ಪುತ್ತೂರು
BJP Puttur | ನಾಯಕರ ನಡೆಗೆ ಬೇಸತ್ತು ಪುತ್ತೂರು ಬಿಜೆಪಿ ಕಚೇರಿಯ ಟೇಬಲ್ ಮೇಲೆ ರಾಜಿನಾಮೆ ಪತ್ರ ಇಟ್ಟು ಬಂದ ಗ್ರಾ.ಪಂ ಸದಸ್ಯೆ : ಎರಡೇ ದಿನದಲ್ಲಿ ಮೂರನೇ ಸದಸ್ಯ ರಾಜಿನಾಮೆ
ಪುತ್ತೂರು: ಹಿರಿಯ ಕಾರ್ಯಕರ್ತರಿಗೆ ಪಕ್ಷದಲ್ಲಿ ಬೆಲೆಯಿಲ್ಲ ಇತ್ತಿಚೆಗೆ ಸೇರಿದವರಿಗೆ ಪಕ್ಷದಲ್ಲಿ ಬೆಲೆ ಎಂದು ನಾಯಕರ ನಡೆಯಿಂದ ಬೇಸತ್ತು ರಾಜಿನಾಮೆ ಪತ್ರವನ್ನು ಬಿಜೆಪಿ ಮಂಡಲ ಕಚೇರಿಯಲ್ಲಿ ಇಟ್ಟು ಬಂದ ಘಟನೆ ಪುತ್ತೂರಿನಲ್ಲಿ (BJP Puttur) ನಡೆದಿದೆ.
ಇಬ್ಬರು ಗ್ರಾಮ ಪಂಚಾಯತ್ ಸದಸ್ಯರು ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದ ಬೆನ್ನಲ್ಲೇ, ಮತ್ತೋರ್ವ ಸದಸ್ಯರು ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಘಟನೆ ಆರ್ಯಾಪುನಲ್ಲಿ ನಡೆದಿದೆ.ಆರ್ಯಾಪು ಗ್ರಾಮ ಪಂಚಾಯತ್ ಸದಸ್ಯೆ ರತ್ನಾವತಿ ಮೇರ್ಲ ಅವರು ಬಿಜೆಪಿಯಲ್ಲಿ ರಾಜೀನಾಮೆ ಪತ್ರ ಇಟ್ಟು ಬಂದಿದ್ದಾರೆ.

ಆ.15ರಂದು ಬಿಜೆಪಿ ಕಚೇರಿಗೆ ತೆರಳಿ, ಮಾಜಿ ಶಾಸಕ ಸಂಜೀವ ಮಠಂದೂರು ಅವರಲ್ಲಿ ರಾಜೀನಾಮೆ ಪತ್ರ ನೀಡಿದ್ದಾರೆ. ಇದನ್ನು ಮಾಜಿ ಶಾಸಕರು ಸ್ವೀಕರಿಸಲು ಒಪ್ಪದೇ ಇದ್ದಾಗ, ಅವರ ಟೇಬಲ್ ಮೇಲಿಟ್ಟು ಬಂದಿದ್ದೇನೆ ಎಂದು ರತ್ನಾವತಿ ಮೇರ್ಲ ತಿಳಿಸಿದ್ದಾರೆ.ಇತ್ತೀಚೆಗೆ ನಡೆದ ಗ್ರಾಮ ಪಂಚಾಯತ್ ಅಧ್ಯಕ್ಷ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲದಿದ್ದರೂ ನನ್ನ ಹೆಸರನ್ನೇ ಬಿಜೆಪಿ ನಾಯಕರು ಹೇಳಿದರು.
ಆದರೆ ಕೊನೆಕ್ಷಣದಲ್ಲಿ ಗೀತಾ ಅವರನ್ನು ಅಧ್ಯಕ್ಷೆಯಾಗಿ ನೇಮಕ ಮಾಡಿದ್ದಾರೆ. ಕಾಂಗ್ರೇಸ್ ಹೋಗುತ್ತೇನೆ ಎಂದು ಗೀತಾ ಅವರು ಹೇಳಿದ ಕಾರಣ ಅವರನ್ನೇ ನಾಯಕರು ಅಧ್ಯಕ್ಷೆಯಾಗಿ ಮಾಡಿದರು. ಇದರಿಂದ ನನಗೆ ಅವರಿಗೆ ಮುಖಭಂಗವಾಗಿದ್ದು, ಬಿಜೆಪಿಗೆ ರಾಜೀನಾಮೆ ನೀಡಿದ್ದೇನೆ ಎಂದು ರತ್ನಾವತಿಯವರು ನಿಖರ ನ್ಯೂಸ್ ಗೆ ತಿಳಿಸಿದ್ದಾರೆ.
