ಬಿಗ್ ನ್ಯೂಸ್
ಇಂದು(ಜೂ.16) ದ.ಕ ಜಿಲ್ಲೆಯಾದ್ಯಂತ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ
ಮಂಗಳೂರು: ದಕ್ಷಿಣಕನ್ನಡ ಜಿಲ್ಲೆಯಾದ್ಯಂತ ಸುರಿಯುತ್ತಿರುವ ಧಾರಾಕಾರ ಮಳೆಯ ಹಿನ್ನಲೆ ಜಿಲ್ಲೆಯ ಅಂಗನವಾಡಿ,ಪ್ರಾಥಮಿಕ,ಪ್ರೌಢಶಾಲೆ,ಪಿಯು ಕಾಲೇಜುಗಳಿಗೆ ಜೂನ್ 16ರಂದು ರಜೆ ಘೋಷಣೆ ಮಾಡಲಾಗಿದೆ. ಜೂನ್ 15 ರಂದು ಆಯ್ದ ಕೆಲ ತಾಲೂಕುಗಳಿಗೆ ರಜೆ ಘೋಷಣೆ ಮಾಡಲಾಗಿತ್ತು, ಜೂನ್ 16ರ ಮುಂಜಾನೆ ಜಿಲ್ಲಾಧಿಕಾರಿಯವರ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದಿಂದ ಪರಿಷ್ಕೃತ ಪ್ರಕಟನೆಯಲ್ಲಿ ಜಿಲ್ಲೆಯಾದ್ಯಂತ ರಜೆ ಘೋಷಿಸಲಾಗಿದೆ.
ಆದೇಶದಲ್ಲಿ ಏನೆಲ್ಲ ಇದೆ :
ನೀರು ಇರುವ ತಗ್ಗು ಪ್ರದೇಶ, ಕೆರೆ, ನದಿತೀರ ಸಮುದ್ರತೀರಕ್ಕೆ ಮಕ್ಕಳು ಹೋಗದಂತೆ ಪಾಲಕರು ಜಾಗ್ರತೆ ವಹಿಸುವುದು.
ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಈ ಮೂಲಕ ಸೂಚನೆ ನೀಡಿದೆ.
ಜಿಲ್ಲಾ ಮಟ್ಟದ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು, ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲಿರತಕ್ಕದು ಹಾಗೂ ವಿಪತ್ತು ನಿರ್ವಹಣೆಯನ್ನು ಚಾಚೂ ತಪ್ಪದೇ ಕಡ್ಡಾಯವಾಗಿ ನಿರ್ವಹಿಸುವುದು.
ಜಿಲ್ಲಾಡಳಿತದಿಂದ ಗ್ರಾಮ ಪಂಚಾಯತ್ ಮತ್ತು ವಾರ್ಡ್ ಗಳಲ್ಲಿ ನೇಮಿಸಲಾಗಿರುವ Incident Commander ಗಳು ಸದಾ ಜಾಗೃತರಾಗಿದ್ದು, ಸಾರ್ವಜನಿಕ ದೂರುಗಳಿಗೆ ತಕ್ಷಣ ಸ್ಪಂದಿಸುವುದು ಮತ್ತು ಜಿಲ್ಲಾಧಿಕಾರಿ ಕಛೇರಿಯ ನಿಯಂತ್ರಣ ಕೊಠಡಿಯೊಂದಿಗೆ ನಿರಂತರ ಸಂಪರ್ಕದಲ್ಲಿರುವುದು.
ಪ್ರವಾಸಿಗರು / ಸಾರ್ವಜನಿಕರು ನದಿತೀರಕ್ಕೆ, ಸಮುದ್ರತೀರಕ್ಕೆ ತೆರಳದಂತೆ ಸೂಚಿಸಲಾಗಿದೆ.
ಸಂಬಂಧಪಟ್ಟ ಇಲಾಖಾ ಅಧಿಕಾರಿಗಳು ಪ್ರತೀ ತಾಲೂಕುಗಳಲ್ಲಿ ಕಾಳಜಿ ಕೇಂದ್ರವನ್ನು ತೆರೆದು ಸನ್ನದ್ಧ ಸ್ಥಿತಿಯಲ್ಲಿರಿಸಿಕೊಳ್ಳುವುದು.
ಪ್ರಾಕೃತಿಕ ವಿಕೋಪ ಸಂಬಂಧಿಸಿದ ಯಾವುದೇ ಸಮಸ್ಯೆಗಳಿಗೆ ಈ ಕೆಳಕಂಡ ದೂರವಾಣಿಯನ್ನು ಸಂಪರ್ಕಿಸುವುದು.
