ಶಿಕ್ಷಣ
ಸಿಬಿಎಸ್ಸಿ ಫಲಿತಾಂಶ ಪ್ರಕಟ : ತಿರುವನಂತಪುರಂ ಫಸ್ಟ್ , ಬೆಂಗಳೂರು ನೆಕ್ಸ್ಟ್
ನವದೆಹಲಿ, ಮೇ 12 : ಸಿಬಿಎಸ್ಇ ಯ 12ನೇ ತರಗತಿಯ ಫಲಿತಾಂಶ ಇಂದು ಪ್ರಕಟಿಸಿದ್ದು, ಶೇಕಡಾ 87.33 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಅತ್ಯುತ್ತಮ ಉತ್ತೀರ್ಣ ಶೇಕಡಾವಾರು ಪ್ರದೇಶ ಕೇರಳದ ತಿರುವನಂತಪುರ ಶೇಕಡಾ 99.91 ರಷ್ಟು ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ.
98.64 ಅಂಕಗಳೊಂದಿಗೆ ಬೆಂಗಳೂರು 2ನೇ ಸ್ಥಾನದಲ್ಲಿದೆ.
.
ಮಂಡಳಿಯು ತನ್ನ ವಿದ್ಯಾರ್ಥಿಗಳಿಗೆ ಪ್ರಥಮ, ದ್ವಿತೀಯ ಅಥವಾ ಮೂರನೇ ಡಿವಿಶನ್ ಗಳನ್ನು ನೀಡುವುದಿಲ್ಲ ಎಂದಿದೆ. ಆದರೆ ಹೆಚ್ಚಿನ ಅಂಕಗಳನ್ನು ಗಳಿಸಿದ 0.1 ಪ್ರತಿಶತ ವಿದ್ಯಾರ್ಥಿಗಳಿಗೆ ಮೆರಿಟ್ ಪ್ರಮಾಣಪತ್ರವನ್ನು ನೀಡುತ್ತದೆ.
ಅಧಿಕೃತ ವೆಬ್ ಸೈಟ್ ಗಳಾದ http://cbse.nic.in ಮತ್ತು http://cbse.gov.in ನಲ್ಲಿ ವಿದ್ಯಾರ್ಥಿಗಳು ಇಲ್ಲಿ ಫಲಿತಾಂಶಗವನ್ನು ನೋಡಬಹುದು.
ಶಿಕ್ಷಣ
Philomena-ಸಂತ ಫಿಲೋಮಿನಾ ಕಾಲೇಜಿನಲ್ಲಿ ‘ಫುಡೀಪ್ರಿನಿಯರ್’: ಆಹಾರದಿಂದ ಉದ್ಯಮದತ್ತ ವಿದ್ಯಾರ್ಥಿಗಳ ಹೆಜ್ಜೆ; ‘ಟೇಸ್ಟ್ ದಿ ಫ್ಯೂಚರ್’ ಮೂಲಕ ಸೃಜನಶೀಲತೆ, ರುಚಿ ಮತ್ತು ಉದ್ಯಮಶೀಲತೆಯ ಸಂಗಮ
ಸಂತ ಫಿಲೋಮಿನಾ ಕಾಲೇಜು (ಸ್ವಾಯತ್ತ), ಪುತ್ತೂರಿನ ಬಿಸಿನೆಸ್ ಅಡ್ಮಿನಿಸ್ಟ್ರೇಷನ್ ಮತ್ತು ಪ್ರೊಫೆಷನಲ್ ಸ್ಟಡೀಸ್ ವಿಭಾಗ ಹಾಗೂ ಮ್ಯಾನೇಜ್ಮೆಂಟ್ ಅಸೋಸಿಯೇಷನ್ ವತಿಯಿಂದ ‘ಫುಡೀಪ್ರಿನಿಯರ್–ಟೇಸ್ಟ್ ದಿ ಫ್ಯೂಚರ್’ ಎಂಬ ವಿಶಿಷ್ಟ ಉದ್ಯಮಶೀಲತಾ ಕಾರ್ಯಕ್ರಮವನ್ನು ಅ. 6 ರಂದು ಎಸ್ಜೆಎಂ ಸಭಾಂಗಣದಲ್ಲಿ ಆಯೋಜಿಸಲಾಯಿತು.

