Connect with us

ಸಾಮಾಜಿಕ ಮಾಧ್ಯಮ

Moodappa Seva-ಬಲಮುರಿ ವಿದ್ಯಾಗಣಪತಿಗೆ ಮೂಡಪ್ಪ ಸೇವೆ16 ಸಾವಿರ ಅಪ್ಪಗಳಿಂದ ಮುಚ್ಚಿದ ಬಲಮುರಿ ಗಣಪ

Published

on



Ad Widget

Ad Widget

Ad Widget

Ad Widget

ಪುತ್ತೂರು: ಬನ್ನೂರು ಕರ್ಮಲ ಭಾರತೀ ನಗರದಲ್ಲಿರುವ ಶ್ರೀ ಬಲಮುರಿ ವಿದ್ಯಾಗಣಪತಿ ಸನ್ನಿಧಿಯಲ್ಲಿ ಶ್ರೀ ಅಖಿಲ ಹವ್ಯಕ ಮಹಾಸಭಾ ಪುತ್ತೂರು ಶಾಖೆಯ ಸಹಯೋಗದೊಂದಿಗೆ ಮಾ.3ರಂದು ವೇ ಮೂ ಮಿತ್ತೂರು ತಿರುಮಲೇಶ್ವರ ಭಟ್ ಅವರ ನೇತೃತ್ವದಲ್ಲಿ ಮೂಡಪ್ಪ ಸೇವೆ ನಡೆಯಿತು. ರಾತ್ರಿ ಸಂಕಲ್ಪ, ಮೂಡಪ್ಪ ಸಮರ್ಪಣೆ ಬಳಿಕ ರಂಗಪೂಜೆ, ಕಲ್ಲೋಕ್ತ ಪೂಜೆ, ಸರ್ವಾಲಂಕಾರ ಪೂಜೆ, ಅಷ್ಟಾವಧಾನ ಸೇವೆ ನಡೆಯಿತು. ಕ್ಷೇತ್ರದಲ್ಲಿ ಮೂಡಪ್ಪ ಸೇವೆ ಮೂರನೇ ಬಾರಿ ನಡೆದಿದೆ. ಮೂಡಪ್ಪ ಸೇವಾ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ ಭಟ್ ದಂಪತಿ ಪೂಜೆಯಲ್ಲಿ ಪಾಲ್ಗೊಂಡರು.

Ad Widget

Ad Widget

Ad Widget

Ad Widget

ಸಂಜೆ ವೈದಿಕ ಕಾರ್ಯಕ್ರಮ ಆರಂಭ ಆಗುತ್ತಲೇ ಭಕ್ತರು ಆಗಮಿಸುತ್ತಲೇ ಇದ್ದರು. ಸಾವಿರಾರು ಭಕ್ತರು ಈ ಚಾರಿತ್ರಿಕ ಪರ್ವಕ್ಕೆ ಸಾಕ್ಷಿಯಾದರು. ಗಣಪತಿ ಗುಡಿಯೊಳಗಿರುವ ಬಲಮುರಿ ಗಣಪತಿ ವಿಗ್ರಹದ ಸುತ್ತಲೂ ಕಬ್ಬು ದಂಟುಗಳ ಕಣಜ ನಿರ್ಮಿಸಿ ಅಪ್ಪ ಕಜ್ಜಾಯ ತುಂಬಿಸಲಾಯಿತು. ಮೂಡಪ್ಪ ಸೇವೆಯೊಂದಿಗೆ ಶ್ರೀ ಗಣೇಶನಿಗೆ ಮಹಾ ರಂಗಪೂಜೆ ನಡೆಸಲಾಗಿದ್ದು, ರಾತ್ರಿ ಪೂಜೆಯ ಬಳಿಕ ಕವಾಟ ಬಂಧನ ನಡೆಸಲಾಯಿತು. ಮಾ.4ರಂದು ಉಷಃ ಪೂಜೆಯಲ್ಲಿ ಮೂಡಪ್ಪ ಉತ್ಪಾನ ನಡೆಯಲಿದೆ.

Ad Widget

Ad Widget

Ad Widget alt="Ad Widget"/>

Ad Widget

ಹಬ್ಬದ ಕಳೆ ತುಂಬಿ ತುಳುಕಿತು: ದೇವಳದ ಗಣಪತಿ ಗುಡಿಯಲ್ಲಿ ಮೂಡಪ್ಪ ಸೇವೆ ಮೂರನೇ ಬಾರಿ ನಡೆಯುತ್ತಿರುವುದರಿಂದ ಮತ್ತು ಕ್ಷೇತ್ರದಲ್ಲಿ ನಡೆಯುತ್ತಿರುವ ಪವಾಡಗಳಿಗೆ ಸಾಕ್ಷಿಯಾದ ಭಕ್ತರು ಮೂಡಪ್ಪ ಸೇವೆ ಸಂದರ್ಭ ಪಾಲ್ಗೊಂಡರು.

Ad Widget

Ad Widget <> Ad Widget

ಅಪ್ಪದ ರಾಶಿಯಲ್ಲಿ ಸಂಭ್ರಮಿಸಿದ ಗಣೇಶ: ಶ್ರೀ ಬಲಮುರಿ ಗಣಪತಿ ದೇವಸ್ಥಾನದಲ್ಲಿ ಗಣಪತಿ ವಿಗ್ರಹ ದಕ್ಷಿಣ ದಿಕ್ಕಿಗೆ ಮುಖ ಮಾಡಿರುವುದರಿಂದ ಆತನು ದಕ್ಷಿಣಾಮೂರ್ತಿ ಎಂದು ಕರೆಸಿಕೊಂಡಿದ್ದಾನೆ. ಗಣಪತಿ ವಿಗ್ರಹವನ್ನು ಸಂಜೆ ಅಪ್ಪಗಳಿಂದಲೇ ಮುಳುಗಿಸಲಾಯಿತು. ಇದಕ್ಕಾಗಿ 75 ಕೆ.ಜಿ ಅಕ್ಕಿ ಬಳಸಿ ಅಪ್ಪ ತಯಾರಿಸಲಾಗಿತ್ತು. ಸುಮಾರು 16 ಸಾವಿರ ಅಪ್ಪಗಳಿಂದ ಗಣಪತಿಯನ್ನು ಮುಚ್ಚಲಾಯಿತು. ಈ ಅಪ್ಪಗಳನ್ನು ಕಬ್ಬು ದಂಟುಗಳ ಕಣಜದಲ್ಲಿ ತುಂಬಿಸಲಾಯಿತು. ವಿಗ್ರಹದ ಜಿಹ್ವಾಗ್ರದವರೆಗೆ ಅಪ್ಪಗಳಿಂದ ಮುಚ್ಚಲಾಯಿತು.



