ಅಂತರ ರಾಜ್ಯ
PDP-ಜಮ್ಮು ಕಾಶ್ಮೀರ: ಪಿಡಿಪಿಗೆ ತೀವ್ರ ಮುಖಭಂಗ – ಪಕ್ಷದ ಘಟಕಗಳೆಲ್ಲ ವಿಸರ್ಜನೆ
ಜಮ್ಮು ಮತ್ತು ಕಾಶ್ಮೀರ ಪೀಪಲ್ಸ್ ಡೆಮಾಕ್ರಟಿಕ್ ಪಕ್ಷ (ಪಿಡಿಪಿ)ನ ಮುಖಂಡೆ ಮೆಹಬೂಬಾ ಮುಫಿ ಅವರು ತಕ್ಷಣ ಜಾರಿಗೆ ಬರುವಂತೆ ಪಕ್ಷದ ಘಟಕವನ್ನು ವಿಸರ್ಜನೆಗೊಳಿಸಿದ್ದಾರೆ. ಹಿರಿಯ ನಾಯಕರು ಜೊತೆ ಸಮಾಲೋಚನೆ ನಡೆಸಿ, ನೂತನ ಪದಾಧಿಕಾರಿಗಳನ್ನು ಮತ್ತು ವಿವಿಧ ವಿಭಾಗಗಳನ್ನು ಸ್ಥಾಪಿಸಲು ಪಕ್ಷದ ಉದ್ದೇಶವಿದೆ ಎಂದು ಎಎನ್ಐ ಟ್ವೀಟ್ ಮಾಡಿದೆ.
ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ಪೀಪಲ್ಸ್ ಡೆಮಾಕ್ರಟಿಕ್ ಪಕ್ಷ (ಪಿಡಿಪಿ)ನ ಮುಖಂಡೆ ಮೆಹಬೂಬಾ ಮುಫಿ ಅವರು ತಕ್ಷಣ ಜಾರಿಗೆ ಬರುವಂತೆ ಪಕ್ಷದ ಘಟಕವನ್ನು ವಿಸರ್ಜನೆಗೊಳಿಸಿದ್ದಾರೆ.
ಹಿರಿಯ ನಾಯಕರು ಜೊತೆ ಸಮಾಲೋಚನೆ ನಡೆಸಿ, ನೂತನ ಪದಾಧಿಕಾರಿಗಳನ್ನು ಮತ್ತು ವಿವಿಧ ವಿಭಾಗಗಳನ್ನು ಸ್ಥಾಪಿಸಲು ಪಕ್ಷದ ಉದ್ದೇಶವಿದೆ ಎಂದು ಎಎನ್ಐ ಟ್ವೀಟ್ ಮಾಡಿದೆ.
ಇತ್ತೀಚಿನ ಚುನಾವಣೆಗಳಲ್ಲಿ 90 ಸದಸ್ಯ ಬಲದ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯಲ್ಲಿ ಪಿಡಿಪಿ ಭಾರೀ ಮುಖಭಂಗವನ್ನು ಅನುಭವಿಸುತ್ತಿದ್ದು, ಕೇವಲ ಮೂರು ಸ್ಥಾನಗಳನ್ನು ಮಾತ್ರ ಗೆದ್ದಿದೆ.
ಮಾಜಿ ಮುಖ್ಯಮಂತ್ರಿಯೂ ಆಗಿರುವ ಮುಫಿ ಅವರಿಗೆ ಈ ಫಲಿತಾಂಶ ತೀವ್ರ ಮುಜುಗರವನ್ನು ಉಂಟುಮಾಡಿದೆ. ಅವರು ಫಲಿತಾಂಶ ಪ್ರಕಟವಾದ ನಂತರ, ಹಿರಿಯ ನಾಯಕರು ಮತ್ತು ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳೊಂದಿಗೆ ಪುನರಾವಲೋಕನ ಸಭೆ ನಡೆಸಿದರು.
ಅಂತರ ರಾಜ್ಯ
Women’s reservation-ಮಹಿಳಾ ಮೀಸಲಾತಿ, ಕ್ಷೇತ್ರ ಮರುವಿಂಗಡಣೆ ಮಸೂದೆಗೆ ಕೇಂದ್ರ ಸಂಪುಟ ಅಸ್ತು; ಲೋಕಸಭೆ ಸ್ಥಾನಗಳ ಸಂಖ್ಯೆ ಶೇ.50 ಹೆಚ್ಚಳ?