30 ವರ್ಷಗಳಿಂದ ಬಿಜೆಪಿ ಪಕ್ಷಕ್ಕೆ ಕೆಲಸ ಮಾಡಿದವರಿಗಿಂತ ಇತ್ತಿಚೆಗೆ ಪಕ್ಷ ಸೇರಿದವರಿಗೆ ಬೆಲೆ ಜಾಸ್ತಿ ಎಂದು ರತ್ನಾವತಿಯವರು ಬೇಸರ ವ್ಯಕ್ತಪಡಿಸಿದರು. ಬಿಜೆಪಿ ನಾಯಕರ ಈ ಕ್ರಮದಿಂದ ನನಗೆ ಬೇಸರವಾಗಿದೆ. ಹಾಗಾಗಿ ಪಕ್ಷಕ್ಕೆ ರಾಜೀನಾಮೆ ನೀಡಿದ್ದೇನೆ. ಹಾಗೆಂದು ಬೇರೆ ಪಕ್ಷಕ್ಕೆ ಹೋಗುವುದಿಲ್ಲ. ಈ ಬಾರಿ ಆರ್ಯಾಪು ಗ್ರಾಪಂ ಆಡಳಿತ ಪಕ್ಷವಾದ ಬಿಜೆಪಿಗೆ ನಾನು ಬೆಂಬಲ ನೀಡುವುದಿಲ್ಲ. ಪಕ್ಷೇತರಳಾಗಿ ಕೆಲಸ ಮಾಡ್ತೇನೆ ಎಂದರು.
ಬಿಗ್ ನ್ಯೂಸ್
Puttur-ಎಸ್ಐಆರ್ ರದ್ದುಗೊಳಿಸುವವರೆಗೆ ಯಾವುದೇ ಚುನಾವಣೆ ನಡೆಸಬಾರದು: ಅನ್ವರ್ ಸಾದಾತ್ ಎಸ್.; ಜ್ಞಾನೇಶ್ ಕುಮಾರ್ ಅವರನ್ನು ವಜಾಗೊಳಿಸಲು ಹಾಗೂ ಎಸ್ಐಆರ್ ರದ್ದುಗೊಳಿಸಲು ಆಗ್ರಹಿಸಿ ಕಬಕದಲ್ಲಿ ಎಸ್ಡಿಪಿಐ ಜಂತರ್ ಮಂತರ್ ಪ್ರತಿಭಟನಾ ಧರಣಿ
ಎಸ್ಐಆರ್ (SIR) ಪ್ರಕ್ರಿಯೆಯನ್ನು ಸಂಪೂರ್ಣವಾಗಿ ರದ್ದುಗೊಳಿಸುವವರೆಗೆ ದೇಶದಲ್ಲಿ ಯಾವುದೇ ಚುನಾವಣೆಯನ್ನು ನಡೆಸಬಾರದು. ಮತದಾನದ ಹಕ್ಕು ಪ್ರತಿಯೊಬ್ಬ ಅರ್ಹ ನಾಗರಿಕನ ಸಾಂವಿಧಾನಿಕ ಹಕ್ಕಾಗಿದ್ದು, ಆ ಹಕ್ಕನ್ನು ಕಸಿದುಕೊಳ್ಳುವ ಯಾವುದೇ ಪ್ರಯತ್ನವನ್ನು ಸಹಿಸಲು ಸಾಧ್ಯವಿಲ್ಲ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಮಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷರಾದ ಅನ್ವರ್ ಸಾದಾತ್ ಎಸ್. ಆಗ್ರಹಿಸಿದರು.
ಪುತ್ತೂರು: ಎಸ್ಐಆರ್ (SIR) ಪ್ರಕ್ರಿಯೆಯನ್ನು ಸಂಪೂರ್ಣವಾಗಿ ರದ್ದುಗೊಳಿಸುವವರೆಗೆ ದೇಶದಲ್ಲಿ ಯಾವುದೇ ಚುನಾವಣೆಯನ್ನು ನಡೆಸಬಾರದು. ಮತದಾನದ ಹಕ್ಕು ಪ್ರತಿಯೊಬ್ಬ ಅರ್ಹ ನಾಗರಿಕನ ಸಾಂವಿಧಾನಿಕ ಹಕ್ಕಾಗಿದ್ದು, ಆ ಹಕ್ಕನ್ನು ಕಸಿದುಕೊಳ್ಳುವ ಯಾವುದೇ ಪ್ರಯತ್ನವನ್ನು ಸಹಿಸಲು ಸಾಧ್ಯವಿಲ್ಲ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಮಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷರಾದ ಅನ್ವರ್ ಸಾದಾತ್ ಎಸ್. ಆಗ್ರಹಿಸಿದರು.

