ರಾಜಕೀಯ
Ramalinga Reddy-ಧರ್ಮಸ್ಥಳ ದೇವಸ್ಥಾನ ಮುಜರಾಯಿ ವ್ಯಾಪ್ತಿಗೆ – ಏನಂದ್ರು ಸಚಿವ ರಾಮಲಿಂಗಾ ರೆಡ್ಡಿ
ಧರ್ಮಸ್ಥಳದ ಶ್ರೀ ಮಂಜುನಾಥಸ್ವಾಮಿ ದೇವಸ್ಥಾನವನ್ನು ಮುಜರಾಯಿ ಇಲಾಖೆಯ ವ್ಯಾಪ್ತಿಗೆ ತರಲು ರಾಜ್ಯ ಸರ್ಕಾರದ ಮೇಲೆ ಯಾವುದೇ ಒತ್ತಡವಿಲ್ಲ ಎಂದು ಮುಜರಾಯಿ ಸಚಿವ ಆರ್. ರಾಮಲಿಂಗಾ ರೆಡ್ಡಿ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರು: ಧರ್ಮಸ್ಥಳದ ಶ್ರೀ ಮಂಜುನಾಥಸ್ವಾಮಿ ದೇವಸ್ಥಾನವನ್ನು ಮುಜರಾಯಿ ಇಲಾಖೆಯ ವ್ಯಾಪ್ತಿಗೆ ತರಲು ರಾಜ್ಯ ಸರ್ಕಾರದ ಮೇಲೆ ಯಾವುದೇ ಒತ್ತಡವಿಲ್ಲ ಎಂದು ಮುಜರಾಯಿ ಸಚಿವ ಆರ್. ರಾಮಲಿಂಗಾ ರೆಡ್ಡಿ ಸ್ಪಷ್ಟಪಡಿಸಿದ್ದಾರೆ.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗತಕಾಲದಲ್ಲಿ ದೇವಸ್ಥಾನಗಳನ್ನು ವಂಶಪಾರಂಪರ್ಯವಾಗಿ ನಡೆಸಲಾಗುತ್ತಿತ್ತು. ಆದರೆ, ಕಾಲಾನಂತರ ಕುಟುಂಬಗಳಲ್ಲಿ ಜನಸಂಖ್ಯೆ ಹೆಚ್ಚಳವಾದಂತೆ, ದೇವಸ್ಥಾನ ನಿರ್ವಹಣೆಗೆ ಸಂಬಂಧಿಸಿದಂತೆ ವಿವಾದಗಳು ಉದ್ಭವಿಸಿದವು. ಈ ಸಮಸ್ಯೆಗಳನ್ನು ಬಗೆಹರಿಸಲು ಬ್ರಿಟಿಷರ ಕಾಲದಲ್ಲಿ ಮುಜರಾಯಿ ಇಲಾಖೆ ಸ್ಥಾಪನೆಯಾಯಿತು. ವಂಶಪಾರಂಪರ್ಯ ದೇವಸ್ಥಾನಗಳನ್ನು ಮುಜರಾಯಿ ವ್ಯಾಪ್ತಿಗೆ ತರಲು ಕೇಂದ್ರ ಸರ್ಕಾರವು ಕಾಯ್ದೆಯೊಂದನ್ನು ಜಾರಿಗೆ ತಂದರೆ, ಅದು ದೇಶಾದ್ಯಂತ ಅನ್ವಯವಾಗಲಿದೆ. ಆದ್ದರಿಂದ, ಈ ವಿಷಯದಲ್ಲಿ ಕೇಂದ್ರ ಸರ್ಕಾರವೇ ಸೂಕ್ತ ನಿರ್ಧಾರ ಕೈಗೊಳ್ಳಲಿ ಎಂದು ಅವರು ತಿಳಿಸಿದರು.
ರಾಜ್ಯದ ಮುಜರಾಯಿ ಇಲಾಖೆಯಡಿ ಸುಮಾರು 35,500 ‘ಸಿ’ ಗ್ರೇಡ್ ದೇವಸ್ಥಾನಗಳಿದ್ದು, ಇವುಗಳ ಅಭಿವೃದ್ಧಿಗೆ ಈ ಹಿಂದೆ ಆದ್ಯತೆ ನೀಡಲಾಗಿರಲಿಲ್ಲ. ಈಗ ನಮ್ಮ ಸರ್ಕಾರ ಈ ದೇವಸ್ಥಾನಗಳ ಉನ್ನತಿಗೆ ಒತ್ತು ನೀಡುತ್ತಿದೆ. ಈ ದೇವಸ್ಥಾನಗಳಲ್ಲಿ ಸುಮಾರು 40,000ಕ್ಕೂ ಹೆಚ್ಚು ಅನುವಂಶಿಕ ಅರ್ಚಕರು ಇದ್ದಾರೆ, ಆದರೆ ಇವರಿಗೆ ಯಾವುದೇ ಸಂಬಳವಿಲ್ಲ. ಸರ್ಕಾರದಿಂದ ತಸ್ತಿಕ್ ಹಣವನ್ನು ಒದಗಿಸಲಾಗುವುದು ಎಂದು ಸಚಿವ ರೆಡ್ಡಿ ಹೇಳಿದ್ದಾರೆ.
ರಾಜಕೀಯ
H.D. Kumaraswamy-ರಾಜ್ಯ ರಾಜಕಾರಣದಲ್ಲಿ ಬಿರುಗಾಳಿ : ಬಾಂಬ್ ಸಿಡಿಸಿದ ಎಚ್.ಡಿ. ಕುಮಾರಸ್ವಾಮಿ – ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಷಡ್ಯಂತ್ರದಲ್ಲಿ ಕೃಪಾ ಆಳ್ವ..! ಗಂಭೀರ ಆರೋಪ
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಆಪರೇಷನ್ ಷಡ್ಯಂತ್ರದಲ್ಲಿ ಕರಾವಳಿ ಭಾಗದ ಕಾಂಗ್ರೆಸ್ ನಾಯಕಿ ಕೃಪಾ ಆಳ್ವ ಭಾಗಿಯಾಗಿದ್ದಾರೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಆಪರೇಷನ್ ಷಡ್ಯಂತ್ರದಲ್ಲಿ ಕರಾವಳಿ ಭಾಗದ ಕಾಂಗ್ರೆಸ್ ನಾಯಕಿ ಕೃಪಾ ಆಳ್ವ ಭಾಗಿಯಾಗಿದ್ದಾರೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರ ಮೊದಲ ಆಡಳಿತಾವಧಿಯಲ್ಲಿ ಕೃಪಾ ಆಳ್ವ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷೆಯಾಗಿ ಕಾರ್ಯನಿರ್ವಹಿಸಿದ್ದರು ಎಂದು ಹೇಳಿದರು. ಸಿದ್ದರಾಮಯ್ಯ ವಿರುದ್ಧ ನಡೆದ ಸ್ಟಿಂಗ್ ಆಪರೇಷನ್ನಲ್ಲಿ ಅವರು ನೇರವಾಗಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿದರು.