ಸ್ಥಳೀಯ
Dharmasthala-ಪಾಣೇರು ಬಸದಿ ಜೀರ್ಣೋದ್ಧಾರಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ರೂ. 5 ಲಕ್ಷ ಅನುದಾನ
ಪಾಣೆಮಂಗಳೂರಿನಲ್ಲಿರುವ ಭಗವಾನ್ ಶ್ರೀ ಅನಂತನಾಥ ಸ್ವಾಮಿ ಬಸದಿಯ ಜೀರ್ಣೋದ್ಧಾರ ಕಾರ್ಯಕ್ಕಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದ ವತಿಯಿಂದ ರೂ. 5 ಲಕ್ಷ ಅನುದಾನವನ್ನು ನೀಡಲಾಯಿತು. ಶ್ರೀ ಕ್ಷೇತ್ರ ಧರ್ಮಸ್ಥಳದ ಡಿ. ಹರ್ಷೇಂದ್ರ ಕುಮಾರ್ ಅವರು ಬಸದಿಯ ಅರ್ಚಕರಾದ ಧರಣೇಂದ್ರ ಇಂದ್ರ ಅವರಿಗೆ ಅನುದಾನವನ್ನು ಹಸ್ತಾಂತರಿಸಿದರು.
ಉಜಿರೆ: ಪಾಣೆಮಂಗಳೂರಿನಲ್ಲಿರುವ ಭಗವಾನ್ ಶ್ರೀ ಅನಂತನಾಥ ಸ್ವಾಮಿ ಬಸದಿಯ ಜೀರ್ಣೋದ್ಧಾರ ಕಾರ್ಯಕ್ಕಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದ ವತಿಯಿಂದ ರೂ. 5 ಲಕ್ಷ ಅನುದಾನವನ್ನು ನೀಡಲಾಯಿತು.
ಶ್ರೀ ಕ್ಷೇತ್ರ ಧರ್ಮಸ್ಥಳದ ಡಿ. ಹರ್ಷೇಂದ್ರ ಕುಮಾರ್ ಅವರು ಬಸದಿಯ ಅರ್ಚಕರಾದ ಧರಣೇಂದ್ರ ಇಂದ್ರ ಅವರಿಗೆ ಅನುದಾನವನ್ನು ಹಸ್ತಾಂತರಿಸಿ, ಜೀರ್ಣೋದ್ಧಾರ ಕಾರ್ಯವು ಸುಸೂತ್ರವಾಗಿ ನೆರವೇರಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಮಹಾವೀರ ಅಜ್ರಿ ಉಪಸ್ಥಿತರಿದ್ದರು.
ಅಂತರ ರಾಜ್ಯ
WhatsApp-WhatsApp ಬಳಕೆದಾರರಿಗೆ CERT-In ಎಚ್ಚರಿಕೆ; ಡೇಟಾ ಕದಿಯುವ, ಅಳಿಸುವ ಅಪಾಯ..!
ಜನಪ್ರಿಯ ಮೆಸೇಜಿಂಗ್ ಆ್ಯಪ್ WhatsAppನ ವಿವಿಧ ಆವೃತ್ತಿಗಳಲ್ಲಿ ಹಲವು ಭದ್ರತಾ ನ್ಯೂನತೆಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಭಾರತೀಯ ಕಂಪ್ಯೂಟರ್ ತುರ್ತು ಪ್ರತಿಕ್ರಿಯಾ ತಂಡ (CERT-In) ಬಳಕೆದಾರರಿಗೆ ಎಚ್ಚರಿಕೆ ನೀಡಿದೆ. ಈ ದೋಷಗಳನ್ನು ದುರ್ಬಳಕೆ ಮಾಡಿಕೊಂಡು ಹ್ಯಾಕರ್ಗಳು ಸಾಧನಗಳಿಗೆ ಅನಧಿಕೃತ ಪ್ರವೇಶ ಪಡೆಯುವುದರ ಜತೆಗೆ ಸೂಕ್ಷ್ಮ ಮಾಹಿತಿಯನ್ನು ಕದಿಯುವ ಅಥವಾ ಡೇಟಾವನ್ನು ಅಳಿಸುವ ಸಾಧ್ಯತೆಯಿದೆ ಎಂದು ಸಂಸ್ಥೆ ತಿಳಿಸಿದೆ.
