ಮಂಗಳೂರು
Satalite Phone :ಕೇರಳ – ಕರ್ನಾಟಕ ಗಡಿ ಭಾಗದಲ್ಲಿ ಸ್ಯಾಟಲೈಟ್ ಫೋನ್ ಸದ್ದು | ಸ್ವರ್ಗ ಪಾಣಾಜೆ ವ್ಯಾಪ್ತಿಯಲ್ಲಿ ಕೇರಳ ಸ್ಪೆಷಲ್ ಬ್ರಾಂಚ್ ಪೊಲೀಸರಿಂದ ತನಿಖೆ
ಪೆರ್ಲ: ಕೇರಳ ಕರ್ನಾಟಕ ಗಡಿ ಕಾಸರಗೋಡು ಮತ್ತು ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯ ಸ್ವರ್ಗ ಪಾಣಾಜೆ ಗಡಿ ಕೇಂದ್ರೀಕರಿಸಿ ನಿಷೇಧಿತ ಸ್ಯಾಟಲೈಟ್ ಫೋನ್ ಬಳಸಲಾಗಿರುವ ಬಗ್ಗೆ ಸೂಚನೆ ಲಭಿಸಿದೆ.
ಗುಪ್ತಚರ ಏಜೆನ್ಸಿಗಳು ಸ್ಯಾಟಲೈಟ್ ಫೋನ್ ಲೊಕೇಷನ್ ಟ್ರೇಸ್ ಮಾಡಿದ್ದು ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕು ಎಣ್ಮಕಜೆ ಪಂಚಾಯಿತಿ ೬ ನೇ ವಾರ್ಡ್ ಸ್ವರ್ಗ ಮತ್ತು ಕರ್ನಾಟಕ ಪುತ್ತೂರು ತಾಲೂಕಿನ ಪಾಣಾಜೆಯ ಒಂದು ಕಿ.ಮೀ.ಕೇಂದ್ರೀಕರಿಸಿ ಸ್ಯಾಟಲೈಟ್ ಫೋನ್ ಕರೆ ಹೋಗಿರುವುದನ್ನು ಪತ್ತೆ ಹಚ್ಚಿದೆ.ಈ ನಿಟ್ಟಿನಲ್ಲಿ ಸ್ಪೆಷಲ್ ಬ್ರಾಂಚ್ ಪೊಲೀಸ್ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.
ಮೊಬೈಲ್ ಫೋನ್ ಗಳು ಟವರ್ಗಳ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರೆ, ಸ್ಯಾಟಲೈಟ್ ಫೋನ್ಗಳು ನೇರವಾಗಿ ಉಪಗ್ರಹಗಳ ಮೂಲಕ ಸಂಪರ್ಕ ಸಾಧ್ಯವಾಗುತ್ತಿದೆ.ಸ್ಯಾಟಲೈಟ್ ಫೋನ್ ಮೂಲಕ ಜಗತ್ತಿನ ಯಾವುದೇ ಭಾಗವನ್ನು ಸಂಪರ್ಕಿಸಬಹುದಾಗಿದೆ.ಯಾವುದೇ ಮೊಬೈಲ್ ನೆಟ್ ವರ್ಕ್, ಟವರ್ ಇಲ್ಲದ ಪ್ರದೇಶಗಳಲ್ಲೂ ಸ್ಯಾಟಲೈಟ್ ಫೋನ್ಗಳನ್ನು ಬಳಸಿ ಸಂವಹನ ನಡೆಸಬಹುದಾಗಿದೆ.
ಸ್ವರ್ಗ ಪಾಣಾಜೆಯ ಕೆಲವೊಂದು ಕಡೆ ಮೊಬೈಲ್ ನೆಟ್ ವರ್ಕ್ ಸಮಸ್ಯೆಯಿರುವುದರಿಂದ ಆಗಂತುಕರು ಯಾವುದಾದರೂ ಉದ್ದೇಶಕ್ಕೆ ಸ್ಯಾಟಲೈಟ್ ಫೋನ್ ಬಳಸಿರಬಹುದೇ ಎಂಬ ಸಂಶಯ ವ್ಯಕ್ತವಾಗಿದೆ. ಕರ್ನಾಟಕದ ಬಂಟಾಜೆ ಹಾಗೂ ಕೇರಳದ ಪರಪ್ಪ ರೇಂಜ್ ರಕ್ಷಿತಾರಣ್ಯಕ್ಕೆ ತಾಗಿಕೊಂಡಿರುವ ಕೇರಳ ಕರ್ನಾಟಕ ಗಡಿ ಸ್ವರ್ಗ ಪಾಣಾಜೆಯಲ್ಲಿ ಸ್ಯಾಟಲೈಟ್ ಫೋನ್ ಬಳಸಿರುವುದು ಯಾರಾಗಿರಬಹುದು? ಹಾಗೂ ಬಳಕೆಯ ಉದ್ದೇಶ ಏನಾಗಿರಬಹುದು ಎಂಬ ಬಗ್ಗೆ ಹಲವು ಊಹಾ ಪೋಹಗಳು ಮೂಡಿದೆ.
ಹೆಚ್ಚಿನ ಸ್ಯಾಟಲೈಟ್ ಫೋನ್ ಕಂಪೆನಿಗಳು ಜಿಯೋಸಿಂಕ್ರೊನಸ್ ಕಕ್ಷೆಯಲ್ಲಿರುವ ಉಪಗ್ರಹಗಳನ್ನು ಬಳಸಿಕೊಂಡರೆ, ಕೆಲವು ಸಂಸ್ಥೆಗಳು ಲೋ ಅರ್ತ್ ಆರ್ಬಿಟ್ (ಎಲ್ಇಓ) ನಲ್ಲಿರುವ ಉಪಗ್ರಹಗಳನ್ನು ಬಳಸಿಕೊಳ್ಳುತ್ತವೆ.ಈ ಉಪಗ್ರಹಗಳು ಸಾಕಷ್ಟು ಮಾಹಿತಿಗಳನ್ನು ನಿರ್ವಹಿಸುವುದು.ವಾಯ್ಸ್ ಕರೆಗಳು, ವೀಡಿಯೋ ಸ್ಟ್ರೀಮಿಂಗ್, ಸಂದೇಶ ಹಾಗೂ ಮಾಹಿತಿ ವಿನಿಮಯ, ಇತರ ಉದ್ದೇಶಗಳಿಗೂ ಬಳಕೆಯಾಗುತ್ತವೆ. ಇನ್ಮಾರ್ಸ್ಯಾಟ್ ಹಾಗೂ ತುರಾಯಾ ಕಂಪೆನಿಗಳು ಜಿಯೋಸಿಂಕ್ರೊನಸ್ ವ್ಯವಸ್ಥೆಯನ್ನು ಬಳಸಿಕೊಳ್ಳುತ್ತವೆ.
ಯಾರು ಬೇಕಾದರೂ ಸ್ಯಾಟ್ ಫೋನ್ ಖರೀದಿ ಸಾಧ್ಯವೇ?