ಗೃಹ ಸಚಿವರ ವಿರುದ್ಧವೂ ವಾಗ್ದಾಳಿ ನಡೆಸಿದ ಕುಮಾರಸ್ವಾಮಿ, ಅಧಿಕಾರ ಇದೆ ಎಂಬ ಕಾರಣಕ್ಕೆ ಏನು ಬೇಕಾದರೂ ಮಾಡಬಹುದೇ ಎಂದು ಪ್ರಶ್ನಿಸಿದರು. “ಗೃಹ ಇಲಾಖೆ ನಿಮ್ಮಪ್ಪನದ್ದಾ? ನನ್ನ ಕಾರ್ಯಕರ್ತರನ್ನು ಬಂಧಿಸುತ್ತೀರಾ? ನಾನೇ ನಿಮ್ಮ ಕಚೇರಿಗೆ ಬರುತ್ತೇನೆ. ತಾಕತ್ತಿದ್ದರೆ ನನ್ನನ್ನೇ ಬಂಧಿಸಿ ನೋಡೋಣ” ಎಂದು ಸವಾಲು ಹಾಕಿದರು.
ತಮ್ಮ ಮೇಲೆ ಅನುಮಾನ ಬಂದರೆ ಬಂಧಿಸುವುದಾಗಿ ಹೇಳುವವರು, ಮುಖ್ಯಮಂತ್ರಿ ಪಕ್ಕದಲ್ಲಿ ಕುಳಿತಿದ್ದ ವ್ಯಕ್ತಿಯ ಬಗ್ಗೆ ಏಕೆ ಅನುಮಾನ ವ್ಯಕ್ತಪಡಿಸಿಲ್ಲ ಎಂದು ಪ್ರಶ್ನಿಸಿದ ಅವರು, ಮುಖ್ಯಮಂತ್ರಿಯನ್ನು ಉದ್ದೇಶಪೂರ್ವಕವಾಗಿ ಸಿಲುಕಿಸುವ ಪ್ರಯತ್ನ ನಡೆದಿದೆ ಎಂದು ಆರೋಪಿಸಿದರು.
ತಮ್ಮ ಪುತ್ರನ ಪೋಸ್ಟರ್ ಅಂಟಿಸಿದ ಘಟನೆ ಉಲ್ಲೇಖಿಸಿದ ಕುಮಾರಸ್ವಾಮಿ, ಈ ಸಂದರ್ಭದಲ್ಲಿ ಪ್ರಿಯಾಂಕ್ ಖರ್ಗೆ ಎಲ್ಲಿ ಹೋಗಿದ್ದರು ಎಂದು ಪ್ರಶ್ನಿಸಿದರು. ಹೆದರಿಕೆ, ಬೆದರಿಕೆಗಳಿಗೆ ತಾವು ಬಗ್ಗುವುದಿಲ್ಲ. ಬೇಕಾದರೆ ಕಮಿಷನರ್ ಕಚೇರಿಗೆ ಬರುತ್ತೇನೆ, ಬಂಧಿಸಿ ಎಂದು ಸವಾಲು ಹಾಕಿದರು.
ಜೆ.ಪಿ. ನಗರದ ಮನೆಯಲ್ಲಿ ತಾವು ಎಲೆಕ್ಟ್ರಾನಿಕ್ ಉಪಕರಣಗಳನ್ನು ಇಟ್ಟುಕೊಂಡಿದ್ದೇವೆಯೇ ಎಂದು ಪ್ರಶ್ನಿಸಿದ ಅವರು, ಅಧಿಕಾರವನ್ನು ನ್ಯಾಯಯುತವಾಗಿ ಬಳಸಬೇಕು ಎಂದರು. ಸ್ಟಿಂಗ್ ಆಪರೇಷನ್ ನಡೆಸಿದವರನ್ನು ಏಕೆ ಬಂಧಿಸಿಲ್ಲ? ಪೊಲೀಸ್ ಅಧಿಕಾರಿಯನ್ನು ಕೊಲೆ ಮಾಡುವುದಾಗಿ ಹೇಳಿದ ವ್ಯಕ್ತಿಯ ವಿರುದ್ಧ ಏಕೆ ಕ್ರಮ ಕೈಗೊಂಡಿಲ್ಲ ಎಂದು ಪ್ರಶ್ನಿಸಿದರು.
ಇದೇ ವೇಳೆ, ತಾವು ಬಳಸಿದ ಪದಗಳ ಕುರಿತು ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ತಾವು ಈ ಮಟ್ಟದ ಪದಗಳನ್ನು ಬಳಸಿರಲಿಲ್ಲ. ಆದರೆ, ಮತ್ತೊಬ್ಬರು ಬಳಸಿದ ಪದಗಳಿಂದ ಆಕ್ರೋಶಗೊಂಡು ಪ್ರತಿಕ್ರಿಯಿಸಿದ್ದೇನೆ. ಇದಕ್ಕಾಗಿ ಜನರಲ್ಲಿ ಕ್ಷಮೆ ಕೇಳುತ್ತೇನೆ ಎಂದು ಹೇಳಿದರು.
ರಾಜಕೀಯ
Amal Ramachandra-ಒಳ್ಳೆಯ ರೀತಿಯಲ್ಲಿ ಬೆಳೆವಿಮೆ ಬಂದರೆ ಮೋದಿಯಿಂದಾಗಿ ಎಂದು ಬೊಬ್ಬೆ ಹಾಕುತ್ತಿದ್ದ ಬಿಜೆಪಿ ಈಗ ಕಾಂಗ್ರೆಸ್ ನ್ನು ದೂರುತ್ತಿದೆ..! ಟರ್ಮ್ ಶೀಟ್ ಬದಲಾವಣೆ ಮಾಡಿದ್ದು ಬಿಜೆಪಿ ಈ ಬಗ್ಗೆ ದಾಖಲೆಯಿದೆ; ಅಶೋಕ್ ರೈ ಹುಟ್ಟಿಸಿದ ಲಿಸ್ಟ್ ಕೊಡ್ತೇನೆ 8 ವರ್ಷಗಳಲ್ಲಿ ಬೆಳ್ತಂಗಡಿಯಲ್ಲಿ ಪೂಂಜಾ ಹುಟ್ಟಿಸಿದ್ದೇನೂ..? ಪುಡಾ ಅಧ್ಯಕ್ಷ ಅಮಳ ರಾಮಚಂದ್ರ
ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆ ಒಂದು ನಿಗೂಢ ಯೋಜನೆ. ಕಾರ್ಪೊರೇಟ್ ಜಗತ್ತಿನ ಪರವಾಗಿ ಕಾರ್ಯನಿರ್ವಹಿಸುವ ಮೋದಿ ಸರಕಾರ ರೈತರನ್ನು ಕತ್ತಲಲ್ಲಿಟ್ಡು, ವಿಮಾ ಕಂಪೆನಿಗಳಿಗೆ ಲಾಭ ಮಾಡಿಕೊಡುವ ಉದ್ದೇಶದಿಂದಲೇ ತಂದ ಯೋಜನೆ ಇದು ಎಂದು ಪುಡಾ ಅಧ್ಯಕ್ಷರಾದ ಅಮಳ ರಾಮಚಂದ್ರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆ ಒಂದು ನಿಗೂಢ ಯೋಜನೆ. ಕಾರ್ಪೊರೇಟ್ ಜಗತ್ತಿನ ಪರವಾಗಿ ಕಾರ್ಯನಿರ್ವಹಿಸುವ ಮೋದಿ ಸರಕಾರ ರೈತರನ್ನು ಕತ್ತಲಲ್ಲಿಟ್ಡು, ವಿಮಾ ಕಂಪೆನಿಗಳಿಗೆ ಲಾಭ ಮಾಡಿಕೊಡುವ ಉದ್ದೇಶದಿಂದಲೇ ತಂದ ಯೋಜನೆ ಇದು.