ನವೆಂಬರ್ 24ರಂದು ಕಬಕ ಜಂಕ್ಷನ್ನಲ್ಲಿ ಜ್ಞಾನೇಶ್ ಕುಮಾರ್ ಅವರನ್ನು ವಜಾಗೊಳಿಸಬೇಕು ಹಾಗೂ ಎಸ್ಐಆರ್ ಪ್ರಕ್ರಿಯೆಯನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿ SDPI ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಜಂತರ್ ಮಂತರ್ ಪ್ರತಿಭಟನಾ ಧರಣಿಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಎಸ್ಐಆರ್ ಪ್ರಕ್ರಿಯೆಯಿಂದ ಅರ್ಹ ಮತದಾರರು ಮತದಾನದ ಹಕ್ಕನ್ನು ಕಳೆದುಕೊಳ್ಳುವ ಆತಂಕ ಎದುರಾಗಿದೆ. ಪ್ರಜಾಪ್ರಭುತ್ವದ ಮೂಲ ಆಶಯವಾದ ಮತದಾನದ ಹಕ್ಕನ್ನು ರಕ್ಷಿಸುವುದು ಸರ್ಕಾರದ ಜವಾಬ್ದಾರಿಯಾಗಿದ್ದು, ಅರ್ಹ ಮತದಾರರಿಗೆ ಯಾವುದೇ ಅನ್ಯಾಯವಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

ಯಂಗ್ ಡೆಮಾಕ್ರಟ್ಸ್ ಕೇರಳ ರಾಜ್ಯ ಸಮಿತಿ ಸದಸ್ಯರಾದ ಅಹ್ಮದ್ ನಿಸಾರ್ ಮಾತನಾಡಿ, ಸಂಘಪರಿವಾರದ ರಾಜಕೀಯ ನಿಲುವುಗಳು ಹಾಗೂ ಬಿಜೆಪಿ ಸರ್ಕಾರದ ನೀತಿಗಳನ್ನು ಟೀಕಿಸಿದರು. ಪ್ರಜಾಪ್ರಭುತ್ವದ ಮೌಲ್ಯಗಳನ್ನು ಮತ್ತು ಸಂವಿಧಾನ ನೀಡಿರುವ ಹಕ್ಕುಗಳನ್ನು ರಕ್ಷಿಸುವ ಅಗತ್ಯವನ್ನು ಒತ್ತಿಹೇಳಿದ ಅವರು, ಎಸ್ಐಆರ್ ಪ್ರಕ್ರಿಯೆಯಿಂದ ಅರ್ಹ ಮತದಾರರಿಗೆ ಅನ್ಯಾಯವಾಗಬಾರದು ಎಂದು ಆಗ್ರಹಿಸಿದರು.
SDPI ಕರ್ನಾಟಕ ರಾಜ್ಯ ಸಮಿತಿ ಸದಸ್ಯರಾದ ಅಡ್ವೊಕೇಟ್ ಮಜೀದ್ ಖಾನ್ ಮಾತನಾಡಿ, ಮತದಾನದ ಹಕ್ಕು ಪ್ರತಿಯೊಬ್ಬ ಅರ್ಹ ನಾಗರಿಕನಿಗೂ ಖಾತರಿಯಾಗಬೇಕು. ಎಸ್ಐಆರ್ ಪ್ರಕ್ರಿಯೆಯಿಂದ ಮತದಾರರ ಪಟ್ಟಿಯಲ್ಲಿ ಉಂಟಾಗಬಹುದಾದ ಲೋಪಗಳನ್ನು ತಡೆಯುವ ನಿಟ್ಟಿನಲ್ಲಿ ಈ ಪ್ರಕ್ರಿಯೆಯನ್ನು ರದ್ದುಗೊಳಿಸಬೇಕು ಎಂದು ಒತ್ತಾಯಿಸಿದರು.
WIM ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ನಸ್ರಿಯಾ ಬೆಳ್ಳಾರೆ ಮಾತನಾಡಿ, ಮಹಿಳೆಯರು ಸೇರಿದಂತೆ ಸಮಾಜದ ಪ್ರತಿಯೊಬ್ಬ ಅರ್ಹ ನಾಗರಿಕನಿಗೂ ಮತದಾನದ ಹಕ್ಕು ಸಮಾನವಾಗಿ ದೊರೆಯಬೇಕು. ಯಾವುದೇ ಅರ್ಹ ಮತದಾರರು ಮತದಾರರ ಪಟ್ಟಿಯಿಂದ ಹೊರಗುಳಿಯುವ ಪರಿಸ್ಥಿತಿ ನಿರ್ಮಾಣವಾಗದಂತೆ ಸರ್ಕಾರ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು ಎಂದರು.

