ವೈರಲ್ ನ್ಯೂಸ್
UT Khader Car | ಸ್ಪೀಕರ್ ಖಾದರ್ ಗೆ 360 ಡಿಗ್ರಿ ಕ್ಯಾಮಾರ ಹೊಂದಿರುವ ರ ಹೊಸ ಐಷರಾಮಿ ಫಾರ್ಚುನರ್ ..! ವೈರಲ್ ಆದ ಖಾದರ್ ರ ‘ನಂಬರ್ 1’ ಕಾರು ಹೇಗಿದೆ ಗೊತ್ತೇ..?
ಸ್ಪೀಕರ್ ಯು.ಟಿ ಖಾದರ್ ಅವರ ಪ್ರಯಾಣಕ್ಕೆ ಇದೀಗ ಐಶಾರಾಮಿ ಕಾರು (UT Khader Car) ಬಂದಿದೆ. ಸಚಿವಾಲಯದಿಂದ ವಿಶೇಷ ಕಾರಿನ ಸೌಲಭ್ಯವನ್ನು ಕಲ್ಪಿಸಲಾಗಿದ್ದು, ಐಶಾರಾಮಿ ಫಾರ್ಚೂನರ್ ಕಾರು ಹಲವು ವಿಶೇಷತೆಗಳನ್ನು ಕೂಡಾ ಹೊಂದಿದೆ.ಕಪ್ಪು ಬಣ್ಣದ ಫಾರ್ಚೂನರ್( ಇ ) ಕಾರಿನ ದರ 33.43 ಲಕ್ಷ ( ಪೆಟ್ರೋಲ್) ಹಾಗೂ ಡೀಸೆಲ್ ಕಾರಿನ ದರ 35.93 ರಿಂದ 51.44 ಲಕ್ಷ ರೂ. ಆಗುತ್ತದೆ.
ಆದರೆ, ಈ ಫಾರ್ಚೂನರ್ ಗೆ ವಿಶೇಷ ವಿನ್ಯಾಸ ಮಾಡಿರುವುದರಿಂದ ಒಟ್ಟು 41 ಲಕ್ಷ ರೂ. ವೆಚ್ಚವಾಗಿದೆ ಎಂದು ತಿಳಿದುಬಂದಿದೆ. ಖಾದರ್ ಮುಖಕ್ಕೆ ಬೆಳಕು ನೀಡುವ ವಿಶೇಷ ಎಲ್ ಇ ಡಿ ಲೈಟ್ ಸೌಲಭ್ಯ ಹೊಂದಿದೆ. ಕಾರಿಗೆ ಜಿಆರ್ ಕಿಟ್ ಅಳವಡಿಸುವ ಮೂಲಕ ವಿಶೇಷ ವಿನ್ಯಾಸ ಮಾಡಲಾಗಿದ್ದು, ಇನ್ನು ಹಲವು ವಿಶೇಷತೆ ಈ ಕಾರು ಹೊಂದಿದೆ.
ಈ ಕಾರಿನಲ್ಲಿ 360 ಡಿಗ್ರಿ ಕ್ಯಾಮರ ವ್ಯವಸ್ಥೆ ಇದೆ. ಖಾದರ್ ಅವರ ಕಾರಿನ ನಂಬರ್ 01 ಆಗಿದ್ದು ಈ ಕಾರಿಗೂ ಅದೇ ನಂಬರ್ ಸಿಕ್ಕಿದೆ.
ಇನ್ನು ಕಾರಿನ ಮುಂಭಾಗ ಹಾಗೂ ಹಿಂಭಾಗದಲ್ಲಿ ಗಂಡಭೇರುಂಡ ಲಾಂಛನ ಹೊಂದಿದೆ. ರಾಜ್ಯಪಾಲರಿಗೆ ಹೊರತಾಗಿ ಸ್ಪೀಕರ್ ಗೆ ಮಾತ್ರ ಇದನ್ನು ಹಾಕಲು ಅವಕಾಶ ಇದೆ.
