ ಮುಂದುವರಿಯಲಿದೆ ಎಂಬ ಎಚ್ಚರಿಕೆಯ ಸಂದೇಶಗಳು ರವಾನೆಯಾಗುತ್ತಿವೆ.
ಮುಸುಕಿನ ಗುದ್ದಾಟಕ್ಕೆ ಚುನಾವಣಾ ರಂಗು!
ಪಂಚಾಯತ್ ಚುನಾವಣೆಯ ಹೊಸ್ತಿಲಲ್ಲಿರುವ ಈ ಸಂದರ್ಭದಲ್ಲಿ ಈ “ಕೇಸ್ ಪಾಲಿಟಿಕ್ಸ್” ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದೆ. ಪುತ್ತಿಲ ಪರಿವಾರದ ಅಸ್ತಿತ್ವವನ್ನು ಅಳಿಸಲು ಸಂಘ ಪರಿವಾರ ಪ್ರಯತ್ನಿಸುತ್ತಿದೆ ಎಂಬುದು ಒಂದು ಕಡೆಯ ವಾದವಾದರೆ, ಕಾನೂನಾತ್ಮಕವಾಗಿ ಹೋರಾಟ ಮಾಡದ ಪುತ್ತಿಲ ತಂಡ ಈಗ ಹತಾಶೆಯಿಂದ ಆರೋಪ ಮಾಡುತ್ತಿದೆ ಎಂಬುದು ಇನ್ನೊಂದು ಕಡೆಯ ತಿರುಗೇಟು.
ಪುತ್ತಿಲ ಪರಿವಾರದವರು ಕಳೆದ ವಿಧಾನಸಭೆ ಚುನಾವಣೆ ಸಂದರ್ಭ ನಿರಂತರ ಅಪಪ್ರಚಾರ ನಡೆಸಿದ್ದೂ ಈಗ ಅದೇ ಚಾಳಿಯನ್ನು ಮತ್ತೆ ಮುಂದುವರಿಸಿದ್ದಾರೆ. ಯಾರೆಲ್ಲಾ ವಜಾ ಕೋರಿ ಅರ್ಜಿ ಸಲ್ಲಿಸಿದ್ದಾರೋ ಅವರ ಕೇಸುಗಳು ವಜಾ ಆಗಿವೆ. ಇದರಲ್ಲಿ ಯಾವುದೇ ರಾಜಕೀಯ ಇಲ್ಲ. ಕಾನೂನು ಹೋರಾಟಕ್ಕೆ ಇಳಿಯದ ಪುತ್ತಿಲ ಪರಿವಾರ ಈಗ ತನ್ನ ಕಾರ್ಯಕರ್ತರ ಎದುರು ಮುಖ ಉಳಿಸಲು ಸಂಘ ಪರಿವಾರದ ವಿರುದ್ಧ ಅಪಪ್ರಚಾರ ನಡೆಸುತ್ತಿದೆ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಸಂಘ ಪರಿವಾರದ ನಾಯಕರೊಬ್ಬರು ನಿಖರ ನ್ಯೂಸ್‌ಗೆ ತಿಳಿಸಿದ್ದಾರೆ.
ಒಟ್ಟಿನಲ್ಲಿ, ಪುತ್ತೂರಿನ ಹಿಂದೂ ಕಾರ್ಯಕರ್ತರು ಈಗ ಎರಡು ಬಣಗಳಾಗಿ ವಿಭಜನೆಯಾಗಿರುವುದು ಮಾತ್ರವಲ್ಲದೆ, ಈ ಮುಸುಕಿನ ಗುದ್ದಾಟ ಮುಂದಿನ ರಾಜಕೀಯ ಸಮರಕ್ಕೆ ದಿಕ್ಸೂಚಿಯಾಗುವ ಸಾಧ್ಯತೆಯಿದೆ.