ಕ್ಷೇತ್ರ ಮರುವಿಂಗಡಣೆ ಮೂಲಕ ಮಹಿಳಾ ಮೀಸಲಾತಿ ಜಾರಿಗೆ ತರುವ ಉದ್ದೇಶದ ಸಂವಿಧಾನ ತಿದ್ದುಪಡಿ ಮಸೂದೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ವರದಿಯಾಗಿದೆ.
ಹೊಸದಿಲ್ಲಿ: ಕ್ಷೇತ್ರ ಮರುವಿಂಗಡಣೆ ಮೂಲಕ ಮಹಿಳಾ ಮೀಸಲಾತಿ ಜಾರಿಗೆ ತರುವ ಉದ್ದೇಶದ ಸಂವಿಧಾನ ತಿದ್ದುಪಡಿ ಮಸೂದೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ವರದಿಯಾಗಿದೆ.
ಮುಂದಿನ ವಾರ ಸಂಸತ್ತಿನಲ್ಲಿ ಕ್ಷೇತ್ರ ಮರುವಿಂಗಡಣೆ ಮಸೂದೆಯನ್ನು ಅಂಗೀಕರಿಸುವ ಪ್ರಯತ್ನಕ್ಕೆ ವೇಗ ನೀಡುವ ಉದ್ದೇಶದಿಂದ ಶುಕ್ರವಾರ ಕೇಂದ್ರ ಸಚಿವ ಸಂಪುಟವು ಮಹತ್ವದ ಪ್ರಸ್ತಾವನೆಗೆ ಒಪ್ಪಿಗೆ ನೀಡಿದೆ.
ಪ್ರಸ್ತಾವನೆಯ ಪ್ರಕಾರ, ಎಲ್ಲಾ ರಾಜ್ಯಗಳಲ್ಲೂ ಸಮಾನ ಅನುಪಾತದಲ್ಲಿ ಲೋಕಸಭಾ ಸ್ಥಾನಗಳ ಸಂಖ್ಯೆಯನ್ನು ಶೇ.50ರಷ್ಟು ಹೆಚ್ಚಿಸುವ ಯೋಜನೆ ರೂಪಿಸಲಾಗಿದೆ. ಈ ಕ್ರಮವು ಕ್ಷೇತ್ರ ಮರುವಿಂಗಡಣೆಯಿಂದ ದಕ್ಷಿಣದ ರಾಜ್ಯಗಳ ಪ್ರಾತಿನಿಧ್ಯಕ್ಕೆ ಸಂಬಂಧಿಸಿದ ಆತಂಕಗಳನ್ನು ನಿವಾರಿಸುವ ನಿಟ್ಟಿನಲ್ಲಿ ಪ್ರಮುಖ ಬೇಡಿಕೆಗೆ ಅನುಗುಣವಾಗಿದೆ ಎಂದು ಹೇಳಲಾಗಿದೆ.
ಅಂತರ ರಾಜ್ಯ
Viral video-ಚಲಿಸುತ್ತಿರುವ ರೈಲಿನ AC ಬೋಗಿಯಲ್ಲಿ ದೀಪ ಹಚ್ಚಿ ಆರತಿ, ಶಂಖನಾದ; ವೈರಲ್ ವಿಡಿಯೋಗೆ ರೈಲ್ವೆ ಪ್ರತಿಕ್ರಿಯೆ
ಚಲಿಸುತ್ತಿರುವ ರೈಲಿನ ಎಸಿ ಬೋಗಿಯೊಳಗೆ ಪ್ರಯಾಣಿಕನೊಬ್ಬ ಎಣ್ಣೆ ದೀಪ ಹಚ್ಚಿ ಪೂಜೆ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಹಪ್ರಯಾಣಿಕರ ಸುರಕ್ಷತೆ ಹಾಗೂ ಅಗ್ನಿ ಅವಘಡದ ಅಪಾಯದ ಕುರಿತು ವ್ಯಾಪಕ ಚರ್ಚೆಗೆ ಕಾರಣವಾಗಿದೆ.
