ಈ ಮಧ್ಯೆ ನೇಹಾ ಮತ್ತು ಫಯಾಜ್ ಗೆಳೆತನಕ್ಕೆ ಸಾಕ್ಷಿ ಎನ್ನುವ […]" /> ಈ ಮಧ್ಯೆ ನೇಹಾ ಮತ್ತು ಫಯಾಜ್ ಗೆಳೆತನಕ್ಕೆ ಸಾಕ್ಷಿ ಎನ್ನುವ […]"> Neha | ಹುಬ್ಬಳ್ಳಿ ಕಾಂಗ್ರೇಸ್‍ ಕಾರ್ಪರೇಟರ್ ಪುತ್ರಿ ನೇಹಾ ಹತ್ಯೆ ಪ್ರಕರಣ - ಫಯಾಜ್ ರುಂಡ ಚೆಂಡಾಡಿದರೆ 10 ಲಕ್ಷ ಬಹುಮಾನ ಘೋಷಣೆ - ನೇಹಾ ಮತ್ತು ಫಯಾಜ್ ಸಲುಗೆಯ ಫೋಟೋ ವೈರಲ್ - Nikhara News | Kannada News Website
Connect with us

ಹುಬ್ಬಳ್ಳಿ

Neha | ಹುಬ್ಬಳ್ಳಿ ಕಾಂಗ್ರೇಸ್‍ ಕಾರ್ಪರೇಟರ್ ಪುತ್ರಿ ನೇಹಾ ಹತ್ಯೆ ಪ್ರಕರಣ – ಫಯಾಜ್ ರುಂಡ ಚೆಂಡಾಡಿದರೆ 10 ಲಕ್ಷ ಬಹುಮಾನ ಘೋಷಣೆ – ನೇಹಾ ಮತ್ತು ಫಯಾಜ್ ಸಲುಗೆಯ ಫೋಟೋ ವೈರಲ್

Published

on

Ad Widget

Ad Widget

Ad Widget

Ad Widget

ಹುಬ್ಬಳ್ಳಿ, ಏ.19: ನಗರದಲ್ಲಿ ಕಾಂಗ್ರೇಸ್‌ ಕಾರ್ಪೊರೇಟರ್ ಪುತ್ರಿ ನೇಹಾ (Neha) ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಫಯಾಜ್ ರುಂಡ ಚೆಂಡಾಡಿದವರಿಗೆ 10 ಲಕ್ಷ ರೂ. ಬಹುಮಾನ ನೀಡುತ್ತೇವೆ ಎಂದು ಜಯ ಕರ್ನಾಟಕ ಸಂಘಟನೆ ಮುಖಂಡ ಇಜಾರಿ ಘೋಷಣೆ ಮಾಡಿದ್ದಾರೆ.

Ad Widget

Ad Widget

Ad Widget

Ad Widget

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಫಯಾಜ್‌ಗೆ ಕಠಿಣ ಶಿಕ್ಷೆ ನೀಡುವಂತೆ ಒತ್ತಾಯಿಸಿ ನಾಳೆ ಹುಬ್ಬಳ್ಳಿ ಬಂದ್ (Hubballi band)​ ಮಾಡುತ್ತೇವೆ ಎಂದು ಹೇಳಿದ್ದಾರೆ.

Ad Widget

Ad Widget alt="Ad Widget"/>

Ad Widget

ಈ ಮಧ್ಯೆ ನೇಹಾ ಮತ್ತು ಫಯಾಜ್ ಗೆಳೆತನಕ್ಕೆ ಸಾಕ್ಷಿ ಎನ್ನುವ ಹಲವು ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದೀಗ ನೇಹಾ ಮತ್ತು ಫಯಾಜ್ ಒಟ್ಟಿಗೆ ಸಲುಗೆಯಿಂದ ಇರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ನೇಹಾ ಹಾಗೂ ಫಯಾಜ್ ಸೇರಿ ಹುಟ್ಟುಹಬ್ಬ ಆಚರಿಸಿಕೊಳ್ಳುವ ವೇಳೆ ಹಾಗು ಇತರ ಫೋಟೋ, ವೀಡಿಯೋಗಳು ವೈರಲ್ ಆಗಿದೆ.

