ಜೀವನಶೈಲಿ
Drinking Watter : ನೀವು ಅಗತ್ಯಕ್ಕೆ ತಕ್ಕಷ್ಟು ನೀರು ಸೇವಿಸುತ್ತಿಲ್ಲವೇ? ಹಾಗಾದರೇ ಖಂಡಿತ ನಿಮ್ಮನ್ನು ಈ ಸಮಸ್ಯೆ ಕಾಡುತ್ತಿರುತ್ತದೆ
ಮನುಷ್ಯನಿಗೆ ಜೀವಿಸಲು ಗಾಳಿ ನೀರು ಆಹಾರ ತುಂಬಾ ಮುಖ್ಯ. ಇದರಲ್ಲಿ ಯಾವುದೇ ಒಂದು ಕಡಿಮೆ ಆದರೂ ಅನಾರೋಗ್ಯ ಸಮಸ್ಯೆ ಎದುರಾಗುತ್ತದೆ. ನಿಧಾನವಾಗಿ ದೇಹದ ಒಂದೊಂದೇ ಅಂಗಾಂಗಗಳು ತಮ್ಮ ಕಾರ್ಯ ಚಟುವಟಿಕೆ ಬದಲಾಯಿಸಿಕೊಳ್ಳಲು ಪ್ರಾರಂಭ ಮಾಡುತ್ತವೆ.
ಈ ಲೇಖನದಲ್ಲಿ ನೀರಿನ ಬಗ್ಗೆ ತಿಳಿದುಕೊಳ್ಳುಣ ಬನ್ನಿ. ನೀರನ್ನು ಕುಡಿಯುವ ವಿಚಾರದಲ್ಲಿ ನಾವು ಎಂದಿಗೂ ತಾತ್ಸಾರ ಮಾಡಬಾರದು. ಬಳಸಲು ಸಹ ನೀರು ತುಂಬಾ ಅತ್ಯಮೂಲ್ಯ ಎಂಬುದು ನಿಮಗೆ ತಿಳಿದಿರಬೇಕು. ನಮ್ಮ ಆರೋಗ್ಯವನ್ನು ಅಚ್ಚುಕಟ್ಟಾಗಿ ಕಾಪಾಡಿಕೊಳ್ಳಲು ಪ್ರತಿ ದಿನವೂ ನಾವು ಇಂತಿಷ್ಟು ಪ್ರಮಾಣದ ನೀರು ಎಂದು ಕುಡಿಯಲೇಬೇಕು.
ನಾವು ಅಗತ್ಯಕ್ಕೆ ತಕ್ಕಷ್ಟು ನೀರು ಕುಡಿಯುತ್ತಿದ್ದೆವೆಯೆ ಎಂಬುದನ್ನು ಪರೀಕ್ಷಿಸುತ್ತಿರಬೇಕು. ಕೆಳಗೆ ವಿವರಿಸಲಾದ ಪಂಚ ಸಮಸ್ಯೆಗಳು ನಿಮ್ಮನ್ನು ಕಾಡುತ್ತಿವೆ ಎಂದಾದರೇ ನೀವು ದೇಹಕ್ಕೆ ಬೇಕಾದಷ್ಟು ನೀರು ಸೇವಿಸುತ್ತಿಲ್ಲ ಎಂದೇ ಇದರ ಅರ್ಥ.
ಪದೇ ಪದೇ ಹಸಿವಾಗುವುದು :
ನಾವು ಸಾಕಷ್ಟು ನೀರು ಕುಡಿಯದೇ ಇದ್ದಲ್ಲಿ ನಮ್ಮ ದೇಹ ನಿರ್ಜಲೀಕರಣ ಉಂಟಾಗಿ, ಅದು ತುರ್ತುಕ್ರಮದ ಸ್ಥಿತಿಯಲ್ಲಿ ಕೆಲಸ ಮಾಡಲು ಪ್ರಾರಂಭಿಸುತ್ತದೆ. ಯಕೃತ್ತು ತನ್ನ ಗ್ಲೈಕೋಜೆನ್ ಅನ್ನು ಹಿಡಿದಿಟ್ಟುಕೊಳ್ಳುತ್ತದೆ. ಇದರಿಂದ ನಿಮಗೆ ಪದೇ ಪದೇ ಹಸಿವಾಗುತ್ತದೆ.