ನವದೆಹಲಿ: ಚಲಿಸುತ್ತಿರುವ ರೈಲಿನ ಎಸಿ ಬೋಗಿಯೊಳಗೆ ಪ್ರಯಾಣಿಕನೊಬ್ಬ ಎಣ್ಣೆ ದೀಪ ಹಚ್ಚಿ ಪೂಜೆ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಹಪ್ರಯಾಣಿಕರ ಸುರಕ್ಷತೆ ಹಾಗೂ ಅಗ್ನಿ ಅವಘಡದ ಅಪಾಯದ ಕುರಿತು ವ್ಯಾಪಕ ಚರ್ಚೆಗೆ ಕಾರಣವಾಗಿದೆ.
ವೈರಲ್ ವಿಡಿಯೋದಲ್ಲಿ ರೈಲಿನ ಹವಾನಿಯಂತ್ರಿತ ಬೋಗಿಯಲ್ಲಿ ಕುಳಿತಿರುವ ವ್ಯಕ್ತಿಯೊಬ್ಬರು ಶಂಖ ಊದುತ್ತಾ ಆರತಿ ಮಾಡುತ್ತಿರುವುದು ಕಂಡುಬಂದಿದೆ. ಅವರ ಪಕ್ಕದಲ್ಲಿರುವ ಸಣ್ಣ ಟೇಬಲ್ ಮೇಲೆ ದೀಪ, ದೇವರ ಫೋಟೋ, ಹೂವು ಹಾಗೂ ಇತರ ಪೂಜಾ ಸಾಮಗ್ರಿಗಳನ್ನು ಇರಿಸಲಾಗಿದೆ. ಪಂಚೆ ಧರಿಸಿ, ಹಣೆಗೆ ವಿಭೂತಿ ಹಚ್ಚಿಕೊಂಡಿರುವ ವ್ಯಕ್ತಿ ರೈಲು ಚಲಿಸುತ್ತಿರುವಾಗಲೇ ಪೂಜಾ ವಿಧಿವಿಧಾನಗಳನ್ನು ನಡೆಸುತ್ತಿರುವ ದೃಶ್ಯ ವಿಡಿಯೋದಲ್ಲಿದೆ.
ಮುಚ್ಚಿದ ಹಾಗೂ ಜನನಿಬಿಡ ರೈಲು ಬೋಗಿಯೊಳಗೆ ಬೆಂಕಿ ಹಚ್ಚಲು ಅವಕಾಶ ನೀಡಿರುವುದು ಹೇಗೆ ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ. ಧಾರ್ಮಿಕ ಆಚರಣೆ ವೈಯಕ್ತಿಕ ವಿಚಾರವಾದರೂ, ಹಲವು ಪ್ರಯಾಣಿಕರಿರುವ ಬೋಗಿಯೊಳಗೆ ತೆರೆದ ಜ್ವಾಲೆಯೊಂದಿಗೆ ದೀಪ ಹಚ್ಚುವುದು ಅಗ್ನಿ ಅವಘಡಕ್ಕೆ ಕಾರಣವಾಗುವ ಅಪಾಯವಿದೆ ಎಂದು ಹಲವರು ಆತಂಕ ವ್ಯಕ್ತಪಡಿಸಿದ್ದಾರೆ.
ವೈರಲ್ ವಿಡಿಯೋಗೆ ಪ್ರತಿಕ್ರಿಯಿಸಿರುವ ಭಾರತೀಯ ರೈಲ್ವೆ, ಘಟನೆಯ ಬಗ್ಗೆ ಪರಿಶೀಲನೆ ನಡೆಸಲು ಹೆಚ್ಚಿನ ಮಾಹಿತಿಯನ್ನು ಕೇಳಿದೆ. ಪ್ರಯಾಣದ ದಿನಾಂಕ, ರೈಲು ಸಂಖ್ಯೆ ಹಾಗೂ ಪಿಎನ್ಆರ್ (PNR) ಸಂಖ್ಯೆಯಂತಹ ವಿವರಗಳನ್ನು ಹಂಚಿಕೊಳ್ಳುವಂತೆ ರೈಲ್ವೆಯ ಅಧಿಕೃತ ‘ರೈಲ್ವೆ ಸೇವಾ’ ಖಾತೆಯ ಮೂಲಕ ಮನವಿ ಮಾಡಲಾಗಿದೆ.
