ವರದಿಗಳು
ವಿಟ್ಲ: ಕ್ರಿಕೆಟ್ ತೀರ್ಪುಗಾರ ನಿಧನ – ವಿರುದ್ಧ ತಂಡಕ್ಕೆ ಗೆಲುವು ಬಿಟ್ಟುಕೊಡುವ ಮೂಲಕ ವಿಶೇಷ ಗೌರವ ಸಲ್ಲಿಸಿದ ಮಂಗಳೂರಿನ ತಂಡ
ವಿಟ್ಲ, ಡಿ.05 : ಕ್ರಿಕೆಟ್ ಆಟಗಾರ ಹಾಗೂ ತೀರ್ಪುಗಾರರಾಗಿದ್ದ ವಿಟ್ಲ ರಥಗದ್ದೆಯ ಸಮೀಪದ ನಿವಾಸಿ ರಜನೀಶ್ (39) ಅನಾರೋಗ್ಯದಿಂದ ನಿಧನರಾಗಿದ್ದಾರೆ.
ಖ್ಯಾತ ಕ್ರೀಡಾಪಟು ಆಗಿದ್ದ ರಜನೀಶ್ ಅವರು ಕ್ರಿಕೆಟ್, ಶಟಲ್, ಬ್ಯಾಡ್ಮಿಂಟನ್, ವಾಲಿಬಾಲ್, ಖೋಖೋ ಆಟಗಾರರಾಗಿದ್ದರು. ಇವರು ಇತ್ತೀಚಿನ ಕೆಲ ವರ್ಷಗಳಿಂದ ತೀರ್ಪುಗಾರರಾಗಿ ಭಾಗವಹಿಸುತ್ತಿದ್ದರು.
ವಿಜಿಸಿ ವಿಟ್ಲ ಕ್ರಿಕೆಟ್ ತಂಡ ಪ್ರಧಾನ ಆಟಗಾರರಾಗಿದ್ದ ಇವರು, ಅನೇಕ ವರ್ಷಗಳಿಂದ ಮಂಗಳೂರಿನ ಉರ್ವ ಫ್ರೆಂಡ್ಸ್ ಇದರ ಆರಂಭಿಕ ಬ್ಯಾಟ್ಸ್ಮನ್ ಆಗಿ ಕಾರ್ಯನಿರ್ವಹಿಸುತ್ತಿದ್ದರು.
ರಜನೀಶ್ ಅವರ ನಿಧನದ ಕಾರಣಕ್ಕೆ ಇಂದಿನ ಕ್ರಿಕೆಟ್ ಪಂದ್ಯಾಟವನ್ನು ಅರ್ಧಕ್ಕೆ ನಿಲ್ಲಿಸಿದ ಯಂಗ್ ಫ್ರೆಂಡ್ಸ್ ಉರ್ವ ತಂಡ ವಿರುದ್ದ ತಂಡಕ್ಕೆ ಗೆಲುವು ಬಿಟ್ಟುಕೊಟ್ಟಿದ್ದು, ಈ ಮೂಲಕ ಮಾಜಿ ಆಟಗಾರನಿಗೆ ಗೌರವ ಸಲ್ಲಿಸಿದ್ದಾರೆ.
ಅಂತರ ರಾಜ್ಯ
Rahul Gandhi-ಜಂತರ್ ಮಂತರ್ನಲ್ಲಿ ಪ್ರತಿಭಟಿಸಿದ ಸಿಜೆಪಿ ನಾಯಕರ ಬಂಧನಕ್ಕೆ ರಾಹುಲ್ ಗಾಂಧಿ ಖಂಡನೆ
ದೆಹಲಿಯ ಜಂತರ್ ಮಂತರ್ನಲ್ಲಿ ತ್ರಿವರ್ಣ ಧ್ವಜ ಹಿಡಿದು ಪ್ರತಿಭಟನೆ ನಡೆಸಿದ್ದಕ್ಕಾಗಿ ಯುವಕರನ್ನು ಬಂಧಿಸಿರುವುದನ್ನು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಖಂಡಿಸಿದ್ದಾರೆ. ಶಾಂತಿಯುತವಾಗಿ ಪ್ರತಿಭಟನೆ ನಡೆಸಿದ ಯುವಕರನ್ನು ಜೈಲಿಗೆ ತಳ್ಳುವುದು ಹೇಡಿತನದ ಕೆಲಸ ಎಂದು ಅವರು ಟೀಕಿಸಿದ್ದಾರೆ.
