Connect with us

ಕಾರ್ಯಕ್ರಮಗಳು

Ambika-ಅಂಬಿಕಾ ವಿದ್ಯಾಲಯ ಸಿಬಿಎಸ್‌ಇಯಲ್ಲಿ ವಾರ್ಷಿಕೋತ್ಸವ – ಪ್ರತಿಭಾ ತರಂಗಿಣಿ 2024; ಮಕ್ಕಳಿಗೆ ಸೋಲು ಸ್ವೀಕರಿಸುವುದನ್ನೂ ಕಲಿಸಿಕೊಡಬೇಕು – ರಾಜ ಬಿ.ಎಸ್

Published

on



Ad Widget

Ad Widget

Ad Widget

Ad Widget
Ad Widget

Ad Widget

Ad Widget

Ad Widget

ಪುತ್ತೂರು: ನಾವಿಂದು ಮಕ್ಕಳಿಗೆ ಗೆಲ್ಲುವುದನ್ನಷ್ಟೇ ಹೇಳಿಕೊಡುತ್ತಿದ್ದೇವೆ. ಹಾಗಾಗಿ ಸೋಲನ್ನು ಒಪ್ಪಿಕೊಳ್ಳುವುದು, ಅದರಿಂದ ಸ್ಪೂರ್ತಿ ಪಡೆಯುವ ಕಲೆ ಮಕ್ಕಳಿಗೆ ಕರಗತವಾಗುತ್ತಿಲ್ಲ. ಆದ್ದರಿಂದ ಸೋಲುವುದನ್ನೂ ನಮ್ಮ ಮಕ್ಕಳಿಗೆ ಕಲಿಸಿಕೊಡಬೇಕಾದ ಅನಿವಾರ್ಯತೆ ಇದೆ ಎಂದು ಮಂಗಳೂರಿನ ಕರ್ನಾಟಕ ಬ್ಯಾಂಕ್‌ನ ಜನರಲ್ ಮ್ಯಾನೇಜರ್ ರಾಜ ಬಿ.ಎಸ್. ಹೇಳಿದರು.

Ad Widget

Ad Widget

Ad Widget alt="Ad Widget"/>

Ad Widget

ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯ ವಾರ್ಷಿಕೋತ್ಸವ – ಪ್ರತಿಭಾ ತರಂಗಿಣಿ 2024 ಕಾರ್ಯಕ್ರಮವನ್ನು ಉದ್ಘಾಟಿಸಿ ಸೋಮವಾರ ಮಾತನಾಡಿದರು.

Ad Widget

Ad Widget <> Ad Widget

ಕೆಲವು ವರ್ಷಗಳ ಹಿಂದೆ ಶಿಕ್ಷಣವನ್ನು ಉದ್ಯೋಗಕೇಂದ್ರಿತವಾಗಿ ಕಾಣಲಾಗುತ್ತಿತ್ತು. ಉದ್ಯೋಗ ಪಡೆಯುವ ನಿರ್ದಿಷ್ಟ ಉದ್ದೇಶದೊಂದಿಗೆ ಶಿಕ್ಷಣವನ್ನು ಪಡೆದುಕೊಳ್ಳಲಾಗುತ್ತಿತ್ತು. ತದನಂತರದ ಕಾಲಘಟ್ಟದಲ್ಲಿ ಉದ್ಯೋಗಕೇಂದ್ರಿತವಾಗಿದ್ದ ಶಿಕ್ಷಣ ಉದ್ಯೋಗ ಪಡೆಯುವುದಷ್ಟೇ ಅಲ್ಲದೆ ವ್ಯಕ್ತಿಯೊಬ್ಬನ ದೀರ್ಘಕಾಲಿಕ ಔದ್ಯೋಗಿಕ ಬದುಕನ್ನು ನಿರ್ಣಯಿಸುವ ವ್ಯವಸ್ಥೆಯಾಗಿ ಬದಲಾಯಿತು. ಆದರೆ ಈಗ ಶಿಕ್ಷಣ ಎಂಬುದು ಜೀವನಕೇಂದ್ರಿತವಾಗಿದೆ. ನಮ್ಮ ಬದುಕು ನಿರ್ಣಯವಾಗುವುದೇ ಶಿಕ್ಷಣದಿಂದ ಎಂಬ ಕಾಲಘಟ್ಟದಲ್ಲಿ ನಾವು ಜೀವಿಸುತ್ತಿದ್ದೇವೆ ಎಂದು ನುಡಿದರು.



