Connect with us

ಶಿಕ್ಷಣ

Akshaya College-ಅಕ್ಷಯ ಕಾಲೇಜಿನಲ್ಲಿ ವಿದ್ಯಾರ್ಥಿ ಒಕ್ಕೂಟದ  ಪ್ರತಿಜ್ಞಾ ವಿಧಿ ಸ್ವೀಕಾರ

Published

on



Ad Widget

Ad Widget

Ad Widget

Ad Widget

ಅಕ್ಷಯ ಎಜುಕೇಶನಲ್ ಚಾರಿಟೇಬಲ್ ಟ್ರಸ್ಟ್ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಗಳ  ಪದವಿ ಕಾಲೇಜಿನಲ್ಲಿ   ವಿದ್ಯಾರ್ಥಿ ಒಕ್ಕೂಟದ   ಪ್ರತಿಜ್ಞಾ ವಿಧಿ ಸ್ವೀಕಾರ  ಕಾಲೇಜಿನ ಸಭಾಂಗಣದಲ್ಲಿ ಜರುಗಿತು.   

Ad Widget

Ad Widget

Ad Widget

Ad Widget

ಪುತ್ತೂರು:  ಅಕ್ಷಯ ಎಜುಕೇಶನಲ್ ಚಾರಿಟೇಬಲ್ ಟ್ರಸ್ಟ್ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಗಳ  ಪದವಿ ಕಾಲೇಜಿನಲ್ಲಿ   ವಿದ್ಯಾರ್ಥಿ ಒಕ್ಕೂಟದ   ಪ್ರತಿಜ್ಞಾ ವಿಧಿ ಸ್ವೀಕಾರ  ಕಾಲೇಜಿನ ಸಭಾಂಗಣದಲ್ಲಿ ಜರುಗಿತು.   

Ad Widget

Ad Widget

Ad Widget alt="Ad Widget"/>

Ad Widget

ಕಾರ್ಯಕ್ರಮವನ್ನು  ದೀಪ  ಬೆಳಗಿಸಿ ಉದ್ಘಾಟಿಸಿದ ವಿದ್ಯಾರಶ್ಮಿ ವಿದ್ಯಾಲಯ ಸವಣೂರು  ಇಲ್ಲಿನ ನಿವೃತ್ತ ಪ್ರಾಂಶುಪಾಲರು  ಸೀತಾರಾಮ  ಕೇವಳ  ಮಾತನಾಡಿ  ನಮ್ಮ ಜೀವನದಲ್ಲಿ ನಾವು ಹೇಗಿರಬೇಕು ?  ಮತ್ತು ಏನಾಗ ಬೇಕು ?  ಎಂದು ನಾವೇ  ತೀರ್ಮಾನಿಸಬೇಕು. 

Ad Widget

Ad Widget <> Ad Widget

ಜೀವನದಲ್ಲಿ  ಲಭಿಸುವ  ಅವಕಾಶವನ್ನು  ಅತ್ಯಂತ ಶ್ರದ್ದೆಯಿಂದ ಮತ್ತು ನಂಬಿಕೆಯಿರಿಸಿ   ಮಾಡಿದಲ್ಲಿ   ಮಾತ್ರ ನಮ್ಮ  ಜೀವನದ ಲಕ್ಷ್ಯ ವನ್ನು  ಸಾಧಿಸ ಬಹುದು.    ಶಾಲಾ- ಕಾಲೇಜಿನ ವಿದ್ಯಾರ್ಥಿ ದೆಸೆಯಲ್ಲಿ   ನಾಯಕತ್ವದ   ಅವಕಾಶಗಳನ್ನು ಪಡೆದವರು   ಮುಂದಿನ     ಜೀವನದಲ್ಲಿ  ಜನ ಪ್ರತಿನಿಧಿ ಗಳಾಗಿ   ಗುರುತಿಸಿಕೊಂಡವರು   ಅನೇಕರಿದ್ದಾರೆ. 



