Connect with us

ನಿಧನ ವಾರ್ತೆ

Funeral-ಪಾರ್ಸಿ ಸಂಪ್ರದಾಯದಂತೆ ಸರ್ಕಾರಿ ಗೌರವದೊಂದಿಗೆ ರತನ್ ಟಾಟಾ ಅಂತ್ಯಸಂಸ್ಕಾರ : ಏನಿದು ‘ದಾಕ್ಹ್ಮಾ’ ಪದ್ದತಿ..? ಕಂಬನಿ ಮಿಡಿದ ಸಾಕುನಾಯಿ ‘ಗೋವಾ’

Published

on

Ad Widget

Ad Widget

Ad Widget

Ad Widget
Ad Widget

Ad Widget

Ad Widget

Ad Widget

ಮುಂಬಯಿ: ದೇಶದ ಹೆಸರಾಂತ ಉದ್ಯಮಿ ರತನ್‌ ಟಾಟಾ ಬುಧವಾರ ರಾತ್ರಿ ಕೊನೆಯುಸಿರೆಳೆದಿದ್ದು ಅವರ ಅಂತ್ಯಕ್ರಿಯೆ ಗುರುವಾರ ಸರಕಾರಿ ಗೌರವಗಳೊಂದಿಗೆ ಪಾರ್ಸಿ ಸಂಪ್ರದಾಯದಂತೆ ಮುಂಬಯಿಯ ವರ್ಲಿಯಲ್ಲಿರುವ ಚಿತಾಗಾರದಲ್ಲಿ ನೆರವೇರಿತು.

Ad Widget

Ad Widget alt="Ad Widget"/>

Ad Widget

ಟಾಟಾ ಕುಟುಂಬದ ಅನೇಕ ಸದಸ್ಯರು ಹಾಗೂ ಉದ್ಯಮ ಜಗತ್ತಿನ ಗಣ್ಯರು ಮತ್ತು ಟಾಟಾ ಗ್ರೂಪ್‌ ಅಧ್ಯಕ್ಷ ಎನ್‌ ಚಂದ್ರಶೇಖರನ್‌ ಮತ್ತು ಹಿರಿಯ ಅಧಿಕಾರಿಗಳು, ಕೇಂದ್ರ ಸಚಿವರಾದ ಅಮಿತ್‌ ಶಾ, ಪಿಯೂಷ್‌ ಗೋಯಲ್‌ ಹಾಗೂ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್‌ ಶಿಂಧೆ, ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್‌, ಮಹಾರಾಷ್ಟ್ರ ಮಾಜಿ ಸಿಎಂ ಉದ್ಧವ್‌ ಠಾಕ್ರೆ, ರಿಲಯನ್ಸ್‌ ಇಂಡಸ್ಟ್ರೀಸ್‌ ಅಧ್ಯಕ್ಷ ಮುಕೇಶ್‌ ಅಂಬಾನಿ ಮತ್ತು ಅವರ ಪತ್ನಿ ನೀತಾ ಅಂಬಾನಿ, ಗುಜರಾತ್‌ ಸಿಎಂ ಭೂಪೇಂದ್ರ ಪಟೇಲ್‌, ಆಂಧ್ರ ಪ್ರದೇಶ ಮುಖ್ಯಮಂತ್ರಿ ಎನ್‌ ಚಂದ್ರಬಾಬು ನಾಯ್ಡು, ನಟ ಆಮೀರ್‌ ಖಾನ್‌ ಹಾಗೂ ಅವರ ಮಾಜಿ ಪತ್ನಿ ಕಿರಣ್‌ ರಾವ್‌ ಸೇರಿದಂತೆ ಅನೇಕ ಗಣ್ಯರು ರತನ್‌ ಅವರ ಪ್ರಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದರು.

Ad Widget

Ad Widget <> Ad Widget

ಏಸಿಯಾನ್‌- ಭಾರತ ಮತ್ತು ಪೂರ್ವ ಏಷ್ಯಾ ಶೃಂಗದಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಅವರು ದಾವೋಸ್‌ಗೆ ತೆರಳಿದ್ದರಿಂದ ಟಾಟಾ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲಿಲ್ಲ.

