Connect with us

ಬಿಗ್ ನ್ಯೂಸ್

ಸರ್ಕಾರದ ನೀತಿ, ಕಚ್ಚಾವಸ್ತು ದರ ಏರಿಕೆ ಮತ್ತು 4 ವರ್ಷಗಳ ಹಿಂದಿನ ಎಸ್.ಆರ್ ರೇಟ್ ಹಾಗೂ ಶೇ.40 ವರೆಗೆ ಏರಿಕೆ ಆದ ಲಂಚ ಬಗ್ಗೆ ಪುತ್ತೂರು ಗುತ್ತಿಗೆದಾರರ ಸಂಘದ ಸಭೆಯಲ್ಲಿ ತೀವ್ರ ಆಕ್ರೋಶ

Published

on



Ad Widget

Ad Widget

Ad Widget

Ad Widget

Ad Widget

Ad Widget

Ad Widget

Ad Widget

ಪುತ್ತೂರು: ಸರ್ಕಾರದ ನೀತಿಯಿಂದ ಕಚ್ಚಾವಸ್ತು ಬೆಲೆ ಬಾರಿ ಏರಿಕೆ ಆದರೂ ಎಸ್.ಆರ್ ದರದಲ್ಲಿ ಏರಿಕೆ ಮಾಡದ ಹಾಗೂ 40% ಏರಿಕೆ ಆದ ಲಂಚ ಬಗ್ಗೆ ಪುತ್ತೂರಿನ ಗುತ್ತಿಗೆದಾರರರು ಆಕ್ರೋಶ ವ್ಯಕ್ತಪಡಿಸಿದರು. 

Ad Widget

Ad Widget

Ad Widget alt="Ad Widget"/>

Ad Widget

ಸಣ್ಣ ಸಣ್ಣ  ಕಾಮಗಾರಿಗಳನ್ನು ಪಡೆದುಕೊಂಡು ಕೆಲಸ ನಿರ್ವಹಿಸುತ್ತಿದ್ದವರಿಗೆ ಸರ್ಕಾರದ ನೀತಿಗಳಿಂದಾಗಿ ಕೆಲಸ ನಿರ್ವಹಿಸಲಾಗದ ಸ್ಥಿತಿ ನಿರ್ಮಾಣವಾಗಿದೆ. ಇದರ ಜೊತೆಗೆ ಕಚ್ಚಾವಸ್ತುಗಳ ದರ ಏರಿಕೆಯಾದರೂ ಎಸ್.ಆರ್ ದರ ಕಡಿಮೆ, ಹಿಂದಿನ ಕಾಮಗಾರಿಗಳ ಬಿಲ್ ಬಾಕಿ, ಕಾಮಗಾರಿ ಹಂಚಿಕೆಯಲ್ಲೂ ಭ್ರಷ್ಟಾಚಾರ, ಶೇ.40ಕ್ಕೆ ಏರಿದ ಲಂಚ ವ್ಯವಹಾರಗಳ  ಸಮಸ್ಯೆಗಳಿಗೆ ಪರಿಹಾರ ಕುರಿತು ಪುತ್ತೂರು ಗುತ್ತಿಗೆದಾರರ ಸಂಘದಿಂದ ನ.17ರಂದು ಬೈಪಾಸ್ ಹೊಟೇಲ್ ಉದಯಗಿರಿ ರೆಸಿಡೆನ್ಸಿಯ ಭಾಗೀರಥಿ ಸಭಾಭವನದಲ್ಲಿ ವಿಶೇಷ ಸಭೆ ನಡೆಯಿತು.

Ad Widget

Ad Widget <> Ad Widget

ಗುತ್ತಿಗೆದಾರರ ಸಂಘದ ಜಿಲ್ಲಾ ಅಧ್ಯಕ್ಷ ರಾಧಾಕೃಷ್ಣ ನಾಯಕ್ ಅವರು ಮಾತನಾಡಿ ಗುತ್ತಿಗೆದಾರರು ಪ್ರತಿ ಹಂತದಲ್ಲೂ ಸಮಸ್ಯೆಗೆ ಒಳಗಾಗುತ್ತಿದ್ದಾರೆ. ಎಸ್.ಆರ್ ದರ, ಕೆಲಸಕ್ಕಾಗಿ ಬಿಲೋ ದರ ಹಾಕುವುದು. ಕೊನೆಗೆ ಕೈ ಸುಟ್ಟುಕೊಳ್ಳುವುದು ಇದು ಗುತ್ತಿಗೆದಾರರ ಸಮಸ್ಯೆ. ಜೊತೆಗೆ ಪ್ರತಿ ಕಾಮಗಾರಿಯಲ್ಲೂ ಪರ್ಸಂಟೇಜ್ ಕೊಡುವುದನ್ನು ನಿಲ್ಲಿಸಬೇಕು. ಹಾಗಾಗಿ ಎಲ್ಲರು ಒಗ್ಗಟ್ಟಿನಲ್ಲಿ ನಮಗೇನು ಬೇಕೋ ಅದನ್ನು  ಹೋರಾಟ ಮಾಡಿ ಪಡೆಯಬೇಕು ಎಂದರು.



