ಬಿಗ್ ನ್ಯೂಸ್
Sexual harassment: ‘ನೋ ಸಾರ್ ‘ ಅಂದ್ರು ಎಂಬಿಎ ವಿದ್ಯಾರ್ಥಿನಿಯನ್ನು ಮಂಚಕ್ಕೆ ಕರೆದ ಅತಿಥಿ ಉಪನ್ಯಾಸಕ – ಆಡಿಯೋ ವೈರಲ್
ಕಲಬುರಗಿ: ಅತಿಥಿ ಶಿಕ್ಷಕನೊಬ್ಬ ವಿದ್ಯಾರ್ಥಿನಿಗೆ ಕರೆ ಮಾಡಿ ಲೈಂಗಿಕ ಕಿರುಕುಳ (Sexual harassment) ನೀಡಿರುವ ಘಟನೆ ಕಲ್ಬುರ್ಗಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ. 6 ತಿಂಗಳ ಹಿಂದೆ ಅವರಿಬ್ಬರು ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಇದೀಗ ವೈರಲ್ ಆಗುತ್ತಿದೆ.
ಗುಲ್ಬರ್ಗಾ ವಿಶ್ವವಿದ್ಯಾಲಯದಲ್ಕಿ (Gulbarga University) ಎಂಬಿಎ (MBA) ಓದುತ್ತಿರುವ ವಿದ್ಯಾರ್ಥಿನಿಗೆ ಅದೇ ವಿಭಾಗದ ಅತಿಥಿ ಉಪನ್ಯಾಸಕರೊಬ್ಬರು ಕರೆ ಮಾಡಿ ಸುಮಾರು 23 ನಿಮಿಷ ಮಾತನಾಡಿರುವ ಆರು ತಿಂಗಳ ಹಿಂದಿನದು ಎನ್ನಲಾದ ಆಡಿಯೋ ವೈರಲ್ ಆಗಿದೆ.
ರಾತ್ರಿ ಸಮಯದಲ್ಲಿ ಕರೆ ಮಾಡಿರುವ ಈ ಅತಿಥಿ ಉಪನ್ಯಾಸಕ ವಿದ್ಯಾರ್ಥಿನಿಯನ್ನು ಮಂಚಕ್ಕೆ ಕರೆದಿದ್ದಾನೆ. ಆ ವಿದ್ಯಾರ್ಥಿನಿ ಎಷ್ಟೇ ಬಾರಿ ನೋ ಸರ್ ಎಂದು ವಿರೋಧಿಸಿದರು. ಆದರೆ ಬಿಡದ ಭೂಪ ನೀನು ನನ್ನ ಗರ್ಲ್ ಫ್ರೆಂಡ್ ಎಂದು ಹೇಳಿರುವುದು ಆಡಿಯೋದಲ್ಲಿದೆ.
ನನ್ನಿಂದ ಏನು ತೊಂದರೆ ಆಗಲ್ಲ, ನೀ ನನಗೆ ಸಹಕರಿಸು. ನನ್ನ ರೂಮಿಗೆ ಕರೆಯುತ್ತೇನೆ. ರೂಮಿಗೆ ಬಾ ಕಿಸ್ ಮಾಡುತ್ತೇನೆ. ನನ್ನ ಮೇಲೆ ನಂಬಿಕೆ ಇಡು. ಮೊದಲು ನನಗೆ ಹತ್ತಿರವಾಗು, ಮುಂದೆ ನೋಡೋಣ ಎಂದು ಪೀಡಿಸಿದ್ದಾನೆ. ಆದರೆ ಆಕೆ ಎಲ್ಲದಕ್ಕೂ ನೋ ಸರ್ ಎಂದೆ ಉತ್ತರ ಕೊಟ್ಟಿರುವುದು ಆಡಿಯೋದಲ್ಲಿದೆ.
