ಕ್ರೈಂ
Edapatya Farms arecanut robbery: ಎಡಪತ್ಯ ಫಾರ್ಮ್ಸ್ ಅಡಿಕೆ ದರೋಡೆ ಪ್ರಕರಣ : ಬಗೆದಷ್ಟೂ ಹೊರ ಬರುತ್ತಿದೆ ಕಳ್ಳರ ಖದೀಮತನ; ಅಯ್ಯಪ್ಪ ವೃತ್ತಧಾರಿಯಂತೆ ಬಟ್ಟೆ ಧರಿಸಿ ಕಳ್ಳತನ – ಇವರಲ್ಲಿದೆ ಜಿಲ್ಲೆಯ ದೊಡ್ಡ ದೊಡ್ಡ ಅಡಿಕೆ ಬೆಳೆಗಾರರ ಮಾಹಿತಿ – ಸಿಕ್ಕಿಬಿದ್ದಾಗ ಪಾಲು ಕೊಡಲು ಬಂದಿದ್ದರು
ಪುತ್ತೂರು: ಸವಣೂರಿನ ಎಡಪತ್ಯ ಫಾರ್ಮ್ಸ್ ನಲ್ಲಿ ಅಡಿಕೆ ಕಳ್ಳತನ ನಡೆಸಿ ಮನೆಯವರಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಾಗ ತಪ್ಪಿಸಿಕೊಳ್ಳುವ ವೇಳೆ ಕಳ್ಳನೊಬ್ಬ ಮನೆ ಮಾಲೀಕನಿಗೆ ಕಡಿದು ಗಾಯಗೊಳಿಸಿದ ಪ್ರಕರಣದ ಸ್ಥಳ ಪರಿಶೀಲನೆಯನ್ನು ಭಾನುವಾರ ಬೆಳ್ಳಾರೆ ಪೊಲೀಸರು ಮಾಡಿದ್ದಾರೆ. ಈ ವೇಳೆ ಅಡಕೆ ಒಣ ಹಾಕುವ ಕೊಠಡಿಯ ಗೋಡೆಯ ಇಟ್ಟಿಗೆ ತೆಗೆದು, ಸೋಲಾರ್ ಟರ್ಪಾಲ್ ಹರಿದು ದುಷ್ಕರ್ಮಿಗಳು ಕೃತ್ಯ ಎಸಗಿರುವುದು ಬೆಳಕಿಗೆ ಬಂದಿದೆ.

10 ಲಕ್ಷ ಮೌಲ್ಯದ ಅಡಕೆ ಕಳ್ಳತನ
ಎಡಪತ್ಯ ಫಾರ್ಮ್ಸ್ ಮಾಲೀಕ ರಾಮಚಂದ್ರ ಎಡಪತ್ಯ ಅವರು ಭಾನುವಾರ ಎಲ್ಲಾ ಸೋಲಾರ್ ಕೊಠಡಿಗಳ ಪರಿಶೀಲನೆಯನ್ನು ನಡೆಸಿದ ಸಂದರ್ಭದಲ್ಲಿ ಬಾಗಿಲಿನ ಭಾಗದಲ್ಲಿ ಅಡಕೆ ಗೋಣಿಗಳು ಪೇರಿಸಿಟ್ಟ ರೀತಿಯಲ್ಲಿ ಯಥಾಸ್ಥಿಯಲ್ಲಿವೆ. ಆದರೇ ಹಿಂಭಾಗದಲ್ಲಿ ಅಡಕೆಯನ್ನು ಕಳವು ಮಾಡಿರುವುದು ಪತ್ತೆಯಾಗಿದೆ. 25 ಗೋಣಿ ಚೀಲಕ್ಕಿಂತ ಅಧಿಕ ಪ್ರಮಾಣದ ಅಡಕೆಯನ್ನು ಸೋಲಾರ್ ನಿಂದ ಕಳುವು ಮಾಡಿರುವ ಸಾಧ್ಯತೆ ಇದೆ ಹೇಳಲಾಗುತ್ತಿದೆ. ಸದ್ಯ ಲಭಿಸಿದ ಮಾಹಿತಿ ಪ್ರಕಾರ, ಕಳೆದ ಕೆಲವು ದಿನಗಳಿಂದ ಸುಮಾರು 10 ಲಕ್ಷ ಮೌಲ್ಯದ ಅಡಕೆ ಕಳ್ಳತನವಾಗಿದೆ.
ಅಯ್ಯಪ್ಪ ವೃತಧಾರಿಗಳ ಬಟ್ಟೆ!