ಮೂತ್ರ ಹಳದಿ ಬಣ್ಣಕ್ಕೆ ತಿರುಗುವುದು :
ಇದು ಡಿಹೈಡ್ರೇಶನ್ ನ ಅತ್ಯಂತ ಸಾಮಾನ್ಯ ಲಕ್ಷಣ. ದೇಹದಲ್ಲಿ ನೀರಿನ ಅಂಶ ಕಡಿಮೆಯಾದಾಗ ಕಿಡ್ನಿಯಿಂದ ಬರುವ ಎಲ್ಲಾ ತ್ಯಾಜ್ಯ ಕಡಿಮೆ ಮೂತ್ರದ ರೂಪದಲ್ಲಿ ಹೊರಬರುತ್ತದೆ. ಜೀವಾಣುಗಳ ಸಾಂದ್ರತೆಯ ಹೆಚ್ಚಳದಿಂದ ಮೂತ್ರದ ಬಣ್ಣ ಕಡು ಹಳದಿ ಬಣ್ಣಕ್ಕೆ ತಿರುಗುತ್ತದೆ.
ಉಸಿರಾಟ
ಉಸಿರಾಟಕ್ಕೆ ಸಮಸ್ಯೆ ತಂದೊಡ್ಡಬಲ್ಲ ಬ್ಯಾಕ್ಟೀರಿಯಾಗಳನ್ನು ನಮ್ಮ ಬಾಯಿಯಲ್ಲಿರುವ ಸಲೈವಾ ತಡೆಯುವ ಕೆಲಸ ಮಾಡುತ್ತದೆ. ನೀರನ್ನು ನಾವು ಕಡಿಮೆ ಕುಡಿದಾಗ ಬಾಯಿಯಲ್ಲಿರುವ ಸಲೈವಾ ಪ್ರಮಾಣ ಕೂಡ ಕಡಿಮೆಯಾಗಿ, ಉಸಿರಾಟದ ಸಮಸ್ಯೆ ಕಾಣಿಸಿಕೊಳ್ಳುತ್ತದೆ.
ತಲೆನೋವು
ನಾವು ನೀರನ್ನು ಕಡಿಮೆ ಕುಡಿಯೋದ್ರಿಂದ ನಮ್ಮ ದೇಹದಲ್ಲಿನ ರಕ್ತ ಸಂಚಾರ ಕೂಡ ಕಡಿಮೆಯಾಗುತ್ತದೆ. ಇದರಿಂದ ನಮ್ಮ ಮೆದುಳಿಗೆ ಸಾಕಷ್ಟು ಆಮ್ಲಜನಕ ತಲುಪುವುದಿಲ್ಲ. ಪರಿಣಾಮ ತಲೆನೋವು ಹಾಗೂ ಒಂದು ರೀತಿಯ ಆಲಸ್ಯ ಕಾಣಿಸಿಕೊಳ್ಳುತ್ತದೆ.
ಆಯಾಸ
ನೀವು ಕಡಿಮೆ ಪ್ರಮಾಣದಲ್ಲಿ ನೀರನ್ನು ಕುಡಿಯುವುದರಿಂದ ನಿಮ್ಮ ದೇಹ ರಕ್ತದಲ್ಲಿರುವ ನೀರನ್ನು ತೆಗೆದುಕೊಂಡು ತನ್ನ ಅಗತ್ಯ ಪೂರೈಸಿಕೊಳ್ಳುತ್ತದೆ. ಪರಿಣಾಮ ನಿಮ್ಮ ಹೃದಯ ತುಂಬಾ ವೇಗವಾಗಿ ಕೆಲಸ ಮಾಡಲಾರಂಭಿಸುತ್ತದೆ. ಅದರಿಂದ ನಿಮಗೆ ಆಯಾಸ ಕಾಣಿಸಿಕೊಳ್ಳುತ್ತದೆ.
ಮಂಗಳೂರು
CM-ಒಂದು ಅಭಿನಂದನೆಯೂ ಇಲ್ಲ ಎಂದು ಕ್ರೀಡಾಪಟುವಿನಿಂದ ಬೇಸರ ವ್ಯಕ್ತವಾದ ಕೂಡಲೇ ಪೂವಮ್ಮಗೆ ಕರೆ ಮಾಡಿದ ಸಿಎಂ..! ಏನೂ ಹೇಳಿದ್ರು ಗೊತ್ತೇ..?
ಏಷ್ಯನ್ ಗೇಮ್ಸ್‌ನಲ್ಲಿ ಭಾರತಕ್ಕೆ ಬಂಗಾರದ ಪದಕ ತಂದುಕೊಟ್ಟ ಮಂಗಳೂರಿನ ಹೆಮ್ಮೆಯ ಅಥ್ಲೀಟ್ ಎಂ.ಆರ್. ಪೂವಮ್ಮ ಅವರ ಸಾಧನೆಯನ್ನು ಮುಕ್ತಕಂಠದಿಂದ ಶ್ಲಾಘಿಸಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಅವರಿಗೆ ದೂರವಾಣಿ ಕರೆ ಮಾಡಿ ಶುಭಾಶಯ ಕೋರಿದ್ದಾರೆ. ಅಲ್ಲದೆ ಅಕ್ಟೋಬರ್ 6 ರಂದು ಬೆಂಗಳೂರಿನಲ್ಲಿ ತಮ್ಮನ್ನು ಭೇಟಿಯಾಗುವಂತೆ ಆಹ್ವಾನ ನೀಡಿದ್ದಾರೆ.