Uncategorized
Philomena-ಸಂತ ಫಿಲೋಮಿನಾ ಪ. ಪೂ ಕಾಲೇಜಿಗೆ ‘ಅಂಬಿಯೋರ- 2026’; ಅಂತರ್ ಕಾಲೇಜು ಮಟ್ಟದ ಸ್ಪರ್ಧೆಯಲ್ಲಿ ಸಮಗ್ರ ಪ್ರಶಸ್ತಿ
ಸಂತ ಫಿಲೋಮಿನಾ (ಸ್ವಾಯತ್ತ) ಕಾಲೇಜು ಪುತ್ತೂರು ಇದರ ವಾಣಿಜ್ಯ ವಿಭಾಗದ ಆಶ್ರಯದಲ್ಲಿ ಅ 7 ರಂದು ನಡೆದ ‘ಅಂಬಿಯೋರ- 2026’ ಅಂತರ್ ಕಾಲೇಜು ಮಟ್ಟದ ವಿವಿಧ ಸ್ಪರ್ಧೆಯಲ್ಲಿ ಪುತ್ತೂರಿನ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿರುತ್ತಾರೆ.
ಪುತ್ತೂರು: ಸಂತ ಫಿಲೋಮಿನಾ (ಸ್ವಾಯತ್ತ) ಕಾಲೇಜು ಪುತ್ತೂರು ಇದರ ವಾಣಿಜ್ಯ ವಿಭಾಗದ ಆಶ್ರಯದಲ್ಲಿ ಅ 7 ರಂದು ನಡೆದ ‘ಅಂಬಿಯೋರ- 2026’ ಅಂತರ್ ಕಾಲೇಜು ಮಟ್ಟದ ವಿವಿಧ ಸ್ಪರ್ಧೆಯಲ್ಲಿ ಪುತ್ತೂರಿನ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿರುತ್ತಾರೆ.
ರಸಪ್ರಶ್ನೆ ಸ್ಪರ್ಧೆಯಲ್ಲಿ ದ್ವಿತೀಯ ವಾಣಿಜ್ಯ ವಿಭಾಗದ ಸ್ವಿನಿಕಾ ವಿಯೋಲಾ ಕ್ರಾಸ್ತಾ ಹಾಗೂ ಧ್ಯಾನ್ ಬಿ ಪ್ರಥಮ, ಪ್ರಾಡಕ್ಟ್ ಇನ್ನೊವೇಟಿವ್ ಚಾಲೆಂಜ್ ಸ್ಪರ್ಧೆಯಲ್ಲಿ ಪ್ರಥಮ ವಾಣಿಜ್ಯ ವಿಭಾಗದ ಶಿವಾನಿ ಹಾಗೂ ಗಾನವಿ ಪ್ರಥಮ, ರಂಗೋಲಿ ಸ್ಪರ್ಧೆಯಲ್ಲಿ ಪ್ರಥಮ ವಾಣಿಜ್ಯ ವಿಭಾಗದ ಅದ್ವಿತಿ ಜಿ ಹಾಗೂ ಎ ಜಿ ಕೃತಿಕಾ ಪ್ರಥಮ ಮತ್ತು ದ್ವಿತೀಯ ವಾಣಿಜ್ಯ ವಿಭಾಗದ ವೇದಿತಾ ಕೆ ಮತ್ತು ತನುಶ್ರೀ ಬಿ ದ್ವಿತೀಯ, ಬಿಸ್ನೆಸ್ ಮಾಡೆಲ್ ಸ್ಪರ್ಧೆಯಲ್ಲಿ ಹೆಫ್ಜಿಬಾ ಎಂ ರಿನ್ಸಾನ್ ಹಾಗೂ ಪ್ರೀತಾ ಎ ದ್ವಿತೀಯ, ಬೆಸ್ಟ್ ಔಟ್ ಆಫ್ ವೇಸ್ಟ್ ಸ್ಪರ್ಧೆಯಲ್ಲಿ ದ್ವಿತೀಯ ವಾಣಿಜ್ಯ ವಿಭಾಗದ ಸಜ್ನಾಜ್ ಮತ್ತು ಹಲೀಮತ್ ಸೌಧ ದ್ವಿತೀಯ ಹಾಗೂ ಮಿನಿ ಮಿಲಿಟಿಯ ಸ್ಪರ್ಧೆಯಲ್ಲಿ ಪ್ರಥಮ ವಾಣಿಜ್ಯ ವಿಭಾಗದ ಶಹಾದ್ ಅಜಾರ್ ಮತ್ತು ಮೊಹಮ್ಮದ್ ರಫಾಜ್ ತೃತೀಯ ಸ್ಥಾನವನ್ನು ಪಡೆದುಕೊಂಡಿರುತ್ತಾರೆ.