ಕಳ್ಳತನಕ್ಕೆ ಆಗಮಿಸುವ ಸಂದರ್ಭದಲ್ಲಿ ಅಯ್ಯಪ್ಪ ಮಾಲಾಧಾರಿಗಳು ಬಳಸುವ ಕಪ್ಪು ಬಟ್ಟೆಯನ್ನು ತಂದಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ. ಬೆಳಗ್ಗಿನ ಜಾವ ಅಯ್ಯಪ್ಪ ವೃತಾಧಾರಿಗಳು ಅನುಷ್ಠಾನಕ್ಕಾಗಿ ತೆರಳುತ್ತಾರೆ. ಇದೇ ಸಮಯದಲ್ಲಿ ತಪ್ಪಿಸಿಕೊಳ್ಳುವ ನಿಟ್ಟಿನಲ್ಲಿ ಈ ಬಟ್ಟೆಯನ್ನು ಕಳ್ಳರು ಬಳಸಿಕೊಂಡಿದ್ದಾರೆ.

ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಾಗ …!
ಮನೆ ಮಂದಿಗೆ ಸರ್ಪ್ರೈಸ್ ನೀಡಲೇಂದು ಬೆಳಗ್ಗಿನ ಜಾವ ಮೈಸೂರಿನಿಂದ ಆಗಮಿಸಿದ ರಾಮಚಂದ್ರ ಎಡಪತ್ಯ ಪುತ್ರ ನಿಷ್ಕಲ್ ರಾಮ್ ಎಡಪತ್ಯ ಅವರಿಗೇ ಮನೆ ಎದುರಿನಲ್ಲಿ ಸರ್ಪ್ರೈಸ್ ಕಾದಿತ್ತು. ಅವರು ಮನೆಗೆ ತಲುಪಿದಾಗ ಸೋಲಾರ್ ಕೊಠಡಿಯಲ್ಲಿ ಒಣ ಹಾಕಿದ್ದ ಅಡಕೆಯನ್ನು ಕಳ್ಳ ಕಾರಿಗೆ ತುಂಬುತ್ತಿದ್ದ. ನಿಷ್ಕಲ್ ಪರಿಚಯವಿಲ್ಲದ ಕಳ್ಳ ಆತ ಮನೆ ಸದಸ್ಯ ಎಂಬ ಅರಿವಿಲ್ಲದೆ ಆತನಲ್ಲಿಯೇ ಪಾಲುದಾರಿಕೆಗೆ ಮುಂದಾಗಿದ್ದರು ಎಂದು ತಿಳಿದು ಬಂದಿದೆ. ಕಳ್ಳತನ ನಡೆಸುವದನ್ನು ಬಹಿರಂಗ ಪಡಿಸಿದೆ ಮುಚ್ಚಿಡಲು ಎಷ್ಟು ಪಾಲು ಕೊಡಬೇಕೆಂದು ಕಳ್ಳ ನಿಷ್ಕಲ್ ಬಳಿಯೇ ಕೇಳಿದ್ದಾನೆ. ಕಳ್ಳತನದ ಮಾಲಿನಲ್ಲಿ ದೊಡ್ಡ ಪಾಲು ನೀಡುವ ಆಫರನ್ನು ಕಳ್ಳರಿಬ್ಬರು ನಿಷ್ಕಲ್ ಗೆ ನೀಡಿದ್ದರು. ಆದರೇ ಮನೆ ಮಗನೆಂದು ತಿಳಿದಾಗ ತಬ್ಬಿಬ್ಬಾಗಿದ್ದರು
ಕಳ್ಳರ ತಂಡ ಅತೀ ಹೆಚ್ಚು ಅಡಕೆ ಬೆಳೆಯುವ ರೈತರ ಮಾಹಿತಿಯನ್ನು ಸ್ಥಳೀಯರ ಮೂಲಕ ಪಡೆದು ಬಳಿಕ ಕೃತ್ಯ ಎಸಗುತ್ತಿದೆ ಎಂಬ ಸ್ಫೋಟಕ ಮಾಹಿತಿಯನ್ನು ವಿಚಾರಣೆ ವೇಳೆ ಬಂಧಿತ ಪೊಲೀಸರಿಗೆ ನೀಡಿರುವುದಾಗಿ ಮೂಲಗಳಿಂದ ತಿಳಿದು ಬಂದಿದೆ. ಮಾಹಿತಿ ದೊರೆತ ಬಳಿಕ ಮನೆಯವರ ಚಲನವಲನಗಳ ಮೇಲೆ ಕಣ್ಣಿಟ್ಟು ಬಳಿಕ ಅಡಕೆ ದೋಚಲು ಮುಂದಾಗುತ್ತಿದ್ದರು. ಕಳ್ಳರ ಗುಂಪಿನಲ್ಲಿ ಮಹಿಳೆಯರಿದ್ದು ಅವರು ಮಾಹಿತಿ ಸಂಗ್ರಹದಲ್ಲಿ ಪ್ರಧಾನ ಪಾತ್ರ ವಹಿಸುತ್ತಿರುವುದು ಬೆಳಕಿಗೆ ಬಂದಿದೆ. ಪುತ್ತೂರು, ಸುಳ್ಯ ಕಡಬ ತಾಲೊಕಿನ ಬಹುತೇಕ ಅಡಕೆ ಬೆಳೆಗಾರರ ಮಾಹಿತಿ ಕಳ್ಳರಲ್ಲಿದೆ. ಒಂದೊಂದೆ ಕಡೆ ಕಳ್ಳತನ ನಡೆಸಲು ಅವರು ಮುಂದಾಗಿರುವುದು ವಿಚಾರಣೆ ವೇಳೆ ಬಯಲಾಗಿದೆ ಎಂದು ಮೂಲಗಳು ತಿಳಿಸಿವೆ.

