ಜೀವನಶೈಲಿ
2024 Maruti swift Car: ಮಾರುತಿ ಸುಜುಕಿ ಕಂಪನಿಯಿಂದ ಸಿಹಿಸುದ್ದಿ: ಹೊಸ ಎಂಜಿನ್ ಮಹಿಮೆ – 40 ಕಿ. ಮೀ ಮೈಲೇಜ್ ಕೊಡುವ ಹೊಸ ಸ್ವಿಫ್ಟ್ ಬಿಡುಗಡೆ ಕ್ಷಣಗಣನೆ – ಬೆಲೆ ಎಷ್ಟಿದೆ ಗೊತ್ತೆ?
ಮಾರುತಿ ಸುಜುಕಿ ಕಂಪನಿಯು ತನ್ನ ಹೊಸ ತಲೆಮಾರಿನ ಸ್ವಿಫ್ಟ್ ಹ್ಯಾಚ್ ಬ್ಯಾಕ್ ಬಿಡುಗಡೆಗಾಗಿ ಸಿದ್ದವಾಗುತ್ತಿದ್ದು, ಹೊಸ ಕಾರು ಮಾದರಿಯು ಭಾರೀ ಬದಲಾವಣೆಯೊಂದಿಗೆ ಭರ್ಜರಿ ಫೀಚರ್ಸ್ ಗಳೊಂದಿಗೆ ಮಾರುಕಟ್ಟೆ ಪ್ರವೇಶಿಸುತ್ತಿದೆ.
ದೇಶದ ಪ್ರಸಿದ್ಧ ಕಾರು ಉತ್ಪಾದನಾ ಕಂಪನಿಯಾಗಿರುವ ಮಾರುತಿ ಸುಜುಕಿ (Maruti Suzuki) ತನ್ನ ಬಹುನೀರಿಕ್ಷಿತ ಸ್ವಿಫ್ಟ್ ಹ್ಯಾಚ್ ಬ್ಯಾಕ್ ಬಿಡುಗಡೆಗಾಗಿ ಅಂತಿಮ ಹಂತದ ಸಿದ್ದತೆ ನಡೆಸುತ್ತಿದ್ದು, ಹೊಸ ಕಾರು ಮಾದರಿಯು ಭರ್ಜರಿ ಫೀಚರ್ಸ್ ಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಲಿದೆ.
ಹೊಸ ತಲೆಮಾರಿನ ಸ್ವಿಫ್ಟ್ ಕಾರು ಮಾದರಿಯು ಜಪಾನಿನ ಟೋಕಿಯೋ ಶೋದಲ್ಲಿ ಬಿಡುಗಡೆಯಾಗಿದ್ದು, ಭಾರತದಲ್ಲಿ ಇದು ಮುಂಬರುವ 2024ರ ಮೊದಲ ತ್ರೈಮಾಸಿಕ ಅಂತ್ಯಕ್ಕೆ ಬಿಡುಗಡೆಯಾಗಲಿದೆ.

ಮುಂಬರಲಿರುವ ಮಾರುತಿ ಸ್ವಿಫ್ಟ್ ಹೆಚ್ಚಾಗಿ ಸದ್ದು ಮಾಡುತ್ತಿರುವುದು ಅದರ ಮೈಲೇಜ್‌ನಿಂದಾಗಿಯೇ, ಮೂಲಗಳ ಪ್ರಕಾರ ಈ ಕಾರು ಪರೀಕ್ಷೆಯಲ್ಲಿ ಬರೋಬ್ಬರಿ 40km/l ಮೈಲೇಜ್ ಅನ್ನು ಹಿಂದಿರುಗಿಸಿದೆ ಎಂದು ವರದಿಯಾಗಿದೆ. ಮಾರುತಿ ಸ್ವಿಫ್ಟ್‌ನ ಈ ಬೆರಗುಗೊಳಿಸುವ ಮೈಲೇಜ್‌ಗೆ ಪ್ರಮುಖ ಕಾರಣವೆಂದರೆ ಅದರ ಹೊಸ ಪವರ್‌ಟ್ರೇನ್.