ಕಾಲೇಜಿನ ಪ್ರಾಂಶುಪಾಲರಾದ ರೆ.ಫಾ. ಅಶೋಕ್ ರಾಯನ್ ಕ್ರಾಸ್ತಾ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ಪ್ರದರ್ಶನ ಕಲಾ ಸಂಘದ ಸುಮನಾ ರಾವ್, ಉಷಾ ರೈ, ಅವಿನಾ ಮಾಡ್ತಾ, ಡಾ. ಲತಾ ಹಾಗೂ ಸಂದೇಶ್ ಜಾನ್ ಲೋಬೋ ಉಪಸ್ಥಿತರಿದ್ದರು.
Uncategorized
Vivekananda-ವಿವೇಕಾನಂದ ಪದವಿ ಕಾಲೇಜಿನಲ್ಲಿ ‘ಸ್ವಾದಸಂಭ್ರಮ-2026’ ಆಹಾರ ಮೇಳ
ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ (ಸ್ವಾಯತ್ತ) ಮಹಾವಿದ್ಯಾಲಯ, ಇಲ್ಲಿನ ವ್ಯವಹಾರ ಅಧ್ಯಯನ ವಿಭಾಗ ಮತ್ತು ಮ್ಯಾನೇಜ್ಮೆಂಟ್ ಅಸೋಸಿಯೇಷನ್ ವತಿಯಿಂದ ನಡೆದ ‘ಸ್ವಾದಸಂಭ್ರಮ ಆಹಾರ ಮೇಳ-2026’ ಕಾರ್ಯಕ್ರಮವನ್ನು ಉದ್ಘಾಟಿಸಿ ಪುತ್ತೂರಿನ ಪ್ರಾರ್ಥನಾ ಗಾರ್ಡನ್ಸ್ನ ಮಾಲಕ ಧ್ರುವ ಪ್ರಭು ಮಾತನಾಡಿದರು.

ಪುತ್ತೂರು: ಆಹಾರ ಮೇಳ ಕೇವಲ ಆಹಾರ ಮಾರಾಟದ ಬಗ್ಗೆ ಮಾತ್ರವಲ್ಲ. ಇಲ್ಲಿ ವಿದ್ಯಾರ್ಥಿಗಳು ಉದ್ಯಮ ನಡೆಸುವಾಗ ಇರಬೇಕಾದ ಕೌಶಲ್ಯಗಳು, ಗ್ರಾಹಕರ ಮನಸ್ಥಿತಿ ಮತ್ತು ಅವರೊಂದಿಗೆ ವ್ಯವಹರಿಸಬೇಕಾದ ರೀತಿಯನ್ನು ಮೇಳಗಳಿಂದ ತಿಳಿದುಕೊಳ್ಳಬಹುದು. ಇದರ ನಡುವೆ ಬರುವ ಸೋಲು-ಗೆಲುವುಗಳನ್ನು ವಿದ್ಯಾರ್ಥಿಗಳು ಸಮನಾಗಿ ಸ್ವೀಕರಿಸಬೇಕು ಎಂದು ಪುತ್ತೂರಿನ ಪ್ರಾರ್ಥನಾ ಗಾರ್ಡನ್ಸ್ನ ಮಾಲಕ ಧ್ರುವ ಪ್ರಭು ಹೇಳಿದರು.
