ನೆಲ್ಲಿಕಟ್ಟೆಯಿಂದ ಮುಗುಳಿ ಗಡಿ ವರೆಗಿನ ರಸ್ತೆ ಸುಮಾರು 3.4ಕಿ. ಮೀ. ಇದ್ದು, ಇಲಾಖೆಯ ಮಾಹಿತಿಯ ಪ್ರಕಾರ ಧಾರಣಾ ಸಾಮರ್ಥ್ಯ […]" /> ನೆಲ್ಲಿಕಟ್ಟೆಯಿಂದ ಮುಗುಳಿ ಗಡಿ ವರೆಗಿನ ರಸ್ತೆ ಸುಮಾರು 3.4ಕಿ. ಮೀ. ಇದ್ದು, ಇಲಾಖೆಯ ಮಾಹಿತಿಯ ಪ್ರಕಾರ ಧಾರಣಾ ಸಾಮರ್ಥ್ಯ […]"> Vitla-ವಿಟ್ಲ: ಹದಗೆಟ್ಟ ರಸ್ತೆ ಸರಿಪಡಿಸಲು ಆಗ್ರಹಿಸಿ ಸಾರ್ವಜನಿಕರಿಂದ ಬೃಹತ್ ಪ್ರತಿಭಟನೆ; ನೆಲ್ಲಿಕಟ್ಟೆ ಜಂಕ್ಷನ್ ನಲ್ಲಿ ವಾಹನ ಸಂಚಾರ ತಡೆದು ಆಕ್ರೋಶ - Nikhara News | Kannada News Website
Connect with us

ಬಿಗ್ ನ್ಯೂಸ್

Vitla-ವಿಟ್ಲ: ಹದಗೆಟ್ಟ ರಸ್ತೆ ಸರಿಪಡಿಸಲು ಆಗ್ರಹಿಸಿ ಸಾರ್ವಜನಿಕರಿಂದ ಬೃಹತ್ ಪ್ರತಿಭಟನೆ; ನೆಲ್ಲಿಕಟ್ಟೆ ಜಂಕ್ಷನ್ ನಲ್ಲಿ ವಾಹನ ಸಂಚಾರ ತಡೆದು ಆಕ್ರೋಶ

Published

on

Ad Widget

Ad Widget

Ad Widget

Ad Widget

ಕನ್ಯಾನ-ಮುಗುಳಿ-ಉಪ್ಪಳ ಅಂತರಾಜ್ಯ ರಸ್ತೆಯಲ್ಲಿ ಧಾರಣಾ ಸಾಮರ್ಥ್ಯಕ್ಕಿಂತ ಹೆಚ್ಚಿನ ಲಾರಿಗಳು ಸಂಚರಿಸಿ, ರಸ್ತೆ ಸಂಪೂರ್ಣ ಹದಗೆಟ್ಟು ಹೋಗಿರುವುದನ್ನು ಖಂಡಿಸಿ ಸ್ಥಳೀಯರು ನೆಲ್ಲಿಕಟ್ಟೆ ಜಂಕ್ಷನಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.

Ad Widget

Ad Widget

Ad Widget

Ad Widget

ವಿಟ್ಲ: ಕನ್ಯಾನ-ಮುಗುಳಿ-ಉಪ್ಪಳ ಅಂತರಾಜ್ಯ ರಸ್ತೆಯಲ್ಲಿ ಧಾರಣಾ ಸಾಮರ್ಥ್ಯಕ್ಕಿಂತ ಹೆಚ್ಚಿನ ಲಾರಿಗಳು ಸಂಚರಿಸಿ, ರಸ್ತೆ ಸಂಪೂರ್ಣ ಹದಗೆಟ್ಟು ಹೋಗಿರುವುದನ್ನು ಖಂಡಿಸಿ ಸ್ಥಳೀಯರು ನೆಲ್ಲಿಕಟ್ಟೆ ಜಂಕ್ಷನಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.