Ad Widget

ಈ ನಿಟ್ಟಿನಲ್ಲಿ ತಿಂಗಳ ಅಂತ್ಯಕ್ಕೆ ಜಿಲ್ಲಾ ಸಂಘದ ಸಭೆಯಲ್ಲಿ ಚರ್ಚಿಸಿ ನಮ್ಮ ಬೇಡಿಕೆಗಳಿಗೆ ಜಿಲ್ಲಾಧಿಕಾರಿಗಳಿಗೆ ಮನವಿ ಕೊಡುವ ನಿರ್ಣಯ ಮಾಡಲಾಗುವುದು ಎಂದರು. ಮನವಿ ಸಂದರ್ಭ ಪುತ್ತೂರು ತಾಲೂಕು ಸಂಘದ ಎಲ್ಲಾ ಸದಸ್ಯರು ಭಾಗವಹಿಸಬೇಕು. ನಮ್ಮ ಶಕ್ತಿಯನ್ನು ತೋರಿಸಬೇಕೆಂದರು.

Ad Widget

Ad Widget

ಇತ್ತೀಚಿಗಿನ ದಿನಗಳಲ್ಲಿ ಎಸ್.ಆರ್ ದರವನ್ನು ಎಲ್ಲಾ ಕಡೆ ಒಂದೇ ರೀತಿ ಮಾಡುತ್ತಿದ್ದಾರೆ. ರಸ್ತೆಗೆ ಮತ್ತು ಕಟ್ಟಡಕ್ಕೆ ಬೇರೆ ಬೇರೆ ಇದೆ. ಈ ನಿಟ್ಟಿನಲ್ಲಿ ಈ ಕುರಿತು ಕೂಡಾ ಮನವಿ ನೀಡಲಾಗುವುದು. ಡಿಸೆಂಬರ್ ಅಥವಾ ಜನವರಿ ತಿಂಗಳಲ್ಲಿ ರಾಜ್ಯಮಟ್ಟದಲ್ಲಿ ಸಭೆ ನಡೆಯಲಿದೆ ಎಂದರು.

ಸಭೆಯ ನಿರ್ಣಯಗಳು
ಎಸ್.ಆರ್.ದರ ಏರಿಸಬೇಕು, ವಿಶೇಷ ಅನುದಾನ ತಂದಾಗ ಆಗುವ 40% ವರೆಗಿನ ಲಂಚ ಕೊಡುವ ವ್ಯವಹಾರ ನಡೆಯುವುದು ನಿಲ್ಲಬೇಕು, ಬಿಲೋ ಹಾಕುವುದನ್ನು ನಿಲ್ಲಿಸಬೇಕು, ಸೀನಿಯಾರಿಟಿ ಮೈಂಟೈನ್ ಮಾಡಲು ಪ್ರಯತ್ನ, ಅಡ್ವಾನ್ಸ್ ವರ್ಕ್ ಮಾಡಬಾರದು ಎಂಬೆಲ್ಲ ನಿರ್ಣಯ ಕೈಗೊಳ್ಳಲಾಯಿತು.

ಸಭೆಯಲ್ಲಿ ಇವತ್ತಿನ S R Rate ಯಾವ ಇಸವಿಯಿಂದ ನೀಡುತಿದ್ದಾರೆ ಅನ್ನುವುದನ್ನು ಯಾರಾದರೂ ಅರ್ಥ ಮಾಡಿಕೊಂಡಿದ್ದಾರ ಎಂದು ಸಭೆಯಲ್ಲಿ ಪ್ರಶ್ನೆ ಎದ್ದಿತು. 2018-19 ಇಸವಿಯನ್ನು ನೀಡುತಿದ್ದರೆ 2018-19 ಕ್ಕೂ ಇವತ್ತಿನ ಮೆಟಿರಿಯಲ್ ರೇಟಿಗೂ ಎಷ್ಟು ವೆಚ್ಚಗಳಿವೆ ಎಂಬುದರ ಬಗ್ಗೆ ತಿಳಿಸುವ ಕೆಲಸವನ್ನು ಸಭೆಯಲ್ಲಿ ಮಾಡಲಾಯಿತು.