ಇವರು ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ (ಸ್ವಾಯತ್ತ) ಮಹಾವಿದ್ಯಾಲಯ, ಇಲ್ಲಿನ ವ್ಯವಹಾರ ಅಧ್ಯಯನ ವಿಭಾಗ ಮತ್ತು ಮ್ಯಾನೇಜ್ಮೆಂಟ್ ಅಸೋಸಿಯೇಷನ್ ವತಿಯಿಂದ ನಡೆದ ‘ಸ್ವಾದಸಂಭ್ರಮ ಆಹಾರ ಮೇಳ-2026’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಗೌರವ ಅತಿಥಿ ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕ ಮುರಳಿಕೃಷ್ಣ ಕೆ. ಎನ್. ಮಾತನಾಡಿ, ಉದ್ದಿಮೆಯ ಬಗ್ಗೆ ಸೈದ್ಧಾಂತಿಕವಾಗಿ ಕಲಿತ ವಿಚಾರಗಳು ಇಲ್ಲಿ ಪ್ರಾಯೋಗಿಕವಾಗಿ ನಡೆಯುತ್ತಿದೆ. ಒಂದು ಉದ್ದಿಮೆಯನ್ನು ನಡೆಸಬೇಕಾದರೆ ಅದರಲ್ಲಿರುವಂತಹ ಕಷ್ಟ-ಸುಖಗಳನ್ನು ಅರಿಯಲು ಇಂತಹ ಮೇಳಗಳು ಅಗತ್ಯ ಎಂದು ಹೇಳಿದರು.
ಕಾರ್ಯಕ್ರಮಕ್ಕೆ ಕಾಲೇಜಿನ ಪ್ರಾಂಶುಪಾಲ ಪ್ರೊ. ಶ್ರೀಕೃಷ್ಣ ಗಣರಾಜ್ ಭಟ್ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ವ್ಯವಹಾರ ಆಡಳಿತ ವಿಭಾಗದ ಮುಖ್ಯಸ್ಥೆ ರೇಖಾ ಪಿ. ಉಪಸ್ಥಿತರಿದ್ದರು.
ಸ್ವಾದಸಂಭ್ರಮ ಆಹಾರ ಮೇಳ-2026ರ ವಿಜೇತರು:
ವ್ಯವಹಾರ ಅಧ್ಯಯನ ವಿಭಾಗದ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಈ ಸ್ಪರ್ಧೆಯಲ್ಲಿ ಒಟ್ಟು 14 ತಂಡಗಳು ಭಾಗವಹಿಸಿದ್ದು ಫ್ರೋಜನ್ ಡಿಲೈಟ್ ತಂಡ ಪ್ರಥಮ ಸ್ಥಾನ, ಬೈಟ್ ಬೈ ಬೈಟ್ ದ್ವಿತೀಯ ಸ್ಥಾನ ಪಡೆದುಕೊಂಡಿತು. ಉತ್ತಮ ನೈರ್ಮಲ್ಯ ಕಾಪಾಡುವಿಕೆ ವಿಭಾಗದಲ್ಲಿ ಸ್ವದೇಶೀ ಸ್ವಾದ್ ತಂಡ, ಗ್ರಾಹಕರೊಂದಿಗೆ ಉತ್ತಮ ಸಂವಹನ ವಿಭಾಗದಲ್ಲಿ ಫ್ಲೇವರ್ ತಂಡ, ಉತ್ತಮ ಪೋಸ್ಟರ್ ವಿಭಾಗದಲ್ಲಿ ಫ್ಲೇವರ್ ಹಂಟರ್ಸ್ ತಂಡ ಹಾಗೂ ಉತ್ತಮ ರೀಲ್ಸ್ ವಿಭಾಗದಲ್ಲಿ ಸ್ವದ್ಘಾಮ್ ತಂಡ ಪ್ರಶಸ್ತಿ ಪಡೆದಿಕೊಂಡಿದೆ.
ಕಾರ್ಯಕ್ರಮವನ್ನು ತೃತೀಯ ಕಲಾ ವಿಭಾಗದ ಕೆ. ಕೃತಿಕಾ ನಿರ್ವಹಿಸಿದರು.