ಸೈದ್ಧಾಂತಿಕವಾಗಿ, ಯಾರು ಬೇಕಾದರೂ ಸ್ಯಾಟ್ ಫೋನ್ ಖರೀದಿಸಬಹುದು.ಆದರೆ ಭಾರತದಲ್ಲಿ ಇದಕ್ಕೆ ಕಾನೂನಿನ ಇತಿ ಮಿತಿಗಳಿವೆ.ಭಾರತದಲ್ಲಿ ಸ್ಯಾಟಲೈಟ್ ಫೋನ್ ಬಳಕೆಗೆ ಕೇಂದ್ರ ದೂರ ಸಂಪರ್ಕ ಸಚಿವಾಲಯದ ಅನುಮತಿ ಮತ್ತು ಅಗತ್ಯ ವ್ಯವಸ್ಥೆಗಳು ಬೇಕಾಗುವುದು.ಭಾರತದಲ್ಲಿ ಲೈಸೆನ್ಸ್ ಹೊಂದಿರುವ ಡೀಲರ್ ಮೂಲಕ ಮಾತ್ರ ಸ್ಯಾಟಲೈಟ್ ಫೋನ್ ಖರೀದಿಸಬೇಕಾಗಿದೆ.
ಸ್ಯಾಟಲೈಟ್ ಫೋನ್ಗಳು ಸಾಮಾನ್ಯ ಫೋನ್ಗಳಿಂದ ಹೆಚ್ಚು ದುಬಾರಿಯಾಗಿದ್ದು ಸ್ವರ್ಗ ಪಾಣಾಜೆ ವ್ಯಾಪ್ತಿಯಲ್ಲಿ ಇದರ ಬಳಕೆಯ ಅಗತ್ಯ ಏನೆಂಬುದರ ಬಗ್ಗೆ ಸಂಶಯ ಮೂಡಿದೆ.ಸ್ಯಾಟಲೈಟ್ ಫೋನ್ ನ ಪ್ರತಿ ತಿಂಗಳ, ವಾರ್ಷಿಕ ನೂರಾರು ಡಾಲರ್ ದರವಿದ್ದು ಕೆಲವು ಸಮಯದ ತನಕ ಮಾತ್ರ ಮಾತನಾಡಲು ಸಾಧ್ಯವಾಗುವುದು.ಆದ್ದರಿಂದ ಹೆಚ್ಚು ಮಾತನಾಡಬೇಕಾದರೆ ಇನ್ನೂ ಹೆಚ್ಚು ಹಣ ಪಾವತಿಸಬೇಕಾಗುತ್ತದೆ.ಇಷ್ಟೊಂದು ಹಣ ತೆತ್ತು ಸಾಮಾನ್ಯವಾಗಿ ವ್ಯಕ್ತಿಗಳು ಸ್ಯಾಟಲೈಟ್ ಫೋನ್ ಕೈವಶ ಇರಿಸಲಾರರು.ದೂರದೂರಿನ “ವಿವಿಐಪಿ” ವ್ಯಕ್ತಿಗಳು ರಜೆಯ ಅವಧಿಯಲ್ಲಿ ಊರಿಗೆ ಮರಳಿದಾಗ ಮೊಬೈಲ್ ನೆಟ್ ವರ್ಕ್ ಇಲ್ಲದ ಕಾರಣ ದೂರ ಪ್ರದೇಶಗಳಿಗೆ ಕರೆ ಮಾಡಲು ಸ್ಯಾಟಲೈಟ್ ಫೋನ್ ಬಳಸಿರಬಹುದೇ ಎಂಬ ಬಗ್ಗೆಯೂ ಸಂಶಯ ಮೂಡಿದೆ.ಸ್ಯಾಟಲೈಟ್ ಫೋನ್ಗಳನ್ನು ಬಾಡಿಗೆಗೆ ಪಡೆದುಕೊಂಡು ಬಳಸಿರುವ ಸಾಧ್ಯತೆಯ ಬಗ್ಗೆಯೂ ಶಂಕೆ ಮೂಡಿದೆ.
ಇರಿಡಿಯಂ, ಇನ್ಮಾರ್ಸ್ಯಾಟ್, ತುರಾಯ ಹಾಗೂ ಗ್ಲೋಬಲ್ ಸ್ಟಾರ್ ಮೊದಲಾದ ಖಾಸಗಿ ಸಂಸ್ಥೆಗಳು ಸ್ಯಾಟಲೈಟ್ ಸಂಪರ್ಕವನ್ನು ಒದಗಿಸುವ ಪ್ರಮುಖ ಸಂಸ್ಥೆಗಳಾಗಿವೆ.ಪ್ರತಿಯೊಂದು ಸ್ಯಾಟಲೈಟ್ ಫೋನ್ ಅದರದ್ದೇ ಆದ ಪೂರೈಕದಾರ ವ್ಯವಸ್ಥೆಯೊಡನೆ ಕಾರ್ಯಾಚರಿಸುತ್ತದೆ.
ಭಾರತದಲ್ಲಿ ಸ್ಯಾಟಲೈಟ್ ಫೋನ್ ಕೈವಶವಿರಿಸುವುದು, ಕೊಂಡೊಯ್ಯುವುದು ಅಪರಾಧ
ಭಾರತದಲ್ಲಿ ಅನುಮತಿ ಇಲ್ಲದೆ ಸ್ಯಾಟಲೈಟ್ ಫೋನ್ ಕೈವಶವಿರಿಸುವುದು, ಒಂದೆಡೆಯಿಂದ ಇನ್ನೊಂದೆಡೆಗೆ ಕೊಂಡೊಯ್ಯುವುದು ಕಾನೂನು ಪ್ರಕಾರ ಅಪರಾಧವಾಗಿದೆ.2011ರ ನವೆಂಬರ್ ತಿಂಗಳಲ್ಲಿ ಪಾಕಿಸ್ತಾನದ ಉಗ್ರಗಾಮಿಗಳು ಮುಂಬೈ ಮೇಲೆ ದಾಳಿ ನಡೆಸಿದಾಗ ಸ್ಯಾಟಲೈಟ್ ಫೋನ್ಗಳನ್ನು ಬಳಸಿ ಪಾಕಿಸ್ತಾನದಲ್ಲಿದ್ದ ಲಷ್ಕರ್ ಎ ತಯ್ಬಾ ಉಗ್ರ ಮುಖಂಡರೊಡನೆ ಸಂಪರ್ಕದಲ್ಲಿದ್ದರು.ಈ ಘಟನೆಯ ಬಳಿಕ ಭಾರತದಲ್ಲಿ ಸ್ಯಾಟಲೈಟ್ ಫೋನ್ ಬಳಕೆ ನಿಷೇಧಿಸಲಾಗಿದೆ.
ಕಾನೂನುಗಳು ಏನು ಹೇಳುತ್ತವೆ?