ಮಂಗಳೂರು, ಅ.03: ಏಷ್ಯನ್ ಗೇಮ್ಸ್‌ನಲ್ಲಿ ಭಾರತಕ್ಕೆ ಬಂಗಾರದ ಪದಕ ತಂದುಕೊಟ್ಟ ಮಂಗಳೂರಿನ ಹೆಮ್ಮೆಯ ಅಥ್ಲೀಟ್ ಎಂ.ಆರ್. ಪೂವಮ್ಮ ಅವರ ಸಾಧನೆಯನ್ನು ಮುಕ್ತಕಂಠದಿಂದ ಶ್ಲಾಘಿಸಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಅವರಿಗೆ ದೂರವಾಣಿ ಕರೆ ಮಾಡಿ ಶುಭಾಶಯ ಕೋರಿದ್ದಾರೆ. ಅಲ್ಲದೆ ಅಕ್ಟೋಬರ್ 6 ರಂದು ಬೆಂಗಳೂರಿನಲ್ಲಿ ತಮ್ಮನ್ನು ಭೇಟಿಯಾಗುವಂತೆ ಆಹ್ವಾನ ನೀಡಿದ್ದಾರೆ.
ತನ್ನದೇ ತಂಡದ ಬೇರೆ ಕ್ರೀಡಾಪಟುಗಳಿಗೆ ಅಲ್ಲಿನ ಸಿಎಂ ಹಾಗೂ ಇತರ ಮಂತ್ರಿಗಳು ಫೋನ್ ಮೂಲಕ ಅಭಿನಂದಿಸಿದ್ದಾರೆ ಹಾಗೂ ಕರ್ನಾಟಕದಲ್ಲಿ ಕೇವಲ 30 ಲಕ್ಷ ಬಹುಮಾನ ನೀಡಲಾಗುತ್ತಿದೆ ಬೇರೆ ರಾಜ್ಯದಲ್ಲಿ 1 ಕೋಟಿ ಬಹುಮಾನ ನೀಡುತ್ತಾರೆ ಎಂದು ಸಾಧಕಿ ಪೂವಮ್ಮ ನಿನ್ನೆ ಬೇಸರ ವ್ಯಕ್ತಪಡಿಸಿದ್ದರು.
ಅದ್ಧೂರಿ ಸ್ವಾಗತ:
ಜಪಾನ್‌ನಲ್ಲಿ ನಡೆದ ಏಷ್ಯನ್ ಗೇಮ್ಸ್‌ನ 4×400 ಮೀಟರ್ ಮಹಿಳೆಯರ ರಿಲೇ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದ ಪೂವಮ್ಮ, ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆ ಅಭಿಮಾನಿಗಳು ಹಾಗೂ ಸಾರ್ವಜನಿಕರು ಹೂಮಳೆಗರೆದು ಅದ್ಧೂರಿ ಸ್ವಾಗತ ಕೋರಿದರು. ಇದು ಪೂವಮ್ಮ ಭಾಗವಹಿಸಿದ 3ನೇ ಏಷ್ಯನ್ ಗೇಮ್ಸ್ ಆಗಿದ್ದು, ಒಟ್ಟಾರೆಯಾಗಿ ಅವರ 6ನೇ ಪದಕವಾಗಿದೆ. ಕ್ರೀಡಾಂಗಣದಲ್ಲಿ ಭಾರತದ ರಾಷ್ಟ್ರಗೀತೆ ಮೊಳಗಿದ್ದು ಅತ್ಯಂತ ಹೆಮ್ಮೆಯ ಕ್ಷಣ ಎಂದು ಅವರು ಹರ್ಷ ವ್ಯಕ್ತಪಡಿಸಿದ್ದಾರೆ.
ಹಲವು ಗಣ್ಯರಿಂದ ಅಭಿನಂದನೆ
ಆರಂಭದಲ್ಲಿ ತಮಗೆ ಸೂಕ್ತ ಗೌರವ ಹಾಗೂ ಶುಭಾಶಯಗಳು ದೊರೆಯದಿದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದ ಪೂವಮ್ಮ, ಬಳಿಕ ಡಿಸಿಎಂ, ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಸೇರಿದಂತೆ ಹಲವು ಗಣ್ಯರಿಂದ ಅಭಿನಂದನೆಗಳನ್ನು ಸ್ವೀಕರಿಸಿದರು.
