Connect with us

ಬಿಗ್ ನ್ಯೂಸ್

Liquor price-ಬಡವರ ಎಣ್ಣೆ ದರ ಏರಿಕೆ, ಪ್ರೀಮಿಯಂ ಬ್ರಾಂಡ್‌ ಮದ್ಯ ದರ ಇಳಿಕೆಗೆ ರಾಜ್ಯ ಸರ್ಕಾರ ಚಿಂತನೆ

Published

on

Ad Widget

Ad Widget

Ad Widget

Ad Widget

ಬೆಂಗಳೂರು: ರಾಜ್ಯದ ಸಿಎಂ ಸಿದ್ದರಾಮಯ್ಯ ಸರಕಾರ ಜು. 1ರಿಂದ ಮದ್ಯದ ಹೊಸ ದರಗಳನ್ನು ಜಾರಿ ಮಾಡಲು ಮುಂದಾಗಿದೆ. ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂಚಲು ಸಿಕ್ಕ ಸಿಕ್ಕಲ್ಲೆಲ್ಲಾ ದರ ಏರಿಕೆ ಮಾಡುತ್ತಿರುವ ಸರಕಾರ, ಇದೀಗ ಬಡವರ ಎಣ್ಣೆ ರೇಟ್‌ ಏರಿಸಲು ಯೋಚಿಸಿದೆ. ಅದೇ ಸಮಯಕ್ಕೆ, ಶ್ರೀಮಂತರು ಸೇವಿಸುವ ಪ್ರೀಮಿಯಂ ಬ್ರಾಂಡ್‌ಗಳ ಮದ್ಯಗಳ ಬೆಲೆ ಇಳಿಕೆಗೂ ಚಿಂತಿಸುತ್ತಿದೆ.

Ad Widget

Ad Widget

Ad Widget

Ad Widget

ಈ ಹಿಂದೆ ಜ. 1ರಂದು ಕಂಪನಿಗಳು ಮದ್ಯದ ದರ ಏರಿಕೆ ಮಾಡಿದ್ದವು. ಓಲ್ಡ್‌ ಟ್ಯಾವರ್ನ್‌(ಒಟಿ), ಬ್ಲೆಂಡರ್ಸ್‌ ಪ್ರೈಡ್‌ (ಬಿಪಿ), 8 ಪಿಎಂ ಲಿಕ್ಕರ್ ದರಗಳನ್ನು 20 ರೂಪಾಯಿ ಹೆಚ್ಚಳ ಮಾಡಲಾಗಿತ್ತು. ಇದೀಗ ಮತ್ತೆ ಮದ್ಯದ ದರಗಳನ್ನು ಸರ್ಕಾರ ಏರಿಸಲು ಮುಂದಾಗಿದೆ. ಅದರಲ್ಲೂ ರಾಜ್ಯದ ಕೂಲಿ ಕಾರ್ಮಿಕರು, ಬಡ ವರ್ಗದ ಜನ ಅತೀ ಹೆಚ್ಚು ಸೇವಿಸುವ ಎಣ್ಣೆಗಳ ದರವೇ ಏರಿಕೆಯಾಗಲಿದೆ.

Ad Widget

Ad Widget alt="Ad Widget"/>

Ad Widget

ಹಾಲಿ ಒಟಿ ವಿಸ್ಕಿ 180 mlಗೆ 123 ರೂಪಾಯಿ ಇದೆ. ಜುಲೈ 1ರಿಂದ ಒಟಿ ಬೆಲೆ 130 ರೂಪಾಯಿ ನಿಗದಿಯಾಗಲಿದೆ. 8 ಪಿಎಂ ವಿಸ್ಕಿ 123 ರೂ. ಯಿಂದ 130ಕ್ಕೇರಿಕೆ ಸಾಧ್ಯತೆ ಇದೆ. ಚಾಯ್ಸ್ 80 ರೂಪಾಯಿ ಇದ್ದು ಜುಲೈನಿಂದ 83 ರೂಪಾಯಿ, ಹೈವರ್ಡ್ಸ್ 80 ರೂಪಾಯಿಯಿಂದ 83 ರೂಪಾಯಿ, ಬಿಪಿ ವಿಸ್ಕಿ ದರ ಹಾಲಿ 159 ರೂಪಾಯಿ ಇದ್ದು, ಜುಲೈನಿಂದ 154 ರೂಪಾಯಿ ಆಗುವ ಸಾಧ್ಯತೆ ಇದೆ.

