ನಿಧನ ವಾರ್ತೆ
Mangalore : ಬೀಡಿ ತುಂಡು ನುಂಗಿ 10 ತಿಂಗಳ ಶಿಶು ಸಾವು : ಪತ್ನಿಯ ಎಚ್ಚರಿಕೆ ಕಡೆಗಣಿಸಿದ ಪತಿ; ಕರುಳಿನ ಕುಡಿಯನ್ನೇ ಕಳೆದುಕೊಂಡ ದಂಪತಿ
ಮನೆಯಲ್ಲಿ ತಂದೆ ಸೇದಿ ಬಿಸಾಡಿದ್ದ ಬೀಡಿಯ ತುಂಡನ್ನು ಆಕಸ್ಮಿಕವಾಗಿ ನುಂಗಿದ 10 ತಿಂಗಳ ಹಸುಗೂಸೊಂದು, ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ಮನಕಲಕುವ ಘಟನೆ ನಗರದ ಅಡ್ಯಾರ್ನಲ್ಲಿ ನಡೆದಿದೆ.
ಮಂಗಳೂರು: ಮನೆಯಲ್ಲಿ ತಂದೆ ಸೇದಿ ಬಿಸಾಡಿದ್ದ ಬೀಡಿಯ ತುಂಡನ್ನು ಆಕಸ್ಮಿಕವಾಗಿ ನುಂಗಿದ 10 ತಿಂಗಳ ಹಸುಗೂಸೊಂದು, ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ಮನಕಲಕುವ ಘಟನೆ ನಗರದ ಅಡ್ಯಾರ್ನಲ್ಲಿ ನಡೆದಿದೆ.
ಬಿಹಾರ ಮೂಲದ ವಲಸೆ ಕಾರ್ಮಿಕ ದಂಪತಿಯ ಪುತ್ರ ಅನೀಶ್ ಕುಮಾರ್ (10 ತಿಂಗಳು) ಮೃತಪಟ್ಟ ದುರ್ದೈವಿ ಕಂದ.
ಘಟನೆಯ ವಿವರ:
ಅಡ್ಯಾರ್ನಲ್ಲಿ ವಾಸವಾಗಿದ್ದ ಬಿಹಾರ ಮೂಲದ ಕಾರ್ಮಿಕ ಕುಟುಂಬದಲ್ಲಿ ಈ ದುರಂತ ಸಂಭವಿಸಿದೆ. ಮಗುವಿನ ತಂದೆ ಮನೆಯೊಳಗೆ ಬೀಡಿ ಸೇದಿ, ಅದರ ತುಂಡನ್ನು ಅಲ್ಲೇ ಎಸೆದಿದ್ದರು. ಶನಿವಾರ ಮಧ್ಯಾಹ್ನ ಸುಮಾರು 1.30ರ ವೇಳೆಗೆ, ಮನೆಯಲ್ಲಿ ನೆಲದ ಮೇಲೆ ಆಟವಾಡುತ್ತಿದ್ದ ಮಗು ಅನೀಶ್, ಈ ಬೀಡಿ ತುಂಡನ್ನು ಆಟಿಕೆ ಎಂದು ಭಾವಿಸಿ ಬಾಯಿಗೆ ಹಾಕಿಕೊಂಡು ನುಂಗಿದೆ. ಸ್ವಲ್ಪ ಸಮಯದಲ್ಲೇ ಮಗು ಅಸ್ವಸ್ಥಗೊಂಡು, ಉಸಿರಾಟದ ತೊಂದರೆಯಿಂದ ಬಳಲಲಾರಂಭಿಸಿತು.