ನವದೆಹಲಿ: ಜನಪ್ರಿಯ ಮೆಸೇಜಿಂಗ್ ಆ್ಯಪ್ WhatsAppನ ವಿವಿಧ ಆವೃತ್ತಿಗಳಲ್ಲಿ ಹಲವು ಭದ್ರತಾ ನ್ಯೂನತೆಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಭಾರತೀಯ ಕಂಪ್ಯೂಟರ್ ತುರ್ತು ಪ್ರತಿಕ್ರಿಯಾ ತಂಡ (CERT-In) ಬಳಕೆದಾರರಿಗೆ ಎಚ್ಚರಿಕೆ ನೀಡಿದೆ. ಈ ದೋಷಗಳನ್ನು ದುರ್ಬಳಕೆ ಮಾಡಿಕೊಂಡು ಹ್ಯಾಕರ್ಗಳು ಸಾಧನಗಳಿಗೆ ಅನಧಿಕೃತ ಪ್ರವೇಶ ಪಡೆಯುವುದರ ಜತೆಗೆ ಸೂಕ್ಷ್ಮ ಮಾಹಿತಿಯನ್ನು ಕದಿಯುವ ಅಥವಾ ಡೇಟಾವನ್ನು ಅಳಿಸುವ ಸಾಧ್ಯತೆಯಿದೆ ಎಂದು ಸಂಸ್ಥೆ ತಿಳಿಸಿದೆ.
WhatsApp ನಮ್ಮ ದೈನಂದಿನ ಜೀವನದ ಪ್ರಮುಖ ಸಂವಹನ ಸಾಧನವಾಗಿದ್ದು, ಅದರ ಭದ್ರತೆಗೆ ಸಂಬಂಧಿಸಿದಂತೆ CERT-In ಇದೀಗ ಅಧಿಕ ತೀವ್ರತೆಯ ಸಲಹೆ ನೀಡಿದೆ. Android, iOS, Mac ಹಾಗೂ Windows ಸೇರಿದಂತೆ ವಿವಿಧ ಪ್ಲಾಟ್ಫಾರ್ಮ್ಗಳಲ್ಲಿ ಬಳಕೆಯಾಗುವ WhatsAppನ ಕೆಲವು ಆವೃತ್ತಿಗಳಲ್ಲಿನ ನ್ಯೂನತೆಗಳು ಸೈಬರ್ ದಾಳಿಗೆ ಅವಕಾಶ ಮಾಡಿಕೊಡಬಹುದು ಎಂದು ಎಚ್ಚರಿಸಲಾಗಿದೆ.
ಕೇಂದ್ರ ಸರ್ಕಾರದ ಸೈಬರ್ ಭದ್ರತಾ ಸಂಸ್ಥೆಯ ಪ್ರಕಾರ, ವಿಶೇಷವಾಗಿ ರೂಪಿಸಲಾದ ಸಂದೇಶಗಳು, ಅಟ್ಯಾಚ್ಮೆಂಟ್ಗಳು ಅಥವಾ URL ಲಿಂಕ್ಗಳ ಮೂಲಕ ಈ ದೋಷಗಳನ್ನು ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆಯಿದೆ. ಹೀಗಾಗಿ ಬಳಕೆದಾರರು ಹಾಗೂ ಸಂಸ್ಥೆಗಳು ತಮ್ಮ ಸಾಧನಗಳಲ್ಲಿ WhatsApp ಅನ್ನು ತಕ್ಷಣವೇ ನವೀಕರಿಸಿಕೊಳ್ಳುವಂತೆ ಸಲಹೆ ನೀಡಲಾಗಿದೆ.