ಇದೇ ವೇಳೆ ಕ್ರೀಡಾಪಟುಗಳ ಪ್ರೋತ್ಸಾಹಧನ ಹೆಚ್ಚಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದ ಪೂವಮ್ಮ, “ಹರಿಯಾಣ ಸೇರಿದಂತೆ ಇತರ ರಾಜ್ಯಗಳಲ್ಲಿ ಚಿನ್ನ ಗೆದ್ದವರಿಗೆ 3 ಕೋಟಿ ರೂ. ನಗದು ಬಹುಮಾನ ನೀಡಲಾಗುತ್ತಿದೆ. ಆದರೆ ನಮ್ಮ ಕರ್ನಾಟಕದಲ್ಲಿ ಕೇವಲ 35 ಲಕ್ಷ ರೂ. ಮಾತ್ರ ನೀಡಲಾಗುತ್ತಿದೆ. ಯುವ ಅಥ್ಲೀಟ್‌ಗಳನ್ನು ಪ್ರೋತ್ಸಾಹಿಸಲು ಈ ಬಹುಮಾನದ ಮೊತ್ತವನ್ನು ಹೆಚ್ಚಿಸಬೇಕು,” ಎಂದು ಒತ್ತಾಯಿಸಿದ್ದಾರೆ.
ಆರೋಗ್ಯ
Puttur-ಸೆ.29: ವಿಶ್ವ ಹೃದಯ ದಿನ: ಪುತ್ತೂರಿನ ಮೆಡ್‌ಲ್ಯಾಂಡ್ ಆಸ್ಪತ್ರೆಯಲ್ಲಿ ಹೃದಯ ತಪಾಸಣಾ ಶಿಬಿರ
ವಿಶ್ವ ಹೃದಯ ದಿನದ ಅಂಗವಾಗಿ ಪುತ್ತೂರಿನ ಸಂಪ್ಯದಲ್ಲಿರುವ ಮೆಡ್‌ಲ್ಯಾಂಡ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಸೆ.29, ಮಂಗಳವಾರದಂದು ಸಂಜೆ ಗಂಟೆ 3ರಿಂದ ವಿಶೇಷ ಹೃದಯ ತಪಾಸಣಾ ಶಿಬಿರ ಹಾಗೂ ಮಾಹಿತಿ ಕಾರ್ಯಾಗಾರವನ್ನು ಆಯೋಜಿಸಲಾಗಿದೆ.
ಪುತ್ತೂರು: ವಿಶ್ವ ಹೃದಯ ದಿನದ ಅಂಗವಾಗಿ ಪುತ್ತೂರಿನ ಸಂಪ್ಯದಲ್ಲಿರುವ ಮೆಡ್‌ಲ್ಯಾಂಡ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಸೆ.29, ಮಂಗಳವಾರದಂದು ಸಂಜೆ ಗಂಟೆ 3ರಿಂದ ವಿಶೇಷ ಹೃದಯ ತಪಾಸಣಾ ಶಿಬಿರ ಹಾಗೂ ಮಾಹಿತಿ ಕಾರ್ಯಾಗಾರವನ್ನು ಆಯೋಜಿಸಲಾಗಿದೆ.
ಶಿಬಿರದಲ್ಲಿ ಹೃದಯದ ಆರೋಗ್ಯಕ್ಕೆ ಸಂಬಂಧಿಸಿದಂತೆ ಇ.ಸಿ.ಜಿ., ಇಕೋ (ECHO), ಟಿ.ಎಂ.ಟಿ. (TMT) ಸೇರಿದಂತೆ ಅಗತ್ಯ ತಪಾಸಣೆಗಳನ್ನು ನಡೆಸಲಾಗುವುದು. ತಪಾಸಣೆಯ ಬಳಿಕ ಹೃದ್ರೋಗ ತಜ್ಞ ವೈದ್ಯರಿಂದ ಸೂಕ್ತ ಸಲಹೆ ಮತ್ತು ಮಾರ್ಗದರ್ಶನವೂ ದೊರೆಯಲಿದೆ.