Ad Widget

ನಮ್ಮ  ಯಶಸ್ಸಿಗೆ ಸಂಬಂಧಿಸಿದಂತೆ  ಶಿಕ್ಷಣಕ್ಕೆ   ಮಾಡುವ ಹೂಡಿಕೆ  ಒಂದು  ಸಣ್ಣ ಭಾಗ , ಬಹುತೇಕ  ಹೂಡಿಕೆ  ಜೀವನ ದ    ಮೌಲ್ಯ ಗಳನ್ನು  ಗಳಿಸುವಲ್ಲಿ    ನಾವು  ಮಾಡಬೇಕು.     ವೈಜ್ಞಾನಿಕ ಮತ್ತು ಸತ್ಯವನ್ನು   ಕಂಡುಕೊಂಡು  ನಮ್ಮ  ಜೀವನದ     ಸವಾಲುಗಳಿಗೆ   ಅತ್ಯಂತ ನಿಖರವಾದ    ಪರಿಹಾರಗಳನ್ನು ಕಂಡುಕೊಳ್ಳಲು     ನಾವು   ಸಮರ್ಥವಾಗಿರಬೇಕು.  ನಮ್ಮ ಜೀವನದ ದಿಸೆಯನ್ನು ಪ್ರಗತಿಯತ್ತ    ಕೊಂಡೊಯ್ಯಲು   ಧನಾತ್ಮಕ ಚಿಂತನೆ ಗಳನ್ನು  ಯಥಾವತ್ತಾಗಿ    ರೂಢಿಸಿಕೊಳ್ಳಬೇಕು    ಎಂದು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.     

Ad Widget

Ad Widget

ಕಾರ್ಯಕ್ರಮದ  ಅಧ್ಯಕ್ಷತೆ   ವಹಿಸಿದ   ಕಾಲೇಜಿನ  ಅಧ್ಯಕ್ಷರಾದ ಜಯಂತ್  ನಡುಬೈಲ್      ವಿದ್ಯಾರ್ಥಿ ಒಕ್ಕೂಟ ವನ್ನು  ಉದ್ದೇಶಿಸಿ,   ವಿದ್ಯಾರ್ಥಿ  ಪ್ರತಿನಿಧಿಗಳು    ಸಂಸ್ಥೆಯಲ್ಲಿ    ವಿದ್ಯಾರ್ಜನೆ ಮಾಡುವ  ಎಲ್ಲಾ ವಿದ್ಯಾರ್ಥಿಗಳಿಗೆ   ಸ್ಪಂದಿಸುತ್ತಾ   , ವಿದ್ಯಾರ್ಥಿಗಳ    ಧ್ವನಿಯಾಗಿರಬೇಕು. ವಿದ್ಯಾರ್ಥಿಗಳ  ಸಮಸ್ಯೆಗಳನ್ನು  ಆಲಿಸುತ್ತಾ, ಬೇಡಿಕೆಗಳನ್ನು   ಸಂಬಂಧಪಟ್ಟವರ  ಗಮನಕ್ಕೆ   ತರಬೇಕು   ಆ  ಮೂಲಕ  ವಿದ್ಯಾರ್ಥಿಗಳ  ಮಾನಸಿಕ ಸ್ವಾಸ್ಥ್ಯ, ಉತ್ತಮ ಕಲಿಕಾ ಪರಿಸರ   ನಿರ್ಮಾಣಕ್ಕೆ   ಪ್ರಮಾಣಿಕವಾಗಿ  ಪ್ರಯತ್ನಿಸಬೇಕು   ಎಂದು  ಸಲಹೆ ನೀಡಿದರು.      

ಆಡಳಿತ  ಮಂಡಳಿಯ ಕಾರ್ಯದರ್ಶಿ  ಡಾ ಅಕ್ಷಯ್  ವಿದ್ಯಾರ್ಥಿ  ಪ್ರತಿನಿಧಿಗಳಿಗೆ      ಶುಭ ಹಾರೈಸಿ , ಮುಂದಿನ ಶೈಕ್ಷಣಿಕ    ಸಾಲಿನಲ್ಲಿ    ಅರ್ಥಪೂರ್ಣ     ಕಾರ್ಯಕ್ರಮಗಳನ್ನು    ಆಯೋಜಿಸಿ ,  ವಿದ್ಯಾರ್ಥಿಗಳಿಗೆ   ನೀಡಿದ ಭರವಸೆಗಳನ್ನು   ಯಥಾವತ್ತಾಗಿ  ಪಾಲಿಸಿ  ಆದರ್ಶ   ವಿದ್ಯಾರ್ಥಿ ನಾಯಕ-  ನಾಯಕಿಯರಾಗಿ   ಹೊರ  ಹೊಮ್ಮಬೇಕು  ಎಂದು ಕರೆ ನೀಡಿದರು.  