ಟೆಂಡರ್ ಆಗಿ ಮಾಡಿದ ಕಾಮಗಾರಿಗಳಿಗೆ ಬಿಲ್ ನೀಡದೆ ವಿಶೇಷ ಅನುಧಾನ ಎಂಬ ಹೆಸರಿನಲ್ಲಿ ಕಾಮಗಾರಿಯನ್ನು ಬಿಲ್ ಮಾಡುತ್ತಿದ್ದಾರೆ  ಎಂದು ಗುತ್ತಿಗೆದಾರರ ಆರೋಪವಾಗಿದೆ.

ಕಾಮಗಾರಿ ಒಟ್ಟು ಹಣವನ್ನು ಟೆಂಡರ್ 10 – 10 ಲಕ್ಷದಂತೆ  50 ಲಕ್ಷ 1 ಕೋಟಿ ಮಾಡಿ ಪ್ಯಾಕೇಜ್  ಟೆಂಡರ್ ನೀಡುವ ಬಗ್ಗೆ ಗುತ್ತಿಗೆದಾರರರು ಆಕ್ರೋಶ ವ್ಯಕ್ತಪಡಿಸಿದರು.

ಯಾವುದೇ ಅನುಭವ ಇಲ್ಲದಿದ್ದರೂ ಅವನಿಗೆ ಒಂದನೇ ದರ್ಜೆಯ ಗುತ್ತಿಗೆದರನಾಗಿ ಬೋಗಸ್ ದಾಖಲೆ ನೀಡುವ ಬಗ್ಗೆ  ಸಭೆಯಲ್ಲಿ ಗಂಭೀರ ಚರ್ಚೆಯಾಯಿತು.

ಕಾಮಗಾರಿಗಳಿಗೆ M- ಸೆಂಡ್ ಹಾಕಬಹುದೆಂದು ಇಂಜಿನಿಯರ್ ಇಲಾಖೆಯ ಆದೇಶ ಇದ್ದರು ಸ್ಥಳಿಯವಾಗಿ ಹಾಕಲು ಅಡ್ಡಿಸುವ  ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು.

ಕಾಮಗಾರಿಗಳನ್ನು K R I D L  land army ಮತ್ತು ನಿರ್ಮಿತಿ ಕೇಂದ್ರಗಳಿಗೆ ಕೊಡುವುದರ ಬಗ್ಗೆ ಯಾರ ಕೈವಾಡ ಇದೆ ಎಂದು ಗುತ್ತಿಗೆದಾರರ ಪ್ರಶ್ನಿಸಿದರು.

ಟೆಂಡರ್ ಆಗಿ ಕಾಮಗಾರಿಯನ್ನು ಪಡೆದು ಕೆಲಸ ಮುಗಿಸಲು ಅವಧಿ ಇರುತ್ತದೆ. ಆದರೆ ಕೆಲಸ ಆದ ನಂತರ ಹಣ ಪಾವತಿಸಲು ಯಾವುದೇ ವ್ಯವಸ್ಥೆ ಇರುವುದಿಲ್ಲ ಇದರ ಬಗ್ಗೆ ಸರಕಾರದ ಗಮನಕ್ಕೆ ತರಬೇಕು ಎಂದು ಹೇಳಿದರು.

ಮೊದಲು ಮಾಡಿದ ಕಾಮಗಾರಿಯ ಹಣ ಪಾವತಿ ಮಾಡದೇ ನಂತರ ಮಾಡಿದ ಕಾಮಗಾರಿಗಳಿಗೆ ಬಿಲ್ಲನ್ನು ಪಾವತಿಸುವ ಬಗ್ಗೆ ಕ್ರಮ ಕೈಗೊಳ್ಳಲು ಸರಕಾರಕ್ಕೆ ತಿಳಿಸಬೇಕು ಎಂದು ಒತ್ತಾಯಿಸಿದರು.

ಬಾಕಿ ಇರುವ ಬಿಲ್ಲನ್ನು ತಕ್ಷಣವೇ ಬಿಡುಗಡೆ ಮಾಡಬೇಕಾಗಿ ಸರಕಾರಕ್ಕೆ ಒತ್ತಡ ಹೇರಬೇಕು ಎಂದು ಸಭೆಯಲ್ಲಿ ಚರ್ಚೆಯಾಯಿತು ಎನ್ನುತ್ತಾರೆ ಗುತ್ತಿಗೆದಾರರರು.