Ad Widget

ಸಭಾ ಕಾರ್ಯಕ್ರಮ: ಮೂಡಪ್ಪ ಸೇವೆ ನಡೆಯುವ ಸಂದರ್ಭ ಬೋನಂತಾಯ ವೇದಿಕೆಯಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಿತು.

Ad Widget

Ad Widget

ಬ್ರಾಹ್ಮಣರು ಒಟ್ಟಿಗೆ ಸೇರಿದಾಗ ದೇಶಕ್ಕೆ ಉತ್ತಮ ಭವಿಷ್ಯ: ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಖಿಲ ಹವ್ಯಕ ಮಹಾಸಭಾದ ಅಧ್ಯಕ್ಷ ಡಾ. ಗಿರಿಧರ ಕಜೆ ಅವರು ಮಾತನಾಡಿ, ವಿಜ್ಞಾನ ಮುಂದಿದ್ದರೂ ಇಸ್ರೋದ ವಿಜ್ಞಾನಿಗಳು ರಾಕೇಟ್ ಹಾರಿಸುವ ಮುನ್ನ ಸಿದ್ದಿವಿನಾಯಕ ದೇವಸ್ಥಾನದಲ್ಲಿ ರಾಕೇಟ್ ಮಾದರಿ ಇಟ್ಟು ಪೂಜೆ ಸಲ್ಲಿಸುತ್ತಾರೆ. ಯಾಕೆಂದರೆ ಬುದ್ದಿಗೆ ಆದಿದೇವತೆ ಗಣಪತಿ ಎಂಬುದು ಎಲ್ಲರಿಗೂ ಗೊತ್ತಿದೆ. ಆದರೆ ಮನಸ್ಸು ಮತ್ತು ಬುದ್ದಿ ಎದುರು ಬಂದಾಗ ಬುದ್ದಿ ಹೇಳಿದ ಹಾಗೆ ಕೇಳಬೇಕು ಎಂದ ಅವರು ಬ್ರಾಹ್ಮಣ್ಯ ಎಂಬುದಕ್ಕೆ ತುಂಬಾ ಪಾವಿತ್ರ್ಯತೆ ಇದೆ. ಬ್ರಾಹ್ಮಣರು ಲೋಕಕಲ್ಯಾಣಕ್ಕಾಗಿ ಹುಟ್ಟಿಕೊಂಡವರು. ಯಾವುದೇ ಜಾತಿಯ ವೈಷಮ್ಯಕ್ಕೆ ಹುಟ್ಟಿಕೊಂಡವರಲ್ಲ. ಲೋಕ ಕಲ್ಯಾಣ ಮಾಡಲು ಏನೆಲ್ಲಾ ಮಾಡಬೇಕು ಎಂಬುದಕ್ಕೆ ಸಹಜ ಪ್ರತಿಭೆ, ಸಹಜ ಬುದ್ದಿಯನ್ನು ಮೈಗೂಡಿಸಿಕೊಂಡಿರುವ ಬ್ರಾಹ್ಮಣರು ಒಟ್ಟು ಸೇರಿದರೆ ಸಮಾಜದ ಲೋಕ ಕಲ್ಯಾಣ, ದೇಶಕ್ಕೆ ತುಂಬಾ ಉತ್ತಮ ಭವಿಷ್ಯವು ಸಿಗುತ್ತದೆ ಎಂದರು.

ಮೂಡಪ್ಪ ಸೇವೆಯಿಂದ ಅಮೃತಮಯ: ವೇ ಮೂ ಅನಂತನಾರಾಯಣ ಭಟ್ ಪರಕ್ಕಜೆ ಅವರು ಧಾರ್ಮಿಕ ಉಪನ್ಯಾಸ ನೀಡಿದರು. ಓಂಕಾರಕ್ಕೆ ಅಧಿಪತಿಯೇ ಗಣಪತಿ, ನೈವೇದ್ಯವನ್ನೇ ಗಣಪತಿಯನ್ನಾಗಿ ಆರಾಧಿಸುವುದೇ ಮೂಡಪ್ಪ ಸೇವೆಯ ವಿಶೇಷ, ಮೂಡಪ್ಪ ಸೇವೆಯಿಂದ ಗಣಪತಿ ಅಮೃತಮಯವಾಗುತ್ತಾನೆ. ನಮ್ಮೆಲ್ಲರ ಜೀವನ ಅಮೃತಮಯವಾಗಲು ಸಾಧ್ಯ ಎಂದ ಅವರು ಎಲ್ಲಾ ಸಮಾಜಕ್ಕೂ ಭಗವಂತನ ಅನುಗ್ರಹ ಪ್ರಾಪ್ತಿಯಾಗಲಿ ಎಂದರು.

