ಬಿಗ್ ನ್ಯೂಸ್
HC quashes case-ಲಕೋಟೆಯಲ್ಲಿನ ಹಣ ಲಂಚಕ್ಕೆ ಸಾಕ್ಷಿಯಲ್ಲ -ಹೈಕೋರ್ಟಿನಿಂದ ಕೇಸ್ ರದ್ದು
ಬೆಂಗಳೂರು: ಪೆಟ್ರೋಲಿಯಂ ಸಚಿವಾಲಯದ ಹಿರಿಯ ಅಧಿಕಾರಿ ಎಸ್.ಎಂ. ಮಣ್ಣನ್ ವಿರುದ್ಧ ಸಿಬಿಐ ಹೂಡಿದ್ದ ಲಂಚ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿದೆ.
ಪ್ರಕರಣ ರದ್ದು ಕೋರಿ ಮಣ್ಣನ್ ಸಲ್ಲಿಸಿದ್ದ ಅರ್ಜಿ ಮಾನ್ಯ ಮಾಡಿರುವ ನ್ಯಾ. ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ, ”ಸಿಬಿಐ ಎನ್ವಲಪ್ ಕವರ್ (ಲಕೋಟೆ) ಬಣ್ಣ ಮತ್ತು ಅದರಲ್ಲಿದ್ದ ನಗದು ಆಧರಿಸಿ ಕೇಸ್ ಹೂಡಿದೆ. ಆದರೆ, ಆರೋಪ ಸಾಬೀತುಪಡಿಸಲು ಯಾವುದೇ ಸಾಕ್ಷ್ಯಗಳಿಲ್ಲ,” ಎಂದು ಹೇಳಿ ಪ್ರಕರಣ ರದ್ದುಗೊಳಿಸಿದೆ.
ವಾದ- ಪ್ರತಿವಾದ ಆಲಿಸಿದ ನ್ಯಾಯಾಲಯ,”ಸಿಬಿಐ ಅಧಿಕಾರಿಗಳು ಅವರನ್ನು ಟ್ರ್ಯಾಪ್ ಮಾಡಿಲ್ಲ. ಶೋಧವನ್ನು ಕೂಡ ಕಾನೂನುಬದ್ಧವಾಗಿ ನಡೆಸಿಲ್ಲ. ಅರ್ಜಿದಾರರ ಫೋನ್ ಟ್ಯಾಪ್ ಮಾಡಲು ಅನುಮತಿ ಪಡೆದಿಲ್ಲ. ಇವು ಸುಪ್ರೀಂ ಕೋರ್ಟ್ ತೀರ್ಪಿಗೆ ವಿರುದ್ಧವಾಗಿವೆ. ಈ ಎಲ್ಲಅಂಶ ಗಮನಿಸಿದರೆ ಸಿಬಿಐ, ಲಕೋಟೆಯಲ್ಲಿ ಹಣವಿತ್ತು ಎಂದು ಅರ್ಜಿದಾರರಿಗೆ ಕಳಂಕ ತರಲು ಪ್ರಯತ್ನ ನಡೆಸಿದಂತಿದೆ,” ಎಂದು ಅಭಿಪ್ರಾಯಪಟ್ಟಿದೆ.

”ನಾನು ಹಿರಿಯ ಅಧಿಕಾರಿಗಳ ಮಾತು ಕೇಳಲಿಲ್ಲ ಎಂಬ ಕಾರಣಕ್ಕೆ ದುರುದ್ದೇಶದಿಂದ ಪ್ರಕರಣ ದಾಖಲಿಸಲಾಗಿದೆ. ಮೊಬೈಲ್ ಫೋನ್ ಟ್ಯಾಪ್ ಮಾಡಿದ್ದು ಅಕ್ರಮ. ನಾನು ಲಂಚಕ್ಕೆ ಬೇಡಿಕೆ ಇಟ್ಟಿದ್ದಕ್ಕೆ ಮತ್ತು ಸ್ವೀಕರಿಸಿದ್ದಕ್ಕೆ ಯಾವುದೇ ಸಾಕ್ಷ್ಯವಿಲ್ಲ. ಆದರೆ, ಸಿಬಿಐ ಎನ್ವಲಪ್ನಲ್ಲಿ ಹಣವಿತ್ತು ಎಂದು ಹೇಳುತ್ತಿದೆ. ಆದರೆ, ಅದಕ್ಕೆ ಆಧಾರವಿಲ್ಲ,” ಎಂದು ಅರ್ಜಿದಾರರು ನ್ಯಾಯಾಲಯದ ಮೊರೆ ಹೋಗಿದ್ದರು.