1993ರ ಭಾರತೀಯ ಟೆಲಿಗ್ರಫಿ ಆ್ಯಕ್ಟ್ ಸೆಕ್ಷನ್ 6ರ ಪ್ರಕಾರ ಕಾನೂನು ಉಲ್ಲಂಘನೆಯಾಗಿದೆ.ಭಾರತದಲ್ಲಿ ವೈರ್ ಲೆಸ್ ಟ್ರಾನ್ಸ್ಮೀಟರ್ ಹೊರತುಪಡಿಸಿ ಬೇರೆ ಯಾವುದೇ ವೈರ್ ಲೆಸ್ ಟೆಲಿಗ್ರಫಿ ಉಪಕರಣವನ್ನು ಬಳಸುವುದು ಕಾನೂನಿನ ಸೆಕ್ಷನ್ 3ರ ಪ್ರಕಾರ ಅಪರಾಧವಾಗಿದೆ.ಸೆಕ್ಷನ್ 3ರ ಪ್ರಕಾರ, ಸೆಕ್ಷನ್ 4ರ ರ ಹೊರತಾಗಿ, ಯಾರೂ ವೈರ್ ಲೆಸ್ ಟೆಲಿಗ್ರಫಿ ಉಪಕರಣಗಳನ್ನು ಲೈಸೆನ್ಸ್ ರಹಿತವಾಗಿ ಬಳಸುವಂತಿಲ್ಲ.
ಟೆಲಿ ಕಮ್ಯುನಿಕೇಷನ್ ವಿಭಾಗದ ವೆಬ್ ಸೈಟ್ನಲ್ಲಿರುವ ನೋಟಿಸ್ ಪ್ರಕಾರ, “ಸ್ಯಾಟಲೈಟ್ ಫೋನ್ಗಳನ್ನು ಬಳಸಲು ಅನುಮತಿ ಇದ್ದರೂ ಭಾರತ ಸರಕಾರದ ಟೆಲಿ ಕಮ್ಯುನಿಕೇಷನ್ ಡಿಪಾರ್ಟ್ಮೆಂಟ್ ನಿಂದ ನಿರ್ದಿಷ್ಟ ಅನುಮತಿ ಹಾಗೂ ಎನ್ಓಸಿ ಅಗತ್ಯವಿದೆ.ಅಲ್ಲದೆ ಈ ಲೈಸೆನ್ಸ್ ಅನ್ನು ಗೇಟ್ ವೇ ಮುಖಾಂತರ ಮಾತ್ರ ಒದಗಿಸಲು ಸಾಧ್ಯವಾಗುವುದು.
ವಿದೇಶಗಳಲ್ಲಿ ಸ್ಯಾಟಲೈಟ್ ಫೋನ್ ಬಳಕೆ
ಯುನೈಟೆಡ್ ಅರಬ್ ಎಮಿರೇಟ್ಸ್ ಮೂಲದ ತುರಾಯ ಕಂಪನಿ ಯುರೋಪ್, ಮಧ್ಯಪ್ರಾಚ್ಯ, ಉತ್ತರ, ಮಧ್ಯ ಮತ್ತು ಪೂರ್ವ ಆಫ್ರಿಕಾ, ಏಷ್ಯಾ ಮತ್ತು ಆಸ್ಟ್ರೇಲಿಯಾ ಸೇರಿದಂತೆ ಒಟ್ಟು 161 ದೇಶಗಳಿಗೆ ಧ್ವನಿ ಸೇವೆಗಳನ್ನು ನೀಡುತ್ತಿದೆ.ಆದರೆ ಭಾರತದಲ್ಲಿ ತುರಾಯ ಅಥವಾ ಇರಿಡಿಯಂ ಸ್ಯಾಟಲೈಟ್ ಫೋನ್ಗಳ ಬಳಕೆ ಅನಧಿಕೃತ ಹಾಗೂ ಅಕ್ರಮವಾಗಿದೆ.ವಿದೇಶದಿಂದ ಭಾರತಕ್ಕೆ ಬರುವ ಪ್ರಯಾಣಿಕರು ತಮ್ಮ ಸಾಮಾನು ಸರಂಜಾಮುಗಳಲ್ಲಿ ಸ್ಯಾಟಲೈಟ್ ಫೋನ್ಗಳನ್ನು ಸಾಗಿಸುವುದು ಕಂಡು ಬಂದರೆ ಅವರು ಅದನ್ನು ಕಸ್ಟಮ್ಸ್ ನಲ್ಲಿ ಹಾಜರುಪಡಿಸಿ, ಬಳಕೆ ಸಂಬಂಧಿಸಿದ ಅಧಿಕಾರಿಗಳಿಂದ ಅನುಮತಿ ಪಡೆಯಬೇಕಾಗಿದೆ.ಭಾರತದಲ್ಲಿ ಯಾರಾದರೂ ಅನಧಿಕೃತವಾಗಿ ಸ್ಯಾಟಲೈಟ್ ಫೋನ್ ಸಾಗಿಸುವುದು, ಭಾರತೀಯ ಕಾನೂನಿನ ಪ್ರಕಾರ ಶಿಕ್ಷಾರ್ಹ ಅಪರಾಧವಾಗಿದೆ.ಭಾರತದ ಕಾನೂನು ಜಾರಿ ಇಲಾಖೆಗಳು ಅನಧಿಕೃತ ಉಪಕರಣಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಬಹುದಾಗಿದೆ.ಭಾರತಕ್ಕೆ ಆಗಮಿಸುವ ವಿದೇಶಿ ಪ್ರವಾಸಿಗರು ಭಾರತದ ಕಾನೂನುಗಳನ್ನು ಪಾಲಿಸಬೇಕಾಗಿದ್ದು ಸರಕಾರದ ಅನುಮತಿಯಿಲ್ಲದೆ ಸ್ಯಾಟಲೈಟ್ ಫೋನ್ಗಳನ್ನು ಬಳಸುವಂತಿಲ್ಲ.
ಭಾರತದಲ್ಲಿ ಸ್ಯಾಟಲೈಟ್ ಫೋನ್ ಬಳಕೆಗೆ ನಿಷೇಧ:
ರಾಷ್ಟ್ರೀಯ ಭದ್ರತೆಗೆ ಧಕ್ಕೆ ತರುತ್ತದೆ ಎಂಬ ಕಾರಣಕ್ಕೆ ಭಾರತದಲ್ಲಿ ಸ್ಯಾಟಲೈಟ್ ಫೋನ್ ಬಳಕೆಯನ್ನು ಕೇಂದ್ರ ಸರಕಾರ ನಿಷೇಧಿಸಿದೆ.ವೈರ್ಲೆಸ್ ಕಾಯ್ದೆಯ ಸೆಕ್ಷನ್ 6 ಮತ್ತು ಇಂಡಿಯನ್ ಟೆಲಿಗ್ರಾಫ್ ಆಕ್ಟ್ನ ಸೆಕ್ಷನ್ 20ರ ಅಡಿಯಲ್ಲಿ ಭಾರತದಲ್ಲಿ ತುರಾಯ, ಇರಿಡಿಯಮ್ ಸ್ಯಾಟಲೈಟ್ ಫೋನ್ಗಳ ಬಳಕೆಯನ್ನು ಕಾನೂನುಬಾಹಿರ ಎಂದು ಘೋಷಿಸಿದೆ.ವಿದೇಶಿಯರು ಭಾರತಕ್ಕೆ ಉಪಗ್ರಹ ಫೋನ್ಗಳನ್ನು ತರುವುದಕ್ಕೂ ನಿಷೇಧ ಹೇರಲಾಗಿದೆ.ಭಾರತಕ್ಕೆ ಬರುವಾಗ ಉಪಗ್ರಹ ಫೋನ್ಗಳಿದ್ದರೆ ಪ್ರಯಾಣಿಕರನ್ನು ಬಂಧಿಸಲಾಗುತ್ತದೆ. ಅಲ್ಲದೇ ಟೆಲಿಗ್ರಾಫ್ ಕಾಯಿದೆಯ ಸಂಬಂಧಿತ ವಿಭಾಗಗಳ ಅಡಿಯಲ್ಲಿ ದಂಡ ವಿಧಿಸಲಾಗುತ್ತದೆ.