ಆಚಾರ ವಿಚಾರ ಉಳಿದರೆ ಸಮಾಜ ಉಳಿಯುತ್ತದೆ: ಶಿವಬ್ರಾಹ್ಮಣ ಸ್ಥಾನಿಕ ಸಮಾಜ ಸೇವಾ ಸಂಘ ಪುತ್ತೂರು ಇದರ ಅಧ್ಯಕ್ಷ ಎನ್.ಕೆ.ಜಗನ್ನಿವಾಸ ರಾವ್ ಅವರು ಮಾತನಾಡಿ, ಇವತ್ತು ಆಚಾರ ವಿಚಾರಗಳು ನಮ್ಮಿಂದ ದೂರ ಆಗುತ್ತಿದೆ. ಯುವಕರಿಗೆ ಇದನ್ನು ಸಂಪ್ರದಾಯಗಳನ್ನು ತಿಳಿಸುವ ಕೆಲಸ ಆಗಬೇಕು. ಹಾಗಾಗಿ ಇದನ್ನು ಉಳಿಸಿದರೆ ಸಮಾಜ ಬೆಳೆಯುತ್ತದೆ. ಹವ್ಯಕ ಸಮಾಜ ಹಾಕಿಕೊಂಡ ಕಾರ್ಯಕ್ರಮದಲ್ಲಿ ಐದು ವಿಪ್ರಗಳನ್ನು ಒಂದೇ ವೇದಿಕೆಯಲ್ಲಿ ಸೇರಿರುವುದು ಉತ್ತಮ ವಿಚಾರ. ನಾವೆಲ್ಲ ಒಂದೇ ಎಂಬ ಕಾರ್ಯಕ್ರಮ ಇಲ್ಲಿ ತೋರಿಸುವ ಕೆಲಸ ಆಗಿದೆ ಎಂದ ಅವರು ಎ.25ರಂದು ಶಿವ ಬ್ರಾಹ್ಮಣ ಸಂಘ ಕಲ್ಲಾರೆಯ ಶಿವಕೃಪಾ ಸಭಾಭವನದಲ್ಲಿ ಉದ್ಘಾಟನೆಗೊಳ್ಳಲಿದೆ ಎಂದು ತಿಳಿಸಿ ಎಲ್ಲರನ್ನು ಆಮಂತ್ರಿಸಿದರು.

ನಮ್ಮಲ್ಲಿ ಒಗ್ಗಟ್ಟು ಬಹಳ ಅಗತ್ಯ:
ಶಿವಳ್ಳಿ ಸಂಪದ ಪುತ್ತೂರು ಇದರ ಅಧ್ಯಕ್ಷ ದಿವಾಕರ ಕೆ.ನಿಡ್ವಣ್ಣಾಯರವರು ಮಾತನಾಡಿ, ಇವತ್ತು ಬ್ರಾಹ್ಮಣ ಸಮಾಜವನ್ನು ತುಳಿಯುವ ಕೆಲಸ ಆಗುತ್ತಿದೆ. ಈ ನಿಟ್ಟಿನಲ್ಲಿ ನಮ್ಮಲ್ಲಿ ಒಗ್ಗಟ್ಟು ಬಹಳ ಅಗತ್ಯ. ಮುಂದೆ ಇಂತಹ ಉತ್ತಮ ಕಾರ್ಯಕ್ರಮ ಮೂಡಿ ಬರಲಿ ಎಂದು ಹೇಳಿದರು.

ಸಂಪ್ರದಾಯ ಬೇರೆಯಾದರೂ ಹೊರಗೆ ನಾವೆಲ್ಲ ಒಂದೇ:
ಕೂಟ ಮಹಾಜಗತ್ತು ಇದರ ಅಧ್ಯಕ್ಷ ಸದಾಶಿವ ಹೊಳ್ಳ ಅವರು ಮಾತನಾಡಿ, ನಮ್ಮ ಸಮಾಜದ 200 ಮನೆಗಳು ಇಲ್ಲಿ ಇರಬಹುದು. ಆದರೆ ಇಂತಹ ಕಾರ್ಯಕ್ರಮದ ಮೂಲಕ ನಮಗೂ ಶಕ್ತಿ ಬರುತ್ತದೆ. ಇವತ್ತು ಬ್ರಾಹ್ಮನರು ಎಂದಾಗ ಎಲ್ಲದೂ ಒಂದೇ. ನಮ್ಮ ಆಚಾರ ಸಂಪ್ರದಾಯ ಬೇರೆ ಬೇರೆ ಇರಬಹುದು. ಆದರೆ ಅದು ಒಳಗೆ ಮಾತ್ರ ಇಟ್ಟುಕೊಂಡು, ಹೊರಗೆ ನಾವೆಲ್ಲ ಒಂದೇ ಎಂಬ ಭಾವನೆ ಮೂಡಬೇಕೆಂದರು.