ಇನ್ನು, ಕೆಲ ವಾರಗಳ ಹಿಂದಷ್ಟೇ ರಾಜ್ಯ ಸರ್ಕಾರದ ಸಚಿವರ ಪ್ರಯಾಣಕ್ಕಾಗಿ 33 ಹೊಸ ಇನ್ನೊವಾ ಕ್ರಸ್ಟಾ ಹೈ ಬ್ರೀಡ್ ಕಾರನ್ನು ಖರೀದಿಸಲಾಗಿತ್ತು. ಸುಮಾರು 9.9 ಕೋಟಿ ರೂ. ವೆಚ್ಚದಲ್ಲಿ 33 ಸಚಿವರಿಗೆ ಹೊಸ ಕಾರು ಖರೀದಿ ಮಾಡಿ ನೀಡಲಾಗಿತ್ತು.
ವೈರಲ್ ನ್ಯೂಸ್
ಸಿಎಂ ಪುಟದಲ್ಲಿ ಮೊಳಗಿದ ಪುತ್ತೂರಿನ ಕಂಠ – ತುಳುನಾಡಿನ ಸಂಸ್ಕೃತಿ – ಭಾಷಾ ಸೊಗಡಿಗೆ ಧ್ವನಿಯಾದ ದಿವ್ಯಶ್ರೀ ರೈ ವಜ್ರದುಂಬಿ
ಪುತ್ತೂರು: ತುಳುವಿಗೆ ಕರ್ನಾಟಕದ ಎರಡನೇ ಹೆಚ್ಚುವರಿ ಆಡಳಿತ ಭಾಷೆಯ ಸ್ಥಾನಮಾನ ದೊರೆತ ಸಂಭ್ರಮದ ನಡುವೆಯೇ, ತುಳುನಾಡಿನ ಭಾಷೆ, ಸಂಸ್ಕೃತಿ ಹಾಗೂ ಪರಂಪರೆಯ ಸೊಬಗನ್ನು ಪರಿಚಯಿಸುವ ವಿಡಿಯೋವೊಂದಕ್ಕೆ ಪುತ್ತೂರಿನ ಕುಂಬ್ರದ ದಿವ್ಯಶ್ರೀ ರೈ ವಜ್ರದುಂಬಿ ಅವರು ನೀಡಿರುವ ಹಿನ್ನಲೆ ಧ್ವನಿ ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆಯುತ್ತಿದೆ.
ಸೆ.18ರಂದು ಮಂಗಳೂರಿನಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ತುಳುವನ್ನು ರಾಜ್ಯದ ಎರಡನೇ ಹೆಚ್ಚುವರಿ ಆಡಳಿತ ಭಾಷೆಯಾಗಿ ಗುರುತಿಸುವ ನಿರ್ಧಾರ ಕೈಗೊಳ್ಳಲಾಗಿತ್ತು. ಈ ಬೆಳವಣಿಗೆಯ ಬೆನ್ನಲ್ಲೇ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಅಧಿಕೃತ ಇನ್‌ಸ್ಟಾಗ್ರಾಂ ಪುಟದಲ್ಲಿ ತುಳು ಭಾಷೆ, ಸಾಹಿತ್ಯ ಹಾಗೂ ಸಂಸ್ಕೃತಿ ಆಚಾರ ವಿಚಾರವನ್ನು ಬಿಂಬಿಸುವ ವಿಡಿಯೋ ಹಂಚಿಕೊಳ್ಳಲಾಗಿದ್ದು, ಅದಕ್ಕೆ ದಿವ್ಯಶ್ರೀ ಅವರ ಕಂಠಸಿರಿ ಹಿನ್ನಲೆ ಧ್ವನಿಯಾಗಿತ್ತು.
