ಕೊಡಗು
Kodagu | ಕೊಡಗು : ಕತ್ತಿಯಿಂದ ಕಡಿದು ಯುವತಿಯ ಬರ್ಬರ ಹತ್ಯೆ ಮಾಡಿದ ಆರೋಪಿ ಶವ ಕೆರೆಯಲ್ಲಿ ಪತ್ತೆ
ಕೊಡಗು: ವಿರಾಜಪೇಟೆ ತಾಲೂಕಿನ ನಾಂಗಾಲ ಗ್ರಾಮದಲ್ಲಿ ಕತ್ತಿಯಿಂದ ಕಡಿದು ಯುವತಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಆರೋಪಿ ತಿಮ್ಮಯ್ಯ ಶವ ಅದೇ ಗ್ರಾಮದ (Kodagu) ಕೆರೆಯಲ್ಲಿ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.
ನಾಂಗಲ ಗ್ರಾಮದ ಬುಟ್ಟಿಯಂಡ ಮಾದಪ್ಪ, ಸುನಂದ ಅವರ ಪುತ್ರಿ ಆರತಿ (24) ಯನ್ನು ಜ.16ರಂದು ಬರ್ಬರವಾಗಿ ಕೊಲೆ ಮಾಡಲಾಗಿತ್ತು.
ಭಾನುವಾರ ರಾತ್ರಿ ಯುವತಿಗೆ ಮೊಬೈಲ್ ಕರೆ ಮಾಡಿ ಮನೆಯಿಂದ ಹೊರಗೆ ಕರೆಸಿಕೊಂಡ ಆರೋಪಿಯು ಆಕೆಯ ಮನೆಯ ಸಮೀಪವೆ ಕತ್ತಿಯಿಂದ ಕುತ್ತಿಗೆ ಹಾಗೂ ದೇಹದ ಇತರ ಭಾಗಗಳ ಮೇಲೆ ಹಲ್ಲೆ ಮಾಡಿ ಕೊಂದು ಹಾಕಿದ್ದ.
ನಂತರ ತನ್ನ ಮನೆಗೆ ತೆರಳಿ ಕ್ರಿಮಿನಾಶಕ ಸೇವಿಸಿ ಕೆರೆಗೆ ಬಿದ್ದಿದ್ದ. ಕೆರೆಯ ದಡದಲ್ಲಿ ಅರ್ಧ ಖಾಲಿಯಾದ ಕ್ರಿಮಿನಾಶಕದ ಬಾಟಲಿ, ಚಪ್ಪಲಿ ಹಾಗೂ ಮೊಬೈಲ್ ಪತ್ತೆಯಾಗಿದ್ದು, ಎರಡು ದಿನಗಳಿಂದ ಶವಕ್ಕಾಗಿ ಶೋಧ ಕಾರ್ಯ ನಡೆಯುತ್ತಿತ್ತು.
ಜ.18ರ ಬೆಳಿಗ್ಗೆ ಶವ ಕೆರೆಯಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೆರೆ ಬಳಿ ಮೂರು ಬಾರಿ ಬಂದಿತ್ತು ಶ್ವಾನ..!
ಕೊಡಗು
Madikeri-ಮಡಿಕೇರಿ: ಅಡಿಕೆ ಹಾಳೆ ತಟ್ಟೆ, ಪೇಪರ್ ಕಪ್ ನಿಷೇಧ: ನಗರಸಭೆ ಆದೇಶಕ್ಕೆ ವ್ಯಾಪಾರಸ್ಥರು ಶಾಕ್..!
ಕೊಡಗಿನ ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಪರಿಸರ ಸಂರಕ್ಷಣೆ ಮತ್ತು ಕಸ ವಿಲೇವಾರಿ ಸುಧಾರಿಸುವ ನಿಟ್ಟಿನಲ್ಲಿ ನಗರಸಭೆಯು ಮತ್ತೊಂದು ಕಠಿಣ ಕ್ರಮ ಕೈಗೊಂಡಿದೆ. ನಗರಸಭೆ ವ್ಯಾಪ್ತಿಯಲ್ಲಿ ಇನ್ನು ಮುಂದೆ ಅಡಿಕೆ ಹಾಳೆ ತಟ್ಟೆಗಳು, ಪೇಪರ್ ಕಪ್ ಹಾಗೂ ಪೇಪರ್ ಪ್ಲೇಟ್ಗಳ ಮಾರಾಟ ಮತ್ತು ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಿ ನಗರಸಭೆ ಆಡಳಿತ ಮಂಡಳಿ ಮತ್ತು ಪೌರಾಯುಕ್ತರು ಆದೇಶ ಹೊರಡಿಸಿದ್ದಾರೆ.