Ad Widget

Ad Widget <> Ad Widget

ಆರೋಪಿ ಫಯಾಜ್ ಹೇಳಿರುವ ಪ್ರಕಾರ ಬಿಸಿಎ ಓದುವಾಗಿನಿಂದಲೂ ಸ್ನೇಹ ಹಾಗೂ ಫಯಾಜ್ ಪರಸ್ಪರ ಪ್ರೀತಿಸುತ್ತಿದ್ದರು. ಇತ್ತೀಚಿಗೆ ನೇಹಾ ತನ್ನನ್ನು ದೂರ ಮಾಡಿದ್ದಳಂತೆ, ಹಾಗಾಗಿ ಫಯಾಜ್ ಇದೆ ಕಾರಣಕ್ಕೆ ನೇಹಾಳನ್ನು ಕೊಲೆ ಮಾಡಿರುವುದಾಗಿ ತಿಳಿಸಿದ್ದಾನೆ.ನೇಹಾ ಹಿರೇಮಠ ಕೊಲೆ ಖಂಡಿಸಿ ಹುಬ್ಬಳ್ಳಿ ಬಂದ್ ಮಾಡುತ್ತೇವೆ. ಯಾರ ಮನೆಯಲ್ಲಿ ಹೆಣ್ಮಕ್ಕಳು ಇದ್ದಾರೋ ಅವರೆಲ್ಲಾ ಬಂದ್ ಬೆಂಬಲಿಸಿ. ಬಂದ್ ಅಂಗವಾಗಿ ಬಿವಿಬಿ ಕಾಲೇಜಿನಿಂದ ಮೆರವಣಿಗೆ ನಡೆಸುತ್ತೇವೆ ಎಂದು ತಿಳಿಸಿದ್ದಾರೆ.

ಖಡಕ್ ಕಾನೂನು, ಖಡಕ್ ಶಿಕ್ಷೆಯಾಗಬೇಕು ಎಂದ ಜೈನಮುನಿ ಗುಣಧರನಂದಿ ಸ್ವಾಮೀಜಿಹುಬ್ಬಳ್ಳಿ ತಾಲೂಕಿನ ವರೂರಿನ ಜೈನಮುನಿ ಗುಣಧರನಂದಿ ಸ್ವಾಮೀಜಿ ಪ್ರತಿಕ್ರಿಯಿಸಿದ್ದು, ನೇಹಾ ಹತ್ಯೆಯಿಂದ ಮಾನಸಿಕವಾಗಿ ನೋವಾಗಿದೆ. ಎಜುಕೇಶನ್ ಕಟ್ಟಡ ಎನ್ನುವುದು ಒಂದು ಮಂದಿರ. ನೇಹಾಗೆ ಶಾಂತಿ ಸಿಗಬೇಕು ಅಂದರೆ ಕೂಡಲೇ ಸರಕಾರ ಕಾನೂನು ಜಾರಿ ಮಾಡಬೇಕು.

Ad Widget

Ad Widget

ಮಂದಿರದಲ್ಲಿ ಆತ ಚುಚ್ಚಿ ಚುಚ್ಚಿ ಕೊಲೆ ಮಾಡಿದ್ದಾನೆ. ಸರ್ಕಾರ ಇದನ್ನು ಹಗುರವಾಗಿ ತಗೆದುಕೊಳ್ಳಬಾರದು ಎಂದು ಹೇಳಿದ್ದಾರೆ.ಇದು ಕರ್ನಾಟಕ ಸಂಸ್ಕ್ರತಿ ಅಲ್ಲ. ಸನ್ಯಾಸಿಗಳ ಹತ್ಯೆ ಆಗಿದೆ. ಸರ್ಕಾರ ವಿಶೇಷ ಕಾಯ್ದೆ ತರಬೇಕು. ಶಾಲೆ ಕಾಲೇಜು ಸುತ್ತ ಎರಡು ಕಿಲೋ ಮೀಟರ್ ಮಾದಕ ಪದಾರ್ಥ ಇರಬಾರದು.

ಮದ್ಯ ಸೇರಿ ಯಾವ ಮಾದಕ ಪದಾರ್ಥಗಳು ಸಿಗಬಾರದು. ಇಂತಹ ಘಟನೆ ಮತ್ತೆ ಕರ್ನಾಟಕದಲ್ಲಿ ಆಗಬಾರದು. ಖಡಕ್ ಕಾನೂನು, ಖಡಕ್ ಶಿಕ್ಷೆಯಾಗಬೇಕು ಎಂದಿದ್ದಾರೆ.

Ad Widget
Click to comment

Leave a Reply

ರಾಜಕೀಯ

Amit Shah-ಹುಬ್ಬಳ್ಳಿಗೆ ಬಂದು ಅನಾರೋಗ್ಯದ ಕಾರಣ ಕೆಎಲ್ಇ ಆಸ್ಪತ್ರೆ ಉದ್ಘಾಟನೆಗೆ ಬಾರದ ಅಮಿತ್ ಶಾ..!