ಜಪಾನ್ ನಲ್ಲಿ ಬಿಡುಗಡೆಯಾಗಿರುವ ಹೊಸ ಸ್ವಿಫ್ಟ್ ನಲ್ಲಿ ಜೆಡ್ ಸೀರಿಸ್ ನಲ್ಲಿರುವ ಜೆಡ್12ಇ 1.2 ಲೀಟರ್, ತ್ರಿ ಸಿಲಿಂಡರ್ ಪೆಟ್ರೋಲ್ ಎಂಜಿನ್ ಜೋಡಣೆ ಮಾಡಲಾಗಿದ್ದು, ಇದು ಪ್ಯೂರ್ ಪೆಟ್ರೋಲ್ ಮತ್ತು ಮೈಲ್ಡ್ ಹೈಬ್ರಿಡ್ ಪೆಟ್ರೋಲ್ ಎಂಜಿನ್ ಆಯ್ಕೆ ಹೊಂದಿದೆ. ಇದು ಸಿವಿಟಿ ಗೇರ್ ಬಾಕ್ಸ್ ಆಯ್ಕೆಯೊಂದಿಗೆ ಪ್ಯೂರ್ ಪೆಟ್ರೋಲ್ ಮಾದರಿಯು 82 ಹಾರ್ಸ್ ಪವರ್ ಮತ್ತು 108 ಎನ್ಎಂ ಟಾರ್ಕ್ ಉತ್ಪಾದಿಸಿದರೆ ಮೈಲ್ಡ್ ಹೈಬ್ರಿಡ್ ಮಾದರಿಯು ಪ್ಯೂರ್ ಪೆಟ್ರೋಲ್ ಮಾದರಿಗಿಂತ ಹೆಚ್ಚುವರಿಯಾಗಿ 3 ಹಾರ್ಸ್ ಪವರ್ ಮತ್ತು 60 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಹಿಂದಿನ ಸ್ವಿಫ್ಟ್ ಮಾದರಿಯಲ್ಲಿದ್ದ ಕೆ12 1.2ಡ್ ಲೀಟರ್ 4 ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಹೊಸ ತಂತ್ರಜ್ಞಾನ ಪ್ರೇರಿತ ಜೆಡ್12ಇ 1.2 ಲೀಟರ್, ತ್ರಿ ಸಿಲಿಂಡರ್ ಪೆಟ್ರೋಲ್ ಎಂಜಿನ್ ಆಯ್ಕೆಗೆ ಬದಲಾಯಿಸಲಾಗಿದ್ದು, ಇದು ಹಿಂದಿನ ಮಾದರಿಗಿಂತಲೂ ತುಸು ಕಡಿಮೆ ಹಾರ್ಸ್ ಪವರ್ ಹೊಂದಿದ್ದರೂ ಇಂಧನ ದಕ್ಷತೆಯಲ್ಲಿ ಸಾಕಷ್ಟು ಸುಧಾರಿಸಿದೆ.
ಹೊಸ ಸ್ವಿಫ್ಟ್ ಮಾದರಿಯಲ್ಲಿನ ಸಾಮಾನ್ಯ ಪೆಟ್ರೋಲ್ ಮಾದರಿಯು ಪ್ರತಿ ಲೀಟರ್ ಗೆ 23.04 ಕಿ.ಮೀ ಮೈಲೇಜ್ ನೀಡಿದ್ದಲ್ಲಿ ಹೈಬ್ರಿಡ್ ತಂತ್ರಜ್ಞಾನ ಪ್ರೇರಿತ ಮಾದರಿಯು ಪ್ರತಿ ಲೀಟರ್ ಗೆ 24.05 ಕಿ.ಮೀ ಮೈಲೇಜ್ ನೀಡಲಿದ್ದು, ಶೀಘ್ರದಲ್ಲಿಯೇ ಇದು ಆಯ್ದ ಅಂತಾರಾಷ್ಟ್ರೀಯ ಮಾರುಕಟ್ಟೆಗಳಿಗಾಗಿ 4×4 ಡ್ರೈವ್ ಸಿಸ್ಟಂ ಆಯ್ಕೆಯನ್ನು ಸಹ ಪಡೆದುಕೊಳ್ಳುತ್ತಿದೆ.

ಪರೀಕ್ಷಾ ಪರಿಸ್ಥಿತಿಗಳಲ್ಲಿ ಝಡ್-ಸೀರಿಸ್ ಎಂಜಿನ್ ಸುಮಾರು 40 ಕಿ.ಮೀ ಮೈಲೇಜ್ ನೀಡಿದೆ ಎನ್ನಲಾಗಿದ್ದು ಅಸ್ತಿತ್ವದಲ್ಲಿರುವ ಸ್ವಿಫ್ಟ್ ಎಂಜಿನ್ ಗಿಂತ ಇದು ಗಮನಾರ್ಹ ಸುಧಾರಣೆಯಾಗಿದೆ. ಪ್ರಸ್ತುತ ಸ್ವಿಫ್ಟ್ ನ ಎಂಜಿನ್ ಮ್ಯಾನುವಲ್ ಟ್ರಾನ್ಸ್ ಮಿಷನ್ ನೊಂದಿಗೆ 22.38 ಕಿ.ಮೀ ಮತ್ತು ಎಜಿಎಸ್ (ಆಟೋ ಗೇರ್ ಶಿಫ್ಟ್) ನೊಂದಿಗೆ 22.56 ಕಿ.ಮೀ ಮೈಲೇಜ್ ನೀಡುತ್ತದೆ.
ಆದರೆ ಭಾರತದಲ್ಲಿ ಬಿಡುಗಡೆಯಾಗಲಿರುವ ಸ್ವಿಫ್ಟ್ ಮಾದರಿಯು ಜೆಡ್12ಇ 1.2 ಲೀಟರ್, ತ್ರಿ ಸಿಲಿಂಡರ್ ಪೆಟ್ರೋಲ್ ಎಂಜಿನ್ ನೊಂದಿಗೆ ಮೈಲ್ಡ್ ಹೈಬ್ರಿಡ್ ಆಯ್ಕೆ ಪಡೆದುಕೊಳ್ಳಬಹುದಾಗಿದ್ದು, ಇದು ಎಎಂಟಿ ಮತ್ತು ಮ್ಯಾನುವಲ್ ಗೇರ್ ಬಾಕ್ಸ್ ಆಯ್ಕೆಯನ್ನು ಹೊಂದಿದೆ. ಭಾರತದಲ್ಲಿ ಬಿಡುಗಡೆಯಾಗಿರುವ ಸ್ವಿಫ್ಟ್ ಸಹ ಜಪಾನ್ ಮಾರುಕಟ್ಟೆಯಲ್ಲಿನ ಮಾದರಿಯೆಂತೆಯೇ ಮೈಲೇಜ್ ನೀಡಲಿದ್ದು, ಇದು ಫ್ರಂಟ್ ಡ್ರೈವ್ ಸಿಸ್ಟಂ ಆಯ್ಕೆ ಮಾತ್ರ ಹೊಂದಿರಲಿದೆ.