ಪುತ್ತೂರು: ಆಹಾರವನ್ನು ಕೇವಲ ರುಚಿಯ ಅನುಭವಕ್ಕೆ ಸೀಮಿತಗೊಳಿಸದೆ, ಸೃಜನಶೀಲತೆ, ನವೀನತೆ ಹಾಗೂ ಉದ್ಯಮಶೀಲತೆಯ ಅವಕಾಶವಾಗಿ ಪರಿವರ್ತಿಸುವ ಉದ್ದೇಶದಿಂದ ಸಂತ ಫಿಲೋಮಿನಾ ಕಾಲೇಜು (ಸ್ವಾಯತ್ತ), ಪುತ್ತೂರಿನ ಬಿಸಿನೆಸ್ ಅಡ್ಮಿನಿಸ್ಟ್ರೇಷನ್ ಮತ್ತು ಪ್ರೊಫೆಷನಲ್ ಸ್ಟಡೀಸ್ ವಿಭಾಗ ಹಾಗೂ ಮ್ಯಾನೇಜ್ಮೆಂಟ್ ಅಸೋಸಿಯೇಷನ್ ವತಿಯಿಂದ ‘ಫುಡೀಪ್ರಿನಿಯರ್–ಟೇಸ್ಟ್ ದಿ ಫ್ಯೂಚರ್’ ಎಂಬ ವಿಶಿಷ್ಟ ಉದ್ಯಮಶೀಲತಾ ಕಾರ್ಯಕ್ರಮವನ್ನು ಅ. 6 ರಂದು ಎಸ್ಜೆಎಂ ಸಭಾಂಗಣದಲ್ಲಿ ಆಯೋಜಿಸಲಾಯಿತು.

ಆಹಾರ ಕ್ಷೇತ್ರದಲ್ಲಿ ಹೆಚ್ಚುತ್ತಿರುವ ಉದ್ಯಮಾವಕಾಶಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವುದರೊಂದಿಗೆ, ಸಣ್ಣ ಆಲೋಚನೆಯನ್ನು ಉತ್ಪನ್ನವಾಗಿ, ಉತ್ಪನ್ನವನ್ನು ಬ್ರ್ಯಾಂಡ್ ಆಗಿ ಹಾಗೂ ಬ್ರ್ಯಾಂಡ್ ಅನ್ನು ಯಶಸ್ವಿ ಉದ್ಯಮವಾಗಿ ರೂಪಿಸುವ ಚಿಂತನೆ ಬೆಳೆಸುವ ಉದ್ದೇಶದಿಂದ. ಆಹಾರ ತಯಾರಿಕೆ, ಪ್ರಸ್ತುತಿ, ಗ್ರಾಹಕರ ಆಕರ್ಷಣೆ, ಮಾರುಕಟ್ಟೆ ಹಾಗೂ ಉದ್ಯಮದ ಸಾಧ್ಯತೆಗಳ ಕುರಿತು ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಅನುಭವವನ್ನು ಒದಗಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ರೆ. ಡಾ. ಆಂಟನಿ ಪ್ರಕಾಶ್ ಮೊಂತೆರೊ ಮಾತನಾಡಿ, ವಿದ್ಯಾರ್ಥಿಗಳು ಕೇವಲ ಉದ್ಯೋಗಕ್ಕಾಗಿ ಕಾಯದೆ, ತಮ್ಮ ಜ್ಞಾನ ಮತ್ತು ಸೃಜನಶೀಲತೆಯನ್ನು ಬಳಸಿಕೊಂಡು ಉದ್ಯೋಗ ಸೃಷ್ಟಿಸುವ ಉದ್ಯಮಿಗಳಾಗಬೇಕು ಎಂದು ಕರೆ ನೀಡಿ, ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ, ನಾಯಕತ್ವ ಗುಣ ಹಾಗೂ ಉದ್ಯಮಶೀಲ ಮನೋಭಾವ ಬೆಳೆಸಲು ಸಹಕಾರಿಯಾಗುತ್ತವೆ ಎಂದರು.