ಮಡಿಕೇರಿ: ಕೊಡಗಿನ ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಪರಿಸರ ಸಂರಕ್ಷಣೆ ಮತ್ತು ಕಸ ವಿಲೇವಾರಿ ಸುಧಾರಿಸುವ ನಿಟ್ಟಿನಲ್ಲಿ ನಗರಸಭೆಯು ಮತ್ತೊಂದು ಕಠಿಣ ಕ್ರಮ ಕೈಗೊಂಡಿದೆ. ನಗರಸಭೆ ವ್ಯಾಪ್ತಿಯಲ್ಲಿ ಇನ್ನು ಮುಂದೆ ಅಡಿಕೆ ಹಾಳೆ ತಟ್ಟೆಗಳು, ಪೇಪರ್ ಕಪ್ ಹಾಗೂ ಪೇಪರ್ ಪ್ಲೇಟ್ಗಳ ಮಾರಾಟ ಮತ್ತು ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಿ ನಗರಸಭೆ ಆಡಳಿತ ಮಂಡಳಿ ಮತ್ತು ಪೌರಾಯುಕ್ತರು ಆದೇಶ ಹೊರಡಿಸಿದ್ದಾರೆ.
ನಿಷೇಧಕ್ಕೆ ಕಾರಣವೇನು?:
ನಗರಸಭೆಯ ಮಾಹಿತಿ ಪ್ರಕಾರ, ಪೇಪರ್ ಕಪ್ ಮತ್ತು ಅಡಿಕೆ ಹಾಳೆ ತಟ್ಟೆಗಳು ನೈಸರ್ಗಿಕವಾಗಿ ಕರಗುವ ವಸ್ತುಗಳೇ ಆದರೂ, ಅವುಗಳು ಸಂಪೂರ್ಣವಾಗಿ ಮಣ್ಣಿನಲ್ಲಿ ವಿಲೀನವಾಗಲು ದೀರ್ಘ ಸಮಯ ತೆಗೆದುಕೊಳ್ಳುತ್ತವೆ. ಇದರಿಂದ ನಗರದ ಕಸ ವಿಲೇವಾರಿ ಪ್ರಕ್ರಿಯೆಯಲ್ಲಿ ಸಮಸ್ಯೆಗಳು ಉಂಟಾಗುತ್ತಿವೆ. ಈ ಹಿನ್ನೆಲೆಯಲ್ಲಿ ನಗರಸಭೆಯ ಸಭೆಯಲ್ಲಿ ಒಮ್ಮತದ ತೀರ್ಮಾನ ಕೈಗೊಂಡು ಈ ನಿಷೇಧ ಜಾರಿಗೊಳಿಸಲಾಗಿದೆ. ಇತ್ತೀಚೆಗಷ್ಟೇ ನಗರಸಭೆಯು ಒಂದು ಮತ್ತು ಅರ್ಧ ಲೀಟರ್ ನೀರಿನ ಬಾಟಲಿಗಳನ್ನು ನಿಷೇಧಿಸಿ ಗಮನ ಸೆಳೆದಿತ್ತು.
ಸಾರ್ವಜನಿಕರ ಮತ್ತು ವ್ಯಾಪಾರಸ್ಥರ ಆಕ್ರೋಶ:
ನಗರಸಭೆಯ ಈ ಹೊಸ ಆದೇಶಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ನೀರಿನ ಬಾಟಲಿ ನಿಷೇಧಕ್ಕೆ ಬೆಂಬಲ ನೀಡಿದ್ದ ಜನತೆ, ಅಡಿಕೆ ಹಾಳೆ ಮತ್ತು ಪೇಪರ್ ತಟ್ಟೆಗಳ ನಿಷೇಧವನ್ನು ಖಂಡಿಸಿದ್ದಾರೆ.
