ಸ್ಥಳೀಯ
Eshwarappa-Raghavendra-RSS ಯುಗಾದಿ ಕಾರ್ಯಕ್ರಮದಲ್ಲಿ ಪರಸ್ಪರ ಮಾತುಕತೆ ಇಲ್ಲದೆ ಭಾಗವಹಿಸಿದ ಈಶ್ವರಪ್ಪ-ರಾಘವೇಂದ್ರ
ಶಿವಮೊಗ್ಗ: ಹಾವೇರಿ ಲೋಕಸಭಾ ಕ್ಷೇತದಲ್ಲಿ ತಮ್ಮ ಪುತ್ರ ಕಾಂತೇಶ್ ಗೆ ಟಿಕೆಟ್ ಸಿಗದ್ದಕ್ಕೆ ಅಸಮಾಧಾನಗೊಂಡ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಪಕ್ಷೇತರರಾಗಿ ಕಣಕ್ಕಿಳಿದಿರುವ ಹಿರಿಯ ಬಿಜೆಪಿ ಮುಖಂಡ ಕೆಎಸ್ ಈಶ್ವರಪ್ಪ ಅವರು ಮಂಗಳವಾರ ಆರೆಸ್ಸೆಸ್ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡರು. ಅದೇ ಕಾರ್ಯಕ್ರಮದಲ್ಲಿ ಸಂಸದ ಬಿ. ವೈ. ರಾಘವೇಂದ್ರ ಅವರು ಭಾಗವಹಿಸಿದ್ದರೂ ಇಬ್ಬರೂ ಪರಸ್ಪರ ಮಾತನಾಡಲಿಲ್ಲ.
ರಾಷ್ಟ್ರೀಯ ಸ್ವಯಂಸೇವಕ ಸಂಘವು ಶಿವಮೊಗ್ಗದ ಆದಿಚುಂಚನಗಿರಿ ಶಾಲೆಯ ಆವರಣದಲ್ಲಿ ಯುಗಾದಿ ಹಬ್ಬದ ಪ್ರಯುಕ್ತ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಈಶ್ವರಪ್ಪ ಮತ್ತು ರಾಘವೇಂದ್ರ ಇಬ್ಬರೂ ಗಣವೇಷಧಾರಿಗಳಾಗಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವೇಳೆ ತೀರ ಸಮೀಪದಲ್ಲೇ ಇದ್ದರೂ ಪರಸ್ಪರ ಮಾತನಾಡಲಿಲ್ಲ. ಬಿ.ವೈ. ರಾಘವೇಂದ್ರ ಅವರು ಮಧ್ಯದ ಸಾಲಿನಲ್ಲಿ ಲವಲವಿಕೆಯಿಂದ ಕುಳಿತಿದ್ದು ಕಂಡುಬಂದರೆ, ಈಶ್ವರಪ್ಪ ಅವರು ಕೊನೆಯ ಸಾಲಿನಲ್ಲಿ ಗಂಭೀರವದನರಾಗಿ ಕುಳಿತಿದ್ದರು.
ಬಿಎಸ್ ವೈ ಕುಟುಂಬದ ವಿರುದ್ಧ ಆಕ್ರೋಶ: ಶಿವಮೊಗ್ಗದಲ್ಲಿ ಬಂಡಾಯ ಸ್ಪರ್ಧೆಗೆ ಮುಂದಾಗಿರುವ ಈಶ್ವರಪ್ಪ ಅವರು, ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮತ್ತು ಅವರ ಕುಟುಂಬದ ವಿರುದ್ಧ ಸಿಡಿದೆದ್ದು ಅವರ ಪುತ್ರನಾಗಿರುವ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಅವರನ್ನು ಸೋಲಿಸುವುದಾಗಿ ಹಠ ಹಿಡಿದಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಗಿ ಪಟ್ಟು ಹಿಡಿದಿರುವ ಅವರು ಬಿಜೆಪಿಯ ಹಲವು ಮುಖಂಡರನ್ನು ಭೇಟಿ ಮಾಡಿ ಸಂಧಾನ ಮಾತುಕತೆ ಗೆ ಯತ್ನಿಸಿದರೂ ತಮ್ಮ ನಿಲುವಿನಿಂದ ಹಿಂದೆ ಸರಿದಿಲ್ಲ.