ಗುರುವಾರ ಬೆಳಗ್ಗೆ 10ರಿಂದ ಸಂಜೆ 4 ಗಂಟೆಯವರೆಗೆ ರತನ್‌ ಟಾಟಾ ಅವರ ಪ್ರಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕಾಗಿ ನಾರಿಮನ್‌ ಪಾಯಿಂಟ್‌ ಪ್ರದೇಶದಲ್ಲಿರುವ ಪ್ರದರ್ಶಕ ಕಲೆಗಳ ರಾಷ್ಟ್ರೀಯ ಕೇಂದ್ರ (ಎನ್‌ಸಿಪಿಎ)ದಲ್ಲಿ ಇರಿಸಲಾಗಿತ್ತು.

Ad Widget

Ad Widget

ಮಹಾರಾಷ್ಟ್ರದಲ್ಲಿ ಶೋಕಾಚರಣೆ:
ಮಹಾರಾಷ್ಟ್ರ ಸಿಎಂ ಏಕನಾಥ್‌ ಶಿಂಧೆ ಸೇರಿದಂತೆ ಅನೇಕ ಗಣ್ಯರು ರತನ್‌ ಅವರ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ. ಮಹಾರಾಷ್ಟ್ರ ಸರಕಾರವು ಒಂದು ದಿನ ಶೋಕಾಚರಣೆ ಘೋಷಿಸಿದೆ.

ಪಾರ್ಸಿ ಸಮುದಾಯದಂತೆ ಅಂತ್ಯಕ್ರಿಯೆ:
ಪಾರ್ಸಿ ಸಮುದಾಯದಲ್ಲಿ ‘ದ್ಹಾಕ್‌ಮಾ’ (ಮೌನ ಗೋಪುರ) ಎಂದು ಕರೆಯಲಾಗುವ ವಿಶಿಷ್ಟ ರೀತಿಯಲ್ಲಿ ಅಂತ್ಯಕ್ರಿಯೆ ವಿಧಾನ ನೆರವೇರಿಸಲಾಗುತ್ತದೆ. ಈ ಸಮುದಾಯದಲ್ಲಿ ಭೂಮಿ ಹಾಗೂ ಬೆಂಕಿ ಎರಡೂ ಪವಿತ್ರವಾಗಿದ್ದು, ಅವನ್ನು ಮಲಿನಗೊಳಿಸಬಾರದು ಎಂಬ ಕಾರಣಕ್ಕೆ ಮೃತದೇಹವನ್ನು ಹೂಳುವ ಅಥವಾ ಸುಡುವ ಪದ್ಧತಿ ಇಲ್ಲ. ಮೃತದೇಹವನ್ನು ಗೋಪುರದ ಮೇಲೆ ಇರಿಸಲಾಗುತ್ತದೆ. ಅದನ್ನು ರಣಹದ್ದುಗಳು ತಿನ್ನುತ್ತವೆ. ಮೂಳೆಗಳು ಗೋಪುರದೊಳಗಿನಿಂದ ಗುಂಡಿಯೊಳಗೆ ಬೀಳುತ್ತವೆ. ಇತ್ತೀಚಿನ ವರ್ಷಗಳಲ್ಲಿ ರಣಹುದ್ದುಗಳ ಸಂಖ್ಯೆ ಕ್ಷೀಣಿಸಿರುವ ಹಿನ್ನೆಲೆಯಲ್ಲಿ ಪಾರ್ಸಿ ಸಮುದಾಯದಲ್ಲಿ ಅಂತ್ಯಕ್ರಿಯೆ ವಿಧಾನಕ್ಕೆ ಸಂಬಂಧಿಸಿದಂತೆ ಮಾರ್ಪಾಡುಗಳನ್ನು ಮಾಡಿಕೊಂಡು, ವಿದ್ಯುತ್‌ ಚಿತಾಗಾರದಲ್ಲಿ ದಹಿಸಲಾಗುತ್ತದೆ.