ಪ್ರಕರಣದ ಹಿನ್ನೆಲೆ
ರಾಮನಗರ ಜಿಲ್ಲೆಯಲ್ಲಿ ಎಲ್ಪಿಜಿ ದಾಸ್ತಾನು ಘಟಕದ ಪರವಾನಗಿ ರದ್ದು ಆದೇಶ ಜಾರಿಗೊಳಿಸುವಂತೆ ಸಿಬಿಐ ಡೆಪ್ಯೂಟಿ ಸೂಪರಿಂಟೆಂಡೆಂಟ್ (ಭ್ರಷ್ಟಾಚಾರ ನಿಗ್ರಹ ದಳ) ಗ್ಲಾಡೈಸ್ ಜಯಂತಿ ಅವರು ಮಣ್ಣನ್ಗೆ ನಿರ್ದೇಶನ ನೀಡಿದ್ದರು. ಆ ನಿರ್ದೇಶನ ಪಾಲಿಸಲಾಗದು. ಏಕೆಂದರೆ ಅವರು ಅಕ್ರಮವಾಗಿ ಲೈಸೆನ್ಸ್ ರದ್ದತಿ ಕೋರಿದ್ದಾರೆ ಎಂದು ಅವರು ವಿವರಿಸಿದ್ದರು. ಆದರೆ, ಸಿಬಿಐ ಅಧಿಕಾರಿ ಸಾಂಘವಿ, ಸಿಲಿಂಡರ್ ಪ್ರೈವೇಟ್ ಲಿಮಿಟೆಡ್ಗೆ ಮತ್ತಿಬ್ಬರ ಜತೆ ಭೇಟಿ ನೀಡುವಂತೆ ಸೂಚಿಸಿದ್ದರು.
2019ರ ಸೆ. 22ರಂದು ಸಿಬಿಐ, ಮಣ್ಣನ್ ಅವರ ವಿರುದ್ಧ ಪ್ರಕರಣ ದಾಖಲಿಸಿತ್ತು. ಸೆ.23ರಂದು ಕೇಂದ್ರ ಗೃಹ ಸಚಿವಾಲಯವು ಮಣ್ಣನ್ ಅವರ ಮೊಬೈಲ್ ಟ್ಯಾಪ್ ಮಾಡಲು ಆದೇಶ ನೀಡಿತ್ತು. ಅದರಲ್ಲಿ ಕುಮಾರ್ ಎಂಬುವರು ಮಣ್ಣನ್ ಎಂಬುವರಿಗೆ ಕರೆ ಮಾಡಿದ್ದರು. ಆಗ ಮಣ್ಣನ್ 50 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದ ಸಂಗತಿ ಹೊರಬಿತ್ತು. ಮರು ದಿನ ಮಣ್ಣನ್, ಕುಮಾರ್ ಎಂಬುವರು ಕಳುಹಿಸಿದ್ದ ರಿಷಬ್ ಬಿಪಿನ್ ದೇಸಾಯಿ ಅವರಿಂದ 50 ಸಾವಿರ ರೂ. ಲಂಚ ಪಡೆದರು ಎನ್ನಲಾಗಿದೆ. ಸಿಬಿಐ ಅಧಿಕಾರಿಗಳು ಮಣ್ಣನ್ ಮೇಲೆ ದಾಳಿ ನಡೆಸಿದಾಗ ಎನ್ವಲಪ್ನಲ್ಲಿ 50 ಸಾವಿರ ರೂ. ನಗದು ಇದ್ದುದು ಕಂಡು ಬಂದಿತು. ಹಾಗಾಗಿ, ಸಿಬಿಐ ಅವರ ವಿರುದ್ಧ ಭ್ರಷ್ಟಾಚಾರದ ಆರೋಪ ಹೊರಿಸಿತ್ತು. ಅದನ್ನು ಪ್ರಶ್ನಿಸಿ ಅವರು ಕರ್ನಾಟಕ ಹೈಕೋರ್ಟ್ನ ಮೊರೆ ಹೋಗಿದ್ದರು.