ನವದೆಹಲಿ: ದೆಹಲಿಯ ಜಂತರ್ ಮಂತರ್ನಲ್ಲಿ ತ್ರಿವರ್ಣ ಧ್ವಜ ಹಿಡಿದು ಪ್ರತಿಭಟನೆ ನಡೆಸಿದ್ದಕ್ಕಾಗಿ ಯುವಕರನ್ನು ಬಂಧಿಸಿರುವುದನ್ನು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಖಂಡಿಸಿದ್ದಾರೆ. ಶಾಂತಿಯುತವಾಗಿ ಪ್ರತಿಭಟನೆ ನಡೆಸಿದ ಯುವಕರನ್ನು ಜೈಲಿಗೆ ತಳ್ಳುವುದು ಹೇಡಿತನದ ಕೆಲಸ ಎಂದು ಅವರು ಟೀಕಿಸಿದ್ದಾರೆ.
ಕೇಂದ್ರ ಸರ್ಕಾರವು ಜಂತರ್ ಮಂತರ್ ಅನ್ನು ಪ್ರತಿಭಟನಾ ಸ್ಥಳವಾಗಿ ಬಳಸುವುದಕ್ಕೆ ನಿರ್ಬಂಧಗಳನ್ನು ವಿಧಿಸಿರುವುದನ್ನು ವಿರೋಧಿಸಿದ ರಾಹುಲ್ ಗಾಂಧಿ, ಜಂತರ್ ಮಂತರ್ ಭಾರತದ ಜನರಿಗೆ ಸೇರಿದ್ದು, ಅದನ್ನು ಮತ್ತೆ ಜನರ ಪಾಲಿಗೆ ಮರಳಿ ಪಡೆಯುವುದಾಗಿ ಹೇಳಿದ್ದಾರೆ.
ಸಿಜೆಪಿ ನಾಯಕರಿಗೆ ಐದು ದಿನಗಳ ನ್ಯಾಯಾಂಗ ಬಂಧನ
ಮಂಗಳವಾರ ಮುಂಜಾನೆ ಜಂತರ್ ಮಂತರ್ ಪ್ರದೇಶಕ್ಕೆ ತೆರಳಿ ತ್ರಿವರ್ಣ ಧ್ವಜ ಹಾರಿಸಿ ಘೋಷಣೆಗಳನ್ನು ಕೂಗಿದ್ದ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನಾಯಕರಾದ ಅಶುತೋಷ್ ರಂಕಾ, ಸೌರಭ್ ದಾಸ್ ಸೇರಿದಂತೆ 14 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಬಳಿಕ ಬುಧವಾರ ನ್ಯಾಯಾಲಯವು ಬಂಧಿತರಿಗೆ ಐದು ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.
ಬಂಧನವನ್ನು ಖಂಡಿಸಿರುವ ರಾಹುಲ್ ಗಾಂಧಿ ಅವರ ಬೆಂಬಲಕ್ಕೆ ಸಿಜೆಪಿ ಸಂಸ್ಥಾಪಕ ಅಭಿಜಿತ್ ದೀಪ್ಕೆ ಧನ್ಯವಾದ ಅರ್ಪಿಸಿದ್ದಾರೆ.