ವಾತಾವರಣ ಹಾಳುಗೆಡವುತ್ತಿರುವ ಅಪ್ಪ-ಮಕ್ಕಳ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಅವರು ಕುಟುಂಬ ರಾಜಕಾರಣದ ವಿರೋಧಿಯಾಗಿದ್ದಾರೆ. ಅವರು ಹೇಳಿದ್ದನ್ನೇ ನಾನು ಇಲ್ಲಿ ಹೇಳುತ್ತಿದ್ದೇನೆ. ನನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ. ತನ್ನ ಸ್ಪರ್ಧೆ ಬಿಜೆಪಿ ವಿರುದ್ಧ ಅಲ್ಲ, ರಾಜ್ಯ ಬಿಜೆಪಿಯನ್ನು ತಮ್ಮ ಹಿಡಿತದಲ್ಲಿಟ್ಟುಕೊಂಡಿರುವ ಅಪ್ಪ ಮಕ್ಕಳ ವಿರುದ್ದ ಎಂದಿದ್ದರು. ಕರ್ನಾಟಕದ 27 ಕ್ಷೇತ್ರಗಳಲ್ಲೂ ಬಿಜೆಪಿ ಅಭ್ಯರ್ಥಿಗಳು ಜಯ ಗಳಿಸಲಿದ್ದಾರೆ. ಶಿವಮೊಗ್ಗದಲ್ಲಿ ನಾನು ಗೆದ್ದು ಬಿಜೆಪಿ ಸೇರುವುದಾಗಿ ತಿಳಿಸಿದರು.
ದಿಲ್ಲಿಗೆ ಕರೆದು ಮಾತನಾಡದೆ ಕಳಿಸಿದ್ದ ಶಾ
ಹಿಂದುತ್ವದ ಅಡಿ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ತಿಳಿಸಿರುವ ಅವರು ಇತ್ತೇಚೆಗೆ ಶಿಕಾರಿಪುರ, ತೀರ್ಥಹಳ್ಳಿ ಸೇರಿದಂತೆ ಅನೇಕ ಕಡೆ ಭೇಟಿ ನೀಡಿದ್ದ ವೇಳೆ ಹಿಂದೂಪರ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿದ್ದವು. ಈ ವೇಳೆ ಎಚ್ಚೆತ್ತ ಬಿಜೆಪಿ ಸಂಧಾನಕ್ಕೆ ಯತ್ನಿಸಿತ್ತು. ಈಶ್ವರಪ್ಪ ಅವರನ್ನು ಮಾತುಕತೆ ನಡೆಸುವ ಸಲುವಾಗಿ ಪ್ರಭಾವಿ ಹೈಕಮಾಂಡ್ ನಾಯಕರಾಗಿರುವ ಗೃಹ ಸಚಿವ ಅಮಿತ್ ಶಾ ಅವರು ದಿಲ್ಲಿಗೆ ಕರೆಸಿಕೊಂಡಿದ್ದರು. ಆದರೆ ಅದರಂತೆ ದಿಲ್ಲಿಗೆ ಹೋಗಿದ್ದ ಅವರನ್ನು ಅಮಿತ್ ಶಾ ಭೇಟಿ ಮಾಡದೆ ವಾಪಸ್ ಕಳಿಸಿದ್ದರು.
ಸುಳ್ಯ
Suresh Raina-ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಸುರೇಶ್ ರೈನಾ ಸುಳ್ಯದ ‘ರಸಪಾಕ ಗ್ರಾಂಡ್’ ಹೋಟೆಲ್ ಗೆ ಭೇಟಿ
ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಹಾಗೂ ಖ್ಯಾತ ಕ್ರಿಕೆಟಿಗ ಸುರೇಶ್ ರೈನಾ ಸುಳ್ಯಕ್ಕೆ ಭೇಟಿ ನೀಡಿದರು. ಮಡಿಕೇರಿಗೆ ಪ್ರವಾಸ ಬಂದಿದ್ದ ರೈನಾ ಮಂಗಳೂರು ವಿಮಾನ ನಿಲ್ದಾಣದಿಂದ ಮಡಿಕೇರಿ ತೆರಳುವ ಮಾರ್ಗಮಧ್ಯೆ ಬುಧವಾರ ರಾತ್ರಿ ಸುಳ್ಯದ ‘ಶ್ರೀಕೃಷ್ಣ ರಸಪಾಕ ಗ್ರಾಂಡ್ ಹೋಟೆಲ್’ ಗೆ ಆಗಮಿಸಿದ ಅವರು, ಕೆಲಕಾಲ ತಂಗಿ ಚಹಾ ಸೇವಿಸಿ ಮುಂದಿನ ಪ್ರಯಾಣ ಬೆಳೆಸಿದರು.