ಸ್ಥಳೀಯ
Dharmasthala-ಪಾಣೇರು ಬಸದಿ ಜೀರ್ಣೋದ್ಧಾರಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ರೂ. 5 ಲಕ್ಷ ಅನುದಾನ
ಪಾಣೆಮಂಗಳೂರಿನಲ್ಲಿರುವ ಭಗವಾನ್ ಶ್ರೀ ಅನಂತನಾಥ ಸ್ವಾಮಿ ಬಸದಿಯ ಜೀರ್ಣೋದ್ಧಾರ ಕಾರ್ಯಕ್ಕಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದ ವತಿಯಿಂದ ರೂ. 5 ಲಕ್ಷ ಅನುದಾನವನ್ನು ನೀಡಲಾಯಿತು. ಶ್ರೀ ಕ್ಷೇತ್ರ ಧರ್ಮಸ್ಥಳದ ಡಿ. ಹರ್ಷೇಂದ್ರ ಕುಮಾರ್ ಅವರು ಬಸದಿಯ ಅರ್ಚಕರಾದ ಧರಣೇಂದ್ರ ಇಂದ್ರ ಅವರಿಗೆ ಅನುದಾನವನ್ನು ಹಸ್ತಾಂತರಿಸಿದರು.
ಉಜಿರೆ: ಪಾಣೆಮಂಗಳೂರಿನಲ್ಲಿರುವ ಭಗವಾನ್ ಶ್ರೀ ಅನಂತನಾಥ ಸ್ವಾಮಿ ಬಸದಿಯ ಜೀರ್ಣೋದ್ಧಾರ ಕಾರ್ಯಕ್ಕಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದ ವತಿಯಿಂದ ರೂ. 5 ಲಕ್ಷ ಅನುದಾನವನ್ನು ನೀಡಲಾಯಿತು.
ಶ್ರೀ ಕ್ಷೇತ್ರ ಧರ್ಮಸ್ಥಳದ ಡಿ. ಹರ್ಷೇಂದ್ರ ಕುಮಾರ್ ಅವರು ಬಸದಿಯ ಅರ್ಚಕರಾದ ಧರಣೇಂದ್ರ ಇಂದ್ರ ಅವರಿಗೆ ಅನುದಾನವನ್ನು ಹಸ್ತಾಂತರಿಸಿ, ಜೀರ್ಣೋದ್ಧಾರ ಕಾರ್ಯವು ಸುಸೂತ್ರವಾಗಿ ನೆರವೇರಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಮಹಾವೀರ ಅಜ್ರಿ ಉಪಸ್ಥಿತರಿದ್ದರು.
ಅಂತರ ರಾಜ್ಯ
WhatsApp-WhatsApp ಬಳಕೆದಾರರಿಗೆ CERT-In ಎಚ್ಚರಿಕೆ; ಡೇಟಾ ಕದಿಯುವ, ಅಳಿಸುವ ಅಪಾಯ..!