ಹೃದಯ ಸಂಬಂಧಿ ಕಾಯಿಲೆಗಳನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚಿ ಸೂಕ್ತ ಚಿಕಿತ್ಸೆ ಪಡೆಯಲು ಶಿಬಿರವು ಸಾರ್ವಜನಿಕರಿಗೆ ಉಪಯುಕ್ತ ಅವಕಾಶವಾಗಲಿದೆ. ವಿಶೇಷವಾಗಿ ಎದೆನೋವು, ಉಸಿರಾಟದ ತೊಂದರೆ, ಹೃದಯ ಬಡಿತದಲ್ಲಿ ವ್ಯತ್ಯಾಸ, ಅಧಿಕ ರಕ್ತದೊತ್ತಡ, ಮಧುಮೇಹ ಅಥವಾ ಕುಟುಂಬದಲ್ಲಿ ಹೃದಯ ಕಾಯಿಲೆಯ ಹಿನ್ನೆಲೆ ಹೊಂದಿರುವವರು ಶಿಬಿರದ ಪ್ರಯೋಜನ ಪಡೆಯುವಂತೆ ಆಸ್ಪತ್ರೆಯ ಆಡಳಿತ ಮಂಡಳಿ ಮನವಿ ಮಾಡಿದೆ.
ಹೃದಯದ ಆರೋಗ್ಯದ ಬಗ್ಗೆ ಮುನ್ನೆಚ್ಚರಿಕೆ ವಹಿಸುವುದು ಹಾಗೂ ನಿಯಮಿತ ತಪಾಸಣೆ ಮಾಡಿಸಿಕೊಳ್ಳುವ ಮೂಲಕ ಆರೋಗ್ಯಕರ ಜೀವನಶೈಲಿಯನ್ನು ರೂಢಿಸಿಕೊಳ್ಳುವಂತೆ ಆಸ್ಪತ್ರೆ ತಿಳಿಸಿದೆ.
ಲೇಖನಗಳು
Mercury-ಬುಧನ ನಕ್ಷತ್ರ ಬದಲಾವಣೆ: ಈ 5 ರಾಶಿಯವರಿಗೆ ಇಂದಿನಿಂದ ‘ರಾಜಯೋಗ’, ಅದೃಷ್ಟದ ಬಾಗಿಲು ಓಪನ್..!
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗ್ರಹಗಳ ರಾಜಕುಮಾರ ಎಂದೇ ಕರೆಯಲ್ಪಡುವ ‘ಬುಧ’ ಇಂದು ತನ್ನ ನಕ್ಷತ್ರವನ್ನು ಬದಲಾಯಿಸುತ್ತಿದ್ದಾನೆ. ಸದ್ಯ ಪೂರ್ವಫಲ್ಗುಣಿ ನಕ್ಷತ್ರದಲ್ಲಿರುವ ಬುಧನು ಇಂದು (ಶನಿವಾರ) ಸಂಜೆ 4:31ಕ್ಕೆ ಸೂರ್ಯನ ಅಧಿಪತ್ಯದ ‘ಉತ್ತರಾಫಲ್ಗುಣಿ’ ನಕ್ಷತ್ರಕ್ಕೆ ಪ್ರವೇಶಿಸಲಿದ್ದಾನೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗ್ರಹಗಳ ರಾಜಕುಮಾರ ಎಂದೇ ಕರೆಯಲ್ಪಡುವ ‘ಬುಧ’ ಇಂದು ತನ್ನ ನಕ್ಷತ್ರವನ್ನು ಬದಲಾಯಿಸುತ್ತಿದ್ದಾನೆ. ಸದ್ಯ ಪೂರ್ವಫಲ್ಗುಣಿ ನಕ್ಷತ್ರದಲ್ಲಿರುವ ಬುಧನು ಇಂದು (ಶನಿವಾರ) ಸಂಜೆ 4:31ಕ್ಕೆ ಸೂರ್ಯನ ಅಧಿಪತ್ಯದ ‘ಉತ್ತರಾಫಲ್ಗುಣಿ’ ನಕ್ಷತ್ರಕ್ಕೆ ಪ್ರವೇಶಿಸಲಿದ್ದಾನೆ.