ಕರ್ನಾಟಕದಲ್ಲಿ ಸ್ಯಾಟಲೈಟ್ ಫೋನ್ ಬಳಕೆ ?
2011ರ ಮುಂಬೈ ದಾಳಿಯ ಬಳಿಕ ಕರ್ನಾಟಕದಲ್ಲಿಯೂ ಸ್ಯಾಟಲೈಟ್ ಫೋನ್ ಬಳಕೆ ನಿಷೇಧ ಮಾಡಲಾಗಿತ್ತು.ಆದರೆ, ಕರ್ನಾಟಕದಲ್ಲಿ ಕಳೆದ 2020ರಲ್ಲಿ 256 ಮತ್ತು 2021ರಲ್ಲಿ 220 ಕರೆಗಳಲ್ಲಿ ಸ್ಯಾಟಲೈಟ್ ಫೋನ್ ಬಳಕೆ ಮಾಡುವುದು ಪತ್ತೆ ಮಾಡಲಾಗಿದೆ.ಕೇಂದ್ರ ಗುಪ್ತಚರ ಇಲಾಖೆ ಜೊತೆ ಸಂಪರ್ಕದಲ್ಲಿದ್ದು, ಈ ಬಗ್ಗೆ ಮಾಹಿತಿ ವಿನಿಮಯ ಮಾಡಿಕೊಳ್ಳಲಾಗುತ್ತಿದೆ.ದೇಶದ ಭದ್ರತೆ ವಿಷಯವೂ ಇದಾಗಿದ್ದು ಹೆಚ್ಚಿನ ಮಾಹಿತಿ ಬಹಿರಂಗ ಪಡಿಸಿಲ್ಲ.
ಮಂಗಳೂರು ಸ್ಫೋಟದ ಮುನ್ನಾ ದಿನ ಬೆಳ್ತಂಗಡಿಯಲ್ಲಿ ರಿಂಗಣಿಸಿದ ಸ್ಯಾಟಲೈಟ್ ಫೋನ್
ಮಂಗಳೂರು ಸ್ಫೋಟಕ್ಕೂ ಮುನ್ನ ಮಂಗಳೂರು ಸುತ್ತಮುತ್ತ ಸ್ಯಾಟಲೈಟ್ ಫೋನ್ ಕಾರ್ಯಾಚರಣೆ ಬಗ್ಗೆ ವರದಿಯಾಗಿತು.ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಸ್ಯಾಟಲೈಟ್ ಫೋನ್ ಕಾರ್ಯಾಚರಣೆ ಕುರಿತು ತನಿಖಾ ತಂಡಕ್ಕೆ ಮಾಹಿತಿ ಲಭಿಸಿತ್ತು.ನವೆಂಬರ್ 19ರಂದು ಸಂಜೆ ಮಂಗಳೂರು ನಾಗುರಿಯಲ್ಲಿ ಅಟೋರಿಕ್ಷಾದಲ್ಲಿ ಕುಕ್ಕರ್ ಬಾಂಬ್ ಸ್ಫೋಟ ನಡೆದಿದ್ದರೆ ಅದರ ಮುನ್ನಾ ದಿನ ನ.18ರಂದು ದಕ್ಷಿಣ ಕನ್ನಡದ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕಕ್ಕಿಂಜೆಯಲ್ಲಿ ಸ್ಯಾಟಲೈಟ್ ಫೋನ್ ಮೂಲಕ ಕರೆ ಹೋಗಿರುವುದಾಗಿ ಮಾಹಿತಿ ಲಭಿಸಿತ್ತು.ಅರಣ್ಯ ಪ್ರದೇಶದಲ್ಲಿ ನಿಷೇಧಿತ ತುರಾಯ ಕಂಪನಿಯ ಸ್ಯಾಟಲೈಟ್ ಫೋನ್ ಬಳಸಿರುವ ಕುರಿತು ಮಾಹಿತಿ ಲಭಿಸಿದೆ.ಸ್ಯಾಟಲೈಟ್ ಫೋನ್ ಬಳಸಲಾದ ಜಾಗವನ್ನು ಬೇಹುಗಾರಿಕಾ ಏಜೆನ್ಸಿಗಳು ಪತ್ತೆ ಮಾಡಿದ್ದು ಪೊಲೀಸರು ಈ ಕೋನದಲ್ಲೂ ತನಿಖೆ ನಡೆಸುತ್ತಿದ್ದಾರೆ
ಮಂಗಳೂರು
Dakshina Kannada-ದಕ್ಷಿಣ ಕನ್ನಡ ಜಿಲ್ಲೆಗೆ ‘ಮಂಗಳೂರು ಜಿಲ್ಲೆ’ ಎಂದು ಮರುನಾಮಕರಣ ಪ್ರಸ್ತಾವ: ಸಾರ್ವಜನಿಕ ಅಭಿಪ್ರಾಯ ಆಹ್ವಾನಿಸಿದ ಸರ್ಕಾರ
ದಕ್ಷಿಣ ಕನ್ನಡ ಜಿಲ್ಲೆಯನ್ನು ‘ಮಂಗಳೂರು ಜಿಲ್ಲೆ’ ಎಂದು ಮರುನಾಮಕರಣ ಮಾಡಲು ರಾಜ್ಯ ಸರ್ಕಾರ ಉದ್ದೇಶಿಸಿದ್ದು, ಈ ಕುರಿತು ಸಾರ್ವಜನಿಕರಿಂದ ಸಲಹೆ ಹಾಗೂ ಅಭಿಪ್ರಾಯಗಳನ್ನು ಆಹ್ವಾನಿಸಿದೆ. ಅಧಿಸೂಚನೆ ರಾಜ್ಯ ಪತ್ರದಲ್ಲಿ ಪ್ರಕಟಗೊಂಡ ದಿನಾಂಕದಿಂದ 30 ದಿನಗಳೊಳಗೆ ಸಾರ್ವಜನಿಕರು ತಮ್ಮ ಅಭಿಪ್ರಾಯಗಳನ್ನು ಸಲ್ಲಿಸಬಹುದಾಗಿದೆ.