“ಅಡಿಕೆ ಹಾಳೆ ಮತ್ತು ಪೇಪರ್ ಉತ್ಪನ್ನಗಳು ನೈಸರ್ಗಿಕವಾಗಿದ್ದು, ಮಣ್ಣಿನಲ್ಲಿ ಸುಲಭವಾಗಿ ಕರಗುತ್ತವೆ. ಮದುವೆ, ದೇವಸ್ಥಾನಗಳ ಉತ್ಸವ, ಕ್ರೀಡಾಕೂಟ ಹಾಗೂ ಸರ್ಕಾರಿ ಕಾರ್ಯಕ್ರಮಗಳಲ್ಲಿ ಇವುಗಳ ಬಳಕೆಯೇ ಹೆಚ್ಚು. ಇವುಗಳನ್ನು ನಿಷೇಧಿಸುವುದು ಎಷ್ಟರ ಮಟ್ಟಿಗೆ ಸರಿ?” ಎಂದು ವ್ಯಾಪಾರಸ್ಥರು ಪ್ರಶ್ನಿಸಿದ್ದಾರೆ. ಅಷ್ಟೇ ಅಲ್ಲದೆ, “ಸ್ಥಳೀಯವಾಗಿ ಮಾರಾಟ ನಿಷೇಧಿಸಿದರೂ ಪ್ರವಾಸಿಗರು ಹೊರಗಿನಿಂದ ಅಡಿಕೆ ತಟ್ಟೆ, ಪೇಪರ್ ಕಪ್ಗಳನ್ನು ತರುತ್ತಾರೆ, ಅವರನ್ನು ತಡೆಯುವುದು ಹೇಗೆ?” ಎಂದು ಜನರು ನಗರಸಭೆಯನ್ನು ಪ್ರಶ್ನಿಸುತ್ತಿದ್ದಾರೆ.
ಉಡುಪಿ
Helpline-ನೇಪಾಲ ಜಲಪ್ರಳಯ: ಉಡುಪಿ, ಕೊಡಗು ಯಾತ್ರಿಕರ ರಕ್ಷಣೆಗೆ ಜಿಲ್ಲಾಡಳಿತದಿಂದ ಸಹಾಯವಾಣಿ ಆರಂಭ
ನೇಪಾಲ ಮತ್ತು ಟಿಬೆಟ್ ಗಡಿಭಾಗದಲ್ಲಿ ಸಂಭವಿಸಿರುವ ಭೀಕರ ಜಲಪ್ರಳಯದಿಂದಾಗಿ ಉಡುಪಿ ಮತ್ತು ಕೊಡಗು ಜಿಲ್ಲೆಯ ಹಲವು ಪ್ರವಾಸಿಗರು ಹಾಗೂ ಯಾತ್ರಿಕರು ಅಲ್ಲಿ ಸಿಲುಕಿಕೊಂಡಿದ್ದಾರೆ. ಇವರನ್ನು ಸುರಕ್ಷಿತವಾಗಿ ಮರಳಿ ಕರೆತರಲು ಜಿಲ್ಲಾಡಳಿತಗಳು ಸಮರೋಪಾದಿಯಲ್ಲಿ ಕಾರ್ಯಪ್ರವೃತ್ತವಾಗಿದ್ದು, ತುರ್ತು ಸಹಾಯವಾಣಿಗಳನ್ನು ಆರಂಭಿಸಿವೆ.
ಉಡುಪಿ/ಮಡಿಕೇರಿ: ನೇಪಾಲ ಮತ್ತು ಟಿಬೆಟ್ ಗಡಿಭಾಗದಲ್ಲಿ ಸಂಭವಿಸಿರುವ ಭೀಕರ ಜಲಪ್ರಳಯದಿಂದಾಗಿ ಉಡುಪಿ ಮತ್ತು ಕೊಡಗು ಜಿಲ್ಲೆಯ ಹಲವು ಪ್ರವಾಸಿಗರು ಹಾಗೂ ಯಾತ್ರಿಕರು ಅಲ್ಲಿ ಸಿಲುಕಿಕೊಂಡಿದ್ದಾರೆ. ಇವರನ್ನು ಸುರಕ್ಷಿತವಾಗಿ ಮರಳಿ ಕರೆತರಲು ಜಿಲ್ಲಾಡಳಿತಗಳು ಸಮರೋಪಾದಿಯಲ್ಲಿ ಕಾರ್ಯಪ್ರವೃತ್ತವಾಗಿದ್ದು, ತುರ್ತು ಸಹಾಯವಾಣಿಗಳನ್ನು ಆರಂಭಿಸಿವೆ.