ಈ ನಕ್ಷತ್ರ ಬದಲಾವಣೆಯು ಮುಂದಿನ 13 ದಿನಗಳ ಕಾಲ ಎಲ್ಲಾ ರಾಶಿಗಳ ಮೇಲೆ ಪ್ರಭಾವ ಬೀರಲಿದ್ದರೂ, 5 ರಾಶಿಯವರಿಗೆ ಮಾತ್ರ ಅತ್ಯಂತ ಶುಭ ಫಲಗಳನ್ನು ನೀಡಲಿದೆ. ಉದ್ಯೋಗ, ವ್ಯವಹಾರ ಮತ್ತು ಆರ್ಥಿಕವಾಗಿ ಲಾಭ ಪಡೆಯಲಿರುವ ಆ ಅದೃಷ್ಟದ ರಾಶಿಗಳು ಇಲ್ಲಿವೆ:
ವೃಷಭ ರಾಶಿ
ವೃಷಭ ರಾಶಿಯವರಿಗೆ ಬುಧನ ನಕ್ಷತ್ರ ಬದಲಾವಣೆ ಹೊಸ ಅವಕಾಶಗಳ ಬಾಗಿಲು ತೆರೆಯಬಹುದು. ವೃತ್ತಿಜೀವನದಲ್ಲಿ ಬಹುದಿನಗಳಿಂದ ಎದುರು ನೋಡುತ್ತಿದ್ದ ಅವಕಾಶಗಳು ಸಿಗುವ ಸಾಧ್ಯತೆಯಿದೆ. ಕೆಲಸದಲ್ಲಿ ಹಿರಿಯ ಅಧಿಕಾರಿಗಳ ಸಂಪೂರ್ಣ ಬೆಂಬಲ ದೊರೆಯುವುದರಿಂದ ನಿಮ್ಮ ಯೋಜನೆಗಳನ್ನು ಯಶಸ್ವಿಯಾಗಿ ಮುಂದಕ್ಕೆ ಕೊಂಡೊಯ್ಯಬಹುದು. ಇದರಿಂದ ವೃತ್ತಿಯಲ್ಲಿ ಆತ್ಮವಿಶ್ವಾಸವೂ ಹೆಚ್ಚಾಗಬಹುದು. ಉದ್ಯೋಗದ ಜೊತೆಗೆ ಕುಟುಂಬದ ವಿಚಾರದಲ್ಲೂ ಈ ಅವಧಿ ಖುಷಿ ನೀಡಬಹುದು. ಕುಟುಂಬದವರೊಂದಿಗೆ ಪ್ರವಾಸ ಅಥವಾ ಮಕ್ಕಳೊಂದಿಗೆ ವಿಶೇಷ ಸಮಯ ಕಳೆಯುವ ಅವಕಾಶ ಸಿಗಬಹುದು. ಒಟ್ಟಿನಲ್ಲಿ, ಕೆಲಸದಲ್ಲಿ ಪ್ರಗತಿ ಮತ್ತು ಕುಟುಂಬದಲ್ಲಿ ಸಂತೋಷ ಎರಡೂ ಒಟ್ಟಿಗೆ ಸಿಗುವ ಆಹ್ಲಾದಕರ ದಿನಗಳು ನಿಮ್ಮದಾಗಬಹುದು.
ಮಿಥುನ ರಾಶಿ
ಬುಧನ ಬದಲಾವಣೆ ಮಿಥುನ ರಾಶಿಯವರಿಗೆ ಹಣದ ವಿಚಾರದಲ್ಲಿ ಹೊಸ ದಾರಿ ತೋರಿಸಬಹುದು. ವ್ಯಾಪಾರದಲ್ಲಿ ತೊಡಗಿರುವವರಿಗೆ ಹೊಸ ಯೋಜನೆಗಳು ಮತ್ತು ಪ್ರಮುಖ ಒಪ್ಪಂದಗಳನ್ನು ಅಂತಿಮಗೊಳಿಸುವ ಅವಕಾಶ ಸಿಗಬಹುದು. ಈಗ ಮಾಡಿಕೊಳ್ಳುವ ಕೆಲವು ವ್ಯವಹಾರ ಸಂಪರ್ಕಗಳು ಮುಂದಿನ ದಿನಗಳಲ್ಲಿ ದೊಡ್ಡ ಲಾಭ ತಂದುಕೊಡುವ ಸಾಧ್ಯತೆಯಿದೆ. ನಿಮ್ಮ ಪರಿಶ್ರಮಕ್ಕೆ ತಕ್ಕ ಫಲ ಸಿಗುವ ಸಮಯ ಇದಾಗಿದ್ದು, ಆದಾಯ ಗಳಿಸಲು ಹೊಸ ಮಾರ್ಗಗಳು ತೆರೆದುಕೊಳ್ಳಬಹುದು. ಹಣಕಾಸಿನ ಪರಿಸ್ಥಿತಿಯಲ್ಲೂ ಸುಧಾರಣೆ ಕಂಡುಬರಬಹುದು. ವ್ಯವಹಾರ ವಿಸ್ತರಣೆ ಜೊತೆಗೆ ಆದಾಯ ಹೆಚ್ಚಿಸಿಕೊಳ್ಳುವ ಅವಕಾಶವೂ ಒಟ್ಟಿಗೆ ಒಲಿದುಬರಬಹುದು.