ಜನಪ್ರಿಯ ಮೆಸೇಜಿಂಗ್ ಆ್ಯಪ್ WhatsAppನ ವಿವಿಧ ಆವೃತ್ತಿಗಳಲ್ಲಿ ಹಲವು ಭದ್ರತಾ ನ್ಯೂನತೆಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಭಾರತೀಯ ಕಂಪ್ಯೂಟರ್ ತುರ್ತು ಪ್ರತಿಕ್ರಿಯಾ ತಂಡ (CERT-In) ಬಳಕೆದಾರರಿಗೆ ಎಚ್ಚರಿಕೆ ನೀಡಿದೆ. ಈ ದೋಷಗಳನ್ನು ದುರ್ಬಳಕೆ ಮಾಡಿಕೊಂಡು ಹ್ಯಾಕರ್ಗಳು ಸಾಧನಗಳಿಗೆ ಅನಧಿಕೃತ ಪ್ರವೇಶ ಪಡೆಯುವುದರ ಜತೆಗೆ ಸೂಕ್ಷ್ಮ ಮಾಹಿತಿಯನ್ನು ಕದಿಯುವ ಅಥವಾ ಡೇಟಾವನ್ನು ಅಳಿಸುವ ಸಾಧ್ಯತೆಯಿದೆ ಎಂದು ಸಂಸ್ಥೆ ತಿಳಿಸಿದೆ.
ನವದೆಹಲಿ: ಜನಪ್ರಿಯ ಮೆಸೇಜಿಂಗ್ ಆ್ಯಪ್ WhatsAppನ ವಿವಿಧ ಆವೃತ್ತಿಗಳಲ್ಲಿ ಹಲವು ಭದ್ರತಾ ನ್ಯೂನತೆಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಭಾರತೀಯ ಕಂಪ್ಯೂಟರ್ ತುರ್ತು ಪ್ರತಿಕ್ರಿಯಾ ತಂಡ (CERT-In) ಬಳಕೆದಾರರಿಗೆ ಎಚ್ಚರಿಕೆ ನೀಡಿದೆ. ಈ ದೋಷಗಳನ್ನು ದುರ್ಬಳಕೆ ಮಾಡಿಕೊಂಡು ಹ್ಯಾಕರ್ಗಳು ಸಾಧನಗಳಿಗೆ ಅನಧಿಕೃತ ಪ್ರವೇಶ ಪಡೆಯುವುದರ ಜತೆಗೆ ಸೂಕ್ಷ್ಮ ಮಾಹಿತಿಯನ್ನು ಕದಿಯುವ ಅಥವಾ ಡೇಟಾವನ್ನು ಅಳಿಸುವ ಸಾಧ್ಯತೆಯಿದೆ ಎಂದು ಸಂಸ್ಥೆ ತಿಳಿಸಿದೆ.
WhatsApp ನಮ್ಮ ದೈನಂದಿನ ಜೀವನದ ಪ್ರಮುಖ ಸಂವಹನ ಸಾಧನವಾಗಿದ್ದು, ಅದರ ಭದ್ರತೆಗೆ ಸಂಬಂಧಿಸಿದಂತೆ CERT-In ಇದೀಗ ಅಧಿಕ ತೀವ್ರತೆಯ ಸಲಹೆ ನೀಡಿದೆ. Android, iOS, Mac ಹಾಗೂ Windows ಸೇರಿದಂತೆ ವಿವಿಧ ಪ್ಲಾಟ್ಫಾರ್ಮ್ಗಳಲ್ಲಿ ಬಳಕೆಯಾಗುವ WhatsAppನ ಕೆಲವು ಆವೃತ್ತಿಗಳಲ್ಲಿನ ನ್ಯೂನತೆಗಳು ಸೈಬರ್ ದಾಳಿಗೆ ಅವಕಾಶ ಮಾಡಿಕೊಡಬಹುದು ಎಂದು ಎಚ್ಚರಿಸಲಾಗಿದೆ.
ಕೇಂದ್ರ ಸರ್ಕಾರದ ಸೈಬರ್ ಭದ್ರತಾ ಸಂಸ್ಥೆಯ ಪ್ರಕಾರ, ವಿಶೇಷವಾಗಿ ರೂಪಿಸಲಾದ ಸಂದೇಶಗಳು, ಅಟ್ಯಾಚ್ಮೆಂಟ್ಗಳು ಅಥವಾ URL ಲಿಂಕ್ಗಳ ಮೂಲಕ ಈ ದೋಷಗಳನ್ನು ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆಯಿದೆ. ಹೀಗಾಗಿ ಬಳಕೆದಾರರು ಹಾಗೂ ಸಂಸ್ಥೆಗಳು ತಮ್ಮ ಸಾಧನಗಳಲ್ಲಿ WhatsApp ಅನ್ನು ತಕ್ಷಣವೇ ನವೀಕರಿಸಿಕೊಳ್ಳುವಂತೆ ಸಲಹೆ ನೀಡಲಾಗಿದೆ.