Ad Widget

Ad Widget alt="Ad Widget"/>

Ad Widget

ನೆಲ್ಲಿಕಟ್ಟೆಯಿಂದ ಮುಗುಳಿ ಗಡಿ ವರೆಗಿನ ರಸ್ತೆ ಸುಮಾರು 3.4ಕಿ. ಮೀ. ಇದ್ದು, ಇಲಾಖೆಯ ಮಾಹಿತಿಯ ಪ್ರಕಾರ ಧಾರಣಾ ಸಾಮರ್ಥ್ಯ ಗರಿಷ್ಠ 18 ಟನ್ ಆಗಿದೆ. ಕಾನೂನು ಪ್ರಕಾರ ಅಧಿಕ ಭಾರದ ಸರಕು ವಾಹನ ಸಂಚಾರ ನಿಷೇಧಿಸಿ ಸೂಕ್ತ ಅಧಿಕಾರಿಗಳು ನಿರ್ದೇಶನ ನೀಡಿ, ಸೂಚನಾ ಫಲಕವನ್ನು ಅಳವಡಿಸಬೇಕು. ಗಣಿ ಇಲಾಖೆಯಿಂದ ಅಂಗೀಕೃತ ಕೆಂಪುಕಲ್ಲಿನ ಹುಡಿ ಸಾಗಿಸುವ ಅಧಿಕ ಸಾಮರ್ಥ್ಯದ ಸರಕು ವಾಹನ ಸಂಚಾರಕ್ಕೆ ರಸ್ತೆಯನ್ನು ಯೋಗ್ಯವಾಗುವಂತೆ ಅಭಿವೃದ್ಧಿಗೊಳಿಸಲು ಸಂಬಂಧ ಪಟ್ಟವರಿಗೆ ಮನವರಿಕೆ ಮಾಡಬೇಕು. ಹಗಲು ಹೊತ್ತಿನಲ್ಲಿ ಶಾಲಾ ಮಕ್ಕಳು ಸೇರಿದಂತೆ ಸಾರ್ವಜನಿಕರ ಸುಲಲಿತ ಸಂಚಾರಕ್ಕೆ ಅಪಾಯಕಾರಿಯಾಗಿ ಸಂಚರಿಸುವ ಘನ ವಾಹನ ಸಂಚಾರವನ್ನು ನಿಷೇಧಿಸಲು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸುವಂತೆ ಆಗ್ರಹ ವ್ಯಕ್ತವಾಯಿತು.

Ad Widget

Ad Widget <> Ad Widget

ಮುಗುಳಿಯಲ್ಲಿ ಬೆಳಗ್ಗೆ ಮರ ಬಿದ್ದು ಕೆಲವು ಸಮಯದವರೆಗೆ ಸಂಚಾರ ಸಂಪೂರ್ಣ ಸ್ಥಗಿತವಾಗಿತ್ತು. ಪ್ರತಿಭಟನೆಯನ್ನು ಬೆಂಬಲಿಸಿ ಕನ್ಯಾನ ಉಪ್ಪಳ ನಡುವೆ ಸಂಚರಿಸುವ ಬಸ್ಸು, ಅಟೋರಿಕ್ಷಾ, ವಾಣಿಜ್ಯ ವಾಹನ ಸಂಚಾರ ಸ್ವಯಂ ಪ್ರೇರಿತವಾಗಿ ನಿಲುಗಡೆಯಾಗಿತ್ತು. ಪ್ರತಿಭಟನಾ ಸ್ಥಳಕ್ಕೆ ಜಿಲ್ಲಾ ಪಂಚಾಯಿತಿ ಸಹಾಯಕ ಇಂಜಿನಿಯರ್ ಜಗದೀಶ್, ಬಂಟ್ವಾಳ ಪ್ರಾದೇಶಿಕ ಸಾರಿಗೆ ಇಲಾಖೆಯ ಮೋಟಾರು ವಾಹನ ನಿರೀಕ್ಷಕ ಪ್ರಮೋದ್ ಎಂ. ಭಟ್, ಸಚಿನ್ ಸ್ಥಳಕ್ಕಾಗಮಿಸಿ ಅಗತ್ಯ ಕ್ರಮದ ಭರವಸೆಯನ್ನು ನೀಡಿದ ಹಿನ್ನಲೆಯಲ್ಲಿ ಪ್ರತಿಭಟನೆಯನ್ನು ಹಿಂಪಡೆಯಲಾಯಿತು.

ಕರೋಪಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸೂರ್ಯಕಾಂತಿ, ಉಪಾಧ್ಯಕ್ಷ ಅನ್ವರ್ ಕರೋಪಾಡಿ, ಕನ್ಯಾನ ಗ್ರಾಮ ಪಂಚಾಯಿತಿ ಸದಸ್ಯರಾದ ಕೆ. ಪಿ. ರಘುರಾಮ ಶೆಟ್ಟಿ, ಅಬ್ದುಲ್ ಮಜೀದ್, ಪ್ರಮುಖರಾದ ಮೊದು ಕುಂಞಿ ಮಂಡ್ಯೂರು, ಶ್ರೀನಿವಾಸ ಭಟ್ ಕಮ್ಮಾಜೆ, ಇಸ್ಮೈಲ್ ಬಂಡಿತಡ್ಕ, ಸ್ಥಳೀಯರಾದ ವೆಂಕಟರಮಣ ಬೆಟ್ಟ ಪಾದೇಕಲ್ಲು, ಗಣೇಶ್ ಮಂಡ್ಯೂರು, ಡಾ. ರಾಮಚಂದ್ರ ಕೆ, ಸಫ್ವಾನ್ ಪಾಡಿ, ತಾರಾನಾಥ ಒಡಿಯೂರು, ಅಬ್ದುಲ್ ಹಮೀದ್ ಪಾದೆಕಲ್ಲು, ಅಬ್ದುಲ್ ಹಕೀಂ ಪಾದೆಕಲ್ಲು, ಆನಂದ ಪಾದೆಕಲ್ಲು, ರಾಧಾಕೃಷ್ಣ ಒಡಿಯೂರು, ಶರೀಫ್ ಕರೋಪಾಡಿ, ಶಾಕಿರ್ ಸಮಡ್ಕ, ಕುಂಞಿ ಮೋನು ಮಂಡ್ಯೂರು, ಸುರೇಶ್ ಪಾದೆಕಲ್ಲು, ವಿಶ್ವನಾಥ ಪಾದೆಕಲ್ಲು, ಮೀನಾಕ್ಷಿ ಚೆಲ್ಲಂಗಾರು, ಭಾರತಿ ಚೆಲ್ಲಂಗಾರು, ಶಕುಂತಲಾ ಚೆಲ್ಲಂಗಾರು ಮತ್ತಿತರರು ಹಾಜರಿದ್ದರು. ಮೊಯಿದು ಕುಂಞಿ ಪಾದೆಕಲ್ಲು ಕಾರ್ಯಕ್ರಮ ನಿರ್ವಹಿಸಿದರು.