ನಾಲ್ಕು ದಶಕದ ಹಿಂದೆ ಅಡಕೆ ಬೆಳೆಗಾರರಿಗೆ ಕಳ್ಳರ ಹಾವಾಳಿ ತೀವ್ರ ಮಟ್ಟದಲ್ಲಿದ್ದು, ಬಂದೂಕು ಹಿಡಿದು ತಾವೇ ತಮ್ಮ ಬೆಳೆಯನ್ನು ರಕ್ಷಣೆ ಮಾಡುವ ಅನಿವಾರ್ಯತೆ ಆಸಂದರ್ಭದಲ್ಲಿತ್ತು. ಈಗ ಮತ್ತೆ ಅದೇ ಕಾಲ ಬರುತ್ತಿದೆಯಾ ಎಂಬ ಆತಂಕದಲ್ಲಿ ಬೆಳೆಗಾರರಿದ್ದಾರೆ.
ಭಕ್ತಕೋಡಿಯಲ್ಲಿ
ಪುತ್ತೂರು ಸುಬ್ರಹ್ಮಣ್ಯ ಹೆದ್ದಾರಿಯ ಅಂಚಿನಲ್ಲಿರುವ ಭಕ್ತಕೋಡಿಯಲ್ಲಿ ಕಟ್ಟಡವೊಂದು ನಿರ್ಮಾಣ ಹಂತದಲ್ಲಿದ್ದು, ಇದಕ್ಕಾಗಿ ತಂದಿಟ್ಟ ಸುಮಾರು 500 ಕೆ.ಜಿ. ಕಬ್ಬಿಣ ಇತ್ತೀಚೆಗೆ ಕಳ್ಳತನವಾಗಿತ್ತು. ಈ ಬಳಿಕ ಕಟ್ಟದ ಮಾಲೀಕರು ಪ್ರತಿ ರಾತ್ರಿ ಕಟ್ಟಡ ನಿರ್ಮಾಣ ಸ್ಥಳಕ್ಕೆ ಹೋಗಿ ಪರಿಶೀಲಿಸುವ ಪರಿಪಾಠ ಇರಿಸಿಕೊಂಡಿದ್ದರು. ಇತ್ತೀಚೆಗೆ ಒಂದು ದಿನ ರಾತ್ರಿ 12.30ರ ಸುಮಾರಿಗೆ ಆರೋಪಿ ಬಶೀರ್ ಕಟ್ಟಡದ ಒಳಗೆ ಕಾರು ನಿಲ್ಲಿಸಿ ಬಳಿಯಲ್ಲಿ ನಿಂತಿದ್ದ. ಇದನ್ನು ಗಮನಿಸಿದ ಕಟ್ಟಡದ ಮಾಲೀಕರು ಆ ಕಾರಿಗೆ ತನ್ನ ಕಾರನ್ನು ಅಡ್ಡವಿಟ್ಟು, ಪೊಲೀಸರು ಬರದೆ ಹೋಗುವಂತಿಲ್ಲ ಎಂದು ತಿಳಿಸಿದ್ದರು. ಆಗ ತಕ್ಷಣ ಬಶೀರ್ ಕಾರನ್ನು ಜಲ್ಲಿ ರಾಶಿಯ ಮೇಲೆ ಹತ್ತಿಸಿ ಪಲಾಯನಕ್ಕೆ ಮುಂದಾಗಿದ್ದು, ಮಾಲೀಕರು ಕಾರನ್ನು ಅಡ್ಡ ಇಟ್ಟಿದ್ದು, ಅದಕ್ಕೆ ತನ್ನ ಕಾರನ್ನು ಗುದ್ದಿ ಬಶೀರ್ ಪರಾರಿಯಾಗಿದ್ದ.
