Connect with us

ಶಿಕ್ಷಣ

Philomena-ಸಾಂಪ್ರದಾಯಿಕ ವೈದ್ಯ ನಾರಣಪ್ಪ ಸಾಲಿಯನ್ ಅವರ ಮನೆಗೆ ಸಂತ  ಫಿಲೋಮಿನಾ ಸ್ವಾಯತ್ತ ಕಾಲೇಜಿನ ವಿದ್ಯಾರ್ಥಿಗಳ ಭೇಟಿ

Published

on



Ad Widget

Ad Widget

Ad Widget

Ad Widget

ಸಂತ  ಫಿಲೋಮಿನಾ ಕಾಲೇಜಿನ (ಸ್ವಾಯತ್ತ) ಬೋಟನಿ ವಿಭಾಗದ ವಿದ್ಯಾರ್ಥಿಗಳಾದ ದಿಶಾ, ದೀಕ್ಷಿತಾ, ಗ್ರೀಷ್ಮಾ, ಸಂಬ್ರಮ್ ಹಾಗೂ ತೇಜಸ್ ರೈ ಅವರು ಪ್ರಸಿದ್ಧ ನಾಟಿ ವೈದ್ಯರಾದ ನಾರಣಪ್ಪ ಸಾಲಿಯನ್ ಅವರ ಮನೆಗೆ ಶೈಕ್ಷಣಿಕ ಭೇಟಿನೀಡಿದರು.

Ad Widget

Ad Widget

Ad Widget

Ad Widget

2025ರ ಸೆಪ್ಟೆಂಬರ್ 8ರಂದು, ಸಂತ  ಫಿಲೋಮಿನಾ ಕಾಲೇಜಿನ (ಸ್ವಾಯತ್ತ) ಬೋಟನಿ ವಿಭಾಗದ ವಿದ್ಯಾರ್ಥಿಗಳಾದ ದಿಶಾ, ದೀಕ್ಷಿತಾ, ಗ್ರೀಷ್ಮಾ, ಸಂಬ್ರಮ್ ಹಾಗೂ ತೇಜಸ್ ರೈ ಅವರು ಪ್ರಸಿದ್ಧ ನಾಟಿ ವೈದ್ಯರಾದ ನಾರಣಪ್ಪ ಸಾಲಿಯನ್ ಅವರ ಮನೆಗೆ ಶೈಕ್ಷಣಿಕ ಭೇಟಿನೀಡಿದರು. ವಿದ್ಯಾರ್ಥಿಗಳು ಔಷಧಿ ಸಸ್ಯಶಾಸ್ತ್ರ (Medicinal Botany) ಎಂಬ ಮುಕ್ತ ಆಯ್ಕೆ ವಿಷಯವನ್ನು ಆರಿಸಿಕೊಂಡಿದ್ದು, ಔಷಧಿ ಸಸ್ಯಗಳ ಬಗ್ಗೆ ತಿಳಿಯುವ ಆಸಕ್ತಿಯಿಂದ ಈ ಭೇಟಿಯಲ್ಲಿ ಭಾಗವಹಿಸಿದರು.

Ad Widget

Ad Widget

Ad Widget alt="Ad Widget"/>

Ad Widget

ಭೇಟಿಯ ಸಂದರ್ಭದಲ್ಲಿ ಶ್ರೀ ನಾರಣಪ್ಪ ಸಾಲಿಯನ್ ಅವರು ಔಷಧಿ ಸಸ್ಯಗಳ ಕುರಿತು ತಮ್ಮ ಅಪಾರ ಜ್ಞಾನವನ್ನು ಹಂಚಿಕೊಂಡರು. ತಮ್ಮ ಆವರಣದಲ್ಲಿ ಬೆಳೆಸಿಕೊಂಡಿದ್ದ ಅನೇಕ ಔಷಧಿ ಸಸ್ಯಗಳನ್ನು ವಿದ್ಯಾರ್ಥಿಗಳಿಗೆ ತೋರಿಸಿ ಅವುಗಳ ಉಪಯೋಗಗಳನ್ನು ವಿವರಿಸಿದರು. ವಿಶೇಷವಾಗಿ, ಅವರು ಮೊದಲು ಬೆಳೆಸುತ್ತಿದ್ದ ರಬ್ಬರ್ ತೋಟವನ್ನು ತೆರವುಗೊಳಿಸಿ ಅರಣ್ಯ ಹಾಗೂ ಔಷಧಿ ಸಸ್ಯಗಳನ್ನು ಬೆಳೆಸಲು ಪ್ರಾರಂಭಿಸಿರುವುದನ್ನು ವಿದ್ಯಾರ್ಥಿಗಳು ಗಮನಿಸಿದರು.