ಈ ಹಿಂದೆ ಕೇಂದ್ರ ಗೃಹ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರದ (I4C) ರಾಷ್ಟ್ರೀಯ ಸೈಬರ್ ಅಪರಾಧ ಬೆದರಿಕೆ ವಿಶ್ಲೇಷಣಾ ಘಟಕ (NCTAU) ಕೂಡ WhatsApp ಬಳಕೆಯ ಕುರಿತು ಎಚ್ಚರಿಕೆ ನೀಡಿತ್ತು. ಸಾರ್ವಜನಿಕ ಕಂಪ್ಯೂಟರ್ಗಳಲ್ಲಿ WhatsApp ವೆಬ್ಗೆ ಲಾಗಿನ್ ಮಾಡಿ ಕೆಲಸ ಮುಗಿದ ಬಳಿಕ ಲಾಗ್ಔಟ್ ಮಾಡದೆ ಬಿಟ್ಟರೆ, ಅನಧಿಕೃತ ವ್ಯಕ್ತಿಗಳು ಖಾತೆಯನ್ನು ಪ್ರವೇಶಿಸಿ ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆಯಿದೆ ಎಂದು ತಿಳಿಸಿತ್ತು. ಬ್ರೌಸರ್ ಟ್ಯಾಬ್ ಮುಚ್ಚಿದ ಮಾತ್ರಕ್ಕೆ WhatsApp ವೆಬ್ನಿಂದ ಲಾಗ್ಔಟ್ ಆಗುವುದಿಲ್ಲ ಎಂಬುದನ್ನೂ ಎಚ್ಚರಿಸಿತ್ತು.
WhatsAppನಲ್ಲಿ ಪತ್ತೆಯಾದ ಪ್ರಮುಖ ಭದ್ರತಾ ದೋಷಗಳೇನು?
CERT-In ಸಲಹೆಯಲ್ಲಿ WhatsAppನ ವಿವಿಧ ಆವೃತ್ತಿಗಳಲ್ಲಿನ ಐದು ಭದ್ರತಾ ನ್ಯೂನತೆಗಳನ್ನು ಉಲ್ಲೇಖಿಸಲಾಗಿದೆ.
CVE-2026-102769: Android WhatsAppನಲ್ಲಿ ವಿಶೇಷವಾಗಿ ರೂಪಿಸಲಾದ ಆರ್ಡರ್ ವಿವರಗಳ ಸಂದೇಶಕ್ಕೆ ಸಂಬಂಧಿಸಿದ ಈ ದೋಷವು SQL ಇಂಜೆಕ್ಷನ್ಗೆ ಅವಕಾಶ ನೀಡಬಹುದು. ಸಂದೇಶವನ್ನು ಬಳಕೆದಾರರು ತೆರೆಯುವ ಸಂದರ್ಭದಲ್ಲಿ ಸ್ಥಳೀಯವಾಗಿ ಸಂಗ್ರಹವಾಗಿರುವ ಚಾಟ್ಗಳು, ಮಾಧ್ಯಮ ಹಾಗೂ ಇತರ ಫೈಲ್ಗಳನ್ನು ಅಳಿಸುವ ಅಪಾಯವಿದೆ ಎಂದು ಎಚ್ಚರಿಸಲಾಗಿದೆ. ಸಂದೇಶ ತಲುಪಿದ ಸಮಯ ಹಾಗೂ ಡಬಲ್ ಟಿಕ್ನ ಮಾಹಿತಿಯನ್ನು ಗಮನಿಸುವ ಮೂಲಕ ಚಾಟ್ ಡೇಟಾಬೇಸ್ ಕುರಿತು ಕೆಲವು ಮಾಹಿತಿಯನ್ನು ತಿಳಿದುಕೊಳ್ಳುವ ಸಾಧ್ಯತೆಯೂ ಇದೆ. ಆದರೆ ಈ ದೋಷದ ದುರ್ಬಳಕೆಗೆ ಸಂಬಂಧಿಸಿದ ಯಾವುದೇ ಪುರಾವೆ ಇಲ್ಲ ಎಂದು WhatsApp ತಿಳಿಸಿದೆ.
CVE-2026-44908: Meta AIನ ಕಂಪ್ಯೂಟಿಂಗ್ ವ್ಯವಸ್ಥೆಯೊಂದಿಗೆ ವಿಶ್ವಾಸಾರ್ಹ ಸಂಪರ್ಕ ಸ್ಥಾಪಿಸಲು ಬಳಸುವ ಸರ್ಟಿಫಿಕೇಟ್ ಚೈನ್ ಪರಿಶೀಲನೆಯಲ್ಲಿನ ನ್ಯೂನತೆಗೆ ಈ ದೋಷ ಸಂಬಂಧಿಸಿದೆ. ಇದರಿಂದ ಕೆಲವು ಸಂದರ್ಭಗಳಲ್ಲಿ ಹಾರ್ಡ್ವೇರ್ ಭದ್ರತಾ ವ್ಯವಸ್ಥೆಯನ್ನು ಬೈಪಾಸ್ ಮಾಡುವ ಸಾಧ್ಯತೆ ಇದೆ ಎಂದು ತಿಳಿಸಲಾಗಿದೆ. ಈ ದೋಷವನ್ನು ದುರ್ಬಳಕೆ ಮಾಡಿಕೊಂಡಿರುವ ಪುರಾವೆಯೂ ಇಲ್ಲ ಎಂದು WhatsApp ಹೇಳಿದೆ.