ಕಟ್ಟಡದ ಮಾಲೀಕರು ಕಾರು ನಂಬರ್ ಕೊಟ್ಟು ಸಂಪ್ಯ ಠಾಣೆಗೆ ದೂರು ನೀಡಿದ್ದರು. ಕಾರು ಮುಸ್ಲಿಂ ಮಹಿಳೆಗೆ ಸೇರಿದ್ದಾಗಿದ್ದು, ಆಕೆಯನ್ನು ಠಾಣೆಗೆ ಕರೆಸಿದಾಗ ಏನೂ ಗೊತ್ತಿಲ್ಲದವರ ಹಾಗೇ ಪೆದ್ದು ಪೆದ್ದಾಗಿ ವರ್ತಿಸಿದ್ದರು ಎಂದು ತಿಳಿದು ಬಂದಿದೆ. ಮಧ್ಯಪಾನ ಮಾಡಲೇಂದು ಬಂದಿದ್ದು ಅದೇ ಸಮಯಕ್ಕೆ ಕಟ್ಟಡದ ಮಾಲೀಕರು ಬಂದಿದ್ದರಿಂದ ಹೆದರಿ ವಾಹನಕ್ಕೆ ಗುದ್ದಿಕೊಂಡು ಹೋಗಿದ್ದಾಗಿ ಆಗ ಪೊಲೀಸರು ದೂರುದಾರರಿಗೆ ತಿಳಿಸಿದ್ದರು. ಅಲ್ಲದೇ ಈ ಪ್ರಕರಣ ಠಾಣೆಯಲ್ಲಿ ರಾಜಿ ಪಂಚಾತಿಕೆಯಲ್ಲಿ ಮುಗಿದಿದ್ದು ವಾಹನಕ್ಕಾದ ಹಾನಿಯ ಬಾಬ್ತು 15 ಸಾವಿರ ರೂಪಾಯಿ ಕಾರಿನ ಮಾಲಕರು ಕಟ್ಟಡದ ಮಾಲಕರಿಗೆ ನೀಡಿದ್ದರು ಎನ್ನಲಾಗುತ್ತಿದೆ
ಸ್ಥಳೀಯ
Kalaburagi-ಕಲಬುರಗಿ: ಪತ್ನಿಯ ಕತ್ತು ಹಿಸುಕಿ ಹತ್ಯೆ; ಆತ್ಮಹತ್ಯೆಯಂತೆ ಬಿಂಬಿಸಲು ಯತ್ನಿಸಿದ ಪತಿ ಬಂಧನ
ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿ, ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬಂತೆ ಬಿಂಬಿಸಲು ಯತ್ನಿಸಿದ ಆರೋಪದ ಮೇಲೆ ಪತಿಯನ್ನು ಪೊಲೀಸರು ವಶಕ್ಕೆ ಪಡೆದಿರುವ ಘಟನೆ ಕಲಬುರಗಿ ಜಿಲ್ಲೆಯ ಚಿಂಚೋಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕಲಬುರಗಿ: ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿ, ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬಂತೆ ಬಿಂಬಿಸಲು ಯತ್ನಿಸಿದ ಆರೋಪದ ಮೇಲೆ ಪತಿಯನ್ನು ಪೊಲೀಸರು ವಶಕ್ಕೆ ಪಡೆದಿರುವ ಘಟನೆ ಕಲಬುರಗಿ ಜಿಲ್ಲೆಯ ಚಿಂಚೋಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮೃತ ಮಹಿಳೆಯನ್ನು ಪ್ರಿಯಾಂಕಾ ಹಡಪದ್ (30) ಎಂದು ಗುರುತಿಸಲಾಗಿದೆ.
ಆಕೆಯ ಪತಿ ಸೂರ್ಯಕಾಂತ್ ಹಡಪದ್ ಕೊಲೆ ಆರೋಪಿಯಾಗಿದ್ದು, ವಕೀಲ ವೃತ್ತಿ ಮಾಡಿಕೊಂಡಿದ್ದ ಎನ್ನಲಾಗಿದೆ.