ವಿಡಿಯೋದಲ್ಲಿ ತುಳುನಾಡಿನ ಪ್ರಕೃತಿ ಸೌಂದರ್ಯ, ಸಾಹಿತ್ಯ , ಸಂಸ್ಕೃತಿ, ಸಂಪ್ರದಾಯ, ಬದುಕಿನ ವೈವಿಧ್ಯ ಹಾಗೂ ತುಳು ಭಾಷೆಯ ಸೊಗಡನ್ನು ಮನಮುಟ್ಟುವ ರೀತಿಯಲ್ಲಿ ಕಟ್ಟಿಕೊಡಲಾಗಿದ್ದು, ಅದಕ್ಕೆ ದಿವ್ಯಶ್ರೀ ಅವರ ಧ್ವನಿ ಮತ್ತಷ್ಟು ಜೀವ ತುಂಬಿದೆ. ಮಾತುಗಳನ್ನು ಕೇವಲ ಕೇಳಿಸುವುದಕ್ಕಿಂತ, ಅವುಗಳ ಭಾವವನ್ನು ಕೇಳುಗರ ಮನಸ್ಸಿಗೆ ತಲುಪಿಸುವ ರೀತಿಯ ಅವರ ಧ್ವನಿ ನಿರೂಪಣೆ ವಿಡಿಯೋಗೆ ವಿಶೇಷ ಮೆರುಗು ನೀಡಿದೆ.
ಮುಖ್ಯಮಂತ್ರಿಗಳ ಅಧಿಕೃತ ಪುಟದಲ್ಲಿ ಪ್ರಸಾರವಾದ ಈ ವಿಡಿಯೋಗೆ ಅಲ್ಪಾವಧಿಯಲ್ಲೇ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಕೇವಲ ಎರಡು ದಿನಗಳಲ್ಲಿ ಸುಮಾರು 5 ಲಕ್ಷ ವೀಕ್ಷಣೆ ಪಡೆದುಕೊಂಡಿದೆ. ತುಳುವಿನ ಬಗ್ಗೆ ಭಾವನಾತ್ಮಕವಾಗಿ ಬೆಸೆದುಕೊಂಡಿರುವ ಕರಾವಳಿಯ ಜನರ ನಡುವೆ ಈ ವಿಡಿಯೋ ವಿಶೇಷ ಗಮನ ಸೆಳೆದಿದ್ದು, ದಿವ್ಯಶ್ರೀ ಅವರ ಕಂಠಸಿರಿಯೂ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಕಾರಣವಾಗಿದೆ.
ನಿರೂಪಕಿ ಹಾಗೂ ವಾಯ್ಸ್‌ಓವರ್ ಆರ್ಟಿಸ್ಟ್ ಆಗಿರುವ ದಿವ್ಯಶ್ರೀ, ತಮ್ಮ ಧ್ವನಿಯ ಏರಿಳಿತ, ಉಚ್ಚಾರಣೆಯ ಸ್ಪಷ್ಟತೆ ಹಾಗೂ ಭಾವಪೂರ್ಣ ನಿರೂಪಣೆಯ ಮೂಲಕ ತುಳುನಾಡಿನ ಮಣ್ಣಿನ ಸೊಗಡನ್ನು ಧ್ವನಿಯಲ್ಲೇ ಕಟ್ಟಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ತುಳು ಭಾಷೆಯ ಬಗ್ಗೆ ಹೆಮ್ಮೆ, ಕರಾವಳಿಯ ಸಂಸ್ಕೃತಿಯ ಬಗ್ಗೆ ಅಭಿಮಾನ ಹಾಗೂ ವಿಡಿಯೋದಲ್ಲಿನ ದೃಶ್ಯಗಳಿಗೆ ಹೊಂದಿಕೊಳ್ಳುವ ಧ್ವನಿ ನಿರೂಪಣೆ ಅವರ ವಾಯ್ಸ್‌ಓವರ್‌ನ ವಿಶೇಷತೆಯಾಗಿದೆ.