Ad Widget

Ad Widget <> Ad Widget

ಇದೇ ವೇಳೆಗೆ ಬೆಲೆಬಾಳುವ ಪ್ರೀಮಿಯಂ ಮದ್ಯಗಳ ದರಗಳಲ್ಲಿ ಇಳಿಕೆಯಾಗುತ್ತಿದೆ. ಕ್ವಾರ್ಟರ್‌ಗೆ 300 ರೂಪಾಯಿ ಮೇಲಿರುವ ಬ್ರ್ಯಾಂಡ್‌ಗಳ ದರ 60ರಿಂದ 100 ರೂಪಾಯಿ ಇಳಿಕೆಯಾಗಲಿದೆ. 383 ರೂಪಾಯಿ ಬೆಲೆ ಬಾಳುವ ಮದ್ಯ 295 ರೂ.ಗೆ, 680 ರೂ. ಬೆಲೆ ಬಾಳುವ ಮದ್ಯ 595 ರೂಪಾಯಿಗೆ ಇಳಿಕೆ ಆಗುವ ಸಾಧ್ಯತೆ ಇದೆ.

ಈಗ 750 ಎಂ.ಎಲ್. ಗಾತ್ರದ ಬಾಟಲಿಗೆ ₹2,000 ದರ ಇರುವ ಬ್ರಾಂಡ್‌ಗಳ ಮದ್ಯದ ದರವು ಜುಲೈ 1ರಿಂದ ₹1,700ರಿಂದ ₹1,800ಕ್ಕೆ ಇಳಿಕೆಯಾಗಲಿದೆ. ಪ್ರತಿ ಬಾಟಲಿಗೆ ₹5,000 ದರ ಇರುವ ಬ್ರಾಂಡ್ ಮದ್ಯಗಳ ದರ ₹3,600ರಿಂದ 23,700ಕ್ಕೆ ಇಳಿಯಲಿದೆ. ಪ್ರತಿ ಬಾಟಲಿಗೆ 27,100 ಇರುವ ಮದ್ಯದ ದರ 5,200ರ ಅಸುಪಾಸಿಗೆ ಕಡಿಮೆಯಾಗುವ ಸಾಧ್ಯತೆಯೂ ಇದೆ.

Ad Widget

Ad Widget

ಸೆಮಿ ಪ್ರೀಮಿಯಂ ಮತ್ತು ಪ್ರೀಮಿಯಂ ಸ್ಲ್ಯಾಬ್‌ಗಳ ಮದ್ಯದ ದರ ಸಾಕಷ್ಟು ದುಬಾರಿಯೇ ಇದೆ. ಈ ಹಿನ್ನೆಲೆಯಲ್ಲಿ ಕರಡು ಅಧಿಸೂಚನೆ ಪ್ರಕಟಿಸಿದ ಸರಕಾರ, ಜುಲೈ 1ರಿಂದ ಪರಿಷ್ಕೃತ ಮದ್ಯ ದರ ಅನ್ವಯಿಸಲಿದೆ ಎಂದು ಗೊತ್ತಾಗಿದೆ. ಗ್ಯಾರಂಟಿಗಳಿಗೆ ಹಣ ಹೊಂಚಬೇಕಾದ ಸ್ಥಿತಿಯಲ್ಲಿರುವ ಸರಕಾರ, ವರಮಾನ ಹೆಚ್ಚಳಕ್ಕಾಗಿ ಹೆಚ್ಚುವರಿ ಅಬಕಾರಿ ತೆರಿಗೆ (ಎಇಡಿ) ಇಳಿಕೆಗೆ ಮುಂದಾಗಿದೆ ಎಂದು ತಿಳಿದುಬಂದಿದೆ.

ದರ ಏರಿಕೆಯಾದರೂ ಮದ್ಯ ಮಾರಾಟ ಹೆಚ್ಚಳ
ಸರ್ಕಾರದ ಬೊಕ್ಕಸಕ್ಕೆ ಮದ್ಯಪ್ರಿಯರು ಭರ್ಜರಿ ಕಿಕ್ ಕೊಟ್ಟಿದ್ದಾರೆ. ರಾಜ್ಯದಲ್ಲಿ ದರ ಏರಿಕೆ ನಡುವೆಯೂ ಮದ್ಯ ಮಾರಾಟ ಬಾರಿ ಹೆಚ್ಚಳ ಕಂಡಿದೆ. 2023-24ನೇ ಸಾಲಿನಲ್ಲಿ ಸಾವಿರಾರು ಕೋಟಿ ರೂಪಾಯಿ ರಾಜ್ಯ ಸರ್ಕಾರದ ಖಜಾನೆ ಸೇರಿದೆ.

ಅಬಕಾರಿ ಇಲಾಖೆಗೆ ವಾರ್ಷಿಕ 34,500 ಕೋಟಿ ರೂಪಾಯಿ ಟಾರ್ಗೆಟ್ ಅನ್ನು ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ನೀಡಿತ್ತು. ಈಗ 2023-24ನೇ ಸಾಲಿನಲ್ಲಿ ಅಬಕಾರಿ ಇಲಾಖೆಯು ಟಾರ್ಗೆಟ್ ರೀಚ್ ಮಾಡಿದೆ. ಕಳೆದ ಏಪ್ರಿಲ್‌ನಿಂದ ಮಾರ್ಚ್‌ವರೆಗೆ ಹೆಚ್ಚುವರಿ 128 ಕೋಟಿ ರೂಪಾಯಿಗೂ ಹೆಚ್ಚು ಆದಾಯ ಸಂಗ್ರಹವಾಗಿದೆ.