Published

on

Ad Widget

Ad Widget

Ad Widget

Ad Widget

ಕೆಎಲ್‌ಇ ಸಂಸ್ಥೆಯ ವೈದ್ಯಕೀಯ ಮಹಾವಿದ್ಯಾಲಯ, ಕೆಲ್‌ಇ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರ ಉದ್ಘಾಟನೆಗಾಗಿ ಹುಬ್ಬಳ್ಳಿಗೆ ಆಗಮಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಅನಾರೋಗ್ಯದ ಹಿನ್ನೆಲೆಯಲ್ಲಿ ಶನಿವಾರ ನಡೆದ ಸಮಾರಂಭಕ್ಕೆ ಗೈರು ಹಾಜರಾಗಿದ್ದಾರೆ.

Ad Widget

Ad Widget

Ad Widget

Ad Widget

ಹುಬ್ಬಳ್ಳಿ: ಕೆಎಲ್‌ಇ ಸಂಸ್ಥೆಯ ವೈದ್ಯಕೀಯ ಮಹಾವಿದ್ಯಾಲಯ, ಕೆಲ್‌ಇ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರ ಉದ್ಘಾಟನೆಗಾಗಿ ಹುಬ್ಬಳ್ಳಿಗೆ ಆಗಮಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಅನಾರೋಗ್ಯದ ಹಿನ್ನೆಲೆಯಲ್ಲಿ ಶನಿವಾರ ನಡೆದ ಸಮಾರಂಭಕ್ಕೆ ಗೈರು ಹಾಜರಾಗಿದ್ದಾರೆ.

Ad Widget

Ad Widget alt="Ad Widget"/>

Ad Widget

ನಗರದ ಡೆನಿಸನ್ಸ್ ಹೋಟೆಲ್ ನಲ್ಲಿ ಶುಕ್ರವಾರ ರಾತ್ರಿ ತಂಗಿದ್ದ ಅವರು, ಶನಿವಾರ ಬೆಳಗ್ಗೆ ಕೆ.ಎಲ್.ಇ. ಆಸ್ಪತ್ರೆ ಉದ್ಘಾಟನೆ ಸಮಾರಂಭದಲ್ಲಿ ಪಾಲ್ಗೊಳ್ಳುವವರಿದ್ದರು. ಆದರೆ ಅನಾರೋಗ್ಯಕ್ಕೆ ಒಳಗಾದ ಕಾರಣದಿಂದ ಅವರು ಹೋಟೆಲ್ ನಲ್ಲೇ ಉಳಿದುಕೊಂಡಿದ್ದು, ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

Ad Widget

Ad Widget <> Ad Widget

ಈ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಸಂಸದ ಬಸವರಾಜ ಬೊಮ್ಮಾಯಿ, ಮಾಜಿ ಸಚಿವ ಮುರುಗೇಶ ನಿರಾಣಿ, ಸಿ.ಸಿ.ಪಾಟೀಲ, ಈರಣ್ಣ ಕಡಾಡಿ, ಅಭಯ ಪಾಟೀಲ, ರಮೇಶ ಕತ್ತಿ ಹೋಟೆಲ್ ಗೆ ತೆರಳಿ ಅಮಿತ್ ಶಾ ಆರೋಗ್ಯ ವಿಚಾರಿಸಿ ಬಳಿಕ ಆಸ್ಪತ್ರೆ ಉದ್ಘಾಟನೆ ಸಮಾರಂಭಕ್ಕೆ ತೆರಳಿದರು.

Ad Widget
Continue Reading

ರಾಜಕೀಯ

Prahlad Joshi-‘ಧರ್ಮಸ್ಥಳದಲ್ಲಿ ಆಣೆ’ : ಬಿಜೆಪಿಯೊಳಗೆ ಭುಗಿಲೆದ್ದ ಭಿನ್ನಮತ..!