ಉಡುಪಿ ಜಿಲ್ಲೆಯವರಿಗೆ ಸೂಚನೆ:
ಉಡುಪಿ ಜಿಲ್ಲೆಯಿಂದ ಪ್ರವಾಸ ಅಥವಾ ಯಾತ್ರೆಗೆ ತೆರಳಿ ನೇಪಾಲದ ನೆರೆ ಪೀಡಿತ ಪ್ರದೇಶಗಳಲ್ಲಿ ಸಿಲುಕಿರುವವರ ವಿವರಗಳನ್ನು ತಕ್ಷಣವೇ ಜಿಲ್ಲಾಡಳಿತಕ್ಕೆ ನೀಡಲು ಕೋರಲಾಗಿದೆ. ಸಂಕಷ್ಟದಲ್ಲಿರುವವರ ಹೆಸರು, ವಿಳಾಸ, ಪ್ರಸ್ತುತ ಇರುವ ನಿಖರ ಸ್ಥಳ ಮತ್ತು ಮೊಬೈಲ್ ಸಂಖ್ಯೆಯನ್ನು ಕೆಳಗಿನ ಸಂಖ್ಯೆಗಳಿಗೆ ತಿಳಿಸಬಹುದು:
ಸಹಾಯವಾಣಿ: 1077
ದೂರವಾಣಿ: 0820-2574802
ಕೊಡಗು ಜಿಲ್ಲೆಯವರಿಗೆ ಸೂಚನೆ:
ಕೊಡಗು ಜಿಲ್ಲೆಯ ಯಾರಾದರೂ ಯಾತ್ರಿಕರು ನೇಪಾಲದ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸಿಲುಕಿದ್ದರೆ, ಅವರ ಕುಟುಂಬದವರು ತಕ್ಷಣವೇ ಜಿಲ್ಲಾ ವಿಪತ್ತು ನಿರ್ವಹಣಾ ಕೇಂದ್ರಕ್ಕೆ ಮಾಹಿತಿ ನೀಡಬೇಕು. ಮಾಹಿತಿಗಾಗಿ ಈ ಕೆಳಗಿನ ಸಂಖ್ಯೆಗಳನ್ನು ಸಂಪರ್ಕಿಸಿ:
ದೂರವಾಣಿ ಸಂಖ್ಯೆಗಳು: 08272-221077, 08272-221099
ಮೊಬೈಲ್/ವಾಟ್ಸಾಪ್ ಸಂಖ್ಯೆ: 8550001077
ಸಂಕಷ್ಟದಲ್ಲಿರುವವರನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕರೆತರಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.
ಕೊಡಗು
Kodagu-ಕೊಡಗಿನಲ್ಲಿ ವರುಣನ ಅಬ್ಬರ: ಮರಳಿ ಮೈದುಂಬಿದ ಭಾಗಮಂಡಲದ ತ್ರಿವೇಣಿ ಸಂಗಮ..!
ಕೊಡಗು ಜಿಲ್ಲೆಯಾದ್ಯಂತ ಸೋಮವಾರ ರಾತ್ರಿಯಿಂದ ವರುಣನ ಆರ್ಭಟ ಮರುಕಳಿಸಿದ್ದು, ಜಿಲ್ಲೆಯ ಜನಜೀವನ ಅಸ್ತವ್ಯಸ್ತಗೊಂಡಿದೆ. ಸತತವಾಗಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಪವಿತ್ರ ಕ್ಷೇತ್ರ ಭಾಗಮಂಡಲದ ತ್ರಿವೇಣಿ ಸಂಗಮ ಮತ್ತೊಮ್ಮೆ ಮೈದುಂಬಿ ಭರ್ತಿಯಾಗಿದೆ.
ಮಡಿಕೇರಿ: ಕೊಡಗು ಜಿಲ್ಲೆಯಾದ್ಯಂತ ಸೋಮವಾರ ರಾತ್ರಿಯಿಂದ ವರುಣನ ಆರ್ಭಟ ಮರುಕಳಿಸಿದ್ದು, ಜಿಲ್ಲೆಯ ಜನಜೀವನ ಅಸ್ತವ್ಯಸ್ತಗೊಂಡಿದೆ. ಸತತವಾಗಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಪವಿತ್ರ ಕ್ಷೇತ್ರ ಭಾಗಮಂಡಲದ ತ್ರಿವೇಣಿ ಸಂಗಮ ಮತ್ತೊಮ್ಮೆ ಮೈದುಂಬಿ ಭರ್ತಿಯಾಗಿದೆ.