2023-24ನೇ ಸಾಲಿನಲ್ಲಿ 34,628 ಕೋಟಿ ರೂಪಾಯಿ ಆದಾಯವು ಅಬಕಾರಿ ಇಲಾಖೆಗೆ ಹರಿದುಬಂದಿದೆ. ಕಳೆದ ವರ್ಷ 29,920 ಕೋಟಿ ರೂಪಾಯಿಯನ್ನು ಅಬಕಾರಿ ಇಲಾಖೆ ಅಧಿಕಾರಿಗಳು ಸಂಗ್ರಹ ಮಾಡಿದ್ದರು. ಕಳೆದ ಒಂದು ವರ್ಷದಲ್ಲಿ ಮೂರು ಬಾರಿ ಮದ್ಯ ದರ ಪರಿಷ್ಕರಣೆ ಮಾಡಲಾಗಿದೆ. ಆದರೂ, ತಲೆಕೆಡಿಸಿಕೊಳ್ಳದೆ ಮದ್ಯ ಪ್ರಿಯರು ಮದ್ಯ ಖರೀದಿ ಮಾಡಿದ್ದಾರೆ.

Ad Widget

ಅಂತರ ರಾಜ್ಯ

Chennai Jain couple-ತಿರುಪತಿ ತಿಮ್ಮಪ್ಪನಿಗೆ 206 ಕೋಟಿ ರೂ. ಮೌಲ್ಯದ 121 ಕೆ.ಜಿ. ಚಿನ್ನ, ವಜ್ರಾಭರಣ ಕಾಣಿಕೆ ನೀಡಿದ ಚೆನ್ನೈ ಜೈನ ದಂಪತಿ..!

Published

on

Ad Widget

Ad Widget

Ad Widget

Ad Widget

ಚೆನ್ನೈ ಮೂಲದ ಜೈನ ದಂಪತಿ ತಿರುಪತಿ ತಿರುಮಲ ದೇವಸ್ಥಾನದ ಶ್ರೀ ವೆಂಕಟೇಶ್ವರ ಸ್ವಾಮಿಗೆ 206 ಕೋಟಿ ರೂ. ಮೌಲ್ಯದ 121 ಕೆ.ಜಿ. ತೂಕದ ಚಿನ್ನ ಹಾಗೂ ವಜ್ರಾಭರಣಗಳನ್ನು ಕಾಣಿಕೆಯಾಗಿ ಅರ್ಪಿಸುವ ಮೂಲಕ ಅಪಾರ ಭಕ್ತಿ ಮೆರೆದಿದ್ದಾರೆ.

Ad Widget

Ad Widget

Ad Widget

Ad Widget

ತಿರುಪತಿ: ಚೆನ್ನೈ ಮೂಲದ ಜೈನ ದಂಪತಿ ತಿರುಪತಿ ತಿರುಮಲ ದೇವಸ್ಥಾನದ ಶ್ರೀ ವೆಂಕಟೇಶ್ವರ ಸ್ವಾಮಿಗೆ 206 ಕೋಟಿ ರೂ. ಮೌಲ್ಯದ 121 ಕೆ.ಜಿ. ತೂಕದ ಚಿನ್ನ ಹಾಗೂ ವಜ್ರಾಭರಣಗಳನ್ನು ಕಾಣಿಕೆಯಾಗಿ ಅರ್ಪಿಸುವ ಮೂಲಕ ಅಪಾರ ಭಕ್ತಿ ಮೆರೆದಿದ್ದಾರೆ.

Ad Widget

Ad Widget alt="Ad Widget"/>

Ad Widget

ಚೆನ್ನೈನ ವರ್ಧಮಾನ್ ಜೈನ್ ಮತ್ತು ರಾಧಿಕಾ ಜೈನ್ ದಂಪತಿ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರ ಸಮ್ಮುಖದಲ್ಲಿ ತಿರುಮಲ ತಿರುಪತಿ ದೇವಸ್ಥಾನದ (ಟಿಟಿಡಿ) ಅರ್ಚಕರು ಹಾಗೂ ಪ್ರತಿನಿಧಿಗಳಿಗೆ ಈ ಅಮೂಲ್ಯ ಆಭರಣಗಳನ್ನು ಔಪಚಾರಿಕವಾಗಿ ಹಸ್ತಾಂತರಿಸಿದರು. ವಜ್ರಖಚಿತ ಚಿನ್ನಾಭರಣಗಳನ್ನು ಒಳಗೊಂಡ ಈ ಕಾಣಿಕೆ ದೇವಾಲಯದ ಇತಿಹಾಸದಲ್ಲಿನ ಗಮನಾರ್ಹ ದಾನಗಳಲ್ಲಿ ಒಂದಾಗಿದೆ.