ಆಡಿಯೊದಲ್ಲಿ ವಿದ್ಯಾರ್ಥಿನಿಗೆ ಕೊನೆಗೆ ‘ಮೊಬೈಲ್‌ನಲ್ಲೇ ಸೆಕ್ಸ್ ಮಾಡೋಣ’ ಎಂದು ಉಪನ್ಯಾಸಕ ಪೀಡಿಸುತ್ತಾನೆ. ಮುಂದುವರೆದು ‘ವಿದ್ಯಾರ್ಥಿಗಳ ಮೇಲೆ ಕ್ರಷ್ ಆಗಬಾರದಾ? ಎಂದು ಕೇಳುತ್ತಾನೆ. ಆಗಲೂ ನಯವಾಗಿ ತಿರಸ್ಕರಿಸಿ ‘ನೀವು ನಮಗೆ ಸರಿಯಾಗಿ ಗೈಡ್ ಮಾಡಬೇಕು. ಒಳ್ಳೆಯ ಮಾರ್ಗದರ್ಶನ ನೀಡಬೇಕು. ನೀವು ಏನಾದರೂ ಮಾಡಿದರೆ ನಿಮ್ಮ ಮೇಲೆ ಇಟ್ಟಿರುವ ನಂಬಿಕೆ ಕಳೆದುಕೊಳ್ಳುತ್ತೀರಿ’ ಎನ್ನುವ ವಿದ್ಯಾರ್ಥಿನಿಯು ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳ ನಡುವಿನ ಸಂಬಂಧವನ್ನು ಮನವರಿಕೆ ಮಾಡಲು ಪ್ರಯತ್ನಿಸುತ್ತಾರೆ.
ಆಡಿಯೊ ಬಗ್ಗೆ ಪ್ರತಿಕ್ರಿಯಿಸಿದ ಗುಲಬರ್ಗಾ ವಿ.ವಿ ಹಂಗಾಮಿ ಕುಲಪತಿ ಪ್ರೊ. ವಿ.ಟಿ. ಕಾಂಬಳೆ, ‘ಆಡಿಯೊ ಕುರಿತು ಗಮನಕ್ಕೆ ಬರುತ್ತಿದ್ದಂತೆ ಎಂಬಿಎ ವಿಭಾಗದ ಮುಖ್ಯಸ್ಥರಿಗೆ ಪರಿಶೀಲಿಸಿ ವರದಿ ನೀಡುವಂತೆ ಸೂಚಿಸಲಾಗಿದೆ. ವಿಭಾಗದ ಮುಖ್ಯಸ್ಥರು ಹೊಸದಾಗಿ ಬಂದಿದ್ದು, ಅವರಿಗೂ ಯಾವುದೇ ಮಾಹಿತಿ ಇಲ್ಲ. ಆಡಿಯೊ ಎಲ್ಲಿ, ಯಾವಾಗ ನಡೆದಿದೆ ಎಂಬ ಬಗ್ಗೆ ಪರಿಶೀಲಿಸಲು ತಿಳಿಸಲಾಗಿದೆ. ವರದಿ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು.
ವಿಶ್ವವಿದ್ಯಾಲಯ ಘನತೆ ಹಾಳು ಮಾಡಿದ ಅತಿಥಿ ಶಿಕ್ಷಕನ ವಿರುದ್ಧ ಕ್ಯಾಂಪಸ್ನಲ್ಲಿ ಆಕ್ರೋಶ ವ್ಯಕ್ತವಾಗಿದೆ. ಈ ಘಟನೆ ವಿಶ್ವವಿದ್ಯಾಲಯ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಆದರೆ, ಇದುವರೆಗೂ ಕಿರುಕುಳಕ್ಕೆ ಒಳಗಾದ ವಿದ್ಯಾರ್ಥಿಯು, ಆ ಅತಿಥಿ ಉಪನ್ಯಾಸಕರ ವಿರುದ್ಧ ಪೊಲೀಸ್ ಠಾಣೆಯಲ್ಲಿಯಾಗಲಿ ಅಥವಾ ವಿವಿ ಕುಲಪತಿಯಾಗಲಿ ದೂರು ನೀಡಿಲ್ಲ ಎಂದು ತಿಳಿದು ಬಂದಿದೆ. ಈ ಬೆಳವಣಿಗೆಯನ್ನು ಪೊಲೀಸರು ಇನ್ನೂ ಸ್ವಯಂಪ್ರೇರಿತವಾಗಿ ಪರಿಗಣಿಸಬೇಕಾಗಿದೆ.