2025- 26 ನೇ ಶೈಕ್ಷಣಿಕ ಸಾಲಿನ ವಿದ್ಯಾರ್ಥಿ ಒಕ್ಕೂಟದ    ಅಧ್ಯಕ್ಷನಾಗಿ  ಅಂತಿಮ  ಆಂತರಿಕ ವಿನ್ಯಾಸ ವಿಭಾಗದ  ರಾಕೇಶ್.  ಕೆ,  ಉಪಾಧ್ಯಕ್ಷನಾಗಿ  ಮನೋಜ್ ಕುಮಾರ್ ಅಂತಿಮ  ಪದವಿ ಬಿ ಸಿ ಎ, ಕಾರ್ಯದರ್ಶಿ  ವರ್ಷಿಣಿ    ಎನ್ ಎಸ್ ಅಂತಿಮ ಪದವಿ ವಾಣಿಜ್ಯ ವಿಭಾಗ , ಜೊತೆ ಕಾರ್ಯದರ್ಶಿಯಾಗಿ  ಖಲಂದರ್  ಶಮಾ  ಫ್ಯಾಷನ್ ಡಿಸೈನ್ ವಿಭಾಗ, ಖಜಾಂಚಿಯಾಗಿ  ಪೃಥ್ವಿರಾಜ್. ಪಿ  ಅಂತಿಮ ಪದವಿ ಬಿ ಸಿ ಎ, ಜೊತೆ ಖಜಾಂಚಿ ಯಾಗಿ  ಅಪೇಕ್ಷಾ    ಕೆ ಶೆಟ್ಟಿ  ದ್ವಿತೀಯ ಪದವಿ  ಬಿ ಸಿ ಎ, ಸಾಂಸ್ಕೃತಿಕ ಕಾರ್ಯದರ್ಶಿ ಯಾಗಿ   ಕೀರ್ತನ್   ಕೃಷ್ಣ  ಪಿ  ಡಿ  ಅಂತಿಮ ಪದವಿ ಬಿ ಸಿ  ಎ,   ಸಾಂಸ್ಕೃತಿಕ ಜೊತೆ  ಕಾರ್ಯದರ್ಶಿಯಾಗಿ  ರಕ್ಷಾ  ಕೆ ಆರ್  ದ್ವಿತೀಯ ಪದವಿ  ಬಿ ಸಿ  ಎ, ಕ್ರೀಡಾ ಕಾರ್ಯದರ್ಶಿ ಯಾಗಿ  ಧನುಷ್ ಡಿ. ಎಸ್  ಅಂತಿಮ ಪದವಿ  ಬಿ ಸಿ  ಎ, ಜೊತೆ ಕ್ರೀಡಾ ಕಾರ್ಯದರ್ಶಿ ಯಾಗಿ  ಆಶಿಕಾ ಎನ್  ದ್ವಿತೀಯ ವಾಣಿಜ್ಯ ವಿಭಾಗ, ಮಾಧ್ಯಮ ಕಾರ್ಯದರ್ಶಿ ಯಾಗಿ  ವಿಂಧು  ಶ್ರೀ  ಅಂತಿಮ ಪದವಿ ವಾಣಿಜ್ಯ ವಿಭಾಗ ಮತ್ತು  ಫ್ಲೋಯಿಡನ್    ಲೋಬೋ  ದ್ವಿತೀಯ ಪದವಿ ಹಾಸ್ಪಿಟಲಿಟಿ  ಸಾಯನ್ಸ್   ಪ್ರಮಾಣ  ವಚನ ಸ್ವೀಕರಿಸಿದರು.

