ಸುಳ್ಯ
Kukke Sri Subrahmanya-ಕುಕ್ಕೆ ಶ್ರೀ ಸುಬ್ರಹ್ಮಣ್ಯ : ಆಶ್ಲೇಷ ಮಂದಿರ ಶಂಕುಸ್ಥಾಪನೆ ಬದಲಾಗಿ ನಾಮಫಲಕ ಅನಾವರಣಗೊಳಿಸಿದ ಸಚಿವ ರಾಮಲಿಂಗ ರೆಡ್ಡಿ : ದಾನಿ ಕೃಷ್ಣಯ್ಯ ಶೆಟ್ಟಿ ಅಳಿಯ ‘ಜೈ ಪುನೀತ್’ ನಾಮಫಲಕ ಅನಾವರಣ – ಮಾಸ್ಟರ್ ಪ್ಲಾನ್ ಸಮಿತಿ ಸಭೆ
ರಾಜ್ಯದ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗ ರೆಡ್ಡಿಯವರು ನಿನ್ನೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಆಶ್ಲೇಷ ಮಂದಿರದ ಶಂಕುಸ್ಥಾಪನೆಗೆ ಬದಲಾಗಿ ಆಡಳಿತ ಕಚೇರಿ ಬಳಿ ನಾಮಫಲಕ ಅನಾವರಣ ಕಾರ್ಯಕ್ರಮ ನಡೆಯಿತು. ಜೊತೆಗೆ, ಮಾಸ್ಟರ್ ಪ್ಲಾನ್ ಸಮಿತಿಯ ಸಭೆಯೂ ಜರಗಿತು.
ಸುಳ್ಯ: ರಾಜ್ಯದ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗ ರೆಡ್ಡಿಯವರು ನಿನ್ನೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಆಶ್ಲೇಷ ಮಂದಿರದ ಶಂಕುಸ್ಥಾಪನೆಗೆ ಬದಲಾಗಿ ಆಡಳಿತ ಕಚೇರಿ ಬಳಿ ನಾಮಫಲಕ ಅನಾವರಣ ಕಾರ್ಯಕ್ರಮ ನಡೆಯಿತು. ಜೊತೆಗೆ, ಮಾಸ್ಟರ್ ಪ್ಲಾನ್ ಸಮಿತಿಯ ಸಭೆಯೂ ಜರಗಿತು.
ಸಚಿವರು ಮೊದಲಿಗೆ ದೇವಾಲಯದಲ್ಲಿ ದರ್ಶನ ಪಡೆದರು. ಬಳಿಕ ಆಡಳಿತ ಕಚೇರಿಯ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಆಶ್ಲೇಷ ಮಂದಿರದ ದಾನಿಗಳಾದ ಮಾಜಿ ಸಚಿವ ಮಾಲೂರು ಕೃಷ್ಣಯ್ಯ ಶೆಟ್ಟಿಯವರ ಪರವಾಗಿ ಅವರ ಅಳಿಯ ಜೈ ಪುನೀತ್ ಅವರಿಗೆ ಆದೇಶ ಪತ್ರವನ್ನು ವಿತರಿಸಿದರು ಮತ್ತು ದೇವಸ್ಥಾನದ ಪರವಾಗಿ ಅವರನ್ನು ಗೌರವಿಸಿದರು.
ತದನಂತರ, ಮಾಸ್ಟರ್ ಪ್ಲಾನ್ ಸಮಿತಿಯ ಸಭೆ ನಡೆಯಿತು. ಸಭೆಯ ನಂತರ ಸಚಿವರು ಸುದ್ದಿಗಾರರೊಂದಿಗೆ ಮಾತನಾಡಿದರು. ಕೊನೆಯಲ್ಲಿ, ಆಡಳಿತ ಕಚೇರಿಯ ಮುಂಭಾಗದಲ್ಲಿ ಜೈ ಪುನೀತ್ ಅವರು ನಾಮಫಲಕವನ್ನು ಅನಾವರಣಗೊಳಿಸಿದರು.