ಮರಳಿನ ಸಮಸ್ಯೆ ಇದ್ದರು ಮರಳನ್ನು ಹಾಕಿ ಕೆಲಸ ಮಾಡಬೇಕೆಂದು ಇಲಾಖೆಯವರು ಒತ್ತಡ ಹೇರುತ್ತಿರುವುದರಿಂದ ಗುತ್ತಿಗೆದಾರರಿಗೆ ಆಗುತ್ತಿರುವ ತೊಂದರೆಯನ್ನು ಸರಿ ಪಡಿಸಲು ಕ್ರಮ ಕೈಗೊಳ್ಳಬೇಕು ಎಂದರು.

10 ಲಕ್ಷದವರೆಗಿನ ಕಾಮಗಾರಿಯನ್ನು ತಾಲೂಕು ಮಟ್ಟದಲ್ಲಿ ಇರುವ ಗುತ್ತಿಗೆದಾರರೇ ಟೆಂಡರನ್ನು ಹಾಕುವ ಹಾಗೆ ಜಿಲ್ಲಾ ಗುತ್ತಿಗೆದಾರರ ಸಂಘದಲ್ಲಿ ನಿರ್ಣಯ ಕೈಗೊಳ್ಳಬೇಕು ಎಂದರು.

ಗುತ್ತಿಗೆದಾರರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ ಕೆ ಅಬ್ದುಲ್ ನಾಝಿರ್, ಜಿಲ್ಲಾ ಕಾರ್ಯದರ್ಶಿ ಸತೀಶ್ ಬಿ.ಎಸ್, ಪುತ್ತೂರು ತಾಲೂಕು ಗುತ್ತಿಗೆದಾರರ ಸಂಘದ ಅಧ್ಯಕ್ಷ ಗುರುಪ್ರಸಾದ್, ಖಜಾಂಜಿ ಉಸ್ಮಾನ್, ಕಾರ್ಯದರ್ಶಿ ಮಂಜುನಾಥ್, ಉಪಾಧ್ಯಕ್ಷ ಗಿರೀಶ್ , ಗೌರವ ಸಲಹೆಗಾರ ಹರೀಶ್, ಬೆಳ್ತಂಗಡಿ ತಾಲೂಕು ಉಪಾಧ್ಯಕ್ಷ ಗಿರೀಶ್ ಕುಮಾರ್, ಮುರಳಿಕೃಷ್ಣ ಹಸಂತಡ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪದ್ಮಶ್ರೀ ಗ್ರೂಪ್ಸ್‌ನ ಸೀತಾರಾಮ ರೈ ಸ್ವಾಗತಿಸಿ, ಲೋಕೇಶ್ ರೈ ವಂದಿಸಿದರು.

Ad Widget
Click to comment

Leave a Reply

ಬಿಗ್ ನ್ಯೂಸ್

Vitla-ವಿಟ್ಲ: ಕಾರು–ಆಕ್ಟಿವಾ ಡಿಕ್ಕಿ; ಸವಾರನಿಗೆ ಗಂಭೀರ ಗಾಯ

Published

on



Ad Widget

Ad Widget

Ad Widget

Ad Widget

ಕೊಲ್ನಾಡು ಗ್ರಾಮದ ಕುಳಾಲು ಬೊಲ್ಪಾದೆಯ ಅಪಾಯಕಾರಿ ರಸ್ತೆ ತಿರುವಿನಲ್ಲಿ ಮಂಗಳವಾರ ಕಾರು ಮತ್ತು ಆಕ್ಟಿವಾ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಆಕ್ಟಿವಾ ಸವಾರ ಗಂಭೀರವಾಗಿ ಗಾಯಗೊಂಡಿದ್ದಾರೆ.

Ad Widget

Ad Widget

Ad Widget

Ad Widget

ವಿಟ್ಲ: ಕೊಲ್ನಾಡು ಗ್ರಾಮದ ಕುಳಾಲು ಬೊಲ್ಪಾದೆಯ ಅಪಾಯಕಾರಿ ರಸ್ತೆ ತಿರುವಿನಲ್ಲಿ ಮಂಗಳವಾರ ಕಾರು ಮತ್ತು ಆಕ್ಟಿವಾ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಆಕ್ಟಿವಾ ಸವಾರ ಗಂಭೀರವಾಗಿ ಗಾಯಗೊಂಡಿದ್ದಾರೆ.

Ad Widget

Ad Widget

Ad Widget alt="Ad Widget"/>

Ad Widget

ಗಾಯಗೊಂಡವರನ್ನು ವಿಟ್ಲ ಪಡೂರು ಗ್ರಾಮದ ಕಡಂಬು ನಿವಾಸಿ, ಮೇಸ್ತಿ ಕೆಲಸ ಮಾಡುತ್ತಿದ್ದ ರಾಮಣ್ಣ ಮೂಲ್ಯ (45) ಎಂದು ಗುರುತಿಸಲಾಗಿದೆ.