ಬ್ರಾಹ್ಮಣ ಸಮಾಜ ಸಮಗ್ರ ಹಿಂದೂ ಸಮಾಜದ ಅಭಿವೃದ್ಧಿ ಬಯಸುತ್ತಿದೆ:
ದಕ್ಷಿಣ ಕನ್ನಡ ಜಿಲ್ಲಾ ಅಖಿಲ ಬ್ರಾಹ್ಮಣ ಸಮಾಜದ ಉಪಾಧ್ಯಕ್ಷ ಮಹೇಶ್ ಕಜೆ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಪುರೋಹಿತರು ವೈದಿಕವಾದ ಶ್ರೇಷ್ಠತೆಯಿಂದ ಪುರದ ಹಿತವನ್ನು ಬಯಸುತ್ತಾರೆ. ಅದೇ ರೀತಿ ಬ್ರಾಹ್ಮಣ ಸಮಾಜ ಸಮಗ್ರವಾದ ಹಿಂದೂ ಸಮಾಜದ ಸಂಘಟನೆಯನ್ನು ಮತ್ತು ಅಭಿವೃದ್ಧಿಯನ್ನು ಬಯಸುತ್ತದೆ. ಅಂತಹ ಸಂದೇಶ ಬಲಮುರಿ ಸನ್ನಿಧಾನದಿಂದ ಹೋಗಬೇಕು. ಈ ಸಮಾಜ ಒಂದಾಗುವ ಆದರ್ಶ ಪ್ರಾಯವಾದ ಮುನ್ನುಡಿಯನ್ನು ಈ ವೇದಿಕೆಯಿಂದ ಕೊಡಬೇಕೆಂದು ಇವತ್ತಿನ ಕಾರ್ಯಕ್ರಮ ಆಯೋಜಿತವಾಗಿದೆ. ದೇವರು ಸರ್ವಾಂತರ್ಯಾಮಿ. ಆತನು ಎಲ್ಲರಿಗೂ ಸೇರಿದವ. ಆದರೆ ದೇವರನ್ನು ಆರಾಧಿಸಲು ಮಾಧ್ಯಮವಾಗಿ ಪುರೋಹಿತರನ್ನು ತೆಗೆದುಕೊಳ್ಳುತ್ತೇವೆಯೋ ಅದೇ ರೀತಿ ಸಮಾಜವನ್ನು ಸಂಘಟಿಸುವ ಪ್ರಯತ್ನದ ಅಂಗವಾಗಿ ಇವತ್ತು ನಾವು ಒಂದಾಗುವ ಕೆಲಸ ಈ ವೇದಿಕೆಯ ಮೂಲಕ ಮಾಡುತ್ತಿದ್ದೇವೆ. ಅದಕ್ಕಾಗಿ ವಿಶೇಷವಾಗಿ ಗಣಪನ ಹಬ್ಬ ಆಯೋಜಿಸಿದ್ದೇವೆ ಎಂದರು. ಹವ್ಯಕ ಸಭಾದ ಅಧ್ಯಕ್ಷ ಶಿವಶಂಕರ ಭಟ್ಟ ಬೋನಂತಾಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಮೂಡಪ್ಪ ಸೇವಾ ಸಮಿತಿಯ ಪಾಕಶಾಲೆಯ ಸಂಯೋಜಕ ಚಂದ್ರಶೇಖರ್ ಭಟ್, ಮೂಡಪ್ಪ ಸೇವಾ ಸಮಿತಿ ಕಾರ್ಯದರ್ಶಿ ಈಶಾನ್ಯ ಶಂಕರ್ ಭಟ್, ಉಪಾಧ್ಯಕ್ಷ ಸತ್ಯಶಂಕರ ಸಾಮೆತ್ತಡ್ಕ, ಶರಾವತಿ ರವಿನಾರಾಯಣ, ರಾಜಗೋಪಾಲ ಭಟ್, ಗೋಪಾಕೃಷ್ಣ ಅತಿಥಿಗಳನ್ನು ಗೌರವಿಸಿದರು. ವಿ ಜಿ ಭಟ್, ವಿಜಯಸರಸ್ವತಿ ಕಾರ್ಯಕ್ರಮ ನಿರೂಪಿಸಿದರು. ಮೂಡಪ್ಪ ಸೇವಾ ಸಮಿತಿ ಪ್ರಧಾನ ಕಾರ್ಯದರ್ಶಿ ಸುರೇಶ್ ಭಟ್ ಸುರುಡೇಲು ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ನೃತ್ಯೋಪಾಸನ ಕಲಾ ಅಕಾಡೆಮಿಯ ವಿದ್ಯಾರ್ಥಿಗಳಿಂದ ಭರತನಾಟ್ಯ ಪ್ರದರ್ಶನಗೊಂಡಿತು. ಸಭಾ ಕಾರ್ಯಕ್ರಮದ ಆರಂಭದಲ್ಲಿ ಸಂಜೆ ರಾಮಾಪರ್ಣ ಭಜನಾ ತಂಡ, ಕಬಕ ವಲಯದಿಂದ ಮತ್ತು ಶ್ರೀ ಸತ್ಯಸಾಯಿ ಸೇವಾ ಸಮಿತಿಯವರಿಂದ ಭಜನಾ ಕಾರ್ಯಕ್ರಮ, ಬಳಿಕ ಉಮಾಮಹೇಶ್ವರ ಸಂಗೀತ ಕಲಾ ಶಾಲೆಯ ವಿದ್ಯಾರ್ಥಿಗಳಿಂದ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಯಿತು.

Ad Widget

ಸಾಮಾಜಿಕ ಮಾಧ್ಯಮ

ನೀವು ಕಳ್ಳರ ಜೊತೆಗಾದರೂ ಇರಿ. ಯಾರ ಜೊತೆಗಾದರೂ ಇರಿ. ಆದರೆ, ಸತ್ಯದ ಪರವಾಗಿ ಇರಿ: ಎಲೆಕ್ಟ್ರಾನಿಕ್ ಮೀಡಿಯಾದವರಿಗೆ ಸಿಎಂ ಕರೆ : ಯುಟ್ಯೂಬ್ ಚಾನಲ್ ಗಳ ಆರಂಭಕ್ಕೆ ಪರವಾನಗಿ ನಿಗಧಿ ಮಾಡುವ ಬಗ್ಗೆ ಪರಿಶೀಲನೆ – ಕರ್ನಾಟಕ ಎಲೆಕ್ಟ್ರಾನಿಕ್ ಮೀಡಿಯಾ ಜರ್ನಲಿಸ್ಟ್ ಅಸೋಸಿಯೇಷನ್ ಉದ್ಘಾಟಿಸಿ ಸಿಎಂ ಸಿದ್ದರಾಮಯ್ಯ

Published

on



Ad Widget

Ad Widget

Ad Widget

Ad Widget

ಹುಬ್ಬಳ್ಳಿ ಸೆ 15: ಮೊದಲು ನೀವೆಲ್ಲಾ ಊಹಾ ಪತ್ರಿಕೋದ್ಯಮವನ್ನು ನಿಲ್ಲಿಸಿ. ಇದು ಸಮಾಜಕ್ಕೆ ಹಾನಿಕರ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಲೆಕ್ಟ್ರಾನಿಕ್ ಮೀಡಿಯಾ ಪತ್ರಕರ್ತರಿಗೆ ಕರೆ ನೀಡಿದರು.