ಪ್ರಸ್ತುತ ಪುತ್ತೂರಿನ ವಿವೇಕಾನಂದ ಕಾಲೇಜಿನ ಸ್ನಾತಕೋತ್ತರ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿ ಕಾರ್ಯನಿರ್ವಹಿಸುತ್ತಿರುವ ದಿವ್ಯಶ್ರೀ, ಇದಕ್ಕೂ ಮೊದಲು ಹಲವು ಸುದ್ದಿ ಮಾಧ್ಯಮಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ಪತ್ರಿಕೋದ್ಯಮದ ಅನುಭವದ ಜತೆಗೆ ಡಾಕ್ಯುಮೆಂಟರಿ, ವಿಶೇಷ ವರದಿ ಹಾಗೂ ಜಾಹೀರಾತುಗಳಿಗೆ ಧ್ವನಿ ನೀಡಿರುವ ಅವರು ವಾಯ್ಸ್‌ಓವರ್ ಕ್ಷೇತ್ರದಲ್ಲೂ ತಮ್ಮದೇ ಛಾಪು ಮೂಡಿಸಿದ್ದಾರೆ. “ನಿಖರ ನ್ಯೂಸ್”ನ ಹಲವಾರು ವಿಡಿಯೋಗಳಲ್ಲೂ ನಿರೂಪಕಿಯಾಗಿ ಕಾರ್ಯನಿರ್ವಹಿಸಿದ್ದಾರೆ.
2023ರಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದಲ್ಲಿ ಪ್ರಥಮ ರ‍್ಯಾಂಕ್ ಗಳಿಸಿರುವ ದಿವ್ಯಶ್ರೀ, ಅಧ್ಯಯನ ಹಾಗೂ ವೃತ್ತಿ ಎರಡೂ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ.
ಅರಿಯಡ್ಕ ಗ್ರಾಮದ ತ್ಯಾಗರಾಜನಗರ ನಿವಾಸಿ ವಿಠಲ ರೈ ಹಾಗೂ ಶಾಲಿನಿ ರೈ ದಂಪತಿಯ ಪುತ್ರಿಯಾಗಿರುವ ದಿವ್ಯಶ್ರೀ ಅವರ ವೃತ್ತಿ ಬದುಕಿನ ಹೆಜ್ಜೆಗಳಿಗೆ ಸಹೋದರಿ ಮಧುಶ್ರೀ ರೈ ಅವರೂ ಪ್ರೋತ್ಸಾಹ ನೀಡುತ್ತಿದ್ದಾರೆ.
ತುಳುವಿಗೆ ಅಧಿಕೃತ ಮಾನ್ಯತೆ ದೊರೆತ ಸಂಭ್ರಮದ ಕ್ಷಣದಲ್ಲಿ, ತುಳುನಾಡಿನ ಕಥೆಯನ್ನು ತಮ್ಮ ಕಂಠದ ಮೂಲಕ ಸಾವಿರಾರು ಜನರಿಗೆ ತಲುಪಿಸಿದ ದಿವ್ಯಶ್ರೀ ರೈ ವಜ್ರದುಂಬಿ ಅವರ ಧ್ವನಿ ಈಗ ಪುತ್ತೂರಿನಿಂದ ತುಳುನಾಡಿನಾಚೆಗೂ ಕೇಳಿಸುತ್ತಿದೆ.
ಅಂತರ ರಾಜ್ಯ
Punjab-ಪಂಜಾಬ್ ವಿವಾಹದಲ್ಲಿ ವಧುವಿನ ಮೇಲೆ 8 ಕೋಟಿ ರೂ. ನೋಟುಗಳ ಮಳೆ: ಹಬ್ಬಿದ್ದ ವದಂತಿಗೆ ಬಿತ್ತು ಬ್ರೇಕ್; ಅಸಲಿ ಮೊತ್ತ ಎಷ್ಟು ಗೊತ್ತೇ?