Ad Widget

Ad Widget

ಕರ್ನಾಟಕ-ಕೇರಳ ಗಡಿ ಸಂಪರ್ಕದ ರಸ್ತೆ ಗಂಭೀರವಾಗಿ ಪೂರ್ಣ ಹದಗೆಟ್ಟು ವಾಹನ ಸಂಚಾರಕ್ಕೆ ಮಾತ್ರವಲ್ಲ ನಡೆದುಕೊಂಡು ಹೋಗಲು ಆಗದ ಶೋಚನೀಯ ಸ್ಥಿತಿಯಲ್ಲಿ ಕಳೆದ ಹಲವು ತಿಂಗಳುಗಳಿಂದ ಇದೆ. ರಸ್ತೆ ಬಳಕೆದಾರರು ಹಲವು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಈ ಬಗ್ಗೆ ದೂರು ನೀಡಿದರೂ ಯಾರೂ ಸ್ಪಂದಿಸುತ್ತಿಲ್ಲ. ಈ ರಸ್ತೆಯಲ್ಲಿ 30ರಿಂದ 40 ಟನ್ ಭಾರಹೊತ್ತ ಮಣ್ಣು ಸಾಗಾಟದ ಲಾರಿಗಳು ನಿರಂತರ ಸಂಚರಿಸುತ್ತಿದೆ. ಇದು ಜಿಲ್ಲಾ ಪಂಚಾಯಿತಿ ಗ್ರಾಮಾಂತರ ರಸ್ತೆಯಾಗಿದ್ದು, ಇಲ್ಲಿ ಸರಕು ಸಾಗಾಟ ಮಾಡುವ ವಾಹನಗಳ ಮಿತಿ 16 ಟನ್ ಮಾತ್ರ ಎಂದು ಅಧಿಕಾರಿಗಳು ಲಿಖಿತವಾಗಿ ತಿಳಿಸಿದ್ದಾರೆ. ಸಾರ್ವಜನಿಕರಿಗೆ ತೊಂದರೆ ಆಗದ ರೀತಿಯಲ್ಲಿ ರಸ್ತೆಯನ್ನು ಪೂರ್ಣ ಸರಿಪಡಿಸಬೇಕು. ಹೋರಾಟ ತೀವ್ರ ಸ್ವರೂಪ ಪಡೆಯುವ ಮೊದಲು ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳಬೇಕು.
-ಶ್ರೀ ಗುರುದೇವಾನಂದ ಸ್ವಾಮೀಜಿ, ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್

Ad Widget
Click to comment

Leave a Reply

ಅಂತರ ರಾಜ್ಯ

Insurance policy-ವಿಮೆ ಇಲ್ಲದ ವಾಹನಗಳಿಗೆ ಕಡಿವಾಣ: ಹೊಸ ನಿಯಮ ಜಾರಿಗೆ ಕೇಂದ್ರ ಚಿಂತನೆ; ಕಾರಿಗೆ 4 ವರ್ಷ, ಬೈಕ್‌ಗೆ 6 ವರ್ಷಗಳ ವಿಮೆ