ಈ ಯೋಜನೆಯಲ್ಲಿ ಸರಕಾರ ಮತ್ತು ವಿಮಾ ಕಂಪೆನಿಗಳ ನಡುವೆ ಒಪ್ಪಂದ ಏರ್ಪಟ್ಟು , ರೈತ ಪ್ರೀಮಿಯಂ ಪಾವತಿಸಿದ 1.5 ವರ್ಷದ ನಂತರ ಸ್ವಯಂಚಾಲಿತವಾಗಿ ರೈತರ ಖಾತೆಗೆ ವಿಮಾ ಮೊತ್ತ ಪಾವತಿಯಾಗುವ ವ್ಯವಸ್ಥೆ. ಈ ಯೋಜನೆಗೆ ಅಪ್ಪ ಯಾರು, ಇದನ್ನು ನಿರ್ವಹಿಸುವವರು ಯಾರು, ಸರಿಯಾದ ವಿಮಾ ಮೊತ್ತ ಪಾವತಿಯಾಗದೇ ಹೋದರೆ ದೂರು ದುಮ್ಮಾನಗಳನ್ನು ಯಾರಿಗೆ ಸಲ್ಲಿಸಬೇಕು , ಎಷ್ಟು ಮಳೆ ಬಂದಿದೆ, ಎಷ್ಟು ಉಷ್ಣಾಂಶ ಹೆಚ್ಚಾಗಿದೆ, ನಮಗೆ ನ್ಯಾಯವಾಗಿ ಎಷ್ಟು ಪರಿಹಾರ ಸಿಗಬೇಕು, ಪರಿಹಾರ ನ್ಯಾಯಬದ್ಧವಾಗಿದೆಯೇ ಎಂಬ ಯಾವುದೇ ವಿವರಗಳು ಪಾಲಿಸಿದಾರರಿಗೆ ಸಿಗದ , ಪಾರದರ್ಶಕತೆಯ ಲವಲೇಷವೂ ಇಲ್ಲದ ಒಂದು ವ್ಯವಸ್ಥೆ ಇದು ಎಂದು ಪುಡಾ ಅಧ್ಯಕ್ಷರಾದ ಅಮಳ ರಾಮಚಂದ್ರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಪುತ್ತೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅಮಳ ರಾಮಚಂದ್ರ , ವಿಮಾ ಮೊತ್ತ ಪ್ರತಿ ಹೆಕ್ಟೇರಿಗೆ ಅಡಿಕೆಗೆ 1,28,000, ಕಾಳು ಮೆಣಸಿಗೆ 47,000 , ಒಟ್ಟು 1,75,000. ಇದರ ಪ್ರೀಮಿಯಂ ಕಂತು 25% ಆದರೆ ಸರಕಾರಗಳು ವಿಮಾ ಕಂಪೆನಿಗೆ ನೀಡುವ ತಲಾ 20% ಹಣ ರೂ 35,000. ಪ್ರೀಮಿಯಂ ಅಡಿಕೆಗೆ 35℅ ಕಾಳುಮೆಣಸಿಗೆ 30% ಆದರೆ ಉಭಯ ಸರಕಾರಗಳು ಕಂಪೆನಿಗೆ ನೀಡುವ 30%ಹಣದ ಮೊತ್ತ ರೂ ಅಡಿಕೆಗೆ ರೂ38,400, ಕಾಳುಮೆಣಸಿಗೆ ರೂ11750, ಒಟ್ಟು ರೂ50,150. ಇಷ್ಟು ದೊಡ್ಡ ಮೊತ್ತದ ನಮ್ಮ ತೆರಿಗೆಯ ಹಣ ಸರಕಾರ ವಿಮಾ ಕಂಪೆನಿಗೆ ನೀಡುವುದಾದರೆ, ಪರಿಹಾರ ಬಂದರೆ ಬಂತು, ಬಾರದಿದ್ದರೆ ಇಲ್ಲ, ಇದರಿಂದ ವಿಮಾ ಕಂಪೆನಿಗಳಿಗೆ ಲಾಭ ಆಗುವುದಾದರೆ, ನಮ್ಮ ಮತ್ತು ಸರಕಾರದ ಮದ್ಯೆ ವಿಮಾ ಕಂಪೆನಿ ಯಾಕೆ ಬೇಕು? ಸರಕಾರಗಳು ನೇರವಾಗಿಯೇ ಪ್ರತಿವರ್ಷ ಪ್ರತಿ ಹೆಕ್ಟೇರಿಗೆ ರೂ 50150ರಂತೆ ರೈತರ ಖಾತೆಗೆ ನೇರವಾಗಿ ಹಾಕಬಹುದಲ್ಲವೇ ? ಸರಕಾರದ ಹಣದಲ್ಲಿ ವಿಮಾ ಕಂಪೆನಿಗಳಿಗೆ ಲಾಭ ಮಾಡಿಕೊಡುವುದಕ್ಕಾಗಿಯೇ ಈ ಯೋಜನೆಯನ್ನು ಕೇಂದ್ರದ ಮೋದಿ ಸರಕಾರ ಜಾರಿಗೆ ತಂದಿದೆ.