Ad Widget

Ad Widget <> Ad Widget

ಸಮಾರಂಭದಲ್ಲಿ ದಂಪತಿಯ ಭಕ್ತಿಯನ್ನು ಶ್ಲಾಘಿಸಿದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, 206 ಕೋಟಿ ರೂ. ಮೌಲ್ಯದ ಚಿನ್ನಾಭರಣಗಳನ್ನು ಶ್ರೀ ವೆಂಕಟೇಶ್ವರ ಸ್ವಾಮಿಗೆ ಅರ್ಪಿಸಿರುವುದು ಅಪರೂಪದ ಹಾಗೂ ಅಸಾಧಾರಣ ಭಕ್ತಿಯ ಪ್ರತೀಕವಾಗಿದೆ. ದೇವರ ಮೇಲಿನ ಅಪಾರ ಭಕ್ತಿ ಮತ್ತು ದೈವಿಕ ಪ್ರೇರಣೆಯಿಂದ ಈ ದಂಪತಿ ಇಂತಹ ಮಹತ್ವದ ಕಾರ್ಯಕ್ಕೆ ಮುಂದಾಗಿದ್ದಾರೆ. ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿರುವುದು ತಮ್ಮ ಸೌಭಾಗ್ಯ ಎಂದು ಹೇಳಿದರು.

ತಿರುಮಲವು ನಂಬಿಕೆ, ಭಕ್ತಿ ಹಾಗೂ ಆಧ್ಯಾತ್ಮಿಕ ಸಂತೃಪ್ತಿಯ ಸಂಕೇತವಾಗಿದ್ದು, ಶ್ರೀ ಕೃಷ್ಣದೇವರಾಯರ ಕಾಲದಿಂದ ಇಂದಿನವರೆಗೂ ಭಕ್ತರ ಕಾಣಿಕೆ ಮತ್ತು ಭಕ್ತಿಪರಂಪರೆ ನಿರಂತರವಾಗಿ ಮುಂದುವರಿದಿದೆ ಎಂದು ನಾಯ್ಡು ಹೇಳಿದರು. ಪಲ್ಲವರು, ಚೋಳರು, ಚೇರರು, ಪಾಂಡ್ಯರು ಹಾಗೂ ಮೈಸೂರು ಮತ್ತು ಮರಾಠಾ ಅರಸರು ಹಿಂದಿನ ಕಾಲದಲ್ಲಿ ದೇವಾಲಯಕ್ಕೆ ಬೆಲೆಬಾಳುವ ಆಭರಣಗಳು ಮತ್ತು ಕಾಣಿಕೆಗಳನ್ನು ಅರ್ಪಿಸಿ ಶ್ರೀಮಂತಗೊಳಿಸಿರುವುದನ್ನು ಸ್ಮರಿಸಿದರು.

Ad Widget

Ad Widget

ಈ ಸಂದರ್ಭದಲ್ಲಿ ಅಲಿಪಿರಿ ಬಾಂಬ್ ದಾಳಿಯಿಂದ ತಾವು ಪಾರಾದ ಘಟನೆಯನ್ನು ನೆನಪಿಸಿಕೊಂಡ ಮುಖ್ಯಮಂತ್ರಿ, ಶ್ರೀ ವೆಂಕಟೇಶ್ವರ ಸ್ವಾಮಿಯ ಆಶೀರ್ವಾದವೇ ತಮಗೆ ಮರುಜನ್ಮ ನೀಡಿತು ಎಂದು ಭಾವುಕರಾಗಿ ನುಡಿದರು.

ದೇವಾಲಯದ ಪಾವಿತ್ರ್ಯ ಕಾಪಾಡುವುದರ ಜೊತೆಗೆ ಗೋರಕ್ಷಣೆ, ವೈದಿಕ ಪರಂಪರೆ ಮತ್ತು ಪರಿಸರ ಸಂರಕ್ಷಣೆಗೆ ಆದ್ಯತೆ ನೀಡುವಂತೆ ಟಿಟಿಡಿಗೆ ಸೂಚಿಸಿದ ನಾಯ್ಡು, ‘ವೃಕೋ ಗೋವಿಂದಂ’ ಉಪಕ್ರಮಕ್ಕೆ ಉತ್ತೇಜನ ನೀಡುವುದಾಗಿ ತಿಳಿಸಿದರು. ಅಲ್ಲದೆ, ದೇವಾಲಯದ ಮೂಲಸೌಕರ್ಯ ವಿಸ್ತರಣೆ ಹಾಗೂ ಟಿಟಿಡಿ ಸಹಯೋಗದೊಂದಿಗೆ ಆಂಧ್ರಪ್ರದೇಶದಾದ್ಯಂತ 5,000 ದೇವಾಲಯಗಳನ್ನು ನಿರ್ಮಿಸುವ ಯೋಜನೆಯನ್ನೂ ಪ್ರಕಟಿಸಿದರು.