Ad Widget

Ad Widget <> Ad Widget

ರಾಮಣ್ಣ ಮೂಲ್ಯ ಅವರು ಕುಡ್ತಮುಗೇರು ಕಡೆಯಿಂದ ಕುಳಾಲು ಕಡೆಗೆ ಆಕ್ಟಿವಾದಲ್ಲಿ ತೆರಳುತ್ತಿದ್ದ ವೇಳೆ, ಬೊಲ್ಪಾದೆಯ ಅಪಾಯಕಾರಿ ತಿರುವಿನ ಏರು ರಸ್ತೆಯಲ್ಲಿ ಎದುರಿನಿಂದ ಬಂದ ಮಾರುತಿ ಕಾರು ಆಕ್ಟಿವಾಕ್ಕೆ ಮುಖಾಮುಖಿಯಾಗಿ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.



Ad Widget

ಅಪಘಾತದ ತೀವ್ರತೆಗೆ ಆಕ್ಟಿವಾ ಸಂಪೂರ್ಣ ಜಖಂಗೊಂಡಿದ್ದು, ರಾಮಣ್ಣ ಮೂಲ್ಯ ಅವರ ಬಲಗೈ ಮೂಳೆ ಮುರಿದಿದೆ. ಡಿಕ್ಕಿಯ ಬಳಿಕ ನಿಯಂತ್ರಣ ತಪ್ಪಿದ ಕಾರು ರಸ್ತೆ ಬದಿಯ ಧರೆಗೆ ಅಪ್ಪಳಿಸಿ ಚರಂಡಿಗೆ ಬಿದ್ದಿದೆ.

Ad Widget

Ad Widget

ಘಟನೆ ನಡೆದ ತಕ್ಷಣ ಸ್ಥಳೀಯರು ಗಾಯಾಳುವನ್ನು ವಿಟ್ಲದ ಬೆನಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.

Ad Widget
Continue Reading

ಮಂಗಳೂರು

Soujanya Case-BIG BREAKING NEWS: ಸೌಜನ್ಯ ಪ್ರಕರಣ: ಮಂಗಳೂರಿನಲ್ಲಿ ಎಸ್‌ಐಟಿ ಮಹತ್ವದ ಸಭೆ; ಸೌಜನ್ಯ ದೇಹ ಸಿಕ್ಕ ಸ್ಥಳಕ್ಕೆ ಭೇಟಿ ಸಾಧ್ಯತೆ

Published

on



Ad Widget

Ad Widget

Ad Widget

Ad Widget

ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರುತನಿಖೆ ಚುರುಕುಗೊಂಡಿದ್ದು, ಮಂಗಳೂರಿನ ವಿಶೇಷ ತನಿಖಾ ತಂಡದ (ಎಸ್‌ಐಟಿ) ಕಚೇರಿಯಲ್ಲಿ ಮಹತ್ವದ ಸಭೆ ನಡೆಯಿತು. ಎಸ್‌ಐಟಿ ಮುಖ್ಯಸ್ಥ ಶಶಿಕುಮಾರ್ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತನಿಖೆಯ ಮುಂದಿನ ಹಂತಗಳ ರೂಪುರೇಷೆ ಕುರಿತು ಚರ್ಚಿಸಲಾಯಿತು.

Ad Widget

Ad Widget

Ad Widget

Ad Widget

ಮಂಗಳೂರು: ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರುತನಿಖೆ ಚುರುಕುಗೊಂಡಿದ್ದು, ಮಂಗಳೂರಿನ ವಿಶೇಷ ತನಿಖಾ ತಂಡದ (ಎಸ್‌ಐಟಿ) ಕಚೇರಿಯಲ್ಲಿ ಮಹತ್ವದ ಸಭೆ ನಡೆಯಿತು. ಎಸ್‌ಐಟಿ ಮುಖ್ಯಸ್ಥ ಶಶಿಕುಮಾರ್ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತನಿಖೆಯ ಮುಂದಿನ ಹಂತಗಳ ರೂಪುರೇಷೆ ಕುರಿತು ಚರ್ಚಿಸಲಾಯಿತು.

