Connect with us

ಪುತ್ತೂರು

Puttur Railway Road | ಹಲವು ವರ್ಷಗಳ ಕನಸಿನ ಪುತ್ತೂರಿನ ರೈಲ್ವೆ ನಿಲ್ದಾಣ ರಸ್ತೆ ಕಾಂಕ್ರೀಟೀಕರಣ ಮುಗಿಯುವ ಮೊದಲೇ ಬಿರುಕು..! ಚುನಾವಣೆ ಜರೂರಿನ ಕೋಟಿಯ ಕಾಮಗಾರಿಗೆ ಕೇವಲ 2 ತಿಂಗಳೇ ವ್ಯಾಲಿಡಿಟಿಯೇ..? ಕೇಳಿ ಬರುತ್ತಿದೆ ಬ್ರಹ್ಮಾಂಡ ಬ್ರಷ್ಟಾಚಾರದ ಆರೋಪ..!

Published

on



Ad Widget

Ad Widget

Ad Widget

Ad Widget

ಪುತ್ತೂರು: ನಗರ ಸಭೆ ಪ್ಯಾಪ್ತಿಯಲ್ಲಿ ಅಭಿವೃದ್ಧಿಯ ಶಖೆ ಬರೆಯಬೇಕೆಂದು ವಿಶೇಷ ಕ್ರಾಂತಿಗೆ ಮುಂದಾಗಿ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಹಾರಾಡಿ – ರೈಲ್ವೇ ನಿಲ್ದಾಣ ರಸ್ತೆಯನ್ನು ಕಾಂಕ್ರೀಟೀಕರಣಗೊಳಿಸಲಾಗಿತ್ತಾದರೂ (Puttur Railway Road), ಕೆಲಸ ಪೂರ್ಣಗೊಳ್ಳುವ ಮೊದಲೇ ಕಾಮಗಾರಿಯ ನೈಜ ಬಣ್ಣ ಜನರ ಮುಂದೆ ತೆರೆದುಕೊಂಡಿದೆ.

Ad Widget

Ad Widget

Ad Widget

Ad Widget

ಪುತ್ತೂರು ಪೇಟೆಯಿಂದ ಉಪ್ಪಿನಂಗಡಿ ರಸ್ತೆಯನ್ನು ಸಮೀಪದಿಂದ ಸಂಪರ್ಕಿಸಲು ನೆಲ್ಲಿಕಟ್ಟೆ – ಕಬಕ ಪುತ್ತೂರು ರೈಲ್ವೇ ನಿಲ್ದಾಣ – ಹಾರಾಡಿ ರಸ್ತೆ ಸಹಕಾರಿಯಾಗಿತ್ತು. ನೆಲ್ಲಿಕಟ್ಟೆ – ರೈಲ್ವೇ ನಿಲ್ದಾಣವನ್ನು ಸಂಪರ್ಕಿಸುವ ರಸ್ತೆಯ ಕಾಂಕ್ರೀಟಿಕರಣ ಕೆಲವು ವರ್ಷಗಳ ಹಿಂದೆ ಅಭಿವೃದ್ಧಿ ಪಡಿಸಲಾಗಿತ್ತಾದರೂ, ರೈಲ್ವೇ ನಿಲ್ದಾಣದಿಂದ ಹಾರಾಡಿ ಸಂಪರ್ಕಿಸುವ ರಸ್ತೆಯನ್ನು ಮಾತ್ರ ರೈಲ್ವೇ ಇಲಾಖೆಯ ಪರವಾನಿಗೆ ಇಲ್ಲವೆಂಬ ನೆಪವನ್ನು ಹೇಳಿ ಅಭಿವೃದ್ಧಿಯಿಂದ ವಂಚಿತವಾಗಿತ್ತು.

Ad Widget

Ad Widget

Ad Widget alt="Ad Widget"/>

Ad Widget

ಹಾರಾಡಿಯಿಂದ ರೈಲ್ವೇ ನಿಲ್ದಾಣದ ನಡುವೆ ಎರಡು ಹಂತದಲ್ಲಿ ಕಾಮಗಾರಿಯನ್ನು ಮಾಡಿ ರಸ್ತೆಯನ್ನು ಕಾಂಕ್ರೀಟೀಕರಣ ಮಾಡಲಾಗಿದೆ. ಆದರೆ ಒಂದು ಹಂತದ ಕಾಮಗಾರಿ ಪೂರ್ಣಗೊಂಡು ಕೇವಲ 18 ದಿನ ಪೂರ್ಣಗೊಂಡಿದ್ದು, ಈಗಲೇ ಸಣ್ಣ ಸಣ್ಣ ಬಿರುಕು ಕಾಂಕ್ರೀಟ್ ರಸ್ತೆಯಲ್ಲಿ ಕಾಣಿಸುತ್ತಿದೆ. ಮೊದಲ ಹಂತದ ಕಾಮಗಾರಿ ನಡೆದಲ್ಲಿ ರಸ್ತೆಯ ಉದ್ದಕ್ಕೂ ಬಿರುಕು ಕಾಣಿಸಿಕೊಂಡಿದ್ದು, ರಸ್ತೆಯ ಗುಣಮಟ್ಟದ ಅನಾವರಣವಾಗಿದೆ.

