ಕ್ರೈಂ
Moodushedde Honey Trap ಮೂಡುಶೆಡ್ಡೆಯ ರೆಸಾರ್ಟ್‌ನಲ್ಲಿ ಕೇರಳದ ಉದ್ಯಮಿಯ ಹನಿಟ್ರ್ಯಾಪ್ – ಯುವತಿ ಸಹಿತ 8 ಮಂದಿ ಬಂಧನ | ಲಕ್ಷಾಂತರ ರೂ ವಸೂಲಿ ಮಾಡಿದ್ದರೂ ಯುವತಿಗೆ ಕೊಟ್ಟದ್ದು ಕೇವಲ ರೂ.200…! 4 ತಿಂಗಳ ಹಿಂದೆ ನಡೆದ ಪ್ರಕರಣದ ಕಂಪ್ಲಿಟ್ ಡಿಟೈಲ್
ಕೇರಳ ಮೂಲದ ಉದ್ಯಮಿಯೊಬ್ಬರನ್ನು ತಂಡವೊಂದು ಹನಿಟ್ರ್ಯಾಪ್ ಮಾಡಿ ಲಕ್ಷಾಂತರ ರೂಪಾಯಿ ಹಣ ಪೀಕಿಸಿದ ಪ್ರಕರಣ ಮಂಗಳೂರು ಕಮೀಷನರೇಟ್ ವ್ಯಾಪ್ತಿಯ ಮೂಡುಶೆಡ್ಡೆಯಲ್ಲಿ ನಾಲ್ಕು ತಿಂಗಳ ಹಿಂದೆ ನಡೆದಿದ್ದು ತಡವಾಗಿ ಪ್ರಕರಣ ದಾಖಲಾಗಿದೆ. ಈ ಪ್ರಕರಣದಲ್ಲಿ ಯುವತಿ ಸಹಿತ ಒಟ್ಟು 8 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸ್ ಮೂಲಗಳ ಪ್ರಕಾರ ಆರೋಪಿಗಳು ಉದ್ಯಮಿಯಿಂದ ಕಳೆದ ನಾಲ್ಕು ತಿಂಗಳ ಅವಧಿಯಲ್ಲಿ ಬೇರೆ ಬೇರೆ ದಿನಗಳಂದು ಒಟ್ಟು ಸುಮಾರು 20 ಲಕ್ಷದಷ್ಟು ಹಣ ವಸೂಲಿ ಮಾಡಿದ್ದಾರೆ. ಇಷ್ಟು ಹಣವನ್ನು ಆರೋಪಿ ಯುವಕರು ವಸೂಲು ಮಾಡಿದ್ದರೂ, ಪ್ರಕರಣದಲ್ಲಿ ಪ್ರಮುಖ ಅಸ್ತ್ರವಾಗಿ ಬಳಕೆಯಾದ ಯುವತಿಗೆ ಮಾತ್ರ ಜುಜುಬಿ ಹಣ ನೀಡಲಾಗಿದೆ ಎಂದು ತಿಳಿದು ಬಂದಿದೆ. ಈ ಮೂಲಕ ಆ ಯುವಕರ ತಂಡ ಉದ್ಯಮಿಯ ಜತೆಗೆ ಯುವತಿಯನ್ನು ವಂಚಿಸಿದೆಯೇ ಎಂಬ ಅನುಮಾನ ಪ್ರಕರಣದ ಮಾಹಿತಿ ಇರುವವರಲ್ಲಿ ಸೃಷ್ಟಿಯಾಗಿದೆ.
ಮೊಯ್ದಿನ್ ಕುಂಞ ಕೇರಳದ ಉದ್ಯಮಿಯಾಗಿದ್ದು ಆತನಿಗೆ ಕೇರಳ ಮೂಲದ ಇನ್ನೊಬ್ಬ ಸ್ನೇಹಿತ ಮೂಡಬಿದಿರೆ ಮೂಲದ ಯುವತಿಯ ಪರಿಚಯ ಮಾಡಿಕೊಟ್ಟಿದ್ದ. ಬಳಿಕ ಮೊಯ್ದಿನ್ ಕುಂಞ ಹಾಗೂ ಮೂಡಬಿದಿರೆಯ ಯುವತಿ ಫೆ 16 ರಂದು ವಾಮಂಜೂರಿನ ರೆಸಾರ್ಟ್ ಗೆ ತೆರಳಿದ್ದಾರೆ. ಈ ರೆಸಾರ್ಟ್ ಇಂತಹ ಚಟುವಟಿಕೆಗಳಿಗೆ ಕುಖ್ಯಾತಿಯನ್ನು ಪಡೆದಿದೆ. ಅಲ್ಲಿ ಹಿಂದೂ ಯುವತಿ ಹಾಗೂ ಮುಸ್ಲಿಂ ವ್ಯಕ್ತಿ ಜತೆಯಾಗಿ ಕೊಠಢಿಯಲ್ಲಿರುವುದನ್ನು ಗಮನಿಸಿದ ತಂಡವೊಂದು ದಾಳಿ ಮಾಡಿದೆ. ಇವರಿಬ್ಬರಿದ್ದ ಕೊಠಢಿಗೆ ನುಗ್ಗಿದ ಆ ತಂಡ ಇಬ್ಬರು ಒಟ್ಟಿಗಿರುವ ಫೋಟೋ ವಿಡಿಯೋ ಚಿತ್ರಿಕರಿಸಿದೆ. ಬಳಿಕ ಹಲ್ಲೆ ನಡೆಸಿ ಹಣ ನೀಡುವಂತೆ ಒತ್ತಾಯಿಸಿದ್ದಾರೆ.