Published

on

Ad Widget

Ad Widget

Ad Widget

Ad Widget

ವಿಮೆ ಇಲ್ಲದೆ ರಸ್ತೆಗಿಳಿಯುವ ವಾಹನಗಳ ಸಮಸ್ಯೆಗೆ ಕಡಿವಾಣ ಹಾಕುವ ಉದ್ದೇಶದಿಂದ ಕೇಂದ್ರ ರಸ್ತೆ ಸಾರಿಗೆ ಸಚಿವಾಲಯವು ಹೊಸ ಕ್ರಮಗಳನ್ನು ಜಾರಿಗೆ ತರಲು ಚಿಂತನೆ ನಡೆಸಿದೆ. ಇದರ ಭಾಗವಾಗಿ ಕಾರುಗಳಿಗೆ ನಾಲ್ಕು ವರ್ಷ ಹಾಗೂ ದ್ವಿಚಕ್ರ ವಾಹನಗಳಿಗೆ ಆರು ವರ್ಷಗಳ ವಿಮಾ ಪಾಲಿಸಿಯನ್ನು ಪರಿಚಯಿಸುವ ಪ್ರಸ್ತಾವವಿದ್ದು, ಈ ಅವಧಿಗೆ ಅನ್ವಯವಾಗುವ ಪ್ರೀಮಿಯಂ ಅನ್ನು ಒಂದೇ ಬಾರಿಗೆ ಪಾವತಿಸುವ ವ್ಯವಸ್ಥೆ ರೂಪಿಸುವ ಕುರಿತು ಚರ್ಚೆ ನಡೆಯುತ್ತಿದೆ.

Ad Widget

Ad Widget

Ad Widget

Ad Widget

ಹೊಸದಿಲ್ಲಿ, ನ.25: ವಿಮೆ ಇಲ್ಲದೆ ರಸ್ತೆಗಿಳಿಯುವ ವಾಹನಗಳ ಸಮಸ್ಯೆಗೆ ಕಡಿವಾಣ ಹಾಕುವ ಉದ್ದೇಶದಿಂದ ಕೇಂದ್ರ ರಸ್ತೆ ಸಾರಿಗೆ ಸಚಿವಾಲಯವು ಹೊಸ ಕ್ರಮಗಳನ್ನು ಜಾರಿಗೆ ತರಲು ಚಿಂತನೆ ನಡೆಸಿದೆ. ಇದರ ಭಾಗವಾಗಿ ಕಾರುಗಳಿಗೆ ನಾಲ್ಕು ವರ್ಷ ಹಾಗೂ ದ್ವಿಚಕ್ರ ವಾಹನಗಳಿಗೆ ಆರು ವರ್ಷಗಳ ವಿಮಾ ಪಾಲಿಸಿಯನ್ನು ಪರಿಚಯಿಸುವ ಪ್ರಸ್ತಾವವಿದ್ದು, ಈ ಅವಧಿಗೆ ಅನ್ವಯವಾಗುವ ಪ್ರೀಮಿಯಂ ಅನ್ನು ಒಂದೇ ಬಾರಿಗೆ ಪಾವತಿಸುವ ವ್ಯವಸ್ಥೆ ರೂಪಿಸುವ ಕುರಿತು ಚರ್ಚೆ ನಡೆಯುತ್ತಿದೆ.

Ad Widget

Ad Widget alt="Ad Widget"/>

Ad Widget

ಪ್ರಸ್ತುತ ಹೊಸ ವಾಹನ ಖರೀದಿಸುವಾಗ ನೀಡಲಾಗುವ ವಿಮೆಯ ಅವಧಿ ಮುಗಿದ ಬಳಿಕ ಪ್ರತಿ ವರ್ಷ ವಿಮೆಯನ್ನು ನವೀಕರಿಸಬೇಕಾಗುತ್ತದೆ. ಆದರೆ ಅನೇಕ ವಾಹನ ಮಾಲೀಕರು ವಿಮೆ ನವೀಕರಿಸದೆ ವಾಹನ ಚಲಾಯಿಸುತ್ತಿರುವುದರಿಂದ ಈ ಸಮಸ್ಯೆ ನಿವಾರಿಸಲು ದೀರ್ಘಾವಧಿಯ ವಿಮಾ ಪಾಲಿಸಿಯನ್ನು ಪರಿಚಯಿಸುವ ಚಿಂತನೆ ನಡೆದಿದೆ.

Ad Widget

Ad Widget <> Ad Widget

ಇದರೊಂದಿಗೆ, ಹಿಂದಿನ ವರ್ಷ ವಾಹನದ ವಿರುದ್ಧ ದಾಖಲಾಗಿರುವ ನಿರ್ದಿಷ್ಟ ಸಂಚಾರ ನಿಯಮ ಉಲ್ಲಂಘನೆಗಳ ಆಧಾರದ ಮೇಲೆ ವಿಮಾ ಪ್ರೀಮಿಯಂ ಹೆಚ್ಚಿಸುವ ಪ್ರಸ್ತಾವವೂ ಇದೆ.

ಏನೇನು ಪ್ರಸ್ತಾವಗಳಿವೆ?