ದಾಕ್ಹ್ಮಾ ಸಂಪ್ರದಾಯದ ಅಂತ್ಯಸಂಸ್ಕಾರ:

ಪಾರ್ಸಿ ಸಂಪ್ರದಾಯದ ಅನುಸಾರ ಪೂಜಾರಿಯೊಬ್ಬರು ರತನ್‌ ಟಾಟಾ ಅವರ ಪಾರ್ಥಿವ ಶರೀರಕ್ಕೆ ಅಂತಿಮ ವಿಧಿ-ವಿಧಾನ ನೆರವೇರಿಸಿದ ಬಳಿಕ ಚಿತಾಗಾರದಲ್ಲಿ ದಹಿಸಲಾಯಿತು. ಕೊಲಾಬಾದಲ್ಲಿರುವ ರತನ್‌ ಅವರ ಬಂಗಲೆಯಲ್ಲಿ ಇನ್ನೂ ಮೂರು ದಿನಗಳ ಕಾಲ ವಿವಿಧ ಧಾರ್ಮಿಕ ಪ್ರಕ್ರಿಯೆಗಳು ನಡೆಯಲಿವೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಅಂತಿಮ ನಮನ ಸಲ್ಲಿಸಿದ ಶ್ವಾನ ‘ಗೋವಾ’
ಶ್ವಾನ ಪ್ರಿಯರಾಗಿದ್ದ ರತನ್‌ ಟಾಟಾ ಅವರ ಮನೆಯಲ್ಲಿ ಟೀಟೂ ಹೆಸರಿನ ‘ಜರ್ಮನ್‌ ಶೆಫರ್ಡ್‌’, ಟ್ಯಾಂಗೊ ಹೆಸರಿನ ‘ಗೋಲ್ಡನ್‌ ರಿಟ್ರಿವರ್‌’ ತಳಿಯ ಎರಡು ಸಾಕು ನಾಯಿಗಳು ಇವೆ. ಇದರ ಜತೆಗೆ ಟಾಟಾ ಗ್ರೂಪ್‌ನ ಕೇಂದ್ರ ಕಚೇರಿ ‘ಬಾಂಬೆ ಹೌಸ್‌’ನಲ್ಲಿ ರತನ್‌ ಅವರ ಜತೆ ಸದಾ ಇರುತ್ತಿದ್ದ ‘ಗೋವಾ’ ಹೆಸರಿನ ಶ್ವಾನವು ತನ್ನ ನೆಚ್ಚಿನ ಒಡೆಯನಿಗೆ ಅಂತಿಮ ನಮನ ಸಲ್ಲಿಸಿತು. ಗೋವಾ ರತನ್‌ ಅವರ ಪ್ರಾರ್ಥಿವ ಶರೀರವನ್ನು ಬಿಟ್ಟು ಬರಲು ನಿರಾಕರಿಸುತ್ತಿದ್ದ ದೃಶ್ಯ ಮನಕಲುಕುವಂತಿತ್ತು.

ರತನ್‌ ಟಾಟಾ ಗೋವಾಗೆ ತೆರಳಿದ್ದ ವೇಳೆ ಅಲ್ಲಿ ವಿಪರೀತ ಮಳೆ ಸುರಿಯುತ್ತಿತ್ತು. ಬೀದಿ ನಾಯಿಯೊಂದು ಅವರ ಕಾರಿನ ಅಡಿಯಲ್ಲಿ ಈ ಅವಿತು ಕುಳಿತಿತ್ತು. ಅಲ್ಲದೇ ಸುಮಾರು ಹೊತ್ತು ರತನ್‌ ಅವರನ್ನು ಹಿಂಬಾಲಿಸಿಕೊಂಡು ಬಂದಿತ್ತು. ಇದನ್ನು ನೋಡಿದ ಅವರು, ಮುಂಬಯಿಗೆ ತೆಗೆದುಕೊಂಡು ಬಂದಿದ್ದರು. ಗೋವಾದಲ್ಲಿ ಸಿಕ್ಕಿದ್ದರಿಂದ ಈ ನಾಯಿಗೆ ‘ಗೋವಾ’ ಎಂದು ಹೆಸರಿಟ್ಟಿದ್ದರು. ರಾಜ್ಯವನ್ನು ಅಪಮಾನಿಸುವ ಉದ್ದೇಶ ಅವರದ್ದಾಗಿರಲಿಲ್ಲ.