2016ರಲ್ಲಿ ಮರುವಿನ್ಯಾಸಗೊಳಿಸಿದ ಬೆಳೆ ವಿಮಾ ಯೋಜನೆ ಆರಂಭಗೊಂಡ ನಂತರ ಮೊದಲ ಕೆಲವು ವರ್ಷಗಳಲ್ಲಿ ಯೋಜನೆ ಬಹಳ ಚೆನ್ನಾಗಿತ್ತು. ಹತ್ತು ಸಾವಿರ 20 ಸಾವಿರ ಪ್ರೀಮಿಯಂ ಕಟ್ಟಿದ ರೈತರಿಗೆ ಲಕ್ಷ ಲಕ್ಷ ಹಣ ಬರುತ್ತಿತ್ತು. ರಾಜ್ಯ ಮತ್ತು ಕೇಂದ್ರದ ಸರಕಾರಗಳು ಸೇರಿ ಅನುಷ್ಟಾನಗೊಳಿಸಿದ ಈ ಯೋಜನೆಯಲ್ಲಿ ರೈತರಿಗೆ ಒಳ್ಳೆಯ ಪರಿಹಾರ ಬಂದಾಗ ಮೋದಿಯಿಂದಾಗಿ ಹಣ ರೈತರಿಗೆ ಬಂತು ಎಂದು ಬೊಬ್ಬೆ ಹಾಕುತ್ತಿದ್ದ ಬಿಜೆಪಿಯವರಿಗೆ ಈಗ ರಾಜ್ಯ ಸರ್ಕಾರವನ್ನು ದೂರುತ್ತಿರುವುದು ಅತ್ಯಂತ ನಾಚಿಕೆಗೇಡು ಸಂಗತಿಯಾಗಿ. ಅದರಲ್ಲಿಯೂ ಯಾವ ತಪ್ಪನ್ನು ಮಾಡದ ರಾಜ್ಯ ಕಾಂಗ್ರೆಸ್ ಸರಕಾರವನ್ನು ವಿನಾಕಾರಣ ತಪ್ಪು ಮಾಹಿತಿ ನೀಡಿ ದೂಷಿಸುವುದು ಮತ್ತು ತಮ್ಮದೇ ಪಕ್ಷದ ಜೋಪಾಸಣಾ ಮುಖ್ಯಮಂತ್ರಿಗಳು ಮತ್ತು ರಾಜ್ಯಪಾಲರು ಮಾಡಿದ ತಪ್ಪನ್ನು ಕಾಂಗ್ರೆಸ್ ಸರಕಾರದ ಮೇಲೆ ಹೇರುವುದು ಅತ್ಯಂತ ನಾಚಿಕೆಗೇಡಿನ ಸಂಗತಿಯಾಗಿದೆ.
2023ರಲ್ಲಿ ಟರ್ಮಶೀಟ್ ಬದಲಾವಣೆ ಮಾಡಲಾಯಿತು ಎಂದು ಬಿಜೆಪಿಯವರು ಆರೂಪಿಸುತ್ತಿರುವುದು ನಿಜ. ಆದರೆ ಈ ಟರ್ಮ್ ಶೀಟ್ 2023ರಲ್ಲಿ ಯಾವಾಗ ಬದಲಾವಣೆ ಆಯಿತು , ಯಾವಾಗ ಟೆಂಡರ್ ಕರೆಯಲಾಯಿತು, ಯಾವಾಗ ಯೋಜನೆಯನ್ನು ಅನುಷ್ಠಾನಗೊಳಿಸಲಾಯಿತು ಎನ್ನುವುದನ್ನು ನೋಡಿದರೆ ಬಿಜೆಪಿಯವರು ಎಷ್ಟು ಸುಳ್ಳು ಹೇಳುತ್ತಿದ್ದಾರೆ ಅನ್ನೋದು ಅರ್ಥ ಆಗುತ್ತದೆ. ಕರ್ನಾಟಕದಲ್ಲಿ ಕಳೆದ ವಿಧಾನಸಭಾ ಚುನಾವಣೆ ನಡೆದದ್ದು 2023ರ ಮೇ ಹತ್ತರಂದು. ಫಲಿತಾಂಶ ಪ್ರಕಟವಾದದ್ದು 2023 ನೇ ಇಸವಿಯ ಮೇ 13 ರಂದು. ಫಲಿತಾಂಶ ಪ್ರಕಟವಾದ ನಂತರ, ಕಾಂಗ್ರೆಸ್ ಪಕ್ಷ ಬಹುಮತವನ್ನು ಪಡೆದು, ಮಾನ್ಯ ಸಿದ್ದರಾಮಯ್ಯನವರು ಆಡಳಿತ ಪಕ್ಷದ ನಾಯಕರಾಗಿ ಆಯ್ಕೆಗೊಂಡು, ಅವರು ಅಧಿಕಾರ ಸ್ವೀಕರಿಸಿದ್ದು 20 ಮೇ 2023 ರಂದು. ಆದರೆ ಈ ಟರ್ಮ್ ಶೀಟ್ ಬದಲಾವಣೆ, ಇಲ್ಲವಾರು ಟೆಂಡರ್ ಆದೇಶ ಮೇ ತಿಂಗಳ 19ನೇ ತಾರೀಕಿನಂದೇ ಆಗಿತ್ತು. ಅಂದರೆ ಕಾಂಗ್ರೆಸ್ ಸರಕಾರ 2023ರಲ್ಲಿ ಅಧಿಕಾರ ವಹಿಸಿಕೊಂಡು , ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿ ಆಯ್ಕೆಯಾಗಿ ಅಧಿಕಾರ ಸ್ವೀಕರಿಸುವುದಕ್ಕೆ ಒಂದು ದಿನಕ್ಕೆ ಮೊದಲೇ ಟೆಂಡರ್ ಕರೆಯಲಾಗಿತ್ತು. ಈ ಬಗ್ಗೆ ಸ್ಪಷ್ಟವಾದ ದಾಖಲೆಗಳಿದ್ದು, ಈ ದಾಖಲೆಗಳನ್ನು ನಾನು ದ.ಕ. ಜಿಲ್ಲೆಯ ಮಹಾಜನತೆಗೆ ಮತ್ತು ಪುತ್ತೂರಿನ ಎಲ್ಲಾ ಅಡಿಕೆ ಬೆಳೆಗಾರರಿಗೆ ಈ ಪತ್ರಿಕಾಗೋಷ್ಠಿಯಲ್ಲಿ ಸಲ್ಲಿಸುತ್ತಿದ್ದೇನೆ.