ಮತದಾನ ವಂಚನೆ, ಬೆಲೆ ಏರಿಕೆ ವಿರುದ್ಧ ಹೆನ್ರಿ ಡಿಸೋಜಾ ಆಕ್ರೋಶ:
SDTU ಮಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷರಾದ ಹೆನ್ರಿ ಡಿಸೋಜಾ ಮಾತನಾಡಿ, ಮತದಾನದ ಹಕ್ಕು ಕಸಿಯುವ ಹುನ್ನಾರ ನಡೆಯುತ್ತಿದ್ದು, ಹಕ್ಕಿಗಾಗಿ ಹೋರಾಡುವವರನ್ನು ಜೈಲಿಗೆ ಹಾಕುವ ಪ್ರಯತ್ನ ಖಂಡನೀಯ ಎಂದರು. ಮತದಾನ ವಂಚನೆಯ ಆರೋಪ ಹೊತ್ತಿರುವ ಜ್ಞಾನೇಶ್ ಕುಮಾರ್ ಅವರನ್ನು ಕೂಡಲೇ ಅಧಿಕಾರದಿಂದ ವಜಾಗೊಳಿಸಿ, ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಸಮಾಜಸೇವಕ ಹರೇಕಳ ಹಾಜಬ್ಬ ಅವರಂತಹವರ ಹೆಸರೇ ಮತದಾರರ ಪಟ್ಟಿಯಿಂದ ಕೈಬಿಟ್ಟು ಹೋಗಿದ್ದು, ಸುಮಾರು 13 ಕೋಟಿಗೂ ಅಧಿಕ ಮತದಾರರ ಹೆಸರುಗಳು ಪಟ್ಟಿಯಿಂದ ಡಿಲೀಟ್ ಆಗಿರುವುದು ಆತಂಕಕಾರಿಯಾಗಿದೆ ಎಂದರು. ಇದೇ ವೇಳೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಹಾಗೂ ಮಂಗಳೂರು ವಿಮಾನ ನಿಲ್ದಾಣದ ಖಾಸಗೀಕರಣ ಮತ್ತು ಪ್ರವೇಶ ಶುಲ್ಕ ವಸೂಲಾತಿಯ ವಿರುದ್ಧವೂ ಅವರು ಆಕ್ರೋಶ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು SDPI ಪುತ್ತೂರು ಕ್ಷೇತ್ರಾಧ್ಯಕ್ಷರಾದ ಅಶ್ರಫ್ ಬಾವು ವಹಿಸಿದ್ದರು.
ವೇದಿಕೆಯಲ್ಲಿ SDTU ಕರ್ನಾಟಕ ರಾಜ್ಯ ಸಮಿತಿ ಸದಸ್ಯ ಹಮೀದ್ ಸಾಲ್ಮರ, SDPI ಮಂಗಳೂರು ಗ್ರಾಮಾಂತರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿದ್ದೀಕ್ ಪುತ್ತೂರು, ಕಾರ್ಯದರ್ಶಿಗಳಾದ ಅಶ್ರಫ್ ತಲಪಾಡಿ, ಶಾಕಿರ್ ಅಲಕೆಮಜಲು, ಉಪಾಧ್ಯಕ್ಷ ಇನಾಸ್ ರೊಡ್ರಿಗಸ್, ಸದಸ್ಯ ಸಿದ್ದೀಕ್ ಅಲೆಕ್ಕಾಡಿ, ಯಂಗ್ ಡೆಮಾಕ್ರಟ್ಸ್ ಮಂಗಳೂರು ಗ್ರಾಮಾಂತರ ಸದಸ್ಯರಾದ ಹಮ್ದಾ ಮೆಲ್ಕಾರ್, ಹಮೀದ್ ಪುತ್ತೂರು, SDPI ಬಂಟ್ವಾಳ ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಶಾಹುಲ್ ಹಮೀದ್ ಎಸ್.ಎಚ್., ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ಕಾರ್ಯದರ್ಶಿ ಇಸ್ಮಾಯಿಲ್ ಕೆಮ್ಮಾಯಿ ಉಪಸ್ಥಿತರಿದ್ದರು.