Uncategorized
Ashok Rai-ಬದ್ಯಾರ್‌ನಲ್ಲಿ 50 ವರ್ಷದ ರಸ್ತೆ ವಿವಾದಕ್ಕೆ ತೆರೆ ಎಳೆದ ಶಾಸಕ ಅಶೋಕ್ ರೈ
ಕಳೆದ ನಾಲ್ಕು ತಿಂಗಳ ಹಿಂದೆ ಬದ್ಯಾರ್ ಗೆ ಶಾಸಕ ಅಶೋಕ್ ರೈ ಭೇಟಿ ನೀಡಿದ್ದರು. ಅಲ್ಲಿನ ಮನೆಗಳಿಗೆ ರಸ್ತೆಯಿಲ್ಲದೇ ಇರುವುದು ಮತ್ತು ರಸ್ತೆಯ ಅಗತ್ಯತೆಯನ್ನು ಮನಗಂಡಿದ್ದರು. ಭೇಟಿ ನೀಡಿದ ಮಾರನೇ ದಿನ ಖಾಸಗಿ ಜಾಗದ ಮಾಲಕರನ್ನು ಕರೆಸಿ ಮಾತುಕತೆ ನಡೆಸಿದರು. ಒಂದು ಹಂತದಲ್ಲಿ ಮಾತುಕತೆ ಸಫಲವಾದರೂ ರಸ್ತೆ ನಿರ್ಮಾಣ ಕಾಮಗಾರಿ ನಡೆದಿರಲಿಲ್ಲ. ಬಳಿಕ ಎರಡನೇ ಸುತ್ತಿನ ಮಾತುಕತೆಯ ವೇಳೆ ಜಾಗದ ಮಾಲಿಕರು ರಸ್ತೆ ನಿರ್ಮಾಣಕ್ಕೆ ಒಪ್ಪಿಗೆಯನ್ನು ನೀಡಿದ್ದರು. ಒಪ್ಪಿಗೆ ಸೂಚಿತವಾದ ಬಳಿಕ ಅನುದಾನವನ್ನು ಇಟ್ಟು ಅಲ್ಲಿ ರಸ್ತೆ ನಿರ್ಮಾಣ ಕಾಮಗಾರಿಯನ್ನು ಕಳೆದ ವಾರ ಮಾಡಿ ಮುಗಿಸಲಾಗಿದೆ.

ಪುತ್ತೂರು: ಈ ಭಾಗದ ಜನರು ರಸ್ತೆಯಿಲ್ಲದೆ ಸುಮಾರು 50 ವರ್ಷಗಳಿಂದ ತೊಂದರೆಯಲ್ಲಿದ್ದರು, ಇಲ್ಲಿ ಸುಮಾರು ಹತ್ತು ಮನೆಗಳಿದೆ, ಮನೆ ಕಟ್ಟುವಾಗ ಇವರೆಲ್ಲಾ ಕಲ್ಲನ್ನು ಕಾಲು ದಾರಿಯ ಮೂಲಕ ಹೊತ್ತುಕೊಂಡೇ ಹೋಗಿದ್ದು, ವಾಹನ ಹತ್ತ ಬೇಕಾದರೆ ಒಂದಷ್ಟು ದೂರ ನಡೆದುಕೊಂಡೇ ಬರಬೇಕಾದ ಸ್ಥಿತಿ. ಇದು ಪೆರುವಾಯಿ ಗ್ರಾಮದ ಬದ್ಯಾರಿನ ಕಥೆ.
ಇವರು ರಸ್ತೆಗಾಗಿ ಮನವಿ ಹಾಗೂ ಹೋರಾಟವನ್ನು ಮಾಡುತ್ತಲೇ ಇದ್ದರು. ಆದರೆ ರಸ್ತೆ ನಿರ್ಮಾಣವಾಗುವಲ್ಲಿ ಖಾಸಗಿ ಜಾಗದ ತಕರಾರಿತ್ತು. ಈ ವಿವಾದವನ್ನು ಮಾತುಕತೆ ಮೂಲಕ ಇತ್ಯರ್ಥಪಡಿಸಲು ಅನೇಕ ಜನಪ್ರತಿನಿಧಿಗಳು ಪ್ರಯತ್ನ ಮಾಡಿದ್ದರು ಆದರೆ ಯಾರಿದಂಲೂ ಸಾಧ್ಯವಾಗಿಲ್ಲ, ಕೆಲವರು ಭರವಸೆಯನ್ನು ಮಾತ್ರ ಕೊಟ್ಟಿದ್ದರು.