Ad Widget

Ad Widget <> Ad Widget

ಗುತ್ತಿಗೆಯನ್ನು ಒಬ್ಬ ವ್ಯಕ್ತಿ ತೆಗೆದುಕೊಂಡಿದ್ದು, ಬಳಿಕ ಅದನ್ನು ಸ್ಥಳೀಯವಾಗಿ ಮರು ಗುತ್ತಿಗೆಯನ್ನು ಎರಡು ವ್ಯಕ್ತಿಗಳಿಗೆ ನೀಡಿ ಕಾಮಗಾರಿಯನ್ನು ನಡೆಸಲಾಗಿದೆ ಎಂಬ ಆರೋಪ ಸ್ಥಳೀಯವಾಗಿ ಕೇಳುತ್ತಿದೆ. ಕಾಮಗಾರಿ ನಡೆದು 2 ತಿಂಗಳು ಆಗುವ ಮೊದಲೇ ರಸ್ತೆಯಲ್ಲಿ ಬಿರುಕು ಕಾಣಿಸಿಕೊಂಡಿರುವುದರಿಂದ ರಸ್ತೆಯಲ್ಲಿ ಬ್ರಹ್ಮಾಂಡ ಬ್ರಷ್ಟಾಚಾರ ನಡೆಸಲಾಗಿದೆ ಎಂಬ ಆರೋಪಗಳು ಕೇಳಿ ಬರುತ್ತಿದೆ.



Ad Widget

ಚುನಾವಣಾ ಜರೂರಿನ ಕಾಮಗಾರಿ..! ಚುನಾವಣಾ ಜರೂರಿನ ನೆಪದಲ್ಲಿ 15ನೇ ಹಣಕಾಸು ಮತ್ತು ಎಸ್.ಎಫ್.ಸಿ. ಅನುದಾನಡಿಯಲ್ಲಿ ಸುಮಾರು 105.60ಲಕ್ಷ ವೆಚ್ಚದಲ್ಲಿ 740 ಮೀ ಉದ್ದ ಹಾಗೂ 5.5 ಮೀ ಅಗಲ ಕ್ಕೆ ಕಾಂಕ್ರೀಟ್ ಕಾಮಗಾರಿಗೆ 2022 ನವಂಬರ್ 2ರಂದು ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಮತ್ತು ಆಗಿನ ಶಾಸಕರಾದ ಸಂಜೀವ ಮಠಂದೂರು, ನಗರಸಭಾ ಅಧ್ಯಕ್ಷ ಜೀವಂದರ್ ಜೈನ್ ಅವರು
ಶಿಲಾನ್ಯಾಸವನ್ನು ನೆರವೇರಿಸಿದ್ದರು.
ಆದರೆ ಬಳಿಕ ಹಲವು ಸಮಯ ಕಾಮಗಾರಿ ನಡೆಯದೆ ಹಾಗೇ ಉಳಿದುಕೊಂಡಿತ್ತು.

Ad Widget

Ad Widget

ಸೇತುವೆಗೆ ಇಲ್ಲ ಬಲ..!
ಶಿಥಿಲ ಗೊಂಡ ಸೇತುವೆ ಸಹಿತ ಹಾರಾಡಿ – ರೈಲ್ವೇ ನಿಲ್ದಾಣದ ರಸ್ತೆಯನ್ನು ಅಭಿವೃದ್ಧಿ ಮಾಡುವ ಬಗ್ಗೆ ಹೇಳಿಕೊಳ್ಳಲಾಗಿತ್ತಾದರೂ, ರೈಲ್ವೇ ನಿಲ್ದಾಣದ ಪಕ್ಕದಲ್ಲಿ 50 ವರ್ಷದ ಹಿಂದೆ ನಿರ್ಮಾಣವಾದ ಸೇತುವೆ ಬಲವನ್ನು ಕಳೆದುಕೊಂಡಿದೆಯಾದರೂ, ಅದನ್ನು ಬದಲಾವಣೆ ಮಾಡದೆ ಕಾಂಕ್ರೀಟಿಕರಣವನ್ನು ಪೂರ್ಣಗೊಳಿಸಲಾಗಿದೆ. ಹಳೆಯ ಸೇತುವೆಯ ಬಳಿ ತಡೆಗೋಡೆ ಕುಸಿದು ಸ್ವಲ್ಪ ಜಾಗದಲ್ಲಿ ಕಾಮಗಾರಿ ನಡೆಯದೆ ಅಪಾಯವನ್ನು ಆಹ್ವಾನಿಸುತ್ತಿದೆ.

ಕಾಮಗಾರಿಯ ಮಾಹಿತಿ ನಿರಾಕರಣೆ..!
ಸಾಮಾಜಿಕ ಹೋರಾಟಗಾರರು ಗುಣಮಟ್ಟದ ಬಗ್ಗೆ ಅನುಮಾನಗಳು ಮೂಡುತ್ತಿದ್ದಂತೆ ಮಾಹಿತಿ ಹಕ್ಕು ಅಧಿನಿಯಮದಲ್ಲಿ ಕಾಮಗಾರಿಯ ಮಾಹಿತಿಯನ್ನು ಕೇಳಿದ್ದು, ತಿಂಗಳು ಉರುಳಿದರೂ ಅಧಿಕಾರಿಗಳು ಮಾಹಿತಿಯನ್ನು ನೀಡುವ ಕಾರ್ಯಕ್ಕೆ ಮುಂದಾಗಿಲ್ಲ. ಚುನಾವಣೆಯ ಮೊದಲು ವಾರಕ್ಕೊಮ್ಮೆ ಕಾಮಗಾರಿಯ ಪ್ರಗತಿ ಪರಿಶೀಲನೆ ನಡೆಸುತ್ತಿದ್ದವರು ಕಳಪೆ ಗಾಮಗಾರಿಯ ದಿವ್ಯದರ್ಶನವಾಗುತ್ತಿದ್ದಂತೆ ಅತ್ತ ಸುಳಿಯುವುದನ್ನೇ ನಿಲ್ಲಿಸಿದ್ದಾರೆ.