ಸಿಂಹ ರಾಶಿ
ಸಿಂಹ ರಾಶಿಯವರಿಗೆ ಇಂದಿನಿಂದಲೇ ಶುಭ ಸುದ್ದಿಗಳ ನಿರೀಕ್ಷೆ. ಸೂರ್ಯನ ಅಧಿಪತ್ಯದ ಸಿಂಹ ರಾಶಿಯವರಿಗೆ ಬುಧನ ನಕ್ಷತ್ರ ಬದಲಾವಣೆ ವಿಶೇಷವಾಗಿರಬಹುದು. ವಿಶೇಷವಾಗಿ ಸೆಪ್ಟೆಂಬರ್ 13ರವರೆಗಿನ ಅವಧಿ ಹಲವು ವಿಚಾರಗಳಲ್ಲಿ ಅನುಕೂಲಕರವಾಗಿರಬಹುದು. ನೀವು ಅಂದುಕೊಂಡ ಕೆಲಸಗಳು ನಿರೀಕ್ಷೆಯಂತೆ ನಡೆಯುವ ಸಾಧ್ಯತೆಯಿದ್ದು, ಮನಸ್ಸಿನಲ್ಲೂ ಹೊಸ ಉತ್ಸಾಹ ಮೂಡಬಹುದು. ಮನೆಯ ವಾತಾವರಣ ಸಂತೋಷದಿಂದ ಕೂಡಿರಲಿದ್ದು, ಕುಟುಂಬದವರಿಂದ ಉತ್ತಮ ಬೆಂಬಲ ಸಿಗಬಹುದು. ಹಣಕಾಸಿನ ವಿಚಾರಗಳಲ್ಲೂ ಸ್ಥಿರತೆ ಹೆಚ್ಚಾಗುವ ಸಾಧ್ಯತೆಯಿದೆ. ಹಣದ ಚಿಂತೆ ಕಡಿಮೆಯಾಗಿ ಮನಸ್ಸಿಗೆ ನೆಮ್ಮದಿ, ಕೆಲಸದಲ್ಲಿ ಸ್ಪಷ್ಟತೆ ಸಿಗುವ ದಿನಗಳು ಆರಂಭವಾಗಬಹುದು.
ವೃಶ್ಚಿಕ ರಾಶಿ
ಮುಂದಿನ ದಿನಗಳು ವೃಶ್ಚಿಕ ರಾಶಿಯವರಿಗೆ ಹೊಸ ಅನುಭವಗಳ ಜೊತೆಗೆ ನೆಮ್ಮದಿಯನ್ನೂ ತರಬಹುದು. ಇಂದಿನಿಂದ ಸೆ.13ರವರೆಗಿನ ಅವಧಿ ನಿಮಗೆ ವಿಶೇಷವಾಗಿರಬಹುದು. ಹೊಸ ವಿಷಯಗಳನ್ನು ಕಲಿಯಲು ಮತ್ತು ನಿಮ್ಮ ಜ್ಞಾನವನ್ನು ವಿಸ್ತರಿಸಿಕೊಳ್ಳಲು ಉತ್ತಮ ಅವಕಾಶಗಳು ಸಿಗಬಹುದು. ಕುಟುಂಬದವರೊಂದಿಗೆ ಪ್ರವಾಸಕ್ಕೆ ಯೋಜನೆ ರೂಪಿಸುವ ಸಾಧ್ಯತೆಯಿದ್ದು, ಬಹುದಿನಗಳಿಂದ ಬಯಸುತ್ತಿದ್ದವರೊಂದಿಗೆ ಗುಣಮಟ್ಟದ ಸಮಯ ಕಳೆಯಬಹುದು. ಇದೇ ಸಮಯದಲ್ಲಿ ಧಾರ್ಮಿಕ ಮತ್ತು ಆಧ್ಯಾತ್ಮಿಕ ಚಟುವಟಿಕೆಗಳತ್ತ ಆಸಕ್ತಿ ಹೆಚ್ಚಾಗಬಹುದು. ಕುಟುಂಬದ ಸಂತೋಷ, ಹೊಸ ಕಲಿಕೆ ಮತ್ತು ಮನಸ್ಸಿನ ನೆಮ್ಮದಿ-ಮೂರೂ ಒಂದೇ ಸಮಯದಲ್ಲಿ ಸಿಗುವ ಸಾಧ್ಯತೆಯಿದೆ.