ಒಂದು ಸರಕಾರದ ಅವಧಿ ಮುಗಿದ ನಂತರ ನಂತರ ಇನ್ನೊಂದು ಸರಕಾರದ ಆಯ್ಕೆಗಾಗಿ ಚುನಾವಣೆ ನಡೆದು ಹೊಸ ಸರಕಾರ ಅಧಿಕಾರ ಸ್ವೀಕರಿಸುವವರೆಗೆ ಹಿಂದಿನ ಸರಕಾರದ ಮುಖ್ಯಮಂತ್ರಿಗಳೇ ಜೋಪಾಸಣಾ ಮುಖ್ಯಮಂತ್ರಿಗಳಾಗಿರುತ್ತಾರೆ. ಜೋಪಾಸಣಾ ಮುಖ್ಯಮಂತ್ರಿಗಳು ಕೇವಲ ಸರಕಾರವನ್ನು ನೋಡಿಕೊಳ್ಳುತ್ತಾರೆ ಅಷ್ಟೇ ಹೊರತು ನಿರ್ಧಾರಗಳನ್ನು ತೆಗೆದುಕೊಳ್ಳುವ ಎಲ್ಲಾ ಅಧಿಕಾರವೂ ರಾಜ್ಯಪಾಲರಲ್ಲೇ ಕೇಂದ್ರೀಕೃತವಾಗಿರುತ್ತದೆ. ಆಗಿನ ಜೋಪಾಸಣಾ ಮುಖ್ಯಮಂತ್ರಿಗಳಾಗಿದ್ದವರು ಸನ್ಮಾನ್ಯ ಶ್ರೀ ಬಸವರಾಜ ಬೊಮ್ಮಾಯಿ ಯವರು ಮತ್ತು ಕರ್ನಾಟಕ ರಾಜ್ಯದ ರಾಜ್ಯಪಾಲರಾಗಿದ್ದವರು, ಕೇಂದ್ರದ ಬಿಜೆಪಿ ಸರಕಾರ ನೇಮಿಸಿದ, ಬಿಜೆಪಿಯ ಹಿರಿಯ ನಾಯಕರಾದ ಥಾವರ್ ಚಂದ್ ಗೆಹ್ಲೋಟ್ ಆಗಿದ್ದರು. ಅಂದರೆ ಇವತ್ತು ಟರ್ಮ್ ಶೀಟಿನಲ್ಲಿ ಏನಾದರೂ ಬದಲಾವಣೆಗಳಾಗಿ, ಅದರಿಂದ ದಕ್ಷಿಣ ಕನ್ನಡ ಜಿಲ್ಲೆಯ ಅಡಿಕೆ ಬೆಳೆಗಾರರಿಗೆ ವಿಮೆಯ ಪರಿಹಾರದ ಮೊತ್ತ ಕಡಿಮೆಯಾಗಿ ಏನಾದರೂ ತೊಂದರೆ ಆಗಿದ್ದರೆ ಅದಕ್ಕೆ ಮೂಲಕ ಕಾರಣ ಅಂದಿನ ಕರ್ನಾಟಕದ ಸರಕಾರದ ಜೋಪಸನಾ ಮುಖ್ಯಮಂತ್ರಿಗಳಾದ ಬಿಜೆಪಿಯ ಬಸವರಾಜ ಬೊಮ್ಮಾಯಿ ಅವರು ಮತ್ತು ಅಂದಿನ ರಾಜ್ಯಪಾಲರಾಗಿದ್ದ ಥಾವರ್ ಚಂದ್ ಗೆಹ್ಲೋಟ್ ಅವರೇ ಆಗಿದ್ದಾರೆ. ಮತ್ತು ಈ ಎಲ್ಲದರ ಹಿಂದೆ ಇರುವುದು ಭಾರತೀಯ ಜನತಾ ಪಕ್ಷವೇ ಆಗಿದೆ. 2023ರಲ್ಲಿ ಟರ್ಮ್ ಶೀಟ್ ಬದಲಾಯಿತು ಅನ್ನುವುದು ಸತಗಯ, 2023ರಲ್ಲಿ ಕಾಂಗ್ರೆಸ್ ಸರಕಾರ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂತು ಅನ್ನೂವುದೂ ಸತ್ಯ. ಹೀಗೆ ಈ 2 ಸತ್ಯಗಳನ್ನು ಮುಂದಿಟ್ಡುಕೊಂಡು ಬಿಜೆಪಿಯವರು ಸತ್ಯದ ತಲೆಯ ಮೇಲೆ ಹೊಡೆದು ಸುಳ್ಳನ್ನು ಪ್ರತಿಷ್ಠಾಪಿಸಲು ಹೊರಟಿದ್ದಾರೆ. ಜಿಲ್ಲೆಯ ಜನರಿಗೆ ಮೋಸ ಮಾಡಿ ಕಾಂಗ್ರೆಸ್ ಪಕ್ಷವನ್ನು ಕಟಕಟೆಯಲ್ಲಿ ನಿಲ್ಲಿಸಲು ವಿಫಲ ಪ್ರಯತ್ನ ನಡೆಸಿದ್ದಾರೆ.
ತಮ್ಮ ಇತಿಹಾಸದುದ್ದಕ್ಕೂ ಸುಳ್ಳುಗಳನ್ನು ಹೇಳಿ ಅಧಿಕಾರ ಪಡೆದ ಬಿಜೆಪಿಯವರು ಮತ್ತು ಅದರ ನಾಯಕರು ದೇಶದಲ್ಲಿ ನಡೆಯುತ್ತಿರುವ ಪ್ರತಿಯೊಂದು ವಿಷಯದಲ್ಲಿಯೂ ಸುಳ್ಳನ್ನೇ ಹೇಳುತ್ತಿದ್ದಾರೆ ಮತ್ತು ಆ ಮೂಲಕ ದೇಶದ ಜನರ ದಾರಿಯನ್ನು ತಪ್ಪಿಸುತ್ತಿದ್ದಾರೆ. ಯಾವುದೇ ಆಧಾರಗಳಿಲ್ಲದೆ ಕಪೋಲ ಕಲ್ಪಿತ ವಿಚಾರಗಳನ್ನು ಜನರ ಮುಂದಿಟ್ಟು, ಸಂದರ್ಭಕ್ಕೆ ಸರಿಯಾಗಿ ಸುಳ್ಳುಗಳನ್ನು ಹೇಳಿ, ಜನರ ದಾರಿ ತಪ್ಪಿಸಿ, ವೋಟು ಪಡೆದು ಅಧಿಕಾರಕ್ಕೆ ಇರುವ ಕಲೆಯನ್ನು ಇವರು ಅತ್ಯಂತ ವ್ಯವಸ್ಥಿತವಾಗಿ ಮಾಡುತ್ತಾ ಬಂದಿದ್ದಾರೆ. ಮತಯಂತ್ರಗಳನ್ನು ತಿಳಿಸಿ , ದೇಶದ ದಲಿತ ದಮನಿತ, ಅಲ್ಪಸಂಖ್ಯಾತರ ಮತಗಳನ್ನು ವೋಟರ್ ಲಿಸ್ಟ್ ಇಂದ ಇಡೀ ದೇಶಕ್ಕೂ ಸಮಸ್ತ ಹಿಂದೂ ಸಮಾಜಕ್ಕೂ ಮೋಸ ಮಾಡಿದ ಇವರು ಅಡಿಕೆಯ ಬೆಳೆ ವಿಮೆಯ ವಿಚಾರದಲ್ಲಿ ಒಂದು ಕಪೋಲ ಕಲ್ಪಿತ ಸುಳ್ಳು ವಿಚಾರವನ್ನು ಮುಂದಿಟ್ಟು , ಇಡೀ ಜಿಲ್ಲೆಯಲ್ಲಿ ಹಂಗಾಮ ನಡೆಸಿ , ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಅಡಿಕೆ ಬೆಳೆಗಾರರಿಗೆ ದ್ರೋಹವನ್ನು ಎಸೆಗಿದ್ದಾರೆ.