ಪ್ರತಿಭಟನೆಯಲ್ಲಿ ಪುತ್ತೂರು ಕ್ಷೇತ್ರ ಸಮಿತಿ ಸದಸ್ಯ ಸಿರಾಜ್ ಕೂರ್ನಡ್ಕ ಮತ್ತು ತಂಡ ಎಸ್ಐಆರ್ ವಿರೋಧಿ ಹಾಡುಗಳನ್ನು ಹಾಡುವ ಮೂಲಕ ಪ್ರತಿಭಟನೆಗೆ ಧ್ವನಿಗೂಡಿಸಿದರು.
ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ಜೊತೆ ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಸ್ವಾಗತಿಸಿದರು. ಪುತ್ತೂರು ನಗರ ಸಮಿತಿ ಅಧ್ಯಕ್ಷ ತಾಜುದ್ದೀನ್ ಸಾಲ್ಮರ ವಂದಿಸಿದರು. ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ಕಾರ್ಯದರ್ಶಿ ಉಸ್ಮಾನ್ ಎ.ಕೆ. ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮಗಳು
Medland Cup-2026-ಮೆಡ್ಲ್ಯಾಂಡ್ ಆಸ್ಪತ್ರೆಯ ವಾರ್ಷಿಕ ಸಂಭ್ರಮ: ನ.29ರಂದು ‘ಮೆಡ್ಲ್ಯಾಂಡ್ ಕಪ್-2026’ ಕ್ರಿಕೆಟ್ ಪಂದ್ಯಾಟ
ಮೆಡ್ಲ್ಯಾಂಡ್ ಸ್ಪೆಷಾಲಿಟಿ ಆಸ್ಪತ್ರೆಯ ಪ್ರಥಮ ವರ್ಷದ ಸೇವಾ ಸಂಭ್ರಮದ ಅಂಗವಾಗಿ ವಿವಿಧ ಇಲಾಖೆಗಳ ಎಂಟು ತಂಡಗಳ ನಡುವಿನ ಆಹ್ವಾನಿತ ಕ್ರಿಕೆಟ್ ಪಂದ್ಯಾಟ ‘ಮೆಡ್ಲ್ಯಾಂಡ್ ಕಪ್-2026’ ನ.29ರಂದು ಪುತ್ತೂರಿನ ಸಂಪ್ಯ ಕಮ್ಮಾಡಿ ಮೈದಾನದಲ್ಲಿ ನಡೆಯಲಿದೆ.
ಪುತ್ತೂರು: ಮೆಡ್ಲ್ಯಾಂಡ್ ಸ್ಪೆಷಾಲಿಟಿ ಆಸ್ಪತ್ರೆಯ ಪ್ರಥಮ ವರ್ಷದ ಸೇವಾ ಸಂಭ್ರಮದ ಅಂಗವಾಗಿ ವಿವಿಧ ಇಲಾಖೆಗಳ ಎಂಟು ತಂಡಗಳ ನಡುವಿನ ಆಹ್ವಾನಿತ ಕ್ರಿಕೆಟ್ ಪಂದ್ಯಾಟ ‘ಮೆಡ್ಲ್ಯಾಂಡ್ ಕಪ್-2026’ ನ.29ರಂದು ಪುತ್ತೂರಿನ ಸಂಪ್ಯ ಕಮ್ಮಾಡಿ ಮೈದಾನದಲ್ಲಿ ನಡೆಯಲಿದೆ.

ಪುತ್ತೂರಿನ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಹಾಗೂ ಸಂಸ್ಥೆಗಳ ಪ್ರತಿನಿಧಿಗಳನ್ನು ಒಳಗೊಂಡ ಎಂಟು ತಂಡಗಳು ಈ ಕ್ರೀಡಾಕೂಟದಲ್ಲಿ ಸೆಣಸಾಡಲಿವೆ. ಪುತ್ತೂರು ಪೊಲೀಸ್ ಎಲೆವೆನ್, ಫಾರೆಸ್ಟ್ ಎಲೆವೆನ್, ಮೆಡ್ಲ್ಯಾಂಡ್ ಫಾಲ್ಕನ್ಸ್, ಪುತ್ತೂರು ಬಾರ್ ಅಸೋಸಿಯೇಷನ್, ಮೆಸ್ಕಾಂ ಪುತ್ತೂರು ಪರ್ಲ್ಸ್, ಕ್ಯಾಂಪ್ಕೋ ಪುತ್ತೂರು, ಕೆಎಸ್ಆರ್ಟಿಸಿ ಪುತ್ತೂರು ಹಾಗೂ ಸಿಎಂಸಿ ಎಲೆವೆನ್ ಪುತ್ತೂರು ತಂಡಗಳು ಪಂದ್ಯಾಟದಲ್ಲಿ ಭಾಗವಹಿಸಲಿವೆ.