Ad Widget

Ad Widget <> Ad Widget

ಭದ್ರಮುಷ್ಟಿ,ಕಲ್ಲುಬಾಜಿ,ಕೋಯಮರ್ವ,ಪಿನಾರಿಸೊಪ್ಪು,ಉಸುಳಿ ಸೊಪ್ಪು,ಕೊಟ್ಟೆಮುಳ್ಳು,ಕಲೇಂಜಿ ಸೊಪ್ಪು,ಗರಿಕೆ,ಅಮೃತಬಳ್ಳಿ,ಕಡುಪಡೇಂಜಿ,ಕಾಯಿರಪುಲಿ  ಅವರು  ಪರಿಚಯಿಸಿದ  ಈ   ಮುಖ್ಯ ಔಷಧಿ ಸಸ್ಯಗಳ ಆಯುರ್ವೇದೀಯ ಮತ್ತು ಜನಪದ ವೈದ್ಯಕೀಯ ಮಹತ್ವವನ್ನು ವಿವರಿಸಿ, ಅವುಗಳ ಉಪಯೋಗಗಳ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿದರು. ಜೊತೆಗೆ ಸಸ್ಯಗಳಿಂದ ಔಷಧೀಯ ಅಂಶಗಳನ್ನು ಹೇಗೆ ಹೊರತೆಗೆಯುವುದು ಎಂಬುದನ್ನು ತೋರಿಸಿದರು.



Ad Widget

ಒಣಗಿಸಿದ ವಿವಿಧ ಸಸ್ಯಗಳ ಸಂಗ್ರಹವನ್ನೂ ಪ್ರದರ್ಶಿಸಿದರು.‘ಮೂಸ್ತ’ (Musta) ಎಂಬ ಸಾಮಾನ್ಯವಾಗಿ ಕಂಡುಬರುವ ಆದರೆ ಅತ್ಯಂತ ಔಷಧೀಯ ಗುಣಗಳನ್ನು ಹೊಂದಿರುವ ಸಸ್ಯದ ಮಹತ್ವವನ್ನು ವಿಶೇಷವಾಗಿ ವಿವರಿಸಿದರು. ಅಲ್ಲದೆ, ಹಾವು (ವಿಪರ್) ಕಚ್ಚಿದ ರೋಗಿಗೆ ಸಸ್ಯಾಧಾರಿತ ಔಷಧಿ ಹಾಗೂ ಸಾಂಪ್ರದಾಯಿಕ ಚಿಕಿತ್ಸೆಯಿಂದ ಮಾಡಿದ ಚಿಕಿತ್ಸೆಗೂ ವಿದ್ಯಾರ್ಥಿಗಳು ಸಾಕ್ಷಿಯಾದರು.

Ad Widget

Ad Widget

ಈ ಶೈಕ್ಷಣಿಕ ಭೇಟಿಯಿಂದ ವಿದ್ಯಾರ್ಥಿಗಳಿಗೆ ಔಷಧಿ ಸಸ್ಯಶಾಸ್ತ್ರ ಮತ್ತು ಜನಪದ ವೈದ್ಯಕೀಯದ ಮಹತ್ವದ ಕುರಿತು ಅಮೂಲ್ಯ ಜ್ಞಾನ ದೊರಕಿತು. ತಮ್ಮ ಅನುಭವ ಮತ್ತು ಪರಿಣತಿಯನ್ನು ಹಂಚಿಕೊಂಡ ಶ್ರೀ ನಾರಣಪ್ಪ ಸಾಲಿಯನ್ ಅವರಿಗೆ ವಿದ್ಯಾರ್ಥಿಗಳು ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸಿದರು.