ಪಂಜಾಬ್‌ನ ತರಣ್ ತರಣ್‌ನಲ್ಲಿ ಇತ್ತೀಚೆಗೆ ನಡೆದ ಅದ್ಧೂರಿ ವಿವಾಹವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಮದುವೆಯ ಸಂಭ್ರಮದಲ್ಲಿ ವರ ಮತ್ತು ವಧುವಿನ ಮೇಲೆ ಬರೋಬ್ಬರಿ 8 ಕೋಟಿ ರೂಪಾಯಿ ಮೌಲ್ಯದ ನೋಟುಗಳ ಸುರಿಮಳೆಗೈಯಲಾಗಿದೆ ಎಂಬ ಸುದ್ದಿ ಕಾಳ್ಗಿಚ್ಚಿನಂತೆ ಹರಡಿತ್ತು.
ಅಮೃತಸರ, ಫೆ.19: ಪಂಜಾಬ್‌ನ ತರಣ್ ತರಣ್‌ನಲ್ಲಿ ಇತ್ತೀಚೆಗೆ ನಡೆದ ಅದ್ಧೂರಿ ವಿವಾಹವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಮದುವೆಯ ಸಂಭ್ರಮದಲ್ಲಿ ವರ ಮತ್ತು ವಧುವಿನ ಮೇಲೆ ಬರೋಬ್ಬರಿ 8 ಕೋಟಿ ರೂಪಾಯಿ ಮೌಲ್ಯದ ನೋಟುಗಳ ಸುರಿಮಳೆಗೈಯಲಾಗಿದೆ ಎಂಬ ಸುದ್ದಿ ಕಾಳ್ಗಿಚ್ಚಿನಂತೆ ಹರಡಿತ್ತು.
ಘಟನೆಯ ಹಿನ್ನೆಲೆ:
ರಾಜಮನೆತನದ ಶೈಲಿಯಲ್ಲಿ ನಡೆದ ಈ ವಿವಾಹದಲ್ಲಿ, ಸಂಭ್ರಮಾಚರಣೆಯ ಭಾಗವಾಗಿ ನೋಟುಗಳನ್ನು ಗಾಳಿಯಲ್ಲಿ ತೂರಿ ಸುರಿಮಳೆಗೈಯಲಾಗಿತ್ತು. ಅತಿಥಿಗಳು ಈ ದೃಶ್ಯವನ್ನು ಕಂಡು ಆಶ್ಚರ್ಯಚಕಿತರಾಗಿದ್ದರು. ಈ ವಿಡಿಯೋ ಇಂಟರ್ನೆಟ್‌ನಲ್ಲಿ ಹರಿದಾಡುತ್ತಿದ್ದಂತೆ, ಕೆಲವರು ಇದನ್ನು ಶ್ರೀಮಂತಿಕೆಯ ಪ್ರದರ್ಶನ ಎಂದು ಟೀಕಿಸಿದರೆ, ಇನ್ನು ಕೆಲವರು ಇದು ಅಲ್ಲಿನ ಸಂಪ್ರದಾಯ ಎಂದು ಅಭಿಪ್ರಾಯಪಟ್ಟಿದ್ದರು. ಕೋಟ್ಯಂತರ ರೂಪಾಯಿ ಹಣವನ್ನು ಹೀಗೆ ಪೋಲು ಮಾಡಲಾಗುತ್ತಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗಳು ಆರಂಭವಾಗಿದ್ದವು.
ಅಸಲಿ ಸತ್ಯ ಬಹಿರಂಗ:
ಆದರೆ, ಈ ಹರಡಿದ್ದ ಸುದ್ದಿಯಲ್ಲಿ ಸತ್ಯಾಂಶವಿಲ್ಲ ಎಂಬುದು ಈಗ ತಿಳಿದುಬಂದಿದೆ. ಮದುವೆಯ ಕಾರ್ಯಕ್ರಮದಲ್ಲಿದ್ದ ಡಿಜೆ ಆಪರೇಟರ್ ಈ ಕುರಿತು ಅಸಲಿ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ. ವಾಸ್ತವವಾಗಿ ಅಲ್ಲಿ ಸುರಿಸಿದ್ದು 8 ಕೋಟಿ ರೂಪಾಯಿಗಳನ್ನಲ್ಲ, ಬದಲಿಗೆ ಕೇವಲ 3 ಲಕ್ಷ ರೂಪಾಯಿಗಳನ್ನು ಮಾತ್ರ!