ರಸ್ತೆಯಲ್ಲಿಲ್ಲ ಸುರಕ್ಷತೆ ..!
ರೈಲ್ವೇ ನಿಲ್ದಾಣವನ್ನು ಸಂಪರ್ಕಿಸುವ ರಸ್ತೆಯ ಇಕ್ಕೆಲಗಳಲ್ಲಿ ಸುರಕ್ಷತಾ ತಡೆಗಳಿಲ್ಲದ ಕಾರಣ ಅಪಾಯವನ್ನು ಆಹ್ವಾನಿಸುತ್ತಿದೆ. ಹಾರಾಡಿಯಿಂದ ಬರುವ ರಸ್ತೆಯ ಇಕ್ಕೆಲಗಳಲ್ಲಿ ಕಂದಕಗಳು, ಕೆರೆಗಳಿದ್ದರೂ, ಯಾವುದೇ ಸುರಕ್ಷತಾ ಕ್ರಮಗಳನ್ನು ತೆಗೆದುಕೊಂಡಿರುವುದಿಲ್ಲ. ವಾಹನ ಸವಾರರರು ಸ್ವಲ್ಪ ನಿಯಂತ್ರಣ ತಪ್ಪಿದರೂ, ದೊಡ್ಡ ಅಪಾಯ ನಿಶ್ವಿತ. ಇದರ ಜತೆಗೆ ಖಾಸಗೀ ಕಂಪನಿಗಳ ವಾಹನಗಳೂ ರಸ್ತೆಯಲ್ಲೇ ಠಿಕ್ಕಾಣಿ ಹೂಡುತ್ತಿದೆ. ಕೆಲವು ವಾಹನಗಳ ದುರಸ್ಥಿ ಕಾರ್ಯವೂ ರಸ್ತೆಯಲ್ಲೇ ನಡೆಯುತ್ತಿರುವುದರಿಂದ ವಾಹನ ಸವಾರರಿಗೆ ಇಲ್ಲಿ ಸಂಚರಿಸುವುದು ಸವಾಲಾಗಿದೆ.

ಪುತ್ತೂರಿನ ಬಹು ನಿರೀಕ್ಷಿತ ಹಾರಾಡಿ-ರೈಲ್ವೇ ಸ್ಟೇಷನ್ ಸಂಪರ್ಕ ರಸ್ತೆ ಪುತ್ತೂರಿನಿಂದ ನೇರ ಉಪ್ಪಿನಂಗಡಿ, ಧರ್ಮಸ್ಥಳ ಪ್ರಯಾಣಿಸುವವರಿಗೆ ಒಳ್ಳೆಯ ಬೈಪಾಸ್ ರಸ್ತೆ. ರಸ್ತೆಯ ಇಕ್ಕೆಲಗಳಲ್ಲಿ ಇರುವ ಆಳವಾದ ಕಂದಕಗಳಿಂದ ವಾಹನ ಸವಾರರಿಗೆ ಸಂಕಕಷ್ಟವಾಗಿದೆ. ಅಪಾಯದ ಬಗ್ಗೆ ಅರಿವಿದ್ದರೂ, ನಗರಸಭೆ ಕಾಮಗಾರಿಯಲ್ಲಿ ಅಗತ್ಯವ್ಯವಸ್ಥೆಯನ್ನು ಸೇರಿಸದೇ ಇದ್ದದ್ದು ಆಶ್ಚರ್ಯಕರವಾಗಿದೆ. ರಸ್ತೆಯಲ್ಲಿರುವ ಶಿಥಿಲಗೊಂಡ ಸೇತುವೆಯನ್ನು ಹಾಗೆಯೇ ಇಟ್ಟು, ಅದರ ಮೇಲೆಯೇ ಕಾಂಕ್ರೀಟೀಕರಣ ಮಾಡಿದ್ದು ನಗರಸಭೆಯ ಇಂಜಿನಿಯರಿಂಗ್ ಕೌಶಲ್ಯಕ್ಕೆ ಹಿಡಿದ ಕನ್ನಡಿಯಾಗಿದೆ ಎಂದು ಸಾಮಾಜಿಕ ಹೋರಾಟಗಾರ ರಾಜೇಶ್ ಕೃಷ್ಣ ಪ್ರಸಾದ್ ತಿಳಿಸಿದ್ದಾರೆ.

