ಬಿಗ್ ನ್ಯೂಸ್
Heritage Foods | ಕಿಂಗ್ ಮೇಕರ್ ಆದ ಚಂದ್ರಬಾಬು ನಾಯ್ಡು – ಇತಿಹಾಸ ನಿರ್ಮಿಸಿದ ನಾಯ್ಡು ಕಂಪನಿ ಷೇರುಗಳು : ಕೇವಲ 5 ದಿನದಲ್ಲಿ ಕುಟುಂಬದ ಆಸ್ತಿ 800ಕೋಟಿ ಏರಿಕೆ
ಜೂನ್ 4 ರಂದು ಅಚ್ಚರಿಯ ಲೋಕಸಭೆ ಚುನಾವಣಾ ಫಲಿತಾಂಶ ಹೊರಬಿದ್ದ ಬಳಿಕ ಒಂದು ಕಂಪನಿಯ ಷೇರು ಭಾರೀ ಏರಿಕೆ ಕಾಣುತ್ತಿದೆ. ಅದೇ ಎಫ್ಎಂಸಿಜಿ ಕಂಪನಿ ‘ಹೆರಿಟೇಜ್ ಫುಡ್ಸ್ ಲಿಮಿಟೆಡ್'(Heritage Foods). ಈ ಕಂಪನಿಯಲ್ಲಿ ಆಂಧ್ರ ಪ್ರದೇಶದ ನಿಯೋಜಿತ ಸಿಎಂ ಚಂದ್ರಬಾಬು ನಾಯ್ಡು ಕುಟುಂಬ ಭಾರಿ ಹೂಡಿಕೆ ಹೊಂದಿದೆ. ಇದೇ ಈ ಏರಿಕೆಗೆ ಪ್ರಮುಖ ಕಾರಣವಾಗಿದೆ.
ಆಂಧ್ರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಚಂದ್ರಬಾಬು ನಾಯ್ಡು ಅವರ ಟಿಡಿಪಿ ಮೈತ್ರಿಕೂಟ ಭರ್ಜರಿ ಜಯ ದಾಖಲಿಸಿದ್ದು, ಕೇಂದ್ರದಲ್ಲೂ ನಾಯ್ಡು ಕಿಂಗ್ಮೇಕರ್ ಆಗಿ ಮೂಡಿ ಬಂದಿದ್ದಾರೆ. ಈ ಹಿನ್ನೆಲೆಯಲ್ಲಿ ಮುಂದಿನ ಐದು ವರ್ಷ ರಾಜ್ಯ ಮತ್ತು ಆಂಧ್ರ ರಾಜಕಾರಣದಲ್ಲಿ ನಾಯ್ಡು ಪ್ರಭಾವ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ಹೆರಿಟೇಜ್ ಷೇರುಗಳು ಒಂದೇ ಸಮನೆ ಏರಿಕೆ ಕಾಣುತ್ತಿವೆ.
ಲೋಕಸಭಾ ಚುನಾವಣಾ ಫಲಿತಾಂಶ ಹೊರಬಿದ್ದ ದಿನ ಷೇರು ಮಾರುಕಟ್ಟೆ ತೀವ್ರ ಕುಸಿತ ದಾಖಲಿಸಿತ್ತು. ಇದರ ನಡುವೆಯೂ ಹೆರಿಟೇಜ್ ಫುಡ್ಸ್ ಲಿಮಿಟೆಡ್ ಷೇರುಗಳು ಗಟ್ಟಿಯಾಗಿ ನಿಂತಿದ್ದವು. ಬಳಿಕ ಭಾರೀ ಏರಿಕೆಗೆ ಸಾಕ್ಷಿಯಾಗಿದ್ದವು.
ಕಳೆದ ಐದು ದಿನಗಳಲ್ಲಿ ಈ ಕಂಪನಿಯ ಷೇರುಗಳು ಶೇ. 55ರಷ್ಟು ಭಾರೀ ಏರಿಕೆ ಕಂಡಿವೆ. 2024ರ ಮೇ 31ರಂದು ಕಂಪನಿಯ ಷೇರಿನ ಬೆಲೆ 402.90 ರೂ. ಆಗಿತ್ತು. ಇದೀಗ ಸತತ ಏರಿಕೆಯ ಬಳಿಕ ಶುಕ್ರವಾರದ ದಿನದಂತ್ಯಕ್ಕೆ 661.25 ರೂ.ನಲ್ಲಿ ವಹಿವಾಟು ಮುಗಿಸಿದೆ. ಷೇರು ಇಂದು ಕೂಡ 60.10 ರೂ. ಅಥವಾ ಶೇ. 10ರಷ್ಟು ಏರಿಕೆ ಕಂಡಿದ್ದಲ್ಲದೆ, ಅಪ್ಪರ್ ಸರ್ಕ್ಯೂಟ್ನಲ್ಲಿ ಲಾಕ್ ಆಗಿತ್ತು.