ಈ ಹಿಂದೆ ಕೇಂದ್ರ ಗೃಹ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರದ (I4C) ರಾಷ್ಟ್ರೀಯ ಸೈಬರ್ ಅಪರಾಧ ಬೆದರಿಕೆ ವಿಶ್ಲೇಷಣಾ ಘಟಕ (NCTAU) ಕೂಡ WhatsApp ಬಳಕೆಯ ಕುರಿತು ಎಚ್ಚರಿಕೆ ನೀಡಿತ್ತು. ಸಾರ್ವಜನಿಕ ಕಂಪ್ಯೂಟರ್ಗಳಲ್ಲಿ WhatsApp ವೆಬ್ಗೆ ಲಾಗಿನ್ ಮಾಡಿ ಕೆಲಸ ಮುಗಿದ ಬಳಿಕ ಲಾಗ್ಔಟ್ ಮಾಡದೆ ಬಿಟ್ಟರೆ, ಅನಧಿಕೃತ ವ್ಯಕ್ತಿಗಳು ಖಾತೆಯನ್ನು ಪ್ರವೇಶಿಸಿ ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆಯಿದೆ ಎಂದು ತಿಳಿಸಿತ್ತು. ಬ್ರೌಸರ್ ಟ್ಯಾಬ್ ಮುಚ್ಚಿದ ಮಾತ್ರಕ್ಕೆ WhatsApp ವೆಬ್ನಿಂದ ಲಾಗ್ಔಟ್ ಆಗುವುದಿಲ್ಲ ಎಂಬುದನ್ನೂ ಎಚ್ಚರಿಸಿತ್ತು.
WhatsAppನಲ್ಲಿ ಪತ್ತೆಯಾದ ಪ್ರಮುಖ ಭದ್ರತಾ ದೋಷಗಳೇನು?
CERT-In ಸಲಹೆಯಲ್ಲಿ WhatsAppನ ವಿವಿಧ ಆವೃತ್ತಿಗಳಲ್ಲಿನ ಐದು ಭದ್ರತಾ ನ್ಯೂನತೆಗಳನ್ನು ಉಲ್ಲೇಖಿಸಲಾಗಿದೆ.
CVE-2026-102769: Android WhatsAppನಲ್ಲಿ ವಿಶೇಷವಾಗಿ ರೂಪಿಸಲಾದ ಆರ್ಡರ್ ವಿವರಗಳ ಸಂದೇಶಕ್ಕೆ ಸಂಬಂಧಿಸಿದ ಈ ದೋಷವು SQL ಇಂಜೆಕ್ಷನ್ಗೆ ಅವಕಾಶ ನೀಡಬಹುದು. ಸಂದೇಶವನ್ನು ಬಳಕೆದಾರರು ತೆರೆಯುವ ಸಂದರ್ಭದಲ್ಲಿ ಸ್ಥಳೀಯವಾಗಿ ಸಂಗ್ರಹವಾಗಿರುವ ಚಾಟ್ಗಳು, ಮಾಧ್ಯಮ ಹಾಗೂ ಇತರ ಫೈಲ್ಗಳನ್ನು ಅಳಿಸುವ ಅಪಾಯವಿದೆ ಎಂದು ಎಚ್ಚರಿಸಲಾಗಿದೆ. ಸಂದೇಶ ತಲುಪಿದ ಸಮಯ ಹಾಗೂ ಡಬಲ್ ಟಿಕ್ನ ಮಾಹಿತಿಯನ್ನು ಗಮನಿಸುವ ಮೂಲಕ ಚಾಟ್ ಡೇಟಾಬೇಸ್ ಕುರಿತು ಕೆಲವು ಮಾಹಿತಿಯನ್ನು ತಿಳಿದುಕೊಳ್ಳುವ ಸಾಧ್ಯತೆಯೂ ಇದೆ. ಆದರೆ ಈ ದೋಷದ ದುರ್ಬಳಕೆಗೆ ಸಂಬಂಧಿಸಿದ ಯಾವುದೇ ಪುರಾವೆ ಇಲ್ಲ ಎಂದು WhatsApp ತಿಳಿಸಿದೆ.