ಮಕ್ಕಳಾಗದಿರುವ ವಿಚಾರ ಹಾಗೂ ತವರಿನಿಂದ ಹಣ ತರುವ ವಿಚಾರಕ್ಕೆ ಸಂಬಂಧಿಸಿ ಸೂರ್ಯಕಾಂತ್ ಪತ್ನಿಗೆ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಇದೇ ವಿಚಾರವಾಗಿ ದಂಪತಿ ನಡುವೆ ಗಲಾಟೆ ನಡೆದಿದ್ದು, ಬಳಿಕ ಸೂರ್ಯಕಾಂತ್ ಪತ್ನಿಯ ಕತ್ತು ಹಿಸುಕಿ ಹತ್ಯೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.
ಅಂತರ ರಾಜ್ಯ
Murder-ಆಸ್ತಿಗಾಗಿ ಬೆಲ್ಟ್‌ನಿಂದ ಕುತ್ತಿಗೆ ಬಿಗಿದು ಪತಿಯ ಕೊಲೆ: ಆಕಸ್ಮಿಕ ಸಾವೆಂದು ನಂಬಿಸಿದ್ದ ಪತ್ನಿ ಅರೆಸ್ಟ್
ಆಕಸ್ಮಿಕ ಸಾವು ಎಂದು ದಾಖಲಾಗಿದ್ದ 53 ವರ್ಷದ ವ್ಯಕ್ತಿಯೊಬ್ಬರ ಪ್ರಕರಣ ತನಿಖೆ ವೇಳೆ ಕೊಲೆಯಾಗಿ ಬಯಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿ ಅವರ ಪತ್ನಿಯನ್ನು ಪೊಲೀಸರು ಬಂಧಿಸಿದ್ದಾರೆ. ಕೊಲ್ಲಂನ ಚೆರುಮೂಡು ಮೂಲದ ರಾಜು ಕೊಲೆಯಾದ ವ್ಯಕ್ತಿ.
ಕೊಲ್ಲಂ: ಆಕಸ್ಮಿಕ ಸಾವು ಎಂದು ದಾಖಲಾಗಿದ್ದ 53 ವರ್ಷದ ವ್ಯಕ್ತಿಯೊಬ್ಬರ ಪ್ರಕರಣ ತನಿಖೆ ವೇಳೆ ಕೊಲೆಯಾಗಿ ಬಯಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿ ಅವರ ಪತ್ನಿಯನ್ನು ಪೊಲೀಸರು ಬಂಧಿಸಿದ್ದಾರೆ.
ಕೊಲ್ಲಂನ ಚೆರುಮೂಡು ಮೂಲದ ರಾಜು (53) ಅವರು ಬಣ್ಣ ಬಳಿಯುವ ಕೆಲಸ ಮಾಡುತ್ತಿದ್ದರು. ರಾಜು ಹಾಗೂ ಅವರ ಪತ್ನಿ ಲೇಖಾ ಮೇರಿ ನಡುವೆ ಆಸ್ತಿ ವಿಚಾರವಾಗಿ ಆಗಾಗ್ಗೆ ಜಗಳ ನಡೆಯುತ್ತಿತ್ತು ಎನ್ನಲಾಗಿದೆ. ಆಸ್ತಿ ಮೂಲತಃ ರಾಜು ಕುಟುಂಬಕ್ಕೆ ಸೇರಿದ್ದಾಗಿದ್ದು, ಬಳಿಕ ರಾಜು ಅವರ ಹೆಸರಿಗೆ ವರ್ಗಾವಣೆಯಾಗಿತ್ತು. ಆದರೆ ಸಂಪೂರ್ಣ ಆಸ್ತಿಯ ಮಾಲೀಕತ್ವ ತನಗೇ ಬೇಕೆಂದು ಲೇಖಾ ಪಟ್ಟು ಹಿಡಿದಿದ್ದರಿಂದ ದಂಪತಿ ನಡುವೆ ನಿರಂತರವಾಗಿ ಮನಸ್ತಾಪ ಉಂಟಾಗುತ್ತಿತ್ತು.
ಈ ಹಿನ್ನೆಲೆಯಲ್ಲಿ ಕೆಲಕಾಲ ಬೇರೆ ಬೇರೆಯಾಗಿದ್ದ ದಂಪತಿ, ಕಳೆದ ಒಂದು ವರ್ಷದಿಂದ ಮತ್ತೆ ಒಟ್ಟಿಗೆ ವಾಸಿಸುತ್ತಿದ್ದರು.