‘ಮಾನವ ಸೇವೆಯೇ ಮಾಧವ ಸೇವೆ’ ಎಂಬ ತತ್ವದಡಿ ಅನ್ನದಾನ, ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದ ಉಪಕ್ರಮಗಳನ್ನು ಸರ್ಕಾರ ಮತ್ತಷ್ಟು ಬಲಪಡಿಸಲಿದೆ. ಶ್ರೀಮಂತರು ತಮ್ಮ ಸಂಪತ್ತನ್ನು ಸಮಾಜ ಕಲ್ಯಾಣ, ಆಧ್ಯಾತ್ಮಿಕ ಕಾರ್ಯಗಳು ಹಾಗೂ ಬಡವರ ಸೇವೆಗೆ ಬಳಸುವಂತೆ ಜೈನ ದಂಪತಿಯ ದಾನವನ್ನು ಮಾದರಿಯಾಗಿ ಉಲ್ಲೇಖಿಸಿ ಮುಖ್ಯಮಂತ್ರಿ ಕರೆ ನೀಡಿದರು.

Ad Widget
Continue Reading

ಸುಳ್ಯ

Suresh Raina-ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಸುರೇಶ್ ರೈನಾ ಸುಳ್ಯದ ‘ರಸಪಾಕ ಗ್ರಾಂಡ್’ ಹೋಟೆಲ್ ಗೆ ಭೇಟಿ

Published

on

Ad Widget

Ad Widget

Ad Widget

Ad Widget

ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಹಾಗೂ ಖ್ಯಾತ ಕ್ರಿಕೆಟಿಗ ಸುರೇಶ್ ರೈನಾ ಸುಳ್ಯಕ್ಕೆ ಭೇಟಿ ನೀಡಿದರು. ಮಡಿಕೇರಿಗೆ ಪ್ರವಾಸ ಬಂದಿದ್ದ ರೈನಾ ಮಂಗಳೂರು ವಿಮಾನ ನಿಲ್ದಾಣದಿಂದ ಮಡಿಕೇರಿ ತೆರಳುವ ಮಾರ್ಗಮಧ್ಯೆ ಬುಧವಾರ ರಾತ್ರಿ ಸುಳ್ಯದ ‘ಶ್ರೀಕೃಷ್ಣ ರಸಪಾಕ ಗ್ರಾಂಡ್ ಹೋಟೆಲ್‌’ ಗೆ ಆಗಮಿಸಿದ ಅವರು, ಕೆಲಕಾಲ ತಂಗಿ ಚಹಾ ಸೇವಿಸಿ ಮುಂದಿನ ಪ್ರಯಾಣ ಬೆಳೆಸಿದರು.

Ad Widget

Ad Widget

Ad Widget

Ad Widget

ಸುಳ್ಯ: ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಹಾಗೂ ಖ್ಯಾತ ಕ್ರಿಕೆಟಿಗ ಸುರೇಶ್ ರೈನಾ ಸುಳ್ಯಕ್ಕೆ ಭೇಟಿ ನೀಡಿದರು.

Ad Widget

Ad Widget alt="Ad Widget"/>

Ad Widget

ಮಡಿಕೇರಿಗೆ ಪ್ರವಾಸ ಬಂದಿದ್ದ ರೈನಾ ಮಂಗಳೂರು ವಿಮಾನ ನಿಲ್ದಾಣದಿಂದ ಮಡಿಕೇರಿ ತೆರಳುವ ಮಾರ್ಗಮಧ್ಯೆ ಬುಧವಾರ ರಾತ್ರಿ ಸುಳ್ಯದ ‘ಶ್ರೀಕೃಷ್ಣ ರಸಪಾಕ ಗ್ರಾಂಡ್ ಹೋಟೆಲ್‌’ ಗೆ ಆಗಮಿಸಿದ ಅವರು, ಕೆಲಕಾಲ ತಂಗಿ ಚಹಾ ಸೇವಿಸಿ ಮುಂದಿನ ಪ್ರಯಾಣ ಬೆಳೆಸಿದರು.

Ad Widget

Ad Widget <> Ad Widget

ಈ ಸಂದರ್ಭದಲ್ಲಿ ಹೋಟೆಲ್ ಮಾಲಕರಾದ ನಾರಾಯಣ ಕೇಕಡ್ಕ ಹಾಗೂ ಸಿಬ್ಬಂದಿ ಸುರೇಶ್ ರೈನಾ ಅವರನ್ನು ಆತ್ಮೀಯವಾಗಿ ಸ್ವಾಗತಿಸಿದರು.

ಇತ್ತಿಚೆಗಷ್ಟೇ ರಸಪಾಕ ಗ್ರಾಂಡ್ ಗೆ ಇನ್ಫೋಸೀಸ್ ಪ್ರತಿಷ್ಠಾನದ ಸುಧಾಮೂರ್ತಿ ಸಹಿತ ಹಲವು ಸೆಲೆಬ್ರಿಟಿಗಳು ಭೇಟಿ ನೀಡುತ್ತಿದ್ದಾರೆ.