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯನ್ನು ‘ಮಂಗಳೂರು ಜಿಲ್ಲೆ’ ಎಂದು ಮರುನಾಮಕರಣ ಮಾಡಲು ರಾಜ್ಯ ಸರ್ಕಾರ ಉದ್ದೇಶಿಸಿದ್ದು, ಈ ಕುರಿತು ಸಾರ್ವಜನಿಕರಿಂದ ಸಲಹೆ ಹಾಗೂ ಅಭಿಪ್ರಾಯಗಳನ್ನು ಆಹ್ವಾನಿಸಿದೆ. ಅಧಿಸೂಚನೆ ರಾಜ್ಯ ಪತ್ರದಲ್ಲಿ ಪ್ರಕಟಗೊಂಡ ದಿನಾಂಕದಿಂದ 30 ದಿನಗಳೊಳಗೆ ಸಾರ್ವಜನಿಕರು ತಮ್ಮ ಅಭಿಪ್ರಾಯಗಳನ್ನು ಸಲ್ಲಿಸಬಹುದಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಗೆ ಮಂಗಳೂರು ಜಿಲ್ಲೆ ಎಂದು ಮರುನಾಮಕರಣ ಮಾಡುವಂತೆ ರಾಜಕಾರಣಿಗಳು, ಸಾಮಾಜಿಕ ಚಿಂತಕರು, ಸರ್ವಧರ್ಮಗಳ ಹಿರಿಯರು ಹಾಗೂ ಜಿಲ್ಲೆಯ ವಿವಿಧ ಸಂಘಟನೆಗಳಿಂದ ಸರ್ಕಾರಕ್ಕೆ ಹಲವು ಮನವಿಗಳು ಸಲ್ಲಿಕೆಯಾಗಿವೆ. ಸಾರ್ವಜನಿಕರ ಬೇಡಿಕೆ ಹಾಗೂ ಆಡಳಿತಾತ್ಮಕ ಅನುಕೂಲತೆಗಳನ್ನು ಪರಿಗಣಿಸಿ ಈ ಪ್ರಸ್ತಾವವನ್ನು ಸರ್ಕಾರ ಮುಂದಿಟ್ಟಿದೆ.
ಭಾರತ ಸರ್ಕಾರದ ಗೃಹ ಸಚಿವಾಲಯದ 1953ರ ಸೆಪ್ಟೆಂಬರ್ 11ರ ಮಾರ್ಗಸೂಚಿಗಳು ಹಾಗೂ ಕರ್ನಾಟಕ ಭೂ ಕಂದಾಯ ಅಧಿನಿಯಮ, 1964ರ ಸೆಕ್ಷನ್ 4(4A) ಅಡಿಯಲ್ಲಿ ಲಭ್ಯವಿರುವ ಅಧಿಕಾರಗಳನ್ವಯ ಮರುನಾಮಕರಣ ಪ್ರಕ್ರಿಯೆ ಕೈಗೊಳ್ಳಲು ಉದ್ದೇಶಿಸಲಾಗಿದೆ.
ಈ ಸಂಬಂಧ ಸಾರ್ವಜನಿಕರು ತಮ್ಮ ಸಲಹೆ ಮತ್ತು ಆಕ್ಷೇಪಣೆಗಳನ್ನು ಲಿಖಿತ ರೂಪದಲ್ಲಿ ಅಥವಾ ಇ-ಮೇಲ್ ಮೂಲಕ ಸರ್ಕಾರಕ್ಕೆ ಸಲ್ಲಿಸಬಹುದು. ಸ್ವೀಕೃತವಾಗುವ ಅಭಿಪ್ರಾಯಗಳನ್ನು ಪರಿಶೀಲಿಸಲಾಗುವುದು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಅಭಿಪ್ರಾಯ ಸಲ್ಲಿಸಬೇಕಾದ ವಿಳಾಸಗಳು
- ಮುಖ್ಯಮಂತ್ರಿಯವರ ಸಚಿವಾಲಯ, ಕೊಠಡಿ ಸಂಖ್ಯೆ: 235, 2ನೇ ಮಹಡಿ, ವಿಧಾನಸೌಧ, ಬೆಂಗಳೂರು – 560001; ಇ-ಮೇಲ್: cm.kar@nic.in
- ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ಕಂದಾಯ ಇಲಾಖೆ, ಕೊಠಡಿ ಸಂಖ್ಯೆ: 711, 7ನೇ ಮಹಡಿ, ಬಹುಮಹಡಿಗಳ ಕಟ್ಟಡ, ಡಾ. ಬಿ.ಆರ್. ಅಂಬೇಡ್ಕರ್ ವೀದಿ, ಬೆಂಗಳೂರು – 560001; ಇ-ಮೇಲ್: Prs.revenue@gmail.com
- ಗಮನಿಸಿ: ಸಾರ್ವಜನಿಕರು ತಮ್ಮ ಅಭಿಪ್ರಾಯಗಳನ್ನು ಅಧಿಸೂಚನೆ ರಾಜ್ಯ ಪತ್ರದಲ್ಲಿ ಪ್ರಕಟಗೊಂಡ ದಿನಾಂಕದಿಂದ 30 ದಿನಗಳೊಳಗೆ ಸಲ್ಲಿಸಬೇಕು.
ಮಂಗಳೂರು
Raghupti Bhat-2028ರ ಚುನಾವಣೆಯಲ್ಲಿ ಸ್ಪರ್ಧೆ ಖಚಿತ; ಕಾಂಗ್ರೆಸ್ ಸೇರ್ಪಡೆ ಬಗ್ಗೆ ಏನು ಹೇಳಿದ್ರು ರಘುಪತಿ ಭಟ್
ಕಾಂಗ್ರೆಸ್ ಸೇರ್ಪಡೆಯ ಕುರಿತು ಇನ್ನೂ ಯಾವುದೇ ಅಂತಿಮ ನಿರ್ಧಾರ ಕೈಗೊಂಡಿಲ್ಲ. ಆದರೆ 2028ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದು ಖಚಿತ ಎಂದು ಉಡುಪಿ ಮಾಜಿ ಶಾಸಕ ರಘುಪತಿ ಭಟ್ ತಿಳಿಸಿದ್ದಾರೆ.
ಮಂಗಳೂರು: ಕಾಂಗ್ರೆಸ್ ಸೇರ್ಪಡೆಯ ಕುರಿತು ಇನ್ನೂ ಯಾವುದೇ ಅಂತಿಮ ನಿರ್ಧಾರ ಕೈಗೊಂಡಿಲ್ಲ. ಆದರೆ 2028ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದು ಖಚಿತ ಎಂದು ಉಡುಪಿ ಮಾಜಿ ಶಾಸಕ ರಘುಪತಿ ಭಟ್ ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ನಿಂದ ಈಗಾಗಲೇ ಆಹ್ವಾನ ಬಂದಿರುವುದು ನಿಜ. ಈ ಬಗ್ಗೆ ಯೋಚನೆ ಮಾಡುತ್ತಿದ್ದೇನೆ. ನನ್ನ ಬೆಂಬಲಿಗರೊಂದಿಗೆ ಚರ್ಚಿಸಿ, ಅವರ ಅಭಿಪ್ರಾಯ ಪಡೆದುಕೊಂಡ ಬಳಿಕವೇ ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆ ಎಂದು ಹೇಳಿದರು.