ಸಂವಿಧಾನಿಕ ಹಕ್ಕುಗಳಿಗಾಗಿ ಒಗ್ಗಟ್ಟಿನ ಹೋರಾಟ
ವಿದ್ಯಾರ್ಥಿಗಳು, ಯುವಕರು, ಪತ್ರಕರ್ತರು ಹಾಗೂ ಇಂಡಿಯಾ ಒಕ್ಕೂಟದ ಸದಸ್ಯರು ಪ್ರತ್ಯೇಕ ಬ್ಯಾನರ್ಗಳ ಅಡಿಯಲ್ಲಿ ಹೋರಾಟ ನಡೆಸುತ್ತಿದ್ದರೂ, ಅವರ ಉದ್ದೇಶ ಒಂದೇ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಸಂವಿಧಾನಿಕ ಹಕ್ಕುಗಳಿಗಾಗಿ ಆಗ್ರಹಿಸುತ್ತಿರುವ ನಾಗರಿಕರ ಹೋರಾಟ ಇದಾಗಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.
ಈ ಹಿಂದೆ ಸಿಜೆಪಿ ನಾಯಕರಿಂದ ರಾಹುಲ್ ಗಾಂಧಿ ದೂರ ಉಳಿದಿದ್ದಾರೆ ಎಂಬ ಚರ್ಚೆಗಳು ನಡೆದಿದ್ದವು. ಇದೀಗ ಬಂಧಿತ ನಾಯಕರ ಪರವಾಗಿ ಧ್ವನಿ ಎತ್ತಿರುವುದು ರಾಜಕೀಯ ವಲಯದಲ್ಲಿ ಗಮನ ಸೆಳೆದಿದೆ. ಈ ಬೆಳವಣಿಗೆಯನ್ನು ಸಿಜೆಪಿ ನಾಯಕರಿಗೆ ರಾಹುಲ್ ಗಾಂಧಿ ಬಹಿರಂಗ ಬೆಂಬಲ ಸೂಚಿಸಿರುವ ಕ್ರಮವಾಗಿ ವಿಶ್ಲೇಷಿಸಲಾಗುತ್ತಿದೆ.
ಅಂತರ ರಾಜ್ಯ
Murder case-ಮೀರತ್ ಬ್ಲೂ ಡ್ರಮ್ ಕೊಲೆ ಪ್ರಕರಣ: ಪತ್ನಿ ಮುಸ್ಕಾನ್, ಪ್ರಿಯಕರ ಸಾಹಿಲ್ಗೆ ಗಲ್ಲು ಶಿಕ್ಷೆ..!
ದೇಶಾದ್ಯಂತ ಭಾರೀ ಸಂಚಲನ ಮೂಡಿಸಿದ್ದ ಉತ್ತರ ಪ್ರದೇಶದ ಮೀರತ್ನ ‘ಬ್ಲೂ ಡ್ರಮ್ ಕೊಲೆ’ ಪ್ರಕರಣದಲ್ಲಿ ಪತ್ನಿ ಮುಸ್ಕಾನ್ ರಜಪೂತ್ ಮತ್ತು ಆಕೆಯ ಪ್ರಿಯಕರ ಸಾಹಿಲ್ ಶುಕ್ಲಾ ಅವರಿಗೆ ನ್ಯಾಯಾಲಯ ಮರಣದಂಡನೆ ವಿಧಿಸಿದೆ. ಪತಿ ಸೌರಭ್ ರಜಪೂತ್ ಅವರನ್ನು ಕೊಲೆ ಮಾಡಿ, ದೇಹವನ್ನು ತುಂಡುಗಳಾಗಿ ಕತ್ತರಿಸಿ ನೀಲಿ ಡ್ರಮ್ನಲ್ಲಿ ಸಿಮೆಂಟ್ ಮತ್ತು ಮರಳಿನೊಂದಿಗೆ ಮುಚ್ಚಿಟ್ಟಿದ್ದ ಪ್ರಕರಣದಲ್ಲಿ ಈ ತೀರ್ಪು ಹೊರಬಿದ್ದಿದೆ.