CVE-2026-23871: Android ಸಾಧನಗಳಲ್ಲಿನ ಬಾಹ್ಯ ಜಾಹೀರಾತು-ಪ್ರತಿಕ್ರಿಯೆ URLಗಳಿಗೆ ಸಂಬಂಧಿಸಿದ ಈ ದೋಷವು ವಿಶೇಷವಾಗಿ ರೂಪಿಸಲಾದ ‘Click to WhatsApp’ ಸಂದೇಶಗಳ ಮೂಲಕ ಸಾಧನವು ಹ್ಯಾಕರ್ ನಿಯಂತ್ರಿತ ವಿಳಾಸದಿಂದ ಮಾಧ್ಯಮವನ್ನು ಲೋಡ್ ಮಾಡುವಂತೆ ಮಾಡಬಹುದು. ಇದರಿಂದ ಬಳಕೆದಾರರ IP ವಿಳಾಸ ಬಹಿರಂಗಗೊಳ್ಳುವ ಸಾಧ್ಯತೆಯಿದೆ.
ಇದಲ್ಲದೆ, Instagram Reelಗೆ ಸಂಬಂಧಿಸಿದ AI ಪ್ರತಿಕ್ರಿಯೆಯಲ್ಲಿನ ದುರ್ಬಲತೆಯ ಮೂಲಕ iOS ಅಥವಾ Android ಸಾಧನಗಳಲ್ಲಿ ದುರುದ್ದೇಶಪೂರಿತ ವಿಷಯವನ್ನು ಪ್ರಕ್ರಿಯೆಗೊಳಿಸುವ ಸಾಧ್ಯತೆಯಿರುವ ಮತ್ತೊಂದು ದೋಷವನ್ನೂ ಉಲ್ಲೇಖಿಸಲಾಗಿದೆ.
CVE-2026-23863: Windows WhatsAppನಲ್ಲಿ ದುರುದ್ದೇಶಪೂರಿತ ಅಟ್ಯಾಚ್ಮೆಂಟ್ಗಳನ್ನು ಸಾಮಾನ್ಯ ಫೈಲ್ಗಳಂತೆ ತೋರಿಸಿ, ತೆರೆಯುವಾಗ ಕಾರ್ಯಗತಗೊಳಿಸಬಹುದಾದ ಫೈಲ್ಗಳಾಗಿ ರನ್ ಆಗುವಂತೆ ಮಾಡುವ ನ್ಯೂನತೆ ಇದಾಗಿದೆ. ಈ ದೋಷಗಳ ದುರ್ಬಳಕೆಗೆ ಸಂಬಂಧಿಸಿದ ಪುರಾವೆಗಳು ಇಲ್ಲ ಎಂದು WhatsApp ತಿಳಿಸಿದೆ.
ಸೈಬರ್ ಭದ್ರತಾ ಆತಂಕಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ CERT-In ಬಳಕೆದಾರರು WhatsAppನ ಇತ್ತೀಚಿನ ಆವೃತ್ತಿಯನ್ನು ಬಳಸುವಂತೆ ಹಾಗೂ ಅಪರಿಚಿತ ಸಂದೇಶಗಳು, ಲಿಂಕ್ಗಳು ಮತ್ತು ಅಟ್ಯಾಚ್ಮೆಂಟ್ಗಳನ್ನು ತೆರೆಯುವಾಗ ಎಚ್ಚರಿಕೆ ವಹಿಸುವಂತೆ ಸೂಚಿಸಿದೆ.
ಬಿಗ್ ನ್ಯೂಸ್
Vitla-ವಿಟ್ಲ: ಚಿಕ್ಕಪ್ಪನನ್ನು ಕತ್ತಿಯಿಂದ ಕಡಿದು ಹತ್ಯೆಗೈದ ಯುವತಿ ಬಂಧನ
ಕನ್ಯಾನ ಗ್ರಾಮದ ನಂದರಬೆಟ್ಟು ನಿವಾಸಿ ಚೆನ್ನಯ್ಯ ಪೂಜಾರಿ (45) ಅವರನ್ನು ಕತ್ತಿಯಿಂದ ಕಡಿದು ಕೊಲೆ ಮಾಡಿದ ಆರೋಪದಲ್ಲಿ ರಿಶಿಕಾ (24) ಎಂಬ ಯುವತಿಯನ್ನು ವಿಟ್ಲ ಪೊಲೀಸರು ಬಂಧಿಸಿದ್ದು, ನ್ಯಾಯಾಲಯ ಆಕೆಗೆ ನ್ಯಾಯಾಂಗ ಬಂಧನ ವಿಧಿಸಿದೆ.