ಶುಕ್ರವಾರದ ಏರಿಕೆಯೊಂದಿಗೆ ಕಂಪನಿ ಷೇರುಗಳು ಕಳೆದ 5 ದಿನದಲ್ಲಿ 258.35 ರೂ. ಏರಿಕೆಯಾಗಿದ್ದು ಹೊಸ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿವೆ.
ಹೆರಿಟೇಜ್ ಫುಡ್ಸ್ ಮಾರುಕಟ್ಟೆ ಮೌಲ್ಯ ಭಾರೀ ಏರಿಕೆ
1992ರಲ್ಲಿ ಸ್ಥಾಪನೆಯಾದ ಹೆರಿಟೇಜ್ ಫುಡ್ಸ್ ಮೌಲ್ಯವರ್ಧಿತ ಮತ್ತು ಬ್ರಾಂಡೆಡ್ ಡೈರಿ ಉತ್ಪನ್ನಗಳಿಗೆ ಹೆಸರುವಾಸಿಯಾಗಿದ್ದು, ಈ ವಲಯದಲ್ಲಿ ಭಾರತದ ಪ್ರಮುಖ ಕಂಪನಿಯಾಗಿದೆ.
ಹಾಲು ಮತ್ತು ಹಾಲಿನ ಉತ್ಪನ್ನಗಳಾದ ಮೊಸರು, ತುಪ್ಪ, ಪನೀರ್, ಸುವಾಸನೆಯುಕ್ತ ಹಾಲು ಮತ್ತು ರೋಗನಿರೋಧಕ ಹಾಲು ಮುಂತಾದವುಗಳಿಗೆ ಹೆರಿಟೇಜ್ ಜನಪ್ರಿಯವಾಗಿದ್ದು, ಭಾರತದಾದ್ಯಂತ 11 ರಾಜ್ಯಗಳಲ್ಲಿ 15 ಲಕ್ಷಕ್ಕೂ ಹೆಚ್ಚಿನ ಕುಟುಂಬಗಳಿಗೆ ತನ್ನ ಉತ್ಪನ್ನಗಳನ್ನು ಪೂರೈಸುತ್ತದೆ.
ಚಂದ್ರಬಾಬು ನಾಯ್ಡು ಪರ ಚುನಾವಣಾ ಫಲಿತಾಂಶ ಬಂದ ದಿನದಿಂದ ಹೆರಿಟೇಜ್ ಫುಡ್ಸ್ ಮಾರುಕಟ್ಟೆ ಮೌಲ್ಯ ಸುಮಾರು 2,400 ಕೋಟಿ ರೂ.ಗಳಷ್ಟು ಏರಿಕೆ ಕಂಡಿದೆ. ಕಂಪನಿ ಮೌಲ್ಯ ಒಂದು ವಾರದ ಹಿಂದೆ ಇದ್ದ 3,700 ಕೋಟಿ ರೂ.ನಿಂದ ಜೂನ್ 7ರ ವೇಳೆಗೆ 6,136 ಕೋಟಿ ರೂ.ಗೆ ಜಿಗಿದಿದೆ.
ಈ ಕಂಪನಿಯಲ್ಲಿ ತೆಲುಗು ದೇಶಂ ಪಕ್ಷ (ಟಿಡಿಪಿ)ದ ಮುಖ್ಯಸ್ಥ ನಾರಾ ಚಂದ್ರಬಾಬು ನಾಯ್ಡು ಅವರ ಪತ್ನಿ ನಾರಾ ಭುವನೇಶ್ವರಿ ಶೇ. 24.37ರಷ್ಟು ಷೇರು ಹೊಂದಿದ್ದಾರೆ. ಕಂಪನಿಯ ಪ್ರಮುಖ ಪ್ರವರ್ತಕರಾಗಿರುವ ಅವರ ಬಳಿ 2,26,11,525 ಷೇರುಗಳು ಇವೆ. ಇನ್ನು ಚಂದ್ರಬಾಬು ನಾಯ್ಡು ಪುತ್ರ, ಶಾಸಕ ನಾರಾ ಲೋಕೇಶ್ ಹಾಗೂ ಅವರ ಪತ್ನಿ ಬ್ರಹ್ಮಣಿ ಕ್ರಮವಾಗಿ ಶೇ. 10.82 ಹಾಗೂ ಶೇ. 0.46ರಷ್ಟು ಷೇರುಗಳನ್ನು ಹೊಂದಿದ್ದಾರೆ. ನಾಯ್ಡು ಅವರ ಮೊಮ್ಮಗ ದೇವಾಂಶ್ ಹೆಸರಲ್ಲೂ ಶೇ. 0.06ರಷ್ಟು ಷೇರುಗಳು ಇವೆ.
ಒಟ್ಟಾರೆ ಹೆರಿಟೇಜ್ ಫುಡ್ಸ್ ಲಿ.ನಲ್ಲಿ ನಾಯ್ಡು ಅವರ ಕುಟುಂಬವು ಶೇ. 35.7ರಷ್ಟು ಪಾಲನ್ನು ಹೊಂದಿದೆ ಎಂದು ಷೇರು ವಿನಿಮಯ ಕೇಂದ್ರದ ದತ್ತಾಂಶಗಳು ತೋರಿಸುತ್ತಿವೆ.