ಅಂತರ ರಾಜ್ಯ
WhatsApp-WhatsApp ಬಳಕೆದಾರರಿಗೆ CERT-In ಎಚ್ಚರಿಕೆ; ಡೇಟಾ ಕದಿಯುವ, ಅಳಿಸುವ ಅಪಾಯ..!
ಜನಪ್ರಿಯ ಮೆಸೇಜಿಂಗ್ ಆ್ಯಪ್ WhatsAppನ ವಿವಿಧ ಆವೃತ್ತಿಗಳಲ್ಲಿ ಹಲವು ಭದ್ರತಾ ನ್ಯೂನತೆಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಭಾರತೀಯ ಕಂಪ್ಯೂಟರ್ ತುರ್ತು ಪ್ರತಿಕ್ರಿಯಾ ತಂಡ (CERT-In) ಬಳಕೆದಾರರಿಗೆ ಎಚ್ಚರಿಕೆ ನೀಡಿದೆ. ಈ ದೋಷಗಳನ್ನು ದುರ್ಬಳಕೆ ಮಾಡಿಕೊಂಡು ಹ್ಯಾಕರ್ಗಳು ಸಾಧನಗಳಿಗೆ ಅನಧಿಕೃತ ಪ್ರವೇಶ ಪಡೆಯುವುದರ ಜತೆಗೆ ಸೂಕ್ಷ್ಮ ಮಾಹಿತಿಯನ್ನು ಕದಿಯುವ ಅಥವಾ ಡೇಟಾವನ್ನು ಅಳಿಸುವ ಸಾಧ್ಯತೆಯಿದೆ ಎಂದು ಸಂಸ್ಥೆ ತಿಳಿಸಿದೆ.
ನವದೆಹಲಿ: ಜನಪ್ರಿಯ ಮೆಸೇಜಿಂಗ್ ಆ್ಯಪ್ WhatsAppನ ವಿವಿಧ ಆವೃತ್ತಿಗಳಲ್ಲಿ ಹಲವು ಭದ್ರತಾ ನ್ಯೂನತೆಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಭಾರತೀಯ ಕಂಪ್ಯೂಟರ್ ತುರ್ತು ಪ್ರತಿಕ್ರಿಯಾ ತಂಡ (CERT-In) ಬಳಕೆದಾರರಿಗೆ ಎಚ್ಚರಿಕೆ ನೀಡಿದೆ. ಈ ದೋಷಗಳನ್ನು ದುರ್ಬಳಕೆ ಮಾಡಿಕೊಂಡು ಹ್ಯಾಕರ್ಗಳು ಸಾಧನಗಳಿಗೆ ಅನಧಿಕೃತ ಪ್ರವೇಶ ಪಡೆಯುವುದರ ಜತೆಗೆ ಸೂಕ್ಷ್ಮ ಮಾಹಿತಿಯನ್ನು ಕದಿಯುವ ಅಥವಾ ಡೇಟಾವನ್ನು ಅಳಿಸುವ ಸಾಧ್ಯತೆಯಿದೆ ಎಂದು ಸಂಸ್ಥೆ ತಿಳಿಸಿದೆ.
WhatsApp ನಮ್ಮ ದೈನಂದಿನ ಜೀವನದ ಪ್ರಮುಖ ಸಂವಹನ ಸಾಧನವಾಗಿದ್ದು, ಅದರ ಭದ್ರತೆಗೆ ಸಂಬಂಧಿಸಿದಂತೆ CERT-In ಇದೀಗ ಅಧಿಕ ತೀವ್ರತೆಯ ಸಲಹೆ ನೀಡಿದೆ. Android, iOS, Mac ಹಾಗೂ Windows ಸೇರಿದಂತೆ ವಿವಿಧ ಪ್ಲಾಟ್ಫಾರ್ಮ್ಗಳಲ್ಲಿ ಬಳಕೆಯಾಗುವ WhatsAppನ ಕೆಲವು ಆವೃತ್ತಿಗಳಲ್ಲಿನ ನ್ಯೂನತೆಗಳು ಸೈಬರ್ ದಾಳಿಗೆ ಅವಕಾಶ ಮಾಡಿಕೊಡಬಹುದು ಎಂದು ಎಚ್ಚರಿಸಲಾಗಿದೆ.