Ad Widget

Ad Widget

Ad Widget

Ad Widget

ಕರ್ನಾಟಕ ಎಲೆಕ್ಟ್ರಾನಿಕ್ ಮೀಡಿಯಾ ಜರ್ನಲಿಸ್ಟ್ ಅಸೋಸಿಯೇಷನ್ ಉದ್ಘಾಟಿಸಿ, ಲೋಗೋ ಬಿಡುಗಡೆ ಮಾಡಿ ಮಾತನಾಡಿದರು.

Ad Widget

Ad Widget

Ad Widget alt="Ad Widget"/>

Ad Widget

ನಾನು ರಾಜಕಾರಣಕ್ಕೆ ಬಂದು ಇಷ್ಟು ವರ್ಷದಲ್ಲಿ ಯಾವ ಮಾಧ್ಯಮಗಳಿಗೂ ನನ್ನ ಬಗ್ಗೆ ಹೀಗೇ ಬರೆಯಿರಿ, ಹಾಗೇ ಬರೆಯಿರಿ ಎಂದು ಯಾವತ್ತೂ ಹೇಳಿಲ್ಲ. ನನ್ನ ಬಗ್ಗೆ ಸುಳ್ಳುಗಳನ್ನು ಸತತವಾಗಿ ತೋರಿಸುವಾಗಲೂ ಯಾಕೆ ಹೀಗೆ ತೋರಿಸ್ತೀರಿ ಅಂತಲೂ ಯಾರಿಗೂ ಕೇಳಿಲ್ಲ. ನಿಮ್ಮಿಂದ ನನಗೆ ಏನೇನೂ ಅಪೇಕ್ಷೆ ಇಲ್ಲ. ಸಾಧ್ಯವಾದರೆ ಸತ್ಯ ತೋರಿಸಿ, ಸತ್ಯ ಬರೆಯಿರಿ ಎಂದರು.

Ad Widget

Ad Widget <> Ad Widget

ನನ್ನ ಕಾರಿನ ಮೇಲೆ ಕಾಗೆ ಕುಳಿತದ್ದೇ ಏನ್ ದೊಡ್ಡ ದೊಡ್ಡ ಚರ್ಚೆ ನಡೆಸಿದರು. ಆ ಚರ್ಚೆಯಲ್ಲಿ ಜ್ಯೋತಿಷಿಗಳು, ಚಾನಲ್ ಗಳು ತೋರಿಸಿದ್ದೆಲ್ಲಾ ಅಪ್ಪಟ ಸುಳ್ಳಾಯ್ತು. ನೀವು ಹೀಗೆಲ್ಲಾ ತೋರಿಸಿದರೆ ಜನ ಒಪ್ತಾರಾ ಯೋಚನೆ ಮಾಡಿ ಎಂದರು.



Ad Widget

ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ನಮ್ಮ‌ ಸರ್ಕಾರ ಸದಾ ಸಿದ್ದ. ಯಾವತ್ತೂ ಇದಕ್ಕೆ ಧಕ್ಕೆ ತರುವ ಕೆಲಸವನ್ನು ನಾನೂ ಯಾವತ್ತೂ ಮಾಡಿಲ್ಲ, ನಮ್ಮ ಸರ್ಕಾರವೂ ಮಾಡುವುದಿಲ್ಲ ಎಂದರು.

Ad Widget

Ad Widget

ಸಂಘದ ಬೇಡಿಕೆ

ಬ್ಲಾಕ್ ಮೇಲ್ ಮತ್ತು ಕೀಳು ಮಟ್ಟದ ಪ್ರಾಕ್ಟೀಸ್ ಮಾಡುತ್ತಿರುವ ಯು ಟ್ಯೂಬ್ ಚಾನಲ್ ಗಳು ಸಮಾಜಕ್ಕೆ ಶಾಪ ಆಗಿದ್ದು, ಇಂಥವರಿಂದ ಪತ್ರಿಕೋದ್ಯಮದ ಘನತೆ ಹಾಳಾಗಿದೆ. ಹೀಗಾಗಿ ಯು ಟ್ಯೂಬ್ ಚಾನಲ್ ಗಳ ಹಾವಳಿ ತಡೆಯಲು ಇವರಿಗೂ ಲೈಸೆನ್ಸ್ ಕಡ್ಡಾಯಗೊಳಿಸಬೇಕು ಎಂದು ಸಂಘ ಮುಖ್ಯಮಂತ್ರಿಗಳಿಗೆ ಬೇಡಿಕೆ ಸಲ್ಲಿಸಿತು. ಈ ಬೇಡಿಕೆ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗಿವುದು ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದರು.

Ad Widget
Continue Reading

ಸಿನೆಮಾ

Kiara Advani War 2 bikini look: ಕಿಯಾರಾ ಬಿಕಿನಿ ಕಿಡಿ – ಎಲ್ಲರ ಕಣ್ಣು ಅಲ್ಲೇ! ‘ವಾರ್ 2’ ಟೀಸರ್‌ನಿಂದ ಇಂಟರ್ನೆಟ್‌ನಲ್ಲಿ ಅಲ್ಲೋಲ ಕಲ್ಲೋಲ

Published

on



Ad Widget

Ad Widget

Ad Widget

Ad Widget

ವಾರ್ 2′ ಟೀಸರ್‌ನಲ್ಲಿ ಕಿಯಾರಾ ಅಡ್ವಾಣಿಯವರ ಚಿನ್ನದ ಬಿಕಿನಿ ಲುಕ್ ಇಂಟರ್ನೆಟ್‌ನಲ್ಲಿ ಬಿರುಗಾಳಿ ಎಬ್ಬಿಸಿದ್ದು, ಕ್ಷಣಾರ್ಧದಲ್ಲಿ ವೈರಲ್ ಆಗಿದೆ. ಅವರ ಕೇವಲ ಎರಡು ಸೆಕೆಂಡ್‌ಗಳ ಹಾಟ್ ದೃಶ್ಯವು ಎಲ್ಲೆಡೆ ಭಾರಿ ಚರ್ಚೆಗೆ ಕಾರಣವಾಗಿದೆ.