ಇತ್ತೀಚಿನ ಹೆರಿಟೇಜ್ ಫುಡ್ಸ್ ಷೇರು ಬೆಲೆ ಏರಿಕೆಯಿಂದ ನಾರಾ ಭುವನೇಶ್ವರಿ ಅವರ ಸಂಪತ್ತಿನ ನಿವ್ವಳ ಮೌಲ್ಯದಲ್ಲಿ ಕೇವಲ ಐದೇ ದಿನದಲ್ಲಿ 584 ಕೋಟಿ ರೂ. ಏರಿಕೆ ಕಂಡಿದೆ. ಇನ್ನು ನಾರಾ ಲೋಕೇಶ್ ಸಂಪತ್ತು 237.8 ಕೋಟಿ ರೂ.ನಷ್ಟು ಹೆಚ್ಚಾಗಿದೆ.
ಒಟ್ಟಾರೆಯಾಗಿ, ಚಂದ್ರಬಾಬು ನಾಯ್ಡು ಅವರ ನಿವ್ವಳ ಆಸ್ತಿ ಮೌಲ್ಯ 870 ಕೋಟಿ ರೂ.ಗಳಷ್ಟು ಏರಿಕೆಯಾಗಿದೆ. ಒಂದು ವಾರದ ಹಿಂದೆ ಇದ್ದ 1,319 ಕೋಟಿ ರೂ.ಗಳಿಂದ 2,190 ಕೋಟಿ ರೂ.ಗಳಿಗೆ ತಲುಪಿದೆ.
ಸುಳ್ಯ
Suresh Raina-ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಸುರೇಶ್ ರೈನಾ ಸುಳ್ಯದ ‘ರಸಪಾಕ ಗ್ರಾಂಡ್’ ಹೋಟೆಲ್ ಗೆ ಭೇಟಿ
ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಹಾಗೂ ಖ್ಯಾತ ಕ್ರಿಕೆಟಿಗ ಸುರೇಶ್ ರೈನಾ ಸುಳ್ಯಕ್ಕೆ ಭೇಟಿ ನೀಡಿದರು. ಮಡಿಕೇರಿಗೆ ಪ್ರವಾಸ ಬಂದಿದ್ದ ರೈನಾ ಮಂಗಳೂರು ವಿಮಾನ ನಿಲ್ದಾಣದಿಂದ ಮಡಿಕೇರಿ ತೆರಳುವ ಮಾರ್ಗಮಧ್ಯೆ ಬುಧವಾರ ರಾತ್ರಿ ಸುಳ್ಯದ ‘ಶ್ರೀಕೃಷ್ಣ ರಸಪಾಕ ಗ್ರಾಂಡ್ ಹೋಟೆಲ್’ ಗೆ ಆಗಮಿಸಿದ ಅವರು, ಕೆಲಕಾಲ ತಂಗಿ ಚಹಾ ಸೇವಿಸಿ ಮುಂದಿನ ಪ್ರಯಾಣ ಬೆಳೆಸಿದರು.
ಸುಳ್ಯ: ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಹಾಗೂ ಖ್ಯಾತ ಕ್ರಿಕೆಟಿಗ ಸುರೇಶ್ ರೈನಾ ಸುಳ್ಯಕ್ಕೆ ಭೇಟಿ ನೀಡಿದರು.
ಮಡಿಕೇರಿಗೆ ಪ್ರವಾಸ ಬಂದಿದ್ದ ರೈನಾ ಮಂಗಳೂರು ವಿಮಾನ ನಿಲ್ದಾಣದಿಂದ ಮಡಿಕೇರಿ ತೆರಳುವ ಮಾರ್ಗಮಧ್ಯೆ ಬುಧವಾರ ರಾತ್ರಿ ಸುಳ್ಯದ ‘ಶ್ರೀಕೃಷ್ಣ ರಸಪಾಕ ಗ್ರಾಂಡ್ ಹೋಟೆಲ್’ ಗೆ ಆಗಮಿಸಿದ ಅವರು, ಕೆಲಕಾಲ ತಂಗಿ ಚಹಾ ಸೇವಿಸಿ ಮುಂದಿನ ಪ್ರಯಾಣ ಬೆಳೆಸಿದರು.
ಈ ಸಂದರ್ಭದಲ್ಲಿ ಹೋಟೆಲ್ ಮಾಲಕರಾದ ನಾರಾಯಣ ಕೇಕಡ್ಕ ಹಾಗೂ ಸಿಬ್ಬಂದಿ ಸುರೇಶ್ ರೈನಾ ಅವರನ್ನು ಆತ್ಮೀಯವಾಗಿ ಸ್ವಾಗತಿಸಿದರು.
ಇತ್ತಿಚೆಗಷ್ಟೇ ರಸಪಾಕ ಗ್ರಾಂಡ್ ಗೆ ಇನ್ಫೋಸೀಸ್ ಪ್ರತಿಷ್ಠಾನದ ಸುಧಾಮೂರ್ತಿ ಸಹಿತ ಹಲವು ಸೆಲೆಬ್ರಿಟಿಗಳು ಭೇಟಿ ನೀಡುತ್ತಿದ್ದಾರೆ.