ಮುಖ್ಯ ಅತಿಥಿಯಾಗಿದ್ದ ದಕ್ಷಿಣ ಕನ್ನಡ ಮ್ಯೂಚುವಲ್ ಬೆನಿಫಿಟ್ ನಿಧಿ ಲಿಮಿಟೆಡ್ನ ಅಧ್ಯಕ್ಷ ಹಾಗೂ ಪುತ್ತೂರಿನ ಹೋಟೆಲ್ ವಿಶ್ವ ರಂಜಿನಿಯ ವ್ಯವಸ್ಥಾಪಕ ಪಾಲುದಾರ ವಿ.ಜೆ. ಪುನೀತ್ ಮಾತನಾಡಿ, ಆಹಾರ ಮತ್ತು ಆತಿಥ್ಯ ಕ್ಷೇತ್ರದಲ್ಲಿ ಯುವಜನರಿಗೆ ಲಭ್ಯವಿರುವ ವಿವಿಧ ಉದ್ಯಮಾವಕಾಶಗಳ ಕುರಿತು ಮಾಹಿತಿ ನೀಡಿದರು. ಸ್ಥಳೀಯ ಸಂಪನ್ಮೂಲಗಳು, ಹೊಸ ಆಲೋಚನೆಗಳು ಹಾಗೂ ಗುಣಮಟ್ಟದ ಉತ್ಪನ್ನಗಳನ್ನು ಸಮರ್ಪಕವಾಗಿ ಬಳಸಿಕೊಂಡರೆ ಸಣ್ಣ ಪ್ರಯತ್ನವನ್ನೂ ಯಶಸ್ವಿ ಉದ್ಯಮವನ್ನಾಗಿ ಬೆಳೆಸಬಹುದು ಎಂದು ವಿದ್ಯಾರ್ಥಿಗಳನ್ನು ಪ್ರೇರೇಪಿಸಿದರು.

‘ಫುಡೀಪ್ರಿನಿಯರ್’ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ತಮ್ಮ ಸೃಜನಶೀಲತೆ, ತಂಡಕಾರ್ಯ, ವ್ಯವಹಾರಿಕ ಚಿಂತನೆ, ಸಂವಹನ ಕೌಶಲ ಹಾಗೂ ಮಾರುಕಟ್ಟೆ ಅರಿವನ್ನು ಪ್ರದರ್ಶಿಸಲು ಅವಕಾಶ ಪಡೆದು ,ಆಹಾರವನ್ನು ಕೇಂದ್ರವಾಗಿಟ್ಟುಕೊಂಡು ಹೊಸ ಆಲೋಚನೆಗಳನ್ನು ರೂಪಿಸುವ ಮೂಲಕ ಭವಿಷ್ಯದಲ್ಲಿ ಸ್ವಂತ ಉದ್ಯಮ ಆರಂಭಿಸುವ ಸಾಧ್ಯತೆಗಳ ಬಗ್ಗೆಯೂ ಅರಿವು ಪಡೆದರು.
ಕಾರ್ಯಕ್ರಮದ ಪ್ರಸ್ತಾವಿಕ ಮಾತುಗಳನ್ನು ಪ್ರಶಾಂತ್ ರೈ ಪಿ. ನೆರವೇರಿಸಿ, ಮ್ಯಾನೇಜ್ಮೆಂಟ್ ಅಸೋಸಿಯೇಷನ್ ಅಧ್ಯಕ್ಷ ಹಾಗೂ ತೃತೀಯ ಬಿಬಿಎ ವಿದ್ಯಾರ್ಥಿ ಪ್ರಕೃತ್ ಜಿ.ಕೆ. ಅತಿಥಿಗಳನ್ನು ಸ್ವಾಗತಿಸಿ, ತೃತೀಯ ಬಿಬಿಎ ವಿದ್ಯಾರ್ಥಿ ಭವತ್ ಬಿ.ಎಲ್. ವಂದನಾರ್ಪಣೆ ಸಲ್ಲಿಸಿ, ದ್ವಿತೀಯ ಬಿಬಿಎ (ಬಿಸಿನೆಸ್ ಅನಾಲಿಟಿಕ್ಸ್) ವಿದ್ಯಾರ್ಥಿನಿ ಸಮೃದ್ಧಿ ಚೌಟಾ ಕಾರ್ಯಕ್ರಮ ನಿರೂಪಿಸಿದರು.ಬಿಸಿನೆಸ್ ಅಡ್ಮಿನಿಸ್ಟ್ರೇಷನ್ ಮತ್ತು ಪ್ರೊಫೆಷನಲ್ ಸ್ಟಡೀಸ್ ವಿಭಾಗದ ಡೀನ್ ಹಾಗೂ ಮುಖ್ಯಸ್ಥ ಡಾ. ರಾಧಾಕೃಷ್ಣ ಗೌಡ ವಿ. ಉಪಸ್ಥಿತರಿದ್ದರು.