ಕೇಂದ್ರ ಸರ್ಕಾರದ ಸೈಬರ್ ಭದ್ರತಾ ಸಂಸ್ಥೆಯ ಪ್ರಕಾರ, ವಿಶೇಷವಾಗಿ ರೂಪಿಸಲಾದ ಸಂದೇಶಗಳು, ಅಟ್ಯಾಚ್ಮೆಂಟ್ಗಳು ಅಥವಾ URL ಲಿಂಕ್ಗಳ ಮೂಲಕ ಈ ದೋಷಗಳನ್ನು ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆಯಿದೆ. ಹೀಗಾಗಿ ಬಳಕೆದಾರರು ಹಾಗೂ ಸಂಸ್ಥೆಗಳು ತಮ್ಮ ಸಾಧನಗಳಲ್ಲಿ WhatsApp ಅನ್ನು ತಕ್ಷಣವೇ ನವೀಕರಿಸಿಕೊಳ್ಳುವಂತೆ ಸಲಹೆ ನೀಡಲಾಗಿದೆ.
ಈ ಹಿಂದೆ ಕೇಂದ್ರ ಗೃಹ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರದ (I4C) ರಾಷ್ಟ್ರೀಯ ಸೈಬರ್ ಅಪರಾಧ ಬೆದರಿಕೆ ವಿಶ್ಲೇಷಣಾ ಘಟಕ (NCTAU) ಕೂಡ WhatsApp ಬಳಕೆಯ ಕುರಿತು ಎಚ್ಚರಿಕೆ ನೀಡಿತ್ತು. ಸಾರ್ವಜನಿಕ ಕಂಪ್ಯೂಟರ್ಗಳಲ್ಲಿ WhatsApp ವೆಬ್ಗೆ ಲಾಗಿನ್ ಮಾಡಿ ಕೆಲಸ ಮುಗಿದ ಬಳಿಕ ಲಾಗ್ಔಟ್ ಮಾಡದೆ ಬಿಟ್ಟರೆ, ಅನಧಿಕೃತ ವ್ಯಕ್ತಿಗಳು ಖಾತೆಯನ್ನು ಪ್ರವೇಶಿಸಿ ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆಯಿದೆ ಎಂದು ತಿಳಿಸಿತ್ತು. ಬ್ರೌಸರ್ ಟ್ಯಾಬ್ ಮುಚ್ಚಿದ ಮಾತ್ರಕ್ಕೆ WhatsApp ವೆಬ್ನಿಂದ ಲಾಗ್ಔಟ್ ಆಗುವುದಿಲ್ಲ ಎಂಬುದನ್ನೂ ಎಚ್ಚರಿಸಿತ್ತು.
WhatsAppನಲ್ಲಿ ಪತ್ತೆಯಾದ ಪ್ರಮುಖ ಭದ್ರತಾ ದೋಷಗಳೇನು?
CERT-In ಸಲಹೆಯಲ್ಲಿ WhatsAppನ ವಿವಿಧ ಆವೃತ್ತಿಗಳಲ್ಲಿನ ಐದು ಭದ್ರತಾ ನ್ಯೂನತೆಗಳನ್ನು ಉಲ್ಲೇಖಿಸಲಾಗಿದೆ.
CVE-2026-102769: Android WhatsAppನಲ್ಲಿ ವಿಶೇಷವಾಗಿ ರೂಪಿಸಲಾದ ಆರ್ಡರ್ ವಿವರಗಳ ಸಂದೇಶಕ್ಕೆ ಸಂಬಂಧಿಸಿದ ಈ ದೋಷವು SQL ಇಂಜೆಕ್ಷನ್ಗೆ ಅವಕಾಶ ನೀಡಬಹುದು. ಸಂದೇಶವನ್ನು ಬಳಕೆದಾರರು ತೆರೆಯುವ ಸಂದರ್ಭದಲ್ಲಿ ಸ್ಥಳೀಯವಾಗಿ ಸಂಗ್ರಹವಾಗಿರುವ ಚಾಟ್ಗಳು, ಮಾಧ್ಯಮ ಹಾಗೂ ಇತರ ಫೈಲ್ಗಳನ್ನು ಅಳಿಸುವ ಅಪಾಯವಿದೆ ಎಂದು ಎಚ್ಚರಿಸಲಾಗಿದೆ. ಸಂದೇಶ ತಲುಪಿದ ಸಮಯ ಹಾಗೂ ಡಬಲ್ ಟಿಕ್ನ ಮಾಹಿತಿಯನ್ನು ಗಮನಿಸುವ ಮೂಲಕ ಚಾಟ್ ಡೇಟಾಬೇಸ್ ಕುರಿತು ಕೆಲವು ಮಾಹಿತಿಯನ್ನು ತಿಳಿದುಕೊಳ್ಳುವ ಸಾಧ್ಯತೆಯೂ ಇದೆ. ಆದರೆ ಈ ದೋಷದ ದುರ್ಬಳಕೆಗೆ ಸಂಬಂಧಿಸಿದ ಯಾವುದೇ ಪುರಾವೆ ಇಲ್ಲ ಎಂದು WhatsApp ತಿಳಿಸಿದೆ.