ಸ್ಥಳೀಯ
Uppinangadi-ಉಪ್ಪಿನಂಗಡಿ: ಇಂದಿನಿಂದ ವಳಾಲು ಟೋಲ್ ಕಾರ್ಯಾರಂಭ; ಶೀಘ್ರದಲ್ಲೇ ಬ್ರಹ್ಮರಕೂಟ್ಲು ಟೋಲ್ ಗೇಟ್ ತೆರವು..!
ಬಿ.ಸಿ. ರೋಡ್–ಅಡ್ಡಹೊಳೆ ಚತುಷ್ಪಥ ಕಾಂಕ್ರೀಟ್ ಹೆದ್ದಾರಿ ಅಭಿವೃದ್ಧಿ ಯೋಜನೆಯ ಭಾಗವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪದ ಬಜತ್ತೂರು ಗ್ರಾಮದ ವಳಾಲಿನಲ್ಲಿ ನಿರ್ಮಿಸಿರುವ ಹೊಸ ಟೋಲ್ ಪ್ಲಾಝಾ ನ. 26ರಂದು ಬೆಳಗ್ಗೆ 8 ಗಂಟೆಯಿಂದ ಅಧಿಕೃತವಾಗಿ ಕಾರ್ಯಾರಂಭಿಸಲಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತಿಳಿಸಿದೆ.
ಉಪ್ಪಿನಂಗಡಿ: ಬಿ.ಸಿ. ರೋಡ್–ಅಡ್ಡಹೊಳೆ ಚತುಷ್ಪಥ ಕಾಂಕ್ರೀಟ್ ಹೆದ್ದಾರಿ ಅಭಿವೃದ್ಧಿ ಯೋಜನೆಯ ಭಾಗವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪದ ಬಜತ್ತೂರು ಗ್ರಾಮದ ವಳಾಲಿನಲ್ಲಿ ನಿರ್ಮಿಸಿರುವ ಹೊಸ ಟೋಲ್ ಪ್ಲಾಝಾ ನ. 26ರಂದು ಬೆಳಗ್ಗೆ 8 ಗಂಟೆಯಿಂದ ಅಧಿಕೃತವಾಗಿ ಕಾರ್ಯಾರಂಭಿಸಲಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತಿಳಿಸಿದೆ.
ವಳಾಲು ಟೋಲ್ ಪ್ಲಾಝಾದಲ್ಲಿ ಈಗಾಗಲೇ ಪರೀಕ್ಷಾರ್ಥ ಕಾರ್ಯಾಚರಣೆ ನಡೆಸಲಾಗಿದ್ದು, ಇದೀಗ ಅಧಿಕೃತವಾಗಿ ಶುಲ್ಕ ವಸೂಲಿ ಆರಂಭವಾಗಲಿದೆ. ಶುಲ್ಕ ಸಂಗ್ರಹದ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಮಂಗಳೂರಿನ ಕೋರಲ್ ಸಂಸ್ಥೆ ನಿರ್ವಹಣೆಯ ಗುತ್ತಿಗೆ ಪಡೆದುಕೊಂಡಿದೆ. ವಾಹನಗಳಿಗೆ ನಿಗದಿಪಡಿಸಿರುವ ಶುಲ್ಕದ ವಿವರಗಳ ಫಲಕಗಳನ್ನೂ ಹೆದ್ದಾರಿ ಪ್ರಾಧಿಕಾರ ಅಳವಡಿಸಿದೆ.
ಬಿ.ಸಿ. ರೋಡ್–ಅಡ್ಡಹೊಳೆ ಚತುಷ್ಪಥ ಹೆದ್ದಾರಿ ಕಾಮಗಾರಿ ಸುಮಾರು ಶೇ. 95ರಷ್ಟು ಪೂರ್ಣಗೊಂಡಿದೆ. ಉಪ್ಪಿನಂಗಡಿಯಿಂದ ನೆಲ್ಯಾಡಿ ಕಡೆಗೆ ಸುಮಾರು 8 ಕಿ.ಮೀ. ದೂರದಲ್ಲಿರುವ ವಳಾಲಿನಲ್ಲಿ ಟೋಲ್ ಪ್ಲಾಝಾ ನಿರ್ಮಾಣವನ್ನು ಹೆದ್ದಾರಿ ಗುತ್ತಿಗೆ ಸಂಸ್ಥೆ ಕೆಎನ್ಆರ್ ಕನ್ಸ್ಟ್ರಕ್ಷನ್ ನಿರ್ವಹಿಸಿದೆ. ಹೆದ್ದಾರಿಯಲ್ಲಿ ಎರಡೂ ದಿಕ್ಕುಗಳಿಗೆ ತಲಾ ನಾಲ್ಕು ಲೇನ್ಗಳಿದ್ದು, ದ್ವಿಚಕ್ರ ವಾಹನಗಳು ಹಾಗೂ ರಿಕ್ಷಾಗಳ ಸಂಚಾರಕ್ಕೆ ಪ್ರತ್ಯೇಕ ಲೇನ್ಗಳನ್ನು ವ್ಯವಸ್ಥೆಗೊಳಿಸಲಾಗಿದೆ.