ಅ.2ರಂದು ಬೆಳಗ್ಗೆ ಸುಮಾರು 5.30ಕ್ಕೆ ರಾಜು ಮನೆಯಲ್ಲಿ ದಿಢೀರ್ ಕುಸಿದುಬಿದ್ದಿದ್ದಾರೆ ಎಂದು ಹೇಳಲಾಗಿತ್ತು. ತಕ್ಷಣ ಸಹೋದರ ಹಾಗೂ ನೆರೆಹೊರೆಯವರ ನೆರವಿನಿಂದ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಪರೀಕ್ಷಿಸಿದ ವೈದ್ಯರು ರಾಜು ಮೃತಪಟ್ಟಿರುವುದಾಗಿ ಘೋಷಿಸಿದರು.
ಆದರೆ ಮರಣೋತ್ತರ ಪರೀಕ್ಷೆ ವೇಳೆ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದೆ. ರಾಜು ಸಾಮಾನ್ಯವಾಗಿ ಕುಸಿದುಬಿದ್ದು ಮೃತಪಟ್ಟಿಲ್ಲ ಎಂದು ಶಂಕಿಸಿರುವ ವೈದ್ಯರು, ಅವರ ಕುತ್ತಿಗೆಯ ಭಾಗದಲ್ಲಿ ಅನುಮಾನಾಸ್ಪದ ಗುರುತುಗಳು ಕಂಡುಬಂದಿರುವುದಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಈ ಹಿನ್ನೆಲೆಯಲ್ಲಿ ಪೊಲೀಸರು ರಾಜು ಅವರ ಪತ್ನಿ ಲೇಖಾ ಮೇರಿಯನ್ನು ವಿಚಾರಣೆ ನಡೆಸಿದಾಗ, ಆಸ್ತಿ ವಿಚಾರವಾಗಿ ಅ.2ರಂದು ಮತ್ತೆ ಜಗಳ ನಡೆದಿತ್ತು ಎಂದು ಆಕೆ ಒಪ್ಪಿಕೊಂಡಿದ್ದಾಳೆ ಎನ್ನಲಾಗಿದೆ. ಜಗಳದ ವೇಳೆ ಕೋಪಗೊಂಡು ಬೆಲ್ಟ್‌ನಿಂದ ಪತಿಯ ಕುತ್ತಿಗೆಯನ್ನು ಬಿಗಿದು ಕೊಲೆ ಮಾಡಿದ್ದಾಗಿ ಆಕೆ ಪೊಲೀಸರಿಗೆ ತಿಳಿಸಿದ್ದಾಳೆ ಎಂದು ಮೂಲಗಳು ಹೇಳಿವೆ.
ಬಳಿಕ ರಾಜು ಪ್ರಜ್ಞೆ ತಪ್ಪಿ ಬಿದ್ದಿರುವುದಾಗಿ ಅವರ ಸಹೋದರನಿಗೆ ಕರೆ ಮಾಡಿ ತಿಳಿಸಿದ್ದಳು ಎನ್ನಲಾಗಿದೆ.
ಕೊಲ್ಲಿ ರಾಷ್ಟ್ರದಲ್ಲಿ ಕೆಲಸ ಮಾಡಿ ಬಳಿಕ ವಾಪಸ್ ಬಂದಿದ್ದ ಲೇಖಾ ಮೇರಿ ಸದ್ಯ ಗೃಹಿಣಿಯಾಗಿದ್ದು, ದಂಪತಿಗೆ ಒಬ್ಬ ಮಗಳಿದ್ದಾಳೆ. ಪ್ರಕರಣದಲ್ಲಿ ಬೇರೆಯವರ ಕೈವಾಡವಿದೆಯೇ ಎಂಬ ಬಗ್ಗೆಯೂ ಕುಂದರ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಕ್ರೈಂ
Honeytrap-ಹಳೆಯ ದ್ವೇಷಕ್ಕೆ ಇನ್‌ಸ್ಟಾಗ್ರಾಂ ಹನಿಟ್ರ್ಯಾಪ್ ಅಸ್ತ್ರ: ಯುವಕನ ಕೊಲೆ ಪ್ರಕರಣ ಭೇದಿಸಿದ ಪೊಲೀಸರು; ನಾಲ್ವರ ಬಂಧನ
ಕಾಣೆಯಾಗಿದ್ದ ಯುವಕನೊಬ್ಬನ ಕೊಲೆ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದ್ದು, ಇನ್‌ಸ್ಟಾಗ್ರಾಂ ಮೂಲಕ ‘ಹನಿಟ್ರ್ಯಾಪ್’ ಮಾಡಿ ಯುವಕನನ್ನು ಬಲೆಗೆ ಬೀಳಿಸಿ ಕೊಲೆ ಮಾಡಿದ ಆರೋಪದ ಮೇಲೆ ನಾಲ್ವರನ್ನು ಬೆಳಗಾವಿ ನಗರ ಪೊಲೀಸರು ಬಂಧಿಸಿದ್ದಾರೆ. ಮೃತ ಯುವಕನನ್ನು ಬೆಳಗಾವಿಯ ಗಾಂಧಿನಗರ ನಿವಾಸಿ ಸರ್ವೇಶ ಕಂಗ್ರಾಳಕರ ಎಂದು ಗುರುತಿಸಲಾಗಿದೆ.