ಬಿಜೆಪಿ ಹಿರಿಯ ನಾಯಕ ಎಲ್‌ಕೆ ಆಡ್ವಾಣಿಯವರು ಸಂತಾಪ ಸಂದೇಶದಲ್ಲಿ ರತನ್‌ ಟಾಟಾ ಅವರು ನಿಜವಾಗಿಯೂ ಸ್ಫೂರ್ತಿಯಾಗಿದ್ದರು. ದೇಶವು ಅವರಿಗೆ ಋುಣಿಯಾಗಿ ಉಳಿಯುತ್ತದೆ. ಹಲವು ದಶಕಗಳ ಕಾಲ ಟಾಟಾ ಸಮೂಹವನ್ನು ಸಮರ್ಥವಾಗಿ ಮುನ್ನಡೆಸಿದ ಯಶಸ್ವಿ ಉದ್ಯಮಿ ಅವರು ಎಂದು ಹೇಳಿದ್ದಾರೆ.

ಮೈಕ್ರೊಸಾಫ್ಟ್‌ ಸಹ ಸಂಸ್ಥಾಪಕ ಬಿಲ್‌ಗೇಟ್ಸ್‌ ರವರು, ರತನ್‌ ಟಾಟಾ ದೂರದೃಷ್ಟಿಯುಳ್ಳ ನಾಯಕ. ಭಾರತೀಯರ ಜೀವನ ಸುಧಾರಣೆಗೆ ಅವರು ಮಾಡಿದ ಕೆಲಸಗಳು ಜಗತ್ತಿನಾದ್ಯಂತ ಮೆಚ್ಚುಗೆ ಗಳಿಸಿದೆ. ಮಾನವೀಯ ಸೇವೆಗಳಿಗೆ ಅವರು ನೀಡಿದ ಕೊಡುಗೆ ಅಪಾರ. ಅಂಥ ವ್ಯಕ್ತಿಯನ್ನು ಹಲವು ಭಾರಿ ಭೇಟಿಯಾಗಿದ್ದು ನನ್ನ ಅದೃಷ್ಟ ಎಂದು ಟಾಟಾ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

Ad Widget
Click to comment

Leave a Reply

ನಿಧನ ವಾರ್ತೆ

Accident-ಯುಎಇಯಲ್ಲಿ ಭೀಕರ ಬಸ್–ಲಾರಿ ಅಪಘಾತ; ಕಾಸರಗೋಡಿನ ಅಶ್ರಫ್ ಸೇರಿ ನಾಲ್ವರು ಕೇರಳಿಗರು ಸಾವು

Published

on

Ad Widget

Ad Widget

Ad Widget

Ad Widget

ಯುನೈಟೆಡ್ ಅರಬ್ ಎಮಿರೇಟ್ಸ್‌ನ (ಯುಎಇ) ರಾಸ್ ಅಲ್ ಖೈಮಾದಲ್ಲಿ ಬಸ್ ಮತ್ತು ಲಾರಿ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಮೃತಪಟ್ಟವರಲ್ಲಿ ಕಾಸರಗೋಡು ಜಿಲ್ಲೆಯ ಅಟ್ಟೆಂಗಾನ ನಿವಾಸಿ ಅಶ್ರಫ್ (53) ಕೂಡ ಸೇರಿದ್ದಾರೆ. ಅಲ್ಲದೇ ಕಣ್ಣೂರು ಜಿಲ್ಲೆಯ ಮಟ್ಟನ್ನೂರು ನಿವಾಸಿ ಹೇಮಂತ್ ಪುದಿಯಕಾವಿಲ್ (29), ತಲಕ್ಕೇರಿ ನಿವಾಸಿ ಸಂಕೀರ್ತಾ ಸುರೇಶ್ (26) ಹಾಗೂ ಪಾಲಕ್ಕಾಡ್ ನಿವಾಸಿ ಮುಹಮ್ಮದ್ ಆಶಿಕ್ (29) ಕೂಡ ಮೃತಪಟ್ಟಿದ್ದಾರೆ.