ಇನ್ನು ಈ ಕಾರಿನಲ್ಲಿ ಮರುವಿನ್ಯಾಸಗೊಳಿಸಲಾದ ಬಾನೆಟ್, ಮತ್ತಷ್ಟು ಸ್ಪೋರ್ಟಿಯಾಗಿರುವ ಹನಿಕೊಬ್ ಬಂಪರ್, ಹೊಸ ವಿನ್ಯಾಸದ ಎಲ್ಇಡಿ ಹೆಡ್ ಲ್ಯಾಂಪ್ಸ್, ಹೊಸ ಫಾಗ್ ಲ್ಯಾಂಪ್ಸ್ ಮತ್ತು ಆಕರ್ಷಕವಾದ ಸೈಡ್ ಪ್ರೊಫೈಲ್ ಹೊಂದಿದೆ. ಹೀಗಾಗಿ ಬೆಲೆಯಲ್ಲಿ ತುಸು ದುಬಾರಿಯಾಗಲಿರುವ ಹೊಸ ಕಾರು ಎಕ್ಸ್ ಶೋರೂಂ ಪ್ರಕಾರ ರೂ. 6.50 ಲಕ್ಷದಿಂದ ರೂ. 10 ಲಕ್ಷ ರೂ ಬೆಲೆ ಇರಲಿದೆ.
ಮಂಗಳೂರು
CM-ಒಂದು ಅಭಿನಂದನೆಯೂ ಇಲ್ಲ ಎಂದು ಕ್ರೀಡಾಪಟುವಿನಿಂದ ಬೇಸರ ವ್ಯಕ್ತವಾದ ಕೂಡಲೇ ಪೂವಮ್ಮಗೆ ಕರೆ ಮಾಡಿದ ಸಿಎಂ..! ಏನೂ ಹೇಳಿದ್ರು ಗೊತ್ತೇ..?
ಏಷ್ಯನ್ ಗೇಮ್ಸ್‌ನಲ್ಲಿ ಭಾರತಕ್ಕೆ ಬಂಗಾರದ ಪದಕ ತಂದುಕೊಟ್ಟ ಮಂಗಳೂರಿನ ಹೆಮ್ಮೆಯ ಅಥ್ಲೀಟ್ ಎಂ.ಆರ್. ಪೂವಮ್ಮ ಅವರ ಸಾಧನೆಯನ್ನು ಮುಕ್ತಕಂಠದಿಂದ ಶ್ಲಾಘಿಸಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಅವರಿಗೆ ದೂರವಾಣಿ ಕರೆ ಮಾಡಿ ಶುಭಾಶಯ ಕೋರಿದ್ದಾರೆ. ಅಲ್ಲದೆ ಅಕ್ಟೋಬರ್ 6 ರಂದು ಬೆಂಗಳೂರಿನಲ್ಲಿ ತಮ್ಮನ್ನು ಭೇಟಿಯಾಗುವಂತೆ ಆಹ್ವಾನ ನೀಡಿದ್ದಾರೆ.

ಮಂಗಳೂರು, ಅ.03: ಏಷ್ಯನ್ ಗೇಮ್ಸ್‌ನಲ್ಲಿ ಭಾರತಕ್ಕೆ ಬಂಗಾರದ ಪದಕ ತಂದುಕೊಟ್ಟ ಮಂಗಳೂರಿನ ಹೆಮ್ಮೆಯ ಅಥ್ಲೀಟ್ ಎಂ.ಆರ್. ಪೂವಮ್ಮ ಅವರ ಸಾಧನೆಯನ್ನು ಮುಕ್ತಕಂಠದಿಂದ ಶ್ಲಾಘಿಸಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಅವರಿಗೆ ದೂರವಾಣಿ ಕರೆ ಮಾಡಿ ಶುಭಾಶಯ ಕೋರಿದ್ದಾರೆ. ಅಲ್ಲದೆ ಅಕ್ಟೋಬರ್ 6 ರಂದು ಬೆಂಗಳೂರಿನಲ್ಲಿ ತಮ್ಮನ್ನು ಭೇಟಿಯಾಗುವಂತೆ ಆಹ್ವಾನ ನೀಡಿದ್ದಾರೆ.
ತನ್ನದೇ ತಂಡದ ಬೇರೆ ಕ್ರೀಡಾಪಟುಗಳಿಗೆ ಅಲ್ಲಿನ ಸಿಎಂ ಹಾಗೂ ಇತರ ಮಂತ್ರಿಗಳು ಫೋನ್ ಮೂಲಕ ಅಭಿನಂದಿಸಿದ್ದಾರೆ ಹಾಗೂ ಕರ್ನಾಟಕದಲ್ಲಿ ಕೇವಲ 30 ಲಕ್ಷ ಬಹುಮಾನ ನೀಡಲಾಗುತ್ತಿದೆ ಬೇರೆ ರಾಜ್ಯದಲ್ಲಿ 1 ಕೋಟಿ ಬಹುಮಾನ ನೀಡುತ್ತಾರೆ ಎಂದು ಸಾಧಕಿ ಪೂವಮ್ಮ ನಿನ್ನೆ ಬೇಸರ ವ್ಯಕ್ತಪಡಿಸಿದ್ದರು.