ಹೊಸ ಸೇತುವೆ ನಿರ್ಮಾಣದ ಪ್ರಸ್ತಾಪ ಕಾಂಕ್ರೀಟೀಕರಣದ ಸಂದರ್ಭದಲ್ಲಿರಲಿಲ್ಲ. ಸೇತುವೆ ಸಮೀಪ ತಡೆಗೋಡೆ ಕುಸಿದಿದ್ದು, 3 ಮೀಟರ್ ಕಾಂಕ್ರೀಟೀಕರಣ ಮಾಡಲಾಗಿದೆ. ಉಳಿಕೆ ಹಣದಲ್ಲಿ ತಡೆಗೋಡೆ ಮಾಡುವ ಆಲೋಚನೆಯನ್ನು ಮಾಡಲಾಗಿದ್ದು, ರೈಲ್ವೇ ಇಲಾಖೆಯವರಿಗೂ ತಡೆಗೋಡೆಗೆ ನಿರ್ಮಾಣ ಮಾಡುವಂತೆ ಕೇಳಲಾಗಿದೆ. ಕಾಂಕ್ರಿಟ್ ನಲ್ಲಿ ಬಿರುಕು ಬಿಟ್ಟ ಪ್ರದೇಶದ ಜಿ.ಪಿ.ಎಸ್. ಚಿತ್ರವನ್ನು ಮಾಡಿ, ಆ ಪ್ರದೇಶದಲ್ಲಿ ಕಾಂಕ್ರೀಟ್ ತುಂಡರಿಸಿ ತೆಗೆದು ಮರು ಕಾಮಗಾರಿ ನಡೆಸುವಂತೆ ಗುತ್ತಿಗೆದಾರರಿಗೆ ನೋಟೀಸ್ ಜಾರಿ ಮಾಡಲಾಗಿದೆ. ಅದನ್ನು ಸರಿಪಡಿಸಿದ ಬಳಿಕವೇ ಹಣ ಪಾವತಿಯನ್ನು ಮಾಡಲಾಗುವುದು ಎಂದು ನಗರಸಭೆಯ ಅಸಿಸ್ಟೆಂಟ್ ಇಂಜನಿಯರ್ ಕೃಷ್ಣ ಮೂರ್ತಿ ಹೇಳಿದ್ದಾರೆ .

Ad Widget
Click to comment

Leave a Reply

ಶಿಕ್ಷಣ

Ambika-ಅಂಬಿಕಾ ಪ.ಪೂ.ವಿದ್ಯಾಲಯಗಳ ಪ್ರತಿಭಾ ದಿನಾಚರಣೆ – ಮಾನಸೋಲ್ಲಾಸ; ಉದ್ದೇಶ ಸ್ಪಷ್ಟತೆ ಇರುವವರಿಗೆ ಯಾವುದೇ ಅಡೆತಡೆಗಳಿಲ್ಲ: ಪಿ. ಪ್ರದೀಪ್ ಕುಮಾರ್

Published

on



Ad Widget

Ad Widget

Ad Widget

Ad Widget

ನಟ್ಟೋಜ ಫೌಂಡೇಶನ್ ಟ್ರಸ್ಟ್ ಪ್ರವರ್ತಿತ ನೆಲ್ಲಿಕಟ್ಟೆ ಹಾಗೂ ಬಪ್ಪಳಿಗೆ ಅಂಬಿಕಾ ಪದವಿಪೂರ್ವ ವಿದ್ಯಾಲಯಗಳ ಪ್ರತಿಭಾ ದಿನಾಚರಣೆ – ಮಾನಸೋಲ್ಲಾಸ ಕಾರ್ಯಕ್ರಮವನ್ನು ಬಪ್ಪಳಿಗೆಯ ಶ್ರೀ ಶಂಕರ ಸಭಾಭವನದಲ್ಲಿ ಉದ್ಘಾಟಿಸಿ ಕರ್ನಾಟಕ ಬ್ಯಾಂಕ್ ಅಧ್ಯಕ್ಷ ಪಿ. ಪ್ರದೀಪ್ ಕುಮಾರ್ ಮಾತನಾಡಿದರು.

Ad Widget

Ad Widget

Ad Widget

Ad Widget

ಪುತ್ತೂರು: ಪ್ರತಿಭೆಯಿಲ್ಲದ ವ್ಯಕ್ತಿಯಿಲ್ಲ. ಆದರೆ ನಮ್ಮೊಳಗಿರುವ ಪ್ರತಿಭೆಗಳನ್ನು ಗುರುತಿಸುವುದು, ಬೆಳೆಸುವುದು ಹಾಗೂ ಆ ಪ್ರತಿಭೆಯನ್ನು ಸತ್ಕಾರ್ಯಗಳಿಗಾಗಿ ಬಳಸುವುದು ಅತ್ಯಂತ ಮುಖ್ಯ. ಸಮರ್ಪಿತ ಹಾಗೂ ಉದ್ದೇಶಸ್ಪಷ್ಟತೆ ಹೊಂದಿರುವ ವ್ಯಕ್ತಿಯ ಬೆಳವಣಿಗೆಗೆ ಯಾವುದೇ ಅಡೆತಡೆಗಳಿಲ್ಲ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ಕರ್ನಾಟಕ ಬ್ಯಾಂಕ್ ಅಧ್ಯಕ್ಷ ಪಿ. ಪ್ರದೀಪ್ ಕುಮಾರ್ ಹೇಳಿದರು.

Ad Widget

Ad Widget

Ad Widget alt="Ad Widget"/>

Ad Widget

ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಪ್ರವರ್ತಿತ ನೆಲ್ಲಿಕಟ್ಟೆ ಹಾಗೂ ಬಪ್ಪಳಿಗೆ ಅಂಬಿಕಾ ಪದವಿಪೂರ್ವ ವಿದ್ಯಾಲಯಗಳ ಪ್ರತಿಭಾ ದಿನಾಚರಣೆ – ಮಾನಸೋಲ್ಲಾಸ ಕಾರ್ಯಕ್ರಮವನ್ನು ಬಪ್ಪಳಿಗೆಯ ಶ್ರೀ ಶಂಕರ ಸಭಾಭವನದಲ್ಲಿ ಉದ್ಘಾಟಿಸಿ ಶನಿವಾರ ಮಾತನಾಡಿದರು.