Ad Widget

Ad Widget

Ad Widget

Ad Widget

ಕಾಸರಗೋಡು: ಯುನೈಟೆಡ್ ಅರಬ್ ಎಮಿರೇಟ್ಸ್‌ನ (ಯುಎಇ) ರಾಸ್ ಅಲ್ ಖೈಮಾದಲ್ಲಿ ಬಸ್ ಮತ್ತು ಲಾರಿ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಮೃತಪಟ್ಟವರಲ್ಲಿ ಕಾಸರಗೋಡು ಜಿಲ್ಲೆಯ ಅಟ್ಟೆಂಗಾನ ನಿವಾಸಿ ಅಶ್ರಫ್ (53) ಕೂಡ ಸೇರಿದ್ದಾರೆ.

Ad Widget

Ad Widget alt="Ad Widget"/>

Ad Widget

ನ. 24ರಂದು ಮುಂಜಾನೆ ರಾಸ್ ಅಲ್ ಖೈಮಾದ ಅಲ್ ವತನ್ ರಸ್ತೆಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಓಮನ್‌ಗೆ ವೀಸಾ ನವೀಕರಣಕ್ಕಾಗಿ ತೆರಳಿ ವಾಪಸಾಗುತ್ತಿದ್ದ 41 ಪ್ರಯಾಣಿಕರಿದ್ದ ಬಸ್, ತಾಂತ್ರಿಕ ದೋಷದಿಂದ ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿದ್ದ ಲಾರಿಗೆ ಹಿಂದಿನಿಂದ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ.

Ad Widget

Ad Widget <> Ad Widget

ಅಪಘಾತದ ತೀವ್ರತೆಗೆ ಒಟ್ಟು 13 ಮಂದಿ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ. ಮೃತಪಟ್ಟವರಲ್ಲಿ 11 ಮಂದಿ ಭಾರತೀಯರು ಎಂದು ವರದಿಯಾಗಿದೆ.

ಅಶ್ರಫ್ ಅವರೊಂದಿಗೆ ಕಣ್ಣೂರು ಜಿಲ್ಲೆಯ ಮಟ್ಟನ್ನೂರು ನಿವಾಸಿ ಹೇಮಂತ್ ಪುದಿಯಕಾವಿಲ್ (29), ತಲಕ್ಕೇರಿ ನಿವಾಸಿ ಸಂಕೀರ್ತಾ ಸುರೇಶ್ (26) ಹಾಗೂ ಪಾಲಕ್ಕಾಡ್ ನಿವಾಸಿ ಮುಹಮ್ಮದ್ ಆಶಿಕ್ (29) ಕೂಡ ಮೃತಪಟ್ಟಿದ್ದಾರೆ

Continue Reading

ನಿಧನ ವಾರ್ತೆ

ಮಂಗಳೂರು: ಬೈಕ್ ಢಿಕ್ಕಿಯಿಂದ ಗಾಯಗೊಂಡಿದ್ದ ನರ್ಸಿಂಗ್ ವಿದ್ಯಾರ್ಥಿನಿ ಸಾವು

Published

on

Ad Widget

Ad Widget

Ad Widget

Ad Widget

ರಾಷ್ಟ್ರೀಯ ಹೆದ್ದಾರಿ-66ರ ಪಂಪ್‌ವೆಲ್ ಸಮೀಪದ ಉಜ್ಯೋಡಿ ಗೋರಿಗುಡ್ಡ ಬಳಿ ಬೈಕ್ ಢಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ 19 ವರ್ಷದ ನರ್ಸಿಂಗ್ ವಿದ್ಯಾರ್ಥಿನಿ ಜ್ಯೋತಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

Ad Widget

Ad Widget

Ad Widget

Ad Widget

ಮಂಗಳೂರು: ರಾಷ್ಟ್ರೀಯ ಹೆದ್ದಾರಿ-66ರ ಪಂಪ್‌ವೆಲ್ ಸಮೀಪದ ಉಜ್ಯೋಡಿ ಗೋರಿಗುಡ್ಡ ಬಳಿ ಬೈಕ್ ಢಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ 19 ವರ್ಷದ ನರ್ಸಿಂಗ್ ವಿದ್ಯಾರ್ಥಿನಿ ಜ್ಯೋತಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