ಲಕ್ನೋ: ದೇಶಾದ್ಯಂತ ಭಾರೀ ಸಂಚಲನ ಮೂಡಿಸಿದ್ದ ಉತ್ತರ ಪ್ರದೇಶದ ಮೀರತ್ನ ‘ಬ್ಲೂ ಡ್ರಮ್ ಕೊಲೆ’ ಪ್ರಕರಣದಲ್ಲಿ ಪತ್ನಿ ಮುಸ್ಕಾನ್ ರಜಪೂತ್ ಮತ್ತು ಆಕೆಯ ಪ್ರಿಯಕರ ಸಾಹಿಲ್ ಶುಕ್ಲಾ ಅವರಿಗೆ ನ್ಯಾಯಾಲಯ ಮರಣದಂಡನೆ ವಿಧಿಸಿದೆ. ಪತಿ ಸೌರಭ್ ರಜಪೂತ್ ಅವರನ್ನು ಕೊಲೆ ಮಾಡಿ, ದೇಹವನ್ನು ತುಂಡುಗಳಾಗಿ ಕತ್ತರಿಸಿ ನೀಲಿ ಡ್ರಮ್ನಲ್ಲಿ ಸಿಮೆಂಟ್ ಮತ್ತು ಮರಳಿನೊಂದಿಗೆ ಮುಚ್ಚಿಟ್ಟಿದ್ದ ಪ್ರಕರಣದಲ್ಲಿ ಈ ತೀರ್ಪು ಹೊರಬಿದ್ದಿದೆ.
ಏನಿದು ಬ್ಲೂ ಡ್ರಮ್ ಕೊಲೆ ಪ್ರಕರಣ?
2025ರ ಮಾರ್ಚ್ನಲ್ಲಿ ನಡೆದ ಈ ಭೀಕರ ಕೊಲೆ ಪ್ರಕರಣ ಇಡೀ ದೇಶವನ್ನೇ ಬೆಚ್ಚಿಬೀಳಿಸಿತ್ತು. ಮರ್ಚೆಂಟ್ ನೇವಿ ಅಧಿಕಾರಿಯಾಗಿದ್ದ ಸೌರಭ್ ರಜಪೂತ್ ಅವರನ್ನು ಅವರ ಪತ್ನಿ ಮುಸ್ಕಾನ್, ತನ್ನ ಪ್ರಿಯಕರ ಸಾಹಿಲ್ನೊಂದಿಗೆ ಸೇರಿ ಹತ್ಯೆಗೈದ ಆರೋಪ ಎದುರಿಸಿದ್ದರು. ಬಳಿಕ ಮೃತದೇಹವನ್ನು ತುಂಡುಗಳಾಗಿ ಕತ್ತರಿಸಿ ನೀಲಿ ಡ್ರಮ್ನಲ್ಲಿ ಇರಿಸಿ, ಸಿಮೆಂಟ್ ಮತ್ತು ಮರಳಿನಿಂದ ಮುಚ್ಚಿಟ್ಟಿದ್ದರು.
ಘಟನೆ ನಡೆದ ಸುಮಾರು 15 ದಿನಗಳ ಬಳಿಕ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದರು. ಸುದೀರ್ಘ ವಿಚಾರಣೆಯ ನಂತರ ಸೆಪ್ಟೆಂಬರ್ 30ರಂದು ಮುಸ್ಕಾನ್ ಮತ್ತು ಸಾಹಿಲ್ರನ್ನು ದೋಷಿಗಳೆಂದು ನ್ಯಾಯಾಲಯ ಘೋಷಿಸಿತ್ತು. ಇದೀಗ ಅಕ್ಟೋಬರ್ 14ರಂದು ಶಿಕ್ಷೆಯ ಪ್ರಮಾಣ ಪ್ರಕಟಿಸಿರುವ ನ್ಯಾಯಾಲಯ, ಇಬ್ಬರಿಗೂ ಮರಣದಂಡನೆ ವಿಧಿಸಿದೆ.