ಸುಳ್ಯ: ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಹಾಗೂ ಖ್ಯಾತ ಕ್ರಿಕೆಟಿಗ ಸುರೇಶ್ ರೈನಾ ಸುಳ್ಯಕ್ಕೆ ಭೇಟಿ ನೀಡಿದರು.
ಮಡಿಕೇರಿಗೆ ಪ್ರವಾಸ ಬಂದಿದ್ದ ರೈನಾ ಮಂಗಳೂರು ವಿಮಾನ ನಿಲ್ದಾಣದಿಂದ ಮಡಿಕೇರಿ ತೆರಳುವ ಮಾರ್ಗಮಧ್ಯೆ ಬುಧವಾರ ರಾತ್ರಿ ಸುಳ್ಯದ ‘ಶ್ರೀಕೃಷ್ಣ ರಸಪಾಕ ಗ್ರಾಂಡ್ ಹೋಟೆಲ್’ ಗೆ ಆಗಮಿಸಿದ ಅವರು, ಕೆಲಕಾಲ ತಂಗಿ ಚಹಾ ಸೇವಿಸಿ ಮುಂದಿನ ಪ್ರಯಾಣ ಬೆಳೆಸಿದರು.
ಈ ಸಂದರ್ಭದಲ್ಲಿ ಹೋಟೆಲ್ ಮಾಲಕರಾದ ನಾರಾಯಣ ಕೇಕಡ್ಕ ಹಾಗೂ ಸಿಬ್ಬಂದಿ ಸುರೇಶ್ ರೈನಾ ಅವರನ್ನು ಆತ್ಮೀಯವಾಗಿ ಸ್ವಾಗತಿಸಿದರು.
ಇತ್ತಿಚೆಗಷ್ಟೇ ರಸಪಾಕ ಗ್ರಾಂಡ್ ಗೆ ಇನ್ಫೋಸೀಸ್ ಪ್ರತಿಷ್ಠಾನದ ಸುಧಾಮೂರ್ತಿ ಸಹಿತ ಹಲವು ಸೆಲೆಬ್ರಿಟಿಗಳು ಭೇಟಿ ನೀಡುತ್ತಿದ್ದಾರೆ.
ಸ್ಥಳೀಯ
Uppinangadi-ಉಪ್ಪಿನಂಗಡಿ: ಇಂದಿನಿಂದ ವಳಾಲು ಟೋಲ್ ಕಾರ್ಯಾರಂಭ; ಶೀಘ್ರದಲ್ಲೇ ಬ್ರಹ್ಮರಕೂಟ್ಲು ಟೋಲ್ ಗೇಟ್ ತೆರವು..!
ಬಿ.ಸಿ. ರೋಡ್–ಅಡ್ಡಹೊಳೆ ಚತುಷ್ಪಥ ಕಾಂಕ್ರೀಟ್ ಹೆದ್ದಾರಿ ಅಭಿವೃದ್ಧಿ ಯೋಜನೆಯ ಭಾಗವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪದ ಬಜತ್ತೂರು ಗ್ರಾಮದ ವಳಾಲಿನಲ್ಲಿ ನಿರ್ಮಿಸಿರುವ ಹೊಸ ಟೋಲ್ ಪ್ಲಾಝಾ ನ. 26ರಂದು ಬೆಳಗ್ಗೆ 8 ಗಂಟೆಯಿಂದ ಅಧಿಕೃತವಾಗಿ ಕಾರ್ಯಾರಂಭಿಸಲಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತಿಳಿಸಿದೆ.
ಉಪ್ಪಿನಂಗಡಿ: ಬಿ.ಸಿ. ರೋಡ್–ಅಡ್ಡಹೊಳೆ ಚತುಷ್ಪಥ ಕಾಂಕ್ರೀಟ್ ಹೆದ್ದಾರಿ ಅಭಿವೃದ್ಧಿ ಯೋಜನೆಯ ಭಾಗವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪದ ಬಜತ್ತೂರು ಗ್ರಾಮದ ವಳಾಲಿನಲ್ಲಿ ನಿರ್ಮಿಸಿರುವ ಹೊಸ ಟೋಲ್ ಪ್ಲಾಝಾ ನ. 26ರಂದು ಬೆಳಗ್ಗೆ 8 ಗಂಟೆಯಿಂದ ಅಧಿಕೃತವಾಗಿ ಕಾರ್ಯಾರಂಭಿಸಲಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತಿಳಿಸಿದೆ.
ವಳಾಲು ಟೋಲ್ ಪ್ಲಾಝಾದಲ್ಲಿ ಈಗಾಗಲೇ ಪರೀಕ್ಷಾರ್ಥ ಕಾರ್ಯಾಚರಣೆ ನಡೆಸಲಾಗಿದ್ದು, ಇದೀಗ ಅಧಿಕೃತವಾಗಿ ಶುಲ್ಕ ವಸೂಲಿ ಆರಂಭವಾಗಲಿದೆ. ಶುಲ್ಕ ಸಂಗ್ರಹದ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಮಂಗಳೂರಿನ ಕೋರಲ್ ಸಂಸ್ಥೆ ನಿರ್ವಹಣೆಯ ಗುತ್ತಿಗೆ ಪಡೆದುಕೊಂಡಿದೆ. ವಾಹನಗಳಿಗೆ ನಿಗದಿಪಡಿಸಿರುವ ಶುಲ್ಕದ ವಿವರಗಳ ಫಲಕಗಳನ್ನೂ ಹೆದ್ದಾರಿ ಪ್ರಾಧಿಕಾರ ಅಳವಡಿಸಿದೆ.
ಬಿ.ಸಿ. ರೋಡ್–ಅಡ್ಡಹೊಳೆ ಚತುಷ್ಪಥ ಹೆದ್ದಾರಿ ಕಾಮಗಾರಿ ಸುಮಾರು ಶೇ. 95ರಷ್ಟು ಪೂರ್ಣಗೊಂಡಿದೆ. ಉಪ್ಪಿನಂಗಡಿಯಿಂದ ನೆಲ್ಯಾಡಿ ಕಡೆಗೆ ಸುಮಾರು 8 ಕಿ.ಮೀ. ದೂರದಲ್ಲಿರುವ ವಳಾಲಿನಲ್ಲಿ ಟೋಲ್ ಪ್ಲಾಝಾ ನಿರ್ಮಾಣವನ್ನು ಹೆದ್ದಾರಿ ಗುತ್ತಿಗೆ ಸಂಸ್ಥೆ ಕೆಎನ್‌ಆರ್ ಕನ್ಸ್ಟ್ರಕ್ಷನ್ ನಿರ್ವಹಿಸಿದೆ. ಹೆದ್ದಾರಿಯಲ್ಲಿ ಎರಡೂ ದಿಕ್ಕುಗಳಿಗೆ ತಲಾ ನಾಲ್ಕು ಲೇನ್‌ಗಳಿದ್ದು, ದ್ವಿಚಕ್ರ ವಾಹನಗಳು ಹಾಗೂ ರಿಕ್ಷಾಗಳ ಸಂಚಾರಕ್ಕೆ ಪ್ರತ್ಯೇಕ ಲೇನ್‌ಗಳನ್ನು ವ್ಯವಸ್ಥೆಗೊಳಿಸಲಾಗಿದೆ.
ರಾಷ್ಟ್ರೀಯ ಹೆದ್ದಾರಿ 75ರ ಬೆಂಗಳೂರು–ಮಂಗಳೂರು ಮಾರ್ಗದಲ್ಲಿ ನೆಲಮಂಗಲದಿಂದ ಸಕಲೇಶಪುರದವರೆಗೆ ಈಗಾಗಲೇ ಐದು ಟೋಲ್ ಪ್ಲಾಝಾಗಳಿದ್ದು, ಇದೀಗ ದಕ್ಷಿಣ ಕನ್ನಡ ಜಿಲ್ಲೆಯ ವ್ಯಾಪ್ತಿಯಲ್ಲಿ ವಳಾಲು ಟೋಲ್ ಕೂಡ ಸೇರ್ಪಡೆಯಾಗಿದೆ.
ಟೋಲ್ ಶುಲ್ಕ ಎಷ್ಟು?
ಕಾರು, ಜೀಪು, ವ್ಯಾನ್ ಹಾಗೂ ಲಘು ಮೋಟಾರು ವಾಹನಗಳಿಗೆ ಏಕಮುಖ ಪ್ರಯಾಣಕ್ಕೆ 140 ರೂ. ಹಾಗೂ ಅದೇ ದಿನದೊಳಗೆ ಹಿಂದಿರುಗುವ ಪ್ರಯಾಣಕ್ಕೆ 205 ರೂ. ಶುಲ್ಕ ನಿಗದಿಪಡಿಸಲಾಗಿದೆ.