ಕಾಲೇಜಿನ ವಿದ್ಯಾರ್ಥಿ ಕ್ಷೇಮಾಧಿಕಾರಿ ಅಶೋಕ್  ರೈ   ಎಂ  ನೂತನ  ವಿದ್ಯಾರ್ಥಿ  ಪ್ರತಿನಿಧಿಗಳಿಗೆ   ಪ್ರತಿಜ್ಞಾ ವಿಧಿ  ಬೋಧಿಸಿದರು. ಪ್ರಾಂಶುಪಾಲ ರಾದ ಸಂಪತ್ ಕೆ ಪಕ್ಕಳ ,  ಆಂತರಿಕ ಗುಣಮಟ್ಟ ಭರವಸೆಯ    ಕೋಶದ     ಸಂಯೋಜಕರಾದ  ರಶ್ಮಿ ಕೆ  ಉಪಸ್ಥಿತರಿದ್ದರು.  ಆಡಳಿತಾಧಿಕಾರಿ ಅರ್ಪಿತ್ ಟಿ.  ಎ.     ಸ್ವಾಗತಿಸಿ   , ಉಪ ಪ್ರಾಂಶುಪಾಲರಾದ  ರಕ್ಷಣ್ ಟಿ ಆರ್  ಧನ್ಯವಾದ ಸಮರ್ಪಿಸಿದರು.    ದ್ವಿತೀಯ ಫ್ಯಾಷನ್ ಡಿಸೈನ್ ವಿಭಾಗದ  ವಿದ್ಯಾರ್ಥಿನಿ ಗಳಾದ  ಕುಮಾರಿ  ಮೋಕ್ಷ  ಮತ್ತು  ದೇವಿಕಾ  ಪ್ರಾರ್ಥನೆ ಹಾಡಿದರು.    ಕನ್ನಡ ವಿಭಾಗದ ಉಪನ್ಯಾಸಕಿ ರಶ್ಮಿತಾ ಕಾರ್ಯಕ್ರಮವನ್ನು ನಿರೂಪಿಸಿದರು.

Ad Widget
Click to comment

Leave a Reply

ಶಿಕ್ಷಣ

Vivekananda-ತಾಲೂಕು ಮಟ್ಟದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟ – ವಿವೇಕಾನಂದ ಪದವಿಪೂರ್ವ ಕಾಲೇಜಿನ ಬಾಲಕರ ತಂಡ ಜಿಲ್ಲಾ ಮಟ್ಟಕ್ಕೆ ಆಯ್ಕೆ

Published

on



Ad Widget

Ad Widget

Ad Widget

Ad Widget

ಶಾಲಾ ಶಿಕ್ಷಣ ಇಲಾಖೆ, ಪದವಿಪೂರ್ವ ವಿಭಾಗ ತಾಲೂಕು ಮಟ್ಟದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟ ಸರಕಾರಿ ಪದವಿಪೂರ್ವ ಕಾಲೇಜು ಬೆಟ್ಟಂಪಾಡಿ ಇವರ ಸಹಯೋಗದಲ್ಲಿ ಕೊಂಬೆಟ್ಟು ಕ್ರೀಡಾಂಗಣ ದಲ್ಲಿ ನಡೆಯಿತು. ಬಾಲಕರ ತಂಡ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

Ad Widget

Ad Widget

Ad Widget

Ad Widget

ಶಾಲಾ ಶಿಕ್ಷಣ ಇಲಾಖೆ, ಪದವಿಪೂರ್ವ ವಿಭಾಗ ತಾಲೂಕು ಮಟ್ಟದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟ ಸರಕಾರಿ ಪದವಿಪೂರ್ವ ಕಾಲೇಜು ಬೆಟ್ಟಂಪಾಡಿ ಇವರ ಸಹಯೋಗದಲ್ಲಿ ಕೊಂಬೆಟ್ಟು ಕ್ರೀಡಾಂಗಣ ದಲ್ಲಿ ನಡೆಯಿತು. ಬಾಲಕರ ತಂಡ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

Ad Widget

Ad Widget

Ad Widget alt="Ad Widget"/>

Ad Widget

ತಂಡದಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳಾದ ಧನುಷ್ ಎಸ್, ಯಶಸ್ ಎಚ್ . ಸಿ ದ್ವಿತೀಯ ಪಿಯುಸಿ ಗಗನ್ ಕೆ.ಎನ್, ತೇಜಸ್ ಟಿ. ಆರ್, ಜಶ್ವಂತ್ ಗೌಡ, ಧನುಷ್ ಕೆ . ಎಚ್, ಆಕಾಶ್ ಭಾಗವಹಿಸಿರುತ್ತಾರೆ.

Ad Widget

Ad Widget <> Ad Widget

ತಂಡವು ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ರವಿಶಂಕರ್ ,ಡಾ .ಜ್ಯೋತಿ ಮತ್ತು ಯತೀಶ್ ಇವರ ನೇತೃತ್ವದಲ್ಲಿ ತರಬೇತಿಯನ್ನು ಪಡೆದಿರುತ್ತಾರೆ .ಇವರನ್ನು ಕಾಲೇಜಿನ ಆಡಳಿತ ಮಂಡಳಿ ಪ್ರಾಂಶುಪಾಲರು ಹಾಗೂ ಉಪನ್ಯಾಸಕ, ಉಪನ್ಯಾಸಕೇತರ ವೃಂದದವರು ಅಭಿನಂದಿಸಿರುತ್ತಾರೆ.