ಅದ್ಧೂರಿ ಸ್ವಾಗತ:
ಜಪಾನ್‌ನಲ್ಲಿ ನಡೆದ ಏಷ್ಯನ್ ಗೇಮ್ಸ್‌ನ 4×400 ಮೀಟರ್ ಮಹಿಳೆಯರ ರಿಲೇ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದ ಪೂವಮ್ಮ, ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆ ಅಭಿಮಾನಿಗಳು ಹಾಗೂ ಸಾರ್ವಜನಿಕರು ಹೂಮಳೆಗರೆದು ಅದ್ಧೂರಿ ಸ್ವಾಗತ ಕೋರಿದರು. ಇದು ಪೂವಮ್ಮ ಭಾಗವಹಿಸಿದ 3ನೇ ಏಷ್ಯನ್ ಗೇಮ್ಸ್ ಆಗಿದ್ದು, ಒಟ್ಟಾರೆಯಾಗಿ ಅವರ 6ನೇ ಪದಕವಾಗಿದೆ. ಕ್ರೀಡಾಂಗಣದಲ್ಲಿ ಭಾರತದ ರಾಷ್ಟ್ರಗೀತೆ ಮೊಳಗಿದ್ದು ಅತ್ಯಂತ ಹೆಮ್ಮೆಯ ಕ್ಷಣ ಎಂದು ಅವರು ಹರ್ಷ ವ್ಯಕ್ತಪಡಿಸಿದ್ದಾರೆ.
ಹಲವು ಗಣ್ಯರಿಂದ ಅಭಿನಂದನೆ
ಆರಂಭದಲ್ಲಿ ತಮಗೆ ಸೂಕ್ತ ಗೌರವ ಹಾಗೂ ಶುಭಾಶಯಗಳು ದೊರೆಯದಿದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದ ಪೂವಮ್ಮ, ಬಳಿಕ ಡಿಸಿಎಂ, ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಸೇರಿದಂತೆ ಹಲವು ಗಣ್ಯರಿಂದ ಅಭಿನಂದನೆಗಳನ್ನು ಸ್ವೀಕರಿಸಿದರು.
ಇದೇ ವೇಳೆ ಕ್ರೀಡಾಪಟುಗಳ ಪ್ರೋತ್ಸಾಹಧನ ಹೆಚ್ಚಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದ ಪೂವಮ್ಮ, “ಹರಿಯಾಣ ಸೇರಿದಂತೆ ಇತರ ರಾಜ್ಯಗಳಲ್ಲಿ ಚಿನ್ನ ಗೆದ್ದವರಿಗೆ 3 ಕೋಟಿ ರೂ. ನಗದು ಬಹುಮಾನ ನೀಡಲಾಗುತ್ತಿದೆ. ಆದರೆ ನಮ್ಮ ಕರ್ನಾಟಕದಲ್ಲಿ ಕೇವಲ 35 ಲಕ್ಷ ರೂ. ಮಾತ್ರ ನೀಡಲಾಗುತ್ತಿದೆ. ಯುವ ಅಥ್ಲೀಟ್‌ಗಳನ್ನು ಪ್ರೋತ್ಸಾಹಿಸಲು ಈ ಬಹುಮಾನದ ಮೊತ್ತವನ್ನು ಹೆಚ್ಚಿಸಬೇಕು,” ಎಂದು ಒತ್ತಾಯಿಸಿದ್ದಾರೆ.
ಆರೋಗ್ಯ
Puttur-ಸೆ.29: ವಿಶ್ವ ಹೃದಯ ದಿನ: ಪುತ್ತೂರಿನ ಮೆಡ್‌ಲ್ಯಾಂಡ್ ಆಸ್ಪತ್ರೆಯಲ್ಲಿ ಹೃದಯ ತಪಾಸಣಾ ಶಿಬಿರ
ವಿಶ್ವ ಹೃದಯ ದಿನದ ಅಂಗವಾಗಿ ಪುತ್ತೂರಿನ ಸಂಪ್ಯದಲ್ಲಿರುವ ಮೆಡ್‌ಲ್ಯಾಂಡ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಸೆ.29, ಮಂಗಳವಾರದಂದು ಸಂಜೆ ಗಂಟೆ 3ರಿಂದ ವಿಶೇಷ ಹೃದಯ ತಪಾಸಣಾ ಶಿಬಿರ ಹಾಗೂ ಮಾಹಿತಿ ಕಾರ್ಯಾಗಾರವನ್ನು ಆಯೋಜಿಸಲಾಗಿದೆ.