ಟೋಲ್ ಪ್ಲಾಝಾದ ಒಟ್ಟು ಎಂಟು ಲೇನ್‌ಗಳ ಪೈಕಿ ಆರು ಲೇನ್‌ಗಳನ್ನು (3+3) ಫಾಸ್ಟ್‌ಟ್ಯಾಗ್ ಹೊಂದಿರುವ ವಾಹನಗಳಿಗಾಗಿ ಮೀಸಲಿಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ನೋಂದಣಿ ಹೊಂದಿರುವ ವಾಹನಗಳಿಗೆ ಶೇ. 50ರಷ್ಟು ರಿಯಾಯಿತಿ ನೀಡಲಾಗಿದ್ದು, ಟೋಲ್ ಕೇಂದ್ರದ 20 ಕಿ.ಮೀ. ವ್ಯಾಪ್ತಿಯ ನಿವಾಸಿಗಳಿಗೆ 360 ರೂ. ಮಾಸಿಕ ಪಾಸ್ ವ್ಯವಸ್ಥೆ ಇರಲಿದೆ ಎಂದು ಸಂಸ್ಥೆ ತಿಳಿಸಿದೆ.
ಶೀಘ್ರದಲ್ಲೇ ಬ್ರಹ್ಮರಕೂಟ್ಲು ಟೋಲ್ ಗೇಟ್ ತೆರವು
ಇದೇ ವೇಳೆ, ದಶಕಗಳಿಂದ ಕಾರ್ಯಾಚರಿಸುತ್ತಿರುವ ಬ್ರಹ್ಮರಕೂಟ್ಲು ರಾಷ್ಟ್ರೀಯ ಹೆದ್ದಾರಿ ಟೋಲ್ ಗೇಟ್ ಶೀಘ್ರದಲ್ಲೇ ಬಂದ್ ಆಗುವ ಸಾಧ್ಯತೆ ಇದೆ. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಹಿರಿಯ ಅಧಿಕಾರಿಗಳೊಂದಿಗಿನ ಸಮಿತಿ ಸಭೆಯಲ್ಲಿ ಟೋಲ್ ತೆರವಿಗೆ ಅನುಮತಿ ದೊರೆತಿದ್ದು, ಅಧಿಕೃತ ಆದೇಶ ಪ್ರಕಟವಾಗುವುದಷ್ಟೇ ಬಾಕಿ ಇದೆ.
ಬಿ.ಸಿ. ರೋಡ್‌ನಿಂದ ಬೆಂಗಳೂರು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 75 ಹಾಗೂ ಪುಂಜಾಲಕಟ್ಟೆಯಿಂದ ಚಾರ್ಮಾಡಿ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 73ರ ಅಭಿವೃದ್ಧಿ ಕಾಮಗಾರಿಗಳು ಪೂರ್ಣಗೊಂಡ ಬಳಿಕ ಬ್ರಹ್ಮರಕೂಟ್ಲು ಟೋಲ್ ತೆರವುಗೊಳ್ಳಲಿದೆ. ರಾಷ್ಟ್ರೀಯ ಹೆದ್ದಾರಿ 73ರ ಮಡಂತ್ಯಾರು ಸಮೀಪದ ಪಣಕಜೆ ಬಳಿ ಹೊಸ ಟೋಲ್ ಗೇಟ್ ನಿರ್ಮಾಣವಾಗಲಿದ್ದು, ಅದರೊಂದಿಗೆ ಬ್ರಹ್ಮರಕೂಟ್ಲು ಟೋಲ್ ವಿಲೀನಗೊಳ್ಳಲಿದೆ.
ಸುರತ್ಕಲ್ ಟೋಲ್ ಗೇಟ್ ತೆರವಿನ ಬಳಿಕ ಇದೀಗ ಬ್ರಹ್ಮರಕೂಟ್ಲು ಟೋಲ್ ಕೂಡ ತೆರವುಗೊಳ್ಳುವ ನಿರೀಕ್ಷೆ ಮೂಡಿದ್ದು, ಈ ಭಾಗದ ಪ್ರಯಾಣಿಕರಿಗೆ ದೊಡ್ಡ ನಿರಾಳತೆ ಸಿಗಲಿದೆ.