Published

on

Ad Widget

Ad Widget

Ad Widget

Ad Widget

ವಿಧಾನಪರಿಷತ್ ಚುನಾವಣೆಯಲ್ಲಿ ನಡೆದಿದೆ ಎನ್ನಲಾದ ಅಡ್ಡ ಮತದಾನದ ವಿಚಾರ ಈಗ ಬಿಜೆಪಿ ಒಳಗಿನ ಭಿನ್ನಮತವನ್ನು ಬೀದಿಗೆ ತಂದಿದೆ. ಅಡ್ಡ ಮತದಾನ ಮಾಡಿದವರ ಪತ್ತೆಗೆ ‘ಧರ್ಮಸ್ಥಳದಲ್ಲಿ ಆಣೆ-ಪ್ರಮಾಣ’ ಮಾಡುವ ರಾಜ್ಯ ಘಟಕದ ನಿರ್ಧಾರಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

Ad Widget

Ad Widget

Ad Widget

Ad Widget

ಹುಬ್ಬಳ್ಳಿ: ವಿಧಾನಪರಿಷತ್ ಚುನಾವಣೆಯಲ್ಲಿ ನಡೆದಿದೆ ಎನ್ನಲಾದ ಅಡ್ಡ ಮತದಾನದ ವಿಚಾರ ಈಗ ಬಿಜೆಪಿ ಒಳಗಿನ ಭಿನ್ನಮತವನ್ನು ಬೀದಿಗೆ ತಂದಿದೆ. ಅಡ್ಡ ಮತದಾನ ಮಾಡಿದವರ ಪತ್ತೆಗೆ ‘ಧರ್ಮಸ್ಥಳದಲ್ಲಿ ಆಣೆ-ಪ್ರಮಾಣ’ ಮಾಡುವ ರಾಜ್ಯ ಘಟಕದ ನಿರ್ಧಾರಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

Ad Widget

Ad Widget alt="Ad Widget"/>

Ad Widget

ಧರ್ಮಸ್ಥಳವನ್ನು ರಾಜಕೀಯಕ್ಕೆ ಎಳೆಯಬೇಡಿ:
ರವಿವಾರ ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಹ್ಲಾದ್ ಜೋಶಿ, “ಅಡ್ಡ ಮತದಾನದ ಬಗ್ಗೆ ರಾಜ್ಯಾಧ್ಯಕ್ಷರು ಮನನೊಂದು ಆಣೆ-ಪ್ರಮಾಣದ ಮಾತುನ್ನಾಡಿದ್ದಾರೆ. ಆದರೆ, ಇಂತಹ ರಾಜಕೀಯ ವಿಚಾರಗಳಿಗೆ ಪವಿತ್ರ ಧರ್ಮಸ್ಥಳದಂತಹ ಶ್ರದ್ಧಾ ಕೇಂದ್ರಗಳನ್ನು ಎಳೆದು ತರುವುದು ಸರಿಯಲ್ಲ. ಈ ಬಗ್ಗೆ ನಾನು ರಾಜ್ಯಾಧ್ಯಕ್ಷರೊಂದಿಗೆ ಮಾತನಾಡಿದ್ದು, ಆಣೆ-ಪ್ರಮಾಣದ ಹಠ ಕೈಬಿಡುವಂತೆ ಸೂಚಿಸಿದ್ದೇನೆ” ಎಂದರು.

Ad Widget

Ad Widget <> Ad Widget

ಪಕ್ಷದೊಳಗೆ ಈಗಾಗಲೇ ಸತ್ಯಶೋಧನಾ ಸಮಿತಿ ರಚನೆಯಾಗಿದ್ದು, ಅದರ ಮೂಲಕವೇ ತಪ್ಪಿತಸ್ಥರನ್ನು ಪತ್ತೆಹಚ್ಚಬೇಕು. ಸದ್ಯಕ್ಕೆ ಸತ್ಯ ಹೊರಬರದಿದ್ದರೂ ಮುಂದೊಂದು ದಿನ ಖಂಡಿತ ಗೊತ್ತಾಗುತ್ತದೆ, ಆಗ ಕ್ರಮ ಕೈಗೊಳ್ಳಬಹುದು ಎಂದು ಅವರು ಅಭಿಪ್ರಾಯಪಟ್ಟರು.

ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ:
ಇದೇ ವೇಳೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ‘ಹಿಂದೂ ರಾಷ್ಟ್ರ’ ಕುರಿತಾದ ಹೇಳಿಕೆಗೆ ತಿರುಗೇಟು ನೀಡಿದ ಜೋಶಿ, “ಭಾರತ ಒಂದು ಹಿಂದೂ ರಾಷ್ಟ್ರ ಎಂಬ ಕನಿಷ್ಠ ಜ್ಞಾನ ಸಿದ್ದರಾಮಯ್ಯ ಅವರಿಗೆ ಇಲ್ಲದಂತಿದೆ. ಭಾರತ ಹಿಂದೂ ರಾಷ್ಟ್ರವಾಗಿ ಉಳಿದಿದ್ದಕ್ಕೇ ಇಲ್ಲಿ ಪ್ರಜಾಪ್ರಭುತ್ವ ಜೀವಂತವಾಗಿದೆ. ನಮ್ಮ ಜೊತೆಗೇ ಸ್ವಾತಂತ್ರ್ಯ ಪಡೆದ ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳ ಸ್ಥಿತಿ ಏನಾಗಿದೆ ಎಂಬುದನ್ನು ಅವರು ಗಮನಿಸಲಿ” ಎಂದು ಕಿಡಿಕಾರಿದರು.

Ad Widget

Ad Widget

ಪುತ್ರವ್ಯಾಮೋಹದ ವ್ಯಂಗ್ಯ:
ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರ ರಾಜಕೀಯ ಬೆಳವಣಿಗೆಯ ಬಗ್ಗೆಯೂ ವ್ಯಂಗ್ಯವಾಡಿದ ಜೋಶಿ, “ಹೇಗೋ ಕಷ್ಟಪಟ್ಟು ತಮ್ಮ ಮಗನನ್ನು ಮಂತ್ರಿ ಮಾಡಿದ್ದಾರೆ, ಮುಂದಿನ ದಿನಗಳಲ್ಲಿ ಅವರನ್ನೇ ಮುಖ್ಯಮಂತ್ರಿಯನ್ನಾಗಿಯೂ ಮಾಡಲಿ” ಎಂದು ಲೇವಡಿ ಮಾಡಿದರು

Ad Widget
Continue Reading

ಬಿಗ್ ನ್ಯೂಸ್

HUBBALLI:-ಹುಬ್ಬಳ್ಳಿ: ಜೆಸಿಬಿ ರಿಪೇರಿ ಮಾಡುತ್ತಿದ್ದ ವ್ಯಕ್ತಿಗೆ ಕಾರು ಡಿಕ್ಕಿ; ದೇಹದಿಂದ ಬೇರ್ಪಟ್ಟು ಕಾರಿನ ಇಂಜಿನ್‌ನಲ್ಲಿ ಸಿಲುಕಿದ ಜೆಸಿಬಿ ಚಾಲಕನ ರುಂಡ..!

Published

on

Ad Widget

Ad Widget

Ad Widget

Ad Widget

ಹುಬ್ಬಳ್ಳಿ ಜಿಲ್ಲೆಯ ಕುಂದಗೋಳ ರಸ್ತೆಯ ಶೆರೆವಾಡ ಗ್ರಾಮದ ಬಳಿ ಎದೆನಡುಗಿಸುವಂತಹ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ರಸ್ತೆ ಬದಿಯಲ್ಲಿ ಕೆಟ್ಟು ನಿಂತಿದ್ದ ಜೆಸಿಬಿ ಯಂತ್ರವನ್ನು ದುರಸ್ತಿ ಮಾಡುತ್ತಿದ್ದ ವ್ಯಕ್ತಿಗೆ ಅತಿ ವೇಗವಾಗಿ ಬಂದ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ, ವ್ಯಕ್ತಿಯ ರುಂಡವು ದೇಹದಿಂದ ಬೇರ್ಪಟ್ಟು ಕಾರಿನ ಇಂಜಿನ್ ಒಳಗೆ ಸಿಲುಕಿಕೊಂಡಿರುವ ದಾರುಣ ಘಟನೆ ನಡೆದಿದೆ. ಮೃತ ವ್ಯಕ್ತಿಯನ್ನು ಶೆರೆವಾಡ ಗ್ರಾಮದ ನಿವಾಸಿ ಸದಾನಂದ ಕಟೇಗಾರ (32) ಎಂದು ಗುರುತಿಸಲಾಗಿದೆ.

Ad Widget

Ad Widget

Ad Widget

Ad Widget

ಹುಬ್ಬಳ್ಳಿ: ಜಿಲ್ಲೆಯ ಕುಂದಗೋಳ ರಸ್ತೆಯ ಶೆರೆವಾಡ ಗ್ರಾಮದ ಬಳಿ ಎದೆನಡುಗಿಸುವಂತಹ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ರಸ್ತೆ ಬದಿಯಲ್ಲಿ ಕೆಟ್ಟು ನಿಂತಿದ್ದ ಜೆಸಿಬಿ ಯಂತ್ರವನ್ನು ದುರಸ್ತಿ ಮಾಡುತ್ತಿದ್ದ ವ್ಯಕ್ತಿಗೆ ಅತಿ ವೇಗವಾಗಿ ಬಂದ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ, ವ್ಯಕ್ತಿಯ ರುಂಡವು ದೇಹದಿಂದ ಬೇರ್ಪಟ್ಟು ಕಾರಿನ ಇಂಜಿನ್ ಒಳಗೆ ಸಿಲುಕಿಕೊಂಡಿರುವ ದಾರುಣ ಘಟನೆ ನಡೆದಿದೆ.