ಹಣದ ರಾಶಿ ದೊಡ್ಡದಾಗಿ ಕಾಣಲು ಕಾರಣವೆಂದರೆ, ಅಲ್ಲಿ ಬಳಸಲಾದ ಬಹುಪಾಲು ನೋಟುಗಳು 10 ರೂಪಾಯಿ ಮುಖಬೆಲೆಯದ್ದಾಗಿದ್ದವು. ಕಡಿಮೆ ಮುಖಬೆಲೆಯ ನೋಟುಗಳು ಹೆಚ್ಚಿನ ಸಂಖ್ಯೆಯಲ್ಲಿದ್ದ ಕಾರಣ, ನೋಡುವವರಿಗೆ ಅದು ಕೋಟ್ಯಂತರ ರೂಪಾಯಿಯಂತೆ ಭಾಸವಾಗಿತ್ತು. “ಇದು ಕುಟುಂಬದ ಸಂತೋಷವನ್ನು ವ್ಯಕ್ತಪಡಿಸುವ ಒಂದು ವಿಧಾನ ಮತ್ತು ಸ್ಥಳೀಯ ಆಚರಣೆಯ ಭಾಗವಾಗಿದೆ” ಎಂದು ಸ್ಪಷ್ಟಪಡಿಸಲಾಗಿದೆ.
ವೈರಲ್ ನ್ಯೂಸ್
ಚೀನಾದಲ್ಲಿ ಇತಿಹಾಸ ನಿರ್ಮಾಣ : ಗಂಟೆಗೆ 700ಕಿಮೀ ವೇಗದಲ್ಲಿ ಸಂಚರಿಸುವ ರೈಲಿನ ಪ್ರಾಯೋಗಿಕ ಪರೀಕ್ಷೆ ಯಶಸ್ವಿ
ಬೀಜಿಂಗ್: ನವೀನ ತಂತ್ರಜ್ಞಾನಗಳಿಂದ ಜಗತ್ತನ್ನು ನಿಬ್ಬೆರಗುಗೊಳಿಸುವ ಚೀನಾ ಇದೀಗ ಮತ್ತೊಂದು ಇತಿಹಾಸ ನಿರ್ಮಿಸಿದೆ. ಗಂಟೆಗೆ 700 ಕಿ.ಮೀ ಸಂಚರಿಸುವ ಸೂಪರ್ ಕಂಡಕ್ಟಿವ್ ಮ್ಯಾಗ್ಲೆವ್ ರೈಲಿನ ಮಾದರಿಯ ಪ್ರಾಯೋಗಿಕ ಪರೀಕ್ಷೆಯನ್ನು ಚೀನಾ ಯಶಸ್ವಿಯಾಗಿ ನಡೆಸಿದೆ. ಈ ವೇಗ ನೂತನ ವಿಶ್ವದಾಖಲೆಯಾಗಿದೆ. ಒಂದು ವೇಳೆ ಈ ರೈಲು ನಿಜರೂಪ ಪಡೆದು ಹಳಿ ಮೇಲೆ ಓಡಿದರೆ ಅದು ವಿಶ್ವದ ಅತ್ಯಂತ ವೇಗದ ರೈಲು ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.