ಆಸ್ಪತ್ರೆಯ ಒಂದು ವರ್ಷದ ವೈದ್ಯಕೀಯ ಸೇವೆಯ ಸಂಭ್ರಮವನ್ನು ವಿಶೇಷವಾಗಿ ಆಚರಿಸುವ ಉದ್ದೇಶದಿಂದ ಈ ಕ್ರೀಡಾಕೂಟವನ್ನು ಆಯೋಜಿಸಲಾಗಿದೆ. ವಿವಿಧ ಇಲಾಖೆಗಳ ನಡುವೆ ಪರಸ್ಪರ ಬಾಂಧವ್ಯ ವೃದ್ಧಿಸುವುದರ ಜತೆಗೆ ಕ್ರೀಡಾಸ್ಫೂರ್ತಿ, ತಂಡದ ಒಗ್ಗಟ್ಟು ಹಾಗೂ ಸ್ನೇಹಭಾವವನ್ನು ಉತ್ತೇಜಿಸುವುದು ಪಂದ್ಯಾಟದ ಆಶಯವಾಗಿದೆ.
ಈ ಕುರಿತು ಮಾಹಿತಿ ನೀಡಿದ ಮೆಡ್ಲ್ಯಾಂಡ್ ಸ್ಪೆಷಾಲಿಟಿ ಆಸ್ಪತ್ರೆಯ ಹಿರಿಯ ವೈದ್ಯ ಡಾ. ವಿಶಾಲ್ ಅವರು, ಆಸ್ಪತ್ರೆಯ ಪ್ರಥಮ ವರ್ಷದ ಸಂಭ್ರಮವನ್ನು ಕ್ರೀಡಾಕೂಟದ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.
ಬಿಗ್ ನ್ಯೂಸ್
Rain-ಸುಳ್ಯ-ಪುತ್ತೂರು ಭಾಗಗಳಲ್ಲಿ ಹಲವೆಡೆ ಮಳೆ : ಎಷ್ಟು ದಿನ ಮಳೆಯಾಗಲಿದೆ ಗೊತ್ತೇ..?
ಕರಾವಳಿಯ ದ.ಕ ಕಾಸರಗೋಡು ಜಿಲ್ಲೆಗಳಲ್ಲಿ ಹಾಗೂ ಮಲೆನಾಡಿನಲ್ಲಿ ನಿನ್ನೆ ಸಂಜೆ ಮೋಡದ ವಾತಾವರಣದಿಂದ ಕೂಡಿದ್ದು ಪುತ್ತೂರು , ಕಡಬ, ಸುಳ್ಯದ ಕೆಲವು ಭಾಗಗಳಲ್ಲಿ ಉತ್ತಮ ಮಳೆಯಾಗಿದೆ. ನ.25ರ ರಾತ್ರಿ ಕಡಬ ತಾಲೂಕಿನ ಕಾಣಿಯೂರು , ಪಂಜ ಭಾಗಗಳಲ್ಲಿ ಉತ್ತಮ ಮಳೆಯಾಗಿದೆ. ಪುತ್ತೂರಿನ ಹಲವು ಕಡೆ ಸಾಧಾರಣ ಮಳೆಯಾಗಿದೆ.
ಪುತ್ತೂರು : ಕರಾವಳಿಯ ದ.ಕ ಕಾಸರಗೋಡು ಜಿಲ್ಲೆಗಳಲ್ಲಿ ಹಾಗೂ ಮಲೆನಾಡಿನಲ್ಲಿ ನಿನ್ನೆ ಸಂಜೆ ಮೋಡದ ವಾತಾವರಣದಿಂದ ಕೂಡಿದ್ದು ಪುತ್ತೂರು , ಕಡಬ, ಸುಳ್ಯದ ಕೆಲವು ಭಾಗಗಳಲ್ಲಿ ಉತ್ತಮ ಮಳೆಯಾಗಿದೆ.
ನ.25ರ ರಾತ್ರಿ ಕಡಬ ತಾಲೂಕಿನ ಕಾಣಿಯೂರು , ಪಂಜ ಭಾಗಗಳಲ್ಲಿ ಉತ್ತಮ ಮಳೆಯಾಗಿದೆ. ಪುತ್ತೂರಿನ ಹಲವು ಕಡೆ ಸಾಧಾರಣ ಮಳೆಯಾಗಿದೆ.
ದಕ್ಷಿಣ ಒಳನಾಡಿನ ಚಿಕ್ಕಬಳ್ಳಾಪುರ ಕೋಲಾರ ರಾಮನಗರ ಬೆಂಗಳೂರು ತುಮಕೂರು ಜಿಲ್ಲೆಗಳ ಹಲವೆಡೆ ಮಳೆಯಾಗಿದೆ.