ಬೆಳಗಾವಿ: ಕಾಣೆಯಾಗಿದ್ದ ಯುವಕನೊಬ್ಬನ ಕೊಲೆ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದ್ದು, ಇನ್‌ಸ್ಟಾಗ್ರಾಂ ಮೂಲಕ ‘ಹನಿಟ್ರ್ಯಾಪ್’ ಮಾಡಿ ಯುವಕನನ್ನು ಬಲೆಗೆ ಬೀಳಿಸಿ ಕೊಲೆ ಮಾಡಿದ ಆರೋಪದ ಮೇಲೆ ನಾಲ್ವರನ್ನು ಬೆಳಗಾವಿ ನಗರ ಪೊಲೀಸರು ಬಂಧಿಸಿದ್ದಾರೆ.
ಮೃತ ಯುವಕನನ್ನು ಬೆಳಗಾವಿಯ ಗಾಂಧಿನಗರ ನಿವಾಸಿ ಸರ್ವೇಶ ಕಂಗ್ರಾಳಕರ ಎಂದು ಗುರುತಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಶಶಿ ಜಾಲಗಾರ, ರಾಹುಲ್ ಜಾಲಗಾರ, ದಶರತ ರಜಪೂತ ಹಾಗೂ ಅರುಣ ಹುಲ್ಲೋಳಿ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಬೆಳಗಾವಿ ನಗರ ಪೊಲೀಸ್ ಆಯುಕ್ತ ಪ್ರಕಾಶ್ ನಿಕಮ್ ಅವರ ಮಾರ್ಗದರ್ಶನದಲ್ಲಿ ಮಾಳಮಾರುತಿ ಠಾಣೆ ಸಿಪಿಐ ಬಿ.ಆರ್. ಗಡೇಕರ್ ನೇತೃತ್ವದ ತಂಡ ತನಿಖೆ ನಡೆಸಿ ಪ್ರಕರಣವನ್ನು ಭೇದಿಸಿದೆ.
ಹಣಕಾಸಿನ ವಿಚಾರದ ದ್ವೇಷವೇ ಕೊಲೆಗೆ ಕಾರಣ?
ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, 2025ರಲ್ಲಿ ನಡೆದ ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದ ಜಗಳವೇ ಕೊಲೆಗೆ ಪ್ರಮುಖ ಕಾರಣ ಎನ್ನಲಾಗಿದೆ. ಈ ಸಂದರ್ಭದಲ್ಲಿ ಸರ್ವೇಶ ಹಾಗೂ ಶಶಿ ಜಾಲಗಾರ ನಡುವೆ ಗಲಾಟೆ ನಡೆದಿದ್ದು, ಸರ್ವೇಶ ಅವರು ಶಶಿ ಮೇಲೆ ಹಲ್ಲೆ ನಡೆಸಿದ್ದರು ಎನ್ನಲಾಗಿದೆ. ಇದರಿಂದ ಇಬ್ಬರ ನಡುವೆ ವೈಷಮ್ಯ ಬೆಳೆದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಹಳೆಯ ದ್ವೇಷವನ್ನೇ ಮುಂದಿಟ್ಟುಕೊಂಡು ಶಶಿ ಜಾಲಗಾರ ತನ್ನ ಸಹಚರರೊಂದಿಗೆ ಸೇರಿ ಸರ್ವೇಶನ ಕೊಲೆಗೆ ಸಂಚು ರೂಪಿಸಿದ್ದಾನೆ ಎನ್ನುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಯುವತಿಯ ಹೆಸರಿನಲ್ಲಿ ನಕಲಿ ಖಾತೆ
ಕೊಲೆಗೆ ಆರೋಪಿಗಳು ಇನ್‌ಸ್ಟಾಗ್ರಾಂ ಬಳಸಿಕೊಂಡಿದ್ದಾರೆ ಎನ್ನಲಾಗಿದೆ. ಯುವತಿಯ ಹೆಸರಿನಲ್ಲಿ ನಕಲಿ ಇನ್‌ಸ್ಟಾಗ್ರಾಂ ಖಾತೆ ಸೃಷ್ಟಿಸಿ, ಅದರ ಮೂಲಕ ಸರ್ವೇಶನಿಗೆ ಸಂದೇಶ ಕಳುಹಿಸಿ ಆತನೊಂದಿಗೆ ಆತ್ಮೀಯತೆ ಬೆಳೆಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಬಳಿಕ ಇದೇ ಪರಿಚಯವನ್ನು ಬಳಸಿಕೊಂಡು ಸರ್ವೇಶನನ್ನು ನಿರ್ದಿಷ್ಟ ಸ್ಥಳಕ್ಕೆ ಕರೆಸಿಕೊಂಡು ಕೊಲೆ ಮಾಡಲಾಗಿದೆ ಎನ್ನಲಾಗಿದೆ.