ಹಾಲಿ ಚೀನಾದಲ್ಲಿ ಇರುವ ಶಾಂಘೈ ಮ್ಲಾಗ್ಲೇವ್ ಗಂಟೆಗೆ 460 ಕಿ.ಮೀ ವೇಗದಲ್ಲಿ ಚಲಿಸುತ್ತಿದ್ದ ವಿಶ್ವದ ಅತಿವೇಗದ ರೈಲು ಎಂಬ ಹಿರಿಮೆ ಹೊಂದಿದೆ. ಪರೀಕ್ಷಿಸಿದ ರಾಷ್ಟ್ರೀಯ ರಕ್ಷಣಾ ತಂತ್ರಜ್ಞಾನ ವಿಶ್ವವಿದ್ಯಾನಿಲಯ
ಚೀನಾದ ರಾಷ್ಟ್ರೀಯ ರಕ್ಷಣಾ ತಂತ್ರಜ್ಞಾನ ವಿಶ್ವವಿದ್ಯಾನಿಲಯವು 700 ಕಿ.ಮೀ/ ಗಂಟೆಗೆ ಸಂಚರಿಸುವ ರೈಲಿನ ಮಾದರಿಯನ್ನು ಪರೀಕ್ಷಿಸಿದೆ. 400 ಮೀ.ಉದ್ದ ಮ್ಯಾಗ್ಲೆವ್ ಹಳಿಯ ಮೇಲೆ 1000 ಕೆಜಿ ತೂಕದ ರೈಲಿನ ಮಾದರಿಯನ್ನು ಪರೀಕ್ಷಿಸಲಾಗಿದೆ. ಈ ಪರೀಕ್ಷೆ ವೇಳೆ ಗಂಟೆಗೆ 700 ಕಿ.ಮೀ ದೂರ ಸಂಚರಿಸಬೇಕಾದ ವೇಗವನ್ನು ರೈಲು ಕೇವಲ 2 ಸೆಕೆಂಡ್‌ಗಳಲ್ಲೇ ಸಾಧಿಸುವ ಮೂಲಕ, ಯೋಜನೆಯ ಕಾರ್ಯಸಾಧು ಬಗ್ಗೆ ಭಾರೀ ನಿರೀಕ್ಷೆ ಹುಟ್ಟುಹಾಕಿದೆ. ಇದು ಇದುವರೆಗೆ ಪರೀಕ್ಷಿಸಲ್ಪಟ್ಟ ಅತ್ಯಂತ ವೇಗದ ಸೂಪರ್ ಕಂಡಕ್ಟಿಂಗ್ ಮ್ಯಾಗ್ಲೆವ್ ರೈಲಾಗಿದೆ.
ಸಂಶೋಧನಾ ತಂಡವು ಒಂದು ದಶಕದಿಂದ ಈ ಯೋಜನೆಗಾಗಿ ಶ್ರಮಿಸುತ್ತಿತ್ತು
ಸಂಶೋಧನಾ ತಂಡವು ಒಂದು ದಶಕದಿಂದ ಈ ಯೋಜನೆಗಾಗಿ ಶ್ರಮಿಸುತ್ತಿತ್ತು, ಇದೇ ವರ್ಷದ ಜನವರಿಯಲ್ಲಿ ಇದೇ ಹಳಿ ಮೇಲೆ 648 ಕಿ.ಮೀ/ ಗಂಟೆ ಸಂಚಾರದ ಪರೀಕ್ಷೆ ನಡೆಸಿತ್ತು. ಇದೀಗ ಆ ವೇಗ 700 ಕಿ.ಮೀಗೆ ಹೆಚ್ಚಿದೆ. ಮ್ಯಾಗ್ಲೇವ್ ತಂತ್ರಜ್ಞಾನದ ರೈಲುಗಳಿಗೆ ಚಕ್ರ ಇರುವುದಿಲ್ಲ. ಬದಲಾಗಿ ಅವು ಹಳಿ ಮತ್ತು ರೈಲಿನ ನಡುವೆ ಉತ್ಪತ್ತಿಯಾಗುವ ಅಯಂಸ್ಕಾತೀಯ ವಲಯದಲ್ಲಿ ಗಾಳಿಯಲ್ಲೇ ತೇಲಿಕೊಂಡು ಮುಂದೆ ಸಾಗುತ್ತದೆ.