‘ಟೇಸ್ಟ್ ದಿ ಫ್ಯೂಚರ್’ ಆಶಯದೊಂದಿಗೆ ನಡೆದ ‘ಫುಡೀಪ್ರಿನಿಯರ್’ ಕಾರ್ಯಕ್ರಮವು ವಿದ್ಯಾರ್ಥಿಗಳಿಗೆ ಆಹಾರದ ರುಚಿಯೊಂದಿಗೆ ಉದ್ಯಮದ ರುಚಿಯನ್ನೂ ಪರಿಚಯಿಸಿ, “ಒಂದು ಆಲೋಚನೆ, ಒಂದು ಪ್ರಯತ್ನ, ಒಂದು ಉದ್ಯಮ” ಎಂಬ ಮನೋಭಾವವನ್ನು ವಿದ್ಯಾರ್ಥಿಗಳಲ್ಲಿ ಮೂಡಿಸುವಲ್ಲಿ ಯಶಸ್ವಿಯಾಯಿತು.
ಶಿಕ್ಷಣ
Vivekananda-ಜಿಲ್ಲಾ ಮಟ್ಟದ ಕರಾಟೆ ಪಂದ್ಯಾಟ -ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಸಾಧನೆ
ಶಾಲಾ ಶಿಕ್ಷಣ ಇಲಾಖೆ, ಪದವಿಪೂರ್ವ ವಿಭಾಗ ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆಯು ಪದವಿಪೂರ್ವ ಕಾಲೇಜು, ತುಂಬೆ ಇಲ್ಲಿ ನಡೆಯಿತು. ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿ ಪದಕಗಳನ್ನು ಪಡೆದುಕೊಂಡಿರುತ್ತಾರೆ.
ಶಾಲಾ ಶಿಕ್ಷಣ ಇಲಾಖೆ, ಪದವಿಪೂರ್ವ ವಿಭಾಗ ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆಯು ಪದವಿಪೂರ್ವ ಕಾಲೇಜು, ತುಂಬೆ ಇಲ್ಲಿ ನಡೆಯಿತು. ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿ ಪದಕಗಳನ್ನು ಪಡೆದುಕೊಂಡಿರುತ್ತಾರೆ.
ಬಾಲಕಿಯರ ತಂಡದಲ್ಲಿ ಪ್ರಥಮ ವಿಜ್ಞಾನ ವಿಭಾಗದ ಖುಷಿ ೪೪ ಕೆ.ಜಿ, ದ್ರಿಶ್ಯ 68 ಕೆ .ಜಿ ವಿಭಾಗ ಬೆಳ್ಳಿ ಪದಕ, ಪ್ರಥಮ ವಾಣಿಜ್ಯ ವಿಭಾಗದ ಸಾನ್ವಿ 64 ಕೆ. ಜಿ ವಿಭಾಗ ಕಂಚಿನ ಪದಕ. ಬಾಲಕರ ವಿಭಾಗದಲ್ಲಿ ದ್ವಿತೀಯ ವಿಜ್ಞಾನ ವಿಭಾಗದ ಘನಶ್ಯಾಮ್ ೫೦ ಕೆ.ಜಿ ವಿಭಾಗ ಬೆಳ್ಳಿ ಪದಕ ಪಡೆದಿರುತ್ತಾರೆ.
ತಂಡವು ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ರವಿಶಂಕರ್ ,ಡಾ .ಜ್ಯೋತಿ ಮತ್ತು ಯತೀಶ್ ಇವರ ನೇತೃತ್ವದಲ್ಲಿ ತರಬೇತಿಯನ್ನು ಪಡೆದಿರುತ್ತಾರೆ .ಇವರನ್ನು ಕಾಲೇಜಿನ ಆಡಳಿತ ಮಂಡಳಿ ಪ್ರಾಂಶುಪಾಲರು ಹಾಗೂ ಉಪನ್ಯಾಸಕ ,ಉಪನ್ಯಾಸಕೇತರ ವೃಂದದವರು ಅಭಿನಂದಿಸಿರುತ್ತಾರೆ.
ಶಿಕ್ಷಣ
Vivekananda-ಪುತ್ತೂರಿನ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಇಬ್ಬರು ಉಪನ್ಯಾಸಕರಿಗೆ ಡಾಕ್ಟರೇಟ್ ಪದವಿ
ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಇಬ್ಬರು ಸಹಾಯಕ ಪ್ರಾಧ್ಯಾಪಕರು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪದವಿಯನ್ನು ಪಡೆದುಕೊಂಡಿದ್ದಾರೆ.