Ad Widget
Click to comment

Leave a Reply

ಶಿಕ್ಷಣ

Air Force Day-ಅಮರ್ ಜವಾನ್ ಜ್ಯೋತಿ ಸ್ಮಾರಕದಲ್ಲಿ 94ನೇ ವಾಯುಸೇನಾ ದಿನಾಚರಣೆ

Published

on



Ad Widget

Ad Widget

Ad Widget

Ad Widget

ಪುತ್ತೂರಿನ ಮಾಜಿ ಸೈನಿಕರ ಸಂಘ, ಅಮರ ಜವಾನ್ ಜ್ಯೋತಿ ಸಂರಕ್ಷಣಾ ಸಮಿತಿ ಹಾಗೂ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಜಂಟಿ ಆಶ್ರಯದಲ್ಲಿ ನಗರದ ಅಮರ್ ಜವಾನ್ ಜ್ಯೋತಿ ಸ್ಮಾರಕದ ಬಳಿ ಗುರುವಾರ 94ನೇ ವಾಯುಸೇನಾ ದಿನಾಚರಣೆಯನ್ನು ಆಚರಿಸಲಾಯಿತು.

Ad Widget

Ad Widget

Ad Widget

Ad Widget

ಪುತ್ತೂರು: ಪುತ್ತೂರಿನ ಮಾಜಿ ಸೈನಿಕರ ಸಂಘ, ಅಮರ ಜವಾನ್ ಜ್ಯೋತಿ ಸಂರಕ್ಷಣಾ ಸಮಿತಿ ಹಾಗೂ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಜಂಟಿ ಆಶ್ಯರದಲ್ಲಿ ನಗರದ ಅಮರ್ ಜವಾನ್ ಜ್ಯೋತಿ ಸ್ಮಾರಕದ ಬಳಿ ಗುರುವಾರ 94ನೇ ವಾಯುಸೇನಾ ದಿನಾಚರಣೆಯನ್ನು ಆಚರಿಸಲಾಯಿತು.

Ad Widget

Ad Widget

Ad Widget alt="Ad Widget"/>

Ad Widget

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಪುಡಾ ಅಧ್ಯಕ್ಷ ಅಮಲಾ ರಾಮಚಂದ್ರ ಮಾತನಾಡಿ ದೇಶಕ್ಕಾಗಿ ಸೇವೆ ಸಲ್ಲಿಸುವುದು ಜೀವನದಲ್ಲಿ ಸಿಗುವ ಅಪೂರ್ವ ಕ್ಷಣ. ಸಾಹಸ, ಧೈರ್ಯ, ದೇಶಸೇವೆಗೆ ವಾಯುಸೇನೆ ಉತ್ತಮ ಆಯ್ಕೆ. ಆಧುನಿಕ ಕಾಲದ ಯುದ್ಧದಲ್ಲಿ ವಾಯುಸೇನೆಯ ಕೊಡುಗೆ ಅತ್ಯಂತ ಮಹತ್ವದ್ದು ಎಂದರು.

Ad Widget

Ad Widget <> Ad Widget

ಶ್ರೀಪ್ರಕಾಶ್ ಕುಕ್ಕಾಜೆ ಪ್ರಧಾನ ಭಾಷಣಗೈದು ವಾಯುಪಡೆಯ ಬಗೆಗೆ ಹಾಗೂ ಸಶಸ್ತ್ರ ಪಡೆಗಳಲ್ಲಿನ ಉದ್ಯೋಗಾವಕಾಶಗಳ ಬಗೆಗೆ ಮಾಹಿತಿ ನೀಡಿದರು. ನಿವೃತ್ತ ಸೈನಿಕರ ಸಂಘದ ಅಧ್ಯಕ್ಷ ಸಾರ್ಜೆಂಟ್ ವಸಂತ್ ವಹಿಸಿದ್ದರು. ವೇದಿಕೆಯಲ್ಲಿ ನಟ್ಟೋಜ ಫೌಂಡೇಶನ್ ಟ್ರಸ್ಟ್ ಅಧ್ಯಕ್ಷ ಸುಬ್ರಮಣ್ಯ ನಟ್ಟೋಜ ಮತ್ತು ಕರ್ನಲ್ ಡಿ.ಜಿ. ಭಟ್ ಉಪಸ್ಥಿತರಿದ್ದರು.



Ad Widget

ಕಾರ್ಯಕ್ರಮದಲ್ಲಿ ಅಂಬಿಕಾ ವಿದ್ಯಾಲಯದ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.