ಈ ವೇಳೆ ಉದ್ಯಮಿಯು ತನ್ನ ಬಳಿ ಆಗ ಇದ್ದ ಹಣ ಕೊಟ್ಟು ಯುವಕರ ತಂಡವನ್ನು ಸಾಗ ಹಾಕಿದ್ದಾನೆ. ಆದರೇ ಅಷ್ಟಕ್ಕೆ ತೃಪ್ತರಾಗದ ತಂಡ, ಬಳಿಕದ ದಿನಗಳಲ್ಲಿ ಉದ್ಯಮಿಯನ್ನು ಸಂಪರ್ಕಿಸಿ ಇನ್ನಷ್ಟು ಹಣಕ್ಕೆ ಪೀಡಿಸಿದೆ. ಇಲ್ಲದಿದ್ದರೇ ವಿಡಿಯೋ , ಫೋಟೊ ವೈರಲ್ ಮಾಡುವ ಬೆದರಿಕೆಯೊಡ್ಡಿದೆ. ಹೀಗೆ ಹಲವು ಬಾರಿ ಉದ್ಯಮಿಗೆ ಬೆದರಿಕೆವೊಡ್ಡಿ ಬೇರೆ ಬೇರೆ ಮೊತ್ತ ವಸೂಲು ಮಾಡಲಾಗಿದೆ. ಕಳೆದ ನಾಲ್ಕು ತಿಂಗಳ ಅವಧಿಯಲ್ಲಿ ಮೊಯ್ದಿನ್ ಕುಂಞ ಸರಿ ಸುಮಾರು 20 ಲ. ರೂಪಾಯಿ ಈ ತಂಡಕ್ಕೆ ಕೊಟ್ಟಿದ್ದಾನೆ ಎನ್ನಲಾಗಿದೆ. ಕೊನೆಗೆ ಇವರ ಕಾಟ ತಾಳಲಾರದ ಕೇರಳದ ಉದ್ಯಮಿ ತನ್ನ ಪರಿಚಿತರ ಮೂಲ ಸಿಸಿಬಿ ಪೊಲೀಸರೊಬ್ಬರನ್ನು ಸಂಪರ್ಕಿಸಿ ಹನಿಟ್ರ್ಯಾಪ್ ವಿಷಯ ತಿಳಿಸಿದ್ದಾನೆ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಯುವತಿ ಸಹಿತ ಒಟ್ಟು 8 ಮಂದಿಯನ್ನು ಬಂದಿಸಿದ್ದಾರೆ. ಪ್ರೀತಮ್ ಬೊಂದೆಲ್, ಮೂಡುಶೆಡ್ಡೆ ನಿವಾಸಿ ಕಿಶೋರ್, ಮುರಳಿ, ಸುಶಾಂತ್, ಅಭಿ, ಅಕ್ಷತ್ ಹಾಗೂ ಮೂಡಬಿದ್ರೆ ಮೂಲದ ಯುವತಿ ಬಂದಿತರಾದವರು. ಬಂಧಿತರಿಗೆ ಮೂಡಬಿದ್ರೆ ಮೂಲದ ಯುವತಿಯ ಪರಿಚಯ ಘಟನೆಗೂ ಮೊದಲೇ ಇರುವುದು ಪತ್ತೆಯಾದ ಹಿನ್ನಲೆಯಲ್ಲಿ ಹನಿಟ್ರ್ಯಾಪ್ ಪ್ರಕರಣ ದಾಖಲಾಗಿದೆ.