“ಬಿಜೆಪಿಯವರು ಕರೆಯುತ್ತಾರೆ ಎಂದು ಕಾಯುತ್ತಿದ್ದೇನೆ. ಬಿಜೆಪಿ ಸೇರುವ ಬಗ್ಗೆಯೂ ಯೋಚಿಸಬಹುದು. ಆದರೆ ಕಾಂಗ್ರೆಸ್ ಸೇರುವ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ” ಎಂದು ಸ್ಪಷ್ಟಪಡಿಸಿದರು.
ಬಾಲ್ಯದಿಂದಲೂ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತನಾಗಿ ಬೆಳೆದು, ಬಿಜೆಪಿಯಲ್ಲಿ ಯುವ ಮೋರ್ಚಾ ಜಿಲ್ಲಾ ಘಟಕ ಹಾಗೂ ಜಿಲ್ಲಾಧ್ಯಕ್ಷನಾಗಿ ಕೆಲಸ ಮಾಡಿದ್ದೇನೆ. ಮೂರು ಬಾರಿ ಶಾಸಕನಾಗಿದ್ದೇನೆ. ಹೀಗಿರುವಾಗ ಏಕಾಏಕಿ ಪಕ್ಷ ಬದಲಿಸುವ ನಿರ್ಧಾರ ಕೈಗೊಳ್ಳಲು ನನ್ನ ಮನಸ್ಸು ಒಪ್ಪುತ್ತಿಲ್ಲ. ನನ್ನ ಬೆಂಬಲಿಗರ ವಿಶ್ವಾಸ ಪಡೆದುಕೊಂಡೇ ಮುಂದಿನ ಹೆಜ್ಜೆ ಇಡುತ್ತೇನೆ ಎಂದು ತಿಳಿಸಿದರು.
ಕಳೆದ ಚುನಾವಣೆಯ ಸಂದರ್ಭ ತಮಗೆ ಅನ್ಯಾಯವಾಗಿದೆ ಎಂಬ ಅಸಮಾಧಾನ ವ್ಯಕ್ತಪಡಿಸಿದ ರಘುಪತಿ ಭಟ್, ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ತಪ್ಪಿದ್ದಕ್ಕಿಂತಲೂ ವಿಧಾನ ಪರಿಷತ್ ಸ್ಥಾನ ನೀಡುವುದಾಗಿ ಹೇಳಿ, ಕೊನೆಗೆ ಅವಕಾಶ ನೀಡದಿರುವುದು ನೋವು ತಂದಿದೆ ಎಂದರು.
ತಮ್ಮದೇ ಪಕ್ಷದ ಕೆಲವು ಶಾಸಕರಿಂದ ವೈಯಕ್ತಿಕ ದಬ್ಬಾಳಿಕೆ ಎದುರಿಸಬೇಕಾಯಿತು ಎಂದು ಆರೋಪಿಸಿದ ಅವರು, ಈ ವಿಚಾರದಲ್ಲಿ ಸಂಘದ ಹಿರಿಯರು ಹಾಗೂ ಬಿಜೆಪಿಯ ನಾಯಕರು ತಮ್ಮೊಂದಿಗೆ ಮಾತನಾಡದಿರುವುದು ಬೇಸರ ತಂದಿದೆ ಎಂದು ಹೇಳಿದರು.
“ನನ್ನ ಹತ್ತಿರದ ಕ್ಷೇತ್ರಗಳ ಮಾಜಿ ಶಾಸಕರನ್ನು ಗೌರವದಿಂದ ಕಾಣಲಾಗುತ್ತದೆ. ನನಗೆ ವಿಶೇಷ ಗೌರವ ಬೇಡ. ಕನಿಷ್ಠ ಬಹುವಚನದಲ್ಲಿ ಮಾತನಾಡಿದ್ದರೂ ಸಾಕಿತ್ತು. ಈ ಎಲ್ಲ ಘಟನೆಗಳು ಮಾನಸಿಕವಾಗಿ ನೋವುಂಟುಮಾಡಿವೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
2028ರ ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತು ಮಾತನಾಡಿದ ಅವರು, ಕ್ಷೇತ್ರದ ಜನರು ನನ್ನನ್ನು ಸೋಲಿಸಿಲ್ಲ. ಪಕ್ಷವೇ ನನಗೆ ಟಿಕೆಟ್ ತಪ್ಪಿಸಿದೆ ಎಂಬ ಭಾವನೆ ಜನರಲ್ಲಿದೆ. ಜನರು ಸ್ಪರ್ಧಿಸುವಂತೆ ಒತ್ತಾಯಿಸುತ್ತಿದ್ದಾರೆ. ಜನರು ಬೇಡ, ನೀವು ಚುನಾವಣೆಗೆ ನಿಲ್ಲಬೇಡಿ ಎಂದು ಹೇಳಿದರೆ ಮನೆಯಲ್ಲೇ ಕುಳಿತುಕೊಳ್ಳುತ್ತೇನೆ. ಜನರ ಕೆಲಸ ಮಾಡಲು ಜನಪ್ರತಿನಿಧಿಯಾಗಲೇಬೇಕೆಂದಿಲ್ಲ. ಚುನಾವಣಾ ರಾಜಕೀಯದಿಂದ ದೂರವಿದ್ದರೂ ಜನರಿಗೆ ಸಹಾಯ ಮಾಡಬಹುದು ಎಂದು ರಘುಪತಿ ಭಟ್ ಹೇಳಿದರು
ಮಂಗಳೂರು
HYDGEN Innovation-HYDGEN ಇನ್ನೋವೇಶನ್ ಡೇ 2026
2026ರ ಅಕ್ಟೋಬರ್ 15ರಂದು ಮಂಗಳೂರಿನ ಗಂಜಿಮಠದಲ್ಲಿರುವ HYDGEN ಘಟಕದಲ್ಲಿ HYDGEN ಇನ್ನೋವೇಶನ್ ಡೇ 2026 ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದೇವೆ. ಇದು ವಾರ್ಷಿಕ 20 ಮೆಗಾವ್ಯಾಟ್ ಉತ್ಪಾದನಾ ಸಾಮರ್ಥ್ಯ ಹೊಂದಿರುವ ನಮ್ಮ ನೂತನ ತಯಾರಿಕಾ ಘಟಕ.
2026ರ ಅಕ್ಟೋಬರ್ 15ರಂದು ಮಂಗಳೂರಿನ ಗಂಜಿಮಠದಲ್ಲಿರುವ HYDGEN ಘಟಕದಲ್ಲಿ HYDGEN ಇನ್ನೋವೇಶನ್ ಡೇ 2026 ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದೇವೆ. ಇದು ವಾರ್ಷಿಕ 20 ಮೆಗಾವ್ಯಾಟ್ ಉತ್ಪಾದನಾ ಸಾಮರ್ಥ್ಯ ಹೊಂದಿರುವ ನಮ್ಮ ನೂತನ ತಯಾರಿಕಾ ಘಟಕ.