Continue Reading

ಶಿಕ್ಷಣ

Vivekananda-ವಿವೇಕಾನಂದ ಕಾಲೇಜಿನಲ್ಲಿ ವಂದೇ ಮಾತರಂ 150ನೇ ವರ್ಷದ ಆಚರಣೆ; ವಂದೇ ಮಾತರಂ ಗೀತೆ ನಮ್ಮ ಅಸ್ಮಿತೆಯ ಗುರುತು : ರಾಜೇಶ ಪದ್ಮಾರ್

Published

on



Ad Widget

Ad Widget

Ad Widget

Ad Widget

ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ) ಇದರ ಸ್ನಾತಕೋತ್ತರ ಅಧ್ಯಯನ ಹಾಗೂ ಸಂಶೋಧನಾ ಕೇಂದ್ರ, ವಿದ್ಯಾರ್ಥಿ ಸಂಘ ಮತ್ತು ಐಕ್ಯೂಎಸಿ ಸಹಯೋಗದಲ್ಲಿ ನಡೆದ ವಂದೇ ಮಾತರಂ 150ನೇ ವರ್ಷದ ಆಚರಣೆಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಾಂತ ಪ್ರಚಾರ ಪ್ರಮುಖ್ ರಾಜೇಶ ಪದ್ಮಾರ್ ಮಾತನಾಡಿದರು.

Ad Widget

Ad Widget

Ad Widget

Ad Widget

ಪುತ್ತೂರು, ಅ. 15: ವಂದೇ ಮಾತರಂ ಗೀತೆಯೂ ಏಕತೆಯನ್ನು ಸಾರುವುದರ ಜೊತೆಗೆ ಜನರಲ್ಲಿ ಪ್ರೇರಣೆಯನ್ನು ಮೂಡಿಸುತ್ತದೆ. ಇದರ ನಿರ್ಮಾತೃ ಬಂಕಿಮ ಚಂದ್ರ ಚಟರ್ಜಿ. ಯಾವುದೇ ಜಾತಿ, ಬೇಧವಿಲ್ಲದೆ ರೂಪಿಸಿದ ಈ ವಂದೇ ಮಾತರಂ ಗೀತೆಯು ಬ್ರಿಟಿಷರ ಆಳ್ವಿಕೆಯನ್ನು ಅಂತ್ಯಗೊಳಿಸುವ ಉದ್ದೇಶದಿಂದ ಬಂಗಾಳ ವಿಭಜನೆಯ ವಿರೋಧವಾಗಿ ವಂಗ ಭಂಗ ಚಳವಳಿಯ ಧ್ಯೇಯ ಗೀತೆಯಾಗಿ ಮೂಡಿಬಂದ ಗೀತೆಯಿದು. ಕೊಲ್ಕತ್ತಾದಿಂದ ಹೊರಟ ಹೋರಾಟದ ಗೀತೆ ವಿಶ್ವಾದ್ಯಂತ ವ್ಯಾಪಿಸಿತು ಮತ್ತು ಯುಗಾಂತರ ಸಂಘಟನೆಯ ಆರಂಭಕ್ಕೆ ಮುಂದಡಿಯಿಟ್ಟಿತು. ಪ್ರತಿಯೊಬ್ಬರೂ ಒಗ್ಗಟ್ಟಿನಿಂದ ಈ ಜಯಘೋಷವನ್ನು ಕೂಗಿದರು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಾಂತ ಪ್ರಚಾರ ಪ್ರಮುಖ್ ರಾಜೇಶ ಪದ್ಮಾರ್ ಹೇಳಿದರು.

Ad Widget

Ad Widget

Ad Widget alt="Ad Widget"/>

Ad Widget

ಇವರು ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ) ಇದರ ಸ್ನಾತಕೋತ್ತರ ಅಧ್ಯಯನ ಹಾಗೂ ಸಂಶೋಧನಾ ಕೇಂದ್ರ, ವಿದ್ಯಾರ್ಥಿ ಸಂಘ ಮತ್ತು ಐಕ್ಯೂಎಸಿ ಸಹಯೋಗದಲ್ಲಿ ನಡೆದ ವಂದೇ ಮಾತರಂ 150ನೇ ವರ್ಷದ ಆಚರಣೆಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