ಪುತ್ತೂರು: ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಇಬ್ಬರು ಸಹಾಯಕ ಪ್ರಾಧ್ಯಾಪಕರು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪದವಿಯನ್ನು ಪಡೆದುಕೊಂಡಿದ್ದಾರೆ.
ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ 14 ವರ್ಷಗಳ ಬೋಧನಾನುಭವ ಹೊಂದಿರುವ ಸಹಾಯಕ ಪ್ರಾಧ್ಯಾಪಕ ಪ್ರಮೋದ್ ಕುಮಾರ್.ಪಿ.ಎಮ್ ಅರೇಕಾ ಪ್ಲಾಂಟ್ ಡಿಸೀಸ್ ಐಡೆಂಟಿಫಿಕೇಶನ್ ಎಂಡ್ ಕ್ಲಾಸಿಫಿಕೇಶನ್ ಯೂಸಿಂಗ್ ಡೀಪ್ ಲರ್ನಿಂಗ್ ಟೆಕ್ನಿಕ್ಸ್(Areca Plant Disease identification and classification using deep learning techniques) ಎನ್ನುವ ವಿಷಯದ ಬಗ್ಗೆ ತಿಪಟೂರಿನ ಕಲ್ಪತರು ಇನ್ಸಿ÷್ಟಟ್ಯೂಟ್ ಆಫ್ ಟೆಕ್ನಾಲಜಿಯ ಡಾ.ರವಿಪ್ರಕಾಶ್.ಎಮ್.ಎಲ್ ಅವರ ಮಾರ್ಗದರ್ಶನದಲ್ಲಿ ಡಾಕ್ಟರೇಟ್ ಪದವಿಯನ್ನು ಪಡೆದುಕೊಂಡಿದ್ದಾರೆ.
ಶ್ರೀಮತಿ ಅಕ್ಷಯ.ಡಿ.ಶೆಟ್ಟಿ ಇವರು ಡಿಸೈನ್ ಎಂಡ್ ವ್ಯಾಲಿಡೇಶನ್ ಆಫ್ ಗ್ಯಾಲ್ವೇನಿಕ್ ಸ್ಕಿನ್ ರೆಸ್ಪೊನ್ಸ್ ಡಿವೈಸ್ ಫಾರ್ ಟ್ರೀಟ್ಮೆಂಟ್ ಆಫ್ ನ್ಯೂರೋಲಾಜಿಕಲ್ ಎಂಡ್ ಸೈಕಿಯಾಟ್ರಿಕ್ ಡಿಸಾರ್ಡರ್ಸ್ (Design and Validation of galvanic skin response (GSR) device for treatment of neurological and psychiatric disorders) ಎನ್ನುವ ವಿಷಯದ ಬಗ್ಗೆ ಎಸ್.ಇ.ಎ ಕಾಲೇಜ್ ಆಫ್ ಇಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಪ್ರೊಫೆಸರ್ ಹಾಗೂ ಡೀನ್(ಆರ್&ಡಿ) ಆಗಿರುವ ಡಾ.ಉಷಾ ದೇಸಾಯಿ ಮತ್ತು ಸೆಂಟ್ರಲ್ ಯುನಿವರ್ಸಿಟಿ ಹರ್ಯಾಣದ ಇಲೆಕ್ಟ್ರಿಕಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಹಾಗೂ ಪ್ರೊಫೆಸರ್ ಡಾ. ಆಕಾಶ್ ಸಕ್ಸೇನ ಅವರ ಮಾರ್ಗದರ್ಶನದಲ್ಲಿ ಪಿಎಚ್ಡಿ ಪದವಿಯನ್ನು ಪಡೆದುಕೊಂಡಿದ್ದಾರೆ.