ಮಹಾಭಾರತ ಉಲ್ಲೇಖಿಸಿದ ನ್ಯಾಯಾಧೀಶರು
ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಅರವಿಂದ್ ಕುಮಾರ್ ಮಿಶ್ರಾ ಅವರು ಶಿಕ್ಷೆಯ ತೀರ್ಪು ಪ್ರಕಟಿಸಿದರು. ವಿಚಾರಣೆ ವೇಳೆ ಶಿಕ್ಷೆಯ ಮಹತ್ವವನ್ನು ವಿವರಿಸುವ ಸಂದರ್ಭದಲ್ಲಿ ನ್ಯಾಯಾಧೀಶರು ಮಹಾಭಾರತವನ್ನು ಉಲ್ಲೇಖಿಸಿದರು ಎಂದು ವರದಿಯಾಗಿದೆ.
ಶಿಕ್ಷೆಗೊಳಗಾದ ಇಬ್ಬರೂ ಆರೋಪಿಗಳನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಸೌರಭ್ ಅವರ ತಾಯಿ ರೇಣು ರಜಪೂತ್ ಹಾಗೂ ಸಹೋದರ ನ್ಯಾಯಾಲಯದ ಕೊಠಡಿಯಲ್ಲಿ ಉಪಸ್ಥಿತರಿದ್ದರು.
‘ನಮ್ಮ ಮಗನ ನೆನಪುಗಳು ಮನೆಯಲ್ಲೆಲ್ಲ ಇವೆ’
ತೀರ್ಪಿನ ಬಳಿಕ ಪ್ರತಿಕ್ರಿಯಿಸಿದ ಸೌರಭ್ ಅವರ ತಾಯಿ ರೇಣು ರಜಪೂತ್ ಭಾವುಕರಾದರು. “ಒಟ್ಟಿಗೆ ಬದುಕಲು ಇಷ್ಟವಿಲ್ಲದಿದ್ದರೆ ಬೇರ್ಪಡಿ. ಆದರೆ ಬೇರೊಬ್ಬರ ಮಗನ ಪ್ರಾಣವನ್ನು ತೆಗೆಯಬೇಡಿ. ನಮ್ಮ ಪಾಲಿಗೆ ನಮ್ಮ ಮಗು ಎಲ್ಲಿಗೂ ಹೋಗಿಲ್ಲ. ಅವನ ನೆನಪುಗಳು ಮನೆಯ ಪ್ರತಿಯೊಂದು ಮೂಲೆಯಲ್ಲೂ ಇವೆ” ಎಂದು ಅವರು ನೋವು ತೋಡಿಕೊಂಡರು.
ಇದಕ್ಕೂ ಮೊದಲು, ತಮ್ಮ ಮಗಳಿಗೆ ಮರಣದಂಡನೆ ವಿಧಿಸಿದರೂ ವಿರೋಧಿಸುವುದಿಲ್ಲ ಎಂದು ಮುಸ್ಕಾನ್ ಅವರ ಪೋಷಕರು ನ್ಯಾಯಾಲಯಕ್ಕೆ ಲಿಖಿತ ಹೇಳಿಕೆ ಸಲ್ಲಿಸಿದ್ದರು. ಸೌರಭ್ ಅವರ ಕುಟುಂಬವೂ ಇಬ್ಬರು ಆರೋಪಿಗಳಿಗೆ ಗರಿಷ್ಠ ಶಿಕ್ಷೆ ವಿಧಿಸುವಂತೆ ನ್ಯಾಯಾಲಯವನ್ನು ಕೋರಿತ್ತು.