ರಾಷ್ಟ್ರೀಯ ಹೆದ್ದಾರಿ 75ರ ಬೆಂಗಳೂರು–ಮಂಗಳೂರು ಮಾರ್ಗದಲ್ಲಿ ನೆಲಮಂಗಲದಿಂದ ಸಕಲೇಶಪುರದವರೆಗೆ ಈಗಾಗಲೇ ಐದು ಟೋಲ್ ಪ್ಲಾಝಾಗಳಿದ್ದು, ಇದೀಗ ದಕ್ಷಿಣ ಕನ್ನಡ ಜಿಲ್ಲೆಯ ವ್ಯಾಪ್ತಿಯಲ್ಲಿ ವಳಾಲು ಟೋಲ್ ಕೂಡ ಸೇರ್ಪಡೆಯಾಗಿದೆ.
ಟೋಲ್ ಶುಲ್ಕ ಎಷ್ಟು?
ಕಾರು, ಜೀಪು, ವ್ಯಾನ್ ಹಾಗೂ ಲಘು ಮೋಟಾರು ವಾಹನಗಳಿಗೆ ಏಕಮುಖ ಪ್ರಯಾಣಕ್ಕೆ 140 ರೂ. ಹಾಗೂ ಅದೇ ದಿನದೊಳಗೆ ಹಿಂದಿರುಗುವ ಪ್ರಯಾಣಕ್ಕೆ 205 ರೂ. ಶುಲ್ಕ ನಿಗದಿಪಡಿಸಲಾಗಿದೆ.
ಟೋಲ್ ಪ್ಲಾಝಾದ ಒಟ್ಟು ಎಂಟು ಲೇನ್ಗಳ ಪೈಕಿ ಆರು ಲೇನ್ಗಳನ್ನು (3+3) ಫಾಸ್ಟ್ಟ್ಯಾಗ್ ಹೊಂದಿರುವ ವಾಹನಗಳಿಗಾಗಿ ಮೀಸಲಿಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ನೋಂದಣಿ ಹೊಂದಿರುವ ವಾಹನಗಳಿಗೆ ಶೇ. 50ರಷ್ಟು ರಿಯಾಯಿತಿ ನೀಡಲಾಗಿದ್ದು, ಟೋಲ್ ಕೇಂದ್ರದ 20 ಕಿ.ಮೀ. ವ್ಯಾಪ್ತಿಯ ನಿವಾಸಿಗಳಿಗೆ 360 ರೂ. ಮಾಸಿಕ ಪಾಸ್ ವ್ಯವಸ್ಥೆ ಇರಲಿದೆ ಎಂದು ಸಂಸ್ಥೆ ತಿಳಿಸಿದೆ.
ಶೀಘ್ರದಲ್ಲೇ ಬ್ರಹ್ಮರಕೂಟ್ಲು ಟೋಲ್ ಗೇಟ್ ತೆರವು
ಇದೇ ವೇಳೆ, ದಶಕಗಳಿಂದ ಕಾರ್ಯಾಚರಿಸುತ್ತಿರುವ ಬ್ರಹ್ಮರಕೂಟ್ಲು ರಾಷ್ಟ್ರೀಯ ಹೆದ್ದಾರಿ ಟೋಲ್ ಗೇಟ್ ಶೀಘ್ರದಲ್ಲೇ ಬಂದ್ ಆಗುವ ಸಾಧ್ಯತೆ ಇದೆ. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಹಿರಿಯ ಅಧಿಕಾರಿಗಳೊಂದಿಗಿನ ಸಮಿತಿ ಸಭೆಯಲ್ಲಿ ಟೋಲ್ ತೆರವಿಗೆ ಅನುಮತಿ ದೊರೆತಿದ್ದು, ಅಧಿಕೃತ ಆದೇಶ ಪ್ರಕಟವಾಗುವುದಷ್ಟೇ ಬಾಕಿ ಇದೆ.
ಬಿ.ಸಿ. ರೋಡ್ನಿಂದ ಬೆಂಗಳೂರು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 75 ಹಾಗೂ ಪುಂಜಾಲಕಟ್ಟೆಯಿಂದ ಚಾರ್ಮಾಡಿ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 73ರ ಅಭಿವೃದ್ಧಿ ಕಾಮಗಾರಿಗಳು ಪೂರ್ಣಗೊಂಡ ಬಳಿಕ ಬ್ರಹ್ಮರಕೂಟ್ಲು ಟೋಲ್ ತೆರವುಗೊಳ್ಳಲಿದೆ. ರಾಷ್ಟ್ರೀಯ ಹೆದ್ದಾರಿ 73ರ ಮಡಂತ್ಯಾರು ಸಮೀಪದ ಪಣಕಜೆ ಬಳಿ ಹೊಸ ಟೋಲ್ ಗೇಟ್ ನಿರ್ಮಾಣವಾಗಲಿದ್ದು, ಅದರೊಂದಿಗೆ ಬ್ರಹ್ಮರಕೂಟ್ಲು ಟೋಲ್ ವಿಲೀನಗೊಳ್ಳಲಿದೆ.