ಧನು ರಾಶಿ
ಬುಧನ ನಕ್ಷತ್ರ ಬದಲಾವಣೆ ಧನು ರಾಶಿಯವರಿಗೆ ಪ್ರಗತಿಯ ಹೊಸ ಬಾಗಿಲು ತೆರೆಯಬಹುದು. ಉದ್ಯೋಗದಲ್ಲಿರುವವರಿಗೆ ತಮ್ಮ ಕ್ಷೇತ್ರದಲ್ಲಿ ಮುನ್ನಡೆಯಲು ಉತ್ತಮ ಅವಕಾಶಗಳು ದೊರೆಯಬಹುದು. ವ್ಯವಹಾರಸ್ಥರಿಗೂ ಹೊಸ ಅವಕಾಶಗಳು ಸಿಗುವ ಸಾಧ್ಯತೆಯಿದ್ದು, ಕೈಗೆತ್ತಿಕೊಂಡ ಕೆಲಸಗಳಲ್ಲಿ ಯಶಸ್ಸು ಕಾಣಬಹುದು. ನಿಮ್ಮ ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗುವ ಸಾಧ್ಯತೆಯಿದ್ದು, ಆರ್ಥಿಕ ಲಾಭವೂ ದೊರೆಯಬಹುದು. ಯಶಸ್ಸಿನ ಅನುಭವದಿಂದ ಆತ್ಮವಿಶ್ವಾಸ ಮತ್ತಷ್ಟು ಹೆಚ್ಚಾಗಲಿದೆ. ಕೆಲಸದಲ್ಲಿ ಯಶಸ್ಸು, ಹಣದಲ್ಲಿ ಲಾಭ ಮತ್ತು ಆತ್ಮವಿಶ್ವಾಸದ ಹೆಚ್ಚಳ-ಧನು ರಾಶಿಯವರಿಗೆ ಶುಭ ದಿನಗಳು ಆರಂಭವಾಗಬಹುದು.
-
Uncategorized24 hours ago
Naana Paatekar No More : ವ್ಯವಸ್ಥೆಯ ವಿರುದ್ಧದ ಧ್ವನಿಗೆ ರೂಪ ನೀಡಿದ, ತನ್ನ ಡೈಲಾಗ್ ನಿಂದಲೇ ಅಸಂಖ್ಯಾತ ಅಭಿಮಾನಿಗಳನ್ನು ಗಳಿಸಿದ್ದ ಅಭಿಜಾತ ಕಲಾವಿದ ನಾನಾಪಾಟೇಕರ್ ಇನ್ನಿಲ್ಲ
-
ಬಿಗ್ ನ್ಯೂಸ್18 hours agoSting Operation | ಸ್ಟಿಂಗ್ ಆಪರೇಷನ್ ಚರ್ಚೆ: ಪುತ್ತೂರಿಗೂ ವ್ಯಾಪಿಸಿದೆಯೇ ರಾಜಕೀಯದ ‘ಸ್ಟಿಂಗ್’ ಸದ್ದು..?
-
ಮಂಗಳೂರು21 hours agoMangalore-ರಿಕ್ಷಾದಲ್ಲಿ ಬಿಟ್ಟುಹೋದ 48 ಗ್ರಾಂ ಚಿನ್ನದ ನೆಕ್ಲೇಸ್ ವಾಪಸ್ ನೀಡಿ ಪ್ರಾಮಾಣಿಕತೆ ಮೆರೆದ ಚಾಲಕ
-
ನಿಧನ ವಾರ್ತೆ22 hours agoBeltangadi-ಬೆಳ್ತಂಗಡಿ: ಅಡಿಕೆ ಕೊಯ್ಯುವ ವೇಳೆ ವಿದ್ಯುತ್ ತಂತಿಗೆ ದೋಟಿ ತಾಗಿ ವ್ಯಕ್ತಿ ಸಾವು
-
Uncategorized22 hours agoAshok Rai-ಬದ್ಯಾರ್ನಲ್ಲಿ 50 ವರ್ಷದ ರಸ್ತೆ ವಿವಾದಕ್ಕೆ ತೆರೆ ಎಳೆದ ಶಾಸಕ ಅಶೋಕ್ ರೈ
-
ಅಪರಾಧ23 hours agoUppinangadi-ಉಪ್ಪಿನಂಗಡಿ: ತೋಟದ ಕೆಲಸಕ್ಕೆ ಬರುತ್ತೇನೆಂದು ಹಣ ಪಡೆದು ನಾಪತ್ತೆ
-
ನಿಧನ ವಾರ್ತೆ21 hours agoAccident-ಮೂಡುಬಿದಿರೆ: ಸ್ಕೂಟರ್ ನಿಯಂತ್ರಣ ತಪ್ಪಿ ಬಿದ್ದು ಕಾಲೇಜು ವಿದ್ಯಾರ್ಥಿ ಸಾವು
-
ಬಿಗ್ ನ್ಯೂಸ್23 hours agoHalf helmet-ಕರ್ನಾಟಕದಲ್ಲಿ ಹಾಫ್ ಹೆಲ್ಮೆಟ್ ಸಂಪೂರ್ಣ ನಿಷೇಧ


