ಈ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಬಿ. ರಮಾನಾಥ ರೈ, ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ಧಾರ್ಮಿಕ ದತ್ತಿ ಇಲಾಖೆಯ ಕಮೀಷನರ್ ಡಾ. ಕೆ.ವಿ. ವೆಂಕಟೇಶ್, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ, ಆಶ್ಲೇಷ ಮಂದಿರದ ದಾನಿಗಳಾದ ಜೈ ಪುನೀತ್, ದೇಗುಲದ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಅಶೋಕ್ ನೆಕ್ರಾಜಿ, ಮಹೇಶ್ ಕುಮಾರ್ ಕರಿಕ್ಕಳ, ಸೌಮ್ಯ ಬಿ.ಕೆ., ಪ್ರವೀಣ ಪಿ., ಲೀಲಾ ಮನಮೋಹನ್, ಅಜಿತ್ ಕುಮಾರ್, ಡಾ. ಬಿ. ರಘು, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯರಾದ ರವಿಶಂಕರ ಶೆಟ್ಟಿ, ಮಲ್ಲಿಕಾ ಪಕ್ಕಳ, ಸಹಾಯಕ ಕಾರ್ಯನಿರ್ವಾಹಣಾಧಿಕಾರಿ ಯೇಸುರಾಜ್, ಮಾಸ್ಟರ್ ಪ್ಲಾನ್ ಸಮಿತಿ ಸದಸ್ಯರಾದ ಸತೀಶ್ ಕೂಜುಗೋಡು, ಪವನ್ ಎಂ.ಡಿ. ಸುಬ್ರಹ್ಮಣ್ಯ, ಲೋಲಾಕ್ಷ ಕೈಕಂಬ, ಅಚ್ಯುತ ಗೌಡ ಅಲ್ಕಬೆ, ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ಪ್ರಮೋದ್, ಸುಬ್ರಹ್ಮಣ್ಯ ಪಿಡಿಒ ಮಹೇಶ್, ಕಾರ್ಯದರ್ಶಿ ಮೋನಪ್ಪ ಮುಂತಾದವರು ಉಪಸ್ಥಿತರಿದ್ದರು.
ಸುಳ್ಯ
ಸಿಜೆಪಿ ಮುಖಂಡರಾದ ಸೌರವ್ ದಾಸ್, ಅಶುತೋಷ್ ರಾಂಕಾ ಮತ್ತು ಅಜಿಂಕ್ಯ ಶಿಂಧೆ ಬಂಧನ, ತಿಹಾರ್ ಜೈಲಿಗೆ ಶಿಫ್ಟ್ ಸಾಧ್ಯತೆ

ನವದೆಹಲಿ: ನಿಷೇಧಿತ ಪ್ರದೇಶವಾದ ಜಂತರ್ ಮಂತರ್ ಪ್ರವೇಶಿಸಿ, ಪೊಲೀಸ್ ಬ್ಯಾರಿಕೇಡ್ ಉಲ್ಲಂಘಿಸಿದ ಹಾಗೂ ಸರ್ಕಾರಿ ಅಧಿಕಾರಿಯ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ‘ಕಾಕ್ರೋಚ್ ಜನತಾ ಪಾರ್ಟಿ’ (ಸಿಜೆಪಿ) ಮುಖಂಡರಾದ ಸೌರವ್ ದಾಸ್, ಅಶುತೋಷ್ ರಾಂಕಾ ಮತ್ತು ಅಜಿಂಕ್ಯ ಶಿಂಧೆ ಅವರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಸಿಜೆಪಿ ನಾಯಕರು ಮಂಗಳವಾರ ಮುಂಜಾನೆ ಜಂತರ್ ಮಂತರ್ ಬಳಿ ಪ್ರತಿಭಟನೆಗೆ ಯತ್ನಿಸಿದ್ದರು. ಈ ವೇಳೆ ಪೊಲೀಸರು ಅಳವಡಿಸಿದ್ದ ಬ್ಯಾರಿಕೇಡ್ಗಳನ್ನು ಭೇದಿಸಿ ಒಳಪ್ರವೇಶಿಸಿದ ಅವರು, ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ ಹಿನ್ನೆಲೆಯಲ್ಲಿ ವಶಕ್ಕೆ ಪಡೆಯಲಾಗಿತ್ತು.