Ad Widget

Ad Widget <> Ad Widget

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲ ಪ್ರೊ. ಶ್ರೀಕೃಷ್ಣ ಗಣರಾಜ್ ಭಟ್ ಮಾತನಾಡಿ, ಸಮಾಜದ ಪ್ರತಿಯೊಂದು ಸ್ಥರಗಳಲ್ಲೂ ವಂದೇ ಮಾತರಂ ಕುರಿತು ಜಾಗೃತಿ ಮೂಡಬೇಕು. ವಂದೇ ಮಾತರಂ ಕುರಿತ ಈ ಕಾರ್ಯಕ್ರಮ ಉತ್ತಮವಾಗಿ ಮೂಡಿ ಬಂದಿದ್ದು, ಪ್ರತಿಯೊಬ್ಬ ವಿದ್ಯಾರ್ಥಿಯನ್ನು ರಾಷ್ಟ್ರೀಯತೆಯೆಡೆಗೆ ಎಚ್ಚರಿಸುವ ಕಾರ್ಯ ಇದು ಎಂದರು.



Ad Widget

ಸಮಾರಂಭದ ಬಳಿಕ ವಿದ್ಯಾರ್ಥಿಗಳು ಒಕ್ಕೊರಲಿನಿಂದ ವಂದೇ ಮಾತರಂ ಗೀತೆಯನ್ನು ಹಾಡಿದರು.
ಕಾರ್ಯಕ್ರಮವನ್ನು ಸ್ನಾತಕೋತ್ತರ ಅಧ್ಯಯನ ವಿಭಾಗದ ಡೀನ್ ಡಾ. ವಿಜಯ ಸರಸ್ವತಿ ಬಿ ಸ್ವಾಗತಿಸಿ, ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾ ವಿಶೇಷ ಅಧಿಕಾರಿ ಹಾಗೂ ಅರ್ಥಶಾಸ್ತç ವಿಭಾಗದ ಮುಖ್ಯಸ್ಥ ಡಾ. ಅರುಣ್ ಪ್ರಕಾಶ್ ವಂದಿಸಿ, ಪ್ರಥಮ ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿನಿ ದೀಕ್ಷಾ ಜೆ.ರೈ ನಿರೂಪಿಸಿದರು.

Continue Reading

ಶಿಕ್ಷಣ

Vidyamata Academy-ವಿದ್ಯಾಮಾತಾ ಅಕಾಡೆಮಿಯಲ್ಲಿ ಮೂರು ದಿನಗಳ “ವಾಯ್ಸ್ ಅಂಡ್ ವಿಷನ್” ತರಬೇತಿ ಕಾರ್ಯಕ್ರಮ ಮತ್ತು ಶಾರದಾ ಪೂಜೆ

Published

on



Ad Widget

Ad Widget

Ad Widget

Ad Widget

ಸರಕಾರಿ ನೇಮಕಾತಿಗಳು, ಬ್ಯಾಂಕಿಂಗ್, ಸಶಸ್ತ್ರ ಪಡೆಗಳ ನೇಮಕಾತಿ, ಖಾಸಗಿ ಉದ್ಯೋಗ, ಕೌಶಲ್ಯ ತರಬೇತಿ ನೀಡುವ ಕರಾವಳಿಯ ಪ್ರತಿಷ್ಠಿತ ಸಂಸ್ಥೆಯಾಗಿರುವ ವಿದ್ಯಾಮಾತಾ ಅಕಾಡೆಮಿಯಲ್ಲಿ ಮೂರು ದಿನಗಳ ವಾಯ್ಸ್ ಅಂಡ್ ವಿಷನ್ ಎಂಬ ಭಾಷಣ ಕಲೆ ಮತ್ತು ನಾಯಕತ್ವ ವೃದ್ಧಿಯನ್ನು ಸಂಯೋಜಿಸುವ ಕಾರ್ಯಕ್ರಮವನ್ನು ದಿನಾಂಕ: 12-10-2026 ಸೋಮವಾರದಿಂದ 14-10- 2026 ಬುಧವಾರದವರೆಗೆ ಹಮ್ಮಿಕೊಳ್ಳಲಾಗಿತ್ತು.