ಜಲಾವೃತಗೊಂಡ ತಟದ ಪ್ರದೇಶಗಳು:
ನದಿ ನೀರಿನ ಮಟ್ಟ ಏರಿಕೆಯಾಗಿರುವುದರಿಂದ ತಟದಲ್ಲಿರುವ ಪ್ರವಾಸಿ ಉದ್ಯಾನವನ ಹಾಗೂ ಸುತ್ತಮುತ್ತಲಿನ ಕೃಷಿ ಗದ್ದೆಗಳಿಗೆ ನೀರು ನುಗ್ಗಿದೆ. ನದಿ ಪಾತ್ರದ ನಿವಾಸಿಗಳು ಮತ್ತು ರೈತರಲ್ಲಿ ಪ್ರವಾಹದ ಭೀತಿ ಎದುರಾಗಿದೆ.
ಮಡಿಕೇರಿ, ವಿರಾಜಪೇಟೆ, ಬಿರುನಾಣಿ ಭಾಗದಲ್ಲಿ ಮಳೆ ಬಿರುಸಾಗಿದ್ದರೆ ಸೋಮವಾರಪೇಟೆ ಭಾಗದಲ್ಲಿ ನಿರಂತರ ಸಾಧಾರಣ ಮಳೆ ಸುರಿಯುತ್ತಿದೆ.
-
ಕಾರ್ಯಕ್ರಮಗಳು21 hours agoPuttur-ಪುತ್ತೂರು: ಅ.16ರಂದು ಪ್ರವೀಣ್ ಕ್ಯಾಪಿಟಲ್ನ ನವೀಕೃತ ಪ್ರಧಾನ ಕಚೇರಿ ಉದ್ಘಾಟನೆ
-
ಸ್ಥಳೀಯ4 hours agoNavoor clinic-ನಾವೂರು ಕ್ಲಿನಿಕ್ಗೆ ಬೆಂಕಿ ಪ್ರಕರಣ: ರವಿ ಪೂಜಾರಿ ಬಂಧನ, ಇಬ್ಬರು ಶಂಕಿತರ ವಿಚಾರಣೆ
-
ಕಾರ್ಯಕ್ರಮಗಳು21 hours ago‘Havells Experience Center-ನಾಳೆ (ಅ. 15) ರಂದು ಮೈತ್ರಿ ಎಲೆಕ್ಟ್ರಿಕ್ನಲ್ಲಿ ʻಹ್ಯಾವೆಲ್ಸ್ ಎಕ್ಸ್ಪೀರಿಯನ್ಸ್ ಸೆಂಟರ್ʼ ಶುಭಾರಂಭ
-
ಕಾರ್ಯಕ್ರಮಗಳು21 hours agoPuttur-ಪುತ್ತೂರು: ಅ.15ರಂದು ‘ಮೈ ಡ್ರೆಸ್ ಕೋಡ್’ ನೂತನ ಮಳಿಗೆ ಗ್ರಾಂಡ್ ರೀ-ಓಪನಿಂಗ್
-
Uncategorized21 hours agoAmbika Vidyalaya-ಅಂಬಿಕಾ ವಿದ್ಯಾಲಯ ಸಿಬಿಎಸ್ಇ ವಿದ್ಯಾರ್ಥಿಗಳಿಗೆ ರಾಷ್ಟ್ರ ಮಟ್ಟದಲ್ಲಿ ಬಹುಮಾನ
-
ಶಿಕ್ಷಣ20 hours agoSanidhya S. Rao-ರಾಷ್ಟ್ರಮಟ್ಟದ ಚೆಸ್ ಸ್ಪರ್ಧೆಯಲ್ಲಿ ವಿವೇಕಾನಂದ ಸೆಂಟ್ರಲ್ ಸ್ಕೂಲ್ನ ಸಾನಿಧ್ಯ ಎಸ್. ರಾವ್ಗೆ ಪ್ರಥಮ ಸ್ಥಾನ; SGFI ಸ್ಪರ್ಧೆಗೆ ಆಯ್ಕೆ
-
ಬಿಗ್ ನ್ಯೂಸ್4 hours agoRenukashwami murder case-ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಮಹತ್ವದ ತಿರುವು: ಮಾಫಿ ಸಾಕ್ಷಿ ಅರ್ಜಿ ವಾಪಸ್ ಪಡೆದ ಎ10 ವಿನಯ್
-
ಅಂತರ ರಾಜ್ಯ4 hours agoMurder case-ಮೀರತ್ ಬ್ಲೂ ಡ್ರಮ್ ಕೊಲೆ ಪ್ರಕರಣ: ಪತ್ನಿ ಮುಸ್ಕಾನ್, ಪ್ರಿಯಕರ ಸಾಹಿಲ್ಗೆ ಗಲ್ಲು ಶಿಕ್ಷೆ..!




