ದೇಶಾದ್ಯಂತ ಗಮನ ಸೆಳೆದಿದ್ದ ಈ ಪ್ರಕರಣದಲ್ಲಿ ನ್ಯಾಯಾಲಯದ ತೀರ್ಪು ಹೊರಬಿದ್ದಿದ್ದು, ಮುಂದಿನ ಕಾನೂನು ಪ್ರಕ್ರಿಯೆಗಳು ಪ್ರಕರಣದ ಅಂತಿಮ ಸ್ಥಿತಿಯನ್ನು ನಿರ್ಧರಿಸಲಿವೆ.
ಅಂತರ ರಾಜ್ಯ
Restaurant-ನೀರಿನ ಬಾಟ್ಲಿಗೆ ₹2 ಹೆಚ್ಚುವರಿ ವಸೂಲಿ; ರೆಸ್ಟೋರೆಂಟ್ಗೆ ₹1 ಲಕ್ಷ ದಂಡ..!
ಮುದ್ರಿತ ಗರಿಷ್ಠ ಚಿಲ್ಲರೆ ಬೆಲೆಗಿಂತ (MRP) ಹೆಚ್ಚುವರಿಯಾಗಿ ನೀರಿನ ಬಾಟ್ಲಿಗೆ ₹2 ವಸೂಲಿ ಮಾಡಿದ ಪ್ರಕರಣದಲ್ಲಿ ಹಥರಸ್ನ ರೆಸ್ಟೋರೆಂಟ್ವೊಂದಕ್ಕೆ ಅಲಿಗಡ ಜಿಲ್ಲಾ ಗ್ರಾಹಕ ವಿವಾದಗಳ ಪರಿಹಾರ ಆಯೋಗವು ₹1 ಲಕ್ಷ ದಂಡ ವಿಧಿಸಿದೆ.
ಅಲಿಗಡ (ಉತ್ತರ ಪ್ರದೇಶ): ಮುದ್ರಿತ ಗರಿಷ್ಠ ಚಿಲ್ಲರೆ ಬೆಲೆಗಿಂತ (MRP) ಹೆಚ್ಚುವರಿಯಾಗಿ ನೀರಿನ ಬಾಟ್ಲಿಗೆ ₹2 ವಸೂಲಿ ಮಾಡಿದ ಪ್ರಕರಣದಲ್ಲಿ ಹಥರಸ್ನ ರೆಸ್ಟೋರೆಂಟ್ವೊಂದಕ್ಕೆ ಅಲಿಗಡ ಜಿಲ್ಲಾ ಗ್ರಾಹಕ ವಿವಾದಗಳ ಪರಿಹಾರ ಆಯೋಗವು ₹1 ಲಕ್ಷ ದಂಡ ವಿಧಿಸಿದೆ.
ಇದಲ್ಲದೆ, ದೂರುದಾರರಿಗೆ ಮಾನಸಿಕ ಕಿರುಕುಳಕ್ಕೆ ಪರಿಹಾರವಾಗಿ ₹1,000 ಹಾಗೂ ಮೊಕದ್ದಮೆ ವೆಚ್ಚವಾಗಿ ₹5,000 ಪಾವತಿಸುವಂತೆಯೂ ಆಯೋಗ ಆದೇಶಿಸಿದೆ. ಆದೇಶವನ್ನು 45 ದಿನಗಳೊಳಗೆ ಪಾಲಿಸಬೇಕು. ತಪ್ಪಿದಲ್ಲಿ ಕಾನೂನು ಕ್ರಮ ಜರುಗಿಸುವುದಾಗಿ ರೆಸ್ಟೋರೆಂಟ್ ಮಾಲೀಕರಿಗೆ ಎಚ್ಚರಿಕೆ ನೀಡಿದೆ.