ಹೀಗೆ ಬಿಜೆಪಿಯವರು ರಾಜ್ಯಸರಕಾರದ ಮೇಲೆ ಗೂಬೆ ಕೂರಿಸಿ ಜನರ ಕಣ್ಣಿ ಮಂಕುಬೂದಿ ಎರಚಿ ಮುಂದಿನ ಚುನಾವಣೆ ಎದುರಿಸುವ ವ್ಯರ್ಥ ಪ್ರಯತ್ನ ಮಾಡುತ್ತಿದ್ದಾರೆ. ಈ ಎಲ್ಲಾ ವಿಚಾರಗಳು ಬಿಜೆಪಿಯವರಿಗಾಗಲೀ, ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾರವರಿಗಾಗಲೀ ತಿಳಿಯದ ವಿಚಾರ ಏನೆಲ್ಲ. ಆದರೆ ಅವರು ಅರ್ಧ ಸತ್ಯವನ್ನು ಹೇಳಿ ಇನ್ನರ್ಧ ಸತ್ಯವನ್ನು ಮುಚ್ಚಿಟ್ಟು, ಮತ್ತೆ ಇನ್ನೊಂದಷ್ಟು ವಿಚಾರಗಳನ್ನು ತಿರುಚಿ ಜಿಲ್ಲೆಯ ಜನರ ದಾರಿ ತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ. ಇವರ ಉದ್ದೇಶ ಮುಂದಿನ ಚುನಾವಣೆಯಲ್ಲಿ ಮತ ಕದಿಯುವುದು. ಓಟ್ ಚೋರಿ ಮಾಡಿ ಸಿಕ್ಕಿಹಾಕಿಕೊಂಡ ಮೋದಿ , ಶಾ ಜೋಡಿ ಇಂದು ಇಡೀ ದೇಶದಲ್ಲಿ ಮುಖ ಮುಚ್ಚಿ ಓಡಾಡಿಕೊಂಡಿರುವುದರಿಂದ ಧೃತಿಗೆಟ್ಟ ಬಿಜೆಪಿಯವರು ಮತ್ತೆ ಪುನಃ ಸುಳ್ಳಿನ ರಾಜಕೀಯಕ್ಕೆ ಹಿಂತಿರುಗಿದ್ದಾರೆ. ಇದು ಖಂಡನಾರ್ಹ.ಸುಳ್ಳು ಹೇಳಿ ದ.ಕ. ಜಿಲ್ಲೆಯ ಜನರಿಗೆ ಮೋಸ ಮಾಡುತ್ತಿರುವ ಬಿಜೆಪಿಯ ನಡವಳಿಕೆ ಅಕ್ಷಮ್ಯ ಅಪರಾಧವಾಗಿದೆ.
ಇದರ ಜೊತೆಗೆ ಮಾನ್ಯ ಹರೀಶ್ ಪೂಂಜಾರವರು ಪುತ್ತೂರಿನ ಶಾಸಕರಾದ ಅಶೋಕ್ಕುಮಾರ್ ರೈವರ ಮೇಲೆ ವೈಯ್ಯಕ್ತಿ ದಾಳಿ ನಡೆಸಿದ್ದಾರೆ. ತನಾನು ಹುಟ್ಟಿಸಿದ ಮಗುವಿಗೆ ನಾನೇ ಅಪ್ಪ ಎಂದು ಹೇಳುವ ಪೂಂಜಾರವರ ಕೀಳು ಮಾತುಗಳಿಗೆ ಮಾನ್ಯ ಶಾಸಕರು ಸರಿಯಾದ ಉತ್ತರ ನೀಡಿದ್ದಾರೆ. ಹುಟ್ಡಿಸುವ ಮಾತುಗಳನ್ನ ಆಡುತ್ತಿರುವ ಹರೀಶ್ ಪೂಂಜಾರವರು ಅಶೋಕ್ ರೈಯವರು ಪುತ್ತೂರಿನಲ್ಲಿ ಏನನ್ನು ಹುಟ್ಟಿಸಿದ್ದಾರೆ ಮತ್ತು ಸ್ವತಃ ತಾನು ಬೆಳ್ತಂಗಡಿಯಲ್ಲಿ ಏನನ್ನು ಹುಟ್ಟಿಸಿದ್ದಾರೆ ಎಂಬುದನ್ನು ಒಮ್ಮೆ ನೆನಪಿಸಿಕೊಳ್ಳುವುದು ಒಳಿತು.
ಬಾಯಿ ಚಪಲಕ್ಕೆ ಮಾತನಾಡುವ ಹರೀಶ್ ಪೂಂಜಾರವರಿಗೆ ನಾವು ಕೊಡುವ ಉತ್ತರ ಇದು. ಪುತ್ತೂರಿನಲ್ಲಿ ನಮ್ಮ ಶಾಸಕರು ಒಂದು ಸರಕಾರಿ ಮೆಡಿಕಲ್ ಕಾಲೇಜು ಹುಟ್ಟಿಸಿದ್ದಾರೆ.
ಮುಂಡೂರು ಗ್ರಾಮದಲ್ಲಿ ಒಂದು ಕ್ರೀಡಾಂಗಣವನ್ನು ಹುಟ್ಟಿಸಿದ್ದಾರೆ,
ಅಲ್ಲೇ ಪಕ್ಕದಲ್ಲಿ ಒಂದು ಸರ್ವ ಸುಸಜ್ಜಿತ ಆರ್.ಟಿ.ಒ. ಟ್ರ್ಯಾಕ್ ಹುಟ್ಡಿಸಿದ್ದಾರೆ, ಬಜತ್ತೂರು ಗ್ರಾಮದಲ್ಲಿ ಒಂದು ಅಂಬೇಡ್ಕರ್ ವಸತಿ ಶಾಲೆ ಹುಟ್ಟಿಸಿದ್ದಾರೆ,
ಕುರಿಯ ಗ್ರಾಮದಲ್ಲಿ ಒಂದು ಶ್ರಮಿಕ ವಸತಿ ಶಾಲೆ ಹುಟ್ಟಿಸಿದ್ದಾರೆ.
ಬಿರುಮಲೆ ಬೆಟ್ಟದಲ್ಲಿ ಅಭಿವೃದ್ಧಿಯ ಪರ್ವವನ್ನು ಹುಟ್ಡಿಸಿದ್ದಾರೆ ,
ಬನ್ನೂರಿನಲ್ಲಿ ಸಮಾಜ ಕಲ್ಯಾಣ ಇಲಾಖೆಯ ಒಂದು ಹಾಸ್ಟೆಲ್ ಹುಟ್ಟಿಸಿದ್ದಾರೆ.
ತಾಲೂಕು ಪಂಚಾಯತ್ಗೆ ಒಂದು ನೂತನ ಕಟ್ಟಡ ಹುಟ್ಟಿಸಿದ್ದಾರೆ. ನಗರದಲ್ಲಿ ಒಂದು
ನೂತನ ಪ್ರವಾಸಿ ಮಂದಿರ ಹುಡ್ಟಿಸಿದ್ದಾರೆ.
ಕಬಕದಿಂದ ವಿಟ್ಲಕ್ಕೆ ಒಂದು ಚತುಷ್ಪತ ರಸ್ತೆ ಹುಟ್ಟಿಸಿದ್ದಾರೆ.