ಇವರು ಆರ್ಟಿಫೀಶಿಯಲ್ ಇಂಟೆಲಿಜೆನ್ಸ್ ಎಂಡ್ ಮೆಶಿನ್ ಲರ್ನಿಂಗ್ ವಿಭಾಗದಲ್ಲಿ 9 ವರ್ಷಗಳಿಂದ ಸಹಾಯಕ ಪ್ರಾಧ್ಯಾಪಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಇವರ ಸಾಧನೆಗೆ ಆಡಳಿತ ಮಂಡಳಿ, ಉಪನ್ಯಾಸಕರು, ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ ಎಂದು ಪ್ರಭಾರ ಪ್ರಾಂಶುಪಾಲ ಡಾ.ಶ್ರೀಕಾಂತ್ ರಾವ್.ಎಸ್.ಕೆ ತಿಳಿಸಿದ್ದಾರೆ.
-
Uncategorized23 hours agoLawyer Amrutesh-ಸೌಜನ್ಯ ಪ್ರಕರಣ ಮರುತನಿಖೆ : ಸಂತೋಷ್ ರಾವ್ ವಿರುದ್ಧ ಬಲವಾದ ಸಾಕ್ಷ್ಯಗಳಿವೆ: ಧಾರ್ಮಿಕ ಕ್ಷೇತ್ರದ ಮೇಲೆ ಷಡ್ಯಂತ್ರ ನಡೆಯುತ್ತಿದೆ : ಹೈಕೋರ್ಟ್ ವಕೀಲ ಅಮೃತೇಶ್
-
ಮಂಗಳೂರು24 hours agoRaghupti Bhat-2028ರ ಚುನಾವಣೆಯಲ್ಲಿ ಸ್ಪರ್ಧೆ ಖಚಿತ; ಕಾಂಗ್ರೆಸ್ ಸೇರ್ಪಡೆ ಬಗ್ಗೆ ಏನು ಹೇಳಿದ್ರು ರಘುಪತಿ ಭಟ್
-
ರಾಜಕೀಯ22 hours agoSiddaramaiah-ಸ್ಟಿಂಗ್ ವಿಡಿಯೋ ಪ್ರಸಾರಕ್ಕೆ ಬ್ರೇಕ್ ಹಾಕಲು ಸಿದ್ದರಾಮಯ್ಯ ಕೋರ್ಟ್ ಮೊರೆ
-
ನಿಧನ ವಾರ್ತೆ23 hours agoSubramanya-ಸರ್ಪಸಂಸ್ಕಾರ ಸೇವೆಗೆ ಬಂದ ಯಾತ್ರಾರ್ಥಿಯ ಮೃತದೇಹ ಕುಮಾರಧಾರ ನದಿಯಲ್ಲಿ ಪತ್ತೆ
-
ಬಿಗ್ ನ್ಯೂಸ್24 hours agoPuttur-ಪುತ್ತೂರಿನಲ್ಲಿ ಜಯದೇವ, ಕಿದ್ವಾಯಿ, ನಿಮ್ಹಾನ್ಸ್ ಘಟಕ ಸ್ಥಾಪನೆಗೆ ಹಕ್ಕೊತ್ತಾಯ; 1 ಲಕ್ಷ ಸಹಿ ಸಂಗ್ರಹದ ಗುರಿ; ಸೇಡಿಯಾಪು, ಆರ್ಯಾಪುವಿನಲ್ಲಿ ಜಮೀನು ಗುರುತು
-
ದಕ್ಷಿಣ ಕನ್ನಡ7 hours ago
ಕಳವು ಮಾಡಿ ಮನೆಗೆ ಬೆಂಕಿ ಹಚ್ಚಿದ ಶಂಕೆ: ಪುತ್ತೂರಿನಲ್ಲಿ ಪ್ರಕರಣ ದಾಖಲು
-
ಮಂಗಳೂರು23 hours agoDakshina Kannada-ದಕ್ಷಿಣ ಕನ್ನಡ ಜಿಲ್ಲೆಗೆ ‘ಮಂಗಳೂರು ಜಿಲ್ಲೆ’ ಎಂದು ಮರುನಾಮಕರಣ ಪ್ರಸ್ತಾವ: ಸಾರ್ವಜನಿಕ ಅಭಿಪ್ರಾಯ ಆಹ್ವಾನಿಸಿದ ಸರ್ಕಾರ
-
ಅಂತರ ರಾಜ್ಯ5 hours agoRestaurant-ನೀರಿನ ಬಾಟ್ಲಿಗೆ ₹2 ಹೆಚ್ಚುವರಿ ವಸೂಲಿ; ರೆಸ್ಟೋರೆಂಟ್ಗೆ ₹1 ಲಕ್ಷ ದಂಡ..!


