Ad Widget

Ad Widget alt="Ad Widget"/>

Ad Widget

ನ. 14ರಂದು ಬೆಳಗ್ಗೆ ಜ್ಯೋತಿ ಹಾಗೂ ಅವರ ಸಂಬಂಧಿ ನಂದಿನಿ (19) ಗೋರಿಗುಡ್ಡ ಬಳಿ ರಸ್ತೆ ವಿಭಜಕ ದಾಟಿ ನಡೆದುಕೊಂಡು ಹೋಗುತ್ತಿದ್ದ ವೇಳೆ ತೊಕ್ಕೊಟ್ಟು ಕಡೆಯಿಂದ ನಂತೂರು ಕಡೆಗೆ ಸಂಚರಿಸುತ್ತಿದ್ದ ಬೈಕ್ ಢಿಕ್ಕಿ ಹೊಡೆದಿತ್ತು. ಅಪಘಾತದಲ್ಲಿ ಇಬ್ಬರೂ ಗಾಯಗೊಂಡಿದ್ದು, ಬೈಕ್‌ನಲ್ಲಿದ್ದವರಿಗೂ ಗಾಯಗಳಾಗಿದ್ದವು. ಗಂಭೀರ ಗಾಯಗೊಂಡಿದ್ದ ಜ್ಯೋತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

Ad Widget

Ad Widget <> Ad Widget

ಜ್ಯೋತಿ ನಗರದ ಖಾಸಗಿ ಕಾಲೇಜೊಂದರಲ್ಲಿ ಜಿಎನ್‌ಎಂ ನರ್ಸಿಂಗ್ ವ್ಯಾಸಂಗ ಮಾಡುತ್ತಿದ್ದರು.

ಮೂಲತಃ ಚಿಕ್ಕಮಗಳೂರಿನ ಶಿಳ್ಳೆಕ್ಯಾತ ಅಲೆಮಾರಿ ಸಮುದಾಯಕ್ಕೆ ಸೇರಿದ ಜ್ಯೋತಿಯ ಕುಟುಂಬ ಹಲವು ವರ್ಷಗಳಿಂದ ಮಂಗಳೂರಿನ ಕಣ್ಣೂರಿನಲ್ಲಿ ವಾಸವಾಗಿತ್ತು. ನೇತ್ರಾವತಿ ನದಿಯಲ್ಲಿ ತೆಪ್ಪದ ಮೂಲಕ ಮೀನು ಹಿಡಿಯುವ ವೃತ್ತಿಯನ್ನು ಕುಟುಂಬ ನಡೆಸುತ್ತಿತ್ತು. ಕುಟುಂಬದ ಹಿರಿಯ ಮಗಳಾಗಿದ್ದ ಜ್ಯೋತಿ ತಂದೆ, ತಾಯಿ, ಇಬ್ಬರು ಸಹೋದರರು ಹಾಗೂ ಸಹೋದರಿಯನ್ನು ಅಗಲಿದ್ದಾರೆ.

Ad Widget

Ad Widget

ಕಮರಿದ ಕುಟುಂಬಕ್ಕೆ ಆಧಾರವಾಗುವ ಕನಸು
ಕಷ್ಟದ ಪರಿಸ್ಥಿತಿಯಲ್ಲಿ ಬೆಳೆದು ಬಂದಿದ್ದ ಜ್ಯೋತಿ ನರ್ಸ್ ಆಗಿ ಕುಟುಂಬಕ್ಕೆ ಆಸರೆಯಾಗಬೇಕೆಂಬ ಕನಸು ಕಂಡಿದ್ದರು. ಆದರೆ, ರಸ್ತೆ ಅಪಘಾತ ಆಕೆಯ ಕನಸನ್ನು ನುಚ್ಚುನೂರಾಗಿಸಿದ್ದು, ಕುಟುಂಬಸ್ಥರು ದುಃಖದಲ್ಲಿ ಮುಳುಗಿದ್ದಾರೆ.