Ad Widget

Ad Widget
  • ಕಾರುಗಳಿಗೆ ನಾಲ್ಕು ವರ್ಷ ಹಾಗೂ ದ್ವಿಚಕ್ರ ವಾಹನಗಳಿಗೆ ಆರು ವರ್ಷಗಳ ವಿಮಾ ಪಾಲಿಸಿ ಪರಿಚಯಿಸುವ ಚಿಂತನೆ.
  • ವಿಮೆಯ ಸಂಪೂರ್ಣ ಅವಧಿಗೆ ಅನ್ವಯವಾಗುವ ಪ್ರೀಮಿಯಂ ಅನ್ನು ಒಂದೇ ಬಾರಿಗೆ ಪಾವತಿಸುವ ವ್ಯವಸ್ಥೆ.
  • ಹಿಂದಿನ ವರ್ಷ ವಾಹನದ ವಿರುದ್ಧ ದಾಖಲಾಗಿರುವ ಸಂಚಾರ ನಿಯಮ ಉಲ್ಲಂಘನೆಗಳ ಆಧಾರದ ಮೇಲೆ ವಿಮಾ ಪ್ರೀಮಿಯಂ ಹೆಚ್ಚಳ.
  • ‘ವಿಮೆ ಇಲ್ಲದಿದ್ದರೆ ಇಂಧನವಿಲ್ಲ’ ಅಭಿಯಾನ ಆರಂಭಿಸುವಂತೆ ಸುಪ್ರೀಂಕೋರ್ಟ್‌ನ ರಸ್ತೆ ಸುರಕ್ಷತಾ ಸಮಿತಿ ಸೂಚನೆ.
  • ಈ ಅಭಿಯಾನವನ್ನು ಪ್ರಾಯೋಗಿಕವಾಗಿ ಹರಿಯಾಣ ಮತ್ತು ಉತ್ತರ ಪ್ರದೇಶದ ತಲಾ ಐದು ಪೆಟ್ರೋಲ್ ಬಂಕ್‌ಗಳಲ್ಲಿ ಆರಂಭಿಸಲು ಸಲಹೆ.
  • ಪೆಟ್ರೋಲ್ ಬಂಕ್‌ಗಳಲ್ಲಿ ವಾಹನಗಳ ನಂಬರ್ ಪ್ಲೇಟ್ ಆಧರಿಸಿ ಕ್ಯಾಮೆರಾಗಳ ಮೂಲಕ ವಿಮೆಯ ಮಾನ್ಯತೆಯನ್ನು ಪರಿಶೀಲಿಸುವ ವ್ಯವಸ್ಥೆ.
Ad Widget
Continue Reading

ಬಿಗ್ ನ್ಯೂಸ್

Tulu language-ತುಳು ಭಾಷೆ ಅನುಷ್ಠಾನಕ್ಕೆ ಸರ್ಕಾರದಿಂದ ಅಧಿಕೃತ ಆದೇಶ; ಸರ್ಕಾರಿ ಕಚೇರಿಗಳಲ್ಲೂ ತುಳುವಿಗೆ ಮನ್ನಣೆ..!

Published

on

Ad Widget

Ad Widget

Ad Widget

Ad Widget

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಗೆ ಸೀಮಿತವಾಗಿ ತುಳು ಭಾಷೆಯನ್ನು ರಾಜ್ಯದ ಎರಡನೇ ಭಾಷೆಯಾಗಿ ಪರಿಗಣಿಸುವ ನಿರ್ಧಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಆಡಳಿತಾತ್ಮಕ ಅನುಷ್ಠಾನಕ್ಕೆ ಅಧಿಕೃತ ಆದೇಶ ಹೊರಡಿಸಿದೆ.

Ad Widget

Ad Widget

Ad Widget

Ad Widget

ಬೆಂಗಳೂರು: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಗೆ ಸೀಮಿತವಾಗಿ ತುಳು ಭಾಷೆಯನ್ನು ರಾಜ್ಯದ ಎರಡನೇ ಭಾಷೆಯಾಗಿ ಪರಿಗಣಿಸುವ ನಿರ್ಧಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಆಡಳಿತಾತ್ಮಕ ಅನುಷ್ಠಾನಕ್ಕೆ ಅಧಿಕೃತ ಆದೇಶ ಹೊರಡಿಸಿದೆ.

Ad Widget

Ad Widget alt="Ad Widget"/>

Ad Widget

ಕಳೆದ ತಿಂಗಳು ಮಂಗಳೂರಿನಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ತುಳು ಭಾಷೆಗೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಗೆ ಸೀಮಿತವಾಗಿ ರಾಜ್ಯದ ಎರಡನೇ ಭಾಷೆಯ ಸ್ಥಾನಮಾನ ನೀಡಲು ಅನುಮೋದನೆ ನೀಡಲಾಗಿತ್ತು. ಇದರ ಮುಂದುವರಿದ ಭಾಗವಾಗಿ ಬುಧವಾರ ಸರ್ಕಾರ ಅನುಷ್ಠಾನಕ್ಕೆ ಸಂಬಂಧಿಸಿದ ಮಾರ್ಗಸೂಚಿಗಳನ್ನು ಪ್ರಕಟಿಸಿದೆ.