-
ಸ್ಥಳೀಯ7 hours agoGanja-ಸಾಗರದ ಲಾಡ್ಜ್ನಲ್ಲಿ ಗಾಂಜಾ ಸೇವನೆ: ಯುವತಿ ಸೇರಿ ನಾಲ್ವರು ವಶಕ್ಕೆ – ಗಾಂಜಾ ಸಾಗಾಟಗಾರನ ಮಾಹಿತಿ ಬಿಚ್ಚಿಟ್ಟ ಯುವತಿ..!
-
ಬಿಗ್ ನ್ಯೂಸ್7 hours agoAYUSH Federation-ಡಾ. ಪ್ರದೀಪ್ ನಾವೂರು ಅವರ ಆರೋಗ್ಯ ಕ್ಲಿನಿಕ್ ಗೆ ಬೆಂಕಿ : ಆಯುಷ್ ಫೆಡರೇಶನ್ ತೀವ್ರ ಖಂಡನೆ
-
ಅಂತರ ರಾಜ್ಯ24 hours agoDK Shivakumar-‘ಸ್ಟಿಂಗ್ ಆಪರೇಷನ್’ ಬಗ್ಗೆ ಎಲ್ಲಾ ಮಾಹಿತಿ ಇದೆ..! ಚರ್ಚೆಗೆಂದು ಬಂದು ಏನೇನು ಮಾಡಿದ್ದಾರೆ ಎಂದು ಗೊತ್ತಿದೆ : ಇದರ ಪಿತಾಮಹ ಯಾರೆಂದೂ ತಿಳಿದಿದೆ : ಡಿಕೆಶಿ ಸ್ಫೋಟಕ ಹೇಳಿಕೆ
-
ಅಪರಾಧ7 hours agoUdupi-ಭೂಗತ ಪಾತಕಿ ಹೇಮಂತ್ ಪೂಜಾರಿ ಹೆಸರಿನಲ್ಲಿ ಬೆದರಿಕೆ ಕರೆ : ಉಡುಪಿ, ಮೂಲ್ಕಿಯಲ್ಲಿ 4 ಪ್ರಕರಣ ದಾಖಲು
-
ಸಿನೆಮಾ5 hours agoNana Patekar-ನಾನಾ ಪಾಟೇಕರ್ ಸಾವಿಗೆ ನಿಖರ ಕಾರಣವೇನು? ಗೋವಾ ಪೊಲೀಸರಿಂದ ಅಸಹಜ ಸಾವು ಪ್ರಕರಣ ದಾಖಲು
-
ಅಪರಾಧ5 hours agoRaid-ರಾಜ್ಯದ 45 ಐಸ್ಕ್ರೀಂ ಘಟಕಗಳ ಮೇಲೆ ದಾಳಿ: 4 ಕಡೆ ನಿಯಮ ಉಲ್ಲಂಘನೆ, ಅವಧಿ ಮೀರಿದ ಪದಾರ್ಥ ಪತ್ತೆ..!
-
ಬಿಗ್ ನ್ಯೂಸ್5 hours agoGreen card-ಇನ್ಫೋಸಿಸ್, ಟಿಸಿಎಸ್ ಸೇರಿ 8 ಐಟಿ ಕಂಪನಿಗಳಿಗೆ ಅಮೆರಿಕದ ಗ್ರೀನ್ ಕಾರ್ಡ್ ಪ್ರಕ್ರಿಯೆ ಸ್ಥಗಿತ
-
ಮಂಗಳೂರು23 hours agoMangaluru-ಬೆಳೆ ವಿಮೆ ಅನ್ಯಾಯ ಆರೋಪ: ಅ.9ರಂದು ಮಂಗಳೂರಿನಲ್ಲಿ ರೈತರ ಬೃಹತ್ ಹಕ್ಕೊತ್ತಾಯ | ಸಹಕಾರ ಭಾರತಿ – ಬಿಜೆಪಿ ಬೆಂಬಲ


