Ad Widget
Ad Widget
Continue Reading

ಶಿಕ್ಷಣ

Taekwondo Competition-ಟೇಕ್ವಾಂಡೋ ಸ್ಪರ್ಧೆ: ಸಂತ ಫಿಲೋಮಿನಾ ಪ ಪೂ ಕಾಲೇಜಿನ ಮೊಹಮ್ಮದ್ ಶಾಜ್ ಗೆ ಪ್ರಶಸ್ತಿ

Published

on



Ad Widget

Ad Widget

Ad Widget

Ad Widget

ಸೆ 30 ರಂದು ಚಿಕ್ಕಮಗಳೂರು ಜಿಲ್ಲಾ ಶತಮಾನೋತ್ಸವ ಕ್ರೀಡಾಂಗಣ ಜ್ಯೋತಿನಗರದಲ್ಲಿ ನಡೆದ ‘ಮೈಸೂರು ವಿಭಾಗ ಮಟ್ಟದ ದಸರಾ ಕ್ರೀಡಾಕೂಟ 2026 – 27’ ಟೇಕ್ವಾಂಡೋ ಸ್ಪರ್ಧೆಯಲ್ಲಿ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಪ್ರಥಮ ವಿಜ್ಞಾನ ವಿಭಾಗದ ಮೊಹಮ್ಮದ್ ಶಾಜ್ ಕಂಚಿನ ಪದಕವನ್ನು ಪಡೆದುಕೊಂಡಿರುತ್ತಾರೆ.

Ad Widget

Ad Widget

Ad Widget

Ad Widget

ಪುತ್ತೂರು: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಚಿಕ್ಕಮಗಳೂರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಚಿಕ್ಕಮಗಳೂರು ಇದರ ಸಂಯುಕ್ತ ಆಶ್ರಯದಲ್ಲಿ ಸೆ 30 ರಂದು ಚಿಕ್ಕಮಗಳೂರು ಜಿಲ್ಲಾ ಶತಮಾನೋತ್ಸವ ಕ್ರೀಡಾಂಗಣ ಜ್ಯೋತಿನಗರದಲ್ಲಿ ನಡೆದ ‘ಮೈಸೂರು ವಿಭಾಗ ಮಟ್ಟದ ದಸರಾ ಕ್ರೀಡಾಕೂಟ 2026 – 27’ ಟೇಕ್ವಾಂಡೋ ಸ್ಪರ್ಧೆಯಲ್ಲಿ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಪ್ರಥಮ ವಿಜ್ಞಾನ ವಿಭಾಗದ ಮೊಹಮ್ಮದ್ ಶಾಜ್ ಕಂಚಿನ ಪದಕವನ್ನು ಪಡೆದುಕೊಂಡಿರುತ್ತಾರೆ.

Ad Widget

Ad Widget

Ad Widget alt="Ad Widget"/>

Ad Widget

ಇವರು ಉಪ್ಪಿನಂಗಡಿ ನಿವಾಸಿ ಮೊಹಮ್ಮದ್ ಮುಸ್ತಫಾ ಮತ್ತು ಸೌಧ ದಂಪತಿಗಳ ಪುತ್ರ.

Ad Widget

Ad Widget <> Ad Widget

ಇವರಿಗೆ ಶಿಹಾಬ್ ಟಿ ತರಬೇತಿ ನೀಡಿರುತ್ತಾರೆ.



Ad Widget

ಕಾಲೇಜಿನ ಪ್ರಾಂಶುಪಾಲರಾದ ರೆ.ಫಾ. ಅಶೋಕ್ ರಾಯನ್ ಕ್ರಾಸ್ತಾ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ದೈಹಿಕ ಶಿಕ್ಷಣ ನಿರ್ದೇಶಕರಾದ ರಾಜೇಶ್ ಮೂಲ್ಯ ಉಪಸ್ಥಿತರಿದ್ದರು.