Ad Widget

Ad Widget <> Ad Widget

ಹೊಸ ಆದೇಶದ ಪ್ರಕಾರ, ತುಳು ಭಾಷೆಯನ್ನು ಕನ್ನಡ ಲಿಪಿಯಲ್ಲಿ ಬಳಸಬೇಕಾಗಿದೆ. ಜಿಲ್ಲಾಡಳಿತ ಕಚೇರಿಗಳಲ್ಲಿ ತುಳು ಭಾಷೆ ಅನುಷ್ಠಾನಕ್ಕಾಗಿ ಪ್ರತ್ಯೇಕ ಘಟಕ ಸ್ಥಾಪಿಸುವುದರ ಜೊತೆಗೆ ತುಳು ಭಾಷಾಂತರಕಾರರನ್ನು ನೇಮಕ ಮಾಡಿಕೊಳ್ಳಲು ಸೂಚಿಸಲಾಗಿದೆ.

ಇದಲ್ಲದೆ, ಸಾರ್ವಜನಿಕರು ಸಲ್ಲಿಸುವ ಮನವಿ ಹಾಗೂ ಅರ್ಜಿಗಳನ್ನು ತುಳು ಭಾಷೆಯಲ್ಲಿಯೂ ಸ್ವೀಕರಿಸಬೇಕು. ಅವುಗಳಿಗೆ ನೀಡುವ ಉತ್ತರಗಳನ್ನು ಕನ್ನಡದ ಜೊತೆಗೆ ತುಳು ಭಾಷೆಯಲ್ಲಿಯೂ ಒದಗಿಸಬೇಕು ಎಂದು ಸರ್ಕಾರ ಆದೇಶದಲ್ಲಿ ತಿಳಿಸಿದೆ.

Ad Widget

Ad Widget

ಈ ಮೂಲಕ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಆಡಳಿತ ವ್ಯವಸ್ಥೆಯಲ್ಲೂ ತುಳು ಭಾಷೆಯ ಬಳಕೆಗೆ ಅಧಿಕೃತವಾಗಿ ಅವಕಾಶ ಕಲ್ಪಿಸಿದಂತಾಗಿದೆ.

Ad Widget
Continue Reading

ಅಂತರ ರಾಜ್ಯ

WhatsApp-ವಾಟ್ಸಾಪ್‌ನಲ್ಲಿ ಬಂತು ಹೊಸ ಫೀಚರ್; ಎರಡು ವಾರ ಮೊದಲೇ ಮೆಸೇಜ್ ಟೈಪ್ ಮಾಡಿ ಶೆಡ್ಯೂಲ್ ಮಾಡುವ ಅವಕಾಶ..!

Published

on

Ad Widget

Ad Widget

Ad Widget

Ad Widget

ಜನಪ್ರಿಯ ಮೆಸೇಜಿಂಗ್ ಆ್ಯಪ್ ವಾಟ್ಸಾಪ್ ತನ್ನ ಬಳಕೆದಾರರ ಬಹುದಿನಗಳ ಬೇಡಿಕೆಯಾಗಿದ್ದ ಹೊಸ ಸೌಲಭ್ಯವೊಂದನ್ನು ಪರಿಚಯಿಸುತ್ತಿದೆ. ಇನ್ಮುಂದೆ ಬಳಕೆದಾರರು ತಾವು ಕಳುಹಿಸಬೇಕಾದ ಸಂದೇಶಗಳನ್ನು ಮೊದಲೇ ಟೈಪ್ ಮಾಡಿ, ನಿರ್ದಿಷ್ಟ ದಿನಾಂಕ ಮತ್ತು ಸಮಯಕ್ಕೆ ಸ್ವಯಂಚಾಲಿತವಾಗಿ ತಲುಪುವಂತೆ ಶೆಡ್ಯೂಲ್ ಮಾಡಬಹುದು.

Ad Widget

Ad Widget

Ad Widget

Ad Widget

ನವದೆಹಲಿ: ಜನಪ್ರಿಯ ಮೆಸೇಜಿಂಗ್ ಆ್ಯಪ್ ವಾಟ್ಸಾಪ್ ತನ್ನ ಬಳಕೆದಾರರ ಬಹುದಿನಗಳ ಬೇಡಿಕೆಯಾಗಿದ್ದ ಹೊಸ ಸೌಲಭ್ಯವೊಂದನ್ನು ಪರಿಚಯಿಸುತ್ತಿದೆ. ಇನ್ಮುಂದೆ ಬಳಕೆದಾರರು ತಾವು ಕಳುಹಿಸಬೇಕಾದ ಸಂದೇಶಗಳನ್ನು ಮೊದಲೇ ಟೈಪ್ ಮಾಡಿ, ನಿರ್ದಿಷ್ಟ ದಿನಾಂಕ ಮತ್ತು ಸಮಯಕ್ಕೆ ಸ್ವಯಂಚಾಲಿತವಾಗಿ ತಲುಪುವಂತೆ ಶೆಡ್ಯೂಲ್ ಮಾಡಬಹುದು.