ಪುತ್ತೂರು: ವಿಶ್ವ ಹೃದಯ ದಿನದ ಅಂಗವಾಗಿ ಪುತ್ತೂರಿನ ಸಂಪ್ಯದಲ್ಲಿರುವ ಮೆಡ್‌ಲ್ಯಾಂಡ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಸೆ.29, ಮಂಗಳವಾರದಂದು ಸಂಜೆ ಗಂಟೆ 3ರಿಂದ ವಿಶೇಷ ಹೃದಯ ತಪಾಸಣಾ ಶಿಬಿರ ಹಾಗೂ ಮಾಹಿತಿ ಕಾರ್ಯಾಗಾರವನ್ನು ಆಯೋಜಿಸಲಾಗಿದೆ.
ಶಿಬಿರದಲ್ಲಿ ಹೃದಯದ ಆರೋಗ್ಯಕ್ಕೆ ಸಂಬಂಧಿಸಿದಂತೆ ಇ.ಸಿ.ಜಿ., ಇಕೋ (ECHO), ಟಿ.ಎಂ.ಟಿ. (TMT) ಸೇರಿದಂತೆ ಅಗತ್ಯ ತಪಾಸಣೆಗಳನ್ನು ನಡೆಸಲಾಗುವುದು. ತಪಾಸಣೆಯ ಬಳಿಕ ಹೃದ್ರೋಗ ತಜ್ಞ ವೈದ್ಯರಿಂದ ಸೂಕ್ತ ಸಲಹೆ ಮತ್ತು ಮಾರ್ಗದರ್ಶನವೂ ದೊರೆಯಲಿದೆ.
ಹೃದಯ ಸಂಬಂಧಿ ಕಾಯಿಲೆಗಳನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚಿ ಸೂಕ್ತ ಚಿಕಿತ್ಸೆ ಪಡೆಯಲು ಶಿಬಿರವು ಸಾರ್ವಜನಿಕರಿಗೆ ಉಪಯುಕ್ತ ಅವಕಾಶವಾಗಲಿದೆ. ವಿಶೇಷವಾಗಿ ಎದೆನೋವು, ಉಸಿರಾಟದ ತೊಂದರೆ, ಹೃದಯ ಬಡಿತದಲ್ಲಿ ವ್ಯತ್ಯಾಸ, ಅಧಿಕ ರಕ್ತದೊತ್ತಡ, ಮಧುಮೇಹ ಅಥವಾ ಕುಟುಂಬದಲ್ಲಿ ಹೃದಯ ಕಾಯಿಲೆಯ ಹಿನ್ನೆಲೆ ಹೊಂದಿರುವವರು ಶಿಬಿರದ ಪ್ರಯೋಜನ ಪಡೆಯುವಂತೆ ಆಸ್ಪತ್ರೆಯ ಆಡಳಿತ ಮಂಡಳಿ ಮನವಿ ಮಾಡಿದೆ.
ಹೃದಯದ ಆರೋಗ್ಯದ ಬಗ್ಗೆ ಮುನ್ನೆಚ್ಚರಿಕೆ ವಹಿಸುವುದು ಹಾಗೂ ನಿಯಮಿತ ತಪಾಸಣೆ ಮಾಡಿಸಿಕೊಳ್ಳುವ ಮೂಲಕ ಆರೋಗ್ಯಕರ ಜೀವನಶೈಲಿಯನ್ನು ರೂಢಿಸಿಕೊಳ್ಳುವಂತೆ ಆಸ್ಪತ್ರೆ ತಿಳಿಸಿದೆ.
ಲೇಖನಗಳು
Mercury-ಬುಧನ ನಕ್ಷತ್ರ ಬದಲಾವಣೆ: ಈ 5 ರಾಶಿಯವರಿಗೆ ಇಂದಿನಿಂದ ‘ರಾಜಯೋಗ’, ಅದೃಷ್ಟದ ಬಾಗಿಲು ಓಪನ್..!
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗ್ರಹಗಳ ರಾಜಕುಮಾರ ಎಂದೇ ಕರೆಯಲ್ಪಡುವ ‘ಬುಧ’ ಇಂದು ತನ್ನ ನಕ್ಷತ್ರವನ್ನು ಬದಲಾಯಿಸುತ್ತಿದ್ದಾನೆ. ಸದ್ಯ ಪೂರ್ವಫಲ್ಗುಣಿ ನಕ್ಷತ್ರದಲ್ಲಿರುವ ಬುಧನು ಇಂದು (ಶನಿವಾರ) ಸಂಜೆ 4:31ಕ್ಕೆ ಸೂರ್ಯನ ಅಧಿಪತ್ಯದ ‘ಉತ್ತರಾಫಲ್ಗುಣಿ’ ನಕ್ಷತ್ರಕ್ಕೆ ಪ್ರವೇಶಿಸಲಿದ್ದಾನೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗ್ರಹಗಳ ರಾಜಕುಮಾರ ಎಂದೇ ಕರೆಯಲ್ಪಡುವ ‘ಬುಧ’ ಇಂದು ತನ್ನ ನಕ್ಷತ್ರವನ್ನು ಬದಲಾಯಿಸುತ್ತಿದ್ದಾನೆ. ಸದ್ಯ ಪೂರ್ವಫಲ್ಗುಣಿ ನಕ್ಷತ್ರದಲ್ಲಿರುವ ಬುಧನು ಇಂದು (ಶನಿವಾರ) ಸಂಜೆ 4:31ಕ್ಕೆ ಸೂರ್ಯನ ಅಧಿಪತ್ಯದ ‘ಉತ್ತರಾಫಲ್ಗುಣಿ’ ನಕ್ಷತ್ರಕ್ಕೆ ಪ್ರವೇಶಿಸಲಿದ್ದಾನೆ.