ಸ್ಥಳೀಯ
Beltangadi-ಬೆಳ್ತಂಗಡಿ: ಚಾಲಕನ ಸಮಯಪ್ರಜ್ಞೆ; ಬಸ್‌ನಲ್ಲಿ ಅಸ್ವಸ್ಥಗೊಂಡ ಮಹಿಳೆ ಅಪಾಯದಿಂದ ಪಾರು
ದಾವಣಗೆರೆಯಿಂದ ಮಂಗಳೂರಿಗೆ ಸಂಚರಿಸುತ್ತಿದ್ದ ಕೆಎಸ್ಸಾರ್ಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರು ಮಾರ್ಗಮಧ್ಯೆ ಏಕಾಏಕಿ ಅಸ್ವಸ್ಥಗೊಂಡು ಪ್ರಜ್ಞೆತಪ್ಪಿದ ಘಟನೆ ನಡೆದಿದೆ. ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಬಸ್ ಚಾಲಕ ತಕ್ಷಣ ಬಸ್ಸನ್ನು ಕಕ್ಕಿಂಜೆಯ ಆಸ್ಪತ್ರೆಗೆ ಕೊಂಡೊಯ್ದು ಮಹಿಳೆಯನ್ನು ದಾಖಲಿಸುವ ಮೂಲಕ ಸಮಯಪ್ರಜ್ಞೆ ಮೆರೆದಿದ್ದಾರೆ.
ಬೆಳ್ತಂಗಡಿ: ದಾವಣಗೆರೆಯಿಂದ ಮಂಗಳೂರಿಗೆ ಸಂಚರಿಸುತ್ತಿದ್ದ ಕೆಎಸ್ಸಾರ್ಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರು ಮಾರ್ಗಮಧ್ಯೆ ಏಕಾಏಕಿ ಅಸ್ವಸ್ಥಗೊಂಡು ಪ್ರಜ್ಞೆತಪ್ಪಿದ ಘಟನೆ ನಡೆದಿದೆ. ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಬಸ್ ಚಾಲಕ ತಕ್ಷಣ ಬಸ್ಸನ್ನು ಕಕ್ಕಿಂಜೆಯ ಆಸ್ಪತ್ರೆಗೆ ಕೊಂಡೊಯ್ದು ಮಹಿಳೆಯನ್ನು ದಾಖಲಿಸುವ ಮೂಲಕ ಸಮಯಪ್ರಜ್ಞೆ ಮೆರೆದಿದ್ದಾರೆ.
ಬಾಳೆಹೊನ್ನೂರು ಮೂಲದ 26 ವರ್ಷದ ಮಹಿಳೆಯೊಬ್ಬರು ಮಂಗಳೂರಿನ ಖಾಸಗಿ ಸಂಸ್ಥೆಯಲ್ಲಿ ವಾರ್ಡನ್ ಆಗಿ ಕೆಲಸ ಮಾಡುತ್ತಿದ್ದು, ಕರ್ತವ್ಯಕ್ಕೆ ತೆರಳುತ್ತಿದ್ದರು. ಪ್ರಯಾಣದ ವೇಳೆ ಏಕಾಏಕಿ ಅಸ್ವಸ್ಥಗೊಂಡ ಅವರು ಪ್ರಜ್ಞೆ ಕಳೆದುಕೊಂಡಿದ್ದು, ಮಾತನಾಡಲು ಹಾಗೂ ದೇಹವನ್ನು ಚಲಿಸಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿತ್ತು.
ಇದನ್ನು ಗಮನಿಸಿದ ಬಸ್ ಚಾಲಕ ಕಿರಣ್ ಅವರು ಯಾವುದೇ ಸಮಯ ವ್ಯರ್ಥ ಮಾಡದೆ ತಕ್ಷಣ ಬಸ್ಸನ್ನು ಕಕ್ಕಿಂಜೆಯ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಬಳಿಕ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿ ಸೂಕ್ತ ಚಿಕಿತ್ಸೆ ದೊರೆಯುವಂತೆ ನೋಡಿಕೊಂಡಿದ್ದಾರೆ.