Ad Widget

Ad Widget

ರೈನಾ ಮಡಿಕೇರಿಯ ಲೀಲಾ ಪ್ಯಾಲೇಸ್ ಗೆ ತೆರಳಿದರು.

Ad Widget
Continue Reading

ಸ್ಥಳೀಯ

Uppinangadi-ಉಪ್ಪಿನಂಗಡಿ: ಇಂದಿನಿಂದ ವಳಾಲು ಟೋಲ್ ಕಾರ್ಯಾರಂಭ; ಶೀಘ್ರದಲ್ಲೇ ಬ್ರಹ್ಮರಕೂಟ್ಲು ಟೋಲ್ ಗೇಟ್ ತೆರವು..!

Published

on

Ad Widget

Ad Widget

Ad Widget

Ad Widget

ಬಿ.ಸಿ. ರೋಡ್–ಅಡ್ಡಹೊಳೆ ಚತುಷ್ಪಥ ಕಾಂಕ್ರೀಟ್ ಹೆದ್ದಾರಿ ಅಭಿವೃದ್ಧಿ ಯೋಜನೆಯ ಭಾಗವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪದ ಬಜತ್ತೂರು ಗ್ರಾಮದ ವಳಾಲಿನಲ್ಲಿ ನಿರ್ಮಿಸಿರುವ ಹೊಸ ಟೋಲ್ ಪ್ಲಾಝಾ ನ. 26ರಂದು ಬೆಳಗ್ಗೆ 8 ಗಂಟೆಯಿಂದ ಅಧಿಕೃತವಾಗಿ ಕಾರ್ಯಾರಂಭಿಸಲಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತಿಳಿಸಿದೆ.

Ad Widget

Ad Widget

Ad Widget

Ad Widget

ಉಪ್ಪಿನಂಗಡಿ: ಬಿ.ಸಿ. ರೋಡ್–ಅಡ್ಡಹೊಳೆ ಚತುಷ್ಪಥ ಕಾಂಕ್ರೀಟ್ ಹೆದ್ದಾರಿ ಅಭಿವೃದ್ಧಿ ಯೋಜನೆಯ ಭಾಗವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪದ ಬಜತ್ತೂರು ಗ್ರಾಮದ ವಳಾಲಿನಲ್ಲಿ ನಿರ್ಮಿಸಿರುವ ಹೊಸ ಟೋಲ್ ಪ್ಲಾಝಾ ನ. 26ರಂದು ಬೆಳಗ್ಗೆ 8 ಗಂಟೆಯಿಂದ ಅಧಿಕೃತವಾಗಿ ಕಾರ್ಯಾರಂಭಿಸಲಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತಿಳಿಸಿದೆ.

Ad Widget

Ad Widget alt="Ad Widget"/>

Ad Widget

ವಳಾಲು ಟೋಲ್ ಪ್ಲಾಝಾದಲ್ಲಿ ಈಗಾಗಲೇ ಪರೀಕ್ಷಾರ್ಥ ಕಾರ್ಯಾಚರಣೆ ನಡೆಸಲಾಗಿದ್ದು, ಇದೀಗ ಅಧಿಕೃತವಾಗಿ ಶುಲ್ಕ ವಸೂಲಿ ಆರಂಭವಾಗಲಿದೆ. ಶುಲ್ಕ ಸಂಗ್ರಹದ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಮಂಗಳೂರಿನ ಕೋರಲ್ ಸಂಸ್ಥೆ ನಿರ್ವಹಣೆಯ ಗುತ್ತಿಗೆ ಪಡೆದುಕೊಂಡಿದೆ. ವಾಹನಗಳಿಗೆ ನಿಗದಿಪಡಿಸಿರುವ ಶುಲ್ಕದ ವಿವರಗಳ ಫಲಕಗಳನ್ನೂ ಹೆದ್ದಾರಿ ಪ್ರಾಧಿಕಾರ ಅಳವಡಿಸಿದೆ.

Ad Widget

Ad Widget <> Ad Widget

ಬಿ.ಸಿ. ರೋಡ್–ಅಡ್ಡಹೊಳೆ ಚತುಷ್ಪಥ ಹೆದ್ದಾರಿ ಕಾಮಗಾರಿ ಸುಮಾರು ಶೇ. 95ರಷ್ಟು ಪೂರ್ಣಗೊಂಡಿದೆ. ಉಪ್ಪಿನಂಗಡಿಯಿಂದ ನೆಲ್ಯಾಡಿ ಕಡೆಗೆ ಸುಮಾರು 8 ಕಿ.ಮೀ. ದೂರದಲ್ಲಿರುವ ವಳಾಲಿನಲ್ಲಿ ಟೋಲ್ ಪ್ಲಾಝಾ ನಿರ್ಮಾಣವನ್ನು ಹೆದ್ದಾರಿ ಗುತ್ತಿಗೆ ಸಂಸ್ಥೆ ಕೆಎನ್‌ಆರ್ ಕನ್ಸ್ಟ್ರಕ್ಷನ್ ನಿರ್ವಹಿಸಿದೆ. ಹೆದ್ದಾರಿಯಲ್ಲಿ ಎರಡೂ ದಿಕ್ಕುಗಳಿಗೆ ತಲಾ ನಾಲ್ಕು ಲೇನ್‌ಗಳಿದ್ದು, ದ್ವಿಚಕ್ರ ವಾಹನಗಳು ಹಾಗೂ ರಿಕ್ಷಾಗಳ ಸಂಚಾರಕ್ಕೆ ಪ್ರತ್ಯೇಕ ಲೇನ್‌ಗಳನ್ನು ವ್ಯವಸ್ಥೆಗೊಳಿಸಲಾಗಿದೆ.