ಶಾಸಕ ಅಶೋಕ್ ರೈ ಭೇಟಿ
ಕಳೆದ ನಾಲ್ಕು ತಿಂಗಳ ಹಿಂದೆ ಬದ್ಯಾರ್ ಗೆ ಶಾಸಕ ಅಶೋಕ್ ರೈ ಭೇಟಿ ನೀಡಿದ್ದರು. ಅಲ್ಲಿನ ಮನೆಗಳಿಗೆ ರಸ್ತೆಯಿಲ್ಲದೇ ಇರುವುದು ಮತ್ತು ರಸ್ತೆಯ ಅಗತ್ಯತೆಯನ್ನು ಮನಗಂಡಿದ್ದರು. ಭೇಟಿ ನೀಡಿದ ಮಾರನೇ ದಿನ ಖಾಸಗಿ ಜಾಗದ ಮಾಲಕರನ್ನು ಕರೆಸಿ ಮಾತುಕತೆ ನಡೆಸಿದರು. ಒಂದು ಹಂತದಲ್ಲಿ ಮಾತುಕತೆ ಸಫಲವಾದರೂ ರಸ್ತೆ ನಿರ್ಮಾಣ ಕಾಮಗಾರಿ ನಡೆದಿರಲಿಲ್ಲ. ಬಳಿಕ ಎರಡನೇ ಸುತ್ತಿನ ಮಾತುಕತೆಯ ವೇಳೆ ಜಾಗದ ಮಾಲಿಕರು ರಸ್ತೆ ನಿರ್ಮಾಣಕ್ಕೆ ಒಪ್ಪಿಗೆಯನ್ನು ನೀಡಿದ್ದರು. ಒಪ್ಪಿಗೆ ಸೂಚಿತವಾದ ಬಳಿಕ ಅನುದಾನವನ್ನು ಇಟ್ಟು ಅಲ್ಲಿ ರಸ್ತೆ ನಿರ್ಮಾಣ ಕಾಮಗಾರಿಯನ್ನು ಕಳೆದ ವಾರ ಮಾಡಿ ಮುಗಿಸಲಾಗಿದೆ.
ಶಾಸಕರಿಗೆ ಸನ್ಮಾನ
ವಿವಾದ ಇತ್ಯರ್ಥಪಡಿಸಿ ೫೦ ವರ್ಷಗಳ ಹಿಂದಿನ ಬಹುದೊಡ್ಡ ಬೇಡಿಕೆಯನ್ನು ಈಡೇರಿಸಿದ ಶಾಸಕರಿಗೆ ಬದ್ಯಾರು ರಸ್ತೆ ಫಲಾನುಭವಿಗಳು ಸನ್ಮಾನವನ್ನು ಮಾಡಿದ್ದಾರೆ.