-
ಬಿಗ್ ನ್ಯೂಸ್23 hours agoSting Operation | ಸ್ಟಿಂಗ್ ಆಪರೇಷನ್ ಚರ್ಚೆ: ಪುತ್ತೂರಿಗೂ ವ್ಯಾಪಿಸಿದೆಯೇ ರಾಜಕೀಯದ ‘ಸ್ಟಿಂಗ್’ ಸದ್ದು..?
-
ಬಿಗ್ ನ್ಯೂಸ್22 hours agoSDPI-ಮಕ್ಕಳ ಆಟದ ಉಪಕರಣಗಳೇ ಹಾಳು: ಕಾರಂತರ ಬಾಲವನದ ದುಸ್ಥಿತಿಗೆ ಎಸ್ಡಿಪಿಐ ಅಸಮಾಧಾನ
-
ಬಿಗ್ ನ್ಯೂಸ್21 hours agoReservation-ದ.ಕ. ಜಿ.ಪಂ., ತಾ.ಪಂ. ಮೀಸಲಾತಿ ಪ್ರಕಟ: ಮಹಿಳೆಯರಿಗೆ ತಾ.ಪಂ. 65, ಜಿ.ಪಂ. 18 ಸ್ಥಾನ ಮೀಸಲು
-
ಅಪರಾಧ21 hours agoDigital Arrest-‘ಡಿಜಿಟಲ್ ಅರೆಸ್ಟ್’ ಹೆಸರಿನಲ್ಲಿ 75 ವರ್ಷದ ಮಹಿಳೆಗೆ ₹2 ಕೋಟಿ ವಂಚನೆ
-
ಅಂತರ ರಾಜ್ಯ21 hours agoNana Patekar-ಕಾರ್ಗಿಲ್ ಯುದ್ಧದ ವೇಳೆ ಸೈನಿಕನಾಗಿಯೂ ದೇಶ ಸೇವೆ ಮಾಡಿದ್ದ ನಾನಾ ಪಾಟೇಕರ್
-
ಅಂತರ ರಾಜ್ಯ20 hours agoDK Shivakumar-‘ಸ್ಟಿಂಗ್ ಆಪರೇಷನ್’ ಬಗ್ಗೆ ಎಲ್ಲಾ ಮಾಹಿತಿ ಇದೆ..! ಚರ್ಚೆಗೆಂದು ಬಂದು ಏನೇನು ಮಾಡಿದ್ದಾರೆ ಎಂದು ಗೊತ್ತಿದೆ : ಇದರ ಪಿತಾಮಹ ಯಾರೆಂದೂ ತಿಳಿದಿದೆ : ಡಿಕೆಶಿ ಸ್ಫೋಟಕ ಹೇಳಿಕೆ
-
ಅಂತರ ರಾಜ್ಯ22 hours agoCEC Jnanesh Kumar-ವಿಪಕ್ಷಗಳ ಪ್ರತಿಭಟನೆ ತೀವ್ರ: ಸಿಇಸಿ ಜ್ಞಾನೇಶ್ ಕುಮಾರ್ ನಿವಾಸಕ್ಕೆ ತೀವ್ರ ಭದ್ರತೆ
-
ಮಂಗಳೂರು19 hours agoMangaluru-ಬೆಳೆ ವಿಮೆ ಅನ್ಯಾಯ ಆರೋಪ: ಅ.9ರಂದು ಮಂಗಳೂರಿನಲ್ಲಿ ರೈತರ ಬೃಹತ್ ಹಕ್ಕೊತ್ತಾಯ | ಸಹಕಾರ ಭಾರತಿ – ಬಿಜೆಪಿ ಬೆಂಬಲ


