ಇವತ್ತಿನ ಮುನ್ಸೂಚನೆ ಪ್ರಕಾರ ಕರಾವಳಿ ಜಿಲ್ಲೆಗಳಲ್ಲಿ ಸಂಜೆ ಮೋಡದ ವಾತಾವರಣ ಇರಲಿದ್ದು ದ.ಕ. ಉಡುಪಿ ಉ.ಕ ಜಿಲ್ಲೆಗಳ ಅಲ್ಲಲ್ಲಿ ಸಂಜೆ ಅಥವಾ ರಾತ್ರಿ ಮಳೆ ಬರುವ ಸಾಧ್ಯತೆ ಇದೆ. ರಾತ್ರಿ ಗುಡುಗು ಮಳೆಯ ಮುನ್ಸೂಚನೆ ಇದ್ದರೂ ವಾತಾವರಣದ ಹ್ಯುಮಿಡಿಟಿ ಕಡಿಮೆ ಆದರೇ ಮಳೆ ಪ್ರಮಾಣ ಕಡಿಮೆ ಆಗಿ ಮೋಡದ ವಾತಾವರಣ ಮುಂದುವರೆಯಬಹುದು ಎನ್ನಲಾಗಿದೆ. ನವೆಂಬರ್ 28 ತನಕ ಸಂಜೆ ಮೋಡ – ಮಳೆಯ ಸಾಧ್ಯತೆ ಮುಂದುವರೆಯಬಹುದು ಎಂದು ಹವಮಾನ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ಮಲೆನಾಡಿನಲ್ಲಿ ಸಂಜೆಯ ಮೋಡ ಬರಲಿದ್ದು ಕೊಡಗು ಹಾಸನ ಚಿಕ್ಕಮಗಳೂರು ಶಿವಮೊಗ್ಗ ಜಿಲ್ಲೆಗಳ ಅಲ್ಲಲ್ಲಿ ಗುಡುಗು ಸಹಿತ ತುಂತುರು – ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. 27 ತನಕ ಸಂಜೆ ಮಳೆಯ ಸಾಧ್ಯತೆ ಇದೆ.
ದಕ್ಷಿಣ ಒಳನಾಡಿನ ಕೋಲಾರ ಚಿಕ್ಕಬಳ್ಳಾಪುರ ಬೆಂಗಳೂರು – ಗ್ರಾಮಾಂತರ ರಾಮನಗರ ಚಾಮರಾಜನಗರ ಮೈಸೂರು ಮಂಡ್ಯ ಜಿಲ್ಲೆಗಳ ಅಲ್ಲಲ್ಲಿ ಸಾಧಾರಣ ಮಳೆಯ ಮುನ್ಸೂಚನೆ ಇದೆ. ತುಮಕೂರು ಚಿತ್ರದುರ್ಗ ದಾವಣಗೆರೆ ವಿಜಯನಗರ ಜಿಲ್ಲೆಗಳ ಅಲ್ಲಲ್ಲಿ ತುಂತುರು ಮಳೆಯಾಗಬಹುದು. ನ 28 ರಿಂದ ಮಳೆ ಪೂರ್ತಿ ಕಡಿಮೆ ಆಗಬಹುದು.
ಉತ್ತರ ಒಳನಾಡಿನಲ್ಲಿ ಮೋಡದ ವಾತಾವರಣ ಬರಬಹುದು.ಬಳ್ಳಾರಿ ರಾಯಚೂರು ಹಾವೇರಿ ಗದಗ ಧಾರವಾಡ ಜಿಲ್ಲೆಗಳ ಅಲ್ಲಲ್ಲಿ ತುಂತುರು/ ಸಾಮಾನ್ಯ ಮಳೆಯಾಗುವ ಸಾಧ್ಯತೆ ಇದೆ. ದಕ್ಷಿಣ ಒಳನಾಡಿನ ಮೋಡ ಮಧ್ಯ ಕರ್ನಾಟಕ ಚಲಿಸುವ ಕಾರಣ ಒಂದೆರಡು ದಿನ ಸಣ್ಣ ಮಳೆಯಾಗಲಿದ್ದು ನಂತರ ಚಳಿ ಮುಂದುವರೆಯಬಹುದು.