ರಾಷ್ಟ್ರೀಯ ಹೆದ್ದಾರಿ 75ರ ಬೆಂಗಳೂರು–ಮಂಗಳೂರು ಮಾರ್ಗದಲ್ಲಿ ನೆಲಮಂಗಲದಿಂದ ಸಕಲೇಶಪುರದವರೆಗೆ ಈಗಾಗಲೇ ಐದು ಟೋಲ್ ಪ್ಲಾಝಾಗಳಿದ್ದು, ಇದೀಗ ದಕ್ಷಿಣ ಕನ್ನಡ ಜಿಲ್ಲೆಯ ವ್ಯಾಪ್ತಿಯಲ್ಲಿ ವಳಾಲು ಟೋಲ್ ಕೂಡ ಸೇರ್ಪಡೆಯಾಗಿದೆ.

Ad Widget

Ad Widget

ಟೋಲ್ ಶುಲ್ಕ ಎಷ್ಟು?
ಕಾರು, ಜೀಪು, ವ್ಯಾನ್ ಹಾಗೂ ಲಘು ಮೋಟಾರು ವಾಹನಗಳಿಗೆ ಏಕಮುಖ ಪ್ರಯಾಣಕ್ಕೆ 140 ರೂ. ಹಾಗೂ ಅದೇ ದಿನದೊಳಗೆ ಹಿಂದಿರುಗುವ ಪ್ರಯಾಣಕ್ಕೆ 205 ರೂ. ಶುಲ್ಕ ನಿಗದಿಪಡಿಸಲಾಗಿದೆ.

ಟೋಲ್ ಪ್ಲಾಝಾದ ಒಟ್ಟು ಎಂಟು ಲೇನ್‌ಗಳ ಪೈಕಿ ಆರು ಲೇನ್‌ಗಳನ್ನು (3+3) ಫಾಸ್ಟ್‌ಟ್ಯಾಗ್ ಹೊಂದಿರುವ ವಾಹನಗಳಿಗಾಗಿ ಮೀಸಲಿಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ನೋಂದಣಿ ಹೊಂದಿರುವ ವಾಹನಗಳಿಗೆ ಶೇ. 50ರಷ್ಟು ರಿಯಾಯಿತಿ ನೀಡಲಾಗಿದ್ದು, ಟೋಲ್ ಕೇಂದ್ರದ 20 ಕಿ.ಮೀ. ವ್ಯಾಪ್ತಿಯ ನಿವಾಸಿಗಳಿಗೆ 360 ರೂ. ಮಾಸಿಕ ಪಾಸ್ ವ್ಯವಸ್ಥೆ ಇರಲಿದೆ ಎಂದು ಸಂಸ್ಥೆ ತಿಳಿಸಿದೆ.

ಶೀಘ್ರದಲ್ಲೇ ಬ್ರಹ್ಮರಕೂಟ್ಲು ಟೋಲ್ ಗೇಟ್ ತೆರವು
ಇದೇ ವೇಳೆ, ದಶಕಗಳಿಂದ ಕಾರ್ಯಾಚರಿಸುತ್ತಿರುವ ಬ್ರಹ್ಮರಕೂಟ್ಲು ರಾಷ್ಟ್ರೀಯ ಹೆದ್ದಾರಿ ಟೋಲ್ ಗೇಟ್ ಶೀಘ್ರದಲ್ಲೇ ಬಂದ್ ಆಗುವ ಸಾಧ್ಯತೆ ಇದೆ. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಹಿರಿಯ ಅಧಿಕಾರಿಗಳೊಂದಿಗಿನ ಸಮಿತಿ ಸಭೆಯಲ್ಲಿ ಟೋಲ್ ತೆರವಿಗೆ ಅನುಮತಿ ದೊರೆತಿದ್ದು, ಅಧಿಕೃತ ಆದೇಶ ಪ್ರಕಟವಾಗುವುದಷ್ಟೇ ಬಾಕಿ ಇದೆ.