Ad Widget

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ವಿದ್ಯಾಲಯದ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಡಾ.ದೀಪಕ್ ರೈ ಮಾತನಾಡಿ ನಾವು ನಮ್ಮ ಮಕ್ಕಳಿಗೆ ಇಂಜಿನಿಯರ್ ಆಗುವುದನ್ನು, ವೈದ್ಯರಾಗುವುದನ್ನು ಮತ್ತೇನೋ ಆಗುವುದನ್ನೆಲ್ಲಾ ಕಲಿಸಿಕೊಡುತ್ತಿದ್ದೇವೆ. ಆದರೆ ರಾಜಕಾರಣಿಯಾಗುವದನ್ನು ಕಲಿಸಿಕೊಡುತ್ತಿಲ್ಲ. ಒಂದು ದೇಶ ಉತ್ಕೃಷ್ಟತೆಯನ್ನು ಸಾಧಿಸುವುದಕ್ಕೆ ಸುಶಿಕ್ಷಿತ ರಾಜಕಾರಣಿಗಳ ಅವಶ್ಯಕತೆ ಇದೆ. ಮುಂದಾಲೋಚನೆ ಇರುವ, ದೇಶಭಕ್ತಿ ಹೊಂದಿರುವ ರಾಜಕಾರಣಿಗಳನ್ನು ಸಮಾಜಕ್ಕೆ ಕೊಡುವುದಕ್ಕೆ ಸಾಧ್ಯವಾದರೆ ಅದು ಅತ್ಯುತ್ತಮ ರಾಷ್ಟ್ರನಿರ್ಮಾಣಕ್ಕೆ ಅಡಿಪಾಯವೆನಿಸುತ್ತದೆ ಎಂದರು.

Ad Widget

Ad Widget

ವಿದ್ಯಾಲಯದ ಹಿರಿಯ ವಿದ್ಯಾರ್ಥಿನಿ ಆತ್ಮಶ್ರೀ ಮಾತನಾಡಿ ವ್ಯಕ್ತಿಯನ್ನು ಶಕ್ತಿಯನ್ನಾಗಿಸುವುದೇ ಶಿಕ್ಷಣ. ಯಾವ ಶಿಕ್ಷಣ ವಿದ್ಯಾರ್ಥಿಯನ್ನು ರಾಷ್ಟçಭಕ್ತನನ್ನಾಗಿ ರೂಪಿಸುವುದಿಲ್ಲವೋ ಅದು ಶಿಕ್ಷಣ ಎನಿಸುವುದಿಲ್ಲ ಎಂದು ಅಭಿಪ್ರಾಯಪಟ್ಟರು. ವಿದ್ಯಾಲಯದ ಪ್ರಾಂಶುಪಾಲೆ ಮಾಲತಿ ಡಿ ವಾರ್ಷಿಕ ವರದಿ ಮಂಡಿಸಿದರು.

ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಹ್ಮಣ್ಯ ನಟ್ಟೋ ಮಾತನಾಡಿ ದೇಶವನ್ನು ಉನ್ನತಸ್ಥಾನಕ್ಕೆ ಒಯ್ಯುವ ಕನಸನ್ನು ವಿದ್ಯಾರ್ಥಿಗಳು ಕಾಣಬೇಕು. ಇಂದು ಜಗತ್ತನ್ನು ಆಳುತ್ತಿರುವ ಡಾಲರ್‌ನ ಜಾಗದಲ್ಲಿ ಭಾರತದ ರೂಪಾಯಿ ಹೋಗಿ ಕುಳಿತುಕೊಳ್ಳಬೇಕು. ಈಗ ಭಾರತೀಯರನ್ನು ವಿದೇಶೀಯರು ತಮ್ಮ ಕಂಪೆನಿಗಳಲ್ಲಿ ದುಡಿಸಿಕೊಳ್ಳುವಂತೆ ಮುಂದೊಂದು ದಿನ ಅಮೇರಿಕಾ, ಆಸ್ಟ್ರೇಲಿಯಾ, ಇಂಗ್ಲೆಂಡ್‌ನಂತಹ ದೇಶಗಳ ಜನರನ್ನು ಭಾರತೀಯರು ತಮ್ಮ ಸಂಸ್ಥೆಗಳಲ್ಲಿ ದುಡಿಸುವಂತಾಗಬೇಕು. ಅಂತಹ ಕನಸಿನೊಂದಿಗೆ ನಮ್ಮ ಮಕ್ಕಳು ಬೆಳೆಯಬೇಕು ಎಂದು ಕರೆನೀಡಿದರು.

ವೇದಿಕೆಯಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ರಾಜಶ್ರೀ ಎಸ್ ನಟ್ಟೋಜ, ಪುತ್ತೂರು ಕರ್ನಾಟಕ ಬ್ಯಾಂಕ್‌ನ ಮ್ಯಾನೇಜರ್ ಶ್ರೀಶ, ವಿದ್ಯಾಲಯದ ಉಪಪ್ರಾಚಾರ್ಯೆ ಸುಜನಿ ಬೋರ್ಕರ್ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಮುಖ್ಯ ಅತಿಥಿ ರಾಜ ಬಿ.ಎಸ್ ಹಾಗೂ ವಿದ್ಯಾಭಾರತಿ ರಾಷ್ಟಿçÃಯ ಮಟ್ಟದ ಸ್ಪರ್ಧೆಗಳ ಅತ್ಯುತ್ತಮ ಪ್ರದರ್ಶನ ನೀಡಿ ಮುಂದಿನ ಹಂತವಾದ ಸ್ಕೂಲ್ ಗೇಮ್ ಫೆಡರೇಶನ್ ಆಫ್ ಇಂಡಿಯಾ (ಎಸ್. ಜಿ. ಎಫ್. ಐ) ಗೆ ಆಯ್ಕೆಯಾದ ಆರನೇ ತರಗತಿಯ ವಿದ್ಯಾರ್ಥಿ ಪ್ರತ್ಯೂಷ್ ಎಸ್.ಎಲ್.ಗೌಡ, ಎಂಟನೇ ತರಗತಿಯ ವಿದ್ಯಾರ್ಥಿನಿಯರಾದ ಮೆಹೆಕ್ ರವಿಕುಮಾರ್ ಕೊಠಾರಿ, ದೃಶಾನ ಸುರೇಶ್ ಸರಳಿಕಾನ ಹಾಗೂ ಹತ್ತನೆಯ ತರಗತಿಯ ವಿದ್ಯಾರ್ಥಿ ವರ್ಧಿನ್ ದೀಪಕರ್ ರೈ ಅವರನ್ನು ಸನ್ಮಾನಿಸಲಾಯಿತು. ಶೈಕ್ಷಣಿಕವಾಗಿ ಸಾಧನೆಗೈದವರನ್ನು ಹಾಗೂ ವಿದ್ಯಾಭಾರತಿ ಆಯೋಜಿಸಿದ ಸ್ಪರ್ಧೆಗಳಲ್ಲಿ ವಿವಿಧ ಹಂತಗಳಲ್ಲಿ ಬಹುಮಾನ ಪಡೆದವರನ್ನು ಅಭಿನಂದಿಸಲಾಯಿತು. ಹತ್ತನೆ ತರಗತಿಯ ವಿದ್ಯಾಥಿನಿ ನಿಯತಿ ಭಟ್ ಅವರಿಗೆ ‘ಬೆಸ್ಟ್ ಔಟ್ ಗೋಯಿಂಗ್ ಸ್ಟೂಡೆಂಟ್’ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ವಿದ್ಯಾರ್ಥಿಗಳಾದ ಸನ್ಮಯ್, ಯಶಸ್ ಬಿ., ಮಯೂರ್ ಎಸ್., ಧೃವ ಬಿ. ಹಾಗೂ ಸಾತ್ವಿಕ್ ಜಿ. ಪ್ರಾರ್ಥಿಸಿದರು. ವಿದ್ಯಾರ್ಥಿ ನಾಯಕಿ ಅನಘಾ ವಿ.ಪಿ ಸ್ವಾಗತಿಸಿ, ವಿದ್ಯಾ ನಾಯಕ ಬಿ.ಆರ್.ಸೂರ್ಯ ವಂದಿಸಿದರು. ಶಿಕ್ಷಕಿಯರಾದ ಸುಷ್ಮಾ ಮಿಥುನ್ ಹಾಗೂ ರಮ್ಯ ಲಕ್ಷ್ಮಿ ಕಾರ್ಯಕ್ರಮ ನಿರ್ವಹಿಸಿದರು. ಸಭಾ ಕಾರ್ಯಕ್ರಮದ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು.