ಸದ್ಯ ಮಹಿಳೆ ಅಪಾಯದಿಂದ ಪಾರಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
ಅಂತರ ರಾಜ್ಯ
ಕಾಸರಗೋಡು: ಆರ್‌ಎಸ್‌ಎಸ್ ವಕ್ತಾರರ ಭಾಗವಹಿಸುವಿಕೆ ವಿರೋಧಿಸಿ ಪ್ರತಿಭಟನೆ; ಘರ್ಷಣೆಯಲ್ಲಿ ಮೂವರು ವಿದ್ಯಾರ್ಥಿಗಳಿಗೆ ಗಾಯ
ವಂದೇ ಮಾತರಂನ 150ನೇ ವಾರ್ಷಿಕೋತ್ಸವದ ಅಂಗವಾಗಿ ಕೇರಳ ಕೇಂದ್ರ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ ಎರಡು ದಿನಗಳ ರಾಷ್ಟ್ರೀಯ ವಿಚಾರಸಂಕಿರಣದಲ್ಲಿ ಆರ್‌ಎಸ್‌ಎಸ್‌ಗೆ ಸಂಬಂಧಿಸಿದ ವಕ್ತಾರರು ಭಾಗವಹಿಸಿರುವುದನ್ನು ವಿರೋಧಿಸಿ ವಿದ್ಯಾರ್ಥಿ ಸಂಘಟನೆಗಳು ಪ್ರತಿಭಟನೆ ನಡೆಸಿವೆ. ಈ ವೇಳೆ ಪೊಲೀಸರು ಹಾಗೂ ವಿದ್ಯಾರ್ಥಿಗಳ ನಡುವೆ ನಡೆದ ಘರ್ಷಣೆಯಲ್ಲಿ ಮೂವರು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.
ಕಾಸರಗೋಡು, ಅ.6: ವಂದೇ ಮಾತರಂನ 150ನೇ ವಾರ್ಷಿಕೋತ್ಸವದ ಅಂಗವಾಗಿ ಕೇರಳ ಕೇಂದ್ರ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ ಎರಡು ದಿನಗಳ ರಾಷ್ಟ್ರೀಯ ವಿಚಾರಸಂಕಿರಣದಲ್ಲಿ ಆರ್‌ಎಸ್‌ಎಸ್‌ಗೆ ಸಂಬಂಧಿಸಿದ ವಕ್ತಾರರು ಭಾಗವಹಿಸಿರುವುದನ್ನು ವಿರೋಧಿಸಿ ವಿದ್ಯಾರ್ಥಿ ಸಂಘಟನೆಗಳು ಪ್ರತಿಭಟನೆ ನಡೆಸಿವೆ. ಈ ವೇಳೆ ಪೊಲೀಸರು ಹಾಗೂ ವಿದ್ಯಾರ್ಥಿಗಳ ನಡುವೆ ನಡೆದ ಘರ್ಷಣೆಯಲ್ಲಿ ಮೂವರು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.
ಸಾಹಿತ್ಯ ಅಕಾಡೆಮಿ, ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಹಾಗೂ ಕೇರಳ ಕೇಂದ್ರ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಈ ವಿಚಾರಸಂಕಿರಣ ಆಯೋಜಿಸಲಾಗಿದೆ. ಆರ್‌ಎಸ್‌ಎಸ್‌ನ ಬೌದ್ಧಿಕ ವಿಭಾಗವೆಂದು ಪರಿಗಣಿಸಲಾಗುವ ಪ್ರಜ್ಞಾ ಪ್ರವಾಹದ ರಾಷ್ಟ್ರೀಯ ಸಂಚಾಲಕ ಜೆ. ನಂದಕುಮಾರ್ ಅವರು ವಿಚಾರಸಂಕಿರಣದಲ್ಲಿ ಮುಖ್ಯ ಭಾಷಣ ಮಾಡುತ್ತಿರುವುದನ್ನು ವಿರೋಧಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ಕಾರ್ಯಕ್ರಮ ನಡೆಯುತ್ತಿದ್ದ ಗ್ರಂಥಾಲಯಕ್ಕೆ ವಿದ್ಯಾರ್ಥಿಗಳು ಪ್ರವೇಶಿಸಲು ಯತ್ನಿಸಿದಾಗ ಪೊಲೀಸರು ಅವರನ್ನು ತಡೆದರು. ಈ ವೇಳೆ ಪೊಲೀಸರು ಮತ್ತು ವಿದ್ಯಾರ್ಥಿಗಳ ನಡುವೆ ಘರ್ಷಣೆ ಸಂಭವಿಸಿದೆ.