ಸುರತ್ಕಲ್ ಟೋಲ್ ಗೇಟ್ ತೆರವಿನ ಬಳಿಕ ಇದೀಗ ಬ್ರಹ್ಮರಕೂಟ್ಲು ಟೋಲ್ ಕೂಡ ತೆರವುಗೊಳ್ಳುವ ನಿರೀಕ್ಷೆ ಮೂಡಿದ್ದು, ಈ ಭಾಗದ ಪ್ರಯಾಣಿಕರಿಗೆ ದೊಡ್ಡ ನಿರಾಳತೆ ಸಿಗಲಿದೆ.
ಅಧಿಕೃತ ಆದೇಶಕ್ಕಾಗಿ ಕಾಯಲಾಗುತ್ತಿದೆ
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸಮಿತಿಯು ಈ ವಿಚಾರವಾಗಿ ಕಳೆದ ನಾಲ್ಕು ತಿಂಗಳಲ್ಲಿ ಮೂರು ಸಭೆಗಳನ್ನು ನಡೆಸಿದ್ದು, ಅಂತಿಮವಾಗಿ ಟೋಲ್ ತೆರವಿಗೆ ಅನುಮತಿ ದೊರೆತಿದೆ. ಅಧಿಕೃತ ಆದೇಶದ ಪ್ರತಿ ಕೈ ಸೇರಿದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಅಬ್ದುಲ್ಲಾ ಜಾವೆದ್ ಅಝ್ಮಿ ತಿಳಿಸಿದ್ದಾರೆ.
13 ವರ್ಷಗಳಿಂದ ಕಾರ್ಯಾಚರಣೆ
2013ರಲ್ಲಿ ಆರಂಭಗೊಂಡ ಬ್ರಹ್ಮರಕೂಟ್ಲು ಟೋಲ್ ಪ್ಲಾಝಾ ಕಳೆದ 13 ವರ್ಷಗಳಿಂದ ಕಾರ್ಯಾಚರಿಸುತ್ತಿದೆ. ಮಂಗಳೂರು ಬಂದರು ಸಂಪರ್ಕ ಯೋಜನೆಯ ರಸ್ತೆಯ ನಿರ್ವಹಣೆಯ ಭಾಗವಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಈ ಟೋಲ್ ಕೇಂದ್ರವನ್ನು ಆರಂಭಿಸಿತ್ತು. ಇದಕ್ಕೂ ಮೊದಲು ಪಾಣೆಮಂಗಳೂರಿನ ನೇತ್ರಾವತಿ ಸೇತುವೆ ಬಳಿ ಟೋಲ್ ಶುಲ್ಕ ಸಂಗ್ರಹಿಸಲಾಗುತ್ತಿತ್ತು.
ಬ್ರಹ್ಮರಕೂಟ್ಲು ಟೋಲ್ ಗೇಟ್ ಅನ್ನು ಅಂತರದ ಮಾನದಂಡ ಹಾಗೂ ಸಾರ್ವಜನಿಕರ ಬೇಡಿಕೆಯ ಹಿನ್ನೆಲೆಯಲ್ಲಿ ಸ್ಥಳಾಂತರಿಸುವಂತೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯಕ್ಕೆ ಮನವಿ ಸಲ್ಲಿಸಿದ್ದೇನೆ. ಸಚಿವಾಲಯವು ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಶೀಘ್ರದಲ್ಲೇ ಆದೇಶ ಪ್ರಕಟವಾಗುವ ನಿರೀಕ್ಷೆಯಿದೆ ಎಂದು ಸಂಸದ ಕ್ಯಾ. ಬ್ರಿಜೇಶ್ ಚೌಟ ತಿಳಿಸಿದ್ದಾರೆ.
ಅಂತರ ರಾಜ್ಯ
Insurance policy-ವಿಮೆ ಇಲ್ಲದ ವಾಹನಗಳಿಗೆ ಕಡಿವಾಣ: ಹೊಸ ನಿಯಮ ಜಾರಿಗೆ ಕೇಂದ್ರ ಚಿಂತನೆ; ಕಾರಿಗೆ 4 ವರ್ಷ, ಬೈಕ್ಗೆ 6 ವರ್ಷಗಳ ವಿಮೆ
ವಿಮೆ ಇಲ್ಲದೆ ರಸ್ತೆಗಿಳಿಯುವ ವಾಹನಗಳ ಸಮಸ್ಯೆಗೆ ಕಡಿವಾಣ ಹಾಕುವ ಉದ್ದೇಶದಿಂದ ಕೇಂದ್ರ ರಸ್ತೆ ಸಾರಿಗೆ ಸಚಿವಾಲಯವು ಹೊಸ ಕ್ರಮಗಳನ್ನು ಜಾರಿಗೆ ತರಲು ಚಿಂತನೆ ನಡೆಸಿದೆ. ಇದರ ಭಾಗವಾಗಿ ಕಾರುಗಳಿಗೆ ನಾಲ್ಕು ವರ್ಷ ಹಾಗೂ ದ್ವಿಚಕ್ರ ವಾಹನಗಳಿಗೆ ಆರು ವರ್ಷಗಳ ವಿಮಾ ಪಾಲಿಸಿಯನ್ನು ಪರಿಚಯಿಸುವ ಪ್ರಸ್ತಾವವಿದ್ದು, ಈ ಅವಧಿಗೆ ಅನ್ವಯವಾಗುವ ಪ್ರೀಮಿಯಂ ಅನ್ನು ಒಂದೇ ಬಾರಿಗೆ ಪಾವತಿಸುವ ವ್ಯವಸ್ಥೆ ರೂಪಿಸುವ ಕುರಿತು ಚರ್ಚೆ ನಡೆಯುತ್ತಿದೆ.