Ad Widget
Click to comment

Leave a Reply

ಕಾರ್ಯಕ್ರಮಗಳು

‘Havells Experience Center-ನಾಳೆ (ಅ. 15) ರಂದು ಮೈತ್ರಿ ಎಲೆಕ್ಟ್ರಿಕ್‌ನಲ್ಲಿ ʻಹ್ಯಾವೆಲ್ಸ್ ಎಕ್ಸ್‌ಪೀರಿಯನ್ಸ್ ಸೆಂಟರ್ʼ ಶುಭಾರಂಭ

Published

on



Ad Widget

Ad Widget

Ad Widget

Ad Widget

ಪುತ್ತೂರು ನಗರದ ಮೈತ್ರಿ ಎಲೆಕ್ಟ್ರಿಕ್ ಕಂಪನಿಯ ವತಿಯಿಂದ ಹ್ಯಾವೆಲ್ಸ್‌ನ ವಿಶೇಷ ಅನುಭವ ಕೇಂದ್ರವಾದ ‘ಹ್ಯಾವೆಲ್ಸ್ ಎಕ್ಸ್‌ಪೀರಿಯನ್ಸ್ ಸೆಂಟರ್’ ಅ.15 ಗುರುವಾರದಂದು ಉದ್ಘಾಟನೆಗೊಳ್ಳಲಿದೆ. ಪುತ್ತೂರಿನ ಮೊಳಹಳ್ಳಿ ಶಿವರಾಯ ರಸ್ತೆಯಲ್ಲಿರುವ ಸುಶಾ ಚೇಂಬರ್ಸ್‌ನ ಮೊದಲ ಮಹಡಿಯಲ್ಲಿರುವ ಮೈತ್ರಿ ಎಲೆಕ್ಟ್ರಿಕ್ ಕಂಪನಿಯಲ್ಲಿ ಬೆಳಿಗ್ಗೆ 10.30ಕ್ಕೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ.

Ad Widget

Ad Widget

Ad Widget

Ad Widget

ಪುತ್ತೂರು: ನಗರದ ಮೈತ್ರಿ ಎಲೆಕ್ಟ್ರಿಕ್ ಕಂಪನಿಯ ವತಿಯಿಂದ ಹ್ಯಾವೆಲ್ಸ್‌ನ ವಿಶೇಷ ಅನುಭವ ಕೇಂದ್ರವಾದ ‘ಹ್ಯಾವೆಲ್ಸ್ ಎಕ್ಸ್‌ಪೀರಿಯನ್ಸ್ ಸೆಂಟರ್’ ಅ.15 ಗುರುವಾರದಂದು ಉದ್ಘಾಟನೆಗೊಳ್ಳಲಿದೆ.

Ad Widget

Ad Widget

Ad Widget alt="Ad Widget"/>

Ad Widget

ಪುತ್ತೂರಿನ ಮೊಳಹಳ್ಳಿ ಶಿವರಾಯ ರಸ್ತೆಯಲ್ಲಿರುವ ಸುಶಾ ಚೇಂಬರ್ಸ್‌ನ ಮೊದಲ ಮಹಡಿಯಲ್ಲಿರುವ ಮೈತ್ರಿ ಎಲೆಕ್ಟ್ರಿಕ್ ಕಂಪನಿಯಲ್ಲಿ ಬೆಳಿಗ್ಗೆ 10.30ಕ್ಕೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ.