₹18ರ ಬಾಟ್ಲಿಗೆ ₹20 ವಸೂಲಿ
ಅಲಿಗಡ ನಿವಾಸಿಯೊಬ್ಬರು 2026ರ ಮಾರ್ಚ್ 11ರಂದು ಹಥರಸ್ನ ಈ ರೆಸ್ಟೋರೆಂಟ್ಗೆ ಭೇಟಿ ನೀಡಿದ್ದರು. ಊಟದ ವೇಳೆ ಕುಡಿಯಲು ನೀರು ಕೇಳಿದಾಗ, ₹18 ಎಂಆರ್ಪಿ ನಮೂದಿಸಿದ್ದ ನೀರಿನ ಬಾಟ್ಲಿಯನ್ನು ನೀಡಲಾಗಿತ್ತು. ಆದರೆ, ಬಿಲ್ನಲ್ಲಿ ₹20 ವಿಧಿಸಲಾಗಿತ್ತು. ಮುದ್ರಿತ ಬೆಲೆಗಿಂತ ₹2 ಹೆಚ್ಚುವರಿಯಾಗಿ ವಸೂಲಿ ಮಾಡಿರುವುದನ್ನು ಪ್ರಶ್ನಿಸಿ ಗ್ರಾಹಕರು ದೂರು ದಾಖಲಿಸಿದ್ದರು.
ಈ ಘಟನೆಯಿಂದ ತಮಗೆ ಮಾನಸಿಕ ವೇದನೆ ಹಾಗೂ ಆರ್ಥಿಕ ನಷ್ಟ ಉಂಟಾಗಿದೆ ಎಂದು ಆರೋಪಿಸಿದ್ದ ಗ್ರಾಹಕರು, ₹10 ಲಕ್ಷ ಪರಿಹಾರ ಮತ್ತು ₹15,000 ಕಾನೂನು ವೆಚ್ಚ ನೀಡುವಂತೆ ಕೋರಿ ಆಯೋಗದ ಮೊರೆ ಹೋಗಿದ್ದರು. ರೆಸ್ಟೋರೆಂಟ್ನ ಸೇವಾ ನ್ಯೂನತೆ ಹಾಗೂ ಅನ್ಯಾಯದ ವ್ಯಾಪಾರ ಪದ್ಧತಿಯ ವಿರುದ್ಧ ಕ್ರಮ ಕೈಗೊಳ್ಳುವಂತೆಯೂ ಮನವಿ ಮಾಡಿದ್ದರು.
ನೋಟಿಸ್ಗೆ ಉತ್ತರಿಸದ ರೆಸ್ಟೋರೆಂಟ್
ಆಯೋಗದ ಅಧ್ಯಕ್ಷ ಹಸ್ಟೈನ್ ಖುರೇಷಿ ಮತ್ತು ಸದಸ್ಯೆ ಪೂರ್ಣಿಮಾ ಸಿಂಗ್ ರಜಪೂತ್ ಅವರ ಪೀಠವು ಪ್ರಕರಣದ ವಿಚಾರಣೆ ನಡೆಸಿತು. ರೆಸ್ಟೋರೆಂಟ್ಗೆ ನೋಟಿಸ್ ಜಾರಿಗೊಳಿಸಿದರೂ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಹೀಗಾಗಿ, ಮೇ 21ರಂದು ಆಯೋಗವು ಏಕಪಕ್ಷೀಯ ವಿಚಾರಣೆ ಮುಂದುವರಿಸಿತು.
ದೂರುದಾರರು ಸಲ್ಲಿಸಿದ್ದ ಮಾರ್ಚ್ 11ರ ಬಿಲ್ ಹಾಗೂ ₹18 ಎಂಆರ್ಪಿ ನಮೂದಿಸಿದ್ದ ನೀರಿನ ಬಾಟ್ಲಿಯ ಛಾಯಾಚಿತ್ರವನ್ನು ಪರಿಶೀಲಿಸಿದ ಆಯೋಗ, ₹20 ವಸೂಲಿ ಮಾಡಿರುವುದನ್ನು ದೃಢಪಡಿಸಿತು. ಇದು ಅನ್ಯಾಯದ ವ್ಯಾಪಾರ ಪದ್ಧತಿಯಾಗಿದೆ ಎಂದು ತೀರ್ಮಾನಿಸಿ ರೆಸ್ಟೋರೆಂಟ್ಗೆ ₹1 ಲಕ್ಷ ದಂಡ ಹಾಗೂ ದೂರುದಾರರಿಗೆ ಪರಿಹಾರ ಪಾವತಿಸುವಂತೆ ಆದೇಶಿಸಿತು.