ಭಾರತವು ಎಲೆಕ್ಟ್ರೋಲೈಸರ್ಗಳನ್ನು ನಿರ್ಮಿಸಬಲ್ಲದು ಎಂಬುದನ್ನು ಈಗಾಗಲೇ ತೋರಿಸಿಕೊಟ್ಟಿದೆ. ಈಗಿನ ನಿಜವಾದ ಸವಾಲು ಅವುಗಳನ್ನು ದೊಡ್ಡ ಸಂಖ್ಯೆಯಲ್ಲಿ ತಯಾರಿಸುವುದು, ಅದೂ ಪ್ರತಿ ಬಾರಿಯೂ ಒಂದೇ ಗುಣಮಟ್ಟದಲ್ಲಿ ಮತ್ತು ಕಾರ್ಖಾನೆ ನಡೆಸುವವರಿಗೆ ಸೂಕ್ತವೆನಿಸುವ ಬೆಲೆಯಲ್ಲಿ. ಪ್ರಯೋಗಾಲಯದಲ್ಲಿ ಬೆಳೆಸಿದ ವಜ್ರ (ಲ್ಯಾಬ್-ಗ್ರೋನ್ ಡೈಮಂಡ್), ವಿಶೇಷ ರಾಸಾಯನಿಕಗಳು, ಔಷಧ ಮತ್ತು ಸೆಮಿಕಂಡಕ್ಟರ್ ಕ್ಷೇತ್ರಗಳ ಅನೇಕ ತಯಾರಕರು ಇಂದಿಗೂ ಹೈಡ್ರೋಜನ್ ಅನ್ನು ಸಿಲಿಂಡರ್ಗಳು ಮತ್ತು ಟ್ಯೂಬ್ ಟ್ರೇಲರ್ಗಳ ಮೂಲಕ ಖರೀದಿಸುತ್ತಿದ್ದಾರೆ. ಅವರು ಪಾವತಿಸುವ ಮೊತ್ತದಲ್ಲಿ ಶೇ. 70–85ರಷ್ಟು ಭಾಗ ಹೈಡ್ರೋಜನ್ಗಾಗಿ ಅಲ್ಲ, ಅದರ ಕಂಪ್ರೆಷನ್, ಸಾಗಣೆ ಮತ್ತು ಸಂಗ್ರಹಣೆಗೆ ಖರ್ಚಾಗುತ್ತದೆ. ಒಂದು ಲಾರಿ ತಡವಾದರೂ ಇಡೀ ಉತ್ಪಾದನಾ ಸಾಲು ನಿಲ್ಲುವ ಸಾಧ್ಯತೆ ಇದೆ. ಹೈಡ್ರೋಜನ್ ಅನ್ನು ಅದನ್ನು ಬಳಸುವ ಕಾರ್ಖಾನೆಯಲ್ಲೇ ಉತ್ಪಾದಿಸಿದರೆ ಈ ವೆಚ್ಚ ಇಲ್ಲವಾಗುತ್ತದೆ. ಭಾರತೀಯ ಉದ್ಯಮಕ್ಕೆ ಬೇಕಾದ ಪ್ರಮಾಣದಲ್ಲಿ ಈ ವ್ಯವಸ್ಥೆಗಳನ್ನು ತಯಾರಿಸುವುದು ನಮ್ಮ ಕೆಲಸ. ಅದಕ್ಕಾಗಿಯೇ ಮಂಗಳೂರಿನ ಗಂಜಿಮಠದಲ್ಲಿ HYDGEN ಘಟಕವನ್ನು ನಿರ್ಮಿಸಿದ್ದೇವೆ.
ದಿನದ ಕಾರ್ಯಕ್ರಮ ಮಂಗಳೂರಿನ ಗಂಜಿಮಠದಲ್ಲಿರುವ HYDGEN ಘಟಕದ ವೀಕ್ಷಣೆಯೊಂದಿಗೆ ಆರಂಭವಾಗಲಿದೆ. ಅತಿಥಿಗಳು ಸ್ಟ್ಯಾಕ್ ಜೋಡಣೆ, ಸಿಸ್ಟಮ್ ಇಂಟಿಗ್ರೇಷನ್, ಪರೀಕ್ಷೆ ಮತ್ತು ಹೈಡ್ರೋಜನ್ ಗುಣಮಟ್ಟ ತಪಾಸಣೆ ಪ್ರಕ್ರಿಯೆಗಳನ್ನು ಒಂದೇ ಆವರಣದಲ್ಲಿ ನೇರವಾಗಿ ನೋಡಲಿದ್ದಾರೆ. ನಂತರ ನಮ್ಮ 250 ಕಿಲೋವ್ಯಾಟ್ AEM ಮತ್ತು PEM ಎಲೆಕ್ಟ್ರೋಲೈಸರ್ಗಳನ್ನು ಅನಾವರಣಗೊಳಿಸಲಾಗುವುದು. ಪ್ರತಿದಿನ ಹೆಚ್ಚು ಹೈಡ್ರೋಜನ್ ಅಗತ್ಯವಿರುವ ಕಾರ್ಖಾನೆಗಳಿಗಾಗಿ ರೂಪಿಸಲಾದ ಇವುಗಳನ್ನು ಮಂಗಳೂರಿನಲ್ಲೇ ವಿನ್ಯಾಸಗೊಳಿಸಿ, ಜೋಡಿಸಿ, ಪರೀಕ್ಷಿಸಲಾಗಿದೆ.
ಪುಣೆಯ ಸಿಎಸ್ಐಆರ್–ರಾಷ್ಟ್ರೀಯ ರಾಸಾಯನಿಕ ಪ್ರಯೋಗಾಲಯದ (CSIR–NCL) ನಿರ್ದೇಶಕರಾದ ಡಾ. ಆಶಿಷ್ ಲೇಲೆ ಅವರು, ಭಾರತದಲ್ಲಿ ಹೈಡ್ರೋಜನ್ ತಂತ್ರಜ್ಞಾನಗಳು ಪ್ರಯೋಗಾಲಯದಿಂದ ವಾಣಿಜ್ಯ ಬಳಕೆಯ ಹಂತಕ್ಕೆ ಹೇಗೆ ತಲುಪುತ್ತವೆ ಎಂಬ ಕುರಿತು ಪ್ರಧಾನ ಭಾಷಣ ಮಾಡಲಿದ್ದಾರೆ.
ಬಳಿಕ ನಡೆಯುವ ತಜ್ಞರ ಉಪನ್ಯಾಸಗಳು ಮತ್ತು ಸಂವಾದ ಗೋಷ್ಠಿಗಳಲ್ಲಿ ಮೆಂಬ್ರೇನ್ ಎಲೆಕ್ಟ್ರೋಲೈಸರ್ಗಳನ್ನು ಪೈಲಟ್ ಘಟಕಗಳಿಂದ ಬಹು-ಮೆಗಾವ್ಯಾಟ್ ಸ್ಥಾವರಗಳ ಮಟ್ಟಕ್ಕೆ ಕೊಂಡೊಯ್ಯುವುದು, ಕಾರ್ಖಾನೆಯಲ್ಲೇ ಉತ್ಪಾದಿಸುವ ಹೈಡ್ರೋಜನ್ ಈಗಾಗಲೇ ಯಾವ ಉದ್ಯಮಗಳಿಗೆ ಲಾಭ ತರುತ್ತಿದೆ ಹಾಗೂ ಹೈಡ್ರೋಜನ್ ವೆಚ್ಚವನ್ನು ಇಳಿಸಲು ಬೇಕಾದ ಹೂಡಿಕೆಯನ್ನು ಹೇಗೆ ಒದಗಿಸುವುದು ಎಂಬ ವಿಷಯಗಳ ಕುರಿತು ಚರ್ಚೆ ನಡೆಯಲಿದೆ.