ತಕ್ಷಣವೇ ಪೋಷಕರು ಮಗುವನ್ನು ನಗರದ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದರು. ಅಪರಾಹ್ನ 3.30ರ ಸುಮಾರಿಗೆ ಆಸ್ಪತ್ರೆಗೆ ದಾಖಲಾದ ಮಗುವಿಗೆ ವೈದ್ಯರು ತುರ್ತು ಚಿಕಿತ್ಸೆ ಆರಂಭಿಸಿದರು. ಆದರೆ, ಬೀಡಿಯಲ್ಲಿದ್ದ ನಿಕೋಟಿನ್ ಹಾಗೂ ಇತರ ವಿಷಕಾರಿ ರಾಸಾಯನಿಕಗಳು ಮಗುವಿನ ದೇಹ ಸೇರಿ, ಸ್ಥಿತಿ ಗಂಭೀರವಾಗಿತ್ತು. ವೈದ್ಯರ ಸತತ ಪ್ರಯತ್ನಗಳ ಹೊರತಾಗಿಯೂ, ಮಗು ಚಿಕಿತ್ಸೆಗೆ ಸ್ಪಂದಿಸಲಿಲ್ಲ. ಅಂತಿಮವಾಗಿ, ಭಾನುವಾರ ಬೆಳಗ್ಗೆ 10.25ರ ವೇಳೆಗೆ ಮಗು ಇಹಲೋಕ ತ್ಯಜಿಸಿತು ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
ಪತಿಯ ನಿರ್ಲಕ್ಷ್ಯವೇ ಮಗುವಿನ ಸಾವಿಗೆ ಕಾರಣ: ತಾಯಿಯ ಕಣ್ಣೀರು
ಈ ಘಟನೆಗೆ ತನ್ನ ಪತಿಯ ಬೇಜವಾಬ್ದಾರಿತನವೇ ನೇರ ಕಾರಣ ಎಂದು ಮಗುವಿನ ತಾಯಿ ಕಣ್ಣೀರು ಹಾಕಿದ್ದಾರೆ. “ಮನೆಯೊಳಗೆ ಬೀಡಿ ಸೇದಿ ಎಲ್ಲೆಂದರಲ್ಲಿ ಎಸೆಯಬೇಡಿ ಎಂದು ಗಂಡನಿಗೆ ಹಲವು ಬಾರಿ ಬುದ್ಧಿ ಹೇಳಿದ್ದೆ. ಮಕ್ಕಳಿರುವ ಮನೆಯಲ್ಲಿ ಎಚ್ಚರಿಕೆಯಿಂದ ಇರಲು ತಿಳಿಸಿದ್ದೆ. ಆದರೆ, ನನ್ನ ಮಾತನ್ನು ಅವರು ಕಿವಿಗೆ ಹಾಕಿಕೊಳ್ಳಲಿಲ್ಲ. ಅವರ ನಿರ್ಲಕ್ಷ್ಯದಿಂದಲೇ ಇಂದು ನನ್ನ ಕರುಳಿನ ಕುಡಿಯನ್ನು ಕಳೆದುಕೊಂಡೆ,” ಎಂದು ತಾಯಿ ದೂರಿನಲ್ಲಿ ಆರೋಪಿಸಿ, ತಮ್ಮ ಆಕ್ರಂದನ ತೋಡಿಕೊಂಡಿದ್ದಾರೆ.
ಒಂದು ಸಣ್ಣ ನಿರ್ಲಕ್ಷ್ಯವು ಹಸುಗೂಸಿನ ಪ್ರಾಣವನ್ನೇ ಬಲಿ ಪಡೆದ ಈ ಘಟನೆ, ಪೋಷಕರಿಗೆ ಒಂದು ಎಚ್ಚರಿಕೆಯ ಗಂಟೆಯಾಗಿದೆ. ಈ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ನಿಧನ ವಾರ್ತೆ
Accident-ಯುಎಇಯಲ್ಲಿ ಭೀಕರ ಬಸ್–ಲಾರಿ ಅಪಘಾತ; ಕಾಸರಗೋಡಿನ ಅಶ್ರಫ್ ಸೇರಿ ನಾಲ್ವರು ಕೇರಳಿಗರು ಸಾವು
ಯುನೈಟೆಡ್ ಅರಬ್ ಎಮಿರೇಟ್ಸ್ನ (ಯುಎಇ) ರಾಸ್ ಅಲ್ ಖೈಮಾದಲ್ಲಿ ಬಸ್ ಮತ್ತು ಲಾರಿ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಮೃತಪಟ್ಟವರಲ್ಲಿ ಕಾಸರಗೋಡು ಜಿಲ್ಲೆಯ ಅಟ್ಟೆಂಗಾನ ನಿವಾಸಿ ಅಶ್ರಫ್ (53) ಕೂಡ ಸೇರಿದ್ದಾರೆ. ಅಲ್ಲದೇ ಕಣ್ಣೂರು ಜಿಲ್ಲೆಯ ಮಟ್ಟನ್ನೂರು ನಿವಾಸಿ ಹೇಮಂತ್ ಪುದಿಯಕಾವಿಲ್ (29), ತಲಕ್ಕೇರಿ ನಿವಾಸಿ ಸಂಕೀರ್ತಾ ಸುರೇಶ್ (26) ಹಾಗೂ ಪಾಲಕ್ಕಾಡ್ ನಿವಾಸಿ ಮುಹಮ್ಮದ್ ಆಶಿಕ್ (29) ಕೂಡ ಮೃತಪಟ್ಟಿದ್ದಾರೆ.