ಅಧಿಕೃತ ಆದೇಶಕ್ಕಾಗಿ ಕಾಯಲಾಗುತ್ತಿದೆ
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸಮಿತಿಯು ಈ ವಿಚಾರವಾಗಿ ಕಳೆದ ನಾಲ್ಕು ತಿಂಗಳಲ್ಲಿ ಮೂರು ಸಭೆಗಳನ್ನು ನಡೆಸಿದ್ದು, ಅಂತಿಮವಾಗಿ ಟೋಲ್ ತೆರವಿಗೆ ಅನುಮತಿ ದೊರೆತಿದೆ. ಅಧಿಕೃತ ಆದೇಶದ ಪ್ರತಿ ಕೈ ಸೇರಿದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಅಬ್ದುಲ್ಲಾ ಜಾವೆದ್ ಅಝ್ಮಿ ತಿಳಿಸಿದ್ದಾರೆ.
13 ವರ್ಷಗಳಿಂದ ಕಾರ್ಯಾಚರಣೆ
2013ರಲ್ಲಿ ಆರಂಭಗೊಂಡ ಬ್ರಹ್ಮರಕೂಟ್ಲು ಟೋಲ್ ಪ್ಲಾಝಾ ಕಳೆದ 13 ವರ್ಷಗಳಿಂದ ಕಾರ್ಯಾಚರಿಸುತ್ತಿದೆ. ಮಂಗಳೂರು ಬಂದರು ಸಂಪರ್ಕ ಯೋಜನೆಯ ರಸ್ತೆಯ ನಿರ್ವಹಣೆಯ ಭಾಗವಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಈ ಟೋಲ್ ಕೇಂದ್ರವನ್ನು ಆರಂಭಿಸಿತ್ತು. ಇದಕ್ಕೂ ಮೊದಲು ಪಾಣೆಮಂಗಳೂರಿನ ನೇತ್ರಾವತಿ ಸೇತುವೆ ಬಳಿ ಟೋಲ್ ಶುಲ್ಕ ಸಂಗ್ರಹಿಸಲಾಗುತ್ತಿತ್ತು.
ಬ್ರಹ್ಮರಕೂಟ್ಲು ಟೋಲ್ ಗೇಟ್ ಅನ್ನು ಅಂತರದ ಮಾನದಂಡ ಹಾಗೂ ಸಾರ್ವಜನಿಕರ ಬೇಡಿಕೆಯ ಹಿನ್ನೆಲೆಯಲ್ಲಿ ಸ್ಥಳಾಂತರಿಸುವಂತೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯಕ್ಕೆ ಮನವಿ ಸಲ್ಲಿಸಿದ್ದೇನೆ. ಸಚಿವಾಲಯವು ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಶೀಘ್ರದಲ್ಲೇ ಆದೇಶ ಪ್ರಕಟವಾಗುವ ನಿರೀಕ್ಷೆಯಿದೆ ಎಂದು ಸಂಸದ ಕ್ಯಾ. ಬ್ರಿಜೇಶ್ ಚೌಟ ತಿಳಿಸಿದ್ದಾರೆ.
ಅಪರಾಧ
Gym protein powder-ಸ್ಟೆರಾಯ್ಡ್, ಹಾನಿಕಾರಕ ರಾಸಾಯನಿಕ ಬೆರೆಸಿರುವ ಶಂಕೆ; ಜಿಮ್ ಪ್ರೊಟೀನ್ ಪೌಡರ್ ಗುಣಮಟ್ಟ ಪರೀಕ್ಷೆಗೆ ಸರ್ಕಾರ ಸಿದ್ಧತೆ
ಜಿಮ್‌ಗಳಲ್ಲಿ ತರಬೇತುದಾರರು ಶಿಫಾರಸು ಮಾಡುವ ಹಾಗೂ ಮೆಡಿಕಲ್ ಸ್ಟೋರ್‌ಗಳಲ್ಲಿ ಮಾರಾಟವಾಗುವ ಪ್ರೊಟೀನ್ ಪೌಡರ್ ಮತ್ತು ಇತರ ಆಹಾರ ಪೂರಕಗಳ (ಸಪ್ಲಿಮೆಂಟ್) ಗುಣಮಟ್ಟವನ್ನು ಪರೀಕ್ಷಿಸಲು ರಾಜ್ಯ ಸರ್ಕಾರ ಮುಂದಾಗಿದೆ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ.