Ad Widget

Ad Widget <> Ad Widget

ಹ್ಯಾವೆಲ್ಸ್ ಕಂಪನಿಯ ವಿದ್ಯುತ್ ಉಪಕರಣಗಳು ಹಾಗೂ ಗೃಹ ಬಳಕೆಯ ವಿವಿಧ ಉತ್ಪನ್ನಗಳು ಮತ್ತು ಪರಿಹಾರಗಳ ಸಂಪೂರ್ಣ ಶ್ರೇಣಿಯನ್ನು ಗ್ರಾಹಕರು ವೀಕ್ಷಿಸಿ, ಮಾಹಿತಿ ಪಡೆಯಲು ಇಲ್ಲಿ ಅವಕಾಶವಿರಲಿದೆ.



Ad Widget

1997ರಿಂದ ಗ್ರಾಹಕರಿಗೆ ಸೇವೆ ಸಲ್ಲಿಸುತ್ತಿರುವ ಮೈತ್ರಿ ಎಲೆಕ್ಟ್ರಿಕ್ ಕಂಪನಿಯು ಈ ನೂತನ ಕೇಂದ್ರದ ಮೂಲಕ ಗ್ರಾಹಕರಿಗೆ ಹ್ಯಾವೆಲ್ಸ್ ಉತ್ಪನ್ನಗಳ ಪರಿಚಯ ಹಾಗೂ ಉತ್ತಮ ಖರೀದಿ ಅನುಭವ ಒದಗಿಸುವ ಉದ್ದೇಶ ಹೊಂದಿದೆ.

Ad Widget

Ad Widget

ಹೆಚ್ಚಿನ ಮಾಹಿತಿಗಾಗಿ 94493 24436 ಅನ್ನು ಸಂರ್ಪಕಿಸಬಹುದು.

Ad Widget
Continue Reading

ಕಾರ್ಯಕ್ರಮಗಳು

Puttur-ಪುತ್ತೂರು: ಅ.15ರಂದು ‘ಮೈ ಡ್ರೆಸ್ ಕೋಡ್’ ನೂತನ ಮಳಿಗೆ ಗ್ರಾಂಡ್ ರೀ-ಓಪನಿಂಗ್

Published

on



Ad Widget

Ad Widget

Ad Widget

Ad Widget

ಪುತ್ತೂರು ನಗರದ ಕೆಎಸ್‌ಆರ್‌ಟಿಸಿ ವಾಣಿಜ್ಯ ಸಂಕೀರ್ಣದ ನೆಲಮಹಡಿಯಲ್ಲಿ ನೂತನವಾಗಿ ಆರಂಭಗೊಳ್ಳಲಿರುವ ‘ಮೈ ಡ್ರೆಸ್ ಕೋಡ್’ ಬಟ್ಟೆ ಮಳಿಗೆಯ ಶುಭಾರಂಭ ಸಮಾರಂಭವು ಅ.15 ಗುರುವಾರದಂದು ಬೆಳಿಗ್ಗೆ 11 ಗಂಟೆಗೆ ನಡೆಯಲಿದೆ.

Ad Widget

Ad Widget

Ad Widget

Ad Widget

ಪುತ್ತೂರು: ನಗರದ ಕೆಎಸ್‌ಆರ್‌ಟಿಸಿ ವಾಣಿಜ್ಯ ಸಂಕೀರ್ಣದ ನೆಲಮಹಡಿಯಲ್ಲಿ ನೂತನವಾಗಿ ಆರಂಭಗೊಳ್ಳಲಿರುವ ‘ಮೈ ಡ್ರೆಸ್ ಕೋಡ್’ ಬಟ್ಟೆ ಮಳಿಗೆಯ ಶುಭಾರಂಭ ಸಮಾರಂಭವು ಅ.15 ಗುರುವಾರದಂದು ಬೆಳಿಗ್ಗೆ 11 ಗಂಟೆಗೆ ನಡೆಯಲಿದೆ.