ಬಂಧಿತ ನಾಯಕರನ್ನು ಇಂದು (ಬುಧವಾರ) ವಿಶೇಷ ಕಾರ್ಯಕಾರಿ ಮ್ಯಾಜಿಸ್ಟ್ರೇಟ್ (ಎಸ್ಇಎಂ) ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುತ್ತಿದ್ದು, ಬಳಿಕ ಅವರನ್ನು ತಿಹಾರ್ ಜೈಲಿಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವ ಸಾಧ್ಯತೆಯಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪೊಲೀಸರ ವಿರುದ್ಧ ಸಿಜೆಪಿ ಆರೋಪ:
ಸಿಜೆಪಿ ಕಾನೂನು ಘಟಕದ ಮುಖ್ಯಸ್ಥೆ ರತ್ನಾ ಸಿಂಗ್ ಅವರು ‘ಎಕ್ಸ್’ (ಟ್ವಿಟರ್) ಮೂಲಕ ಘಟನೆಯ ಬಗ್ಗೆ ಮಾಹಿತಿ ನೀಡಿದ್ದು, ಪೊಲೀಸರ ಕ್ರಮವನ್ನು ತೀವ್ರವಾಗಿ ಖಂಡಿಸಿದ್ದಾರೆ.
“ಜಂತರ್ ಮಂತರ್ ಘಟನೆಗೆ ಸಂಬಂಧಿಸಿದಂತೆ ನಮ್ಮ ನಾಯಕರಾದ ಸೌರವ್ ದಾಸ್, ಅಶುತೋಷ್ ಹಾಗೂ ಅಜಿಂಕ್ಯ ಅವರನ್ನು ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಬಂಧಿಸಲಾಗಿದೆ. ಅವರ ಮೇಲೆ ಅಕ್ರಮ ಪ್ರವೇಶ, ಬಾಂಡ್ ಉಲ್ಲಂಘನೆ ಹಾಗೂ ಕರ್ತವ್ಯಕ್ಕೆ ಅಡ್ಡಿ ಸೇರಿದಂತೆ ವಿವಿಧ ಸೆಕ್ಷನ್ಗಳಡಿ ಪ್ರಕರಣ ದಾಖಲಿಸಲಾಗಿದೆ. ತಡರಾತ್ರಿಯವರೆಗೂ ವಕೀಲರನ್ನು ಭೇಟಿ ಮಾಡಲು ಪೊಲೀಸರು ಅವಕಾಶ ನೀಡಿರಲಿಲ್ಲ.
ಮುಂಜಾನೆ 3 ಗಂಟೆ ಸುಮಾರಿಗೆ ಖಾಸಗಿ ವ್ಯಾನ್ ಮೂಲಕ ಅವರನ್ನು ಪಾರ್ಲಿಮೆಂಟ್ ಸ್ಟ್ರೀಟ್ ಠಾಣೆಗೆ ಕರೆತರಲಾಗಿದೆ. ಈ ಎಲ್ಲ ಕಾನೂನುಬಾಹಿರ ಕ್ರಮಗಳ ನಡುವೆಯೂ ನಮ್ಮ ನಾಯಕರ ನೈತಿಕ ಸ್ಥೈರ್ಯ ಕುಗ್ಗಿಲ್ಲ” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಿನ್ನೆಲೆ ಏನು?
ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆಯಲ್ಲಿ ಭಾರಿ ಅಕ್ರಮಗಳು ನಡೆದಿವೆ ಎಂದು ಆರೋಪಿಸಿ ಸಿಜೆಪಿ ಹಾಗೂ ಇತರ ಕೆಲವು ಸಂಘಟನೆಗಳು ದೆಹಲಿಯಲ್ಲಿ ಪ್ರತಿಭಟನೆಗಳನ್ನು ತೀವ್ರಗೊಳಿಸಿವೆ. ಈ ಹಿನ್ನೆಲೆಯಲ್ಲಿ ರಾಜಧಾನಿಯಾದ್ಯಂತ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.