Ad Widget

Ad Widget <> Ad Widget

ಈ ದೇಶದ ದೊಡ್ಡ ದೊಡ್ಡ ವಿಜ್ಞಾನಿಗಳು, ವೈದ್ಯರು, ಇಂಜಿನಿಯರ್‌ಗಳು, ದೊಡ್ಡ ದೊಡ್ಡ ಸಾಧಕರಲ್ಲಿ ಹೆಚ್ಚಿನವರು ಗ್ರಾಮೀಣ ಪ್ರದೇಶಗಳಿಂದ ಬಂದವರೇ ಆಗಿದ್ದಾರೆ. ಹಾಗಾಗಿ ಗ್ರಾಮೀಣ ಭಾಗದಲ್ಲಿ ಅವಕಾಶಗಳು ಕಡಿಮೆ ಎಂಬ ಭಾವನೆಯನ್ನು ಇಟ್ಟುಕೊಳ್ಳಬೇಕಿಲ್ಲ. ನಾವು ಎಲ್ಲಿಂದ ಬಂದಿದ್ದೇವೆ, ಯಾವ ಹಿನ್ನೆಲೆಯಿಂದ ಬಂದಿದ್ದೇವೆ ಎಂಬುದು ಮುಖ್ಯವಲ್ಲ. ಸಾಧನೆಯೆಡೆಗೆ ಮುಖ ಮಾಡಿ ನಿರಂತರ ಕಾರ್ಯಪ್ರವೃತ್ತರಾದರೆ ಅಂದುಕೊಡ ಗಮ್ಯವನ್ನು ತಲಪುವುದಕ್ಕೆ ಸಾಧ್ಯವಿದೆ ಎಂದರು.



Ad Widget

ಕನಸು ಕಾಣುವುದಕ್ಕೆ ಎಲ್ಲರಿಗೂ ಸಾಧ್ಯವಿದೆ. ಆದರೆ ಕಂಡ ಕನಸುಗಳನ್ನು ನನಸು ಮಾಡುವುದಕ್ಕೆ ಶಿಸ್ತು, ಪ್ರಾಮಾಣಿಕತೆ, ನಿರಂತರ ಪ್ರಯತ್ನ ಹಾಗೂ ಎದುರಾಗುವ ಅಡೆತಡೆಗಳನ್ನು ಮೀರಿ ಮುನ್ನಡೆಯುವ ಸಾಮರ್ಥ್ಯಗಳಿರಬೇಕು. ಆಕಾಂಕ್ಷೆ ಹಾಗೂ ಸಾಧನೆಗಳ ಮಧ್ಯೆ ಬಹುದೊಡ್ಡ ಅಂತರವಿದೆ. ಆ ಅಂತರದ ನಡುವಣ ಸೇತುವೆಯಲ್ಲಿ ನಡೆಯಲು ಕಠಿಣ ಪರಿಶ್ರಮವೊಂದೇ ದಾರಿ. ಯಶಸ್ಸಿಗೆ ಯಾವುದೇ ಅಡ್ಡದಾರಿಗಳಿಲ್ಲ. ನಮ್ಮ ವ್ಯಕ್ತಿತ್ವವನ್ನು ತಂತ್ರಜ್ಞಾನ ರೂಪಿಸಲಾರದು, ಸ್ವತಃ ನಾವೇ ರೂಪಿಸಿಕೊಳ್ಳಬೇಕು ಎಂದು ನುಡಿದರು.

Ad Widget

Ad Widget

ಮತ್ತೋರ್ವ ಅತಿಥಿ, ಸಂಸ್ಥೆಯ ಹಿರಿಯ ವಿದ್ಯಾರ್ಥಿನಿ ಹಾಗೂ ಬೆಂಗಳೂರಿನ ಭಾರತ್ ಇಲೆಕ್ಟಾçನಿಕ್ಸ್ನ ಡೆಪ್ಯೂಟಿ ಇಂಜಿನಿಯರ್ ಅನುಜ್ಞಾ ಪಳ್ಳತ್ತಡ್ಕ ಮಾತನಾಡಿ ನಾವು ಉಸಿರಾಡುವ ಗಾಳಿ, ತಿನ್ನುವ ಆಹಾರ ಈ ದೇಶದ್ದು. ಹಾಗಾಗಿ ಈ ದೇಶದ ಸೇವೆಯನ್ನು ಮಾಡಿ ನಮ್ಮ ಬದುಕನ್ನು ಸಾರ್ಥಕಪಡಿಸಿಕೊಳ್ಳಬೇಕು. ನಮ್ಮ ಬದುಕಿನಲ್ಲಿ ಒಂದು ಸರಿಯಾದ ಉದ್ದೇಶವನ್ನಿಟ್ಟುಕೊಂಡು ಮುಂದುವರೆಯಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಮಣ್ಯ ನಟ್ಟೋಜ ಮಾತನಾಡಿ ನಮ್ಮ ಹಿರಿಯರ ಪರಿಶ್ರಮದ ಫಲವಾಗಿ ನಮ್ಮ ಭಾರತೀಯ ಕಲೆ, ಸಂಸ್ಕೃತಿಗಳು ಬೆಳೆದು ಬಂದಿವೆ. ಅವುಗಳನ್ನು ಉಳಿಸಿ ಬೆಳೆಸುವ ಕಾರ್ಯದಲ್ಲಿ ಅಂಬಿಕಾ ಸಂಸ್ಥೆಗಳು ಸದಾ ತೊಡಗಿಕೊಂಡಿವೆ. ದೇಶ ಮೊದಲು ಎಂಬ ಭಾವನೆಯಡಿ ವಿದ್ಯಾರ್ಥಿಗಳನ್ನು ರೂಪಿಸಲಾಗುತ್ತಿದೆ ಎಂದು ಹೇಳಿದರು.

ವೇದಿಕೆಯಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ರಾಜಶ್ರೀ ಎಸ್. ನಟ್ಟೋಜ, ಆಡಳಿತ ಮಂಡಳಿ ಸದಸ್ಯರಾದ ವಿಶ್ರಾಂತ ಪ್ರಾಚಾರ್ಯ ಡಾ.ಎಚ್.ಮಾಧವ ಭಟ್, ಬಾಲಕೃಷ್ಣ ಬೋರ್ಕರ್, ಬಪ್ಪಳಿಗೆ ಹಾಗೂ ನೆಲ್ಲಿಕಟ್ಟೆ ಸಂಸ್ಥೆಗಳ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರುಗಳಾದ ಅವಿನಾಶ ಕೊಡೆಂಕಿರಿ ಹಾಗೂ ತಿಲಕ್ ಬಿ.ಸಿ, ಅಂಬಿಕಾ ನೀಟ್ ಅಕಾಡೆಮಿಯ ಪ್ರಾಚಾರ್ಯ ಕಿಶೋರ್ ಭಟ್, ವಿದ್ಯಾರ್ಥಿ ಸಂಘದ ನಾಯಕರಾದ ಅವನಿ ನಾಯಕ್, ಎಚ್.ವಿ.ಭವಿತ್ ಗೌಡ, ರಿಧಿ ಗೌಡ ಹಾಗೂ ಇಂದಿವರ್ ಪಿ.ಪಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಶೈಕ್ಷಣಿಕ ಸಾಧಕರು, ಕ್ರೀಡಾ ಸಾಧಕರು, ವಿದ್ಯಾಭಾರತಿ ಸ್ಪರ್ಧೆಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ದತ್ತಿನಿಧಿ ಬಹುಮಾನಗಳನ್ನು ವಿತರಿಸಲಾಯಿತು.

ವಿದ್ಯಾರ್ಥಿನಿ ಅಮೃತಾ ರಾವ್ ಶಂಖನಾದಗೈದರು. ವಿದ್ಯಾರ್ಥಿನಿ ಶ್ರೀವಿಭಾ ಹಾಗೂ ತಂಡದವರು ಪ್ರಾರ್ಥಿಸಿದರು. ನೆಲ್ಲಿಕಟ್ಟೆ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಪ್ರಾಚಾರ್ಯ ಸತ್ಯಜಿತ್ ಉಪಾಧ್ಯಾಯ ಸ್ವಾಗತಿಸಿ, ಬಪ್ಪಳಿಗೆ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಪ್ರಾಚಾರ್ಯ ಗಣೇಶ್ ಪ್ರಸಾದ್ ಡಿ.ಎಸ್. ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ನೆಲ್ಲಿಕಟ್ಟೆ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಪ್ರಾಚಾರ್ಯ ಸತ್ಯಜಿತ್ ಉಪಾಧ್ಯಾಯ ಅವರಿಂದ ವಿಡಿಯೋ ಪ್ರಾತ್ಯಕ್ಷಿಕೆ ಸಹಿತ ವರದಿ ವಾಚನ ನಡೆಯಿತು. ವಿದ್ಯಾರ್ಥಿನಿಯರಾದ ಸೋನಾ ನಾರ್ಕೋಡ್ ಹಾಗೂ ಉರ್ಷಿತಾ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿನಿಯರಾದ ಆನ್ಯಾ ಹಾಗೂ ಚಿನ್ಮಯೋ ಶೆಟ್ಟಿ ಅತಿಥಿ ಪರಿಚಯ ನಡೆಸಿಕೊಟ್ಟರು.

Ad Widget
Continue Reading

ಬಿಗ್ ನ್ಯೂಸ್

Golithottu-ಗೋಳಿತ್ತೊಟ್ಟು: ತೋಡಿನ ನೀರಿನಲ್ಲಿ ಮೀನುಗಳ ಮಾರಣಹೋಮ; ತನಿಖೆಗೆ ಸ್ಥಳೀಯರ ಆಗ್ರಹ

Published

on



Ad Widget

Ad Widget

Ad Widget

Ad Widget

ಮಂಗಳೂರು–ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಗೋಳಿತ್ತೊಟ್ಟು ಸಮೀಪದ ಕಾಂಚನ ಕ್ರಾಸ್ ಬಳಿಯ ಹೆದ್ದಾರಿ ಬದಿಯ ತೋಡಿನಲ್ಲಿ ಮೀನುಗಳು ಸತ್ತು ಬಿದ್ದಿರುವ ಘಟನೆ ರವಿವಾರ ಬೆಳಕಿಗೆ ಬಂದಿದೆ. ಮೀನುಗಳ ಸಾವಿಗೆ ನಿಖರ ಕಾರಣವೇನು ಎಂಬುದನ್ನು ಪತ್ತೆಹಚ್ಚಲು ಸಂಬಂಧಪಟ್ಟ ಅಧಿಕಾರಿಗಳು ತನಿಖೆ ನಡೆಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