Ad Widget
Continue Reading

ನಿಧನ ವಾರ್ತೆ

Accident-ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ಭೀಕರ ಅಪಘಾತ: 8 ವರ್ಷದ ಬಾಲಕಿ ಸೇರಿ ಇಬ್ಬರು ಸ್ಥಳದಲ್ಲೇ ಸಾವು; ನಾಲ್ವರ ಸ್ಥಿತಿ ಗಂಭೀರ

Published

on

Ad Widget

Ad Widget

Ad Widget

Ad Widget

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಎಂಟು ವರ್ಷದ ಬಾಲಕಿ ಸೇರಿದಂತೆ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ನಗುವಿನಹಳ್ಳಿ ಗೇಟ್ ಬಳಿ ನಡೆದಿದೆ.

Ad Widget

Ad Widget

Ad Widget

Ad Widget

ಮಂಡ್ಯ: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಎಂಟು ವರ್ಷದ ಬಾಲಕಿ ಸೇರಿದಂತೆ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ನಗುವಿನಹಳ್ಳಿ ಗೇಟ್ ಬಳಿ ನಡೆದಿದೆ.

Ad Widget

Ad Widget alt="Ad Widget"/>

Ad Widget

ಮಂಡ್ಯದ ಗುತ್ತಲು ಬಡಾವಣೆಯ ಮಹದೇವು ಹಾಗೂ ತೈಲೂರು ಗ್ರಾಮದ ಎಂಟು ವರ್ಷದ ಬಾಲಕಿ ರಿತ್ವಿಕಾ ಮೃತಪಟ್ಟವರು. ಕುಟುಂಬದ ಸದಸ್ಯರು ಕಾರಿನಲ್ಲಿ ನಂಜನಗೂಡಿನ ದೇವಸ್ಥಾನಕ್ಕೆ ತೆರಳಿ ವಾಪಸಾಗುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.

Ad Widget

Ad Widget <> Ad Widget

ನಗುವಿನಹಳ್ಳಿ ಗೇಟ್ ಬಳಿಯ ಫ್ಲೈಓವರ್ ಮೇಲೆ ಚಲಿಸುತ್ತಿದ್ದ ಸರಕು ಸಾಗಣೆ ಲಾರಿಗೆ ಹಿಂದಿನಿಂದ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಡಿಕ್ಕಿಯ ತೀವ್ರತೆಗೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಕಾರಿನಲ್ಲಿದ್ದ ಮಹದೇವು ಹಾಗೂ ಬಾಲಕಿ ರಿತ್ವಿಕಾ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

ಅಪಘಾತದಲ್ಲಿ ಗೌರಿ, ಲತಾ, ಶಿವರಾಜು ಹಾಗೂ ಪ್ರಾರ್ಥನಾ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ.

Ad Widget

Ad Widget

ಕುಟುಂಬದ ಸದಸ್ಯರು ನಂಜನಗೂಡಿನ ದೇವಸ್ಥಾನಕ್ಕೆ ತೆರಳಿ ದೇವರ ದರ್ಶನ ಪಡೆದ ಬಳಿಕ ರೀಲ್ಸ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಆದರೆ, ದೇವರ ದರ್ಶನ ಪಡೆದು ಮನೆಗೆ ಮರಳುತ್ತಿದ್ದ ಕುಟುಂಬದ ಪ್ರಯಾಣ ಕೆಲವೇ ಸಮಯದಲ್ಲಿ ಭೀಕರ ದುರಂತದಲ್ಲಿ ಅಂತ್ಯಗೊಂಡಿರುವುದು ಸಂಬಂಧಿಕರು ಹಾಗೂ ಸ್ಥಳೀಯರಲ್ಲಿ ತೀವ್ರ ದುಃಖವನ್ನುಂಟುಮಾಡಿದೆ.

Ad Widget
Continue Reading

ಇಂದಿನ ಟ್ರೆಂಡಿಂಗ್‌ ಸುದ್ದಿಗಳು

error: Content is protected !!