Ad Widget

Ad Widget

Ad Widget alt="Ad Widget"/>

Ad Widget

ಐಪಿಎಸ್ ಅಧಿಕಾರಿಗಳಾದ ನಿಶಾ ಜೇಮ್ಸ್, ಲೋಕೇಶ್ ಜಗಲ್ಸಾರ್ ಹಾಗೂ ಮಂಗಳೂರು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಅವರು ಎಸ್‌ಐಟಿ ಕಚೇರಿಗೆ ಆಗಮಿಸಿದ್ದು, ಈಗಾಗಲೇ ಅಧಿಕಾರಿಗಳಿಗೆ ತನಿಖೆಯ ಜವಾಬ್ದಾರಿಗಳನ್ನು ಹಂಚಿಕೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

Ad Widget

Ad Widget <> Ad Widget

ಮುಂದಿನ ಎರಡು ದಿನಗಳಲ್ಲಿ ಎಸ್‌ಐಟಿ ತಂಡ ಬೆಳ್ತಂಗಡಿಗೆ ಭೇಟಿ ನೀಡುವ ಸಾಧ್ಯತೆಯಿದ್ದು, ಸೌಜನ್ಯ ಅವರ ಮನೆ ಹಾಗೂ ಕೊಲೆ ನಡೆದ ಸ್ಥಳವನ್ನು ಪರಿಶೀಲಿಸಲಿದೆ. ಪ್ರಕರಣದ ಪ್ರಾಥಮಿಕ ತನಿಖೆ ನಡೆಸಿದ್ದ ಅಧಿಕಾರಿಗಳು ಸೇರಿದಂತೆ ಹಲವು ಮಂದಿಯನ್ನು ವಿಚಾರಣೆಗೊಳಪಡಿಸಲು ತಂಡ ಮುಂದಾಗಿದೆ. ಅಲ್ಲದೆ, ಸೌಜನ್ಯ ಅವರ ಪೋಷಕರು ಆರೋಪಿಸಿರುವ ವ್ಯಕ್ತಿಗಳನ್ನೂ ವಿಚಾರಣೆ ನಡೆಸುವ ಸಾಧ್ಯತೆಯಿದೆ.



Ad Widget

ಪ್ರಕರಣದ ಮರುತನಿಖೆ ನಡೆಸಿ 90 ದಿನಗಳೊಳಗೆ ವರದಿ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಸೂಚಿಸಿರುವ ಹಿನ್ನೆಲೆಯಲ್ಲಿ ಎಸ್‌ಐಟಿ ತನಿಖೆಗೆ ಮಹತ್ವ ಬಂದಿದೆ. ಸುಮಾರು 14 ವರ್ಷಗಳ ಹಿಂದೆ ನಡೆದಿದ್ದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರುತನಿಖೆ ಯಾವ ದಿಕ್ಕಿನಲ್ಲಿ ಸಾಗಲಿದೆ ಎಂಬ ಕುತೂಹಲ ಹೆಚ್ಚಾಗಿದೆ.

Continue Reading

ಬಿಗ್ ನ್ಯೂಸ್

KSRTC-ಮೈಸೂರು ದಸರಾ ವೀಕ್ಷಣೆಗೆ ಕೆಎಸ್‌ಆರ್‌ಟಿಸಿಯಿಂದ ಗುಡ್‌ನ್ಯೂಸ್‌: ₹950ಕ್ಕೆ ಬೆಂಗಳೂರು-ಮೈಸೂರು ಒನ್ ಡೇ ಟೂರ್ ಪ್ಯಾಕೇಜ್..!

Published

on



Ad Widget

Ad Widget

Ad Widget

Ad Widget

ಮೈಸೂರು ದಸರಾ ಸೇರಿದಂತೆ ಮೈಸೂರಿನ ಪ್ರಮುಖ ಪ್ರವಾಸಿ ತಾಣಗಳನ್ನು ವೀಕ್ಷಿಸಲು ಬಯಸುವ ಪ್ರವಾಸಿಗರಿಗೆ ಕೆಎಸ್‌ಆರ್‌ಟಿಸಿ ಸಿಹಿಸುದ್ದಿ ನೀಡಿದೆ. ಬೆಂಗಳೂರಿನಿಂದ ಮೈಸೂರು ಹಾಗೂ ಐತಿಹಾಸಿಕ ಶ್ರೀರಂಗಪಟ್ಟಣದ ಪ್ರಮುಖ ಸ್ಥಳಗಳನ್ನು ಒಂದೇ ದಿನದಲ್ಲಿ ವೀಕ್ಷಿಸಿ ಮರಳಲು ವಿಶೇಷ ಟೂರ್ ಪ್ಯಾಕೇಜ್‌ ಪರಿಚಯಿಸಿದೆ.