Ad Widget

Ad Widget

Ad Widget

Ad Widget

ಪುತ್ತೂರು, ಅ.11: ಮಂಗಳೂರು–ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಗೋಳಿತ್ತೊಟ್ಟು ಸಮೀಪದ ಕಾಂಚನ ಕ್ರಾಸ್ ಬಳಿಯ ಹೆದ್ದಾರಿ ಬದಿಯ ತೋಡಿನಲ್ಲಿ ಮೀನುಗಳು ಸತ್ತು ಬಿದ್ದಿರುವ ಘಟನೆ ರವಿವಾರ ಬೆಳಕಿಗೆ ಬಂದಿದೆ. ಮೀನುಗಳ ಸಾವಿಗೆ ನಿಖರ ಕಾರಣವೇನು ಎಂಬುದನ್ನು ಪತ್ತೆಹಚ್ಚಲು ಸಂಬಂಧಪಟ್ಟ ಅಧಿಕಾರಿಗಳು ತನಿಖೆ ನಡೆಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

Ad Widget

Ad Widget

Ad Widget alt="Ad Widget"/>

Ad Widget

ಉಪ್ಪಿನಂಗಡಿಯಿಂದ ನೆಲ್ಯಾಡಿ ಕಡೆಗೆ ಸುಮಾರು 8 ಕಿ.ಮೀ. ದೂರದಲ್ಲಿರುವ ಕಾಂಚನ ಕ್ರಾಸ್ ಸಮೀಪದ ತೋಡಿನ ನೀರಿನಲ್ಲಿ ಸಣ್ಣಪುಟ್ಟ ಮೀನುಗಳು ಏಕಾಏಕಿ ಸತ್ತು ಬಿದ್ದಿರುವುದು ಕಂಡುಬಂದಿದೆ. ತೋಡಿನಲ್ಲಿ ಸಾಕಷ್ಟು ದೂರದವರೆಗೆ ಮೀನುಗಳು ಸತ್ತಿರುವುದು ಸ್ಥಳೀಯರು ಚಿತ್ರೀಕರಿಸಿದ ವಿಡಿಯೋದಲ್ಲಿ ಕಾಣಿಸಿಕೊಂಡಿದೆ.

Ad Widget

Ad Widget <> Ad Widget

ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿದ್ದು, ಘಟನೆ ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ.



Ad Widget

ಮೀನುಗಳ ಸಾವಿಗೆ ಯಾರಾದರೂ ರಾಸಾಯನಿಕ ಬಳಕೆ ಮಾಡಿರುವುದು ಕಾರಣವೇ ಅಥವಾ ನೀರಿನಲ್ಲಿ ವಿಷಕಾರಿ ಅಂಶ ಬೆರೆತಿರುವುದರಿಂದ ಈ ಘಟನೆ ಸಂಭವಿಸಿದೆಯೇ ಎಂಬ ಅನುಮಾನಗಳು ವ್ಯಕ್ತವಾಗಿವೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ನೀರಿನ ಮಾದರಿಯನ್ನು ಪರೀಕ್ಷಿಸುವ ಮೂಲಕ ಸಾವಿನ ನಿಖರ ಕಾರಣವನ್ನು ಪತ್ತೆಹಚ್ಚಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

Continue Reading

ಬಿಗ್ ನ್ಯೂಸ್

Puttur-ಪುತ್ತೂರು : ಶ್ರೀಮಹಾಲಿಂಗೇಶ್ವರ ದೇವಸ್ಥಾನದ ಬಳಿಯ ಒಳಚರಂಡಿ ಕಾಮಗಾರಿ ಟೆಂಡರ್ ಸ್ಥಗಿತಗೊಳಿಸಿ : ನಗರಸಭೆಗೆ ಮನವಿ

Published

on



Ad Widget

Ad Widget

Ad Widget

Ad Widget

ದೇವಸ್ಥಾನದ ಜಮೀನಿನಲ್ಲಿ ರಸ್ತೆ ನಿರ್ಮಾಣಕ್ಕೆ ಅನುಮತಿ ದೊರೆಯದ ಹಿನ್ನೆಲೆಯಲ್ಲಿ, ನೂತನ ರಸ್ತೆಗೆ ಪೂರಕವಾದ ಒಳಚರಂಡಿ ಕಾಮಗಾರಿಯ ಟೆಂಡರ್ ಪ್ರಕ್ರಿಯೆ ಸ್ಥಗಿತಗೊಳಿಸುವಂತೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಂರಕ್ಷಣಾ ವೇದಿಕೆ ನಗರಸಭೆಗೆ ಮನವಿ ಸಲ್ಲಿಸಿದೆ.

Ad Widget

Ad Widget

Ad Widget

Ad Widget

ಪುತ್ತೂರು: ದೇವಸ್ಥಾನದ ಜಮೀನಿನಲ್ಲಿ ರಸ್ತೆ ನಿರ್ಮಾಣಕ್ಕೆ ಅನುಮತಿ ದೊರೆಯದ ಹಿನ್ನೆಲೆಯಲ್ಲಿ, ನೂತನ ರಸ್ತೆಗೆ ಪೂರಕವಾದ ಒಳಚರಂಡಿ ಕಾಮಗಾರಿಯ ಟೆಂಡರ್ ಪ್ರಕ್ರಿಯೆ ಸ್ಥಗಿತಗೊಳಿಸುವಂತೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಂರಕ್ಷಣಾ ವೇದಿಕೆ ನಗರಸಭೆಗೆ ಮನವಿ ಸಲ್ಲಿಸಿದೆ.