ಈ ನಕ್ಷತ್ರ ಬದಲಾವಣೆಯು ಮುಂದಿನ 13 ದಿನಗಳ ಕಾಲ ಎಲ್ಲಾ ರಾಶಿಗಳ ಮೇಲೆ ಪ್ರಭಾವ ಬೀರಲಿದ್ದರೂ, 5 ರಾಶಿಯವರಿಗೆ ಮಾತ್ರ ಅತ್ಯಂತ ಶುಭ ಫಲಗಳನ್ನು ನೀಡಲಿದೆ. ಉದ್ಯೋಗ, ವ್ಯವಹಾರ ಮತ್ತು ಆರ್ಥಿಕವಾಗಿ ಲಾಭ ಪಡೆಯಲಿರುವ ಆ ಅದೃಷ್ಟದ ರಾಶಿಗಳು ಇಲ್ಲಿವೆ:
ವೃಷಭ ರಾಶಿ
ವೃಷಭ ರಾಶಿಯವರಿಗೆ ಬುಧನ ನಕ್ಷತ್ರ ಬದಲಾವಣೆ ಹೊಸ ಅವಕಾಶಗಳ ಬಾಗಿಲು ತೆರೆಯಬಹುದು. ವೃತ್ತಿಜೀವನದಲ್ಲಿ ಬಹುದಿನಗಳಿಂದ ಎದುರು ನೋಡುತ್ತಿದ್ದ ಅವಕಾಶಗಳು ಸಿಗುವ ಸಾಧ್ಯತೆಯಿದೆ. ಕೆಲಸದಲ್ಲಿ ಹಿರಿಯ ಅಧಿಕಾರಿಗಳ ಸಂಪೂರ್ಣ ಬೆಂಬಲ ದೊರೆಯುವುದರಿಂದ ನಿಮ್ಮ ಯೋಜನೆಗಳನ್ನು ಯಶಸ್ವಿಯಾಗಿ ಮುಂದಕ್ಕೆ ಕೊಂಡೊಯ್ಯಬಹುದು. ಇದರಿಂದ ವೃತ್ತಿಯಲ್ಲಿ ಆತ್ಮವಿಶ್ವಾಸವೂ ಹೆಚ್ಚಾಗಬಹುದು. ಉದ್ಯೋಗದ ಜೊತೆಗೆ ಕುಟುಂಬದ ವಿಚಾರದಲ್ಲೂ ಈ ಅವಧಿ ಖುಷಿ ನೀಡಬಹುದು. ಕುಟುಂಬದವರೊಂದಿಗೆ ಪ್ರವಾಸ ಅಥವಾ ಮಕ್ಕಳೊಂದಿಗೆ ವಿಶೇಷ ಸಮಯ ಕಳೆಯುವ ಅವಕಾಶ ಸಿಗಬಹುದು. ಒಟ್ಟಿನಲ್ಲಿ, ಕೆಲಸದಲ್ಲಿ ಪ್ರಗತಿ ಮತ್ತು ಕುಟುಂಬದಲ್ಲಿ ಸಂತೋಷ ಎರಡೂ ಒಟ್ಟಿಗೆ ಸಿಗುವ ಆಹ್ಲಾದಕರ ದಿನಗಳು ನಿಮ್ಮದಾಗಬಹುದು.
ಮಿಥುನ ರಾಶಿ
ಬುಧನ ಬದಲಾವಣೆ ಮಿಥುನ ರಾಶಿಯವರಿಗೆ ಹಣದ ವಿಚಾರದಲ್ಲಿ ಹೊಸ ದಾರಿ ತೋರಿಸಬಹುದು. ವ್ಯಾಪಾರದಲ್ಲಿ ತೊಡಗಿರುವವರಿಗೆ ಹೊಸ ಯೋಜನೆಗಳು ಮತ್ತು ಪ್ರಮುಖ ಒಪ್ಪಂದಗಳನ್ನು ಅಂತಿಮಗೊಳಿಸುವ ಅವಕಾಶ ಸಿಗಬಹುದು. ಈಗ ಮಾಡಿಕೊಳ್ಳುವ ಕೆಲವು ವ್ಯವಹಾರ ಸಂಪರ್ಕಗಳು ಮುಂದಿನ ದಿನಗಳಲ್ಲಿ ದೊಡ್ಡ ಲಾಭ ತಂದುಕೊಡುವ ಸಾಧ್ಯತೆಯಿದೆ. ನಿಮ್ಮ ಪರಿಶ್ರಮಕ್ಕೆ ತಕ್ಕ ಫಲ ಸಿಗುವ ಸಮಯ ಇದಾಗಿದ್ದು, ಆದಾಯ ಗಳಿಸಲು ಹೊಸ ಮಾರ್ಗಗಳು ತೆರೆದುಕೊಳ್ಳಬಹುದು. ಹಣಕಾಸಿನ ಪರಿಸ್ಥಿತಿಯಲ್ಲೂ ಸುಧಾರಣೆ ಕಂಡುಬರಬಹುದು. ವ್ಯವಹಾರ ವಿಸ್ತರಣೆ ಜೊತೆಗೆ ಆದಾಯ ಹೆಚ್ಚಿಸಿಕೊಳ್ಳುವ ಅವಕಾಶವೂ ಒಟ್ಟಿಗೆ ಒಲಿದುಬರಬಹುದು.