ಬಿ.ಸಿ. ರೋಡ್‌ನಿಂದ ಬೆಂಗಳೂರು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 75 ಹಾಗೂ ಪುಂಜಾಲಕಟ್ಟೆಯಿಂದ ಚಾರ್ಮಾಡಿ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 73ರ ಅಭಿವೃದ್ಧಿ ಕಾಮಗಾರಿಗಳು ಪೂರ್ಣಗೊಂಡ ಬಳಿಕ ಬ್ರಹ್ಮರಕೂಟ್ಲು ಟೋಲ್ ತೆರವುಗೊಳ್ಳಲಿದೆ. ರಾಷ್ಟ್ರೀಯ ಹೆದ್ದಾರಿ 73ರ ಮಡಂತ್ಯಾರು ಸಮೀಪದ ಪಣಕಜೆ ಬಳಿ ಹೊಸ ಟೋಲ್ ಗೇಟ್ ನಿರ್ಮಾಣವಾಗಲಿದ್ದು, ಅದರೊಂದಿಗೆ ಬ್ರಹ್ಮರಕೂಟ್ಲು ಟೋಲ್ ವಿಲೀನಗೊಳ್ಳಲಿದೆ.

ಸುರತ್ಕಲ್ ಟೋಲ್ ಗೇಟ್ ತೆರವಿನ ಬಳಿಕ ಇದೀಗ ಬ್ರಹ್ಮರಕೂಟ್ಲು ಟೋಲ್ ಕೂಡ ತೆರವುಗೊಳ್ಳುವ ನಿರೀಕ್ಷೆ ಮೂಡಿದ್ದು, ಈ ಭಾಗದ ಪ್ರಯಾಣಿಕರಿಗೆ ದೊಡ್ಡ ನಿರಾಳತೆ ಸಿಗಲಿದೆ.

ಅಧಿಕೃತ ಆದೇಶಕ್ಕಾಗಿ ಕಾಯಲಾಗುತ್ತಿದೆ
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸಮಿತಿಯು ಈ ವಿಚಾರವಾಗಿ ಕಳೆದ ನಾಲ್ಕು ತಿಂಗಳಲ್ಲಿ ಮೂರು ಸಭೆಗಳನ್ನು ನಡೆಸಿದ್ದು, ಅಂತಿಮವಾಗಿ ಟೋಲ್ ತೆರವಿಗೆ ಅನುಮತಿ ದೊರೆತಿದೆ. ಅಧಿಕೃತ ಆದೇಶದ ಪ್ರತಿ ಕೈ ಸೇರಿದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಅಬ್ದುಲ್ಲಾ ಜಾವೆದ್ ಅಝ್ಮಿ ತಿಳಿಸಿದ್ದಾರೆ.

13 ವರ್ಷಗಳಿಂದ ಕಾರ್ಯಾಚರಣೆ
2013ರಲ್ಲಿ ಆರಂಭಗೊಂಡ ಬ್ರಹ್ಮರಕೂಟ್ಲು ಟೋಲ್ ಪ್ಲಾಝಾ ಕಳೆದ 13 ವರ್ಷಗಳಿಂದ ಕಾರ್ಯಾಚರಿಸುತ್ತಿದೆ. ಮಂಗಳೂರು ಬಂದರು ಸಂಪರ್ಕ ಯೋಜನೆಯ ರಸ್ತೆಯ ನಿರ್ವಹಣೆಯ ಭಾಗವಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಈ ಟೋಲ್ ಕೇಂದ್ರವನ್ನು ಆರಂಭಿಸಿತ್ತು. ಇದಕ್ಕೂ ಮೊದಲು ಪಾಣೆಮಂಗಳೂರಿನ ನೇತ್ರಾವತಿ ಸೇತುವೆ ಬಳಿ ಟೋಲ್ ಶುಲ್ಕ ಸಂಗ್ರಹಿಸಲಾಗುತ್ತಿತ್ತು.

ಬ್ರಹ್ಮರಕೂಟ್ಲು ಟೋಲ್ ಗೇಟ್ ಅನ್ನು ಅಂತರದ ಮಾನದಂಡ ಹಾಗೂ ಸಾರ್ವಜನಿಕರ ಬೇಡಿಕೆಯ ಹಿನ್ನೆಲೆಯಲ್ಲಿ ಸ್ಥಳಾಂತರಿಸುವಂತೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯಕ್ಕೆ ಮನವಿ ಸಲ್ಲಿಸಿದ್ದೇನೆ. ಸಚಿವಾಲಯವು ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಶೀಘ್ರದಲ್ಲೇ ಆದೇಶ ಪ್ರಕಟವಾಗುವ ನಿರೀಕ್ಷೆಯಿದೆ ಎಂದು ಸಂಸದ ಕ್ಯಾ. ಬ್ರಿಜೇಶ್ ಚೌಟ ತಿಳಿಸಿದ್ದಾರೆ.

Ad Widget
Continue Reading

ಇಂದಿನ ಟ್ರೆಂಡಿಂಗ್‌ ಸುದ್ದಿಗಳು

error: Content is protected !!