ಕಳೆದ ಅಕ್ಟೋಬರ್ 11ರಂದು ನೂತನ ಆದೇಶ ಹೊರಡಿಸಿದ್ದ ದೆಹಲಿ ಪೊಲೀಸ್ ಕಮಿಷನರ್ ಅನುರಾಗ್ ಕುಮಾರ್ ಅವರು, ಯಾವುದೇ ಧರಣಿ ಮತ್ತು ಪ್ರತಿಭಟನೆಗಳಿಗೆ ಕೇವಲ ರಾಮ್ಲೀಲಾ ಮೈದಾನ, ಬುರಾರಿ ಗ್ರೌಂಡ್ ಹಾಗೂ ಸಿಬಿಡಿ ಗ್ರೌಂಡ್ಗಳನ್ನು ಮಾತ್ರ ನಿಗದಿಪಡಿಸಿದ್ದರು. ಈ ಆದೇಶದ ಅನ್ವಯ ಜಂತರ್ ಮಂತರ್ ಅನ್ನು ಪ್ರತಿಭಟನಾ ಸ್ಥಳಗಳ ಪಟ್ಟಿಯಿಂದ ಕೈಬಿಡಲಾಗಿದ್ದು, ಅಲ್ಲಿ ಜಮಾವಣೆಯನ್ನು ನಿಷೇಧಿಸಲಾಗಿದೆ. ನಿಷೇಧದ ನಡುವೆಯೂ ಪ್ರತಿಭಟನೆ ನಡೆಸಿದ್ದರಿಂದ ಈ ಬಂಧನ ಕಾರ್ಯಾಚರಣೆ ನಡೆದಿದೆ.
ನಿಧನ ವಾರ್ತೆ
Kalmadka-ಸುಳ್ಯ ಕಲ್ಮಡ್ಕದಲ್ಲಿ ದುರಂತ: ವಿದ್ಯುತ್ ಸ್ಪರ್ಶಿಸಿ ಮೀನು ಹಿಡಿಯಲು ಹೋದ ಬಾವ–ಬಾಮೈದ ಸಾವು
ಮೀನು ಹಿಡಿಯಲು ತೆರಳಿದ್ದ ಇಬ್ಬರು ವಿದ್ಯುತ್ ಸ್ಪರ್ಶಿಸಿ ಮೃತಪಟ್ಟ ದಾರುಣ ಘಟನೆ ಸುಳ್ಯ ತಾಲೂಕಿನ ಕಲ್ಮಡ್ಕದಲ್ಲಿ ಅ.12ರ ರಾತ್ರಿ ಸಂಭವಿಸಿದೆ. ಮೃತಪಟ್ಟವರು ಬಾವ–ಬಾಮೈದ ಸಂಬಂಧಿಗಳಾಗಿದ್ದು, ಅವರೊಂದಿಗೆ ತೆರಳಿದ್ದ ಮತ್ತೊಬ್ಬ ಯುವಕ ಗಾಯಗೊಂಡಿದ್ದಾರೆ.
ಕಲ್ಮಡ್ಕ: ಮೀನು ಹಿಡಿಯಲು ತೆರಳಿದ್ದ ಇಬ್ಬರು ವಿದ್ಯುತ್ ಸ್ಪರ್ಶಿಸಿ ಮೃತಪಟ್ಟ ದಾರುಣ ಘಟನೆ ಸುಳ್ಯ ತಾಲೂಕಿನ ಕಲ್ಮಡ್ಕದಲ್ಲಿ ಅ.12ರ ರಾತ್ರಿ ಸಂಭವಿಸಿದೆ. ಮೃತಪಟ್ಟವರು ಬಾವ–ಬಾಮೈದ ಸಂಬಂಧಿಗಳಾಗಿದ್ದು, ಅವರೊಂದಿಗೆ ತೆರಳಿದ್ದ ಮತ್ತೊಬ್ಬ ಯುವಕ ಗಾಯಗೊಂಡಿದ್ದಾರೆ.
ಕಲ್ಮಡ್ಕದ ಬೊಮ್ಮೆಟ್ಟಿ ನಿವಾಸಿಗಳಾದ ಬಾಬು–ಸೀತಾ ದಂಪತಿಯ ಪುತ್ರ ಭರತ್ (28) ಹಾಗೂ ಭರತ್ ಅವರ ಸಹೋದರಿ ಭವ್ಯಾ ಅವರ ಪತಿ, ಬೆಳ್ತಂಗಡಿ ತಾಲೂಕಿನ ಮುಂಗೆಲು ನಿವಾಸಿಗಳಾದ ವೀರಪ್ಪ–ಸೀತಮ್ಮ ದಂಪತಿಯ ಪುತ್ರ ರಮೇಶ್ (34) ಮೃತಪಟ್ಟವರು. ಗಾಯಗೊಂಡ ಯುವಕನನ್ನು ಅವರ ಸಂಬಂಧಿ ಸಿಂಚನ್ ಎಂದು ಗುರುತಿಸಲಾಗಿದೆ.