ಸಿಂಹ ರಾಶಿ
ಸಿಂಹ ರಾಶಿಯವರಿಗೆ ಇಂದಿನಿಂದಲೇ ಶುಭ ಸುದ್ದಿಗಳ ನಿರೀಕ್ಷೆ. ಸೂರ್ಯನ ಅಧಿಪತ್ಯದ ಸಿಂಹ ರಾಶಿಯವರಿಗೆ ಬುಧನ ನಕ್ಷತ್ರ ಬದಲಾವಣೆ ವಿಶೇಷವಾಗಿರಬಹುದು. ವಿಶೇಷವಾಗಿ ಸೆಪ್ಟೆಂಬರ್ 13ರವರೆಗಿನ ಅವಧಿ ಹಲವು ವಿಚಾರಗಳಲ್ಲಿ ಅನುಕೂಲಕರವಾಗಿರಬಹುದು. ನೀವು ಅಂದುಕೊಂಡ ಕೆಲಸಗಳು ನಿರೀಕ್ಷೆಯಂತೆ ನಡೆಯುವ ಸಾಧ್ಯತೆಯಿದ್ದು, ಮನಸ್ಸಿನಲ್ಲೂ ಹೊಸ ಉತ್ಸಾಹ ಮೂಡಬಹುದು. ಮನೆಯ ವಾತಾವರಣ ಸಂತೋಷದಿಂದ ಕೂಡಿರಲಿದ್ದು, ಕುಟುಂಬದವರಿಂದ ಉತ್ತಮ ಬೆಂಬಲ ಸಿಗಬಹುದು. ಹಣಕಾಸಿನ ವಿಚಾರಗಳಲ್ಲೂ ಸ್ಥಿರತೆ ಹೆಚ್ಚಾಗುವ ಸಾಧ್ಯತೆಯಿದೆ. ಹಣದ ಚಿಂತೆ ಕಡಿಮೆಯಾಗಿ ಮನಸ್ಸಿಗೆ ನೆಮ್ಮದಿ, ಕೆಲಸದಲ್ಲಿ ಸ್ಪಷ್ಟತೆ ಸಿಗುವ ದಿನಗಳು ಆರಂಭವಾಗಬಹುದು.
ವೃಶ್ಚಿಕ ರಾಶಿ
ಮುಂದಿನ ದಿನಗಳು ವೃಶ್ಚಿಕ ರಾಶಿಯವರಿಗೆ ಹೊಸ ಅನುಭವಗಳ ಜೊತೆಗೆ ನೆಮ್ಮದಿಯನ್ನೂ ತರಬಹುದು. ಇಂದಿನಿಂದ ಸೆ.13ರವರೆಗಿನ ಅವಧಿ ನಿಮಗೆ ವಿಶೇಷವಾಗಿರಬಹುದು. ಹೊಸ ವಿಷಯಗಳನ್ನು ಕಲಿಯಲು ಮತ್ತು ನಿಮ್ಮ ಜ್ಞಾನವನ್ನು ವಿಸ್ತರಿಸಿಕೊಳ್ಳಲು ಉತ್ತಮ ಅವಕಾಶಗಳು ಸಿಗಬಹುದು. ಕುಟುಂಬದವರೊಂದಿಗೆ ಪ್ರವಾಸಕ್ಕೆ ಯೋಜನೆ ರೂಪಿಸುವ ಸಾಧ್ಯತೆಯಿದ್ದು, ಬಹುದಿನಗಳಿಂದ ಬಯಸುತ್ತಿದ್ದವರೊಂದಿಗೆ ಗುಣಮಟ್ಟದ ಸಮಯ ಕಳೆಯಬಹುದು. ಇದೇ ಸಮಯದಲ್ಲಿ ಧಾರ್ಮಿಕ ಮತ್ತು ಆಧ್ಯಾತ್ಮಿಕ ಚಟುವಟಿಕೆಗಳತ್ತ ಆಸಕ್ತಿ ಹೆಚ್ಚಾಗಬಹುದು. ಕುಟುಂಬದ ಸಂತೋಷ, ಹೊಸ ಕಲಿಕೆ ಮತ್ತು ಮನಸ್ಸಿನ ನೆಮ್ಮದಿ-ಮೂರೂ ಒಂದೇ ಸಮಯದಲ್ಲಿ ಸಿಗುವ ಸಾಧ್ಯತೆಯಿದೆ.