ನಿವೇಶನ ರಹಿತ ಬಡವರಿಗೆ ನೂರಾರು ಮನೆ ನಿವೇಶನ ಹುಟ್ಟಿಸಿದ್ದಾರೆ. ನಿಮ್ಮದೇ ಪಕ್ಷದ ಖದೀಮರು ನುಂಗಿ ನೀರು ಕುಡಿಯಲು ನೋಡಿದ್ದ ಮಹಾಲಿಂಗೇಶ್ವರ ದೇವಸ್ಥಾನದ ಕೋಟ್ಯಂತರ ರೂಪಾಯಿ ಬೆಲೆಬಾಳುವ ಭೂಮಿಯನ್ನು ದೇವಾಲಯದ ಸ್ವಾದೀನಕ್ಕೆ ಮರು ಒಪ್ಪಿಸಿ ಮರು ಹುಟ್ಟು ನೀಡಿದ್ದಾರೆ. ಕಳೆದ 8 ವರ್ಷಗಳಿಂದ ಶಾಸಕರಾಗಿರುವ ನೀವೇನು ಹುಟ್ಟಸಿದಿರಿ ? ನೀವು ಹುಟ್ಟಿಸಿದ್ದು ಕೋಮುವಾದ ಮಾತ್ರ ! ನೀವು ಹುಟ್ಟಿಸಿದ್ದು ಹಿಂದೂ ಮುಸ್ಲಿಂ ದ್ವೇಷ ಮಾತ್ರ ! ನೀವು ಹುಟ್ಟಿಸಿದ್ದು ಗೋಣಿ ಚೀಲದ ತುಂಬಾ ಕಂತೆ ಕಂತೆ ಹಣ ಮಾತ್ರ ! ನೀವು ಹುಟ್ಟಿಸಿದ್ದು ಅದೇ ಸುಳ್ಳಿನ ರಾಜಕಾರಣ ಮಾತ್ರ ! ಒಂದು ಅವಧಿಗೆ ನಿಮ್ಮದೇ ಪಕ್ಷದ ಸರಕಾರ ಇದ್ದಾಗ ನೀವು ಹುಟ್ಟಿಸಿದ್ದು ಏನಾದರೂ ಒಂದು ಇದ್ದರೆ ಹೇಳಿ ನೋಡೋಣ ! ನಿಮ್ಮ ಕ್ಷೇತ್ರಕ್ಕೆ ಸ್ವಾಗತಿಸುವ ಹೊಂಡ ಬಿದ್ದ ರಸ್ತೆಗಳೇ ನಿಮ್ಮ ಹಣೆ ಬರಹವನ್ನು ಸಾರಿ ಸಾರಿ ಹೇಳುತ್ತದೆ. ನಾಚಿಕೆಯಾಗಬೇಕು ನಿಮಗೆ.
ದಾಖಲೆ : ಕರ್ನಾಟಕ ಸರಕಾರದ ನಡವಳಿಗಳು.
https://samrakshane.karnataka.gov.in/Docs/RWBCIS_Kharif_6_Districts_GO_2023_24.pdf
ಅಂತರ ರಾಜ್ಯ
Rahul Gandhi-ಜಂತರ್ ಮಂತರ್ನಲ್ಲಿ ಪ್ರತಿಭಟಿಸಿದ ಸಿಜೆಪಿ ನಾಯಕರ ಬಂಧನಕ್ಕೆ ರಾಹುಲ್ ಗಾಂಧಿ ಖಂಡನೆ
ದೆಹಲಿಯ ಜಂತರ್ ಮಂತರ್ನಲ್ಲಿ ತ್ರಿವರ್ಣ ಧ್ವಜ ಹಿಡಿದು ಪ್ರತಿಭಟನೆ ನಡೆಸಿದ್ದಕ್ಕಾಗಿ ಯುವಕರನ್ನು ಬಂಧಿಸಿರುವುದನ್ನು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಖಂಡಿಸಿದ್ದಾರೆ. ಶಾಂತಿಯುತವಾಗಿ ಪ್ರತಿಭಟನೆ ನಡೆಸಿದ ಯುವಕರನ್ನು ಜೈಲಿಗೆ ತಳ್ಳುವುದು ಹೇಡಿತನದ ಕೆಲಸ ಎಂದು ಅವರು ಟೀಕಿಸಿದ್ದಾರೆ.
ನವದೆಹಲಿ: ದೆಹಲಿಯ ಜಂತರ್ ಮಂತರ್ನಲ್ಲಿ ತ್ರಿವರ್ಣ ಧ್ವಜ ಹಿಡಿದು ಪ್ರತಿಭಟನೆ ನಡೆಸಿದ್ದಕ್ಕಾಗಿ ಯುವಕರನ್ನು ಬಂಧಿಸಿರುವುದನ್ನು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಖಂಡಿಸಿದ್ದಾರೆ. ಶಾಂತಿಯುತವಾಗಿ ಪ್ರತಿಭಟನೆ ನಡೆಸಿದ ಯುವಕರನ್ನು ಜೈಲಿಗೆ ತಳ್ಳುವುದು ಹೇಡಿತನದ ಕೆಲಸ ಎಂದು ಅವರು ಟೀಕಿಸಿದ್ದಾರೆ.
ಕೇಂದ್ರ ಸರ್ಕಾರವು ಜಂತರ್ ಮಂತರ್ ಅನ್ನು ಪ್ರತಿಭಟನಾ ಸ್ಥಳವಾಗಿ ಬಳಸುವುದಕ್ಕೆ ನಿರ್ಬಂಧಗಳನ್ನು ವಿಧಿಸಿರುವುದನ್ನು ವಿರೋಧಿಸಿದ ರಾಹುಲ್ ಗಾಂಧಿ, ಜಂತರ್ ಮಂತರ್ ಭಾರತದ ಜನರಿಗೆ ಸೇರಿದ್ದು, ಅದನ್ನು ಮತ್ತೆ ಜನರ ಪಾಲಿಗೆ ಮರಳಿ ಪಡೆಯುವುದಾಗಿ ಹೇಳಿದ್ದಾರೆ.
ಸಿಜೆಪಿ ನಾಯಕರಿಗೆ ಐದು ದಿನಗಳ ನ್ಯಾಯಾಂಗ ಬಂಧನ
ಮಂಗಳವಾರ ಮುಂಜಾನೆ ಜಂತರ್ ಮಂತರ್ ಪ್ರದೇಶಕ್ಕೆ ತೆರಳಿ ತ್ರಿವರ್ಣ ಧ್ವಜ ಹಾರಿಸಿ ಘೋಷಣೆಗಳನ್ನು ಕೂಗಿದ್ದ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನಾಯಕರಾದ ಅಶುತೋಷ್ ರಂಕಾ, ಸೌರಭ್ ದಾಸ್ ಸೇರಿದಂತೆ 14 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಬಳಿಕ ಬುಧವಾರ ನ್ಯಾಯಾಲಯವು ಬಂಧಿತರಿಗೆ ಐದು ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.