Ad Widget

Ad Widget

Ad Widget

Ad Widget

Kiara Advani War 2 bikini look ಬಾಲಿವುಡ್‌ನ ಬ್ಯೂಟಿ ಕ್ವೀನ್ ಕಿಯಾರಾ ಅಡ್ವಾಣಿ ಇದೀಗ ಇಂಟರ್ನೆಟ್‌ನಲ್ಲಿ ಅಕ್ಷರಶಃ ಬೆಂಕಿ ಹಚ್ಚಿದ್ದಾರೆ! “ವಾರ್ 2” ಚಿತ್ರದ ಟೀಸರ್‌ನಲ್ಲಿ ಅವರು ತೊಟ್ಟ ಚಿನ್ನದ ಬಿಕಿನಿ ಇದೀಗ ನ್ಯಾಷನಲ್ ಹಾಟ್ ಟಾಪಿಕ್. ಜೂನಿಯರ್ ಎನ್‌ಟಿಆರ್ ಹುಟ್ಟುಹಬ್ಬದ ಗಿಫ್ಟ್ ಆಗಿ ರಿಲೀಸ್ ಆದ ಈ ಟೀಸರ್‌ನಲ್ಲಿ ಹೃತಿಕ್ ರೋಷನ್‌ರವರ ಮೈ ಜುಮ್ಮೆನ್ನಿಸೋ ಆಕ್ಷನ್ ಸೀಕ್ವೆನ್ಸ್‌ಗಳಿವೆ, ನಿಜ. ಆದರೆ, ಎಲ್ಲರ ಕಣ್ಣು, ಮನಸ್ಸು ಕದ್ದಿದ್ದು ಮಾತ್ರ ಕಿಯಾರಾ ಅವರ ಹಾಟ್ ಅವತಾರ!

Ad Widget

Ad Widget

Ad Widget alt="Ad Widget"/>

Ad Widget

ಬರೀ ಎರಡೇ ಎರಡು ಸೆಕೆಂಡುಗಳ ಕಾಲ ಕಡಲತೀರದಲ್ಲಿ, ಚಿನ್ನದ ಬಿಕಿನಿಯಲ್ಲಿ ಕಂಗೊಳಿಸಿರುವ ಕಿಯಾರಾ, ತಮ್ಮ ಫಿಟ್ ದೇಹ ಮತ್ತು ಆಕರ್ಷಕ ಮೈಮಾಟದಿಂದ ಅಭಿಮಾನಿಗಳ ಹೃದಯ ಕದ್ದಿದ್ದಾರೆ. ರೆಡ್ಡಿಟ್‌ನಂತಹ ಸಾಮಾಜಿಕ ಜಾಲತಾಣಗಳಲ್ಲಿ ಈ ದೃಶ್ಯ ಕಾಳ್ಗಿಚ್ಚಿನಂತೆ ಹಬ್ಬಿದೆ. ‘ಕಿಯಾರಾ ಎರಡೇ ಸೆಕೆಂಡ್‌ನಲ್ಲಿ ಇಡೀ ಶೋ ಕದ್ದಿದ್ದಾರೆ’ ಎಂದು ಕೆಲವರು ಹೊಗಳಿದರೆ, ‘ಗರ್ಭಿಣಿಯಾಗಿದ್ದರೂ ಕಿಯಾರಾ ದೇವತೆಯಂತೆ ಕಾಣುತ್ತಿದ್ದಾರೆ’ ಎಂದು ಅಭಿಮಾನಿಗಳು ಮೆಚ್ಚುಗೆಯ ಮಹಾಪೂರವನ್ನೇ ಹರಿಸಿದ್ದಾರೆ.ಅವರ ಫಿಟ್ನೆಸ್, ಆಕರ್ಷಕ ಮೈಮಾಟಕ್ಕೆ ಫ್ಯಾನ್ಸ್ ಫಿದಾ ಆಗಿದ್ದಾರೆ.

Ad Widget

Ad Widget <> Ad Widget

ಸದ್ಯ ಪತಿ ಸಿದ್ಧಾರ್ಥ್ ಮಲ್ಹೋತ್ರಾ ಜೊತೆ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಕಿಯಾರಾಗೆ, ‘ವಾರ್ 2’ ಹಲವು ಪ್ರಥಮಗಳ ಚಿತ್ರ. ಯಶ್ ರಾಜ್ ಫಿಲ್ಮ್ಸ್ ಬ್ಯಾನರ್‌ನಲ್ಲಿ ಮೊದಲ ಸಿನಿಮಾ, ಮೊದಲ ಪಕ್ಕಾ ಆಕ್ಷನ್ ಸಿನಿಮಾ, ಮತ್ತು ಹೌದು, ತೆರೆಮೇಲೆ ಮೊದಲ ಬಿಕಿನಿ ದೃಶ್ಯ ಕೂಡಾ ಇದೇ! ಅಯಾನ್ ಮುಖರ್ಜಿ ನಿರ್ದೇಶನದ ಈ ಚಿತ್ರ 2025ರ ಆಗಸ್ಟ್ 14ಕ್ಕೆ ತೆರೆಗೆ ಅಪ್ಪಳಿಸಲಿದೆ.