ಆದರೇ ಯುವತಿಗೆ ಗೊತ್ತಿದ್ದೆ ಯುವಕರು ಈ ಕೃತ್ಯ ಎಸಗಿದ್ದರೇ ಎನ್ನುವುದು ಸದ್ಯಕ್ಕಿರುವ ಕುತೂಹಲ . ಏಕೆಂದರೆ ದುಷ್ಕರ್ಮಿಗಳ ತಂಢ ಮೊಯ್ದಿನ್ ಕುಂಞಯಿಂದ ಇಲ್ಲಿಯವರೆಗೆ 20 ಲ.ರೂಪಾಯಿ ವಸೂಲಿ ಮಾಡಿರುವುದಾಗಿ ಆತ ಪೊಲೀಸರಿಗೆ ಮೌಕಿಕವಾಗಿ ತಿಳಿಸಿದ್ದ ಎನ್ನಲಾಗಿದೆ. ಇನ್ನು ವಿಚಾರಣೆ ವೇಳೆ ಆರೋಪಿಗಳು ಕೂಡ ತಾವು 10 ಲ. ರೂ ವಸೂಲಿ ಮಾಡಿರುವುದಾಗಿ ಬಾಯ್ಬಿಟ್ಟಿರುವುದಾಗಿ ಮೂಲಗಳು ತಿಳಿಸಿವೆ. ಸರಿ ಸುಮಾರು 10 ರಿಂದ 20 ಲಕ್ಷದಷ್ಟು ಹಣ ಕೈ ಬದಲಾಗಿದ್ದರೂ ಮೂಡಬಿದಿರೆ ಮೂಲದ ಯುವತಿಗೆ ಸಿಕ್ಕಿರುವುದು ಕೇವಲ 200 ರೂಪಾಯಿ ಮಾತ್ರ ಎಂದು ತಿಳಿದು ಬಂದಿದೆ. ಯುವತಿಯನ್ನು ಬಳಸಿ ಉದ್ಯಮಿಯನ್ನು ಖೆಡ್ಡಾಕ್ಕೆ ಕೆಡವಿದ ತಂಡ ಬಳಿಕ ಯುವತಿಗೂ ದುಡ್ಡು ಕೊಡದೆ ಮೋಸ ಮಾಡಿದೆ ಎನ್ನುವುದು ಈ ಪ್ರಕರಣದ ಒಳ ಹೊರಗು ಗೊತ್ತಿರುವವರು ಮಾಡುತ್ತಿರುವ ಆರೋಪ.
ಸಿಸಿಬಿ ಪೊಲೀಸರಿಗೆ ಮೊದಲೇ ಮಾಹಿತಿಯಿತ್ತು ?
ಫೆಬ್ರವರಿಯಲ್ಲಿ ಈ ಕೃತ್ಯ ನಡೆದ ದಿನವೇ ಪ್ರಕರಣದ ಮಾಹಿತಿ ಸಿಸಿಬಿ ಪೊಲೀಸರೊಬ್ಬರಿಗೆ ಸಿಕ್ಕಿತ್ತು ಎನ್ನಲಾಗಿದೆ. ಆ ದಿನ ಆರೋಪಿಗಳ ಪೈಕಿ ಓರ್ವ ತನ್ನ ಪರಿಚಯದ ಸಿಸಿಬಿ ಪೊಲೀಸ್ ಓರ್ವರಿಗೆ ಕರೆ ಮಾಡಿ ಹಿಂದೂ ಯುವತಿ ಹಾಗೂ ಮುಸ್ಲಿಂ ವ್ಯಕ್ತಿ ರೆಸಾರ್ಟ್ ನಲ್ಲಿರುವ ಮಾಹಿತಿ ನೀಡಿ ತಮ್ಮ ತಂಡ ಅಲ್ಲಿಗೆ ತೆರಳುವುದಾಗಿ ತಿಳಿಸಿದ್ದ ಎಂದು ಮೂಲಗಳಿಂದ ತಿಳಿದು ಬಂದಿದೆ. ಅದಕ್ಕೆ ಆ ಅದಿಕಾರಿ ಕೂಡ ತಲೆಯಾಡಿಸಿದ್ದರು ಎನ್ನಲಾಗಿದೆ. ಆದರೇ ಅವರಿಗೂ ಈ ತಂಡ ಹಣ ವಸೂಲಿ ಮಾಡಿದ ಬಗ್ಗೆ ಮಾಹಿತಿ ಇರಲಿಲ್ಲ . ನಾಲ್ಕು ತಿಂಗಳ ಬಳಿಕ ಅದೇ ಸಿಸಿಬಿ ಅಧಿಕಾರಿಯನ್ನು ಮೊಯ್ದಿನ್ ಕುಂಞ ಬೇಟಿಯಾಗಿ ಹನಿಟ್ರ್ಯಾಪ್ ನಡೆಸಿರುವುದನ್ನು ತಿಳಿಸಿದ್ದು, ಈ ವೇಳೆ ಎಚ್ಚೆತ್ತ ಅಧಿಕಾರಿ ತನಗೆ ಮಾಹಿತಿ ನೀಡಿದ ಪರಿಚಿತ ವ್ಯಕ್ತಿಯನ್ನು ಎತ್ತಾಕಿಕೊಂಡು ಬಂದು ವಿಚಾರಣೆ ನಡೆಸಿದ ವೇಳೆ ಆತ ಬಾಯ್ಬಿಟ್ಟಿದ್ದಾನೆ. ಬಳಿಕ ಉಳಿದ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಹೇಳಲಾಗುತ್ತಿದೆ.
ಅಂತರ ರಾಜ್ಯ
Murder-ಆಸ್ತಿಗಾಗಿ ಬೆಲ್ಟ್‌ನಿಂದ ಕುತ್ತಿಗೆ ಬಿಗಿದು ಪತಿಯ ಕೊಲೆ: ಆಕಸ್ಮಿಕ ಸಾವೆಂದು ನಂಬಿಸಿದ್ದ ಪತ್ನಿ ಅರೆಸ್ಟ್
ಆಕಸ್ಮಿಕ ಸಾವು ಎಂದು ದಾಖಲಾಗಿದ್ದ 53 ವರ್ಷದ ವ್ಯಕ್ತಿಯೊಬ್ಬರ ಪ್ರಕರಣ ತನಿಖೆ ವೇಳೆ ಕೊಲೆಯಾಗಿ ಬಯಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿ ಅವರ ಪತ್ನಿಯನ್ನು ಪೊಲೀಸರು ಬಂಧಿಸಿದ್ದಾರೆ. ಕೊಲ್ಲಂನ ಚೆರುಮೂಡು ಮೂಲದ ರಾಜು ಕೊಲೆಯಾದ ವ್ಯಕ್ತಿ.