ಘರ್ಷಣೆಯಲ್ಲಿ ಎಸ್‌ಎಫ್‌ಐ ಕೇರಳ ಕೇಂದ್ರ ವಿಶ್ವವಿದ್ಯಾಲಯ ಘಟಕದ ಕಾರ್ಯದರ್ಶಿ ಸೈಯದ್ ಅಲಿ, ಪ್ಲಾಂಟ್ ಸೈನ್ಸ್ ವಿಭಾಗದ ಅಭಿರಾಗ್ ಹಾಗೂ ಇಂಟರ್‌ನ್ಯಾಷನಲ್ ರಿಲೇಶನ್ಸ್ ವಿಭಾಗದ ಮುರಳೀಕೃಷ್ಣನ್ ಎಂಬ ಮೂವರು ವಿದ್ಯಾರ್ಥಿಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಅಂತರ ರಾಜ್ಯ
Ashutosh Dixit-ಭಾರತೀಯ ವಾಯುಪಡೆಯ ನೂತನ ಮುಖ್ಯಸ್ಥರಾಗಿ ಏರ್ ಮಾರ್ಷಲ್ ಅಶುತೋಷ್ ದೀಕ್ಷಿತ್ ನೇಮಕ
ಭಾರತೀಯ ವಾಯುಪಡೆಯ ನೂತನ ಮುಖ್ಯಸ್ಥರಾಗಿ ಏರ್ ಮಾರ್ಷಲ್ ಅಶುತೋಷ್ ದೀಕ್ಷಿತ್ ಅವರನ್ನು ನೇಮಕ ಮಾಡಲಾಗಿದೆ ಎಂದು ಕೇಂದ್ರ ಸರಕಾರ ಮಂಗಳವಾರ ಪ್ರಕಟಿಸಿದೆ. ಅವರು ಅಕ್ಟೋಬರ್ 31ರಂದು ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ಹೊಸದಿಲ್ಲಿ: ಭಾರತೀಯ ವಾಯುಪಡೆಯ ನೂತನ ಮುಖ್ಯಸ್ಥರಾಗಿ ಏರ್ ಮಾರ್ಷಲ್ ಅಶುತೋಷ್ ದೀಕ್ಷಿತ್ ಅವರನ್ನು ನೇಮಕ ಮಾಡಲಾಗಿದೆ ಎಂದು ಕೇಂದ್ರ ಸರಕಾರ ಮಂಗಳವಾರ ಪ್ರಕಟಿಸಿದೆ. ಅವರು ಅಕ್ಟೋಬರ್ 31ರಂದು ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ಹಾಲಿ ವಾಯುಪಡೆ ಮುಖ್ಯಸ್ಥರಾಗಿರುವ ಏರ್ ಚೀಫ್ ಮಾರ್ಷಲ್ ಎ.ಪಿ. ಸಿಂಗ್ ಅವರು ಅಕ್ಟೋಬರ್ 31ರಂದು ನಿವೃತ್ತರಾಗಲಿದ್ದು, ಅವರ ಸ್ಥಾನವನ್ನು ದೀಕ್ಷಿತ್ ಅಲಂಕರಿಸಲಿದ್ದಾರೆ.
ಪ್ರಸ್ತುತ ವಾಯುಪಡೆಯ ಉಪ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿರುವ 59 ವರ್ಷದ ಅಶುತೋಷ್ ದೀಕ್ಷಿತ್ ಅವರು 1986ರ ಡಿಸೆಂಬರ್‌ನಲ್ಲಿ ಭಾರತೀಯ ವಾಯುಪಡೆಯ ಫೈಟರ್ ಸ್ಟ್ರೀಮ್‌ಗೆ ನಿಯೋಜನೆಗೊಂಡಿದ್ದರು. ಅವರು 2028ರ ಡಿಸೆಂಬರ್ 31ರವರೆಗೆ ವಾಯುಪಡೆ ಮುಖ್ಯಸ್ಥರಾಗಿ ಸೇವೆ ಸಲ್ಲಿಸಲಿದ್ದಾರೆ.