Ad Widget

Ad Widget

Ad Widget

Ad Widget

ಸರಕಾರಿ ನೇಮಕಾತಿಗಳು, ಬ್ಯಾಂಕಿಂಗ್, ಸಶಸ್ತ್ರ ಪಡೆಗಳ ನೇಮಕಾತಿ, ಖಾಸಗಿ ಉದ್ಯೋಗ, ಕೌಶಲ್ಯ ತರಬೇತಿ ನೀಡುವ ಕರಾವಳಿಯ ಪ್ರತಿಷ್ಠಿತ ಸಂಸ್ಥೆಯಾಗಿರುವ ವಿದ್ಯಾಮಾತಾ ಅಕಾಡೆಮಿಯಲ್ಲಿ ಮೂರು ದಿನಗಳ ವಾಯ್ಸ್ ಅಂಡ್ ವಿಷನ್ ಎಂಬ ಭಾಷಣ ಕಲೆ ಮತ್ತು ನಾಯಕತ್ವ ವೃದ್ಧಿಯನ್ನು ಸಂಯೋಜಿಸುವ ಕಾರ್ಯಕ್ರಮವನ್ನು ದಿನಾಂಕ: 12-10-2026 ಸೋಮವಾರದಿಂದ 14-10- 2026 ಬುಧವಾರದವರೆಗೆ ಹಮ್ಮಿಕೊಳ್ಳಲಾಗಿತ್ತು.

Ad Widget

Ad Widget

Ad Widget alt="Ad Widget"/>

Ad Widget

ವಿದ್ಯಾರ್ಥಿಗಳ ಆಲೋಚನಾ ಶಕ್ತಿ, ಭವಿಷ್ಯದ ದೃಷ್ಟಿಕೋನ, ಮಾತುಗಾರಿಕೆಗಳನ್ನು ಹೆಣೆದು, ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ವಿಶೇಷ ಅಂದರೆ, ವಿದ್ಯಾರ್ಥಿಗಳನ್ನು, ತರಬೇತುದಾರರನ್ನು ಮತ್ತು ಪೋಷಕರನ್ನು ಒಂದೇ ವೇದಿಕೆಯಲ್ಲಿ ತರಬೇತಿಗೆ ಒಳಪಡಿಸಲಾಗಿತ್ತು.

Ad Widget

Ad Widget <> Ad Widget

ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ, ಪುತ್ತೂರು ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ನಿಹಾಲ್ ಪಿ ಶೆಟ್ಟಿಯವರು ಉದ್ಘಾಟಿಸಿ, ಮಾತನಾಡುತ್ತಾ, “ಪ್ರಸ್ತುತ ಯಾವ ಪದವಿ, ಸ್ನಾತಕೋತ್ತರ ಪದವಿ ಓದುತ್ತೇವೆ ಅನ್ನೋದು ಮುಖ್ಯ ಅಲ್ಲ, ಆಧುನಿಕ ಜಗತ್ತಿನಲ್ಲಿ ಉದ್ಯೋಗ ಕೌಶಲ್ಯತೆ ಪ್ರಮುಖ ಮಾನದಂಡವಾಗಿರುತ್ತದೆ. ವಿದ್ಯಾಮಾತಾ ಕೇವಲ ಪುಸ್ತಕದ ಓದಿಗೆ ಮಾತ್ರ ಸೀಮಿತವಾಗಿರದೆ, ಬದುಕಿನ ಅಡಿಪಾಯವನ್ನೇ ಹಾಕಿಕೊಡುತ್ತಿದೆ. ಇಂತಹ ಸಂಸ್ಥೆಯಲ್ಲಿ ತರಬೇತಿ ಪಡೆಯುತ್ತಿರುವುದು ನಿಮ್ಮೆಲ್ಲರ ಭಾಗ್ಯ” ಎಂದು ಸಂಸ್ಥೆಗೆ ಮತ್ತು ವಿದ್ಯಾರ್ಥಿಗಳಿಗೆ ಶುಭವನ್ನು ಹಾರೈಸಿದರು.



Ad Widget

ಮೂರು ದಿನದ ತರಬೇತಿಯನ್ನು ಶ್ರೀರಾಮಕುಂಜೇಶ್ವರ ಪ್ರೌಢಶಾಲೆಯ ವಿಶ್ರಾಂತ ಮುಖ್ಯ ಗುರುಗಳಾದ ಸತೀಶ್ ಭಟ್ ಬಿಳಿನೆಲೆ ಹಾಗೂ ಜೆಸಿಐ ರಾಷ್ಟ್ರೀಯ ತರಬೇತುದಾರರಾದ ಕೃಷ್ಣ ಮೋಹನ್ ರವರು ನಡೆಸಿಕೊಟ್ಟರು.