CVE-2026-44908: Meta AIನ ಕಂಪ್ಯೂಟಿಂಗ್ ವ್ಯವಸ್ಥೆಯೊಂದಿಗೆ ವಿಶ್ವಾಸಾರ್ಹ ಸಂಪರ್ಕ ಸ್ಥಾಪಿಸಲು ಬಳಸುವ ಸರ್ಟಿಫಿಕೇಟ್ ಚೈನ್ ಪರಿಶೀಲನೆಯಲ್ಲಿನ ನ್ಯೂನತೆಗೆ ಈ ದೋಷ ಸಂಬಂಧಿಸಿದೆ. ಇದರಿಂದ ಕೆಲವು ಸಂದರ್ಭಗಳಲ್ಲಿ ಹಾರ್ಡ್ವೇರ್ ಭದ್ರತಾ ವ್ಯವಸ್ಥೆಯನ್ನು ಬೈಪಾಸ್ ಮಾಡುವ ಸಾಧ್ಯತೆ ಇದೆ ಎಂದು ತಿಳಿಸಲಾಗಿದೆ. ಈ ದೋಷವನ್ನು ದುರ್ಬಳಕೆ ಮಾಡಿಕೊಂಡಿರುವ ಪುರಾವೆಯೂ ಇಲ್ಲ ಎಂದು WhatsApp ಹೇಳಿದೆ.
CVE-2026-23871: Android ಸಾಧನಗಳಲ್ಲಿನ ಬಾಹ್ಯ ಜಾಹೀರಾತು-ಪ್ರತಿಕ್ರಿಯೆ URLಗಳಿಗೆ ಸಂಬಂಧಿಸಿದ ಈ ದೋಷವು ವಿಶೇಷವಾಗಿ ರೂಪಿಸಲಾದ ‘Click to WhatsApp’ ಸಂದೇಶಗಳ ಮೂಲಕ ಸಾಧನವು ಹ್ಯಾಕರ್ ನಿಯಂತ್ರಿತ ವಿಳಾಸದಿಂದ ಮಾಧ್ಯಮವನ್ನು ಲೋಡ್ ಮಾಡುವಂತೆ ಮಾಡಬಹುದು. ಇದರಿಂದ ಬಳಕೆದಾರರ IP ವಿಳಾಸ ಬಹಿರಂಗಗೊಳ್ಳುವ ಸಾಧ್ಯತೆಯಿದೆ.
ಇದಲ್ಲದೆ, Instagram Reelಗೆ ಸಂಬಂಧಿಸಿದ AI ಪ್ರತಿಕ್ರಿಯೆಯಲ್ಲಿನ ದುರ್ಬಲತೆಯ ಮೂಲಕ iOS ಅಥವಾ Android ಸಾಧನಗಳಲ್ಲಿ ದುರುದ್ದೇಶಪೂರಿತ ವಿಷಯವನ್ನು ಪ್ರಕ್ರಿಯೆಗೊಳಿಸುವ ಸಾಧ್ಯತೆಯಿರುವ ಮತ್ತೊಂದು ದೋಷವನ್ನೂ ಉಲ್ಲೇಖಿಸಲಾಗಿದೆ.