Ad Widget

Ad Widget

Ad Widget

Ad Widget

ಬೆಂಗಳೂರು: ಮೈಸೂರು ದಸರಾ ಸೇರಿದಂತೆ ಮೈಸೂರಿನ ಪ್ರಮುಖ ಪ್ರವಾಸಿ ತಾಣಗಳನ್ನು ವೀಕ್ಷಿಸಲು ಬಯಸುವ ಪ್ರವಾಸಿಗರಿಗೆ ಕೆಎಸ್‌ಆರ್‌ಟಿಸಿ ಸಿಹಿಸುದ್ದಿ ನೀಡಿದೆ. ಬೆಂಗಳೂರಿನಿಂದ ಮೈಸೂರು ಹಾಗೂ ಐತಿಹಾಸಿಕ ಶ್ರೀರಂಗಪಟ್ಟಣದ ಪ್ರಮುಖ ಸ್ಥಳಗಳನ್ನು ಒಂದೇ ದಿನದಲ್ಲಿ ವೀಕ್ಷಿಸಿ ಮರಳಲು ವಿಶೇಷ ಟೂರ್ ಪ್ಯಾಕೇಜ್‌ ಪರಿಚಯಿಸಿದೆ.

Ad Widget

Ad Widget

Ad Widget alt="Ad Widget"/>

Ad Widget

ಕೆಎಸ್‌ಆರ್‌ಟಿಸಿಯ ಬೆಂಗಳೂರು ಕೇಂದ್ರೀಯ ವಿಭಾಗದ ವತಿಯಿಂದ ‘ಬೆಂಗಳೂರು–ನಿಮಿಷಾಂಬ–ಶ್ರೀರಂಗಪಟ್ಟಣ–ಮೈಸೂರು’ ವಿಶೇಷ ಪ್ರವಾಸ ಸೇವೆ ಆರಂಭಿಸಲಾಗಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ನಿಗಮದ ಜನಪ್ರಿಯ ‘ಅಶ್ವಮೇಧ ಕ್ಲಾಸಿಕ್’ ಬಸ್‌ಗಳನ್ನು ನಿಯೋಜಿಸಲಾಗಿದೆ.

Ad Widget

Ad Widget <> Ad Widget

ಈ ಪ್ರವಾಸ ಪ್ಯಾಕೇಜ್ ಅಕ್ಟೋಬರ್ 13ರಿಂದ 28ರವರೆಗೆ ಕಾರ್ಯನಿರ್ವಹಿಸಲಿದ್ದು, ಅಕ್ಟೋಬರ್ 20 ಮತ್ತು 21ರಂದು ಸೇವೆ ಇರುವುದಿಲ್ಲ.



Ad Widget

ಪ್ರವಾಸದ ವೇಳಾಪಟ್ಟಿ ಹೀಗಿದೆ
ಪ್ರವಾಸವು ಬೆಳಗ್ಗೆ ಬೆಂಗಳೂರಿನಿಂದ ಆರಂಭವಾಗಿ, ವಿವಿಧ ಪ್ರವಾಸಿ ತಾಣಗಳಿಗೆ ಭೇಟಿ ನೀಡಿ ರಾತ್ರಿ ಮತ್ತೆ ಬೆಂಗಳೂರಿಗೆ ಮರಳಲಿದೆ.