CVE-2026-44908: Meta AIನ ಕಂಪ್ಯೂಟಿಂಗ್ ವ್ಯವಸ್ಥೆಯೊಂದಿಗೆ ವಿಶ್ವಾಸಾರ್ಹ ಸಂಪರ್ಕ ಸ್ಥಾಪಿಸಲು ಬಳಸುವ ಸರ್ಟಿಫಿಕೇಟ್ ಚೈನ್ ಪರಿಶೀಲನೆಯಲ್ಲಿನ ನ್ಯೂನತೆಗೆ ಈ ದೋಷ ಸಂಬಂಧಿಸಿದೆ. ಇದರಿಂದ ಕೆಲವು ಸಂದರ್ಭಗಳಲ್ಲಿ ಹಾರ್ಡ್ವೇರ್ ಭದ್ರತಾ ವ್ಯವಸ್ಥೆಯನ್ನು ಬೈಪಾಸ್ ಮಾಡುವ ಸಾಧ್ಯತೆ ಇದೆ ಎಂದು ತಿಳಿಸಲಾಗಿದೆ. ಈ ದೋಷವನ್ನು ದುರ್ಬಳಕೆ ಮಾಡಿಕೊಂಡಿರುವ ಪುರಾವೆಯೂ ಇಲ್ಲ ಎಂದು WhatsApp ಹೇಳಿದೆ.
CVE-2026-23871: Android ಸಾಧನಗಳಲ್ಲಿನ ಬಾಹ್ಯ ಜಾಹೀರಾತು-ಪ್ರತಿಕ್ರಿಯೆ URLಗಳಿಗೆ ಸಂಬಂಧಿಸಿದ ಈ ದೋಷವು ವಿಶೇಷವಾಗಿ ರೂಪಿಸಲಾದ ‘Click to WhatsApp’ ಸಂದೇಶಗಳ ಮೂಲಕ ಸಾಧನವು ಹ್ಯಾಕರ್ ನಿಯಂತ್ರಿತ ವಿಳಾಸದಿಂದ ಮಾಧ್ಯಮವನ್ನು ಲೋಡ್ ಮಾಡುವಂತೆ ಮಾಡಬಹುದು. ಇದರಿಂದ ಬಳಕೆದಾರರ IP ವಿಳಾಸ ಬಹಿರಂಗಗೊಳ್ಳುವ ಸಾಧ್ಯತೆಯಿದೆ.
ಇದಲ್ಲದೆ, Instagram Reelಗೆ ಸಂಬಂಧಿಸಿದ AI ಪ್ರತಿಕ್ರಿಯೆಯಲ್ಲಿನ ದುರ್ಬಲತೆಯ ಮೂಲಕ iOS ಅಥವಾ Android ಸಾಧನಗಳಲ್ಲಿ ದುರುದ್ದೇಶಪೂರಿತ ವಿಷಯವನ್ನು ಪ್ರಕ್ರಿಯೆಗೊಳಿಸುವ ಸಾಧ್ಯತೆಯಿರುವ ಮತ್ತೊಂದು ದೋಷವನ್ನೂ ಉಲ್ಲೇಖಿಸಲಾಗಿದೆ.