CVE-2026-23863: Windows WhatsAppನಲ್ಲಿ ದುರುದ್ದೇಶಪೂರಿತ ಅಟ್ಯಾಚ್ಮೆಂಟ್ಗಳನ್ನು ಸಾಮಾನ್ಯ ಫೈಲ್ಗಳಂತೆ ತೋರಿಸಿ, ತೆರೆಯುವಾಗ ಕಾರ್ಯಗತಗೊಳಿಸಬಹುದಾದ ಫೈಲ್ಗಳಾಗಿ ರನ್ ಆಗುವಂತೆ ಮಾಡುವ ನ್ಯೂನತೆ ಇದಾಗಿದೆ. ಈ ದೋಷಗಳ ದುರ್ಬಳಕೆಗೆ ಸಂಬಂಧಿಸಿದ ಪುರಾವೆಗಳು ಇಲ್ಲ ಎಂದು WhatsApp ತಿಳಿಸಿದೆ.
ಸೈಬರ್ ಭದ್ರತಾ ಆತಂಕಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ CERT-In ಬಳಕೆದಾರರು WhatsAppನ ಇತ್ತೀಚಿನ ಆವೃತ್ತಿಯನ್ನು ಬಳಸುವಂತೆ ಹಾಗೂ ಅಪರಿಚಿತ ಸಂದೇಶಗಳು, ಲಿಂಕ್ಗಳು ಮತ್ತು ಅಟ್ಯಾಚ್ಮೆಂಟ್ಗಳನ್ನು ತೆರೆಯುವಾಗ ಎಚ್ಚರಿಕೆ ವಹಿಸುವಂತೆ ಸೂಚಿಸಿದೆ.
-
ನಿಧನ ವಾರ್ತೆ24 hours agoKankanadi-ಶಾಲೆಯಿಂದ ನಡೆದು ಹೋಗುತ್ತಿದ್ದ ಎರಡನೇ ಕ್ಲಾಸ್ ವಿದ್ಯಾರ್ಥಿಗೆ ಖಾಸಗಿ ಬಸ್ ಡಿಕ್ಕಿ; ಕಂಕನಾಡಿಯಲ್ಲಿ ಬಸ್ ಚಾಲಕನ ನಿರ್ಲಕ್ಷ್ಯಕ್ಕೆ ಬಾಲಕ ಬಲಿ
-
ಸ್ಥಳೀಯ18 hours agoRakshit Shivaram-ವಳಾಲು ಟೋಲ್ ದರ ರೂ.250ಕ್ಕೆ ಏರಿಕೆ : ಬಿಜೆಪಿಯವರಿಗೂ ಪಾಲಿದೆಯಾ..? ಶಾಸಕರ ಮೌನಕ್ಕೆ ರಕ್ಷಿತ್ ಶಿವರಾಂ ಗರಂ
-
ಸ್ಥಳೀಯ24 hours agoDharmasthala-ಪಾಣೇರು ಬಸದಿ ಜೀರ್ಣೋದ್ಧಾರಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ರೂ. 5 ಲಕ್ಷ ಅನುದಾನ
-
ಶಿಕ್ಷಣ23 hours agoVivekananda-ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರಥಮವರ್ಷದ ವಿದ್ಯಾರ್ಥಿಗಳ ಹೆತ್ತವರ ಮತ್ತು ಪೋಷಕರ ಸಭೆ
-
ಶಿಕ್ಷಣ23 hours agoPhilomena-ಪುತ್ತೂರು ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜಿನಲ್ಲಿ 59ನೇ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹದ ಸಮಾರೋಪ ಸಮಾರಂಭ
-
ಶಿಕ್ಷಣ23 hours agoSahyadri-ಸಹ್ಯಾದ್ರಿಯು ಮೂರನೇ ಅಂತರರಾಷ್ಟ್ರೀಯ ಸಮ್ಮೇಳನ, COSMIC-2026 ಉದ್ಘಾಟನೆ
-
ಶಿಕ್ಷಣ23 hours agoPhilomena-ಸಂತ ಫಿಲೋಮಿನಾ ಕಾಲೇಜಿನಲ್ಲಿ ಸಂವಿಧಾನ ದಿನಾಚರಣೆ ಕಾರ್ಯಕ್ರಮ: ಸಂವಿಧಾನದ ಆಶಯಗಳನ್ನು ದೈನಂದಿನ ಬದುಕಿನಲ್ಲಿ ಅಳವಡಿಸಿಕೊಳ್ಳಿ-– ಡಾ. ನಾರ್ಬರ್ಟ್ ಮಸ್ಕರೇನ್ಹಸ್