ಹೊಸದಿಲ್ಲಿ, ನ.25: ವಿಮೆ ಇಲ್ಲದೆ ರಸ್ತೆಗಿಳಿಯುವ ವಾಹನಗಳ ಸಮಸ್ಯೆಗೆ ಕಡಿವಾಣ ಹಾಕುವ ಉದ್ದೇಶದಿಂದ ಕೇಂದ್ರ ರಸ್ತೆ ಸಾರಿಗೆ ಸಚಿವಾಲಯವು ಹೊಸ ಕ್ರಮಗಳನ್ನು ಜಾರಿಗೆ ತರಲು ಚಿಂತನೆ ನಡೆಸಿದೆ. ಇದರ ಭಾಗವಾಗಿ ಕಾರುಗಳಿಗೆ ನಾಲ್ಕು ವರ್ಷ ಹಾಗೂ ದ್ವಿಚಕ್ರ ವಾಹನಗಳಿಗೆ ಆರು ವರ್ಷಗಳ ವಿಮಾ ಪಾಲಿಸಿಯನ್ನು ಪರಿಚಯಿಸುವ ಪ್ರಸ್ತಾವವಿದ್ದು, ಈ ಅವಧಿಗೆ ಅನ್ವಯವಾಗುವ ಪ್ರೀಮಿಯಂ ಅನ್ನು ಒಂದೇ ಬಾರಿಗೆ ಪಾವತಿಸುವ ವ್ಯವಸ್ಥೆ ರೂಪಿಸುವ ಕುರಿತು ಚರ್ಚೆ ನಡೆಯುತ್ತಿದೆ.
ಪ್ರಸ್ತುತ ಹೊಸ ವಾಹನ ಖರೀದಿಸುವಾಗ ನೀಡಲಾಗುವ ವಿಮೆಯ ಅವಧಿ ಮುಗಿದ ಬಳಿಕ ಪ್ರತಿ ವರ್ಷ ವಿಮೆಯನ್ನು ನವೀಕರಿಸಬೇಕಾಗುತ್ತದೆ. ಆದರೆ ಅನೇಕ ವಾಹನ ಮಾಲೀಕರು ವಿಮೆ ನವೀಕರಿಸದೆ ವಾಹನ ಚಲಾಯಿಸುತ್ತಿರುವುದರಿಂದ ಈ ಸಮಸ್ಯೆ ನಿವಾರಿಸಲು ದೀರ್ಘಾವಧಿಯ ವಿಮಾ ಪಾಲಿಸಿಯನ್ನು ಪರಿಚಯಿಸುವ ಚಿಂತನೆ ನಡೆದಿದೆ.
ಇದರೊಂದಿಗೆ, ಹಿಂದಿನ ವರ್ಷ ವಾಹನದ ವಿರುದ್ಧ ದಾಖಲಾಗಿರುವ ನಿರ್ದಿಷ್ಟ ಸಂಚಾರ ನಿಯಮ ಉಲ್ಲಂಘನೆಗಳ ಆಧಾರದ ಮೇಲೆ ವಿಮಾ ಪ್ರೀಮಿಯಂ ಹೆಚ್ಚಿಸುವ ಪ್ರಸ್ತಾವವೂ ಇದೆ.
ಏನೇನು ಪ್ರಸ್ತಾವಗಳಿವೆ?
- ಕಾರುಗಳಿಗೆ ನಾಲ್ಕು ವರ್ಷ ಹಾಗೂ ದ್ವಿಚಕ್ರ ವಾಹನಗಳಿಗೆ ಆರು ವರ್ಷಗಳ ವಿಮಾ ಪಾಲಿಸಿ ಪರಿಚಯಿಸುವ ಚಿಂತನೆ.
- ವಿಮೆಯ ಸಂಪೂರ್ಣ ಅವಧಿಗೆ ಅನ್ವಯವಾಗುವ ಪ್ರೀಮಿಯಂ ಅನ್ನು ಒಂದೇ ಬಾರಿಗೆ ಪಾವತಿಸುವ ವ್ಯವಸ್ಥೆ.