ಬೆಂಗಳೂರು, ನ.25: ಜಿಮ್‌ಗಳಲ್ಲಿ ತರಬೇತುದಾರರು ಶಿಫಾರಸು ಮಾಡುವ ಹಾಗೂ ಮೆಡಿಕಲ್ ಸ್ಟೋರ್‌ಗಳಲ್ಲಿ ಮಾರಾಟವಾಗುವ ಪ್ರೊಟೀನ್ ಪೌಡರ್ ಮತ್ತು ಇತರ ಆಹಾರ ಪೂರಕಗಳ (ಸಪ್ಲಿಮೆಂಟ್) ಗುಣಮಟ್ಟವನ್ನು ಪರೀಕ್ಷಿಸಲು ರಾಜ್ಯ ಸರ್ಕಾರ ಮುಂದಾಗಿದೆ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಜಿಮ್‌ಗೆ ಹೋಗುವವರು ಸೇವಿಸುವ ಪ್ರೊಟೀನ್ ಉತ್ಪನ್ನಗಳ ಮೇಲೆ ಆರೋಗ್ಯ ಇಲಾಖೆ ನಿಗಾ ಇರಿಸಲಿದೆ. ಮಾರುಕಟ್ಟೆಯಲ್ಲಿ ಲಭ್ಯವಿರುವ ಕೆಲವು ಪ್ರೊಟೀನ್ ಉತ್ಪನ್ನಗಳು ಗುಣಮಟ್ಟದಿಂದ ಕೂಡಿದ್ದರೆ, ಇನ್ನು ಕೆಲವು ಉತ್ಪನ್ನಗಳು ಎಲ್ಲಿಂದ ಪೂರೈಕೆಯಾಗುತ್ತವೆ ಎಂಬುದೇ ಸ್ಪಷ್ಟವಾಗಿಲ್ಲ. ಹೀಗಾಗಿ ರಾಜ್ಯಾದ್ಯಂತ ಮಾರಾಟವಾಗುತ್ತಿರುವ ಪ್ರೊಟೀನ್ ಪೌಡರ್ ಮತ್ತು ಸಪ್ಲಿಮೆಂಟ್‌ಗಳನ್ನು ಪರೀಕ್ಷಿಸಲು ನಿರ್ಧರಿಸಲಾಗಿದೆ. ಮೆಡಿಕಲ್ ಸ್ಟೋರ್‌ಗಳು, ಜಿಮ್ ಕೇಂದ್ರಗಳು ಸೇರಿದಂತೆ ವಿವಿಧೆಡೆ ಪರಿಶೀಲನೆ ನಡೆಸಲಾಗುವುದು ಎಂದು ತಿಳಿಸಿದರು.
ಯಾಕೆ ಈ ಪರೀಕ್ಷೆ?
ಮಾರುಕಟ್ಟೆಯಲ್ಲಿ ಅನಧಿಕೃತವಾಗಿ ಮಾರಾಟವಾಗುವ ಕೆಲವು ಪ್ರೊಟೀನ್ ಪೌಡರ್‌ಗಳಲ್ಲಿ ನಿಗದಿತ ಪ್ರಮಾಣಕ್ಕಿಂತ ಕಡಿಮೆ ಪ್ರೊಟೀನ್ ಅಂಶವಿರುವುದು ಹಾಗೂ ಅವುಗಳಿಗೆ ಸ್ಟೆರಾಯ್ಡ್‌ಗಳು ಮತ್ತು ಹಾನಿಕಾರಕ ರಾಸಾಯನಿಕಗಳನ್ನು ಬೆರೆಸುವ ಸಾಧ್ಯತೆಗಳ ಬಗ್ಗೆ ಆಹಾರ ಸುರಕ್ಷತಾ ಇಲಾಖೆ ಈ ಹಿಂದೆಯೇ ಕಳವಳ ವ್ಯಕ್ತಪಡಿಸಿತ್ತು.
ಅಲ್ಲದೆ, ಅಗತ್ಯ ಪರವಾನಗಿ ಇಲ್ಲದೆ ಜಿಮ್‌ಗಳಲ್ಲಿ ನೇರವಾಗಿ ಸಪ್ಲಿಮೆಂಟ್‌ಗಳನ್ನು ಮಾರಾಟ ಮಾಡುವುದು ಕಾನೂನುಬಾಹಿರವಾಗಿದೆ. ಹಲವು ಪ್ರೊಟೀನ್ ಸಪ್ಲಿಮೆಂಟ್‌ಗಳ ಪ್ಯಾಕೆಟ್‌ಗಳ ಮೇಲೆ ನಮೂದಿಸಿರುವ ಪ್ರೊಟೀನ್ ಪ್ರಮಾಣಕ್ಕೂ, ಉತ್ಪನ್ನದಲ್ಲಿರುವ ನೈಜ ಪ್ರಮಾಣಕ್ಕೂ ವ್ಯತ್ಯಾಸವಿದೆ ಎಂಬ ಆರೋಪಗಳೂ ಕೇಳಿಬಂದಿವೆ. ಈ ಹಿನ್ನೆಲೆಯಲ್ಲಿ ಉತ್ಪನ್ನಗಳ ಗುಣಮಟ್ಟ ಮತ್ತು ಸುರಕ್ಷತೆಯನ್ನು ಪರಿಶೀಲಿಸಲು ಸರ್ಕಾರ ಮುಂದಾಗಿದೆ.