ಬಂಧನವನ್ನು ಖಂಡಿಸಿರುವ ರಾಹುಲ್ ಗಾಂಧಿ ಅವರ ಬೆಂಬಲಕ್ಕೆ ಸಿಜೆಪಿ ಸಂಸ್ಥಾಪಕ ಅಭಿಜಿತ್ ದೀಪ್ಕೆ ಧನ್ಯವಾದ ಅರ್ಪಿಸಿದ್ದಾರೆ.
ಸಂವಿಧಾನಿಕ ಹಕ್ಕುಗಳಿಗಾಗಿ ಒಗ್ಗಟ್ಟಿನ ಹೋರಾಟ
ವಿದ್ಯಾರ್ಥಿಗಳು, ಯುವಕರು, ಪತ್ರಕರ್ತರು ಹಾಗೂ ಇಂಡಿಯಾ ಒಕ್ಕೂಟದ ಸದಸ್ಯರು ಪ್ರತ್ಯೇಕ ಬ್ಯಾನರ್ಗಳ ಅಡಿಯಲ್ಲಿ ಹೋರಾಟ ನಡೆಸುತ್ತಿದ್ದರೂ, ಅವರ ಉದ್ದೇಶ ಒಂದೇ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಸಂವಿಧಾನಿಕ ಹಕ್ಕುಗಳಿಗಾಗಿ ಆಗ್ರಹಿಸುತ್ತಿರುವ ನಾಗರಿಕರ ಹೋರಾಟ ಇದಾಗಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.
ಈ ಹಿಂದೆ ಸಿಜೆಪಿ ನಾಯಕರಿಂದ ರಾಹುಲ್ ಗಾಂಧಿ ದೂರ ಉಳಿದಿದ್ದಾರೆ ಎಂಬ ಚರ್ಚೆಗಳು ನಡೆದಿದ್ದವು. ಇದೀಗ ಬಂಧಿತ ನಾಯಕರ ಪರವಾಗಿ ಧ್ವನಿ ಎತ್ತಿರುವುದು ರಾಜಕೀಯ ವಲಯದಲ್ಲಿ ಗಮನ ಸೆಳೆದಿದೆ. ಈ ಬೆಳವಣಿಗೆಯನ್ನು ಸಿಜೆಪಿ ನಾಯಕರಿಗೆ ರಾಹುಲ್ ಗಾಂಧಿ ಬಹಿರಂಗ ಬೆಂಬಲ ಸೂಚಿಸಿರುವ ಕ್ರಮವಾಗಿ ವಿಶ್ಲೇಷಿಸಲಾಗುತ್ತಿದೆ.
-
ಸ್ಥಳೀಯ9 hours agoNavoor clinic-ನಾವೂರು ಕ್ಲಿನಿಕ್ಗೆ ಬೆಂಕಿ ಪ್ರಕರಣ: ರವಿ ಪೂಜಾರಿ ಬಂಧನ, ಇಬ್ಬರು ಶಂಕಿತರ ವಿಚಾರಣೆ
-
ಅಪರಾಧ8 hours agoB.R. Shetty-ಬ್ಯಾಂಕ್ ಆಫ್ ಬರೋಡಾ ವಿರುದ್ಧ ಯುಎಇ ಎಕ್ಸ್ಚೇಂಜ್ ಸಂಸ್ಥೆಗಳ ಸ್ಥಾಪಕ ಬಿ.ಆರ್. ಶೆಟ್ಟಿ ಕಾನೂನು ಸಮರ; ₹1.25 ಲಕ್ಷ ಕೋಟಿ ಪರಿಹಾರ ಬೇಡಿಕೆ
-
ಅಂತರ ರಾಜ್ಯ9 hours agoMurder case-ಮೀರತ್ ಬ್ಲೂ ಡ್ರಮ್ ಕೊಲೆ ಪ್ರಕರಣ: ಪತ್ನಿ ಮುಸ್ಕಾನ್, ಪ್ರಿಯಕರ ಸಾಹಿಲ್ಗೆ ಗಲ್ಲು ಶಿಕ್ಷೆ..!
-
ಬಿಗ್ ನ್ಯೂಸ್9 hours agoRenukashwami murder case-ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಮಹತ್ವದ ತಿರುವು: ಮಾಫಿ ಸಾಕ್ಷಿ ಅರ್ಜಿ ವಾಪಸ್ ಪಡೆದ ಎ10 ವಿನಯ್
-
ಅಪರಾಧ4 hours agoPuttur-ಪುತ್ತೂರಿನಲ್ಲಿ ಅಕ್ರಮ ಲಾಟರಿ ಮಾರಾಟ: ಇಬ್ಬರು ಅಂಗಡಿ ಮಾಲೀಕರ ವಿರುದ್ಧ ಪ್ರಕರಣ ದಾಖಲು
-
ಮಂಗಳೂರು4 hours agoSudhir Kumar Reddy-ಭಾರತ ಮಾತೆಯ ಹೆಸರಿನಲ್ಲಿ ಕಾನೂನು ಉಲ್ಲಂಘನೆ ಸಲ್ಲದು – ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಖಡಕ್ ಸ್ಪಷ್ಟನೆ..!
-
ರಾಜಕೀಯ3 hours agoH.D. Kumaraswamy-ರಾಜ್ಯ ರಾಜಕಾರಣದಲ್ಲಿ ಬಿರುಗಾಳಿ : ಬಾಂಬ್ ಸಿಡಿಸಿದ ಎಚ್.ಡಿ. ಕುಮಾರಸ್ವಾಮಿ – ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಷಡ್ಯಂತ್ರದಲ್ಲಿ ಕೃಪಾ ಆಳ್ವ..! ಗಂಭೀರ ಆರೋಪ
-
ರಾಜಕೀಯ8 hours agoAmal Ramachandra-ಒಳ್ಳೆಯ ರೀತಿಯಲ್ಲಿ ಬೆಳೆವಿಮೆ ಬಂದರೆ ಮೋದಿಯಿಂದಾಗಿ ಎಂದು ಬೊಬ್ಬೆ ಹಾಕುತ್ತಿದ್ದ ಬಿಜೆಪಿ ಈಗ ಕಾಂಗ್ರೆಸ್ ನ್ನು ದೂರುತ್ತಿದೆ..! ಟರ್ಮ್ ಶೀಟ್ ಬದಲಾವಣೆ ಮಾಡಿದ್ದು ಬಿಜೆಪಿ ಈ ಬಗ್ಗೆ ದಾಖಲೆಯಿದೆ; ಅಶೋಕ್ ರೈ ಹುಟ್ಟಿಸಿದ ಲಿಸ್ಟ್ ಕೊಡ್ತೇನೆ 8 ವರ್ಷಗಳಲ್ಲಿ ಬೆಳ್ತಂಗಡಿಯಲ್ಲಿ ಪೂಂಜಾ ಹುಟ್ಟಿಸಿದ್ದೇನೂ..? ಪುಡಾ ಅಧ್ಯಕ್ಷ ಅಮಳ ರಾಮಚಂದ್ರ


