Ad Widget

Ad Widget

Ad Widget alt="Ad Widget"/>

Ad Widget

ಈ ಶುಭಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ, ದಕ್ಷಿಣ ಕನ್ನಡದ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ವಿಜಯ ಸಾಮ್ರಾಟ್ ಪುತ್ತೂರಿನ ಸಂಸ್ಥಾಪಕಾಧ್ಯಕ್ಷ ಸಹಜ್ ರೈ ಬಳಜ್ಜ, ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ಯು.ಆರ್. ಪಾರ್ಪಟೀಸ್ ಸಂಸ್ಥಾಪಕ ಉಜ್ವಲ್ ಪ್ರಭು, ಪುತ್ತೂರು ಕ್ಷೇತ್ರದ ಮಾಜಿ ಶಾಸಕ ಸಂಜೀವ ಮಠಂದೂರು, ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ, ಸಿಜ್ಲರ್ಸ್ ಗ್ರೂಪ್ ಮಾಲೀಕ ಪ್ರಸನ್ನ ಕುಮಾರ್ ಶೆಟ್ಟಿ, ಹಿಂದೂ ಮುಖಂಡ ಮುರಳಿ ಕೃಷ್ಣ ಹಸಂತಡ್ಕ, ಮಂಗಳೂರು ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ತಿಮ್ಮಪ್ಪ ಶೆಟ್ಟಿ ಚನಿಲ ಹಾಗೂ ಹಿಂದೂಸ್ಥಾನ್ ಪ್ರೊಮೋಟರ್ಸ್ ಆ್ಯಂಡ್ ಡೆವಲಪರ್ಸ್ ಪ್ರೈ.ಲಿ.ಯ ವ್ಯವಸ್ಥಾಪಕ ನಿರ್ದೇಶಕ ಮೊಹಮ್ಮದ್ ಇಬ್ರಾಹಿಂ ಮೊಹಿದೀನ್ ಅವರು ಭಾಗವಹಿಸಲಿದ್ದಾರೆ.

Ad Widget

Ad Widget <> Ad Widget

ಮಳಿಗೆಯ ಮಾಲೀಕ ರಮೇಶ್ ಅವರು ಗ್ರಾಹಕರು, ಹಿತೈಷಿಗಳು ಹಾಗೂ ಸಾರ್ವಜನಿಕರನ್ನು ಶುಭಾರಂಭ ಸಮಾರಂಭಕ್ಕೆ ಆತ್ಮೀಯವಾಗಿ ಆಹ್ವಾನಿಸಿದ್ದಾರೆ.



Ad Widget

ಹೆಚ್ಚಿನ ಮಾಹಿತಿಗಾಗಿ 63631 66808 / 95352 47400 ಅನ್ನು ಸಂರ್ಪಕಿಸಬಹುದು.

Continue Reading

ಕಾರ್ಯಕ್ರಮಗಳು

Puttur-ಪುತ್ತೂರು: ಅ.16ರಂದು ಪ್ರವೀಣ್ ಕ್ಯಾಪಿಟಲ್‌ನ ನವೀಕೃತ ಪ್ರಧಾನ ಕಚೇರಿ ಉದ್ಘಾಟನೆ

Published

on



Ad Widget

Ad Widget

Ad Widget

Ad Widget

ಹಣಕಾಸು ಸೇವಾ ಕ್ಷೇತ್ರದಲ್ಲಿ 1994ರಿಂದ ಕಾರ್ಯನಿರ್ವಹಿಸುತ್ತಿರುವ ಪ್ರವೀಣ್ ಕ್ಯಾಪಿಟಲ್ ಸಂಸ್ಥೆಯ ನವೀಕೃತ ಪ್ರಧಾನ ಕಚೇರಿಯ ಉದ್ಘಾಟನಾ ಸಮಾರಂಭ ಅ.16, ಶುಕ್ರವಾರ ಬೆಳಗ್ಗೆ 10 ಗಂಟೆಗೆ ನಡೆಯಲಿದೆ. ಪುತ್ತೂರಿನ ಮುಖ್ಯ ರಸ್ತೆಯಲ್ಲಿರುವ ಶ್ರೀ ಗಣೇಶ್ ಕಾಂಪ್ಲೆಕ್ಸ್‌ನಲ್ಲಿರುವ ಸಂಸ್ಥೆಯ ನವೀಕೃತ ಪ್ರಧಾನ ಕಚೇರಿಯನ್ನು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರು ಉದ್ಘಾಟಿಸಲಿದ್ದಾರೆ.