ಕಾಸರಗೋಡು: ಯುನೈಟೆಡ್ ಅರಬ್ ಎಮಿರೇಟ್ಸ್ನ (ಯುಎಇ) ರಾಸ್ ಅಲ್ ಖೈಮಾದಲ್ಲಿ ಬಸ್ ಮತ್ತು ಲಾರಿ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಮೃತಪಟ್ಟವರಲ್ಲಿ ಕಾಸರಗೋಡು ಜಿಲ್ಲೆಯ ಅಟ್ಟೆಂಗಾನ ನಿವಾಸಿ ಅಶ್ರಫ್ (53) ಕೂಡ ಸೇರಿದ್ದಾರೆ.
ನ. 24ರಂದು ಮುಂಜಾನೆ ರಾಸ್ ಅಲ್ ಖೈಮಾದ ಅಲ್ ವತನ್ ರಸ್ತೆಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಓಮನ್ಗೆ ವೀಸಾ ನವೀಕರಣಕ್ಕಾಗಿ ತೆರಳಿ ವಾಪಸಾಗುತ್ತಿದ್ದ 41 ಪ್ರಯಾಣಿಕರಿದ್ದ ಬಸ್, ತಾಂತ್ರಿಕ ದೋಷದಿಂದ ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿದ್ದ ಲಾರಿಗೆ ಹಿಂದಿನಿಂದ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಅಪಘಾತದ ತೀವ್ರತೆಗೆ ಒಟ್ಟು 13 ಮಂದಿ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ. ಮೃತಪಟ್ಟವರಲ್ಲಿ 11 ಮಂದಿ ಭಾರತೀಯರು ಎಂದು ವರದಿಯಾಗಿದೆ.
ಅಶ್ರಫ್ ಅವರೊಂದಿಗೆ ಕಣ್ಣೂರು ಜಿಲ್ಲೆಯ ಮಟ್ಟನ್ನೂರು ನಿವಾಸಿ ಹೇಮಂತ್ ಪುದಿಯಕಾವಿಲ್ (29), ತಲಕ್ಕೇರಿ ನಿವಾಸಿ ಸಂಕೀರ್ತಾ ಸುರೇಶ್ (26) ಹಾಗೂ ಪಾಲಕ್ಕಾಡ್ ನಿವಾಸಿ ಮುಹಮ್ಮದ್ ಆಶಿಕ್ (29) ಕೂಡ ಮೃತಪಟ್ಟಿದ್ದಾರೆ
ನಿಧನ ವಾರ್ತೆ
ಮಂಗಳೂರು: ಬೈಕ್ ಢಿಕ್ಕಿಯಿಂದ ಗಾಯಗೊಂಡಿದ್ದ ನರ್ಸಿಂಗ್ ವಿದ್ಯಾರ್ಥಿನಿ ಸಾವು
ರಾಷ್ಟ್ರೀಯ ಹೆದ್ದಾರಿ-66ರ ಪಂಪ್ವೆಲ್ ಸಮೀಪದ ಉಜ್ಯೋಡಿ ಗೋರಿಗುಡ್ಡ ಬಳಿ ಬೈಕ್ ಢಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ 19 ವರ್ಷದ ನರ್ಸಿಂಗ್ ವಿದ್ಯಾರ್ಥಿನಿ ಜ್ಯೋತಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಮಂಗಳೂರು: ರಾಷ್ಟ್ರೀಯ ಹೆದ್ದಾರಿ-66ರ ಪಂಪ್ವೆಲ್ ಸಮೀಪದ ಉಜ್ಯೋಡಿ ಗೋರಿಗುಡ್ಡ ಬಳಿ ಬೈಕ್ ಢಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ 19 ವರ್ಷದ ನರ್ಸಿಂಗ್ ವಿದ್ಯಾರ್ಥಿನಿ ಜ್ಯೋತಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ನ. 14ರಂದು ಬೆಳಗ್ಗೆ ಜ್ಯೋತಿ ಹಾಗೂ ಅವರ ಸಂಬಂಧಿ ನಂದಿನಿ (19) ಗೋರಿಗುಡ್ಡ ಬಳಿ ರಸ್ತೆ ವಿಭಜಕ ದಾಟಿ ನಡೆದುಕೊಂಡು ಹೋಗುತ್ತಿದ್ದ ವೇಳೆ ತೊಕ್ಕೊಟ್ಟು ಕಡೆಯಿಂದ ನಂತೂರು ಕಡೆಗೆ ಸಂಚರಿಸುತ್ತಿದ್ದ ಬೈಕ್ ಢಿಕ್ಕಿ ಹೊಡೆದಿತ್ತು. ಅಪಘಾತದಲ್ಲಿ ಇಬ್ಬರೂ ಗಾಯಗೊಂಡಿದ್ದು, ಬೈಕ್ನಲ್ಲಿದ್ದವರಿಗೂ ಗಾಯಗಳಾಗಿದ್ದವು. ಗಂಭೀರ ಗಾಯಗೊಂಡಿದ್ದ ಜ್ಯೋತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಜ್ಯೋತಿ ನಗರದ ಖಾಸಗಿ ಕಾಲೇಜೊಂದರಲ್ಲಿ ಜಿಎನ್ಎಂ ನರ್ಸಿಂಗ್ ವ್ಯಾಸಂಗ ಮಾಡುತ್ತಿದ್ದರು.