Continue Reading

ಶಿಕ್ಷಣ

Vivekananda-ರಾಷ್ಟ್ರಮಟ್ಟದ ಭೌತಶಾಸ್ತ್ರ ಸ್ಪರ್ಧೆಯಲ್ಲಿ ವಿವೇಕಾನಂದ ಕಾಲೇಜಿನ ವಿದ್ಯಾರ್ಥಿಯ ಸಾಧನೆ..!

Published

on



Ad Widget

Ad Widget

Ad Widget

Ad Widget

ಪುತ್ತೂರು: ವಿವೇಕಾನಂದ ಮಹಾವಿದ್ಯಾಲಯ (ಸ್ವಾಯತ್ತ) ಇದರ ದ್ವಿತೀಯ ವಿಜ್ಞಾನ ವಿಭಾಗದ ವಿದ್ಯಾರ್ಥಿ ಶ್ರೀಹರಿ ಶರ್ಮಾ ನೋಯ್ಡಾದ ಆಮಿಟಿ ಯುನಿವರ್ಸಿಟಿಯಲ್ಲಿ ಇಂಡಿಯನ್ ಅಸೋಸಿಯೇಷನ್ ಆಫ್ ಫಿಸಿಕ್ಸ್ ಟೀರ‍್ಸ್ (ಐಎಪಿಟಿ) ಸಂಸ್ಥೆಯ ಸಹಯೋಗದೊಂದಿಗೆ ನಡೆದ ರಾಷ್ಟ್ರಮಟ್ಟದ ಭೌತಶಾಸ್ತ್ರ ಸ್ಪರ್ಧೆ National Competition for Innovative Experiments in Physics (NCIEP)ನಲ್ಲಿ “Electromagnetic Shock-Absorber for the Real-Time Landing of Reusable Spacecraft” ಎಂಬ ಭೌತಶಾಸ್ತ್ರದ ಮಾದರಿಯನ್ನು ಸ್ಪರ್ಧೆಯಲ್ಲಿ ಪ್ರಸ್ತುತಪಡಿಸುವ ಮೂಲಕ ಗಮನಾರ್ಹ ಸಾಧನೆ ಮಾಡಿದ್ದಾರೆ.

Ad Widget

Ad Widget

Ad Widget

Ad Widget

ಅಕ್ಟೋಬರ್ 4ರಿಂದ 6ರವರೆಗೆ ನಡೆದ 40ನೇ IAPT Annual Conventionನಲ್ಲಿ ಇವರು ಪದವಿ ಮತ್ತು ಸ್ನಾತಕೋತ್ತರ ವಿಭಾಗದಲ್ಲಿ ಭಾಗವಹಿಸಿದ್ದರು. ದೇಶದ ವಿವಿಧ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು, ಐಐಟಿಗಳು ಹಾಗೂ ವಿಶ್ವವಿದ್ಯಾಲಯಗಳ ಒಟ್ಟು 118 ಮಾದರಿಗಳ ಪೈಕಿ 12ಮಾದರಿಗಳು ಸ್ಪರ್ಧೆಗೆ ಆಯ್ಕೆಯಾಗಿದ್ದವು.

Ad Widget

Ad Widget

Ad Widget alt="Ad Widget"/>

Ad Widget

ಕರ್ನಾಟಕದಿಂದ ಪ್ರಸ್ತುತಪಡಿಸಲು ಆಯ್ಕೆಯಾದ ಏಕೈಕ ಮಾದರಿ ಇವರದ್ದಾಗಿತ್ತು. ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೋ. ಶಿವಪ್ರಸಾದ್ ಕೆ.ಎಸ್. ಈ ಮಾದರಿ ತಯಾರಿಕೆಯಲ್ಲಿ ಮಾರ್ಗದರ್ಶನ ನೀಡಿರುದ್ದಾರೆ. ಈ ಸಾಧನೆಗೆ ಆಡಳಿತ ಮಂಡಳಿ, ಪ್ರಾಂಶುಪಾಲರು, ಶಿಕ್ಷಕ ಮತ್ತು ಶಿಕ್ಷಕೇತರ ವೃಂದ ಮತ್ತು ವಿದ್ಯಾರ್ಥಿಗಳು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

Ad Widget

Ad Widget <> Ad Widget



Ad Widget
Ad Widget
Continue Reading

ಇಂದಿನ ಟ್ರೆಂಡಿಂಗ್‌ ಸುದ್ದಿಗಳು

error: Content is protected !!

Discover more from Nikhara News | Kannada News Website

Subscribe now to keep reading and get access to the full archive.

Continue reading