ಬಂಗಾಳಕೊಲ್ಲಿಯಿಂದ ಬೀಸುವ ಪೂರ್ವದ ಮಾರುತಗಳಿಂದ ತಮಿಳುನಾಡು ಕೇರಳ ಕರ್ನಾಟಕದಲ್ಲಿ ಮಳೆಯಾಗುತ್ತಿದ್ದು ಮುಂದಿನ 3-4 ದಿನ ಮಳೆ ಮುಂದುವರೆಯುವ ಮುನ್ಸೂಚನೆ ಇದೆ. ಡಿಸೆಂಬರ್ ಮೊದಲ ವಾರ ದಕ್ಷಿಣ ಬಂಗಾಳಕೊಲ್ಲಿಯಲ್ಲಿ ಇನ್ನೊಂದು ವಾಯುಭಾರ ಕುಸಿತವಾಗಿ ದಕ್ಷಿಣ ಶ್ರೀಲಂಕಾ ಮೂಲಕ ಅರಬ್ಬೀಸಮುದ್ರದತ್ತ ಚಲಿಸುವ ಸಾಧ್ಯತೆಯೂ ಇದೆ.
-
ಮಂಗಳೂರು23 hours agoSoujanya case: Big Breaking: ಸೌಜನ್ಯ ಪ್ರಕರಣದಲ್ಲಿ ಯೂಟ್ಯೂಬ್ ಚಾನೆಲ್ಗಳ ಮಸಾಲಾ ಸುದ್ದಿಗೆ ಖರ್ಗೆ ಗರಂ! ವೈಜ್ಞಾನಿಕ ದಾಖಲೆಗಳ ಆಧಾರದಲ್ಲೆ ತನಿಖೆ
-
ಬಿಗ್ ನ್ಯೂಸ್8 hours agoRain-ಸುಳ್ಯ-ಪುತ್ತೂರು ಭಾಗಗಳಲ್ಲಿ ಹಲವೆಡೆ ಮಳೆ : ಎಷ್ಟು ದಿನ ಮಳೆಯಾಗಲಿದೆ ಗೊತ್ತೇ..?
-
ದಕ್ಷಿಣ ಕನ್ನಡ21 hours ago
ಡಿ. 8ರ ಪುತ್ತೂರು ದೀಪೋತ್ಸವಕ್ಕೆ ಸಿದ್ಧತೆ ಚುರುಕು: ಕಾರ್ಯಾಲಯ ಉದ್ಘಾಟನೆ -ಅದ್ದೂರಿ ದೀಪೋತ್ಸವಕ್ಕೆ ಭಕ್ತರ ಸಹಕಾರ ಅಗತ್ಯ: ಎಸ್. ರವೀಂದ್ರ ಶೆಟ್ಟಿ
-
ಅಪರಾಧ7 hours agoMangalore-ಚಿನ್ನ ಕಳ್ಳಸಾಗಣೆ ಜಾಲ: ಮಂಗಳೂರು ವಿಮಾನ ನಿಲ್ದಾಣದ ಇಬ್ಬರು ಸಿಬ್ಬಂದಿ ಸಹಿತ ಮೂವರು ಡಿಆರ್ಐ ವಶಕ್ಕೆ
-
ನಿಧನ ವಾರ್ತೆ7 hours agoAccident-ಯುಎಇಯಲ್ಲಿ ಭೀಕರ ಬಸ್–ಲಾರಿ ಅಪಘಾತ; ಕಾಸರಗೋಡಿನ ಅಶ್ರಫ್ ಸೇರಿ ನಾಲ್ವರು ಕೇರಳಿಗರು ಸಾವು
-
ನಿಧನ ವಾರ್ತೆ7 hours agoಮಂಗಳೂರು: ಬೈಕ್ ಢಿಕ್ಕಿಯಿಂದ ಗಾಯಗೊಂಡಿದ್ದ ನರ್ಸಿಂಗ್ ವಿದ್ಯಾರ್ಥಿನಿ ಸಾವು
-
ಅಂತರ ರಾಜ್ಯ5 hours agoCM post battle-ಉತ್ತರ ಪ್ರದೇಶ ಬಿಜೆಪಿಯಲ್ಲಿ ಸಿಎಂ ಕುರ್ಚಿ ಕದನ: ಚುನಾವಣೆಗೂ ಮುನ್ನವೇ ಭಿನ್ನಮತ?
-
ಸ್ಥಳೀಯ7 hours agoDharmasthala-ಡಾ. ಡಿ. ವೀರೇಂದ್ರ ಹೆಗ್ಗಡೆಯವರ 79ನೇ ಜನ್ಮದಿನ ಸಂಭ್ರಮ; ಧರ್ಮಸ್ಥಳದ ಮ್ಯೂಸಿಯಂಗೆ ಕಲಾಂ ಕಾರು, ಸಚಿತ್ರ ಅಂಚೆಚೀಟಿಗಳು, ಬಗ್ಗಿ ವಾಹನ ಕೊಡುಗೆ