Ad Widget

Ad Widget alt="Ad Widget"/>

Ad Widget

ಹುಟ್ಟುಹಬ್ಬದ ಶುಭಾಶಯಗಳು, ವಿಶೇಷ ದಿನಗಳ ಸಂದೇಶಗಳು, ಪ್ರಮುಖ ನೆನಪಿನ ಸೂಚನೆಗಳು ಸೇರಿದಂತೆ ವಿವಿಧ ಸಂದೇಶಗಳನ್ನು ಸಮಯಕ್ಕೆ ಸರಿಯಾಗಿ ಕಳುಹಿಸಲು ಈ ಸೌಲಭ್ಯ ಸಹಕಾರಿಯಾಗಲಿದೆ. ವೈಯಕ್ತಿಕ ಚಾಟ್‌ಗಳು ಹಾಗೂ ಗ್ರೂಪ್ ಚಾಟ್‌ಗಳೆರಡರಲ್ಲೂ ಈ ಆಯ್ಕೆ ಲಭ್ಯವಾಗಲಿದೆ ಎಂದು ಮೆಟಾ ಸಂಸ್ಥೆ ತಿಳಿಸಿದೆ.

Ad Widget

Ad Widget <> Ad Widget

ಒಮ್ಮೆ ಸಂದೇಶವನ್ನು ಶೆಡ್ಯೂಲ್ ಮಾಡಿದರೆ ಸಾಕು, ನಿಗದಿತ ಸಮಯದಲ್ಲಿ ಬಳಕೆದಾರರು ವಾಟ್ಸಾಪ್ ತೆರೆಯದಿದ್ದರೂ ಸಂದೇಶ ಸ್ವಯಂಚಾಲಿತವಾಗಿ ರವಾನೆಯಾಗಲಿದೆ. ಫೋನ್‌ನಲ್ಲಿ ಇಂಟರ್ನೆಟ್ ಸಂಪರ್ಕ ಇಲ್ಲದಿದ್ದರೂ ಸಂದೇಶ ತಲುಪಲಿದೆ ಎಂದು ವರದಿಯಾಗಿದೆ.

ವಾಟ್ಸಾಪ್‌ನಲ್ಲಿ ಮೆಸೇಜ್ ಶೆಡ್ಯೂಲ್ ಮಾಡುವುದು ಹೇಗೆ?
ಬಳಕೆದಾರರು ಕನಿಷ್ಠ 10 ನಿಮಿಷಗಳಿಂದ ಗರಿಷ್ಠ ಎರಡು ವಾರಗಳ ಮುಂಚಿತವಾಗಿ ಸಂದೇಶಗಳನ್ನು ಶೆಡ್ಯೂಲ್ ಮಾಡಬಹುದು. ಇದಕ್ಕಾಗಿ ಈ ಕೆಳಗಿನ ಹಂತಗಳನ್ನು ಅನುಸರಿಸಬೇಕು.

Ad Widget

Ad Widget
  1. ವಾಟ್ಸಾಪ್ ತೆರೆಯಿರಿ ಮತ್ತು ಸಂದೇಶ ಕಳುಹಿಸಬೇಕಾದ ವ್ಯಕ್ತಿಯ ಚಾಟ್ ಅಥವಾ ಗ್ರೂಪ್ ಆಯ್ಕೆಮಾಡಿ.
  2. ಕಳುಹಿಸಬೇಕಾದ ಸಂದೇಶವನ್ನು ಟೈಪ್ ಮಾಡಿ ಅಥವಾ ಫೋಟೋ, ವಿಡಿಯೋ ಆಯ್ಕೆಮಾಡಿ.
  3. ‘Send’ ಬಟನ್ ಅನ್ನು ಸ್ವಲ್ಪ ಹೊತ್ತು ಒತ್ತಿ ಹಿಡಿಯಿರಿ.
  4. ಕಾಣಿಸಿಕೊಳ್ಳುವ ಆಯ್ಕೆಯಲ್ಲಿ ಸಂದೇಶ ತಲುಪಬೇಕಾದ ದಿನಾಂಕ ಮತ್ತು ಸಮಯವನ್ನು ಆಯ್ಕೆಮಾಡಿ.
  5. ಕೊನೆಯಲ್ಲಿ ‘Confirm’ ಆಯ್ಕೆಯನ್ನು ಒತ್ತಿ ಖಚಿತಪಡಿಸಿ.
    ಇಷ್ಟಾದರೆ ಸಾಕು, ನಿಗದಿಪಡಿಸಿದ ಸಮಯಕ್ಕೆ ಸಂದೇಶ ಸ್ವಯಂಚಾಲಿತವಾಗಿ ರವಾನೆಯಾಗಲಿದೆ.