-
ಕಾರ್ಯಕ್ರಮಗಳು19 hours agoPuttur-ಪುತ್ತೂರು: ಅ.16ರಂದು ಪ್ರವೀಣ್ ಕ್ಯಾಪಿಟಲ್ನ ನವೀಕೃತ ಪ್ರಧಾನ ಕಚೇರಿ ಉದ್ಘಾಟನೆ
-
ಕಾರ್ಯಕ್ರಮಗಳು19 hours agoPuttur-ಪುತ್ತೂರು: ಅ.15ರಂದು ‘ಮೈ ಡ್ರೆಸ್ ಕೋಡ್’ ನೂತನ ಮಳಿಗೆ ಗ್ರಾಂಡ್ ರೀ-ಓಪನಿಂಗ್
-
ಕಾರ್ಯಕ್ರಮಗಳು18 hours ago‘Havells Experience Center-ನಾಳೆ (ಅ. 15) ರಂದು ಮೈತ್ರಿ ಎಲೆಕ್ಟ್ರಿಕ್ನಲ್ಲಿ ʻಹ್ಯಾವೆಲ್ಸ್ ಎಕ್ಸ್ಪೀರಿಯನ್ಸ್ ಸೆಂಟರ್ʼ ಶುಭಾರಂಭ
-
Uncategorized19 hours agoAmbika Vidyalaya-ಅಂಬಿಕಾ ವಿದ್ಯಾಲಯ ಸಿಬಿಎಸ್ಇ ವಿದ್ಯಾರ್ಥಿಗಳಿಗೆ ರಾಷ್ಟ್ರ ಮಟ್ಟದಲ್ಲಿ ಬಹುಮಾನ
-
ಶಿಕ್ಷಣ18 hours agoSanidhya S. Rao-ರಾಷ್ಟ್ರಮಟ್ಟದ ಚೆಸ್ ಸ್ಪರ್ಧೆಯಲ್ಲಿ ವಿವೇಕಾನಂದ ಸೆಂಟ್ರಲ್ ಸ್ಕೂಲ್ನ ಸಾನಿಧ್ಯ ಎಸ್. ರಾವ್ಗೆ ಪ್ರಥಮ ಸ್ಥಾನ; SGFI ಸ್ಪರ್ಧೆಗೆ ಆಯ್ಕೆ
-
ಶಿಕ್ಷಣ19 hours agoPhilomena-ಸಂತ ಫಿಲೋಮಿನಾ ಕಾಲೇಜಿನಲ್ಲಿ ರಾಜ್ಯಮಟ್ಟದ ಅಂತರ್ ಕಾಲೇಜು ‘ಬಿಜ್ಫೆಸ್ಟ್ 2K26’
-
ಸ್ಥಳೀಯ2 hours agoNavoor clinic-ನಾವೂರು ಕ್ಲಿನಿಕ್ಗೆ ಬೆಂಕಿ ಪ್ರಕರಣ: ರವಿ ಪೂಜಾರಿ ಬಂಧನ, ಇಬ್ಬರು ಶಂಕಿತರ ವಿಚಾರಣೆ
-
ಬಿಗ್ ನ್ಯೂಸ್2 hours agoRenukashwami murder case-ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಮಹತ್ವದ ತಿರುವು: ಮಾಫಿ ಸಾಕ್ಷಿ ಅರ್ಜಿ ವಾಪಸ್ ಪಡೆದ ಎ10 ವಿನಯ್


