ಅ.12ರಂದು ರಾತ್ರಿ ಸುಮಾರು 10.30ರ ವೇಳೆಗೆ ಭರತ್, ರಮೇಶ್ ಹಾಗೂ ಸಿಂಚನ್ ಅವರು ಮನೆಯಿಂದ ಸುಮಾರು ಒಂದೂವರೆ ಕಿ.ಮೀ. ದೂರದಲ್ಲಿರುವ ತೋಡಿಗೆ ಮೀನು ಹಿಡಿಯಲು ತೆರಳಿದ್ದರು ಎನ್ನಲಾಗಿದೆ. ತೋಡಿನ ಮೇಲ್ಭಾಗದಲ್ಲಿ ತಂತಿ ಅಳವಡಿಸಿ ಅದಕ್ಕೆ ವಿದ್ಯುತ್ ಸಂಪರ್ಕ ನೀಡಲಾಗಿತ್ತು ಎಂದು ತಿಳಿದುಬಂದಿದೆ.
ಈ ತಂತಿಯನ್ನು ದಾಟುವ ವೇಳೆ ಭರತ್ ಮತ್ತು ರಮೇಶ್ ಅವರಿಗೆ ವಿದ್ಯುತ್ ಸ್ಪರ್ಶಿಸಿದ್ದು, ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಅವರೊಂದಿಗೆ ಇದ್ದ ಸಿಂಚನ್ ಅವರಿಗೂ ವಿದ್ಯುತ್ ತಗುಲಿ ಎಸೆಯಲ್ಪಟ್ಟಿದ್ದು, ಕೈ, ಎದೆ ಹಾಗೂ ಕಾಲುಗಳಿಗೆ ಸುಟ್ಟ ಗಾಯಗಳಾಗಿವೆ ಎಂದು ತಿಳಿದುಬಂದಿದೆ.
ನಿಧನ ವಾರ್ತೆ
Sullia-Big Breaking: ಸುಳ್ಯ: ವಿದ್ಯುತ್ ಶಾಕ್ಗೆ ಇಬ್ಬರು ಯುವಕರು ಬಲಿ; ಬಾಲಕನಿಗೆ ಗಾಯ
ಸುಳ್ಯ ತಾಲೂಕಿನ ಕಲ್ಮಡ್ಕ ಗ್ರಾಮದ ಬೊಮ್ಮೆಟ್ಟಿಯಲ್ಲಿ ವಿದ್ಯುತ್ ಶಾಕ್ ತಗುಲಿ ಇಬ್ಬರು ಯುವಕರು ಮೃತಪಟ್ಟ ದಾರುಣ ಘಟನೆ ಅ.12ರ ತಡರಾತ್ರಿ ನಡೆದಿದೆ. ಘಟನೆಯಲ್ಲಿ ಮತ್ತೋರ್ವ ಬಾಲಕ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಸುಳ್ಯ: ತಾಲೂಕಿನ ಕಲ್ಮಡ್ಕ ಗ್ರಾಮದ ಬೊಮ್ಮೆಟ್ಟಿಯಲ್ಲಿ ವಿದ್ಯುತ್ ಶಾಕ್ ತಗುಲಿ ಇಬ್ಬರು ಯುವಕರು ಮೃತಪಟ್ಟ ದಾರುಣ ಘಟನೆ ಅ.12ರ ತಡರಾತ್ರಿ ನಡೆದಿದೆ. ಘಟನೆಯಲ್ಲಿ ಮತ್ತೋರ್ವ ಬಾಲಕ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಮೃತರನ್ನು ಬೊಮ್ಮೆಟ್ಟಿ ನಿವಾಸಿಗಳಾದ ಗಣೇಶ್ ಹಾಗೂ ಭರತ್ ಎಂದು ಗುರುತಿಸಲಾಗಿದೆ. ತಡರಾತ್ರಿ ಸಂಭವಿಸಿದ ಈ ದುರಂತದಿಂದ ಸ್ಥಳೀಯರಲ್ಲಿ ಆತಂಕ ಹಾಗೂ ಶೋಕದ ವಾತಾವರಣ ನಿರ್ಮಾಣವಾಗಿದೆ.