ಕರ್ನಾಟಕ ಸರ್ಕಾರದ ಮಾನ್ಯ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಸಚಿವರಾದ ಎಂ. ಬಿ. ಪಾಟೀಲ್; ಕರ್ನಾಟಕ ಸರ್ಕಾರದ ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಯು. ಟಿ. ಖಾದರ್; ಮಾನ್ಯ ಲೋಕಸಭಾ ಸದಸ್ಯರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ; ಹಾಗೂ ಮಂಗಳೂರು ನಗರ ಉತ್ತರ ಕ್ಷೇತ್ರದ ಮಾನ್ಯ ಶಾಸಕರಾದ ಡಾ. ವೈ. ಭರತ್ ಶೆಟ್ಟಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿರುವುದು ನಮಗೆ ಸಂತಸ ತಂದಿದೆ. ದೇಶದಾದ್ಯಂತದಿಂದ ನೀತಿ ನಿರೂಪಕರು, ಸರ್ಕಾರಿ ಅಧಿಕಾರಿಗಳು, ಸಂಶೋಧಕರು, ಶಿಕ್ಷಣ ತಜ್ಞರು, ಹೂಡಿಕೆದಾರರು ಮತ್ತು ಉದ್ಯಮಿಗಳು ಸಹ ಪಾಲ್ಗೊಳ್ಳಲಿದ್ದಾರೆ.
HYDGEN ಒಂದೇ ಗುರಿಯೊಂದಿಗೆ ಆರಂಭವಾಯಿತು:
ಉದ್ಯಮಗಳಿಗೆ ಅವಲಂಬಿಸಬಹುದಾದ ಹೈಡ್ರೋಜನ್ ಅನ್ನು, ಮುಂಚಿತವಾಗಿ ಲೆಕ್ಕ ಹಾಕಬಹುದಾದ ವೆಚ್ಚದಲ್ಲಿ ಒದಗಿಸುವುದು. ದೊಡ್ಡ ಸಾಮರ್ಥ್ಯದ ವ್ಯವಸ್ಥೆಗಳು ಹಾಗೂ ಮಂಗಳೂರಿನಲ್ಲೇ ಬಿಡಿಭಾಗ ಪೂರೈಕೆದಾರರ ಸ್ಥಳೀಯ ಜಾಲದ ಮೂಲಕ, ಗಂಜಿಮಠ ಘಟಕವು ಈ ಗುರಿಯನ್ನು ಇನ್ನಷ್ಟು ಗ್ರಾಹಕರಿಗೆ ತಲುಪಿಸಲು ನೆರವಾಗುತ್ತದೆ. ಇಲ್ಲಿಂದ ನಾವು ಭಾರತ ಮತ್ತು ವಿದೇಶಗಳ ಗ್ರಾಹಕರಿಗೆ ಸೇವೆ ಒದಗಿಸುತ್ತೇವೆ.
-
ನಿಧನ ವಾರ್ತೆ21 hours agoSullia-Big Breaking: ಸುಳ್ಯ: ವಿದ್ಯುತ್ ಶಾಕ್ಗೆ ಇಬ್ಬರು ಯುವಕರು ಬಲಿ; ಬಾಲಕನಿಗೆ ಗಾಯ
-
ನಿಧನ ವಾರ್ತೆ15 hours agoKalmadka-ಸುಳ್ಯ ಕಲ್ಮಡ್ಕದಲ್ಲಿ ದುರಂತ: ವಿದ್ಯುತ್ ಸ್ಪರ್ಶಿಸಿ ಮೀನು ಹಿಡಿಯಲು ಹೋದ ಬಾವ–ಬಾಮೈದ ಸಾವು
-
ಸ್ಥಳೀಯ20 hours agoArrested-1,000 ಅಡಿ ಆಳದ ಪ್ರಪಾತದಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿನಿ ಶವ ಪತ್ತೆ; ಆತ್ಮಹತ್ಯೆ ಕತೆ ಕಟ್ಟಿದ ಪ್ರಿಯಕರ ಅರೆಸ್ಟ್..!
-
ಮಂಗಳೂರು18 hours agoSoujanya Case-BIG BREAKING NEWS: ಸೌಜನ್ಯ ಪ್ರಕರಣ: ಮಂಗಳೂರಿನಲ್ಲಿ ಎಸ್ಐಟಿ ಮಹತ್ವದ ಸಭೆ; ಸೌಜನ್ಯ ದೇಹ ಸಿಕ್ಕ ಸ್ಥಳಕ್ಕೆ ಭೇಟಿ ಸಾಧ್ಯತೆ
-
ಸ್ಥಳೀಯ20 hours agoSatish Patri-ಚಿಕ್ಕಮಗಳೂರು: ದೆವ್ವ ಬಿಡಿಸುವ ನೆಪದಲ್ಲಿ ಮಹಿಳೆ ಮೇಲೆ ಅತ್ಯಾಚಾರ ಆರೋಪ; ತಲೆಮರೆಸಿಕೊಂಡಿದ್ದ ಅರ್ಚಕ ಸತೀಶ್ ಪಾತ್ರಿ ಅರೆಸ್ಟ್..!
-
Uncategorized13 hours agoLawyer Amrutesh-ಸೌಜನ್ಯ ಪ್ರಕರಣ ಮರುತನಿಖೆ : ಸಂತೋಷ್ ರಾವ್ ವಿರುದ್ಧ ಬಲವಾದ ಸಾಕ್ಷ್ಯಗಳಿವೆ: ಧಾರ್ಮಿಕ ಕ್ಷೇತ್ರದ ಮೇಲೆ ಷಡ್ಯಂತ್ರ ನಡೆಯುತ್ತಿದೆ : ಹೈಕೋರ್ಟ್ ವಕೀಲ ಅಮೃತೇಶ್
-
ಬಿಗ್ ನ್ಯೂಸ್15 hours agoVitla-ವಿಟ್ಲ: ಕಾರು–ಆಕ್ಟಿವಾ ಡಿಕ್ಕಿ; ಸವಾರನಿಗೆ ಗಂಭೀರ ಗಾಯ
-
ಶಿಕ್ಷಣ15 hours agoVivekananda-ಪುತ್ತೂರಿನ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಇಬ್ಬರು ಉಪನ್ಯಾಸಕರಿಗೆ ಡಾಕ್ಟರೇಟ್ ಪದವಿ


