ಕೊಲ್ಲಂ: ಆಕಸ್ಮಿಕ ಸಾವು ಎಂದು ದಾಖಲಾಗಿದ್ದ 53 ವರ್ಷದ ವ್ಯಕ್ತಿಯೊಬ್ಬರ ಪ್ರಕರಣ ತನಿಖೆ ವೇಳೆ ಕೊಲೆಯಾಗಿ ಬಯಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿ ಅವರ ಪತ್ನಿಯನ್ನು ಪೊಲೀಸರು ಬಂಧಿಸಿದ್ದಾರೆ.
ಕೊಲ್ಲಂನ ಚೆರುಮೂಡು ಮೂಲದ ರಾಜು (53) ಅವರು ಬಣ್ಣ ಬಳಿಯುವ ಕೆಲಸ ಮಾಡುತ್ತಿದ್ದರು. ರಾಜು ಹಾಗೂ ಅವರ ಪತ್ನಿ ಲೇಖಾ ಮೇರಿ ನಡುವೆ ಆಸ್ತಿ ವಿಚಾರವಾಗಿ ಆಗಾಗ್ಗೆ ಜಗಳ ನಡೆಯುತ್ತಿತ್ತು ಎನ್ನಲಾಗಿದೆ. ಆಸ್ತಿ ಮೂಲತಃ ರಾಜು ಕುಟುಂಬಕ್ಕೆ ಸೇರಿದ್ದಾಗಿದ್ದು, ಬಳಿಕ ರಾಜು ಅವರ ಹೆಸರಿಗೆ ವರ್ಗಾವಣೆಯಾಗಿತ್ತು. ಆದರೆ ಸಂಪೂರ್ಣ ಆಸ್ತಿಯ ಮಾಲೀಕತ್ವ ತನಗೇ ಬೇಕೆಂದು ಲೇಖಾ ಪಟ್ಟು ಹಿಡಿದಿದ್ದರಿಂದ ದಂಪತಿ ನಡುವೆ ನಿರಂತರವಾಗಿ ಮನಸ್ತಾಪ ಉಂಟಾಗುತ್ತಿತ್ತು.
ಈ ಹಿನ್ನೆಲೆಯಲ್ಲಿ ಕೆಲಕಾಲ ಬೇರೆ ಬೇರೆಯಾಗಿದ್ದ ದಂಪತಿ, ಕಳೆದ ಒಂದು ವರ್ಷದಿಂದ ಮತ್ತೆ ಒಟ್ಟಿಗೆ ವಾಸಿಸುತ್ತಿದ್ದರು.
ಅ.2ರಂದು ಬೆಳಗ್ಗೆ ಸುಮಾರು 5.30ಕ್ಕೆ ರಾಜು ಮನೆಯಲ್ಲಿ ದಿಢೀರ್ ಕುಸಿದುಬಿದ್ದಿದ್ದಾರೆ ಎಂದು ಹೇಳಲಾಗಿತ್ತು. ತಕ್ಷಣ ಸಹೋದರ ಹಾಗೂ ನೆರೆಹೊರೆಯವರ ನೆರವಿನಿಂದ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಪರೀಕ್ಷಿಸಿದ ವೈದ್ಯರು ರಾಜು ಮೃತಪಟ್ಟಿರುವುದಾಗಿ ಘೋಷಿಸಿದರು.
ಆದರೆ ಮರಣೋತ್ತರ ಪರೀಕ್ಷೆ ವೇಳೆ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದೆ. ರಾಜು ಸಾಮಾನ್ಯವಾಗಿ ಕುಸಿದುಬಿದ್ದು ಮೃತಪಟ್ಟಿಲ್ಲ ಎಂದು ಶಂಕಿಸಿರುವ ವೈದ್ಯರು, ಅವರ ಕುತ್ತಿಗೆಯ ಭಾಗದಲ್ಲಿ ಅನುಮಾನಾಸ್ಪದ ಗುರುತುಗಳು ಕಂಡುಬಂದಿರುವುದಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಈ ಹಿನ್ನೆಲೆಯಲ್ಲಿ ಪೊಲೀಸರು ರಾಜು ಅವರ ಪತ್ನಿ ಲೇಖಾ ಮೇರಿಯನ್ನು ವಿಚಾರಣೆ ನಡೆಸಿದಾಗ, ಆಸ್ತಿ ವಿಚಾರವಾಗಿ ಅ.2ರಂದು ಮತ್ತೆ ಜಗಳ ನಡೆದಿತ್ತು ಎಂದು ಆಕೆ ಒಪ್ಪಿಕೊಂಡಿದ್ದಾಳೆ ಎನ್ನಲಾಗಿದೆ. ಜಗಳದ ವೇಳೆ ಕೋಪಗೊಂಡು ಬೆಲ್ಟ್‌ನಿಂದ ಪತಿಯ ಕುತ್ತಿಗೆಯನ್ನು ಬಿಗಿದು ಕೊಲೆ ಮಾಡಿದ್ದಾಗಿ ಆಕೆ ಪೊಲೀಸರಿಗೆ ತಿಳಿಸಿದ್ದಾಳೆ ಎಂದು ಮೂಲಗಳು ಹೇಳಿವೆ.