- ಹಿಂದಿನ ವರ್ಷ ವಾಹನದ ವಿರುದ್ಧ ದಾಖಲಾಗಿರುವ ಸಂಚಾರ ನಿಯಮ ಉಲ್ಲಂಘನೆಗಳ ಆಧಾರದ ಮೇಲೆ ವಿಮಾ ಪ್ರೀಮಿಯಂ ಹೆಚ್ಚಳ.
- ‘ವಿಮೆ ಇಲ್ಲದಿದ್ದರೆ ಇಂಧನವಿಲ್ಲ’ ಅಭಿಯಾನ ಆರಂಭಿಸುವಂತೆ ಸುಪ್ರೀಂಕೋರ್ಟ್ನ ರಸ್ತೆ ಸುರಕ್ಷತಾ ಸಮಿತಿ ಸೂಚನೆ.
- ಈ ಅಭಿಯಾನವನ್ನು ಪ್ರಾಯೋಗಿಕವಾಗಿ ಹರಿಯಾಣ ಮತ್ತು ಉತ್ತರ ಪ್ರದೇಶದ ತಲಾ ಐದು ಪೆಟ್ರೋಲ್ ಬಂಕ್ಗಳಲ್ಲಿ ಆರಂಭಿಸಲು ಸಲಹೆ.
- ಪೆಟ್ರೋಲ್ ಬಂಕ್ಗಳಲ್ಲಿ ವಾಹನಗಳ ನಂಬರ್ ಪ್ಲೇಟ್ ಆಧರಿಸಿ ಕ್ಯಾಮೆರಾಗಳ ಮೂಲಕ ವಿಮೆಯ ಮಾನ್ಯತೆಯನ್ನು ಪರಿಶೀಲಿಸುವ ವ್ಯವಸ್ಥೆ.
-
ಬಿಗ್ ನ್ಯೂಸ್15 hours agoRain-ಸುಳ್ಯ-ಪುತ್ತೂರು ಭಾಗಗಳಲ್ಲಿ ಹಲವೆಡೆ ಮಳೆ : ಎಷ್ಟು ದಿನ ಮಳೆಯಾಗಲಿದೆ ಗೊತ್ತೇ..?
-
ಅಪರಾಧ14 hours agoMangalore-ಚಿನ್ನ ಕಳ್ಳಸಾಗಣೆ ಜಾಲ: ಮಂಗಳೂರು ವಿಮಾನ ನಿಲ್ದಾಣದ ಇಬ್ಬರು ಸಿಬ್ಬಂದಿ ಸಹಿತ ಮೂವರು ಡಿಆರ್ಐ ವಶಕ್ಕೆ
-
ಅಂತರ ರಾಜ್ಯ12 hours agoCM post battle-ಉತ್ತರ ಪ್ರದೇಶ ಬಿಜೆಪಿಯಲ್ಲಿ ಸಿಎಂ ಕುರ್ಚಿ ಕದನ: ಚುನಾವಣೆಗೂ ಮುನ್ನವೇ ಭಿನ್ನಮತ?
-
ಸುಳ್ಯ9 hours agoSuresh Raina-ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಸುರೇಶ್ ರೈನಾ ಸುಳ್ಯದ ‘ರಸಪಾಕ ಗ್ರಾಂಡ್’ ಹೋಟೆಲ್ ಗೆ ಭೇಟಿ
-
ನಿಧನ ವಾರ್ತೆ13 hours agoAccident-ಯುಎಇಯಲ್ಲಿ ಭೀಕರ ಬಸ್–ಲಾರಿ ಅಪಘಾತ; ಕಾಸರಗೋಡಿನ ಅಶ್ರಫ್ ಸೇರಿ ನಾಲ್ವರು ಕೇರಳಿಗರು ಸಾವು
-
ಅಂತರ ರಾಜ್ಯ12 hours agoInsurance policy-ವಿಮೆ ಇಲ್ಲದ ವಾಹನಗಳಿಗೆ ಕಡಿವಾಣ: ಹೊಸ ನಿಯಮ ಜಾರಿಗೆ ಕೇಂದ್ರ ಚಿಂತನೆ; ಕಾರಿಗೆ 4 ವರ್ಷ, ಬೈಕ್ಗೆ 6 ವರ್ಷಗಳ ವಿಮೆ
-
ಸ್ಥಳೀಯ9 hours agoUppinangadi-ಉಪ್ಪಿನಂಗಡಿ: ಇಂದಿನಿಂದ ವಳಾಲು ಟೋಲ್ ಕಾರ್ಯಾರಂಭ; ಶೀಘ್ರದಲ್ಲೇ ಬ್ರಹ್ಮರಕೂಟ್ಲು ಟೋಲ್ ಗೇಟ್ ತೆರವು..!
-
ನಿಧನ ವಾರ್ತೆ14 hours agoಮಂಗಳೂರು: ಬೈಕ್ ಢಿಕ್ಕಿಯಿಂದ ಗಾಯಗೊಂಡಿದ್ದ ನರ್ಸಿಂಗ್ ವಿದ್ಯಾರ್ಥಿನಿ ಸಾವು