Ad Widget

Ad Widget

ಸಮಾರೋಪ ಮತ್ತು ಶಾರದಾ ಪೂಜೆ
ದಿನಾಂಕ: 12-10-2026 ಸೋಮವಾರದಂದು ಗಣಪತಿ ಹೋಮ ಹಾಗೂ ದುರ್ಗಾ ನಮಸ್ಕಾರ ಪೂಜೆ ನಡೆದು, 14-10-2026 ಬುಧವಾರದಂದು ಮಧ್ಯಾಹ್ನ ವಿದ್ಯಾರ್ಥಿಗಳಿಂದ ಭಜನೆ ನಡೆಯಿತು. ಶಾರದಾ ಪೂಜೆಯನ್ನು ಸತೀಶ್ ಭಟ್ ಹಾಗೂ ಸುಮನ್ ಸತೀಶ್ ಭಟ್ ದಂಪತಿಗಳು ನೆರವೇರಿಸಿದರು. ತಾಲೂಕು ಕಾರ್ಯ ನಿರ್ವಹಣಾಧಿಕಾರಿ ನವೀನ್ ಭಂಡಾರಿ ಅವರು ತರಬೇತಿ ಕಾರ್ಯಗಾರದಲ್ಲಿ ಅತ್ಯುತ್ತಮ ಸಾಧನೆ ತೋರಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರಧಾನ ಮಾಡಿ, ಮಾತನಾಡುತ್ತಾ ತಾನು ಕೂಡ ಸರಕಾರಿ ಹುದ್ದೆಯ ಆಕಾಂಕ್ಷಿಯಾಗಿ ಪ್ರಯತ್ನ ಮಾಡುವಾಗ ಇದು ನಿಮ್ಮಿಂದ ಸಾಧ್ಯವಾ? ಅಂತ ಪ್ರಶ್ನೆ ಮಾಡಿದವರು ಹೆಚ್ಚು. ನಮ್ಮ ಭಾಗದಲ್ಲಿ ಸರಕಾರಿ ಹುದ್ದೆಗಳಿಗೆ ಪ್ರಯತ್ನ ಮಾಡುವವರು ತುಂಬಾ ಕಡಿಮೆ, ಪ್ರಯತ್ನ ಮಾಡುವವರಿಗೆ ಪ್ರೋತ್ಸಾಹ ಕೊಡುವವರು ಇನ್ನೂ ಕಡಿಮೆ, ಆದರೆ ನಿರಂತರ ಪ್ರಯತ್ನದಿಂದ ನಮ್ಮ ಭಾಗದಲ್ಲೂ ಸರಕಾರಿ ಹುದ್ದೆಗೆ ಹೋಗಲು ಸಾಧ್ಯವಿದೆ ಎಂದು ವಿದ್ಯಾಮಾತ ಅಕಾಡೆಮಿಯು ಸಾಭೀತು ಮಾಡಿದೆ.

ಈ ನಿಟ್ಟಿನಲ್ಲಿ ವಿದ್ಯಾಮಾತಾ ಅಕಾಡೆಮಿಯು ಮಾಡುತ್ತಿರುವ ಎಲ್ಲಾ ಸಮಾಜಮುಖಿ ಸಾಧನಗಳು ಮತ್ತು ತರಬೇತಿಗಳು ಯಶಸ್ವಿಯಾಗಲಿ” ಎಂದು ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಪೋಷಕರೊಂದಿಗೆ ಸಂಪನ್ಮೂಲ ವ್ಯಕ್ತಿಗಳು ಸಂವಾದ ನಡೆಸಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ಆಡಳಿತ ನಿರ್ದೇಶಕರಾದ ಭಾಗ್ಯೇಶ್ ರೈ ಯವರು ಅತಿಥಿಗಳನ್ನು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಸ್ಥೆಯ ನಿರ್ದೇಶಕಿ ರಮ್ಯಾ ಭಾಗ್ಯೇಶ್ ರೈ, ತರಬೇತುದಾರರು, ಪೋಷಕರು, ವಿದ್ಯಾರ್ಥಿಗಳು, ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Ad Widget
Continue Reading

ಇಂದಿನ ಟ್ರೆಂಡಿಂಗ್‌ ಸುದ್ದಿಗಳು

error: Content is protected !!

Discover more from Nikhara News | Kannada News Website

Subscribe now to keep reading and get access to the full archive.

Continue reading