ಮೂಲತಃ ಚಿಕ್ಕಮಗಳೂರಿನ ಶಿಳ್ಳೆಕ್ಯಾತ ಅಲೆಮಾರಿ ಸಮುದಾಯಕ್ಕೆ ಸೇರಿದ ಜ್ಯೋತಿಯ ಕುಟುಂಬ ಹಲವು ವರ್ಷಗಳಿಂದ ಮಂಗಳೂರಿನ ಕಣ್ಣೂರಿನಲ್ಲಿ ವಾಸವಾಗಿತ್ತು. ನೇತ್ರಾವತಿ ನದಿಯಲ್ಲಿ ತೆಪ್ಪದ ಮೂಲಕ ಮೀನು ಹಿಡಿಯುವ ವೃತ್ತಿಯನ್ನು ಕುಟುಂಬ ನಡೆಸುತ್ತಿತ್ತು. ಕುಟುಂಬದ ಹಿರಿಯ ಮಗಳಾಗಿದ್ದ ಜ್ಯೋತಿ ತಂದೆ, ತಾಯಿ, ಇಬ್ಬರು ಸಹೋದರರು ಹಾಗೂ ಸಹೋದರಿಯನ್ನು ಅಗಲಿದ್ದಾರೆ.
ನಿಧನ ವಾರ್ತೆ
Accident-ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇನಲ್ಲಿ ಭೀಕರ ಅಪಘಾತ: 8 ವರ್ಷದ ಬಾಲಕಿ ಸೇರಿ ಇಬ್ಬರು ಸ್ಥಳದಲ್ಲೇ ಸಾವು; ನಾಲ್ವರ ಸ್ಥಿತಿ ಗಂಭೀರ
ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇನಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಎಂಟು ವರ್ಷದ ಬಾಲಕಿ ಸೇರಿದಂತೆ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ನಗುವಿನಹಳ್ಳಿ ಗೇಟ್ ಬಳಿ ನಡೆದಿದೆ.
ಮಂಡ್ಯ: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇನಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಎಂಟು ವರ್ಷದ ಬಾಲಕಿ ಸೇರಿದಂತೆ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ನಗುವಿನಹಳ್ಳಿ ಗೇಟ್ ಬಳಿ ನಡೆದಿದೆ.
ಮಂಡ್ಯದ ಗುತ್ತಲು ಬಡಾವಣೆಯ ಮಹದೇವು ಹಾಗೂ ತೈಲೂರು ಗ್ರಾಮದ ಎಂಟು ವರ್ಷದ ಬಾಲಕಿ ರಿತ್ವಿಕಾ ಮೃತಪಟ್ಟವರು. ಕುಟುಂಬದ ಸದಸ್ಯರು ಕಾರಿನಲ್ಲಿ ನಂಜನಗೂಡಿನ ದೇವಸ್ಥಾನಕ್ಕೆ ತೆರಳಿ ವಾಪಸಾಗುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.
ನಗುವಿನಹಳ್ಳಿ ಗೇಟ್ ಬಳಿಯ ಫ್ಲೈಓವರ್ ಮೇಲೆ ಚಲಿಸುತ್ತಿದ್ದ ಸರಕು ಸಾಗಣೆ ಲಾರಿಗೆ ಹಿಂದಿನಿಂದ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಡಿಕ್ಕಿಯ ತೀವ್ರತೆಗೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಕಾರಿನಲ್ಲಿದ್ದ ಮಹದೇವು ಹಾಗೂ ಬಾಲಕಿ ರಿತ್ವಿಕಾ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ಅಪಘಾತದಲ್ಲಿ ಗೌರಿ, ಲತಾ, ಶಿವರಾಜು ಹಾಗೂ ಪ್ರಾರ್ಥನಾ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ.