Ad Widget

Ad Widget

Ad Widget

Ad Widget

ಪುತ್ತೂರು: ಹಣಕಾಸು ಸೇವಾ ಕ್ಷೇತ್ರದಲ್ಲಿ 1994ರಿಂದ ಕಾರ್ಯನಿರ್ವಹಿಸುತ್ತಿರುವ ಪ್ರವೀಣ್ ಕ್ಯಾಪಿಟಲ್ ಸಂಸ್ಥೆಯ ನವೀಕೃತ ಪ್ರಧಾನ ಕಚೇರಿಯ ಉದ್ಘಾಟನಾ ಸಮಾರಂಭ ಅ.16, ಶುಕ್ರವಾರ ಬೆಳಗ್ಗೆ 10 ಗಂಟೆಗೆ ನಡೆಯಲಿದೆ.

Ad Widget

Ad Widget

Ad Widget alt="Ad Widget"/>

Ad Widget

ಪುತ್ತೂರಿನ ಮುಖ್ಯ ರಸ್ತೆಯಲ್ಲಿರುವ ಶ್ರೀ ಗಣೇಶ್ ಕಾಂಪ್ಲೆಕ್ಸ್‌ನಲ್ಲಿರುವ ಸಂಸ್ಥೆಯ ನವೀಕೃತ ಪ್ರಧಾನ ಕಚೇರಿಯನ್ನು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರು ಉದ್ಘಾಟಿಸಲಿದ್ದಾರೆ.

Ad Widget

Ad Widget <> Ad Widget

ಮುಖ್ಯ ಅತಿಥಿಗಳಾಗಿ ಪುತ್ತೂರಿನ ಜಿಎಲ್ ಆಚಾರ್ಯ ಜ್ಯುವೆಲ್ಲರ್ಸ್‌ನ ಅಧ್ಯಕ್ಷ ಜಿ.ಎಲ್. ಬಲರಾಮ ಆಚಾರ್ಯ ಹಾಗೂ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ಭಾಗವಹಿಸಲಿದ್ದಾರೆ.



Ad Widget

1994ರಲ್ಲಿ ಆರಂಭಗೊಂಡಿರುವ ಪ್ರಾವೀಣ್ ಕ್ಯಾಪಿಟಲ್, ಗ್ರಾಹಕರ ಬೆಂಬಲ ಮತ್ತು ವಿಶ್ವಾಸದೊಂದಿಗೆ ತನ್ನ ಸೇವೆಯನ್ನು ಮುಂದುವರಿಸುತ್ತಿದೆ. ಗ್ರಾಹಕರಿಗೆ ಇನ್ನಷ್ಟು ಉತ್ತಮ ಸೇವೆ ಒದಗಿಸುವ ಉದ್ದೇಶದಿಂದ ಪ್ರಧಾನ ಕಚೇರಿಯನ್ನು ನವೀಕರಿಸಲಾಗಿದೆ ಎಂದು ಸಂಸ್ಥೆ ತಿಳಿಸಿದೆ.

Ad Widget

Ad Widget

ಸಂಸ್ಥೆಯ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಸತ್ಯಶಂಕರ್, ಕಾರ್ಯನಿರ್ವಾಹಕ ನಿರ್ದೇಶಕಿ ರಂಜಿತಾ ಶಂಕರ್ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಮೋಘ್ ಜೆ. ರೈ ಅವರು ಕಾರ್ಯಕ್ರಮಕ್ಕೆ ಗಣ್ಯರು, ಗ್ರಾಹಕರು ಹಾಗೂ ಹಿತೈಷಿಗಳನ್ನು ಆತ್ಮೀಯವಾಗಿ ಆಹ್ವಾನಿಸಿದ್ದಾರೆ.

Ad Widget
Continue Reading

ಇಂದಿನ ಟ್ರೆಂಡಿಂಗ್‌ ಸುದ್ದಿಗಳು

error: Content is protected !!

Discover more from Nikhara News | Kannada News Website

Subscribe now to keep reading and get access to the full archive.

Continue reading