Ad Widget

ಆದರೆ, ಇಲ್ಲೊಂದು ಸಣ್ಣ ಟ್ವಿಸ್ಟ್! ಈ ಹಾಟ್ ಲುಕ್ ಕೆಲವರಲ್ಲಿ  ಅನುಮಾನದ ಕಿಡಿಯನ್ನೂ ಹತ್ತಿಸಿದೆ. ಕೆಲವರು ಇದನ್ನು ಸಿಜಿಐ (ಕಂಪ್ಯೂಟರ್ ಜನರೇಟೆಡ್ ಇಮೇಜರಿ) ಇರಬೇಕು  “ಇಲ್ಲ, ಬಾಡಿ ಡಬಲ್ ಇರಬಹುದು” ಅಂತೆಲ್ಲಾ ಕೆಲ ನೆಟ್ಟಿಗರು ಗುಸುಗುಸು ಶುರುಮಾಡಿದ್ದಾರೆ. ಆದರೆ, ಕಿಯಾರಾ ಅವರ ತಂಡ, “ಅದೆಲ್ಲಾ ಸುಳ್ಳು, ಕಿಯಾರಾ ಈ ಲುಕ್‌ಗಾಗಿ ಸಖತ್ ಆಗಿ ಜಿಮ್‌ನಲ್ಲಿ ಬೆವರು ಹರಿಸಿದ್ದಾರೆ” ಅಂತ ಸ್ಪಷ್ಟನೆ ಕೊಟ್ಟಿದೆ.

Ad Widget

Ad Widget

ಒಟ್ಟಿನಲ್ಲಿ, ‘ವಾರ್ 2’ ಟೀಸರ್‌ನಲ್ಲಿ ಕಿಯಾರಾ ಅವರ ಬಿಕಿನಿ ಅವತಾರ ಸದ್ಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದೆ. ಸಿನಿಮಾ ರಿಲೀಸ್ ಆಗೋವರೆಗೂ ಈ ಚರ್ಚೆ, ಈ ಹವಾ ಕಮ್ಮಿಯಾಗೋ ಲಕ್ಷಣ ಕಾಣ್ತಿಲ್ಲ!

 

Ad Widget
Continue Reading

ಸಾಮಾಜಿಕ ಮಾಧ್ಯಮ

ದೂರು ನೀಡಲು ಬಂದ ಮಹಿಳೆಯ ಜತೆ  ಡಿವೈಎಸ್ಪಿ ಬಲವಂತದ ಸೆಕ್ಸ್‌ ! ಕಛೇರಿಯಲ್ಲೆ ರಾಸಲೀಲೆ ನಡೆಸುತ್ತಿರುವ ವಿಡಿಯೋ ವೈರಲ್‌ – ಗೃಹ ಸಚಿವರ ತವರು ಜಿಲ್ಲೆಯಲ್ಲಿ ಶಾಕಿಂಗ್‌ ಘಟನೆ  

Published

on



Ad Widget

Ad Widget

Ad Widget

Ad Widget

ಇಡೀ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಗೂ ಮಹಿಳೆ, ಮಕ್ಕಳು ಸೇರಿದಂತೆ ರಾಜ್ಯದ ಜನತೆಯನ್ನು ಸುರಕ್ಷಿತವಾಗಿ ನೋಡಿಕೊಳ್ಳುವುದಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ ಗೃಹ ಸಚಿವ ಡಾ.ಜಿ. ಪರಮೇಶ್ವರ ಅವರ ತವರು ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ ಎಂಬುದು ಇನ್ನೂ ಅಸಹ್ಯಕರವಾಗಿದೆ. ಇಂತಹ ಅಧಿಕಾರಿಗಳು ಪೊಲೀಸ್ ಇಲಾಖೆಗೆ ಕೆಟ್ಟ ಹೆಸರು ತರುವವರಾಗಿದ್ದಾರೆ.  ಇವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಇದು ಇಂತಹ ವಿಕೃತ ಮನೋಸ್ಥಿತಿ ಇರುವವರಿಗೆ ಬುದ್ಧಿ ಕಲಿಸುವಂತಿರಬೇಕು ಎಂದು ವಿಡಿಯೊ ನೋಡಿದವರು ಒತ್ತಾಯಿಸಿದ್ದಾರೆ.

Ad Widget

Ad Widget

Ad Widget

Ad Widget

ತುಮಕೂರು : ಜ 2ಡಿವೈಎಸ್ಪಿಯೊಬ್ಬರು ರಾಜ್ಯ ಪೊಲೀಸ್‌ ಇಲಾಖೆಯ ಮಾನ ಹಾಗೂ ಗೌರವವನ್ನು ಹರಾಜು ಹಾಕಿದ ಘಟನೆಯೊಂದು ಗೃಹ ಸಚಿವ ಡಾ| ಪರಮೇಶ್ವರ್‌ ಅವರ ತವರು ಜಿಲ್ಲೆಯಿಂದ ವರದಿಯಾಗಿದೆ. ದೂರು ನೀಡಲು ಬಂದ ಸಂತ್ರಸ್ತ ಮಹಿಳೆಯನ್ನು ತುಮಕೂರು ಜಿಲ್ಲೆಯ ಮಧುಗಿರಿಯ ಡಿವೈಎಸ್ಪಿ ತನ್ನ ಕಾಮತೃಷೆ ತೀರಿಸಲು ಬಲವಂತವಾಗಿ ಬಳಸಲು ಯತ್ನಿಸಿದ ಆರೋಪ ಕೇಳಿ ಬಂದಿದೆ.ಈ ಸಂಬಂಧ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಘಿದೆ.

Ad Widget

Ad Widget

Ad Widget alt="Ad Widget"/>

Ad Widget

ಏನಿದು ಪ್ರಕರಣ ?

Ad Widget

Ad Widget <> Ad Widget

 ದೂರು ನೀಡಲು ಕಚೇರಿಗೆ ಬಂದ ಮಹಿಳೆಯೊಂದಿಗೆ ಮಧುಗಿರಿ ಡಿವೈಎಸ್‌ಪಿ ರಾಮಚಂದ್ರಪ್ಪ ಅಸಭ್ಯವಾಗಿ ವರ್ತಿಸಿದ್ದಾರೆ. ಇವರ ಹದ್ದು ಮೀರಿದ ವರ್ತನೆಯ ವಿಡಿಯೊ ವೈರಲ್‌ ಆಗಿದೆ. ಜಮೀನು ವ್ಯಾಜ್ಯದ ಬಗ್ಗೆ ದೂರು ಕೊಡಲು ಪಾವಗಡದಿಂದ ಬಂದಿದ್ದ ಮಹಿಳೆಯನ್ನು ಏಕಾಂತ ಕೊಠಡಿಗೆ ಎಳೆದುಕೊಂಡು ಹೋದ ರಾಮಚಂದ್ರಪ್ಪ ಲೈಂಗಿಕ ಕಿರುಕುಳ ನೀಡಿದ್ದಾರೆ.