-
ಸ್ಥಳೀಯ23 hours agoValaalu toll plaza-ವಳಾಲು ಟೋಲ್ ಪ್ಲಾಜಾ ಕಾಮಗಾರಿ ಪೂರ್ಣ; ವಾರದೊಳಗೆ ಅಧಿಕೃತ ಘೋಷಣೆ ಸಾಧ್ಯ; ಬ್ರಹ್ಮರಕೂಟ್ಲು ಟೋಲ್ನಿಂದ ‘ಡಬಲ್ ಟೋಲ್’ ಆತಂಕ..!
-
ಅಪರಾಧ24 hours agoRenukashwami murder case-ರೇಣುಕಾಸ್ವಾಮಿ ಕೊಲೆ ಪ್ರಕರಣ: ಮತ್ತಿಬ್ಬರು ಸಾಕ್ಷಿಗಳು ಉಲ್ಟಾ; ಪ್ರತಿಕೂಲ ಸಾಕ್ಷಿಗಳೆಂದು ಘೋಷಿಸಿದ ನ್ಯಾಯಾಲಯ
-
ಅಂತರ ರಾಜ್ಯ24 hours agoSabarimala-ಶಬರಿಮಲೆ: ದೇವಸ್ಥಾನ ಹಾಗೂ ಅಂಗಡಿಗಳ ಮೇಲೆ ಅಧಿಕಾರಿಗಳ ದಿಢೀರ್ ದಾಳಿ; ಅಂಗಡಿಗಳಿಗೆ ₹1 ಲಕ್ಷ ದಂಡ
-
ಅಪರಾಧ23 hours agoCyber scam-ಟೀ ಶರ್ಟ್ ಖರೀದಿಸಿದರೆ ಐ-ಫೋನ್ ಗಿಫ್ಟ್..! ಮಂಗಳೂರಿನ ವೈದ್ಯನಿಗೆ 1.65 ಲಕ್ಷ ರೂ. ಸೈಬರ್ ವಂಚನೆ
-
ಮಂಗಳೂರು22 hours agoSoujanya case: Big Breaking: ಸೌಜನ್ಯ ಪ್ರಕರಣದಲ್ಲಿ ಯೂಟ್ಯೂಬ್ ಚಾನೆಲ್ಗಳ ಮಸಾಲಾ ಸುದ್ದಿಗೆ ಖರ್ಗೆ ಗರಂ! ವೈಜ್ಞಾನಿಕ ದಾಖಲೆಗಳ ಆಧಾರದಲ್ಲೆ ತನಿಖೆ
-
ಬಿಗ್ ನ್ಯೂಸ್6 hours agoRain-ಸುಳ್ಯ-ಪುತ್ತೂರು ಭಾಗಗಳಲ್ಲಿ ಹಲವೆಡೆ ಮಳೆ : ಎಷ್ಟು ದಿನ ಮಳೆಯಾಗಲಿದೆ ಗೊತ್ತೇ..?
-
ಬಿಗ್ ನ್ಯೂಸ್24 hours agoHeavy rain-ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆ ಅಬ್ಬರ: ಚಿಂತಾಮಣಿಯಲ್ಲಿ 54 ಮಿ.ಮೀ. ಮಳೆ ದಾಖಲು; ಕೋಲಾರ, ಬೆಂಗಳೂರು ಭಾಗದಲ್ಲೂ ವರ್ಷಧಾರೆ..!
-
ದಕ್ಷಿಣ ಕನ್ನಡ20 hours ago
ಡಿ. 8ರ ಪುತ್ತೂರು ದೀಪೋತ್ಸವಕ್ಕೆ ಸಿದ್ಧತೆ ಚುರುಕು: ಕಾರ್ಯಾಲಯ ಉದ್ಘಾಟನೆ -ಅದ್ದೂರಿ ದೀಪೋತ್ಸವಕ್ಕೆ ಭಕ್ತರ ಸಹಕಾರ ಅಗತ್ಯ: ಎಸ್. ರವೀಂದ್ರ ಶೆಟ್ಟಿ