ವಿಟ್ಲ: ಕನ್ಯಾನ ಗ್ರಾಮದ ನಂದರಬೆಟ್ಟು ನಿವಾಸಿ ಚೆನ್ನಯ್ಯ ಪೂಜಾರಿ (45) ಅವರನ್ನು ಕತ್ತಿಯಿಂದ ಕಡಿದು ಕೊಲೆ ಮಾಡಿದ ಆರೋಪದಲ್ಲಿ ರಿಶಿಕಾ (24) ಎಂಬ ಯುವತಿಯನ್ನು ವಿಟ್ಲ ಪೊಲೀಸರು ಬಂಧಿಸಿದ್ದು, ನ್ಯಾಯಾಲಯ ಆಕೆಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಚೆನ್ನಯ್ಯ ಪೂಜಾರಿ ಮದ್ಯಪಾನ ಮಾಡಿ ತನ್ನ ಅಣ್ಣನ ಮಗಳಿಗೆ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಈ ಸಂದರ್ಭ ಯುವತಿ ಕತ್ತಿಯಿಂದ ಬೀಸಿದಾಗ ಅದು ಚೆನ್ನಯ್ಯ ಪೂಜಾರಿ ಅವರ ಎದೆಗೆ ತಾಗಿ ಗಂಭೀರ ಗಾಯಗೊಂಡಿದ್ದರು.
ಗಾಯಗೊಂಡ ಅವರನ್ನು ತಕ್ಷಣ ಆಂಬ್ಯುಲೆನ್ಸ್ ಮೂಲಕ ಪುತ್ತೂರಿಗೆ ಕರೆದೊಯ್ಯಲಾಗಿತ್ತು. ಆದರೆ, ಅಲ್ಲಿ ಅವರು ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ.
ಕುಟುಂಬದೊಳಗಿನ ಕಲಹ ಕೊಲೆಯಲ್ಲಿ ಅಂತ್ಯಗೊಂಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ರಿಶಿಕಾಳನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯ ಆಕೆಗೆ ನ್ಯಾಯಾಂಗ ಬಂಧನ ವಿಧಿಸಿದೆ.
-
Uncategorized4 hours ago
ಪುತ್ತೂರು : ಅಡಿಕೆ ತೆಗೆಯುವಾಗ ಕಂಗಿನಿಂದ ಬಿದ್ದು ಗಂಭೀರ ಗಾಯ: ಚಿಕಿತ್ಸೆಗೆ ₹8 ಲಕ್ಷದ ಅಗತ್ಯ; ದಾನಿಗಳ ನೆರವಿನ ನಿರೀಕ್ಷೆಯಲ್ಲಿ ಬಡ ಕುಟುಂಬ
-
Uncategorized11 hours ago
ಕಾರ್ಯಕರ್ತರ ಶ್ರಮದಲ್ಲಿ ನೆಲಪ್ಪಾಲು ವೀರಾಂಜನೇಯ ಕ್ಷೇತ್ರ ನಿರ್ಮಾಣ: ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ | ಶ್ರೀ ಪಂಚಮುಖಿ ಆಂಜನೇಯ ಯಾಗದ ಅಂಗವಾಗಿ ಧರ್ಮಸಭೆ
-
Uncategorized4 hours ago
ಗ್ರಾಮೀಣ ವಿದ್ಯಾರ್ಥಿಗಳಿಗೆ ಮಡಿಯಾಲದಲ್ಲಿ ಉಚಿತ ಎಐ ಪದವಿ ಶಿಕ್ಷಣ ಕೇಂದ್ರ; ನ. 30ರಂದು ನಾರಾಯಣ ಭಟ್ ಜನ್ಮಶತಾಬ್ದಿ ಸ್ಮರಣಾರ್ಥ ಭೂಮಿಪೂಜೆ; 2027–28ರಿಂದ 30 ವಿದ್ಯಾರ್ಥಿಗಳಿಗೆ ಪ್ರವೇಶ ನೀಡುವ ಯೋಜನೆ