CVE-2026-23863: Windows WhatsAppನಲ್ಲಿ ದುರುದ್ದೇಶಪೂರಿತ ಅಟ್ಯಾಚ್ಮೆಂಟ್ಗಳನ್ನು ಸಾಮಾನ್ಯ ಫೈಲ್ಗಳಂತೆ ತೋರಿಸಿ, ತೆರೆಯುವಾಗ ಕಾರ್ಯಗತಗೊಳಿಸಬಹುದಾದ ಫೈಲ್ಗಳಾಗಿ ರನ್ ಆಗುವಂತೆ ಮಾಡುವ ನ್ಯೂನತೆ ಇದಾಗಿದೆ. ಈ ದೋಷಗಳ ದುರ್ಬಳಕೆಗೆ ಸಂಬಂಧಿಸಿದ ಪುರಾವೆಗಳು ಇಲ್ಲ ಎಂದು WhatsApp ತಿಳಿಸಿದೆ.
ಸೈಬರ್ ಭದ್ರತಾ ಆತಂಕಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ CERT-In ಬಳಕೆದಾರರು WhatsAppನ ಇತ್ತೀಚಿನ ಆವೃತ್ತಿಯನ್ನು ಬಳಸುವಂತೆ ಹಾಗೂ ಅಪರಿಚಿತ ಸಂದೇಶಗಳು, ಲಿಂಕ್ಗಳು ಮತ್ತು ಅಟ್ಯಾಚ್ಮೆಂಟ್ಗಳನ್ನು ತೆರೆಯುವಾಗ ಎಚ್ಚರಿಕೆ ವಹಿಸುವಂತೆ ಸೂಚಿಸಿದೆ.
ಬಿಗ್ ನ್ಯೂಸ್
Vitla-ವಿಟ್ಲ: ಚಿಕ್ಕಪ್ಪನನ್ನು ಕತ್ತಿಯಿಂದ ಕಡಿದು ಹತ್ಯೆಗೈದ ಯುವತಿ ಬಂಧನ
ಕನ್ಯಾನ ಗ್ರಾಮದ ನಂದರಬೆಟ್ಟು ನಿವಾಸಿ ಚೆನ್ನಯ್ಯ ಪೂಜಾರಿ (45) ಅವರನ್ನು ಕತ್ತಿಯಿಂದ ಕಡಿದು ಕೊಲೆ ಮಾಡಿದ ಆರೋಪದಲ್ಲಿ ರಿಶಿಕಾ (24) ಎಂಬ ಯುವತಿಯನ್ನು ವಿಟ್ಲ ಪೊಲೀಸರು ಬಂಧಿಸಿದ್ದು, ನ್ಯಾಯಾಲಯ ಆಕೆಗೆ ನ್ಯಾಯಾಂಗ ಬಂಧನ ವಿಧಿಸಿದೆ.
ವಿಟ್ಲ: ಕನ್ಯಾನ ಗ್ರಾಮದ ನಂದರಬೆಟ್ಟು ನಿವಾಸಿ ಚೆನ್ನಯ್ಯ ಪೂಜಾರಿ (45) ಅವರನ್ನು ಕತ್ತಿಯಿಂದ ಕಡಿದು ಕೊಲೆ ಮಾಡಿದ ಆರೋಪದಲ್ಲಿ ರಿಶಿಕಾ (24) ಎಂಬ ಯುವತಿಯನ್ನು ವಿಟ್ಲ ಪೊಲೀಸರು ಬಂಧಿಸಿದ್ದು, ನ್ಯಾಯಾಲಯ ಆಕೆಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಚೆನ್ನಯ್ಯ ಪೂಜಾರಿ ಮದ್ಯಪಾನ ಮಾಡಿ ತನ್ನ ಅಣ್ಣನ ಮಗಳಿಗೆ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಈ ಸಂದರ್ಭ ಯುವತಿ ಕತ್ತಿಯಿಂದ ಬೀಸಿದಾಗ ಅದು ಚೆನ್ನಯ್ಯ ಪೂಜಾರಿ ಅವರ ಎದೆಗೆ ತಾಗಿ ಗಂಭೀರ ಗಾಯಗೊಂಡಿದ್ದರು.