ಬಳಿಕ ರಾಜು ಪ್ರಜ್ಞೆ ತಪ್ಪಿ ಬಿದ್ದಿರುವುದಾಗಿ ಅವರ ಸಹೋದರನಿಗೆ ಕರೆ ಮಾಡಿ ತಿಳಿಸಿದ್ದಳು ಎನ್ನಲಾಗಿದೆ.
ಕೊಲ್ಲಿ ರಾಷ್ಟ್ರದಲ್ಲಿ ಕೆಲಸ ಮಾಡಿ ಬಳಿಕ ವಾಪಸ್ ಬಂದಿದ್ದ ಲೇಖಾ ಮೇರಿ ಸದ್ಯ ಗೃಹಿಣಿಯಾಗಿದ್ದು, ದಂಪತಿಗೆ ಒಬ್ಬ ಮಗಳಿದ್ದಾಳೆ. ಪ್ರಕರಣದಲ್ಲಿ ಬೇರೆಯವರ ಕೈವಾಡವಿದೆಯೇ ಎಂಬ ಬಗ್ಗೆಯೂ ಕುಂದರ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಕ್ರೈಂ
Honeytrap-ಹಳೆಯ ದ್ವೇಷಕ್ಕೆ ಇನ್‌ಸ್ಟಾಗ್ರಾಂ ಹನಿಟ್ರ್ಯಾಪ್ ಅಸ್ತ್ರ: ಯುವಕನ ಕೊಲೆ ಪ್ರಕರಣ ಭೇದಿಸಿದ ಪೊಲೀಸರು; ನಾಲ್ವರ ಬಂಧನ
ಕಾಣೆಯಾಗಿದ್ದ ಯುವಕನೊಬ್ಬನ ಕೊಲೆ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದ್ದು, ಇನ್‌ಸ್ಟಾಗ್ರಾಂ ಮೂಲಕ ‘ಹನಿಟ್ರ್ಯಾಪ್’ ಮಾಡಿ ಯುವಕನನ್ನು ಬಲೆಗೆ ಬೀಳಿಸಿ ಕೊಲೆ ಮಾಡಿದ ಆರೋಪದ ಮೇಲೆ ನಾಲ್ವರನ್ನು ಬೆಳಗಾವಿ ನಗರ ಪೊಲೀಸರು ಬಂಧಿಸಿದ್ದಾರೆ. ಮೃತ ಯುವಕನನ್ನು ಬೆಳಗಾವಿಯ ಗಾಂಧಿನಗರ ನಿವಾಸಿ ಸರ್ವೇಶ ಕಂಗ್ರಾಳಕರ ಎಂದು ಗುರುತಿಸಲಾಗಿದೆ.
ಬೆಳಗಾವಿ: ಕಾಣೆಯಾಗಿದ್ದ ಯುವಕನೊಬ್ಬನ ಕೊಲೆ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದ್ದು, ಇನ್‌ಸ್ಟಾಗ್ರಾಂ ಮೂಲಕ ‘ಹನಿಟ್ರ್ಯಾಪ್’ ಮಾಡಿ ಯುವಕನನ್ನು ಬಲೆಗೆ ಬೀಳಿಸಿ ಕೊಲೆ ಮಾಡಿದ ಆರೋಪದ ಮೇಲೆ ನಾಲ್ವರನ್ನು ಬೆಳಗಾವಿ ನಗರ ಪೊಲೀಸರು ಬಂಧಿಸಿದ್ದಾರೆ.
ಮೃತ ಯುವಕನನ್ನು ಬೆಳಗಾವಿಯ ಗಾಂಧಿನಗರ ನಿವಾಸಿ ಸರ್ವೇಶ ಕಂಗ್ರಾಳಕರ ಎಂದು ಗುರುತಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಶಶಿ ಜಾಲಗಾರ, ರಾಹುಲ್ ಜಾಲಗಾರ, ದಶರತ ರಜಪೂತ ಹಾಗೂ ಅರುಣ ಹುಲ್ಲೋಳಿ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಬೆಳಗಾವಿ ನಗರ ಪೊಲೀಸ್ ಆಯುಕ್ತ ಪ್ರಕಾಶ್ ನಿಕಮ್ ಅವರ ಮಾರ್ಗದರ್ಶನದಲ್ಲಿ ಮಾಳಮಾರುತಿ ಠಾಣೆ ಸಿಪಿಐ ಬಿ.ಆರ್. ಗಡೇಕರ್ ನೇತೃತ್ವದ ತಂಡ ತನಿಖೆ ನಡೆಸಿ ಪ್ರಕರಣವನ್ನು ಭೇದಿಸಿದೆ.
ಹಣಕಾಸಿನ ವಿಚಾರದ ದ್ವೇಷವೇ ಕೊಲೆಗೆ ಕಾರಣ?
ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, 2025ರಲ್ಲಿ ನಡೆದ ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದ ಜಗಳವೇ ಕೊಲೆಗೆ ಪ್ರಮುಖ ಕಾರಣ ಎನ್ನಲಾಗಿದೆ. ಈ ಸಂದರ್ಭದಲ್ಲಿ ಸರ್ವೇಶ ಹಾಗೂ ಶಶಿ ಜಾಲಗಾರ ನಡುವೆ ಗಲಾಟೆ ನಡೆದಿದ್ದು, ಸರ್ವೇಶ ಅವರು ಶಶಿ ಮೇಲೆ ಹಲ್ಲೆ ನಡೆಸಿದ್ದರು ಎನ್ನಲಾಗಿದೆ. ಇದರಿಂದ ಇಬ್ಬರ ನಡುವೆ ವೈಷಮ್ಯ ಬೆಳೆದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಹಳೆಯ ದ್ವೇಷವನ್ನೇ ಮುಂದಿಟ್ಟುಕೊಂಡು ಶಶಿ ಜಾಲಗಾರ ತನ್ನ ಸಹಚರರೊಂದಿಗೆ ಸೇರಿ ಸರ್ವೇಶನ ಕೊಲೆಗೆ ಸಂಚು ರೂಪಿಸಿದ್ದಾನೆ ಎನ್ನುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಯುವತಿಯ ಹೆಸರಿನಲ್ಲಿ ನಕಲಿ ಖಾತೆ
ಕೊಲೆಗೆ ಆರೋಪಿಗಳು ಇನ್‌ಸ್ಟಾಗ್ರಾಂ ಬಳಸಿಕೊಂಡಿದ್ದಾರೆ ಎನ್ನಲಾಗಿದೆ. ಯುವತಿಯ ಹೆಸರಿನಲ್ಲಿ ನಕಲಿ ಇನ್‌ಸ್ಟಾಗ್ರಾಂ ಖಾತೆ ಸೃಷ್ಟಿಸಿ, ಅದರ ಮೂಲಕ ಸರ್ವೇಶನಿಗೆ ಸಂದೇಶ ಕಳುಹಿಸಿ ಆತನೊಂದಿಗೆ ಆತ್ಮೀಯತೆ ಬೆಳೆಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಬಳಿಕ ಇದೇ ಪರಿಚಯವನ್ನು ಬಳಸಿಕೊಂಡು ಸರ್ವೇಶನನ್ನು ನಿರ್ದಿಷ್ಟ ಸ್ಥಳಕ್ಕೆ ಕರೆಸಿಕೊಂಡು ಕೊಲೆ ಮಾಡಲಾಗಿದೆ ಎನ್ನಲಾಗಿದೆ.
ಅಂತರ ರಾಜ್ಯ
Arrested-ಪೊಲೀಸರೆಂದು ಹೇಳಿಕೊಂಡು 17 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ; ಮೂವರ ಬಂಧನ
ದಕ್ಷಿಣ ದಿಲ್ಲಿಯ ಆಸ್ಥಾ ಕುಂಜ್ ಉದ್ಯಾನವನದಲ್ಲಿ ಪೊಲೀಸರಂತೆ ವೇಷ ಧರಿಸಿದ್ದ ಮೂವರು ವ್ಯಕ್ತಿಗಳು 17 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಸೋಮವಾರ ಸಂಜೆ ನಡೆದ ಘಟನೆಗೆ ಸಂಬಂಧಿಸಿದಂತೆ ಬಾಲಕಿ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.
ಹೊಸದಿಲ್ಲಿ: ದಕ್ಷಿಣ ದಿಲ್ಲಿಯ ಆಸ್ಥಾ ಕುಂಜ್ ಉದ್ಯಾನವನದಲ್ಲಿ ಪೊಲೀಸರಂತೆ ವೇಷ ಧರಿಸಿದ್ದ ಮೂವರು ವ್ಯಕ್ತಿಗಳು 17 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಸೋಮವಾರ ಸಂಜೆ ನಡೆದ ಘಟನೆಗೆ ಸಂಬಂಧಿಸಿದಂತೆ ಬಾಲಕಿ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.
ಫರಿದಾಬಾದ್ ನಿವಾಸಿಯಾಗಿರುವ ಬಾಲಕಿ ತನ್ನ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಪ್ರಾರ್ಥನೆ ಸಲ್ಲಿಸಲು 17 ವರ್ಷದ ಸ್ನೇಹಿತನೊಂದಿಗೆ ಕಾಲ್ಕಾಜಿ ದೇವಸ್ಥಾನಕ್ಕೆ ತೆರಳಿದ್ದಳು. ಬಳಿಕ ಸಮೀಪದ ಇಸ್ಕಾನ್ ದೇವಸ್ಥಾನಕ್ಕೆ ತೆರಳುವ ಮುನ್ನ ಇಬ್ಬರೂ ಆಸ್ಥಾ ಕುಂಜ್ ಉದ್ಯಾನವನಕ್ಕೆ ಹೋಗಿದ್ದರು.