ಧನು ರಾಶಿ
ಬುಧನ ನಕ್ಷತ್ರ ಬದಲಾವಣೆ ಧನು ರಾಶಿಯವರಿಗೆ ಪ್ರಗತಿಯ ಹೊಸ ಬಾಗಿಲು ತೆರೆಯಬಹುದು. ಉದ್ಯೋಗದಲ್ಲಿರುವವರಿಗೆ ತಮ್ಮ ಕ್ಷೇತ್ರದಲ್ಲಿ ಮುನ್ನಡೆಯಲು ಉತ್ತಮ ಅವಕಾಶಗಳು ದೊರೆಯಬಹುದು. ವ್ಯವಹಾರಸ್ಥರಿಗೂ ಹೊಸ ಅವಕಾಶಗಳು ಸಿಗುವ ಸಾಧ್ಯತೆಯಿದ್ದು, ಕೈಗೆತ್ತಿಕೊಂಡ ಕೆಲಸಗಳಲ್ಲಿ ಯಶಸ್ಸು ಕಾಣಬಹುದು. ನಿಮ್ಮ ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗುವ ಸಾಧ್ಯತೆಯಿದ್ದು, ಆರ್ಥಿಕ ಲಾಭವೂ ದೊರೆಯಬಹುದು. ಯಶಸ್ಸಿನ ಅನುಭವದಿಂದ ಆತ್ಮವಿಶ್ವಾಸ ಮತ್ತಷ್ಟು ಹೆಚ್ಚಾಗಲಿದೆ. ಕೆಲಸದಲ್ಲಿ ಯಶಸ್ಸು, ಹಣದಲ್ಲಿ ಲಾಭ ಮತ್ತು ಆತ್ಮವಿಶ್ವಾಸದ ಹೆಚ್ಚಳ-ಧನು ರಾಶಿಯವರಿಗೆ ಶುಭ ದಿನಗಳು ಆರಂಭವಾಗಬಹುದು.
-
ಬಿಗ್ ನ್ಯೂಸ್21 hours agoKaavu-BIG BREAKING: ಕಾವು ಬಳಿ ಹೆದ್ದಾರಿಗೆ ಉರುಳಿದ ಮರಗಳು, ಹೈಟೆನ್ಷನ್ ವಿದ್ಯುತ್ ಕಂಬ : ಮಾಣಿ – ಮೈಸೂರು ಹೈವೆಯಲ್ಲಿ ವಾಹನ ಸಂಚಾರ ಸ್ಥಗಿತ
-
ಮಂಗಳೂರು23 hours agoMangalore-ಮಂಗಳೂರು : 2 ತಿಂಗಳ ಬಳಿಕ ಸಮಾಧಿಯಿಂದ ಹೊರಬರಲಿದೆ ಆಲ್ಬರ್ಟ್ ರೇಗೋ ಶವ..!; ಮಗಳಿಂದಲೇ ತಂದೆಯ ಕೊಲೆ : ಸ್ನೇಹಿತನ ಆರೋಪ – ತನಿಖೆಗೆ ಸಿಗಲಿದೆ ಮಹತ್ವದ ತಿರುವು
-
ಅಪರಾಧ21 hours agoPuttur-ಪುತ್ತೂರು: ಅಕ್ರಮ ಗೋ ಸಾಗಾಟ ಪ್ರಕರಣ; ಪರಾರಿಯಾಗಿದ್ದ ಇಬ್ಬರು ವಶಕ್ಕೆ, ಆರೋಪಿ ಶಿವಪ್ರಸಾದ್ ಮನೆ ಮಹಜರು?
-
ಮಂಗಳೂರು22 hours agoMRPL accident-MRPL ಅವಘಡದಲ್ಲಿ ಮೃತಪಟ್ಟ ಕರ್ಕಡ ಕುಟುಂಬಕ್ಕೆ EPFO ಕ್ಲೈಮ್ ಸಂದಾಯ
-
ಅಪರಾಧ24 hours agoMangalore-ವಾಟರ್ ಪ್ಯೂರಿಫೈಯರ್ ಒಳಗೆ ಕೋಟ್ಯಾಂತರ ರೂ ಮೌಲ್ಯದ ಡ್ರಗ್ಸ್- ಕೋರಿಯರ್ ಮೂಲಕ ಸಾಗಾಟ | ಪೊಲೀಸರ ಕಣ್ಣಿಗೆ ಮಣ್ಣೆರೆಚುವ ಯತ್ನ ಮಂಗಳೂರಿನಲ್ಲಿ ವಿಫಲ – ಮೂವರ ಬಂಧನ..!
-
ಸ್ಥಳೀಯ23 hours agoNavoor clinic-ನಾವೂರು ಕ್ಲಿನಿಕ್ಗೆ ಬೆಂಕಿ ಹಚ್ಚಿದ ಪ್ರಕರಣ: ಘಟನಾ ಸ್ಥಳಕ್ಕೆ ಎಎಸ್ಪಿ ಭೇಟಿ, ಪರಿಶೀಲನೆ
-
ಶಿಕ್ಷಣ22 hours agoVivekananda-ರಾಷ್ಟ್ರಮಟ್ಟದ ಭೌತಶಾಸ್ತ್ರ ಸ್ಪರ್ಧೆಯಲ್ಲಿ ವಿವೇಕಾನಂದ ಕಾಲೇಜಿನ ವಿದ್ಯಾರ್ಥಿಯ ಸಾಧನೆ..!
-
ನಿಧನ ವಾರ್ತೆ4 hours agoMumbai-ಪ್ರೀತಿಸಿ ಮದುವೆಯಾಗಿದ್ದ ಜೋಡಿಯ ದುರಂತ ಅಂತ್ಯ? ಸರಪಳಿಯಿಂದ ಕಾಲು ಕಟ್ಟಿದ ಸ್ಥಿತಿಯಲ್ಲಿ ಶವ ಪತ್ತೆ


