ಬದ್ಯಾರ್‌ನಿವಾಸಿಗಳು ತಮ್ಮ ಕಷ್ಟವನ್ನು ನನ್ನಲ್ಲಿ ಹೇಳಿಕೊಂಡಿದ್ದರು. ರಸ್ತೆ ಇಲ್ಲದೆ ಹತ್ತು ಕುಟುಂಬಗಳು ಸಂಕಷ್ಟದಲ್ಲಿತ್ತು ಮಾತ್ರವಲ್ಲದೆ ಪಕ್ಕದಲ್ಲೇ ಒಂದು ದೇವಸ್ಥಾನದ ಕಾಮಗಾರಿಯೂ ಅರ್ಧಕ್ಕೆ ನಿಂತಿತ್ತು. ಜಾಗ ಖಾಸಗಿ ವ್ಯಕ್ತಿಗೆ ಸೇರಿದ್ದರಿಂದ ರಸ್ತೆ ನಿರ್ಮಾಣಕ್ಕೆ ತೊಂದರೆಯಾಗಿತ್ತು. ಜಾಗದ ಮಾಲಿಕರನ್ನು ಕರೆಸಿ ಮಾತುಕತೆ ನಡೆಸಿದಾಗ ಅವರು ಮಾನವೀಯ ನೆಲೆಯಲ್ಲಿ ಒಪ್ಪಿಕೊಂಡು ರಸ್ತೆ ನಿರ್ಮಾಣಕ್ಕೆ ಅನುವು ಮಾಡಿಕೊಡುವ ಮೂಲಕ ದೊಡ್ಡ ಪುಣ್ಯದ ಕೆಲಸವನ್ನು ಮಾಡಿದ್ದಾರೆ. ಬೇಡಿಕೆ ಈಡೇರಿಸಿದ್ದೇನೆ, ಅನುದಾನವನ್ನು ನೀಡಿದ್ದೇನೆ ಮುಂದೆ ಅವರೆಲ್ಲರೂ ನನ್ನ ಜೊತೆ ಇರುತ್ತಾರೆ ಎಂಬ ನಂಬಿಕೆಯೂ ಇದೆ
ಅಶೋಕ್ ರೈ, ಶಾಸಕರು ಪುತ್ತೂರು
ರಸ್ತೆ ಸಂಪರ್ಕ ಇಲ್ಲದೆ 50 ವರ್ಷದಿಂದ ಪರದಾಡುತ್ತಿದ್ದೇವೆ, ನಾವು ಬಿಜೆಪಿ ಶಾಸಕರಿಗೆ, ಮುಖಂಡರಿಗಳಿಗೆ ಮನವಿ ಮಾಡಿದ್ದೆವು, ನಾವು ಬಿಜೆಪಿ ಕಾರ್ಯಕರ್ತರಾದರೂ ನಮ್ಮ ಬೇಡಿಕೆಯನ್ನು ಅವರು ಈಡೇರಿಸಿರಲಿಲ್ಲ. ನಾವು ಶಾಸಕ ಅಶೋಕ್ ರೈ ಕಚೇರಿಗೆ ಈ ವಿಚಾರವನ್ನು ತಿಳಿಸಲು ಹೋದಾಗ ಕೆಲವರು ನಮ್ಮನ್ನು ಛೇಡಿಸಿದ್ದರು. ನೀವು ಬಿಜೆಪಿ ಕಾರ್ಯಕರ್ತರಾದ ಕಾರಣ ನಿಮ್ಮ ಕೆಲಸ ಶಾಸಕರು ಮಾಡುವುದಿಲ್ಲ ಎಂದು ಹೇಳಿದ್ದರು. ಆದರೆ ಶಾಸಕರು ಪಕ್ಷ ರಾಜಕೀಯ ಮಾಡದೆ ನಮ್ಮ ಬೇಡಿಕೆಯನ್ನು ಈಡೇರಿಸಿದ್ದಾರೆ, ನಾವು ಮುಂದೆ ಅಶೋಕ್ ರೈ ಜೊತೆ ಇರುತ್ತೇವೆ, ಶಾಸಕರು ಮಾಡಿದ ಈ ಉಪಕಾರವನ್ನು ಮರೆಯುವುದೇ ಇಲ್ಲ.
ಜಯರಾಮ, ಬದ್ಯಾರ್ ಫಲಾನುಭವಿ
ಯಾವ ಜನಪ್ರತಿನಿಧಿಯಿಂದಲೂ ಮಾಡಲಾಗದ ಕೆಲಸವನ್ನು ಶಾಸಕ ಅಶೋಕ್ ರೈ ಮಾಡಿದ್ದಾರೆ. ಪಕ್ಷ ಬೇದವಿಲ್ಲದೆ ಬೇಡಿಕೆಯನ್ನು ಈಡೇರಿಸಿದ್ದಾರೆ, ಇವರು ಮುಂದೆಯೂ ಶಾಸಕರಾಗಿ ಆಯ್ಕೆಯಾಗುವಲ್ಲಿ ನಾವು ಖಂಡಿತಾ ಕೆಲಸ ಮಾಡುತ್ತೇವೆ.