ಉದ್ಯಾನವನದ ಗೇಟ್ ನಂ.7 ಮೂಲಕ ಪ್ರವೇಶಿಸಿ ಬೆಂಚ್‌ನಲ್ಲಿ ಕುಳಿತಿದ್ದ ವೇಳೆ 30ರಿಂದ 35 ವರ್ಷ ವಯಸ್ಸಿನ ಮೂವರು ವ್ಯಕ್ತಿಗಳು ಅಲ್ಲಿಗೆ ಬಂದಿದ್ದರು. ತಾವು ಪೊಲೀಸರು ಎಂದು ಪರಿಚಯಿಸಿಕೊಂಡ ಅವರು, ಉದ್ಯಾನವನದಲ್ಲಿ ಏಕೆ ಕುಳಿತಿದ್ದೀರಿ ಎಂದು ಬಾಲಕಿ ಹಾಗೂ ಆಕೆಯ ಸ್ನೇಹಿತನನ್ನು ಪ್ರಶ್ನಿಸಿದ್ದರು ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.
ಆರೋಪಿಗಳು ಬಾಲಕಿಯ ಸ್ನೇಹಿತನಿಗೆ ಹಲ್ಲೆ ನಡೆಸಿ, ಇಬ್ಬರ ಮೊಬೈಲ್ ಫೋನ್‌ಗಳನ್ನು ಕಸಿದುಕೊಂಡಿದ್ದರು ಎನ್ನಲಾಗಿದೆ. ಬಳಿಕ ಒಬ್ಬ ಆರೋಪಿಯು ಬಾಲಕಿಯ ಸ್ನೇಹಿತನನ್ನು ದೂರಕ್ಕೆ ಕರೆದೊಯ್ದಿದ್ದು, ಇತರರು ಬಾಲಕಿಯನ್ನು ಉದ್ಯಾನವನದ ಪೊದೆಗಳಿರುವ ಪ್ರದೇಶದತ್ತ ಕರೆದೊಯ್ದಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಎಫ್‌ಐಆರ್ ಪ್ರಕಾರ, ಆರೋಪಿಗಳಲ್ಲಿ ಒಬ್ಬನಾದ ಆಸಿಫ್ ಬಂದೂಕು ತೋರಿಸಿ ಬಾಲಕಿಗೆ ಬೆದರಿಸಿದ್ದಾನೆ. ಬಳಿಕ ಕತ್ತಲೆಯ ಪ್ರದೇಶಕ್ಕೆ ಕರೆದೊಯ್ದು ಚಾಕುವಿನಿಂದ ಬೆದರಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.
ದೌರ್ಜನ್ಯದ ಬಳಿಕ ಬಾಲಕಿಯ ಬಟ್ಟೆ ಹಾಗೂ ಮೊಬೈಲ್ ಫೋನ್‌ಗಳನ್ನು ವಾಪಸ್ ನೀಡಿದ್ದ ಆರೋಪಿಗಳು, ಘಟನೆ ಬಗ್ಗೆ ಯಾರಿಗೂ ತಿಳಿಸದಂತೆ ಬೆದರಿಕೆ ಹಾಕಿದ್ದರು ಎನ್ನಲಾಗಿದೆ. ಬಳಿಕ ಬಾಲಕಿ ತನ್ನ ಸ್ನೇಹಿತನಿಗೆ ಘಟನೆಯ ಬಗ್ಗೆ ತಿಳಿಸಿದ್ದು, ಆತ ಪೊಲೀಸ್ ನಿಯಂತ್ರಣ ಕೊಠಡಿಗೆ (PCR) ಕರೆ ಮಾಡಿ ಮಾಹಿತಿ ನೀಡಿದ್ದಾನೆ.
ಮೂವರು ಆರೋಪಿಗಳ ಬಂಧನ
ಘಟನೆಯ ಆಘಾತದ ನಡುವೆಯೂ ಬಾಲಕಿಗೆ ಆರೋಪಿಗಳ ಹೆಸರು, ಅಡ್ಡಹೆಸರುಗಳು ಹಾಗೂ ಅವರು ಧರಿಸಿದ್ದ ಉಡುಪುಗಳ ಕುರಿತು ಕೆಲವು ವಿವರಗಳು ನೆನಪಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ.
ಬಾಲಕಿ ನೀಡಿದ ಮಾಹಿತಿಯ ಆಧಾರದ ಮೇಲೆ ಪೊಲೀಸರು 30 ವರ್ಷದ ಆಸಿಫ್‌ನನ್ನು ಪತ್ತೆಹಚ್ಚಿದ್ದಾರೆ. ಮಂಗಳವಾರ ಮುಂಜಾನೆ ನಡೆದ ಗುಂಡಿನ ಚಕಮಕಿಯ ಬಳಿಕ ಆತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆತನ ಸಹಚರರಾದ 31 ವರ್ಷದ ಹೇಮಂತ್ ಸಿಂಗ್ ಹಾಗೂ ಆತನ ಕಿರಿಯ ಸಹೋದರ ಮುಕೇಶ್ ಸಿಂಗ್ ಅವರನ್ನು ಶ್ರೀನಿವಾಸಪುರಿಯಲ್ಲಿರುವ ಅವರ ಮನೆಯಿಂದ ವಶಕ್ಕೆ ಪಡೆದು ಬಂಧಿಸಲಾಗಿದೆ.