Ad Widget

Ad Widget

ಬೆಳಗ್ಗೆ 6ರಿಂದ 8: ಬೆಂಗಳೂರು-ನಿಮಿಷಾಂಬ ಪ್ರಯಾಣ
ಬೆಳಗ್ಗೆ 8ರಿಂದ 9: ನಿಮಿಷಾಂಬ ದೇವಸ್ಥಾನ ದರ್ಶನ ಮತ್ತು ಉಪಾಹಾರ
ಬೆಳಗ್ಗೆ 9ರಿಂದ 11: ಶ್ರೀರಂಗಪಟ್ಟಣದ ಶ್ರೀ ರಂಗನಾಥಸ್ವಾಮಿ ದೇವಸ್ಥಾನ, ದರಿಯಾ ದೌಲತ್, ಗುಂಬಜ್ ಹಾಗೂ ಸಂಗಮ ವೀಕ್ಷಣೆ
ಬೆಳಗ್ಗೆ 11ರಿಂದ 11.30: ಶ್ರೀರಂಗಪಟ್ಟಣದಿಂದ ಮೈಸೂರಿಗೆ ಪ್ರಯಾಣ
ಬೆಳಗ್ಗೆ 11.30ರಿಂದ ಮಧ್ಯಾಹ್ನ 12: ಸೇಂಟ್ ಫಿಲೋಮಿನಾ ಚರ್ಚ್ ಭೇಟಿ
ಮಧ್ಯಾಹ್ನ 12ರಿಂದ 1: ಊಟದ ವಿರಾಮ
ಮಧ್ಯಾಹ್ನ 1ರಿಂದ 2: ಕಾವೇರಿ ಆರ್ಟ್ ಗ್ಯಾಲರಿ ಮತ್ತು ಕ್ರಾಫ್ಟ್ ಎಂಪೋರಿಯಂ ವೀಕ್ಷಣೆ
ಮಧ್ಯಾಹ್ನ 2ರಿಂದ ಸಂಜೆ 4: ಮೈಸೂರು ಅರಮನೆ ವೀಕ್ಷಣೆ
ಸಂಜೆ 4ರಿಂದ 5.30: ಮೈಸೂರು ಮೃಗಾಲಯ ಭೇಟಿ
ಸಂಜೆ 5.30ರಿಂದ ರಾತ್ರಿ 8: ಚಾಮುಂಡಿಬೆಟ್ಟದಲ್ಲಿ ಶ್ರೀ ಚಾಮುಂಡೇಶ್ವರಿ ದೇವಿಯ ದರ್ಶನ
ರಾತ್ರಿ 8ರಿಂದ 10: ಎಕ್ಸ್‌ಪ್ರೆಸ್‌ವೇ ಮೂಲಕ ಬೆಂಗಳೂರಿಗೆ ವಾಪಸ್ ಪ್ರಯಾಣ

ಟೂರ್ ಪ್ಯಾಕೇಜ್ ದರ ಎಷ್ಟು?
ಕೆಎಸ್‌ಆರ್‌ಟಿಸಿ ನಿಗದಿಪಡಿಸಿರುವ ಪ್ರಯಾಣ ದರಗಳು ಹೀಗಿವೆ:
ವಯಸ್ಕರಿಗೆ: ₹950
6ರಿಂದ 12 ವರ್ಷದ ಮಕ್ಕಳಿಗೆ: ₹750

ಗಮನಿಸಿ: ಈ ಪ್ಯಾಕೇಜ್‌ನ ಪ್ರಯಾಣ ದರದಲ್ಲಿ ಊಟ ಮತ್ತು ಪ್ರವಾಸಿ ತಾಣಗಳ ಪ್ರವೇಶ ಟಿಕೆಟ್‌ಗಳು ಸೇರಿರುವುದಿಲ್ಲ. ಅವುಗಳ ವೆಚ್ಚವನ್ನು ಪ್ರಯಾಣಿಕರೇ ಭರಿಸಬೇಕು.

ಟಿಕೆಟ್ ಬುಕ್ಕಿಂಗ್ ಮಾಡುವುದು ಹೇಗೆ?
ಪ್ರವಾಸಿಗರು ಕೆಎಸ್‌ಆರ್‌ಟಿಸಿಯ ಅಧಿಕೃತ ವೆಬ್‌ಸೈಟ್‌ಗಳ ಮೂಲಕ ಮುಂಗಡ ಟಿಕೆಟ್ ಕಾಯ್ದಿರಿಸಬಹುದು.
www.ksrtc.in
www.ksrtc.karnataka.gov.in

ಹೆಚ್ಚಿನ ಮಾಹಿತಿ ಹಾಗೂ ಬುಕ್ಕಿಂಗ್ ವಿವರಗಳಿಗಾಗಿ ಕೆಳಗಿನ ಸಹಾಯವಾಣಿ ಸಂಖ್ಯೆಗಳನ್ನು ಸಂಪರ್ಕಿಸಬಹುದು.
ಸಹಾಯವಾಣಿ ಸಂಖ್ಯೆಗಳು: 080-26252625, 7760990100, 7760990560, 7760990287.

ಒಂದೇ ದಿನದಲ್ಲಿ ನಿಮಿಷಾಂಬ ದೇವಸ್ಥಾನ, ಶ್ರೀರಂಗಪಟ್ಟಣದ ಐತಿಹಾಸಿಕ ತಾಣಗಳು, ಮೈಸೂರು ಅರಮನೆ, ಮೃಗಾಲಯ ಹಾಗೂ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಲು ಬಯಸುವವರಿಗೆ ಈ ಪ್ಯಾಕೇಜ್ ಅನುಕೂಲಕರ ಆಯ್ಕೆಯಾಗಿದೆ.

Ad Widget
Continue Reading

ಇಂದಿನ ಟ್ರೆಂಡಿಂಗ್‌ ಸುದ್ದಿಗಳು

error: Content is protected !!

Discover more from Nikhara News | Kannada News Website

Subscribe now to keep reading and get access to the full archive.

Continue reading