ಶೀಲಾ ರೈ , ಫಲಾನುಭವಿ
-
ಮಂಗಳೂರು7 hours agoMangalore-ಮಂಗಳೂರು : 2 ತಿಂಗಳ ಬಳಿಕ ಸಮಾಧಿಯಿಂದ ಹೊರಬರಲಿದೆ ಆಲ್ಬರ್ಟ್ ರೇಗೋ ಶವ..!; ಮಗಳಿಂದಲೇ ತಂದೆಯ ಕೊಲೆ : ಸ್ನೇಹಿತನ ಆರೋಪ – ತನಿಖೆಗೆ ಸಿಗಲಿದೆ ಮಹತ್ವದ ತಿರುವು
-
ಅಪರಾಧ10 hours agoRaid-ರಾಜ್ಯದ 45 ಐಸ್ಕ್ರೀಂ ಘಟಕಗಳ ಮೇಲೆ ದಾಳಿ: 4 ಕಡೆ ನಿಯಮ ಉಲ್ಲಂಘನೆ, ಅವಧಿ ಮೀರಿದ ಪದಾರ್ಥ ಪತ್ತೆ..!
-
ಸ್ಥಳೀಯ12 hours agoGanja-ಸಾಗರದ ಲಾಡ್ಜ್ನಲ್ಲಿ ಗಾಂಜಾ ಸೇವನೆ: ಯುವತಿ ಸೇರಿ ನಾಲ್ವರು ವಶಕ್ಕೆ – ಗಾಂಜಾ ಸಾಗಾಟಗಾರನ ಮಾಹಿತಿ ಬಿಚ್ಚಿಟ್ಟ ಯುವತಿ..!
-
ಬಿಗ್ ನ್ಯೂಸ್12 hours agoAYUSH Federation-ಡಾ. ಪ್ರದೀಪ್ ನಾವೂರು ಅವರ ಆರೋಗ್ಯ ಕ್ಲಿನಿಕ್ ಗೆ ಬೆಂಕಿ : ಆಯುಷ್ ಫೆಡರೇಶನ್ ತೀವ್ರ ಖಂಡನೆ
-
ಅಪರಾಧ12 hours agoUdupi-ಭೂಗತ ಪಾತಕಿ ಹೇಮಂತ್ ಪೂಜಾರಿ ಹೆಸರಿನಲ್ಲಿ ಬೆದರಿಕೆ ಕರೆ : ಉಡುಪಿ, ಮೂಲ್ಕಿಯಲ್ಲಿ 4 ಪ್ರಕರಣ ದಾಖಲು
-
ಸಿನೆಮಾ11 hours agoNana Patekar-ನಾನಾ ಪಾಟೇಕರ್ ಸಾವಿಗೆ ನಿಖರ ಕಾರಣವೇನು? ಗೋವಾ ಪೊಲೀಸರಿಂದ ಅಸಹಜ ಸಾವು ಪ್ರಕರಣ ದಾಖಲು
-
ಅಪರಾಧ7 hours agoMangalore-ವಾಟರ್ ಪ್ಯೂರಿಫೈಯರ್ ಒಳಗೆ ಕೋಟ್ಯಾಂತರ ರೂ ಮೌಲ್ಯದ ಡ್ರಗ್ಸ್- ಕೋರಿಯರ್ ಮೂಲಕ ಸಾಗಾಟ | ಪೊಲೀಸರ ಕಣ್ಣಿಗೆ ಮಣ್ಣೆರೆಚುವ ಯತ್ನ ಮಂಗಳೂರಿನಲ್ಲಿ ವಿಫಲ – ಮೂವರ ಬಂಧನ..!
-
ಬಿಗ್ ನ್ಯೂಸ್11 hours agoGreen card-ಇನ್ಫೋಸಿಸ್, ಟಿಸಿಎಸ್ ಸೇರಿ 8 ಐಟಿ ಕಂಪನಿಗಳಿಗೆ ಅಮೆರಿಕದ ಗ್ರೀನ್ ಕಾರ್ಡ್ ಪ್ರಕ್ರಿಯೆ ಸ್ಥಗಿತ


