ಪ್ರಕರಣದ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದು, ಎಫ್‌ಐಆರ್‌ನಲ್ಲಿ ದಾಖಲಿಸಿರುವ ಆರೋಪಗಳ ಆಧಾರದ ಮೇಲೆ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ.
ಉದ್ಯಾನವನದ ಭದ್ರತೆ ಬಗ್ಗೆ ಪ್ರಶ್ನೆ
ಘಟನೆಯ ಬಳಿಕ ಆಸ್ಥಾ ಕುಂಜ್ ಉದ್ಯಾನವನದ ಭದ್ರತೆ ಮತ್ತು ನಿರ್ವಹಣೆ ಕುರಿತು ಸ್ಥಳೀಯ ನಿವಾಸಿಗಳು ಕಳವಳ ವ್ಯಕ್ತಪಡಿಸಿದ್ದಾರೆ. ಉದ್ಯಾನವನದ ಕೆಲವು ಭಾಗಗಳಲ್ಲಿ ಸಮರ್ಪಕ ಬೆಳಕಿನ ವ್ಯವಸ್ಥೆ ಹಾಗೂ ಭದ್ರತಾ ಸಿಬ್ಬಂದಿಯ ಕೊರತೆ ಇರುವುದರಿಂದ ಇಂತಹ ಘಟನೆಗಳಿಗೆ ಅವಕಾಶವಾಗುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ.
-
Uncategorized19 hours ago
ಬೆಳೆ ವಿಮೆ ಪರಿಹಾರ ಕಡಿತ: ಸರ್ಕಾರದ ಮುಂದೆ ಅರುಣ್ ಪುತ್ತಿಲ ಆಕ್ರೋಶ – ಪ್ರಶ್ನೆಗಳ ಸುರಿಮಳೆ
-
ದಕ್ಷಿಣ ಕನ್ನಡ13 hours ago
ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಪ್ರಯಾಣಿಸುತ್ತಿದ್ದ ಕಾರು ಅಪಘಾತ
-
ಸಿನೆಮಾ20 hours agoPrema Da Ooralli-ಅಮ್ಮನ ಮಂಗಳಸೂತ್ರವನ್ನೇ ಗಿರವಿಡಲು ಮುಂದಾಗಿದ್ದ ನಿರ್ದೇಶಕ; ಇಂದು ₹17 ಕೋಟಿಯತ್ತ ಸಿನಿಮಾ! ‘ಪ್ರೇಮದ ಊರಲ್ಲಿ’ ಸೃಷ್ಟಿಸಿದ ಬಾಕ್ಸ್ ಆಫೀಸ್ ಅಚ್ಚರಿ
-
ದಕ್ಷಿಣ ಕನ್ನಡ20 hours ago
ವಿಟ್ಲ :ಬ್ಯಾಂಕ್ ಉದ್ಯೋಗದ ಆಸೆ ತೋರಿಸಿ ಹಣ ವಂಚನೆ: 15 ವರ್ಷಗಳ ಬಳಿಕ ವಾರೆಂಟ್ ಆರೋಪಿ ಬಂಧನ
-
ಅಪರಾಧ20 hours agoMangalore-ಮಂಗಳೂರು: ಜೈಲಿನಲ್ಲೇ ವಾರ್ಡನ್ ಮೇಲೆ ಹಲ್ಲೆ ಪ್ರಕರಣ : ಆರೋಪಿಗೆ 5 ವರ್ಷ ಜೈಲು, 40,000 ರೂ. ದಂಡ
-
ಅಪರಾಧ12 hours agoSomasekhar-ನಕಲಿ ದಾಖಲೆ ಸೃಷ್ಟಿಸಿ ಕೈದಿಯ ಬಿಡುಗಡೆ..! ಪ್ರತಿಯಾಗಿ ಆತನ ಪತ್ನಿಯನ್ನು ಲೈಂಗಿಕವಾಗಿ ಬಳಸಿಕೊಳ್ಳುವ ಒಪ್ಪಂದ ಮಾಡಿಕೊಂಡಿದ್ದ ಡಿಐಜಿ ಎಂ. ಸೋಮಶೇಖರ್
-
ಬಿಗ್ ನ್ಯೂಸ್18 hours agoPuttur-ಪುತ್ತೂರಿನಲ್ಲಿ ಆಸರೆ ಇಲ್ಲದೆ ಭಿಕ್ಷಾಟನೆ ಮಾಡುತ್ತಿದ್ದ 60ರ ವ್ಯಕ್ತಿಗೆ ನೆರವು; ಪಚ್ಚನಾಡಿ ಪುನರ್ವಸತಿ ಕೇಂದ್ರಕ್ಕೆ ದಾಖಲು
-
ಮಂಗಳೂರು19 hours agoPandamburu-ಪಣಂಬೂರು ಬೀಚ್ನಲ್ಲಿ ಹುಲಿವೇಷ ತರಬೇತಿಗೆ ಬಂದಿದ್ದ ಬಾಲಕ ನೀರುಪಾಲು


