Ad Widget

Ad Widget alt="Ad Widget"/>

Ad Widget

ಮೃತ ವ್ಯಕ್ತಿಯನ್ನು ಶೆರೆವಾಡ ಗ್ರಾಮದ ನಿವಾಸಿ ಸದಾನಂದ ಕಟೇಗಾರ (32) ಎಂದು ಗುರುತಿಸಲಾಗಿದೆ.

Ad Widget

Ad Widget <> Ad Widget

ಘಟನೆಯ ವಿವರ:
ತಾಂತ್ರಿಕ ದೋಷದಿಂದಾಗಿ ರಸ್ತೆಯ ಪಕ್ಕದಲ್ಲಿ ನಿಂತಿದ್ದ ಜೆಸಿಬಿ ಯಂತ್ರವನ್ನು ಸರಿಪಡಿಸಲು ಸದಾನಂದ ಅವರು ಕೆಳಕ್ಕೆ ಬಾಗಿದ್ದರು. ಈ ಸಮಯದಲ್ಲಿ ಕುಂದಗೋಳ ಕಡೆಯಿಂದ ಅತಿ ವೇಗವಾಗಿ ಬಂದ ಕಾರು ಚಾಲಕನ ನಿಯಂತ್ರಣ ತಪ್ಪಿ ನೇರವಾಗಿ ಸದಾನಂದ ಅವರಿಗೆ ಡಿಕ್ಕಿ ಹೊಡೆದಿದೆ.

ಭೀಕರ ದೃಶ್ಯ ಕಂಡು ಬೆಚ್ಚಿಬಿದ್ದ ಜನರು:
ಅಪಘಾತದ ತೀವ್ರತೆ ಎಷ್ಟಿತ್ತೆಂದರೆ, ಡಿಕ್ಕಿಯ ರಭಸಕ್ಕೆ ಸದಾನಂದ ಅವರ ರುಂಡವು ಕತ್ತರಿಸಿ ದೇಹದಿಂದ ಬೇರ್ಪಟ್ಟಿದೆ. ಕತ್ತರಿಸಲ್ಪಟ್ಟ ರುಂಡವು ಕಾರಿನ ಮುಂಭಾಗದ ಬಾನೆಟ್ ಸೀಳಿಕೊಂಡು ನೇರವಾಗಿ ಇಂಜಿನ್ ಒಳಗೆ ಹೋಗಿ ಸಿಲುಕಿಕೊಂಡಿದೆ. ಅಪಘಾತದ ನಂತರ ಕಾರು ನಿಂತಾಗ ಈ ಭಯಾನಕ ದೃಶ್ಯವನ್ನು ಕಂಡ ಸ್ಥಳೀಯರು ಹೌಹಾರಿದ್ದಾರೆ.

Ad Widget

Ad Widget

ಐವರಿಗೆ ಗಾಯ:
ಅಪಘಾತಕ್ಕೀಡಾದ ಕಾರಿನಲ್ಲಿ ಐವರು ಪ್ರಯಾಣಿಸುತ್ತಿದ್ದರು ಎನ್ನಲಾಗಿದ್ದು, ಡಿಕ್ಕಿಯ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಕಾರಿನಲ್ಲಿದ್ದ ಐವರಿಗೂ ಸಣ್ಣಪುಟ್ಟ ಗಾಯಗಳಾಗಿದ್ದು, ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ವಿಷಯ ತಿಳಿಯುತ್ತಿದ್ದಂತೆಯೇ ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇಂಜಿನ್‌ನಲ್ಲಿ ಸಿಲುಕಿದ್ದ ರುಂಡವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಕಾರು ಚಾಲಕನ ಅಜಾಗರೂಕತೆ ಮತ್ತು ಅತಿ ವೇಗವೇ ಈ ದುರಂತಕ್ಕೆ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

Ad Widget
Continue Reading

ಇಂದಿನ ಟ್ರೆಂಡಿಂಗ್‌ ಸುದ್ದಿಗಳು

error: Content is protected !!