Ad Widget

ಪಾವಗಡ ಮೂಲದ ಮಹಿಳೆ ಜಮೀನು ವ್ಯಾಜ್ಯದ ಬಗ್ಗೆ ದೂರು ನೀಡಿದ್ದರು. ಈ ಸಂಬಂಧ ಮಹಿಳೆಯೊಂದಿಗೆ ಮಾತುಕತೆ ನಡೆಸಬೇಕು ಕೆಲವು ವಿಚಾರಣೆ ಮಾಡಬೇಕು ಎಂದು ಡಿವೈಎಸ್ ಪಿ ಕಚೇರಿಗೆ ಕರೆಸಲಾಗಿತ್ತು. ಈ ವೇಳೆ ಮಹಿಳೆಯನ್ನ ಪುಸಲಾಯಿಸಿರುವ ಡಿವೈಎಸ್‌ಪಿ ರಾಮಚಂದ್ರಪ್ಪ ದೂರು ಕೊಡಲು ಬಂದ ಮಹಿಳೆಯನ್ನ ಪುಸಲಾಯಿಸಿ ತನ್ನ ಕಾಮತೃಷೆ ತೀರಿಸಿಕೊಳ್ಳಲು ಬಳಸಿಕೊಂಡಿದ್ದಾನೆ.

Ad Widget

Ad Widget

ತನಗೆ ನ್ಯಾಯ ಸಿಗಬೇಕಾದರೆ ಇಂಥ ಕೆಲಸವನ್ನೂ ಮಾಡಬೇಕು ಎಂದು ಮಹಿಳೆ ಡಿವೈಎಸ್‌ಪಿಯ ಕಾಮತೃಷೆ ತೀರಿಸಲು ಮುಂದಾಗಿದ್ದಾಳೆ. ಇದಾದ ನಂತರ ಡಿವೈಎಸ್‌ಪಿ ಕಚೇರಿಯ ಶೌಚಾಲಯದ ಬಳಿ ಕರೆದುಕೊಂಡು ಹೋದ ರಾಮಚಂದ್ರಪ್ಪ ಮಹಿಳೆಯೊಂದಿಗೆ ರಾಸಲೀಲೆ ಆರಂಭಿಸಿದ್ದಾರೆ. ಆದರೆ, ಡಿವೈಎಸ್‌ಪಿ ರಾಮಚಂದ್ರಪ್ಪನ ರಾಸಲೀಲೆಯ ದೃಶ್ಯ ಯಾರೋ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. ಅಲ್ಲಿ ಮಹಿಳೆಯೊಂದಿಗೆ ಬಲವಂತವಾಗಿ ನಡೆದುಕೊಳ್ಳುತ್ತಿದ್ದ ದೃಶ್ಯಗಳು ಸೆರೆ ಸಿಕ್ಕಿವೆ.

ಇಡೀ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಗೂ ಮಹಿಳೆ, ಮಕ್ಕಳು ಸೇರಿದಂತೆ ರಾಜ್ಯದ ಜನತೆಯನ್ನು ಸುರಕ್ಷಿತವಾಗಿ ನೋಡಿಕೊಳ್ಳುವುದಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ ಗೃಹ ಸಚಿವ ಡಾ.ಜಿ. ಪರಮೇಶ್ವರ ಅವರ ತವರು ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ ಎಂಬುದು ಇನ್ನೂ ಅಸಹ್ಯಕರವಾಗಿದೆ. ಇಂತಹ ಅಧಿಕಾರಿಗಳು ಪೊಲೀಸ್ ಇಲಾಖೆಗೆ ಕೆಟ್ಟ ಹೆಸರು ತರುವವರಾಗಿದ್ದಾರೆ.  ಇವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಇದು ಇಂತಹ ವಿಕೃತ ಮನೋಸ್ಥಿತಿ ಇರುವವರಿಗೆ ಬುದ್ಧಿ ಕಲಿಸುವಂತಿರಬೇಕು ಎಂದು ವಿಡಿಯೊ ನೋಡಿದವರು ಒತ್ತಾಯಿಸಿದ್ದಾರೆ.

‘ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೊವನ್ನು ನಾನೂ ವೀಕ್ಷಿಸಿದ್ದೇನೆ. ಅದರಲ್ಲಿ ಡಿವೈಎಸ್‌ಪಿ ರಾಮಚಂದ್ರಪ್ಪ ಆಕ್ಷೇಪಾರ್ಹವಾಗಿ ವರ್ತಿಸುತ್ತಿರುವುದು ಕಂಡು ಬಂದಿದೆ. ಸಂತ್ರಸ್ತೆಯನ್ನು ಹುಡುಕುತ್ತಿದ್ದೇವೆ. ತನಿಖೆ ನಡೆಸಿ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಇದನ್ನು ಈಗಾಗಲೇ ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದೆ’ ಎಂದು ತುಮಕೂರು ಜಿಲ್ಲೆ ಎಸ್‌ಪಿ ಕೆ.ವಿ. ಅಶೋಕ್‌ ಪ್ರತಿಕ್ರಿಯಿಸಿದ್ದಾರೆ

Ad Widget
Continue Reading

ಇಂದಿನ ಟ್ರೆಂಡಿಂಗ್‌ ಸುದ್ದಿಗಳು

error: Content is protected !!

Discover more from Nikhara News | Kannada News Website

Subscribe now to keep reading and get access to the full archive.

Continue reading