ಯಾವೆಲ್ಲ ಸಂದೇಶಗಳನ್ನು ಶೆಡ್ಯೂಲ್ ಮಾಡಬಹುದು?
ಸದ್ಯಕ್ಕೆ ಪಠ್ಯ ಸಂದೇಶಗಳು, ಲಿಂಕ್‌ಗಳು, ಫೋಟೋಗಳು ಹಾಗೂ ವಿಡಿಯೋಗಳನ್ನು ಮೊದಲೇ ನಿಗದಿಪಡಿಸಿ ಕಳುಹಿಸಬಹುದು. ಇವು ವಾಟ್ಸಾಪ್‌ನ ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್ ಸುರಕ್ಷತಾ ವ್ಯವಸ್ಥೆಯಡಿ ರವಾನೆಯಾಗಲಿವೆ. ಆದರೆ ಪಿಡಿಎಫ್ ಸೇರಿದಂತೆ ಇತರ ದಾಖಲೆಗಳನ್ನು ಶೆಡ್ಯೂಲ್ ಮಾಡುವ ಆಯ್ಕೆ ಸದ್ಯಕ್ಕೆ ಲಭ್ಯವಿಲ್ಲ.

ಶೆಡ್ಯೂಲ್ ಮಾಡಿದ ಮೆಸೇಜ್ ಅಳಿಸಲು ಅವಕಾಶವಿದೆಯೇ?
ಹೌದು. ನಿಗದಿಪಡಿಸಿದ ಸಂದೇಶ ರವಾನೆಯಾಗುವ ಮೊದಲು ಅದನ್ನು ಪರಿಶೀಲಿಸುವುದರ ಜೊತೆಗೆ ಅಗತ್ಯವಿದ್ದರೆ ಅಳಿಸಬಹುದು. ಚಾಟ್ ಮಾಹಿತಿ (Chat Info) ವಿಭಾಗದಲ್ಲಿ ಕಳುಹಿಸಲು ಬಾಕಿ ಇರುವ ಸಂದೇಶಗಳ ಪಟ್ಟಿ ಕಾಣಿಸಿಕೊಳ್ಳುತ್ತದೆ. ಅಲ್ಲಿಂದಲೇ ಸಂದೇಶವನ್ನು ರದ್ದುಗೊಳಿಸಬಹುದು ಅಥವಾ ಅಳಿಸಬಹುದು. ಸಂದೇಶ ಇನ್ನೂ ರವಾನೆಯಾಗದಿರುವುದರಿಂದ ಅದನ್ನು ಅಳಿಸಿದರೆ ಎದುರಿನವರಿಗೆ ಯಾವುದೇ ಮಾಹಿತಿ ಹೋಗುವುದಿಲ್ಲ.

ಗ್ರೂಪ್ ಚಾಟ್‌ಗಳಿಗೆ ಏನು ನಿಯಮ?
ಗ್ರೂಪ್‌ಗಳಲ್ಲಿ ಸಂದೇಶ ಶೆಡ್ಯೂಲ್ ಮಾಡುವಾಗಲೂ ಕೆಲವು ನಿಯಮಗಳಿವೆ. ಸಂದೇಶವನ್ನು ನಿಗದಿಪಡಿಸಿದ ಸಮಯದಲ್ಲಿ ಗ್ರೂಪ್‌ನಲ್ಲಿರುವ ಸದಸ್ಯರಿಗೆ ಮಾತ್ರ ಅದು ತಲುಪಲಿದೆ. ಆನಂತರ ಗ್ರೂಪ್‌ಗೆ ಸೇರುವ ಹೊಸ ಸದಸ್ಯರಿಗೆ ಮೊದಲೇ ಶೆಡ್ಯೂಲ್ ಮಾಡಿರುವ ಸಂದೇಶ ಕಾಣಿಸುವುದಿಲ್ಲ.

ಎಲ್ಲರಿಗೂ ಯಾವಾಗ ಲಭ್ಯ?
ವಾಟ್ಸಾಪ್ ಈಗಾಗಲೇ ಆಂಡ್ರಾಯ್ಡ್ ಮತ್ತು ಐಫೋನ್‌ನ ಆಯ್ದ ಬಳಕೆದಾರರಿಗೆ ಈ ಸೌಲಭ್ಯವನ್ನು ಪ್ರಾಯೋಗಿಕವಾಗಿ ಪರಿಚಯಿಸಿದೆ. ನವೆಂಬರ್ 25ರಂದು ತನ್ನ ಅಧಿಕೃತ ‘X’ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳುವ ಮೂಲಕ ಹೊಸ ಫೀಚರ್ ಬಗ್ಗೆ ಮಾಹಿತಿ ನೀಡಿದೆ. ಸದ್ಯ ಹಂತ ಹಂತವಾಗಿ ಬಳಕೆದಾರರಿಗೆ ಈ ಆಯ್ಕೆಯನ್ನು ಒದಗಿಸಲಾಗುತ್ತಿದ್ದು, ಶೀಘ್ರದಲ್ಲೇ ಹೆಚ್ಚಿನ ಬಳಕೆದಾರರಿಗೂ ಲಭ್ಯವಾಗುವ ನಿರೀಕ್ಷೆಯಿದೆ.

Ad Widget
Continue Reading

ಇಂದಿನ ಟ್ರೆಂಡಿಂಗ್‌ ಸುದ್ದಿಗಳು

error: Content is protected !!