ಗಾಯಗೊಂಡ ಅವರನ್ನು ತಕ್ಷಣ ಆಂಬ್ಯುಲೆನ್ಸ್ ಮೂಲಕ ಪುತ್ತೂರಿಗೆ ಕರೆದೊಯ್ಯಲಾಗಿತ್ತು. ಆದರೆ, ಅಲ್ಲಿ ಅವರು ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ.
ಕುಟುಂಬದೊಳಗಿನ ಕಲಹ ಕೊಲೆಯಲ್ಲಿ ಅಂತ್ಯಗೊಂಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ರಿಶಿಕಾಳನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯ ಆಕೆಗೆ ನ್ಯಾಯಾಂಗ ಬಂಧನ ವಿಧಿಸಿದೆ.
-
ನಿಧನ ವಾರ್ತೆ20 hours agoBeltangadi-ಬೆಳ್ತಂಗಡಿ: ವಿಷ ಸೇವಿಸಿ ಚಿಕಿತ್ಸೆ ಫಲಿಸದೆ ಐಟಿಐ ವಿದ್ಯಾರ್ಥಿ ಸಾವು
-
ನಿಧನ ವಾರ್ತೆ19 hours agoKolar-ಕೋಲಾರ: ಹೆದ್ದಾರಿ ಬದಿಯಲ್ಲಿ ಪಾರ್ಸೆಲ್ ರೂಪದಲ್ಲಿ ಮಹಿಳೆಯ ಮೃತದೇಹ ಪತ್ತೆ
-
ಅಂತರ ರಾಜ್ಯ19 hours agoViral video-ಚಲಿಸುತ್ತಿರುವ ರೈಲಿನ AC ಬೋಗಿಯಲ್ಲಿ ದೀಪ ಹಚ್ಚಿ ಆರತಿ, ಶಂಖನಾದ; ವೈರಲ್ ವಿಡಿಯೋಗೆ ರೈಲ್ವೆ ಪ್ರತಿಕ್ರಿಯೆ
-
ನಿಧನ ವಾರ್ತೆ19 hours agoKankanadi-ಶಾಲೆಯಿಂದ ನಡೆದು ಹೋಗುತ್ತಿದ್ದ ಎರಡನೇ ಕ್ಲಾಸ್ ವಿದ್ಯಾರ್ಥಿಗೆ ಖಾಸಗಿ ಬಸ್ ಡಿಕ್ಕಿ; ಕಂಕನಾಡಿಯಲ್ಲಿ ಬಸ್ ಚಾಲಕನ ನಿರ್ಲಕ್ಷ್ಯಕ್ಕೆ ಬಾಲಕ ಬಲಿ
-
ಸ್ಥಳೀಯ20 hours agoArrested-ಕುಂಭಾಶಿ ದೇವಸ್ಥಾನದಲ್ಲಿ ವೃದ್ಧೆಯ ಚಿನ್ನದ ಸರ ಕಳವು; ತಮಿಳುನಾಡಿನ ಮೂವರು ಮಹಿಳೆಯರ ಬಂಧನ
-
ಸ್ಥಳೀಯ13 hours agoRakshit Shivaram-ವಳಾಲು ಟೋಲ್ ದರ ರೂ.250ಕ್ಕೆ ಏರಿಕೆ : ಬಿಜೆಪಿಯವರಿಗೂ ಪಾಲಿದೆಯಾ..? ಶಾಸಕರ ಮೌನಕ್ಕೆ ರಕ್ಷಿತ್ ಶಿವರಾಂ ಗರಂ
-
ಅಂತರ ರಾಜ್ಯ19 hours agoWhatsApp-WhatsApp ಬಳಕೆದಾರರಿಗೆ CERT-In ಎಚ್ಚರಿಕೆ; ಡೇಟಾ ಕದಿಯುವ, ಅಳಿಸುವ ಅಪಾಯ..!
-
ಸ್ಥಳೀಯ18 hours agoDharmasthala-ಪಾಣೇರು ಬಸದಿ ಜೀರ್ಣೋದ್ಧಾರಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ರೂ. 5 ಲಕ್ಷ ಅನುದಾನ