Ad Widget

Ad Widget

Ad Widget alt="Ad Widget"/>

Ad Widget

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಉತ್ತರ ಭಾಗದಲ್ಲಿ ಪೂರ್ವ-ಪಶ್ಚಿಮ ದಿಕ್ಕಿನಲ್ಲಿ 30 ಅಡಿ ಅಗಲ ಹಾಗೂ ಸುಮಾರು 1,000 ಮೀಟರ್ ಉದ್ದದ ಸಾರ್ವಜನಿಕ ರಸ್ತೆ ನಿರ್ಮಿಸುವ ಯೋಜನೆಗೆ ಸಂಬಂಧಿಸಿ ಭಕ್ತರು ಕರ್ನಾಟಕ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.

Ad Widget

Ad Widget <> Ad Widget

ಈ ಅರ್ಜಿಯ ವಿಚಾರವಾಗಿ ಸೆ.10ರಂದು ನೀಡಿದ ಆದೇಶದಲ್ಲಿ, ಅರ್ಜಿದಾರರ ಆಕ್ಷೇಪಗಳನ್ನು ಆಲಿಸಿ ನಿಯಮಾನುಸಾರ ವಿಚಾರಣೆ ನಡೆಸಿ ಮುಂದಿನ ಆದೇಶ ಹೊರಡಿಸುವಂತೆ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿಗಳ ಇಲಾಖೆ ಆಯುಕ್ತರಿಗೆ ನ್ಯಾಯಾಲಯ ನಿರ್ದೇಶನ ನೀಡಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.



Ad Widget

ರಸ್ತೆ ನಿರ್ಮಾಣಕ್ಕೆ ಇಲಾಖೆಯ ಆಯುಕ್ತರು ದೇವಸ್ಥಾನದ ಸಮಿತಿ ಅಥವಾ ಕಾರ್ಯನಿರ್ವಹಣಾಧಿಕಾರಿಗೆ ಈವರೆಗೆ ಅನುಮತಿ ನೀಡಿಲ್ಲ. ಆದರೂ, ದೇವಸ್ಥಾನದ ಬಳಿಯ ಹಿಂದಿನ ಗಣೇಶ್ ಪ್ರಸಾದ್ ಹೋಟೆಲ್‌ನಿಂದ ಮಡಿವಾಳಕಟ್ಟೆಯವರೆಗಿನ ನೂತನ ಕಾಂಕ್ರೀಟ್ ರಸ್ತೆಗೆ ಪೂರಕವಾಗಿ ನಿರ್ವಾತ ತಂತ್ರಜ್ಞಾನದಲ್ಲಿ ಒಳಚರಂಡಿ ನಿರ್ಮಾಣ ಕಾಮಗಾರಿಗೆ ನಗರಸಭೆ ಟೆಂಡರ್ ಪ್ರಕಟಿಸಿದೆ ಎಂದು ವೇದಿಕೆ ಆಕ್ಷೇಪ ವ್ಯಕ್ತಪಡಿಸಿದೆ.

Ad Widget

Ad Widget

ದೇವಸ್ಥಾನದ ಜಮೀನಿನಲ್ಲಿ ಸಾರ್ವಜನಿಕ ರಸ್ತೆ ನಿರ್ಮಿಸಲು ಇಲಾಖೆಯ ಆಯುಕ್ತರ ಅನುಮತಿ ಕಡ್ಡಾಯವಾಗಿದ್ದು, ಈ ಸಂಬಂಧ ಭಕ್ತರ ಆಕ್ಷೇಪಗಳು ಹಾಗೂ ನ್ಯಾಯಾಲಯದ ನಿರ್ದೇಶನಗಳು ಇರುವಾಗ ಟೆಂಡರ್ ಪ್ರಕ್ರಿಯೆ ಮುಂದುವರಿಸುವುದು ಸರಿಯಲ್ಲ ಎಂದು ಮನವಿಯಲ್ಲಿ ಹೇಳಲಾಗಿದೆ.

ರಸ್ತೆ ನಿರ್ಮಾಣದ ಕುರಿತ ಸಾರ್ವಜನಿಕ ದೂರು ಮತ್ತು ಆಕ್ಷೇಪಗಳ ವಿಚಾರಣೆ ಇಲಾಖೆಯ ಆಯುಕ್ತರ ಮುಂದೆ ಇತ್ಯರ್ಥವಾಗುವವರೆಗೆ ಒಳಚರಂಡಿ ಕಾಮಗಾರಿಯ ಟೆಂಡರ್ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಬೇಕು ಎಂದು ದೇವಸ್ಥಾನದ ಸಂರಕ್ಷಣಾ ವೇದಿಕೆ ಪುತ್ತೂರು ನಗರಸಭೆ ಪೌರಾಯುಕ್ತರನ್ನು ಒತ್ತಾಯಿಸಿದೆ. ನ್ಯಾಯಾಲಯದ ನಿರ್ದೇಶನ ಉಲ್ಲಂಘಿಸಿ ಕಾಮಗಾರಿ ಮುಂದುವರಿಸಿದರೆ ಈ ವಿಷಯವನ್ನು ನ್ಯಾಯಾಲಯದ ಗಮನಕ್ಕೆ ತರಲಾಗುವುದು ಎಂದೂ ಎಚ್ಚರಿಸಿದೆ.

Ad Widget
Continue Reading

ಇಂದಿನ ಟ್ರೆಂಡಿಂಗ್‌ ಸುದ್ದಿಗಳು

error: Content is protected !!

Discover more from Nikhara News | Kannada News Website

Subscribe now to keep reading and get access to the full archive.

Continue reading