-
ಸ್ಥಳೀಯ20 hours agoValaalu toll plaza-ವಳಾಲು ಟೋಲ್ ಪ್ಲಾಜಾ ಕಾಮಗಾರಿ ಪೂರ್ಣ; ವಾರದೊಳಗೆ ಅಧಿಕೃತ ಘೋಷಣೆ ಸಾಧ್ಯ; ಬ್ರಹ್ಮರಕೂಟ್ಲು ಟೋಲ್ನಿಂದ ‘ಡಬಲ್ ಟೋಲ್’ ಆತಂಕ..!
-
ಅಪರಾಧ21 hours agoRenukashwami murder case-ರೇಣುಕಾಸ್ವಾಮಿ ಕೊಲೆ ಪ್ರಕರಣ: ಮತ್ತಿಬ್ಬರು ಸಾಕ್ಷಿಗಳು ಉಲ್ಟಾ; ಪ್ರತಿಕೂಲ ಸಾಕ್ಷಿಗಳೆಂದು ಘೋಷಿಸಿದ ನ್ಯಾಯಾಲಯ
-
ಅಂತರ ರಾಜ್ಯ21 hours agoSabarimala-ಶಬರಿಮಲೆ: ದೇವಸ್ಥಾನ ಹಾಗೂ ಅಂಗಡಿಗಳ ಮೇಲೆ ಅಧಿಕಾರಿಗಳ ದಿಢೀರ್ ದಾಳಿ; ಅಂಗಡಿಗಳಿಗೆ ₹1 ಲಕ್ಷ ದಂಡ
-
ಅಪರಾಧ20 hours agoCyber scam-ಟೀ ಶರ್ಟ್ ಖರೀದಿಸಿದರೆ ಐ-ಫೋನ್ ಗಿಫ್ಟ್..! ಮಂಗಳೂರಿನ ವೈದ್ಯನಿಗೆ 1.65 ಲಕ್ಷ ರೂ. ಸೈಬರ್ ವಂಚನೆ
-
ಮಂಗಳೂರು18 hours agoSoujanya case: Big Breaking: ಸೌಜನ್ಯ ಪ್ರಕರಣದಲ್ಲಿ ಯೂಟ್ಯೂಬ್ ಚಾನೆಲ್ಗಳ ಮಸಾಲಾ ಸುದ್ದಿಗೆ ಖರ್ಗೆ ಗರಂ! ವೈಜ್ಞಾನಿಕ ದಾಖಲೆಗಳ ಆಧಾರದಲ್ಲೆ ತನಿಖೆ
-
ಬಿಗ್ ನ್ಯೂಸ್21 hours agoChetan Prakash-ಧನ್ವಂತರಿ ಕ್ಲಿನಿಕಲ್ ಲ್ಯಾಬೋರೆಟರಿಯ ಚೇತನ್ ಪ್ರಕಾಶ್ ಕಜೆ ಯವರಿಗೆ ಗೋವಾ – ಕರ್ನಾಟಕ ಪ್ರಸ್ತುತಿ ಸಾಂಸ್ಕೃತಿಕ ಕಲಾ ಪರಿಷತ್ತು ವತಿಯಿಂದ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಸಾಧಕರಿಗೆ ನೀಡುವ ‘ವೈದ್ಯಕೀಯ ಸೇವಾರತ್ನ ಪ್ರಶಸ್ತಿ – 2026’ ಪ್ರಶಸ್ತಿ ಪ್ರಧಾನ
-
ಬಿಗ್ ನ್ಯೂಸ್20 hours agoHeavy rain-ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆ ಅಬ್ಬರ: ಚಿಂತಾಮಣಿಯಲ್ಲಿ 54 ಮಿ.ಮೀ. ಮಳೆ ದಾಖಲು; ಕೋಲಾರ, ಬೆಂಗಳೂರು ಭಾಗದಲ್ಲೂ ವರ್ಷಧಾರೆ..!
-
ಅಂತರ ರಾಜ್ಯ21 hours agoRBI-ಡಿಜಿಟಲ್ ವಂಚನೆಗೆ ಆರ್ಬಿಐ ಬ್ರೇಕ್: ಖಾತೆಯ ಹಣ ವರ್ಗಾವಣೆ ತಕ್ಷಣವೇ ಸ್ಥಗಿತಗೊಳಿಸುವ ‘ಸ್ಟಾಪ್ ಸ್ವಿಚ್’ ಪ್ರಸ್ತಾಪ..!