ಅಶುತೋಷ್ ದೀಕ್ಷಿತ್ ಅವರು ಪ್ರಾಯೋಗಿಕ ಪರೀಕ್ಷಾರ್ಥ ಪೈಲಟ್ ಹಾಗೂ ಫ್ಲೈಟ್ ಇನ್‌ಸ್ಟ್ರಕ್ಟರ್ ಆಗಿಯೂ ಸೇವೆ ಸಲ್ಲಿಸಿದ್ದಾರೆ. ಮಿರಾಜ್-2000, ವಿವಿಧ ಮಾದರಿಯ ಮಿಗ್ ಯುದ್ಧ ವಿಮಾನಗಳು, ಜಾಗ್ವಾರ್ ಮತ್ತು ತೇಜಸ್ ಸೇರಿದಂತೆ ಹಲವು ಯುದ್ಧ ವಿಮಾನಗಳಲ್ಲಿ 3,500 ಗಂಟೆಗಳಿಗೂ ಹೆಚ್ಚು ಹಾರಾಟದ ಅನುಭವ ಹೊಂದಿದ್ದಾರೆ.
-
ದಕ್ಷಿಣ ಕನ್ನಡ23 hours ago
ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಪ್ರಯಾಣಿಸುತ್ತಿದ್ದ ಕಾರು ಅಪಘಾತ
-
ಅಪರಾಧ22 hours agoSomasekhar-ನಕಲಿ ದಾಖಲೆ ಸೃಷ್ಟಿಸಿ ಕೈದಿಯ ಬಿಡುಗಡೆ..! ಪ್ರತಿಯಾಗಿ ಆತನ ಪತ್ನಿಯನ್ನು ಲೈಂಗಿಕವಾಗಿ ಬಳಸಿಕೊಳ್ಳುವ ಒಪ್ಪಂದ ಮಾಡಿಕೊಂಡಿದ್ದ ಡಿಐಜಿ ಎಂ. ಸೋಮಶೇಖರ್
-
ನಿಧನ ವಾರ್ತೆ21 hours agoPuttur-ಪುತ್ತೂರು: ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಪಡೆಯುತ್ತಿದ್ದ ಸ್ಕೂಟರ್ ಸವಾರ ಮೃತ್ಯು
-
ಬಿಗ್ ನ್ಯೂಸ್17 hours agoಡಿಕೆಶಿ ಸರ್ಕಾರದಿಂದ ಜನತೆಗೆ ಬಿಗ್ ಶಾಕ್ – ರೈತರಿಗೆ ಬಂಪರ್ ಗಿಫ್ಟ್..! ಹಾಲಿನ ದರ 8 ರೂ. ಏರಿಕೆ : 6 ರೂ. ರೈತರಿಗೆ..! ನ.1 ರಿಂದ ಬಹುತೇಕ ಜಾರಿ
-
ಶಿಕ್ಷಣ20 hours agoPhilomena-ಸಂತ ಫಿಲೋಮಿನಾ ಕಾಲೇಜು : 35 ವರ್ಷಗಳ ಬಳಿಕ ಮತ್ತೆ ಒಂದಾದ 1991ರ ಬಿ.ಎಸ್ಸಿ. ಬ್ಯಾಚ್; ನೆನಪು, ನಂಟು ಮತ್ತು ಗುರು-ಗೌರವದ ಭಾವಪೂರ್ಣ ಸಂಗಮ
-
ನಿಧನ ವಾರ್ತೆ22 hours agoDead body-ಹುಲಿವೇಷ ತರಬೇತಿಗೆಂದು ಮಂಗಳೂರಿಗೆ ಬಂದಿದ್ದ ಬೆಳ್ತಂಗಡಿ ಬಾಲಕ ಸಮುದ್ರ ಪಾಲು; ಮೃತದೇಹ ಪತ್ತೆ
-
ನಿಧನ ವಾರ್ತೆ21 hours agoKerala-ಕೇರಳ: ಸಿಡಿಲು ಬಡಿದು ಖ್ಯಾತ ‘ಪಲ್ಲಟ್ಟು ಬ್ರಹ್ಮದತ್ತನ್’ ಆನೆ ದಾರುಣ ಸಾವು
-
ಬಿಗ್ ನ್ಯೂಸ್22 hours agoPuttur-ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನ: ‘ಭಕ್ತರನ್ನು ಕಡೆಗಣಿಸಿ ಜೀರ್ಣೋದ್ಧಾರ ಸಮಿತಿ ರಚನೆ’ – ವಿಹಿಂಪ ಆಕ್ಷೇಪ


