ವಿದ್ಯುತ್ ಶಾಕ್ ತಗುಲಲು ನಿಖರ ಕಾರಣವೇನು ಎಂಬುದು ಇನ್ನಷ್ಟೇ ತಿಳಿದುಬರಬೇಕಿದೆ. ಘಟನೆಯ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.
-
ನಿಧನ ವಾರ್ತೆ23 hours agoKalmadka-ಸುಳ್ಯ ಕಲ್ಮಡ್ಕದಲ್ಲಿ ದುರಂತ: ವಿದ್ಯುತ್ ಸ್ಪರ್ಶಿಸಿ ಮೀನು ಹಿಡಿಯಲು ಹೋದ ಬಾವ–ಬಾಮೈದ ಸಾವು
-
Uncategorized21 hours agoLawyer Amrutesh-ಸೌಜನ್ಯ ಪ್ರಕರಣ ಮರುತನಿಖೆ : ಸಂತೋಷ್ ರಾವ್ ವಿರುದ್ಧ ಬಲವಾದ ಸಾಕ್ಷ್ಯಗಳಿವೆ: ಧಾರ್ಮಿಕ ಕ್ಷೇತ್ರದ ಮೇಲೆ ಷಡ್ಯಂತ್ರ ನಡೆಯುತ್ತಿದೆ : ಹೈಕೋರ್ಟ್ ವಕೀಲ ಅಮೃತೇಶ್
-
ಶಿಕ್ಷಣ23 hours agoVivekananda-ಪುತ್ತೂರಿನ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಇಬ್ಬರು ಉಪನ್ಯಾಸಕರಿಗೆ ಡಾಕ್ಟರೇಟ್ ಪದವಿ
-
ಬಿಗ್ ನ್ಯೂಸ್23 hours agoVitla-ವಿಟ್ಲ: ಕಾರು–ಆಕ್ಟಿವಾ ಡಿಕ್ಕಿ; ಸವಾರನಿಗೆ ಗಂಭೀರ ಗಾಯ
-
ಮಂಗಳೂರು22 hours agoRaghupti Bhat-2028ರ ಚುನಾವಣೆಯಲ್ಲಿ ಸ್ಪರ್ಧೆ ಖಚಿತ; ಕಾಂಗ್ರೆಸ್ ಸೇರ್ಪಡೆ ಬಗ್ಗೆ ಏನು ಹೇಳಿದ್ರು ರಘುಪತಿ ಭಟ್
-
ರಾಜಕೀಯ20 hours agoSiddaramaiah-ಸ್ಟಿಂಗ್ ವಿಡಿಯೋ ಪ್ರಸಾರಕ್ಕೆ ಬ್ರೇಕ್ ಹಾಕಲು ಸಿದ್ದರಾಮಯ್ಯ ಕೋರ್ಟ್ ಮೊರೆ
-
ನಿಧನ ವಾರ್ತೆ21 hours agoSubramanya-ಸರ್ಪಸಂಸ್ಕಾರ ಸೇವೆಗೆ ಬಂದ ಯಾತ್ರಾರ್ಥಿಯ ಮೃತದೇಹ ಕುಮಾರಧಾರ ನದಿಯಲ್ಲಿ ಪತ್ತೆ
-
ಬಿಗ್ ನ್ಯೂಸ್22 hours agoPuttur-ಪುತ್ತೂರಿನಲ್ಲಿ ಜಯದೇವ, ಕಿದ್ವಾಯಿ, ನಿಮ್ಹಾನ್ಸ್ ಘಟಕ ಸ್ಥಾಪನೆಗೆ ಹಕ್ಕೊತ್ತಾಯ; 1 ಲಕ್ಷ ಸಹಿ ಸಂಗ್ರಹದ ಗುರಿ; ಸೇಡಿಯಾಪು, ಆರ್ಯಾಪುವಿನಲ್ಲಿ ಜಮೀನು ಗುರುತು


















